23 May 2021 KANNADA Murli Today – Brahma Kumaris

May 22, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಹೃದಯದ ಜ್ಞಾನಿ ಹಾಗೂ ಸ್ನೇಹಿಗಳಾಗಿ ಮತ್ತು ಸೋರುವಿಕೆಯನ್ನು (ಲೀಕೇಜನ್ನು) ನಿಲ್ಲಿಸಿ.

♫ ಕೇಳು ಇಂದಿನ ಮುರ್ಲಿ (audio)➤

ಇಂದು ಸ್ನೇಹ ಸಾಗರ ಬಾಪ್ದಾದಾ ತನ್ನ ಸ್ನೇಹಿ ಮಕ್ಕಳೊಂದಿಗೆ ಮಿಲನ ಮಾಡಲು ಬಂದಿದ್ದಾರೆ. ಈ ಆತ್ಮಿಕ ಸ್ನೇಹ ಪರಮಾತ್ಮ ಸ್ನೇಹವು ನಿಸ್ವಾರ್ಥ, ಸತ್ಯ ಸ್ನೇಹವಾಗಿದೆ. ಸತ್ಯ ಹೃದಯದ ಸ್ನೇಹವು ತಾವು ಸರ್ವ ಆತ್ಮಗಳನ್ನು ಇಡೀ ಕಲ್ಪ ಸ್ನೇಹಿಗಳನ್ನಾಗಿ ಮಾಡಿ ಬಿಡುತ್ತದೆ, ಏಕೆಂದರೆ ಪರಮಾತ್ಮ ಸ್ನೇಹ, ಆತ್ಮಿಕ ಸ್ನೇಹ, ಅವಿನಾಶಿ ಸ್ನೇಹವಾಗಿದೆ. ಈ ಆತ್ಮಿಕ ಸ್ನೇಹವು ಬ್ರಾಹ್ಮಣ ಜೀವನದ ತಳಹದಿಯಾಗಿದೆ. ಆತ್ಮಿಕ ಸ್ನೇಹದ ಅನುಭವವಿಲ್ಲವೆಂದರೆ ಬ್ರಾಹ್ಮಣ ಜೀವನದ ಸತ್ಯ ಆನಂದವಿಲ್ಲ. ಪರಮಾತ್ಮ ಸ್ನೇಹವು ಎಂತಹದ್ದೇ ಪತಿತ ಆತ್ಮನನ್ನು ಪರಿವರ್ತನೆ ಮಾಡುವ ಅಯಸ್ಕಾಂತವಾಗಿದೆ, ಪರಿವರ್ತನೆಯಾಗುವ ಸಹಜ ಸಾಧನವಾಗಿದೆ. ಸ್ನೇಹವು ಅಧಿಕಾರಿಗಳನ್ನಾಗಿ ಮಾಡುವ, ಆತ್ಮಿಕ ನಶೆಯ ಅನುಭವ ಮಾಡಿಸಲು ಆಧಾರವಾಗಿದೆ. ಸ್ನೇಹವಿದ್ದರೆ ಬ್ರಾಹ್ಮಣ ಜೀವನವು ರಮಣೀಕವಾಗಿರುತ್ತದೆ. ಸ್ನೇಹವಿಲ್ಲವೆಂದರೆ ಬ್ರಾಹ್ಮಣ ಜೀವನವು ನೀರಸವೆನಿಸುತ್ತದೆ. ಪರಮಾತ್ಮ ಸ್ನೇಹವು ಹೃದಯದ ಸ್ನೇಹವಾಗಿದೆ. ಲೌಕಿಕ ಸ್ನೇಹವು ಹೃದಯವನ್ನು ತುಂಡು-ತುಂಡನ್ನಾಗಿ ಮಾಡಿ ಬಿಡುತ್ತದೆ ಏಕೆಂದರೆ ಹಂಚಲ್ಪಡುತ್ತದೆ. ಅನೇಕರೊಂದಿಗೆ ಸ್ನೇಹವನ್ನು ನಿಭಾಯಿಸಬೇಕಾಗುತ್ತದೆ. ಅಲೌಕಿಕ ಸ್ನೇಹವು ಹೃದಯದ ಅನೇಕ ಭಾಗಗಳನ್ನು ಜೋಡಿಸುವಂತದ್ದಾಗಿದೆ. ಒಬ್ಬ ತಂದೆಯೊಂದಿಗೆ ಸ್ನೇಹ ಮಾಡಿದರೆ ಸರ್ವರ ಸಹಯೋಗಿಗಳು ಸ್ವತಹ ಆಗಿಬಿಡುತ್ತಾರೆ ಏಕೆಂದರೆ ತಂದೆಯು ಬೀಜವಾಗಿದ್ದಾರೆ. ಬೀಜಕ್ಕೆ ನೀರು ಕೊಟ್ಟರೆ ಪ್ರತಿಯೊಂದು ಎಲೆಗೆ ಸ್ವತಹ ಸಿಗುತ್ತದೆ. ಪ್ರತಿಯೊಂದು ಎಲೆಗೂ ನೀರು ಹಾಕುವ ಅವಶ್ಯಕತೆಯಿರುವುದಿಲ್ಲ ಹಾಗೆಯೇ ಆತ್ಮಿಕ ತಂದೆಗೆ ಸ್ನೇಹವನ್ನು ಇಡುವುದೆಂದರೆ ಸರ್ವರ ಸ್ನೇಹಿಗಳಾಗುವುದು ಆದ್ದರಿಂದ ಹೃದಯವು ಹಂಚಿ ಹೋಗುವುದಿಲ್ಲ. ಸ್ನೇಹವು ಪ್ರತೀ ಕಾರ್ಯವನ್ನು ಸಹಜವನ್ನಾಗಿ ಮಾಡುತ್ತದೆ ಅರ್ಥಾತ್ ಪರಿಶ್ರಮದಿಂದ ಬಿಡಿಸುತ್ತದೆ. ಎಲ್ಲಿ ಸ್ನೇಹವಿರುವುದೋ ಅಲ್ಲಿ ನೆನಪು ಸ್ವತಹ, ಸಹಜವಾಗಿ ಬರುತ್ತದೆ. ಸ್ನೇಹಿಗಳನ್ನು ಮರೆಯುವುದು ಕಷ್ಟವಾಗುತ್ತದೆ, ನೆನಪು ಮಾಡುವುದು ಕಷ್ಟವಾಗುವುದಿಲ್ಲ. ಬುದ್ಧಿಯಲ್ಲಿ ಭಲೆ ಎಷ್ಟಾದರೂ ಜ್ಞಾನವಿರಬಹುದು ಆದರೆ ಯಥಾರ್ಥ ಜ್ಞಾನ ಅರ್ಥಾತ್ ಸ್ನೇಹ ಸಂಪನ್ನ ಜ್ಞಾನವಿರಬೇಕು. ಒಂದುವೇಳೆ ಜ್ಞಾನವಿದ್ದು ಸ್ನೇಹವಿಲ್ಲವೆಂದರೆ ಅದು ಒಣಗಿದ ಜ್ಞಾನವಾಗಿದೆ. ಸ್ನೇಹವು ಹೃದಯದಿಂದ ಸರ್ವ ಸಂಬಂಧಗಳ ಅನುಭವ ಮಾಡಿಸುತ್ತದೆ. ಕೇವಲ ಯಾರು ಜ್ಞಾನಿಗಳಿದ್ದಾರೆಯೋ ಅವರು ಬುದ್ಧಿಯಿಂದ ನೆನಪು ಮಾಡುತ್ತಾರೆ ಮತ್ತು ಸ್ನೇಹಿಗಳು ಹೃದಯದಿಂದ ನೆನಪು ಮಾಡುತ್ತಾರೆ. ಬುದ್ಧಿಯಿಂದ ನೆನಪು ಮಾಡುವವರಿಗೆ ನೆನಪಿನಲ್ಲಿ, ಸೇವೆಯಲ್ಲಿ, ಧಾರಣೆಯಲ್ಲಿ ಪರಿಶ್ರಮ ಪಡಬೇಕಾಗುತ್ತದೆ. ಅವರು ಪರಿಶ್ರಮದ ಫಲವನ್ನು ತಿನ್ನುತ್ತಾರೆ ಮತ್ತು ಹೃದಯದಿಂದ ನೆನಪು ಮಾಡುವವರು ಪ್ರೀತಿಯ ಫಲವನ್ನು ತಿನ್ನುತ್ತಾರೆ. ಎಲ್ಲಿ ಸ್ನೇಹವಿಲ್ಲವೋ ಮತ್ತು ಬುದ್ಧಿಯ ಜ್ಞಾನವಿದೆಯೆಂದರೆ ಅವರಿಗೆ ಜ್ಞಾನದ ಮಾತುಗಳಲ್ಲಿಯೂ ಏಕೆ, ಏನು, ಹೇಗೆ… ಎಂದು ಬುದ್ಧಿಯಲ್ಲಿ ಯುದ್ಧ ನಡೆಯುತ್ತಿರುತ್ತದೆ ಮತ್ತು ತನ್ನೊಂದಿಗೆ ತಾನು ಯುದ್ಧ ಮಾಡುತ್ತಿರುತ್ತಾರೆ. ಹೆಚ್ಚು ವ್ಯರ್ಥ ಸಂಕಲ್ಪಗಳು ನಡೆಯುತ್ತವೆ, ಎಲ್ಲಿ ಏಕೆ, ಏಕೆ (ಕ್ಯು, ಕ್ಯು)… ಎಂಬುದಿರುತ್ತದೆಯೋ ಅಲ್ಲಿ ಕ್ಯು (ಏಕೆ) ಎಂಬ ಕ್ಯೂ ಇರುತ್ತದೆ ಮತ್ತು ಎಲ್ಲಿ ಸ್ನೇಹವಿರುವುದೋ ಅಲ್ಲಿ ಯುದ್ಧವಿರುವುದಿಲ್ಲ, ಲವಲೀನರಾಗಿರುತ್ತಾರೆ, ಸಮಾವೇಶವಾಗಿರುತ್ತಾರೆ. ಯಾರೊಂದಿಗೆ ಹೃದಯದ ಸ್ನೇಹವಿರುತ್ತದೆಯೋ ಅಲ್ಲಿ ಸ್ನೇಹದ ಮಾತುಗಳಲ್ಲಿ ಏಕೆ, ಏನು ಎಂಬುದು ಬರುವುದಿಲ್ಲ. ಹೇಗೆ ಪತಂಗವು ದೀಪದ ಸ್ನೇಹದಲ್ಲಿ ಏಕೆ, ಏನು ಎನ್ನುವುದಿಲ್ಲ, ಬಲಿಹಾರಿಯಾಗಿ ಬಿಡುತ್ತದೆ. ಹಾಗೆಯೇ ಪರಮಾತ್ಮ ಸ್ನೇಹೀ ಆತ್ಮಗಳು ಸ್ನೇಹದಲ್ಲಿ ಸಮಾವೇಶವಾಗಿರುತ್ತಾರೆ.

