15 April 2022 KANNADA Murli Today | Brahma Kumaris

Read and Listen today’s Gyan Murli in Kannada

April 14, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ದೇವೀ - ದೇವತಾ ಕುಲದವರಾಗಿದ್ದೀರಿ, ನೀವೀಗ ಪೂಜಾರಿಯಿಂದ ಪೂಜ್ಯರಾಗಬೇಕಾಗಿದೆ, ಈಗ ನಿಮ್ಮೆಲ್ಲರಿಗೂ ಭಕ್ತಿಯ ಫಲವನ್ನು ಕೊಡಲು ತಂದೆಯು ಬಂದಿದ್ದಾರೆ”

ಪ್ರಶ್ನೆ:: -

ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳಿಂದ ಬುದ್ಧಿಯೋಗವನ್ನು ತೆಗೆಯುವ ಸಹಜ ವಿಧಿ ಏನಾಗಿದೆ?

ಉತ್ತರ:-

ನನ್ನವರಂತೂ ಒಬ್ಬ ಶಿವ ತಂದೆಯ ವಿನಃ ಅನ್ಯರು ಯಾರೂ ಇಲ್ಲ – ಈ ಪಾಠವನ್ನು ಪಕ್ಕಾ ಮಾಡಿಕೊಳ್ಳಿ. ಬಾಬಾ ಹೇಳುತ್ತಾರೆ – ಮಕ್ಕಳೇ, ದೇಹ ಮತ್ತು ದೇಹದ ಎಲ್ಲಾ ಸಂಬಂಧಗಳು ದುಃಖ ಕೊಡುವುದಾಗಿವೆ. ನೀವು ನನ್ನನ್ನು ತಮ್ಮ ಮಗುವನ್ನಾಗಿ ಮಾಡಿಕೊಳ್ಳುತ್ತೀರೆಂದರೆ ನಾನು ನಿಮ್ಮ ಇಷ್ಟೊಂದು ಸೇವೆಯನ್ನು ಮಾಡುತ್ತೇನೆ ಅದರಿಂದ 21 ಜನ್ಮ ನೀವು ಸದಾ ಸುಖಿಯಾಗಿ ಇರುತ್ತೀರಿ. ವಾರಸುಧಾರರನ್ನಾಗಿ ಮಾಡಿಕೊಂಡರೆ ಆಸ್ತಿ ಕೊಡುವೆನು. ಪ್ರಿಯತಮನನ್ನಾಗಿ ಮಾಡಿಕೊಂಡರೆ ಶೃಂಗಾರ ಮಾಡಿ ಸ್ವರ್ಗದ ಮಹಾರಾಣಿಯನ್ನಾಗಿ ಮಾಡುವೆನು, ಸಹೋದರನನ್ನಾಗಿ, ಜೊತೆಗಾರನನ್ನಾಗಿ ಮಾಡಿಕೊಂಡರೆ ನಿಮ್ಮ ಜೊತೆಯಲ್ಲಿ ಆಟ ಆಡುವೆ. ನನ್ನ ಜೊತೆಯಲ್ಲಿ ಸರ್ವ ಸಂಬಂಧವನ್ನು ಜೋಡಿಸುವುದರಿಂದ ದೇಹದ ಸಂಬಂಧಗಳಿಂದ ಬುದ್ಧಿಯು ತೆಗೆಯುವುದು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಎಷ್ಟೊಂದು ಮಧುರ, ಎಷ್ಟೊಂದು ಪ್ರಿಯ ಶಿವ ಭೋಲಾ ಭಗವಾನ್..

