05 June 2021 KANNADA Murli Today – Brahma Kumaris

June 4, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಪೂರ್ಣ ಆಸ್ತಿಯನ್ನು ಪಡೆಯಲು ಒಬ್ಬ ತಂದೆಯೊಂದಿಗೆ ಪ್ರೀತಿಯನ್ನಿಡಿ, ನಿಮ್ಮ ಪ್ರೀತಿಯು ಯಾವುದೇ ದೇಹಧಾರಿಯೊಂದಿಗೆ ಇರಬಾರದು”

ಪ್ರಶ್ನೆ:: -

ಯಾರು ನಮ್ಮ ದೈವೀ ಸಂಪ್ರದಾಯದವರಾಗಿರುತ್ತಾರೆಯೋ ಅವರ ಮುಂದೆ ಯಾವ ಮಾತು ಸುತ್ತುತ್ತಿರುತ್ತದೆ?

ಉತ್ತರ:-

ಯಾವಾಗ ನೀವು ಅವರಿಗೆ ತಂದೆಯನ್ನು ನೆನಪು ಮಾಡುವುದರಿಂದ ವಿಕರ್ಮ ವಿನಾಶವಾಗುತ್ತದೆ ಮತ್ತು ದೇವಿ-ದೇವತಾ ಧರ್ಮದ ಸ್ಥಾಪನೆಯಾಗುತ್ತದೆ ಎಂದು ತಿಳಿಸುವುದೇ ಈ ಮಾತುಗಳು ಅವರ ಮುಂದೆ ಸುತ್ತುತ್ತಿರುತ್ತದೆ, ಅವರ ಬುದ್ಧಿಯಲ್ಲಿ ನಾವು ದೇವತೆಗಳಾಗಬೇಕು. ಆದ್ದರಿಂದ ನಮ್ಮ ಆಹಾರ-ಪಾನೀಯಗಳು ಶುದ್ಧವಾಗಿರಬೇಕು ಎಂದು ಬರುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಭೋಲಾನಾಥನಿಗಿಂತ ಭಿನ್ನ………….

ಓಂ ಶಾಂತಿ. ಭೋಲಾನಾಥನ ಮಕ್ಕಳು ಕೇಳುತ್ತಿದ್ದೀರಲ್ಲವೆ. ಯಾರಿಂದ ಕೇಳುತ್ತಿದ್ದೀರಿ? ಭೋಲಾನಾಥನಿಂದ ಕೇಳುತ್ತಿದ್ದೀರಿ. ಭೋಲಾನಾಥನೆಂದು ಶಿವನಿಗೆ ಹೇಳಲಾಗುತ್ತದೆ, ಅವರ ಹೆಸರೇ ಶಿವ ಎಂದಾಗಿದೆ. ಭೋಲಾನಾಥನ ಮಕ್ಕಳು ಅರ್ಥಾತ್ ಶಿವನ ಮಕ್ಕಳಾಗಿದ್ದೀರಿ. ಆತ್ಮಗಳು ಈ ಕಿವಿಗಳಿಂದ ಕೇಳುತ್ತಿದ್ದೀರಿ. ಈಗ ನೀವಾತ್ಮಗಳು ಆತ್ಮಾಭಿಮಾನಿಗಳಾಗಿದ್ದೀರಿ. ಮಕ್ಕಳು ಟೇಪ್ರೆಕಾರ್ಡರ್ನಲ್ಲಿಯೂ ಕೇಳುತ್ತಾರೆಂದರೆ ಶಿವ ತಂದೆಯು ನಮಗೆ ಪರಿಚಯ ಕೊಡುತ್ತಾರೆ – ನಾನು ಎಲ್ಲಾ ಆತ್ಮಗಳ ತಂದೆಯಾಗಿದ್ದೇನೆಂದು ತಿಳಿದಿದ್ದಾರೆ. ನೀವು ಯಾರನ್ನು ಪರಮಪಿತ ಪರಮಾತ್ಮ ಅಥವಾ ಪರಮಾತ್ಮನೆಂದು ಹೇಳುತ್ತೀರೋ ಅವರನ್ನು ಸದಾ ತಂದೆ ಎಂದು ಕರೆಯುತ್ತಾರೆ. ಯಾರು ಅವರನ್ನು ತಂದೆಯೆಂದು ಕರೆಯುತ್ತಾರೆ? ಆತ್ಮವೇ ಕರೆಯುತ್ತದೆ. ಆತ್ಮಕ್ಕೆ ಈಗ ಜ್ಞಾನ ಸಿಕ್ಕಿದೆ, ಯಾವ ಮನುಷ್ಯ ಮಾತ್ರರಿಗೂ ಈ ಜ್ಞಾನವಿಲ್ಲ. ನಾವಾತ್ಮರಿಗೆ ಇಬ್ಬರು ತಂದೆಯರಿದ್ದಾರೆ. ಒಬ್ಬರು ಸಾಕಾರಿ ತಂದೆ, ಇನ್ನೊಬ್ಬರು ನಿರಾಕಾರಿ ತಂದೆಯಾಗಿದ್ದಾರೆ. ಅವರು ಪರಮಪಿತ ಪರಮಾತ್ಮನಾಗಿದ್ದಾರೆ, ಈ ತಿಳುವಳಿಕೆಯನ್ನು ಯಾರೂ ಕೊಡಲು ಸಾಧ್ಯವಿಲ್ಲ. ತಂದೆಯ ಹೊರತು ಬೇರೆ ಯಾರೂ ಕೇಳಲು ಸಾಧ್ಯವಿಲ್ಲ. ಹಾ! ನೀವು ಪರಮಪಿತ ಪರಮಾತ್ಮ, ಗಾಡ್ಫಾದರ್ ಎಂದು ಯಾರಿಗೆ ಹೇಳುತ್ತೀರಿ? ಏನು ಲೌಕಿಕ ತಂದೆಗೋ ಅಥವಾ ಪಾರಲೌಕಿಕ ತಂದೆಗೋ? ಲೌಕಿಕ ತಂದೆಗೆ ಗಾಡ್ಫಾದರ್ ಎಂದು ಕರೆಯುತ್ತಾರೆಯೇ? ಹಿಂದಿ ಭಾಷೆಯಲ್ಲಿ ಪರಮಪಿತನೆಂದು ಅಕ್ಷರವಿದೆ. ಅವರಂತೂ ಒಬ್ಬ ನಿರಾಕಾರನಾಗಿದ್ದಾರೆ, ಈಶ್ವರ, ಪ್ರಭು ಅಥವಾ ಭಗವಂತನೆಂದು ಹೇಳುವುದರಿಂದ ತಂದೆ ಎಂಬ ಮಾತು ಸಿದ್ಧವಾಗುವುದಿಲ್ಲ. ಗಾಡ್ಫಾದರ್ ಎಂಬ ಅಕ್ಷರವು ಚೆನ್ನಾಗಿದೆ, ಆತ್ಮವು ನಮ್ಮ ಗಾಡ್ಫಾದರ್ ಎಂದು ಹೇಳಿತು. ಲೌಕಿಕ ತಂದೆಯು ಕೇವಲ ಶರೀರದ ತಂದೆಯಾಗಿದ್ದಾರೆ, ನಿಮ್ಮೊಂದಿಗೆ ಕೇಳಲಾಗುತ್ತದೆ – ನಿಮಗೆ ಎಷ್ಟು ಜನ ತಂದೆಯರಿದ್ದಾರೆ? ಒಬ್ಬರು ಲೌಕಿಕ ಮತ್ತೊಬ್ಬರು ಪಾರಲೌಕಿಕ. ಇವರಿಬ್ಬರಲ್ಲಿ ಯಾರು ದೊಡ್ಡವರಾಗಿದ್ದಾರೆ? ಅವಶ್ಯವಾಗಿ ಪಾರಲೌಕಿಕ ತಂದೆಯಾಗಿದ್ದಾರೆ. ಎಲ್ಲಾ ಪತಿತರನ್ನು ಪಾವನ ಮಾಡುವಂತಹ ಪಾರಲೌಕಿಕ ತಂದೆಯ ಮಹಿಮೆಯಾಗಿದೆ. ಇದನ್ನೂ ಸಹ ನೀವೀಗ ತಿಳಿದುಕೊಂಡಿದ್ದೀರಿ, ಪ್ರಪಂಚದಲ್ಲಿ ಇದನ್ನು ಯಾರೂ ತಿಳಿದುಕೊಂಡಿಲ್ಲ. ನಿಮಗೆ ಪಾರಲೌಕಿಕ ತಂದೆಯೊಂದಿಗೆ ಪ್ರೀತಿಯಿದೆ ಎಂದು ತಂದೆಯು ತಿಳಿಸಿದ್ದಾರೆ. ಬೇರೆಲ್ಲರದೂ ವಿನಾಶಕಾಲೇ ವಿಪರೀತ ಬುದ್ಧಿಯಾಗಿದೆ. ಈಗ ಮಹಾಭಾರತ ಯುದ್ಧವು ನಡೆಯಲಿದೆ, ವಿಮಾನಗಳು, ಟ್ಯಾಂಕ್ ಇತ್ಯಾದಿಗಳನ್ನು ಪರಸ್ಪರ ಸರಬರಾಜು ಮಾಡುತ್ತಿದ್ದಾರೆ. ಹಣವನ್ನು ತೆಗೆದುಕೊಂಡು ಯಾರಿಗೆ ಬೇಕೋ ಅವರಿಗೆ ಕೊಡುತ್ತಿದ್ದಾರೆ, ಸಾಲವನ್ನೂ ಸಹ ತೆಗೆದುಕೊಳ್ಳುತ್ತಿದ್ದಾರೆ ಅಂದಮೇಲೆ ವಿಮಾನ, ಅಣು ಬಾಂಬು ಇತ್ಯಾದಿಗಳನ್ನೂ ಸಹ ಕೊಂಡುಕೊಳ್ಳುತ್ತಾರೆ. ಇವೆಲ್ಲಾ ಸಾಮಗ್ರಿಗಳು ಬಹಳ ಬೆಲೆ ಹೆಚ್ಚಿರುತ್ತದೆ. ವಿದೇಶಿಯರು ಇದನ್ನು ಮಾಡುತ್ತಾರೆ ನಂತರ ಮಾರಾಟ ಮಾಡುತ್ತಾರೆ. ಭಾರತವಾಸಿಗಳು ವಿಮಾನಗಳನ್ನು ಮಾರಾಟ ಮಾಡುತ್ತಾರೆಯೇ! ಎಲ್ಲಾ ಸಾಮಗ್ರಿಗಳು ಹೊರಗಿನಿಂದಲೇ ಬರುತ್ತವೆ. ಈಗ ಈ ಸಾಮಗ್ರಿಗಳನ್ನು ಖರೀದಿಸಿದರೆಂದ ಮೇಲೆ ಕೆಲಸಕ್ಕೆ ಬರುತ್ತವೆಯಲ್ಲವೆ, ಅವನ್ನು ಬಿಸಾಡಲು ಸಾಧ್ಯವೇ? ಅವರೆಲ್ಲರದೂ ವಿನಾಶಕಾಲೇ ವಿಪರೀತ ಬುದ್ಧಿ, ಯಾದವ ಸಂಪ್ರದಾಯವಾಗಿದೆ, ಇವರೆಲ್ಲರೂ ಯುರೋಪಿನಲ್ಲಿ ಇರುತ್ತಾರೆ, ಇವರಲ್ಲಿ ಎಲ್ಲರೂ ಬಂದು ಬಿಡುತ್ತಾರೆ. ಭಾರತವಂತೂ ಅವಿನಾಶಿ ಖಂಡವಾಗಿದೆ ಏಕೆಂದರೆ ಅವಿನಾಶಿ ತಂದೆಯ ಜನ್ಮ ಸ್ಥಾನವಾಗಿದೆ. ತಂದೆಯು ಬರುತ್ತಾರೆಂದರೆ ಹಳೆಯ ಪ್ರಪಂಚವು ಸಮಾಪ್ತಿಯಾಗಬೇಕು ಮತ್ತು ಜನ್ಮವನ್ನೂ ಸಹ ತೆಗೆದುಕೊಳ್ಳುತ್ತಾರೆಂದರೆ ಆ ಖಂಡವೂ ಸಮಾಪ್ತಿಯಾಗುವುದಿಲ್ಲ. ತಂದೆಯು ಬಂದಿದ್ದರು ಆದ್ದರಿಂದಲೇ ಶಿವ ಜಯಂತಿಯನ್ನು ಮಾಡುತ್ತಾರೆ ಆದರೆ ಶಿವ ತಂದೆಯು ಯಾವಾಗ ಬರುತ್ತಾರೆಂದು ತಿಳಿದಿಲ್ಲ. ಯಾವಾಗ ವಿನಾಶದ ತಯಾರಿ ಆಗುತ್ತದೆಯೋ ಆಗ ತಂದೆಯು ಬರುತ್ತಾರೆ.