ಕೆಲವು ಮಕ್ಕಳು ತಂದೆಯೊಂದಿಗೆ ವಾರ್ತಾಲಾಪ ಮಾಡುತ್ತಾ ಈ ದೂರು ಕೊಡುತ್ತಾರೆ – “ಜ್ಞಾನವೂ ಬುದ್ಧಿಯಲ್ಲಿದೆ, ಬ್ರಾಹ್ಮಣರೂ ಆದೆವು, ಆತ್ಮವನ್ನೂ ಅರಿತೆವು, ತಂದೆಯನ್ನು ಪೂರ್ಣ ಪರಿಚಯದಿಂದ ಅರಿತುಕೊಂಡೆವು, ಸಂಬಂಧಗಳ ಬಗ್ಗೆಯೂ ತಿಳಿಯಿತು, ಚಕ್ರದ ಜ್ಞಾನವೂ ಇದೆ, ರಚಯಿತ ಮತ್ತು ರಚನೆಯ ಸಂಪೂರ್ಣ ಜ್ಞಾನವಿದೆ ಆದರೂ ಸಹ ನೆನಪು ಏಕೆ ಸಹಜವಾಗುವುದಿಲ್ಲ? ಆನಂದ, ಶಕ್ತಿಯ, ಶಾಂತಿಯ ಅನುಭವ ಸದಾ ಏಕಾಗುವುದಿಲ್ಲ? ಪರಿಶ್ರಮದಿಂದೇಕೆ ನೆನಪು ಮಾಡಬೇಕಾಗುತ್ತದೆ, ನಿರಂತರ ಏಕೆ ನೆನಪಿರುವುದಿಲ್ಲ? ಪದೇ-ಪದೇ ನೆನಪು ಏಕೆ ಮರೆತು ಹೋಗುತ್ತದೆ?” ಎಂದು ದೂರು ಕೊಡುತ್ತಾರೆ. ಇದಕ್ಕೆ ಕಾರಣವೇನೆಂದರೆ ಜ್ಞಾನವು ಬುದ್ಧಿಯವರೆಗೆ ಇದೆ. ಜ್ಞಾನದ ಜೊತೆ ಜೊತೆಗೆ ಹೃದಯದ ಸ್ನೇಹವು ಕಡಿಮೆಯಿದೆ. ಕೇವಲ ಬುದ್ಧಿಯ ಸ್ನೇಹವಿದೆ. ನಾನು ಮಗುವಾಗಿದ್ದೇನೆ, ಅವರು ತಂದೆಯಾಗಿದ್ದಾರೆ, ದಾತನಾಗಿದ್ದಾರೆ, ವಿದಾತನಾಗಿದ್ದಾರೆ… ಇದು ಕೇವಲ ಬುದ್ಧಿಯ ಜ್ಞಾನವಾಗಿದೆ. ಆದರೆ ಇದೇ ಜ್ಞಾನವು ಹೃದಯದಲ್ಲಿ ಸಮಾವೇಶವಾದಾಗ ಆ ಸ್ನೇಹದ ಚಿಹ್ನೆಯಾಗಿ ಏನನ್ನು ತೋರಿಸುತ್ತಾರೆ? ಹೃದಯ. ಅಂದಾಗ ಜ್ಞಾನ ಮತ್ತು ಸ್ನೇಹವು ಕಂಬೈಂಡ್ ಆಗಿ ಬಿಡುತ್ತದೆ. ಜ್ಞಾನವು ಬೀಜವಾಗಿದೆ, ಸ್ನೇಹವು ಜಲವಾಗಿದೆ. ಒಂದುವೇಳೆ ಬೀಜಕ್ಕೆ ನೀರು ಸಿಗಲಿಲ್ಲವೆಂದರೆ ಅದು ಫಲ ಕೊಡುವುದಿಲ್ಲ, ಹಾಗೆಯೇ ಜ್ಞಾನವಿದೆ ಆದರೆ ಹೃದಯದ ಸ್ನೇಹವಿಲ್ಲವೆಂದರೆ ಪ್ರಾಪ್ತಿಯ ಫಲ ಸಿಗುವುದಿಲ್ಲ ಆದ್ದರಿಂದ ಪರಿಶ್ರಮವೆನಿಸುತ್ತದೆ. ಸ್ನೇಹ ಅರ್ಥಾತ್ ಸರ್ವ ಪ್ರಾಪ್ತಿಯ, ಸರ್ವ ಅನುಭವದ ಸಾಗರದಲ್ಲಿ ಸಮಾವೇಶವಾಗಿರುವುದು. ಹೇಗೆ ಲೌಕಿಕ ಪ್ರಪಂಚದಲ್ಲಿಯೂ ನೋಡಿ, ಅತಿ ಚಿಕ್ಕ ಉಡುಗೊರೆಯೂ ಸಹ ಎಷ್ಟೊಂದು ಪ್ರಾಪ್ತಿಯ ಅನುಭವ ಮಾಡಿಸುತ್ತದೆ! ಮತ್ತು ಸ್ವಾರ್ಥದ ಸಂಬಂಧದಿಂದ ಲೇವಾದೇವಿ ಮಾಡಿ ಕೋಟಿಗಳಷ್ಟು ಕೊಡಬಹುದು, ಕೋಟಿಗಳಷ್ಟು ಸಿಕ್ಕಿದರೂ ಸಹ ಸಂತುಷ್ಟತೆಯಿರುವುದಿಲ್ಲ. ಯಾವುದಾದರೊಂದು ಇದು ಬೇಕು, ಅದು ಮಾಡಬೇಕೆಂದು ಕೊರತೆಗಳನ್ನು ತೆಗೆಯುತ್ತಲೇ ಇರುತ್ತಾರೆ. ಇತ್ತೀಚೆಗೆ ಎಷ್ಟೊಂದು ಖರ್ಚು ಮಾಡುತ್ತಾರೆ, ಎಷ್ಟೊಂದು ಶೋ ಮಾಡುತ್ತಾರೆ ಆದರೂ ಸಹ ಆ ಸ್ನೇಹವು ಸಮೀಪ ಬರುತ್ತದೆಯೇ ಅಥವಾ ದೂರ ಮಾಡುತ್ತದೆಯೇ? ಕೋಟಿಗಳ ಲೇವಾದೇವಿಯು ಅಷ್ಟು ಸುಖದ ಅನುಭವ ಮಾಡಿಸುವುದಿಲ್ಲ. ಆದರೆ ಹೃದಯದ ಸ್ನೇಹದ ಒಂದು ಚಿಕ್ಕ ವಸ್ತುವೂ ಸಹ ಎಷ್ಟೊಂದು ಸುಖದ ಅನುಭವ ಮಾಡಿಸುತ್ತದೆ ಏಕೆಂದರೆ ಹೃದಯದ ಸ್ನೇಹವು ಲೆಕ್ಕಾಚಾರಗಳನ್ನೂ ಸಹ ಸಮಾಪ್ತಿ ಮಾಡುತ್ತದೆ. ಸ್ನೇಹವು ಇಂತಹ ವಿಶೇಷ ಅನುಭೂತಿಯಾಗಿದೆ ಅಂದಾಗ ತಮ್ಮೊಂದಿಗೆ ತಾವು ಕೇಳಿಕೊಳ್ಳಿ – ಜ್ಞಾನದ ಜೊತೆ ಜೊತೆಗೆ ಹೃದಯದ ಸ್ನೇಹವಿದೆಯೇ? ಹೃದಯದಲ್ಲಿ ಲೀಕೇಜಂತೂ ಇಲ್ಲವೇ? ಎಲ್ಲಿ ಲೀಕೇಜ್ ಇರುವುದೋ ಅಲ್ಲಿ ಏನಾಗುತ್ತದೆ? ಒಂದುವೇಳೆ ಒಬ್ಬ ತಂದೆಯ ವಿನಃ ಮತ್ತ್ಯಾರೊಂದಿಗಾದರೂ ಸಂಕಲ್ಪ ಮಾತ್ರದಲ್ಲಿ ಸ್ನೇಹವಿದ್ದರೂ ಸಹ ಭಲೆ ವ್ಯಕ್ತಿಯೊಂದಿಗೆ, ವೈಭವದೊಂದಿಗೆ ವ್ಯಕ್ತಿಯಲ್ಲಿಯೂ ಶರೀರದೊಂದಿಗೆ ಸ್ನೇಹವಿರಬಹುದು ಆದರೆ ಅವರ ವಿಶೇಷತೆಯೊಂದಿಗಿರಬಹುದು, ಹದ್ದಿನ ಪ್ರಾಪ್ತಿಯ ಆಧಾರದೊಂದಿಗಿರಬಹುದು ಆದರೆ ಆ ವಿಶೇಷತೆಯನ್ನು ಕೊಡುವವರು ಯಾರು, ಪ್ರಾಪ್ತಿ ಮಾಡಿಸುವವರು ಯಾರು?

