19 June 2022 KANNADA Murli Today | Brahma Kumaris

Read and Listen today’s Gyan Murli in Kannada

June 18, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಕರ್ಮಾತಿತ ಸ್ಥಿತಿ ಅರ್ಥಾತ್ ಕರ್ಮ ಮತ್ತು ಫಲದ ಸ್ಪರ್ಶದ ಅತೀತ, ಸಂಕಲ್ಪದಲ್ಲೂ ಹಗುರ

♫ ಕೇಳು ಇಂದಿನ ಮುರ್ಲಿ (audio)➤

ಕರ್ಮಾತಿತ ಸ್ಥಿತಿ ಸಮೀಪಕ್ಕೆ ಬರುತ್ತಿದೆಯೇ? ಕರ್ಮವೂ ಸಹ ವೃದ್ಧಿಯನ್ನು ಪಾಪ್ತ್ತಿ ಮಾಡಿಕೊಳ್ಳುತ್ತಿದೆ. ಆದರೆ ಕರ್ಮಾತೀತ ಅರ್ಥಾತ್ ಕರ್ಮದ ಯಾವುದೇ ಬಂಧನದ ಸ್ಪರ್ಶದಿಂದ ಅಲಿಪ್ತ. ಇದೇ ರೀತಿ ಅನುಭವ ಹೆಚ್ಚುತ್ತಿರಲಿ. ಯಾವ ರೀತಿ ನಾನು ಆತ್ಮ ಈ ಶರೀರದ ಮೂಲಕ ಕರ್ಮ ಮಾಡಿದೆ ಅಲ್ಲವೇ, ಅದೇ ರೀತಿ ಅಲಿಪ್ತತೆ ಇರಬೇಕು. ಕಾರ್ಯದ ಸ್ಪರ್ಶ ಮಾಡಬಾರದು ಮತ್ತು ಕಾರ್ಯ ಮಾಡಿದ ಮೇಲೆ ಅದರ ಪರಿಣಾಮ ಏನಾಯಿತು ಅದರ ಫಲದ ಪ್ರಾಪ್ತಿ ಮಾಡುವುದರಲ್ಲಿಯೂ ಅಲಿಪ್ತ. ಕರ್ಮದ ಫಲ ಅರ್ಥಾತ್ ಯಾವ ಪರಿಣಾಮ ಬರುತ್ತದೆ ಅದರ ಸ್ಪರ್ಶವೂ ಆಗಬಾರದು, ಸಂಪೂರ್ಣ ನ್ಯಾರಾತನದ ಅನುಭವ ಆಗಬೇಕು. ಹೇಗೆಂದರೆ ಬೇರೆ ಯಾರೋ ಮಾಡಿಸಿದರು ನಾನು ಮಾಡಿದೆ. ಯಾರೊ ಮಾಡಿಸಿದರು ನಾನು ನಿಮಿತ್ತ ಆಗಿ ಮಾಡಿದೆ. ಆದರೆ ನಿಮಿತ್ತ ಆಗುವುದರಲ್ಲಿಯೂ ನ್ಯಾರಾತನ. ಈ ರೀತಿ ಕರ್ಮಾತೀತ ಸ್ಥಿತಿ ಹೆಚ್ಚುತ್ತಾ ಹೋಗುತ್ತದೆ – ಇಂತಹ ಅನುಭವ ಆಗುತ್ತದೆಯೇ? ಮಹಾರಥಿಗಳ ಸ್ಥಿತಿ ಅನ್ಯರಿಗಿಂತ ಭಿನ್ನ ಮತ್ತು ಪ್ರಿಯ ಸ್ಪಷ್ಟ ಆಗುತ್ತಿದೆ ಅಲ್ಲವೇ. ಯಾವ ರೀತಿ ಬ್ರಹ್ಮಾ ತಂದೆ ಸ್ಪಷ್ಟ ಆಗಿದ್ದರು, ಅದೇ ರೀತಿ ನಂಬರವಾರ ನೀವು ನಿಮಿತ್ತ ಆತ್ಮರೂ ಸಹ ಸಾಕಾರದಲ್ಲಿ ಸ್ಪಷ್ಟ ಆಗುತ್ತೀರಿ. ಕರ್ಮಾತೀತ ಅರ್ಥಾತ್ ನ್ಯಾರಾ ಮತ್ತು ಪ್ಯಾರಾ. ಕರ್ಮ ನೀವೂ ಮಾಡುತ್ತೀರಿ ಮತ್ತು ಅನ್ಯರೂ ಮಾಡುತ್ತಾರೆ ಆದರೆ ನೀವು ಮಾಡುವುದರಲ್ಲಿ ಅಂತರ ಇದೆ. ಸ್ಥಿತಿಯಲ್ಲಿ ಅಂತರ ಇದೆ. ಏನೆಲ್ಲ ಕಳೆಯಿತು ಮತ್ತು ಭಿನ್ನ ಆಗಿಬಿಡುವುದು. ಕರ್ಮ ಮಾಡುವುದು ಮತ್ತು ಅದನ್ನು ಮಾಡಿದ ಮೇಲೆ ಏನೂ ಮಾಡಿಲ್ಲ ಎನ್ನುವ ಅನುಭವ ಆಗಬೇಕು. ಮಾಡಿಸುವವರು ಮಾಡಿಸಿಕೊಂಡರು. ಇಂತಹ ಸ್ಥಿತಿಯ ಅನುಭವ ಮಾಡುತ್ತಿರುವಿರಿ. ಕರ್ಮ ಮಾಡುತ್ತಿದ್ದರೂ ತನುವಿನಿಂದಲೂ ಹಗುರ, ಮನಸ್ಸಿನ ಸ್ಥಿತಿಯಲ್ಲಿಯೂ ಹಗುರ. ಕರ್ಮದ ಪರಿಣಾಮ ಮನಸ್ಸಿನ ಸ್ಥಿತಿಯನ್ನು ಸೆಳೆಯುತ್ತದೆ. ಇಂತಹ ಸ್ಥಿತಿ ಇದೆಯೇ? ಎಷ್ಟು ಕಾರ್ಯ ಹೆಚ್ಚುತ್ತದೆ ಅಷ್ಟು ಹಗುರತೆಯೂ ಹೆಚ್ಚುವುದು. ಕರ್ಮ ತನ್ನ ಕಡೆ ಆಕರ್ಷಿತ ಮಾಡುವುದಿಲ್ಲ. ಆದರೆ ಮಾಲಿಕ ಆಗಿ ಕರ್ಮ ಮಾಡಿಸುವವರು ಮಾಡಿಸುತ್ತಿರುವರು ಮತ್ತು ನಿಮಿತ್ತ ಮಾಡುವವರು ನಿಮಿತ್ತ ಆಗಿ ಮಾಡುತ್ತಿರುವರು.

ಆತ್ಮದ ಹಗುರತೆಯ ಚಿನ್ಹೆ ಆಗಿದೆ -–ಆತ್ಮದ ವಿಶೇಷ ಶಕ್ತಿಗಳೇನಿವೆ ಮನಸ್ಸು, ಬುದ್ಧಿ, ಸಂಸ್ಕಾರ, ಇವು ಮೂರೂ ಈ ರೀತಿ ಹಗುರ ಆಗುವುದು. ಸಂಕಲ್ಪವೂ ಸಹ ಪೂರ್ಣ ಹಗುರ ಸ್ಥಿತಿಯ ಅನುಭವ ಮಾಡಿಸುವುದು. ಬುದ್ಧಿಯ ನಿರ್ಣಯ ಶಕ್ತಿಯೂ ಯಾವ ತರಹ ನಿರ್ಣಯ ಮಾಡುವುದು ಅಂದರೆ ಏನೂ ಮಾಡಿಯೇ ಇಲ್ಲ ಎನ್ನುವಂತೆ, ಮತ್ತು ಯಾವುದೇ ಸಂಸ್ಕಾರ ತನ್ನ ಕಡೆ ಆಕರ್ಷಿತ ಮಾಡುವುದಿಲ್ಲ. ತಂದೆಯ ಸಂಸ್ಕಾರ ಕೆಲಸ ಮಾಡುತ್ತಿದೆ ಎನಿಸುವುದು. ಈ ಮನಸ್ಸು-ಬುದ್ಧಿ-ಸಂಸ್ಕಾರ, ಸೂಕ್ಷ್ಮ ಶಕ್ತಿಗಳೇನಿವೆ ಮೂರರಲ್ಲಿಯೂ ಹಗುರ ಅನುಭವ ಮಾಡುವಿರಿ. ತಂದೆ ಹೇಗೊ ಹಾಗೆ ಮಕ್ಕಳು ನ್ಯಾರಾ ಮತ್ತು ಪ್ಯಾರಾ ಆಗಿದ್ದಾರೆ ಎನ್ನುವ ಮಾತು ಎಲ್ಲರ ಮನಸ್ಸಿನಿಂದ, ಮುಖದಿಂದ ಸ್ವತಃ ಬರುವುದು. ಏಕೆಂದರೆ ದಿನಕಳೆದಂತೆ ಹೊರಗಿನ ವಾತಾವರಣ ಭಾರ ಆಗುವುದು. ಹೊರಗಿನ ವಾತಾವರಣ ಭಾರ ಆದಷ್ಟು ಅನನ್ಯ ಮಕ್ಕಳ ಸಂಕಲ್ಪ, ಕರ್ಮ, ಸಂಬಂಧ ಹಗುರ ಆಗುವುದು ಮತ್ತು ಈ ಹಗುರತೆಯ ಕಾರಣದಿಂದ ಎಲ್ಲ ಕಾರ್ಯಗಳೂ ಹಗುರವಾಗಿ ನಡೆಯುವುದು. ವಾಯುಮಂಡಲ ತಮೋಪ್ರಧಾನ ಆಗಿರುವ ಕಾರಣ ಇನ್ನೂ ಭಿನ್ನ ಭಿನ್ನ ಪ್ರಕಾರದಿಂದ ಭಾರೀತನದ ಅನುಭವ ಆಗುವುದು. ಪ್ರಕೃತಿಯದು ಸಹ ಭಾರೀತನ ಆಗುವುದು. ಮನುಷ್ಯಾತ್ಮರ ವೃತ್ತಿಯ ಭಾರೀತನವೂ ಇರುವಿದು. ಇದರಿಂದ ಸಹ ಬಹಳ ಹಗುರತನವೂ ಸಹ ಅನ್ಯರಿಗೂ ಹಗುರತನದ ಅನುಭವ ಮಾಡಿಸುವುದು. ಒಳ್ಳೆಯದು ಎಲ್ಲವೂ ಸರಿಯಾಗಿ ನಡೆಯುತ್ತಿದೆ ಅಲ್ಲವೇ. ಕಾರ್ಯವ್ಯವಹಾರದ ಪ್ರಭಾವ ನಿಮ್ಮ ಮೇಲೆ ಆಗಬಾರದು. ನಿಮ್ಮ ಹಗುರತೆಯ ಸ್ಥಿತಿಯ ಪ್ರಭಾವ, ನೀವು ಏನೆಲ್ಲ ಮಾಡುತ್ತೀರಿ, ಕೇಳುತ್ತೀರಿ, ಕಾರ್ಯ ವ್ಯವಹಾರದ ಮೇಲೆ ಪ್ರಭಾವ ಆಗುತ್ತದೆ. ಕಾರ್ಯದ ಏರುಪೇರಿನ ಪ್ರಭಾವ ನಿಮ್ಮ ಮೇಲೆ ಆಗುವುದಿಲ್ಲ. ಅಚಲ ಸ್ಥಿತಿ ಕಾರ್ಯವನ್ನೂ ಅಚಲ ಮಾಡುತ್ತದೆ. ಎಲ್ಲ ರೀತಿಯಲ್ಲಿಯೂ ಅಸಂಭವ ಕಾರ್ಯ ಸಂಭವ ಮತ್ತು ಸಹಜ ಆಗುತ್ತಿದೆ ಮತ್ತು ಆಗುತ್ತಿರುತ್ತದೆ. ಒಳ್ಳೆಯದು.

