17 May 2022 KANNADA Murli Today | Brahma Kumaris

Read and Listen today’s Gyan Murli in Kannada

May 16, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ – ಅರ್ಧ ಕಲ್ಪ ನೀವು ಶಾರೀರಿಕ ಯಾತ್ರೆಯನ್ನು ಮಾಡಿದ್ದೀರಿ, ಈಗ ಆತ್ಮೀಯ ಯಾತ್ರೆಯನ್ನು ಮಾಡಿ, ಮನೆಯಲ್ಲಿಯೇ ಕುಳಿತು ತಂದೆಯ ನೆನಪಿನಲ್ಲಿರಬೇಕು, ಇದು ಅದ್ಭುತವಾದ ಯಾತ್ರೆಯಾಗಿದೆ”

ಪ್ರಶ್ನೆ:: -

ತಂದೆಗೆ ಮಕ್ಕಳ ಯಾವ ಒಂದು ಮಾತಿನಲ್ಲಿ ಬಹಳ ವಿಚಿತ್ರವೆನಿಸುತ್ತದೆ?

ಉತ್ತರ:-

ಯಾವುದರ ಪ್ರಾಪ್ತಿಗಾಗಿ ಮಕ್ಕಳು ಪೆಟ್ಟನ್ನು ಅನುಭವಿಸಿದರು ಅದನ್ನು ಪಡೆಯುವುದಕ್ಕಾಗಿ ತಂದೆಗೆ ಹೇಳಿದರು – ತಾವು ಬಂದರೆ ತಮ್ಮ ಮೇಲೆ ಬಲಿಹಾರಿಯಾಗುತ್ತೇವೆ. ಈಗ ಅವರು ಬಂದಿದ್ದಾರೆ, ಅವರ ಮಕ್ಕಳಾಗಿಯೂ ಸಹ ವಿಚ್ಚೇದನ (ಕೈ ಬಿಟ್ಟು ಹೋಗುತ್ತಾರೆ) ಕೊಟ್ಟು ಬಿಡುತ್ತಾರೆ. ಆದ್ದರಿಂದ ತಂದೆಗೆ ವಿಚಿತ್ರವೆನಿಸುತ್ತದೆ. ಮಕ್ಕಳು ನಡೆಯುತ್ತಾ-ನಡೆಯುತ್ತಾ ಮೇಲೇರುವ ಬದಲಾಗಿ ಸಂಪೂರ್ಣ ಕೆಳಗೆ ಬಿದ್ದು ಬಿಡುತ್ತಾರೆ.

ಪ್ರಶ್ನೆ:: -

ಯಾವ ಮಕ್ಕಳಿಗೆ ತಂದೆಯ ಮೂಲಕ ಬಹಳ ಒಳ್ಳೆಯ ದಕ್ಷಿಣೆ ಸಿಗುತ್ತದೆ?

ಉತ್ತರ:-

ತಂದೆಯು ರಚಿಸಿರುವ ರುದ್ರ ಯಜ್ಞವನ್ನು ಯಾರು ಚೆನ್ನಾಗಿ ಸಂಭಾಲನೆ ಮಾಡುತ್ತಾರೆ ಮತ್ತು ಸದಾ ಶ್ರೀಮತದಂತೆ ನಡೆಯುತ್ತಾರೆ, ಅವರಿಗೆ ತಂದೆಯ ಮೂಲಕ ಬಹಳ ಒಳ್ಳೆಯ ದಕ್ಷಿಣೆ ಸಿಗುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಮ್ಮ ತೀರ್ಥ ಸ್ಥಾನ ಭಿನ್ನವಾಗಿದೆ….

