17 June 2022 KANNADA Murli Today | Brahma Kumaris

Read and Listen today’s Gyan Murli in Kannada

June 16, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ- ನೆನಪಿನಲ್ಲಿದ್ದು ತಮ್ಮ ವಿಕರ್ಮಗಳ ಪ್ರಾಯಶ್ಚಿತ್ತ ಮಾಡಿಕೊಳ್ಳಿ ಆಗ ವಿಕರ್ಮಾಜೀತರಾಗಿಬಿಡುತ್ತೀರಿ, ಹಳೆಯ ಎಲ್ಲಾ ಲೆಕ್ಕಾಚಾರಗಳು ಸಮಾಪ್ತಿಯಾಗಿಬಿಡುತ್ತವೆ”

ಪ್ರಶ್ನೆ:: -

ಎಂತಹ ಮಕ್ಕಳಿಂದ ಪ್ರತೀ ಮಾತಿನ ತ್ಯಾಗವು ಸಹಜವಾಗಿಬಿಡುತ್ತದೆ?

ಉತ್ತರ:-

ಯಾವ ಮಕ್ಕಳಿಗೆ ಒಳಗಿನಿಂದ ವೈರಾಗ್ಯವು ಬರುತ್ತದೆಯೋ ಅವರು ಪ್ರತೀ ಮಾತಿನ ತ್ಯಾಗವನ್ನು ಸಹಜವಾಗಿಯೇ ಮಾಡಿಬಿಡುತ್ತಾರೆ. ನೀವು ಮಕ್ಕಳಿಗೆ ಈಗ ಇದನ್ನು ಧರಿಸಬೇಕು, ಇದನ್ನು ತಿನ್ನಬೇಕು, ಇದನ್ನು ಮಾಡಬೇಕು… ಎನ್ನುವಂತಹ ಇಚ್ಛೆಗಳು ಇರಬಾರದು. ದೇಹಸಹಿತ ಇಡೀ ಹಳೆಯ ಪ್ರಪಂಚವನ್ನೇ ತ್ಯಾಗ ಮಾಡಬೇಕಾಗಿದೆ. ತಂದೆಯು ನಿಮಗೆ ಅಂಗೈಯಲ್ಲಿ ಸ್ವರ್ಗವನ್ನು ಕೊಡುವುದಕ್ಕಾಗಿಯೇ ಬಂದಿರುವುದರಿಂದ ಈ ಹಳೆಯ ಪ್ರಪಂಚದಿಂದ ಬುದ್ಧಿಯೋಗವು ದೂರವಾಗಬೇಕು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಮಾತಾ ಓ ಮಾತಾ ನೀನೇ ಎಲ್ಲರ ಭಾಗ್ಯವಿಧಾತಾ….

ಓಂ ಶಾಂತಿ. ಮಕ್ಕಳು ತಮ್ಮ ತಾಯಿಯ ಮಹಿಮೆಯನ್ನು ಕೇಳಿದಿರಿ. ಮಕ್ಕಳಂತೂ ಅನೇಕರಿದ್ದಾರೆ, ಆವಶ್ಯವಾಗಿ ತಂದೆಯು ಇದ್ದಾರೆಂದರೆ ಅಲ್ಲಿ ತಾಯಿಯು ಇದ್ದಾರೆಂದು ತಿಳಿದುಕೊಳ್ಳುತ್ತಾರೆ. ರಚಿಸುವುದಕ್ಕಾಗಿ ಅವಶ್ಯವಾಗಿ ತಾಯಿಯೂ ಇದ್ದಾರೆ. ಭಾರತದಲ್ಲಿ ತಾಯಿಗಾಗಿ ಬಹಳಒಳ್ಳೆಯ ಮಹಿಮೆಯ ಗಾಯನ ಮಾಡಲ್ಪಟ್ಟಿದೆ. ಜಗದಂಬನ ಅತಿದೊಡ್ಡ ಮೇಳವು ಸೇರುತ್ತದೆ, ಒಂದಲ್ಲಒಂದು ಪ್ರಕಾರದಿಂದ ತಾಯಿಯ ಪೂಜೆಯಾಗುತ್ತದೆ. ತಂದೆಯ ಪೂಜೆಯೂ ಆಗುತ್ತಿರುವುದು. ಅವರು ಜಗದಂಬ ಆಗಿರುವುದರಿಂದ ಬ್ರಹ್ಮಾ ಜಗತ್ಪಿತನಾಗಿದ್ದಾರೆ. ಜಗದಂಬಾ ಸಾಕಾರದಲ್ಲಿ ಇರುವುದರಿಂದ ಜಗತ್ಪಿತನೂ ಸಹ ಸಾಕಾರದಲ್ಲಿದ್ದಾರೆ. ಇವರಿಬ್ಬರನ್ನು ರಚಯಿತನೆಂದೇ ಹೇಳುತ್ತಾರೆ. ಇಲ್ಲಂತೂ ಸಾಕಾರ ತಂದೆಯಿದ್ದಾರಲ್ಲವೇ. ನಿರಾಕಾರನನ್ನೇ ಪರಮಪಿತನೆಂದು ಹೇಳಲಾಗುತ್ತದೆ. ಮಾತಾ-ಪಿತರ ರಹಸ್ಯವನ್ನಂತೂ ತಿಳಿಸಲಾಗಿದೆ. ಚಿಕ್ಕತಾಯಿಯೂ ಇದ್ದಾರೆ, ದೊಡ್ಡ ತಾಯಿಯೂ ಇದ್ದಾರೆ. ಮಹಿಮೆಯೂ ಚಿಕ್ಕ ತಾಯಿಯದಾಗಿದೆ, ಭಲೆ ದತ್ತು ಮಾಡಿಕೊಳ್ಳುತ್ತಾರೆ, ತಾಯಿಯನ್ನೂ ಸಹ ದತ್ತು ಮಾಡಿಕೊಂಡಿದ್ದಾರೆ ಅಂದಮೇಲೆ ಇವರು ದೊಡ್ಡ ತಾಯಿಯಾದರು