28 June 2022 KANNADA Murli Today | Brahma Kumaris
Read and Listen today’s Gyan Murli in Kannada
27 June 2022
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ - ನೀವು ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರು ಬೇಹದ್ದಿನ ತಂದೆಯಿಂದ 21 ಜನ್ಮಗಳ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಲು ಶ್ರೀಮತದ ಮೇಲೆ ಅವಶ್ಯವಾಗಿ ನಡೆಯಬೇಕಾಗಿದೆ”
ಪ್ರಶ್ನೆ:: -
ನೀವು ಮಕ್ಕಳು ಯಾವ ತಯಾರಿ ಮಾಡಿಕೊಳ್ಳುತ್ತಿದ್ದೀರಿ? ನಿಮ್ಮ ಉಪಾಯವು ಏನಾಗಿದೆ?
ಉತ್ತರ:-
ನೀವು ಅಮರಲೋಕದಲ್ಲಿ ಹೋಗುವುದಕ್ಕೋಸ್ಕರ ತಯಾರಿ ಮಾಡಿಕೊಳ್ಳುತ್ತಿದ್ದೀರಿ. ನಿಮ್ಮ ಉಪಾಯವು ಭಾರತವನ್ನು ಸ್ವರ್ಗವನ್ನಾಗಿ ಮಾಡುವುದಾಗಿದೆ. ನೀವು ನಿಮ್ಮದೇ ತನು-ಮನ-ಧನದಿಂದ ಈ ಭಾರತವನ್ನು ಸ್ವರ್ಗವನ್ನಾಗಿ ಮಾಡುವ ಸೇವೆಯಲ್ಲಿ ತೊಡಗಿದ್ದೀರಿ. ನೀವು ತಂದೆಯ ಜೊತೆ ಪೂರ್ಣ ಸಹಯೋಗಿಗಳಾಗಿದ್ದೀರಿ. ಅಹಿಂಸೆಯ ಬಲದಿಂದ ನಿಮ್ಮ ಹೊಸರಾಜಧಾನಿಯು ಸ್ಥಾಪನೆ ಆಗುತ್ತಾ ಇದೆ. ಮನುಷ್ಯರಂತು ವಿನಾಶಕ್ಕೋಸ್ಕರ ಉಪಾಯಗಳನ್ನು ಮಾಡುತ್ತಿರುತ್ತಾರೆ.
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ಮಾತಾ ಓ ಮಾತಾ ನೀನೇ ಎಲ್ಲರ ಭಾಗ್ಯವಿದಾತಾ..
ಓಂ ಶಾಂತಿ. ಯಾರ ಮಹಿಮೆಯನ್ನು ಕೇಳಿದಿರಿ? ಇಬ್ಬರು ಮಾತೆಯರ ಮಹಿಮೆಯಾಗಿದೆ. ಒಂದಂತು ತಂದೆಯ ಮಹಿಮೆಯಾಗಿದೆ ನೀವು ಮಾತಾ-ಪಿತಾ ಎಂದು ನಿರಾಕಾರನಿಗೂ ಈ ರೀತಿಯ ಮಹಿಮೆಯಾಗುತ್ತದೆ, ನೀವು ಮಾತಾ-ಪಿತಾ…. ಏಕೆಂದರೆ ಪಿತನಾಗಿದ್ದರೆ ಮಾತೆಯೂ ಸಹ ಅವಶ್ಯವಾಗಿ ಇರುವರು. ನೀವು ತಿಳಿದುಕೊಂಡಿದ್ದೀರಿ- ಪರಮಪಿತ ಪರಮಾತ್ಮನು ಯಾವಾಗ ಸೃಷ್ಟಿಯನ್ನು ರಚಿಸಲಾಗುತ್ತದೆ, ಆಗ ಮಾತೆಯು ಅವಶ್ಯವಾಗಿ ಬೇಕು. ತಂದೆಯು ಯಾವುದಾದರೂ ಸಾಧಾರಣ ತನುವಿನಲ್ಲಿ ಬರಲೇಬೇಕಾಗುತ್ತದೆ. ಶಿವಜಯಂತಿ ಅಥವಾ ಶಿವರಾತ್ರಿ ಎಂದು ಗಾಯನ ಮಾಡಲಾಗುತ್ತದೆ. ಅವಶ್ಯವಾಗಿ ಪರಮಪಿತ ಪರಮಾತ್ಮ ಅವತಾರವನ್ನು ತೆಗೆದುಕೊಳ್ಳುತ್ತಾರೆ. ಏತಕ್ಕೋಸ್ಕರ? ಹೊಸರಚನೆಯನ್ನು ರಚಿಸಲು, ಹಳೆಯ ರಚನೆಯನ್ನು ವಿನಾಶ ಮಾಡಲು. ಬ್ರಹ್ಮನ ಮುಖಾಂತರವೇ ರಚನೆಯನ್ನು ರಚಿಸಲಾಗುತ್ತದೆ. ಲೌಕಿಕ ತಂದೆಯೂ ಸಹ ಹದ್ದಿನ ಬ್ರಹ್ಮನಾಗಿದ್ದಾರೆ. ಅವರು ತಮ್ಮ ಸ್ತ್ರೀಯ ಮುಖಾಂತರ ಹದ್ದಿನ ರಚನೆಯನ್ನು ರಚಿಸುತ್ತಾರೆ ಎಂದಾಗ ಅವರನ್ನು ಮಕ್ಕಳೇ ಮಾತಾ-ಪಿತಾ ಎಂದು ಹೇಳುತ್ತಾರೆ. ನೀವೇ ಮಾತಾ-ಪಿತಾ ನಾವು ನಿಮ್ಮ ಬಾಲಕರಾಗಿದ್ದೇವೆ ಎಂದು ಎಲ್ಲರೂ ಹೇಳುವುದಿಲ್ಲ ಏಕೆಂದರೆ ಇದಂತು ಅನೇಕ ಮಕ್ಕಳ ಪ್ರಶ್ನೆಯಾಗಿದೆ. ಪ್ರಜಾಪಿತ ಬ್ರಹ್ಮನಿಗೆ ಬಹಳ ಮಕ್ಕಳಿದ್ದಾರೆ. ಅವಶ್ಯವಾಗಿ ಬ್ರಹ್ಮಾರವರ ಮುಖಕಮಲದಿಂದ ಬ್ರಾಹ್ಮಣ ಕುಲ ಅಥವಾ ಬ್ರಾಹ್ಮಣವರ್ಣವನ್ನು ಬೇಹದ್ದಿನ ತಂದೆಯು ರಚಿಸಿರಬಹುದು. ಅವರ ಮುಖವಂಶಾವಳಿ ಆಗಿದ್ದಾರೆ ಆದರೆ ಆ ತಾಯಿ ತಂದೆಗೆ ಕುಖವಂಶಾವಳಿ ಆಗಿರುತ್ತಾರೆ. ಅವರು ಈ ಮಹಿಮೆಯನ್ನು ಮಾಡಲು ಸಾಧ್ಯವಿಲ್ಲ. ಈ ಮಹಿಮೆಯು ಬೇಹದ್ದಿನ ತಾಯಿ-ತಂದೆಯದಾಗಿದೆ. ನೀವು ಮಾತಾ-ಪಿತಾ…… ನೀವು ಬಂದು ನಮ್ಮನ್ನು ತಮ್ಮವರನ್ನಾಗಿ ಮಾಡಿಕೊಂಡಿದ್ದೀರಿ. ತಮ್ಮಿಂದ ನಮಗೆ 21 ಜನ್ಮಗಳ ಅಪಾರ ಸುಖವು ಸಿಗುತ್ತದೆ ಆದ್ದರಿಂದ ಬ್ರಹ್ಮಮುಖದ ಮುಖಾಂತರ ನೀವು ಶಿವತಂದೆಯ ಮಕ್ಕಳು-ಮೊಮ್ಮಕ್ಕಳಾಗಿದ್ದೀರಿ. ಬ್ರಹ್ಮನ ಮುಖವಂಶಾವಳಿ ಜಗದಂಬಾ-ಸರಸ್ವತಿ ಆಗುತ್ತಾರೆ. ಭಾರತದಲ್ಲಿ ಹಾಡುತ್ತಾರೆ -ನೀವೇ ಮಾತಾ-ಪಿತಾ…. ಎಂದಾಗ ಅವಶ್ಯವಾಗಿ ಜಗದಂಬಾ, ಜಗತ್ಪಿತ ಬೇಕಾಗಿದೆ. ಅವರ ಮುಖದ ಮುಖಾಂತರವೇ ನೀವು ಧರ್ಮದ ಮಕ್ಕಳಾಗಿದ್ದೀರಿ. ನಿಮಗೆ ಆಸ್ತಿಯು ಶಿವತಂದೆಯಿಂದ ಸಿಗುತ್ತದೆ. ಈ ಬ್ರಹ್ಮಾರವರಿಂದಲ್ಲ. ಯಾರಲ್ಲಿ ಪ್ರವೇಶ ಆಗಿದ್ದಾರೆ, ಅವರನ್ನು ತಾಯಿ ಎಂದು ಹೇಳಲಾಗುತ್ತದೆ. ತಾಯಿಯಿಂದ ಆಸ್ತಿಯು ಸಿಗುವುದಿಲ್ಲ. ಆಸ್ತಿಯು ಯಾವಾಗಲು ತಂದೆಯಿಂದಲೇ ಸಿಗುತ್ತದೆ. ನಿಮಗೂ ಸಹ ಆಸ್ತಿಯು ಬೇಹದ್ದಿನ ತಂದೆಯಿಂದ ಸಿಗುತ್ತಿದೆ. ಭಕ್ತಿಮಾರ್ಗದಲ್ಲಿ ಯಾರ ಗಾಯನವಾಗುತ್ತಾ ಬಂದಿದೆ ಅವರು ನಂತರ ಅವಶ್ಯವಾಗಿ ಬರಲೇಬೇಕಾಗುತ್ತದೆ. ಮಕ್ಕಳು ತುಂಬಾ ದುಃಖಿಯಾಗಿದ್ದಾರೆ. ದುಃಖಧಾಮದ ನಂತರ ಸುಖಧಾಮವು ಬರುವುದಿದೆ. ಸತ್ಯಯುಗದಲ್ಲಿ ಸತೋಪ್ರಧಾನ ಸುಖ ನಂತರ ತ್ರೇತಾದಲ್ಲಿ ಸ್ವಲ್ಪ ಕಡಿಮೆ. ಎರಡು ಕಲೆಗಳು ಕಡಿಮೆ ಎಂದು ಹೇಳುತ್ತಾರೆ. ದ್ವಾಪರ-ಕಲಿಯುಗದಲ್ಲಿ ಅದಕ್ಕಿಂತ ಕಡಿಮೆಯಾಗುತ್ತಾ ಹೋಗುತ್ತದೆ. ಈಗ ಈ ಚಕ್ರವನ್ನು ಸುತ್ತಲೇಬೇಕಾಗಿದೆ. ಮಕ್ಕಳು ತಿಳಿದುಕೊಂಡಿದ್ದೀರಿ- ಬೇಹದ್ದಿನ ತಂದೆಯೇ ಸ್ವರ್ಗದ ರಚನೆ ಮಾಡುತ್ತಾರೆ, ಅವರು ಅವಶ್ಯವಾಗಿ ಮೊದಲು ಸೂಕ್ಷ್ಮವತನವನ್ನು ರಚಿಸಬೇಕಾಗುತ್ತದೆ ಏಕೆಂದರೆ ಬ್ರಹ್ಮನಂತು ಅವಶ್ಯವಾಗಿ ಬೇಕು. ಬ್ರಹ್ಮನನ್ನೂ ಸಹ ಶಿವತಂದೆಯು ದತ್ತು ಮಾಡಿಕೊಳ್ಳುತ್ತಾರೆ ಮತ್ತು ನೀವು ನನ್ನವರೆಂದು ಹೇಳುತ್ತಾರೆ. ಬ್ರಹ್ಮಾತಂದೆಯು ಹೇಳುತ್ತಾರೆ – ಬಾಬಾ ನಾನು ನಿಮ್ಮವನಾಗಿದ್ದೇನೆ ಎಂದಾಗ ಬ್ರಹ್ಮನೂ ಶಿವನ ಪುತ್ರನಾದರು. ಶಿವತಂದೆಗೆ ಮೂರು ಮಕ್ಕಳಿದ್ದಾರೆ, ಮೂವರ ಚರಿತ್ರೆಯನ್ನು ತಿಳಿಸುತ್ತಾರೆ. ಈ ವ್ಯಕ್ತಬ್ರಹ್ಮಾ ಮತ್ತೆ ಅವ್ಯಕ್ತ ಬ್ರಹ್ಮನಾಗುತ್ತಾರೆ. ನೀವೂ ಸಹ ವ್ಯಕ್ತ ಬ್ರಹ್ಮನ ಸಂತಾನರು ನಂತರ ಅವ್ಯಕ್ತ ಸಂತಾನರಾಗುತ್ತೀರಿ. ಇವು ತುಂಬಾ ಗುಹ್ಯ ಮಾತುಗಳಾಗಿವೆ. ಪರಮಪಿತ ಪರಮಾತ್ಮ ವಿಶ್ವದ ರಚಯಿತನಾಗಿದ್ದಾರೆ. ಮೊಟ್ಟಮೊದಲು ಸ್ವರ್ಗವನ್ನು ರಚಿಸುತ್ತಾರೆ. ತಂದೆಯಿಂದ ಸ್ವರ್ಗದ ಆಸ್ತಿಯು ಸಿಗಬೇಕಲ್ಲವೇ. ಈಗ ನಾವು ನರಕದಲ್ಲಿದ್ದೇವೆ. ಯಾವಾಗ ನಮ್ಮನ್ನು ರಚಿಸುತ್ತಾರೆ ಆಗಲೇ ಆಸ್ತಿಯನ್ನು ಆವಶ್ಯವಾಗಿ ಕೊಡುತ್ತಾರೆ. ಈಗ ನಾನು ರಚಿಸುತ್ತಿದ್ದೇನೆ ಎಂದು ತಂದೆಯು ಹೇಳುತ್ತಾರೆ. 