18 April 2022 KANNADA Murli Today | Brahma Kumaris

Read and Listen today’s Gyan Murli in Kannada

April 17, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನಿಶ್ಚಯ ಮಾಡಿಕೊಳ್ಳಿ - ನಮ್ಮದೇನೆಲ್ಲವೂ ಇದೆ ಅದು ತಂದೆಯದಾಗಿದೆ, ಮತ್ತೆ ನಿಮಿತ್ತರಾಗಿ ಸಂಭಾಲನೆ ಮಾಡುವುದರಿಂದ ಎಲ್ಲವೂ ಪವಿತ್ರವಾಗುವುದು, ನಿಮ್ಮ ಪಾಲನೆ ಶಿವಬಾಬಾರವರ ಭಂಡಾರದಿಂದಲೇ ಆಗುವುದು”

ಪ್ರಶ್ನೆ:: -

ಶಿವಬಾಬಾರವರ ಮೇಲೆ ಪೂರ್ಣ ಬಲಿಹಾರಿ ಆದ ನಂತರ ಯಾವ ಎಚ್ಚರಿಕೆಯನ್ನು ತುಂಬಾ ಅವಶ್ಯವಾಗಿ ಇಟ್ಟುಕೊಳ್ಳಬೇಕು?

ಉತ್ತರ:-

ನೀವು ಯಾವಾಗ ತಂದೆಯ ಮೇಲೆ ಬಲಿಹಾರಿಯಾಗುತ್ತೀರಿ ಆಗ ನಿಮ್ಮ ಸರ್ವಸ್ವವೂ ಶಿವ ಬಾಬಾರವರದಾಯಿತು. ಮತ್ತೆ ಹೆಜ್ಜೆ-ಹೆಜ್ಜೆಯಲ್ಲಿ ಸಲಹೆಯನ್ನು ಪಡೆದುಕೊಳ್ಳಬೇಕಾಗುತ್ತದೆ. ಒಂದುವೇಳೆ ಯಾವುದೇ ಕೆಟ್ಟ ಕರ್ಮ ಮಾಡಿದರೆ ತುಂಬಾ ಪಾಪವಾಗುತ್ತದೆ. ಯಾವ ಹಣವು ಶಿವಬಾಬಾರವರದಾಯಿತು ಆ ಹಣದಿಂದ ಯಾವುದೇ ಪಾಪಕರ್ಮ ಮಾಡಬಾರದು ಏಕೆಂದರೆ ಒಂದೊಂದು ಪೈಸೆಯೂ ವಜ್ರ ಸಮಾನವಾಗಿದೆ. ಆದ್ದರಿಂದ ತುಂಬಾ ಸಂಪಾದನೆ ಮಾಡಬೇಕಾಗಿದೆ. ಸ್ವಲ್ಪವೂ ವ್ಯರ್ಥವಾಗಿ ಹೋಗಬಾರದಾಗಿದೆ. ಬಾಬಾ ನಿಮ್ಮಿಂದ ಏನೂ ಪಡೆಯುವುದಿಲ್ಲ ಆದರೆ ನಿಮ್ಮ ಹತ್ತಿರ ಯಾವ ಹಣವಿದೆ, ಅದರಿಂದ ಮನುಷ್ಯರನ್ನು ಕವಡೆಯಿಂದ ವಜ್ರ ಸಮಾನರನ್ನಾಗಿ ಮಾಡುವ ಸೇವೆಯಲ್ಲಿ ಉಪಯೋಗಿಸಬೇಕು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಇಂದು ಅಂಧಕಾರದಲ್ಲಿ ನಾವು ಮನುಷ್ಯರು..

ಓಂ ಶಾಂತಿ. ಈ ಗೀತೆಯು ಭಕ್ತಿಮಾರ್ಗಕ್ಕಾಗಿ ಇದೆ. ನೀವಂತೂ ಈ ಗೀತೆಯನ್ನು ಹಾಡುವುದಿಲ್ಲ ಏಕೆಂದರೆ ನೀವು ಹೇಳುತ್ತೀರಿ – ಭಗವಂತನೇ ಬಂದು ನಮಗೆ ಪರಿಚಯವನ್ನು ಕೊಡುವುದು ಆದ್ದರಿಂದ ಪರಮಾತ್ಮನೇ ಬಂದು ತನ್ನ ಪರಿಚಯವನ್ನು ಕೊಡುತ್ತಾರೆ. ಪ್ರಭು, ಈಶ್ವರ, ಭಗವಾನ್ – ಈ ಎಲ್ಲಾ ಮಾತುಗಳು ಒಂದೇ ಆಗಿದೆ. ಪ್ರಭುವಿನ ಬದಲು ನೀವು “ಬಾಬಾ” ಎಂದು ಹೇಳುತ್ತೀರಿ. ಆದ್ದರಿಂದ ತುಂಬಾ ಸಹಜವಾಯಿತು. “ಬಾಬಾ” ಎನ್ನುವ ಅಕ್ಷರವು ಪರಿವಾರದ್ದಾಗಿದೆ. ಇಡೀ ರಚನೆ ತಂದೆಯದೇ ಆಗಿರುವಕಾರಣ ಎಲ್ಲರೂ ಮಕ್ಕಳಾದರಲ್ಲವೇ! ತಂದೆ ಎಂದು ಹೇಳುವುದು ತುಂಬಾ ಸಹಜವಾಗಿದೆ ಏಕೆಂದರೆ ಕೇವಲ ಪ್ರಭು ಅಥವಾ ಭಗವಂತ ಎಂದು ಹೇಳುವುದರಿಂದ ಅವರು ತಂದೆ ಎಂದು ತಿಳಿದುಕೊಳ್ಳುವುದಿಲ್ಲ, ತಂದೆಯ ಪ್ರೀತಿ ಅಥವಾ ತಂದೆಯ ಆಸ್ತಿಯನ್ನೂ ಸಹ ತಿಳಿದುಕೊಳ್ಳುವುದಿಲ್ಲ. ತಂದೆಯಂತೂ ಸ್ವರ್ಗದ ರಚನೆ ಮಾಡುತ್ತಾರೆ. ಈ ಮಾತನ್ನು ಯಾರೂ ತಿಳಿದುಕೊಂಡಿಲ್ಲ. ಅರ್ಧಕಲ್ಪ ಪೆಟ್ಟು ತಿನ್ನುವುದರಲ್ಲಿ ತೊಡಗುತ್ತಾರೆ. ತಂದೆಯು ಬಂದು ಒಂದು ಚಿಟಿಕೆಯಲ್ಲಿ ಎಲ್ಲವನ್ನು ತಿಳಿಸಿ ಬಿಡುತ್ತಾರೆ. ಬಾಬಾನ ಮುಂದೆ ಎಲ್ಲಾ ಮಕ್ಕಳು ಕುಳಿತಿದ್ದಾರೆ, ಆದರೂ ನಡೆಯುತ್ತಾ-ನಡೆಯುತ್ತಾ ನಿಶ್ಚಯವು ಹೊರಟು ಹೋಗುತ್ತದೆ. ಒಂದುವೇಳೆ ಪಕ್ಕಾ ನಿಶ್ಚಯವಿದೆ ಎಂದರೆ ಸತ್ಯ-ಸತ್ಯ ಬ್ರಾಹ್ಮಣರಾಗಿ ಬಿಡುವರು. ನಾವು ಶಿವಬಾಬಾರವರ ಮೊಮ್ಮಕ್ಕಳು, ಬಾಬಾನ ಮನೆಯವರಾಗಿದ್ದೇವೆ. ತಿಳಿಯುತ್ತಾರೆ – ನಾವು ಬ್ರಾಹ್ಮಣರು ಶಿವಬಾಬಾರವರ ಭಂಡಾರದಿಂದ ತಿನ್ನುತ್ತೇವೆ. ಬ್ರಾಹ್ಮಣರಾದೆವೆಂದರೆ ಬ್ರಾಹ್ಮಣರ ಭೋಜನವೇ ಬ್ರಹ್ಮಾ ಭೋಜನವಾಯಿತು. ಈಗ ನಮ್ಮದು ಶಿವಬಾಬಾರವರ ಭಂಡಾರದ ಭೋಜನವಾಗಿದೆ ಎನ್ನುವ ನಿಶ್ಚಯವಾಗಬೇಕು. ನಾವು ಶಿವಬಾಬಾನ ಮಕ್ಕಳಾಗಿರುವೆವೆಂದರೆ ವಿಚ್ಚೇದನವನ್ನು ಕೊಡುವ ಮಾತೇ ಇಲ್ಲ. ಬ್ರಾಹ್ಮಣರು ಅರ್ಥಾತ್ ಭಗವಂತನ ಮಕ್ಕಳು. ನಮ್ಮ ಸರ್ವಸ್ವವೂ ತಂದೆಯದಾಗಿದೆ ಮತ್ತು ತಂದೆಯೆಲ್ಲವೂ ನಮ್ಮದಾಗಿದೆ. ವ್ಯಾಪಾರಿ ಮಕ್ಕಳು ಇದನ್ನು ಲೆಕ್ಕಾ ಮಾಡಬೇಕು. ನಮ್ಮದೆಲ್ಲವೂ ತಂದೆಯದು, ತಂದೆಯದೆಲ್ಲವೂ ನಮ್ಮದಾಗಿದೆ ಎಂದರೆ ಯಾವ ಕಡೆ ತೂಕವು ಭಾರಿಯಾಗಿದೆ? ನಮ್ಮ ಹತ್ತಿರವಂತೂ ಕೆಟ್ಟತನವೇ ಇದೆ. ಮತ್ತು ನಾವು ಹೇಳುತ್ತೇವೆ ಬಾಬಾನ ರಾಜ್ಯವು ನಮ್ಮದೆಂದು. ಎಷ್ಟು ಅಂತರವಾಯಿತಲ್ಲವೇ. ಈಗ ನಾವು ಈಶ್ವರನಿಂದ ವಿಶ್ವದ ಮಾಲೀಕರಾಗುತ್ತೇವೆಂಬುದು ನಮಗೆ ಗೊತ್ತಿದೆ. ನಮ್ಮ ಹತ್ತಿರ ಏನೆಲ್ಲವೂ ಇದೆ ಅದನ್ನು ತಂದೆಗೆ ಕೊಟ್ಟು ಬಿಡುತ್ತೇವೆ. ನಂತರ ತಂದೆಯೂ ಹೇಳುತ್ತಾರೆ – ಮಕ್ಕಳೇ, ನೀವೇ ನಿಮಿತ್ತರಾಗಿದ್ದು ಸಂಭಾಲನೆ ಮಾಡಿ ಮತ್ತು ಇದು ಶಿವಬಾಬಾರವರದೆಂದು ತಿಳಿಯಿರಿ. ತಮ್ಮನ್ನೂ ಸಹ ಶಿವಬಾಬಾನ ಮಗುವೆಂದು ತಿಳಿದುಕೊಂಡು ನಡೆಯಿರಿ ಆಗ ಎಲ್ಲವೂ ಪವಿತ್ರವಾಯಿತು. ಆಗ ಮನೆಯಲ್ಲಿ ಬ್ರಹ್ಮಾ ಭೋಜನವಾಗುತ್ತದೆ ಮತ್ತು ಶಿವಬಾಬಾನ ಭಂಡಾರವಾಗುತ್ತದೆ ಏಕೆಂದರೆ ಬ್ರಾಹ್ಮಣರೇ ಅದನ್ನು ತಯಾರು ಮಾಡುತ್ತಾರೆ. ನೀವೆಲ್ಲರೂ ಹೇಳುತ್ತೀರಿ – ಎಲ್ಲವನ್ನು ಈಶ್ವರನಿಗೆ ಕೊಡಲಾಗಿದೆ ಎಂದು, ಆದರೆ ಇಲ್ಲಂತೂ ತಂದೆಯೂ ಸಮ್ಮುಖದಲ್ಲಿಯೇ ಬಂದಿದ್ದಾರೆ. ನಾವು ಯಾವಾಗ ಅವರ ಮೇಲೆ ಬಲಿಹಾರಿಯಾಗುತ್ತೇವೆ ಆಗ ನಾವು ಒಂದು ಸಲ ಬಲಿಹಾರಿಯಾದರೂ ಸಹ ನಮ್ಮದು ಶಿವಬಾಬಾರ ಭಂಡಾರವಾಗುತ್ತದೆ. ಅದನ್ನೇ ಬ್ರಹ್ಮಾ ಭೋಜನ ಎಂದು ಹೇಳಲಾಗುತ್ತದೆ. ನಾವು ಸೇವಿಸುವ ಆಹಾರವೆಲ್ಲವೂ ಶಿವನ ಭಂಡಾರವಾಗಿದೆ ಎಂದು ತಿಳಿಸಬೇಕಾಗಿದೆ. ಅವಶ್ಯವಾಗಿ ಪವಿತ್ರವಾಗಿಯೇ ಇರಬೇಕಾಗಿದೆ. ಆಗ ಭೋಜನವೂ ಪವಿತ್ರವಾಗುತ್ತದೆ ಆದರೆ ಬಲಿಹಾರಿ ಆಗಲೇಬೇಕಾಗಿದೆ. ನಾವು ಅವರಿಗೆ ಕೊಡುವುದೇನೂ ಇಲ್ಲ. ಕೇವಲ ಬಲಿಹಾರಿ ಆಗಬೇಕು. ತಂದೆಗೆ ಹೇಳಬೇಕು ಬಾಬಾ ನಮ್ಮ ಸರ್ವಸ್ವವೂ ನಿಮ್ಮದೇ ಆಗಿದೆ. ಆಗ ಬಾಬಾ ಹೇಳುತ್ತಾರೆ – ಮಕ್ಕಳೇ ಒಳ್ಳೆಯದು ನಿಮಿತ್ತರಾಗಿ ಸಂಭಾಲನೆ ಮಾಡಿ. ಯಾವಾಗ ನೀವು ಶಿವ ತಂದೆಯದೆಂದು ತಿಳಿದು ಸೇವಿಸುವುದರಿಂದ ಶಿವಬಾಬಾನ ಭಂಡಾರದಿಂದಲೇ ಸೇವಿಸುವಿರಿ ಎಂದರ್ಥ. ಒಂದುವೇಳೆ ಶಿವ ತಂದೆಯನ್ನು ಮರೆಯುವಿರೆಂದರೆ ಅದು ಪವಿತ್ರವಾಗುವುದಿಲ್ಲ. ನೀವು ಮಕ್ಕಳು ತಮ್ಮ ಮನೆಯನ್ನೂ ಸಂಭಾಲನೆ ಮಾಡಬೇಕು ಆದರೆ ತಮ್ಮನ್ನು ನಿಮಿತ್ತವೆಂದು ತಿಳಿದು ಮನೆಯಲ್ಲಿ ಕುಳಿತಿದ್ದರೂ ಸಹ ಶಿವ ಬಾಬಾನ ಭಂಡಾರದ್ದೆ ತಿನ್ನುತ್ತೀರಿ. ಏನೆಲ್ಲಾ ಬಲಿಹಾರಿ ಆಯಿತು ಅದೆಲ್ಲವೂ ಶಿವ ತಂದೆಯದಾಯಿತು. ಏನೇ ಅರ್ಥವಾಗಿಲ್ಲವೆಂದರೆ ನನ್ನೊಂದಿಗೆ ಕೇಳಿ. ಶಿವ ಬಾಬಾರವರ ಖಜಾನೆಯಿಂದ ಖರ್ಚು ಮಾಡಿ ಯಾವುದೇ ಪಾಪಕರ್ಮವನ್ನು ಮಾಡಬೇಡಿ. ಶಿವ ತಂದೆಯ ಹಣದಿಂದ ಪುಣ್ಯದ ಕರ್ಮವನ್ನೇ ಮಾಡಬೇಕು ಏಕೆಂದರೆ ಒಂದೊಂದು ಪೈಸೆಯೂ ವಜ್ರ ಸಮಾನವಾಗಿದೆ, ಅದರಿಂದ ಅನೇಕರ ಕಲ್ಯಾಣ ಆಗಬೇಕಾಗಿದೆ ಆದ್ದರಿಂದ ಬಹಳ ಸಂಭಾಲನೆ ಮಾಡಬೇಕಾಗಿದೆ. ಸ್ವಲ್ಪವೂ ವ್ಯರ್ಥವಾಗಿ ಕಳೆಯದಿರಲಿ ಏಕೆಂದರೆ ಈ ಹಣದಿಂದ ಮನುಷ್ಯರು ಕವಡೆಯಿಂದ ವಜ್ರ ಸಮಾನವಾಗುತ್ತಾರೆ. ತಂದೆಯೂ ಹೇಳುತ್ತಾರೆ – ಮಕ್ಕಳೇ, ನನ್ನದೆಲ್ಲವೂ ನಿಮ್ಮದಾಗಿದೆ. ಒಬ್ಬ ತಂದೆಯೇ ನಿಷ್ಕಾಮಿಯಾಗಿದ್ದಾರೆ ಅವರು ಎಲ್ಲಾ ಮಕ್ಕಳ ಸೇವೆ ಮಾಡುತ್ತಾರೆ. ಅಂತಹ ತಂದೆ ಹೇಳುತ್ತಾರೆ ಮಕ್ಕಳೇ, ನಾನು ನಿಮ್ಮ ಹಣವನ್ನು ಏನು ಮಾಡಲಿ, ಎಲ್ಲವೂ ನಿಮ್ಮದೇ ಆಗಿದೆ, ನಿವೇ ರಾಜ್ಯ ಮಾಡುತ್ತೀರಿ. ನೀವು ಮಕ್ಕಳನ್ನು ಸುಖಿಯನ್ನಾಗಿ ಮಾಡುವುದೇ ನನ್ನ ಪಾತ್ರವಾಗಿದೆ. ಶ್ರೀಮತವೂ ಸಿಗುತ್ತಿರುತ್ತದೆ. ಯಾವುದೇ ಕನ್ಯೆಯರು ಮದುವೆಯಾಗಲು ಬಯಸುತ್ತಾರೆಂದರೆ ಮತ್ತು ಜ್ಞಾನದಲ್ಲಿ ಬರುವುದಿಲ್ಲವೆಂದರೆ ಬಿಟ್ಟು ಬಿಡಿ. ಮಗುವು ಒಂದುವೇಳೆ ಆಜ್ಞಾಕಾರಿ ಆಗಿಲ್ಲವೆಂದರೆ ಆಸ್ತಿಗೆ ಹಕ್ಕುಧಾರರಾಗಿಲ್ಲ. ಶ್ರೀಮತದ ಮೇಲೆ ನಡೆಯುವುದಿಲ್ಲವೆಂದರೆ ಅವರು ಶ್ರೇಷ್ಠರೂ ಅಲ್ಲ, ಹಕ್ಕುಧಾರರೂ ಅಲ್ಲ. ಮತ್ತೆ ಶಿಕ್ಷೆಯೂ ಭೋಗಿಸಬೇಕಾಗುವುದು. ತಂದೆಯ ಆಜ್ಞೆಯಾಗಿದೆ – ಮಕ್ಕಳೇ, ಕುರುಡರಿಗೆ ಊರುಗೋಲಾಗಿ ಆದರೆ ಇದನ್ನು ತಿಳಿದುಕೊಳ್ಳುವುದಿಲ್ಲ.