ಆದರೆ ಮಹಿಮೆಯೆಲ್ಲವೂ ಚಿಕ್ಕತಾಯಿಯದಾಗಿದೆ. ಇದನ್ನೂ ಸಹ ಮಕ್ಕಳು ತಿಳಿದುಕೊಂಡಿದ್ದೀರಿ- ಪ್ರತಿಯೊಬ್ಬರೂ ತಮ್ಮ ಕರ್ಮಭೋಗದ ಲೆಕ್ಕಾಚಾರವನ್ನು ಸಮಾಪ್ತಿ ಮಾಡಬೇಕಾಗಿದೆ ಏಕೆಂದರೆ ವಿಕರ್ಮಾಜೀತರಾಗಿದ್ದೆವು ನಂತರ ರಾವಣನು ವಿಕರ್ಮಿಯನ್ನಾಗಿ ಮಾಡಿದ್ದಾನೆ. ವಿಕ್ರಮ ಸಂವತ್ಸರವೂ ಇದೆ ಅಂದಮೇಲೆ ವಿಕರ್ಮಾಜೀತ ಸಂವತ್ಸರವೂ ಇದೆ. ಮೊದಲು ಅರ್ಧಕಲ್ಪ ವಿಕರ್ಮಾಜೀತರೆಂದು ಹೇಳುತ್ತಾರೆ ನಂತರ ಅರ್ಧಕಲ್ಪ ವಿಕ್ರಮ ಸಂವತ್ಸರವೂ ಪ್ರಾರಂಭವಾಗುತ್ತದೆ. ಈಗ ನೀವು ಮಕ್ಕಳು ವಿಕರ್ಮಗಳ ಮೇಲೆ ವಿಜಯವನ್ನು ಪಡೆದು ವಿಕರ್ಮಾಜೀತರಾಗುತ್ತೀರಿ. ಏನೆಲ್ಲಾ ಪಾಪಗಳಿವೆ ಅವುಗಳನ್ನು ಯೋಗಬಲದಿಂದ ಪ್ರಾಯಶ್ಚಿತ ಮಾಡಿಕೊಳ್ಳುತ್ತೀರಿ. ಅದು ನೆನಪಿನಿಂದಲೇ ಪ್ರಾಯಶ್ಚಿತ್ತವಾಗುತ್ತದೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ನೆನಪು ಮಾಡಿದಾಗ ಪಾಪಗಳ ಪ್ರಾಯಶ್ಚಿತ್ತವಾಗುತ್ತದೆ ಅರ್ಥಾತ್ ತುಕ್ಕು ಬಿಟ್ಟುಹೋಗುತ್ತದೆ. ತಲೆಯ ಮೇಲೆ ಜನ್ಮ-ಜನ್ಮಾಂತರದ ಪಾಪಗಳ ಹೊರೆಯು ಬಹಳಷ್ಟಿದೆ ಎನ್ನುವುದನ್ನೂ ಸಹ ತಿಳಿಸಲಾಗಿದೆ. ಯಾರು ನಂಬರ್ವನ್ ಪುಣ್ಯಾತ್ಮ ಆಗುತ್ತಾರೆ ಅವರೇ ನಂತರದಲ್ಲಿ ನಂಬರ್ವನ್ ಪಾಪಾತ್ಮನೂ ಆಗುತ್ತಾರೆ. ಅವರು ಬಹಳ ಪರಿಶ್ರಮಪಡಬೇಕಾಗುತ್ತದೆ ಏಕೆಂದರೆ ಕಲಿಸುವುದಕ್ಕೋಸ್ಕರ ಶಿಕ್ಷಕರಾಗುತ್ತಾರೆಂದರೆ ಅವಶ್ಯವಾಗಿ ಪರಿಶ್ರಮಪಡಬೇಕಾಗುತ್ತದೆ. ಕಾಯಿಲೆ ಮುಂತಾದವು ಬರುತ್ತದೆಯೆಂದರೆ ತಮ್ಮದೇ ಕರ್ಮವೆಂದು ಹೇಳಲಾಗುತ್ತದೆ. ಅನೇಕ ಜನ್ಮಗಳು ವಿಕರ್ಮ ಮಾಡಿರುವುದರಿಂದ ಅನುಭವಿಸಲೇಬೇಕಾಗುತ್ತದೆ ಆದ್ದರಿಂದ ಎಂದೂ ಸಹ ಇದರಿಂದ ಭಯಪಡಬಾರದು, ಖುಷಿಯಿಂದ ಕಳೆಯಬೇಕಾಗಿದೆ ಏಕೆಂದರೆ ತಾವೇ ಮಾಡಿರುವಂತಹ ಲೆಕ್ಕಾಚಾರವಾಗಿದೆ. ಇದು ಒಬ್ಬ ತಂದೆಯ ನೆನಪಿನಿಂದಲೇ ಪ್ರಾಯಶ್ಚಿತ್ತರಾಗಬೇಕಾಗಿದೆ. ಎಲ್ಲಿಯ ತನಕ ಜೀವಿಸುತ್ತೀರೋ ಅಲ್ಲಿಯ ತನಕ ನೀವು ಮಕ್ಕಳು ಜ್ಞಾನಾಮೃತವನ್ನು ಕುಡಿಯಬೇಕಾಗಿದೆ, ಯೋಗದಲ್ಲಿರಬೇಕಾಗಿದೆ. ಇವು ವಿಕರ್ಮಗಳಾಗಿವೆ ಆದ್ದರಿಂದಲೇ ಈ ಕೆಮ್ಮು ಮುಂತಾದವು ಬರುತ್ತವೆ. ಇಲ್ಲಿಯೇ ಎಲ್ಲಾ ಲೆಕ್ಕಾಚಾರಗಳು ಸಮಾಪ್ತಿ ಆಗಿಬಿಡಲಿ ಖುಷಿಯಾಗುತ್ತದೆ, ಉಳಿದುಕೊಂಡರೆ ಪಾಸ್-ವಿತ್-ಆನರ್ ಆಗಲು ಸಾಧ್ಯವಿಲ್ಲ. ಪೆಟ್ಟು ತಿಂದು ಪದವಿ ಪಡೆದರೂ ಸಹ ಅದು ಅಗೌರವವಲ್ಲವೆ! ಅನೇಕ ಪ್ರಕಾರದ ದುಃಖವನ್ನು ಅನುಭವಿಸಬೇಕಾಗುತ್ತದೆ. ಇಲ್ಲಿ ಅನೇಕ ಪ್ರಕಾರದ ದುಃಖಗಳಿವೆ, ದುಃಖಕ್ಕೆ ಅಂತ್ಯವೇ ಇಲ್ಲ. ಸತ್ಯಯುಗದಲ್ಲಿ ಸುಖಕ್ಕೆ ಅಂತ್ಯವೇ ಇರುವುದಿಲ್ಲ. ಹೆಸರೇ ಸ್ವರ್ಗವೆಂದಾಗಿದೆ, ಇದನ್ನು ಕ್ರಿಶ್ಚಿಯನ್ನರು ಹೆವೆನ್ ಎಂದು ಹೇಳುತ್ತಾರೆ. ಹೆವೆನ್ಲೀ ಗಾಡ್ಫಾದರ್(ಸ್ವರ್ಗದ ರಚಯಿತ), ಎನ್ನುವ ಈ ಮಾತುಗಳನ್ನು ನೀವೇ ಅರಿತುಕೊಂಡಿದ್ದೀರಿ. ನಿವೃತ್ತಿ ಮಾರ್ಗದ ಸನ್ಯಾಸಿಗಳು ಇದೆಲ್ಲಾ ಕಾಗವಿಷ್ಟ ಸಮಾನ ಸುಖವೆಂದು ಹೇಳಿಬಿಡುತ್ತಾರೆ. ಈ ಪ್ರಪಂಚದಲ್ಲಿ ಸರಾಸರಿ ಅದೇ ರೀತಿಯಿದೆ. ಭಲೆ ಯಾರಿಗೆಷ್ಟೇ ಸುಖವಿರಲಿ ಆದರೆ ಅದು ಅಲ್ಪಕಾಲದ ಸುಖವಾಗಿದೆ. ಸಂಪೂರ್ಣ ಸ್ಥಿರವಾದ ಸುಖವಂತು ಇಲ್ಲವೇ ಇಲ್ಲ. ಕುಳಿತು-ಕುಳಿತಿದ್ದಂತೆಯೇ ಆಪತ್ತುಗಳು ಬಂದುಬಿಡುತ್ತವೆ, ಹಾರ್ಟ್ಫೇಲ್ ಆಗಿಬಿಡುತ್ತದೆ. ಆತ್ಮವು ಒಂದು ಶರೀರವನ್ನು ಬಿಟ್ಟು ಇನ್ನೊಂದರಲ್ಲಿ ಹೋಗಿ ಪ್ರವೇಶ ಮಾಡುವುದರಿಂದ ಶರೀರವೂ ತಾನಾಗಿಯೇ ಮಣ್ಣಾಗಿಬಿಡುತ್ತದೆ. ಪ್ರಾಣಿಗಳ ಶರೀರವಾದರೂ ಕೆಲಸಕ್ಕೆ ಬರುತ್ತದೆ ಆದರೆ ಮನುಷ್ಯರ ಶರೀರವು ಕೆಲಸಕ್ಕೆ ಬರುವುದಿಲ್ಲ. ಈ ತಮೋಪ್ರಧಾನ ಪತಿತ ಶರೀರವು ಯಾವುದೇ ಕೆಲಸಕ್ಕೆ ಬರುವುದಿಲ್ಲ, ಕವಡೆಯ ಸಮಾನವಾಗಿದೆ. ದೇವತೆಗಳ ಶರೀರವು ವಜ್ರಸಮಾನವಾಗಿದೆ ಆದ್ದರಿಂದಲೇ ಅವರಿಗೆ ಎಷ್ಟೊಂದು ಪೂಜೆ ಆಗುತ್ತದೆ ನೋಡಿ! ಈ ತಿಳುವಳಿಕೆಯು ಈಗ ನೀವು ಮಕ್ಕಳಿಗೆ ಸಿಕ್ಕಿದೆ.

ಇವರು ಬೇಹದ್ದಿನ ತಂದೆಯಾಗಿದ್ದಾರೆ, ಅತಿಪ್ರಿಯನಾಗಿದ್ದಾರೆ, ಇವರನ್ನೇ ಅರ್ಧಕಲ್ಪ ನೆನಪು ಮಾಡಿದ್ದೀರಿ. ಯಾರು ಬ್ರಾಹ್ಮಣರಾಗುತ್ತಾರೋ ಅವರೇ ತಂದೆಯಿಂದ ಆಸ್ತಿಯನ್ನು ಪಡೆಯಲು ಹಕ್ಕುದಾರರಾಗುತ್ತಾರೆ. ಸತ್ಯಬ್ರಾಹ್ಮಣರು ಬಹಳ ಪವಿತ್ರವಾಗಬೇಕಾಗಿದೆ. ಸತ್ಯ ಗೀತಾಪಾಠಿಯು ಖಂಡಿತ ಪವಿತ್ರರಾಗಿರಬೇಕಾಗಿದೆ. ಆ ಅಸತ್ಯ ಗೀತಾಪಾಠಿಗಳು ಪವಿತ್ರರಾಗುವುದಿಲ್ಲ. ಈಗ ಕಾಮ ಮಹಾಶತ್ರುವೆಂದು ಗೀತೆಯಲ್ಲಂತೂ ಬರೆಯಲ್ಪಟ್ಟಿದೆ, ಮತ್ತೆ ಸ್ವಯಂ ಗೀತೆಯನ್ನು ತಿಳಿಸುವವರೆಲ್ಲಿ ಪವಿತ್ರರಾಗಿರುತ್ತಾರೆ! ಗೀತೆಯು ಸರ್ವಶಾಸ್ತ್ರಮಯಿ ಶಿರೋಮಣಿಯಾಗಿದೆ. ಇದರಿಂದ ತಂದೆಯು ಕವಡೆಯಿಂದ ವಜ್ರಸಮಾನರನ್ನಾಗಿ ಮಾಡಿದ್ದಾರೆ. ಇದನ್ನೂ ಸಹ ಕೇವಲ ನೀವು ಅರಿತುಕೊಳ್ಳುತ್ತೀರಿ, ಗೀತಾಪಾಠಿಗಳು ಅರಿತುಕೊಳ್ಳುವುದಿಲ್ಲ ಅವರಂತೂ ಗಿಳಿಯಂತೆ ಓದುತ್ತಿರುತ್ತಾರೆ. ಮಹಿಮೆಯೆಲ್ಲವೂ ಒಬ್ಬ ತಂದೆಯದಾಗಿದೆ. ಮತ್ತ್ಯಾರದೂ ಇಷ್ಟು ಮಹಿಮೆಯಿಲ್ಲ. ಈ ಮಹಿಮೆಯು ಬ್ರಹ್ಮಾ-ವಿಷ್ಣು- ಶಂಕರನಿಗೂ ಇಲ್ಲ. ನೀವು ಅವರ ಮುಂದೆ ಹೋಗಿ ಎಷ್ಟೇ ತಲೆಕೆಡಿಸಿಕೊಳ್ಳಬಹುದು, ಅವರ ಮುಂದೆ ಬಲಿಹಾರಿಯಾದರೂ ಸಹ ಆಸ್ತಿಯು ಸಿಗುವುದಿಲ್ಲ. ಹೇಗೆ ಕಾಶಿಯಲ್ಲಿ ಬಲಿಹಾರಿ ಆಗುತ್ತಾರಲ್ಲವೇ. ಈಗ ಸರ್ಕಾರವು ಅದನ್ನು ನಿಷೇದಿಸಿದೆ. ಇಲ್ಲವೆಂದರೆ ಅನೇಕರು ಬಲಿಯಾಗಿಬಿಡುತ್ತಿದ್ದರು. ಬಾವಿಯಲ್ಲಿ ಹೋಗಿ ಬೀಳುತ್ತಿದ್ದರು. ಕೆಲವರು ದೇವಿಯ ಮೇಲೆ ಬಲಿಹಾರಿ ಆಗುತ್ತಿದ್ದರು, ಇನ್ನೂ ಕೆಲವರು ಶಿವನಮೇಲೆ ಬಲಿಯಾಗುತ್ತಿದ್ದರು. ದೇವತೆಗಳಿಗೆ ಬಲಿಹಾರಿ ಆಗುವುದರಿಂದ ಯಾವುದೇ ಲಾಭವಿಲ್ಲ. ಕಾಳಿಯಮೇಲೆ ಬಲಿಹಾರಿಯಾಗುತ್ತಾರೆ, ಕಾಳಿಯನ್ನು ಎಷ್ಟೊಂದು ಕಪ್ಪಾಗಿ ಮಾಡಿಬಿಟ್ಟಿದ್ದಾರೆ. ಈಗಂತೂ ಎಲ್ಲರೂ ಕಬ್ಬಿಣದ ಯುಗದಲ್ಲಿದ್ದಾರೆ, ಅವರೇ ಮೊದಲು ಚಿನ್ನದ ಯುಗದಲ್ಲಿ ಇದ್ದರು. ಜಗದಂಬಾ ಎಂದು ಒಬ್ಬರಿಗೇ ಹೇಳಲಾಗುತ್ತದೆ. ತಂದೆಯನ್ನು ಎಂದೂ ಸಹ ಅಂಬೆ(ತಾಯಿ) ಎಂದು ಹೇಳುವುದಿಲ್ಲ. ಇದನ್ನು ಯಾರೂ ಅರಿತುಕೊಂಡಿಲ್ಲ. ಜಗದಂಬಾ ಸರಸ್ವತಿಯೂ ಬ್ರಹ್ಮನ ಮಗಳಾಗಿದ್ದಾರೆ ಅಂದಾಗ ಬ್ರಹ್ಮಾ ಅವಶ್ಯವಾಗಿ ಪ್ರಜಾಪಿತನೇ ಆಗಿರುತ್ತಾರೆ, ಸೂಕ್ಷ್ಮವತನದಲ್ಲಂತೂ ಪ್ರಜಾಪಿತನಿರುವುದಿಲ್ಲ. ಸರಸ್ವತಿಯೂ ಸಹ ಬ್ರಹ್ಮನ ಮಗಳಾಗಿದ್ದಾರೆ ಎನ್ನುವುದನ್ನು ತಿಳಿಯುತ್ತಾರೆ, ಬ್ರಹ್ಮನ ಸ್ತ್ರೀ ಎಂದು ಹೇಳುವುದಿಲ್ಲ. ತಂದೆಯು ತಿಳಿಸುತ್ತಾರೆ- ನಾನು ಈ ಬ್ರಹ್ಮಾರವರ ಮುಖಾಂತರ ಮಗಳಾದ ಸರಸ್ವತಿಯನ್ನು ದತ್ತು ಮಾಡಿಕೊಳ್ಳುತ್ತೇನೆ. ಮಗಳನ್ನೂ ಸಹ ದತ್ತು ತೆಗೆದುಕೊಂಡಿದ್ದಾರೆ ಎನ್ನುವುದನ್ನು ತಿಳಿದುಕೊಂಡಿದ್ದಾರೆ. ಈ ಬ್ರಹ್ಮಾರವರನ್ನೂ ಸಹ ತಂದೆಯು ದತ್ತು ಮಾಡಿಕೊಂಡಿದ್ದಾರೆ. ಇವು ಬಹಳ ಗುಹ್ಯಮಾತುಗಳಾಗಿವೆ, ಇವು ಯಾರ ಬುದ್ಧಿಯಲ್ಲಿಯೂ ಇಲ್ಲ. ತಂದೆಯು ನಿಮಗೆ ತಮ್ಮ ಅಂತ್ಯವನ್ನೂ ಸಹ ತಿಳಿಸುತ್ತಾರೆ ಅಂದರೆ ಅವಶ್ಯವಾಗಿ ಸಮ್ಮುಖದಲ್ಲಿಯೇ ತಿಳಿಸುತ್ತಾರಲ್ಲವೇ! ಪ್ರೇರಣೆಯಿಂದ ತಿಳಿಸುವುದಿಲ್ಲ. ಭಗವಾನುವಾಚ- ಹೇ! ಮಕ್ಕಳೇ….. ಅಂದರೆ ಅವಶ್ಯವಾಗಿ ಸಾಕಾರದಲ್ಲಿ ಬಂದಾಗ ಮಾತ್ರ ಹೇಳಲು ಸಾಧ್ಯವಾಗುತ್ತದೆ, ನಿರಾಕಾರ ತಂದೆಯು ಇವರ(ಬ್ರಹ್ಮಾ) ಮುಖಾಂತರ ಓದಿಸುತ್ತಾರೆ, ಬ್ರಹ್ಮಾರವರು ಓದಿಸುವುದಿಲ್ಲ. ಬ್ರಹ್ಮನನ್ನು ಜ್ಞಾನಸಾಗರನೆಂದು ಹೇಳಲಾಗುವುದಿಲ್ಲ. ಜ್ಞಾನಸಾಗರನೆಂದು ಒಬ್ಬ ತಂದೆಗೇ ಹೇಳಲಾಗುತ್ತದೆ. ಈ ಲೌಕಿಕ ತಂದೆಯು ಓದಿಸುವುದಿಲ್ಲ, ಪಾರಲೌಕಿಕ ತಂದೆಯು ಕುಳಿತು ಓದಿಸುತ್ತಾರೆ. ಇವರಿಂದ ಆಸ್ತಿಯನ್ನು ಪಡೆದುಕೊಳ್ಳುತ್ತಿದ್ದೇವೆ ಎನ್ನುವುದನ್ನು ಆತ್ಮವು ತಿಳಿಯುತ್ತದೆ. ವೈಕುಂಠವನ್ನು