19/6/22 ಪ್ರಾತಃಮುರಳಿ ಓಂ ಶಾಂತಿ “ಅವ್ಯಕ್ತಬಾಪ್ದಾದಾ” ಮಧುಬನ ರಿವ್ಶೆಜ್: 10/4/91

ಹೃದಯ ಸಿಂಹಾಸನಾಸೀನ ಮತ್ತು ವಿಶ್ವ ಸಿಂಹಾಸನಾಸೀನ ಆಗಲು ಸುಖ ಕೊಡಿ ಮತ್ತು ಸುಖ ಪಡೆಯಿರಿ

ಇಂದು ವಿಶ್ವದ ಮಾಲಿಕ, ತಮ್ಮ ಬಾಲಕ ಸೋ ಮಾಲಿಕ ಮಕ್ಕಳನ್ನು ನೋಡುತಿರುವರು. ಎಲ್ಲ ಮಕ್ಕಳು ಈ ಸಮಯದಲ್ಲಿ ಸ್ವಯಂನ ಮಾಲೀಕ ಆಗಿರುವರು ಮತ್ತು ಅನೇಕ ಜನ್ಮ ವಿಶ್ವದ ಮಾಲೀಕ ಆಗಿರುವರು. ಪರಮಾತ್ಮ-ಬಾಲಕ ಸೋ ಮಾಲಿಕ ಆಗಿಬಿಡುತ್ತೀರಿ. ಬ್ರಾಹ್ಮಣ ಆತ್ಮಗಳು ಅರ್ಥಾತ್ ಮಾಲಿಕ ಆತ್ಮಗಳು. ಈ ಸಮಯದಲ್ಲಿ ಸರ್ವ ಕರ್ಮೇಂದ್ರಿಯಗಳಿಗೆ ಮಾಲಿಕ ಆಗಿರುವಿರಿ, ಅಧೀನ ಆತ್ಮರು ಅಲ್ಲ. ಅಧಿಕಾರಿ ಅರ್ಥಾತ್ ಮಾಲಿಕ ಆಗಿರುವಿರಿ. ಕರ್ಮೇಂದ್ರಿಯಗಳಿಗೆ ವಶೀಭೂತರಲ್ಲ, ಆದ್ದರಿಂದ ಬಾಲಕ ಸೋ ಮಾಲಿಕ ಆಗಿರುವಿರಿ. ಬಾಲಕತನದ ಈಶ್ವರೀಯ ನಶೆಯ ಅನುಭವ ಮಾಡುತ್ತೀರಿ ಮತ್ತು ಸ್ವರಾಜ್ಯದ ಮಾಲಿಕತನದ ಅನುಭವವನ್ನೂ ಸಹ ಮಾಡುತ್ತೀರಿ. ಡಬಲ್ ನಶೆ ಇದೆ. ನಶೆಯ ಚಿನ್ಹೆ ಆಗಿದೆ ಅವಿನಾಶಿ ಆತ್ಮಿಕ ಖುಷಿ. ಸದಾ ನಿಮ್ಮನ್ನು ನೀವು ವಿಶ್ವದಲ್ಲಿ ಸೌಭಾಗ್ಯಶಾಲಿ ಆತ್ಮ ಎಂದು ತಿಳಿದುಕೊಳ್ಳುತ್ತೀರಾ? ವಾಹ್ ನನ್ನ ಶ್ರೇಷ್ಠ ಭಾಗ್ಯ ಅರ್ಥಾತ್ ಶ್ರೇಷ್ಠ ಅದೃಷ್ಟ! ಸೌಭಾಗ್ಯಶಾಲಿಗಳು ಆಗಿರುವಿರಿ ಮತ್ತು ಸದಾ ಖುಷಿಯ ಔಷಧಿಯನ್ನು ತಿನ್ನುತ್ತೀರಿ ಮತು ತಿನ್ನಿಸುತ್ತೀರಿ. ಜೊತೆ-ಜೊತೆಯಲ್ಲಿ ಸದಾ ಖುಷಿಯ ಉಯ್ಯಾಲೆಯಲ್ಲಿ ಆಡುತ್ತಿರುತ್ತೀರಿ. ಅನ್ಯರಿಗೂ ಖುಷಿಯ ಮಹಾದಾನವನ್ನು ಕೊಟ್ಟು ಸೌಭಾಗ್ಯಶಾಲಿಯನ್ನಾಗಿ ಮಾಡುತ್ತೀರಿ. ಇಂತಹ ಅಮೂಲ್ಯ ವಜ್ರ ಸಮಾನ ಜೀವನ ಮಾಡಿಕೊಳ್ಳುವವರಾಗಿರುವಿರಿ. ಆಗಿರುವಿರೊ ಅಥವಾ ಇನ್ನೂ ಆಗಬೇಕಾಗಿದೆಯೋ? ಬ್ರಾಹ್ಮಣ ಜೀವನದ ಅರ್ಥವೇ ಆಗಿದೆ ಖುಷಿಯಲ್ಲಿ ಇರುವುದು, ಖುಷಿಯ ಔಷಧಿಯನ್ನು ತಿನ್ನುವುದು ಮತ್ತು ಖುಷಿಯ ಉಯ್ಯಾಲೆಯಲ್ಲಿ ತೂಗುವುದು. ಇಂತಹ ಬ್ರಾಹ್ಮಣರಾಗಿರುವಿರಿ ಅಲ್ಲವೇ? ಖುಷಿಯ ಹೊರತಾಗಿ ಬೇರೆ ಜೀವನದಲ್ಲಿ ಇನ್ನೇನಿದೆ! ಜೀವನವೇ ಖುಷಿ ಆಗಿದೆ. ಖುಷಿ ಇಲ್ಲವಾದರೆ ಬ್ರಾಹ್ಮಣ ಜೀವನವೇ ಇಲ್ಲ. ಖುಷಿಯಲ್ಲಿರುವುದೇ ಜೀವನವಾಗಿದೆ.