5000 ವರ್ಷಗಳ ಹಿಂದೆಯೂ ಸಹ ನಾನು ಹೀಗೆಯೇ ಬಂದು ಬ್ರಹ್ಮಾರವರ ಮುಖಾಂತರ ಬ್ರಾಹ್ಮಣಕುಲವನ್ನು ರಚಿಸಿದ್ದೆನು. ಯಾವ ರುದ್ರಜ್ಞಾನಯಜ್ಞವಿದೆ, ಅದನ್ನು ಬ್ರಾಹ್ಮಣರೇ ಸಂಭಾಲನೆ ಮಾಡುತ್ತಾರೆ ಆದ್ದರಿಂದ ಇವರು ಬ್ರಹ್ಮಾಮುಖವಂಶಾವಳಿ ಬ್ರಾಹ್ಮಣರಾದರು. ಆ ಬ್ರಾಹ್ಮಣರಿಗೆ ಕುಖವಂಶಾವಳಿ ಬ್ರಾಹ್ಮಣರು ಎಂದು ಹೇಳುತ್ತಾರೆ. ಬ್ರಹ್ಮನ ಮುಖವಂಶಾವಳಿ ಎಂದು ಹೇಳುವುದಿಲ್ಲ. ಈಗ ನೀವು ಮಕ್ಕಳು ಬ್ರಹ್ಮನ ಮುಖವಂಶಾವಳಿ ಆಗಿದ್ದೀರಿ. ಮೊದಲು ಅವಶ್ಯವಾಗಿ ಬ್ರಾಹ್ಮಣರು ಬೇಕು. ಬ್ರಾಹ್ಮಣರನ್ನು ಎಲ್ಲಿಂದ ಸೇರಿಸಿಕೊಂಡರು? ಇಲ್ಲಿ ಶೂದ್ರವರ್ಣವಿದೆ. ನೀವು ಮಕ್ಕಳನ್ನು ಈಗ ಬ್ರಾಹ್ಮಣ ವರ್ಣದಲ್ಲಿ ತೆಗೆದುಕೊಂಡು ಬಂದಿದ್ದಾರೆ. ಕಾಲಿನಿಂದ ಮತ್ತೆ ಶಿಕೆ, ಬ್ರಾಹ್ಮಣರಾಗುತ್ತಾರೆ, ಬ್ರಾಹ್ಮಣರಿಂದ ದೇವತೆಗಳಾಗಬೇಕಾಗಿದೆ. ಈ ವರ್ಣ ಮುಂತಾದವುಗಳು ಆದಿಸನಾತನ ದೇವೀ-ದೇವತಾ ಧರ್ಮದವರಿಗೋಸ್ಕರವೇ ಇದೆ, ಅನ್ಯಧರ್ಮದವರಿಗೆ ವರ್ಣಗಳಿಲ್ಲ. ನೀವು 21 ಜನ್ಮಗಳು ದೇವತಾವರ್ಣದಲ್ಲಿ ಇರುತ್ತೀರಿ. ಬ್ರಾಹ್ಮಣ ವರ್ಣವು ಈ ಒಂದು ಜನ್ಮ ಅಥವಾ ಒಂದುವರೆ ಜನ್ಮವು ಆಗಬಹುದು ಏಕೆಂದರೆ ಯಾವ ಮಕ್ಕಳು ಸಂಸ್ಕಾರವನ್ನು ತೆಗೆದುಕೊಂಡು ಶರೀರವನ್ನು ಬಿಟ್ಟುಹೋಗುತ್ತಾರೆ ನಂತರ ಬಂದು ಜ್ಞಾನವನ್ನು ತೆಗೆದುಕೊಳ್ಳುತ್ತಾರೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಒಂದುವೇಳೆ ಸ್ವರ್ಗದ ಮಾಲೀಕರಾಗಬೇಕೆಂದರೆ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. 63 ಜನ್ಮಗಳು ನೀವು ಮುಳುಗಿಹೋಗಿದ್ದೀರಿ, ಈಗ ಮಹಾದುಃಖದಲ್ಲಿ ಇದ್ದಿರಿ. ಇಡೀ ಭಾರತದ ಪ್ರಶ್ನೆಯಾಗಿದೆಯಲ್ಲವೇ. ಈಗ ಇಡೀ ಭಾರತವು ಸುಖಿಯಾಗಿದೆಯೆಂದಲ್ಲ. ಹಾ! ಭಾರತದಲ್ಲಿ ಧನವಂತರು ಅನೇಕರಿದ್ದಾರೆ. ನೋಡಿ, ಒಬ್ಬರು ಬಂದಿದ್ದರು, ಭಲೆ ಕೋಟ್ಯಾಧಿಪತಿ ಆಗಿದ್ದರು ಆದರೆ ಕಾಲು-ಕೈ ಕೆಲಸ ಮಾಡುತ್ತಿರಲಿಲ್ಲವೆಂದಾಗ ದುಃಖವಾಯಿತಲ್ಲವೇ. ಪ್ರಪಂಚದಲ್ಲಿ ಒಬ್ಬರು ದುಃಖಿಯಾಗಿದ್ದರೂ ಸಹ ಅವಶ್ಯವಾಗಿ ದುಃಖಧಾಮವೆಂದು ಹೇಳುತ್ತಾರೆ. ಸತ್ಯಯುಗದಲ್ಲಿ ಒಬ್ಬರೂ ದುಃಖಿಗಳಿರುವುದಿಲ್ಲ. ಭಾರತವು ಸುಖಧಾಮವಾಗಿತ್ತು. ಸ್ವರ್ಗವನ್ನು ಯಾರು ರಚಿಸಿದರು? ತಂದೆ. ನಾವು ಮಕ್ಕಳು ಅಧಿಕಾರಿಗಳಾಗಿದ್ದೇವೆ. 5000 ವರ್ಷಗಳ ಹಿಂದೆಯೂ ಸಹ ನಾವು ಅವಶ್ಯವಾಗಿ ಸ್ವರ್ಗದಲ್ಲಿ ಇದ್ದೆವು. ಕ್ರೈಸ್ಟಿಗಿಂತ 3000 ವರ್ಷಗಳ ಹಿಂದೆ ಗೀತೆಯನ್ನು ತಿಳಿಸಲು ಬಂದಿದ್ದರು ಹೇಳುತ್ತಾರೆ ಅಂದಾಗ 5000 ವರ್ಷಗಳ ಸಮಯವಾಯಿತಲ್ಲವೇ. ಈಗ ಗೀತೆಯನ್ನು ತಿಳಿಸಲು ಬಂದಿದ್ದಾರಲ್ಲವೇ. ಅವಶ್ಯವಾಗಿ ದೇವತಾಧರ್ಮವು ಪ್ರಾಯಃಲೋಪವಾಗಿದೆ.
