09 June 2022 KANNADA Murli Today | Brahma Kumaris

Read and Listen today’s Gyan Murli in Kannada

June 8, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಬ್ರಾಹ್ಮಣ ಕುಲ ಶ್ರೇಷ್ಠ, ವಿಷ್ಣು ಕುಲದವರಾಗುವವರಿದ್ದೀರಿ ಆದ್ದರಿಂದ ನೀವು ಪಕ್ಕಾ ವೈಷ್ಣವರಾಗಬೇಕಾಗಿದೆ, ಕಾನೂನಿಗೆ ವಿರುದ್ಧವಾದ ಯಾವುದೇ ವಸ್ತು ಈರುಳ್ಳಿ ಮುಂತಾದವುಗಳನ್ನೂ ಸೇವಿಸಬಾರದು”

ಪ್ರಶ್ನೆ:: -

ನೀವು ಮಕ್ಕಳು ಯಾವ ಪರೀಕ್ಷೆಯಿಂದ ಭಯ ಪಡಬಾರದು ಅಥವಾ ತಬ್ಬಿಬ್ಬಾಗಬಾರದು?

ಉತ್ತರ:-

ಒಂದುವೇಳೆ ನಡೆಯುತ್ತಾ-ನಡೆಯುತ್ತಾ ಈ ಹಳೆಯ ಪಾದರಕ್ಷೆ(ಶರೀರ)ಗೆ ಯಾವುದೇ ತೊಂದರೆಯಾಗುತ್ತದೆ, ಕಾಯಿಲೆ ಮುಂತಾದವು ಬರುತ್ತದೆಯೆಂದರೆ ಭಯ ಪಡಬಾರದು ಅಥವಾ ತಬ್ಬಿಬ್ಬಾಗಬಾರದು, ಇನ್ನಷ್ಟು ಖುಷಿಯಾಗಬೇಕು ಏಕೆಂದರೆ ಇದು ಕರ್ಮಭೋಗವಾಗಿದೆ ಎನ್ನುವುದು ನಿಮಗೆ ತಿಳಿದಿದೆ. ಹಳೆಯ ಲೆಕ್ಕಾಚಾರವು ಸಮಾಪ್ತಿಯಾಗುತ್ತಾ ಇದೆ. ನಾವು ಯೋಗಬಲದಿಂದ ಲೆಕ್ಕಾಚಾರವನ್ನು ಸಮಾಪ್ತಿ ಮಾಡಲು ಸಾಧ್ಯವಾಗದಿದ್ದಾಗ ಕರ್ಮಭೋಗದಿಂದ ಸಮಾಪ್ತಿಯಾಗುತ್ತಾ ಇದೆ. ಇದು ಬೇಗನೆ ಸಮಾಪ್ತಿಯಾಗುತ್ತದೆಯೆಂದರೆ ಒಳ್ಳೆಯದಾಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಮ್ಮ ತೀರ್ಥ ಸ್ಥಾನವು ಭಿನ್ನವಾಗಿದೆ……

ಓಂ ಶಾಂತಿ. ನಿರಾಕಾರ ಭಗವಾನುವಾಚ – ತಂದೆಯ ಹೆಸರಂತೂ ಒಂದೇ ಆಗಿದೆ. ಶಿವ ಭಗವಾನುವಾಚ, ನಿಶ್ಚಯವನ್ನು ಪಕ್ಕಾ ಮಾಡಿಸುವುದಕ್ಕಾಗಿ ಇದನ್ನು ಹೇಳಬೇಕಾಗುತ್ತದೆ. ನಾನು ಯಾರಾಗಿದ್ದೇನೆ, ನನ್ನ ಹೆಸರು ಎಂದೂ ಬದಲಾಗುವುದಿಲ್ಲ ಎಂದು ತಂದೆಯು ಹೇಳಬೇಕಾಗುತ್ತದೆ. ಸತ್ಯಯುಗದ ದೇವೀ-ದೇವತೆಗಳು ಯಾರಿರುತ್ತಾರೆ ಅವರು ಪುನರ್ಜನ್ಮದಲ್ಲಿ ಬರಲೇಬೇಕಾಗುತ್ತದೆ. ತಂದೆಯು ಈ ಶರೀರದಿಂದ (ಬ್ರಹ್ಮಾ) ಮಕ್ಕಳಿಗೆ ತಿಳಿಸುತ್ತಿದ್ದಾರೆ. ನೀವು ಆತ್ಮಿಕ ಯಾತ್ರೆಯಲ್ಲಿದ್ದೀರಿ, ತಂದೆಯೂ ಗುಪ್ತವಾಗಿದ್ದಾರೆ, ದಾದಾರವರೂ ಸಹ ಗುಪ್ತವಾಗಿದ್ದಾರೆ. ಬ್ರಹ್ಮಾರವರ ತನುವಿನಲ್ಲಿ ಪರಮಪಿತ ಪರಮಾತ್ಮ ಬರುತ್ತಾರೆ ಎನ್ನುವುದನ್ನು ಯಾರೂ ಅರಿತುಕೊಂಡಿಲ್ಲ. ಮಕ್ಕಳೂ ಸಹ ಗುಪ್ತವಾಗಿದ್ದಾರೆ. ನಾವು ಶಿವ ತಂದೆಯ ಸಂತಾನರಾಗಿದ್ದೇವೆ ಎಂದು ಎಲ್ಲರೂ ಹೇಳುತ್ತಾರೆ ಅಂದಮೇಲೆ ಅವರಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ, ಅವರ ಶ್ರೀಮತದಂತೆ ನಡೆಯಬೇಕಾಗಿದೆ. ಅವರು ನಮ್ಮ ಸುಪ್ರೀಂ ತಂದೆ, ಶಿಕ್ಷಕ, ಸದ್ಗುರುವಾಗಿದ್ದಾರೆ ಎನ್ನುವ ನಿಶ್ಚಯವಂತೂ ಇದೆ. ಇವು ಎಷ್ಟೊಂದು ಮಧುರಾತಿ ಮಧುರ ಮಾತುಗಳಾಗಿವೆ. ನಾವು ನಿರಾಕಾರ ಶಿವತಂದೆಯ ವಿದ್ಯಾರ್ಥಿಗಳಾಗಿದ್ದೇವೆ, ಅವರು ನಮಗೆ ರಾಜಯೋಗವನ್ನು ಕಲಿಸುತ್ತಾರೆ. ಭಗವಾನುವಾಚವಿದೆ – ಹೇ! ಮಕ್ಕಳೇ, ನಾನು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ಹೇ ಮಕ್ಕಳೇ ಎಂದು ಮೇಯರ್ ಹೇಳಲು ಸಾಧ್ಯವಿಲ್ಲ. ಸನ್ಯಾಸಿಗಳೂ ಸಹ ಈ ರೀತಿ ಹೇಳಲು ಸಾಧ್ಯವಿಲ್ಲ. ಮಕ್ಕಳೇ ಎಂದು ಹೇಳುವುದು ತಂದೆಯ ಕರ್ತವ್ಯವೇ ಆಗಿದೆ. ಮಕ್ಕಳೂ ಸಹ ತಿಳಿದುಕೊಂಡಿದ್ದೀರಿ – ನಾವು ನಿರಾಕಾರ ತಂದೆಯ ಮಕ್ಕಳಾಗಿದ್ದೇವೆ, ಅವರ ಸಮ್ಮುಖದಲ್ಲಿ ಕುಳಿತಿದ್ದೇವೆ. ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ. ಪ್ರಜಾಪಿತ ಎನ್ನುವ ಅಕ್ಷರವನ್ನು ಹಾಕದಿರುವುದರ ಕಾರಣ ಮನುಷ್ಯರು ತಬ್ಬಿಬ್ಬಾಗಿ ಬಿಡುತ್ತಾರೆ. ಬ್ರಹ್ಮನಂತೂ ಸೂಕ್ಷ್ಮವತನವಾಸಿ ದೇವತೆಯಾಗಿದ್ದಾರೆ ಎಂದು ತಿಳಿಯುತ್ತಾರೆ, ಮತ್ತೆ ಇಲ್ಲಿಗೆ ಎಲ್ಲಿಂದ ಬಂದರು? ಬ್ರಹ್ಮಾ ದೇವತಾಯ ನಮಃ, ಶಂಕರ ದೇವತಾಯ ನಮಃ ಹೇಳುತ್ತಾರೆ, ನಂತರ ಗುರುವೆಂದು ಗುರು ಬ್ರಹ್ಮ, ಗುರು ವಿಷ್ಣು ಎಂದು ಹೇಳುತ್ತಾರೆ. ಈಗ ವಿಷ್ಣು ಅಥವಾ ಶಂಕರನಂತು ಗುರುಗಳೇ ಅಲ್ಲ. ಶಂಕರನು ಪಾರ್ವತಿಗೆ ಕಥೆಯನ್ನು ತಿಳಿಸುವುದರಿಂದ ಗುರುವಾದರೆಂದು ತಿಳಿಯುತ್ತಾರೆ. ಗುರು ವಿಷ್ಣುವೂ ಅಲ್ಲ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರು ಗುರುಗಳಾಗುವುದಿಲ್ಲ. ಕೃಷ್ಣನನ್ನೂ ಸಹ ದೊಡ್ಡ ಗುರು ಗೀತೆಯ ಭಗವಂತನನ್ನಾಗಿ ಮಾಡಿ ಬಿಟ್ಟಿದ್ದಾರೆ ಆದರೆ ಭಗವಂತ ಒಬ್ಬರೇ ಆಗಿದ್ದಾರೆ ಎನ್ನುವ ಮಾತನ್ನು ನೀವು ಮಕ್ಕಳು ಸಿದ್ಧ ಮಾಡಬೇಕಾಗಿದೆ.

ನೀವು ಗುಪ್ತ ಸೈನಿಕರಾಗಿದ್ದೀರಿ. ರಾವಣನ ಮೇಲೆ ವಿಜಯವನ್ನು ಪಡೆಯುತ್ತಿದ್ದೀರಿ ಅರ್ಥಾತ್ ಮಾಯಾಜೀತ್ ಜಗತ್ಜೀತರಾಗುತ್ತೀರಿ. ಧನವನ್ನು ಮಾಯೆಯೆಂದು ಹೇಳಲಾಗುವುದಿಲ್ಲ. ಧನವನ್ನು ಸಂಪತ್ತೆಂದು ಹೇಳಲಾಗುವುದು ಅಂದಮೇಲೆ ತಂದೆಯು ಮಕ್ಕಳಿಗೆ ತಿಳಿಸುತ್ತಾರೆ – ಮಕ್ಕಳೇ, ಈಗ ಮೃತ್ಯು ಸನ್ಮುಖದಲ್ಲಿ ನಿಂತಿದೆ. ಇದು ಅದೇ 5000 ವರ್ಷಗಳ ಮೊದಲಿರುವ ಅಕ್ಷರವಾಗಿದೆ. ಕೇವಲ ನಿರಾಕಾರ ಭಗವಾನುವಾಚಕ್ಕೆ ಬದಲಾಗಿ ಸಾಕಾರ ಕೃಷ್ಣನ ಹೆಸರನ್ನು ಬರೆದಿದ್ದರೆ. ತಂದೆಯು ತಿಳಿಸುತ್ತಾರೆ – ಈ ಯಾವ ಜ್ಞಾನವು ನಿಮಗೆ ಸಿಗುತ್ತಿದೆ ಇದು ಭವಿಷ್ಯ ಪ್ರಾಲಬ್ಧಕ್ಕಾಗಿಯೇ ಇದೆ. ಪ್ರಾಲಬ್ಧ ಸಿಕ್ಕಿತೆಂದರೆ ನಂತರ ಈ ಜ್ಞಾನದ ಅವಶ್ಯಕತೆಯಿಲ್ಲ. ಈ ಜ್ಞಾನವು ಪತಿತರನ್ನು ಪಾವನ ಮಾಡುವುದಕ್ಕಾಗಿಯೇ ಇದೆ. ಪಾವನ ಪ್ರಪಂಚದಲ್ಲಿ ಮತ್ತೆ ಯಾರಿಗೂ ಗುರುವನ್ನಾಗಿ ಮಾಡಿಕೊಳ್ಳುವ ಅವಶ್ಯಕತೆಯಿರುವುದಿಲ್ಲ. ವಾಸ್ತವದಲ್ಲಿ ಗುರುವಂತು ಒಬ್ಬರೇ ಪರಮಪಿತ ಪರಮಾತ್ಮನಾಗಿದ್ದಾರೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆಂದರೆ ಆ ಸಮಯದಲ್ಲಿ ತಿಳಿಸಬೇಕಲ್ಲವೆ. ಈಗ ನೀವು ಬ್ರಾಹ್ಮಣ ಕುಲದವರಾಗಿದ್ದೀರಿ ನಂತರ ವಿಷ್ಣು ಕುಲದವರಾಗುತ್ತೀರಿ. ಅವರು ಸಂಪೂರ್ಣ ವೈಷ್ಣವರಲ್ಲವೆ. ದೇವತೆಗಳ ಮುಂದೆ ಎಂದೂ ಸಹ ಕಾನೂನಿಗೆ ವಿರುದ್ಧವಾದ ಯಾವುದೇ ವಸ್ತು, ಈರುಳ್ಳಿ ಮುಂತಾದವನ್ನು ಇಡುವುದಿಲ್ಲ. ಪುನಃ ಇಂತಹ ದೇವತೆಗಳಾಗಬೇಕಾಗಿದೆ ಅಂದಮೇಲೆ ಇದೆಲ್ಲವನ್ನು ಬಿಡಬೇಕಾಗುತ್ತದೆ. ಇದು ಸಂಗಮಯುಗವಾಗಿದೆ ಎಂಬುದನ್ನೂ ಸಹ ತಿಳಿಸಲಾಗಿದೆ, ನೀವು ಬ್ರಾಹ್ಮಣರೇ ಸಂಗಮದಲ್ಲಿದ್ದೀರಿ, ಉಳಿದವರೆಲ್ಲರೂ ಕಲಿಯುಗದಲ್ಲಿದ್ದಾರೆ. ಎಲ್ಲಿಯತನಕ ಬ್ರಾಹ್ಮಣರಾಗುವುದಿಲ್ಲ, ಅಲ್ಲಿಯ ತನಕ ಅರಿತುಕೊಳ್ಳಲು ಸಾಧ್ಯವಿಲ್ಲ. ನಾನು ಕಲ್ಪದ ಸಂಗಮದಲ್ಲಿ ಬರುತ್ತೇನೆಂದು ತಂದೆಯು ಹೇಳುತ್ತಾರೆ. ಇದು ಯಾವ ಸಂಗಮಯುಗವಾಗಿದೆ ಎನ್ನುವುದನ್ನು ಅವರು ಅರಿತುಕೊಳ್ಳುವುದೇ ಇಲ್ಲ. ಪ್ರಪಂಚವೂ ಬದಲಾಗುತ್ತದೆಯಲ್ಲವೇ. ಗಾಯನವೂ ಮಾಡುತ್ತಾರೆ ಆದರೆ ಹೇಗೆ ಬದಲಾಗುತ್ತದೆ ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಕೇವಲ ಬಾಯಿಂದ ಹೇಳಿ ಬಿಡುತ್ತಾರೆ, ನೀವು ಅರ್ಥ ಸಹಿತವಾಗಿ ತಿಳಿದುಕೊಳ್ಳುತ್ತೀರಿ, ಶ್ರೀಮತದಂತೆ ನಡೆಯುವುದರಿಂದಲೇ ಶ್ರೇಷ್ಠರಾಗುತ್ತೀರಿ. ತಂದೆಯನ್ನು ನೆನಪು ಮಾಡಬೇಕಾಗಿದೆ ಹಾಗೂ ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆಯಬೇಕಾಗಿದೆ. ತಂದೆಯು ಶರೀರವಿಲ್ಲದೆ ಕಳುಹಿಸಿದ್ದರು, ಈಗ ಮತ್ತೆ ಅದೇರೀತಿ ಹೋಗಬೇಕಾಗಿದೆ. ಇಲ್ಲಿ ಪಾತ್ರವನ್ನಭಿನಯಿಸಲು ಬಂದಿದ್ದೀರಿ. ಇದು ಗುಪ್ತ ಪರಿಶ್ರಮವಾಗಿದೆ, ತಂದೆ ಮತ್ತು ಆಸ್ತಿಯನ್ನು ನೆನಪು ಮಾಡಬೇಕಾಗಿದೆ. ಇದನ್ನು ನೀವು ಗಳಿಗೆ-ಗಳಿಗೆಗೂ ನೀವು ಮರೆತು ಹೋಗುತ್ತೀರಿ. ತಂದೆಯನ್ನು ಮರೆಯುವುದರಿಂದ ಮಾಯೆಯ ಪೆಟ್ಟು ಬೀಳುತ್ತದೆ, ಇದೂ ಸಹ ಆಟವಾಗಿದೆ. ಅಲ್ಲಾ ಅವಲದ್ದೀನ್……. ಕಥೆಯನ್ನು ತೋರಿಸುತ್ತಾರಲ್ಲವೇ. ಅಲ್ಲಾ ಧರ್ಮವನ್ನು ಸ್ಥಾಪನೆ ಮಾಡಿದರು. ಆದೇಶ ಕೊಟ್ಟರು ಮತ್ತು ಬಹಿಶ್ತ್ (ಸ್ವರ್ಗ) ಸಿಕ್ಕಿತು. ಈ ಧರ್ಮವನ್ನು ಯಾರು ಸ್ಥಾಪನೆ ಮಾಡುತ್ತಿದ್ದಾರೆ? ಅಲ್ಲಾ ಮೊದಲ ನಂಬರಿನ ಧರ್ಮದ ಸ್ಥಾಪನೆ ಮಾಡಿದರು. ಹಾತಮ್ತಾಯಿಯ ಆಟವನ್ನು ತೋರಿಸುತ್ತಾರೆ ಹಾಗೆಯೇ ಇಲ್ಲಿಯೂ ಬಾಯಲ್ಲಿ ಉಂಗುರವನ್ನು (ನೆನಪಿನ ಉಂಗುರ) ಹಾಕಿಕೊಳ್ಳದಿದ್ದರೆ ಮಾಯೆಯು ಬಂದು ಬಿಡುತ್ತದೆ. ಆಗ ತಂದೆಯನ್ನು ಮರೆತು ಮತ್ತೆಲ್ಲರನ್ನು ನೆನಪು ಮಾಡುತ್ತಾ ಇರುತ್ತೀರಿ.