ಇಂದು ಬಾಪದಾದಾ ಸರ್ವ ಮಕ್ಕಳ ಪುಣ್ಯದ ಖಾತೆ ನೋಡುತ್ತಿದ್ದರು. ಏಕೆಂದರೆ ನೀವೆಲ್ಲರೂ ಪುಣ್ಯಾತ್ಮರಾಗಿರುವಿರಿ. ಪುಣ್ಯದ ಖಾತೆಯನ್ನು ಅನೇಕ ಜನ್ಮಗಳವರೆಗೆ ಜಮಾ ಮಾಡಿಕೊಳ್ಳುತ್ತಿರುವಿರಿ. ಇಡೀ ದಿನದಲ್ಲಿ ಎಷ್ಟು ಪುಣ್ಯವನ್ನು ಜಮಾ ಮಾಡಿಕೊಂಡಿರಿ? ಇದನ್ನು ಸ್ವಯಂ ಸಹ ಚೆಕ್ ಮಾಡಿಕೊಳ್ಳಲು ಸಾಧ್ಯ ಇದೆ ಅಲ್ಲವೇ. ಒಂದಾಗಿದೆ ದಾನ ಮಾಡುವುದು ಮತ್ತು ಇನ್ನೊಂದಾಗಿದೆ ಪುಣ್ಯ ಮಾಡುವುದು. ದಾನಕ್ಕಿಂತಲೂ ಪುಣ್ಯದ ಮಹತ್ವ ಹೆಚ್ಚು ಇದೆ. ಪುಣ್ಯದ ಕರ್ಮ ನಿಸ್ವಾರ್ಥ ಸೇವಾಭಾವದ ಕರ್ಮ ಆಗಿದೆ. ಪುಣ್ಯ ಕರ್ಮ ತೋರಿಕೆಗೆ ಇರುವುದಿಲ್ಲ ಆದರೆ ಹೃತಪೂರ್ವಕ ಆಗಿರುತ್ತದೆ. ದಾನ ತೋರಿಕೆಗೂ ಸಹ ಇರುತ್ತದೆ, ಹೃತ್ತಪೂರ್ವಕವಾಗಿಯೂ ಇರುತ್ತದೆ. ಪುಣ್ಯ ಕರ್ಮ ಅರ್ಥಾತ್ ಅವಶ್ಯಕತೆಯ ಸಮಯದಲ್ಲಿ ಯಾವುದೇ ಆತ್ಮಕ್ಕೆ ಸಹಯೋಗಿ ಆಗುವುದು. ಅರ್ಥಾತ್ ಉಪಯೋಗ ಆಗುವುದು. ಪುಣ್ಯ ಕರ್ಮ ಮಾಡುವ ಆತ್ಮಕ್ಕೆ ಅನೇಕ ಆತ್ಮರ ಹೃದಯ ಪೂರ್ವಕವಾದ ಆಶೀರ್ವಾದಗಳು ಪ್ರಾಪ್ತ ಆಗುತ್ತವೆ. ಕೇವಲ ಮುಖದಿಂದ ಧನ್ಯವಾದ ಅಥವಾ ವಂದನೆ ಎಂದು ಹೇಳುವುದಲ್ಲ ಹೇಳುತ್ತಾರೆ ಆದರೆ ಹೃದಯಪೂರ್ವಕವಾದ ಆಶೀರ್ವಾದಗಳು ಗುಪ್ತವಾಗಿ ಜಮಾ ಆಗುತ್ತಿರುತ್ತದೆ. ಪುಣ್ಯಾತ್ಮ ಪರಮಾತ್ಮನ ಆಶೀರ್ವಾದ, ಆತ್ಮರ ಆಶೀರ್ವಾದ – ಪ್ರಾಪ್ತ ಆಗಿರುವ ಇಂತಹ ಪ್ರತ್ಯಕ್ಷ ಫಲದಿಂದ ಭರ್ಪೂರ್ ಆಗಿರುತ್ತಾರೆ. ಪುಣ್ಯಾತ್ಮರ ದೃಷ್ಟಿ, ವೃತ್ತಿ, ಅನ್ಯರಿಗೂ ಆಶೀರ್ವಾದದ ಅನುಭವ ಮಾಡಿಸುತ್ತದೆ. ಪುಣ್ಯಾತ್ಮರ ಚೆಹರೆಯಲ್ಲಿ ಸದಾ ಪ್ರಸನ್ನತೆ, ಸಂತುಷ್ಟತೆಯ ಹೊಳಪು ಕಂಡು ಬರುತ್ತದೆ. ಪುಣ್ಯಾತ್ಮ ಪ್ರಾಪ್ತಿ ಆಗಿರುವ ಫಲದ ಕಾರಣದಿಂದಾಗಿ ಅಭಿಮಾನ ಮತ್ತು ಅಪಮಾನದಿಂದ ದೂರ ಇರುತ್ತಾರೆ. ಏಕೆಂದರೆ ಅವರು ಭರಪೂರ ಚಕ್ರವರ್ತಿಯಾಗಿರುತ್ತಾರೆ. ಪ್ಯಣ್ಯಾತ್ಮ ಪುಣ್ಯದ ಶಕ್ತಿಯ ಮೂಲಕ ಸ್ವಯಂನ ಪ್ರತಿ ಸಂಕಲ್ಪವನ್ನು, ಎಲ್ಲ ಸಮಯದ ಹಲಚಲ್ನ್ನು, ಪ್ರತಿ ಕರ್ಮವನ್ನು ಸಫಲ ಮಾಡುವಂತಹರಾಗಿರುತ್ತಾರೆ. ಪುಣ್ಯದ ಖಾತೆ ಜಮಾ ಆಗುತ್ತದೆ. ಜಮಾ ಆಗಿರುವುದರ ಚಿನ್ಹೆ ಆಗಿದೆ – ವ್ಯರ್ಥದ ಸಮಾಪ್ತಿ. ಇಂತಹ ಪ್ಯಣ್ಯಾತ್ಮ ವಿಶ್ವ ರಾಜ್ಯ ಸಿಂಹಾಸನದಲ್ಲಿ ಆಸೀನರಾಗುತ್ತಾರೆ. ಆದ್ದರಿಂದ ನಿಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಿ ಎಲ್ಲಿಯವರೆಗೆ ಪ್ಯಣ್ಯಾತ್ಮ ಆಗಿದ್ದೇನೆ? ಎಲ್ಲರೂ ಪ್ಯಣ್ಯಾತ್ಮ ಆಗಿರುವಿರಾ ಎಂದು ಕೇಳಿದರೆ ಎಲ್ಲರೂ ಹಾ ಜೀ ಎಂದು ಹೇಳುತ್ತೀರಿ. ಎಲ್ಲರೂ ಪುಣ್ಯಾತ್ಮರೇ ಆಗಿರುವಿರಿ. ಆದರೆ ನಂಬರವಾರ್ ಆಗಿರುವಿರೊ ಅಥವಾ ಎಲ್ಲರೂ ನಂಬರ ಒನ್ ಆಗಿರುವಿರೊ? ನಂಬರವಾರ ಅಲ್ಲವೇ. ಸತ್ಯಯುಗ-ತ್ರೇತಾದ ವಿಶ್ವದ ಸಿಂಹಾಸನದ ಮೇಲೆ ಎಷ್ಟು ಕುಳಿತುಕೊಳ್ಳುವರು? ಎಲ್ಲರೂ ಒಟ್ಟಿಗೆ ಕುಳಿತುಕೊಳ್ಳುವಿರಾ? ಅಂದ ಮೇಲೆ ನಂಬರವಾರ್ ಅಲ್ಲವೇ. ನಂಬರ್ ಏಕೆ ಆಗುತ್ತದೆ – ಕಾರಣ? ಮಕ್ಕಳ ಒಂದು ವಿಶೇಷ ಮಾತನ್ನು ಬಾಪದಾದಾ ಚೆಕ ಮಾಡಿದರು. ಮತ್ತು ಅದೇ ಮಾತು ನಂಬರ ಒನ್ ಆಗುವುದರಲ್ಲಿ ಅಡಚಣೆ ಉಂಟು ಮಾಡುತ್ತದೆ.

