26 June 2022 KANNADA Murli Today | Brahma Kumaris

Read and Listen today’s Gyan Murli in Kannada

June 25, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ತಪಸ್ಸಿನ ಪ್ರತ್ಯಕ್ಷ ಫಲ - ಖುಷಿ

♫ ಕೇಳು ಇಂದಿನ ಮುರ್ಲಿ (audio)➤

ಇಂದು ಬಾಪದಾದಾ ತಮ್ಮ ಸರ್ವ ತಪಸ್ವಿರಾಜ ಮಕ್ಕಳನ್ನು ನೋಡುತ್ತಿರುವರು. ತಪಸ್ವಿಯೂ ಆಗಿರುವಿರಿ ಮತ್ತು ರಾಜ್ಯ ಅಧಿಕಾರಿಯೂ ಆಗಿರುವಿರಿ ಆದ್ದರಿಂದ ತಪಸ್ವಿರಾಜ ಆಗಿರುವಿರಿ. ತಪಸ್ವಿ ಅರ್ಥಾತ್ ರಾಜ್ಯ ಅಧಿಕಾರಿ ಆಗುವುದು. ತಪಸ್ಸು ರಾಜರನ್ನಾಗಿ ಮಾಡುತ್ತದೆ. ಎಲ್ಲರೂ ರಜರಾಗಿರುವಿರಿ ಅಲ್ಲವೇ. ತಪಸ್ಸಿನ ಬಲ ಯಾವ ಫಲ ಕೊಡುತ್ತದೆ? ಅಧೀನರಿಂದ ಅಧಿಕಾರಿ ಅರ್ಥಾತ್ ರಾಜ ಮಾಡುತ್ತದೆ ಆದ್ದರಿಂದ ತಪಸ್ಸಿನಿಂದ ರಾಜ್ಯ ಭಾಗ್ಯ ಪ್ರಾಪ್ತ ಆಗುತ್ತದೆ ಎನ್ನುವ ಗಾಯನ ಇದೆ. ಅಂದ ಮೇಲೆ ಭಾಗ್ಯ ಎಷ್ಟು ಶ್ರೇಷ್ಠ ಇದೆ! ಇಂತಹ ಭಾಗ್ಯ ಕಲ್ಪದಲ್ಲಿ ಯಾರಿಗೂ ಪ್ರಾಪ್ತ ಆಗಲು ಸಾಧ್ಯ ಇಲ್ಲ. ಎಷ್ಟು ದೊಡ್ಡ ಭಾಗ್ಯ ಎಂದರೆ ಭಾಗ್ಯ ವಿಧಾತನನ್ನೇ ತಮ್ಮವರನ್ನಾಗಿ ಮಾಡಿಕೊಂಡಿರುವಿರಿ. ಒಂದೊಂದು ಭಾಗ್ಯವನ್ನು ಪ್ರತ್ಯೇಕವಾಗಿ ಕೇಳಬೇಕಾಗಿಲ್ಲ. ಭಾಗ್ಯ ವಿಧಾತಾನಿಂದ ಎಲ್ಲ ಭಾಗ್ಯವನ್ನು ಆಸ್ತಿಯ ರೂಪದಲ್ಲಿ ತೆಗೆದುಕೊಂಡಿರುವಿರಿ. ಆಸ್ತಿಯನ್ನು ಎಂದೂ ಬೇಡಬೇಕಾಗಿಲ್ಲ. ಸರ್ವ ಭಾಗ್ಯವನ್ನು ಭಾಗ್ಯ ವಿಧಾತಾ ಸ್ವಯಂ ಕೊಟ್ಟಿರುವುರು. ತಪಸ್ಸು ಅಂದರೆ ಆತ್ಮ ಹೇಳುತ್ತದೆ ನಾನು ನಿನ್ನವನು ಮತ್ತು ನೀನು ನನ್ನವನು, ಇದಕ್ಕೆ ತಪಸ್ಸು ಎಂದು ಹೇಳಲಾಗುತ್ತದೆ. ಇದೇ ತಪಸ್ಸಿನ ಬಲದಿಂದ ಭಾಗ್ಯ ವಿಧಾತಾನನ್ನು ನಿಮ್ಮವರನ್ನಾಗಿ ಮಾಡಿಕೊಂಡಿರುವಿರಿ. ಭಾಗ್ಯ ವಿಧಾತಾ ಸಹ ನಾನು ನಿಮ್ಮವನು ಎಂದು ಹೇಳುತ್ತಾರೆ. ಅಂದಮೇಲೆ ಎಂತಹ ಶ್ರೇಷ್ಠ ಭಾಗ್ಯ ಆಯಿತು! ಭಾಗ್ಯದ ಜೊತೆಗೆ ಸ್ವರಾಜ್ಯ ಈಗ ಸಿಕ್ಕಿದೆ. ಭವಿಷ್ಯ ವಿಶ್ವ ರಾಜ್ಯದ ಆಧಾರ ಸ್ವರಾಜ್ಯ ಆಗಿದೆ. ಆದ್ದರಿಂದ ತಪಸ್ವಿರಾಜ ಆಗಿರುವಿರಿ. ಬಾಪದಾದಾ ಅವರಿಗೆ ಸಹ ತಮ್ಮ ಪ್ರತಿಯೊಬ್ಬ ರಾಜ್ಯ ಅಧಿಕಾರಿ ಮಕ್ಕಳನ್ನು ನೋಡಿ ಹರ್ಷ ಆಗುತ್ತಿದೆ. ಭಕ್ತಿಯಲ್ಲಿ ಅನೇಕ ಜನ್ಮದಲ್ಲಿ ಬಾಪದಾದಾ ಅವರ ಮುಂದೆ ಏನು ಹೇಳಿದಿರಿ? ನೆನಪಿದೆಯೇ ಅಥವಾ ಮರೆತುಹೋಗಿದೆಯೇ? ನಾನು ಗುಲಾಮ, ನಾನು ಗುಲಾಮ, ಎಂದೇ ಬಾರಿ ಬಾರಿಗೂ ಹೇಳಿದಿರಿ. ನಾನು ನಿನ್ನ ಗುಲಾಮ. ಬಾಬಾ ಹೇಳುತ್ತಾರೆ ನನ್ನ ಮಕ್ಕಳು ಗುಲಾಮರೇ! ಸರ್ವಶಕ್ತಿವಂತನ ಮಕ್ಕಳು ಗುಲಾಮರು ಎನ್ನುವುದು ಶೋಭಿಸುತ್ತದೆಯೇ! ಆದ್ದರಿಂದ ತಂದೆ ನಾನು ನಿನ್ನ ಗುಲಾಮ ಎನ್ನುವುದರ ಬದಲಾಗಿ ಯಾವ ಅನುಭವ ಮಾಡಿಸಿದರು? ನಾನು ನಿನ್ನವನು. ಗುಲಾಮರಿಂದ ರಾಜರಾದಿರಿ. ಈಗಲೂ ಎಂದಾದರೂ ಗುಲಾಮರಾಗುವುದಿಲ್ಲ ತಾನೇ? ಗುಲಾಮತನದ ಹಳೆಯ ಸಂಸ್ಕಾರ ಇಮರ್ಜ ಆಗುವುದಿಲ್ಲ ತಾನೇ? ಮಾಯೆಯ ಗುಲಾಮರಾಗುತ್ತೀರಾ? ರಾಜ ಎಂದೂ ಗುಲಾಮ ಆಗಲು ಸಾಧ್ಯ ಇಲ್ಲ. ಗುಲಾಮಗಿರಿ ಬಿಟ್ಟು ಹೋಯಿತೊ ಅಥವಾ ಒಂದೊಂದು ಬಾರಿ ಇಷ್ಟ ಆಗುತ್ತದೋ? ತಪಸ್ಸಿನ ಬಲ ಬಹಳ ಶ್ರೇಷ್ಠ ಆಗಿದೆ ಮತ್ತು ತಪಸ್ಸು ಏನು ಮಾಡುತ್ತೀರಿ? ತಪಸ್ಸಿನಲ್ಲಿ ಪರಿಶ್ರಮ ಪಡುತ್ತೀರಾ? ಬಾಪದಾದಾ ಅವರು ತಪಸ್ಸು ಅಂದರೇನು ಎನ್ನುವುದನ್ನು ಹೇಳಿದ್ದರು. ಮೋಜು ಮಾಡುವುದು. ತಪಸ್ಸು ಅಂದರೆ ಬಹಳ ಸಹಜವಾಗಿ ಹಾಡುವುದು ಮತ್ತು ನೃತ್ಯ ಮಾಡುವುದು, ಅಷ್ಟೇ. ನೃತ್ಯ ಮಾಡುವುದು ಹಾಡುವುದು ಸಹಜ ಆಗಿದೆಯೊ ಅಥವಾ ಕಷ್ಟ ಆಗಿದೆಯೊ? ಮನೋರಂಜನೆ ಆಗಿದೆಯೊ ಅಥವಾ ಪರಿಶ್ರಮ ಆಗಿದೆಯೊ? ಹಾಗಾದರೆ ತಪಸ್ಸಿನಲ್ಲಿ ಏನು ಮಾಡುತ್ತೀರಿ? ತಪಸ್ಸಿನ ಪ್ರತ್ಯಕ್ಷ ಫಲ ಆಗಿದೆ ಖುಷಿ. ಖುಷಿ ಅಂದರೆ ಏನು? ನೃತ್ಯ ಮಾಡುವುದು. ತಪಸ್ಸು