ಯಾವುದೇ ಪ್ರಕಾರದಿಂದ ಸ್ನೇಹ ಅರ್ಥಾತ್ ಸೆಳೆತ ಸಂಕಲ್ಪ ಮಾತ್ರದಲ್ಲಿರಬಹುದು, ವಾಣಿಯಲ್ಲಿ ಇರಬಹುದು, ಕರ್ಮದಲ್ಲಿ ಇರಬಹುದು ಇದಕ್ಕೆ ಲೀಕೇಜ್ ಎಂದೇ ಹೇಳಲಾಗುವುದು. ಕೆಲವು ಮಕ್ಕಳು ಬಹಳ ಭೋಲಾತನದಲ್ಲಿ ಹೇಳುತ್ತಾರೆ – ಸೆಳೆತವಂತೂ ಇಲ್ಲ, ಆದರೆ ಇಷ್ಟವಾಗುತ್ತದೆ. ಬಯಸುವುದಿಲ್ಲ, ಆದರೆ ನೆನಪು ಬಂದು ಬಿಡುತ್ತದೆ. ಅಂದಾಗ ಸೆಳೆತದ ಚಿಹ್ನೆಯೇನೆಂದರೆ ಸಂಕಲ್ಪ, ಮಾತು ಮತ್ತು ಕರ್ಮದೊಂದಿಗೆ ಬಾಗುವಿಕೆ ಇದೆ. ಆದ್ದರಿಂದ ಲೀಕೇಜ್ ಇರುವ ಕಾರಣ ಶಕ್ತಿಯು ಹೆಚ್ಚುವುದಿಲ್ಲ ಮತ್ತು ಶಕ್ತಿಶಾಲಿಗಳಾಗದ ಕಾರಣ ತಂದೆಯನ್ನು ನೆನಪು ಮಾಡುವುದರಲ್ಲಿ ಪರಿಶ್ರಮವಾಗುತ್ತದೆ. ಪರಿಶ್ರಮವಾಗುವ ಕಾರಣ ಸಂತುಷ್ಟತೆ ಇರುವುದಿಲ್ಲ. ಮತ್ತು ಎಲ್ಲಿ ಸಂತುಷ್ಟತೆ ಇರುವುದಿಲ್ಲವೋ ಅಲ್ಲಿ ಈಗೀಗ ನೆನಪಿನ ಅನುಭೂತಿಯಿಂದ ಮಸ್ತಿಯಲ್ಲಿ ಮಸ್ತರಾಗಿರುತ್ತಾರೆ ಮತ್ತು ಈಗೀಗ ಹೃದಯ ವಿಧೀರ್ಣರು ಆಗುತ್ತಾರೆ ಏಕೆಂದರೆ ಲೀಕೇಜ್ ಇರುವ ಕಾರಣ ಶಕ್ತಿಯು ಸ್ವಲ್ಪ ಸಮಯ ತುಂಬುತ್ತದೆ, ಸದಾ ಇರುವುದಿಲ್ಲ. ಆದ್ದರಿಂದ ಸಹಜ, ನಿರಂತರ ಯೋಗಿಗಳಾಗಲು ಸಾಧ್ಯವಿಲ್ಲ. ಅಂದಾಗ ಪರಿಶೀಲನೆ ಮಾಡಿಕೊಳ್ಳಿ – ಯಾವುದೇ ವ್ಯಕ್ತಿ ಹಾಗೂ ವೈಭವದಲ್ಲಿ ಸೆಳೆತವಂತೂ ಇಲ್ಲವೆ? ಅರ್ಥಾತ್ ಲೀಕೇಜಂತೂ ಇಲ್ಲವೇ? ಈ ಲೀಕೇಜ್ ಲವಲೀನ ಸ್ಥಿತಿಯ ಅನುಭವ ಮಾಡಿಸುವುದಿಲ್ಲ, ವೈಭವದ ಪ್ರಯೋಗ ಭಲೆ ಮಾಡಿ ಆದರೆ ಯೋಗಿಯಾಗಿ ಪ್ರಯೋಗ ಮಾಡಿ. ಯಾವುದನ್ನು ತಾವು ಆರಾಮಿನ ಸಾಧನವೆಂದು ತಿಳಿಯುತ್ತೀರೋ ಅದು ಮನಸ್ಸಿನ ಸ್ಥಿತಿಯನ್ನು ಏರುಪೇರು ಮಾಡುವಂತಾಗಬಾರದು ಏಕೆಂದರೆ ಕೆಲವು ಮಕ್ಕಳು ವೈಭವಗಳಿಗೆ ವಶರಾಗುತ್ತಿದ್ದರೂ ಮನಸ್ಸಿನ ಸೆಳೆತವನ್ನು ತಿಳಿದುಕೊಳ್ಳುವುದಿಲ್ಲ. ರಾಯಲ್ ಭಾಷೆಯಲ್ಲಿ ಇದನ್ನೇ ಹೇಳುತ್ತಾರೆ – ಹಠಯೋಗಿಗಳಲ್ಲ, ಸಹಜ ಯೋಗಿಗಳಾಗಿದ್ದೇವೆ. ಭಲೆ ಸಹಜಯೋಗಿಗಳಾಗುವುದು ಒಳ್ಳೆಯದು ಅಂದಾಗ ಯೋಗಿಯಾಗಿದ್ದೀರಾ? ಯಾವುದು ತಂದೆಯ ನೆನಪನ್ನು ಏರುಪೇರಿನಲ್ಲಿ ತರುವುದೋ ಅರ್ಥಾತ್ ತನ್ನ ಕಡೆ ಆಕರ್ಷಣೆ ಮಾಡುವುದು, ಬಾಗುವಂತೆ ಮಾಡಿದರೆ ಯೋಗಿಯಾಗಿ ಪ್ರಯೋಗ ಮಾಡುವವರೆಂದು ಹೇಳುವುದಿಲ್ಲ. ಏಕೆಂದರೆ ತಂದೆಯವರಾದ ಕಾರಣ ಸಮಯ ಪ್ರತಿ ಸಮಯ ಪ್ರಕೃತಿ ದಾಸಿ ಅರ್ಥಾತ್ ವೈಭವಗಳ ಸಾಧನಗಳ ಪ್ರಾಪ್ತಿಯು ಹೆಚ್ಚುತ್ತಾ ಹೋಗುತ್ತಿದೆ. ಈ 18-19 ವರ್ಷಗಳಲ್ಲಿ ಎಷ್ಟೊಂದು ಪ್ರಾಪ್ತಿಯಾಗುತ್ತಿದೆ, ಎಲ್ಲಾ ಆರಾಮಿನ ಸಾಧನಗಳು ಹೆಚ್ಚುತ್ತಾ ಹೋಗುತ್ತಿವೆ ಆದರೆ ತಂದೆಯ ಮಕ್ಕಳಾಗಿರುವ ಫಲವಾಗಿ ಈ ಪ್ರಾಪ್ತಿಗಳಾಗುತ್ತಿವೆ. ಅಂದಾಗ ಫಲವನ್ನು ತಿನ್ನುತ್ತಾ ಬೀಜವನ್ನು ಮರೆತು ಹೋಗಬೇಡಿ. ಈ ಸಾಧನಗಳು ಸ್ವಲ್ಪ ಸಮಯದವರೆಗೆ ಹೆಚ್ಚುತ್ತಾ ಹೋಗುತ್ತವೆ ಆದರೆ ಆರಾಮಿನಲ್ಲಿ ಬರುತ್ತಾ ರಾಮನನ್ನು ಮರೆತು ಹೋಗಬೇಡಿ, ಸತ್ಯ ಸೀತೆಯಾಗಿ ಇರಿ. ಮರ್ಯಾದೆಯ ಗೆರೆಯಿಂದ ಸಂಕಲ್ಪರೂಪಿ ಬೆರಳನ್ನೂ ಸಹ ಹೊರ ತೆಗೆಯಬೇಡಿ ಏಕೆಂದರೆ ಸಾಧನೆಯಿಲ್ಲದೇ ಈ ಸಾಧನಗಳನ್ನು ಉಪಯೋಗಿಸುತ್ತೀರೆಂದರೆ ಇವು ಚಿನ್ನದ ಜಿಂಕೆಯ ಕೆಲಸ ಮಾಡುವವು. ಆದ್ದರಿಂದ ವ್ಯಕ್ತಿ ಮತ್ತು ವೈಭವದ ಸೆಳೆತ ಮತ್ತು ಬಾಗುವಿಕೆಯಿಂದ ಸದಾ ತನ್ನನ್ನು ಸುರಕ್ಷಿತವಾಗಿಟ್ಟುಕೊಳ್ಳಿ ಇಲ್ಲವಾದರೆ ತಂದೆಯ ಸ್ನೇಹಿಗಳಾಗುವ ಬದಲು, ಸಹಜಯೋಗಿಗಳಾಗುವ ಬದಲು ಕೆಲವೊಮ್ಮೆ ಸಹಯೋಗಿ, ಕೆಲವೊಮ್ಮೆ ಸಹಜಯೋಗಿ ಇನ್ನೂ ಕೆಲವೊಮ್ಮೆ ವಿಯೋಗಿ, ಎರಡು ಅನುಭವಗಳನ್ನು ಮಾಡುತ್ತಾ ಇರುತ್ತೀರಿ. ಕೆಲವೊಮ್ಮೆ ನೆನಪು, ಕೆಲವೊಮ್ಮೆ ದೂರುವುದು, ಈ ರೀತಿಯ ಅನುಭೂತಿಯಲ್ಲಿರುತ್ತೀರಿ ಮತ್ತು ನಿಮ್ಮ ದೂರುಗಳೆಂದೂ ಈಡೇರುವುದಿಲ್ಲ.

