08 May 2022 KANNADA Murli Today | Brahma Kumaris

Read and Listen today’s Gyan Murli in Kannada

May 7, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ತಪಸ್ಸೇ ದೊಡ್ಡದಕ್ಕಿಂತ ದೊಡ್ಡ ಸಮಾರೋಹವಾಗಿದೆ, ತಪಸ್ಸು ಅರ್ಥಾತ್ ತಂದೆಯೊಂದಿಗೆ ಮೋಜನ್ನು ಆಚರಿಸುವುದು.

♫ ಕೇಳು ಇಂದಿನ ಮುರ್ಲಿ (audio)➤

ಇಂದು ಬಾಪ್ದಾದಾ ನಾಲ್ಕಾರು ಕಡೆಯ ಸರ್ವ ಹೊಸ ಜ್ಞಾನದ ಮೂಲಕ ಪ್ರತೀ ಸಮಯ ಹೊಸ ಜೀವನ, ಹೊಸ ವೃತ್ತಿ, ಹೊಸ ದೃಷ್ಟಿ, ಹೊಸ ಸೃಷ್ಟಿಯ ಅನುಭವ ಮಾಡುವಂತಹ ಮಕ್ಕಳಿಗೆ ಪ್ರೀತಿಯ ಶುಭಾಷಯಗಳನ್ನು ನೀಡುತ್ತಿದ್ದಾರೆ. ಈ ಸಮಯದಲ್ಲಿ ನಾಲ್ಕಾರು ಕಡೆಯ ಮಕ್ಕಳು ತಮ್ಮ ಹೃದಯರೂಪಿ ದೂರದರ್ಶನದ ಮೂಲಕ ವರ್ತಮಾನ ಸಮಯದ ದಿವ್ಯ ದೃಶ್ಯವನ್ನೂ ನೋಡುತ್ತಿದ್ದಾರೆ. ಎಲ್ಲರ ಒಂದೇ ಸಂಕಲ್ಪವು ದೂರವಿದ್ದರೂ ಸಹ ಸಮೀಪ ಅನುಭವ ಮಾಡುವುದಾಗಿದೆ. ಬಾಪ್ದಾದಾರವರೂ ಸಹ ಎಲ್ಲಾ ಮಕ್ಕಳನ್ನು ನೋಡುತ್ತಿದ್ದೆವು, ಎಲ್ಲರ ಹೊಸ ಉಮ್ಮಂಗ-ಉತ್ಸಾಹದ ಹೃದಯದ ಶುಭಾಷಯಗಳ ಸಂಗೀತವನ್ನು ಕೇಳುತ್ತಿದ್ದೇವೆ. ಎಲ್ಲರ ವಿಭಿನ್ನ ಸ್ನೇಹ ತುಂಬಿದ ಸಂಗೀತವು ಬಹಳ ಸುಂದರವಾಗಿದೆ, ಆದ್ದರಿಂದ ಎಲ್ಲರಿಗೆ ಜೊತೆ ಜೊತೆಗೆ ರಿಟರ್ನ್ ಆಗಿ ಪ್ರತ್ಯುತ್ತರ ನೀಡುತ್ತಿದ್ದೇವೆ. ಹೊಸ ವರ್ಷದ ಹೊಸ ಉಮ್ಮಂಗ-ಉತ್ಸಾಹದ, ಪ್ರತೀ ಸಮಯ ತನ್ನಲ್ಲಿ ದಿವ್ಯತೆಯನ್ನು ತರುವ ಸದಾ ಶುಭಾಷಯಗಳು. ಕೇವಲ ಇಂದು ಹೊಸ ವರ್ಷದ ಕಾರಣ ಶುಭಾಷಯವಲ್ಲ ಆದರೆ ಅವಿನಾಶಿ ತಂದೆಯ ಅವಿನಾಶಿ ಪ್ರೀತಿಯನ್ನು ನಿಭಾಯಿಸುವಂತಹ ಮಕ್ಕಳ ಪ್ರತಿ ಸಂಗಮಯುಗದ ಪ್ರತೀ ಘಳಿಗೆಯೂ ಜೀವನದಲ್ಲಿ ನವೀನತೆಯನ್ನು ತರುವಂತದ್ದಾಗಿದೆ, ಆದ್ದರಿಂದ ಪ್ರತೀ ಘಳಿಗೆ ಅವಿನಾಶಿ ತಂದೆಯ ಅವಿನಾಶಿ ಶುಭಾಷಯಗಳಿದೆ. ಬಾಪ್ದಾದಾರವರ ವಿಶೇಷ ಖುಷಿಯ ಸಂಪನ್ನ ಶುಭಾಷಯಗಳೆಂದರೆ ಸರ್ವ ಬ್ರಾಹ್ಮಣರು ವೃದ್ಧಿಯನ್ನು ಹೊಂದುತ್ತಿದ್ದಾರೆ. ಬ್ರಾಹ್ಮಣ ಜೀವನದ ಪಾಲನೆಗೆ ಆಧಾರ ಶುಭಾಷಯಗಳಾಗಿವೆ. ಶುಭಾಷಯಗಳ ಖುಷಿಯಿಂದಲೇ ಮುಂದುವರೆಯುತ್ತಾ ಹೋಗುತ್ತಿದ್ದೀರಿ. ತಂದೆಯ ಸ್ವರೂಪದಲ್ಲಿ ಪ್ರತೀ ಸಮಯ ಶುಭಾಷಯಗಳಿದೆ, ಶಿಕ್ಷಕನ ಸ್ವರೂಪದಿಂದ ಪ್ರತೀ ಸಮಯ ಶಭಾಷ್ ಶಭಾಷ್ ಎಂಬ ನುಡಿಯು ಪಾಸ್-ವಿತ್-ಆನರ್ ಅನ್ನಾಗಿ ಮಾಡುತ್ತಿದೆ. ಸದ್ಗುರುವಿನ ರೂಪದಲ್ಲಿ ಪ್ರತೀ ಶ್ರೇಷ್ಠ ಕರ್ಮದ ಆಶೀರ್ವಾದಗಳು ಸಹಜ ಮತ್ತು ಮೋಜಿನ ಜೀವನದ ಅನುಭವ ಮಾಡಿಸುತ್ತಿವೆ ಆದ್ದರಿಂದ ಪದಮಾಪದಮ ಭಾಗ್ಯವಂತರಾಗಿದ್ದೀರಿ. ಭಾಗ್ಯವಿದಾತ ಭಗವಂತನ ಮಕ್ಕಳಾಗಿ ಬಿಟ್ಟಿರಿ ಅರ್ಥಾತ್ ಸಂಪೂರ್ಣ ಭಾಗ್ಯಕ್ಕೆ ಅಧಿಕಾರಿಗಳಾದಿರಿ. ಮನುಷ್ಯರು ವಿಶೇಷ ದಿನದಂದು ಶುಭಾಷಯಗಳನ್ನು ತಿಳಿಸುತ್ತಾರೆ ಮತ್ತು ತಮಗೆ ಕೇವಲ ಹೊಸ ವರ್ಷದ ಶುಭಾಷಯಗಳು ಸಿಗುತ್ತದೆಯೇ? ಮೊದಲನೇ ತಾರೀಖಿನಿಂದ ಎರಡನೇ ತಾರೀಖು ಬಂದು ಬಿಟ್ಟರೂ ಶುಭಾಷಯಗಳು ಮುಗಿಯುತ್ತವೆಯೇ? ತಮಗಾಗಿ ಪ್ರತೀ ಸಮಯ, ಪ್ರತೀ ಘಳಿಗೆ ವಿಶೇಷವಾಗಿದೆ, ಸಂಗಮಯುಗವೇ ವಿಶೇಷಯುಗ, ಶುಭಾಷಯಗಳ ಯುಗವಾಗಿದೆ. ಅಮೃತವೇಳೆ ಪ್ರತಿನಿತ್ಯವೂ ತಂದೆಯಿಂದ ಶುಭಾಷಯಗಳನ್ನು ಪಡೆಯುತ್ತೀರಲ್ಲವೆ. ಇದಂತೂ ನಿಮಿತ್ತ ಮಾತ್ರ ದಿನವನ್ನು ಆಚರಿಸುತ್ತೀರಿ. ಸದಾ ನೆನಪಿಟ್ಟುಕೊಳ್ಳಿ, ಪ್ರತೀ ಘಳಿಗೆ ಮೋಜಿನ ಘಳಿಗೆಯಾಗಿದೆ, ಖುಷಿಯೇ ಖುಷಿಯಿದೆಯಲ್ಲವೆ? ಯಾರಾದರೂ ತಮ್ಮ ಜೀವನದಲ್ಲಿ ಏನಿದೆ ಎಂದು ಕೇಳಿದರೆ ಯಾವ ಉತ್ತರ ನೀಡುವಿರಿ? ಖುಷಿಯೇ ಖುಷಿಯಿದೆಯಲ್ಲವೆ. ಇಡೀ ಕಲ್ಪದ ಖುಷಿಯನ್ನು ಈ ಜೀವನದಲ್ಲಿ ಅನುಭವ ಮಾಡುತ್ತೀರಿ, ಏಕೆಂದರೆ ತಂದೆಯೊಂದಿಗಿನ ಮಿಲನದ ಮೋಜಿನ ಅನುಭವ ಇಡೀ ಕಲ್ಪದ ರಾಜ್ಯಾಧಿಕಾರಿ ಮತ್ತು ಪೂಜ್ಯಾಧಿಕಾರಿ ಎರಡರ ಅನುಭವ ಮಾಡಿಸುತ್ತದೆ. ಪೂಜ್ಯ ಸ್ಥಿತಿಯ ಮೋಜು ಮತ್ತು ರಾಜ್ಯಭಾರ ಮಾಡುವ ಮೋಜು. ಎರಡರ ಜ್ಞಾನ ಈಗ ಇದೆ ಆದ್ದರಿಂದ ಮೋಜೂ ಸಹ ಈಗ ಇದೆ.