ನಾವು ಶಾಂತಿಧಾಮಕ್ಕೆ ಹೋಗುತ್ತಿದ್ದೇವೆ, ನಂತರ ಸುಖಧಾಮದಲ್ಲಿ ಬರುತ್ತೇವೆ ಎನ್ನುವುದು ನೀವು ಮಕ್ಕಳು ತಿಳಿದಿದ್ದೀರಿ. ದುಃಖಧಾಮವನ್ನು ಮರೆಯುವ ಪುರುಷಾರ್ಥ ಮಾಡಬೇಕಾಗಿದೆ. ಇದೆಲ್ಲವೂ ಸಮಾಪ್ತಿಯಾಗುವುದಿದೆ. ನಾವು ಲಕ್ಷಾಧಿಪತಿ, ಹೀಗಿದ್ದೇವೆ… ಎನ್ನುವುದನ್ನು ಬುದ್ಧಿಯಲ್ಲಿ ಇಟ್ಟುಕೊಳ್ಳಬಾರದು. ನಾವಂತು ಅಶರೀರಿಯಾಗಿದ್ದೇವೆ, ಈ ಹಳೆಯ ಶರೀರವು ಬಹಳ ದುಃಖ ಕೊಟ್ಟಿದೆ. ಕಾಯಿಲೆಗಳು ಹೆಚ್ಚಾದಷ್ಟು ಖುಷಿಯಾಗಬೇಕು, ನರ್ತನ ಮಾಡಬೇಕಾಗಿದೆ ಏಕೆಂದರೆ ಇದು ಕರ್ಮಭೋಗವಾಗಿದೆ. ಎಲ್ಲಾ ಲೆಕ್ಕಾಚಾರವನ್ನು ಸಮಾಪ್ತಿ ಮಾಡಲೇಬೇಕಾಗಿದೆ ಆದ್ದರಿಂದ ಭಯ ಪಡಬಾರದು. ಈ ರೀತಿ ತಿಳಿಯಬೇಕು – ನಾವು ಯೋಗಬಲದಿಂದ ವಿಕರ್ಮ ವಿನಾಶ ಮಾಡಿಕೊಳ್ಳದಿದ್ದರೆ ಕರ್ಮಭೋಗದಿಂದ ಸಮಾಪ್ತಿ ಮಾಡಬೇಕಾಗುತ್ತದೆ, ಇದರಲ್ಲಿ ತಬ್ಬಿಬ್ಬಾಗುವ ಮಾತಿಲ್ಲ ಏಕೆಂದರೆ ಈ ಶರೀರವು ಹಳೆಯದಾಗಿದೆ. ಇದು ವಿಕರ್ಮವು ಬೇಗನೆ ಸಮಾಪ್ತಿಯಾದರೆ ಒಳ್ಳೆಯದು. ಮತ್ತೆ ನಿಮ್ಮ 7 ದಿನಗಳ ಭಟ್ಟಿಯೂ ಸಹ ಪ್ರಸಿದ್ಧವಾಗಿದೆ. 7 ದಿನಗಳು ಚೆನ್ನಾಗಿ ಅರಿತುಕೊಂಡು ಬುದ್ಧಿಯಲ್ಲಿ ಧಾರಣೆ ಮಾಡಿದ ನಂತರ ಭಲೆ ಎಲ್ಲಿಗಾದರೂ ಹೋಗಿ. ಮುರಳಿಯಂತು ಸಿಗುತ್ತಿರುತ್ತದೆ, ಬಹಳಷ್ಟಾಯಿತು. ತಂದೆಯನ್ನು ನೆನಪು ಮಾಡುತ್ತಾ ಚಕ್ರವನ್ನು ತಿರುಗಿಸುತ್ತಿರಿ. 7 ದಿನಗಳಲ್ಲಿ ಸ್ವದರ್ಶನ ಚಕ್ರಧಾರಿಯಾಗಬೇಕಾಗಿದೆ. 7 ದಿನದ ಪಾಠವನ್ನೂ ಇಡುತ್ತಾರೆ. ಈ 7 ದಿನಗಳು ಪ್ರಸಿದ್ಧವಾಗಿದೆ. ಗ್ರಂಥವನ್ನೂ ಸಹ 7 ದಿನಗಳ ಕಾಲ ಇಡುತ್ತಾರೆ ಹಾಗೆಯೇ ಭಟ್ಟಿಯೂ ಸಹ 7 ದಿನಗಳದಾಗಿದೆ. ಯಾರೇ ಬರಲಿ ಅವರಿಗೆ 7 ದಿನಗಳು ಮಾತ್ರ ಹೇಳಬೇಕೆಂದಲ್ಲ. ಮನುಷ್ಯರ ನಾಡಿಯನ್ನು ನೋಡಬೇಕಾಗುತ್ತದೆ. ಮುಂಚಿತವಾಗಿಯೇ 7 ದಿನಗಳ ಕೋರ್ಸ್ ಎಂದು ಹೇಳುವುದರಿಂದ ಕೆಲವರು ಭಯ ಪಡುತ್ತಾರೆ. ನಾವು 7 ದಿನಗಳು ಇರಲು ಆಗದಿದ್ದರೆ ಏನು ಮಾಡುವುದು ಎಂದು ಕೆಲವರು ಹೊರಟು ಹೋಗುತ್ತಾರೆ ಆದ್ದರಿಂದ ಮನುಷ್ಯರನ್ನು ನೋಡಬೇಕಾಗುತ್ತದೆ. ಪ್ರತಿಯೊಬ್ಬರ ನಾಡಿ ನೋಡಬೇಕಾಗಿದೆ, ಮೊದಲು ಎಷ್ಟು ದಿನಗಳಗಾಗಿ ಬಂದಿದ್ದಾರೆಂದು ಪರಿಶೀಲನೆ ಮಾಡಿ ತಿಳಿದುಕೊಳ್ಳಬೇಕು. ತಕ್ಷಣ 7 ದಿನಗಳು ಎಂದು ಹೇಳುವುದರಿಂದ ಗಾಬರಿಯಾಗುತ್ತಾರೆ. ಪೂರ್ಣ 7 ದಿನಗಳಲ್ಲಿ ಯಾರೂ ಸಹ ಕೊಡಲು ಸಾಧ್ಯವಿಲ್ಲ. ಸರ್ಜನ್ಗಳಲ್ಲಿ ಕೆಲವರು ನಾಡಿಯನ್ನು ನೋಡಿದ ಕೂಡಲೇ ನಿಮಗೆ ಇಂತಿಂತಹ ಕಾಯಿಲೆಯಿದೆ ಎಂದು ಹೇಳಿ ಬಿಡುತ್ತಾರೆ ಹಾಗೆಯೇ ಇವರೂ ಸಹ ನಿಮ್ಮ ಅವಿನಾಶಿ ಜ್ಞಾನದ ಸರ್ಜನ್ ಆಗಿದ್ದಾರೆ. ನೀವು ಮಕ್ಕಳೂ ಸಹ ಮಾಸ್ಟರ್ ಸರ್ಜನ್ ಆಗಿದ್ದೀರಿ. ಇದು ರುದ್ರ ಜ್ಞಾನ ಯಜ್ಞವಾಗಿದೆ. ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗುತ್ತದೆ ಎಂದು ನೀವು ಮನುಷ್ಯರಿಗೆ ಹೇಳುತ್ತೀರಿ. ಇದಕ್ಕೆ ಕೆಲವರು ಕೇಳುತ್ತಾರೆ – ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗುತ್ತದೆಯೆಂದರೆ 7 ದಿನಗಳ ಕೋರ್ಸ್ ಎಂದು ಏಕೆ ಹೇಳುವಿರಿ? ಈ ಸೆಕೆಂಡಿನ ಮಾತನ್ನು ಹೇಳಿದರೆ ಗಾಬರಿಯಾಗಿ ಬಿಡುತ್ತಾರೆ. ನಾವಂತೂ ಇರಲು ಸಾಧ್ಯವಿಲ್ಲವೆಂದು ತಿಳಿಯುತ್ತಾರೆ ಆದ್ದರಿಂದ ಮೊದಲು ನಾಡಿಯನ್ನು ನೋಡಬೇಕಾಗಿದೆ. ಎಲ್ಲರಿಗೂ ಒಂದೇ ವಿಧದಲ್ಲಿ ತಿಳಿಸಲು ಸಾಧ್ಯವಿಲ್ಲ. ಬಹಳ ಮಕ್ಕಳು ಡಿಸ್ಸರ್ವೀಸನ್ನು ಮಾಡಿ ಬಿಡುತ್ತಾರೆ. ಫಾರ್ಮ್ ತುಂಬಿಸುವ ಸಮಯದಲ್ಲಿ ನಾಡಿ ನೋಡಿ ಕೇಳಬೇಕಾಗುತ್ತದೆ. ಎಷ್ಟು ದಿನವಿರಲು ಸಾಧ್ಯವಾಗುತ್ತದೆ ಎನ್ನುವುದನ್ನೂ ಕೇಳಬೇಕಾಗಿದೆ. ಒಳ್ಳೆಯದು – ಭಗವಂತ ಒಬ್ಬರೇ ಆಗಿದ್ದಾರೆಂದು ಎಲ್ಲರಿಗೂ ತಿಳಿಸಿ. ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧವೇನು ಎನ್ನುವ ಮಾತನ್ನು ಮೊದಲು ತಿಳಿಸಬೇಕು ಹಾಗೂ ಅವರು ತಂದೆಯಾಗಿದ್ದಾರೆ, ನಾವು ಅವರ ಮಕ್ಕಳಾಗಿದ್ದೇವೆ. ತಂದೆಯಂತು ಆಸ್ತಿಯನ್ನು ಕೊಡುತ್ತಾರೆಂದರೆ ಸ್ವರ್ಗದ ಆಸ್ತಿಯನ್ನೇ ಕೊಡುತ್ತಾರಲ್ಲವೆ. ಅವರು ಸ್ವರ್ಗದ ರಚಯಿತನಾಗಿದ್ದಾರೆ. ಈ ಸಮಯದಲ್ಲಿ ಇದು ನರಕವಾಗಿದೆ. ಭಾರತವೇ ಸ್ವರ್ಗವಾಗಿತ್ತು, ವಿಶ್ವದ ಮಾಲೀಕರಾಗಿದ್ದೆವು. ದೇವೀ-ದೇವತೆಗಳ ರಾಜ್ಯವಿತ್ತು ಆದರೆ ಮಾಯೆಯು ರಾಜ್ಯವನ್ನು ಕಸಿದುಕೊಂಡಿದೆ. ಈಗ ಮತ್ತೆ ಮಾಯೆಯ ಮೇಲೆ ವಿಜಯ ಪಡೆದು ರಾಜ್ಯವನ್ನು ಪಡೆಯಬೇಕಾಗಿದೆ. ಹಳೆಯ ಪತಿತ ಕಲಿಯುಗೀ ಪ್ರಪಂಚದ ವಿನಾಶವು ಸಮ್ಮುಖದಲ್ಲಿ ನಿಂತಿರುವುದರಿಂದ ಅವಶ್ಯವಾಗಿ ಪಾವನ ಪ್ರಪಂಚದ ಸ್ಥಾಪನೆ ಮಾಡಲೇಬೇಕಾಗುತ್ತದೆ. ಹೀಗೆ ಎಲ್ಲವನ್ನು ತಿಳಿಸಿ ಸ್ವಲ್ಪ ಸೂಚನೆ ಕೊಡಬೇಕು. ಮುಂದೆ ಹೋದಂತೆ ಇವೆಲ್ಲಾ ಮಾತುಗಳನ್ನು ಅವರು ತಿಳಿಯುತ್ತಾ ಮುಂದೆ ಸಾಗುತ್ತಾರೆ. ಇಂದಿಲ್ಲದಿದ್ದರೆ ನಾಳೆ ಬಂದೇ ಬರುತ್ತಾರೆ. ಇಲ್ಲಿವೆ ಬರದೆ ಇನ್ನೆಲ್ಲಿಗೆ ಹೋಗುತ್ತಾರೆ? ಸದ್ಗತಿ ಸಿಗುವಂತಹ ಅಂಗಡಿಯು ಒಂದೇ ಆಗಿದೆ. ಇದು ಪರಮಪಿತ ಪರಮಾತ್ಮ ಶಿವ ತಂದೆಯ ಅಂಗಡಿಯಾಗಿದೆ. ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿ ಸಿಗಬೇಕಾಗಿದೆ. ಅಂಗಡಿಯನ್ನು ನೋಡಿ ಹೇಗಿದೆ! ಇದರಲ್ಲಿ ನೀವು ವ್ಯಾಪಾರಿಗಳಾಗಿದ್ದೀರಿ. ಯಾರು ಒಳ್ಳೆಯ ವ್ಯಾಪಾರಿಗಳಾಗಿರುತ್ತಾರೆ ಅವರು ಒಳ್ಳೆಯ ಪದವಿಯನ್ನೇ ಪಡೆಯುತ್ತಾರೆ. ವ್ಯಾಪಾರ ಮಾಡುವುದಕ್ಕೂ ಸಹ ತಿಳುವಳಿಕೆ ಇರಬೇಕು. ಒಂದುವೇಳೆ ತಿಳುವಳಿಕೆಯಿಲ್ಲವೆಂದರೆ ಅವರು ಸೇವೆ ಮಾಡಲು ಸಾಧ್ಯವೇ! ಮೊದಲಂತು ಅವರಲ್ಲಿ ನಿಶ್ಚಯವನ್ನು ಕೂರಿಸಬೇಕಾಗುತ್ತದೆ ನಂತರ 7 ದಿನಗಳ ಮಾತನ್ನು ತಿಳಿಸಬೇಕು. ಅರೇ! ತಂದೆಯಂತು ಆಸ್ತಿಯನ್ನು ಕೊಡಲು ಬಂದಿದ್ದಾರೆ. ಭಾರತವೇ ಸುಖಧಾಮವಾಗಿತ್ತು, ಈಗ ಭಾರತವೇ ದುಃಖಧಾಮವಾಗಿದೆ ಮತ್ತೆ ಇದು ಹೇಗೆ ಸುಖಧಾಮವಾಗುತ್ತದೆ, ಯಾರು ಮಾಡುತ್ತಾರೆ? ಮೊದಲು ನಾವು ಆತ್ಮಗಳು ಶಾಂತಿಧಾಮದ ನಿವಾಸಿಗಳಾಗಿದ್ದೇವೆ ಎನ್ನುವ ಮಾರ್ಗವನ್ನು ತಿಳಿಸಬೇಕಾಗಿದೆ. ನಂತರ ಪಾತ್ರವನ್ನ ಅಭಿನಯಿಸಲು ಬರುತ್ತೇವೆ.

ಈಗ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಹಿಂತಿರುಗಿ ಮನೆಗೆ ಬರಬೇಕಾಗಿದೆ. ತಂದೆಯನ್ನು ನೆನಪಿಟ್ಟುಕೊಳ್ಳುವುದರಿಂದ ನಿಮ್ಮ ವಿಕರ್ಮಗಳು ವಿನಾಶವಾಗುತ್ತದೆ. ನಿಮ್ಮ ಹಾರುವ ರೆಕ್ಕೆಗಳು ಕತ್ತರಿಸಲ್ಪಟ್ಟಿವೆ, ಅವು ಪುನಃ ಸಿಗುತ್ತಿರುತ್ತದೆ. ನೀವು ನನ್ನ ಬಳಿ ಬಂದು ಬಿಡುತ್ತೀರಿ. ತಂದೆಯೇ ಬಂದು ಕವಡೆಯಿಂದ ವಜ್ರ ಸಮಾನ ಮಾಡುತ್ತಾರೆ. ಇದು ಅತಿ ದೊಡ್ಡ ಜಬರ್ದಸ್ತ್ ಸಂಪಾದನೆಯಾಗಿದೆ. ತಂದೆಯನ್ನು ನೆನಪು ಮಾಡುವುದರಿಂದಲೇ 21 ಜನ್ಮಗಳಿಗೆ ನೀವು ನಿರೋಗಿಯಾಗುತ್ತೀರಿ. ಚಕ್ರವನ್ನು ನೆನಪು ಮಾಡುವುದರಿಂದ ನೀವು ಸದಾ ಆರೋಗ್ಯವಂತರು-ಭಾಗ್ಯವಂತರಾಗುತ್ತೀರಿ. ಈಗಂತೂ ಇವೆರಡೂ ಇಲ್ಲ. ನಿಮ್ಮಲ್ಲಿಯೂ ಸಹ ನಂಬರ್ವಾರ್ ಇದ್ದೀರಿ, ಯಾರು ಕಚ್ಚಾ ಇದ್ದಾರೆ ಅಂತಹವರನ್ನು ಮಾಯೆಯು ತಕ್ಷಣ ತಿಂದು ಬಿಡುತ್ತದೆ. ಆದರೂ ಸಹ ಮುಂದೆ ಹೋದಂತೆ ಸ್ಮೃತಿ ಬರುತ್ತದೆ. ಅಂತ್ಯದಲ್ಲಿ ರಾಜರುಗಳು ಬರುತ್ತಾರೆ, ಸನ್ಯಾಸಿ ಮುಂತಾದವರೂ ಬರುತ್ತಾರೆ. ನೀವು ಕನ್ಯೆಯರು ಮಾತೆಯರೇ ಬಾಣ ಪ್ರಯೋಗ ಮಾಡಿದ್ದಿರಿ. ಇಲ್ಲಿ ಮಂದಿರಗಳೂ ಸಹ ಮಾಡಲ್ಪಟ್ಟಿವೆ. ಕನ್ಯಾಕುಮಾರಿಯ ಮಂದಿರವೂ ಇದೆ. ಅದರ್ಕುಮಾರಿ ಎನ್ನುವುದರ ಅರ್ಥವನ್ನೂ ಸಹ ಯಾರೂ ತಿಳಿದಿಲ್ಲ. ಯಾರು ಗೃಹಸ್ಥ ವ್ಯವಹಾರದಲ್ಲಿರುತ್ತಾ ಬ್ರಹ್ಮಾಕುಮಾರಿಯಾಗಿರುತ್ತಾರೆ ಅವರನ್ನೇ ಅದರ್ಕುಮಾರಿ ಎಂದು ಹೇಳಲಾಗುತ್ತದೆ. ಕುಮಾರಿಯು ಕುಮಾರಿಯೇ ಆಗಿದ್ದಾರೆ. ನಿಮ್ಮ ನೆನಪಾರ್ಥವಾಗಿ ಮಂದಿರವು ಮಾಡಲ್ಪಟ್ಟಿದೆ. ಕಲ್ಪದ ಮೊದಲೂ ಸಹ ನೀವು ಸರ್ವೀಸ್ ಮಾಡಿದ್ದಿರಿ ಅಂದಮೇಲೆ ನಿಮಗೆ ಎಷ್ಟೊಂದು ಖುಷಿಯಾಗಬೇಕು! ನಿಮ್ಮದು ಎಷ್ಟು ಅಮೂಲ್ಯವಾದ ಜಬರ್ದಸ್ತ್ ಪರೀಕ್ಷೆಯಾಗಿದೆ. ಓದಿಸುವವರು ಭಗವಂತನಾಗಿದ್ದಾರೆ.

(ದೆಹಲಿ ಪಾರ್ಟಿಯವರು ಬಾಬಾರವರಿಂದ ಅನುಮತಿ ತೆಗೆದುಕೊಂಡು ತಮ್ಮ ಸ್ಥಾನಕ್ಕೆ ಹೋಗುತ್ತಿದ್ದಾರೆ) ಮಕ್ಕಳು ಬಹಳ ಚೆನ್ನಾಗಿ ರಿಫ್ರೆಷ್ ಆಗಿ ಹೋಗುತ್ತಿದ್ದೀರಿ. ನಂಬರ್ವಾರಂತು ಆಗಿಯೇ ಇದ್ದೀರಿ. ಯಾರು ಚೆನ್ನಾಗಿ ತಿಳಿದುಕೊಳ್ಳುವರು ಅವರು ಅನ್ಯರಿಗೂ ಚೆನ್ನಾಗಿ ಅರ್ಥ ಮಾಡಿಸುತ್ತಾರೆ. ತಂದೆಯು ಗುಪ್ತವಾಗಿದ್ದಾರೆ. ದಾದಾರವರೂ ಗುಪ್ತವಾಗಿದ್ದಾರೆ, ಇದನ್ನು ಮಕ್ಕಳು ತಿಳಿದಿದ್ದೀರಿ. ನಾವೂ ಸಹ ಗುಪ್ತವಾಗಿದ್ದೇವೆ, ಇದನ್ನು ಯಾರೂ ತಿಳಿದಿಲ್ಲ. ಬ್ರಾಹ್ಮಣರೂ ಸಹ ತಿಳಿದಿರುವುದಿಲ್ಲ. ನೀವು ಕುಖವಂಶಾವಳಿಯಾಗಿದ್ದೀರಿ, ನಾವು ಮುಖವಂಶಾವಳಿ ಆಗಿದ್ದೇವೆ ಇದನ್ನು ನೀವು ತಿಳಿಸಬಹುದು. ನೀವು ಪತಿತರಾಗಿದ್ದೀರಿ, ನಾವು ಪಾವನರಾಗುತ್ತಿದ್ದೇವೆ, ಪ್ರಜಾಪಿತ ಬ್ರಹ್ಮನ ಸಂತಾನರಾಗಿದ್ದೇವೆ ಅಂದಮೇಲೆ ಹೊಸ ಪ್ರಪಂಚಾಗಿಯೇ ಅಲ್ಲವೆ. ಸತ್ಯಯುಗದ ದೇವತೆಗಳು ಹೊಸ ಪ್ರಪಂಚದಲ್ಲಿ ನಿವಾಸಿಯೇ ಅಥವಾ ಬ್ರಾಹ್ಮಣರು ಹೊಸ ಪ್ರಪಂಚದ ನಿವಾಸಿಗಳೇ? ಬ್ರಾಹ್ಮಣರಿಗೆ ಶಿಖೆಯನ್ನು ತೋರಿಸಲಾಗುತ್ತದೆ, ಶಿಖೆಯು ಬ್ರಾಹ್ಮಣ ಕುಲ ಶ್ರೇಷ್ಠವಾಗಿದೆ ಹಾಗೂ ಮಸ್ತಕವು ದೇವತಾ ಕುಲದ್ದಾಗಿದೆ ಅಂದಮೇಲೆ ಉತ್ತಮರು ಯಾರಾಗಿದ್ದಾರೆ? ಅದರಲ್ಲಿ ಶಿವ ತಂದೆಯನ್ನು ಮಾಯ ಮಾಡಿ ಬಿಟ್ಟಿದ್ದಾರೆ, ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ತಂದೆಯು ಹೂದೋಟದ ಮಾಲೀಕನಾಗಿದ್ದಾರೆ, ರಾವಣನನ್ನು ಮಾಲೀಕನೆಂದು ಹೇಳಲಾಗುತ್ತದೆಯೇ? ರಾವಣನು ಮುಳ್ಳನ್ನಾಗಿ ಮಾಡುತ್ತಾನೆ, ತಂದೆಯು ಹೂವನ್ನಾಗಿ ಮಾಡುತ್ತಾರೆ. ಇದೆಲ್ಲವೂ ಮುಳ್ಳುಗಳ ಕಾಡಾಗಿದೆ. ಒಬ್ಬರಿನ್ನೊಬ್ಬರಿಗೆ ದುಃಖವನ್ನೇ ಕೊಡುತ್ತಿರುತ್ತಾರೆ. ತಂದೆಯು ತಿಳಿಸುತ್ತಾರೆ – ನೀವು ಯಾರಿಗೂ ದುಃಖ ಕೊಡಬಾರದು, ಕ್ರೋಧದಿಂದ ಮಾತನಾಡುವುದರಿಂದ ನೂರುಪಟ್ಟು ಶಿಕ್ಷೆಯಾಗುತ್ತದೆ, ಪಾಪಾತ್ಮರಾಗಿ ಬಿಡುತ್ತೀರಿ. ಅಂತಹವರಿಗೆ ಬಹಳ ಕಠಿಣ ಶಿಕ್ಷೆಯಾಗಿರುತ್ತದೆ. ತಂದೆಯ ಜೊತೆಯಲ್ಲಿ ಸಹಯೋಗಿಗಳಾಗಿರುತ್ತೇವೆ ಎನ್ನುವ ಗ್ಯಾರಂಟಿ ಕೊಡಿ. ಅದರ ನಂತರ ಡಿಸ್ಸರ್ವೀಸ್ ಮಾಡುತ್ತಾರೆಂದರೆ ಅವರಿಗೆ ಬಹಳ ಕಠಿಣ ಶಿಕ್ಷೆಯಾಗುವುದು. ಮಕ್ಕಳಾಗಿದ್ದು ವಿಕರ್ಮ ಮಾಡುತ್ತೀರೆಂದರೆ ನೂರುಪಟ್ಟು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಒಂದುವೇಳೆ ಧೈರ್ಯವಿದ್ದರೆ ಶ್ರೀಮತದಂತೆ ನಡೆಯಬೇಕು, ನರನಿಂದ ನಾರಾಯಣರಾಗಬೇಕು. ಪ್ರಜೆಗಳಾದರೂ ಸಾಕು ಎನ್ನುವಂತಿರಬಾರದು. ಇದು ಬಹಳ ದೊಡ್ಡ ಮಾಲೆಯಾಗಿದೆ, ಬಹಳಷ್ಟು ಅವಕಾಶಗಳಿವೆ, ಇದರಲ್ಲಿ ಹೃದಯ ವಿಧೀರ್ಣರಾಗಬಾರದು. ಕೆಳಗೆ ಬಿದ್ದರೂ ತಮ್ಮನ್ನು ಸಂಭಾಲನೆ ಮಾಡಿಕೊಳ್ಳಬೇಕು. ಶಿವ ತಂದೆಯಿಂದ ಒಂದು ಸೆಕೆಂಡಿನಲ್ಲಿ ಜೀವನ್ಮುಕ್ತಿಯನ್ನು ಪಡೆಯುಂತಹ ಅಂಗಡಿ ಇದು ಒಂದೇ ಆಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕಾಗಿ ಶಿವ ತಂದೆಯ ಅಂಗಡಿಯ ಒಳ್ಳೆಯ ವ್ಯಾಪಾರಿಯಾಗಬೇಕಾಗಿದೆ. ಪ್ರತಿಯೊಬ್ಬರ ನಾಡಿಯನ್ನು ನೋಡಿ ಅವರಿಗೆ ಜ್ಞಾನವನ್ನು ಕೊಡಬೇಕಾಗಿದೆ.

2. ಕ್ರೋಧಕ್ಕೆ ವಶರಾಗಿ ಮುಖದಿಂದ ದುಃಖವಾಗುವ ಮಾತುಗಳನ್ನು ಮಾತನಾಡಬಾರದು. ತಂದೆಯ ಸಹಯೋಗಿಗಳಾಗಲು ಗ್ಯಾರಂಟಿ ಕೊಟ್ಟ ನಂತರ ಡಿಸ್ಸರ್ವೀಸ್ ಆಗುವ ಯಾವುದೇ ಕಾರ್ಯವನ್ನು ಮಾಡಬಾರದು.

ವರದಾನ:-

ವಿಘ್ನಗಳು ಬರುವುದೂ ಸಹ ಡ್ರಾಮಾದಲ್ಲಿ ಆದಿಯಿಂದ ಅಂತ್ಯದವರೆಗಿನ ನೊಂದಣಿಯಿದೆ ಆದರೆ ಆ ವಿಘ್ನವು ಅಸಂಭವದಿಂದ ಸಂಭವದ ಅನುಭೂತಿ ಮಾಡಿಸುತ್ತದೆ. ಅನುಭವಿ ಆತ್ಮರಿಗಾಗಿ ವಿಘ್ನವೂ ಸಹ ಆಟವೆನಿಸುವುದು. ಹೇಗೆ ಫುಟ್ಬಾಲ್ ಆಟದಲ್ಲಿ ಚೆಂಡು ಬರುತ್ತದೆ, ಕಾಲಿನಿಂದ ಹೊಡೆಯಲಾಗುತ್ತದೆ, ಆಟವನ್ನಾಡುವುದರಲ್ಲಿ ಮಜಾ ಬರುತ್ತದೆ. ಅದೇರೀತಿ ಈ ವಿಘ್ನಗಳ ಆಟವೂ ಆಗುತ್ತಿರುತ್ತದೆ, ಹೊಸದೇನಲ್ಲ. ಡ್ರಾಮಾ ಆಟವನ್ನೂ ತೋರಿಸುತ್ತದೆ ಹಾಗೂ ಸಂಪನ್ನ ಸಫಲತೆಯನ್ನೂ ತೋರಿಸುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top