22 April 2022 KANNADA Murli Today | Brahma Kumaris

Read and Listen today’s Gyan Murli in Kannada

April 21, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಂದೆಯು ನೀವು ಮಕ್ಕಳಿಂದ ದಾನ ತೆಗೆದುಕೊಳ್ಳಲು ಬಂದಿದ್ದಾರೆ, ನಿಮ್ಮ ಬಳಿಯಿರುವ ಹಳೆಯ ಬೇಡದಿರುವ ವಸ್ತುವನ್ನು ದಾನವಾಗಿ ಕೊಡುತ್ತೀರೆಂದರೆ ಪುಣ್ಯಾತ್ಮರಾಗಿ ಬಿಡುವಿರಿ”

ಪ್ರಶ್ನೆ:: -

ಪುಣ್ಯದ ಪ್ರಪಂಚಕ್ಕೆ ಹೋಗುವಂತಹ ಮಕ್ಕಳ ಪ್ರತಿ ತಂದೆಯ ಶ್ರೀಮತವೇನಿದೆ?

ಉತ್ತರ:-

ಮಧುರ ಮಕ್ಕಳೇ – ಪುಣ್ಯದ ಪ್ರಪಂಚಕ್ಕೆ ಹೋಗಬೇಕೆಂದರೆ ಎಲ್ಲದರೊಂದಿಗಿನ ಮಮತ್ವವನ್ನು ಸಮಾಪ್ತಿ ಮಾಡಬೇಕು. ಪಂಚ ವಿಕಾರಗಳನ್ನು ಬಿಡಬೇಕಾಗಿದೆ. ಈ ಅಂತಿಮ ಜನ್ಮದಲ್ಲಿ ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳಿ. ಪವಿತ್ರರಾಗುತ್ತೀರೆಂದರೆ ಪುಣ್ಯಾತ್ಮರಾಗಿ ಪುಣ್ಯದ ಪ್ರಪಂಚಕ್ಕೆ ಹೋಗುತ್ತೀರಿ. ಜ್ಞಾನ-ಯೋಗವನ್ನು ಧಾರಣೆ ಮಾಡಿ ತಮ್ಮ ದೈವೀ ನಡುವಳಿಕೆಯನ್ನಾಗಿ ಮಾಡಿಕೊಳ್ಳಿ. ತಂದೆಯ ಜೊತೆ ಸತ್ಯ ವ್ಯಾಪಾರವನ್ನು ಮಾಡಿ. ನಿಮ್ಮಿಂದ ತಂದೆಯು ಏನನ್ನು ತೆಗೆದುಕೊಳ್ಳುವುದಿಲ್ಲ, ಕೇವಲ ಮಮತ್ವವನ್ನು ಸಮಾಪ್ತಿ ಮಾಡುವ ಯುಕ್ತಿಯನ್ನು ತಿಳಿಸುತ್ತಾರೆ. ಬುದ್ಧಿಯಿಂದ ಎಲ್ಲವನ್ನು ತಂದೆಗೆ ಅರ್ಪಣೆ ಮಾಡಿ ಬಿಡಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಈ ಪಾಪದ ಪ್ರಪಂಚದಿಂದ..

ಓಂ ಶಾಂತಿ. ಹೇ! ಪತಿತ ಪಾವನ ಬನ್ನಿ, ಪಾವನ ಪ್ರಪಂಚ ಅಥವಾ ಪುಣ್ಯದ ಪ್ರಪಂಚದಲ್ಲಿ ನಮ್ಮನ್ನು ಕರೆದುಕೊಂಡು ಹೋಗಿ ಎಂದು ಪ್ರಪಂಚದ ಮನುಷ್ಯರು ಅಥವಾ ರಾವಣ ರಾಜ್ಯದ ಮನುಷ್ಯರು ಕರೆಯುತ್ತಾರೆ. ಹಾಡನ್ನು ತಯಾರು ಮಾಡುವವರೂ ಸಹ ಈ ಮಾತುಗಳನ್ನು ತಿಳಿದುಕೊಂಡಿಲ್ಲ. ರಾವಣ ರಾಜ್ಯದಿಂದ ರಾಮ ರಾಜ್ಯದಲ್ಲಿ ಕರೆದುಕೊಂಡು ಹೋಗಿ ಎಂದು ಕರೆಯುತ್ತಾರೆ ಆದರೆ ಯಾರೂ ಸಹ ತಮ್ಮನ್ನು ಪತಿತರೆಂದು ತಿಳಿದುಕೊಂಡಿಲ್ಲ. ತಂದೆಯು ತನ್ನ ಮಕ್ಕಳ ಸಮ್ಮುಖದಲ್ಲಿ ಕುಳಿತಿದ್ದಾರೆ. ರಾಮ ರಾಜ್ಯದಲ್ಲಿ ಕರೆದೊಯ್ಯಲು ಹಾಗೂ ಶ್ರೇಷ್ಠರಾಗಲು ಶ್ರೀಮತವನ್ನು ಕೊಡುತ್ತಿದ್ದಾರೆ. ಭಗವಾನುವಾಚ – ರಾಮ ಭಗವಾನುವಾಚವಲ್ಲ. ಸೀತೆಯ ಪತಿಗೆ ಭಗವಂತನೆಂದು ಹೇಳುವುದಿಲ್ಲ. ಭಗವಂತ ನಿರಾಕಾರನಾಗಿದ್ದಾರೆ. ನಿರಾಕಾರಿ, ಆಕಾರಿ, ಸಾಕಾರಿ ಹೀಗೆ ಮೂರು ಪ್ರಪಂಚಗಳಿವೆ. ನಿರಾಕಾರ ಪರಮಾತ್ಮ ನಿರಾಕಾರಿ ಮಕ್ಕಳ (ಆತ್ಮಗಳ) ಜೊತೆಯಲ್ಲಿ ನಿರಾಕಾರಿ ಪ್ರಪಂಚದಲ್ಲಿರುತ್ತಾರೆ. ತಂದೆಯೂ ಸಹ ಈಗ ಸ್ವರ್ಗದ ರಾಜ್ಯಭಾಗ್ಯವನ್ನು ಕೊಟ್ಟು ನಿಮ್ಮನ್ನು ಪುಣ್ಯಾತ್ಮರನ್ನಾಗಿ ಮಾಡುವುದಕ್ಕಾಗಿ ಬಂದಿದ್ದಾರೆ. ರಾಮ ರಾಜ್ಯವೆಂದರೆ ಹಗಲಾಗಿದೆ. ರಾವಣ ರಾಜ್ಯವೆಂದರೆ ರಾತ್ರಿಯಾಗಿದೆ. ಅಜ್ಞಾನ ಅಥವಾ ಭಕ್ತಿಯ ಮಾತುಗಳನ್ನು ಮತ್ತ್ಯಾರೂ ತಿಳಿದುಕೊಂಡಿಲ್ಲ. ನಿಮ್ಮಲ್ಲಿಯೂ ಸಹ ಈ ಮಾತುಗಳನ್ನು ಕೆಲವರಷ್ಟೇ ತಿಳಿದುಕೊಳ್ಳುತ್ತಾರೆ. ಈ ತಿಳುವಳಿಕೆಗಾಗಿ ಪವಿತ್ರ ಬುದ್ಧಿಯಿರಬೇಕಾಗಿದೆ. ಮೂಲ ಮಾತು ನೆನಪು ಮಾಡುವುದಾಗಿದೆ. ಇಷ್ಟವಾದ ವಸ್ತು ಸದಾ ನೆನಪಿರುತ್ತದೆ. ನೀವು ಯಾವ ಪುಣ್ಯವನ್ನು ಮಾಡಬೇಕು? ನಿಮ್ಮ ಬಳಿ ಯಾವ ಬೇಡವಾದ ವಸ್ತುವಿದೆ ಅದನ್ನು ತಂದೆಗೆ ಅರ್ಪಣೆ ಮಾಡಿ. ಮನುಷ್ಯರು ಶರೀರ ಬಿಟ್ಟಾಗ ಅವರ ಹಾಸಿಗೆ, ಬಟ್ಟೆ ಮೊದಲಾದವುಗಳನ್ನು ಕರ್ಮ ಮಾಡುವವರಿಗೆ ಕೊಡುತ್ತಾರೆ. ಅವರು ಬೇರೆ ಪಂಗಡದ ಬ್ರಾಹ್ಮಣರಾಗಿರುತ್ತಾರೆ. ಈಗ ತಂದೆಯು ನಿಮ್ಮಿಂದ ದಾನ ತೆಗೆದುಕೊಳ್ಳಲು ಬಂದಿದ್ದಾರೆ. ಈ ಹಳೆಯ ಪ್ರಪಂಚ ಹಾಗೂ ಹಳೆಯ ಶರೀರ ಎಲ್ಲವೂ ನಿಸ್ಸಾರವಾಗಿದೆ. ಇವುಗಳನ್ನು ನನಗೆ ಕೊಡಿ ಮತ್ತು ಮಮತ್ವವನ್ನು ಸಮಾಪ್ತಿ ಮಾಡಿ. ನಿಮ್ಮ ಬಳಿ ಒಂದುವೇಳೆ 10-20 ಕೋಟಿ ಇರಬಹುದು, ಆದರೆ ಇದರಿಂದ ಬುದ್ಧಿಯನು ದೂರ ಮಾಡಿ ಎಂದು ತಂದೆಯು ತಿಳಿಸುತ್ತಾರೆ. ಇದಕ್ಕೆ ಬದಲಾಗಿಗಿ ನಿಮಗೆ ಎಲ್ಲವೂ ಹೊಸ ಪ್ರಪಂಚದಲ್ಲಿ ಸಿಗುತ್ತದೆ. ಇದು ಎಷ್ಟು ಸಸ್ತಾ ವ್ಯಾಪಾರವಾಗಿದೆ! ನಾನು ಯಾರಲ್ಲಿ ಪ್ರವೇಶ ಮಾಡಿದ್ದೇನೆ ಅವರೂ ಸಹ ವ್ಯಾಪಾರ ಮಾಡಿದರು, ಈಗ ನೋಡಿ….! ಅದಕ್ಕೆ ಬದಲಾಗಿ ಎಂತಹ ರಾಜ್ಯಭಾಗ್ಯ ಸಿಗುತ್ತದೆ! ಕುಮಾರಿಯರಂತು ಕೊಡುವ ಅವಶ್ಯಕತೆಯೇ ಇಲ್ಲ. ಆಸ್ತಿಯು ಮಕ್ಕಳಿಗೆ ಸಿಗುತ್ತದೆಯೆಂದರೆ ಅವರಿಗೆ ಮಾಲೀಕತ್ವದ ನಶೆಯಿರುತ್ತದೆ. ವರ್ತಮಾನದ ಕಾಲದಲ್ಲಿ ಸ್ತ್ರೀಯನ್ನು ಆಫ್ಪಾರ್ಟ್ನರ್ (ಅರ್ಧಾಂಗಿ) ಮಾಡಿಕೊಳ್ಳದೆ ಎಲ್ಲವನ್ನು ಮಕ್ಕಳಿಗೆ ಕೊಡುತ್ತಾರೆ. ಆ ಮನೆಯ ಪುರುಷನು ಒಂದುವೇಳೆ ಸತ್ತು ಹೋದರೆ ಅಂತಹ ಸ್ತ್ರೀಯನ್ನು ಯಾರೂ ಕೇಳುವವರೇ ಇರುವುದಿಲ್ಲ, ಆದರೆ ಇಲ್ಲಿ ನೀವು ಮಕ್ಕಳು ಸಂಪೂರ್ಣ ಆಸ್ತಿಯನ್ನು ತೆಗೆದುಕೊಳ್ಳುತ್ತೀರಿ. ಇಲ್ಲಿ ಸ್ತ್ರೀ-ಪುರುಷರ ಪ್ರಶ್ನೆಯೇ ಇರುವುದಿಲ್ಲ, ಎಲ್ಲರೂ ಆಸ್ತಿಗೆ ಅಧಿಕಾರಿಯಾಗಿದ್ದಾರೆ. ಮಾತೆಯರು ಹಾಗೂ ಕನ್ಯೆಯರಿಗಂತು ಇನ್ನೂ ಹೆಚ್ಚಿನ ಅಧಿಕಾರವು ಅಧಿಕಾರವು ಸಿಗುತ್ತದೆ ಏಕೆಂದರೆ ಕನ್ಯೆಯರಿಗೆ ಲೌಕಿಕ ತಂದೆಯ ಆಸ್ತಿಯಲ್ಲಿ ಮಮತ್ವವಿರುವುದಿಲ್ಲ. ವಾಸ್ತವದಲ್ಲಿ ನೀವೆಲ್ಲರೂ ಕುಮಾರ-ಕುಮರಿಯರಾಗಿದ್ದೀರಿ. ನೀವು ತಂದೆಯಿಂದ ಎಷ್ಟೊಂದು ಆಸ್ತಿಯನ್ನು ಪಡೆದುಕೊಂಡಿದ್ದೀರಿ. ಇದರ ಬಗ್ಗೆ ಒಂದು ಕಥೆಯೂ ಇದೆ- ರಾಜನು ತನ್ನ ಎಲ್ಲಾ ಮಕ್ಕಳೊಂದಿಗೆ ಕೇಳಿದರು – ನೀವು ಯಾರ ಆಸ್ತಿಯನ್ನು ಅನುಭವಿಸುತ್ತಿದ್ದೀರಿ? ಆಗ ಅವರಲ್ಲಿ ಒಬ್ಬರು ನನ್ನ ಭಾಗ್ಯದ ಖಾತೆಯಲ್ಲಿ ಅನುಭವಿಸುತ್ತಿದ್ದೇನೆ ಎಂದು ಹೇಳಿದಾಗ, ಆಗ ರಾಜನು ಮಗಳನ್ನು ಮನೆಯಿಂದ ಹೊರಗೆ ಕಳುಹಿಸಿ ಬಿಟ್ಟನು. ಆ ಮಗಳು ತನ್ನ ತಂದೆಗಿಂತಲೂ ಶ್ರೀಮಂತಳಾಗಿ ತನ್ನ ತಂದೆಗೆ ಆಮಂತ್ರಣ ಕೊಟ್ಟಳು – ನಾನೀಗ ಯಾರ ಭಾಗ್ಯವನ್ನು ತಿನ್ನುತ್ತಿದ್ದೇನೆ, ನೋಡಿ….! ಎಂದು ಕೇಳಿದಳು. ಹಾಗೆಯೇ ತಂದೆಯೂ ಸಹ ಮಕ್ಕಳೇ ನೀವೆಲ್ಲರೂ ತಮ್ಮ ಅದೃಷ್ಟವನ್ನು ರೂಪಿಸಿಕೊಳ್ಳುತ್ತೀರಿ ಎಂದು ಹೇಳುತ್ತಾರೆ.