ನೀವು ಮಕ್ಕಳು ಪಾಂಡವರಾಗಿದ್ದೀರಿ, ನಿಮ್ಮ ಸಹಾಯಕ ಗೀತೆಯ ಭಗವಂತನಾಗಿದ್ದಾರೆ. ಅವರು ನಿರಾಕಾರನಾಗಿದ್ದಾರೆ. ಶಾಸ್ತ್ರಗಳಲ್ಲಿಯೂ ಸಹ ರುದ್ರಜ್ಞಾನಯಜ್ಞವೆಂದು ಇದೆ. ವಾಸ್ತವದಲ್ಲಿ ಶಿವರಾತ್ರಿ, ಶಿವಜಯಂತಿಯಾಗಿದೆ. ರುದ್ರಜಯಂತಿ ಅಥವಾ ರುದ್ರರಾತ್ರಿ ಎಂದು ಹೇಳುವುದಿಲ್ಲ. ಶಿವರಾತ್ರಿ ಎಂದು ಏಕೆ ಹೇಳುತ್ತಾರೆ? ಈಗ ಬೇಹದ್ದಿನ ರಾತ್ರಿಯಾಗಿದೆ, ಘೋರ ಅಂಧಕಾರವಾಗಿದೆಯಲ್ಲವೇ. ಬೇಹದ್ದಿನ ರಾತ್ರಿಯ ಸಮಯದಲ್ಲಿ ನಾನು ಬರುತ್ತೇನೆ ಎಂದು ತಂದೆಯು ಹೇಳುತ್ತಾರೆ. ಈಗ ದಿನವಾಗುವುದಿದೆ. ನನ್ನ ಜನ್ಮವು ಪ್ರಾಕೃತಿಕ ಮನುಷ್ಯರ ರೀತಿಯಲ್ಲಿ ಆಗುವುದಿಲ್ಲ. ಕೃಷ್ಣನಂತು ತಾಯಿಯ ಗರ್ಭಮಹಲಿನಿಂದ ಜನ್ಮವನ್ನು ತೆಗೆದುಕೊಂಡರು. ಈಗ ನೀವು ಮಕ್ಕಳು ಅರಿತುಕೊಂಡಿದ್ದೀರಿ- ಆ ಮಾತಾಪಿತಾರಿಂದ ಸ್ವರ್ಗದ ಅಪಾರ ಸುಖವು ಸಿಗುತ್ತದೆ. ಸ್ವರ್ಗ ಮತ್ತು ನರಕ ಯಾವ ಪಕ್ಷಿಯ ಹೆಸರಾಗಿದೆ ಎನ್ನುವುದನ್ನು ಪ್ರಪಂಚದವರು ಅರಿತುಕೊಂಡಿಲ್ಲ. ಈಗ ನೀವು ಇಲ್ಲಿ ಓದಲು ಬಂದಿದ್ದೀರಿ, ಶ್ರೀಮತದನುಸಾರ ನಡೆಯುತ್ತೀರಿ. ಶ್ರೀಮತದಂತೆ ನಡೆಯುವುದರಿಂದ ಸ್ವರ್ಗದ ಶ್ರೀಲಕ್ಷ್ಮೀ-ನಾರಾಯಣರಾಗುತ್ತೀರಿ. ಸತ್ಯಯುಗದ ಮಾಲೀಕರಾಗಿದ್ದಾರೆಂದರೆ ಅವಶ್ಯವಾಗಿ ಕಲಿಯುಗದ ಅಂತ್ಯದಲ್ಲಿ ಅವರದು 84ನೇ ಜನ್ಮವು ಅಂತಿಮಜನ್ಮವಾಗಿರುವುದು. ಆಗಲೇ ರಾಜಯೋಗವನ್ನು ಕಲಿಯುತ್ತಾರೆ. ಕೇವಲ ಒಬ್ಬರಲ್ಲ, ಇಡೀ ಸೂರ್ಯವಂಶಿ ಮನೆತನವೇ ರಾಜಯೋಗವನ್ನು ಕಲಿಯುತ್ತಾರೆ. ಅವರು ಬಂದು ಬೇಹದ್ದಿನ ತಂದೆಯಿಂದ ಸೂರ್ಯವಂಶಿ, ಚಂದ್ರವಂಶಿ ರಾಜ್ಯದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದಾರೆ. ತಂದೆಯು ಹೇಳುತ್ತಾರೆ- ಈಗ ನೀವು ನನ್ನೊಂದಿಗೆ ಪವಿತ್ರರಾಗಿರುವ ಪ್ರತಿಜ್ಞೆ ಮಾಡಿ ಏಕೆಂದರೆ ನಾನು ಪವಿತ್ರ ಪ್ರಪಂಚದ ಸ್ಥಾಪನೆ ಮಾಡುತ್ತೇನೆ. 