ಓಂ ಶಾಂತಿ. ಮಕ್ಕಳು ಯಾರ ಮಹಿಮೆಯನ್ನು ಕೇಳಿದಿರಿ? ತಮ್ಮ ಬೇಹದ್ದಿನ ತಂದೆಯ ಮಹಿಮೆ. ಅವರಿಗೆ ಶಿವಬಾಬಾ ಎಂದು ಹೇಳಲಾಗುವುದು. ಬ್ರಹ್ಮಾ ತಂದೆಗೂ ಬಾಬಾ ಎಂದು ಹೇಳಲಾಗುತ್ತದೆ. ಪ್ರಜಾಪಿತ – ಪಿತ ಎಂದರೆ ಅರ್ಥವೇ ಆಗಿದೆ ಬಾಬಾ. ಪ್ರಜಾಪಿತ ಬ್ರಹ್ಮಾಕುಮಾರ ಮತ್ತು ಕುಮಾರಿಯರು, ಈಗ ನೀವು ಕುಳಿತಿದ್ದೀರಲ್ಲವೇ. ಅವಶ್ಯವಾಗಿ ನೀವು ಬ್ರಹ್ಮಾರವರ ದತ್ತು ಮಕ್ಕಳಾಗಿದ್ದೀರಿ. ಬ್ರಹ್ಮನ ಮುಖಾಂತರ ಶಿವಬಾಬಾರವರ ಮಡಿಲನ್ನು ತೆಗೆದುಕೊಂಡಿದ್ದೀರಿ. ಶಿವಬಾಬಾರವರಿಗೆ ತಮ್ಮ ಶರೀರವಂತೂ ಇಲ್ಲ. ಬ್ರಹ್ಮಾ, ವಿಷ್ಣು, ಶಂಕರನಿಗೆ ತಮ್ಮದೇ ಆದ ಶರೀರವಿದೆ ಆದರೆ ನಿರಾಕಾರ ಪರಮಾತ್ಮನಿಗೆ ಯಾವುದೇ ಆಕಾರ ಅಥವಾ ಸಾಕಾರ ಶರೀರವಿಲ್ಲ. ಅವರಿಗೆ ಪರಮಪಿತ ಎಂದು ಹೇಳಲಾಗುತ್ತದೆ. ಪ್ರಜಾಪಿತನಿಗೆ ಪರಮಪಿತ ಎಂದು ಹೇಳುವುದಿಲ್ಲ. ಪರಮಪಿತ ಎಂದರೆ ದೂರಕ್ಕಿಂತ ದೂರ ಇರುವವರೆಂದರ್ಥ. ನೀವು ಆತ್ಮಗಳೂ ಸಹ ಅಲ್ಲಿ ಇರುವವರಾಗಿದ್ದೀರಿ. ತಂದೆಯು ತುಂಬಾ ಮಧುರವಾಗಿದ್ದಾರೆ, ಆದ್ದರಿಂದಲೇ ಅವರಿಗೆ ಮಹಿಮೆಯನ್ನು ಮಾಡಲಾಗಿದೆ. ತ್ವಮೇವ ಮಾತಾಶ್ಚ ಪಿತಾ……. ಹೇಳುತ್ತಾರೆ – ಓದಿಸುವವರು ನಮ್ಮ ತರಹವೇ ಇರಲಿ, ಸಹೋದರರು ನಮ್ಮ ತರಹವೇ ಇರಲಿ, ತಂದೆಯೂ ನಮ್ಮ ಹಾಗೆ ಇರಲಿ. ಹೇಗೆ ಲೌಕಿಕ ತಂದೆಯು ಮಕ್ಕಳಿಗೆ ಆಸ್ತಿಯನ್ನು ಕೊಡುತ್ತಾರೆ. ಈಗಿನ ಮಕ್ಕಳಿಗೆ ಆಸ್ತಿಯಂತೂ ಸಿಗುತ್ತದೆ ಆದರೆ ಅವರು ತಂದೆಯ ಸೇವೆಯನ್ನು ಪೂರ್ತಿ ಮಾಡುವುದಿಲ್ಲ. ಮನೆಗೆ ಸ್ತ್ರೀ ಬಂದರು, ಸ್ವಲ್ಪ ಏರುಪೇರಾಯಿತು ಎಂದರೆ ಬೇರೆ ಮನೆ ಮಾಡಿಬಿಡುತ್ತಾರೆ. ನೀವೀಗ ಶಿವಬಾಬಾರವರನ್ನು