17 April 2022 KANNADA Murli Today | Brahma Kumaris

Read and Listen today’s Gyan Murli in Kannada

April 16, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಸರ್ವ ಅನುಭೂತಿಗಳ ಪ್ರಾಪ್ತಿಗೆ ಆಧಾರ ಪವಿತ್ರತೆ

♫ ಕೇಳು ಇಂದಿನ ಮುರ್ಲಿ (audio)➤

ಇಂದು ಸ್ನೇಹ ಸಾಗರ ಬಾಪ್ದಾದಾ ತನ್ನ ನಾಲ್ಕಾರು ಕಡೆಯ ಆತ್ಮಿಕ ಮಕ್ಕಳ ಆತ್ಮಿಕ ಲಕ್ಷಣಗಳನ್ನು ನೋಡುತ್ತಿದ್ದಾರೆ, ಪ್ರತಿಯೊಬ್ಬ ಬ್ರಾಹ್ಮಣ ಮಗುವಿನ ಚಹರೆಯಲ್ಲಿ ಆತ್ಮೀಯತೆಯಿದೆ. ಆದರೆ ನಂಬರ್ವಾರ್ ಇದೆ ಏಕೆಂದರೆ ಆತ್ಮೀಯತೆಗೆ ಆಧಾರ ಪವಿತ್ರತೆಯಾಗಿದೆ. ಸಂಕಲ್ಪ, ಮಾತು ಮತ್ತು ಕರ್ಮದಲ್ಲಿ ಎಷ್ಟೆಷ್ಟು ಪವಿತ್ರತೆಯ ಧಾರಣೆಯಿರುವುದೋ ಅದರಂತೆ ಆತ್ಮೀಯತೆಯ ಹೊಳಪು ಚಹರೆಯಲ್ಲಿ ಕಂಡು ಬರುತ್ತದೆ. ಬ್ರಾಹ್ಮಣ ಜೀವನದ ಹೊಳಪು ಪವಿತ್ರತೆಯಾಗಿದೆ. ನಿರಂತರ ಅತೀಂದ್ರಿಯ ಸುಖ ಮತ್ತು ಮಧುರ ಶಾಂತಿಗೆ ವಿಶೇಷ ಆಧಾರವು ಪವಿತ್ರತೆಯಾಗಿದೆ. ಪವಿತ್ರತೆಯು ನಂಬರ್ವಾರ್ ಇದ್ದರೆ ಈ ಅನುಭೂತಿಯ ಪ್ರಾಪ್ತಿಗಳು ನಂಬರ್ವಾರ್ ಆಗುತ್ತವೆ. ಒಂದುವೇಳೆ ಪವಿತ್ರತೆಯು ನಂಬರ್ವನ್ ಆಗಿದ್ದರೆ ತಂದೆಯ ಮೂಲಕ ಅನುಭೂತಿಗಳ ಪ್ರಾಪ್ತಿಯು ನಂಬರ್ವನ್ ಇರುತ್ತದೆ. ಪವಿತ್ರತೆಯ ಹೊಳಪು ಸ್ವತಹವಾಗಿ ನಿರಂತರ ಚಹರೆಯಲ್ಲಿ ಕಂಡು ಬರುತ್ತದೆ. ಪವಿತ್ರತೆಯ ಆತ್ಮೀಯತೆಯ ನಯನಗಳು ಸದಾ ನಿರ್ಮಲವಾಗಿ ಕಾಣುತ್ತವೆ. ಸದಾ ನಯನಗಳಲ್ಲಿ ಆತ್ಮ ಮತ್ತು ಆತ್ಮಿಕ ತಂದೆಯ ಹೊಳಪಿನ ಅನುಭವವಾಗುವುದು. ಇಂದು ಬಾಪ್ದಾದಾ ಎಲ್ಲಾ ಮಕ್ಕಳಲ್ಲಿ ವಿಶೇಷವಾಗಿ ಈ ಹೊಳಪು ಮತ್ತು ಕಾಂತಿಯನ್ನು ನೋಡುತ್ತಿದ್ದೇವೆ. ತಾವೂ ಸಹ ತಮ್ಮ ಆತ್ಮಿಕ ಪವಿತ್ರತೆಯ ಚಹರೆಯನ್ನು ಜ್ಞಾನದ ದರ್ಪಣದಲ್ಲಿ ನೋಡಿಕೊಳ್ಳಬಲ್ಲಿರಿ ಏಕೆಂದರೆ ವಿಶೇಷ ಆಧಾರವು ಪವಿತ್ರತೆಯಾಗಿದೆ. ಪವಿತ್ರತೆಯೆಂದು ಕೇವಲ ಬ್ರಹ್ಮಚರ್ಯಕ್ಕೆ ಹೇಳಲಾಗುವುದಿಲ್ಲ ಆದರೆ ಸದಾ ಬ್ರಹ್ಮಚಾರಿ ಮತ್ತು ಸದಾ ಬ್ರಹ್ಮಾಚಾರಿ ಅರ್ಥಾತ್ ಬ್ರಹ್ಮಾ ತಂದೆಯ ಆಚರಣೆಯಂತೆ ಪ್ರತೀ ಹೆಜ್ಜೆಯಲ್ಲಿ ನಡೆಯುವವರು. ಅವರ ಸಂಕಲ್ಪ, ಮಾತು ಮತ್ತು ಕರ್ಮರೂಪಿ ಹೆಜ್ಜೆಯು ಸ್ವಾಭಾವಿಕವಾಗಿ ಬ್ರಹ್ಮಾ ತಂದೆಯ ಹೆಜ್ಜೆಯ ಮೇಲೆ ಹೆಜ್ಜೆಯಿರುವುದು ಯಾವುದಕ್ಕೆ ತಾವು ಫುಟ್ಸ್ಟೆಪ್ ಎಂದು ಹೇಳುತ್ತೀರಿ. ಅವರ ಪ್ರತೀ ಹೆಜ್ಜೆಯಲ್ಲಿ ಬ್ರಹ್ಮಾ ತಂದೆಯ ಆಚರಣೆಯು ಕಂಡು ಬರುವುದು ಅಂದಾಗ ಬ್ರಹ್ಮಚಾರಿಗಳಾಗುವುದು ಕಷ್ಟವಲ್ಲ, ಆದರೆ ಈ ಮನ-ವಾಣಿ-ಕರ್ಮದ ಆಚರಣೆಯು ಬ್ರಹ್ಮಾಚಾರಿಯಾಗಿರಲಿ – ಇದನ್ನು ಪರಿಶೀಲನೆ ಮಾಡಿಕೊಳ್ಳುವ ಅವಶ್ಯಕತೆಯಿದೆ ಮತ್ತು ಯಾರು ಬ್ರಹ್ಮಾಚಾರಿಯಾಗಿರುವರೋ ಅವರ ಚಲನೆ ಮತ್ತು ಚಹರೆಯು ಸದಾ ಅಂತರ್ಮುಖಿ ಮತ್ತು ಅತೀಂದ್ರಿಯ ಸುಖದ ಅನುಭವವಾಗುವುದು.

ಒಂದನೆಯದು – ವೈಜ್ಞಾನಿಕ ಸಾಧನಗಳಾಗಿವೆ ಮತ್ತು ಬ್ರಾಹ್ಮಣ ಜೀವನದಲ್ಲಿ ಜ್ಞಾನದ ಸಾಧನಗಳಿವೆ ಅಂದಾಗ ಬ್ರಹ್ಮಾಚಾರಿ ಆತ್ಮನು ವೈಜ್ಞಾನಿಕ ಸಾಧನಗಳು ಹಾಗೂ ಜ್ಞಾನದ ಸಾಧನಗಳ ಆಧಾರದ ಮೇಲೆ ಸದಾ ಸುಖಿಯಾಗಿರುವುದಿಲ್ಲ. ಆದರೆ ಸಾಧನಗಳನ್ನೂ ಸಹ ತನ್ನ ಸಾಧನೆಯ ಸ್ವರೂಪದಲ್ಲಿ ಕಾರ್ಯದಲ್ಲಿ ತರುತ್ತಾರೆ. ಸಾಧನಗಳನ್ನು ಆಧಾರ ಮಾಡಿಕೊಳ್ಳುವುದಿಲ್ಲ ಆದರೆ ತನ್ನ ಸಾಧನೆಯ ಆಧಾರದಿಂದ ಸಾಧನಗಳನ್ನು ಕಾರ್ಯದಲ್ಲಿ ತರುತ್ತಾರೆ. ಹೇಗೆ ಕೆಲವು ಬ್ರಾಹ್ಮಣ ಆತ್ಮರು ಕೆಲಕೆಲವೊಮ್ಮೆ ಹೇಳುತ್ತಾರೆ – ನಮಗೆ ಈ ಅವಕಾಶ ಸಿಗಲಿಲ್ಲ, ಈ ಮಾತಿನ ಸಹಯೋಗ ಸಿಗಲಿಲ್ಲ, ಈ ಜೊತೆ ಸಿಗಲಿಲ್ಲ, ಆದ್ದರಿಂದ ಖುಷಿಯು ಕಡಿಮೆಯಾಯಿತು ಅಥವಾ ಸೇವೆಯ ಸ್ವಯಂನ ಉಮ್ಮಂಗ-ಉತ್ಸಾಹವು ಕಡಿಮೆಯಾಗಿ ಬಿಟ್ಟಿತು ಎಂದು. ಮೊದಲಂತೂ ಬಹಳ ಅತೀಂದ್ರಿಯ ಸುಖವಿತ್ತು, ಉಮ್ಮಂಗ-ಉತ್ಸಾಹವೂ ಇತ್ತು – “ನಾನು ಮತ್ತು ಬಾಬಾ” ಮತ್ತೇನೂ ಕಾಣಲಿಲ್ಲ. ಆದರೆ ಮೆಜಾರಿಟಿ 5 ವರ್ಷದಿಂದ 10 ವರ್ಷಗಳಲ್ಲಿ, ತಮ್ಮಲ್ಲಿ ಕೆಲಕೆಲವೊಮ್ಮೆ ಕೆಲವೊಂದು ರೀತಿಯ ಅನುಭವ ಮಾಡತೊಡಗುತ್ತಾರೆ. ಇದಕ್ಕೆ ಕಾರಣವೇನು? ಮೊದಲನೇ ವರ್ಷದಿಂದ 10 ವರ್ಷಗಳಲ್ಲಿ 10 ಪಟ್ಟು ಹೆಚ್ಚಾಗಬೇಕಲ್ಲವೆ ಆದರೆ ಏಕೆ ಕಡಿಮೆಯಾಯಿತು? ಇದಕ್ಕೆ ಕಾರಣವೇನೆಂದರೆ ಸಾಧನೆಯ ಸ್ಥಿತಿಯಲ್ಲಿದ್ದು ಸಾಧನಗಳನ್ನು ಕಾರ್ಯದಲ್ಲಿ ತೊಡಗಿಸುವುದಿಲ್ಲ. ಯಾವುದಾದರೊಂದು ಆಧಾರವನ್ನು ತನ್ನ ಉನ್ನತಿಯ ಆಧಾರವನ್ನಾಗಿ ಮಾಡಿಕೊಳ್ಳುತ್ತಾರೆ, ಆದ್ದರಿಂದ ಆ ಆಧಾರವು ಅಲುಗಾಡಿದರೆ ಉಮ್ಮಂಗ-ಉತ್ಸಾಹವೂ ಅಲುಗಾಡುತ್ತದೆ. ವಾಸ್ತವದಲ್ಲಿ ಆಧಾರ ತೆಗೆದುಕೊಳ್ಳುವುದು ಯಾವುದೇ ಕೆಟ್ಟ ಮಾತಲ್ಲ ಆದರೆ ಆಧಾರವನ್ನೇ ತಳಹದಿಯನ್ನಾಗಿ ಮಾಡಿಕೊಳ್ಳುತ್ತಾರೆ. ತಂದೆಯು ಮಧ್ಯದಲ್ಲಿ ಹೊರಟು ಹೋಗುತ್ತಾರೆ ಮತ್ತು ಆಧಾರವನ್ನೇ ತಳಹದಿಯನ್ನಾಗಿ ಮಾಡಿಕೊಂಡು ಬಿಡುತ್ತಾರೆ, ಆದ್ದರಿಂದ ಯಾವ ಏರುಪೇರು ಆಗುತ್ತದೆ? ಈ ರೀತಿ ಆಗಿದ್ದರೆ ಹೀಗೆ ಆಗುತ್ತಿರಲಿಲ್ಲ, ಈ ರೀತಿಯಾದರೆ ಹೀಗೆ ಆಗುವುದು, ಇದಂತೂ ಬಹಳ ಅವಶ್ಯಕವಾಗಿದೆ – ಈ ರೀತಿ ಅನುಭವವಾಗತೊಡಗುತ್ತದೆ. ಸಾಧನೆ ಮತ್ತು ಸಾಧನಗಳ ಬ್ಯಾಲೆನ್ಸ್ ಇರುವುದಿಲ್ಲ. ಸಾಧನಗಳ ಕಡೆ ಬುದ್ಧಿಯು ಹೆಚ್ಚಾಗಿ ಹೋಗುತ್ತದೆ. ಸಾಧನೆಯ ಕಡೆ ಬುದ್ಧಿಯು ಕಡಿಮೆಯಾಗುತ್ತದೆ ಆದ್ದರಿಂದ ಯಾವುದೇ ಕಾರ್ಯದಲ್ಲಿ ಸೇವೆಯಲ್ಲಿ ತಂದೆಯ ಆಶೀರ್ವಾದಗಳ ಅನುಭವ ಮಾಡುವುದಿಲ್ಲ ಮತ್ತು ಆಶೀರ್ವಾದಗಳು ಅನುಭವವಾಗದೇ ಇರುವ ಕಾರಣ ಸಾಧನಗಳ ಮೂಲಕ ಸಫಲತೆ ಸಿಕ್ಕಿದರೆ ಮಾತ್ರ ಉಮ್ಮಂಗ-ಉತ್ಸಾಹವೂ ಚೆನ್ನಾಗಿರುತ್ತದೆ. ಸಫಲತೆ ಕಡಿಮೆಯಾದರೆ ಉಮ್ಮಂಗ-ಉತ್ಸಾಹವೂ ಕಡಿಮೆಯಾಗುತ್ತದೆ. ಸಾಧನೆ ಅರ್ಥಾತ್ ಶಕ್ತಿಶಾಲಿ ನೆನಪು. ನಿರಂತರ ತಂದೆಯ ಜೊತೆ ಹೃದಯದ ಸಂಬಂಧ. ಕೇವಲ ಯೋಗದಲ್ಲಿ ಕುಳಿತುಕೊಂಡರೆ ಅದಕ್ಕೆ ಸಾಧನೆಯೆಂದು ಹೇಳುವುದಿಲ್ಲ ಆದರೆ ಹೇಗೆ ಶರೀರದಿಂದ ಕುಳಿತುಕೊಳ್ಳುತ್ತೀರೋ ಹಾಗೆಯೇ ಹೃದಯ ಮನಸ್ಸು-ಬುದ್ಧಿಯು ಒಬ್ಬ ತಂದೆಯ ಕಡೆ ತಂದೆಯ ಜೊತೆ ಜೊತೆಯಲ್ಲಿ ಸ್ಥಿತವಾಗಲಿ. ಶರೀರವು ಭಲೆ ಇಲ್ಲಿ ಕುಳಿತಿದೆ ಆದರೆ ಮನಸ್ಸು ಒಂದು ಕಡೆ, ಬುದ್ಧಿಯು ಇನ್ನೊಂದು ಕಡೆ ಹೋಗುತ್ತಿದೆ. ಹೃದಯದಲ್ಲಿ ಮತ್ತೇನೋ ಬರುತ್ತಿದೆಯೆಂದರೆ ಇದಕ್ಕೆ ಸಾಧನೆಯೆಂದು ಹೇಳುವುದಿಲ್ಲ. ಮನ-ಬುದ್ಧಿ, ಹೃದಯ ಮತ್ತು ಶರೀರ ನಾಲ್ಕೂ ಸಹ ಜೊತೆ ಜೊತೆಯಲ್ಲಿ ತಂದೆಯ ಜೊತೆ ಸಮಾನ ಸ್ಥಿತಿಯಿರಲಿ. ಇದು ಯಥಾರ್ಥ ಸಾಧನೆಯಾಗಿದೆ. ತಿಳಿಯಿತೇ – ಒಂದುವೇಳೆ ಯಥಾರ್ಥ ಸಾಧನೆಯಿಲ್ಲದಿದ್ದರೆ ಅಲ್ಲಿ ಆರಾಧನೆ ನಡೆಯುತ್ತದೆ. ಮೊದಲೂ ತಿಳಿಸಿದ್ದೇವೆ- ಕೆಲವೊಮ್ಮೆ ನೆನಪು ಮಾಡುತ್ತಾರೆ ಆದರೆ ಕೆಲವೊಮ್ಮೆ ದೂರುತ್ತಾರೆ. ನೆನಪಿನಲ್ಲಿ ದೂರಿನ (ಪ್ರಾರ್ಥನೆ) ಅವಶ್ಯಕತೆಯಿಲ್ಲ. ಸಾಧನೆಯಿರುವವರ ಆಧಾರ ಸದಾ ತಂದೆಯೇ ಆಗಿರುತ್ತಾರೆ ಮತ್ತು ಎಲ್ಲಿ ತಂದೆಯಿರುವರೋ ಅಲ್ಲಿ ಸದಾ ಮಕ್ಕಳ ಏರುವ ಕಲೆಯಾಗುವುದು. ಕಡಿಮೆಯಾಗುವುದಿಲ್ಲ ಬದಲಾಗಿ ಅನೇಕ ಪಟ್ಟು ಹೆಚ್ಚುತ್ತಾ ಹೋಗುತ್ತದೆ. ಕೆಲವೊಮ್ಮೆ ಕೆಳಗೆ ಕೆಲವೊಮ್ಮೆ ಮೇಲೆ ಇದರಲ್ಲಿ ಸುಸ್ತಾಗುತ್ತದೆ. ತಾವುಯಾವುದೇ ಅಲುಗಾಡುವ ಸ್ಥಾನದಲ್ಲಿ ಕುಳಿತುಕೊಂಡರೆ ಏನಾಗುವುದು? ಹೇಗೆ ರೈಲಿನಲ್ಲಿ ಬಹಳ ಅಲುಗಾಡಿದರೆ ಸುಸ್ತಾಗುತ್ತದೆಯಲ್ಲವೆ. ಕೆಲವೊಮ್ಮೆ ಉಮ್ಮಂಗ-ಉತ್ಸಾಹದಲ್ಲಿರುತ್ತೀರಿ, ಕೆಲವೊಮ್ಮೆ ಮಧ್ಯದಲ್ಲಿರುತ್ತೀರಿ, ಇನ್ನೂ ಕೆಲವೊಮ್ಮೆ ಕೆಳಗಡೆ ಬಂದು ಬಿಡುತ್ತೀರೆಂದರೆ ಇದು ಅಲುಗಾಟವಾಯಿತಲ್ಲವೆ. ಆದ್ದರಿಂದ ಸುಸ್ತಾಗುತ್ತೀರಿ ಇಲ್ಲವೆಂದರೆ ಬೋರ್ ಆಗಿ ಬಿಡುತ್ತೀರಿ ನಂತರ ಹೀಗೇ ನಡೆಯುವುದೇ ಎಂದು ಆಲೋಚಿಸುತ್ತೀರಿ ಆದರೆ ಯಾರು ಸಾಧನೆಯ ಮೂಲಕ ತಂದೆಯ ಜೊತೆಯಿರುವರೋ ಅವರಿಗಾಗಿ ಸಂಗಮಯುಗದಲ್ಲಿ ಎಲ್ಲವೂ ಹೊಸದೇ ಹೊಸದರ ಅನುಭವವಾಗುತ್ತದೆ. ಪ್ರತೀ ಘಳಿಗೆ ಪ್ರತೀ ಸಂಕಲ್ಪದಲ್ಲಿ ನವೀನತೆ. ಏಕೆಂದರೆ ಪ್ರತೀ ಹೆಜ್ಜೆಯಲ್ಲಿ ಹಾರುವಕಲೆ ಅರ್ಥಾತ್ ಪ್ರಾಪ್ತಿಯಲ್ಲಿ ಪ್ರಾಪ್ತಿಯಾಗುತ್ತಾ ಇರುತ್ತದೆ. ಪ್ರತೀ ಸಮಯ ಪ್ರಾಪ್ತಿಯಿದೆ. ಸಂಗಮಯುಗದಲ್ಲಿ ಸದಾ ತಂದೆಯು ಆಸ್ತಿ ಮತ್ತು ವರದಾನದ ರೂಪದಲ್ಲಿ ಪ್ರಾಪ್ತಿ ಮಾಡಿಸುತ್ತಾರೆ ಆದ್ದರಿಂದ ಪ್ರಾಪ್ತಿಯಲ್ಲಿ ಖುಷಿಯೂ ಇರುತ್ತದೆ ಮತ್ತು ಖುಷಿಯಲ್ಲಿ ಉಮ್ಮಂಗ-ಉತ್ಸಾಹವೂ ಹೆಚ್ಚುತ್ತಾ ಹೋಗುತ್ತದೆ, ಕಡಿಮೆಯಾಗುವುದಕ್ಕೇ ಸಾಧ್ಯವಿಲ್ಲ. ಭಲೆ ಮಾಯೆ ಬಂದರೂ ಸಹ ವಿಜಯಿಗಳಾಗುವ ಖುಷಿಯಿರುವುದು ಏಕೆಂದರೆ ಮಾಯೆಯ ಮೇಲೆ ವಿಜಯವನ್ನು ಪ್ರಾಪ್ತಿ ಮಾಡಿಕೊಳ್ಳಲು ಜ್ಞಾನಪೂರ್ಣರಾಗಿ ಬಿಟ್ಟಿದ್ದೀರಿ. ಅಂದಮೇಲೆ 10 ವರ್ಷದವರಿಗೆ 10 ಪಟ್ಟು, 20 ವರ್ಷದವರಿಗೆ 20 ಪಟ್ಟು ಹೆಚ್ಚಾಗುತ್ತಿದೆಯೇ? ಭಲೆ ಹೇಳಲು ಈ ರೀತಿ ಹೇಳಲಾಗುತ್ತದೆ ಆದರೆ ಅನೇಕ ಪಟ್ಟು ಹೆಚ್ಚಾಗಬೇಕಾಗಿದೆ.