ನೀವು ತಿಳಿದುಕೊಂಡಿದ್ದೀರಿ ನಾವೂ ಸಹ ಮೊದಲು ಸಂಪೂರ್ಣವಾಗಿ ಕೋತಿ ಬುದ್ಧಿಯವರಾಗಿದ್ದೆವು. ಬಾಬಾ, ಈಗ ನಿಮ್ಮ ಸೇನೆಯನ್ನು ತೆಗೆದುಕೊಂಡಿದ್ದಾರೆ. ನಿಮಗೆ ಶಿಕ್ಷಣವನ್ನು ಕೊಟ್ಟು ಮಂದಿರ ಯೋಗ್ಯರನ್ನಾಗಿ ಮಾಡುತ್ತಿದ್ದಾರೆ, ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಉಳಿದ ಎಲ್ಲರಿಗೂ ಶಿಕ್ಷೆಯನ್ನು ಕೊಟ್ಟು ಮುಕ್ತಿಧಾಮದಲ್ಲಿ ಕಳಿಸುತ್ತಾರೆ. ಬೇಹದ್ದಿನ ತಂದೆಯದು ಬೇಹದ್ದಿನ ಮಾತುಗಳಾಗಿದೆ. ಒಬ್ಬ ರಾಮ ಸೀತೆಯ ಮಾತಲ್ಲ. ತಂದೆಯು ಕುಳಿತು ಎಲ್ಲಾ ಶಾಸ್ತ್ರಗಳ ಸಾರವನ್ನು ತಿಳಿಸುತ್ತಾರೆ. ಮನುಷ್ಯರಂತೂ ತುಂಬಾ ಓದುತ್ತಾರೆ, ಆದರೆ ಏನೂ ತಿಳಿದುಕೊಳ್ಳುವುದಿಲ್ಲ ಎಂದಾಗ ಓದಿಯೂ ಓದದಂತಾಗುತ್ತದೆ. ಓದುತ್ತಾ-ಓದುತ್ತಾ ಕಲೆಗಳು ಕಡಿಮೆಯಾಗುತ್ತಾ ಇನ್ನೂ ಪತಿತ ಭ್ರಷ್ಟಾಚಾರಿಯಾಗಿದ್ದಾರೆ ಮತ್ತು ಪತಿತ ಪಾವನ ಬನ್ನಿ ಎಂದು ಹೇಳುತ್ತಾರೆ. ಮತ್ತೆ ಗಂಗೆಯಲ್ಲಿ ನಿಂತು ದಾನ ಮಾಡಿ ಎಂದು ಹೇಳುತ್ತಾರೆ. ದೊಡ್ಡ-ದೊಡ್ಡ ರಾಜರು ವರಹಗಳನ್ನು ಬ್ರಾಹ್ಮಣರಿಗೆ ಕೊಡುತ್ತಾರೆ ಆದರೂ ಸಹ ಅವರು ಜೀವನಕ್ಕೋಸ್ಕರ ಒಂದಲ್ಲ ಒಂದು ಶಾಸ್ತ್ರ ಮುಂತಾದವುಗಳನ್ನು ತಿಳಿಸುತ್ತಾರೆ. ತಂದೆಯು ನಿಮಗೆ 21 ಜನ್ಮಗಳ ಜೀವನದ ಆಧಾರವನ್ನು ಮಾಡಿಕೊಡುತ್ತಾರೆ. ತಂದೆ ಎಷ್ಟು ಒಳ್ಳೆಯ ರೀತಿಯಲ್ಲಿ ತಿಳಿಸಿ ಪಾವನರನಾಗಿ ಮಾಡುತ್ತಾರೆ. ಭಾರತವೇ ಪಾವನವಾಗಿತ್ತು. ಈಗ ಭಾರತವೇ ಪತಿತ ಆಗಿದೆ. ತಂದೆಯು ಕುಳಿತು ನೀವು ಮಕ್ಕಳಿಗೆ ಪರಿಚಯ ಕೊಡುತ್ತಾರೆ – ನೀವು ಬ್ರಾಹ್ಮಣರೆಲ್ಲರೂ ಅರ್ಪಣೆ ಆಗುತ್ತೀರೆಂದರೆ ನೀವು ಶಿವಬಾಬಾನ ಭಂಡಾರದಿಂದಲೇ ತಿನ್ನುತ್ತೀರಿ. ಒಂದುವೇಳೆ ಅರ್ಪಣೆ ಆಗಿಲ್ಲವೆಂದರೆ ನೀವು ಆಸುರಿ ಭಂಡಾರದಿಂದ ಸೇವಿಸುತ್ತೀರಿ. ನೀವು ತಮ್ಮ ಜವಾಬ್ದಾರಿ ಮುಂತಾದವುಗಳನ್ನು ತೆಗೆದುಕೊಂಡು ಇಲ್ಲಿಗೆ ಬನ್ನಿ ಎಂದು ಬಾಬಾ ಹೇಳುತ್ತಾರೇನು! ಆದರೆ ನೀವು ನಿಮಿತ್ತರಾಗಿ ಸಂಭಾಲನೆ ಮಾಡಿ. ನೀವು ನಿಶ್ಚಯ ಬುದ್ಧಿಯವರಾಗುವುದರಿಂದ ಶಿವಬಾಬಾನ ಭಂಡಾರದಿಂದಲೇ ಸೇವಿಸುತ್ತೀರಿ. ನಿಮ್ಮ ಹೃದಯವೂ ಶುದ್ದವಾಗುತ್ತಾ ಹೋಗುತ್ತದೆ. ಗಾಯನವೂ ಮಾಡುತ್ತಾರೆ ಬ್ರಾಹ್ಮಣ ದೇವೀ-ದೇವತಾಯ ನಮಃ. ನಮಸ್ತೆ ಮಾಡಲು ಈ ಬ್ರಾಹ್ಮಣರೇ ಯೋಗ್ಯರಾಗಿದ್ದಾರೆ. ನಿಮಗೆ ಗೊತ್ತಿದೆ – ಬ್ರಹ್ಮನ ಮುಖಾಂತರ ಬಾಬಾ ನಮ್ಮನ್ನು ಶೂದ್ರರಿಂದ ಬ್ರಾಹ್ಮಣರನ್ನಾಗಿ ಮಾಡುತ್ತಾರೆ. ಕಲ್ಪ-ಕಲ್ಪವೂ ತಂದೆಯು ಬಂದು ನಮ್ಮನ್ನು ರಾವಣ ರಾಜ್ಯದಿಂದ ಬಿಡಿಸಿ ಸುಖಿಯನ್ನಾಗಿ ಮಾಡುತ್ತಾರೆ. ಅಲ್ಲಿ ದುಃಖದ ಹೆಸರೇ ಇರುವುದಿಲ್ಲ. ಭಾರತದಲ್ಲಿ ಎಷ್ಟೊಂದು ಜನ ಗುರು, ವಿದ್ವಾನ, ಪಂಡಿತರಿದ್ದಾರೆ. ಒಬ್ಬೊಬ್ಬ ಸ್ತ್ರೀಯ ಪತಿಯು ಗುರುವಾಗಿದ್ದಾರೆಂದಾಗ ಎಷ್ಟು ಜನ ಗುರುಗಳಾಗಿದ್ದಾರೆ. ಎಷ್ಟೊಂದು ಉಲ್ಟಾ ಕಾರೋಬಾರ್ ನಡೆಸಲಾಗಿದೆ. ಪತಿಯೇ ನಿಮ್ಮ ಸರ್ವಸ್ವವೆಂದು ಕರಾರು (ಅಗ್ರಿಮೆಂಟ್) ಮಾಡಿಸುತ್ತಾರೆ. ಅವರ ಆಜ್ಞೆಯಲ್ಲಿಯೇ ಇರಬೇಕಾಗಿದೆ. ಮೊದಲ ಆಜ್ಞೆಯೇ ಆಗಿದೆ – ಯಾವ ಆಜ್ಞೆಯಿಂದ ಪೂಜ್ಯರಾಗಿದ್ದ ಕುಮಾರಿ ತಕ್ಷಣ ಪೂಜಾರಿಯಾಗಿ ಬಿಡುತ್ತಾರೆ. ಎಲ್ಲರ ಮುಂದೆ ತಲೆ ಬಾಗಿಸಬೇಕಾಗುತ್ತದೆ. ಮತ್ತೆ ಎರಡನೇ ಆದೇಶವನ್ನು ಕೊಡುತ್ತಾರೆ- ಕಾಮ ಕಟಾರಿಯನ್ನು ನಡೆಸುವುದು. ಎಂದಾಗ ಎಷ್ಟೊಂದು ಅಂತರವಾಯಿತು!! ತಂದೆ ಹೇಳುತ್ತಾರೆ- ನನಗೆ ಸಹಯೋಗಿ ಮಕ್ಕಳು ಬೇಕು. ಅವರ ಕಾಲಿಗೆ ಬೀಳುವುದು ಏಕೆ? ಮಕ್ಕಳಂತು ವಾರಸದಾರರು ಆಗಿದ್ದಾರೆ. ನಮ್ರತೆಯನ್ನು ತೋರಿಸಲು ಕಾಲಿಗೆ ಬೀಳುವ ಆವಶ್ಯಕತೆ ಇಲ್ಲ. ನಮಸ್ತೆ ಹೇಳಬಹುದಾಗಿದೆ. ನೀವು ಹೇಳುತ್ತೀರಿ ನಾವು ತಂದೆಯಿಂದ ಆಸ್ತಿಯನ್ನು ಪಡೆಯಲು ಬಂದಿದ್ದೇವೆ ಮತ್ತೆ ಮಾಯೆಯು ಸಂಪೂರ್ಣವಾಗಿ ಮರೆಸಿ ಬಿಡುತ್ತದೆ, ವಿಚ್ಚೇದನವನ್ನು ಕೊಟ್ಟು ಬಿಡುತ್ತಾರೆ. ಮಯೆಯು ಬುದ್ಧಿಯನ್ನು ಸಮಾಪ್ತಿ ಮಾಡಿ ಬಿಡುತ್ತದೆ. ಇಂದು ಬಾಬಾ ತಿಳಿಸಿದರು – ಯಾರು ಶಿವಬಾಬಾರವರ ಭಂಡರದಿಂದ ತಿಂದರು, ಕುಡಿದರು ಎಂದಾಗ ಆ ಭಂಡಾರವು ಭರ್ಪೂರ್ ಆಗುತ್ತದೆ, ಆಗ ಕಾಲ ಕಂಠಕವೆಲ್ಲವೂ ದೂರವಾಗುತ್ತದೆ. ಅಮರರಾಗುತ್ತಾರೆ. ನೀವು ಬಲಿಹಾರಿಯಾಗುತ್ತೀರೆಂದರೆ ಸರ್ವಸ್ವವೂ ಶಿವಬಾಬಾನದಾಯಿತೆನ್ನುವ ಪಕ್ಕಾ ನಿಶ್ಚಯ ಬೇಕು. ಯಾವುದೇ ಕುಕರ್ಮ ಮಾಡುವುದರಿಂದ ತುಂಬಾ ಪಾಪವಾಗುವುದು. ಹೆಜ್ಜೆ-ಹೆಜ್ಜೆಯಲ್ಲಿ ಸಲಹೆಯನ್ನು ತೆಗೆದುಕೊಳ್ಳಬೇಕಾಗಿದೆ ಏಕೆಂದರೆ ಇದ್ಯು ಉನ್ನತ ಮಾರ್ಗವಾಗಿದೆ. ಅನೇಕರು ಬಿದ್ದು ಹೋಗುತ್ತಾರೆ. ಬಾಬಾ, ಬಾಬಾ ಎಂದು 8-10 ವರ್ಷಗಳಿದ್ದೂ ಸಹ ಮತ್ತೆ ಮಾಯೆಯು ಕೆನ್ನೆಗೆ ಪೆಟ್ಟನ್ನು ಕೊಡುತ್ತದೆ. ಬಾಬಾ ಹೇಳುತ್ತಾರೆ ಮಕ್ಕಳೇ ಹೆಜ್ಜೆ-ಹೆಜ್ಜೆಯಲ್ಲಿಯೂ ಎಲ್ಲೇ ಗೊಂದಲವಾಗುತ್ತೀರೆಂದರೆ ನನ್ನಿಂದ ಸಲಹೆಯನ್ನು ಕೇಳಿ. ಕೆಲವು ಮಕ್ಕಳು ಕೇಳುತ್ತಾರೆ – ಬಾಬಾ ನಾವು ಮಿಲಿಟರಿಯಲ್ಲಿ ಸರ್ವೀಸ್ ಮಾಡುತ್ತೇವೆಂದು. ಅಲ್ಲಿಯ ಭೋಜನವೂ ಸೇವಿಸಬೇಕಾಗುತ್ತದೆ. ಅದಕ್ಕೆ ಬಾಬಾ ಹೇಳುತಾರೆ ಇನ್ನೇನು ಮಾಡಬೇಕಾಗಿದೆ. ತಂದೆಯಿಂದ ಸಲಹೆಯನ್ನು ತೆಗೆದುಕೊಂಡಾಗ ಜವಾಬ್ದಾರರು ತಂದೆ ಆಗಿದ್ದಾರೆ. ಅನೇಕರು ಕೇಳುತ್ತಾರೆ ಬಾಬಾ ವಿದೇಶಕ್ಕೆ ಹೋಗಬೇಕಾಗಿದೆ, ಪಾರ್ಟಿಯಲ್ಲಿ ಕುಳಿತುಕೊಳ್ಳಬೇಕಾಗಿದೆ. ಭಲೆ ಅಲ್ಲಿ ಸಸ್ಯಾಹಾರವು ಸಿಗಬಹುದು. ಆದರೂ ಸಹ ಅದು ವಿಕಾರಿಗಳು ಮಾಡಿದಂತಹ ಆಹಾರವಲ್ಲವೇ. ಅದಕ್ಕೋಸ್ಕರ ನೀವು ಯಾವುದಾದರೂ ನೆಪ ಹೇಳಬಹುದಾಗಿದೆ – ನಾವು ಟೀ (ಚಹ) ಕುಡಿಯುತ್ತೇವೆಂದು ಹೇಳಬಹುದಾಗಿದೆ. ಏಕೆಂದರೆ ಅನೇಕ ಪ್ರಕಾರದ ಯುಕ್ತಿಗಳಿದೆ. ಒಂದುವೇಳೆ ನೀವು ಉಲ್ಟಾ ನಡೆಯುವಿರೆಂದರೆ ಅವರ ರೈಟ್ಹ್ಯಾಂಡ್ ಧರ್ಮರಾಜನೂ ಕುಳಿತಿದ್ದಾರೆ. ಈ ಸಮಯದಲ್ಲಿ ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತ ತೆಗೆದುಕೊಳ್ಳಬೇಕಾಗಿದೆ ಏಕೆಂದರೆ ಅತಿ ದೊಡ್ಡ ಶ್ರೇಷ್ಠ ಪದವಿಯಾಗಿದೆ. ಯಾರಿಗೂ ಸ್ವಪ್ನದಲ್ಲಿಯೂ, ನೆನಪಿನಲ್ಲಿಯೂ ಇರಲಿಲ್ಲ – ನಾವು ವಿಶ್ವದ ಮಾಲೀಕರಾಗುತ್ತೇವೆ ಎನ್ನುವುದು. ಸ್ವಲ್ಪವೂ ತಿಳಿದುಕೊಂಡಿರಲಿಲ್ಲ. ಎಷ್ಟು ವಜ್ರ ವೈಡೂರ್ಯಗಳ ಮಹಲುಗಳಿತ್ತು. ಸೋಮನಾಥ ಮಂದಿರದಲ್ಲಿ ಎಷ್ಟೊಂದು ಸಂಪತ್ತು ಇತ್ತು, ಎಲ್ಲವನ್ನು ಒಂಟೆಗಳ ಮೇಲೆ ತುಂಬಿಸಿಕೊಂಡು ಹೋದರು. ಈಗ ಇಂತಹ ಸಮಯ ಬರುವುದಿದೆ – ಕೆಲವರದು ಮಣ್ಣಿನಲ್ಲಿ ಹೋಗುತ್ತದೆ, ಕೆಲವರದ್ದು ಅಗ್ನಿಯಲ್ಲಿ….. ಹೇಳುತ್ತಾರಲ್ಲವೇ ರಾಮ ನಾಮವೇ ನಮ್ಮ ಜೊತೆ ಇರುತ್ತದೆ. ಸತ್ಯ ಸಂಪಾದನೆ ಮಾಡಿಕೊಳ್ಳುವವರ ಕೈಗಳು ಸಂಪನ್ನವಾಗಿರುವುದು. ಉಳಿದೆಲ್ಲರೂ ಖಾಲಿ ಕೈಯಲ್ಲಿ ಹೋಗುತ್ತಾರೆ. ತಂದೆಯೂ ಹೇಳುತ್ತಾರೆ – ಮಕ್ಕಳೇ, ನಿಮ್ಮ ವಸ್ತುಗಳೆಲ್ಲವೂ ನಿಮಗೋಸ್ಕರವೇ ಇದೆ, ನಾನಂತು ನಿಷ್ಕಾಮಿಯಾಗಿದ್ದೇನೆ. ನನ್ನಂತಹ ನಿಷ್ಕಾಮಿ ಯಾರೂ ಇಲ್ಲ. ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನ ಪತಿತರಾಗಬೇಕಾಗಿದೆ. ಪೂರ್ಣ ಪತಿತರಾಗಿ ನಂತರ ಪೂರ್ಣ ಪಾವನರಾಗಬೇಕಾಗಿದೆ. ತಂದೆಯು ಹೇಳುತ್ತಾರೆ – ಮಕ್ಕಳೇ, ನನಗೆ ಸಂಕಲ್ಪ ಬಂತು ಹೊಸ ಪ್ರಪಂಚವನ್ನು ರಚಿಸಲೇ! ಎಂದು. ನಾನು ನನ್ನ ಪಾತ್ರವನ್ನು ಅಭಿನಯಿಸಲು ಬಂದಿದ್ದೇನೆ. ಯಾರೆಲ್ಲಾ ದೊಡ್ದ-ದೊಡ್ಡ ಮುಖ್ಯ ಆತ್ಮರಿದ್ದಾರೆ ಅವರೆಲ್ಲರೂ ಹೀಗೆಯೇ ಅವರವರ ಸಮಯದಲ್ಲಿ ಪಾತ್ರವನ್ನು ಅಭಿನಯಿಸುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ – ಜ್ಞಾನ ಸಾಗರ ತಂದೆಯು ನಾವು ಮಕ್ಕಳನ್ನು ಜ್ಞಾನ ಪೂರ್ಣರನ್ನಾಗಿ ಮಾಡುತ್ತಿದ್ದಾರೆ. ಮೊದಲು ಈ ಜ್ಞಾನವು ಗೊತ್ತಿತ್ತೇನು? ಈಗ ನೀವು ಎಲ್ಲರ ಜೀವನ ಚರಿತ್ರೆಯನ್ನು ಅರಿತಿದ್ದೀರಿ. ಧರ್ಮ ಸ್ಥಾಪಕರೂ ಮುಖ್ಯ ಆಗಿದ್ದಾರೆ. ಮೊದಲಿನಿಂದ ಹಿಡಿದು ಶ್ರೇಷ್ಠಾತಿ ಶ್ರೇಷ್ಠ ರಚಯಿತ ಶಿವಬಾಬಾ ಆಗಿದ್ದಾರೆ. ನಂತರ ಬ್ರಹ್ಮಾ, ವಿಷ್ಣು, ಶಂಕರ, ನಂತರ ಬ್ರಹ್ಮನ ಮುಖಾಂತರ ಬ್ರಾಹ್ಮಣರನ್ನು ರಚಿಸುತ್ತಾರೆ. ಜಗದಂಬಾ ಸರಸ್ವತಿಯು ಬ್ರಾಹ್ಮಣಿಯಾಗಿದ್ದಾರೆ ಎನ್ನುವುದನ್ನು ಯಾರೂ ತಿಳಿದುಕೊಂಡಿಲ್ಲ. ಹಿಂದೆಯೂ ಇದೇ ಸಮಯದಲ್ಲಿ ಇವರು ತಪಸ್ಸು ಮಾಡಿದರು. ತಂದೆಯು ರಾಜಯೋಗವನ್ನು ಕಲಿಸಿದ್ದರು. ಈಗಲೂ ಅವರೇ ಕಾರ್ಯ ಮಾಡುತ್ತಿದ್ದಾರೆ. ಈ ಜ್ಞಾನವನ್ನು ಮನನ ಮಾಡಬೇಕು. ಇರುವುದಂತೂ ಎಲ್ಲರೂ ಮನೆಯಲ್ಲಿಯೇ. ಇಲ್ಲಂತು ಎಲ್ಲರೂ ಕುಳಿತುಕೊಳ್ಳುವುದಿಲ್ಲ. ಹಾ! ಅಂತ್ಯದಲ್ಲಂತೂ ಎಲ್ಲರೂ ಇಲ್ಲಿಯೇ ಬಂದು ತಂದೆಯ ಸೇವೆಯಲ್ಲಿ ತತ್ಪರರಾಗಿರುತ್ತಾರೆ. ಅಂತಹ ವಿಚಿತ್ರ ಪಾತ್ರವನ್ನು ನೋಡುತ್ತೀರಿ. ವೈಕುಂಠದ ವೃಕ್ಷವು ಸಮೀಪ ಕಂಡು ಬರುತ್ತಿರುತ್ತದೆ. ಕುಳಿತು-ಕುಳಿತುಕೊಂಡೆ ಎಲ್ಲಾ ಸಾಕ್ಷಾತ್ಕಾರವನ್ನು ಮಾಡುತ್ತೀರಿ. ನೀವು ಇಲ್ಲಿಯೇ ಪೂರ್ಣ ಫರಿಸ್ತೆ ಆಗುತ್ತೀರಿ. ಯಾರೆಲ್ಲಾ ಮನುಷ್ಯ ಮಾತ್ರರಿದ್ದಾರೆ ಎಲ್ಲರೂ ಶರೀರವನ್ನು ಬಿಡುತ್ತಾರೆ. ಆತ್ಮರು ಹಿಂತಿರುಗಿ ಹೊರಟು ಹೋಗುತ್ತಾರೆ. ತಂದೆಯು ಮಾರ್ಗದರ್ಶಕರಾಗಿ ಎಲ್ಲರನ್ನು ವಾಪಸ್ ಕರೆದುಕೊಂಡು ಹೋಗುತ್ತಾರೆ. ಈ ಜ್ಞಾನವೂ ಈಗಲೇ ಇದೆ. ಸತ್ಯಯುಗದಲ್ಲಿ ಜ್ಞಾನದ ಹೆಸರೇ ಇರುವುದೇ ಇಲ್ಲ. ಇಲ್ಲಿ ಪುರುಷಾರ್ಥವಾಗಿದೆ, ಅಲ್ಲಿ ಪ್ರಾಲಬ್ಧವಾಗಿದೆ. ನೀವು 21 ಜನ್ಮ ತಂದೆಯಿಂದ ಅಸ್ತಿಯನ್ನು ಪಡೆಯಲು ಪುರುಷಾರ್ಥ ಮಾಡುತ್ತೀರಿ. ಈಗ ನಾವು ಬ್ರಾಹ್ಮಣರಾಗಿದ್ದೇವೆ ಎಂದು ನೀವು ತಿಳಿಸಬಹುದಾಗಿದೆ. ಮಿತ್ರ ಸಂಬಂಧಿ ಮುಂತಾದವರಿಗೆ ನೀವು ತಂದೆಯ ನೆನಪಿನಲ್ಲಿದ್ದು ಭೋಜನವನ್ನು ತಯಾರಿಸಿ ತಿನ್ನಿಸುವುದರಿಂದ ಅವರ ಹೃದಯವೂ ಶುದ್ದವಾಗುವುದು. ಅಂತ್ಯದಲ್ಲಿ ಯಾರು ಉಳಿಯುತ್ತಾರೆ ಅವರು ತುಂಬಾ ಮಜಾ ನೋಡುತ್ತಾರೆ. ಬಾಬಾ ಗಳಿಗೆ-ಗಳಿಗೆಯೂ ತಮ್ಮ ಮನೆ ಮುಂತಾದವೆಲ್ಲವನ್ನೂ ತೋರಿಸುತ್ತಿರುತ್ತಾರೆ. ಶುರು-ಶುರುವಿನಲ್ಲಿ ನೀವು ತುಂಬಾ ನೋಡಿದ್ದೀರಿ ಮತ್ತೆ ಅಂತ್ಯದಲ್ಲೂ ತುಂಬಾ ನೋಡುತ್ತೀರಿ. ಯಾರು ಮೊದಲು ಹೊರಟು ಹೋಗುತ್ತಾರೆ ಅವರು ಏನನ್ನೂ ನೋಡುವುದಿಲ್ಲ. ಈ ವಿಕಾರಗಳನ್ನು ಪೂರ್ಣ ರೀತಿಯಲ್ಲಿ ತ್ಯಜಿಸಿದಾಗಲೇ ವಜ್ರ-ವೈಢೂರ್ಯಗಳಿಂದ ಶೃಂಗರಿಸಲ್ಪಡುತ್ತೀರಿ. ತ್ಯಜಿಸುವುದಿಲ್ಲವೆಂದರೆ ಶೃಂಗರಿಸಲ್ಪಡುವುದೂ ಇಲ್ಲ. ಈಗ ನೀವು ಜ್ಞಾನರತ್ನಗಳಿಂದ ಶೃಂಗರಿತರಾಗುತ್ತಿದ್ದೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಸತ್ಯ ಸಂಪಾದನೆ ಮಾಡಿ ಕೈ ತುಂಬಿಸಿಕೊಂಡು ಹೋಗಬೇಕಾಗಿದೆ. ಒಬ್ಬ ತಂದೆಯೊಂದಿಗೆ ಸತ್ಯ ಸಂಪಾದನೆ ಮಾಡುವಂತಹ ಸತ್ಯ ವ್ಯಾಪಾರಿಯಾಗಬೇಕಾಗಿದೆ.

2. ಹೃದಯವನ್ನು ಶುದ್ಧ ಮಾಡಿಕೊಳ್ಳಲು ತಂದೆಯ ನೆನಪಿನಲ್ಲಿದ್ದು ಬ್ರಹ್ಮಾ ಭೋಜನವನ್ನು ತಯಾರಿಸಬೇಕಾಗಿದೆ. ಯೋಗಯುಕ್ತ ಭೋಜನವನ್ನು ತಿನ್ನಬೇಕು ಹಾಗೂ ತಿನ್ನಿಸಬೇಕಾಗಿದೆ. ವಿಕಾರಗಳ ತ್ಯಾಗ ಮಾಡಿ ಜ್ಞಾನರತ್ನಗಳಿಂದ ಶೃಂಗರಿತರಾಗಿ ಅನ್ಯರನ್ನು ಶೃಂಗರಿತರನ್ನಾಗಿ ಮಾಡಬೇಕು.

ವರದಾನ:-

ಯಾವ ಮಕ್ಕಳು ಪರಮಾತ್ಮನ ಪ್ರಿಯರಾಗುತ್ತಾರೆಯೋ ಅವರು ಸದಾ ಹೃದಯ ಸಿಂಹಾಸನದಲ್ಲಿ ಇರುತ್ತಾರೆ. ಅವರನ್ನು ಹೃದಯ ರಾಮನ ಹೃದಯದಿಂದ ಬೇರ್ಪಡಿಸಲು ಯಾರಿಗೂ ಸಾಹಸವಿಲ್ಲ ಆದ್ದರಿಂದ ತಾವು ಪ್ರಪಂಚದವರ ಮುಂದೆ ಹೆಮ್ಮೆಯಿಂದ ಹೇಳಬಹುದು – ನಾವು ಪರಮಾತ್ಮನ ಪ್ರಿಯರಾಗಿ ಬಿಟ್ಟೆವು. ಇದೇ ನಶೆಯಲ್ಲಿ ಇರುವುದರಿಂದ ಎಲ್ಲಾ ಚಿಂತೆಗಳಿಂದ ನಿಶ್ಚಿಂತರಾಗಿದ್ದೀರಿ. ತಾವೆಂದಿಗೂ ಮರೆತೂ ಸಹ ಹೇಳಲು ಸಾಧ್ಯವಿಲ್ಲ – ಇಂದು ನನ್ನ ಮನಸ್ಸು ಸ್ವಲ್ಪ ಬೇಸರವಾಗಿದೆ, ನನ್ನ ಮನಸ್ಸಾಗುತ್ತಿಲ್ಲ…… ಈ ಮಾತೂ ಸಹ ವ್ಯರ್ಥ ಮಾತಾಗಿದೆ. ನನ್ನದು ಎಂದು ಹೇಳುವುದೆಂದರೆ ಕಷ್ಟದಲ್ಲಿ ಸಿಲುಕುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top