63 ಜನ್ಮಗಳು ನೀವು ಪತಿತರಾಗುತ್ತಾ ಬಂದಿದ್ದೀರಿ ಆದ್ದರಿಂದಲೇ ದುಃಖಿಯಾಗಿದ್ದೀರಿ. ಸ್ವರ್ಗದಲ್ಲಂತೂ ತುಂಬಾ ಸುಖಿಯಾಗಿದ್ದಿರಿ. ಈಗ ಭಾರತವು ಕವಡೆಯ ಸಮಾನವಾಗಿದೆ ನಂತರ ವಜ್ರಸಮಾನ ಆಗುವುದು. ಒಬ್ಬರೇ ತಂದೆ ಆಗಿದ್ದಾರೆ. ನಾನು ನಿಮಗೆ ರಾಜಯೋಗವನ್ನು ಕಲಿಸಲು ಬಂದಿದ್ದೇನೆ ಎಂದು ಹೇಳುತ್ತಾರೆ. ನೀವು ಈ ಅಂತಿಮಜನ್ಮದಲ್ಲಿ ಪವಿತ್ರರಾಗಿ. ಈ ತಂದೆ, ತಾಯಿಯೊಂದಿಗೆ ನೀವು ಅಮೃತವನ್ನು ಕುಡಿಯಬೇಕಾಗಿದೆ, ವಿಷ ಕುಡಿಯುವುದನ್ನು ಬಿಡಬೇಕಾಗಿದೆ. ಕಾಮಚಿತೆಯಿಂದ ಇಳಿದು ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳಿ. ನಿಮಗೆ ಶ್ರೀಮತವು ಸಿಗುತ್ತದೆ. ಯಾರಿಗೆ ಆಸ್ತಿಯನ್ನು ತೆಗೆದುಕೊಳ್ಳುವ ನಿಶ್ಚಯವಿಲ್ಲವೆಂದರೆ ಅವರು ಬಾಬಾ ವಿಷವನ್ನು ಬಿಡುವುದಂತು ತುಂಬಾ ಕಷ್ಟವಾಗಿದೆ ಎಂದು ಹೇಳುತ್ತಾರೆ. ಅರೇ! ನಿಮಗೆ 21 ಜನ್ಮ ಸುಖದ ಪ್ರಾಪ್ತಿಯಾಗುತ್ತದೆ. ಅದಕ್ಕೋಸ್ಕರ ನೀವು ಇದನ್ನು ಬಿಡಲಾಗುವುದಿಲ್ಲವೇ. ಭಕ್ತಿ, ಜಪ-ತಪ ಮುಂತಾದವುಗಳನ್ನು ಮಾಡುವುದರಿಂದ ಹದ್ದಿನ ಸುಖವು ಸಿಗುತ್ತದೆ. ಬೇಹದ್ದಿನ ಸುಖವು ಬೇಹದ್ದಿನ ತಂದೆಯಿಂದ ಸಿಗುತ್ತದೆ. ಆ ತಂದೆಯು ಹೇಳುತ್ತಾರೆ- ನಾನು ಸಾಧುಗಳ ಉದ್ಧಾರವನ್ನೂ ಸಹ ಮಾಡುತ್ತೇನೆ ಏಕೆಂದರೆ ಶಿವತಂದೆಯನ್ನು ಅರಿತುಕೊಳ್ಳದೇ ಇರುವಕಾರಣ ಸದ್ಗತಿಯನ್ನು ಯಾರೂ ಪಡೆಯುವುದಿಲ್ಲ, ಹಿಂತಿರುಗಿ ಮನೆಗೂ ಸಹ ಯಾರೂ ಹೋಗಲು ಸಾಧ್ಯವಿಲ್ಲ. ಒಂದುವೇಳೆ ತಂದೆಯ ಮನೆಯ ಮಾರ್ಗವನ್ನು ಅರಿತಿದ್ದರೆ ಅವರು ಬರುವುದು-ಹೋಗುವುದು ಮಾಡಬಹುದಲ್ಲವೇ. ಎಲ್ಲರೂ ಪುನರ್ಜನ್ಮ ತೆಗೆದುಕೊಳ್ಳಲೇಬೇಕಾಗಿದೆ. ಸತೋ, ರಜೋ, ತಮೋನಲ್ಲಿ ಬರಲೇಬೇಕಾಗಿದೆ. ಈಗಂತು ಸುಳ್ಳು ಮಾಯೆ, ಸುಳ್ಳು ಶರೀರ ಯಾರು ಧರ್ಮಸ್ಥಾಪನೆ ಮಾಡಿದರು ಅವರ ಹೆಸರ ಮೇಲೆ ಶಾಸ್ತ್ರಗಳು ಬರೆಯಲ್ಪಡುತ್ತವೆ, ಅದನ್ನು ಧರ್ಮಶಾಸ್ತ್ರ ಎಂದು ಹೇಳುತ್ತಾರೆ. ಕ್ರೈಸ್ಟ್ ಬಂದು ಏನು ಮಾಡಿದರು? ಕ್ರೈಸ್ಟ್ ಬಂದರು ಅವರ ಹಿಂದೆ ಅವರ ಮನೆತನದ ಆತ್ಮಗಳು ಬರಬೇಕಾಗಿದೆ, ವೃದ್ಧಿಯಾಗಬೇಕಾಗಿದೆ. ಈಗ ನೋಡಿ- ಕ್ರಿಶ್ಚಿಯನರನ್ನಾಗಿ ಮಾಡುತ್ತಾ ಹೋಗುತ್ತಾರೆ. ಹಿಂದೂ ಧರ್ಮದವರನ್ನೂ ಸಹ ಸೇರಿಸಿಕೊಳ್ಳುತ್ತಾ ಹೋಗುತ್ತಾರೆ. ಅವರಿಗೆ ತಮ್ಮ ಧರ್ಮವೂ ತಿಳಿದೇ ಇಲ್ಲ. ಈಗ ನೀವು ತಿಳಿದುಕೊಂಡಿದ್ದೀರಿ- ನಾವು ದೇವತಾ ವರ್ಣದಲ್ಲಿ ಹೋಗುತ್ತೇವೆ. ಕೃಷ್ಣನ ಆತ್ಮವೂ ಸಹ ಈಗ ಓದುತ್ತಾ ಇದೆ. ಆದರೆ ಸಂಗಮವಾಗಿರುವ ಕಾರಣ ಸೇರಿಸಿಬಿಟ್ಟಿದ್ದಾರೆ. ಈ ಚಿತ್ರ ಮುಂತಾದವೇನೆಲ್ಲಾ ಇದೆ ಎಲ್ಲವೂ ಭಕ್ತಿಮಾರ್ಗದ ಸಾಮಗ್ರಿಯಾಗಿದೆ. ಜ್ಞಾನಸಾಗರ ಪರಮಪಿತ ಪರಮಾತ್ಮನಾಗಿದ್ದಾರೆ, ಅವರ ಮೂಲಕ ಎಲ್ಲರ ಸದ್ಗತಿಯಾಗುತ್ತದೆ. ಸತ್ಯಯುಗದಲ್ಲಂತು ಕಡಿಮೆ ಆತ್ಮಗಳು ಇರುತ್ತಾರೆ. ಉಳಿದೆಲ್ಲರೂ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿ ಮುಕ್ತಿಧಾಮದಲ್ಲಿ ಹೊರಟುಹೋಗುತ್ತಾರೆ. ಅವರಿಗೆ ಶಾಂತಿ, ನಿಮಗೆ ಸುಖ ಸಿಗುತ್ತದೆ. ಭಕ್ತಿಮಾರ್ಗದವರೆಲ್ಲರೂ ಅಲ್ಪಕಾಲಕ್ಕೋಸ್ಕರ ಶಾಂತಿಧಾಮಕ್ಕೆ ಹೋಗುತ್ತಾರೆ. ಈಗ ನೀವು ಅಪಾರ ಸುಖವನ್ನು ಪಡೆಯಲು ಓದುತ್ತೀರಿ. ಯಾರ ಪಾತ್ರವಿದೆ ಅವರೇ ಕಲ್ಪ-ಕಲ್ಪ ಪುರುಷಾರ್ಥ ಮಾಡುತ್ತಾರೆ. ಯಾರು ಬ್ರಾಹ್ಮಣರಾಗುತ್ತಾರೆ ಅವರೇ ಸ್ವರ್ಗದ ಮಾಲೀಕರಾಗುತ್ತಾರೆ ಆದರೆ ನಂಬರ್ವಾರ್ ಪುರುಷಾರ್ಥದನುಸಾರ. ಈಗ ದೇವೀ-ದೇವತಾಧರ್ಮದ ಸಸಿಯನ್ನು ನೆಡಲಾಗುತ್ತಿದೆ. ಯಾರು ಕಲ್ಪದ ಮೊದಲು ಬಂದಿದ್ದರೋ ಅವರೇ ಬರುತ್ತಾರೆ. ನಾಟಕವು ನಿಮ್ಮಿಂದ ಪುರುಷಾರ್ಥವನ್ನೂ ಸಹ ಅವಶ್ಯವಾಗಿ ಮಾಡಿಸುತ್ತದೆ. ಈ ಸಮಯದಲ್ಲಿ ಎಲ್ಲರೂ ಕಲ್ಲುಬುದ್ಧಿಯವರಾಗಿದ್ದಾರೆ, ಸತ್ಯಯುಗದಲ್ಲಿ ಪಾರಸಬುದ್ಧಿಯವರಿರುತ್ತಾರೆ. ಅಲ್ಲಿ ಯಥಾರಾಜಾ-ರಾಣಿ ತಥಾ ಪ್ರಜಾ, ಪಾರಸಬುದ್ಧಿಯವರಿರುತ್ತಾರೆ.
ಈಗ ನೀವು ಪಾಂಡವ ಸೇನೆಯಾಗಿದ್ದೀರಿ. ನೀವು ತಂದೆಯ ಸಹಯೋಗದಿಂದ ಸ್ವರ್ಗದ ತಳಪಾಯವನ್ನು ಹಾಕುತ್ತಿದ್ದೀರಿ. ನೀವು ಸ್ವರ್ಗದ ಉಪಾಯವನ್ನು ಮಾಡುತ್ತಿದ್ದೀರಿ. ಅಮರಲೋಕಕ್ಕೆ ಹೋಗಲು ತಯಾರಿ ಮಾಡುತ್ತಿದ್ದೀರಿ. ಉಳಿದ ಯಾರೆಲ್ಲಾ ಉಪಾಯಗಳನ್ನು ಮಾಡುತ್ತಿದ್ದಾರೆ ಅವರು ತಮ್ಮ ವಿನಾಶಕ್ಕೋಸ್ಕರ ಮಾಡುತ್ತಿದ್ದಾರೆ. ನೀವು ಅಹಿಂಸಕರಾಗಿದ್ದೀರಿ, ಅವರೆಲ್ಲರೂ ಹಿಂಸಕರಾಗಿದ್ದಾರೆ. ಹಿಂಸಕರು ಪರಸ್ಪರ ಯುದ್ಧ ಮಾಡಿ ಸಮಾಪ್ತಿಯಾಗುತ್ತಾರೆ ನಂತರ ಜಯ-ಜಯಕಾರ ಆಗಿಬಿಡುವುದು.
