22 May 2021 KANNADA Murli Today – Brahma Kumaris

May 21, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಮ್ಮದೆಲ್ಲವನ್ನೂ ಈಶ್ವರೀಯ ಸೇವೆಯಲ್ಲಿ ಸಫಲ ಮಾಡಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಏಕೆಂದರೆ ಮೃತ್ಯು ತಲೆಯ ಮೇಲೆ ಇದೆ”

ಪ್ರಶ್ನೆ:: -

ಜ್ಞಾನವನ್ನು ಕೇಳುತ್ತಿದ್ದರೂ ಸಹ ಮಕ್ಕಳ ಬುದ್ಧಿಯಲ್ಲಿ ಅದರ ಧಾರಣೆಯಾಗುವುದಿಲ್ಲ – ಏಕೆ?

ಉತ್ತರ:-

1. ಏಕೆಂದರೆ ವಿಚಾರ ಸಾಗರ ಮಂಥನ ಮಾಡಲು ಬರುವುದಿಲ್ಲ. 2. ಬುದ್ಧಿಯೋಗವು ದೇಹ, ದೇಹದ ಸಂಬಂಧಗಳೊಂದಿಗೆ ಜೋಡಣೆಯಾಗಿದೆ. ಮೊದಲು ಬುದ್ಧಿಯಿಂದ ಮೋಹವನ್ನು ತೆಗೆಯಬೇಕು ಆಗ ಎಲ್ಲವೂ ಧಾರಣೆಯಾಗುವುದು. ಮೋಹವೂ ಇಂತಹ ವಸ್ತುವಾಗಿದೆ ಒಂದೇ ಸಾರಿ ಮಂಗನ ರೀತಿ ಮಾಡಿ ಬಿಡುತ್ತದೆ. ಆದ್ದರಿಂದ ಮೊಟ್ಟ ಮೊದಲ ಪ್ರತಿಜ್ಞೆಯನ್ನು ನೆನಪು ತರಿಸುತ್ತಾರೆ – ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆತು ನನ್ನನ್ನು ನೆನಪು ಮಾಡಿ ಎಂದು ತಂದೆಯು ತಿಳಿಸುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಭೋಲಾನಾಥನಿಗಿಂತ ಭಿನ್ನ……..

ಓಂ ಶಾಂತಿ. ತಂದೆಯು ಕುಳಿತು ತಿಳಿಸುತ್ತಾರೆ – ಈಗ ಮಕ್ಕಳಿಗೆ ಚೆನ್ನಾಗಿ ಗೊತ್ತಾಗಿದೆ, ಬೇಹದ್ದಿನ ತಂದೆಯನ್ನು ಕೆಟ್ಟು ಹೋಗಿರುವವರನ್ನು ಸರಿ ಪಡಿಸುವವರು ಎಂದು. ಕೃಷ್ಣನು ಕೆಟ್ಟು ಹೋಗಿರುವವರನ್ನು ಸುಧಾರಣೆ ಮಾಡಲು ಸಾಧ್ಯವಿಲ್ಲ. ಗೀತೆಯ ಭಗವಂತ ಕೃಷ್ಣನಲ್ಲ, ಶಿವನಾಗಿದ್ದಾನೆ. ಶಿವ ತಂದೆಯು ರಚಯಿತನಾಗಿದ್ದಾರೆ, ಕೃಷ್ಣನು ರಚನೆಯಾಗಿದ್ದಾನೆ. ಸ್ವರ್ಗದ ಆಸ್ತಿಯನ್ನು ಕೊಡುವವರು ಸ್ವರ್ಗದ ರಚಯಿತನೇ ಆಗಿರಬೇಕು. ಇದೇ ಭಾರತದ ಬಹಳ ದೊಡ್ಡ ತಪ್ಪಾಗಿದೆ. ಶ್ರೀಕೃಷ್ಣನನ್ನು ತಂದೆ ಎಂದು ಹೇಳಲು ಸಾಧ್ಯವಿಲ್ಲ. ಆಸ್ತಿಯು ತಂದೆಯಿಂದಲೇ ಸಿಗುತ್ತದೆ, ಭಾರತಕ್ಕೇ ಸಿಕ್ಕಿತ್ತು. ಭಾರತದಲ್ಲಿಯೇ ಶ್ರೀಕೃಷ್ಣನ ರಾಜ್ಯಭಾರ ಮತ್ತು ರಾಧೆಯ ರಾಜ್ಯಭಾರದ ಗಾಯನವಿದೆ. ಮಹಿಮೆಯು ಶ್ರೇಷ್ಠಾತಿ ಶ್ರೇಷ್ಠ ತಂದೆಯೊಬ್ಬರದೇ ಆಗಿದೆ. ಶ್ರೀಕೃಷ್ಣನು ಶ್ರೇಷ್ಠಾತಿ ಶ್ರೇಷ್ಠ ರಚನೆಯಾಗಿದ್ದಾನೆ, ವಿಶ್ವದ ಮಾಲೀಕನಾಗಿದ್ದಾನೆ. ಅವರಿಗೆ ಸೂರ್ಯವಂಶಿ, ದೈವೀ ಸಾಮ್ರಾಜ್ಯದವರು ಎನ್ನುತ್ತಾರೆ. ಗೀತೆಯು ಆದಿ ಸನಾತನ ದೇವಿ-ದೇವತಾ ಧರ್ಮದ ಶಾಸ್ತ್ರವಾಗಿದೆ. ಸತ್ಯಯುಗದಲ್ಲಂತೂ ಜ್ಞಾನವನ್ನು ಯಾರಿಗೂ ಹೇಳುವುದಿಲ್ಲ, ಸಂಗಮದಲ್ಲಿಯೇ ತಂದೆಯು ತಿಳಿಸುತ್ತಾರೆ. ಚಿತ್ರಗಳಲ್ಲಿಯೂ ಸಹ ಇದನ್ನೇ ಮೊದಲು ಸಿದ್ಧ ಮಾಡಬೇಕಾಗಿದೆ. ಇಬ್ಬರ ಚಿತ್ರಗಳನ್ನೂ ಇಡುತ್ತಾರೆ – ಗೀತೆಯ ಭಗವಂತ ಇವರು ರಚಯಿತನಾಗಿದ್ದಾರೆ, ಪುನರ್ಜನ್ಮರಹಿತನಾಗಿದ್ದಾರೆ ಶ್ರೀಕೃಷ್ಣನಲ್ಲ. ಅವನು ರಚನೆಯಾಗಿದೆ. ಶಿವ ತಂದೆಯು ವಜ್ರ ಸಮಾನ ಮಾಡುತ್ತಿದ್ದಾರೆ ಎಂದು ನೀವು ತಿಳಿದುಕೊಂಡಿದ್ದೀರಿ. ವಜ್ರ ಸಮಾನ, ಕಲ್ಲಿನ ಸಮಾನವೆಂದೂ ಗಾಯನ ಮಾಡುತ್ತಾರೆ. ನನ್ನನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿ ಎಂದು ತಂದೆಯು ಆಜ್ಞೆ ಮಾಡುತ್ತಾರೆಂದು ಮಕ್ಕಳ ಬುದ್ಧಿಯಲ್ಲಿರಬೇಕು. ಅವರು ಬೇಹದ್ದಿನ ತಂದೆಯಾಗಿದ್ದಾರೆ. ಕೃಷ್ಣನಂತೂ ಹದ್ದಿನ ಮಾಲೀಕನಾಗಿದ್ದಾನೆ. ಭಲೆ ವಿಶ್ವದ ರಾಜನಾಗುತ್ತಾನೆ, ಶಿವ ತಂದೆಯಂತೂ ರಾಜನಾಗುವುದಿಲ್ಲ. ವಾಸ್ತವದಲ್ಲಿ ಗೀತೆಗೆ ಬಹಳ ಮಹಿಮೆಯಿದೆ, ಜೊತೆ ಜೊತೆಗೆ ಭಾರತದ್ದೂ ಮಹಿಮೆಯಿದೆ. ಭಾರತವು ಎಲ್ಲಾ ಧರ್ಮದವರ ದೊಡ್ಡ ತೀರ್ಥ ಸ್ಥಾನವಾಗಿದೆ. ಕೇವಲ ಕೃಷ್ಣನ ಹೆಸರನ್ನು ಹಾಕಿರುವುದರಿಂದ ಎಲ್ಲದರ ಮಹತ್ವವು ಇಲ್ಲದಂತಾಗಿದೆ. ಇದರ ಕಾರಣವೇ ಭಾರತವು ಕವಡೆಯ ಸಮಾನವಾಗಿದೆ. ಇದಂತೂ ಡ್ರಾಮಾ ಅನುಸಾರ ಇದೆ ಆದರೆ ಎಚ್ಚರಿಕೆ ಕೊಡಲೇಬೇಕಾಗುವುದು. ಬಹಳ ಚೆನ್ನಾಗಿ ತಂದೆಯು ತಿಳಿಸುತ್ತಾರೆ, ದಿನ-ಪ್ರತಿದಿನ ರಹಸ್ಯವಾದ ಮಾತುಗಳನ್ನೂ ತಿಳಿಸುತ್ತಾರೆ ಅಂದಮೇಲೆ ಹಳೆಯ ಚಿತ್ರಗಳನ್ನು ಬದಲಾಯಿಸಿ ಬೇರೆ ಚಿತ್ರಗಳನ್ನು ಮಾಡಬೇಕಾಗುವುದು. ಇದಂತೂ ಅಂತ್ಯದವರೆಗೆ ನಡೆಯುತ್ತಲೇ ಇರುತ್ತದೆ. ಶಿವ ತಂದೆಯು ನಮಗೆ ಆಸ್ತಿಯನ್ನು ಕೊಡುತ್ತಿದ್ದಾರೆಂದು ಮಕ್ಕಳ ಬುದ್ಧಿಯಲ್ಲಿ ಚೆನ್ನಾಗಿ ಇರಬೇಕು. ನನ್ನನ್ನು ನೆನಪು ಮಾಡಿದರೆ ವಿಕರ್ಮ ವಿನಾಶವಾಗುವುದು ಎಂದು ತಂದೆಯು ತಿಳಿಸುತ್ತಾರೆ. ಕೃಷ್ಣನನ್ನು ನೆನಪು ಮಾಡುವುದರಿಂದ ವಿಕರ್ಮ ವಿನಾಶವಾಗುವುದಿಲ್ಲ, ಅವನಂತೂ ಸರ್ವಶಕ್ತಿವಂತನೂ ಅಲ್ಲ. ತಂದೆಯು ಸರ್ವಶಕ್ತಿವಂತನಾಗಿದ್ದಾರೆ, ಅವರೇ ಆಸ್ತಿಯನ್ನು ಕೊಡುತ್ತಾರೆ. ಮನುಷ್ಯರು ಕೃಷ್ಣನನ್ನೇ ನೆನಪು ಮಾಡುತ್ತಿರುತ್ತಾರೆ. ತಿಳಿದುಕೊಳ್ಳಿ – ಕೃಷ್ಣನು ಹೇಳಿದನು, ದೇಹದ ಸಂಬಂಧವನ್ನು ಬಿಟ್ಟು ನನ್ನನ್ನು ನೆನಪು ಮಾಡಿ ಎಂದು ಹೇಳುತ್ತಾನೆ, ಅಂದಾಗ ತಂದೆಯನ್ನೇ ನೆನಪು ಮಾಡಬೇಕಲ್ಲವೆ! ಕೃಷ್ಣನಂತೂ ಎಲ್ಲಾ ಆತ್ಮರ ತಂದೆಯಲ್ಲ, ಇವೆಲ್ಲವನ್ನೂ ವಿಚಾರ ಮಾಡಿ ಬುದ್ಧಿಯಲ್ಲಿ ಧಾರಣೆ ಮಾಡಬೇಕಾಗಿದೆ. ಕೆಲಕೆಲವರು ಮೋಹದಲ್ಲಿ ಸಿಕ್ಕಿಕೊಂಡಿರುವ ಕಾರಣ ಧಾರಣೆ ಮಾಡಲು ಸಾಧ್ಯವಿಲ್ಲ. ಬೇರೆಲ್ಲಾ ಸಂಗವನ್ನು ಬಿಟ್ಟು ನಿಮ್ಮ ಸಂಗವನ್ನು ಮಾಡುತ್ತೇವೆಂದು ಹಾಡುತ್ತಾ ಬಂದಿರುವಿರಿ. ನನ್ನವರಂತೂ ಒಬ್ಬರ ವಿನಃ ಬೇರೆಯಾರೂ ಇಲ್ಲ. ಆದರೆ ಮೋಹವು ಮತ್ತೆ ಇಂತಹ ವಸ್ತುವಾಗಿದೆ ಒಂದೇ ಬಾರಿ ಮಂಗನ ರೀತಿ ಮಾಡಿ ಬಿಡುತ್ತದೆ. ಮಂಗನಲ್ಲಿ ಮೋಹ ಮತ್ತು ಲೋಭವು ಹೆಚ್ಚಾಗಿರುತ್ತದೆ. ಸಾಹುಕಾರರಿಗೂ ಸಹ ತಿಳಿಸಬೇಕಾಗುತ್ತದೆ – ಈಗ ಮೃತ್ಯು ಸನ್ಮುಖದಲ್ಲಿ ನಿಂತಿದೆ. ಇದೆಲ್ಲವನ್ನೂ ಈಶ್ವರೀಯ ಸೇವೆಯಲ್ಲಿ ಉಪಯೋಗಿಸಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಆದರೆ ಮಂಗನ ತರಹ ಅಂಟಿಕೊಂಡೇ ಇರುತ್ತಾರೆ, ಬಿಡುವುದೇ ಇಲ್ಲ. ಯಾರದೇ ದೇಹ, ದೇಹದ ಸಂಬಂಧವಿದೆಯೋ ಅದನ್ನು ತೆಗೆದುಬಿಡಿ ಎಂದು ತಂದೆಯು ತಿಳಿಸುತ್ತಾರೆ. ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ. ನೀವು ಹೇಳುತ್ತೀರಿ – ಈ ಹಣ, ಮಕ್ಕಳು-ಮರಿಗಳು ಎಲ್ಲವನ್ನೂ ಈಶ್ವರನು ಕೊಟ್ಟಿರುವುದಾಗಿದೆ. ಅವರು ಈಗ ಸ್ವಯಂ ಬಂದು ಎಲ್ಲವನ್ನೂ ತಿಳಿಸುತ್ತಾರೆ – ನಿಮ್ಮ ಹಣ-ಸಂಪತ್ತೆಲ್ಲವೂ ಈಗ ಸಮಾಪ್ತಿಯಾಗುವುದಿದೆ. ಕೆಲವರದು ಮಣ್ಣಿನ ಪಾಲಾಗುತ್ತದೆ….. ಭೂಕಂಪ ಇತ್ಯಾದಿಗಳೂ ಆಗಿ ಇವೆಲ್ಲವೂ ಸಮಾಪ್ತಿಯಾಗುತ್ತದೆ. ವಿಮಾನ ಅಪಘಾತವಾಗುತ್ತದೆ ಅಥವಾ ಬೆಂಕಿ ಹತ್ತಿಕೊಳ್ಳುತ್ತದೆ ಎಂದರೆ ಮೊಟ್ಟ ಮೊದಲು ಪೋಲೀಸರು ಬರುವುದರೊಳಗೆ ಕಳ್ಳರು ಒಳಗೆ ನುಗ್ಗುತ್ತಾರೆ. ಅಂದಮೇಲೆ ಮಕ್ಕಳೇ, ದೇಹಧಾರಿಯೊಂದಿಗಿನ ಮೋಹವನ್ನು ತೆಗೆದುಬಿಡಿ, ಮೋಹಜೀತರಾಗಬೇಕಾಗಿದೆ. ದೇಹದ ಅಭಿಮಾನವು ಮೊಟ್ಟ ಮೊದಲ ಶತ್ರುವಾಗಿದ್ದಾನೆ. ದೇವತೆಗಳು ದೇಹೀ-ಅಭಿಮಾನಿಗಳಾಗಿದ್ದರು. ದೇಹಾಭಿಮಾನವು ಬರುವುದರ ಕಾರಣ ವಿಕಾರದಲ್ಲಿ ಸಿಕ್ಕಿಕೊಳ್ಳುತ್ತಾರೆ. ನೀವು ಅರ್ಧಕಲ್ಪದಿಂದ ದೇಹಾಭಿಮಾನದಲ್ಲಿ ಇದ್ದಿರಿ. ಈಗ ದೇಹೀ-ಅಭಿಮಾನಿಯಾಗುವ ಅಭ್ಯಾಸ ಮಾಡಬೇಕಾಗಿದೆ. ಅವಶ್ಯವಾಗಿ ಇಲ್ಲಿರುವ ಮನುಷ್ಯರಿಗೆ ಈ ಮಾತುಗಳು ತಿಳಿದಿಲ್ಲ, ಪರಮಾತ್ಮನೂ ಸಹ ಗೊತ್ತಿಲ್ಲ. ಆತ್ಮವೆಂದರೇನು, ಪರಮಾತ್ಮವೆಂದರೇನು, ಆತ್ಮವು ಎಷ್ಟು ಜನ್ಮಗಳನ್ನು ತೆಗೆದುಕೊಳ್ಳುತ್ತದೆ, ಎಷ್ಟು ಪಾತ್ರವನ್ನಭಿನಯಿಸುತ್ತದೆ, ನಾವು ಪಾತ್ರಧಾರಿಗಳಾಗಿದ್ದೇವೆ ಎಂಬುದು ಯಾರಿಗೂ ಗೊತ್ತಿಲ್ಲ. ಆದ್ದರಿಂದ ಅನಾಥರು, ನಿರ್ಧನಿಕರಾಗಿದ್ದಾರೆಂದು ಹೇಳಲಾಗುತ್ತದೆ. ಆತ್ಮವು ಜ್ಯೋತಿಯಲ್ಲಿ ಲೀನವಾಗುತ್ತದೆ ಎಂದು ಅವರು ಹೇಳುತ್ತಾರೆ. ಆತ್ಮವು ಅವಿನಾಶಿಯಾಗಿದೆ, ಆತ್ಮದಲ್ಲಿಯೇ 84 ಜನ್ಮಗಳ ಪಾತ್ರವು ಅಡಕವಾಗಿದೆ. ಆತ್ಮವು ಒಂದು ನಕ್ಷತ್ರವಾಗಿದೆ ಎಂದೂ ಹೇಳುತ್ತಾರೆ ಆದರೆ ಏನೂ ತಿಳಿದಿಲ್ಲ. ಆತ್ಮನೇ ಪರಮಾತ್ಮನೆಂದು ಹೇಳುತ್ತಾರೆ, ತಂದೆಯನ್ನು ಸ್ವಲ್ಪವೂ ತಿಳಿದುಕೊಂಡಿಲ್ಲ. ಭೃಕುಟಿಯ ಮಧ್ಯದಲ್ಲಿ ಹೊಳೆಯುವ ನಕ್ಷತ್ರವೆಂದು ಆತ್ಮಕ್ಕೆ ಹೇಳುತ್ತಾರೆ. ಪರಮಾತ್ಮನಿಗೆ ಏನೂ ಸಹ ಹೇಳುವುದಿಲ್ಲ. ಅವರಿಗೆ ಪರಮ ಆತ್ಮ ಎಂದು ಹೇಳುತ್ತಾರೆ, ಅವರು ಪರಮಧಾಮದಲ್ಲಿರುತ್ತಾರೆ. ಅವರೂ ಸಹ ಬಿಂದುವಾಗಿದ್ದಾರೆ, ಕೇವಲ ಪುನರ್ಜನ್ಮರಹಿತನಾಗಿದ್ದಾರೆ ಆದರೆ ಆತ್ಮಗಳು ಪುನರ್ಜನ್ಮದಲ್ಲಿ ಬರುತ್ತವೆ. ಪರಮಾತ್ಮನಿಗೆ ಜ್ಞಾನ ಸಾಗರ, ಆನಂದ ಸಾಗರ, ಪವಿತ್ರತಾ ಸಾಗರನೆಂದು ಹೇಳಲಾಗುತ್ತದೆ. ದೇವತೆಗಳಿಗೆ ಆಸ್ತಿಯನ್ನು ಯಾರು ಕೊಟ್ಟರು? ತಂದೆ. ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ….. ಈ ದೇವತೆಗಳ ರೀತಿ ಯಾರೂ ಇಲ್ಲ. ಅವರಿಗೆ ಈ ಆಸ್ತಿಯು ಹೇಗೆ ಸಿಕ್ಕಿತು ಎಂದು ಯಾರಿಗೂ ಗೊತ್ತಿಲ್ಲ. ತಂದೆಯೇ ಬಂದು ತಿಳಿಸುತ್ತಾರೆ, ಅವರನ್ನು ಜ್ಞಾನ ಸಾಗರನೆಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಬಂದು ಜ್ಞಾನವನ್ನು ಕೊಡುತ್ತಾರೆ. ಈ ಸಮಯದಲ್ಲಿ ಬಂದು ಜ್ಞಾನವನ್ನು ಕೊಡುತ್ತಾರೆ ನಂತರ ಅದು ಪ್ರಾಯಃಲೋಪವಾಗಿಬಿಡುತ್ತದೆ. ಮತ್ತೆ ಭಕ್ತಿಯಿರುತ್ತದೆ ಅದನ್ನು ಜ್ಞಾನವೆಂದು ಹೇಳಲು ಸಾಧ್ಯವಿಲ್ಲ. ಜ್ಞಾನದಿಂದ ಸದ್ಗತಿಯಾಗುತ್ತದೆ, ದುರ್ಗತಿಯಾದಾಗಲೇ ಎಲ್ಲರ ಸದ್ಗತಿದಾತ, ಜ್ಞಾನ ಸಾಗರನು ಬರುತ್ತಾರೆ. ತಂದೆಯು