ಈಗ ತಪಸ್ಯಾ ವರ್ಷದಲ್ಲಿ ಎಲ್ಲರ ಲಕ್ಷ್ಯ ಸಂಪೂರ್ಣ ಆಗುವುದಾಗಿದೆಯೋ ಅಥವಾ ನಂಬರವಾರ್ ಆಗುವುದಾಗಿದೆಯೋ? ಸಂಪೂರ್ಣ ಆಗಬೇಕಲ್ಲವೇ. ನೀವೆಲ್ಲರೂ ಒಂದು ಸ್ಲೋಗನ್ ಹೇಳುತ್ತೀರಿ ಮತ್ತು ಬರೆದು ಸಹ ಹಾಕುತ್ತೀರಿ. ಅದಾಗಿದೆ – ಸುಖ ಕೊಡಿ ಮತ್ತು ಸುಖ ಪಡೆಯಿರಿ. ದುಃಖ ಕೊಡಬೇಡಿ-ದುಃಖ ತೆಗೆದುಕೊಳ್ಳಬೇಡಿ. ಈ ಸ್ಲೋಗನ್ ಪಕ್ಕಾ ಆಗಿದೆಯೇ. ಹಾಗಾದರೆ ಪರಿಣಾಮದಲ್ಲಿ ಏನು ನೋಡಿದ್ದೇನು? ದುಃಖ ಕೊಡಬೇಡಿ – ಇದರ ಕಡೆ ಹೆಚ್ಚಿನವರ ಗಮನ ಇದೆ. ಆದರೆ ಅರ್ಧ ಸ್ಲೋಗನ್ ಸರಿಯಾಗಿದೆ. ಕೊಡುವುದರ ಬಗ್ಗೆ ವಿಚಾರ ಮಾಡುತ್ತೀರಿ, ಕೊಡಬಾರದು. ಆದರೆ ತೆಗೆದುಕೊಳ್ಳುವಾಗ ಹೇಳುತ್ತೀರಿ ಅವರು ಕೊಟ್ಟರು ಅದ್ದರಿಂದ ಹೀಗಾಯಿತು. ಇವರು ಹೀಗೆ ಹೇಳಿದರು, ಅದರಿಂದ ಹೀಗಾಯಿತು. ಈ ರೀತಿ ನಿರ್ಣಯ ಕೊಡುತ್ತೀರಿ ಅಲ್ಲವೆ. ನಿಮ್ಮ ವಕೀಲ ನೀವೇ ಆಗಿ ನಿಮ್ಮ ಕೇಸನಲ್ಲಿ ಹೀಗೆ ಹೇಳುತ್ತೀರಿ. ಆದ್ದರಿಂದ ಅರ್ಧ ಸ್ಲೋಗನ್ ಕಡೆ ಗಮನ ಸರಿಯಾಗಿದೆ, ಮತ್ತೂ ಅದನ್ನು ಅಂಡರ್ಲೈನ್ ಮಾಡಿಕೊಳ್ಳಬೇಕು. ಆದರೂ ಅರ್ಧ ಸ್ಲೋಗನ್ ಕಡೆ ಗಮನ ಇದೆ ಆದರೆ ಇನ್ನರ್ಧ ಸ್ಲೋಗನ್ ಏನಿದೆ ಅದರ ಕಡೆ ಹೆಸರಿಗೆ ಮಾತ್ರ ಗಮನ ಇದೆ. ಅವರು ಕೊಟ್ಟರು ಆದರೆ ನೀವು ಏಕೆ ತೆಗೆದಿಕೊಂಡಿರಿ? ತೆಗೆದುಕೊಳ್ಳಲು ಯಾರು ಹೇಳಿದರು? ದುಃಖ ತೆಗೆದುಕೊಳ್ಳಿ, ದುಃಖದಿಂದ ಜೋಳಿಗೆ ತುಂಬಿಕೊಳ್ಳು ಎನ್ನುವುದು ತಂದೆಯ ಶ್ರೀಮತ ಆಗಿದೆ ಏನು? ಆದ್ದರಿಂದ ದುಃಖ ಕೊಡಬೇಡಿ-ದುಃಖ ತೆಗೆದುಕೊಳ್ಳಬೇಡಿ. ಆಗ ಪ್ಯಣ್ಯಾತ್ಮ ಆಗುವಿರಿ, ತಪಸ್ವಿ ಆಗುವಿರಿ. ತಪಸ್ವಿ ಅರ್ಥಾತ್ ಪರಿವರ್ತನೆ ಆದ್ದರಿಂದ ಅವರ ದುಃಖವನ್ನು ನೀವು ಸುಖದ ರೂಪದಲ್ಲಿ ಸ್ವೀಕಾರ ಮಾಡಿರಿ. ಪರಿವರ್ತನೆ ಮಾಡಿಕೊಳ್ಳಿ ಆಗ ತಪಸ್ವೀ ಎಂದು ಹೇಳಲು ಸಾಧ್ಯ. ಗ್ಲಾನಿಯನ್ನು ಪ್ರಶಂಸೆ ಎಂದು ತಿಳಿಯಿರಿ. ಆಗ ಪ್ಯಣ್ಯಾತ್ಮ ಎಂದು ಹೇಳಲು ಸಾಧ್ಯ. ಜಗದಂಬಾ ತಾಯಿ ಸದಾ ಇದೇ ಪಾಠವನ್ನು ಮಕ್ಕಳಿಗೆ ಪಕ್ಕಾ ಮಾಡಿಸಿದರು ಏನೆಂದರೆ ಗ್ಲಾನಿ ಮಾಡುವ ಅಥವಾ ದುಃಖ ಕೊಡುವ ಆತ್ಮಕ್ಕೂ ಸಹ ದಯಾಹೃದಯೀ, ದಯಾ ದೃಷ್ಟಿಯಿಂದ ನೋಡಿ. ಗ್ಲಾನಿಯ ದೃಷ್ಟಿಯಿಂದ ಅಲ್ಲ. ಗ್ಲಾನಿ ಮಾಡುವವರನ್ನು ಹೃದಯದಿಂದ ಆಲಿಂಗನ ಮಾಡಿಕೊಳ್ಳಿ. ಹೊರಗಿನಿಂದ ಅಲ್ಲ. ಆದರೆ ಮನಸ್ಸಿನಿಂದ. ಹೀಗೆ ಪುಣ್ಯದ ಖಾತೆ ಜಮಾ ಆಗುವುದರಲ್ಲಿ ಇಂತಹ ಮಾತುಗಳು ವಿಘ್ನ ರೂಪ ಆಗುತ್ತದೆ. ನಾನು ದುಃಖ ತೆಗೆದುಕೊಳ್ಳಲೂಬಾರದು. ಕೊಡುವುದಂತೂ ಇಲ್ಲವೇ ಇಲ್ಲ. ಒಳ್ಳೆಯ ವಸ್ತು ಅಲ್ಲ ಎಂದ ಮೇಲೆ ಕಸವನ್ನು ತೆಗೆದುಕೊಂಡು ಏಕೆ ಜಮಾ ಮಾಡಿಕೊಳ್ಳುತ್ತೀರಿ? ದುಃಖ ತೆಗೆದುಕೊಂಡಿರಿ, ಕಸ ಜಮಾ ಆಯಿತು, ಹಾಗಾದರೆ ಕಸದಿಂದ ಏನು ಹುಟ್ಟುತ್ತದೆ. ಪಾಪದ ಅಂಶ ರೂಪಿ ಕೀಟಾಣುಗಳು. ಈಗ ದೊಡ್ಡ ಪಾಪಗಳನ್ನು ಮಾಡುವುದಿಲ್ಲ ಅಲ್ಲವೇ. ಈಗ ಪಾಪದ ಅಂಶ ಉಳಿದಿದೆ. ಆದರೆ ಅಂಶವೂ ಇರಬಾರದು. ಕೆಲವು ಮಕ್ಕಳು ಬಹಳ ಮಧುರ ಮಧುರವಾದ ಮಾತುಗಳನ್ನು ಹೇಳುತ್ತಾರೆ. ಆತ್ಮಿಕ ವಾರ್ತಾಲಾಪವನ್ನು ಎಲ್ಲರೂ ಮಾಡುತ್ತೀರಿ ಅಲ್ಲವೇ? ಒಂದು ಸ್ಲೋಗನ್ ಅಂತೂ ಎಲ್ಲರಿಗೂ ಪಕ್ಕಾ ಆಗಿಬಿಟ್ಟಿದೆ. ಇಷ್ಟ ಇರಲಿಲ್ಲ, ಆದರೂ ಆಗಿಬಿಟ್ಟಿತು. . . ನೀವು ಇಷ್ಟ ಪಡದಿದ್ದರೆ ಇನ್ನು ಯಾರು ಇಷ್ಟ ಪಟ್ಟಿದ್ದರು? ಆಗಿಬಿಟ್ಟಿತು ಎಂದು ಹೇಳುತ್ತೀರಿ! ಇನ್ಯಾವುದಾದರೂ ಆತ್ಮ ಇದೆಯೇ! ಆಗಬಾರದು ಆದರೆ ಆಗುತ್ತದೆ – ಇದನ್ನು ಯಾರು ಹೇಳುತ್ತಾರೆ. ಅನ್ಯ ಯಾವುದಾದರೂ ಆತ್ಮ ಹೇಳುತ್ತದೊ ಅಥವಾ ನೀವು ಹೇಳುತ್ತೀರೊ. ಆದ್ದರಿಂದ ಇಂತಹ ಮಾತುಗಳಿಂದ ತಪಸ್ಸನ್ನು ಸಿದ್ಧ ಮಾಡಲು ಸಾಧ್ಯವಿಲ್ಲ. ಯಾವುದು ಆಗಬಾರದು, ಯಾವುದನ್ನು ಮಾಡಬಾರದು ಅದು ಆಗದೇ ಇರುವುದೇ ಪುಣ್ಯಾತರ ಚಿನ್ಹೆ ಆಗಿದೆ. ಬಾಪದಾದಾರವರ ಬಳಿ ನಿತ್ಯವೂ ಮಕ್ಕಳ ಇಂತಹ ಅನೇಕ ಕಥೆಗಳು ಬರುತ್ತವೆ. ಹೇಳುವಾಗ ಕೇಳುತ್ತಲೇ ಇರಬೇಕು ಅಷ್ಟು ಅಭಿರುಚಿಯಿಂದ ಕಥೆಗಳನ್ನು ಹೇಳುತ್ತೀರಿ. ಕೆಲವರು ದೊಡ್ಡ ಕಥೆ ಹೇಳುವ ಅಭ್ಯಾಸಿಗಳಾಗಿದ್ದಾರೆ ಕೆಲವರು ಚಿಕ್ಕದನ್ನು ಹೇಳುತ್ತಾರೆ. ಆದರೆ ಕಥೆಗಳನ್ನು ಬಹಳ ಹೇಳುತ್ತಾರೆ. ಇಂದು ಈ ವರ್ಷದ ಅಂತಿಮ ಮಿಲನ ಆಗಿದೆ ಅಲ್ಲವೇ. ಎಲ್ಲರೂ ಮುಳುಗು ಹಾಕಲು ಬಂದಿರುವಿರಿ ಅಲ್ಲವೇ. ಭಕ್ತಿ ಮಾರ್ಗದಲ್ಲಿಯೂ ಮುಳುಗು ಹಾಕುವಾಗ ಒಂದಲ್ಲಾ ಒಂದು ಸಂಕಲ್ಪವನ್ನು ಅವಶ್ಯ ಮಾಡುತ್ತಾರೆ. ಆದ್ದರಿಂದ ತಪಸ್ಯಾ ವರ್ಷದಲ್ಲಿಯೂ ಈ ಸಂಕಲ್ಪ ಮಾಡಿರಿ ಏನೆಂದರೆ ಇಡೀ ದಿನದಲ್ಲಿ ಸಂಕಲ್ಪದ ಮೂುಲಕ, ಮಾತಿನ ಮೂಲಕ, ಕರ್ಮದ ಮೂಲಕ ಪುಣ್ಯಾತ್ಮ ಆಗಿ ಪುಣ್ಯ ಮಾಡುತ್ತೇವೆ ಮತ್ತು ಪುಣ್ಯದ ಚಿನ್ಹೆ ಏನೆಂದರೆ ಪುಣ್ಯದ ಪ್ರತ್ಯಕ್ಷ ಫಲ ಆಗಿದೆ ಪ್ರತಿಯೊಂದು ಆತ್ಮನ ಆಶೀರ್ವಾದ. ಪ್ರತಿ ಸಂಕಲ್ಪದಲ್ಲಿ ಪುಣ್ಯ ಜಮಾ ಆಗಬೇಕು. ಮಾತಿನಲ್ಲಿ ಆಶೀರ್ವಾದಗಳು ಜಮಾ ಆಗಬೇಕು. ಸಂಬಂಧ ಸಂಪರ್ಕದಲ್ಲಿ ಹೃದಯದಿಂದ ಸಹಯೋಗ ಮತ್ತು ಧನ್ಯವಾದಗಳು ಬರಬೇಕು. –ಇದಕ್ಕೆ ತಪಸ್ಸು ಎಂದು ಹೇಳಲಾಗುತ್ತದೆ. ಇಂತಹ ತಪಸ್ಸು ವಿಶ್ವ ಪರಿವರ್ತನೆಯ ಆಧಾರ ಆಗಿದೆ. ಪುನಃ ಹೀಗಾಯಿತು ಎಂದು ಕಥೆ ಹೇಳಬೇಡಿ. . .! ಮೊದಲ ನಂಬರನ ಬಹುಮಾನ ಟೀಚರ್ಸ ತೆಗೆದುಕೊಳ್ಳಬೇಕು ಮತ್ತು ಜೊತೆಗೆ ಮಧುಬನ ನಿವಾಸಿಗಳು ತೆಗೆದುಕೊಳ್ಳಬೇಕು. ಏಕೆಂದರೆ ಮಧುಬನದ ಅಲೆಗಳು, ಶಿಕ್ಷಕಿಯರ ಅಲೆಗಳು ಪ್ರವೃತ್ತಿಯರ ವರೆಗೆ, ಈಶ್ವರೀಯ ವಿದ್ಯಾರ್ಥಿಗಳ ವರೆಗೆ ಸಹಜ ತಲುಪಿದೆ. ಆಗ ನೀವೆಲ್ಲರೂ ಮೊದಲಿನ ನಂಬರನವರು ಆಗಿಬಿಡುತ್ತೀರಿ. ಈಗ ನೋಡೋಣ ಯಾರ ಯಾರ ಹೆಸರು ಬಹುಮಾನದಲ್ಲಿ ಬರುತ್ತದೆ. ಶಿಕ್ಷಕಿಯರದು ಬರುತ್ತದೊ ಅಥವಾ ಮಧುಬನ ನಿವಾಸಿಗಳದ್ದು ಬರುತ್ತದೊ ಅಥವಾ ಈಶ್ವರಿಯ ವಿದ್ಯಾರ್ಥಿಗಳದ್ದು ಬರುತ್ತದೋ? ಡಬಲ್ ವಿದೇಶಿಗಳು ತೀವ್ರ ಪುರುಷಾರ್ಥ ಮಾಡುತ್ತಿರುವರು. ಬಾಪದಾದಾರವರ ಬಳಿ ಬಹುಮಾನಗಳು ಬಹಳ ಇವೆ. ಬಹುಮಾನದ ಕೊರತೆ ಇಲ್ಲ. ಭಂಡಾರ ಭರಪೂರ ಆಗಿದೆ. ಒಳ್ಳೆಯದು.