ಪರಲೋಕವೆಂದು ಹೇಳಲಾಗುವುದಿಲ್ಲ, ಅದು ಅಮರಲೋಕವಾಗಿದೆ. ಎಲ್ಲಿ ನಾವಾತ್ಮರು ಇರುತ್ತೇವೆ ಅದು ಪರಲೋಕವಾಗಿದೆ, ಇದು ಪರಲೋಕವಲ್ಲ. ಈ ಲೋಕದಿಂದ(ಆತ್ಮಗಳ ಲೋಕ) ನಾವಾತ್ಮಗಳು ಬರುತ್ತೇವೆ. ಇದು ನಾವಾತ್ಮಗಳ ಲೋಕವಾಗಿದೆ. ನೀವು ಈ ಭಾರತದಲ್ಲಿಯೇ ರಾಜ್ಯ ಮಾಡಿದ್ದಿರಿ, ಪರಲೋಕದಲ್ಲಲ್ಲ. ಪರಲೋಕದ ರಾಜನೆಂದು ಹೇಳುವುದಿಲ್ಲ. ಇದೇ ಭಾರತವು ವೈಕುಂಠವಾಗಿತ್ತು ಮತ್ತೆ ಆಗುತ್ತದೆ. ಇದು ಮೃತ್ಯುಲೋಕವಾಗಿದೆ, ಲೋಕದಲ್ಲಿ ಮನುಷ್ಯರಿರುತ್ತಾರೆ. ವೈಕುಂಠದಲ್ಲಿ, ಹೋಗಬೇಕೆಂದು ಹೇಳುತ್ತಾರೆ. ದಿಲ್ವಾಲ ಮಂದಿರದಲ್ಲಿಯೂ ಸಹ ಕೆಳಗೆ ತಪಸ್ಸು ಮಾಡುತ್ತಿದ್ದಾರೆ, ಮೇಲೆ ವೈಕುಂಠದ ಚಿತ್ರಗಳನ್ನು ಚಿತ್ರಿಸಿದ್ದಾರೆ. ಇಂತಹವರು ವೈಕುಂಠಕ್ಕೆ ಹೋದರೆಂದು ತಿಳಿಯುತ್ತಾರೆ ಆದರೆ ವೈಕುಂಠವಂತು ಇಲ್ಲಿಯೇ ಆಗುತ್ತದೆ, ಮೇಲೆ ಆಗುವುದಿಲ್ಲ. ಇಂದು ಯಾವುದು ಪತಿತಲೋಕವಾಗಿದೆ, ಇದೇ ಮತ್ತೆ ಪಾವನಲೋಕವಾಗುತ್ತದೆ. ಪಾವನಲೋಕವಿತ್ತು, ಅದು ಕಳೆದುಹೋಗಿದೆ ಆದ್ದರಿಂದ ಪರಲೋಕವೆಂದು ಹೇಳುತ್ತಾರೆ. ಭಾರತವು ಸ್ವರ್ಗವಾಗಿತ್ತು, ಈಗ ನರಕವಾಗಿದೆ ಎಂದರೆ ಸ್ವರ್ಗವೂ ಈಗ ದೂರವಾಯಿತಲ್ಲವೇ. ನಾಟಕದನುಸಾರ ವಾಮಮಾರ್ಗದಲ್ಲಿ ಹೋಗುವುದರಿಂದ ಸ್ವರ್ಗವು ದೂರವಾಗಿಬಿಡುತ್ತದೆ ಆದ್ದರಿಂದ ಅದನ್ನು ಪರಲೋಕವೆಂದು ಹೇಳುತ್ತಾರೆ.

ಈಗ ನೀವು ಹೇಳುತ್ತೀರಿ- ನಾವಿಲ್ಲಿ ಬಂದು ಹೊಸಪ್ರಪಂಚದಲ್ಲಿ ಮತ್ತೆ ನಮ್ಮ ರಾಜ್ಯಭಾರ ಮಾಡುತ್ತೇವೆ. ಪ್ರತಿಯೊಬ್ಬರು ತಮಗಾಗಿ ಪುರುಷಾರ್ಥ ಮಾಡುತ್ತಾರೆ. ಯಾರು ಮಾಡುವರು ಅವರೇ ಪಡೆಯುವರು. ಎಲ್ಲರೂ ಮಾಡುವುದಿಲ್ಲ. ಯಾರು ಓದುತ್ತಾರೆ, ಬರೆಯುತ್ತಾರೆ ಅವರೇ ವೈಕುಂಠದ ಮಾಲೀಕರಾಗುತ್ತಾರೆ. ನೀವು ಈ ಸೃಷ್ಟಿಯನ್ನು ಚಿನ್ನದ ಸಮಾನ ಮಾಡುತ್ತೀರಿ. ಚಿನ್ನದ ದ್ವಾರಿಕೆ ಸಮುದ್ರದ ಕೆಳಗೆ ಹೋಗಿಬಿಟ್ಟಿದೆ ಎಂದು ಹೇಳುತ್ತಾರಲ್ಲವೇ. ಅದನ್ನು ಹೊರತೆಗೆಯಲು ಅದರಲ್ಲಿ ಯಾರೂ ಕುಳಿತುಕೊಂಡಿಲ್ಲ ಅಲ್ಲವೇ! ಭಾರತವು ಸ್ವರ್ಗವಾಗಿತ್ತು, ದೇವತೆಗಳು ರಾಜ್ಯ ಮಾಡುತ್ತಿದ್ದರು. ಈಗಂತೂ ಏನೂ ಇಲ್ಲ. ಮತ್ತೆ ಎಲ್ಲವನ್ನು ಚಿನ್ನದ ಸಮಾನ ಮಾಡಬೇಕಾಗುತ್ತದೆ. ಅಲ್ಲಿ ಚಿನ್ನದ ಮಹಲುಗಳನ್ನು ಹೊರತೆಗೆದಾಗ ಸಿಗುತ್ತದೆ ಎಂದಲ್ಲ. ಎಲ್ಲವನ್ನೂ ಮತ್ತೆ ನಿರ್ಮಾಣ ಮಾಡಬೇಕಾಗುತ್ತದೆ. ನಾವು ರಾಜಕುಮಾರ-ಕುಮಾರಿಯರಾಗುತ್ತಿದ್ದೇವೆ ಎನ್ನುವ ನಶೆಯಿರಬೇಕು. ಇದು ರಾಜಕುಮಾರ-ಕುಮಾರಿಯರಾಗುವ ಕಾಲೇಜು ಆಗಿದೆ. ಅದು