ಬಂದು ಜ್ಞಾನ ಸ್ನಾನ ಮಾಡಿಸುತ್ತಾರೆ, ಅವರಂತೂ ನೀರಿನ ಸ್ನಾನ ಮಾಡುತ್ತಾರೆ, ಅದರಿಂದ ಯಾವ ಸದ್ಗತಿಯೂ ಆಗುವುದಿಲ್ಲ. ಇಷ್ಟಾದರೂ ಧಾರಣೆ ಮಾಡಬೇಕಲ್ಲವೆ. ಮುಖ್ಯವಾದ ಒಳ್ಳೊಳ್ಳೆಯ ಚಿತ್ರಗಳಿವೆ, ಅವುಗಳು ದೊಡ್ಡದಾಗಿರಬೇಕು ಅದರಿಂದ ಚೆನ್ನಾಗಿ ಅರ್ಥವಾಗುವುದು. ಅದರಲ್ಲಿ ಅಕ್ಷರಗಳನ್ನು ದೊಡ್ಡದಾಗಿ ಬರೆಯಬೇಕು. ಇದು ಚಿತ್ರ ಮಾಡುವವರ ಬುದ್ಧಿಯಲ್ಲಿ ಚೆನ್ನಾಗಿ ಇಟ್ಟುಕೊಳ್ಳಬೇಕಾಗಿದೆ. ಅನ್ಯರನ್ನೂ ಕರೆಯಬೇಕು. ನಿಮಂತ್ರಣ ಕೊಡಬೇಕಾಗಿದೆ – ಬಂದು ಪರಮಪಿತ ಪರಮಾತ್ಮನ ಪರಿಚಯವನ್ನು ಪಡೆದು ತಂದೆಯಿಂದ 21 ಜನ್ಮಗಳ ಆಸ್ತಿಯನ್ನು ಪಡೆಯಿರಿ. ಸಹೋದರರೇ, ಸಹೋದರಿಯರೇ ಪಾರಲೌಕಿಕ ತಂದೆಯಿಂದ ಬೇಹದ್ದಿನ ಸುಖದ ಸ್ವರಾಜ್ಯವು ಹೇಗೆ ಸಿಗುತ್ತದೆಯೆಂದು ಬಂದು ತಿಳಿದುಕೊಳ್ಳಿ. ಬೇಹದ್ದಿನ ತಂದೆಯಿಂದ ಆಸ್ತಿ ಪಡೆಯುವುದನ್ನು ಕಲಿತುಕೊಳ್ಳಿ, ಇದರಲ್ಲಿ ಹೆದರುವ ಮಾತೇನೂ ಇಲ್ಲ. ಪತಿತ-ಪಾವನ ಬನ್ನಿ ಎಂದು ಕರೆಯುತ್ತಲೇ ಇರುತ್ತಾರೆ, ಕಾಮ ಮಹಾಶತ್ರುವಾಗಿದೆ ಎಂದು ತಂದೆಯೂ ಸಹ ತಿಳಿಸುತ್ತಾರೆ. ಪಾವನ ಪ್ರಪಂಚಕ್ಕೆ ಹೋಗಬೇಕೆಂದಮೇಲೆ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ. ವಿಕಾರದಿಂದ ಜನ್ಮ ಪಡೆಯುವವರನ್ನು ಪತಿತರೆಂದು ಕರೆಯಲಾಗುವುದು. ಸತ್ಯ-ತ್ರೇತಾಯುಗದಲ್ಲಿ ವಿಷ (ವಿಕಾರ) ಇರುವುದಿಲ್ಲ, ಅದನ್ನು ಸಂಪೂರ್ಣ ನಿರ್ವಿಕಾರಿ ಪ್ರಪಂಚವೆಂದು ಕರೆಯುತ್ತಾರೆ, ವಿಕಾರವೇ ಇರುವುದಿಲ್ಲ ಅಂದಾಗ ಮಕ್ಕಳ ಜನ್ಮ ಹೇಗಾಗುತ್ತದೆ ಎಂದು ಕೇಳುತ್ತಾರೆ, ನೀವಂತೂ ನಿರ್ವಿಕಾರಿಗಳಾಗಿರಿ. ಜನ್ಮ-ಜನ್ಮಾಂತರ ವಿಕರ್ಮಗಳು ವಿನಾಶವಾಗಲಿ, ಇದಂತೂ ಪಾಪಾತ್ಮರ ಪ್ರಪಂಚವಾಗಿದೆ. ಅದು ಪುಣ್ಯಾತ್ಮರ ಪ್ರಪಂಚವಾಗಿದೆ. ಇದನ್ನು ಬಹಳ ಚೆನ್ನಾಗಿ ಬುದ್ಧಿಯಲ್ಲಿ ಕೂರಿಸಬೇಕಾಗಿದೆ. ಭಕ್ತಿಯ ಫಲವನ್ನು ಭಗವಂತನು ಬಂದು ಕೊಡುತ್ತಾನೆ, ತಂದೆಯೇ ಎಲ್ಲರ ಸದ್ಗತಿ ಮಾಡಿ ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಾರೆ. ಈಗ ಪವಿತ್ರರಾಗಿ, ನನ್ನನ್ನು ನೆನಪು ಮಾಡಿ – ಇದೇ ಮಹಾಮಂತ್ರವಾಗಿದೆ ಎಂದು ತಂದೆಯು ತಿಳಿಸುತ್ತಾರೆ. ತಂದೆಯಿಂದ ಅವಶ್ಯವಾಗಿ ಆಸ್ತಿಯು ಸಿಗುತ್ತದೆ. ನೀವು ನನ್ನನ್ನು ನೆನಪು ಮಾಡಿದರೆ ಸತೋಪ್ರಧಾನರಾಗಿ ಬಿಡುವಿರಿ ಎಂದು ತಂದೆಯು ತಿಳಿಸುತ್ತಾರೆ. ಏಣಿ ಚಿತ್ರದ ಬಗ್ಗೆ ತಿಳಿಸಬೇಕಾಗಿದೆ. ದಿನ-ಪ್ರತಿದಿನ ವಸ್ತು ಸುಧಾರಣೆಯಾಗುತ್ತಾ ಹೋಗುವುದು, ಇದರಬಗ್ಗೆ ಸ್ಪಷ್ಟವಾಗಿ ಬರೆಯಬೇಕಾಗಿದೆ. ಬ್ರಹ್ಮನ ಮೂಲಕ ಆದಿ ಸನಾತನ ಧರ್ಮದ ಸ್ಥಾಪನೆಯಾಯಿತು. ಆದಿ ಸನಾತನ ದೇವಿ-ದೇವತಾ ಧರ್ಮವಿದ್ದಾಗ ಮತ್ತ್ಯಾವುದೇ ಧರ್ಮವಿರಲಿಲ್ಲ, ಯಾರು ಪವಿತ್ರರಾಗಿರುತ್ತಾರೆಯೋ ಅವರೇ ಪವಿತ್ರ ಪ್ರಪಂಚಕ್ಕೆ ಬರುತ್ತಾರೆ. ಎಷ್ಟು ಶಕ್ತಿಯನ್ನು ನಿಮ್ಮಲ್ಲಿ ತುಂಬಿಕೊಳ್ಳುತ್ತೀರೋ ಅಷ್ಟು ಮೊದಲು ಬರುತ್ತೀರಿ. ಎಲ್ಲರೂ ಒಟ್ಟಿಗೆ ಬರಲು ಸಾಧ್ಯವಿಲ್ಲ. ಸತ್ಯಯುಗ-ತ್ರೇತಾಯುಗದಲ್ಲಿ ಬಹಳ ಕಡಿಮೆ ಜನಸಂಖ್ಯೆಯಿತ್ತು ನಂತರ ವೃದ್ಧಿ ಹೊಂದುತ್ತದೆ. ಪ್ರಜೆಗಳಂತೂ ಬಹಳ ಆಗುತ್ತಾರೆ. ತಿಳಿಸುವವರು ಬಹಳ ಬುದ್ಧಿವಂತರಿರಬೇಕಾಗಿದೆ. ಬೇಹದ್ದಿನ ತಂದೆಯ ಬಳಿ ಬಂದು ಆಸ್ತಿಯನ್ನು ಪಡೆದುಕೊಳ್ಳಿ, ಯಾರನ್ನು ನೀವು ಹೇ ಬಾಬಾ ಎಂದು ಕರೆಯುತ್ತೀರಿ ಅವರ ಹೆಸರು ವಾಸ್ತವದಲ್ಲಿ ಶಿವ ಎಂದಾಗಿದೆ ಎಂದು ತಿಳಿಸಿ. ಈಶ್ವರ ಅಥವಾ ಪ್ರಭು, ಭಗವಂತನೆಂದು ಹೇಳುವುದರಿಂದ ತಂದೆಯೆಂದು ತಿಳಿದುಕೊಳ್ಳುವುದೂ ಇಲ್ಲ, ಆಸ್ತಿಯು ಸಿಗುತ್ತದೆಯೆಂದು ತಿಳಿಯುವುದಿಲ್ಲ. ಶಿವ ತಂದೆ ಎನ್ನುವುದರಿಂದ ಆಸ್ತಿಯು ನೆನಪಿಗೆ ಬರುತ್ತದೆ. ಶಿವ ಪರಮಾತ್ಮಾಯನಮಃ ಎಂದು ಹೇಳುತ್ತಾರೆ, ಪರಮಾತ್ಮನ ಹೆಸರನ್ನಾದರೂ ಹೇಳಿ. ನಾಮ-ರೂಪದಿಂದ ಭಿನ್ನವಾಗಿರುವ ವಸ್ತುವು ಯಾವುದೂ ಇರುವುದಿಲ್ಲ. ಅವರ ಹೆಸರು ಶಿವ ಎಂದಾಗಿದೆ. ಕೇವಲ ಶಿವಾಯ ನಮಃ ಎಂದು ಹೇಳಿದರೆ ತಪ್ಪಾಗಿದೆ, ಶಿವ ಪರಮಾತ್ಮಾಯನಮಃ ಎಂದು ಹೇಳಬೇಕು. ಪ್ರತಿಯೊಂದು ಅಕ್ಷರವನ್ನು ಬಹಳ ಸ್ಪಷ್ಟವಾಗಿ ತಿಳಿಸಬೇಕಾಗುತ್ತದೆ. ಶಿವಾಯ ನಮಃ ಎಂದು ಹೇಳುವುದರಿಂದ ತಂದೆ ಎಂಬ ಶಬ್ಧದಲ್ಲಿರುವ ಮಜಾ ಬರುವುದಿಲ್ಲ. ಮನುಷ್ಯರಂತೂ ಎಲ್ಲಾ ಹೆಸರುಗಳನ್ನು ತಮ್ಮಮೇಲೆ ಇಟ್ಟುಕೊಂಡಿದ್ದಾರೆ. ಮನುಷ್ಯರನ್ನು ಭಗವಂತನೆಂದು ಹೇಳಲು ಸಾಧ್ಯವಿಲ್ಲವೆಂದು ನಿಮಗೆ ಗೊತ್ತಿದೆ. ಬ್ರಹ್ಮಾ-ವಿಷ್ಣು-ಶಂಕರರನ್ನೂ ಸಹ ದೇವತೆಗಳೆಂದು ಹೇಳಲಾಗುತ್ತದೆ. ತಂದೆಯು ರಚಯಿತನಾಗಿದ್ದಾರೆ ಅಂದಮೇಲೆ ಅವರೊಬ್ಬರೇ ನಿರಾಕಾರನಾಗಿದ್ದಾರೆ. ಲೌಕಿಕ ತಂದೆಯು ಮಕ್ಕಳನ್ನು