25 May 2022 KANNADA Murli Today | Brahma Kumaris

Read and Listen today’s Gyan Murli in Kannada

May 24, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನಿದ್ರೆಯನ್ನು ಜಯಿಸುವವರಾಗಿ, ರಾತ್ರಿಯಲ್ಲಿ ಜಾಗೃತರಾಗಿ ಜ್ಞಾನದ ಚಿಂತನೆಮಾಡಿ, ತಂದೆಯ ನೆನಪಿನಲ್ಲಿರಿ ಆಗ ಅಪಾರ ಖುಷಿಯ ನಶೆಯೇರುವುದು”

ಪ್ರಶ್ನೆ:: -

ಭಾರತದಲ್ಲಿ ಅನೇಕ ರಜೆಗಳಿರುತ್ತದೆ ಆದರೆ ಸಂಗಮಯುಗದಲ್ಲಿ ನೀವು ಮಕ್ಕಳಿಗೆ ಒಂದು ಸೆಕೆಂಡಿನ ಸಮಯವೂ ಸಹ ಸಿಗುವುದಿಲ್ಲ – ಏಕೆ?

ಉತ್ತರ:-

ಏಕೆಂದರೆ ಸಂಗಮಯುಗದ ಒಂದೊಂದು ಗಳಿಗೆಯೂ ಸಹ ಅತ್ಯಮೂಲ್ಯವಾಗಿದೆ, ಇದರಲ್ಲಿ ಶ್ವಾಸ-ಶ್ವಾಸವೂ ತಂದೆಯನ್ನು ನೆನಪು ಮಾಡಬೇಕಾಗಿದೆ, ಹಗಲು-ರಾತ್ರಿ ಸೇವೆ ಮಾಡಬೇಕಾಗಿದೆ. ಆಜ್ಞಾಕಾರಿ, ಪ್ರಾಮಾಣಿಕರಾಗಿ ನೆನಪಿನಿಂದ ವಿಕರ್ಮ ವಿನಾಶ ಮಾಡಿಕೊಂಡು ಗೌರವದೊಂದಿಗೆ ನೇರವಾಗಿ ಮನೆಗೆ ಹೋಗಬೇಕು, ಶಿಕ್ಷೆಗಳಿಂದ ಬಿಡುಗಡೆಯಾಗಬೇಕಾಗಿದೆ. ಆತ್ಮ ಮತ್ತು ಶರೀರ ಎರಡನ್ನು ಕಂಚನ(ಚಿನ್ನ)ವನ್ನಾಗಿ ಮಾಡಿಕೊಳ್ಳಬೇಕು. ಆದ್ದರಿಂದಲೇ ನಿಮಗೆ ಒಂದೂ ಸೆಕೆಂಡಿನ ಸಮಯವಿರುವುದಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಮ್ಮ ತೀರ್ಥ ಸ್ಥಾನ ಭಿನ್ನವಾಗಿದೆ.

ಓಂ ಶಾಂತಿ. ಮಕ್ಕಳು ತಿಳಿದುಕೊಂಡಿದ್ದೀರಿ, ತೀರ್ಥ ಯಾತ್ರೆಗಳು ಎರಡು ಪ್ರಕಾರವಾಗಿರುತ್ತದೆ- ಒಂದನೆಯದು ಆತ್ಮಿಕ ಯಾತ್ರೆ, ಎರಡನೆಯದು ಶಾರೀರಿಕ ಯಾತ್ರೆ. ಕೆರೆಗಳು ಸಹ ಎರಡು ಪ್ರಕಾರದ್ದಿರುತ್ತವೆ. ಒಂದೊಂತು ನದಿಗಳ ಕೆರೆಯಾಗಿದೆ, ಎರಡನೆಯದು ನೀವು ಮಕ್ಕಳ ಹೊಸ ಹೊಸ ಸೇವಾಕೇಂದ್ರಗಳು ಅರ್ಥಾತ್ ಜ್ಞಾನದ ಕೆರೆಗಳು ಆಗುತ್ತಾ ಹೋಗುತ್ತವೆ. ಕೇಳುತ್ತಾರೆ – ಕಾನ್ಪುರದಲ್ಲಿ ಜ್ಞಾನಾಮೃತವನ್ನು ಕುಡಿಯುವ ಅಥವಾ ಜ್ಞಾನ ಸ್ನಾನ ಮಾಡುವ ಕೆರೆಗಳು ಎಷ್ಟಿದೆ? ನಾಲ್ಕೈದು ಕೆರೆಗಳಿದೆ ಎಂದು ಹೇಳುತ್ತಾರೆ. ವಿಳಾಸವನ್ನು ಸಹ ಎಲ್ಲ ಜ್ಞಾನ ಕೆರೆಗಳದು ಹಾಕಲಾಗುತ್ತದೆ. ಇದು ಇಂತಹ ಕೆರೆಯಾಗಿದೆ, ಅಲ್ಲಿ ಹೋಗಿ ಯಾರು ಜ್ಞಾನ ಸ್ನಾನ ಮಾಡುತ್ತಾರೋ ಅವರು ಜೀವನ ಮುಕ್ತಿಯನ್ನು ಪಡೆಯುತ್ತಾರೆ. ಈಗ ಮುಕ್ತಿ ಮತ್ತು ಜೀವನಮುಕ್ತಿ ಎಂದು ಯಾವುದಕ್ಕೆ ಹೇಳುತ್ತೇವೆನ್ನುವುದನ್ನು ನಾವು ಮಕ್ಕಳು ತಿಳಿದುಕೊಂಡಿದ್ದೇವೆ. ಅವಶ್ಯವಾಗಿ ಭಾರತವೇ ಜೀವನ್ಮುಕ್ತವಾಗಿತ್ತು, ಅದನ್ನು ಸ್ವರ್ಗ ಎಂದು ಹೇಳಲಾಗುತ್ತದೆ, ಮತ್ತೆ ಜೀವನ ಬಂಧನದಲ್ಲಿ ಬಂದಾಗ ಅದನ್ನೇ ನರಕ ಎಂದು ಹೇಳಲಾಗುತ್ತದೆ. ಈಗ ನಾವು ಮಕ್ಕಳು ತಿಳಿದುಕೊಂಡಿದ್ದೇವೆ – ನಾವು ಜ್ಞಾನ ತೀರ್ಥಗಳಿಗೆ ಹೋಗುತ್ತೇವೆ, ಜ್ಞಾನ ಸ್ನಾನ ಮಾಡುವುದರಿಂದಲೇ ಸದ್ಗತಿಯಾಗುತ್ತದೆ. ಸದ್ಗತಿಯ ಸಾಕ್ಷಾತ್ಕಾರವೂ ನಾವು ಮಕ್ಕಳಿಗೇ ಆಗಿದೆ. ಸ್ವರ್ಗವನ್ನು ಸದ್ಗತಿಯಂತಲೂ, ನರಕವನ್ನು ದುರ್ಗತಿಯಂತಲೂ ಹೇಳಲಾಗುತ್ತದೆ. ಸದ್ಗತಿ ಸ್ವರ್ಗವು ಅವಶ್ಯವಾಗಿ ಸತ್ಯಯುಗವಾಗಿದೆ ಮತ್ತು ದುರ್ಗತಿ ನರಕವು ಕಲಿಯುಗವಾಗಿದೆ. ನೀವು ಮಕ್ಕಳು ಎಲ್ಲರಿಗೆ ನಿಮಂತ್ರಣವನ್ನು ಕೊಡುತ್ತೀರಿ – ಈ ಕಲಿಯುಗೀ ನರಕದಿಂದ ಸತ್ಯಯುಗೀ ಸ್ವರ್ಗಕ್ಕೆ ಹೋಗುವಿರಾ? ಸ್ವರ್ಗದ ಜೊತೆ ಸತ್ಯಯುಗ ಎಂಬ ಅಕ್ಷರವನ್ನು ಅವಶ್ಯವಾಗಿ ಹಾಕಬೇಕಾಗಿದೆ. ಆಗಲೇ ಸ್ವರ್ಗ ಮತ್ತು ನರಕ ಬೇರೆ ಬೇರೆ ಎಂದಾಗುತ್ತದೆ. ಇಲ್ಲದಿದ್ದರೆ ಮನುಷ್ಯರು ಸ್ವರ್ಗ ನರಕ ಇಲ್ಲಿಯೇ ಇದೆ ಎಂದು ಹೇಳಿ ಬಿಡುತ್ತಾರೆ. ಸ್ವರ್ಗ ಮತ್ತು ನರಕವನ್ನು ಭಾರತವಾಸಿಗಳು ಅರಿತುಕೊಂಡಿದ್ದಾರೆ. ಅಲ್ಲಿ ದೇವೀ ದೇವತಾ ಧರ್ಮದವರೇ ಹೋಗುತ್ತಾರೆ, ಮತ್ಯಾರಿಗೂ ಗೊತ್ತಿಲ್ಲ. ಪ್ರತಿಯೊಬ್ಬರಿಗೂ ತಮ್ಮ ತಮ್ಮ ಧರ್ಮ ಮತ್ತು ತಮ್ಮ ತಮ್ಮ ಧರ್ಮಶಾಸ್ತ್ರಗಳಿದೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ಧರ್ಮಶಾಸ್ತ್ರವನ್ನೇ ಓದಬೇಕಾಗುತ್ತದೆ. ತಮ್ಮ ಧರ್ಮಶಾಸ್ತ್ರವೇ ಕಲ್ಯಾಣಕಾರಿಯಾಗುವುದು. ನೀವು ಮಕ್ಕಳು ನಾವು ಅವಶ್ಯವಾಗಿ ಶ್ರೇಷ್ಠ ಕುಲದವರೆಂದು ತಿಳಿದುಕೊಂಡಿದ್ದೀರಿ. ಎಲ್ಲಿಯತನಕ ನೀವು ಮನುಷ್ಯರಿಗೆ ನಾಟಕದ ರಹಸ್ಯವನ್ನು ತಿಳಿಸುವುದಿಲ್ಲ ಅಲ್ಲಿಯ ತನಕವೂ ಘೋರ ಅಂಧಕಾರದಲ್ಲಿರುತ್ತಾರೆ, ಆದ್ದರಿಂದ ಈ ಚಿತ್ರಗಳ ಮೇಲೆ ತಿಳಿಸಿಕೊಡಬೇಕು. ಈಗ ನೀವು ಮಕ್ಕಳು ಎಲ್ಲಾ ಯುಗಗಳನ್ನು ಅರಿತುಕೊಂಡಿದ್ದೀರಿ, ಚಿತ್ರಗಳಿಲ್ಲದೇ ಮನುಷ್ಯರು ತಿಳಿಯಲು ಸಾಧ್ಯವಿಲ್ಲ. ಬುದ್ಧಿಯಲ್ಲಿ ಕುಳಿತುಕೊಳ್ಳುವುದೇ ಇಲ್ಲ. ನೀವು ಶಾಲೆಯಲ್ಲಿ ನಕ್ಷೆಯನ್ನು ತೋರಿಸದೆ ಯಾರಿಗಾದರು ಫ್ರಾನ್ಸ್, ಇಂಗ್ಲೆಂಡ್ ಇಲ್ಲಿದೆ ಎಂದು ಹೇಳಿದರೆ ಅವರಿಗೆ ಏನೂ ಅರ್ಥವಾಗುವುದಿಲ್ಲ. ಅದೇ ರೀತಿ ಇಲ್ಲಿಯೂ ಸಹ ಚಿತ್ರಗಳಿಲ್ಲದೆ ಏನನ್ನೂ ತಿಳಿಯಲು ಸಾಧ್ಯವಿಲ್ಲ. ಇದು ನಾಟಕವಾಗಿದೆ ಎನ್ನುವುದನ್ನು ಚಿತ್ರಗಳ ಮುಂದೆ ಕರೆತಂದು