16 June 2022 KANNADA Murli Today | Brahma Kumaris

Read and Listen today’s Gyan Murli in Kannada

June 15, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ- ನೀವು ಯಾವುದೇ ದೇಹಧಾರಿಯ ನಾಮ-ರೂಪದಲ್ಲಿ ಸಿಕ್ಕಿಕೊಳ್ಳಬಾರದಾಗಿದೆ, ನೀವು ಅಶರೀರಿಯಾಗಿ ತಂದೆಯನ್ನು ನೆನಪು ಮಾಡಿದಾಗ ಆಯಸ್ಸು ವೃದ್ಧಿಯಾಗುತ್ತದೆ, ನಿರೋಗಿಯಾಗುತ್ತಾ ಹೋಗುತ್ತೀರಿ”

ಪ್ರಶ್ನೆ:: -

ಬುದ್ಧಿವಂತ ಮಕ್ಕಳ ಮುಖ್ಯ ಲಕ್ಷಣಗೇಳಾನಿದೆ?

ಉತ್ತರ:-

ಯಾರು ಬುದ್ಧಿವಂತರಾಗಿರುತ್ತಾರೆ ಅವರು ಮೊದಲು ಸ್ವಯಂನಲ್ಲಿ ಧಾರಣೆ ಮಾಡಿಕೊಂಡನಂತರ ಅನ್ಯರಿಗೆ ಧಾರಣೆ ಮಾಡಿಸುತ್ತಾರೆ. ಮೋಡಗಳು ತುಂಬಿಕೊಂಡು ಹೋಗಿ ಮಳೆಸುರಿಸುತ್ತವೆ. ವಿದ್ಯೆಯ ಸಮಯದಲ್ಲಿ ಆಕಳಿಸುವುದಿಲ್ಲ. ಬ್ರಾಹ್ಮಣಿಯರ ಮೇಲೆ ಜವಾಬ್ದಾರಿಯಿದೆ- ಇಲ್ಲಿ ಯಾರು ರಿಫ್ರೆಷ್ ಹೋಗಿ ಮಳೆ ಸುರಿಸುತ್ತಾರೆ, ಅಂತಹವರನ್ನೇ ಇಲ್ಲಿ ಕರೆದುಕೊಂಡು ಬರಬೇಕಾಗಿದೆ. 2. ಯಾರು ಯೋಗದಲ್ಲಿ ಒಳ್ಳೆಯ ರೀತಿಯಲ್ಲಿ ಅನುಭವ ಮಾಡುತ್ತಿದ್ದು ವಾಯುಮಂಡಲವನ್ನು ಶಕ್ತಿಶಾಲಿಯನ್ನಾಗಿ ಮಾಡುವುದರಲ್ಲಿ ಸಹಯೋಗ ಕೊಡುತ್ತಾರೆ, ವಿಘ್ನಗಳನ್ನು ಹಾಕುವುದಿಲ್ಲ, ಅಂತಹವರೇ ಇಲ್ಲಿ ಬರಬೇಕು. ಇಲ್ಲಿ ಸುತ್ತ-ಮುತ್ತ ತುಂಬಾ ಶಾಂತಿಯಿರಬೇಕು. ಯಾವುದೇ ಪ್ರಕಾರದ ಶಬ್ದವಾಗಬಾರದು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಓಂ ನಮಃ ಶಿವಾಯ…..