ಈ ವರ್ಷ ಏನು ಮಾಡುವಿರಿ? ನವೀನತೆ ಮಾಡುತ್ತೀರಲ್ಲವೇ! ಈ ವರ್ಷವನ್ನು ಸಮಾರೋಹ ವರ್ಷವನ್ನಾಗಿ ಆಚರಿಸಿರಿ. ತಪಸ್ಸು ಮಾಡುವುದೇ ಅಥವಾ ಸಮಾರೋಹ ಆಚರಿಸುವುದೇ ಎಂದು ಯೋಚಿಸುತ್ತಿದ್ದೀರಿ. ತಪಸ್ಯಾ ದೊಡ್ಡದಕ್ಕಿಂತ ದೊಡ್ಡ ಸಮಾರೋಹವಾಗಿದೆ ಏಕೆಂದರೆ ಹಠಯೋಗವನ್ನಂತೂ ಮಾಡುವಂತಿಲ್ಲ. ತಪಸ್ಸು ಅರ್ಥಾತ್ ತಂದೆಯೊಂದಿಗೆ ಮೋಜನ್ನು ಆಚರಿಸುವುದು. ಮಿಲನದ ಮೋಜು, ಸರ್ವ ಪ್ರಾಪ್ತಿಗಳ ಮೋಜು, ಸಮೀಪತೆಯ ಅನುಭವದ ಮೋಜು, ಸಮಾನ ಸ್ಥಿತಿಯ ಮೋಜು ಅಂದಮೇಲೆ ಇದು ಸಮಾರೋಹವಾಯಿತಲ್ಲವೆ. ಸೇವೆಯ ದೊಡ್ಡ-ದೊಡ್ಡ ಸಮಾರೋಹ ಮಾಡುವುದಿಲ್ಲ ಆದರೆ ತಪಸ್ಸಿನ ವಾತಾವರಣವು ವಾಣಿಯ ಸಮಾರೋಹಕ್ಕಿಂತಲೂ ಹೆಚ್ಚಿನದಾಗಿ ತಂದೆಯ ಕಡೆ ಆಕರ್ಷಣೆ ಮಾಡುವುದು. ತಪಸ್ಸು ಆತ್ಮಿಕ ಅಯಸ್ಕಾಂತವಾಗಿದೆ ಯಾವುದರಿಂದ ಆತ್ಮರಿಗೆ ಶಾಂತಿ ಮತ್ತು ಶಕ್ತಿಯ ಅನುಭವವು ದೂರದಿಂದಲೇ ಅನುಭೂತಿ ಆಗುವುದು. ಅಂದಮೇಲೆ ತಮ್ಮಲ್ಲಿ ಯಾವ ನವೀನತೆಯನ್ನು ತರುತ್ತೀರಿ? ಎಲ್ಲರಿಗೆ ನವೀನತೆಯೇ ಇಷ್ಟವಾಗುತ್ತದೆಯಲ್ಲವೆ. ಆದ್ದರಿಂದ ಸದಾ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಿ – ಇಂದಿನ ದಿನ ಮನಸ್ಸಾ ಅರ್ಥಾತ್ ಸ್ವಯಂನ ಸಂಕಲ್ಪ ಶಕ್ತಿಯಲ್ಲಿ ವಿಶೇಷವಾಗಿ ಯಾವ ವಿಶೇಷತೆಯನ್ನು ತಂದೆನು? ಮತ್ತು ಅನ್ಯ ಆತ್ಮರ ಪ್ರತಿ ಮನಸ್ಸಾ ಸೇವೆ ಅರ್ಥಾತ್ ಶುಭಭಾವನೆ, ಶುಭಕಾಮನೆಯ ವಿಧಿಯ ಮೂಲಕ ಎಷ್ಟು ವೃದ್ಧಿಯನ್ನು ಪ್ರಾಪ್ತಿ ಮಾಡಿಕೊಂಡೆನು? ಅರ್ಥಾತ್ ಶ್ರೇಷ್ಠತೆಯ ಯಾವ ನವೀನತೆ ತಂದೆನು? ಜೊತೆ ಜೊತೆಗೆ ಮಾತಿನಲ್ಲಿ ಮಧುರತೆ, ಸಂತುಷ್ಟತೆ, ಸರಳತೆಯ ನವೀನತೆಯನ್ನು ಎಷ್ಟು ತಂದೆನು? ಬ್ರಾಹ್ಮಣ ಆತ್ಮರ ಮಾತು ಸಾಧಾರಣ ಮಾತಾಗಿರುವುದಿಲ್ಲ. ಮಾತಿನಲ್ಲಿ ಈ ಮೂರು ಮಾತುಗಳಲ್ಲಿ ತನಗೆ ಮತ್ತು ಅನ್ಯರ ಆತ್ಮರಿಗೆ ಅನುಭೂತಿಯಾಗಲಿ. ಇದಕ್ಕೆ ನವೀನತೆಯೆಂದು ಹೇಳಲಾಗುವುದು. ಜೊತೆಯಲ್ಲಿ ಪ್ರತೀ ಕರ್ಮದಲ್ಲಿ ನವೀನತೆ ಅರ್ಥಾತ್ ಪ್ರತೀ ಕರ್ಮವು ಸ್ವಯಂನ ಪ್ರತಿ ಹಾಗೂ ಅನ್ಯರ ಪ್ರತಿ ಪ್ರಾಪ್ತಿಯ ಅನುಭವ ಮಾಡಿಸುವುದು. ಕರ್ಮದ ಪ್ರತ್ಯಕ್ಷ ಫಲ ಹಾಗೂ ಭವಿಷ್ಯ ಜಮಾದ ಫಲವು ಅನುಭವವಾಗಲಿ. ವರ್ತಮಾನ ಸಮಯದಲ್ಲಿ ಪ್ರತ್ಯಕ್ಷ ಫಲ ಸದಾ ಖುಷಿ ಮತ್ತು ಶಕ್ತಿಯ ಪ್ರಸನ್ನತೆಯ ಅನುಭೂತಿಯಾಗಲಿ ಮತ್ತು ಭವಿಷ್ಯ ಜಮಾದ ಅನುಭವವಾಗಲಿ. ಆಗ ಸದಾ ತನ್ನನ್ನು ಸಂಪೂರ್ಣ ಸಂಪನ್ನ ಅನುಭವ ಮಾಡುತ್ತೀರಿ. ಕರ್ಮರೂಪಿ ಬೀಜವು ಪ್ರಾಪ್ತಿಯ ವೃಕ್ಷದಿಂದ ಸಂಪನ್ನವಾಗಿರಲಿ, ಖಾಲಿಯಾಗಿರಬಾರದು. ಸಂಪನ್ನ ಆತ್ಮನ ಸ್ವಾಭಾವಿಕ ನಶೆ ಅಲೌಕಿಕವಾಗಿರುತ್ತದೆ. ಅಂದಾಗ ಈ ರೀತಿಯ ನವೀನತೆಯ ಕರ್ಮ ಮಾಡಿದಿರಾ? ಜೊತೆಯಲ್ಲಿ ಸಂಬಂಧ-ಸಂಪರ್ಕದಲ್ಲಿ ಯಾವ ನವೀನತೆಯನ್ನು ತರಬೇಕಾಗಿದೆ?