ರಾಜಕುಮಾರ-ಕುಮಾರಿಯರು ಓದುವ ಕಾಲೇಜ್ ಆಗಿದೆ. ನೀವು ರಾಜ್ಯಭಾಗ್ಯವನ್ನು ಪಡೆಯುವುದಕ್ಕೋಸ್ಕರ ಓದುತ್ತಿದ್ದೀರಿ. ಅವರು ಪೂರ್ವಜನ್ಮದಲ್ಲಿ ದಾನ-ಪುಣ್ಯ ಮಾಡುವುದರಿಂದ ರಾಜರ ಮನೆಯಲ್ಲಿ ಜನ್ಮವನ್ನು ಪಡೆದು ರಾಜಕುಮಾರರಾಗಿದ್ದಾರೆ. ಆ ವಿದ್ಯಾಲಯವು ಎಷ್ಟು ಚೆನ್ನಾಗಿರಬಹುದು. ಎಷ್ಟು ಒಳ್ಳೆಯ ಶಿಕ್ಷಣ ಮುಂತಾದವುಗಳು ಇರಬಹುದು. ಶಿಕ್ಷಕರಿಗೂ ಸಹ ಒಳ್ಳೆಯ ಶಿಕ್ಷಣವಿರಬಹುದು. ಸತ್ಯಯುಗ, ತ್ರೇತಾದಲ್ಲಿ ಯಾರು ರಾಜಕುಮಾರ-ಕುಮಾರಿಯರಿರುತ್ತಾರೆ, ಅವರ ವಿದ್ಯಾಲಯವು ಎಷ್ಟು ಚೆನ್ನಾಗಿರಬಹುದು. ಕಾಲೇಜ್ಗಂತೂ ಹೋಗಿರುತ್ತಾರಲ್ಲವೇ. ಭಾಷೆಯನ್ನು ಕಲಿತಿರುತ್ತಾರಲ್ಲವೇ. ಆ ಸತ್ಯಯುಗೀ ರಾಜಕುಮಾರ-ಕುಮಾರಿಯರ ಕಾಲೇಜು ಮತ್ತು ದ್ವಾಪರದ ವಿಕಾರಿ ರಾಜಕುಮಾರ-ಕುಮಾರಿಯರ ಕಾಲೇಜು ನೋಡಿ! ಹಾಗೂ ನೀವು ರಾಜಕುಮಾರ-ಕುಮಾರಿಯರಾಗುವವರ ಕಾಲೇಜನ್ನು ನೋಡಿ ಎಷ್ಟು ಸಾಧಾರಣವಾಗಿದೆ! ಮೂರು ಹೆಜ್ಜೆಗಳ ಸ್ಥಳವೂ ಸಹ ಸಿಗುವುದಿಲ್ಲ. ಅಲ್ಲಿ ರಾಜಕುಮಾರರು ಕಾಲೇಜುಗಳಲ್ಲಿ ಹೇಗೆ ಹೋಗುತ್ತಾರೆ ಎನ್ನುವುದನ್ನು ನೀವು ಅರಿತುಕೊಂಡಿದ್ದೀರಿ. ಅಲ್ಲಿ ನಡೆಯಬೇಕಾಗಿಲ್ಲ. ಅರಮನೆಯಿಂದ ಹೊರಬರುತ್ತೀರಿ ಮತ್ತು ಈ ವಿಮಾನವೂ ಹಾರಿಬಿಡುತ್ತದೆ. ಅಲ್ಲಿ ಎಷ್ಟು ಒಳ್ಳೆಯ ಕಾಲೇಜುಗಳಿರಬಹುದು. ಹೇಗೆ ಸುಂದರವಾದ ಹೂದೋಟ, ಅರಮನೆ ಇರಬಹುದು. ಅಲ್ಲಿಯ ಪ್ರತಿಯೊಂದು ವಸ್ತು ಹೊಸದು ಮತ್ತು ಎಲ್ಲದಕ್ಕಿಂತ ಶ್ರೇಷ್ಠ ನಂಬರ್ವನ್ ಆಗಿರುತ್ತದೆ. ಪಂಚತತ್ವಗಳೇ ಸತೋಪ್ರಧಾನವಾಗಿರುತ್ತದೆ. ನಿಮ್ಮ ಸೇವೆಯನ್ನು ಯಾರು ಮಾಡುತ್ತಾರೆ? ಈ ಪಂಚತತ್ವಗಳು ಬಹಳ ಒಳ್ಳೆಯ ವಸ್ತುಗಳನ್ನು ನಿಮಗಾಗಿ ರಚಿಸುತ್ತವೆ. ಯಾವಾಗ ಯಾವುದೇ ಫಲವು ತುಂಬಾ ಚೆನ್ನಾಗಿ ಬಿಡುತ್ತದೆಯೆಂದರೆ ಅದನ್ನು ರಾಜಾ-ರಾಣಿಯರಿಗೆ ಕೊಡುಗೆಯಾಗಿ ಕಳುಹಿಸುತ್ತಾರೆ. ಇಲ್ಲಂತೂ ನಿಮ್ಮ ತಂದೆ ಶಿವತಂದೆಯು ಎಲ್ಲರಿಗಿಂತ ಶ್ರೇಷ್ಠ ಆಗಿದ್ದಾರೆ, ಇವರಿಗೆ ಏನನ್ನು ತಿನ್ನಿಸುವಿರಿ! ಇವರು ಇದನ್ನು ಧರಿಸಬೇಕು, ಇದನ್ನು ತಿನ್ನಬೇಕು, ಇದನ್ನು ಮಾಡಬೇಕು…. ಎನ್ನುವಂತಹ ಯಾವುದೇ ಇಚ್ಛೆಯಿಟ್ಟುಕೊಳ್ಳುವುದಿಲ್ಲ ಹಾಗೆಯೇ ನೀವು ಮಕ್ಕಳಿಗೂ ಸಹ ಇಚ್ಛೆಗಳಿರಬಾರದು. ಇಲ್ಲಿ ಇವೆಲ್ಲವುಗಳನ್ನು ಮಾಡುತ್ತೀರೆಂದರೆ ಅಲ್ಲಿ ಕಡಿಮೆಯಾಗಿಬಿಡುತ್ತದೆ. ಈಗ ಇಡೀಪ್ರಪಂಚದ ತ್ಯಾಗ ಮಾಡಬೇಕಾಗಿದೆ. ದೇಹಸಹಿತ ಎಲ್ಲದರ ತ್ಯಾಗ ಮಾಡಬೇಕು. ವೈರಾಗ್ಯವು ಬಂದಾಗಲೇ ಅಲ್ಲಿ ಎಲ್ಲವೂ ತ್ಯಾಗವಾಗಿಬಿಡುತ್ತವೆ.