ವ್ಯಕ್ತಿ ಮತ್ತು ವೈಭವಕ್ಕೆ ಬಾಗುವುದರ ಗುರುತೇನೆಂದರೆ ಒಂದನೆಯದಾಗಿ ತಿಳಿಸಿದೆವು – ಕೆಲವೊಮ್ಮೆ ಸಹಯೋಗಿ, ಕೆಲವೊಮ್ಮೆ ಯೋಗಿ, ಇನ್ನೂ ಕೆಲವೊಮ್ಮೆ ದೂರುವವರಾಗುವರು. ಎರಡನೆಯ ಮಾತೇನೆಂದರೆ – ಇಂತಹ ಆತ್ಮನಿಗೆ ಸಾಧನಗಳಿರಬಹುದು, ಸಹಯೋಗ-ಸ್ನೇಹವಿರಬಹುದು, ಎಲ್ಲವೂ ಪ್ರಾಪ್ತಿಯಾಗಬಹುದು ಆದರೆ ಲೀಕೇಜ್ ಇರುವ ಆತ್ಮನು ಪ್ರಾಪ್ತಿಗಳಿದ್ದರೂ ಸಹ ಎಂದೂ ಸಂತುಷ್ಟನಾಗಿರುವುದಿಲ್ಲ. ಅವರ ಬಾಯಿಂದ ಸದಾ ಯಾವುದಾದರೊಂದು ಪ್ರಕಾರದ ಅಸಂತುಷ್ಟತೆಯ ಮಾತುಗಳು ಬಯಸದಿದ್ದರೂ ಹೊರ ಬರುತ್ತಿರುತ್ತವೆ. ಇವರಿಗೆ ಬಹಳ ಸಿಗುತ್ತದೆ, ಇವರ ತರಹ ಯಾರಿಗೂ ಸಿಗುವುದಿಲ್ಲವೆಂದು ಬೇರೆಯವರು ಮಾಡುತ್ತಾರೆ ಆದರೆ ಆ ಆತ್ಮಗಳು ಮಾತ್ರ ಸದಾ ತನ್ನ ಅಪ್ರಾಪ್ತಿಯ ದುಃಖದ ವರ್ಣನೆಯನ್ನೇ ಮಾಡುತ್ತಿರುತ್ತಾರೆ. ಇವರಂತಹ ಸುಖಿಯು ಯಾರೂ ಇಲ್ಲವೆಂದು ಬೇರೆಯವರು ಹೇಳುತ್ತಾರೆ ಮತ್ತು ನನ್ನಂತಹ ದುಃಖಿಯು ಯಾರೂ ಇಲ್ಲವೆಂದು ಅವರೂ ಹೇಳುತ್ತಿರುತ್ತಾರೆ ಏಕೆಂದರೆ ಅಂತಹವರು ಬಲೂನಿನ ಹಾಗೆ. ಹೇಗೆ ಬಲೂನ್ ಗಾಳಿಯಿದ್ದಾಗ ದೊಡ್ಡದಾಗುತ್ತದೆ ಮತ್ತು ಮೇಲೆ ಹಾರುತ್ತದೆ. ಯಾವಾಗ ಗಾಳಿಯು ಮುಗಿಯುವುದೋ ಆಗ ಎಲ್ಲಿಯೋ ಬೀಳುತ್ತದೆ! ಹಾರುವುದನ್ನು ನೋಡುವುದಕ್ಕೆ ಎಷ್ಟು ಸುಂದರವೆನಿಸುತ್ತದೆ ಆದರೆ ಅದು ಅಲ್ಪಕಾಲದ್ದಾಗಿರುತ್ತದೆ. ಹಾಗೆಯೇ ಲೀಕೇಜ್ ಇರುವ ಆತ್ಮಗಳು ಎಂದೂ ತನ್ನ ಭಾಗ್ಯದಿಂದ ಸಂತುಷ್ಟರಾಗಿರುವುದಿಲ್ಲ. ಸದಾ ಇವರು ಹೀಗೆ ಮಾಡುತ್ತಾರೆ, ಇದು ಹೀಗಾಗುತ್ತದೆ ಆದ್ದರಿಂದ ನನ್ನ ಭಾಗ್ಯವಿಲ್ಲ ಎಂದು ಯಾರಾದರೊಬ್ಬರನ್ನು ತನ್ನ ಭಾಗ್ಯದ, ಅಪ್ರಾಪ್ತಿಯ ನಿಮಿತ್ತರನ್ನಾಗಿ ಮಾಡಿಕೊಳ್ಳುತ್ತಾ ಇರುತ್ತಾರೆ. ಭಾಗ್ಯವಿದಾತನು ಭಾಗ್ಯ ಮಾಡಿಸುವವರಾಗಿದ್ದಾರೆ. ಎಲ್ಲಿ ಭಾಗ್ಯವಿದಾತನು ಭಾಗ್ಯವನ್ನು ರೂಪಿಸುತ್ತಿದ್ದಾರೆಯೋ ಆ ಪರಮಾತ್ಮನ ಶಕ್ತಿಯ ಮುಂದೆ ಆತ್ಮನ ಶಕ್ತಿಯು ಭಾಗ್ಯವನ್ನು ಅಲುಗಾಡಿಸಲು ಸಾಧ್ಯವಿಲ್ಲ. ಇವೆಲ್ಲವೂ ನೆಪಗಳಾಗಿವೆ. ಹಾರುವ ಕಲೆಯ ಆಟವು ಬರಲಿಲ್ಲವೆಂದರೆ ಬಹಳಷ್ಟು ನೆಪಗಳನ್ನು ಹೇಳುತ್ತಿರುತ್ತಾರೆ. ಇದರಲ್ಲಿ ಎಲ್ಲರೂ ಬುದ್ಧಿವಂತರಿದ್ದಾರೆ ಆದ್ದರಿಂದ ಇದನ್ನು ಪರಿಶೀಲನೆ ಮಾಡಿಕೊಳ್ಳಿ – ಭಲೆ ಸ್ನೇಹದಿಂದ ಬಾಗುವಿಕೆಯಿರಬಹುದು ಅಥವಾ ಲೆಕ್ಕಾಚಾರವು ಸಮಾಪ್ತಿಯಾಗುವ ಕಾರಣ ಬಾಗುವಿಕೆಯಿರಬಹುದು, ಎರಡನ್ನೂ ಪರಿಶೀಲನೆ ಮಾಡಿಕೊಳ್ಳಿ.