ತಿಳಿಸಿಕೊಡಬೇಕಾಗಿದೆ. ಈಗ ತಿಳಿಸಿ ನೀವು ಯಾವ ಧರ್ಮದವರಾಗಿದ್ದೀರಿ? ನಿಮ್ಮ ಧರ್ಮವು ಯಾವಾಗ ಬರುತ್ತದೆ? ಸತ್ಯಯುಗದಲ್ಲಿ ಯಾವ ಧರ್ಮವಿರುತ್ತದೆ? ಚಿತ್ರಗಳಲ್ಲಿ ಸಂಪೂರ್ಣ ಸ್ಪಷ್ಟವಾಗಿ ಇದೆಲ್ಲಾ ಬರೆಯಲಾಗಿದೆ. ಸತ್ಯಯುಗ ತ್ರೇತಾದಲ್ಲಿ ಸೂರ್ಯವಂಶೀ ಚಂದ್ರವಂಶೀಗಳು ಇದ್ದಾಗ ಮತ್ಯಾವುದೇ ಧರ್ಮವಿರಲಿಲ್ಲ. ಈಗ ಆ ದೇವತಾ ಧರ್ಮವಿಲ್ಲ. ಆದ್ದರಿಂದ ಅವಶ್ಯವಾಗಿ ಅದು ಸ್ಥಾಪನೆಯಾಗಬೇಕು. ಈಗ ಹಳೆಯ ಪ್ರಪಂಚವಾಗಿರುವುದರಿಂದ ಅವಶ್ಯವಾಗಿ ಮತ್ತೆ ಹೊಸ ಪ್ರಪಂಚದ ಸ್ಥಾಪನೆಯಾಗಬೇಕು. ಹೊಸ ಪ್ರಪಂಚದಲ್ಲಿ ಲಕ್ಷ್ಮಿ ನಾರಾಯಣರ ರಾಜ್ಯವಿತ್ತು. ಲಕ್ಷ್ಮಿ ನಾರಾಯಣರ ಚಿತ್ರಗಳೇ ಮುಖ್ಯವಾಗಿದೆ ಏಕೆಂದರೆ ಲಕ್ಷ್ಮಿ ನಾರಾಯಣರ ಹೆಸರು ಪ್ರಸಿದ್ಧವಾಗಿದೆ, ಅವರ ದೊಡ್ಡ ದೊಡ್ಡ ಮಂದಿರಗಳನ್ನು ಮಾಡಿದ್ದಾರೆ. ಶಿವನಿಗೂ ಸಹ ಅನೇಕ ಹೆಸರುಗಳನ್ನಿಟ್ಟು, ಅನೇಕ ಮಂದಿರಗಳನ್ನು ಮಾಡಿದ್ದಾರೆ. ಅವರ ಹೆಸರೂ ಪ್ರಸಿದ್ಧವಾಗಿದೆ. ಸೋಮರಸವನ್ನು ಕುಡಿಸುವ ಕಾರಣ ಅವರಿಗೆ ಸೋಮನಾಥನೆಂದು ಹೆಸರಿಟ್ಟಿದ್ದಾರೆ. ಮನುಷ್ಯರು ಅನೇಕ ಹೆಸರನ್ನಿಟ್ಟಿರುವುದರಿಂದ ತಿಳಿಸಿಕೊಡಬೇಕಾಗುತ್ತದೆ. ರುದ್ರ, ಶಿವ, ಸೋಮನಾಥ ಈ ಎಲ್ಲ ಹೆಸರುಗಳನ್ನು ಏಕೆ ಇಟ್ಟಿದ್ದಾರೆ? ಬದರಿನಾಥ ಇದರ ಅರ್ಥ ಏನಾಗಿದೆ? ತುಂಬಾ ಹೆಸರುಗಳನ್ನು ತಿಳುವಳಿಕೆ ಇಲ್ಲದೆ ಇಟ್ಟು ಬಿಟ್ಟಿದ್ದಾರೆ. ಆದ್ದರಿಂದ ಮನುಷ್ಯರು ಗೊಂದಲದಲ್ಲಿದ್ದಾರೆ. ಇದರ ಯಥಾರ್ಥ ಹೆಸರೇ “ರುದ್ರ ಗೀತಾ ಜ್ಞಾನ ಯಜ್ಞ” ಎಂದಾಗಿದೆ. ತಂದೆಯು ಹೇಳುತ್ತಾರೆ – ಈ ನನ್ನ ಜ್ಞಾನ ಯಜ್ಞದಿಂದಲೇ ವಿನಾಶದ ಜ್ವಾಲೆಯು ಪ್ರಜ್ವಲಿತವಾಗುತ್ತದೆ. ಇದು ಭಗವಾನುವಾಚವಾಗಿದೆ. ಮೊದಲು ಯಾರೇ ಬರುತ್ತಾರೆಂದರೆ ಅವರಿಗೆ ಗೀತೆಯ ಬಗ್ಗೆ ಅವಶ್ಯವಾಗಿ ತಿಳಿಸಿ. ಗೀತೆಯಲ್ಲಿ ಬರೆಯಲಾಗಿದೆ – ಭಗವಾನುವಾಚ ನನ್ನೊಬ್ಬನನ್ನೇ ನೆನಪು ಮಡಿದಾಗ ವಿಕರ್ಮ ವಿನಾಶವಾಗುತ್ತದೆ ಮತ್ತು ನೀವು ನನ್ನ ಹತ್ತಿರ ಬಂದು ಬಿಡುತ್ತೀರಿ. ಅವರೇ ಬೇಹದ್ದಿನ ತಂದೆ, ಸ್ವರ್ಗದ ರಚಯಿತ ಹಾಗೂ ಜೀವನಮುಕ್ತಿಯ ಸ್ವರ್ಗದ ರಚಯಿತನಾಗಿದ್ದಾರೆ. ಹೆಸರೇ ಆಗಿದೆ ಸ್ವರ್ಗದಾತ, ಅವರೇ ಸ್ವರ್ಗದ ಸ್ಥಾಪನೆ ಮಾಡುತ್ತಾರೆ. ಸ್ವರ್ಗದಲ್ಲಿ ಅವರು ಇರುವುದಿಲ್ಲ. ಸ್ವರ್ಗವನ್ನು ಸ್ಥಾಪನೆ ಮಾಡುವವರೇ ಭಗವಂತನಾಗಿದ್ದಾರೆ. ಸ್ಥಾಪನೆ, ವಿನಾಶ, ಪಾಲನೆಯ ಕಾರ್ಯವನ್ನು