ಯುರೋಪಿಯನ್ನರು, ಯಾದವ ಸಂಪ್ರದಾಯದವರು, ಬೌದ್ಧಿಯರು, ಕ್ರಿಶ್ಚಿಯನ್ನರು ಸತ್ಯಯುಗದಲ್ಲಿ ಇರುವುದಿಲ್ಲ. ಅವರದೆಲ್ಲವೂ ವಿನಾಶಕಾಲೇ ವಿಪರೀತ ಬುದ್ಧಿಯಾಗಿದೆ ಏಕೆಂದರೆ ಪರಮಾತ್ಮ ತಂದೆಯನ್ನು ಸರ್ವವ್ಯಾಪಿ ಎಂದು ಹೇಳುತ್ತಾರೆ. ನಿಮ್ಮದು ವಿನಾಶಕಾಲೇ ಪ್ರೀತಿ ಬುದ್ಧಿ, ತಂದೆಯನ್ನು ತಿಳಿದುಕೊಂಡಿದ್ದೀರಿ. ನಾವು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆಂದು ನೀವು ತಿಳಿದಿದ್ದೀರಿ. 84 ಜನ್ಮಗಳಿಂದ ಪಾಪಾತ್ಮರು, ತಮೋಪ್ರಧಾನರಾಗಿ ಬಿಟ್ಟಿದ್ದೇವೆ, ಭಾರತವಾಸಿಗಳೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಈಗ ನಾಟಕವು ಸಂಪೂರ್ಣವಾಗುತ್ತಿದೆ, ಈಗ ಎಲ್ಲರೂ ಹಿಂತಿರುಗಿ ಹೋಗಬೇಕು. ನೀವು ರಾಜಯೋಗದ ವಿದ್ಯೆಯನ್ನು ಈಗ ಕಲಿಯುತ್ತಿದ್ದೀರಿ. ಈಗ ಎಲ್ಲರದೂ ವಿನಾಶದ ಸಮಯ ಅರ್ಥಾತ್ ಮೃತ್ಯುವಿನ ಸಮಯವಾಗಿದೆ ಅಂದಮೇಲೆ ಆ ಯಾದವರೊಂದಿಗೆ ಈಶ್ವರನಿಗೆ ಪ್ರೀತಿಯಿಲ್ಲ ಆದ್ದರಿಂದ ವಿನಾಶಕಾಲೇ ವಿಪರೀತ ಬುದ್ಧಿಯೆಂದು ಹೇಳಲಾಗುತ್ತದೆ. ಯಾವುದೇ ದೇಹಧಾರಿ ಮನುಷ್ಯನೊಂದಿಗೆ ಪ್ರೀತಿಯನ್ನು ಇಡಬಾರದು, ಅವರಂತೂ ರಚನೆಯಾಗಿದ್ದಾರೆ, ಅವರಿಂದ ಆಸ್ತಿ ಸಿಗಲು ಸಾಧ್ಯವಿಲ್ಲ. ಸಹೋದರನಿಂದ ಸಹೋದರನಿಗೆ ಆಸ್ತಿಯು ಸಿಗಲು ಸಾಧ್ಯವೇ? ಇದನ್ನಂತೂ ಬಹಳ ಚೆನ್ನಾಗಿ ತಿಳಿಸಲಾಗಿದೆ. ಅವರದು ವಿನಾಶಕಾಲೆ ವಿಪರೀತ ಬುದ್ಧಿ, ನಿಮ್ಮದು ಪ್ರೀತಿ ಬುದ್ಧಿ ಎಂದು ನೀವು ತಿಳಿದಿದ್ದೀರಿ. ಇದರಲ್ಲಿಯೂ ಸಹ ತೀವ್ರ ಪ್ರೀತಿಯಿರುವವರು ತಂದೆಯೊಂದಿಗೆ ಸಂಪೂರ್ಣ ಪ್ರೀತಿಯನ್ನಿಟ್ಟಿರುತ್ತಾರೆ. ನಾವು ತಂದೆಯಿಂದ 21 ಜನ್ಮಗಳ ಸ್ವರ್ಗದ ಆಸ್ತಿಯನ್ನು ಪಡೆಯುತ್ತೇವೆ, ಆ ತಂದೆಯು ಸತ್ಯವನ್ನೇ ಹೇಳುತ್ತಾರೆ ಮತ್ತ್ಯಾರೊಂದಿಗೂ ಪ್ರೀತಿಯನ್ನಿಡಬಾರದು. ಯಾವಾಗ ಹೊಸ ಮನೆಯ ತಯಾರಾಗುತ್ತದೆಯೋ ನಂತರ ಹೊಸ ಮನೆಯೊಂದಿಗೆ ಪ್ರೀತಿಯಿರುತ್ತದೆ. ಈ ಹಳೆಯ ಮನೆಯು ಒಡೆದು ಹೋಗುತ್ತದೆ ಎಂದು ತಿಳಿದು ಬರುತ್ತದೆ ಅಂದಮೇಲೆ ನಾವೂ ಹಳೆಯ ಪ್ರಪಂಚದಿಂದ ಮನಸ್ಸನ್ನು ತೆಗೆಯುತ್ತಾ ಹೋಗುತ್ತೇವೆ. ದಿನ-ಪ್ರತಿದಿನ ವಾಯುಮಂಡಲ ಕೆಡುತ್ತಲೇ ಹೋಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಎಷ್ಟೊಂದು ಗಲಾಟೆಗಳಾಗುತ್ತದೆ ಅಂದಮೇಲೆ ಇವೆಲ್ಲವೂ ಸಮಾಪ್ತಿಯಾಗಲೇ ಬೇಕಲ್ಲವೆ. ನಾವು ಹೊಸ ಪ್ರಪಂಚಕ್ಕೆ ಹೋಗಬೇಕಾಗಿದೆ ಅಂದಮೇಲೆ ಹೊಸ ಪ್ರಪಂಚವನ್ನು ನೆನಪು ಮಾಡಬೇಕು. ಬೇಹದ್ದಿನ ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕು, ಮತ್ತ್ಯಾರನ್ನೇ ನೆನಪು ಮಾಡುವುದರಿಂದ ಏನೂ ಸಿಗುವುದಿಲ್ಲ. ಮನುಷ್ಯರು ಭಕ್ತಿಮಾರ್ಗದಲ್ಲಂತೂ ಎಷ್ಟೊಂದು ನೆನಪು ಮಾಡುತ್ತಾರೆ. ತಂದೆ-ತಾಯಿ, ಮಿತ್ರ ಸಂಬಂಧಿಗಳನ್ನು ನೆನಪು ಮಾಡುತ್ತಿದ್ದರೂ ಸಹ ದೇವಿ-ದೇವತೆಗಳನ್ನು ಎಷ್ಟೊಂದು ನೆನಪು ಮಾಡುತ್ತಾರೆ! ಹೋಗಿ ನೀರಿನಲ್ಲಿ ಸ್ನಾನ ಮಾಡುತ್ತಾರೆ, ಅದಕ್ಕೆ ಪತಿತ-ಪಾವನಿ ಎಂದು ಹೇಳುತ್ತಾರೆ. ಬಾಣ ಹೊಡೆದರು ಗಂಗೆ ಹೊರ ಬಂದಿತೆಂದು ತೋರಿಸುತ್ತಾರೆ. ಗಂಗಾ ಜಲವನ್ನು ಬಾಯಲ್ಲಿ ಹಾಕುತ್ತಾರೆ, ಸ್ವಲ್ಪ ಜಲವು ಸಿಗುವುದರಿಂದ ಮುಕ್ತಿಯನ್ನು ಪಡೆಯುತ್ತಾರೆಂದು ತಿಳಿಯುತ್ತಾರೆ. ಇಲ್ಲಂತೂ ಜ್ಞಾನದ ಮಾತಾಗಿದೆ. ಸ್ವಲ್ಪ ಜ್ಞಾನವನ್ನು ಕೇಳುವುದರಿಂದಲೂ ಫಲ ಸಿಗುವುದು, ಈ ಜ್ಞಾನವು ಕೇಳುವ ಮಾತಾಗಿದೆ, ಅಮೃತವನ್ನು ಕುಡಿಯುವ ಮಾತಲ್ಲ ಕೇಳುವ ಮಾತಾಗಿದೆ. ಭೋಗದ ಅಮೃತವನ್ನು ಕುಡಿಸುತ್ತಾರೆಂದು ಅಲ್ಲ, ಅದಂತೂ ಸಿಹಿ ನೀರಾಗಿದೆ. ಬಾಕಿ ಇದಂತೂ ಜ್ಞಾನದ ಮಾತಾಗಿದೆ. ಜ್ಞಾನವೆಂದರೆ ತಂದೆ ಮತ್ತು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳುವುದಾಗಿದೆ. ಈ ಸೃಷ್ಟಿಯು ಹೇಗೆ ಸುತ್ತುತ್ತದೆ, 84 ಜನ್ಮಗಳನ್ನು ಯಾರು ತೆಗೆದುಕೊಳ್ಳುತ್ತಾರೆ? ಎಲ್ಲರೂ 84 ಜನ್ಮಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಮೊಟ್ಟ ಮೊದಲು ಭಾರತವಾಸಿಗಳೇ ಬರುತ್ತಾರೆ, ಅವರೇ ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಯಾರು ದೇವತೆಗಳಾಗಿದ್ದರೋ ಅವರೇ 84 ಜನ್ಮಗಳನ್ನು ಭೋಗಿಸಿ ಪತಿತರಾಗಿದ್ದಾರೆ, ತಂದೆಯು ಬಂದು ಮುಳ್ಳುಗಳಿಂದ ಹೂಗಳನ್ನಾಗಿ ಮಾಡುತ್ತಾರೆ. ಮನುಷ್ಯರು ದೇಹಾಭಿಮಾನದಲ್ಲಿ ಬಂದು ಪಂಚ ವಿಕಾರಗಳಲ್ಲಿ ಸಿಕ್ಕಿಕೊಂಡಿದ್ದಾರೆ. ಈಗ ರಾವಣ ರಾಜ್ಯವಿದೆ, ಸತ್ಯಯುಗದಲ್ಲಿ ದೈವೀ ರಾಜ್ಯವಿತ್ತು. ಶಿವ ತಂದೆಯು ಸ್ವರ್ಗ ಪುರಿಯನ್ನು ರಚನೆ ಮಾಡುತ್ತಾರೆ, ಸೂರ್ಯವಂಶಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಅದು ಈಗ ಸ್ಥಾಪನೆಯಾಗುತ್ತಿದೆ ಎಂದು ನೀವು ಈಗ ತಿಳಿದಿದ್ದೀರಿ. ನಿಮ್ಮದು ವಿನಾಶಕಾಲೇ ಪ್ರೀತಿ ಬುದ್ಧಿ ಆದ್ದರಿಂದ ನೀವು ವಿಜಯಿಗಳಾಗಿದ್ದೀರಿ, ಇಡೀ ವಿಶ್ವದ ಮೇಲೆ ವಿಜಯ ಗಳಿಸುತ್ತೀರಿ, ಇದನ್ನು ನೀವು ಚೆನ್ನಾಗಿ ನೆನಪಿಟ್ಟುಕೊಳ್ಳಬೇಕಾಗಿದೆ. ನಾವು ಭಾರತವಾಸಿಗಳು ಯಾರು ಈಗ ಕಲಿಯುಗದಲ್ಲಿದ್ದೇವೆ ನಂತರ ಬದಲಾಗಿ ಸ್ವರ್ಗದಲ್ಲಿ ಹೋಗುತ್ತೇವೆ. ಹಳೆಯ ಪ್ರಪಂಚವನ್ನು ಬಿಟ್ಟು ಬಿಡಬೇಕು, ಈ ವಿಕಾರಿ ಸಂಬಂಧವನ್ನು ಬಂಧನವೆಂದು ಹೇಳಲಾಗುತ್ತದೆ. ನೀವೀಗ ವಿಕಾರಿ ಬಂಧನದಿಂದ ಹೊರ ಬಂದು ನಿರ್ವಿಕಾರಿ ಸಂಬಂಧದಲ್ಲಿ ಹೋಗುತ್ತೀರಿ ನಂತರ ಇನ್ನೊಂದು ಜನ್ಮದಲ್ಲಿ ವಿಕಾರಿ ಬಂಧನದಲ್ಲಿ ಬರುವುದಿಲ್ಲ, ಅಲ್ಲಿ ನಿರ್ವಿಕಾರಿ ಸಂಬಂಧ, ಈ ಸಮಯದಲ್ಲಿ ಆಸುರೀ ಬಂಧನವಾಗಿದೆ. ನಮಗೆ ಶಿವ ತಂದೆಯೊಂದಿಗೆ ಪ್ರೀತಿಯಿದೆ ಎಂದು ಆತ್ಮವು ಹೇಳುತ್ತದೆ. ನೀವು ಬ್ರಾಹ್ಮಣರದು ಪ್ರೀತಿಯಿದೆ ಏಕೆಂದರೆ ಯಥಾರ್ಥವಾಗಿ ತಿಳಿದಿದ್ದೀರಿ. ತಂದೆಯನ್ನು, ಸೃಷ್ಟಿಚಕ್ರವನ್ನು ತಿಳಿದು ನಂತರ ಅನ್ಯರಿಗೂ ನೀವು ತಿಳಿಸುತ್ತೀರಿ. ಯಾರೆಷ್ಟು ಅನ್ಯರಿಗೆ ತಿಳಿಸುತ್ತೀರೋ ಅಷ್ಟು ಕಲ್ಯಾಣವಾಗುವುದು. ಯಾರೆಷ್ಟು ತಿಳಿಸುತ್ತಾರೆಯೋ ಅವರೇ ಹೆಚ್ಚು ಬುದ್ಧಿವಂತರು ಮತ್ತು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಕಡಿಮೆ ಸೇವೆ ಮಾಡುತ್ತಾರೆಂದರೆ ಕಡಿಮೆ ಪದವಿಯನ್ನು ಪಡೆಯುತ್ತಾರೆ. ಇಡೀ ಪ್ರಪಂಚವಂತೂ ಪತಿತವಾಗಿದೆ, ಪ್ರತಿಯೊಬ್ಬರಿಗೂ ಪತಿತರಿಂದ ಪಾವನರಾಗುವ ದಾರಿಯನ್ನು ತೋರಿಸಬೇಕಾಗಿದೆ, ಮತ್ತ್ಯಾವುದೇ ಉಪಾಯವಿಲ್ಲ. ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುವುದು. ಯಾರು ದೈವೀ ಸಂಪ್ರದಾಯದವರು ಆಗಿರುತ್ತಾರೆಯೋ ಅವರ ಮುಂದೆ ಈ ಅಕ್ಷರಗಳು ಪ್ರತಿಧ್ವನಿಸುತ್ತಿರುತ್ತದೆ. ಇದು ಸರಿಯಾದ ಮಾತಾಗಿದೆ ಎಂದು ತಿಳಿದುಕೊಳ್ಳುತ್ತಾರೆ. ಅವಶ್ಯವಾಗಿ ನಾವು ದೇವಿ-ದೇವತೆಗಳಾಗುತ್ತೇವೆ, ನಮ್ಮ ಆಹಾರ ಬಹಳ ಶುದ್ಧವಾಗಿರಬೇಕಾಗಿದೆ, ದೈವೀ ಗುಣವನ್ನೂ ಇಲ್ಲಿಯೇ ಧಾರಣೆ ಮಾಡಬೇಕು, ಸರ್ವಗುಣ ಸಂಪನ್ನರಾಗಬೇಕು, ಅದು ನೀವು ಇಲ್ಲಿಯೇ ಆಗುತ್ತಿದ್ದೀರಿ. ಈ ಲಕ್ಷ್ಮೀ-ನಾರಾಯಣರು ದೇವತೆಗಳಾಗಿದ್ದಾರೆ, ಇವರಿಗೆ ಭೋಗವನ್ನಿಡುತ್ತಾರೆಂದರೆ ಸಿಗರೇಟು, ಇತ್ಯಾದಿಗಳನ್ನೇನು ಇಡುತ್ತಾರೆಯೇ! ಸಿಗರೇಟು ಸೇದುವವರು ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ, ಇದು ಯಾವುದೇ ದೈವೀ ವಸ್ತುವಲ್ಲ. ಸಿಗರೇಟು ಕುಡಿಯುವುದು ಅಥವಾ ಬೆಳ್ಳುಳ್ಳಿ-ಈರುಳ್ಳಿಯನ್ನು ತಿನ್ನುತ್ತಾರೆ ಆದ್ದರಿಂದ ಕೆಳಗಡೆ ಬೀಳುತ್ತಾರೆ. ಇವುಗಳನ್ನು ಬಿಡುವುದರಿಂದ ಆರೋಗ್ಯ ಕೆಡುತ್ತದೆಯೆಂದು ಹೇಳುತ್ತಾರೆ, ಶಿವ ತಂದೆಯನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಈ ಅಭ್ಯಾಸವನ್ನು ಬಿಟ್ಟರೆ ನಿಮ್ಮ ಸದ್ಗತಿಯಾಗುತ್ತದೆ. ಸಿಗರೇಟಿನ ಅಭ್ಯಾಸವಂತೂ ಬಹಳ ಜನರಲ್ಲಿ ಇರುತ್ತದೆ. ದೇವತೆಗಳಿಗೆ ಯಾವಾಗಲೂ ಇಂತದ್ದನ್ನು ಭೋಗವನ್ನು ಇಡುವುದಿಲ್ಲವೆಂದು ತಿಳಿಸಲಾಗುತ್ತದೆ. ಇವರಂತೆಯೇ ಇಲ್ಲಿ ನೀವು ಆಗಬೇಕಾಗಿದೆ. ನೀವು ಈ ರೀತಿ ಕೆಟ್ಟ ಪದಾರ್ಥಗಳನ್ನು ಸೇವಿಸಿದರೆ ದುರ್ವಾಸನೆ ಬರುತ್ತದೆ. ಸಿಗರೇಟು ಅಥವಾ ಮಧ್ಯಪಾನ ಸೇವಿಸುವವರಿಂದ ದೂರದಿಂದಲೇ ವಾಸನೆ ಬರುತ್ತದೆ ಅಂದಮೇಲೆ ನೀವು ಮಕ್ಕಳು ದೈವೀ ಗುಣಗಳನ್ನು ಧಾರಣೆ ಮಾಡಬೇಕು, ವೈಷ್ಣವರಾಗಬೇಕಾಗಿದೆ. ನೀವು ವಿಷ್ಣುವಿನ ಸಂತಾನರು, ವಿಷ್ಣು ವಂಶಿಗಳು ಅರ್ಥಾತ್ ದೈವೀ ಸಂತಾನರಾಗುತ್ತೀರಿ. ಇಲ್ಲಂತೂ ನೀವು ಈಶ್ವರೀಯ ಸಂತಾನರಾಗಿದ್ದೀರಿ, ಇದು ನಿಮ್ಮ ಸರ್ವೋತ್ತಮ ಜನ್ಮವಾಗಿದೆ. ದೇವತೆಗಳಿಗಿಂತಲೂ ನೀವು ಉತ್ತಮರಾಗಿದ್ದೀರಿ, ಅನ್ಯರನ್ನೂ ಸಹ ನೀವು ಉತ್ತಮರನ್ನಾಗಿ ಮಾಡುವವರಾಗಿದ್ದೀರಿ. ಇದು ಬೇಹದ್ದಿನ ತಂದೆಯ ಮೆಷಿನರಿಯಾಗಿದೆ. ಕ್ರಿಶ್ಚಿಯನ್ನರ ಮಿಷನ್ಯಿರುತ್ತದೆಯಲ್ಲವೆ, ತಮ್ಮ ಕ್ರಿಶ್ಚಿಯನ್ ಧರ್ಮಕ್ಕೆ ಅನೇಕರನ್ನು ಪರಿವರ್ತನೆ ಮಾಡಿಕೊಳ್ಳುತ್ತಾರೆ, ಇದು ಈಶ್ವರೀಯ ಮಿಷನ್ ಆಗಿದೆ. ನೀವು ಶೂದ್ರರಿಂದ ಬ್ರಾಹ್ಮಣ ಧರ್ಮಕ್ಕೆ ಪರಿವರ್ತನೆಯಾಗಿ ನಂತರ ದೇವತಾ ಧರ್ಮಕ್ಕೆ ಹೋಗುತ್ತೀರಿ. ನಾವು ಮೊದಲು ಶೂದ್ರವಂಶಿಯರಾಗಿದ್ದೆವು ಈಗ ಬ್ರಾಹ್ಮಣರಾಗಿದ್ದೇವೆ ಎಂದು ನೀವೀಗ ತಿಳಿದಿದ್ದೀರಿ. ಬದುಕಿದ್ದರೂ ಸತ್ತಂತೆಯೇ ಇದ್ದು ನಂತರ ಹೋಗಿ ದೇವತೆಗಳಾಗುತ್ತೀರಿ. ಗರ್ಭದಿಂದ ಜನ್ಮ ಸಿಗುತ್ತದೆ.

ಇಲ್ಲಿ ನಿಮ್ಮನ್ನು ತಂದೆಯು ಧರ್ಮಾತ್ಮರನ್ನಾಗಿ ಮಾಡಲು ಧರ್ಮದ ಮಕ್ಕಳನ್ನಾಗಿ ಮಾಡಿದರು. ತಂದೆಯು ನಿಮ್ಮನ್ನು ತನ್ನವರನ್ನಾಗಿ ಮಾಡಿಕೊಂಡಿದ್ದಾರೆ, ತಂದೆ ಮಕ್ಕಳಿಗೆ ಬ್ರಾಹ್ಮಣರಿಂದ ದೇವತೆಗಳಾಗುವುದು ಕಲಿಸುತ್ತಾರೆ. ಈ ಮನುಷ್ಯರು ಎಷ್ಟೊಂದು ಶ್ರೇಷ್ಠರಾಗಿದ್ದಾರೆ, ಇವರಲ್ಲಿ ಎಲ್ಲಾ ದೈವೀ ಗುಣಗಳಿವೆ. ನೀವಾತ್ಮರು ಯಾವಾಗ ಪವಿತ್ರರಾಗುತ್ತೀರಿ ಆಗ ಶರೀರವೂ ಸಹ ಪವಿತ್ರವಾದುದೇ ಬೇಕಲ್ಲವೆ. ಹಳೆಯ ಶರೀರವು ಸಮಾಪ್ತಿಯಾಗುತ್ತದೆ ನಂತರ ನಿಮಗೆ ಹೊಸ ಶರೀರ ಸತೋಪ್ರಧಾನವಾದುದೇ ಬೇಕಲ್ಲವೆ. ಸತ್ಯಯುಗದಲ್ಲಿ ಐದೂ ತತ್ವಗಳೂ ಸತೋಪ್ರಧಾನವಾಗಿರುತ್ತವೆ, ನೀವು ಶೂದ್ರ ವರ್ಣದಲ್ಲಿದ್ದಿರಿ, ಈಗ ಪುನಃ ಬ್ರಾಹ್ಮಣ ವರ್ಣದವರಾಗಿ ನಂತರ ದೈವೀ ವರ್ಣದಲ್ಲಿ ಬರುತ್ತೀರಿ, 84 ಜನ್ಮಗಳನ್ನು ಪಡೆಯುತ್ತೀರಿ. ಬ್ರಾಹ್ಮಣ ವರ್ಣವನ್ನು ಪ್ರಾಯಃಲೋಪ ಮಾಡಿ ಬಿಟ್ಟಿದ್ದಾರೆ. ಈಗ ತಂದೆಯು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡಿ ನಂತರ ದೇವತೆಗಳನ್ನಾಗಿ ಮಾಡುತ್ತಾರೆ. ಈಗ ನೀವು ಬ್ರಾಹ್ಮಣರು ಶಿಖೆಗೆ ಸಮಾನರಾಗಿದ್ದೀರಿ. ಬಾಜೋಲಿ ಆಟವಿರುತ್ತದೆಯಲ್ಲವೆ. ಈಗ ಬ್ರಾಹ್ಮಣ, ದೇವತಾ, ಕ್ಷತ್ರಿಯ….. ನಂತರ ಬ್ರಾಹ್ಮಣರಾಗುತ್ತೀರಿ. ಇದಕ್ಕೆ ಚಕ್ರವೆಂದು ಹೇಳಲಾಗುತ್ತದೆ. ಈಗ ನೀವು ಬ್ರಾಹ್ಮಣ ವರ್ಣದಲ್ಲಿದ್ದೀರಿ, ಈ ಜ್ಞಾನವು ಈಗಲೇ ಸಿಗುತ್ತದೆ ನಂತರ ಇದರ ಪ್ರಾಲಬ್ಧವು ಸಿಗುತ್ತದೆ. ಅಲ್ಲಿ ಸದಾ ಸುಖಿಯಾಗಿರುತ್ತೀರಿ. 21 ಜನ್ಮಗಳು ನಂಬರ್ವಾರ್ ಪುರುಷಾರ್ಥದ ಅನುಸಾರವಾಗಿದೆ. ಕೆಲವರು ರಾಜ ವಂಶಕ್ಕೆ ಹೋಗುತ್ತಾರೆ, ಕೆಲವರು ಪ್ರಜೆಗಳಲ್ಲಿ ಹೋಗುತ್ತಾರೆ. ರಾಜ ಮನೆತನದಲ್ಲಿ ಬಹಳ ಸುಖವಿರುತ್ತದೆ ನಂತರ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತದೆ. ನಿಮಗೆ 84 ಜನ್ಮಗಳ ಜ್ಞಾನ ಸಿಕ್ಕಿದೆ, ಸ್ಮೃತಿ ಬಂದಿದೆ. ತಂದೆಯು ಬಂದು ಮಧುರಾತಿ ಮಧುರ ಮಕ್ಕಳೇ, ನಿಮ್ಮ 84 ಜನ್ಮಗಳು ಈಗ ಸಂಪೂರ್ಣವಾಗಿದೆ. ಕೆಲವರದು 84 ಜನ್ಮ, 80, 50 ಅಥವಾ 60 ಜನ್ಮಗಳನ್ನೂ ತೆಗೆದುಕೊಂಡಿದ್ದಾರೆ. ಎಲ್ಲರಿಗಿಂತ ಹೆಚ್ಚಾಗಿ ನೀವು ಭಾರತವಾಸಿಗಳೇ ಸುಖವನ್ನು ಭೋಗಿಸುತ್ತೀರಿ. ನಿಮ್ಮ ಹೆಸರು ಪ್ರಸಿದ್ಧವಾಗಿದೆ. ದೇವತೆಗಳಿಗಿಂತಲೂ ನೀವು ಶ್ರೇಷ್ಠರಾಗಿದ್ದೀರಿ, ನಾವೇ ಪೂಜ್ಯರಾಗುತ್ತೇವೆಂದು ನೀವು ತಿಳಿದಿದ್ದೀರಿ. ಸತ್ಯಯುಗದಲ್ಲಿ ಯಾರನ್ನೂ ನಾವು ಪೂಜಿಸುವುದಿಲ್ಲ, ನಮ್ಮನ್ನೂ ಯಾರೂ ಪೂಜಿಸುವುದಿಲ್ಲ. ಅಲ್ಲಿ ನಾವು ಪೂಜ್ಯರಾಗಿಯೇ ಇರುತ್ತೇವೆ, ನಂತರ ಕಲೆಗಳು