ಯಾರೊಂದಿಗೇ ಈರ್ಷ್ಯೆ ಅಥವಾ ತಿರಸ್ಕಾರವಿರುವುದೋ ಅಲ್ಲಿಯೂ ಬಾಗುವಿಕೆಯಿರುತ್ತದೆ. ಅಂದರೆ ಪದೇ-ಪದೇ ಅವರೇ ನೆನಪಿಗೆ ಬರುತ್ತಿರುತ್ತಾರೆ. ತಂದೆಯನ್ನು ನೆನಪು ಮಾಡಲು ಯೋಗದಲ್ಲಿ ಕುಳಿತುಕೊಂಡರೆ ಈರ್ಷ್ಯೆ ಅಥವಾ ತಿರಸ್ಕಾರವು ಯಾರೊಂದಿಗಿದೆಯೋ ಅವರೇ ನೆನಪಿಗೆ ಬರುತ್ತಾರೆ. ನಾನು ಸ್ವದರ್ಶನ ಚಕ್ರಧಾರಿ ಆಗಿದ್ದೇನೆಂದು ಯೋಚಿಸುತ್ತಾರೆ ಆದರೆ ಪರದರ್ಶನ ಚಕ್ರವು ನಡೆಯುತ್ತಿರುತ್ತದೆ ಅಂದಾಗ ಎರಡೂ ಕಡೆಯ ಬಾಗುವಿಕೆಯು ಕೆಳಗೆ ತರುತ್ತದೆ. ಆದ್ದರಿಂದ ಎರಡನ್ನೂ ಪರಿಶೀಲನೆ ಮಾಡಿಕೊಳ್ಳಿ ನಂತರ ತಂದೆಯ ಮುಂದೆ ನಾನಂತೂ ಬಹಳ ಚೆನ್ನಾಗಿದ್ದೇನೆ, ಕೇವಲ ಇದೊಂದೇ ಮಾತು ಹೀಗಿದೆ. ಇದನ್ನು ತಾವು ಕಳೆಯಿರಿ ಎಂದು ಅರ್ಜಿ ಹಾಕುತ್ತಾರೆ. ಆಗ ತಂದೆಯು ಮುಗುಳ್ನಗುತ್ತಾ ಹೇಳುತ್ತಾರೆ – ಲೆಕ್ಕಾಚಾರವನ್ನು ತಾವು ಮಾಡಿಕೊಂಡರು, ಆದರೆ ತಂದೆಯು ಸಮಾಪ್ತಿ ಮಾಡುವುದೇ! ಬಾಬಾ, ಲೆಕ್ಕಾಚಾರವನ್ನು ಚುಕ್ತ ಮಾಡಿಸಿ ಎಂದು ಹೇಳುವುದು ಸರಿಯಾಗಿದೆ. ಆದರೆ ತಾವೇ ಚುಕ್ತ ಮಾಡಿ ಎಂದು ಹೇಳುವುದು ಸರಿಯಲ್ಲ. ಲೆಕ್ಕಾಚಾರ ಬೆಳೆಸಿಕೊಳ್ಳುವ ಸಮಯದಲ್ಲಿ ತಂದೆಯನ್ನೇ ಮರೆತು ಹೋದರು ಮತ್ತು ಚುಕ್ತ ಮಾಡುವ ಸಮಯದಲ್ಲಿ ಬಾಬಾ, ಬಾಬಾ ಎಂದು ಹೇಳುತ್ತಾರೆ! ಮಾಡಿಸುವಂತಹ ತಂದೆಯು ಮಾಡಿಸುವುದಕ್ಕಾಗಿ ಬಂಧಿತರಾಗಿದ್ದಾರೆ ಆದರೆ ತಾವೇ ಮಾಡಿಕೊಳ್ಳಬೇಕಲ್ಲವೆ. ಅಂದಾಗ ಮಕ್ಕಳ ಯಾವ-ಯಾವ ಸಮಾಚಾರಗಳನ್ನು ಬಾಪ್ದಾದಾರವರು ನೋಡುತ್ತಾರೆಂಬುದನ್ನು ಕೇಳಿದಿರಾ? ಅಂದಾಗ ಸಾರವೇನಾಯಿತು? ಕೇವಲ ಒಣಗಿದ ಜ್ಞಾನಿಗಳಾಗಬೇಡಿ, ಬುದ್ಧಿಯ ಜ್ಞಾನಿಗಳಾಗಬೇಡಿ. ಹೃದಯದ ಜ್ಞಾನಿ ಹಾಗೂ ಸ್ನೇಹಿಗಳಾಗಿ ಹಾಗೂ ಲೀಕೇಜನ್ನು ಪರಿಶೀಲನೆ ಮಾಡಿಕೊಳ್ಳಿ. ತಿಳಿಯಿತೆ?