ಈಗ ಈ ವರ್ಷದಲ್ಲಿ ಏನು ಮಾಡುವಿರಿ? ಉಮ್ಮಂಗ-ಉತ್ಸಾಹವಂತೂ ತಂದೆಯ ಮೂಲಕ ಸಿಕ್ಕಿರುವ ತಮ್ಮ ಸಂಪತ್ತಾಗಿದೆ. ತಂದೆಯ ಆಸ್ತಿಯನ್ನು ತಮ್ಮದನ್ನಾಗಿ ಮಾಡಿಕೊಂಡಿದ್ದೀರಿ ಅಂದಮೇಲೆ ಆಸ್ತಿಯನ್ನು ಹೆಚ್ಚಿಸಿಕೊಳ್ಳುವರೋ ಅಥವಾ ಕಡಿಮೆ ಮಾಡಿಕೊಳ್ಳುವರೋ? ಈ ವರ್ಷದಲ್ಲಿ ವಿಶೇಷವಾಗಿ ನಾಲ್ಕು ಪ್ರಕಾರದ ಸೇವೆಯಲ್ಲಿ ಅಂಡರ್ ಲೈನ್ ಮಾಡಿರಿ.

ಮೊದಲನೆಯದಾಗಿದೆ – ಸ್ವಯಂನ ಸೇವೆ, ಎರಡನೆಯದು – ವಿಶ್ವ ಸೇವೆ, ಮೂರನೆಯದು ಮನಸ್ಸಾ ಸೇವೆ. ಒಂದು ವಾಣಿಯ ಮೂಲಕ ಸೇವೆಯಾಗಿದೆ, ಇನ್ನೊಂದು ಮನಸ್ಸಾ ಸೇವೆಯು ವಿಶೇಷವಾಗಿದೆ. ನಾಲ್ಕನೆಯದು ಯಜ್ಞ ಸೇವೆ.