ಹೇಗೆ ರಚನೆ ಮಾಡಿ ಆಸ್ತಿಯನ್ನು ಕೊಡುತ್ತಾರೆಯೋ ಹಾಗೆಯೇ ಬೇಹದ್ದಿನ ತಂದೆಯೂ ಆಸ್ತಿಯನ್ನು ಕೊಡುತ್ತಾರೆ. ಭಾರತವನ್ನು ವಿಶ್ವದ ಮಾಲೀಕನನ್ನಾಗಿ ಮಾಡುತ್ತಾರೆ. ಇಡೀ ಪ್ರಪಂಚದ ಪತಿತ-ಪಾವನನು ಒಬ್ಬರೇ ತಂದೆಯಾಗಿದ್ದಾರೆ. ಇದು ಯಾರಾದರೂ ತಿಳಿದುಕೊಂಡಿದ್ದಾರೆಯೇ! ನಮ್ಮ ಧರ್ಮ ಸ್ಥಾಪಕರು ಈ ಸಮಯದಲ್ಲಿ ಪತಿತರಾಗಿದ್ದಾರೆ, ಸ್ಮಶಾನವಾಸಿಗಳಾಗಿದ್ದಾರೆ. ಈಗ ಎಲ್ಲರ ವಿನಾಶದ ಸಮಯವಾಗಿದೆ, ತಂದೆಯೇ ಬಂದು ಎಲ್ಲರನ್ನೂ ಜಾಗೃತ ಮಾಡುತ್ತಾರೆ. ವಿನಾಶದ ಸಮಯದಲ್ಲಿ ಖುದಾ ಭಗವಂತ ಬರುತ್ತಾರೆ. ಅವರೇ ಜ್ಞಾನ ಸಾಗರನಾಗಿದ್ದಾರೆ. ಸಾಗರನ ಮಕ್ಕಳು ಭಸ್ಮೀಭೂತರಾಗಿದ್ದರು ಅಂದರೆ ಕಾಮ ಚಿತೆಯ ಮೇಲೆ ಕುಳಿತು ಕಪ್ಪಾಗಿದ್ದರು, ಕಬ್ಬಿಣದಂತಾಗಿದ್ದರು ಅಂದಾಗ ನೆನಪಿನ ಯಾತ್ರೆಯಿಂದ ಪುನಃ ಹೇಗೆ ಸುಂದರರಾದರು! ಎಂದು ಬರೆಯುತ್ತಾರೆ. ಯೋಗ ಅಕ್ಷರವನ್ನು ಎಂದು ಹೇಳುವುದರಿಂದ ಮನುಷ್ಯರು ತಬ್ಬಿಬ್ಬಾಗುತ್ತಾರೆ. ನನ್ನನ್ನು ನೆನಪು ಮಾಡುತ್ತೀರೆಂದರೆ ಅಂತ್ಯ ಮತಿ ಸೋ ಗತಿಯಾಗುವುದು ಎಂದು ತಂದೆಯು ತಿಳಿಸುತ್ತಾರೆ. ಇಷ್ಟು ಸಹಜವಾಗಿ ತಿಳಿಸಿದರೂ ಸಹ ಬುದ್ಧಿಯಲ್ಲಿ ಏಕೆ ಕುಳಿತುಕೊಳ್ಳುವುದಿಲ್ಲ? ಬಹಳ ದೇಹಾಭಿಮಾನವಿರುವ ಕಾರಣ ಧಾರಣೆಯಾಗುವುದಿಲ್ಲ. ಬಾಬಾ ಬಹಳ ಒಳ್ಳೆಯ ಯುಕ್ತಿಗಳನ್ನು ತಿಳಿಸುತ್ತಾರೆ. ಬೇಹದ್ದಿನ ತಂದೆ ಯಾರನ್ನು ನೀವು ನೆನಪು ಮಾಡುತ್ತೀರೋ, ಅವರು ಬಂದು ಏನು ಮಾಡಿದರು? ಭಾರತವನ್ನು ಸ್ವರ್ಗವನ್ನಾಗಿ ಮಾಡಿದರು. ಹದ್ದಿನ ಆಸ್ತಿಯನ್ನು ಜನ್ಮ-ಜನ್ಮಾಂತರದಿಂದ ಪಡೆಯುತ್ತಲೇ ಬಂದಿದ್ದೀರಿ, ಈಗ ಬೇಹದ್ದಿನ ತಂದೆಯಿಂದ 21 ಜನ್ಮಗಳ ಆಸ್ತಿಯನ್ನು ಪಡೆಯಿರಿ. ಸತ್ಯ-ತ್ರೇತಾ ಯುಗದಲ್ಲಿ ದೇವತೆಗಳು ರಾಜ್ಯ ಮಾಡುತ್ತಿದ್ದರು. ಸೂರ್ಯವಂಶಿ, ಚಂದ್ರವಂಶಿ, ವೈಶ್ಯ ವಂಶಿ ನಂತರ ಶೂದ್ರವಂಶಿ…. ಈ ಅಕ್ಷರಗಳನ್ನು ಬರೆಯುವುದರಿಂದ ಅವರೇ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾರೆ, ವರ್ಣಗಳಲ್ಲಿ ಬರುತ್ತಾರೆಂದು ಸಿದ್ಧವಾಗುತ್ತದೆ. ತಂದೆಯು ಎಲ್ಲರಿಗೂ ತಿಳಿಸುತ್ತಾರೆ, ಸನ್ಮುಖದಲ್ಲಿ ಕುಳಿತಿದ್ದೀರೆಂದಮೇಲೆ ಬಹಳ ಖುಷಿಯಾಗುತ್ತದೆ. ಕೆಲಕೆಲವರಿಗೆ ಅದೃಷ್ಟದಲ್ಲಿಲ್ಲ ಅಂದಮೇಲೆ ಸರ್ವೀಸನ್ನೂ ಮಾಡುವುದಿಲ್ಲ. ಸರ್ವೀಸ್ ಮಾಡುತ್ತೀರೆಂದರೆ ಹೆಸರು ಬರುತ್ತದೆ. ಮಕ್ಕಳು ಎಷ್ಟು ಬುದ್ಧಿವಂತರು, ಎಲ್ಲಾ ಕೆಲಸವನ್ನೂ ಮಾಡುತ್ತಾರೆಂದು ಹೇಳುತ್ತಾರೆ. ನಮಗೆ ಸ್ವರ್ಗದ ರಾಜ್ಯಭಾಗ್ಯವು ಸಿಗುತ್ತಿದೆ, ಇವೆಲ್ಲಾ ವಸ್ತುಗಳನ್ನೂ ಸಹ ಕೊಡುತ್ತಾರೆ. ಈ ಚಿತ್ರವು ಕುರುಡರ ಮುಂದೆ ಕನ್ನಡಿಯಂತಿದೆ. ಇದರಲ್ಲಿ ಜಾದೂ ಇತ್ಯಾದಿಯ ಮಾತೇ ಇಲ್ಲ. ಪವಿತ್ರತೆಯೇ ಮುಖ್ಯ ಮಾತಾಗಿದೆ. ಇದು ಅಂತಿಮ ಜನ್ಮವಾಗಿದೆ ಸ್ವರ್ಗದಲ್ಲಿ ಹೋಗಬೇಕೆಂದರೆ ಅವಶ್ಯವಾಗಿ ಪವಿತ್ರರಾಗಬೇಕೆಂದು ತಿಳಿಯಬೇಕು. ವಿನಾಶವು ಎದುರಿನಲ್ಲಿ ನಿಂತಿದೆ ಅಂದಮೇಲೆ ಅವಶ್ಯವಾಗಿ ಪಾವನರಾಗಬೇಕಾಗಿದೆ. ಪಾವನರಾಗಲು ಸನ್ಯಾಸಿಗಳು ಮನೆ-ಮಠವನ್ನು ಬಿಟ್ಟು ಬಿಡುತ್ತಾರೆ. ವಿನಾಶವು ಎದುರಿನಲ್ಲಿದೆ, ನನ್ನನ್ನು ನೆನಪು ಮಾಡಿದರೆ ದೋಣಿಯು ಪಾರಾಗುವುದು ಎಂದು ತಂದೆಯು ತಿಳಿಸುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ವಿನಾಶದ ಮೊದಲೇ ತಮ್ಮದೆಲ್ಲವನ್ನೂ ಸಫಲ ಮಾಡಿಕೊಳ್ಳಿ, ಇದು ವಿನಾಶದ ಸಮಯವಾಗಿದೆ. ಆದ್ದರಿಂದ ಅವಶ್ಯವಾಗಿ ಪವಿತ್ರರಾಗಬೇಕಾಗಿದೆ.

2. ದೇಹಧಾರಿಗಳಿಂದ ಮೋಹವನ್ನು ತೆಗೆದು ಮೋಹಜೀತರಾಗಬೇಕಾಗಿದೆ. ದೇಹಾಭಿಮಾನವು ಮೊದಲ ನಂಬರಿನ ಶತ್ರುವಾಗಿದೆ, ಇದರ ಮೇಲೆ ವಿಜಯವನ್ನು ಪಡೆಯಬೇಕಾಗಿದೆ. ಎಲ್ಲಾ ಸಂಗವನ್ನು ಬಿಟ್ಟು ತಂದೆಯ ಜೊತೆ ಬುದ್ಧಿಯೋಗವನ್ನು ಜೋಡಿಸಬೇಕಾಗಿದೆ.

ವರದಾನ:-

ವರ್ತಮಾನ ಸಮಯದಲ್ಲಿ ಮನನ ಶಕ್ತಿಯ ಮೂಲಕ ಆತ್ಮನಲ್ಲಿ ಸರ್ವ ಶಕ್ತಿಗಳನ್ನು ತುಂಬಿಕೊಳ್ಳುವ ಅವಶ್ಯಕತೆಯಿದೆ. ಇದಕ್ಕಾಗಿ ಅಂತರ್ಮುಖಿಯಾಗಿದ್ದು ಪ್ರತಿಯೊಂದು ಅಮೃತ ಬಿಂದುಗಳ ಬಗ್ಗೆ ಮನನ ಮಾಡುತ್ತೀರೆಂದರೆ ಬೆಣ್ಣೆ (ಶಕ್ತಿ)ಯು ಬರುತ್ತದೆ ಮತ್ತು ಶಕ್ತಿಶಾಲಿ ಆಗಿ ಬಿಡುತ್ತೀರಿ. ಇಂತಹ ಶಕ್ತಿಶಾಲಿ ಆತ್ಮರು ಅತೀಂದ್ರಿಯ ಸುಖದ ಪ್ರಾಪ್ತಿಯ ಅನುಭವ ಮಾಡುತ್ತಾರೆ, ಅವರನ್ನು ಅಲ್ಪಕಾಲದ ಯಾವುದೇ ವಸ್ತುವು ತನ್ನಕಡೆಗೆ ಆಕರ್ಷಿಸಲು ಸಾಧ್ಯವಾಗುವುದಿಲ್ಲ. ಅವರ ಮಗ್ನಾವಸ್ಥೆಯ ಮೂಲಕ ಆತ್ಮೀಯತೆಯ ಶಕ್ತಿಶಾಲಿ ಸ್ಥಿತಿಯೇನು ತಯಾರಾಗುವುದು, ಅದರಿಂದ ವಿಘ್ನಗಳ ಶಕ್ತಿಗಳು ಸಮಾಪ್ತಿ ಆಗಿ ಬಿಡುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top