ತಮ್ಮ ಮಗುವನ್ನಾಗಿ ಮಾಡಿಕೊಳ್ಳಿ, ಇವರು ನಿಮ್ಮ ಇಂತಹ ಸೇವೆಯನ್ನು ಮಾಡುತ್ತಾರೆ, ಆದರಿಂದ ನೀವು 21 ಜನ್ಮ ಸುಖವಾಗಿರುತ್ತೀರಿ. ಒಳ್ಳೆಯದು. ಮಗುವಿನ ಬದಲಾಗಿ ಒಂದುವೇಳೆ ತಂದೆಯನ್ನಾಗಿ ಮಾಡಿಕೊಂಡರೂ ಸಹ ನಿಮಗೆ ಸ್ವರ್ಗದಲ್ಲಿ ಸದಾ ಕಾಲಕ್ಕೋಸ್ಕರ ಸುಖವನ್ನು ಕೊಡುತ್ತಾರೆ. ಇವರನ್ನು ಪ್ರಿಯತಮನನ್ನಾಗಿ ಮಾಡಿಕೊಳ್ಳುತ್ತೀರೆಂದರೆ ನಿಮ್ಮ ಶೃಂಗಾರ ಮಾಡಿ ನಿಮ್ಮನ್ನು ಸ್ವರ್ಗದ ಮಹಾರಾಣಿಯನ್ನಾಗಿ ಮಾಡುತ್ತಾರೆ. ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳಿಂದ ಬುದ್ಧಿಯನ್ನು ತೆಗೆಯಿರಿ ಏಕೆಂದರೆ ಅವರೆಲ್ಲರೂ ನಿಮಗೆ ದುಃಖವನ್ನೇ ಕೊಡುತ್ತಾರೆ. ನಾನು ನಿಮಗೆ ಸುಖವೇ ಸುಖವನ್ನು ಕೊಡುತ್ತೇನೆ. ನೋಡಿ…! ಬಾಬಾ ನಿಮ್ಮೊಂದಿಗೆ ಆಟವಾಡುತ್ತಾರೆ. ಆಗ ತಿಳಿದುಕೊಳ್ಳುವಿರಿ – ನಾವು ಸಹೋದರನೊಂದಿಗೆ ಆಟವಾಡುತ್ತೇವೆಂದು. ಸಹೋದರನಾದರೂ ಸುಖವನ್ನೇ ಕೊಡುತ್ತಾರೆ. ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಆದ್ದರಿಂದ ಎಲ್ಲಾ ಸಂಬಂಧಗಳನ್ನು ಅವರೊಂದಿಗೆ ಜೋಡಿಸಿ. ಮತ್ತೆಲ್ಲದರಿಂದ ಬುದ್ಧಿಯೋಗವನ್ನು ತೆಗೆಯಬೇಕಾಗಿದೆ. ನನ್ನವರಂತೂ ಒಬ್ಬ ಶಿವಬಾಬಾ ಬಿಟ್ಟರೆ ಬೇರೆ ಯಾರೂ ಇಲ್ಲ……. ನಾನು ಕಲ್ಪ-ಕಲ್ಪ ನೀವು ಮಕ್ಕಳ ಸಮ್ಮುಖದಲ್ಲಿ ಬಂದು ನಿಮ್ಮನ್ನು ಎಲ್ಲಾ ದುಃಖಗಳಿಂದ ಬಿಡಿಸಿ ಸದಾ ಸುಖಿಯನ್ನಾಗಿ ಮಾಡುತ್ತೇನೆ. ಇಂತಹ ತಂದೆ ಜೊತೆ ಬುದ್ಝಿಯೋಗವನ್ನು ಇಡಬೇಕಾಗಿದೆ. ಮತ್ತು ಅವರು ಸ್ವಯಂ ಬಂದು ಬ್ರಾಹ್ಮಣನಾಗಿ ಆತ್ಮಗಳಿಗೆ ನಿಶ್ಚಿತಾರ್ಥವನ್ನು ಮಾಡಿಸುತ್ತಾರೆ. ಇವರು ಫಸ್ಟ್ಕ್ಲಾಸ್ ಬ್ರಾಹ್ಮಣನಾಗಿದ್ದಾರೆ. ನಿಮಗೆ ಎಷ್ಟು ಒಳ್ಳೆಯ ಹೆಸರನ್ನು ಇಡುತ್ತಾರೆ. ನಾಟಕದನುಸಾರ ನಿಮಗೆ ಹೆಸರಿಡಲೇಬೇಕಾಗುವುದು ಏಕೆಂದರೆ ನೀವು ಒಂದು ಕುಟುಂಬವನ್ನು ಬಿಟ್ಟು ಈಶ್ವರನ ಮಡಿಲನ್ನು ತೆಗೆದುಕೊಂಡಿರುವುದರಿಂದ ನಿಮ್ಮ ಹೆಸರು ಎಷ್ಟು ರಮಣೀಕವಾಯಿತು. ತಂದೆಯನ್ನು ಹೇ! ಪತಿತ ಪಾವನ ಬನ್ನಿ, ಬಂದು ಪಾವನರನ್ನಾಗಿ ಮಾಡಿ ಎಂದು ಎಲ್ಲರೂ ನೆನಪು ಮಾಡುತ್ತಾರೆ. ಶ್ರೀ ಕೃಷ್ಣನನ್ನೂ ಎಷ್ಟು ಪ್ರೀತಿ ಮಾಡುತ್ತಾರೆ ಮತ್ತು ಹೇಳುತ್ತಾರೆ – ಶ್ರೀಕೃಷ್ಣನಂತಹ ಪತಿ ಸಿಗಲಿ, ಮಗುವಾಗಲಿ. ಅವರು ಸ್ವರ್ಗದ ಮಾಲೀಕರೆಂಬುದನ್ನು ತಿಳಿದುಕೊಂಡಿದ್ದಾರೆ. ಆದರೂ ನಂತರ ಶ್ರೀಕೃಷ್ಣನನ್ನು ದ್ವಾಪರದಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಇದು ತಪ್ಪಾಗಿದೆ. ಈ ಎಲ್ಲಾ ತಪ್ಪುಗಳನ್ನು ನಿವಾರಣೆ ಮಾಡಿ. ತಂದೆಯು ಬಂದು ಈಗ ತಪ್ಪಿಲ್ಲದವರನ್ನಾಗಿ ಮಾಡುತ್ತಾರೆ. ಸ್ವರ್ಗದಲ್ಲಿ ಈ ರೀತಿ ತಪ್ಪು ಮಾಡುವುದೇ ಇಲ್ಲ. ತಪ್ಪು ಮಾಡಿಸುವುದು ಮಾಯೆಯಾಗಿದೆ. ಆದರೆ ಅಲ್ಲಿ ಮಾಯೆಯೇ ಇರುವುದಿಲ್ಲ. ಲಕ್ಷ್ಮೀ-ನಾರಾಯಣ ಚಿತ್ರವನ್ನು ತೋರಿಸಿ ನೀವು ಎಲ್ಲರಿಗೂ ತಿಳಿಸಬಹುದಾಗಿದೆ – ಇವರೇ ಸ್ವರ್ಗದ ಮಹಾರಾಜಾ, ಮಹಾರಾಣಿ ಆಗಿದ್ದರೆಂದು. ಈ ರೀತಿ ಯಾರು ಮಾಡಿದ್ದರು? ಹೇಗೆ ಅಜ್ಞಾನ ಕಾಲದಲ್ಲಿ ಯಾರ ಹತ್ತಿರವಾದರೂ ತುಂಬಾ ಹಣವಿದ್ದರೆ ಈ ಹಣವನ್ನು ನಿಮಗೆ ಯಾರು ಕೊಟ್ಟರೆಂದು ಕೇಳಲಾಗುತ್ತದೆ? ಅವರು ಭಗವಂತ ಕೊಟ್ಟರೆಂದು ಹೇಳುತ್ತಾರೆ. ತಂದೆಯು ನಮಗೆ ಬೇಹದಿನ ಸ್ವರಾಜ್ಯವನ್ನು ಕೊಡುತ್ತಾರೆ ಆದ್ದರಿಂದ ಅವರು