ಎಲ್ಲಿಯೇ ಇರಿ, ಯಾವುದೇ ಸೇವಾಕೇಂದ್ರದಲ್ಲಿರಿ, ಆ ಸೇವಾಸ್ಥಾನವು ಯಜ್ಞ ಕುಂಡವಾಗಿದೆ. ಕೇವಲ ಮಧುಬನವು ಯಜ್ಞವಾಗಿದೆ ತಮ್ಮ ಸ್ಥಾನವು ಯಜ್ಞವಲ್ಲ ಎಂದಲ್ಲ. ಯಜ್ಞ ಸೇವೆ ಅರ್ಥಾತ್ ಕರ್ಮಣಾದ ಮೂಲಕ ಒಂದಲ್ಲ ಒಂದು ಸೇವೆಯನ್ನು ಅವಶ್ಯವಾಗಿ ಮಾಡಬೇಕು. ಬಾಪ್ದಾದಾರವರ ಬಳಿ ಸೇವೆಯ ಮೂರು ಪ್ರಕಾರದ ಖಾತೆಗಳು ಎಲ್ಲರದೂ ಜಮಾ ಆಗುತ್ತದೆ. ಮನಸ್ಸಾ-ವಾಚಾ ಮತ್ತು ಕರ್ಮಣಾ, ತನು-ಮನ ಮತ್ತು ಧನ, ಕೆಲವರು ಬ್ರಾಹ್ಮಣರು ಯೋಚಿಸುತ್ತಾರೆ – ನಾವಂತೂ ಧನದಿಂದ ಸಹಯೋಗಿಗಳಾಗಲು ಆಗುವುದಿಲ್ಲ, ಸೇವೆ ಮಾಡಲು ಸಾಧ್ಯವಾಗುವುದಿಲ್ಲ ಏಕೆಂದರೆ ನಾವಂತೂ ಸಮರ್ಪಿತರಾಗಿದ್ದೇವೆ, ಹಣವನ್ನು ಸಂಪಾದಿಸುವುದೇ ಇಲ್ಲ ಅಂದಮೇಲೆ ಧನ ಸೇವೆಯನ್ನು ಹೇಗೆ ಮಾಡುವುದು ಎಂದು ಯೋಚಿಸುತ್ತಾರೆ ಆದರೆ ಒಂದುವೇಳೆ ಸಮರ್ಪಿತ ಆತ್ಮನು ಯಜ್ಞದ ಕಾರ್ಯದಲ್ಲಿ ಗಮನವನ್ನಿಟ್ಟು ಉಳಿತಾಯ ಮಾಡುತ್ತಾರೆಂದರೆ ಅದು ಹಣದ ಉಳಿತಾಯ ಮಾಡಿದಂತೆ. ಆ ಉಳಿತಾಯದ ಹಣವು ತಮ್ಮ ಹೆಸರಿನಿಂದ ಜಮಾ ಆಗುತ್ತದೆ, ಅದು ಸೂಕ್ಷ್ಮ ಖಾತೆಯಾಗಿದೆ. ಒಂದುವೇಳೆ ಯಾರಾದರೂ ನಷ್ಟ ಮಾಡುತ್ತಾರೆಂದರೆ ಅವರ ಖಾತೆಯಲ್ಲಿ ಹೊರೆಯು ಜಮಾ ಆಗುತ್ತದೆ ಮತ್ತು ಉಳಿತಾಯ ಮಾಡಿದರೆ ಅವರ ಧನದ ಖಾತೆಯಲ್ಲಿ ಜಮಾ ಆಗುತ್ತದೆ. ಯಜ್ಞದ ಒಂದೊಂದು ಕಣವೂ ಮುತ್ತಿನ ಸಮಾನವಾಗಿದೆ. ಒಂದುವೇಳೆ ಯಜ್ಞದ ವಸ್ತುಗಳನ್ನು ಹೃದಯದಿಂದ (ತೋರ್ಪಡಿಕೆಯಿಂದ ಅಲ್ಲ) ಉಳಿತಾಯ ಮಾಡುತ್ತೀರೆಂದರೆ ಅದಕ್ಕೆ ಮುತ್ತುಗಳಷ್ಟು ಜಮಾ ಆಗುತ್ತಾ ಇರುತ್ತದೆ. ಎರಡನೆಯ ಮಾತು – ಒಂದುವೇಳೆ ಸಮರ್ಪಿತ ಆತ್ಮನು ಸೇವೆಯ ಮೂಲಕ ಅನ್ಯರ ಧನವನ್ನು ಸಫಲ ಮಾಡಿಸುತ್ತಾರೆಂದರೆ ಅದರಲ್ಲಿ ಇವರದೂ ಸಹ ಪಾಲು ಜಮಾ ಆಗುತ್ತದೆ. ಆದ್ದರಿಂದ ಎಲ್ಲರದೂ ಮೂರು ಪ್ರಕಾರದ ಖಾತೆಯಿದೆ, ಮೂರು ಖಾತೆಗಳ ಪರ್ಸೆಂಟೇಜ್ ಚೆನ್ನಾಗಿರಬೇಕು. ನಾವಂತೂ ವಾಚಾ ಸೇವೆಯಲ್ಲಿ ಬಹಳ ಬ್ಯುಜಿಯಾಗಿರುತ್ತೇವೆ, ನಮ್ಮದು ವಾಚಾ ಸೇವೆಯ ಕರ್ತವ್ಯವಾಗಿದೆ. ಮನಸ್ಸಾ ಮತ್ತು ಕರ್ಮಣಾದಲ್ಲಿ ಪರ್ಸೆಂಟೇಜ್ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ, ಆದರೆ ಈ ನೆಪವೂ ನಡೆಯುವುದಿಲ್ಲ. ವಾಣಿಯ ಸಮಯದಲ್ಲಿ ಒಂದುವೇಳೆ ಮನಸ್ಸು ಮತ್ತು ವಾಚಾ ಸೇವೆಯನ್ನು ಒಟ್ಟಿಗೆ ಮಾಡಿದರೆ ಯಾವ ಫಲಿತಾಂಶವಾಗುವುದು? ಮನಸ್ಸಾ ಮತ್ತು ವಾಚಾ ಸೇವೆಯನ್ನು ಒಟ್ಟಿಗೆ ಮಾಡಬಲ್ಲಿರಾ? ಆದರೆ ವಾಚಾ ಸಹಜವಾಗಿದೆ, ಮನಸ್ಸಾ ಸೇವೆಯಲ್ಲಿ ಗಮನ ಕೊಡುವ ಮಾತಾಗಿದೆ ಆದ್ದರಿಂದ ವಾಚಾ ಸೇವೆಯದು ಜಮಾ ಆಗಿ ಬಿಡುತ್ತದೆ ಆದರೆ ಮನಸ್ಸಾದ ಖಾತೆಯು ಖಾಲಿಯಾಗಿ ಉಳಿದುಕೊಳ್ಳುತ್ತದೆ. ವಾಚಾದಲ್ಲಿ ಎಲ್ಲರಿಗಿಂತಲೂ ಬುದ್ಧಿವಂತರಾಗಿದ್ದೀರಿ. ನೋಡಿ, ಇತ್ತೀಚೆಗೆ ಹಿರಿಯ ದಾದಿಯರಿಗಿಂತಲೂ ಚೆನ್ನಾಗಿ ಭಾಷಣವನ್ನು ಚಿಕ್ಕ-ಚಿಕ್ಕವರು ಮಾಡುತ್ತಾರೆ ಏಕೆಂದರೆ ಬಿಸಿ ರಕ್ತವಲ್ಲವೆ. ಭಲೆ ಮುಂದೆ ಬನ್ನಿರಿ, ಬಾಪ್ದಾದಾ ಖುಷಿ ಪಡುತ್ತೇವೆ. ಆದರೆ ಮನಸ್ಸಾದ ಖಾತೆಯು ಖಾಲಿಯಾಗಿ ಉಳಿದುಕೊಳ್ಳುವುದು ಏಕೆಂದರೆ ಪ್ರತೀ ಖಾತೆಗೆ 100 ಅಂಕಗಳಿವೆ. ಕೇವಲ ಸ್ಥೂಲ ಸೇವೆಗೆ ಕರ್ಮಣಾ ಸೇವೆಯೆಂದು ಹೇಳುವುದಿಲ್ಲ. ಕರ್ಮಣಾ ಅರ್ಥಾತ್ ಸಂಘಟನೆಯಲ್ಲಿ, ಸಂಬಂಧ-ಸಂಪರ್ಕದಲ್ಲಿ ಬರುವುದು. ಇದು ಕರ್ಮದ ಖಾತೆಯಲ್ಲಿ ಜಮಾ ಆಗುತ್ತದೆ ಅಂದಾಗ ಕೆಲವರದು ಮೂರು ಖಾತೆಗಳಲ್ಲಿ ಬಹಳ ಅಂತರವಿದೆ ಮತ್ತು ಅವರು ಮಾತ್ರ ನಾವು ಬಹಳ ಸೇವೆ ಮಾಡುತ್ತಿದ್ದೇವೆ, ಬಹಳ ಚೆನ್ನಾಗಿದ್ದೇವೆ ಎಂದು ಖುಷಿಪಡುತ್ತಿರುತ್ತಾರೆ, ಭಲೆ ಖುಷಿಯಾಗಿರಿ ಆದರೆ ಖಾತೆಯು ಖಾಲಿಯೂ ಇರಬಾರದು ಏಕೆಂದರೆ ಬಾಪ್ದಾದಾ ಮಕ್ಕಳ ಸ್ನೇಹಿಯಲ್ಲವೆ ಅಂದಮೇಲೆ ನಮಗೆ ಹೀಗೂ ಆಗುತ್ತದೆಯೆಂದು ಸೂಚನೆಯನ್ನೂ ಕೊಡಲಿಲ್ಲ ಎಂದು ದೂರು ಕೊಡಬಾರದು. ಆ ಸಮಯದಲ್ಲಿ ಬಾಪ್ದಾದಾ ಈ ಮಾತನ್ನು ನೆನಪಿಗೆ ತರಿಸುವರು. ಟಿ.ವಿ.ಯಲ್ಲಿ ಚಿತ್ರವು ಸನ್ಮುಖದಲ್ಲಿ ಬರುವುದು ಆದ್ದರಿಂದ ಈ ವರ್ಷದಲ್ಲಿ ಸೇವೆಯನ್ನು ಭಲೆ ಬಹಳಷ್ಟು ಮಾಡಿರಿ. ಆದರೆ ಈ ಮೂರು ಪ್ರಕಾರದ ಖಾತೆ ಮತ್ತು ನಾಲ್ಕು ಪ್ರಕಾರದ ಸೇವೆಯನ್ನು ಜೊತೆ ಜೊತೆಯಲ್ಲಿ ಮಾಡಿರಿ. ವಾಚಾದ ಕಡೆ ಭಾರಿಯಾಗಿ ಮನಸ್ಸಾ ಹಾಗೂ ಕರ್ಮಣಾ ಹಗುರವಾಗಿ ಬಿಟ್ಟರೆ ಏನಾಗುವುದು? ಬ್ಯಾಲೆನ್ಸ್ ಇರುವುದಿಲ್ಲ ಅಲ್ಲವೆ. ಬ್ಯಾಲೆನ್ಸ್ ಇಲ್ಲದಿರುವ ಕಾರಣ ಉಮ್ಮಂಗ-ಉತ್ಸಾಹವೂ ಸಹ ಏರಿಳಿತವಾಗುತ್ತದೆ. ಮೊಟ್ಟ ಮೊದಲನೆಯದಾಗಿ ಗಮನವನ್ನಿಡಿ ಆದರೆ ಬಾಪ್ದಾದಾ ಪದೇ-ಪದೇ ಹೇಳುತ್ತೇವೆ, ಅಟೆನ್ಶನ್ನನ್ನು ಟೆನ್ಶನ್ನಲ್ಲಿ ಬದಲಾಯಿಸಬೇಡಿ. ಕೆಲವೊಮ್ಮೆ ಅಟೆನ್ಶನ್ನ್ನು ಟೆನ್ಶನ್ ಮಾಡಿ ಬಿಡುತ್ತಾರೆ. ಈ ರೀತಿ ಮಾಡಬೇಡಿ, ಸಹಜ ಮತ್ತು ಸ್ವಾಭಾವಿಕ ಅಟೆನ್ಶನ್ ಇರಲಿ, ಡಬಲ್ಲೈಟ್ ಸ್ಥಿತಿಯಲ್ಲಿ ಸ್ವಾಭಾವಿಕ ಅಟೆನ್ಶನ್ ಇದ್ದೇ ಇರುತ್ತದೆ. ಒಳ್ಳೆಯದು.