ಎಲ್ಲರೂ ಮೇಳದಲ್ಲಿ ತಲುಪಿರುವಿರಿ. ಮೇಳ ಇಷ್ಟ ಆಯಿತೋ ಅಥವಾ ಪರಿಶ್ರಮ ಅನಿಸಿತೊ? ಮಳೆಯೂ ಸ್ವಾಗತ ಮಾಡಿತು, ಪ್ರಕೃತಿಗೂ ನಿಮ್ಮ ಮೇಲೆ ಪ್ರೀತಿ ಇದೆ. ಭಯಪಡಲಿಲ್ಲ ತಾನೆ? ಬ್ರಹ್ಮಾ ಭೋಜನ ಚೆನ್ನಾಗಿ ಸಿಕ್ಕಿತು ಅಲ್ಲವೇ. 63 ಜನ್ಮಪೆಟ್ಟು ತಿಂದಿರುವಿರಿ. ಈಗ ನೆಲೆ ಸಿಕ್ಕಿತು ಅಲ್ಲವೇ. ಮೂರು ಹೆಜ್ಜೆ ಭೂಮಿ ಅಂತೂ ಸಿಕ್ಕಿತು ಅಲ್ಲವೇ. ಇಷ್ಟು ದೊಡ್ಡ ಹಾಲ್ ಕಟ್ಟಲಾಗಿದೆ ಈ ಹಾಲ್ನ ಶೋಭೆಯನ್ನು ಹೆಚ್ಚಿಸಿದಿರಿ. ಹಾಲ್ನ್ನು ಸಫಲ ಮಾಡಿದಿರಿ ಅಲ್ಲವೇ. ಯಾರಿಗೂ ತೊಂದರೆ ಆಗಲಿಲ್ಲ ಅಲ್ಲವೇ. ಆದರೆ ಹೀಗೆಯೇ ಮೇಳ ಮಾಡುವುದಲ್ಲ. ರಚನೆಯ ಜೊತೆಗೆ ಸಾಧನಗಳು ಜೊತೆಯಲ್ಲಿ ಬರುತ್ತದೆ. ಒಳ್ಳೆಯದು.

ಸರ್ವ ಬಾಲಕ ಸೋ ಮಾಲಿಕ ಶ್ರೇಷ್ಠ ಆತ್ಮರಿಗೆ, ಸದಾ ಪ್ರತಿ ಹೆಜ್ಜೆಯಲ್ಲಿ ಪುಣ್ಯದ ಖಾತೆಯನ್ನು ಜಮಾ ಮಾಡಿಕೊಳ್ಳುವ ಪುಣ್ಯ ಆತ್ಮರಿಗೆ, ಸದಾ ಹೃದಯಸಿಂಹಾಸನಾಸೀನ ಮತ್ತು ವಿಶ್ವದ ಸಿಂಹಾಸನಕ್ಕೆ ಅಧಿಕಾರಿ ವಿಶೇಷ ಆತ್ಮರಿಗೆ ಸದಾ ಸುಖ ಕೊಡುವ ಮತ್ತು ಸುಖ ತೆಗೆದುಕೊಳ್ಳುವ ಮಾಸ್ಟರ ಸುಖದ ಸಾಗರ ಆತ್ಮರಿಗೆ, ಸದಾ ಖೂಷಿಯಲ್ಲಿ ಇರುವಂತಹ ಮತ್ತು ಖುಷಿ ಕೊಡುವಂತಹ ದಾತಾ ಮಕ್ಕಳಿಗೆ ಬಾಪದಾದಾ ಅವರ ನೆನಪು ಪ್ರೀತಿ ಮತ್ತು ನಮಸ್ತೆ.