ಓಂ ಶಾಂತಿ. ಓಂಶಾಂತಿಯ ಅರ್ಥವನ್ನಂತು ತಿಳಿಸಲಾಗಿದೆಯಲ್ಲವೆ- ತಂದೆಯು ತಿಳಿಸುತ್ತಾರೆ, ಆತ್ಮ ಮತ್ತು ಪರಮಾತ್ಮ ಶಾಂತ ಸ್ವರೂಪರಾಗಿದ್ದಾರೆ. ತಂದೆ ಹೇಗಿದ್ದಾರೆಯೋ ಹಾಗೆಯೇ ಮಕ್ಕಳು ಅಂದಮೇಲೆ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ- ನೀವು ಶಾಂತಸ್ವರೂಪರಾಗಿಯೇ ಇದ್ದೀರಿ. ಹೊರಗಡೆಯಿಂದ ಯಾವುದೇ ಶಾಂತಿ ಸಿಗುವುದಿಲ್ಲ. ಇದು ರಾವಣರಾಜ್ಯವಲ್ಲವೆ. ನೀವು ಈ ಸಮಯದಲ್ಲಿ ಕೇವಲ ತಂದೆಯು ನೆನಪು ಮಾಡಿ. ನಾನು ಇವರಲ್ಲಿ ವಿರಾಜಮಾನನಿದ್ದೇನೆ, ನಿಮಗೆ ಯಾವ ಮತವನ್ನು ಕೊಡುತ್ತೇನೆಯೋ ಅದರಂತೆ ನಡೆಯಿರಿ. ತಂದೆಯೂ ಯಾರದೇ ನಾಮ-ರೂಪದಲ್ಲಿ ಸಿಕ್ಕಿಹಾಕಿಸುವುದಿಲ್ಲ. ಈ ನಾಮ-ರೂಪವು(ಶರೀರ) ಹೊರಗಿನದಾಗಿದೆ, ನೀವು ಈ ರೂಪದಲ್ಲಿ ಸಿಕ್ಕಿಕೊಳ್ಳಬಾರದು. ಜಗತ್ತೆಲ್ಲವೂ ನಾಮ-ರೂಪದಲ್ಲಿ ಸಿಕ್ಕಿಹಾಕಿಸುತ್ತದೆ. ತಂದೆಯು ತಿಳಿಸುತ್ತಾರೆ- ಮಕ್ಕಳೇ, ಇವರೆಲ್ಲರಿಗೂ ನಾಮ-ರೂಪವಿದೆ, ಇವರನ್ನು ನೆನಪು ಮಾಡಬಾರದು. ತಮ್ಮ ತಂದೆಯನ್ನು ನೆನಪು ಮಾಡಿ ಆಗ ನಿಮ್ಮ ಆಯಸ್ಸೂ ಸಹ ನೆನಪಿನಿಂದ ವೃದ್ಧಿಯಾಗುತ್ತದೆ, ನಿರೋಗಿಯಾಗುತ್ತೀರಿ. ಲಕ್ಷ್ಮೀ-ನಾರಾಯಣರು ನಿಮ್ಮಂತೆಯೇ ಇದ್ದರು, ಕೇವಲ ಶೃಂಗರಿಸಲ್ಪಟ್ಟಿದ್ದಾರೆ. ಕೆಲವರ ಎತ್ತರ, ತುಂಬಾ ಉದ್ದವಿದ್ದಾರೆ ಎಂದಲ್ಲ. ಮನುಷ್ಯರಂತು ಮನುಷ್ಯರೇ ಆಗಿರುತ್ತಾರೆ ಆದ್ದರಿಂದ ತಂದೆ ತಿಳಿಸುತ್ತಾರೆ- ಯಾವುದೇ ದೇಹಧಾರಿಗಳನ್ನು ನೆನಪು ಮಾಡಬಾರದು. ದೇಹವನ್ನು ಮರೆಯಬೇಕಾಗಿದೆ, ತಮ್ಮನ್ನು ಆತ್ಮನೆಂದು ತಿಳಿಯಿರಿ ಏಕೆಂದರೆ ಈ ಶರೀರವನ್ನಂತು ಬಿಡಬೇಕಾಗಿದೆ. ಎರಡನೆಯ ಮಾತು- ಈಗ ತಪ್ಪು ಮಾಡಬಾರದು, ವಿಕರ್ಮಗಳ ಹೊರೆಯು ತಲೆಯ ಮೇಲೆ ಬಹಳಷ್ಟಿದೆ. ತುಂಬಾ ದೊಡ್ಡ ಹೊರೆಯಿದೆ. ಇದು ಒಬ್ಬ ತಂದೆಯ ನೆನಪಿನ ವಿನಃ ಕಡಿಮೆಯಾಗಲು ಸಾಧ್ಯವಿಲ್ಲ. ತಂದೆಯು ತಿಳಿಸಿದ್ದಾರೆ- ಯಾರು ಎಲ್ಲರಿಗಿಂತ ಶ್ರೇಷ್ಠ ಪಾವನರಾಗುತ್ತಾರೆ, ಅವರೇ ಮತ್ತೆ ಎಲ್ಲರಿಗಿಂತ ಪತಿತರಾಗುತ್ತಾರೆ, ಇದರಲ್ಲಿ ಆಶ್ಚರ್ಯಪಡಬಾರದು, ತಮ್ಮನ್ನು ನೋಡಿಕೊಳ್ಳಬೇಕು, ತಂದೆಯನ್ನು ನೆನಪು ಮಾಡಬೇಕಾಗಿದೆ. ಎಷ್ಟು ಸಾಧ್ಯವಾಗುತ್ತದೆಯೋ ತಂದೆಯನ್ನು ನೆನಪು ಮಾಡಿ, ಇದು ತುಂಬಾ ಸಹಜವಾಗಿದೆ. ಇವರು ಇಷ್ಟು ಪ್ರಿಯತಂದೆಯಾಗಿದ್ದಾರೆ ಆದ್ದರಿಂದ ಏಳುತ್ತಾ-ಕುಳಿತುಕೊಳ್ಳುತ್ತಾ ನೆನಪು ಮಾಡಬೇಕಾಗಿದೆ. ಯಾರನ್ನು ಪತಿತ-ಪಾವನ ಬನ್ನಿ ಎಂದು ಕರೆಯುತ್ತೀರಿ, ಅವರ ಮೇಲೆ ಪ್ರತೀಶ್ವಾಸದ ಪ್ರೀತಿಯಿರುವುದಿಲ್ಲ. ಆದರೂ ಸಹ ಪ್ರೀತಿಯಂತು ತಮ್ಮ ಪತಿ-ಮಕ್ಕಳು ಮುಂತಾದವರೊಂದಿಗೆ ಇರುತ್ತದೆ. ಕೇವಲ ಪತಿತ-ಪಾವನ ಬನ್ನಿ ಎಂದು ಹೇಳುತ್ತಿದ್ದಿರಿ. ತಂದೆಯು ಹೇಳುತ್ತಾರೆ- ಮಕ್ಕಳೇ, ನಾನು ಕಲ್ಪ-ಕಲ್ಪ, ಕಲ್ಪದ ಸಂಗಮಯುಗದಲ್ಲಿ ಬರುತ್ತೇನೆ. ರುದ್ರಜ್ಞಾನ ಯಜ್ಞವೆಂದೂ ಗಾಯನವಿದೆ. ಕೃಷ್ಣನಂತೂ ಸತ್ಯಯುಗದ ರಾಜಕುಮಾರನಾಗಿದ್ದಾನೆ. ಕೃಷ್ಣನು ಮತ್ತೆ ಅದೇ ನಾಮ, ರೂಪ, ದೇಶ, ಕಾಲವನ್ನು ಬಿಟ್ಟು ಬೇರೆ ಸಮಯದಲ್ಲಿ ಬರಲು ಸಾಧ್ಯವಿಲ್ಲ. ನೆಹರು ಅದೇ ರೂಪದಲ್ಲಿ, ಅದೇ ಸ್ಥಾನದಲ್ಲಿ ಮತ್ತೆ ಕಲ್ಪದ ನಂತರ ಬರುತ್ತಾರೆ. ಹಾಗೆಯೇ ಶ್ರೀಕೃಷ್ಣನೂ ಸಹ ಸತ್ಯಯುಗದಲ್ಲಿ ಬರುತ್ತಾನೆ. ಈ ಯಜ್ಞದ ಹೆಸರೇ ರುದ್ರಜ್ಞಾನ ಯಜ್ಞ. ರಾಜಸ್ವ ಅಶ್ವಮೇಧಯಜ್ಞ ಎಂದಾಗಿದೆ. ರಾಜ್ಯಭಾಗ್ಯಕ್ಕಾಗಿ ಬಲಿಹಾರಿ ಆಗುವುದು ಎಂದರೆ ತಂದೆಯ ಮಕ್ಕಳಾಗುವುದಾಗಿದೆ. ತಂದೆಯ ಮಕ್ಕಳಾಗಿದ್ದೀರಿ ಅಂದಮೇಲೆ ಅವರೊಬ್ಬರನ್ನೇ ನೆನಪು ಮಾಡಬೇಕು. ಹದ್ದಿನಿಂದ ಬುದ್ಧಿಯನ್ನು ತೆಗೆದು ಬೇಹದ್ದಿನೊಂದಿಗೆ ಜೋಡಿಸಬೇಕಾಗಿದೆ, ಇವರು ತುಂಬಾ ದೊಡ್ಡ ತಂದೆಯಾಗಿದ್ದಾರೆ. ತಂದೆಯು ಬಂದು ಏನು ಕೊಡುತ್ತಾರೆಂದು ನೀವು ಮಕ್ಕಳಿಗೆ ತಿಳಿದುಕೊಂಡಿದ್ದೀರಿ. ಬೇಹದ್ದಿನ ತಂದೆಯು ನಿಮಗೆ ಬೇಹದ್ದಿನ ಆಸ್ತಿಯನ್ನು ಕೊಡುತ್ತಿದ್ದಾರೆ, ಇದನ್ನು ಮತ್ಯಾರೂ ಕೊಡುವುದಿಲ್ಲ. ಮನುಷ್ಯರಂತೂ ಒಬ್ಬರನ್ನೊಬ್ಬರು ಹೊಡೆಯುತ್ತಾ, ಸಾಯಿಸುತ್ತಿರುತ್ತಾರೆ, ಮೊದಲು ಈ ರೀತಿ ಆಗುತ್ತಿರಲಿಲ್ಲ.