ಈ ವರ್ಷ ದಾತನ ಮಕ್ಕಳು ಮಾ|| ದಾತ – ಈ ಸ್ಮೃತಿ ಸ್ವರೂಪದಲ್ಲಿ ಅನುಭವ ಮಾಡಿರಿ. ಬ್ರಾಹ್ಮಣ ಆತ್ಮರಿರಲಿ, ಸಾಧಾರಣ ಆತ್ಮರಿರಲಿ ಆದರೆ ಯಾರದೇ ಸಂಬಂಧ-ಸಂಪರ್ಕದಲ್ಲಿ ಬಂದರೂ ಸಹ ಆ ಆತ್ಮರಿಗೆ ಮಾ|| ದಾತನ ಮೂಲಕ ಪ್ರಾಪ್ತಿಯ ಅನುಭವವಾಗಲಿ. ಧೈರ್ಯವು ಸಿಗಲಿ ಅಥವಾ ಉಮ್ಮಂಗ-ಉತ್ಸಾಹವಾದರೂ ಸಿಗಲಿ. ಶಾಂತಿ ಹಾಗೂ ಶಕ್ತಿಯಾದರೂ ಸಿಗಲಿ. ಸಹಜ ವಿಧಿಯಾದರೂ ಸಿಗಲಿ, ಖುಷಿಯಾದರೂ ಸಿಗಲಿ – ಅನುಭವದ ವೃದ್ಧಿಯ ಅನುಭೂತಿಯಾಗಲಿ. ಪ್ರತಿಯೊಬ್ಬರಿಗೆ ಏನಾದರೊಂದು ಕೊಡಬೇಕಾಗಿದೆ. ಪಡೆಯುವುದಲ್ಲ, ಕೊಡಬೇಕಾಗಿದೆ. ಕೊಡುವುದರಲ್ಲಿ ಪಡೆಯುವುದು ಸಮಾವೇಶವಾಗಿದೆ ಆದರೆ ನಾನಾತ್ಮನು ಮಾ|| ದಾತನಾಗಬೇಕಾಗಿದೆ. ಇದೇ ಪ್ರಮಾಣ ತನ್ನ ಸ್ವಭಾವ-ಸಂಸ್ಕಾರದಲ್ಲಿ ತಂದೆಯ ಸಮಾನದ ನವೀನತೆಯನ್ನು ತರಬೇಕಾಗಿದೆ. ನನ್ನ ಸ್ವಭಾವವಲ್ಲ, ಯಾವುದು ತಂದೆಯ ಸ್ವಭಾವವೋ ಅದೇ ನನ್ನ ಸ್ವಭಾವ. ಯಾವುದು ಬ್ರಹ್ಮನ ಸಂಸ್ಕಾರವೋ ಅದು ಬ್ರಾಹ್ಮಣರ ಸಂಸ್ಕಾರ. ಹೀಗೆ ಪ್ರತಿನಿತ್ಯವೂ ತಮ್ಮಲ್ಲಿ ನವೀನತೆಯನ್ನು ತರುತ್ತಾ ಹೊಸ ಸಂಸಾರದ (ವಿಶ್ವ) ಸ್ಥಾಪನೆಯು ಸ್ವತಹ ಆಗಿಯೇ ಬಿಡುವುದು ಅಂದಾಗ ತಿಳಿಯಿತೇ – ಹೊಸ ವರ್ಷದಲ್ಲಿ ಏನು ಮಾಡುತ್ತೀರಿ? ಯಾವುದು ಕಳೆದು ಹೋಯಿತೋ ಆ ಕಳೆದ ವರ್ಷದ ಸಮಾಪ್ತಿ ಸಮಾರೋಹವನ್ನು ಆಚರಿಸಿ ಮತ್ತು ವರ್ತಮಾನದ ಸಮಾನತೆ ಮತ್ತು ಸಮೀಪತೆಯ ಸಮಾರೋಹವನ್ನು ಆಚರಿಸಿ ಮತ್ತು ಭವಿಷ್ಯದ ಸದಾ ಸಫಲತೆಯ ಸಮಾರೋಹವನ್ನಾಚರಿಸಿ. ಸಮಾರೋಹ ವರ್ಷವನ್ನು ಆಚರಿಸುತ್ತಾ ಹಾರುತ್ತಾ ಇರಿ.

ಡಬಲ್ ವಿದೇಶಿಯರು ಮೋಜಿನಲ್ಲಿರುವುದನ್ನು ಇಚ್ಛಿಸುತ್ತೀರಲ್ಲವೆ! ಅಂದಾಗ ಮೋಜಿಗಾಗಿ ಎರಡು ಮಾತುಗಳನ್ನು ನೆನಪಿಟ್ಟುಕೊಳ್ಳಿ – ಒಂದು ಡಾಟ್ ಮತ್ತು ಇನ್ನೊಂದು ನಾಟ್. ಯಾವುದಕ್ಕೆ ನಾಟ್ ಎನ್ನಬೇಕು ಎಂಬುದನ್ನು ತಿಳಿದುಕೊಂಡಿದ್ದೀರಲ್ಲವೆ! ಮಾಯೆಗೆ ನಾಟ್ ಅಲೌಡ್, ನಾಟ್ ಎನ್ನುವುದು ಬರುತ್ತದೆಯೇ? ಅಥವಾ ಸ್ವಲ್ಪ-ಸ್ವಲ್ಪ ಹಲೋ ಮಾಡುತ್ತೀರಾ? ಡಾಟ್ ಇಟ್ಟು ಬಿಡಿ ಆಗ ನಾಟ್ ಆಗಿಯೇ ಬಿಡುವುದು. ಡಬಲ ನಶೆಯಿದೆಯಲ್ಲವೆ.