18 ಜನವರಿ (ಸ್ಮೃತಿ ದಿವಸ) ಯು ಬರುತ್ತಿದೆಯಲ್ಲವೆ, ಆದ್ದರಿಂದ ಮೊದಲೇ ಸ್ಮೃತಿ ತರಿಸುತ್ತಿದ್ದೇವೆ – ಜನವರಿ 18ರ ದಿನವನ್ನು ಸದಾಕಾಲದ ಸಮರ್ಥ ದಿವಸವನ್ನಾಗಿ ಆಚರಣೆ ಮಾಡಿ. ತಿಳಿಯಿತೇ? ಕೇವಲ ತಂದೆಯ ಕಥೆಯನ್ನು ಹೇಳಿ ಆಚರಿಸುವುದಲ್ಲ ಆದರೆ ಅವರ ಸಮಾನ ಜೀವನವನ್ನು ರೂಪಿಸಿಕೊಳ್ಳುವ ಲಕ್ಷ್ಯದಿಂದ ಆಚರಿಸಿ. ಒಳ್ಳೆಯದು.

ಸದಾ ವ್ಯಕ್ತಿ ಹಾಗೂ ವೈಭವಗಳ ವಶದಿಂದ ಭಿನ್ನ, ತಂದೆಯ ಸ್ನೇಹದಲ್ಲಿ ಸಮಾವೇಶವಾಗಿರುವ ಸದಾ ಯಥಾರ್ಥ ಜ್ಞಾನ ಹಾಗೂ ಹೃದಯದ ಸ್ನೇಹ – ಎರಡರಲ್ಲಿಯೂ ಕಂಬೈಂಡ್ ಸ್ಥಿತಿಯ ಅನುಭವ ಮಾಡುವಂತಹ ಸದಾ ಯೋಗಿಗಳಾಗಿ, ಸಾಧನೆಯ ಸ್ಥಿತಿಯಿಂದ ಸಾಧನಗಳನ್ನು ಕಾರ್ಯದಲ್ಲಿ ತೊಡಗಿಸುವಂತಹ ಸದಾ ಸ್ನೇಹಿ, ಹೃದಯದಲ್ಲಿ ಸಮಾವೇಶವಾಗಿರುವ ಮಕ್ಕಳಿಗೆ ಹೃದಯರಾಮ ತಂದೆಯ ನೆನಪು, ಪ್ರೀತಿ ಹಾಗೂ ನಮಸ್ತೆ.