ದಾದೀಜಿಯವರ ಜೊತೆ:- ಬಾಪದಾದಾ ಅವರು ನೋಡಿದ್ದಾರೆ ಮಹಾರಥಿಗಳು ಹೃದಯದಿಂದ ಎಲ್ಲರನ್ನೂ ಶಕ್ತಿಶಾಲಿ ಮಾಡುವಂತಹ ಸೇವೆಯನ್ನು ಬಹಳ ಚೆನ್ನಾಗಿ ಮಾಡಿರುವರು. ಅದಕ್ಕಾಗಿ ಧನ್ಯವಾದ ಏನು ಹೇಳುವುದು ಆದರೆ ಖಾತೆಯಲ್ಲಿ ಬಹಳ ಜಮಾ ಆಯಿತು. ಬಹಳ ದೊಡ್ಡ ಖಾತೆ ಜಮಾ ಆಯಿತು. ಬಾಪದಾದಾರವರು ಮಹಾವೀರ ಮಕ್ಕಳ ಉಮಂಗ-ಉಲ್ಲಾಸವನ್ನು ನೋಡಿ ಪದಮಕ್ಕಿಂತಲೂ ಹೆಚ್ಚು ಹರ್ಷಿತ ಆಗುತ್ತಾರೆ. ಧೈರ್ಯ ಮಾಡಿದ್ದೀರಿ, ಸಂಘಟನೆ ಸದಾ ಸ್ನೇಹದ ಸೂತ್ರದಲ್ಲಿದೆ ಆದ್ದರಿಂದ ಅದರ ಸಫಲತೆ ಇದೆ. ಸಂಘಟನೆ ಶಕ್ತಿಶಾಲಿಯಾಗಿದೆ ಅಲ್ಲವೇ! ಚಿಕ್ಕ ಮಾಲೆ ಮಜಬೂತ ಆಗಿದೆ. ಕಂಕಣ ತಯಾರ ಆಯಿತು ಅಲ್ಲವೇ. ಮಾಲೆ ಆಗಲಿಲ್ಲ, ಕಂಕಣ ಆಯಿತು. ಆದ್ದರಿಂದ ಚಿಕ್ಕ ಮಾಲೆಯನ್ನು ಪ್ರಜೆ ಮಾಡುತ್ತಾರೆ. ದೊಡ್ಡದು ಚೆನ್ನಾಗಿ ತಯಾರ ಆಗುತ್ತಿದೆ, ಅದೂ ಸಹ ಆಗಿಬಿಡುತ್ತದೆ, ಆಗಲೇ ಬೇಕು. ದೊಡ್ಡ ಮಾಲೆ ತಯಾರ ಆಗಿದೆ ಆದರೆ ಮಣಿ ಮಣಿ ಒಂದಾಗಲು ಇನ್ನೂ ಸ್ವಲ್ಪ ಅವಕಾಶ ಇದೆ. ಆದರೆ ಚಿಕ್ಕ ಮಾಲೆ ಚೆನ್ನಾಗಿ ತಯಾರ ಆಗಿದೆ. ಇದೇ ಮಾಲೆಯ ಕಾರಣದಿಂದ ಸಫಲತೆ ಸಹಜ ಆಗಿದೆ ಮತ್ತು ಸಫಲತೆ ಸದಾ ಮಾಲೆಯ ಮಣಿಯ ಕೊರಳಲ್ಲಿ ಸದಾ ಪೋಣಿಸಲಾಗಿದೆ. ವಿಜಯದ ತಿಲಕ ಇದ್ದೇ ಇದೆ. ಬಾಪದಾದಾ ಖುಷ್ ಆಗಿರುವರು. ನಿಮಿತ್ತ ಅಂತೂ ನೀವಾಗಿರುವಿರಿ ಅಲ್ಲವೇ. ತಂದೆ ಅಂತೂ ಮಾಡಿಸುವವರಾಗಿದ್ದಾರೆ. ಮಾಡುವವರು ಯಾರು? ಮಾಡಲು ನಿಮಿತ್ತ ನೀವಾಗಿರುವಿರಿ, ತಂದೆ ಬೆನ್ನೆಲುಬಾಗಿರುವರು. ಆದ್ದರಿಂದ ಬಹಳ ಒಳ್ಳೆಯ ಪ್ರೀತಿಯ ರೀತಿಯನ್ನು ನಿಭಾಯಿಸಿರುವಿರಿ ಮತ್ತು ಪಾಲನೆಯ ರೀತಿಯನ್ನೂ ಚೆನ್ನಾಗಿ ನಿಭಾಯಿಸಿರುವಿರಿ. ಒಳ್ಳೆಯದು.

ವರದಾನ:-

ಸಿದ್ಧಿ ಸ್ವರೂಪ ಆತ್ಮರ ಪ್ರತೀ ಸಂಕಲ್ಪದಲ್ಲಿ ಸ್ವಯಂಪ್ರತಿ ಅಥವಾ ಅನ್ಯ ಆತ್ಮರ ಬಗ್ಗೆ ಸಿದ್ಧಗೊಳಿಸುವುದೇ ಆಗಿರುತ್ತದೆ. ಅವರ ಪ್ರತೀ ಕರ್ಮದಲ್ಲಿ ಸಿದ್ಧಿಯು ಪ್ರಾಪ್ತಿಯಾಗುತ್ತದೆ. ಅವರು ಯಾವ ಮಾತನ್ನಾಡುತ್ತಾರೆಯೋ ಅದು ಸಿದ್ಧವಾಗಿಬಿಡುತ್ತದೆ ಆದ್ದರಿಂದ ಸತ್ ವಚನ್ ಎಂದು ಹೇಳಲಾಗುತ್ತದೆ, ಸಿದ್ಧಿ ಸ್ವರೂಪ ಆತ್ಮರ ಪ್ರತೀ ಸಂಕಲ್ಪ, ವಚನ ಹಾಗೂ ಕರ್ಮವು ಸಿದ್ಧಿಯನ್ನು ಪ್ರಾಪ್ತಿ ಮಾಡುವಂತಹದ್ದೇ ಆಗಿರುತ್ತದೆ, ವ್ಯರ್ಥವಾಗುವುದಿಲ್ಲ. ಒಂದುವೇಳೆ ಸಂಕಲ್ಪವೆಂಬ ಬೀಜವು ಬಹಳ ಒಳ್ಳೆಯದಿರುತ್ತದೆ ಆದರೆ ಒಳ್ಳೆಯ ಫಲವು ಪ್ರಾಪ್ತಿಯಾಗದಿದ್ದರೆ, ಧೃಡ ಧಾರಣೆಯ ಧರಣಿಯು ಸರಿಯಾಗಿಲ್ಲ ಅಥವಾ ಗಮನದ ಪತ್ಯೆಯಲ್ಲಿ ಕೊರತೆಯಿದೆ.

ಸ್ಲೋಗನ್:-

ಇಂದು ತಿಂಗಳಿನ ಮೂರನೇ ರವಿವಾರವಾಗಿದೆ, ಎಲ್ಲಾ ರಾಜಯೋಗಿ ತಪಸ್ವಿ ಸಹೋದರ-ಸಹೋದರಿಯರು ಸಂಜೆ 6.30ರಿಂದ 7.30ರವರೆಗೆ ಯೋಗಾಭ್ಯಾಸದ ಸಮಯದಲ್ಲಿ, ತಮ್ಮ ಆಕಾರಿ ಫರಿಶ್ತಾ ಸ್ವರೂಪದಲ್ಲಿ ಸ್ಥಿತರಾಗಿರಿ, ವಿಶ್ವದ ಪರಿಕ್ರಮಣ ಮಾಡುತ್ತಾ ಪ್ರಕೃತಿ ಸಮೇತವಾಗಿ ಸರ್ವ ಆತ್ಮರುಗಳಿಗೆ ಲೈಟ್ಮೈಟ್ ಕೊಡುವ ಸೇವೆ ಮಾಡಿರಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top