ಓಂ ಶಾಂತಿ. ಆತ್ಮೀಯ ಯಾತ್ರಿಕರು ಈ ಗೀತೆಯನ್ನು ಕೇಳಿದಿರಿ. ನೀವು ಮಕ್ಕಳೇ ಆತ್ಮಿಕ ಯಾತ್ರಿಕರಾಗಿದ್ದೀರಿ. ಆ ಯಾತ್ರೆಯಲ್ಲಿ ಹೋಗುವವರಿಗೆ ಶಾರೀರಿಕ ಯಾತ್ರಿಕರೆಂದು ಕರೆಯಲಾಗುತ್ತದೆ. ಆ ಶಾರೀರಿಕ ಯಾತ್ರೆಯೂ ಸಹ ಅರ್ಧಕಲ್ಪ ನಡೆಯುತ್ತದೆ. ಜನ್ಮ-ಜನ್ಮಾಂತರ ನೀವು ಶಾರೀರಿಕ ಯಾತ್ರೆಗಳನ್ನು ಮಾಡುತ್ತಾ ಬಂದಿದ್ದೀರಿ. ಅವರು ಶಾರೀರಿಕ ಯಾತ್ರೆಯನ್ನು ಮಾಡಿ ಮತ್ತೆ ಹಿಂತಿರುಗಿ ಮನೆಗೆ ಬರುತ್ತಾರೆ. ನಿಮ್ಮದು ಇದು ಆತ್ಮೀಯ ಯಾತ್ರೆಯಾಗಿದೆ. ಅವರು ಶಾರೀರಿಕ ಮಾರ್ಗದರ್ಶಕರಾಗಿದ್ದಾರೆ. ನೀವು ಆತ್ಮೀಯ ಮಾರ್ಗದರ್ಶಕರಾಗಿದ್ದೀರಿ. ನೀವು ಪಾಂಡವರ ಮಾಲೀಕ ಯಾರಾಗಿದ್ದಾರೆ? ನಿರಾಕಾರ ಪರಮಪಿತ ಪರಮಾತ್ಮ. ಅವರಿಗೆ ಪಾಂಡವ ಸೇನೆಯ ಆದಿ ಪಿತನೆಂದು ಹೇಳಲಾಗುತ್ತದೆ. ನಾವು ದೇಹಾಭಿಮಾನಿಗಳಾಗಿದ್ದೇವೆಂದು ನಿಮಗೆ ಗೊತ್ತಿದೆ. ತಂದೆಯು ಈಗ ಬಂದು ಆತ್ಮರನ್ನು ಮರಳಿ ಮನೆಗೆ ಕರೆದುಕೊಂಡು ಹೋಗಲು ದೇಹೀ-ಅಭಿಮಾನಿಗಳನ್ನಾಗಿ ಮಾಡುತ್ತಿದ್ದಾರೆ. ಈಗ ನೀವು ಆತ್ಮೀಯ ಯಾತ್ರೆಯಲ್ಲಿದ್ದೀರಿ. ಇದರಲ್ಲಿ ಕರ್ಮೇಂದ್ರಿಯಗಳ ಮಾತಿರುವುದಿಲ್ಲ. ಯಾತ್ರೆಯಲ್ಲಿ ಯಾವಾಗಲೂ ಪವಿತ್ರರಿರುತ್ತಾರೆ, ಮತ್ತೆ ಮರಳಿ ಬಂದಾಗ ವಿಕಾರಿಗಳಾಗುತ್ತಾರೆ. ಯಾತ್ರೆಯಲ್ಲಿ ಹೋಗುವುದೂ ಸಹ ಗೃಹಸ್ಥಿಗಳೇ ಹೋಗುತ್ತಾರೆ. ನಿವೃತ್ತಿ ಮಾರ್ಗವು ವಾಸ್ತವದಲ್ಲಿ ಗೃಹಸ್ಥ ಧರ್ಮಕ್ಕಿಂತ ಭಿನ್ನವಾಗಿದೆ. ಯಾತ್ರೆಯಲ್ಲಿ ಕರೆದುಕೊಂಡು ಹೋಗುವವರು ಯಾವಾಗಲೂ ಬ್ರಾಹ್ಮಣರಾಗಿರುತ್ತಾರೆ. ಗೀತೆಯೂ ಸಹ ಇದೆ – ನಾಲ್ಕು ಧಾಮವನ್ನು ಸುತ್ತಿ ಬಂದೆವು ಆದರೂ ತಂದೆಯಿಂದ ದೂರ ಉಳಿದೆವು. ಈಗ ತಂದೆಯು ಯಾತ್ರೆಯಲ್ಲಿ ಕರೆದುಕೊಂಡು ಹೋಗಲು ನಿಮ್ಮನ್ನು ಪವಿತ್ರರನ್ನಾಗಿ ಮಾಡುತ್ತಾರೆ. ಮುಕ್ತಿಧಾಮ-ಜೀವನ್ಮುಕ್ತಿಧಾಮದಲ್ಲಿ ಕರೆದುಕೊಂಡು ಹೋಗುತ್ತಾರೆ ಮತ್ತೆ ಈ ಪತಿತ ಪ್ರಪಂಚದಲ್ಲಿ ಬರುವುದೇ ಇಲ್ಲ. ಅವರು ಶರೀರಿಕ ಯಾತ್ರೆಯನ್ನು ಮುಗಿಸಿ ಮತ್ತೆ ಬಂದು ಕೊಳಕು ವ್ಯವಹಾರವನ್ನು ಮಾಡುತ್ತಾರೆ. ಯಾತ್ರೆಯಲ್ಲಿ ಕ್ರೋಧವನ್ನೂ ಸಹ ಮಾಡಬಾರದು. ಅವಶ್ಯವಾಗಿ ಆ ಸಮಯದಲ್ಲಿ ಪತಿತರಾಗುವುದಿಲ್ಲ. ನಾಲ್ಕು ಧಾಮದ ಯಾತ್ರೆ ಮಾಡುವುದರಲ್ಲಿ 3-4 ತಿಂಗಳು ಹಿಡಿಸುತ್ತದೆ. ಈಗ ನಾವು ಹೋಗುತ್ತಿದ್ದೇವೆ ಎಂಬುದು ನಿಮಗೆ ಗೊತ್ತಿದೆ. ತಂದೆಯ ಆದೇಶವಾಗಿದೆ – ಎಷ್ಟು