ನೀವು ತಿಳಿದುಕೊಂಡಿದ್ದೀರಿ- ತಂದೆಯು ಮತ್ತೆ ಬಂದಿದ್ದಾರೆ. ಕಲ್ಪ-ಕಲ್ಪದ ಸಂಗಮಯುಗ, ಯಾವಾಗ ಹೊಸಪ್ರಪಂಚದ ಸ್ಥಾಪನೆ ಮಾಡಬೇಕಾಗಿದೆ, ಆಗ ನಾನು ಬರುತ್ತೇನೆಂದು ಹೇಳುತ್ತಾರೆ. ಹೊಸಪ್ರಪಂಚ, ಹೊಸ ರಾಮರಾಜ್ಯ ಬೇಕೆಂದು ಬೇಡುತ್ತಾರೆ. ಅಲ್ಲಿ ಸುಖ-ಸಂಪತ್ತು ಎಲ್ಲವೂ ಇರುತ್ತದೆ, ಜಗಳ ಮಾಡುವವರೂ ಸಹ ಯಾರೂ ಇರುವುದಿಲ್ಲ. ಶಾಸ್ತ್ರಗಳಲ್ಲಂತು ಸತ್ಯಯುಗ-ತ್ರೇತಾಯುಗವನ್ನೂ ಸಹ ನರಕವನ್ನಾಗಿ ಮಾಡಿಬಿಟ್ಟಿದ್ದಾರೆ. ಇದು ತಪ್ಪಾಗಿದೆಯಲ್ಲವೇ. ಅವರು ಅಸತ್ಯವನ್ನೇ ತಿಳಿಸುತ್ತಾರೆ, ತಂದೆಯು ಸತ್ಯವನ್ನೇ ತಿಳಿಸುತ್ತಾರೆ. ತಂದೆ ತಿಳಿಸುತ್ತಾರೆ- ನೀವು ನನ್ನನ್ನು ಸತ್ಯ ಎಂದು ಹೇಳುತ್ತೀರಲ್ಲವೇ. ನಾನು ಬಂದು ಸತ್ಯಕಥೆಯನ್ನು ತಿಳಿಸುತ್ತೇನೆ. 5000 ವರ್ಷಗಳ ಮೊದಲು ಭಾರತದಲ್ಲಿ ಯಾರ ರಾಜ್ಯವಿತ್ತು ಎನ್ನುವುದನ್ನು ಮಕ್ಕಳು ತಿಳಿದುಕೊಂಡಿದ್ದೀರಿ. ಸರಾಸರಿ 5000 ವರ್ಷಗಳ ಮೊದಲು ಈ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು. ಕ್ರೈಸ್ಟ್ ಗೆ 3000 ವರ್ಷಗಳ ಮೊದಲು ಭಾರತವು ಸ್ವರ್ಗವಾಗಿತ್ತು ಎಂದು ಹೇಳುತ್ತಾರೆ. ಲೆಕ್ಕವಂತು ಸರಿಯಾಗಿದೆ. ಕಲ್ಪದ ಆಯಸ್ಸನ್ನು ಏಕೆ ಇಷ್ಟೊಂದು ಮಾಡಿಬಿಟ್ಟಿದ್ದಾರೆ! ಎಂದು ಹೇಳುತ್ತಾರೆ. ಅರೇ! ಲೆಕ್ಕಮಾಡಿ. ಕ್ರೈಸ್ಟ್ ಬಂದು ಎಷ್ಟು ಸಮಯವಾಯಿತು. ನಾಲ್ಕು ಯುಗಗಳೂ ಇದೆ. ಅರ್ಧಕಲ್ಪ ದಿನ, ಅರ್ಧಕಲ್ಪ ರಾತ್ರಿಗೆ ಹಿಡಿಸುತ್ತದೆ. ತಿಳಿಸುವವರು ತುಂಬಾ ಚೆನ್ನಾಗಿರಬೇಕು. ತಂದೆ ತಿಳಿಸುತ್ತಾರೆ- ಮಕ್ಕಳೇ, ಕಾಮ ಮಹಾಶತ್ರುವಾಗಿದೆ. ಭಾರತವಾಸಿಗಳೇ ದೇವತೆಗಳ ಮಹಿಮೆಯನ್ನು ಹಾಡುತ್ತಾರೆ- ಸರ್ವಗುಣ ಸಂಪನ್ನ, 16 ಕಲಾಸಂಪೂರ್ಣ… ಮತ್ತೆ 16,108 ರಾಣಿಯರೆಲ್ಲಿಂದ ಬಂದರು! ನಿಮಗೆ ತಿಳಿದಿದೆ ಯಾವುದೇ ಧರ್ಮಶಾಸ್ತ್ರವಿಲ್ಲ. ಯಾವುದನ್ನು ಧರ್ಮಸ್ಥಾಪಕರು ಉಚ್ಛರಿಸಿದರೋ ಅದನ್ನು ಧರ್ಮಶಾಸ್ತ್ರವೆಂದು ಹೇಳಲಾಗುತ್ತದೆ. ಧರ್ಮಸ್ಥಾಪಕನ ಹೆಸರಿನಿಂದ ಶಾಸ್ತ್ರಗಳಾದವು. ಈಗ ನೀವು ಮಕ್ಕಳು ಹೊಸಪ್ರಪಂಚದಲ್ಲಿ ಹೋಗುತ್ತೀರಿ. ಇದೆಲ್ಲವೂ ಹಳೆಯ ತಮೋಪ್ರಧಾನ ಪ್ರಪಂಚವಾಗಿದೆ ಆದ್ದರಿಂದ ತಂದೆಯು ಹೇಳುತ್ತಾರೆ- ಈ ಹಳೆಯ ವಸ್ತುಗಳಿಂದ ಬುದ್ಧಿಯೋಗವನ್ನು ತೆಗೆದು ನನ್ನೊಬ್ಬನನ್ನೇ ನೆನಪು ಮಾಡಿ ಆಗ ನಿಮ್ಮ ವಿಕರ್ಮ ವಿನಾಶವಾಗುತ್ತದೆ. ತಪ್ಪು ಮಾಡುತ್ತೀರೆಂದರೆ ಇವರ ಅದೃಷ್ಟವೇ ಹೀಗಿದೆ ಎಂದು ತಂದೆಯು ತಿಳಿಸುತ್ತಾರೆ. ಇದು ಬಹಳ ಸಹಜ ಮಾತುಗಳಾಗಿವೆ. ಇದನ್ನು ನಿಮ್ಮ ತಿಳುವಳಿಕೆಯಲ್ಲಿ ಬರುವುದಿಲ್ಲವೆ! ಎಲ್ಲಾ ಕಡೆಯಿಂದ ಮೋಹವನ್ನು ತೆಗೆದು ಒಬ್ಬ ತಂದೆಯನ್ನು ನೆನಪು ಮಾಡಿ. 