ತಂದೆಯು ತಿಳಿಸುತ್ತಾರೆ- ಮಕ್ಕಳೇ, ನಾನು ನೀವು ಮಕ್ಕಳಿಗಾಗಿ ಅಂಗೈಯಲ್ಲಿ ಸ್ವರ್ಗವನ್ನು ತಂದಿದ್ದೇನೆ. ನೀವೂ ಸಹ ತಿಳಿದುಕೊಂಡಿದ್ದೀರಿ- ತಂದೆಯು ನಮ್ಮವರಾಗಿದ್ದಾರೆ. ಅಂದಮೇಲೆ ಅವಶ್ಯವಾಗಿ ತಂದೆಯನ್ನು ನೆನಪು ಮಾಡಬೇಕಾಗಿದೆ. ಹೇಗೆ ಕನ್ಯೆಗೆ ನಿಶ್ಚಿತಾರ್ಥವಾಗುತ್ತದೆ ಅಥವಾ ಪ್ರೀತಿಯುಂಟಾಗುತ್ತದೆ ಎಂದರೆ ನಾವು ಪತಿಯನ್ನು ನೆನಪು ಮಾಡುವುದಿಲ್ಲವೆಂದು ಎಂದೂ ಹೇಳುವುದಿಲ್ಲ ಏಕೆಂದರೆ ಅವರು ಜೀವನದ ಸಂಗಾತಿಯಾಗಿರುತ್ತಾರೆ. ಹಾಗೆಯೇ ತಂದೆಯು ಮಕ್ಕಳ ಸಂಗಾತಿಯಾಗುತ್ತಾರೆ ಆದರೆ ಮಾಯೆಯು ಮರೆಸಿಬಿಡುತ್ತದೆ. ತಂದೆಯು ಹೇಳುತ್ತಾರೆ- ನನ್ನನ್ನು ನೆನಪು ಮಾಡಿ ಮತ್ತು ಆಸ್ತಿಯನ್ನು ನೆನಪು ಮಾಡಿ. ಇದರಲ್ಲಿ ಮುಕ್ತಿ-ಜೀವನ್ಮುಕ್ತಿಯೂ ಬಂದುಬಿಡುತ್ತದೆ. ಮತ್ತೆ ನಿಮ್ಮಿಂದ ಈ ತಪ್ಪುಗಳು ಏಕೆ ಆಗುತ್ತದೆ! ಇದು ಬುದ್ಧಿಯ ಕೆಲಸವಾಗಿದೆ, ನಾಲಿಗೆಯಿಂದಲೂ ಸಹ ಏನನ್ನೂ ಮಾತನಾಡುವ ಅವಶ್ಯಕತೆಯಿಲ್ಲ, ಕೇವಲ ನಿಶ್ಚಯ ಮಾಡಿಕೊಳ್ಳಬೇಕಾಗಿದೆ ಏಕೆಂದರೆ ನಾವು ಪವಿತ್ರರಾಗಿ ಪವಿತ್ರ ಪ್ರಪಂಚದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ ಎನ್ನುವುದನ್ನು ಅರಿತುಕೊಂಡಿದ್ದೇವೆ. ಇದರಲ್ಲಿ ಅರ್ಥಮಾಡಿಕೊಳ್ಳುವ ಮಾತಾಗಿದೆ, ಹೇಳುವ ಮಾತಿಲ್ಲ. ನಾವು ತಂದೆಯ ಮಕ್ಕಳಾಗಿದ್ದೇವೆ. ಶಿವತಂದೆಯು ಪತಿತರನ್ನು ಪಾವನ ಮಾಡುವವರಾಗಿದ್ದಾರೆ. ಅವರು ನನ್ನನ್ನು ನೆನಪು ಮಾಡುತ್ತಿರಬೇಕು ಎಂದು ಹೇಳುತ್ತಾರೆ. ಇದರ ಅರ್ಥವಾಗಿದೆ- ಮನ್ಮನಾಭವ. ಇದನ್ನು ಅವರು ಕೃಷ್ಣ ಭಗವಾನುವಾಚ ಎಂದು ಬರೆದುಬಿಟ್ಟಿದ್ದಾರೆ. ಪತಿತ-ಪಾವನನಂತು ಒಬ್ಬರೇ ಆಗಿದ್ದಾರೆ. ಸರ್ವರ ಸದ್ಗತಿದಾತನೂ ಒಬ್ಬರೇ ಆಗಿದ್ದಾರೆ, ಒಬ್ಬರನ್ನೇ ನೆನಪು ಮಾಡಬೇಕಾಗಿದೆ. ಅವರೇ ಹೇಳುತ್ತಾರೆ- ಮಕ್ಕಳೇ, ನಾನು ಒಬ್ಬ ತಂದೆಯನ್ನು ಮರೆಯುವ ಕಾರಣ ಎಷ್ಟು ಮಂದಿಯನ್ನು ನೆನಪು ಮಾಡುತ್ತೀರಿ! ಈಗ ನೀವು ನನ್ನನ್ನು ನೆನಪು ಮಾಡುತ್ತೀರೆಂದರೆ ವಿಕರ್ಮಾಜೀತರಾಜರಾಗಿಬಿಡುತ್ತೀರಿ. ವಿಕರ್ಮಾಜೀತ ರಾಜ ಮತ್ತು ವಿಕ್ರಮಿ ರಾಜರ ವ್ಯತ್ಯಾಸವನ್ನು ತಿಳಿಸಿದ್ದೇವಲ್ಲವೇ. ಪೂಜ್ಯರಿಂದ ಪೂಜಾರಿಗಳಾಗುತ್ತೀರಿ, ಕೆಳಗೆ ಬರಲೇಬೇಕಾಗಿದೆ. ವೈಶ್ಯವಂಶ, ನಂತರ ಶೂದ್ರವಂಶ. ವೈಶ್ಯವಂಶೀಯರಾಗುವುದು ಎಂದರೆ ವಾಮಮಾರ್ಗದಲ್ಲಿ ಬರುವುದು. ಇತಿಹಾಸ – ಭೂಗೋಳವೆಲ್ಲವೂ ಬುದ್ಧಿಯಲ್ಲಿದೆ, ಇದರ ಬಗ್ಗೆ ಅನೇಕ ಕಥೆಗಳೂ ಇವೆ. ಸತ್ಯಯುಗದಲ್ಲಿ ಮೋಹದ ಮಾತು ಇರುವುದಿಲ್ಲ. ಮಕ್ಕಳು ಮುಂತಾದವರು ತುಂಬಾ ಖುಷಿಯಲ್ಲಿರುತ್ತಾರೆ, ಬಹಳ ಚೆನ್ನಾಗಿ ಬೆಳೆಯುತ್ತಾರೆ. ದಾಸ ದಾಸಿಯರಂತು ಅವರಮುಂದೆಯೇ ಇರುತ್ತಾರೆ ಅಂದರೆ ತಮ್ಮ ಅದೃಷ್ಟವನ್ನು ನೋಡಿಕೊಳ್ಳಿ- ನಾವು ಇಂತಹ ಕಾಲೇಜಿನಲ್ಲಿ ಕುಳಿತಿದ್ದೇವೆ! ಇಲ್ಲಿಂದ ನಾವು ಭವಿಷ್ಯದಲ್ಲಿ ರಾಜಕುಮಾರ-ಕುಮಾರಿಯರಾಗುತ್ತೇವೆ ಎನ್ನುವ ವ್ಯತ್ಯಾಸವನ್ನಂತು ಅರಿತುಕೊಂಡಿದ್ದೀರಿ. ಆ ಕಲಿಯುಗೀ ರಾಜಕುಮಾರ-ಕುಮಾರಿ, ರಾಜಾ-ರಾಣಿ, ಈ ಸತ್ಯಯುಗೀ ರಾಜಕುಮಾರ-ಕುಮಾರಿ, ಮಹಾರಾಜಾ-ಮಹಾರಾಣಿ. ಅನೇಕರ ಹೆಸರುಗಳೂ ಇದೆ. ಲಕ್ಷ್ಮೀ-ನಾರಾಯಣ, ರಾಧೆ-ಕೃಷ್ಣ. ಲಕ್ಷ್ಮೀ-ನಾರಾಯಣ ಹಾಗೂ ರಾಧೆ-ಕೃಷ್ಣರ ಪೂಜೆಯನ್ನು ಏಕೆ ಮಾಡುತ್ತಾರೆ? ಹೆಸರಂತೂ ಒಂದೇ ಆಗಿದೆಯಲ್ಲವೇ. ಅವರು ಸ್ವರ್ಗದ ಮಾಲೀಕರಾಗಿದ್ದರು. ಈಗ ನಿಮಗೆ ತಿಳಿದಿದೆ- ಈ ಜ್ಞಾನವು ಶಾಸ್ತ್ರಗಳಲ್ಲಿಲ್ಲ. ಈ ಯಜ್ಞ, ತಪ, ದಾನ-ಪುಣ್ಯ ಮುಂತಾದವುಗಳಲ್ಲಿ ಯಾವುದೇ ಸಾರವಿಲ್ಲವೆಂದು ನಿಮಗೆ ಅರ್ಥವಾಗಿದೆ. ನಾಟಕದನುಸಾರ ಪ್ರಪಂಚವು ಹಳೆಯದಾಗಲೇಬೇಕಾಗಿದೆ. ಮನುಷ್ಯರೆಲ್ಲರೂ ತಮೋಪ್ರಧಾನ ಆಗಲೇಬೇಕಾಗಿದೆ. ಪ್ರತೀ ಮಾತಿನಲ್ಲಿ ತಮೋಪ್ರಧಾನ, ಕ್ರೋಧ-ಲೋಭ ಎಲ್ಲದರಲ್ಲಿ ತಮೋಪ್ರಧಾನತೆಯಿದೆ. ನಮ್ಮ ಸ್ಥಳದಮೇಲೆ ಇವರ ಹಸ್ತಕ್ಷೇಪವೇಕೆ ಮಾಡುತ್ತಾರೆ, ಇವರನ್ನು ಷೂಟ್ ಮಾಡಿ ಎಂದು ಎಷ್ಟೊಂದು ಜಗಳ ಮಾಡುತ್ತಾರೆ! ಪರಸ್ಪರ ಎಷ್ಟು ಹೊಡೆದಾಡುತ್ತಾರೆ ಒಬ್ಬರು ಇನ್ನೊಬ್ಬರನ್ನು ಕೊಲೆ ಮಾಡುವುದರಲ್ಲಿಯೂ ಸಹ ನಿಧಾನಿಸುವುದಿಲ್ಲ. ತನ್ನ ತಂದೆಯು ಬೇಗ ಶರೀರಬಿಟ್ಟರೆ ಆಸ್ತಿಯು ಸಿಗುತ್ತದೆ….. ಎಂದು ಮಗ ತಿಳಿಯುತ್ತಾನೆ, ಇಂತಹ ತಮೋಪ್ರಧಾನ ಪ್ರಪಂಚದ ವಿನಾಶವು ಈಗ ಆಗಲೇಬೇಕಾಗಿದೆ ನಂತರ ಸತೋಪ್ರಧಾನ ಪ್ರಪಂಚವು ಬರುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಪುಣ್ಯಾತ್ಮರಾಗಲು ನೆನಪಿನ ಪರಿಶ್ರಮ ಪಡಬೇಕು. ಎಲ್ಲಾ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿ ಪಾಸ್ ವಿತ್ ಆನರ್ ಆಗಿ ಗೌರವದಿಂದ ಹೋಗಬೇಕಾಗಿದೆ, ಆದ್ದರಿಂದ ಕರ್ಮಭೋಗದಿಂದ ಹೆದರಬಾರದು, ಖುಷಿ-ಖುಷಿಯಾಗಿ ಸಮಾಪ್ತಿ ಮಾಡಬೇಕಾಬೇಕಾಗಿದೆ.

2. ನಾವು ಭವಿಷ್ಯ ರಾಜಕುಮಾರ-ಕುಮಾರಿಯರಾಗುತ್ತಿದ್ದೇವೆ, ಇದು ರಾಜಕುಮಾರ-ಕುಮಾರಿಯರಾಗುವ ಕಾಲೇಜ್ ಆಗಿದೆ ಎನ್ನುವ ನಶೆಯು ಸದಾ ಇರಬೇಕು.

ವರದಾನ:-

ಯಾರು ಅಚಲ ಸ್ಥಿತಿಯವರಿದ್ದಾರೆಯೋ ಅವರಲ್ಲಿ ಇದೇ ಶುಭ ಭಾವನೆ, ಶುಭ ಕಾಮನೆಯ ಉತ್ಪನ್ನವಾಗುವುದು- ಇವರೂ ಸಹ ಅಚಲರಾಗಿಬಿಡಲಿ. ಅಚಲ ಸ್ಥಿತಿಯಿರುವವರ ವಿಶೇಷ ಗುಣವಿರುತ್ತದೆ- ದಯಾಹೃದಯ. ಪ್ರತಿಯೊಂದು ಆತ್ಮನ ಬಗ್ಗೆ ಸದಾ ದಾತಾತನ ಭಾವನೆಯಿರುವುದು. ಅವರ ವಿಶೇಷ ಬಿರುದೇ ಇರುತ್ತದೆ- ವಿಶ್ವ ಕಲ್ಯಾಣಕಾರಿ. ಅವರಿಗೆ ಯಾವುದೇ ಆತ್ಮನ ಬಗ್ಗೆ ತಿರಸ್ಕಾರ, ದ್ವೇಷ, ಈರ್ಷ್ಯಾ ಭಾವ ಅಥವಾ ಗ್ಲಾನಿಯ ಭಾವವು ಉತ್ಪನ್ನವಾಗಲು ಸಾಧ್ಯವಿಲ್ಲ. ಸದಾಕಾಲ ಕಲ್ಯಾಣದ ಭಾವವಿರುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top