ಸಾಧ್ಯವೋ ಅಷ್ಟು ನನ್ನ ನೆನಪಿನಲ್ಲಿರಿ. ಇದು ಮುಕ್ತಿಧಾಮದ ಯಾತ್ರೆಯಾಗಿದೆ. ನೀವು ಅಲ್ಲಿ ಹೋಗುತ್ತಿದ್ದೀರಿ. ಅಲ್ಲಿಯ ನಿವಾಸಿಗಳಾಗಿದ್ದೀರಿ. ತಂದೆಯು ನಿತ್ಯವೂ ಹೇಳುತ್ತಾರೆ ನನ್ನನ್ನು ನೆನಪು ಮಾಡಿದ್ದೇ ಆದರೆ ವಿಕರ್ಮ ವಿನಾಶವಾಗಿ ಬಿಡುತ್ತದೆ ಮತ್ತು ನೀವು ಮುಂದುವರೆಯುತ್ತಾ ಹೋಗುತ್ತೀರಿ. ಮನೆಯಲ್ಲೇ ಕುಳಿತು ನೀವು ಈ ಯಾತ್ರೆಯನ್ನು ಮಾಡುತ್ತೀರೆಂದರೆ ಅದ್ಭುತವಾದ ಯಾತ್ರೆಯಾಯಿತಲ್ಲವೇ. ಯೋಗಾಗ್ನಿಯಿಂದ ಎಲ್ಲಾ ಪಾಪಗಳು ಭಸ್ಮವಾಗುತ್ತದೆ. ಅರ್ಧಕಲ್ಪ ನೀವು ಶಾರೀರಿಕ ಯಾತ್ರೆಯನ್ನು ಮಾಡಿದ್ದೀರಿ. ಮೊದಲು ಅವ್ಯಭಿಚಾರಿ ಯಾತ್ರೆಯಿತ್ತು ನಂತರ ವ್ಯಭಿಚಾರಿ ಯಾತ್ರೆಯಾಯಿತು. ಮೊದಲು ಒಬ್ಬ ಶಿವನನ್ನು ಪೂಜೆ ಮಾಡುತ್ತೀರಿ ನಂತರ ಬ್ರಹ್ಮಾ, ವಿಷ್ಣು, ಶಂಕರನನ್ನು ನಂತರ ಲಕ್ಷ್ಮೀ-ನಾರಾಯಣ ಮೊದಲಾದವರನ್ನು ಪೂಜೆ ಮಾಡುವಿರಿ. ಈಗಂತೂ ನೋಡಿ – ನಾಯಿ, ಬೆಕ್ಕು, ಕಲ್ಲು, ಮಣ್ಣು ಮುಂತಾದವೆಲ್ಲವನ್ನೂ ಪೂಜೆ ಮಾಡುತ್ತಾರೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಇದೆಲ್ಲವೂ ಗೊಂಬೆಗಳ ಪೂಜೆಯಾಗಿದೆ. ಶಿವ ತಂದೆಯನ್ನು ಮತ್ತು ದೇವೀ-ದೇವತೆಗಳ ಕರ್ತವ್ಯವನ್ನು ತಿಳಿದುಕೊಂಡಿಲ್ಲ. ಗೊಂಬೆಗಳ ಕರ್ತವ್ಯ ಇರುವುದಿಲ್ಲ. ಶಿವ ತಂದೆಯ ಕರ್ತವ್ಯವನ್ನು ತಿಳಿಯದೇ ಇರುವುದು ಕಲ್ಲಿನ ಪೂಜೆ ಮಾಡುವುದಾಗಿದೆ ಆದರೂ ಸಹ ಒಂದಲ್ಲ ಒಂದು ಮನೋಕಾಮನೆಗಳು ಪೂರ್ತಿಯಾಗುತ್ತದೆ. ಸತ್ಯಯುಗದಲ್ಲಿ ಶಾರೀರಿಕ ಯಾತ್ರೆಯಿರುವುದಿಲ್ಲ. ಅಲ್ಲಿ ಮಂದಿರಗಳು ಎಲ್ಲಿಂದ ಬರಬೇಕು! ಇದಂತು ಭ್ರಷ್ಟಾಚಾರಿ ಪ್ರಪಂಚವಾಗಿದೆ. ತನ್ನನ್ನು ಪತಿತನೆಂದು ತಿಳಿದು ಪಾವನರಾಗಲು ಗಂಗಾಸ್ನಾನ ಮಾಡುತ್ತಾರೆ. ಕುಂಭಮೇಳದ ರಹಸ್ಯವನ್ನು ತಿಳಿಸಲಾಗಿದೆ. ಇದು ಸತ್ಯ-ಸತ್ಯವಾದ ಸಂಗಮವಾಗಿದೆ. ಆತ್ಮ ಮತ್ತು ಪರಮಾತ್ಮ ಬಹಳಕಾಲ ಅಗಲಿದ್ದರೆಂದು ಗಾಯನ ಮಾಡಲಾಗುತ್ತದೆ. ನಂತರ ಸುಂದರ ಮಿಲನವಾಯಿತು…… ಸದ್ಗುರು ಪತಿತ ಪಾವನ ದಲ್ಲಾಳಿಯ ರೂಪದಲ್ಲಿ ಬಂದು ಮಿಲನ ಮಾಡುತ್ತಾರೆ. ಅವರಿಗೆ ತನ್ನದೇ ಆದ ಶರೀರವಿಲ್ಲ. ಈ ದಲ್ಲಾಳಿಯ ಮೂಲಕ ನೀವು ಆತ್ಮರನ್ನು ತನ್ನ ಜೊತೆ ನಿಶ್ಚಯ ಮಾಡಿಕೊಳ್ಳುತ್ತಾರೆ ಅಥವಾ ಮಕ್ಕಳಿಗೆ ತನ್ನ ಪರಿಚಯವನ್ನು ನೀಡುತ್ತಾರೆ. ಮಕ್ಕಳೇ, ನಾನು ನಿಮ್ಮನ್ನು ಶಾಂತಿಧಾಮದ ಯಾತ್ರೆಯಲ್ಲಿ ಕರೆದುಕೊಂಡು