21 ಜನ್ಮಗಳಿಗೋಸ್ಕರ ನಿಮಗೆ ಮತ್ತೆ ಯಾವುದೇ ದುಃಖವಿರುವುದಿಲ್ಲ. ಅಲ್ಲಿ ನೀವು ಇಷ್ಟೊಂದು ಕುಬ್ಜೆಯರು ಮುಂತಾದವರು ಆಗುವುದಿಲ್ಲ. ಅಲ್ಲಂತೂ ಪೂರ್ಣಾಯಸ್ಸು ಇರುತ್ತದೆ, ಕೇವಲ ಒಂದು ಶರೀರವನ್ನು ಬಿಟ್ಟು ಇನ್ನೊಂದು ತೆಗೆದುಕೊಳ್ಳಬೇಕೆಂದು ತಿಳಿಯುತ್ತಾರೆ. ಹೇಗೆ ಸರ್ಪದ ಉದಾಹರಣೆ ಇದೆ, ಪ್ರಾಣಿಗಳ ಉದಾಹರಣೆಯನ್ನು ಕೊಡಬಹುದು. ಅವಶ್ಯವಾಗಿ ಅವುಗಳಿಗೆ ತಿಳಿದಿರುತ್ತದೆ. ವರ್ತಮಾನ ಸಮಯದಲ್ಲಿ ಪ್ರಾಣಿಗಳಿಗೂ ಸಹ ಮನುಷ್ಯರಿಗಿಂತ ಹೆಚ್ಚಿನ ಬುದ್ಧಿಯಿರುತ್ತದೆ. ಭ್ರಮರಿಯ ಉದಾಹರಣೆಯೂ ಸಹ ಇಲ್ಲಿಯದಾಗಿದೆ. ಅದು ಕೀಟವನ್ನು ಹೇಗೆ ತೆಗೆದುಕೊಂಡು ಹೋಗುತ್ತದೆ! ಈಗ ನಿಮ್ಮ ಸುಖದ ದಿನಗಳು ಬರುತ್ತಿದೆ. ಕೆಲವು ಮಕ್ಕಳು ಹೇಳುತ್ತಾರೆ- ಬಾಬಾ ನಾವು ಪವಿತ್ರರಾಗಿರುತ್ತೇವೆ ಆದ್ದರಿಂದ ತುಂಬಾ ಪೆಟ್ಟನ್ನು ತಿನ್ನಬೇಕಾಗುತ್ತದೆ. ತಂದೆಯು ಹೇಳುತ್ತಾರೆ- ಹೌದು ಮಕ್ಕಳೇ ಸಹನೆ ಮಾಡಲೇಬೇಕಾಗಿದೆ. ಅಬಲೆಯರ ಮೇಲೆ ಹತ್ಯಾಚಾರವಾಗುತ್ತದೆ ಎಂಬ ಗಾಯನವಿದೆ. ಹತ್ಯಾಚಾರ ಮಾಡಬೇಕು, ಆಗಲೇ ಅವರ ಪಾಪದ ಕೊಡ ತುಂಬುತ್ತದೆ. ರುದ್ರಜ್ಞಾನ ಯಜ್ಞದಲ್ಲಿ ಅನೇಕ ವಿಘ್ನಗಳಂತೂ ಬೀಳುತ್ತವೆ. ಅಬಲೆಯರ ಮೇಲೆ ಅತ್ಯಾಚಾರವಾಗುತ್ತದೆ. ಶಾಸ್ತ್ರಗಳಲ್ಲಿ ಗಾಯನವಿದೆ. ಮಕ್ಕಳು ಹೇಳುತ್ತಾರೆ- ಬಾಬಾ ಇಂದಿನಿಂದ 5000 ವರ್ಷಗಳ ಮೊದಲು ತಮ್ಮೊಂದಿಗೆ ಮಿಲನ ಮಾಡಿದ್ದೆವು. ಸ್ವರ್ಗದ ಆಸ್ತಿಯನ್ನು ತೆಗೆದುಕೊಂಡಿದ್ದೆವು, ಮಹಾರಾಜಾ-ಮಹಾರಾಣಿ ಆಗಿದ್ದೆವು ಅದಕ್ಕೆ ತಂದೆಯು ಹೇಳುತ್ತಾರೆ- ಹೌದು ಮಗು ಇಷ್ಟು ಪುರುಷಾರ್ಥ ಮಾಡಲೇಬೇಕಾಗುತ್ತದೆ. ಶಿವತಂದೆಯನ್ನು ನೆನಪು ಮಾಡಬೇಕು, (ಬ್ರಹ್ಮಾ)ಇವರನ್ನಲ್ಲ. ಇವರು ಗುರುವಲ್ಲ. ಈಗ ಇವರ ಕಿವಿಗಳೂ ಸಹ ಕೇಳುತ್ತವೆ- ನಾನು ನಿಮ್ಮ ತಂದೆ-ಟೀಚರ್-ಸದ್ಗುರು ಆಗಿದ್ದೇನೆ. ನನ್ನ ಮುಖಾಂತರ ಕಲಿತು ಅನ್ಯರಿಗೆ ಕಲಿಸುತ್ತಾರೆ. ಸರ್ವರ ತಂದೆ ಅವರೊಬ್ಬರೇ ಆಗಿದ್ದಾರೆ. ನಮಗೂ ಕಲಿಸುವವರು ಅವರೇ ಆಗಿದ್ದಾರೆ ಆದ್ದರಿಂದ ಬೇಹದ್ದಿನ ತಂದೆಯನ್ನು ನೆನಪು ಮಾಡಬೇಕಾಗಿದೆ. ವಿಷ್ಣುವಿಗಾಗಲಿ ಅಥವಾ ಬ್ರಹ್ಮನಿಗಾಗಲಿ ಪತಿಯರ ಪತಿ ಎಂದು ಹೇಳುತ್ತಾರೆಯೇ! ಶಿವತಂದೆಗೆ ಪತಿಯರ ಪತಿ ಎಂದು ಹೇಳಲಾಗುವುದು ಅಂದಮೇಲೆ ಅವರನ್ನು ಏಕೆ ಹಿಡಿದುಕೊಳ್ಳಬಾರದು! ತಾವೆಲ್ಲರೂ ಮೊದಲು ಮೂಲವತನ ತಮ್ಮ ತಂದೆಯ ಮನೆಗೆ ಹೋಗುತ್ತೀರಿ ನಂತರ ಅತ್ತೆಮನೆಗೆ ಬರಬೇಕು. ಮೊದಲು ಶಿವಬಾಬಾನ ಮುಂದೆ ಶರಣಾಗಬೇಕು. ನಂತರ ಸತ್ಯಯುಗದಲ್ಲಿ ಬರುತ್ತೀರಿ. ಇದು ಎಷ್ಟು ಸಹಜವಾದ ನಯಾಪೈಸೆಯ ಮಾತಾಗಿದೆ.