ಅಂದರೆ ಖುಷಿಯಲ್ಲಿ ನೃತ್ಯ ಮಾಡುವುದು ಮತ್ತು ತಂದೆಯ ಮತ್ತು ನಿಮ್ಮ ಆದಿ ಅನಾದಿ ಗುಣಗಳ ಗಾಯನ ಮಾಡುವುದು. ಈ ಗೀತೆ ಎಷ್ಟು ದೊಡ್ಡದು ಮತ್ತು ಎಷ್ಟು ಸಹಜ ಆಗಿದೆ. ಇದರಲ್ಲಿ ಕಂಠ ಸರಿ ಇದೆಯೊ ಇಲ್ಲವೊ ಎನ್ನುವ ಮಾತಿಲ್ಲ. ನಿರಂತರ ಈ ಗೀತೆಯನ್ನು ಹಾಡಲು ಸಾಧ್ಯ ಇದೆ. ನಿರಂತರ ಖುಷಿಯಲ್ಲಿ ನೃತ್ಯ ಮಾಡುತ್ತಿರಿ. ಹಾಗಾದರೆ ತಪಸ್ಸಿನ ಅರ್ಥ ಏನು? ನೃತ್ಯ ಮಾಡುವುದು ಮತ್ತು ಹಾಡುವುದು ಎಷ್ಟು ಸಹಜ ಆಗಿದೆ. ಯಾರು ಸಣ್ಣ ತಪ್ಪು ಮಾಡುತ್ತಾರೆ ಅವರ ತಲೆ ಭಾರ ಆಗುತ್ತದೆ. ಬ್ರಾಹ್ಮಣ ಜೀವನದಲ್ಲಿ ಯಾರ ತಲೆಯೂ ಎಂದೂ ಭಾರ ಆಗಲು ಸಾಧ್ಯ ಇಲ್ಲ. ಆಸ್ಪತ್ರೆ ಮಾಡುವವರ ತಲೆ ಭಾರ ಆಯಿತೆ? ಟ್ರಸ್ಟೀ ಎದುರಿಗೆ ಕುಳಿತಿರುವರು! ತಲೆ ಭಾರ ಆಯಿತೇ? ಮಾಡಿ ಮಾಡಿಸುವವರು ಬಾಬಾ ಆಗಿದ್ದಾರೆ ಎಂದ ಮೇಲೆ ನಿಮಗೆ ಯಾವ ಹೊರೆ ಇದೆ? ಇದಂತೂ ನಿಮಿತ್ತರಾಗಿ ಭಾಗ್ಯ ಮಾಡಿಕೊಳ್ಳುವ ಸಾಧನ ಮಾಡಿಕೊಳ್ಳುತ್ತಿರುವಿರಿ. ನಿಮ್ಮ ಜಾವಬ್ದಾರಿ ಏನಿದೆ? ತಂದೆಯ ಬದಲಾಗಿ ನಿಮ್ಮ ಜವಾಬ್ದಾರಿ ಎಂದು ತಿಳಿಯುತ್ತೀರಿ ಅದರಿಂದ ತಲೆ ಭಾರ ಆಗುತ್ತದೆ. ತಂದೆ ಸರ್ವಶಕ್ತಿವಂತ ನನ್ನ ಜೊತೆಗಾರ ಆಗಿರುವಾಗ ಯಾವ ಭಾರ ಇದೆ? ಚಿಕ್ಕ ತಪ್ಪು ಮಾಡುತ್ತೀರಿ, ನನ್ನ ಜವಾಬ್ದಾರಿ ಎಂದು ತಿಳಿಯುತ್ತೀರಿ ಅದರಿಂದ ತಲೆ ಭಾರ ಆಗುತ್ತದೆ. ಆದ್ದರಿಂದ ಬ್ರಾಹ್ಮಣ ಜೀವನವೇ ನೃತ್ಯ ಮಾಡುವುದು, ಹಾಡುವುದು ಮತ್ತು ಮೋಜು ಮಾಡುವುದಾಗಿದೆ. ವಾಚಾ ಸೇವೆಯೇ ಇರಲಿ ಕರ್ಮಣಾ ಸೇವೆಯೇ ಇರಲಿ. ಈ ಸೇವೆಯೂ ಒಂದು ಆಟ ಆಗಿದೆ. ಸೇವೆ ಅಂದರೆ ಇನ್ನೇನೂ ಅಲ್ಲ. ಕೆಲವು ಆಟಗಳು ಹಗುರ ಆಗಿರುತ್ತವೆ ಕೆಲವು ಬುದ್ಧಿಯ ಆಟ ಇರುತ್ತದೆ. ಆದರೆ ಅದು ಆಟ ಅಲ್ಲವೇ. ಬುದ್ಧಿಯ ಆಟದಲ್ಲಿ ಬುದ್ಧಿ ಭಾರ ಆಗುತ್ತದೆ ಏನು? ಇದೆಲ್ಲ ಆಟ ಆಡುತ್ತೀರಿ. ಎಂತಹ ವಿಚಾರ ಮಾಡುವ ಕೆಲಸವೇ ಇರಲಿ, ಗಮನ ಕೊಡಬೇಕಾದ ಕೆಲಸ ಇರಲಿ ಮಾಸ್ಟರ ಸರ್ವಶಕ್ತಿವಾನ ಆತ್ಮ ಆದವರಿಗೆ ಎಲ್ಲವೂ ಆಟ ಆಗಿದೆ, ಹೌದಲ್ಲವೇ? ಅಥವಾ ಸ್ವಲ್ಪ ಸ್ವಲ್ಪ ಮಾಡುತ್ತಾ ಸುಸ್ತಾಗುತ್ತೀರಾ? ಹೆಚ್ಚಿನವರು ಅಥಕ ಆಗಿರುತ್ತೀರಿ ಆದರೆ ಕೆಲವು ಬಾರಿ ಸುಸ್ತಾಗುತ್ತೀರಿ. ಇದೇ ಯೋಗದ ಪ್ರಯೋಗ ಸರ್ವ ಖಜಾನೆಗಳನ್ನು , ಅದು ಸಂಕಲ್ಪವೇ ಇರಲಿ, ಜ್ಞಾನದ ಖಜಾನೆಯೇ ಇರಲಿ, ಅಥವಾ ಸ್ಥೂಲ ಧನವನ್ನು ಸಹ ಯೋಗದ ಪ್ರಯೋಗದ ರೀತಿಯಲ್ಲಿ ಪ್ರಯೋಗ ಮಾಡುತ್ತಿದ್ದರೆ ಪ್ರತಿ ಖಜಾನೆಯೂ ಹೆಚ್ಚುತ್ತಾ ಹೋಗುತ್ತದೆ. ಈ ತಪಸ್ಯಾ ವರ್ಷದಲ್ಲಿ ಯೋಗದ ಪ್ರಯೋಗ ಮಾಡಿರುವಿರಿ ಅಲ್ಲವೇ. ಏನು ಪ್ರಯೋಗ ಮಾಡಿರುವಿರಿ? ಈ ಒಂದೊಂದು ಖಜಾನೆಯ ಪ್ರಯೋಗ ಮಾಡಿರಿ. ಹೇಗೆ ಪ್ರಯೋಗ ಮಾಡುವುದು? ಯಾವುದೇ ಖಜಾನೆಯನ್ನು ಕಡಿಮೆ ಖರ್ಚಿನಲ್ಲಿ ಅಧಿಕ ಪ್ರಾಪ್ತಿ. ಪರಿಶ್ರಮ ಕಡಿಮೆ ಆದರೆ ಸಫಲತೆ ಹೆಚ್ಚು ಈ ವಿಧಿಯಿಂದ ಪ್ರಯೋಗ ಮಾಡಿರಿ. ಸಮಯ ಮತ್ತು ಸಂಕಲ್ಪ – ಇವೆರಡೂ ಶ್ರೇಷ್ಠ ಖಜಾನೆಗಳಾಗಿವೆ. ಆದ್ದರಿಂದ ಸಂಕಲ್ಪದ ಖರ್ಚು ಕಡಿಮೆ ಆಗಬೇಕು ಆದರೆ ಪ್ರಾಪ್ತಿ ಹೆಚ್ಚು ಆಗಬೇಕು. ಸಾಧಾರಣ ವ್ಯಕ್ತಿ ಮೂರು ನಾಲ್ಕು ನಿಮಿಷ ಸಂಕಲ್ಪ ಮಾಡಿ, ವಿಚಾರ ಮಾಡಿ ಸಫಲತೆ ಅಥವಾ ಪ್ರಾಪ್ತಿ ಮಾದಿಕೊಳ್ಳಲು ಸಾಧ್ಯವಾದರೆ ನೀವು ಎರಡು ಸೆಕೆಂಡನಲ್ಲಿ ಮಾಡಲು ಸಾಧ್ಯ ಇದೆ. ಇದನ್ನೇ ಸಾಕಾರದಲ್ಲಿ ಬ್ರಹ್ಮಾ ತಂದೆ ಹೇಳುತ್ತಿದ್ದರು ಕಡಿಮೆ ಖರ್ಚಿನಲ್ಲಿ ಅಧಿಕ ಲಾಭ ಪಡೆಯುವುದು. ಕರ್ಚು ಕಡಿಮೆ ಮಾಡಿರಿ ಆದರೆ ಪ್ರಾಪ್ತಿ 100 ಪಟ್ಟು ಇರಬೇಕು. ಇದರಿಂದ ಏನಾಗುವುದು? ಏನೇನು ಉಳಿತಾಯ ಆಗುತ್ತದೆ, ಸಂಕಲ್ಪವೆ ಇರಲಿ, ಸಮಯವೇ ಇರಲಿ ಅದನ್ನು ಅನ್ಯರ ಸೇವೆಯಲ್ಲಿ ತೊಡಗಿಸಲು ಸಾಧ್ಯ ಆಗುವುದು. ದಾನ ಪುಣ್ಯ ಯಾರು ಮಾಡಲು ಸಾಧ್ಯ? ಧನದ ಉಳಿತಾಯ ಮಾಡುವವರು. ಕೇವಲ ನಿಮಗಾಗಿ ಸಂಪಾದನೆ ಮಾಡಿಕೊಂಡಿರಿ ಮತ್ತು ತಿಂದಿರಿ ಆಗ ದಾನ ಪುಣ್ಯ ಮಾಡಲು ಆಗುವುದಿಲ್ಲ. ಯೋಗದ ಪ್ರಯೋಗ ಇದೇ ಆಗಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಪರಿಣಾಮ, ಕಡಿಮೆ ಸಂಕಲ್ಪದಿಂದ ಅನುಭೂತಿ ಹೆಚ್ಚು ಆಗಬೇಕು ಆಗ ಮಾತ್ರ ಪ್ರತಿ ಖಜಾನೆಯನ್ನು ಅನ್ಯರ ಪ್ರತಿ ಉಪಯೋಗ ಮಾಡಲು ಸಾಧ್ಯ ಆಗುತ್ತದೆ. ಅದೇ ರೀತಿ ವಾಣಿ ಮತ್ತು ಕರ್ಮ, ಖರ್ಚು ಕಡಿಮೆ ಮತ್ತು ಸಫಲತೆ ಹೆಚ್ಚು ಆಗ ಕಮಾಲ್ ಆಗುತ್ತದೆ. ಬಾಪದಾದಾ ಯಾವ ಅದ್ಭುತ ಮಾಡಿದರು? ಎಷ್ಟು ಕಡಿಮೆ ಸಮಯದಲ್ಲಿ ಏನೇನು ಮಾದಿದರು? ಆದ್ದರಿಂದ ಕಮಾಲ್ ಮಾಡಿದಿರಿ ಎಂದು ಹೇಳುತ್ತೀರಿ. ಒಂದಕ್ಕೆ ಪದ್ಮ ಪಟ್ಟು ಪ್ರಾಪ್ತಿಯ ಅನುಭವ ಮಾಡುತ್ತೀರಿ. ಅದಕ್ಕೆ ಹೇಳುತ್ತೀರಿ ಕಮಾಲ್ ಮಾಡಿ ಬಿಟ್ಟಿರಿ. ಬಾಪದಾದಾ ಅವರ ಖಜಾನೆ ಪ್ರಾಪ್ತಿ ಮತ್ತು ಅನುಭೂತಿ ಹೆಚ್ಚು ಮಾಡಿಸುತ್ತದೆ ಅದೇ ರೀತಿ ನೀವೂ ಸಹ ಯೋಗದ ಪ್ರಯೋಗ ಮಾಡಿರಿ. ಕೇವಲ ಹಾಡುವುದಲ್ಲ “ಬಾಬಾ ನೀವು ಕಮಾಲ್ ಮಾಡಿದಿರಿ” ನೀವೂ ಸಹ ಕಮಾಲ್ ಮಾಡುವವರಾಗಿರುವಿರಿ. ಮಾಡಿಯೂ ಮಾಡುತ್ತೀರಿ. ಆದರೆ ತಪಸ್ಸು ನಡೆಯುತ್ತಿರುವ ಸಮಯದಲ್ಲಿಯೂ ಹೆಚ್ಚಿನವರ ಪರಿಣಾಮ ಏನಿತ್ತು?

ತಪಸ್ಸಿನ ಉಮಂಗ ಉತ್ಸಾಹ ಚೆನ್ನಾಗಿದೆ. ಅಟೆನಶನ್ ಸಹ ಇದೆ ಸಫಲತೆಯೂ ಇದೆ ಆದರೆ ಸ್ವಯಂ ಪ್ರತಿ ಸರ್ವ ಖಜಾನೆಗಳನ್ನು ಹೆಚ್ಚು ಉಪಯೋಗ ಮಾಡುತ್ತೀರಿ. ನೀವು ಅನುಭೂತಿ ಮಾಡುವುದು ಒಳ್ಳೆಯದೇ. ಆದರೆ ತಪಸ್ಯಾ ವರ್ಷ ಸ್ವಯಂ ಪ್ರತಿ ಮತ್ತು ವಿಶ್ವ ಸೇವೆಯ ಪ್ರತಿಯೇ ಕೊಡಲಾಗಿದೆ. ತಪಸ್ಸಿನ ಪ್ರಕಂಪನಗಳನ್ನು ವಿಶ್ವದಲ್ಲಿ ಇನ್ನೂ ತೀವ್ರ ಗತಿಯಲ್ಲಿ ಹರಡಿಸಿರಿ. ಯೋಗದ ಪ್ರಯೋಗ ಮತ್ತು ಅನುಭವದ ಪ್ರಯೋಗ ಶಾಲೆಯಲ್ಲಿ ಪ್ರಯೋಗದ ಬಗ್ಗೆ ಏನು ಹೇಳಲಾಗಿದೆ ಅದರ ಗತಿಯನ್ನು ಹೆಚ್ಚಿಸಿರಿ. ವರ್ತಮಾನ ಸಮಯದಲ್ಲಿ ಸರ್ವ ಆತ್ಮಗಳಿಗೆ ನಿಮ್ಮ ಶಕ್ತಿಶಾಲಿ ಪ್ರಕಂಪನಗಳ ಮೂಲಕ ವಾಯುಮಂಡಲದ ಮೂಲಕ ಆಗುವ ಪರಿವರ್ತನೆಯ ಅವಶ್ಯಕತೆ ಇದೆ. ಆದ್ದರಿಂದಲೇ ಪ್ರಯೋಗವನ್ನು ಇನ್ನೂ ಹೆಚ್ಚಿಸಿರಿ. ಸಹಯೋಗಿ ಮಕ್ಕಳು ಬಹಳ ಇದ್ದಾರೆ. ಈ ಸಹಯೋಗವೇ ಯೋಗದಲ್ಲಿ ಬದಲಾವಣೆ ಆಗುತ್ತದೆ. ಒಂದಾಗಿದೆ ಸ್ನೇಹಿ ಸಹಯೋಗಿ ಮತ್ತು ಇನ್ನೊಂದು ಸಹಯೋಗಿ ಯೋಗಿ. ಮತ್ತು ಮೂರನೇಯವರು ನಿರಂತರ ಯೋಗಿ ಪ್ರಯೋಗಿ. ಈಗ ನಿಮ್ಮನ್ನು ನೀವು ಕೇಳಿಕೊಳ್ಳಿ ನಾನು ಯಾರು? ಆದರೆ ಬಾಪದಾದಾ ಅವರಿಗೆ ಮೂರೂ ಪ್ರಕಾರದ ಮಕ್ಕಳು ಪ್ರಿಯರಾಗಿರುವರು. ಕೆಲವು ಮಕ್ಕಳ ವೈಬ್ರೇಶನ್ ತಂದೆಯವರೆಗೆ ತಲುಪುತ್ತದೆ. ಭಿನ್ನ ಭಿನ್ನ ಪ್ರಕಾರದ ವೈಬ್ರೇಶನ್ ಇವೆ. ತಂದೆಯ ಬಳಿ ಯಾವ ಮಾತು ಬಂದಿದೆ ಗೊತ್ತಿದೆಯೇ? ಸನ್ನೆಯಿಂದ ತಿಳಿದುಕೊಳ್ಳುವವರಾಗಿರುವಿರಿ ಅಲ್ಲವೇ? ಈ ತಪಸ್ಯಾ ವರ್ಷದಲ್ಲಿ ಏನೆಲ್ಲ ಆಗುತ್ತಿದೆ ಅದಕ್ಕೆ ಕಾರಣ ಏನು? ದೊಡ್ಡ ದೊಡ್ಡ ಕಾರ್ಯಕ್ರಮ ಹಾಕಿಕೊಂಡಿರುವಿರಿ ಅದಕ್ಕೆ ಕಾರಣ ಏನು? ಕೆಲವರು ಹೇಳುತ್ತಾರೆ ಇದೆ ತಪಸ್ಸಿನ ಫಲ ಆಗಿದೆ. ಕೆಲವರು ಹೇಳುತ್ತಾರೆ ತಪಸ್ಸಿನ ವರ್ಷದಲ್ಲಿ ಇದು ಏಕೆ? ಎರಡೂ ವೈಬ್ರೇಶನ್ ಬರುತ್ತವೆ. ಆದರೆ ಸಮಯದ ತೀವ್ರ ಗತಿ ಮತ್ತು ತಪಸ್ಸಿನ ಪ್ರಕಂಪನಗಳಿಂದ ಆವಶ್ಯಕತೆಯು ಪೂರ್ಣ ಆಗುವುದು ಇದು ತಪಸ್ಸಿನ ಬಲದ ಫಲ ಆಗಿದೆ. ಫಲ ಅಂತೂ ತಿನ್ನಬೇಕಲ್ಲವೇ. ತಪಸ್ಸು ಸರ್ವ ಅವಶ್ಯಕತೆಯನ್ನು ಪೂರ್ಣಗೊಳಿಸುತ್ತದೆ ಎನ್ನುವುದನ್ನು ಈ ಡ್ರಾಮಾ ತೋರಿಸಿಕೊಡುತ್ತದೆ. ತಿಳಿಯಿತೇ. ಇದು ಏಕೆ ನಡೆಯುತ್ತಿದೆ ಎನ್ನುವ ಪ್ರಶ್ನೆ ಇಲ್ಲ. ತಪಸ್ಸು ಅಂದರೆ ಸಫಲತೆ ಸಹಜ ಅನುಭೂತಿ ಆಗಬೇಕು. ಅಸಂಭವವು ಹೇಗೆ ಸಂಭವ ಆಗುತ್ತದೆ ಎನ್ನುವುದರ ಅನುಭವ ಹೆಚ್ಚು ಹೆಚ್ಚು ಮಾಡುವಿರಿ. ವಿಘ್ನಗಳು ಬರುವುದೂ ಸಹ ಡ್ರಾಮಾದಲ್ಲಿ ಆದಿಯಿಂದ ಅಂತ್ಯದವರೆಗೆ ನಿಗದಿಯಾಗಿದೆ. ಈ ವಿಘ್ನಗಳೂ ಸಹ ಅಸಂಭವವನ್ನು ಸಂಭವ ಮಾಡಿಸುತ್ತದೆ. ಮತ್ತು ನೀವೆಲ್ಲರೂ ಅನುಭವಿಗಳಂತೂ ಆಗಿಯೇ ಇರುವಿರಿ. ಆದ್ದರಿಂದ ವಿಘ್ನವು ಆಟ ಅನಿಸುತ್ತದೆ. ಫುಟ್ ಬಾಲ್ ಆಡುತ್ತೀರಿ. ಆಗ ಏನು ಮಾಡುತ್ತೀರಿ? ಚೆಂಡು ಬರುತ್ತದೆ ಆಗ ಒದೆಯುತ್ತೀರಿ ಅಲ್ಲವೇ? ಚೆಂಡು ಬರದೇ ಇದ್ದರೆ ಹೇಗೆ ಒದೆಯಲು ಸಾಧ್ಯ? ಆಟ ಹೇಗೆ ಆಗುವುದು? ಇದೂ ಸಹ ಫುಟ್ ಬಾಲ್ ಆಟ ಆಗಿದೆ. ಆಟ ಆಡುವುದರಲ್ಲಿ ಆನಂದ ಎನಿಸುತ್ತದೆ ಅಲ್ಲವೆ ಅಥವಾ ಗೊಂದಲದಲ್ಲಿ ಬರುತ್ತೀರೊ? ಚೆಂಡು ನನ್ನ ಕಾಲ ಹತ್ತಿರ ಬರಬೇಕು ನಾನು ಒದೆಯಬೇಕು ಎಂದು ಪ್ರಯತ್ನ ಮಾಡುತ್ತೀರಿ ಅಲ್ಲವೆ. ಈ ಆಟ ಅಂತೂ ನಡೆಯುತ್ತಿರುತ್ತದೆ. ಯಾವುದೂ ಹೊಸತಲ್ಲ. ಡ್ರಾಮಾ ಆಟವನ್ನೂ ತೋರಿಸುತ್ತದೆ ಮತ್ತು ಸಂಪನ್ನ ಸಫಲತೆಯನ್ನೂ ತೋರಿಸುತ್ತದೆ. ಇದೇ ಬ್ರಾಹ್ಮಣ ಕುಲದ ರೀತಿ ಪದ್ಧತಿ ಆಗಿದೆ. ಒಳ್ಳೆಯದು.

ಈ ಗುಂಪಿಗೆ ಬಹಳ ಚಾನ್ಸ ಸಿಕ್ಕಿದೆ. ಯಾವುದೆ ಕಾರ್ಯದಲ್ಲಿ ನಿಮಿತ್ತ ಆಗುವುದು, ಯಾವುದೇ ಪ್ರಕಾರದ ವಿಧಿಯಿಂದ ನಿಮಿತ್ತ ಆಗುವುದು ಅರ್ಥಾತ್ ಚಾನ್ಸ ತೆಗೆದುಕೊಳ್ಳುವಂತಹ ಚಾನ್ಸೆಲ್ಲರ್ ಆಗುವುದು. ಇಂದಿನ ವಿಶ್ವದಲ್ಲಿ ಸಂಪತ್ತುಳ್ಳವರು ಬಹಳ ಇದ್ದಾರೆ ಆದರೆ ಜಗತ್ತಿನವರ ಬಳಿ ಇಲ್ಲದೇ ಇರುವ ಎಲ್ಲದಕ್ಕಿಂತ ದೊಡ್ಡ ಸಂಪತ್ತು ನಿಮ್ಮ ಬಳಿ ಯಾವುದಿದೆ? ಮತ್ತು ಅದರದೇ ಅವಶ್ಯಕತೆ ಸಂಪತ್ತುಳ್ಳವರಿಗೂ ಇದೆ ಮತ್ತು ಬಡವರಿಗೂ ಇದೆ. ಅದು ಯಾವ ಸಂಪತ್ತು? ಎಲ್ಲದಕ್ಕಿಂತ ಅವಶ್ಯಕ ಇರುವ ದೊಡ್ಡ ಸಂಪತ್ತಾಗಿದೆ ಸಹಾನುಭೂತಿ. ಬಡವರೇ ಇರಲಿ ಅಥವಾ ಧನವಂತರೇ ಇರಲಿ ಆದರೆ ಸಹಾನುಭೂತಿ ಇಲ್ಲ. ಸಹಾನುಭೂತಿಯ ಸಂಪತ್ತು ಎಲ್ಲದಕ್ಕಿಂತ ದೊಡ್ಡದು. ಇನ್ನೇನೂ ಕೊಡದಿದ್ದರೂ ಸಹಾನುಭೂತಿಯಿಂದ ಎಲ್ಲರನ್ನೂ ಸಂತುಷ್ಟ ಮಾಡಲು ಸಾದ್ಯ ಇದೆ. ಮತ್ತು ನಿಮ್ಮ ಸಹಾನುಭೂತಿ ಈಶ್ವರೀಯ ಪರಿವಾರದ ಸಂಬಂಧದಿಂದ ಸಹಾನುಭೂತಿ ಇದೆ. ಅಲ್ಪ ಕಾಲದ ಸಹಾನುಭೂತಿ ಅಲ್ಲ. ಪರಿವಾರದ ಸಹಾನುಭೂತಿ ಎಲ್ಲದಕ್ಕಿಂತ ದೊಡ್ಡ ಸಹಾನುಭೂತಿ ಆಗಿದೆ ಮತ್ತು ಎಲ್ಲರಿಗೂ ಅವಶ್ಯಕ ಆಗಿದೆ ಮತ್ತು ನೀವು ಎಲ್ಲರಿಗೂ ಕೊಡಲು ಸಾಧ್ಯ ಇದೆ. ಆತ್ಮಿಕ ಸಹಾನುಭೂತಿ ತನು, ಮನ ಮತ್ತು ಧನದ ಪೂರೈಕೆಯನ್ನೂ ಮಾಡಲು ಸಾಧ್ಯ ಇದೆ. ಒಳ್ಳೆಯದು ಇದರ ಬಗ್ಗೆ ನಂತರ ತಿಳಿಸುತ್ತೇವೆ.

ನಾಲ್ಕೂ ಕಡೆಯ ತಪಸ್ವೀ ರಾಜ ಶ್ರೇಷ್ಠ ಆತ್ಮರಿಗೆ, ಸದಾ ಯೋಗದ ಪ್ರಯೋಗದ ಮೂಲಕ ಖರ್ಚು ಕಡಿಮೆ ಶ್ರೇಷ್ಠ ಸಫಲತೆ ಅನುಭವ ಮಾಡುವಂತಹ, ಸದಾ ನಾನು ನಿನ್ನವನು ನೀನು ನನ್ನವನು ಈ ತಪಸ್ಸಿನಲ್ಲಿ ಮಗ್ನ ಆಗಿರುವಂತಹ, ಸದಾ ಪ್ರತಿ ಸಮಯ ತಪಸ್ಸಿನ ಮೂಲಕ ಖುಷಿಯಲ್ಲಿ ನೃತ್ಯ ಮಾಡುವ ಮತ್ತು ತಂದೆಯ ಮತ್ತು ತಮ್ಮ ಗುಣ ಗಾಯನ ಮಾಡುವಂತಹ, ಇಂತಹ ದೇಶ ವಿದೇಶದ ಸರ್ವ ಸ್ಮೃತಿ ಸ್ವರೂಪ ಮಕ್ಕಳಿಗೆ ಬಾಪದಾದಾ ಅವರ ನೆನಪು ಪ್ರೀತಿ ಮತ್ತು ನಮಸ್ತೆ.

ವರದಾನ:-

ತಾವು ಬ್ರಾಹ್ಮಣ ಮಕ್ಕಳಿಗೆ ಈ ಅಲೌಕಿಕ ಜನ್ಮವು ಡೈರೆಕ್ಟ್ ಅನಾದಿ ಪಿತ ಹಾಗೂ ಆದಿ ಪಿತನ ಮೂಲಕ ಪ್ರಾಪ್ತಿಯಾಗಿದೆ. ಯಾರ ಜನ್ಮವೇ ಭಾಗ್ಯವಿದಾತನ ಮೂಲಕ ಆಗಿದೆಯೋ ಅವರೆಷ್ಟು ಭಾಗ್ಯಶಾಲಿಯಾದರು! ತಮ್ಮ ಈ ಶ್ರೇಷ್ಠ ಭಾಗ್ಯವನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತಾ ಹರ್ಷಿತರಾಗಿರಿ. ಈ ಸ್ಮೃತಿ ಸ್ವರೂಪವು ಪ್ರತೀ ಚಲನೆ ಹಾಗೂ ಚಹರೆಯಲ್ಲಿ ಪ್ರತ್ಯಕ್ಷರೂಪದಲ್ಲಿ ತಮಗೂ ಅನುಭವವಾಗಲಿ ಹಾಗೂ ಅನ್ಯರಿಗೂ ಪ್ರತ್ಯಕ್ಷವಾಗಲಿ. ತಮ್ಮ ಮಸ್ತಕದಲ್ಲಿ ಹೊಳೆಯುತ್ತಿರುವ ಈ ಭಾಗ್ಯದ ರೇಖೆಯು ಕಂಡುಬಂದಾಗ ಹೇಳಲಾಗುವುದು- ಶ್ರೇಷ್ಠ ಭಾಗ್ಯಶಾಲಿ ಆತ್ಮ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top