ನೀವು ಮಕ್ಕಳು ತಿಳಿದುಕೊಂಡಿದ್ದೀರಿ- ನಾಟಕದನುಸಾರ ಕಲ್ಪದ ಮೊದಲು ಯಾರು ಬಂದಿದ್ದರೋ ಅವರೇ ವೃದ್ಧಿಯನ್ನು ಪಡೆಯುತ್ತಾ ಇರುತ್ತಾರೆ. ಕೆಲವರಂತು ತಂದೆಯ ಮಕ್ಕಳಾಗಿ ನಂತರ ವಿಚ್ಚೇದನ ಕೊಟ್ಟುಬಿಡುತ್ತಾರೆ. ತಂದೆಯು ಹೇಳುತ್ತಾರೆ- ಒಂದುವೇಳೆ ನೀವು ಶ್ರೀಮತದಮೇಲೆ ನಡೆಯುತ್ತೀರೆಂದರೆ ಸೂರ್ಯವಂಶಿ ಮಹಾರಾಜಾ-ಮಹಾರಾಣಿಯಾಗುತ್ತೀರಿ. ಇಲ್ಲಿ ಪರಿಶ್ರಮದ ಮಾತಾಗಿದೆ. ಭಲೆ ಅವರು ತುಂಬಾ ವಿಧಿಪೂರ್ವಕವಾಗಿ ಶಾಸ್ತ್ರಗಳನ್ನು ತಿಳಿಸುತ್ತಾರೆ ಆದರೂ ಸಹ ಕೇಳುತ್ತಾ ಬಂದಿದ್ದೀರಿ. ಕೇಳುತ್ತಾ-ಕೇಳುತ್ತಾ ನರಕವಾಸಿಗಳು ಆಗುತ್ತಾ ಹೋಗಿದ್ದೀರಿ, ಕಲೆಗಳು ಕಡಿಮೆಯಾಗಿಬಿಟ್ಟಿದೆ. ಭಲೆ ಪತಿಯೇ ಈಶ್ವರನಾಗಿದ್ದಾರೆ ಎಂದು ಹೇಳುತ್ತಾರೆ ಆದರೂ ಸಹ ಗುರುಗಳನ್ನು ಮಾಡಿಕೊಳ್ಳುತ್ತಾರೆ. ಕಲೆಗಳು ಕಡಿಮೆ ಆಗುತ್ತದೆಯಲ್ಲವೇ. ಸೃಷ್ಟಿಯು ತಮೋಪ್ರಧಾನವಾಗಲೇಬೇಕಾಗಿದೆ. ತಂದೆಯು ಆತ್ಮಗಳೊಂದಿಗೆ ಮಾತನಾಡುತ್ತಾರೆ. ತಂದೆಯು ಹೇಳುತ್ತಾರೆ – ಮಧುರ ಮಕ್ಕಳೇ, ಈಗ ನಿಮ್ಮ 84 ಜನ್ಮಗಳು ಪೂರ್ಣವಾಯಿತು. ಈಗ ಆತ್ಮಾಭಿಮಾನಿಭವ. ನನ್ನೊಬ್ಬನನ್ನೇ ನೆನಪು ಮಾಡಿ. ಒಳ್ಳೆಯದು.
ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ಸತ್ಯ-ಸತ್ಯ ಬ್ರಾಹ್ಮಣರಾಗಿ ಈ ರುದ್ರಜ್ಞಾನಯಜ್ಞದ ಸಂಭಾಲನೆಯನ್ನು ಮಾಡಬೇಕಾಗಿದೆ ಮತ್ತು ಜೊತೆಜೊತೆಗೆ ಹೇಗೆ ವ್ಯಕ್ತಬ್ರಹ್ಮ ಅವ್ಯಕ್ತನಾಗುತ್ತಾರೆ ಹಾಗೆಯೇ ಅವ್ಯಕ್ತರಾಗುವಂತಹ ಪುರುಷಾರ್ಥ ಮಾಡಬೇಕಾಗಿದೆ.
2. 21 ಜನ್ಮಗಳ ತನಕ ಸುಖಿಯಾಗಿರಲು ಈ ಒಂದು ಜನ್ಮದಲ್ಲಿ ತಂದೆಯೊಂದಿಗೆ ಪಾವನರಾಗಿರುವಂತಹ ಪ್ರತಿಜ್ಞೆ ಮಾಡಬೇಕಾಗಿದೆ. ಕಾಮಚಿತೆಯನ್ನು ಬಿಟ್ಟು ಜ್ಞಾನಚಿತೆಯ ಮೇಲೆ ಕುಳಿತುಕೊಳ್ಳಬೇಕಾಗಿದೆ. ಶ್ರೀಮತದ ಮೇಲೆ ಅವಶ್ಯವಾಗಿ ನಡೆಯಬೇಕಾಗಿದೆ.
ವರದಾನ:-
ಸದ್ಗುರುವಿನ ಮೂಲಕ ಜನ್ಮವಾದಾಗಿನಿಂದ ಮೊಟ್ಟಮೊದಲ ಮಹಾಮಂತ್ರ ಸಿಕ್ಕಿದೆ- “ಪವಿತ್ರರಾಗಿ-ಯೋಗಿಗಳಾಗಿ”. ಈ ಮಹಾಮಂತ್ರವೇ ಸರ್ವಪ್ರಾಪ್ತಿಗಳ ಕೀಲಿಕೈ ಆಗಿದೆ. ಒಂದುವೇಳೆ ಪವಿತ್ರತೆಯಿಲ್ಲ, ಯೋಗಿ ಜೀವನವಿರದಿದ್ದರೆ ಅಧಿಕಾರಿಯಾಗಿದ್ದರೂ ಅಧಿಕಾರದ ಅನುಭೂತಿ ಮಾಡಲು ಸಾಧ್ಯವಿಲ್ಲ ಆದ್ದರಿಂದ ಈ ಮಹಮಂತ್ರವು ಸರ್ವ ಖಜಾನೆಗಳ ಅನುಭೂತಿಯ ಕೀಲಿಕೈ ಆಗಿದೆ. ಸದ್ಗುರುವಿನ ಮೂಲಕ ಇಂತಹ ಕೀಲಿಕೈನ ಮಹಾಮಂತ್ರವು ಶ್ರೇಷ್ಠ ಭಾಗ್ಯದಲ್ಲಿ ಸಿಕ್ಕಿದೆ, ಅದನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತಾ ಸರ್ವ ಪ್ರಾಪ್ತಿಗಳಿಂದ ಸಂಪನ್ನರಾಗಿರಿ.