ಎಲ್ಲಿ ಯಾರೂ ತೂಕಡಿಸುತ್ತಿಲ್ಲವೆ ಎಂದು ಬಾಬಾ ಎಲ್ಲಾ ಕಡೆಯ ಮಕ್ಕಳನ್ನು ನೋಡುತ್ತಾರೆ. ತೂಕಡಿಸುತ್ತೀರಿ, ಆಕಳಿಸುತ್ತೀರಿ, ಬುದ್ಧಿಯೋಗವು ಬೇರೆಕಡೆ ಹೋಯಿತೆಂದರೆ ಅಂತಹವರು ವಾಯುಮಂಡಲವನ್ನು ಹಾಳು ಮಾಡುತ್ತಾರೆ ಅಥವಾ ಕೆಡಿಸಿಬಿಡುತ್ತಾರೆ ಏಕೆಂದರೆ ಬುದ್ಧಿಯೋಗವೂ ಅಲೆದಾಡುತ್ತಾ ಇರುತ್ತದೆ. ಅದಕ್ಕಾಗಿ ಬಾಬಾ ಸದಾ ಹೇಳುತ್ತಾರೆ- ಮೋಡಗಳನ್ನು ಈ ರೀತಿ ತುಂಬಿಕೊಂಡು ಹೋಗಬೇಕು. ಅದಕ್ಕಾಗಿ ಸ್ವಯಂ ರಿಫ್ರೆಷ್ ಆಗಿ ಹೋಗಿ ಚೆನ್ನಾಗಿ ಮಳೆಯನ್ನು ಸುರಿಸಿ. ಮತ್ತೇನು ಮಾಡುತ್ತೀರಿ? ಕರೆದುಕೊಂಡು ಬರುವವರ ಮೇಲೂ ಜವಾಬ್ದಾರಿಯಿದೆ. ಯಾವ ಬ್ರಾಹ್ಮಣಿ ಜವಾಬ್ದಾರರಾಗಿದ್ದಾರೆ ಅವರು ತುಂಬಿಕೊಂಡು ಹೋಗಿ ಮಳೆಯನ್ನು ಸುರಿಸುವವರನ್ನು ಕರೆತರಬೇಕು ಆದರೆ ಅನ್ಯರನ್ನು ಕರೆತರುವುದರಿಂದ ಲಾಭವೇನಿದೆ? ಧಾರಣೆ ಮಾಡಿಕೊಂಡು ನಂತರ ಧಾರಣೆ ಮಾಡಿಸಬೇಕು, ಪರಿಶ್ರಮಪಡಬೇಕು. ಯಾವ ಭಂಡಾರದಿಂದ ತಿನ್ನುತ್ತಾರೆ, ಅವರ ಕಾಲಕಂಟಕಗಳು ದೂರವಾಗಿಬಿಡುತ್ತದೆ. ಯಾರು ಯೋಗದಲ್ಲಿಯೂ ಚೆನ್ನಾಗಿ ಇರುತ್ತಾರೆ ಅಂತಹವರೇ ಇಲ್ಲಿಗೆ ಬರಬೇಕು. ಇಲ್ಲವೆಂದರೆ ವಾಯುಮಂಡಲವನ್ನು ಕೆಡಿಸಿಬಿಡುತ್ತಾರೆ. ಈ ಸಮಯದಲ್ಲಂತೂ ಬಹಳ ಎಚ್ಚರಿಕೆಯಿಂದ ಇರಬೇಕು. ಫೋಟೋ ತೆಗೆಸಿಕೊಳ್ಳುವ ಅವಶ್ಯಕತೆಯಿಲ್ಲ. ಎಷ್ಟು ಸಾಧ್ಯವೋ ಅಷ್ಟು ತಂದೆಯ ನೆನಪಿನಲ್ಲಿದ್ದು ಯೋಗದಾನ ಮಾಡಬೇಕು. ಸುತ್ತಮುತ್ತ ಬಹಳ ಶಾಂತಿಯಿರಬೇಕು. ಆಸ್ಪತ್ರೆಯೂ ಸದಾ ಬಹಳ ದೂರದಲ್ಲಿ ಏಕಾಂತದಲ್ಲಿರುತ್ತದೆ. ಅಲ್ಲಿ ಶಬ್ದವೇ ಇರಬಾರದು. ರೋಗಿಗಳಿಗೆ ಶಾಂತಿ ಬೇಕಾಗಿರುತ್ತದೆ. ನಿಮಗೆ ಡೈರೆಕ್ಷನ್ ಸಿಗುತ್ತದೆ- ಏನೆಂದರೆ ಅಂತಹ ಶಾಂತಿಯಲ್ಲಿರುವುದು. ತಂದೆಯನ್ನು ನೆನಪು ಮಾಡುವುದು ನಿಜವಾದ ಶಾಂತಿಯಾಗಿದೆ. ಬಾಕಿ ಎಲ್ಲವೂ ಕೃತಕವಾದುದಾಗಿದೆ. ಅವರು 2 ನಿಮಿಷ ಡೆಡ್ ಸೈಲೆನ್ಸ್ ಎಂದು ಹೇಳುತ್ತಾರಲ್ಲವೆ, ಆದರೆ ಆ 2 ನಿಮಿಷದಲ್ಲಿಯೂ ಬುದ್ಧಿಯೋಗವು ಎಲ್ಲೆಲ್ಲಿ ಹೋಗಿರುತ್ತದೆಯೋ ಗೊತ್ತಿಲ್ಲ. ಒಬ್ಬರಿಗೂ ಸತ್ಯವಾದ ಶಾಂತಿಯಿಲ್ಲ. ನೀವು ನಿರ್ಲಿಪ್ತರಾಗಿಬಿಡುವಿರಿ. ಬಾಕಿ ತೂಕಡಿಸುತ್ತಾ ಶಾಂತಿಯಲ್ಲಿ ಇರುವುದು ಸತ್ಯವಾದ ಶಾಂತಿಯಲ್ಲ. ಹೇಳುತ್ತಾರೆ- ಮೂರು ನಿಮಿಷ ಸೈಲೆನ್ಸ್, ಅಶರೀರಿ ಭವ…. ಈ ರೀತಿ ಹೇಳುವ ಶಕ್ತಿಯು ಬೇರೆ ಯಾರಲ್ಲಿಯೂ ಇಲ್ಲ. ತಂದೆಯ ಮಹಾವಾಕ್ಯವಾಗಿದೆ- ಮುದ್ದು ಮಕ್ಕಳೇ, ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ಜನ್ಮ-ಜನ್ಮಾಂತರಗಳ ಪಾಪವೂ ಭಸ್ಮವಾಗಿಬಿಡುತ್ತದೆ. ಇಲ್ಲವೆಂದರೆ ಪದವಿಯೂ ಭ್ರಷ್ಟವಾಗುತ್ತದೆ ಮತ್ತು ಶಿಕ್ಷೆಯನ್ನು ಭೋಗಿಸಬೇಕಾಗುತ್ತದೆ. ಶಿವತಂದೆಯ ಶ್ರೀಮತದಂತೆ ನಡೆಯುವುದರಲ್ಲಿಯೇ ಕಲ್ಯಾಣವಿದೆ. ತಂದೆಯನ್ನು ನಿರಂತರ ನೆನಪು