ದೆಹಲಿಯಲ್ಲಿ ಒಂದು ಮೈದಾನವಿದೆ, ಅದಕ್ಕೆ ರಾಮಲೀಲಾ ಮೈದಾನವೆಂದು ಹೆಸರಿಟ್ಟಿದ್ದಾರೆ. ವಾಸ್ತವದಲ್ಲಿ ರಾವಣ ಲೀಲಾ ಮೈದಾನವೆಂದು ಹೆಸರಿಡಬೇಕಾಗಿದೆ ಏಕೆಂದರೆ ಈ ಸಮಯದಲ್ಲಿ ಇಡೀವಿಶ್ವದಲ್ಲಿ ರಾವಣನ ಲೀಲೆ ನಡೆಯುತ್ತಿದೆ. ಮಕ್ಕಳು ರಾಮ ಲೀಲಾ ಮೈದಾನವನ್ನು ತೆಗೆದುಕೊಂಡು ಅಲ್ಲಿ ಚಿತ್ರಗಳನ್ನು ಹಾಕಿ ಸೇವೆ ಮಾಡಬೇಕಾಗಿದೆ. ಒಂದು ಕಡೆ ರಾಮನ ಚಿತ್ರವಿರಲಿ, ಹಾಗೂ ಕೆಳಗೆ ದೊಡ್ಡದಾದ ರಾವಣನ ಚಿತ್ರವಿರಲಿ. ದೊಡ್ಡದಾದ ಚಕ್ರವನ್ನು ತಯಾರು ಮಾಡಬೇಕು. ಮಧ್ಯದಲ್ಲಿ ಇದು ರಾಮ ರಾಜ್ಯ, ಇದು ರಾವಣ ರಾಜ್ಯವೆಂದು ಬರೆದಿರಬೇಕು. ಇದರಿಂದ ಮನುಷ್ಯರು ತಿಳಿದುಕೊಳ್ಳಬೇಕು. ದೇವತೆಗಳ ಮಹಿಮೆಯನ್ನು ನೋಡಿ-ಸರ್ವಗುಣ ಸಂಪನ್ನ….! ಎಂದು ಮಹಿಮೆ ಮಾಡುತ್ತಾರೆ. ಅರ್ಧಕಲ್ಪ ಕಲಿಯುಗೀ ಭ್ರಷ್ಟಾಚಾರಿ ರಾವಣ ರಾಜ್ಯವಿದೆ. ಇದರಲ್ಲಿ ಎಲ್ಲವೂ ಬಂದು ಬಿಡುತ್ತದೆ. ಈಗ ರಾವಣ ರಾಜ್ಯವು ಅಂತ್ಯವಾಗಿ ರಾಜ್ಯವನ್ನು ರಾಮನೇ ನಿರ್ಮಿಸುತ್ತಾನೆ. ಈ ಸಮಯದಲ್ಲಿ ಯಾವ ರಾಮ ಲೀಲೆಯೂ ಇಲ್ಲ. ಇಡೀ ಪ್ರಪಂಚದಲ್ಲಿ ರಾವಣನ ಲೀಲೆಯಿದೆ. ರಾಮಲೀಲೆ ಸತ್ಯಯುಗದಲ್ಲಿರುತ್ತದೆ ಆದರೆ ಎಲ್ಲರೂ ತಮ್ಮನ್ನು ಬುದ್ಧಿವಂತರೆಂದು ತಿಳಿದುಕೊಂಡಿದ್ದಾರೆ ಆದ್ದರಿಂದ ಶ್ರೀ, ಶ್ರೀ ಎಂಬ ಬಿರುದುಗಳನ್ನು ಇಟ್ಟುಕೊಳ್ಳುತ್ತಾರೆ, ಈ ಬಿರುದು ಒಬ್ಬ ಪರಮಪಿತ ಪರಮಾತ್ಮನ ಬಿರುದಾಗಿದೆ. ಅವರ ಮೂಲಕ ಶ್ರೀ ಲಕ್ಷ್ಮೀ-ನಾರಾಯಣ ರಾಜ್ಯ ತೆಗೆದುಕೊಳ್ಳುತ್ತಿದ್ದೇವೆ. ಈಗ ತಂದೆಯು ನಿಮ್ಮನ್ನು ಭಕ್ತಿ ಎಂಬ ಅಂಧಕಾರದಿಂದ ಬಿಡಿಸಿ ಪ್ರಕಾಶತೆಯಲ್ಲಿ ಕರೆದೊಯ್ಯಲು ಬಂದಿದ್ದಾರೆ. ಯಾರಲ್ಲಿ ಜ್ಞಾನ-ಯೋಗವಿರುತ್ತದೆ, ಅವರ ಚಲನೆಯೂ ಸಹ ದೇವತೆಯಂತೆ ಇರುತ್ತದೆ. ಆಸುರಿ ನಡವಳಿಕೆವುಳ್ಳವರು ಯಾರ ಕಲ್ಯಾಣವನ್ನೂ ಮಾಡಲು ಸಾಧ್ಯವಿಲ್ಲ. ಯಾರಲ್ಲಿ ಆಸುರಿ, ಅವಗುಣವಿರುತ್ತದೆ ಅಥವಾ ದೈವೀ ಗುಣಗಳಿವೆ ಎಂದು ಕೂಡಲೇ ತಿಳಿದು ಬರುತ್ತದೆ. ಇದುವರೆಗೂ ಯಾರೂ ಸಂಪೂರ್ಣವಾಗಿಲ್ಲ. ಈಗ ಸಂಪೂರ್ಣರಾಗುತ್ತೀರೆಂದಾಗ ತಂದೆಯು ನಿಮ್ಮಿಂದ ಏನನ್ನೂ ತೆಗೆದುಕೊಳ್ಳುವುದಿಲ್ಲ. ಅವರಂತೂ ದಾತನಾಗಿದ್ದಾರೆ. ಒಂದುವೇಳೆ ನಿಮ್ಮಿಂದ ಏನಾದರೂ ತೆಗೆದುಕೊಳ್ಳುತ್ತಾರೆಂದರೆ ನಿಮ್ಮ ಸೇವೆಯಲ್ಲಿಯೇ ಉಪಯೋಗಿಸುತ್ತಾರೆ. ತಂದೆ ಇವರನ್ನೂ (ಬ್ರಹ್ಮಾ ತಂದೆ) ಸಹ ಸಮರ್ಪಣೆ ಮಾಡಿಸಿದರು ಏಕೆಂದರೆ ಭಟ್ಟಿ ನಡೆಯಬೇಕಿತ್ತು, ಮಕ್ಕಳ ಪಾಲನೆಯನ್ನು ಮಾಡಬೇಕೆಂದರೆ ಹಣವಿಲ್ಲದೆ ಇಷ್ಟೊಂದು ಮಕ್ಕಳ ಪಾಲನೆ ಹೇಗಾಗುತ್ತದೆ! ಆದ್ದರಿಂದ ಮೊದಲು ತಂದೆಯು ಅರ್ಪಣೆ ಮಾಡಿದರು ನಂತರ ಬಂದವರಿಂದಲೂ ಸಹ ಸಮರ್ಪಣೆ ಮಾಡಿಸಿದರು ಆದರೆ ಎಲ್ಲರ ಸ್ಥಿತಿ ಏಕರಸವಿಲ್ಲದ ಕಾರಣ ಬಹಳ ಮಕ್ಕಳು ಹೊರಟು ಹೋದರು (ಬೆಕ್ಕಿನ ಮರಿಗಳ ಕಥೆ) ನಂಬರ್ವಾರ್ ಪುರುಷಾರ್ಥದನುಸಾರ ಎಲ್ಲರನ್ನು ಪರಿಪಕ್ವವಾಗಿ ತಯಾರು ಮಾಡಿದರು. ತಂದೆಯಂತು ಪುಣ್ಯದ ಪ್ರಪಂಚದಲ್ಲಿ ಕರೆದುಕೊಂಡು ಹೋಗುತ್ತಾರೆ. ಅದಕ್ಕಾಗಿ ಕೇವಲ ಪಂಚ ವಿಕಾರಗಳನ್ನು ಬಿಡುವುದಕ್ಕೆ ಹೇಳುತ್ತಾರೆ. ನಾನು ನಿಮ್ಮನ್ನು ರಾಜಕುಮಾರ-ರಾಜಕುಮಾರಿಯನ್ನಾಗಿ ಮಾಡುತ್ತೇನೆ. ಬ್ರಹ್ಮನ ಸಾಕ್ಷಾತ್ಕಾರವು ಮನೆಯಲ್ಲಿ ಕುಳಿತಿರುವಂತಹ ಅನೇಕರಿಗೆ ಆಗಿ ಬಿಡುತ್ತದೆ. ಬಾಬಾ ನಾವು ನಿಮ್ಮ ಮಕ್ಕಳಾಗಿ ಬಿಟ್ಟಿದ್ದೇವೆ, ನಮ್ಮದೆಲ್ಲವೂ ನಿಮ್ಮದಾಗಿದೆ ಎಂದು ಬರೆದು ಕಳಿಸುತ್ತಿದ್ದರು ಆದರೆ ತಂದೆಯು ತಮ್ಮಿಂದ ಏನನ್ನೂ ತೆಗೆದುಕೊಳ್ಳುವುದಿಲ್ಲ. ಎಲ್ಲವನ್ನು ನಿಮ್ಮ ಬಳಿಯೇ ಇಟ್ಟುಕೊಳ್ಳಿ ಎಂದು ತಂದೆಯು ಹೇಳುತ್ತಾರೆ. ಈ ಮನೆ ಮೊದಲಾದವುಗಳನ್ನು ನಿರ್ಮಾಣ ಮಾಡುತ್ತೀರಿ ಕೆಲವರು ಈ ಹಣ ಎಲ್ಲಿಂದ ಬರುತ್ತದೆ ಎಂದು ಕೇಳುತ್ತಾರೆ. ಅರೇ..! ತಂದೆಗೆ ಎಷ್ಟೊಂದು ಮಕ್ಕಳಿದ್ದಾರೆ, ಪ್ರಜಾಪಿತ ಬ್ರಹ್ಮನ ಹೆಸರನ್ನು ನೀವು ಕೇಳಿರಬೇಕಲ್ಲವೇ! ಕೇವಲ ಮಮತ್ವವನ್ನು ಸಮಾಪ್ತಿ ಮಾಡಿ, ಮನೆಗೆ ಹಿಂದಿರುಗಿ ಹೋಗಬೇಕಾಗಿದೆ, ತಂದೆಯನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ನಮಗೆ ಭಗವಂತನೇ ಓದಿಸುತ್ತಿದ್ದಾರೆಂಬ ಖುಷಿಯ ನಶೆಯೇರಿರಬೇಕು. ಲಕ್ಷ್ಮೀ-ನಾರಾಯಣರಿಗೆ ಭಗವಂತನೆಂದು ಹೇಳುವುದಿಲ್ಲ, ಅವರನ್ನು ದೇವಿ-ದೇವತಾ ಎಂದು ಹೇಳಲಾಗುತ್ತದೆ. ಭಗವಂತನ ಬಳಿ ದೇವಿ-ದೇವತೆಗಳು (ಭಗವತಿ) ಇರುವುದಿಲ್ಲ. ಇದು ಯುಕ್ತಿಯ ಮಾತಾಗಿದೆ. ತಂದೆಯ ಸಮ್ಮುಖದಲ್ಲಿ ಬರುವ ತನಕ ಈ ಮಾತುಗಳನ್ನು ತಿಳುವಳಿಕೆಯಲ್ಲಿ ಬರುವುದಿಲ್ಲ. ತ್ವಮೇವ ಮಾತಾಶ್ಚ ಪಿತಾ….. ಎಂದು ಹಾಡುತ್ತಾರೆ. ಜ್ಞಾನವಿಲ್ಲದ ಕಾರಣ ಲಕ್ಷ್ಮೀ-ನಾರಾಯಣ, ಗಣೇಶ, ಹನುಮಂತ ಮೊದಲಾದವರ ಮುಂದೆ ಹೋಗಿ ಈ ಮಹಿಮೆಯನ್ನು ಮಾಡುತ್ತಾರೆ. ಅರೇ…! ಅವರು ಸಾಕಾರಿಗಳಾಗಿದ್ದಾರೆ. ಅವರಿಗೆ ಕೇವಲ ಅವರ ಮಕ್ಕಳು ಮಾತಾ-ಪಿತ ಎಂದು ಹೇಳುವರು. ನೀವು ಅವರ ಮಕ್ಕಳಾಗಿದ್ದೀರಾ? ನೀವು ರಾವಣ ರಾಜ್ಯದವರಾಗಿದ್ದೀರಿ. ಈ ಬ್ರಹ್ಮಾ ಸಹ ತಾಯಿಯಾಗಿದ್ದಾರೆ. ಇವರ ಮೂಲಕ ಶಿವ ತಂದೆಯು ನೀವು ನಮ್ಮ ಮಕ್ಕಳೆಂದು ಹೇಳುತ್ತಾರೆ ಆದರೆ ಮಾತೆಯರನ್ನು, ಕನ್ಯೆಯರ ಪಾಲನೆ ಮಾಡುವುದಕ್ಕಾಗಿ ತಾಯಿ ಬೇಕಾಗುತ್ತದೆ, ಇದಕ್ಕಾಗಿ ದತ್ತು ಮಗಳು ಬಿ.ಕೆ. ಸರಸ್ವತಿಯಾಗಿದ್ದಾರೆ. ಇವು ಎಷ್ಟೊಂದು ರಹಸ್ಯವಾದ ಮಾತುಗಳಾಗಿವೆ. ತಂದೆಯು ಕೊಡುವ ಜ್ಞಾನವು ಯಾವುದೇ ಶಾಸ್ತ್ರಗಳಲ್ಲಿ ಇಲ್ಲ. ಭಾರತದ ಮುಖ್ಯ ಶಾಸ್ತ್ರವಾಗಿದೆ – ಗೀತೆ. ಗೀತೆಯಲ್ಲಿ ಜ್ಞಾನದ ವಿದ್ಯೆಯ ಮಾತುಗಳಿವೆ. ಗೀತೆಯಲ್ಲಿ ಚಾರಿತ್ರ್ಯದ ಮಾತಿಲ್ಲ. ಜ್ಞಾನದಿಂದ ಪದವಿ ಸಿಗುತ್ತದೆ.

ತಂದೆಯು ಜಾದೂಗಾರನಾಗಿದ್ದಾರೆ. ನೀವು ರತ್ನಗಳ ವ್ಯಾಪಾರಿ, ಜಾದೂಗಾರ ಎಂದು ಮಹಿಮೆ ಮಾಡುತ್ತೀರಿ. ಸ್ವರ್ಗಕ್ಕಾಗಿ ನಿಮ್ಮ ಜೋಳಿಗೆ ತುಂಬುತ್ತಿದೆ. ಭಕ್ತಿಮಾರ್ಗದಲ್ಲಿ ಅನೇಕರಿಗೆ ಸಾಕ್ಷಾತ್ಕಾರವಾಗುತ್ತದೆ, ಆದರೆ ಅದರಿಂದ ಯಾವುದೇ ಲಾಭವಿಲ್ಲ. ಓದುತ್ತೀರಿ, ಬರೆಯುತ್ತೀರಿ….. ಸಾಕ್ಷಾತ್ಕಾರದಿಂದ ಯಾರಾದರೂ ಆ ರೀತಿ ಆಗಿದ್ದೀರಾ? ನಾನೇ ಸಾಕ್ಷಾತ್ಕಾರ ಮಾಡಿಸುತ್ತೇನೆ. ಕಲ್ಲಿನಮೂರ್ತಿ ಸಾಕ್ಷಾತ್ಕಾರ ಮಾಡಿಸುತ್ತದೆಯೇ? ನೌಧಾಭಕ್ತಿಯಲ್ಲಿ ಶುದ್ಧ ಭಾವನೆಯನ್ನು ಇಡುತ್ತಾರೆ. ಆ ಭಾವನೆಯ ಫಲವನ್ನು ನಾನು ಕೊಡುತ್ತೇನೆ ಆದರೆ ತಮೋಪ್ರಧಾನರಂತೂ ಆಗಲೇಬೇಕು. ಮೀರಾಳಿಗೆ ಸಾಕ್ಷಾತ್ಕಾರವಾಯಿತು ಆದರೆ ಅವರಲ್ಲಿ ಯಾವುದೇ ರೀತಿಯ ಜ್ಞಾನವಿರಲಿಲ್ಲ. ಮನುಷ್ಯರಂತು ದಿನ-ಪ್ರತಿದಿನ ತಮೋಪ್ರಧಾನವಾಗುತ್ತಾರೆ. ಈಗ ಎಲ್ಲಾ ಮನುಷ್ಯರು ಪತಿತರಾಗಿದ್ದಾರೆ, ಆದ್ದರಿಂದ ನಮ್ಮನ್ನು ಸುಖ-ಶಾಂತಿಯಿರುವ ಸ್ಥಾನಕ್ಕೆ ಕರೆದುಕೊಂಡು ಹೋಗಿ ಎಂದು ಹಾಡುತ್ತಾರೆ.