ಮಾಡುತ್ತಾರಲ್ಲವೆ. ಆದ್ದರಿಂದ ಈಗ ತಂದೆಯು ಹೇಳುತ್ತಾರೆ – ನಾನು ಪಾರಲೌಕಿಕ ತಂದೆಯನ್ನು ನೆನಪು ಮಾಡಿ, ತಮ್ಮನ್ನು ಅಶರೀರಿ ಆತ್ಮ ಎಂದು ತಿಳಿಯಿರಿ, ಇಲ್ಲದಿದ್ದರೆ ನನ್ನ ಬಳಿ ಹೇಗೆ ಬರುತ್ತೀರಾ. ತಂದೆ ಹೇಳುತ್ತಾರೆ, ಇದು ನಿಮ್ಮ ಅಂತಿಮ ಜನ್ಮವಾಗಿದೆ ಆದ್ದರಿಂದ ನನ್ನ ಜೊತೆ ಯೋಗವನ್ನಿಡುವುದರಿಂದ ನಿಮ್ಮ ವಿಕರ್ಮ ವಿನಾಶ ಆಗುತ್ತದೆ. ಇದಕ್ಕೇ ಯೋಗಾಗ್ನಿ ಎಂದು ಹೇಳಲಾಗುತ್ತದೆ. ಮನುಷ್ಯರು ಆರೋಗ್ಯಕ್ಕಾಗಿ ಅನೇಕ ಪ್ರಕಾರದ ಯೋಗಗಳನ್ನು ತಿಳಿಸಿಕೊಡುತ್ತಾರೆ. ಈಗ ಪಾರಲೌಕಿಕ ತಂದೆ ಹೇಳುತ್ತಾರೆ ನನ್ನೊಡನೆ ಯೋಗವಿಡಿ ಮತ್ತು ಈ ಜ್ಞಾನದ ಧಾರಣೆ ಮಾಡಿ, ಆಗ ನಿಮ್ಮ ವಿಕರ್ಮ ವಿನಾಶವಾಗುತ್ತದೆ ಮತ್ತೆ ನಾನು ನಿಮಗೆ ಸತ್ಯಯುಗ, ವೈಕುಂಠದ ರಾಜ್ಯಭಾಗ್ಯವನ್ನು ಕೊಡುತ್ತೇನೆ ಎಂದಾಗ ಒಪ್ಪಬೇಕಲ್ಲವೆ. ತಂದೆಯು ಹೇಳುತ್ತಾರೆ ಹೇ ನಿದ್ರೆಯನ್ನು ಗೆಲ್ಲುವಂತಹ ಮಕ್ಕಳೇ ನಿದ್ರೆಯನ್ನು ಗೆದ್ದು ತಂದೆಯನ್ನು ನೆನಪು ಮಾಡಿ ಏಕೆಂದರೆ ನೀವು ನನ್ನ ಹತ್ತಿರ ನನ್ನ ನಿರಾಕಾರಿ ಪ್ರಪಂಚದಲ್ಲಿ ಬರಬೇಕಾಗಿದೆ. ಒಂದು ವೇಳೆ ಕೃಷ್ಣನಾಗಿದ್ದರೆ ನನ್ನ ವೈಕುಂಠದಲ್ಲಿ ಬರಬೇಕಾಗಿದೆ ಎಂದು ಹೇಳುತ್ತಿದ್ದರು. ಯಾರು ಎಲ್ಲಿಯ ವಾಸಿಯಾಗಿದ್ದಾರೆ ಅಲ್ಲಿಯ ಮಾರ್ಗವನ್ನು ತೋರಿಸುತ್ತಾರಲ್ಲವೆ. ನಿರಾಕಾರಿ ತಂದೆಯು ಹೇಳುತ್ತಾರೆ ನೀವು ನನ್ನನ್ನು ನೆನಪು ಮಾಡಿದಾಗ ನನ್ನ ಹೊಸ ಪ್ರಪಂಚದಲ್ಲಿ ಬರುತ್ತೀರಿ ಮತ್ತು ನನ್ನ ಹತ್ತಿರ ಬರಲು ಮಾರ್ಗವು ಒಂದೇ ಆಗಿದೆ. ಈಗ ನೀವು ಮಕ್ಕಳು ಮುಖವಂಶಾವಳಿಯಾಗಿದ್ದೀರಿ. ಕುಖವಂಶಾವಳಿ ಮತ್ತು ಮುಖವಂಶಾವಳಿ ಅಕ್ಷರವು ಸಂಪೂರ್ಣ ಸಹಜವಾಗಿದೆ. ಈಗ ನೀವು ಮಕ್ಕಳು ಹೇಳುತ್ತೀರಿ ಬಾಬಾ ನಾನು ನಿನ್ನವನಾಗಿದ್ದೇನೆ, ಅದಕ್ಕೆ ನಾನು ಹೇಳುತ್ತೇನೆ ಹಾಂ! ಮಕ್ಕಳೇ ನೀವು ನನ್ನವರಾಗಿದ್ದೀರಿ, ಆದ್ದರಿಂದ ನೀವು ನನ್ನ ಮತದ ಮೇಲೆ ನಡೆಯಿರಿ.

ನೀವು ತಿಳಿದುಕೊಂಡಿದ್ದೀರಿ ಯಾವಾಗ ಭಾರತವು ಸ್ವರ್ಗವಾಗಿತ್ತು ಆಗ ಉಳಿದ ಇಷ್ಟೆಲ್ಲ ಆತ್ಮಗಳು ಎಲ್ಲಿದ್ದರು? ಮುಕ್ತಿಧಾಮದಲ್ಲಿದ್ದರು. ಅಲ್ಲಿ ಇರುವುದೇ ಒಂದು ಧರ್ಮವಾಗಿರುವುದರಿಂದ ಚಪ್ಪಾಳೆ ತಟ್ಟುವುದಿಲ್ಲ, ಜಗಳ, ಕಲಹದ ಹೆಸರೇ ಇರುವುದಿಲ್ಲ. ಮನುಷ್ಯರೆಲ್ಲರೂ ನಾವು ಹಿಂದೂ-ಚೈನೀ ಸಹೋದರ-ಸಹೋದರರಾಗಿದ್ದೇವೆಂದು ಹೇಳುತ್ತಾರೆ, ಆದರೆ ಎಲ್ಲಿ? ಇಲ್ಲಂತೂ ಜಗಳವಾಡುತ್ತಿರುತ್ತಾರೆ ಮತ್ತೆ ಪತಿತ ಪಾವನ ಸೀತಾರಾಮ ಎಂದು ಕರೆಯುತ್ತಾರೆಂದಾಗ ಅವಶ್ಯವಾಗಿ ಸ್ವಯಂ ಪತಿತರಾಗಿರುವ ಕಾರಣ ಗಾಯನ ಮಾಡುತ್ತಾರೆ. ಸತ್ಯಯುಗವು ಪಾವನ ಪ್ರಪಂಚವಾಗಿರುವ ಕಾರಣ ಅಲ್ಲಿ ಈ ರೀತಿ ಗಾಯನ ಮಾಡುವುದಿಲ್ಲ. ಇದು ಪತಿತ ಪ್ರಪಂಚವಾಗಿದೆ ಆದ್ದರಿಂದಲೇ ಗಾಯನ ಮಾಡುತ್ತಾರೆ. ಸತ್ಯಯುಗವನ್ನು ಪಾವನ ಪ್ರಪಂಚವೆಂತಲೂ, ಕಲಿಯುಗವನ್ನು ಪತಿತ ಪ್ರಪಂಚವೆಂತಲೂ ಕರೆಯುತ್ತಾರೆ. ಇದನ್ನೂ ಸಹ ಮನುಷ್ಯರು ಅರಿತುಕೊಳ್ಳುವುದಿಲ್ಲ. ಎಷ್ಟು ಮಲಿನ ಬುದ್ಧಿಯವರಾಗಿದ್ದಾರೆ. ಮೊದಲು ನಾವೂ ತಿಳಿದುಕೊಂಡಿರಲಿಲ್ಲ. ತಮೋಪ್ರಧಾನ ಬುದ್ಧಿಯವರಾಗುವ ಕಾರಣ ಎಲ್ಲವನ್ನೂ ಮರೆತು ಹೋಗುತ್ತೇವೆ. ತಂದೆಯು ಹೇಳುತ್ತಾರೆ ನೀವೀಗ ಸಂಪೂರ್ಣವಾಗಿ ಬುದ್ಧಿಹೀನರಾಗಿ ಬಿಟ್ಟಿದ್ದೀರಿ. ನೀವು ಎಷ್ಟೊಂದು ಬುದ್ಧಿವಂತರಾಗಿದ್ದಿರಿ. ನೀವೇ ದೇವತಾ ಸತೋಪ್ರಧಾನರಾಗಿದ್ದಿರಿ. ಈಗ ಬುದ್ಧಿಹೀನ, ಶೂದ್ರ, ತಮೋಪ್ರಧಾನರಾಗಿದ್ದೀರಿ. ನೀವು ಸ್ವರ್ಗದಲ್ಲಿ ಎಷ್ಟು ಸುಖವನ್ನು ಪಡೆದಿರಿ, ನೀವು ಭಾರತವಾಸೀ ದೇವೀ ದೇವತಗಳ ಕುಲವು ಶ್ರೇಷ್ಠಾತಿ ಶ್ರೇಷ್ಠವಾಗಿತ್ತು. ಈಗ ನೀವು ತುಚ್ಛ ನರಕವಾಸಿಗಳಾಗಿದ್ದೀರಿ. ಈಗ ತಂದೆಯು ಬಂದು ತಮ್ಮ ಮಕ್ಕಳಿಗೆ ತಿಳಿಸುತ್ತಾರೆ. ಮಕ್ಕಳು ಈಗ ಅನುಭವ ಮಾಡುತ್ತಾರೆ – ಅವಶ್ಯವಾಗಿ ನಾವೇ ಪೂಜ್ಯ ದೇವೀ ದೇವತೆಗಳಾಗಿದ್ದೆವು ನಂತರ ನಾವೇ ಪೂಜಾರಿಗಳಾದೆವು. ತಂದೆಯು ನಮ್ಮನ್ನು ಎಷ್ಟು ಬುದ್ಧಿವಂತರನ್ನಾಗಿ ಮಾಡಿದ್ದರು, ಈಗ ಮತ್ತೆ ಅದೇ ತರಹ ಮಾಡುತ್ತಿದ್ದಾರೆ. ಈ ಮಾತುಗಳನ್ನು ರಾತ್ರಿಯಲ್ಲಿ ಚಿಂತನೆ ಮಾಡಿ ತುಂಬಾ ಖುಷಿಯಾಗಬೇಕು. ಅಮೃತವೇಳೆ ಎದ್ದು ತಂದೆಯನ್ನು ನೆನಪು ಮಾಡಿ ಮತ್ತು ಈ ಚಿಂತನೆ ಮಾಡಿದಾಗ ತುಂಬಾ ಖುಷಿಯ ನಶೆ ಏರುವುದು. ಕೆಲವು ಮಕ್ಕಳಂತೂ ಇಡೀ ದಿನದಲ್ಲಿ ಒಂದು ಸೆಕೆಂಡೂ ನೆನಪು ಮಾಡುವುದಿಲ್ಲ. ಭಲೆ ಇಲ್ಲಿ ಕೇಳುತ್ತಾರೆ ಆದರೆ ಬುದ್ಧಿಯೋಗವು ಇನ್ನೊಂದು ಕಡೆ ಇರುತ್ತದೆ. ನಿರಾಕಾರ ಪರಮಾತ್ಮನೆಂದು ಯಾರಿಗೆ ಹೇಳಲಾಗುತ್ತದೆ ಎನ್ನುವುದನ್ನೂ ಸಹ ತಿಳಿದುಕೊಳ್ಳುವುದಿಲ್ಲ. ಹೇಗೆ ಶಾಲೆಯಲ್ಲಿ ಕೆಲಕೆಲವರು ಎರಡು ಮೂರು ಬಾರಿಯೂ ಅನುತ್ತೀರ್ಣರಾಗಿಬಿಡುತ್ತಾರೆ, ಕೊನೆಗೆ ಓದಲಾಗುವಿದಿಲ್ಲವೆಂದು ಶಾಲೆಯನ್ನೇ ಬಿಟ್ಟುಬಿಡುತ್ತಾರೆ ಅದೇ ರೀತಿ ಇಲ್ಲಿಯೂ ಸಹ ವಿದ್ಯೆಯು ಅರ್ಥವಾಗುವುದಿಲ್ಲವೆಂದರೆ ಬಿಟ್ಟು ಬಿಡುತ್ತಾರೆ. ಮಾಯೆಯು ಕೆನ್ನೆಗೆ ಜೋರಾಗಿ ಹೊಡೆಯುತ್ತದೆ. ವಿಕಾರದ ಏಟು ಬಿತ್ತೆಂದರೆ ಸತ್ಯನಾಶವಾಗುತ್ತದೆ. ಮಾಯೆಯು ಇಂತಹ ಪ್ರಭಲವಾಗಿದೆ, ಕ್ರೂರವಾಗಿದೆ. ನಿಮ್ಮ ಯುದ್ಧವು ಯಾವುದೇ ಮನುಷ್ಯನೊಂದಿಗಿಲ್ಲ, ಮಾಯೆಯೊಂದಿಗಿದೆ. ನಾವು ಮಾಯೆಯ ಮೇಲೆ ವಿಜಯವನ್ನು ಪಡೆಯುತ್ತೇವೆ. ಇದಕ್ಕೋಸ್ಕರ ನೀವು ಮಕ್ಕಳು ಬಹಳ ಪುರುಷಾರ್ಥ ಮಾಡಬೇಕಾಗುವುದು. ಎಷ್ಟಾದರೆ ಅಷ್ಟೂ ರಾತ್ರಿಯಲ್ಲಿ ಜಾಗೃತರಾಗಿ ವಿಚಾರಸಾಗರ ಮಂಥನ ಮಾಡಬೇಕು. ಆಗ ಇದು ಅಭ್ಯಾಸವಾಗಿ ಬಿಡುತ್ತದೆ. ಭಗವಾನುವಾಚವು ಎಲ್ಲ ಮಕ್ಕಳ ಪ್ರತಿಯಾಗಿದೆ, ಕೇವಲ ಒಬ್ಬ ಅರ್ಜುನನ ಪ್ರತಿಯಲ್ಲ. ಈಗ ಎಲ್ಲರೂ ಯುದ್ಧದ ಮೈಧಾನದಲ್ಲಿದ್ದಾರೆ. ತಂದೆಯು ಎಲ್ಲ ಮಕ್ಕಳಿಗೂ ತಿಳಿಸುತ್ತಾರೆ, ಮಕ್ಕಳೇ ರಾತ್ರಿಯಲ್ಲಿ ಜಾಗೃತರಾಗಿ ಪ್ರಿಯಾತಿ ಪ್ರಿಯ ತಂದೆಯನ್ನು ನೆನಪು ಮಾಡಿ ಆಗ ವಿಕರ್ಮ ವಿನಾಶವಾಗುತ್ತದೆ ಮತ್ತು ಜ್ಞಾನದ ಧಾರಣೆಯೂ ಆಗುತ್ತದೆ. ಇಲ್ಲದಿದ್ದರೆ ಸ್ವಲ್ಪವೂ ಧಾರಣೆ ಆಗುವುದಿಲ್ಲ. ಒಂದು ವೇಳೆ ನನ್ನ ಆಜ್ಞೆಯ ಉಲ್ಲಂಘನೆ ಮಾಡುತ್ತೀರಿ, ನನ್ನನ್ನು ನೆನಪು ಮಾಡುವುದಿಲ್ಲವೆಂದರೆ ತುಂಬಾ ಶಿಕ್ಷೆಯನ್ನು ತಿನ್ನಬೇಕಾಗುವುದು. ಈಶ್ವರೀಯ ಸಲಹೆಯು ಸಿಗುತ್ತದೆಯಲ್ಲವೆ. ನಾನು ನಿಮ್ಮ ಬಹಳ ಮಧುರಾತಿ ಮಧುರ ತಂದೆಯಾಗಿದ್ದೇನೆ, ನನ್ನನ್ನು ನೆನಪು ಮಾಡುವುದರಿಂದ ನೀವು ನನ್ನ ಹತ್ತಿರ ಬಂದು ಬಿಡುತ್ತೀರಿ. ಶಿಕ್ಷೆಯನ್ನು ತಿಂದು ಮತ್ತೆ ಬರುವುದು ಸರಿಯಲ್ಲ. ನೇರವಾಗಿ ಬರುವುದರಿಂದ ಗೌರವ ಸಿಗುತ್ತದೆ. ಆದ್ದರಿಂದ ನನ್ನ ಆಜ್ಞೆಯ ಉಲ್ಲಂಘನೆ ಮಾಡಬೇಡಿ. ಆಜ್ಞೆಯನ್ನು ಒಪ್ಪದೇ ಇರುವವರನ್ನು ನಿಂಧಕರೆಂದು ಹೇಳಲಾಗುತ್ತದೆ. ಇವರು ಸತ್ಯ ಬಾಬಾ, ಸತ್ಯ ಸದ್ಗುರುವಾಗಿದ್ದಾರೆ ಎಂದಾಗ ಅವರ ಆಜ್ಞೆಯನ್ನು ಪಾಲಿಸಬೇಕಲ್ಲವೇ. ಶಿವಬಾಬಾರವರಂತೂ ತುಂಬಾ ಮಧುರರಾಗಿದ್ದಾರೆ. ಆತ್ಮ ಮತ್ತು ಶರೀರ ಎರಡನ್ನೂ ಕಂಚನವಾಗಿ ಮಾಡುತ್ತಾರೆ. ಕಂಚನಕಾಯವೆಂದು ಕೇವಲ ಆರೋಗ್ಯವಂತ ಶರೀರಕ್ಕಷ್ಟೇ ಹೇಳುವುದಿಲ್ಲ. ಆತ್ಮವೂ ಪವಿತ್ರ ಮತ್ತು ಶರೀರವೂ ಪವಿತ್ರ ಆಗಿರುವುದಕ್ಕೆ ಕಂಚನಕಾಯ ಎಂದು ಹೇಳಲಾಗುತ್ತದೆ. ದೇವತೆಗಳಿಗೆ ಕಂಚನಕಾಯ ಇತ್ತು. ಈಗಂತೂ ಎಲ್ಲರದೂ ಕೆಸರಿನ ಕಾಯವಾಗಿದೆ. ಪಂಚತತ್ವಗಳು ತಮೋಪ್ರಧಾನವಾಗಿರುವುದರಿಂದ ಶರೀರವು ಹೇಗಿರುತ್ತದೆ ನೋಡಿ! ಮುಖಗಳು ಹೇಗಿರುತ್ತದೆ ನೋಡಿ! ಕೃಷ್ಣನಿಗಂತೂ ತುಂಬಾ ಮಹಿಮೆ ಇದೆ. ಇಂತಹ ಶರೀರವು ನಿಮಗೆ ಸ್ವರ್ಗದಲ್ಲಿಯೇ ಸಿಗುತ್ತದೆ. ಈಗ ನೀವು ಪುನಃ ಅಂತಹ ದೇವತೆಗಳಾಗುತ್ತೀರಿ. ಅದಕ್ಕೆ ಮುಖ್ಯ ಮಾತಾಗಿದೆ – ರಾತ್ರಿಯಲ್ಲಿ ಜಾಗೃತರಾಗಿ ನೆನಪು ಮಾಡಿದಾಗ ಅಭ್ಯಾಸವಾಗುವುದು. ನಿದ್ರೆಯನ್ನು ಓಡಿಸಬೇಕಾಗಿದೆ. ಅಭ್ಯಾಸ ಮಾಡುವುದರಿಂದ ಎಲ್ಲವೂ ಆಗುತ್ತದೆ. ವ್ಯಾಪಾರ ವ್ಯವಹಾರ ಮಾಡುವುದು, ರೊಟ್ಟಿಯನ್ನು ಮಾಡುವುದು, ಬೇಯಿಸುವುದು, ಮುಂತಾದವುಗಳೆಲ್ಲವೂ ಅಭ್ಯಾಸದಿಂದ ಕಲಿಯಲಾಗುತ್ತದೆಯಲ್ಲವೇ. ತಂದೆಯನ್ನು ನೆನಪು ಮಾಡುವುದನ್ನೂ ಕಲಿಯಬೇಕಾಗಿದೆ. ಯಾರನ್ನು ಇಡೀ ಕಲ್ಪ ಮರೆತಿದ್ದೀರಿ, ಈಗ ಅವರನ್ನು ನೆನಪು ಮಾಡಬೇಕು ಆಗ ತಂದೆಯು ಖುಷಿಯಾಗುವರು. ಇಲ್ಲವೆಂದರೆ ಇವರು ಪ್ರಾಮಾಣಿಕ, ಆಜ್ಞಾಕಾರಿ ಮಗುವಲ್ಲವೆಂದು ಹೇಳುತ್ತಾರೆ. ನಂತರ ತುಂಬಾ ಶಿಕ್ಷೆಗಳನ್ನು ಅನುಭವಿಸುತ್ತೀರಿ. ಅವರ ಅದೃಷ್ಟದಲ್ಲಿ ಶಿಕ್ಷೆಗಳೇ ಇರುತ್ತದೆ. ಇಲ್ಲಿ ಯಾರ ಮೇಲಾದರೂ ಕ್ರೋಧ ಮಾಡುತ್ತಾರೆಂದರೆ ಅವರ ವೇಲೆ ಕೋಪಿಸಿಕೊಳ್ಳುತ್ತಾರೆ, ಆದರೆ ಅಲ್ಲಿ ಧರ್ಮರಾಜ ಶಿಕ್ಷೆ ಕೊಟ್ಟಾಗ ಏನಾದರೂ ಮಾಡಲು ಸಾಧ್ಯವಿದೆಯಾ? ಹೇಗೆ ಜೈಲಿನಲ್ಲಿ ಸರ್ಕಾರವು ತುಂಬಾ ಬಿಟ್ಟಿ ಕೆಲಸವನ್ನು ಮಾಡಿಸುತ್ತದೆ, ಅದರಲ್ಲಿ ಕೆಲವರು ಪರಿಶ್ರಮವಿಲ್ಲದೆ ಜೈಲನ್ನು ಭೋಗಿಸುತ್ತಾರೆ, ಕೆಲವರಂತೂ ತುಂಬಾ ಪರಿಶ್ರಮ ಪಡಬೇಕಾಗುತ್ತದೆ. ಅದೇ ರೀತಿ ಧರ್ಮರಾಜಪುರಿಯಲ್ಲಿಯೂ ಸಹ ಶಿಕ್ಷೆಯನ್ನು ಕೊಡುತ್ತಾರೆಂದರೆ ಏನೂ ಮಾಡಲು ಸಾಧ್ಯವಿಲ್ಲ. ತಮ್ಮೊಳಗೆ ತಿಳಿಯುತ್ತಾರೆ – ಇದು ನಮ್ಮದೇ ದೋಷವಾಗಿದೆ ಆದ್ದರಿಂದಲೇ ಶಿಕ್ಷೆ ಸಿಕ್ಕಿದೆ. ಮತ್ತೆ ಇದನ್ನು ಅನುಭವ ಮಾಡುತ್ತಾರೆ – ನಾವು ತಂದೆಯ ಆಜ್ಞೆಯನ್ನು ಪಾಲಿಸಲಿಲ್ಲ ಆದ್ದರಿಂದಲೇ ಈ ಶಿಕ್ಷೆಯು ಸಿಕ್ಕಿತು. ಆದ್ದರಿಂದ ತಂದೆಯು ಹೇಳುತ್ತಾರೆ ಮಕ್ಕಳೇ ಎಷ್ಟಾದರೆ ಅಷ್ಟು ನನ್ನನ್ನು ನೆನಪು ಮಾಡಿ. ಒಳ್ಳೆಯದು.

ಭಾರತದಲ್ಲಿ ನೋಡಿ ಎಲ್ಲರಿಗೆ ಎಷ್ಟೊಂದು ರಜೆಗಳು ಸಿಗುತ್ತದೆ. ಇಷ್ಟು ರಜೆಗಳು ಮತ್ತೆಲ್ಲೂ ಸಿಗುವುದಿಲ್ಲ. ಆದರೆ ಇಲ್ಲಿ ನಮಗೆ ಒಂದು ಸೆಕೆಂಡೂ ಸಹ ಬಿಡುವು ಸಿಗುವುದಿಲ್ಲ ಏಕೆಂದರೆ ಬಾಬಾ ಹೇಳುತ್ತಾರೆ – ಶ್ವಾಸ-ಶ್ವಾಸವೂ ನೆನಪಿನಲ್ಲಿರಿ ಎಂದು. ಒಂದೊಂದು ಶ್ವಾಸವೂ ತುಂಬಾ ಬೆಲೆಯುಳ್ಳಾದ್ದಾಗಿದೆ. ಮಕ್ಕಳು ದಿನ-ರಾತ್ರಿ ಬಾಬಾರವರ ಸೇವೆಯಲ್ಲಿರಬೇಕು.

ನೀವು ಸರ್ವಶಕ್ತಿವಂತ ಬಾಬಾನಿಗೆ ಪ್ರಿಯತಮೆಯರಾಗಿದ್ದೀರೋ ಅಥವಾ ಅವರ ರಥಕ್ಕೆ ಆಗಿದ್ದೀರಾ? ಅಥವಾ ಇಬ್ಬರಿಗೂ ಆಗಿದ್ದೀರಾ? ಅವಶ್ಯವಾಗಿ ಇಬ್ಬರಿಗೂ ಪ್ರಿಯತಮೆಯರಾಗಬೇಕಾಗಿದೆ. ಬುದ್ಧಿಯಲ್ಲಿ ಇದೇ ಇರುತ್ತದೆ – ಅವರು ಈ ರಥದಲ್ಲಿದ್ದಾರೆನ್ನುವುದು. ಆ ಕಾರಣ ನೀವು ಇವರ ಪ್ರಿಯತಮೆಯರಾಗಿದ್ದೀರಿ. ಶಿವನ ಮಂದಿರದಲ್ಲಿಯೂ ಬಸವನನ್ನು ಇಡಲಾಗಿದೆ. ಅದನ್ನೂ ಪೂಜಿಸಲಾಗುತ್ತದೆ. ಇವು ಎಷ್ಟು ಗುಹ್ಯ ಮಾತುಗಳಾಗಿದೆ, ಯಾರು ಇದನ್ನು ಪ್ರತಿನಿತ್ಯ ಕೇಳುವುದಿಲ್ಲ ಅವರು ಒಂದಲ್ಲ ಒಂದು ಮಾತುಗಳನ್ನು ಕಳೆದುಕೊಳ್ಳುತ್ತಾರೆ. ಪ್ರತಿನಿತ್ಯ ಕೇಳುವವರು ಎಂದೂ ಅನುತ್ತೀರ್ಣರಾಗುವುದಿಲ್ಲ. ಅವರ ಆಚಾರಗಳು ಚೆನ್ನಾಗಿರುತ್ತದೆ. ಬಾಬಾರವರನ್ನು ನೆನಪು ಮಾಡುವುದರಲ್ಲಿ ಅತಿ ದೊಡ್ಡ ಸಂಪಾದನೆಯಿದೆ. ಮತ್ತೆ ಅದಕ್ಕಿಂತಲೂ ಹೆಚ್ಚಿನ ಸಂಪಾದನೆ ಜ್ಞಾನವನ್ನು ನೆನಪು ಮಾಡುವುದರಲ್ಲಿದೆ. ಯೋಗವೂ ಸಂಪಾದನೆ ಮತ್ತು ಜ್ಞಾನವೂ ಸಂಪಾದನೆಯಾಗಿದೆ. ಬಾಬಾರವರನ್ನು ನೆನಪು ಮಾಡುವುದರಿಂದ ವಿಕರ್ಮ ವಿನಾಶವಾಗುತ್ತದೆ ಮತ್ತು ಶ್ರೇಷ್ಠ ಪದವಿಯು ಸಿಗುತ್ತದೆ. ಎಲ್ಲಿ ಬಾಬಾ ಇರುತ್ತಾರೋ ಅದೇ ಮುಕ್ತಿಧಾಮ ಬ್ರಹ್ಮಲೋಕವಾಗಿದೆ. ಆದರೆ ಎಲ್ಲದಕ್ಕಿಂತ ಒಳ್ಳೆಯದು ಈ ಬ್ರಾಹ್ಮಣರ ಲೋಕವಾಗಿದೆ. ಬ್ರಾಹ್ಮಣರು ಅವಶ್ಯವಾಗಿ ಜನಿವಾರವನ್ನು ಹಾಕಿಕೊಳ್ಳುತ್ತಾರೆ, ಜುಟ್ಟನ್ನು ಕಟ್ಟಿಕೊಳ್ಳುತ್ತಾರೆ ಏಕೆಂದರೆ, ಬಾಬಾ ನಾವು ಬ್ರಾಹ್ಮಣರನ್ನು ಜುಟ್ಟನ್ನು ಹಿಡಿದುಕೊಂಡು (ಶ್ರೇಷ್ಠತೆ ಎಂಬ ಜುಟ್ಟು) ಕರೆದುಕೊಂಡು ಹೋಗುತ್ತಾರೆ.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತಾಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ.ಆತ್ಮೀಯ ತಂದೆ ಆತ್ಮೀಯ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಶರೀರ ಮತ್ತು ಆತ್ಮ ಎರಡನ್ನೂ ಕಂಚನವನ್ನಾಗಿ ಮಾಡಿಕೊಳ್ಳುವುದಕ್ಕೋಸ್ಕರ ತಂದೆಯನ್ನು ನೆನಪು ಮಾಡುವ ಅಭ್ಯಾಸವನ್ನಿಟ್ಟುಕೊಳ್ಳಬೇಕು. ಎಂದೂ ಆಜ್ಞೆಯ ಉಲ್ಲಂಘನೆ ಮಾಡಬಾರದು.

2. ವಿದ್ಯೆಯ ಸಮಯದಲ್ಲಿ ಪರಿಶೀಲನೆ ಮಾಡಿ – ಬುದ್ಧಿಯು ಆ ಕಡೆ ಈ ಕಡೆ ಓಡುವುದಿಲ್ಲ ತಾನೇ! ಎಂದೂ ವಿದ್ಯೆಯನ್ನು ತಪ್ಪಿಸಿಕೊಳ್ಳಬಾರದು. ಮಾಯೆಯ ಯುದ್ಧದಲ್ಲಿ ಎಂದೂ ಸೋಲಬಾರದಾಗಿದೆ.

ವರದಾನ:-

ಕೇವಲ ವಾಣಿಯ ಸೇವೆಯೇ ಸೇವೆಯಲ್ಲ, ಶುಭ ಭಾವನೆ – ಶುಭ ಕಾಮನೆಯನ್ನಿಡುವುದೂ ಸೇವೆಯಾಗಿದೆ. ಬ್ರಾಹ್ಮಣರ ಕರ್ತವ್ಯವೇ ಈಶ್ವರನ ಸೇವೆ ಮಾಡುವುದಾಗಿದೆ. ಎಲ್ಲಿದ್ದರೂ ಸೇವೆಯನ್ನು ಮಾಡುತ್ತಿರಿ, ಯಾರು ಹೇಗಾದರೂ ಇರಲಿ, ಭಲೆ ಪಕ್ಕಾ ರಾವಣನ ಜೊತೆಯೇ ಇರಲಿ, ಯಾರಾದರೂ ತಮ್ಮನ್ನು ಗ್ಲಾನಿಯನ್ನೇ ಮಾಡುತ್ತಿರಲಿ, ಆದರೂ ತಾವು ಅವರಿಗೆ ತಮ್ಮ ಖಜಾನೆಗಳಿಂದ, ಶುಭ ಭಾವನೆ, ಶುಭ ಕಾಮನೆಯ ಹನಿಯನ್ನು ಅವಶ್ಯವಾಗಿ ಕೊಡಿ. ಆಗ ಸತ್ಯ ಸೇವಾಧಾರಿ ಎಂದು ಹೇಳುತ್ತಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top