ಭಾರತವಾಸಿಗಳು ಏನು ಮಾಡುತ್ತೀರಿ? ಭಾರತವು ಮಹಾನ್ ದೇಶವಾಗಿದೆ – ಇದು ಈಗಿನ ಸ್ಲೋಗನ್ ಆಗಿದೆ ಮತ್ತು ಭಾರತದ ಮಹಾನ್ ಆತ್ಮರು ಮಹಾತ್ಮರೆಂದು ಗಾಯನವಿದೆ. ಅಂದಾಗ ಭಾರತವು ಮಹಾನ್ ಅರ್ಥಾತ್ ಭಾರತವಾಸಿಗಳು ಮಹಾನ್ ಆತ್ಮರು. ಇದರಿಂದ ಪ್ರತೀ ಸಮಯ ತಮ್ಮ ಮಹಾನತೆಯಿಂದ ಭಾರತವು ಮಹಾನ್ ಆತ್ಮರ ಸ್ಥಾನ ದೇವಾತ್ಮರ ಸ್ಥಾನವನ್ನಾಗಿ ಸಾಕಾರ ರೂಪದಲ್ಲಿ ಮಾಡುತ್ತೀರಿ. ಚಿತ್ರವು ಸಮಾಪ್ತಿಯಾಗಿ ಚೈತನ್ಯ ದೇವಾತ್ಮರ ಸ್ಥಾನವನ್ನು ಎಲ್ಲರಿಗೆ ತೋರಿಸುತ್ತೀರಿ. ಅಂದಾಗ ಡಬಲ್ ವಿದೇಶಿ ಮತ್ತು ಭಾರತ ನಿವಾಸಿ ಅಲ್ಲ, ಇಬ್ಬರೂ ಸಹ ಈಗ ಮಧುಬನ ನಿವಾಸಿಗಳಾಗಿದ್ದೀರಿ. ಒಳ್ಳೆಯದು.

ನಾಲ್ಕಾರು ಕಡೆಯ ಸರ್ವ ಮಾಸ್ಟರ್ ದಾತ ಆತ್ಮರಿಗೆ, ಸದಾ ತಂದೆಯ ಮೂಲಕ ಶುಭಾಷಯಗಳನ್ನು ಪ್ರಾಪ್ತಿ ಮಾಡಿಕೊಳ್ಳುವ ವಿಶೇಷ ಆತ್ಮರಿಗೆ, ಸದಾ ಮೋಜಿನಲ್ಲಿರುವ ಭಾಗ್ಯಶಾಲಿ ಆತ್ಮರಿಗೆ, ಸದಾ ಸ್ವಯಂನಲ್ಲಿ ನವೀನತೆಯನ್ನು ತರುವಂತಹ ಮಹಾನ್ ಆತ್ಮರಿಗೆ, ಫರಿಶ್ತಾ ಸೋ ದೇವಾತ್ಮರಾಗುವಂತಹ ಸರ್ವ ಶ್ರೇಷ್ಠ ಆತ್ಮರಿಗೆ ಬಾಪ್ದಾದಾರವರ ನೆನಪು, ಪ್ರೀತಿ, ಪ್ರತೀ ಘಳಿಗೆಯ ಶುಭಾಷಯಗಳು ಹಾಗು ನಮಸ್ತೆ.

ಪಾರ್ಟಿಯೊಂದಿಗೆ ಅವ್ಯಕ್ತ ಬಾಪ್ದಾದಾರವರ ವಾರ್ತಾಲಾಪ:

1. ಅಚಲ-ಅಡೋಲ ಆತ್ಮರಾಗಿದ್ದೇವೆ – ಇಂತಹ ಅನುಭವ ಮಾಡುವಿರಾ? ಒಂದು ಕಡೆಯಿದೆ ಏರುಪೇರು, ಮತ್ತೊಂದು ಕಡೆ ತಾವು ಬ್ರಾಹ್ಮಣ ಆತ್ಮರು ಅಚಲರಾಗಿದ್ದೀರಿ. ಅಲ್ಲಿ ಎಷ್ಟು ಏರುಪೇರಿದೆಯೋ ಅಷ್ಟು ತಮ್ಮೊಳಗೆ ಅಚಲ-ಅಡೋಲ ಸ್ಥಿತಿಯ ಅನುಭವ ಹೆಚ್ಚಾಗುತ್ತಿದೆ. ಏನಾದರೂ ಆಗಲಿ ಅತ್ಯಂತ ಸಹಜ ಯುಕ್ತಿಯಾಗಿದೆ – ಹೊಸದೇನಲ್ಲ. ಯಾವುದೂ ಹೊಸ ಮಾತಲ್ಲ. ಇದೇನಾಗುತ್ತಿದೆ, ಏನಾಗುವುದೋ? ಎಂದು ಕೆಲವೊಮ್ಮೆ ಆಶ್ಚರ್ಯವೆನಿಸುತ್ತದೆ, ಯಾವಾಗ ಹೊಸ ಮಾತಾಗಿರುವುದೋ ಆಗ ಆಶ್ಚರ್ಯವಾಗುವುದು. ಯಾವ ಮಾತನ್ನು ಯೋಚಿಸಿಯೇ ಇರಲಿಲ್ಲ, ಕೇಳಿರುವುದಿಲ್ಲ, ಗೊತ್ತಿರುವುದಿಲ್ಲ ಮತ್ತೆ ಇದ್ದಕ್ಕಿದ್ದಂತೆಯೇ ಆಗಿಬಿಡುತ್ತದೆಯೆಂದರೆ ಆಶ್ಚರ್ಯವೆನಿಸುತ್ತದೆ. ಅಂದಮೇಲೆ ಇದರಲ್ಲಿ ಆಶ್ಚರ್ಯವಲ್ಲ ಆದರೆ ಪೂರ್ಣ ವಿರಾಮವಿರಲಿ. ಪ್ರಪಂಚದವರು ತಬ್ಬಿಬ್ಬಾಗುವವರು ಮತ್ತು ತಾವು ಮೋಜಿನಲ್ಲಿರುವವರು ಆಗಿದ್ದೀರಿ, ಪ್ರಪಂಚದವರು ಚಿಕ್ಕ ಪುಟ್ಟ ಮಾತುಗಳಲ್ಲಿಯೂ ಏನು ಮಾಡಲಿ, ಹೇಗೆ ಮಾಡಲಿ ಎಂದು ತಬ್ಬಿಬ್ಬಾಗುತ್ತಾರೆ…, ಮತ್ತುತಾವು ಸದಾ ಮೋಜಿನಲ್ಲಿರುತ್ತೀರಿ, ತಬ್ಬಿಬ್ಬಾಗುವುದೆಲ್ಲವೂ ಸಮಾಪ್ತಿಯಾಯಿತು. ಬ್ರಾಹ್ಮಣ ಅರ್ಥಾತ್ ಮೋಜು, ಕ್ಷತ್ರಿಯ ಎಂದರೆ ಗೊಂದಲ. ಕೆಲವೊಮ್ಮೆ ಮೋಜು, ಕೆಲವೊಮ್ಮೆಗೆ ಗೊಂದಲ, ತಾವೆಲ್ಲರೂ ತಮ್ಮ ಹೆಸರನ್ನೇ ಬ್ರಹ್ಮಾಕುಮಾರ-ಕುಮಾರಿಯರು ಎಂದು ಹೇಳುತ್ತೀರಿ. ಕ್ಷತ್ರಿಯ ಕುಮಾರ ಮತ್ತು ಕ್ಷತ್ರಿಯ ಕುಮಾರಿ ಎಂದು ಹೇಳುವುದಿಲ್ಲ ಅಲ್ಲವೇ? ಸದಾ ತಮ್ಮ ಭಾಗ್ಯದ ಖುಷಿಯಲ್ಲಿ ಇರುವವರಾಗಿದ್ದೀರಿ. ಹೃದಯದಲ್ಲಿ ಸದಾ, ಸ್ವತಹವಾಗಿಯೇ ಒಂದು ಗೀತೆ ಮೊಳಗುತ್ತಿರುತ್ತದೆ – ವಾಹ್ ಬಾಬಾ ಮತ್ತು ವಾಹ್ ನನ್ನ ಭಾಗ್ಯವೇ! ಈ ಗೀತೆಯು ಮೊಳಗುತ್ತಿರುತ್ತದೆ, ಇದನ್ನು ಮೊಳಗಿಸುವ ಅವಶ್ಯಕತೆಯೂ ಇಲ್ಲ. ಇದು ಅನಾದಿಯಾಗಿಯೇ ಮೊಳಗುತ್ತಿರುತ್ತದೆ. ಅಯ್ಯೊ-ಅಯ್ಯೊ ಎನ್ನುವುದು ಸಮಾಪ್ತಿಯಾಯಿತು, ಈಗ ವಾಹ್-ವಾಹ್ ಎನ್ನುವುದಿದೆ.ಈ ಪ್ರಪಂಚದಲ್ಲಿ ಅಯ್ಯೊ-ಅಯ್ಯೊ ಎನ್ನುವವರು ಮೆಜಾರಿಟಿ ಇದ್ದಾರೆ ಮತ್ತು ವಾಹ್-ವಾಹ್ ಮಾಡುವವರು ಬಹಳ ಸ್ವಲ್ಪವೇ ಇದ್ದೀರಿ ಅಂದಮೇಲೆ ಹೊಸ ವರ್ಷದಲ್ಲಿ ಏನನ್ನು ನೆನಪಿಟ್ಟುಕೊಳ್ಳುವಿರಿ? ವಾಹ್-ವಾಹ್. ತಮ್ಮ ಮುಂದೆ ಏನು ನೋಡಿದಿರಿ, ಏನು ಕೇಳಿದಿರಿ, ಏನು ಹೇಳಿದಿರಿ ಎಲ್ಲದರಲ್ಲಿಯೂ ವಾಹ್-ವಾಹ್, ಅಯ್ಯೊ-ಅಯ್ಯೊ ಎನ್ನುವುದಿಲ್ಲ. ಅಯ್ಯೊ ಇದೇನಾಯಿತು! ಹೀಗೆನ್ನುವುದಿಲ್ಲ, ವಾಹ್! ಇದಂತು ಬಹಳ ಒಳ್ಳೆಯದಾಯಿತು. ಏನೇ ಕೆಟ್ಟದ್ದನ್ನೇ ಮಾಡಲಿ ಆದರೆ ತಾವು ತಮ್ಮ ಶಕ್ತಿಯಿಂದ ಕೆಡುಕನ್ನೂ ಒಳಿತಿನಲ್ಲಿ ಪರಿವರ್ತಿಸಿ ಬಿಡಿ. ಇದೇ ಪರಿವರ್ತನೆಯಲ್ಲವೆ. ತಾವು ಬ್ರಾಹ್ಮಣ ಜೀವನದಲ್ಲಿ ಕೆಡುಕಾಗುವುದೇ ಇಲ್ಲ. ಭಲೆ ಯಾರೆಷ್ಟಾದರೂ ಗ್ಲಾನಿ ಮಾಡಲಿ ಆದರೂ ಬಲಿಹಾರಿ ಗ್ಲಾನಿ ಮಾಡುವವರಿರಲಿ, ಅವರು ಸಹನ ಶಕ್ತಿಯ ಪಾಠವನ್ನು ಓದಿಸಿದರು. ಅವರು ತಮ್ಮ ಮಾಸ್ಟರ್ ಸಹ ಆಗಿ ಬಿಟ್ಟರೆಂದರೆ ಬಲಿಹಾರಿಯಾಯಿತಲ್ಲವೆ. ತಮ್ಮಲ್ಲಿ ಸಹನಾಶಕ್ತಿ ಎಷ್ಟಿದೆ ಎಂಬುದಂತು ತಿಳಿದು ಬಂದಿತು ಅಂದಮೇಲೆ ಕೆಡುಕಾಯಿತೆ ಅಥವಾ ಒಳ್ಳೆಯದಾಯಿತೆ? ಬ್ರಾಹ್ಮಣ ದೃಷ್ಟಿಯಲ್ಲಿ ಕೆಡುಕಾಗುವುದೇ ಇಲ್ಲ. ಬ್ರಾಹ್ಮಣರ ಕಿವಿಗಳಲ್ಲಿ ಕೆಡುಕು ಕೇಳುವುದೇ ಇಲ್ಲ ಆದ್ದರಿಂದ ಬ್ರಾಹ್ಮಣ ಜೀವನವು ಮೋಜಿನ ಜೀವನವಾಗಿದೆ. ಈಗೀಗ ಕೆಡುಕು, ಈಗೀಗ ಒಳ್ಳೆಯದಿದ್ದರೆ ಮೋಜುಂಟಾಗಲು ಸಾಧ್ಯವಿಲ್ಲ. ಬ್ರಹ್ಮಾಕುಮಾರ ಮತ್ತು ಕುಮಾರಿಯರು ಇಡೀ ಕಲ್ಪದಲ್ಲಿ ಶ್ರೇಷ್ಠರಿದ್ದಾರೆ, ದೇವಾತ್ಮರೂ ಸಹ ಬ್ರಾಹ್ಮಣರ ಮುಂದೆ ಏನೂ ಇಲ್ಲ. ಸದಾ ಇದೇ ನಶೆಯಲ್ಲಿರಿ ಹಾಗೂ ಸದಾ ಖುಷಿಯಲ್ಲಿರಿ ಹಾಗೂ ಅನ್ಯರನ್ನೂ ಸದಾ ಖುಷಿಯಲ್ಲಿಡಿ. ಸ್ವಯಂ ಇರಬೇಕು ಹಾಗೂ ಅನ್ಯರನ್ನೂ ಖುಷಿಯಾಗಿಡಬೇಕು. ನಾನಂತು ಖುಷಿಯಾಗಿರುತ್ತೇನೆ ಅಲ್ಲ, ನಾನು ಎಲ್ಲರನ್ನೂ ಖುಷಿಯಾಗಿಡುತ್ತೇನೆ ಎನ್ನುವುದೂ ಇರಬೇಕು. ನಾನಂತು ಖುಷಿಯಾಗಿರುತ್ತೇನೆ ಎನ್ನುವುದೂ ಸಹ ಸ್ವಾರ್ಥವಾಯಿತು, ಬ್ರಾಹ್ಮಣರ ಸೇವೆ ಏನಾಗಿದೆ? ಜ್ಞಾನವನ್ನು ಕೊಡುವುದೇ ಖುಷಿಗಾಗಿ.