ದಾತಾ ಆಗಿದ್ದಾರೆ ಮತ್ತು ಮಂದಿರದಲ್ಲಿ ಪೂಜೆಗೆ ಯೋಗ್ಯರನ್ನಾಗಿ ಮಾಡುತ್ತಾರೆ. ಬೇಹದ್ದಿನ ಶಿವಾಲಯದಲ್ಲಿ ರಾಜ್ಯಾಧಿಕಾರ ಮಾಡಿ ನಂತರ ಭಕ್ತಿ ಮಾರ್ಗದಲ್ಲಿ ಜಡಚಿತ್ರಗಳ ಶಿವಾಲಯವನ್ನು ಕಟ್ಟುತ್ತಾರೆ. ಆ ಸಮಯದಲ್ಲಿ ದೇವತೆಗಳು ವಾಮಮಾರ್ಗದಲ್ಲಿ ಹೋಗುತ್ತಾರೆ, ಆದ್ದರಿಂದ ಪತಿತ ಮನುಷ್ಯರನ್ನು ಎಂದೂ ದೇವತೆಯೆಂದು ಹೇಳಲು ಸಾಧ್ಯವಿಲ್ಲ. ಈಗ ನಿಮಗೆ ನಾವು ದೇವತಾ ಕುಲದವರೆಂದು ಗೊತ್ತಿದೆ. ತಾವೇ ಪೂಜ್ಯ, ತಾವೇ ಪೂಜಾರಿ. ಈಗ ಪುನಃ ಪೂಜಾರಿಯಿಂದ ಪೂಜ್ಯರಾಗುತ್ತಿದ್ದೀರಿ. ಅರ್ಧಕಲ್ಪ ಪೂಜ್ಯರಾಗಿದ್ದೀರಿ ಮತ್ತು ಅರ್ಧಕಲ್ಪ ಪೂಜಾರಿಯಾಗಿ ಬಿಡುತ್ತೀರಿ. ನಾನಂತು ಸದಾ ಪೂಜ್ಯನಾಗಿದ್ದೇನೆ. ಅದಕ್ಕಾಗಿಯೇ ಭಕ್ತಿಮಾರ್ಗದಲ್ಲಿ ನೀವು ನನ್ನನ್ನು ನೆನಪು ಮಾಡುತ್ತೀರಿ, ನಾನು ನಿಮಗೆ ಭಕ್ತಿಯ ಫಲವನ್ನು ಕೊಡುತ್ತೇನೆ. ಆದ್ದರಿಂದಲೇ ಹೇಳುತ್ತಿದ್ದೇನೆ- ನಿರಂತರ ನನ್ನನ್ನು ನೆನಪು ಮಾಡುವುದರಿಂದ ನಿಮಗೆ ತುಂಬಾ ಫಲವು ಸಿಗುವುದು. ನಿಮಗೆ ಈ ಹಳೆಯ ಪ್ರಪಂಚದಲ್ಲಿ ಇರುವುದೇ ಚೆನ್ನಾಗಿದೆಯೇನು? ನಾನು ಎಲ್ಲಾ ರೂಪದಲ್ಲೂ ಸುಖ ಕೊಡಲು ಬಂದಿದ್ದೇನೆ. ಆದರೆ ಅವರೆಲ್ಲರೂ ನಿಮಗೆ ದುಃಖವನ್ನೇ ಕೊಡುತ್ತಾರೆ. ಈಗ ನಾನು ನಿಮಗೆ ಸುಖದ ಆಸ್ತಿಯನ್ನು ಕೊಡುತ್ತೇನೆ. ಶಿವಬಾಬಾ ಎಷ್ಟು ಮಧುರ ಮತ್ತು ಎಷ್ಟು ಪ್ರಿಯರಾಗಿದ್ದಾರೆ ಆದ್ದರಿಂದಲೇ ನಾವು ಹೇ! ಶಿವ ಭೋಲಾ ಭಂಡಾರಿ ಜೋಳಿಗೆಯನ್ನು ತುಂಬಿಸು ಎಂದು ನೆನಪು ಮಾಡುತ್ತೇವೆ. ಈಗ ನಾವು ವಿಶ್ವದ ಮಾಲೀಕರಾಗಲು ಯೋಗ್ಯರಿಲ್ಲವೆಂದು ನೀವು ತಿಳಿದುಕೊಂಡಿದೀರಿ. ತಂದೆಯು ಬಂದು ಯೋಗ್ಯವಿಲ್ಲದವರನ್ನು