ಸದಾ ತಮ್ಮ ಚೆಹರೆ ಮತ್ತು ಚಲನೆಯಲ್ಲಿ ಪವಿತ್ರತೆಯ ಆತ್ಮೀಯತೆಯ ಹೊಳಪಿರುವವರು, ಸದಾ ಪ್ರತೀ ಹೆಜ್ಜೆಯಲ್ಲಿ ಬ್ರಹ್ಮಾಚಾರೀ ಶ್ರೇಷ್ಠ ಆತ್ಮರು, ಸದಾ ತಮ್ಮ ಸೇವೆಯ ಸರ್ವ ಖಾತೆಗಳನ್ನು ಸಂಪನ್ನವಾಗಿಟ್ಟುಕೊಳ್ಳುವವರು, ಸದಾ ಹೃದಯದಿಂದ ತನ್ನ ಉನ್ನತಿಯ ದೃಡ ಸಂಕಲ್ಪ ಮಾಡುವವರು, ಸದಾ ಸ್ವ-ಉನ್ನತಿಯ ಪ್ರತಿ ಸ್ವಯಂನ್ನು ನಂಬರ್ವನ್ ಆತ್ಮ ನಿಮಿತ್ತನನ್ನಾಗಿ ಮಾಡಿಕೊಳ್ಳುವಂತಹ ತಂದೆಗೆ ಪ್ರಿಯ ಹಾಗೂ ವಿಶೇಷ ಬ್ರಹ್ಮಾ ತಾಯಿಗೆ ಪ್ರಿಯರು, ಇಂದು ತಾಯಿಯ ದಿನವನ್ನಾಚರಿಸಿದಿರಲ್ಲವೇ, ಅಂದಾಗ ಬ್ರಹ್ಮಾ ತಾಯಿಯ ಅತೀ ಮುದ್ದಿನ ಮಕ್ಕಳಿಗೆ ಬ್ರಹ್ಮಾ ತಾಯಿಯ ಹಾಗೂ ವಿಶೇಷ ತಂದೆಯದೂ ಸಹ ಹೃದಯಪೂರ್ವಕ ನೆನಪು-ಪ್ರೀತಿ ಹಾಗೂ ನಮಸ್ತೆ.

ಮಧುಬನ ನಿವಾಸಿಗಳ ಜೊತೆ:

ಮಧುಬನ ನಿವಾಸಿಗಳಿಗೆ ಒಳ್ಳೆಯ ಮತ್ತು ಸುವರ್ಣ ಅವಕಾಶ ಸಿಗುತ್ತದೆ, ಡ್ರಾಮಾನುಸಾರ ಯಾರಿಗೆ ಬಾರಿ-ಬಾರಿ ಸುವರ್ಣ ಅವಕಾಶ ಸಿಗುವುದೋ, ಅವರಿಗೆ ಬಾಪ್ ದಾದಾ ಅತಿ ದೊಡ್ಡ “ಚಾನ್ಸಲರ್” (ಕುಲಪತಿ) ಎನ್ನುತ್ತಾರೆ. ಸೇವೆಯ ಫಲ ಮತ್ತು ಬಲ ಎರಡೂ ಪ್ರಾಪ್ತಿ ಆಗುತ್ತವೆ. ಬಲವೂ ಸಿಗುತ್ತಿದೆ, ಆ ಬಲದಿಂದ ಸೇವೆ ನಡೆಯುತ್ತಿದೆ, ಮತ್ತು ಫಲ ಶಕ್ತಿಶಾಲಿಯನ್ನಾಗಿ ಮಾಡಿ ಮುಂದುವರೆಸುತ್ತಿದೆ. ಎಲ್ಲರಿಗಿಂತ ಜಾಸ್ತಿ ಮುರಳಿ ಯಾರು ಕೇಳುತ್ತಾರೆ? ಮಧುಬನವಾಸಿಗಳು. ಅನ್ಯರು ಲೆಕ್ಕಮಾಡೀ ಮುರಳಿ ಕೇಳುತ್ತಾರೆ, ಮತ್ತು ನೀವು ಸದಾ ಕೇಳುತ್ತಿರುತ್ತೀರಿ. ಕೇವಲ ಕೇಳುವುದರಲ್ಲಿ ಒಂದನೇ ನಂಬರ್ ಆಗಿರುವಿರೋ ಇಲ್ಲ ಮಾಡುವುದರಲ್ಲಿ ಕೂಡ? ಮಾಡುವುದರಲ್ಲಿ ಮೊದಲ ನಂಬರ್ ಬರುತ್ತೀರ ಇಲ್ಲ ಎರಡು ಮೂರು ಆಗಿ ಬಿಡುತ್ತದೆ? ಯಾರು ಸಮೀಪ ಆಗಿರುತ್ತಾರೆ ಅವರ ಮೇಲೆ ಸಲಿಗೆ ಇರುತ್ತದೆ ಮತ್ತು ಬಾಪ್ ದಾದರವರದ್ದೂ ವಿಶೇಷ ಸಲಿಗೆ ಇದೆ; ಮಾಡಲೇ ಬೇಕು ಮತ್ತು ಮೊದಲ ನಂಬರಿನಲ್ಲಿ. ಯಾವುದರಲ್ಲೂ ಹಿಂದಿಲ್ಲ. ಎಲ್ಲ ಜಮಾದ ಖಾತೆಯಲ್ಲಿ ಮೊದಲ ನಂಬರ್ ಬರಬೇಕು ಮತ್ತು ಪೂರ್ಣವಾಗಿರಬೇಕು. ಯಾವ ಖಾತೆಯಲ್ಲೂ ಸ್ವಲ್ಪ ಮಾತ್ರ ಖಾಲಿ ಇರಬಾರದು. ಯಾವ ತರಹ ಮಧುಬನದಲ್ಲಿ ಸರ್ವ ಪ್ರಾಪ್ತಿಗಳು – ಶಾರೀರಿಕವಾಗಲಿ ಆತ್ಮಿಕವಾಗಲಿ – ಮೊದಲ ದರ್ಜೆಯದ್ದು ಸಿಗುತ್ತದೆ, ಅದೇ ತರಹ ಮಾಡುವುದರಲ್ಲೂ ಮೊದಲ ನಂಬರ್. ಮೊದಲ ದರ್ಜೆಯವರ (ಒಂದನೇ ನಂಬರ್) ಲಕ್ಷಣವಾಗಿದೆ, ಪ್ರತಿಯೊಂದು ಮಾತಿನಲ್ಲೂ ವಿಜಯಿಗಳು. ವಿಜಯಿಗಳಾಗಿರುವಿರಿ ಎಂದರೆ ಮೊದಲನಂಬರ್ ರವರೆಂದು ಅರ್ಥ. ಒಮೊಮ್ಮೆ ವಿಜಯಿಗಳಾದರೆ ಮೊದಲ ನಂಬರ್ ವರಲ್ಲವೆಂದರ್ಥ. ಒಳ್ಳೆಯದು, ಸೇವೆ ಮಾಡಿದ್ದಕ್ಕೆ ಅಭಿನಂದನೆಗಳು. ಸೇವೆಯ ಪ್ರಮಾಣ ಪತ್ರ ಅಂತೂ ಸಿಕ್ಕಿದೆ, ಇನ್ನಾವುದು ಬಾಕಿ ಇದೆ?