2. ವಿಶ್ವದಲ್ಲಿ ಶ್ರೇಷ್ಠ ಆತ್ಮರೆಂದು ಎಷ್ಟಾದರೂ ಮಹಿಮೆ ಮಾಡಬಹುದು, ಅವರಿಗಿಂತ ತಾವೆಷ್ಟು ಶ್ರೇಷ್ಠರಾಗಿದ್ದೀರಿ! ತಂದೆಯೇ ತಮ್ಮವರಾಗಿ ಬಿಟ್ಟರು ಅಂದಮೇಲೆ ತಾವೆಷ್ಟು ಶ್ರೇಷ್ಠರಾಗಿ ಬಿಟ್ಟಿರಿ! ಸರ್ವ ಶ್ರೇಷ್ಠರೇ ಆಗಿ ಬಿಟ್ಟಿರಿ. ಸದಾ ಇದನ್ನೇ ಸ್ಮೃತಿಯಲ್ಲಿಡಿ – ಸರ್ವ ಶ್ರೇಷ್ಠವಾದ ತಂದೆಯು ಸರ್ವ ಶ್ರೇಷ್ಠ ಆತ್ಮರನ್ನಾಗಿ ಮಾಡಿ ಬಿಟ್ಟರು. ಎಷ್ಟೊಂದು ಶ್ರೇಷ್ಠವಾದ ದೃಷ್ಟಿಯಾಯಿತು, ವೃತ್ತಿಯೂ ಎಷ್ಟು ಶ್ರೇಷ್ಠವಾಯಿತು! ಎಲ್ಲವೂ ಬದಲಾಗಿ ಬಿಟ್ಟಿತು. ಈಗ ಯಾರನ್ನೇ ನೋಡುತ್ತೀರೆಂದರೆ ಆತ್ಮಿಕ ದೃಷ್ಟಿಯಿಂದ ನೋಡುವಿರಿ ಹಾಗೂ ಸರ್ವರ ಬಗ್ಗೆ ಕಲ್ಯಾಣದ ವೃತ್ತಿಯಾಯಿತು. ಬ್ರಾಹ್ಮಣ ಜೀವನ ಎಂದರೆ ಪ್ರತಿಯೊಂದು ಆತ್ಮನ ಬಗ್ಗೆ ದೃಷ್ಟಿ ಹಾಗೂ ವೃತ್ತಿಯು ಶ್ರೇಷ್ಠವಾಗಿ ಬಿಟ್ಟಿತು.

3. ತಮ್ಮನ್ನು ತಾವು ಸಫಲತಾ ನಕ್ಷತ್ರಗಳಾಗಿದ್ದೇವೆ ಎಂದು ಅನುಭವ ಮಾಡುತ್ತೀರಾ? ಎಲ್ಲಿ ಸರ್ವಶಕ್ತಿಗಳಿವೆಯೋ ಅಲ್ಲಿ ಸಫಲತೆಯು ಜನ್ಮ ಸಿದ್ಧ ಅಧಿಕಾರವಿದೆ. ಯಾವುದೇ ಕಾರ್ಯವನ್ನು ಮಾಡುತ್ತೀರಿ, ಭಲೆ ಶರೀರ ನಿರ್ವಹಣಾರ್ಥ ಮಾಡುತ್ತೀರಿ ಅಥವಾ ಈಶ್ವರನ ಸೇವಾರ್ಥವಾಗಿ ಮಾಡುತ್ತೀರಿ. ಕಾರ್ಯದಲ್ಲಿ ಕಾರ್ಯವನ್ನು ಮಾಡುವ ಮೊದಲು ಈ ನಿಶ್ಚಯವನ್ನಿಡಿ. ನಿಶ್ಚಯವನ್ನಿಡುವುದು ಒಳ್ಳೆಯ ಮಾತಾಗಿದೆ ಆದರೆ ಪ್ರತ್ಯಕ್ಷದಲ್ಲಿ ಅನುಭವಿ ಆತ್ಮರಾಗಿದ್ದು ನಿಶ್ಚಯ ಹಾಗೂ ನಶೆಯಲ್ಲಿರಿ. ಈ ಬ್ರಾಹ್ಮಣ ಜೀವನದಲ್ಲಿ ಸರ್ವಶಕ್ತಿಗಳು ಸಫಲತೆಯ ಸಹಜ ಸಾಧನವಾಗಿದೆ. ಸರ್ವ ಶಕ್ತಿಗಳ ಮಾಲೀಕರಾಗಿದ್ದೀರಿ ಆದ್ದರಿಂದ ಯಾವುದೇ ಶಕ್ತಿಯನ್ನು ಯಾವುದೇ ಸಮಯದಲ್ಲಿ ಆದೇಶ ಮಾಡಿರಿ, ಆ ಸಮಯದಲ್ಲಿ ಹಾಜಿರ್ ಆಗಿ ಬಿಡಲಿ. ಹೇಗೆ ಯಾರೇ ಸೇವಾಧಾರಿ ಇರುತ್ತಾರೆ, ಸೇವಾಧಾರಿಗೆ ಯಾವುದೇ ಸಮಯದಲ್ಲಿ ಆದೇಶ ಮಾಡುತ್ತೀರೆಂದರೆ ಅವರು ಸೇವೆಗಾಗಿ ತಯಾರಾಗಿ ಬಿಡುತ್ತಾರೆ, ಹಾಗೆಯೇ ಸರ್ವ ಶಕ್ತಿಗಳು ತಮ್ಮ ಆದೇಶದಲ್ಲಿರಲಿ. ಎಷ್ಟೆಷ್ಟು ಮಾಸ್ಟರ್ ಸರ್ವಶಕ್ತಿವಂತನ ಆಸನದಲ್ಲಿ ಆಸೀನರಾಗುತ್ತೀರಿ, ಅಷ್ಟು ಸರ್ವ ಶಕ್ತಿಗಳು ತಮ್ಮ ಆದೇಶದನುಸಾರ ಇರುತ್ತವೆ. ಸ್ವಲ್ಪವೇನಾದರೂ ಸ್ಮೃತಿಯ ಆಸನದಿಂದ ಕೆಳಗಿಳಿದು ಬರುತ್ತೀರೆಂದರೆ, ಶಕ್ತಿಗಳು ಆದೇಶವನ್ನು ಪಾಲಿಸುವುದಿಲ್ಲ. ಸೇವಾಧಾರಿಯೂ ಇರುತ್ತಾರೆ, ಕೆಲವರು ವಿಧೇಯರೂ ಆಗಿರುತ್ತಾರೆ, ಕೆಲವರು ಸ್ವಲ್ಪ ಏರುಪೇರು ಮಾಡುವವರೂ ಆಗಿರುತ್ತಾರೆ. ಅಂದಮೇಲೆ ತಮ್ಮ ಮುಂದೆ ಸರ್ವ ಶಕ್ತಿಗಳು ಹೇಗಿವೆ? ವಿಧೇಯನೇ ಅಥವಾ ಸ್ವಲ್ಪ ಸಮಯದ ನಂತರ ತಲುಪುತ್ತದೆಯೇ? ಹೇಗೆ ಈ ಸ್ಥೂಲ ಕರ್ಮೇಂದ್ರಿಯಗಳನ್ನು ಯಾವ ಸಮಯದಲ್ಲಿ, ಹೇಗೆ ಆದೇಶ ಮಾಡುತ್ತೀರಿ, ಆ ಸಮಯದಲ್ಲಿ ಆ ಆದೇಶದನುಸಾರ ನಡೆಯುತ್ತದೆ, ಅದೇ ರೀತಿಯಲ್ಲಿ ಈ ಸೂಕ್ಷ್ಮ ಶಕ್ತಿಗಳೂ ಸಹ ತಮ್ಮ ಆದೇಶದನುಸಾರ ನಡೆಯುವಂತಿರಲಿ. ಪರಿಶೀಲನೆ ಮಾಡಿಕೊಳ್ಳಿರಿ – ಇಡೀ ದಿನದಲ್ಲಿ ಸರ್ವ ಶಕ್ತಿಗಳು ಆದೇಶದಲ್ಲಿ ಇರುತ್ತದೆಯೇ? ಏಕೆಂದರೆ ಯಾವಾಗ ಈ ಸರ್ವಶಕ್ತಿಗಳು ಈಗಿನಿಂದಲೂ ತನ್ನ ಆದೇಶದಂತೆ ಇರುತ್ತದೆಯೋ ಆಗಲೇ ಅಂತ್ಯದಲ್ಲಿಯೂ ತಾವು ಸಫಲತೆಯನ್ನು ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯವಾಗುವುದು. ಇದಕ್ಕಾಗಿ ಬಹಳ ಕಾಲದ ಅಭ್ಯಾಸವಿರಬೇಕು. ಹಾಗಾದರೆ ಈ ಹೊಸ ವರ್ಷದಲ್ಲಿ ಆದೇಶದಂತೆ ನಡೆಸುವ ವಿಶೇಷ ಅಭ್ಯಾಸವನ್ನು ಮಾಡಬೇಕು ಏಕೆಂದರೆ ವಿಶ್ವದ ರಾಜ್ಯ ಪ್ರಾಪ್ತಿ ಮಾಡಿಕೊಳ್ಳಬೇಕಲ್ಲವೆ. ವಿಶ್ವ ರಾಜ್ಯಾಧಿಕಾರಿಯಾಗುವ ಮೊದಲು ಸ್ವರಾಜ್ಯ ಅಧಿಕಾರಿಯಾಗಿರಿ.