ಭಾರತವಾಸಿಗಳಾದ ನಿಮಗೆ ಸತ್ಯಯುಗದಲ್ಲಿ ಬಹಳ ಸುಖವಿತ್ತು. ಸತ್ಯಯುಗದ ಹೆಸರು ಪ್ರಖ್ಯಾತವಾಗಿದೆಯಲ್ಲವೇ! ಸ್ವರ್ಗವು ಭಾರತದಲ್ಲಿಯೇ ಇತ್ತು ಆದರೆ ಅದನ್ನು ಯಾರೂ ತಿಳಿದುಕೊಂಡಿಲ್ಲ. ಈ ಎಲ್ಲಾ ಮಾತುಗಳನ್ನು ಕೇವಲ ತಂದೆಯು ತಿಳಿಸುತ್ತಾರೆ. ಈಗ ನೀವು ಶ್ರವಣ ಕುಮಾರ ಹಾಗೂ ಕುಮಾರಿಯರಾಗಿದ್ದೀರಿ. ನೀವು ಎಲ್ಲರನ್ನು ಜ್ಞಾನವೆಂಬ ಡೋಲಿಯಲ್ಲಿ ಕುಳ್ಳರಿಸುತ್ತೀರಿ. ನೀವು ಮಿತ್ರ ಸಂಬಂಧಿಗಳಿಗೂ ಜ್ಞಾನ ಕೊಟ್ಟು ಮೇಲೆತ್ತಬೇಕು. ತಂದೆಯ ಬಳಿ ಸ್ತ್ರೀ-ಪುರುಷರಿಬ್ಬರೂ ಬರುತ್ತಾರೆ. ಮೊದಲು ಲೌಕಿಕ ಬ್ರಾಹ್ಮಣರಿಂದ ಕಂಕಣವನ್ನು ಕಟ್ಟಿಸುತ್ತಿದ್ದರು. ಈಗ ನೀವು ಆತ್ಮಿಕ ಬ್ರಾಹ್ಮಣರು ಕಾಮ ಚಿತೆಯ ಕಂಕಣದಿಂದ ಮುಕ್ತ ಮಾಡುತ್ತೀರಿ. ತಂದೆಯ ಬಳಿ ಬರುತ್ತೀರೆಂದರೆ ತಂದೆಯು ಕೇಳುತ್ತಾರೆ – ನೀವು ಸ್ವರ್ಗಕ್ಕೆ ನಡೆಯುತ್ತೀರಾ? ಕೆಲವರು ನಮಗೆ ಇದೇ ಸ್ವರ್ಗವಾಗಿದೆ ಎಂದು ಹೇಳುತ್ತಾರೆ. ಅರೇ..! ಇದು ಅಲ್ಪಕಾಲದ ಸ್ವರ್ಗವಾಗಿದೆ. ನಾನು ನಿಮಗೆ 21 ಜನ್ಮಗಳಿಗಾಗಿ ಸ್ವರ್ಗವನ್ನು ಕೊಡುತ್ತೇನೆ ಆದರೆ ಮೊದಲು ಪವಿತ್ರವಾಗಿರಬೇಕಾಗುತ್ತದೆ, ಈ ಮಾತಿನಲ್ಲಿ ಬಲಹೀನರಾಗುತ್ತಾರೆ. ಅರೇ! ಬೇಹದ್ದಿನ ತಂದೆಯು ತಿಳಿಸುತ್ತಾರೆ – ಈ ಅಂತಿಮ ಜನ್ಮದಲ್ಲಿ ಜ್ಞಾನ ಚಿತೆಯ ಮೇಲೆ ಕುಳಿತುಕೊಳ್ಳಿ. ಬಾಬಾ ನೋಡುತ್ತಾರೆ, ಸಹೋದರಿಯರು ತಕ್ಷಣ ಮುಂದುವರೆಯಲು ಪ್ರಾರಂಭಿಸುತ್ತಾರೆ. ಮತ್ತೆ ಕೆಲವರು ಪತಿ-ಪರಮೇಶ್ವರರನ್ನು ಹೇಗೆ ಬೇಸರ ಮಾಡಲಿ ಎಂದು ಹೇಳುತ್ತಾರೆ.