ಒಂದನೆಯದು ತಮ್ಮ ಪುರುಷಾರ್ಥದಲ್ಲಿ ಸ್ವ-ಸಂತುಷ್ಟರಾಗಿ, ಎರಡನೆಯದಾಗಿ ಪ್ರಭುವಿಗೆ ಪ್ರಿಯರಾಗಿ, ಮೂರನೆಯದಾಗಿ ಪರಿವಾರಕ್ಕೆ ಪ್ರಿಯರಾಗಿ. ಈ ಮೂರೂ ಪ್ರಮಾಣ ಪತ್ರಗಳನ್ನು ಪ್ರತಿಯೊಬ್ಬರೂ ಪಡೆದುಕೊಳ್ಳಬೇಕು. ಈ ತರಹ ಅಲ್ಲ, ಮೊದಲನೆಯ ಪ್ರಮಾಣ ಪತ್ರ – ಸ್ವ-ಸಂತುಷ್ಟರು ಆಗಿದ್ದೀರಿ, ಆದರೆ ಎರಡನೆಯದು ಇಲ್ಲ. ಮೂರೂ ಪ್ರಮಾಣ ಪತ್ರಗಳು ಒಟ್ಟಿಗೆ ಸಿಗಬೇಕು. ಅಂದ ಹಾಗೆ, ತಂದೆಗೆ ಪ್ರಿಯರು ಯಾರು? ತಂದೆ ಹೇಳಿದಂತೆ ಮಾಡುವವರು. ಇದಾಗಿದೆ, ಪ್ರಭುವಿಗೆ ಪ್ರಿಯರ ಪ್ರಮಾಣ ಪತ್ರ. ಸ್ವ-ಪ್ರಿಯರೆಂದರೆ, ಯಾವುದು ನಿಮಗೆ ಪ್ರಿಯವೋ ಅದು ತಂದೆಗೂ ಪ್ರಿಯ. ನಿಮ್ಮ ಪ್ರಾಪಂಚಿಕ ನೆಚ್ಚಿನದ್ದಲ್ಲ, ತಂದೆಗೆ ಯಾವುದು ಇಷ್ಟವೋ ಅದೇ ನನಗೂ ಇಷ್ಟ. ಸಂತುಷ್ಟತೆಯ ಪ್ರಮಾಣ ಪತ್ರವೇ ಆಗಿದೆ – ಯಾವುದರಿಂದ ತಂದೆ ಸಂತುಷ್ಟರೋ ಅದರಿಂದ ನಾನೂ ಸಂತುಷ್ಟ, ಜೊತೆಯಲ್ಲಿ ಪರಿವಾರವೂ ಸಂತುಷ್ಟ. ಹಾಗಾದರೆ ಈ ಮೂರೂ ಪ್ರಮಾಣ ಪತ್ರಗಳನ್ನ ಪಡೆದುಕೊಂಡಿದ್ದೀರಾ? ಪ್ರಮಾಣ ಪತ್ರ ಸಿಗಬೇಕಾದರೆ ಅದನ್ನು ಪರಿಶೀಲಿಸಲಾಗುತ್ತದೆ. ದೊಡ್ಡವರಿಂದ ಪರಿಶೀಲನೆ ಮಾಡಬೇಕಾಗುತ್ತದೆ. ತಂದೆಯಂತೂ ಬಹುಬೇಗ ರಾಜಿಯಾಗುತ್ತಾರೆ, ಆದರೆ ಇಲ್ಲಿ ಎಲ್ಲರನ್ನ ರಾಜಿ ಮಾಡಿಸಬೇಕಾಗುತ್ತದೆ. ಯಾರು ನಿಮ್ಮ ಜೊತೆಯಲ್ಲಿರುತ್ತಾರೋ ಅವರಿಂದ ಪ್ರಮಾಣ ಪತ್ರದ ಅನುಮೋದನೆ ಪಡದುಕೊಳ್ಳಬೇಕಾಗುತ್ತದೆ. ತಂದೆಯಾದರೋ ಜಾಸ್ತಿ ದಯಾಹೃದಯಿ, ಬಹಳ ಬೇಗನೆ “ಹಾಂ ಜೀ” ಎನ್ನುತ್ತಾರೆ. ಒಳ್ಳೆಯದು, ಎಲ್ಲರ ಸೇವಾ ವಿಭಾಗಗಳು ನಿರ್ವಿಘ್ನವಾಗಿವೆಯಾ? ನಿಮ್ಮ ಸೇವೆಯ ಸುಗಂಧ ವಿಶ್ವದಲ್ಲಿ ಹರಡಿದೆ ಮತ್ತು ಸೂಕ್ಷ್ಮವತನದ ತನಕವೂ ಬಂದಿದೆ. ಈಗ ಕೇವಲ ಈ ಮೂರು ಪ್ರಮಾಣ ಪತ್ರಗಳನ್ನು ಅನುಮೋದಿಸಿಕೊಳ್ಳಬೇಕಾಗಿದೆ. ಒಳ್ಳೆಯದು.

ಭಾರತವಾಸಿಗಳ ಜೊತೆ

ಈ ತರಹ ಅನುಭವ ಆಗುತ್ತದೆಯೇ, ಸುಖ ದಾತ ತಂದೆಯ ಜೊತೆ ನಾವು ಸುಖಿ ಮಕ್ಕಳಾಗಿದ್ದೇವೆಂದು? ತಂದೆ ಸುಖದಾತ ಎಂದಮೇಲೆ ಮಕ್ಕಳು ಸುಖ ಸ್ವರೂಪಿಗಳು ಆಗಿರುತ್ತಾರಲ್ಲವೇ? ಎಂದಾದರೂ ದುಃಖದ ಅಲೆಗಳು ಬರುತ್ತದಯೇ? ಸುಖದಾತನ ಮಕ್ಕಳ ಬಳಿ ದುಃಖ ಬರಲು ಸಾಧ್ಯವಿಲ್ಲ. ಏಕೆಂದರೆ ಸುಖದಾತ ತಂದೆಯ ಖಜಾನೆ ನಿಮ್ಮ ಖಜಾನೆಯಾಗಿ ಬಿಟ್ಟಿದೆ. ಸುಖ ನಿಮ್ಮ ಆಸ್ತಿಯಾಯಿತು. ಸುಖ, ಶಾಂತಿ, ಶಕ್ತಿ, ಖುಷಿ – ನಿಮ್ಮ ಖಜಾನೆಯಾಗಿದೆ. ಸುಖದಾತ ತಂದೆಯ ಖಜಾನೆಯೇ ನಿಮ್ಮ ಖಜಾನೆಯಾಗಿ ಬಿಟ್ಟಿದೆ. ಬಾಲಕರು ಹಾಗೂ ಮಾಲಿಕರು ಕೂಡ ಆಗಿರುವಿರಲ್ಲವೇ! ಒಳ್ಳೆಯದು, ಭಾರತ ಕೂಡ ಕಮ್ಮಿಯೇನಲ್ಲ. ಪ್ರತಿಯೊಂದು ಗ್ರೂಪ್ ನಲ್ಲೂ ಬಂದು ಬಿಡುವಿರಿ. ತಂದೆಯೂ ಖುಷಿ ಪಡುತ್ತಾರೆ. ಐದು ಸಾವಿರ ವರ್ಷ ಅಗಲಿದವರು ಪುನ: ಸಿಕ್ಕಿದರು, ಅಂದಮೇಲೆ ಎಷ್ಟೊಂದು ಖುಷಿಯಾಗುತ್ತದೆ! ಯಾರಾದರೂ 10-12 ವರ್ಷ ಅಗಲಿ ಪುನ: ಸಿಕ್ಕಿದರೆ ಎಷ್ಟು ಖುಷಿಯಾಗುತ್ತದೆಯಲ್ಲವೆ! ಇಲ್ಲಿ 5000 ವರ್ಷಗಳಾದವು ತಂದೆ ಮಕ್ಕಳು ದೂರವಾಗಿ, ಮತ್ತು ಈಗ ಪುನ: ಸಿಕ್ಕಿದ್ದಾರೆ! ಆದ್ದರಿಂದ ಬಹಳ ಖುಷಿಯಾಗುತ್ತದೆಯಲ್ಲವೆ! ಎಲ್ಲಕ್ಕಿಂತ ಜಾಸ್ತಿ ಖುಷಿ ಯಾರ ಬಳಿ ಇದೆ? ಎಲ್ಲರ ಬಳಿ ಇದೆ. ಏಕೆಂದರೆ ಈ ಖುಷಿಯ ಖಜಾನೆ ಎಷ್ಟಿದೆಯೆಂದರೆ, ಯಾರು ಎಷ್ಟು ಪಡಕೊಂಡರೂ, ಅಗಣಿತವಾಗಿದೆ. ಹೀಗಾಗಿ ಪ್ರತಿಯೊಬ್ಬರೂ ಅಧಿಕಾರಿ ಆತ್ಮಗಳಾಗಿದ್ದೀರಲ್ಲವೇ? ಸಂಗಮಯುಗಕ್ಕೆ ಯಾವ ಯಾವ ಯುಗ ಎನ್ನಲಾಗುತ್ತದೆ? ಖುಷಿಯ ಯುಗವಾಗಿದೆ. ಖಜಾನೆಯೇ ಖಜಾನೆ! ಎಷ್ಟು ಬೇಕಾದರೂ ತುಂಬಿಸಿಕೊಳ್ಳಿರಿ. ಧನವಾನ್ ಭವ, ಸರ್ವ ಖಜಾನೆ ಭವದ ವರದಾನ ಸಿಕ್ಕಿದೆ. ಸರ್ವ ಖಜಾನೆಗಳ ವರದಾನ ಸಿಕ್ಕಿದೆ. ಬ್ರಾಹ್ಮಣ ಜೀವನವೆಂದರೆ ಖುಷಿಯೇ ಖುಷಿ. ಈ ಖುಷಿ ಮಾಯವಾಗುವುದಿಲ್ಲ ತಾನೇ? ಮಾಯೆ ಈ ಖಜನೆಗಳ ಕಳ್ಳತನ ಮಾಡುವುದಿಲ್ಲ ತಾನೇ? ಯಾರು ಎಚ್ಚರಿಕೆಯಿಂದ ಇರುತ್ತಾರೆ, ಬುದ್ಧಿವಂತರಾಗಿರುತ್ತಾರೆ, ಅವರ ಖಜಾನೆಯನ್ನು ಎಂದೂ ಯಾರೂ ಲೂಟಿ ಮಾಡಲು ಸಾಧ್ಯವಿಲ್ಲ. ಯಾರು ಸ್ವಲ್ಪ ಕೂಡ ನಿರ್ಲಕ್ಷರಾಗಿರುತ್ತಾರೋ ಅವರ ಖಜಾನೆ ಲೂಟಿಯಾಗುತ್ತದೆ. ನೀವು ಎಚ್ಚರಿಕೆಯಿಂದಿರುತ್ತೀರಲ್ಲವೇ, ಇಲ್ಲಾ ಒಮೊಮ್ಮೆ ನಿದ್ರಿಸುತ್ತೀರೊ? ಯಾರಾದರೂ ನಿದ್ರಿಸಿದರೆ ಅವರದ್ದು ಕಳ್ಳತನವಾಗುತ್ತದೆಯಲ್ಲವೆ, ನಿರ್ಲಕ್ಷರಾಗಿ ಬಿಟ್ಟಿರಿ! ಸದಾ ಎಚ್ಚರಿಕೆಯಿಂದಿದ್ದರೆ, ಜಾಗಂತಿ ಜ್ಯೊತಿಯಾಗಿದ್ದರೆ, ಮಾಯೆಗೆ ನಿಮ್ಮ ಖಜಾನೆ ಲೂಟಿ ಮಾಡುವಷ್ಟು ಧೈರ್ಯ ಇರದು. ಒಳ್ಳೆಯದು, ತಾವು ಎಲ್ಲಿಂದಾದರೂ ಬಂದಿರಲಿ, ಎಲ್ಲರೂ ಪದುಮಾ ಪದಮ ಭಾಗ್ಯವಂತರಾಗಿದ್ದೀರ! ಇದೇ ಗೀತೆಯನ್ನು ಹಾಡುತ್ತಿರಿ – ಎಲ್ಲವನ್ನೂ ಪಡಕೊಂಡೆವು ಎಂದು. 21 ಜನ್ಮಗಳಿಗೆ ಖಾತರಿ ಇದೆ – ಖಜಾನೆಗಳು ಜೊತೆಯಲ್ಲಿರುತ್ತವೆಂದು. ಇಷ್ಟು ದೊಡ್ಡ ಖಾತರಿಯನ್ನು ಯಾರೂ ಕೊಡಲು ಸಾಧ್ಯವಿಲ್ಲ. ಅಂದಮೇಲೆ ಈ ಗ್ಯಾರಂಟಿ ಕಾರ್ಡ್ ತೆಗೆದುಕೊಂಡಿರುವಿರಿ ತಾನೆ? ಈ ಗ್ಯಾರಂಟಿ ಕಾರ್ಡ್ ಯಾವುದೇ ಸಾಮಾನ್ಯರು ಕೊಡುವುದಿಲ್ಲ. ದಾತ ತಂದೆ ಕೊಡುತ್ತಿದಾರೆ ಅಂದಮೇಲೆ ಯಾವ ಹೆದರಿಕೆಯೂ ಇಲ್ಲ ಯಾವುದೇ ಸಂಶಯವೂ ಇಲ್ಲ. ಒಳ್ಳೆಯದು.

ವರದಾನ:-

ಯಾರು ಫಾಲೋ ಫಾದರ್ ಮಾಡುವಂತಹ ಮಕ್ಕಳಿದ್ದಾರೆಯೋ ಅವರೇ ಸಮಾನರಾಗಿದ್ದಾರೆ ಏಕೆಂದರೆ ತಂದೆಯ ಹೆಜ್ಜೆಯಂತೆ ತಮ್ಮ ಹೆಜ್ಜೆಯಾಗಿದೆ. ಬಾಪ್ದಾದಾರವರು ಅವರಿಗೇ ಸುಪುತ್ರನೆಂದು ಹೇಳುತ್ತಾರೆ – ಯಾರು ಪ್ರತೀ ಕರ್ಮದಲ್ಲಿ ಪ್ರಮಾಣವನ್ನು ಕೊಡುವರು. ಸುಪುತ್ರನೆಂದರೆ ಸದಾ ತಂದೆಯ ಶ್ರೀಮತದ ಕೈ ಹಾಗೂ ಜೊತೆಯ ಅನುಭವ ಮಾಡುವವರು. ಎಲ್ಲಿ ತಂದೆಯ ಶ್ರೀಮತ ಅಥವಾ ವರದಾನದ ಕೈ ಇದೆಯೋ ಅಲ್ಲಿ ಸಫಲತೆಯು ಇದ್ದೇ ಇರುತ್ತದೆ. ಆದ್ದರಿಂದ ಯಾವುದೇ ಕಾರ್ಯವನ್ನು ಮಾಡುತ್ತಾ ಸ್ಮೃತಿಯಲ್ಲಿರಲಿ – ತಂದೆಯ ವರದಾನ ಹಸ್ತವು ನಮ್ಮ ಮೇಲಿದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top