ನಿಶ್ಚಯ ಮತ್ತು ನಶೆಯು ಪ್ರತಿಯೊಂದು ಮಕ್ಕಳಿಗೆ ಹಾರುವ ಕಲೆಯ ಅನುಭವ ಮಾಡಿಸುತ್ತಿದೆ. ಡಬಲ್ ವಿದೇಶಿಗಳು ಅದೃಷ್ಟವಂತರಾಗಿದ್ದಾರೆ, ಅವರು ಹಾರುವ ಕಲೆಯ ಸಮಯದಲ್ಲಿ ಬಂದು ಬಿಟ್ಟರು. ಏರುವ ಪರಿಶ್ರಮವನ್ನೂ ಪಡಬೇಕಾಗಿಲ್ಲ. ಸದಾ ವಿಜಯದ ತಿಲಕವು ಮಸ್ತಕದಲ್ಲಿ ಹೊಳೆಯುತ್ತಿದೆ. ಇದೇ ವಿಜಯದ ತಿಲಕವು ಅನ್ಯರಿಗೂ ಖುಷಿ ತರಿಸುತ್ತದೆ ಏಕೆಂದರೆ ವಿಜಯಿ ಆತ್ಮನ ಚಹರೆಯು ಸದಾಕಾಲ ಹರ್ಷಿತವಾಗಿ ಇರಿಸುತ್ತದೆ ಅಂದಮೇಲೆ ತಮ್ಮ ಹರ್ಷಿತ ಚಹರೆಯನ್ನು ನೋಡುತ್ತಾ, ಎಲ್ಲರೂ ಖುಷಿಯ ಹಿಂದೆ ಆಕರ್ಷಿತರಾಗುತ್ತಾರೆ ಏಕೆಂದರೆ ಪ್ರಪಂಚದ ಆತ್ಮರು ಖುಷಿಯನ್ನು ಹುಡುಕುತ್ತಿದ್ದಾರೆ ಮತ್ತು ತಮ್ಮ ಚಹರೆಯಲ್ಲಿ ಖುಷಿಯ ಹೊಳಪನ್ನು ಯಾವಾಗ ನೋಡುತ್ತಾರೆಯೋ ಆಗ ಸ್ವಯಂ ಖುಷಿಯಾಗುವರು. ಅವರು ತಿಳಿಯುತ್ತಾರೆ – ಇವರಿಗೇನೋ ಪ್ರಾಪ್ತಿಯಾಗಿದೆ. ಮುಂದೆ ನಡೆದಂತೆ ತಮ್ಮ ಚಹರೆಯು ಖುಷಿಯ ಆಕರ್ಷಣೆಯಿಂದ ಇನ್ನಷ್ಟು ಸಮೀಪಕ್ಕೆ ಕರೆ ತರುತ್ತದೆ. ಯಾರಿಗೆ ಆಲಿಸುವ ಸಮಯವೂ ಇರುವುದಿಲ್ಲ, ಆ ಸಮಯದಲ್ಲಿ ಸೆಕೆಂಡಿನಲ್ಲಿ ತಮ್ಮ ಚಹರೆಯು ಆ ಆತ್ಮರ ಸೇವೆ ಮಾಡುವುದು. ತಾವೆಲ್ಲರೂ ಸಹ ಪ್ರೀತಿ ಹಾಗೂ ಖುಷಿಯನ್ನು ನೋಡಿಯೇ ಬ್ರಾಹ್ಮಣರಾದಿರಲ್ಲವೆ. ಅಂದಾಗ ತಪಸ್ಯಾ ವರ್ಷದಲ್ಲಿ ಇಂತಹ ಸೇವೆ ಮಾಡಬೇಕಾಗಿದೆ.

4. ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ – ಈ ಸ್ಥಿತಿಯಲ್ಲಿ ಸದಾ ಸ್ಥಿತರಾಗಿರುವಂತಹ ಸಹಯೋಗಿ ಆತ್ಮರಾಗಿದ್ದೀರಾ? ಒಬ್ಬರನ್ನು ನೆನಪು ಮಾಡುವುದು ಸಹಜವಿದೆ. ಅನೇಕರನ್ನು ನೆನಪು ಮಾಡುವುದು ಕಷ್ಟವಾಗುವುದು. ಅನೇಕ ವಿಸ್ತಾರವನ್ನು ಬಿಟ್ಟು ಸಾರ ಸ್ವರೂಪ ಒಬ್ಬ ಬಾಬಾ – ಈ ಅನುಭವದಲ್ಲಿ ಎಷ್ಟೊಂದು ಖುಷಿಯಾಗುವುದು, ಖುಷಿಯು ಜನ್ಮ ಸಿದ್ಧ ಅಧಿಕಾರವಾಗಿದೆ. ತಂದೆಯ ಖಜಾನೆಯಾಗಿದೆ ಅಂದಮೇಲೆ ತಂದೆಯ ಖಜಾನೆಯು ಮಕ್ಕಳಿಗಾಗಿ ಜನ್ಮ ಸಿದ್ಧ ಅಧಿಕಾರವಾಗಿರುತ್ತದೆ. ತಮ್ಮ ಖಜಾನೆ ಆಗಿದೆ ಅಂದಮೇಲೆ ತಮ್ಮದರ ಮೇಲೆ ತಮಗೆ ಕಣ್ಣಿರುತ್ತದೆ. ಮತ್ತು ಇದು ಸಿಕ್ಕಿರುವುದಾದರೂ ಯಾರಿಂದ? ಅವಿನಾಶಿ ತಂದೆಯಿಂದ ಹಾಗಾದರೆ ಅವಿನಾಶಿ ತಂದೆಯು ಏನನ್ನು ಕೊಡುವರೋ ಅದು ಅವಿನಾಶಿಯಾಗಿರುವುದನ್ನೇ ಕೊಡುತ್ತಾರೆ. ಅವಿನಾಶಿ ಖಜಾನೆಯ ನಶೆಯೂ ಅವಿನಾಶಿಯಾಗಿರುತ್ತದೆ. ಈ ನಶೆಯನ್ನು ಯಾರೂ ಸಹ ಬಿಡಿಸಲು ಸಾಧ್ಯವಿಲ್ಲ ಏಕೆಂದರೆ ಇದು ಹಾನಿ ಮಾಡುವ ನಶೆಯಲ್ಲ. ಇದು ಪ್ರಾಪ್ತಿ ಮಾಡಿಸುವ ನಶೆಯಾಗಿದೆ, ಅದು ಪ್ರಾಪ್ತಿಗಳನ್ನು ಕಳೆಯುವಂತಹ ನಶೆಯಾಗಿದೆ, ಆದ್ದರಿಂದ ಸದಾ ಏನು ನೆನಪಿರುತ್ತದೆ? ಒಬ್ಬ ತಂದೆಯ ಹೊರತು ಮತ್ತ್ಯಾರೂಇಲ್ಲ. ಇನ್ನೊಬ್ಬರು-ಮತ್ತೊಬ್ಬರು ಬಂದರೆ ಕಿರಿ ಕಿರಿಯುಂಟಾಗುತ್ತದೆ, ಮತ್ತು ಒಬ್ಬ ಬಾಬಾರವರಿದ್ದರೆ ಏಕರಸ ಸ್ಥಿತಿಯಿರುತ್ತದೆ. ಒಬ್ಬರ ಪ್ರಾಪ್ತಿಯಲ್ಲಿ ಲವಲೀನರಾಗಿರುವುದು ಬಹಳ ಒಳ್ಳೆಯದೆನಿಸುತ್ತದೆ. ಏಕೆಂದರೆ ಆತ್ಮದ ಸತ್ಯ ಸ್ವರೂಪವೇ ಏಕರಸದಿಂದ ಇರುವುದು.