ತಂದೆಗೆ ಮಕ್ಕಳಾದ ನಂತರ ಪ್ರತೀ ಹೆಜ್ಜೆಯಲ್ಲಿ ಶ್ರೀಮತದಂತೆ ನಡೆಯಬೇಕು. ಸ್ವರ್ಗದ ಮಾಲೀಕರನ್ನಾಗಿ ಮಾಡಲು ಈಗ ತಂದೆಯು ಬಂದಿದ್ದಾರೆ. ಪವಿತ್ರರಾಗುವುದು ಒಳ್ಳೆಯದಲ್ಲವೇ! ಆದರೆ ಕುಲಕಳಂಕಿತರಾಗಬಾರದು ಎಂದು ತಂದೆಯು ಹೇಳುತ್ತಾರಲ್ಲವೇ! ಲೌಕಿಕ ತಂದೆಯಂತೂ ಹೊಡೆಯುತ್ತಾರೆ. ತಾಯಿ ಮಧುರವಾಗಿರುತ್ತಾರೆ. ಬಹಳ ಮಧುರ ದಯಾಹೃದಯಿಗಳಾಗಬೇಕು. ಮಕ್ಕಳೇ, ನೀವು ನನಗೆ ಬಹಳ ನಿಂದನೆ ಮಾಡಿದ್ದೀರೆಂದು ತಂದೆಯು ತಿಳಿಸುತ್ತಾರೆ. ಈಗ ನಾನು ಅಪಕಾರಿಗಳಿಗೂ ಸಹ ಉಪಕಾರ ಮಾಡುತ್ತೇನೆ. ನೀವು ರಾವಣನ ಮತದಂತೆ ಈ ಸ್ಥಿತಿಯನ್ನು ತಲುಪಿದ್ದೀರೆಂದು ನನಗೆ ಗೊತ್ತಿದೆ. ಯಾವ ಸೆಕೆಂಡ್ ಕಳೆದು ಹೋಯಿತು, ಅದು ನಾಟಕದ ಅನುಸಾರ ಕಳೆದು ಹೋಯಿತು ಆದರೆ ಮುಂದೆ ನಮ್ಮ ಖಾತೆಯು ಹಾಳಾಗಬಾರದೆಂದು ಎಚ್ಚರಿಕೆಯಿರಬೇಕು. ಪ್ರತಿಯೊಬ್ಬರೂ ತಮ್ಮ ಪ್ರಜೆಗಳನ್ನು, ಹಕ್ಕುಧಾರರನ್ನು ತಯಾರು ಮಾಡಬೇಕು. ಮುರಳಿಯನ್ನು ಯಾರೂ ತಪ್ಪಿಸಬಾರದು. ಯಾವುದೇ ಪಾಯಿಂಟ್ ಸಹ ತಪ್ಪಿ ಹೋಗಬಾರದು. ಒಳ್ಳೊಳ್ಳೆಯ ಜ್ಞಾನರತ್ನಗಳು ಕೇಳುವುದೇ ಇಲ್ಲವೆಂದರೆ ಹೇಗೆ ಧಾರಣೆ ಮಾಡುವಿರಿ? ರೆಗ್ಯುಲರ್ ಸ್ಟುಡೆಂಟ್ ಮುರಳಿಯನ್ನೆಂದೂ ತಪ್ಪಿಸುವುದಿಲ್ಲ. ಪ್ರತಿನಿತ್ಯ ವಾಣಿ ಓದಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಮ್ಮ ಖಾತೆಯನ್ನು ನಷ್ಟ ಮಾಡಿಕೊಳ್ಳಬಾರದು. ಇದಕ್ಕಾಗಿ ಬಹಳ ಗಮನವಿರಬೇಕು. ಎಂದೂ ಸಹ ಕುಲಕಳಂಕಿತರಾಗಬಾರದು. ಪ್ರತಿನಿತ್ಯ ವಿದ್ಯೆಯನ್ನು ಓದಬೇಕು, ತಪ್ಪಿಸಬಾರದು.

2. ಶ್ರವಣ ಕುಮಾರ-ಕುಮಾರಿಯಾಗಿ ಎಲ್ಲರನ್ನು ಜ್ಞಾನದ ಡೋಲಿಯಲ್ಲಿ ಕುಳ್ಳರಿಸಬೇಕು. ಮಿತ್ರ-ಸಂಬಂಧಿಗಳಿಗೂ ಜ್ಞಾನ ಕೊಟ್ಟು ಅವರ ಕಲ್ಯಾಣವನ್ನು ಮಾಡಬೇಕು

ವರದಾನ:-

ಅಮೃತವೇಳೆ ಹಾಗೂ ಇಡೀ ದಿನದ ಮಧ್ಯ-ಮಧ್ಯದಲ್ಲಿ ತಮ್ಮ ಕರ್ತವ್ಯದ ಸ್ಮೃತಿ ಮಾಡಿಕೊಳ್ಳಿರಿ – ನಾನು ರಾಜಯೋಗಿ ಆಗಿದ್ದೇನೆ. ರಾಜಯೋಗಿ ಸ್ಥಾನದಲ್ಲಿ ಸ್ಥಿತರಾಗಿ ಬಿಡಿ. ರಾಜಯೋಗಿ ಎಂದರೆ ರಾಜಾ, ಅವರಲ್ಲಿ ನಿಯಂತ್ರಣ ಹಾಗೂ ಶಾಸನ ಮಾಡುವ ಶಕ್ತಿಯಿರುತ್ತದೆ. ಅವರು ಒಂದು ಸೆಕೆಂಡಿನಲ್ಲಿ ಮನಸ್ಸನ್ನು ನಿಯಂತ್ರಣ ಮಾಡಬಲ್ಲರು. ಅವರೆಂದಿಗೂ ತನ್ನ ಸಂಕಲ್ಪ, ನುಡಿ ಹಾಗೂ ಕರ್ಮವನ್ನು ವ್ಯರ್ಥವಾಗಿ ಕಳೆಯಲು ಸಾಧ್ಯವಿಲ್ಲ. ಒಂದುವೇಳೆ ಇಚ್ಛೆಯಿದ್ದರೂ ವ್ಯರ್ಥವಾಗಿ ಹೋಗುತ್ತದೆಯೆಂದರೆ ಅಂತಹವರನ್ನು ಜ್ಞಾನಪೂರ್ಣ ಅಥವಾ ರಾಜನೆಂದು ಹೇಳುವುದಿಲ್ಲ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top