ಕಡಿಮೆಯಾಗುತ್ತಾ ಹೋಗುತ್ತವೆ. ನಾವು ಪೂಜ್ಯರಿಂದ ಪೂಜಾರಿಗಳಾಗಿ ತಲೆ ಬಾಗುತ್ತೇವೆ, ದ್ವಾಪರದಿಂದ ಪೂಜಾರಿಗಳಾಗುವುದು ಪ್ರಾರಂಭವಾಗುತ್ತದೆ. ಅಂತ್ಯದಲ್ಲಿ ಎಲ್ಲರೂ ವ್ಯಭಿಚಾರಿಗಳಾಗುತ್ತಾರೆ. ಈ ಶರೀರವು 5 ತತ್ವಗಳಿಂದ ಮಾಡಲ್ಪಟ್ಟಿದೆ. ಶರೀರ ಪೂಜೆ ಮಾಡುವುದನ್ನು ಭೂತ ಪೂಜೆ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬರಲ್ಲಿಯೂ 5 ಭೂತಗಳಿವೆ, ದೇಹಾಭಿಮಾನದ ಭೂತ ನಂತರ ಕಾಮ-ಕ್ರೋಧದ ಭೂತವಾಗಿದೆ. ಭೂತ ಸಂಪ್ರದಾಯ ಅಥವಾ ಆಸುರೀ ಸಂಪ್ರದಾಯವೆಂದು ಹೇಳುವುದು ಒಂದೇ ಆಗಿದೆ. ತಂದೆಯು ಬಂದು ಪುನಃ ದೈವೀ ಸಂಪ್ರದಾಯವನ್ನಾಗಿ ಮಾಡುತ್ತಾರೆ. ತಂದೆಯು ಬಂದು ಭೂತಗಳಿಂದ ಬಿಡಿಸಿ ತಮ್ಮ ಜೊತೆ ಯೋಗ ಸೇರಿಸಿ ದೇವತೆಗಳನ್ನಾಗಿ ಮಾಡುತ್ತಾರೆ. ಗುರುನಾನಕರೂ ಸಹ ಪರಮಪಿತ ಪರಮಾತ್ಮನು ಮನುಷ್ಯರಿಂದ ದೇವತೆಗಳನ್ನಾಗಿ ಮಾಡಿದರು ಎಂದು ಮಹಿಮೆಯನ್ನೂ ಮಾಡಿದ್ದಾರೆ. ಅವರೇ ಪತಿತರನ್ನು ಪಾವನ ಮಾಡುವವರಾಗಿದ್ದಾರೆ. ಒಳ್ಳೆಯದು.ಮಧುರಾತಿ ಮಧುರ ಅಗಲಿಹೋಗಿ ಮರಳಿಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಬ್ರಾಹ್ಮಣರಿಂದ ದೇವತೆಗಳಾಗಬೇಕಾಗಿದೆ, ಆದ್ದರಿಂದ ಕೆಟ್ಟ-ಕೆಟ್ಟ ಅಭ್ಯಾಸಗಳನ್ನು ಬಿಡಬೇಕಾಗಿದೆ. ಶೂದ್ರರನ್ನು ಬ್ರಾಹ್ಮಣ ಧರ್ಮದಲ್ಲಿ ಪರಿವರ್ತನೆ ಮಾಡಿ ದೇವತೆಗಳನ್ನಾಗಿ ಮಾಡುವಂತಹ ಈಶ್ವರೀಯ ಮಿಷನ್ ಕಾರ್ಯದಲ್ಲಿ ಸಹಯೋಗಿಗಳಾಗಬೇಕಾಗಿದೆ. ಮಧ್ಯಪಾನ, ಸಿಗರೇಟು ಅಥವಾ ಯಾವುದೇ ಕೆಟ್ಟ ಹವ್ಯಾಸಗಳಿದ್ದರೆ ಅದನ್ನು ತೆಗೆಯಬೇಕಾಗಿದೆ.

2. ಈ ವಿನಾಶ ಕಾಲದ ಸಮಯದಲ್ಲಿ ಒಬ್ಬ ತಂದೆಯೊಂದಿಗೆ ಸತ್ಯ ಪ್ರೀತಿಯನ್ನು ಇಡಬೇಕಾಗಿದೆ. ಹಳೆಯ ಮನೆ ಮುರಿದು ಹೋಗಲಿದೆ. ಆದ್ದರಿಂದ ಇದರಿಂದೊಗಿನ ಮನಸ್ಸನ್ನು ತೆಗೆದು ಹೊಸದರೊಂದಿಗೆ ಇಡಬೇಕು.

ವರದಾನ:-

ಪ್ರವೃತ್ತಿಯಲ್ಲಿ ಮೊದಲು ವೃತ್ತಿಯಿಂದ ಪವಿತ್ರ ಅಥವಾ ಅಪವಿತ್ರರಾಗುತ್ತೀರಿ. ವೃತ್ತಿಯನ್ನು ಒಂದುವೇಳೆ ಸದಾ ಒಬ್ಬ ತಂದೆಯ ಜೊತೆ ಜೋಡಣೆ ಮಾಡಿ ಬಿಡುತ್ತೀರಿ, ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ ಎಂಬ ಶ್ರೇಷ್ಠ ವೃತ್ತಿಯಲ್ಲಿ ಇರುತ್ತೀರೆಂದರೆ, ಪ್ರಗತಿಯ ಪಥವಾಗಿ ಬಿಡುತ್ತದೆ. ವೃತ್ತಿಯು ಶ್ರೇಷ್ಠವಾಗಿದೆ ಎಂದರೆ ಚಂಚಲರಾಗಲು ಸಾಧ್ಯವಿಲ್ಲ. ಇಂತಹ ಶ್ರೇಷ್ಠ ವೃತ್ತಿಯ ಮೂಲಕ ಪ್ರಗತಿ ಹೊಂದುತ್ತಾ, ಸಹಜವಾಗಿಯೇ ಗತಿ-ಸದ್ಗತಿಯನ್ನು ಪಡೆದುಕೊಳ್ಳಬಲ್ಲಿರಿ. ಆನಂತರ ಸರ್ವ ದೂರುಗಳು ಪೂರ್ಣವಾಗಿ ಬಿಡುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top