ಮಾಡಬೇಕು. ಎಷ್ಟು ಸಾಧ್ಯವೋ ಅಷ್ಟು ಅತಿಮಧುರ ತಂದೆಯನ್ನು ನೆನಪು ಮಾಡುತ್ತಿರಿ. ವಿದ್ಯಾರ್ಥಿಗಳು ತನ್ನ ಶಿಕ್ಷಕನ ಗೌರವ ಕಾಪಾಡಲು ಬಹಳ ಚಿಂತೆಯಿರಬೇಕು. ಒಂದುವೇಳೆ ಬಹಳ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಶಿಕ್ಷಕನಿಗೆ ಉನ್ನತಿ(ಪ್ರಮೋಷನ್) ಸಿಗುವುದಿಲ್ಲ. ಇಲ್ಲಿ ಕೃಪೆ ಅಥವಾ ಆಶೀರ್ವಾದದ ಮಾತೇ ಇಲ್ಲ. ಪ್ರತಿಯೊಬ್ಬರೂ ತಮ್ಮ ಮೇಲೆ ಕೃಪೆ ಅಥವಾ ಆಶೀರ್ವಾದ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮಮೇಲೆ ಕೃಪೆ ಮಾಡಿಕೊಳ್ಳುತ್ತಾರೆ, ಪರಿಶ್ರಮಪಡುತ್ತಾರೆ. ಹಾಗೆಯೇ ಇದೂ ಸಹ ವಿದ್ಯೆಯಾಗಿದೆ. ಎಷ್ಟು ಯೋಗ ಮಾಡುತ್ತೀರಿ ಅಷ್ಟು ವಿಕರ್ಮಾಜೀತರಾಗುವಿರಿ, ಉನ್ನತ ಪದವಿಯನ್ನು ಪಡೆಯುತ್ತೀರಿ. ನೆನಪಿನಿಂದ ಸದಾ ನಿರೋಗಿಯಾಗುತ್ತೀರಿ. ಮನ್ಮನಾಭವ. ಈ ರೀತಿ ಕೃಷ್ಣನು ಹೇಳಲು ಸಾಧ್ಯವೇ! ವಿದೇಹಿಗಳಾಗಿ ಎಂದು ಈ ನಿರಾಕಾರ ತಂದೆ ಹೇಳುತ್ತಾರೆ. ಮತ್ತೆಲ್ಲಾ ಸಂಬಂಧಗಳಲ್ಲಿ ಚಿಕ್ಕಪ್ಪ, ಮಾವ, ತಾತಾ ಇರುತ್ತಾರೆ. ಇಲ್ಲಿ ಕೇವಲ ಸಹೋದರ, ಸಹೋದರಿ ಸಂಬಂಧವಷ್ಟೇ ಇದೆ. ಕೇವಲ ಸಂಗಮಯುಗವನ್ನು ಬಿಟ್ಟರೆ ಮತ್ತೆಲ್ಲಿಯೂ ಈ ರೀತಿಯಿರುವುದಿಲ್ಲ ಏಕೆಂದರೆ ನಾವು ಮಾತಾಪಿತನಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಬೇಹದ್ದಿನ ಸುಖ-ಸಂಪತ್ತನ್ನು ಪಡೆಯುತ್ತೇವಲ್ಲವೇ. ರಾವಣರಾಜ್ಯದಲ್ಲಿ ಅಪಾರವಾದ ದುಃಖವಿದೆ, ರಾಮರಾಜ್ಯದಲ್ಲಿ ಅಪಾರ ಸುಖವಿದೆ ಅದಕ್ಕಾಗಿ ನೀವು ಪುರುಷಾರ್ಥ ಮಾಡುತ್ತೀರಿ. ಯಾರು ಎಷ್ಟು ಪುರುಷಾರ್ಥ ಮಾಡುತ್ತಾರೆ ಅದು ಕಲ್ಪ-ಕಲ್ಪಕ್ಕಾಗಿ ನಿಗದಿಯಾಗುತ್ತದೆ. ಬಹಳದೊಡ್ಡ ಪ್ರಾಪ್ತಿಯಾಗಿದೆ. ಯಾರು ಕೋಟ್ಯಾಧಿಪತಿ, ಪದಮಾಪತಿ ಆಗಿದ್ದಾರೆ, ಅವರೆಲ್ಲರ ಧನ ಮಣ್ಣು ಪಾಲಾಗುತ್ತದೆ. ಸ್ವಲ್ಪ ಯುದ್ಧವು ಪ್ರಾರಂಭವಾಗಲಿ, ಆಗ ನೋಡಿ ನಂತರ ಏನಾಗುವುದು! ಆದರೆ ಕಥೆಯು ನೀವು ಮಕ್ಕಳದಾಗಿದೆ. ಸತ್ಯಕಥೆಯನ್ನು ಕೇಳಿ ನೀವು ಮಕ್ಕಳು ಸತ್ಯಖಂಡದ ಮಾಲೀಕರಾಗುವಿರಿ. ಇದಂತೂ ಪಕ್ಕಾ ನಿಶ್ಚಯವಿದೆಯಲ್ಲವೇ. ನಿಶ್ಚಯವಿಲ್ಲದೇ ಇಲ್ಲಿ ಯಾರೂ ಸಹ ಬರಲು ಸಾಧ್ಯವಿಲ್ಲ. ನೀವು ಮಕ್ಕಳು ಯಾವುದೇ ತಪ್ಪುಗಳನ್ನು ಮಾಡಬಾರದು. ಹೇಗೆ ಮಮ್ಮಾ-ಬಾಬಾ ಆಸ್ತಿಯನ್ನು ತೆಗೆದುಕೊಳ್ಳುತ್ತಾರೆ, ಹಾಗೆಯೇ ನೀವೂ ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿಹೋಗಿ ಮರಳಿ ಸಿಕ್ಕಿರುವ ಮಕ್ಕಳಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಶರೀರದಿಂದ ನಿರ್ಲಿಪ್ತರಾಗಿ ಸ್ವಧರ್ಮದಲ್ಲಿ ಸ್ಥಿತರಾಗುವ ಅಭ್ಯಾಸ ಮಾಡಿ. ಎಷ್ಟು ಸಾಧ್ಯವೋ ಅಷ್ಟು ಅತಿಪ್ರಿಯ ತಂದೆಯನ್ನು ನೆನಪು ಮಾಡಿ. ಎಲ್ಲಾ ಕಡೆಯಿಂದಲೂ ಮೋಹದ ಎಳೆಯನ್ನು ತೆಗೆದುಬಿಡಿ.