ಪಾರ್ಟಿಯೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ:

ಡಬಲ್ ಹೀರೊಗಳೆಂದು ತಿಳಿಯುವಿರಾ? ವಜ್ರ ಸಮಾನ ಜೀವನವಾಗಿದೆ ಅಂದಮೇಲೆ ಹೀರೊ ಸಮಾನರಾಗಿದ್ದೀರಿ ಹಾಗೂ ಸೃಷ್ಟಿ ನಾಟಕದಲ್ಲಿ ಆದಿಯಿಂದ ಅಂತ್ಯದವರೆಗೂ ಹೀರೊ ಪಾತ್ರವನ್ನು ಅಭಿನಯಿಸುವವರು ಆಗಿದ್ದೀರಿ ಅಂದರೆ ಡಬಲ್ ಹೀರೋ ಆಗಿದ್ದೀರಲ್ಲವೆ. ಅಲ್ಪಕಾಲದ ಯಾವುದೇ ನಾಟಕದಲ್ಲಿ ಪಾತ್ರವನ್ನು ಮಾಡುವಂತಹ ಹೀರೊ ಪಾತ್ರವುಳ್ಳವನ ಬಗ್ಗೆ ಮಹಿಮೆಯಾಗುತ್ತದೆ ಆದರೆ ಡಬಲ್ ಹೀರೊಗಳಂತು ಯಾರೂ ಆಗುವುದಿಲ್ಲ. ನೋಡಿದರೆ ತಾವು ಡಬಲ್ ಹೀರೊ ಆಗಿದ್ದೀರಿ. ತಂದೆಯವರ ಜೊತೆ ಪಾತ್ರವನ್ನು ಮಾಡುವುದೆಷ್ಟು ಭಾಗ್ಯವಾಗಿದೆ! ಅಂದಮೇಲೆ ಸದಾ ಈ ಶ್ರೇಷ್ಠ ಭಾಗ್ಯವನ್ನು ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತಾ ಮುಂದುವರೆಯುತ್ತಾ ಇದ್ದೀರಲ್ಲವೆ. ನಿಲ್ಲುವವರಂತು ಆಗಿಲ್ಲ ಅಲ್ಲವೇ? ಯಾರು ಸುಸ್ತಾಗುವುದಿಲ್ಲವೋ ಅವರು ನಿಲ್ಲುವುದೂ ಇಲ್ಲ, ಮುಂದೆ ಸಾಗುತ್ತಾ ಇರುತ್ತಾರೆ ಅಂದಾಗ ತಾವು ನಿಲ್ಲುವವರೇ ಅಥವಾ ಸುಸ್ತಾಗುವವರೇ? ಒಂಟಿಯಾದರೂ ಸುಸ್ತಾಗುತ್ತದೆ, ಬೇಸರವಾದರೂ ಸುಸ್ತಾಗುತ್ತದೆ ಆದರೆ ಎಲ್ಲಿ ಜೊತೆಯಿದೆಯೋ ಅಲ್ಲಿ ಸದಾಕಾಲವೂ ಒಲವು-ಉತ್ಸಾಹವಿರುತ್ತದೆ. ಯಾವುದೇ ಯಾತ್ರೆಯಲ್ಲಿ ಹೋದಾಗಲೂ ಏನು ಮಾಡುತ್ತಾರೆ? ಸಂಘಟನೆಯನ್ನು ತಯಾರು ಮಾಡುತ್ತಾರಲ್ಲವೆ. ಏಕೆ ಮಾಡುತ್ತಾರೆ? ಸಂಘಟನೆಯಿಂದ, ಜೊತೆಯಿಂದ ಒಲವು-ಉತ್ಸಾಹದಿಂದ ಮುಂದೆ ಸಾಗುತ್ತಿರುತ್ತಾರೆ. ಆದ್ದರಿಂದ ತಾವೆಲ್ಲರೂ ಸಹ ಆತ್ಮಿಕ ಯಾತ್ರೆಯಲ್ಲಿ ಸದಾ ಮುಂದುವರೆಯುತ್ತಾ ಇರಬೇಕು ಏಕೆಂದರೆ ತಂದೆಯ ಜೊತೆ(ಸಂಗ), ಬ್ರಾಹ್ಮಣ ಪರಿವಾರದ ಶ್ರೇಷ್ಠವಾದ ಸಂಗವು ಜೊತೆಯಿದೆ! ಒಂದುವೇಳೆ ಒಳ್ಳೆಯ ಸಂಗಾತಿಯಿದ್ದರೆ ಎಂದಿಗೂ ಸಹ ಬೇಸರವಾಗುವುದಿಲ್ಲ, ಸುಸ್ತಾಗುವುದಿಲ್ಲ. ಅಂದಮೇಲೆ ಸದಾ ಮುಂದುವರೆಯುವವರು ಸದಾಕಾಲವೂ ಹರ್ಷಿತವಾಗಿ ಇರುತ್ತಾರೆ, ಸದಾ ಖುಷಿಯಲ್ಲಿ ನರ್ತಿಸುತ್ತಾ ಇರುತ್ತಾರೆ. ಆದ್ದರಿಂದ ವೃದ್ಧಿ ಹೊಂದುತ್ತಾ ಇರುತ್ತೀರಲ್ಲವೆ! ವೃದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳಲೇಬೇಕು ಏಕೆಂದರೆ ಅಗಲಿರುವ ಯಾವುದೇ ಮಗು ಯಾವುದೇ ಮೂಲೆಯಲ್ಲಿ ಇರಬಹುದು, ಅಲ್ಲಿ ಆ ಆತ್ಮರು ಸಮೀಪಕ್ಕೆ ಬರಲೇಬೇಕಾಗಿದೆ. ಆದ್ದರಿಂದ ಸೇವೆಯಲ್ಲಿಯೂ ವೃದ್ಧಿಯಾಗುತ್ತಾ ಇರುತ್ತದೆ. ಯಾರೆಷ್ಟಾದರೂ ಶಾಂತವಾಗಿ ಕುಳಿತುಕೊಳ್ಳಬೇಕೆಂದು ಬಯಸಬಹುದು ಆದರೆ ಕುಳಿತುಕೊಳ್ಳಲು ಸಾಧ್ಯವಾಗುವುದಿಲ್ಲ. ಸೇವೆಯು ಕುಳಿತುಕೊಳ್ಳುವುದಕ್ಕೆ ಬಿಡುವುದಿಲ್ಲ, ಮುಂದುವರೆಸುತ್ತದೆ ಏಕೆಂದರೆ ಯಾವ ಆತ್ಮರು ತಂದೆಯ ಮಕ್ಕಳಾಗಿದ್ದರು, ಅವರು ಪುನಃ ತಂದೆಯ ಮಕ್ಕಳಾಗಲೇಬೇಕು. ಒಳ್ಳೆಯದು!

ಮುಖ್ಯ ಸಹೋದರರೊಂದಿಗೆ ಅವ್ಯಕ್ತ-ಬಾಪ್ದಾದಾರವರ ವಾರ್ತಾಲಾಪ:

ಶಕ್ತಿಯರಿಗೆ ಒಳ್ಳೆಯ ಅವಕಾಶವು ಸಿಗುತ್ತದೆ, ದಾದಿಯರಾಗುವುದು ಒಳ್ಳೆಯದು ಎಂದು ಪಾಂಡವರು ಯೋಚಿಸುತ್ತಾರೆ. ಆದರೆ ಪಾಂಡವರೇನಾದರೂ ಪ್ಲಾನಿಂಗ್ ಬುದ್ಧಿಯವರು ಆಗಿಲ್ಲದಿದ್ದರೆ, ಶಕ್ತಿಯರೇನು ಮಾಡುವರು. ಅಂತಿಮ ಜನ್ಮದಲ್ಲಿಯೂ ಪಾಂಡವರಾಗುವುದು ಕಡಿಮೆ ಮಾತಲ್ಲ! ಏಕೆಂದರೆ ಪಾಂಡವರ ವಿಶೇಷತೆಯಂತು ಬ್ರಹ್ಮಾ ತಂದೆಯ ಜೊತೆಯಲ್ಲಿಯೇ ಇದೆ. ಅಂದಮೇಲೆ ಪಾಂಡವರೇನು ಕಡಿಮೆಯಲ್ಲ, ಪಾಂಡವರಿಲ್ಲದೆ ಶಕ್ತಿಯರಿಲ್ಲ, ಶಕ್ತಿಯರಿಲ್ಲದೆ ಪಾಂಡವರಿಲ್ಲ. ಚತುರ್ಭುಜನ ಎರಡು ಭುಜಗಳು ಅವರದು (ನಾರಾಯಣ) ಮತ್ತು ಎರಡು ಭುಜಗಳು (ಲಕ್ಷ್ಮಿ) ಅವರದಾಗಿದೆ. ಆದ್ದರಿಂದ ಪಾಂಡವರದು ತನ್ನ ವಿಶೇಷತೆಯಿದೆ, ನಿಮಿತ್ತವಷ್ಟೇ ಸೇವೆಗಾಗಿ ಇವರಿಗೆ ಸಿಕ್ಕಿದೆ(ದಾದಿಯರಿಗೆ) ಆದ್ದರಿಂದ ಇವರು ಮಾಡುತ್ತಾರೆ. ಬಾಕಿ ಸದಾ ಪಾಂಡವರಿಗಾಗಿ ಶಕ್ತಿಯರ ಮತ್ತು ಶಕ್ತಿಯರಿಗಾಗಿ ಪಾಂಡವರ ಸ್ನೇಹವಿದೆ, ಗೌರವವಿದೆ ಹಾಗೂ ಸದಾಕಾಲವೂ ಇರುತ್ತದೆ. ಶಕ್ತಿಯರು ಪಾಂಡವರನ್ನು ಮುಂದಿಡುತ್ತಾರೆ – ಇದರಲ್ಲಿಯೇ ಸಫಲತೆಯಿದೆ ಮತ್ತು ಪಾಂಡವರು ಶಕ್ತಿಯರನ್ನು ಮುಂದಿಡುತ್ತಾರೆ – ಇದರಲ್ಲಿಯೇ ಸಫಲತೆಯಿದೆ. `ಮೊದಲು ತಾವು’ ಎಂಬ ಪಾಠವು ಇಬ್ಬರಲ್ಲಿಯೂ ಪರಿಪಕ್ವವಾಗಿದೆ. `ಮೊದಲು ತಾವು’, `ಮೊದಲು ತಾವು’ ಎನ್ನುತ್ತಾ ಸ್ವಯಂ ಸಹ `ಮೊದಲು ತಾವು’ ಆಗಿ ಬಿಡುತ್ತೀರಿ. ಮಧ್ಯದಲ್ಲಿ ತಂದೆಯಿದ್ದರೆ ಜಗಳಗಳೇ ಇರುವುದಿಲ. ಪಾಂಡವರಿಗೆ ಬುದ್ಧಿಯ ಒಳ್ಳೆಯ ವರದಾನವು ಸಿಕ್ಕಿರುತ್ತದೆ, ಅವರು ಯಾವ ಕಾರ್ಯಕ್ಕಾಗಿ ನಿಮಿತ್ತರಾಗಿದ್ದಾರೆಯೋ, ಅದೇ ವಿಶೇಷತೆಯೂ ಸಿಕ್ಕಿರುತ್ತದೆ ಹಾಗೂ ಪ್ರತಿಯೊಬ್ಬರ ವಿಶೇಷತೆಯಲ್ಲಿ ಒಬ್ಬರಿಗಿಂತ ಇನ್ನೊಬ್ಬರು ಮುಂದಿದ್ದಾರೆ ಆದ್ದರಿಂದ ತಾವು ನಿಮಿತ್ತ ಆತ್ಮರಾಗಿದ್ದೀರಿ. ಒಳ್ಳೆಯದು.

ವರದಾನ:-

ತಮ್ಮ ಸಂಕಲ್ಪ, ವೃತ್ತಿ ಮತ್ತು ಸ್ಮೃತಿಯನ್ನು ಪರಿಶೀಲನೆ ಮಾಡಿಕೊಳ್ಳಿರಿ – ಅದರಲ್ಲಿ ಹೀಗಂತು ಆಗುತ್ತಿಲ್ಲವೆ – ಏನೋ ತಪ್ಪಾಗಿ ಬಿಟ್ಟಿತು, ಪಶ್ಚಾತ್ತಾಪ ಪಡಲಾಯಿತು, ಕ್ಷಮೆ ಯಾಚಿಸಿದೆನು, ಮುಕ್ತನಾದೆನು ಎನ್ನುವಂತೆ ಆಗುತ್ತಿಲ್ಲವೆ! ಯಾರೆಷ್ಟಾದರೂ ಕ್ಷಮೆಯಾಚಿಸಬಹುದು ಆದರೆ ಪಾಪ ಅಥವಾ ವ್ಯರ್ಥ ಕರ್ಮವೇನಾಯಿತು ಅದರ ಚಿಹ್ನೆಯಂತು ಸಮಾಪ್ತಿಯಾಗುವುದಿಲ್ಲ. ರಿಜಿಸ್ಟರ್ ಶುದ್ಧ – ಸ್ವಚ್ಛವಾಗಿರುವುದಿಲ್ಲ. ಕೇವಲ ಈ ರೀತಿ ಪದ್ಧತಿಗಳನ್ನಾಗಿ ಮಾಡಿಕೊಳ್ಳಬಾರದು. ಆದರೆ ಸ್ಮೃತಿಯಲ್ಲಿರಲಿ – ನಾನು ಸಂಪೂರ್ಣ ಪವಿತ್ರ ಬ್ರಾಹ್ಮಣನಾಗಿದ್ದೇನೆ, ಅಪವಿತ್ರತೆಯು ಸಂಕಲ್ಪ-ವೃತ್ತಿ-ಸ್ಮೃತಿಯನ್ನೂ ಟಚ್ ಮಾಡುವುದಕ್ಕೂ ಸಾಧ್ಯವಿಲ್ಲ. ಇದಕ್ಕಾಗಿ ಹೆಜ್ಜೆ-ಹೆಜ್ಜೆಯಲ್ಲಿಯೂ ಎಚ್ಚರಿಕೆಯಿರಲಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top