ಹೋಗಲು, ಪಾವನ ಪ್ರಪಂಚದಲ್ಲಿ ಕರೆದುಕೊಂಡು ಹೋಗಲು ಬಂದಿದ್ದೇನೆ. ಮಕ್ಕಳಿಗೆ ಭಾರತ ಪಾವನವಾಗಿತ್ತೆಂದು ತಿಳಿದಿದೆ. ಅಲ್ಲಿ ಒಂದೇ ಆದಿ ಸನಾತನ ದೇವೀ-ದೇವತಾ ಧರ್ಮವಿತ್ತು. ಆರ್ಯ ಧರ್ಮವಿರಲಿಲ್ಲ. ಆರ್ಯ ಮತ್ತು ಅನಾರ್ಯ. ಒಂದುವೇಳೆ ದೇವತೆಗಳನ್ನು ಆರ್ಯರೆಂದು ಹೇಳಿದರೆ ಆರ್ಯ ಧರ್ಮದಲ್ಲಿ ಯಾರು ರಾಜ್ಯಭಾರ ಮಾಡುತ್ತಿದ್ದರು? ಯಾರು ಓದಿರುತ್ತಾರೆ ಅವರಿಗೆ ಆರ್ಯರೆಂದು ಕರೆಯಲಾಗುತ್ತದೆ. ಈ ಸಮಯದಲ್ಲಿ ಎಲ್ಲರೂ ಅನಾರ್ಯರು, ಅವಿದ್ಯಾವಂತರಾಗಿದ್ದಾರೆ. ತಂದೆಯನ್ನು ತಿಳಿದೇ ಇಲ್ಲ. ಶ್ರೇಷ್ಠಾತಿ ಶ್ರೇಷ್ಠರೆಂದರೆ ಶಿವಬಾಬಾ ನಂತರ ಪ್ರಜಾಪಿತ ಬ್ರಹ್ಮಾ. ಆದರೆ ಜಗದಂಬಾರವರೂ ಸಹ ಪ್ರಜಾಮಾತೆಯಾದರು. ಇವರ ಮೂಲಕ ಬ್ರಾಹ್ಮಣರ ರಚನೆಯನ್ನು ಮಾಡಲಾಗುತ್ತದೆ. ಇವರು ದತ್ತುಮಗಳಾಗಿದ್ದಾರೆ. ಯಾರು ದತ್ತು ಮಾಡಿಕೊಳ್ಳುತ್ತಾರೆ? ಪರಮಪಿತ ಪರಮಾತ್ಮ. ನಾವು ಅವರ ಸಂತಾನರೆಂದು ನಿಮಗೆ ತಿಳಿದಿದೆ ಆದರೆ ತಂದೆಯನ್ನು ಮರೆತು ಅನಾಥರಾಗಿದ್ದೀರಿ. ಪರಮಪಿತನ ಕರ್ತವ್ಯವನ್ನೇ ತಿಳಿದಿಲ್ಲ. ತಂದೆಯು ಬಂದು ಇಂತಹವರನ್ನು ಪಾವನವನ್ನಾಗಿ ಮಾಡುತ್ತಾರೆ. ತಂದೆಯೇ ನಿಮಗೆ ಪವಿತ್ರತೆಯ ಶಿಕ್ಷಣವನ್ನು ಕೊಡುತ್ತಾರೆ. ಈಗ ಎಲ್ಲಿಗೆ ಹೋಗಬೇಕಾಗಿದೆಯೋ ಅದನ್ನು ನೆನಪು ಮಾಡಬೇಕು. ಮಾಯೆಯು ಮತ್ತೆ-ಮತ್ತೆ ಮರೆಸಿ ಬಿಡುತ್ತದೆ. ಯುದ್ಧದ ಮೈದಾನವಲ್ಲವೇ. ನೀವು ತಂದೆಯ ಮಕ್ಕಳಾಗಿದ್ದೀರಿ, ಮಾಯೆಯು ಮತ್ತೆ ತನ್ನವರನ್ನಾಗಿ ಮಾಡಿಕೊಳ್ಳುತ್ತದೆ. ಪ್ರಭು ಮತ್ತು ಮಾಯೆಯ ನಾಟಕವಾಗಿದೆ. ತಂದೆಯ ಮಕ್ಕಳಾಗಿ ಮತ್ತೆ ಆಶ್ಚರ್ಯವಾಗುವ ರೀತಿಯಲ್ಲಿ ಕೇಳುತ್ತಾರೆ, ನಂತರ ಓಡಿ ಹೋಗುತ್ತಾರೆ. ಮಾಯೆಯೂ ಸಹ ಬಹಳ ಶಕ್ತಿಶಾಲಿಯಾಗಿದೆ. ಈ ಬುದ್ಧಿಯೋಗಬಲದ ಯುದ್ಧವನ್ನು ತಂದೆಯನ್ನು ಬಿಟ್ಟು ಯಾರೂ ಕಲಿಸಲು ಸಾಧ್ಯವಿಲ್ಲ. ಸರ್ವಶಕ್ತಿವಂತ ತಂದೆಯನ್ನು ನೆನಪು ಮಾಡುವುದರಿಂದಲೇ ಶಕ್ತಿ ಸಿಗುತ್ತದೆ. ಈಗ ಪವಿತ್ರರಾಗಿ ಮತ್ತೆ ಮರಳಿ ಮನೆಗೆ ಹೋಗಬೇಕೆಂದು ನಿಮಗೆ ತಿಳಿದಿದೆ. ಇಲ್ಲಿ ಬಂದು ಪಾತ್ರವನ್ನು ಅಭಿನಯಿಸುವುದಕ್ಕಾಗಿ ಈ ಶರೀರವನ್ನು ತೆಗೆದುಕೊಂಡಿದ್ದೇವೆ. ನಾವು 84 ಜನ್ಮಗಳನ್ನು ಪೂರ್ಣ ಮಾಡಿದ್ದೇವೆ. ಇದು ಕೊನೆಯ ಚಿಕ್ಕದಾದ ಮಹಾನ್ ಕಲ್ಯಾಣಕಾರಿ ಯುಗವಾಗಿದೆ. ನೀವೆಲ್ಲಾ ಜ್ಞಾನ ಗಂಗೆಯರು ಜ್ಞಾನ ಸಾಗರದಿಂದ ಹೊರಟಿದ್ದೀರಿ.

ತಂದೆಯು ತಿಳಿಸುತ್ತಾರೆ – ತಂದೆಯನ್ನು ನೆನಪು ಮಾಡುವುದರಿಂದ ನಿಮ್ಮ ಆಯಸ್ಸೂ ಸಹ ಹೆಚ್ಚುತ್ತದೆ ಮತ್ತು ಭವಿಷ್ಯ 21 ಜನ್ಮದವರೆಗೂ ಸಹ ಅಮರರಾಗುತ್ತೀರಿ. ಅಕಾಲಮೃತ್ಯುವೆಂದೂ ಸಂಭವಿಸುವುದಿಲ್ಲ. ಸಮಯ ಬಂದಾಗ ತಾವೇ ಒಂದು ಶರೀರ ಬಿಟ್ಟು ಮತ್ತೊಂದನ್ನು ತೆಗೆದುಕೊಳ್ಳುತ್ತೀರಿ. ನಡೆದಾಡುತ್ತಾ, ತಿರುಗಾಡುತ್ತಾ ತಂದೆಯ ನೆನಪಿನಲ್ಲಿರಬೇಕು. ಈ ನೆನಪಿನಿಂದ ನೀವು ಸೃಷ್ಟಿಯನ್ನು ಪವಿತ್ರ ಮಾಡುತ್ತೀರಿ. ತಂದೆಯು ಬಂದಿರುವುದೇ ಪವಿತ್ರರನ್ನಾಗಿ ಮಾಡಲು. ಯಾರು ದೇವತೆಗಳಾಗಿದ್ದರು, ಅವರಿಗೆ ಇದರ ಪ್ರಭಾವ ಬೀಳುತ್ತದೆ. ಈಗ ಶೂದ್ರರಾಗಿದ್ದಾರೆ, ಅನ್ಯ ಧರ್ಮಗಳಲ್ಲಿ ಮಾರ್ಪಟ್ಟಿದ್ದಾರೆ. ಅವರೆಲ್ಲಾ ಬರುತ್ತಾರೆ. ಎಲ್ಲರಿಗೂ ತನ್ನ-ತನ್ನದೇ ಆದ ವರ್ಗಗಳಿವೆ. ಇಲ್ಲಿಯೂ ಸಹ ತನ್ನದೇ ಆದ ರೀತಿ-ಪದ್ಧತಿಗಳಿವೆ. ಇದು ಆದಿ ಸನಾತನ ದೇವೀ-ದೇವತಾ ಧರ್ಮದ ಸಸಿಯನ್ನು ನೆಡಲಾಗುತ್ತಿದೆ. ಯಾರು ಮೊದಲು ಬ್ರಾಹ್ಮಣರಾಗಿದ್ದರೋ ಅವರೇ ಬರುತ್ತಾರೆ. ಬ್ರಾಹ್ಮಣರಾಗದೆ ದೇವತೆಗಳಾಗಲು ಸಾಧ್ಯವಿಲ್ಲ. ಬ್ರಹ್ಮಾರವರ ಮಕ್ಕಳಾಗದೆ ಶಿವ ತಂದೆಯಿಂದ ಆಸ್ತಿಯನ್ನು ಪಡೆಯಲು ಸಾಧ್ಯವಿಲ್ಲ. ಯಾರು ದೇವತಾ ಧರ್ಮದವರಿದ್ದಾರೆ ಅವರು ಬ್ರಾಹ್ಮಣ ಧರ್ಮದಲ್ಲಿ ಖಂಡಿತ ಬರುತ್ತಾರೆ. ಈಗ ನೀವು ಮುಳ್ಳಿನಿಂದ ಹೂವಾಗಿದ್ದೀರಿ. ಯಾರಿಗೂ ದುಃಖವನ್ನು ಕೊಡುವುದಿಲ್ಲ. ಎಲ್ಲರಿಗಿಂತ ದೊಡ್ಡ ಶತ್ರು ರಾವಣನಾಗಿದ್ದಾನೆ. 5 ವಿಕಾರವೆಂಬ ಶತ್ರು ಗುಪ್ತವಾಗಿವೆ. ಅರ್ಧ ಕಲ್ಪದಿಂದ ಎಲ್ಲರ ಮೇಲೆ ಯುದ್ಧ ಮಾಡಿ ಬೀಳಿಸಿ ಪತಿತರನ್ನಾಗಿ ಮಾಡಿದ್ದಾನೆ. ಈಗ ಬೇಹದ್ದಿನ ತಂದೆಯು ರುದ್ರ ಜ್ಞಾನ ಯಜ್ಞವನ್ನು ರಚಿಸಿದ್ದಾರೆ. ಇದರಲ್ಲಿ ಎಲ್ಲವನ್ನು ಸ್ವಾಹಾ ಮಾಡಬೇಕಾಗಿದೆ. ಕುದುರೆಯ ಮೇಲೆ ಹೇಗೆ ಆತ್ಮ ವಿರಾಜಮಾನವಾಗಿದೆ. ಹೆಸರಾಗಿದೆ – ರಾಜಸ್ವ, ರಾಜ್ಯಕ್ಕೋಸ್ಕರ ರುದ್ರ ಜ್ಞಾನ ಯಜ್ಞ. ಸ್ವರ್ಗದ ಸ್ಥಾಪನೆಗಾಗಿ ಎಷ್ಟು ದೊಡ್ಡ ಯಜ್ಞವನ್ನು ರಚಿಸಲಾಗಿದೆ. ಈ ಪ್ರಪಂಚವು ಈಗ ವರ್ಗಾವಣೆಯಾಗಲಿದೆ ಎಂದು ತಿಳಿದಿದೆ. ತಂದೆಯು ಯಜ್ಞವನ್ನು ರಚಿಸಿದ್ದಾರೆ, ಇದನ್ನು ಚೆನ್ನಾಗಿ ಸಂಭಾಲನೆ ಮಾಡಬೇಕೆಂದು ಮನಸ್ಸಿನಲ್ಲಿ ನಶೆಯಿರುತ್ತದೆ. ಯಾರು ಶ್ರೀಮತದಂತೆ ನಡೆಯುತ್ತಾರೆ ಅವರಿಗೆ ಬಹಳ ಒಳ್ಳೆಯ ದಕ್ಷಿಣೆ ಸಿಗುತ್ತದೆ. ಯಜ್ಞವನ್ನು ಚೆನ್ನಾಗಿ ಸಂಭಾಲನೆ ಮಾಡಿದರೆ ನೀವು ವಿಶ್ವಕ್ಕೆ ಮಾಲೀಕರಾಗುತ್ತೀರಿ. ಈ ಪ್ರಾಪ್ತಿಗಾಗಿಯೇ ನೀವು ಅರ್ಧಕಲ್ಪ ಪೆಟ್ಟು ತಿಂದಿದ್ದೀರಿ. ಆಸ್ತಿ ಕೊಡುವುದಕ್ಕಾಗಿ ತಂದೆಯು ಬಂದಿದ್ದಾರೆ ಆದರೆ ಇಂತಹ ತಂದೆಗೂ ಸಹ ವಿಚ್ಚೇದನ ಕೊಡುತ್ತಾರೆ. ತಂದೆಗೆ ಆಶ್ಚರ್ಯವಾಗುತ್ತದೆ. ನಿಮಗೆ ಬಲಿಹಾರಿ ಆಗುತ್ತೇವೆಂದು ಪ್ರಿಯತಮೆಯರು ಹಾಡುತ್ತಿದ್ದಿರಿ, ಈಗ ಬಂದಿದ್ದೇನೆ, ಈಗ ನನ್ನವರಾಗಿ ನಂತರ ವಿಚ್ಚೇದನ ಕೊಟ್ಟು ಬಿಡುತ್ತೀರಿ. ಅಂತಹವರು ಮತ್ತೆ ಶ್ರೇಷ್ಠರಾಗುವುದರ ಬದಲು ಕೆಳಗೆ ಬಿದ್ದು ಬಿಡುತ್ತಾರೆ. ಏರಿದರೆ ವೈಕುಂಠ ರಸ, ಬಿದ್ದರೆ ಪುಡಿ ಪುಡಿ…… ವ್ಯತ್ಯಾಸವಂತೂ ಇದೆಯಲ್ಲವೇ. ಎಲ್ಲಿ ಪ್ರಧಾನಮಂತ್ರಿ! ಎಲ್ಲಿ ಬಡವನಾದ ಬೇಟೆಗಾರ! ಆದ್ದರಿಂದ ಈಗ ಪುರುಷಾರ್ಥ ಮಾಡಿ ತಂದೆಯಿಂದ ರಾಜ್ಯಭಾಗ್ಯವನ್ನು ತೆಗೆದುಕೊಳ್ಳಬೇಕು. ಇದು ರುದ್ರ ಜ್ಞಾನ ಯಜ್ಞವಾಗಿದೆ. ಇದರಲ್ಲಿ ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ, ಭಕ್ತಿಮಾರ್ಗಕ್ಕಾಗಿ ಈ ಎಲ್ಲಾ ವಸ್ತುಗಳು, ಶಾಸ್ತ್ರಗಳು ಮಾಡಲ್ಪಟ್ಟಿವೆ. ಭಗವಂತ ಒಬ್ಬರೇ ಆಗಿದ್ದಾರೆ, ಅವರಿಗೆ ಪತಿತಪಾವನ ಎಂದು ಹೇಳಲಾಗುತ್ತದೆ. ಶಾಂತಿಧಾಮ ಮತ್ತು ಸುಖಧಾಮದಲ್ಲಿ ಯಾರೂ ಕರೆಯುವುದಿಲ್ಲ. ಮಕ್ಕಳಿಗೆ ನಶೆಯೇರಬೇಕು. ಇದು ಜ್ಞಾನ ಯಜ್ಞವಾಗಿದೆ. ಈ ಯಜ್ಞದ ನಂತರ ಯಾವುದೇ ಯಜ್ಞಯನ್ನು ರಚನೆ ಮಾಡುವುದಿಲ್ಲ. ಶಾರೀರಿಕ ಯಜ್ಞವನ್ನು ರಚನೆ ಮಾಡುತ್ತಾರೆ ಆಪತ್ತುಗಳನ್ನು ದೂರ ಮಾಡುವುದಕ್ಕಾಗಿ. ತಂದೆಯು ಅರ್ಧಕಲ್ಪಕ್ಕೋಸ್ಕರ ಆಪತ್ತುಗಳನ್ನು ದೂರಗೊಳಿಸುತ್ತಾರೆ. ಇದನ್ನು ಯಾವುದೇ ಸಾಧು-ಸಂತರು ತಿಳಿದುಕೊಂಡಿಲ್ಲ. ಭಗವಂತನು ತಿಳಿಸಿದ ಮುಖ್ಯ ಗೀತಾ ಜ್ಞಾನದಲ್ಲಿ ತಂದೆಯ ಹೆಸರಿನ ಬದಲಾಗಿ ಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ ಆದ್ದರಿಂದ ಈಗ ಮನುಷ್ಯರನ್ನು ಎಚ್ಚರಗೊಳಿಸಬೇಕಾಗಿದೆ ಏಕೆಂದರೆ ಅವರ ಬುದ್ಧಿಯೋಗವು ಕೃಷ್ಣನೊಂದಿಗೆ ಜೋಡಿಸಲ್ಪಟ್ಟಿದೆ. ಕೃಷ್ಣನು ಮನ್ಮನಾಭವ, ನನ್ನನ್ನು ನೆನಪು ಮಾಡಿ, ಆಗ ಜೊತೆ ಕರೆದುಕೊಂಡು ಹೋಗುತ್ತೇನೆಂದು ಹೇಳುವುದಿಲ್ಲ. ತಂದೆಯೇ ಇಲ್ಲಿ ಕುಳಿತು ಯೋಗ್ಯರನ್ನಾಗಿ ಮಾಡುತ್ತಾರೆ. ಶ್ಯಾಮನಿಂದ ಸುಂದರರನ್ನಾಗಿ ಮಾಡುತ್ತಾರೆ. ನೀವೂ ಸಹ ಕಪ್ಪಾಗಿಬಿಟ್ಟಿದ್ದಿರಿ, ಪುನಃ ತಂದೆಯು ಸುಂದರ ಸ್ವರ್ಗಕ್ಕೆ ಯೋಗ್ಯರನ್ನಾಗಿ ಮಾಡುತ್ತಾರೆ ಆದ್ದರಿಂದ ನಡೆದಾಡುತ್ತಾ-ತಿರುಗಾಡುತ್ತಾ ತಂದೆಯನ್ನು ಬುದ್ಧಿಯಿಂದ ನೆನಪು ಮಾಡಬೇಕಾಗಿದೆ. ಇಂತಹ ಸ್ಥಿತಿಯನ್ನು ಮಾಡಿಕೊಂಡರೆ ಸಾಕು ನಿಮ್ಮ ಜೀವನದ ದೋಣಿಯು ಪಾರಾಗುತ್ತದೆ. ಆರೋಗ್ಯ, ಸಂಪತ್ತು ಸಂತೋಷ. ತಂದೆಯಿಂದ ನೀವು ಇಷ್ಟೊಂದು ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ ಆದ್ದರಿಂದ ಇಂತಹ ತಂದೆಯನ್ನು ತುಂಬಾ ನೆನಪು ಮಾಡಿ, ಅವರ ಶಿಕ್ಷಣದಂತೆ ನಡೆಯಬೇಕು. ಮುಳ್ಳುಗಳನ್ನು ಹೂಗಳನ್ನಾಗಿ ಮಾಡಬೇಕು. ಈಗ ನೀವು ಹೂಗಳಾಗುತ್ತಿದ್ದೀರಿ, ಇದು ಉದ್ಯಾನವನವಾಗಿದೆ. ಈಗ ಈ ದುಃಖಧಾಮವು ಮುಳ್ಳಿನ ಕಾಡಾಗಿದೆ. ಅಕಾಸುರ, ಬಕಾಸುರ ಇವು ಸಂಗಮದ ಹೆಸರುಗಳಾಗಿವೆ. ಎಲ್ಲರ ಉದ್ಧಾರವಂತೂ ಆಗಬೇಕಾಗಿದೆ. ಯಾರೆಷ್ಟು ಓದುತ್ತಾರೆ ಮತ್ತು ಓದಿಸುತ್ತಾರೆ, ಶ್ರೀಮತದ ಮೇಲೆ ನಡೆಯುತ್ತಾರೆ, ಅವರು ತಂದೆಯಿಂದ 21 ಜನ್ಮಗಳ ಆಸ್ತಿಯನ್ನು ಪಡೆಯುತ್ತಾರೆ. ನೀವು ಸದಾ ಸುಖಿಗಳಾಗಿ ಬಿಡುತ್ತೀರಿ. ಈಗ ನಿಮ್ಮದು 100% ಏರುವ ಕಲೆಯಾಗಿದೆ. ನಂತರ ಕಲೆಗಳು ಕಡಿಮೆ ಆಗುತ್ತಾ ಹೋಗುತ್ತದೆ. ಈ ಸಮಯದಲ್ಲಿ ಕಲೆಗಳು ಸಂಪೂರ್ಣವಾಗಿ ಸಮಾಪ್ತಿಯಾಗಿ ಬಿಟ್ಟಿದೆ. ಆದ್ದರಿಂದಲೇ ದೇವತೆಗಳ ಮುಂದೆ ನಾನು