2. ವಿದ್ಯೆಯ ಮೇಲೆ ಪೂರ್ಣ ಗಮನಕೊಟ್ಟು ತಮ್ಮ ಮೇಲೆ ತಾವೇ ಕೃಪೆ ಅಥವಾ ಆಶೀರ್ವಾದ ಮಾಡಿಕೊಳ್ಳಿ. ಬುದ್ಧಿಯೋಗವನ್ನು ಹದ್ದಿನಿಂದ ತೆಗೆದು ಬೇಹದ್ದಿನಲ್ಲಿ ಜೋಡಿಸಿ. ತಂದೆಯವರಾಗಿ ತಂದೆಯ ಮೇಲೆ ಪೂರ್ತಿ-ಪೂರ್ತಿ ಬಲಿ ಆಗಿಬಿಡಿ.

ವರದಾನ:-

ಯಾವಾಗ ಸತ್ಯತಂದೆಯ ಸಂಗದಿಂದ ದೂರವಾಗಿಬಿಡುತ್ತಾರೆಯೋ ಆಗಲೇ ಯಾವುದೇ ಬಲಹೀನತೆಯು ಬರುತ್ತದೆ ಹಾಗೂ ಅನ್ಯರ ಸಂಗದ ರಂಗೇರುತ್ತದೆ ಆದ್ದರಿಂದ ಭಕ್ತಿಯಲ್ಲಿ ಹೇಳುವರು- ಸದಾ ಸತ್ಸಂಗದಲ್ಲಿರಿ. ಸತ್ಸಂಗ ಎಂದರೆ ಸದಾ ತಂದೆಯ ಸಂಗದಲ್ಲಿರುವುದು. ತಮ್ಮೆಲ್ಲರಿಗಾಗಿ ಸತ್ಯ ತಂದೆಯ ಸಂಗ ಅತಿ ಸಹಜವಿದೆ ಏಕೆಂದರೆ ಸಮೀಪದ ಸಂಬಂಧವಿದೆ. ಅಂದಮೇಲೆ ಸದಾ ಸತ್ಸಂಗದಲ್ಲಿದ್ದು ಬಲಹೀನತೆಗಳನ್ನು ಸಮಾಪ್ತಿಗೊಳಿಸುವಂತಹ ಸಹಜ ಯೋಗಿ, ಸಹಜ ಜ್ಞಾನಿಯಾಗಿರಿ.

ಸ್ಲೋಗನ್:-

ಮಾತೇಶ್ವರಿಯವರ ಅಮೂಲ್ಯ ಮಹಾವಾಕ್ಯ “ಮುಕ್ತಿ ಹಾಗೂ ಜೀವನ್ಮುಕ್ತಿಯ ಸ್ಥಿತಿ”

ಮುಕ್ತಿ ಹಾಗೂ ಜೀವನ್ಮುಕ್ತಿ ಎರಡೂ ಸ್ಥಿತಿಯು ಬೇರೆ-ಬೇರೆಯಾಗಿದೆ, ಯಾವಾಗ ನಾವು ಮುಕ್ತಿ ಎಂಬ ಅಕ್ಷರವನ್ನು ಹೇಳುತ್ತೇವೆಯೋ, ಇದರ ಅರ್ಥವಾಗಿದೆ- ಆತ್ಮವು ಶರೀರದ ಪಾತ್ರದಿಂದ ಮುಕ್ತವಾಗಿದೆ, ಅಂದರೆ ಆತ್ಮರು ಶರೀರ ಸಹಿತವಾಗಿ ಈ ಸೃಷ್ಟಿಯಲ್ಲಿ ಪಾತ್ರದಲ್ಲಿ ಇಲ್ಲದಿರುವುದು. ಯಾವಾಗ ಆತ್ಮನು ಮನುಷ್ಯ ಅಸ್ಥಿಯಲ್ಲಿ ಪಾತ್ರವಿರುವುದಿಲ್ಲ ಅಂದರೆ ಆತ್ಮವು ನಿರಾಕಾರಿ ಪ್ರಪಂಚದಲ್ಲಿರುತ್ತದೆ, ಸುಖ-ದುಃಖದಿಂದ ಭಿನ್ನವಾದ ಪ್ರಪಂಚದಲ್ಲಿದೆಯೋ, ಅದಕ್ಕೇ ಮುಕ್ತ ಸ್ಥಿತಿಯೆಂದು ಹೇಳಲಾಗುತ್ತದೆ. ಇದನ್ನು ಮುಕ್ತಿಯ ಪದವಿಯೆಂದು ಹೇಳುವುದಿಲ್ಲ ಮತ್ತು ಯಾವ ಆತ್ಮನು ಕರ್ಮಬಂಧನದಿಂದ ಮುಕ್ತವಾಗಿದೆ ಅರ್ಥಾತ್ ಶರೀರದ ಪಾತ್ರಧಾರಿ ಆಗಿದ್ದರೂ, ಅದು ಕರ್ಮಬಂಧನದಿಂದ ಭಿನ್ನವಾಗಿದೆಯೆಂದರೆ, ಅದಕ್ಕೆ ಜೀವನ್ಮುಕ್ತ ಪದವಿ ಎಂದು ಹೇಳುತ್ತಾರೆ. ಅದು ಅತ್ಯಂತ ಶ್ರೇಷ್ಠವಾದ ಸ್ಥಿತಿಯಾಗಿದೆ. ಅದು ನಮ್ಮ ದೇವತೆಯ ಪ್ರಾಲಬ್ಧವಾಗಿದೆ, ಇದೇ ಜನ್ಮದಲ್ಲಿ ಪುರುಷಾರ್ಥ ಮಾಡುವುದರಿಂದ ಸಿಗುತ್ತದೆ, ಅದು ನಮ್ಮ ಶ್ರೇಷ್ಠ ಪದವಿಯಾಗಿದೆ ಆದರೆ ಯಾವ ಆತ್ಮವು ಪಾತ್ರದಲ್ಲಿ ಇರುವುದಿಲ್ಲವೋ ಅವರಿಗೆ ಪದವಿಯೆಂದು ಹೇಗೆ ಹೇಳುವುದು? ಯಾವಾಗ ರಂಗಮಂಟಪದಲ್ಲಿ ಆತ್ಮನ ಪಾತ್ರವೇ ಇಲ್ಲದೇ ಮುಕ್ತಿಯಲ್ಲಿದ್ದರೆ, ಅದೇನೂ ಪದವಿಯಲ್ಲ. ಈಗ ಇಷ್ಟೆಲ್ಲಾ ಮನುಷ್ಯ ಸಂಪ್ರದಾಯವಿದೆ, ಅವರೆಲ್ಲರಿಗೆಲ್ಲರೂ ಸತ್ಯಯುಗದಲ್ಲಿ ಹೋಗುವುದಿಲ್ಲ ಏಕೆಂದರೆ ಅಲ್ಲಿ ಮನುಷ್ಯ ಸಂಪ್ರದಾಯವು ಕಡಿಮೆಯಿರುತ್ತದೆ. ಅಂದಮೇಲೆ ಯಾರೆಷ್ಟು ಪ್ರಭುವಿನ ಜೊತೆ ಸಂಬಂಧವನ್ನಿಡುತ್ತಾ ಕರ್ಮಾತೀತರಾಗುವರು ಅವರು ಸತ್ಯಯುಗೀ ಜೀವನ್ಮುಕ್ತಿ ದೇವಿ-ದೇವತಾ ಪದವಿಯನ್ನು ಪಡೆಯುತ್ತಾರೆ. ಉಳಿದಂತೆ ಯಾರು ಧರ್ಮರಾಜನ ಶಿಕ್ಷೆಯನ್ನನುಭವಿಸಿ ಕರ್ಮಬಂಧನದಿಂದ ಶುದ್ಧವಾಗಿ ಮುಕ್ತಿಧಾಮದಲ್ಲಿ ಹೋಗುತ್ತಾರೆಯೋ ಅವರು ಮುಕ್ತಿಯಲ್ಲಿರುತ್ತಾರೆ ಆದರೆ ಮುಕ್ತಿಧಾಮದಲ್ಲಿ ಯಾವುದೇ ಪದವಿಯಿರುವುದಿಲ್ಲ. ಅವರ ಪಾತ್ರವು ಪುರುಷಾರ್ಥವಿಲ್ಲದೆಯೇ ಸಮಯದಲ್ಲಿ ಸ್ವತಹವಾಗಿಯೇ ಸಿಗುವುದು. ಯಾವ ಮನುಷ್ಯರಲ್ಲಿ ದ್ವಾಪರದಿಂದ ಕಲಿಯುಗದ ಅಂತ್ಯದವರೆಗೂ ಬಯಕೆಯು ಉತ್ಪನ್ನವಾಗುತ್ತಾ ಬಂದಿದೆ- ನಾವು ಜನನ-ಮರಣದ ಚಕ್ರದಲ್ಲಿ ಬರಬಾರದು, ಆ ಆಶೆಯೀಗ ಪೂರ್ಣವಾಗುತ್ತದೆ. ಅಂದರೆ ಸರ್ವ ಆತ್ಮರು ಮುಕ್ತಿಧಾಮಕ್ಕೆ ಅವಶ್ಯವಾಗಿ ಹೋಗಿ ಬರಬೇಕಾಗಿದೆ. ಒಳ್ಳೆಯದು.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top