ಬೀಳ್ಕೊಡುಗೆಯ ಸಮಯದಲ್ಲಿ ಹೊಸ ವರ್ಷದ ಶುಭಾರಂಭದ ಶುಭಾಷಯಗಳು:

ನಾಲ್ಕೂ ಕಡೆಯ ಲವಲೀ ಹಾಗೂ ಲಕ್ಕಿ, ಎಲ್ಲಾ ಮಕ್ಕಳಿಗೂ ವಿಶೇಷವಾಗಿ ಹೊಸ ಒಲವು, ಹೊಸ ಉತ್ಸಾಹದ ಪ್ರತೀ ಗಳಿಗೆಗೂ ಶುಭಾಷಯಗಳು. ಸ್ವಯಂ ತಾವೂ ಸಹ ವಜ್ರವಾಗಿದ್ದೀರಿ ಹಾಗೂ ಜೀವನವೂ ವಜ್ರ ಸಮಾನ ಹಾಗೂ ಡೈಮಂಡ್ ಮಾರ್ನಿಂಗ್, ಈವಿನಿಂಗ್, ಡೈಮಂಡ್ ನೈಟ್ ಸದಾ ಇರಲಿ. ಇದೇ ವಿಧಿಯಿಂದ ಬಹಳ ಬೇಗನೆ ತಮ್ಮ ರಾಜ್ಯ ಸ್ಥಾಪನೆ ಮಾಡುವಿರಿ ಹಾಗೂ ರಾಜ್ಯಾಡಳಿತ ಮಾಡುವಿರಿ. ತಮ್ಮ ರಾಜ್ಯ ಪ್ರಿಯವೆನಿಸುತ್ತದೆಯಲ್ಲವೆ. ಅಂದಮೇಲೆ ಈಗ ಬೇಗ-ಬೇಗನೆ ತಮ್ಮ ರಾಜ್ಯ ತನ್ನಿರಿ ಹಾಗೂ ರಾಜ್ಯಾಡಳಿತ ಮಾಡಿರಿ. ತಮ್ಮ ರಾಜ್ಯವು ಸನ್ಮುಖದಲ್ಲಿ ಕಾಣಿಸುತ್ತಿದೆಯಲ್ಲವೆ. ಹಾಗಾದರೆ ಈಗ ಫರಿಶ್ತೆಯಾಗಿರಿ ಮತ್ತು ದೇವತೆಯಾಗಿರಿ. ನಾಲ್ಕೂ ಕಡೆಯಲ್ಲಿರುವ ಮಕ್ಕಳು ವಿಶೇಷವಾಗಿ ಪದಮಪಟ್ಟು ನೆನಪು-ಪ್ರೀತಿಯನ್ನು ಸ್ವೀಕರಿಸಿರಿ. ವಿದೇಶದವರು, ಭಲೆ ದೇಶದವರು ತಪಸ್ಸಿನ ಒಲವು-ಉತ್ಸಾಹದಲ್ಲಿ ಬಹಳ ಚೆನ್ನಾಗಿದ್ದೀರಿ ಹಾಗೂ ಎಲ್ಲಿ ತಪಸ್ಸಿದೆಯೋ ಅಲ್ಲಿ ಸೇವೆಯಿದ್ದೇ ಇರುತ್ತದೆ. ಸದಾ ಸಫಲತೆಯ ಶುಭಾಷಯಗಳು. ಪ್ರತಿಯೊಬ್ಬರೂ ಇಂತಹ ನವೀನತೆಯನ್ನು ತೋರಿಸಿರಿ, ಅದರಿಂದ ಇಡೀ ವಿಶ್ವವು ತಮ್ಮ ಕಡೆಗೆ ನೋಡಲಿ. ನವೀನತೆಯ ಲೈಟ್ಹೌಸ್ ಆಗಿರಿ. ಒಳ್ಳೆಯದು – ಪ್ರತಿಯೊಬ್ಬರೂ ತಮಗಾಗಿ ನೆನಪು-ಪ್ರೀತಿ ಹಾಗೂ ಶುಭಾಷಯಗಳನ್ನು ಸ್ವೀಕರಿಸಿರಿ.

ವರದಾನ:-

ತಾವು ಬ್ರಾಹ್ಮಣ ಮಕ್ಕಳಿಗಾಗಿ ಪ್ರತಿನಿತ್ಯದ ಮುರುಳಿಯೇ ಶುದ್ಧ ಸಂಕಲ್ಪವಾಗಿದೆ. ಪ್ರತಿನಿತ್ಯವೂ ತಂದೆಯ ಮೂಲಕ ಬೆಳಗ್ಗೆ-ಬೆಳಗ್ಗೆ ಎಷ್ಟು ಶುದ್ಧ ಸಂಕಲ್ಪಗಳು ಸಿಗುತ್ತವೆಯೋ, ಅದರಲ್ಲಿ ಬುದ್ಧಿಯನ್ನು ವ್ಯಸ್ತಗೊಳಿಸಿರಿ ಹಾಗೂ ಸದಾ ತಂದೆಯ ಸಂಗದಲ್ಲಿ ಇರುತ್ತೀರೆಂದರೆ ಹಗುರರಾಗಿದ್ದು ಖುಷಿಯಲ್ಲಿ ನರ್ತನ ಮಾಡುತ್ತಾ ಇರುತ್ತೀರಿ. ಖುಷಿಯಾಗಿರುವ ಸಹಜ ಸಾಧನವಾಗಿದೆ – ಸದಾ ಹಗುರರಾಗಿರಿ. ಶುದ್ಧ ಸಂಕಲ್ಪಗಳು ಹಗುರವಾದುದು ಆಗಿದೆ ಹಾಗೂ ವ್ಯರ್ಥ ಸಂಕಲ್ಪಗಳು ಹೊರೆಯಾಗಿರುವುದು ಆದ್ದರಿಂದ ಸದಾ ಶುದ್ಧ ಸಂಕಲ್ಪಗಳಲ್ಲಿ ವ್ಯಸ್ತರಾಗಿದ್ದು ಹಗುರರಾಗಿರಿ ಹಾಗೂ ಖುಷಿಯ ನರ್ತನ ಮಾಡುತ್ತಾ ಇರುತ್ತೀರೆಂದರೆ ಹೇಳಲಾಗುವುದು – ಅಲೌಕಿಕ ಫರಿಶ್ತಾ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top