ನಿರ್ಗುಣನಾಗಿದ್ದೇನೆ, ನನ್ನಲ್ಲಿ ಯಾವುದೇ ನಿರ್ಗುಣವಿಲ್ಲ ಎಂದು ಹೇಳುತ್ತಾರೆ. ತಂದೆಯನ್ನು ದಯಾಹೃದಯಿ ಎಂದು ಹೇಳುತ್ತೀರಲ್ಲವೇ! ಕಲ್ಪ-ಕಲ್ಪವು ಸಂಗಮದಲ್ಲಿ ಬರುತ್ತಾರೆ. ಭಾರತವು ಸ್ವರ್ಗವಾದಾಗ ಎಲ್ಲರೂ ಸುಖಿಯಾಗುತ್ತಾರೆ. ಈಗ ಮಕ್ಕಳು ಶ್ರೀಮತದಂತೆ ನಡೆಯಬೇಕಾಗಿದೆ, ಆಸುರಿ ಮತದಂತೆ ನಡೆಯಬಾರದು. ತಂದೆಯು ಹೇಳುತ್ತಾರೆ – ಎಲ್ಲರಿಗಿಂತ ಜಾಸ್ತಿ ಗ್ಲಾನಿ ನನಗೆ ಮಾಡುತ್ತಾರೆ ಅಥವಾ ನಾಮ-ರೂಪದಿಂದ ಭಿನ್ನ ಎಂದು ಹೇಳುತ್ತಾರೆ ನಂತರ ಕಣ-ಕಣದಲ್ಲಿದ್ದಾರೆ ಎಂದು ಹೇಳಿ ಬಿಡುತ್ತಾರೆ. ಇದೆಲ್ಲವೂ ನಾಟಕದಲ್ಲಿ ನಿಗದಿಯಾಗಿದೆ. ನೀವೀಗ ತ್ರಿಕಾಲದರ್ಶಿಗಳಾಗಿದ್ದೀರಿ ಮತ್ತು ತಂದೆಯನ್ನು ಅರಿತು ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೀರಿ. ಈಗಂತೂ ನಿರಪರಾಧಿಗಳ ಕೊಲೆಯಾಗಲಿದೆ. ಅಪರಾಧವಿಲ್ಲದೆ ಎಲ್ಲಾ ಆಪತ್ತುಗಳು ಬರುತ್ತವೆ, ಅನೇಕರು ಸಾಯುತ್ತಾರೆ. ಭಕ್ತಿಮಾರ್ಗದಲ್ಲಿ ಅನೇಕ ದೇವಿಯರ ಚಿತ್ರಗಳನ್ನು ಮಾಡಿಸುತ್ತಾರೆ. ಖರ್ಚು ಮಾಡುತ್ತಾರೆ. ದೇವಿಯರನ್ನು ತಯಾರು ಮಾಡಿ ಪೂಜೆ ಮಾಡಿದ ನಂತರ ಮುಳುಗಿಸುತ್ತಾರೆ ಅಂದಾಗ ಇದು ಗೊಂಬೆಗಳ ಪೂಜೆ ಆಯಿತಲ್ಲವೇ. ಕಾಳಿಯ ಚಿತ್ರವನ್ನು ಹೇಗೆ ಮಾಡಿಸುತ್ತಾರೆ ಆದರೆ ಇಂತಹ ಮನುಷ್ಯರಿರುತ್ತಾರೆಯೇ! ನೀವಿಲ್ಲಿ ಕುಳಿತಿದ್ದೀರೆಂದರೆ ಯಾತ್ರೆಯಲ್ಲಿದ್ದೀರಿ. ರೈಲಿನಲ್ಲಿ ಕುಳಿತಿದ್ದರೂ ಆತ್ಮಿಕ ಯಾತ್ರೆಯಲ್ಲಿದ್ದೀರಿ. ಬುದ್ಧಿಯು ಯಾತ್ರೆಯಲ್ಲಿ ತೊಡಗಿದೆ. ಒಂದುವೇಳೆ ಬುದ್ಧಿಯೋಗವನ್ನು ಜೋಡಿಸಿಲ್ಲವೆಂದರೆ ಆ ಸಮಯವು ವ್ಯರ್ಥವಾಗಿ ಬಿಡುತ್ತದೆ. ಸಮಯವನ್ನು ವ್ಯರ್ಥ ಮಾಡಬಾರದೆಂದು ತಂದೆಯು ಹೇಳುತ್ತಾರೆ. ನಿಮ್ಮ ಸಮಯವು ತುಂಬಾ ಅತ್ಯಮೂಲ್ಯವಾಗಿದೆ. ಒಂದು ಸೆಕೆಂಡ್ ಸಹ ಸಂಪಾದನೆಯಿಲ್ಲದೆ ವ್ಯರ್ಥವಾಗಬಾರದು. ತಂದೆಯು ಸಂಪೂರ್ಣವಾಗಿ ಪುರುಷಾರ್ಥ ಮಾಡಿಸುತ್ತಾರೆ. ತಂದೆಯು ವಿಶ್ವವನ್ನು ಸ್ವರ್ಗವನ್ನಾಗಿ ಮಾಡಲು ಈ ಯಜ್ಞವನ್ನು ರಚಿಸಿದ್ದಾರೆ. ಬಾಬಾ ಬಾಬಾ ಎಂದು ಹೇಳುತ್ತಿದ್ದರೆ ದೋಣಿಯು ಪಾರಾಗುವುದು. ನಾವು ಬ್ರಾಹ್ಮಣರಾಗಿದ್ದೇವೆ, ನಮ್ಮ ಮೇಲೆ ಅತಿ ದೊಡ್ಡ ಜವಾಬ್ದಾರಿಯಿದೆ. ತಂದೆಯು ಹೇಳುತ್ತಾರೆ – ಮಕ್ಕಳೇ, ಆತ್ಮಾಭಿಮಾನಿಯಾಗಿ. ಮನಸ್ಸಾ, ವಾಚಾ, ಕರ್ಮಣಾ ಯಾರಿಗೂ ದುಃಖವನ್ನು ಕೊಡಬಾರದಾಗಿದೆ ಆದ್ದರಿಂದ ತುಂಬಾ ಮಧುರರಾಗಿ. ಕ್ರೋಧದಿಂದ ಬಹಳ ಸೇವಾಭಂಗ ಮಾಡಿ ಬಿಡುತ್ತೀರಿ. ಸಂಪೂರ್ಣರಂತೂ ಯಾರೂ ಆಗಿಲ್ಲ. ಭೂತವೂ ತುಂಬಾ ಕೆಟ್ಟದ್ದಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವಂತಹ ಮಕ್ಕಳಿಗೆ ಪ್ರೀತಿಯ ಮಾತ್-ಪಿತ ಬಾಪ್ ದಾದಾರವರ ನೆನಪು ಪ್ರೀತಿ ಹಾಗೂ ಸುಪ್ರಭಾತ. ಆತ್ಮೀಯ ತಂದೆಯ ಆತ್ಮೀಯ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಈ ಸಮಯವು ಬಹಳ ಅಮೂಲ್ಯವಾಗಿದೆ, ಆದ್ದರಿಂದ ಒಂದು ಸೆಕೆಂಡ್ ಸಹ ಸಂಪಾದನೆಯಿಲ್ಲದೆ ಕಳೆಯಬಾರದಾಗಿದೆ. ಆತ್ಮಾಭಿಮಾನಿಯಾಗಿರುವ ಪೂರ್ಣ ಪುರುಷಾರ್ಥ ಮಾಡಬೇಕಾಗಿದೆ.

2. ನಡೆದಾಡುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿ ತಮ್ಮ ಸ್ಥಿತಿಯನ್ನು ಜಮಾ ಮಾಡಿಕೊಳ್ಳಬೇಕು. ಬಹಳ ಮಧುರರಾಗಬೇಕಾಗಿದೆ. ಯಾರಿಗೂ ದುಃಖವನ್ನು ಕೊಡಬಾರದಾಗಿದೆ.

ವರದಾನ:-

ಹೇಗೆ ಪ್ರಕಾಶತೆಯಿಂದ ಅಂಧಕಾರವು ಸ್ವತಹವಾಗಿಯೇ ಸಮಾಪ್ತಿಯಾಗುವುದು. ಹಾಗೆಯೇ ಸಮಯ, ಸಂಕಲ್ಪ, ಶ್ವಾಸವನ್ನು ಸಫಲ ಮಾಡುವುದರಿಂದ ವ್ಯರ್ಥವು ತಾನಾಗಿಯೇ ಸಮಾಪ್ತಿಯಾಗಿ ಬಿಡುತ್ತದೆ. ಏಕೆಂದರೆ ಸಫಲ ಮಾಡುವುದರ ಅರ್ಥವಾಗಿದೆ – ಶ್ರೇಷ್ಠದ ಕಡೆಗೆ ಉಪಯೋಗಿಸುವುದು. ಅಂದಮೇಲೆ ಶ್ರೇಷ್ಠದ ಕಡೆಗೆ ಉಪಯೋಗಿಸುವವರು ವ್ಯರ್ಥದ ಮೇಲೆ ವಿಜಯಿಗಳಾಗಿ ನಂಬರ್ವನ್ ಪಡೆಯುತ್ತಾರೆ. ಅವರಲ್ಲಿ ವ್ಯರ್ಥವನ್ನು ಸ್ಟಾಪ್ ಮಾಡುವ ಸಿದ್ಧಿಯು ಪ್ರಾಪ್ತಿಯಾಗುವುದು. ಇದೇ ಪರಮಾತ್ಮನ ಸಿದ್ಧಿಯಾಗಿದೆ. ಆ ರಿದ್ಧಿ ಸಿದ್ಧಿಯವರು ಅಲ್ಪಕಾಲದ ಚಮತ್ಕಾರವನ್ನು ತೋರಿಸುತ್ತಾರೆ ಮತ್ತು ತಾವು ಯಥಾರ್ಥ ವಿಧಿಯ ಮೂಲಕ ಪರಮಾತ್ಮನ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top