ಸ್ಲೋಗನ್:-
ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯ
ಮನುಷ್ಯನು ಪ್ರಶ್ನೆಯನ್ನು ಕೇಳುತ್ತಾನೆ- ಸೃಷ್ಟಿಯ ಆದಿಯು ಹೇಗಾಯಿತು? ಅವರಂತು ಇಷ್ಟೇ ತಿಳಿದುಕೊಂಡಿದ್ದಾರೆ- ಸೃಷ್ಟಿಯ ಆದಿಯು ನಮ್ಮ ಧರ್ಮದಿಂದ ಆಗಿದೆ. ಇಬ್ರಾಹಂನವರು, ಇಸ್ಲಾಂರು ಹೇಳುತ್ತಾರೆ- ನಮ್ಮ ಧರ್ಮದಿಂದ ಸೃಷ್ಟಿಯ ಆರಂಭವಾಯಿತು. ಮತ್ತೆ ಕ್ರಿಶ್ಚಿಯನ್ನರು ತನ್ನ ಸಮಯದಲ್ಲಿ ಆದಿ ಎಂದು ತಿಳಿಯುತ್ತಾರೆ. ಬೌದ್ಧಿಗಳು ತನ್ನ ಧರ್ಮದಿಂದಲೇ ಆದಿ ಎಂದು ತಿಳಿಯುತ್ತಾರೆ ಹಾಗೂ ಮುಸಲ್ಮಾನರು ಹೇಳುತ್ತಾರೆ- ನಮ್ಮ ಧರ್ಮದಿಂದಲೇ ಆದಿಯಾಯಿತು ಹಾಗೂ ಭಾರತವಾಸಿಗಳು ತನ್ನ ಧರ್ಮದಿಂದ ಆದಿಯೆಂದು ತಿಳಿಯುತ್ತಾರೆ. ನಂತರ ತೋರಿಸುತ್ತಾರೆ- ಸೃಷ್ಟಿಯ ಆದಿಯಲ್ಲಿ ಆದ್ಮಿಯನ್ನು ಹೇಗೆ ತಯಾರು ಮಾಡಲಾಯಿತು? ಆರಂಭದಲ್ಲಿ ಮೊಟ್ಟಮೊದಲು ಮೂಳೆಗಳಿಂದ ಆದ್ಮಿಯನ್ನು ಮಾಡಲಾಯಿತು, ನಂತರ ಈ ರೀತಿ ತೋರಿಸುತ್ತಾರೆ- ಮೊದಲು ಗಾಳಿಯಿತ್ತು ನಂತ್ರ ಅದರಿಂದ ಶ್ವಾಸವನ್ನಾಗಿ ಮಾಡಿದರು, ನಂತರ ನರಗಳನ್ನು ಮಾಡಲಾಯಿತು, ನಂತರ ಮನುಷ್ಯನಾದನು. ಹೀಗೆಯೇ ಮೊದಲು ಆದ್ಮಿ(ಮನುಷ್ಯ)ಯಾದನು, ನಂತರದಲ್ಲಿ ಇಡೀ ಸೃಷ್ಟಿಯ ಉತ್ಪನ್ನವಾಯಿತು. ಈಗ ಇದಾಯಿತು ಮನುಷ್ಯರ ಹೇಳಿಕೆ-ಕೇಳಿಕೆ ಮಾತುಗಳು. ಆದರೆ ಸ್ವಯಂ ಪರಮಾತ್ಮನೇ ತಿಳಿಸುತ್ತಿದ್ದಾರೆ- ಸತ್ಯವಾಗಿಯೂ ಸೃಷ್ಟಿಯು ಹೇಗೆ ಉತ್ಪನ್ನವಾಯಿತು? ವಾಸ್ತವದಲ್ಲಿ ಪರಮಾತ್ಮನಂತು ಅನಾದಿ ಆಗಿದ್ದಾರೆ ಅಂದಮೇಲೆ ಈ ಸೃಷ್ಟಿಯೂ ಅನಾದಿಯಾಗಿದೆ, ಆ ಅನಾದಿ ಸೃಷ್ಟಿಯ ಆದಿಯೂ ಸಹ ಪರಮಾತ್ಮನ ಮೂಲಕವೇ ಆಯಿತು. ಗೀತೆಯಲ್ಲಿಯೂ ಭಗವಾನುವಾಚ ಇದೆ ನೋಡಿ- ಯಾವಾಗ ನಾನು ಬರುತ್ತೇನೆಯೋ ಆಗ ಆಸುರಿ ಪ್ರಪಂಚದ ವಿನಾಶ ಮಾಡಿ, ದೈವೀ ಪ್ರಪಂಚದ ಸ್ಥಾಪನೆ ಮಾಡುತ್ತೇನೆ ಅರ್ಥಾತ್ ಕಲಿಯುಗೀ ತಮೋಗುಣಿ ಅಪವಿತ್ರ ಆತ್ಮರುಗಳನ್ನು ಪವಿತ್ರರನ್ನಾಗಿ ಮಾಡುತ್ತೇನೆ. ಅಂದಮೇಲೆ ಮೊಟ್ಟಮೊದಲು ಪರಮಾತ್ಮನು ಸೃಷ್ಟಿಯ ಆದಿಯಲ್ಲಿ ಬ್ರಹ್ಮಾ, ವಿಷ್ಣು, ಶಂಕರ ಮೂರರೂಪಗಳನ್ನು ರಚಿಸಿದರು, ನಂತರ ಬ್ರಹ್ಮಾ ಹಾಗೂ ಸರಸ್ವತಿಯ ಮೂಲಕ ದೈವೀ ಪ್ರಪಂಚದ ಸ್ಥಾಪನೆ ಮಾಡಿದರು. ಅಂದರೆ ಸೃಷ್ಟಿಯ ಆದಿಯು ಬ್ರಹ್ಮಾರವರಿಂದ ಆರಂಭವಾಯಿತು, ಆ ಬ್ರಹ್ಮಾನನ್ನೇ ಕ್ರಿಶ್ಚಿಯನ್ನರು ಆಡಮ್ ಮತ್ತು ಸರಸ್ವತಿಯನ್ನು ಈವ್ ಎಂದು ಹೇಳುತ್ತಾರೆ. ಹಾಗೆಯೇ ಮುಸಲ್ಮಾನರಲ್ಲಿ ಆದಂ ಬೀಬಿ ಎಂದು ಹೇಳುತ್ತಾರೆ. ಈಗ ವಾಸ್ತವದಲ್ಲಿ ಯಥಾರ್ಥವಾದ ಮಾತು ಇದಾಗಿದೆ ಆದರೆ ಈ ರಹಸ್ಯವನ್ನು ಅರಿಯದ ಕಾರಣ ಒಬ್ಬನೇ ಬ್ರಹ್ಮನಿಗೆ ಬೇರೆ-ಬೇರೆ ಹೆಸರುಗಳನ್ನು ಕೊಟ್ಟಿದ್ದಾರೆ. ಹೇಗೆ ಪರಮಾತ್ಮನನ್ನು ಕೆಲವರು ಗಾಡ್ ಎನ್ನುತ್ತಾರೆ, ಕೆಲವರು ಅಲ್ಲಾಹ್ ಎನ್ನುತ್ತಾರೆ ಆದರೆ ಪರಮಾತ್ಮನಂತು ಒಬ್ಬರೇ ಆದರು, ಇದಂತು ಕೇವಲ ಭಾಷೆಯ ಅಂತರವಾಗಿದೆ. ಒಳ್ಳೆಯದು. ಓಂ ಶಾಂತಿ.
➤ Email me Murli: Receive Daily Murli on your email. Subscribe!