ಯೋಗ್ಯರನ್ನಾಗಿ ಮಾಡುತ್ತಾರೆ ಮತ್ತು ರಾಜಯೋಗವನ್ನು ಕಲಿಸಿ 21 ಜನ್ಮಗಳಿಗೋಸ್ಕರ ಮಹಾರಾಣಿಯನ್ನಾಗಿ ಮಾಡುತ್ತಾರೆ. ಶ್ರೇಷ್ಠ ಪದವಿಯನ್ನು ಪಡೆದು ಪ್ರಸಿದ್ಧರಾಗಿ ಎಂದು ಶಿಕ್ಷಣವನ್ನು ಕೊಡುತ್ತಾರೆ ಏಕೆಂದರೆ ಮಕ್ಕಳಲ್ಲಿ ನಂಬವಾರಂತು ಇರುತ್ತಾರಲ್ಲವೇ. ಯಾರೆಷ್ಟು ಓದುತ್ತಾರೆ ಅಂತಹ ಒಳ್ಳೆಯಮಕ್ಕಳು ತಂದೆ ತಾಯಿಗೆ ತುಂಬಾ ಆಜ್ಞಾಕಾರಿಯಾಗಿರುತ್ತಾರೆ. ನಮಗೆ ಬೇಹದ್ದಿನ ತಂದೆ ಸಿಕ್ಕಿರುವುದರಿಂದ ಅವರಿಗೆ ಎಷ್ಟು ಆಜ್ಞಾಕಾರಿಯಾಗಿರಬೇಕು ಏಕೆಂದರೆ ತಂದೆಯ ಹೆಸರೇ ಕಲ್ಯಾಣಕಾರಿಯಾಗಿದೆ. ಅವರು ನರಕವನ್ನೂ ಸ್ವರ್ಗವನ್ನಾಗಿ ಮಾಡುತ್ತಾರೆ. ನೀವು ಸ್ವರ್ಗಕ್ಕೋಸ್ಕರ ತಯಾರಿ ಮಾಡಿಕೊಳ್ಳುತ್ತಿದ್ದೀರಿ. ಆದ್ದರಿಂದ ನೀವು ಶ್ರೀಮತದನುಸಾರ ನಡೆದು ಎಲ್ಲದರಿಂದ ಮಮತ್ವವನ್ನು ತೆಗೆಯಬೇಕಾಗಿದೆ. ಕೆಲವರು ಕೇಳುತ್ತಾರೆ ಬಾಬಾ, ಹೇಗೆ ಮಮತ್ವವನ್ನು ಕಳೆಯುವುದು? ಅದಕ್ಕೆ ಬಾಬಾ ಹೇಳುತ್ತಾರೆ ನನ್ನನ್ನು ಟ್ರಸ್ಟಿಯನ್ನಾಗಿ ಮಾಡಿಕೊಳ್ಳಿ, ಇಂತಹ ಪರಿಸ್ಥಿತಿದಲ್ಲಿ ಏನು ಮಾಡಬೇಕು ಎಂದು ನನ್ನಿಂದ ಸಲಹೆಯನ್ನು ತೆಗೆದುಕೊಳ್ಳುತ್ತಾ ಇರಿ. ಬಾಬಾ ಹೇಳುತ್ತಾರೆ ಮನೆ ಮಠವನ್ನು ಬಿಟ್ಟು ಹೋಗಬಾರದು. ಏಕೆಂದರೆ ಇದು ಸನ್ಯಸಿಗಳ ಕೆಲಸವಾಗಿದೆ. ಈಗ ತಂದೆಯು ಹಳೆಯ ಪ್ರಪಂಚದ ಸನ್ಯಾಸವನ್ನು ಮಾಡಿಸುತ್ತಾರೆ ಆದರೆ ಅವರು ಮನೆ ಮಠವನ್ನು ಬಿಟ್ಟು ಎಷ್ಟು ನಷ್ಟ ಮಾಡಿಕೊಳ್ಳುತ್ತಾರೆ ಆದರೂ ಅವರು ಪವಿತ್ರರಾಗುವುದರಿಂದ ಸ್ವಲ್ಪ ಸಹಯೋಗವನ್ನು ಕೊಡುತ್ತಾರೆ. ಆದರೆ ಗುರುವಾಗಿ ಯಾರ ಗತಿ-ಸದ್ಗತಿ ಕೊಡಲು ಸಾಧ್ಯವಿಲ್ಲ. ಅವರು ಕೇವಲ ಪುರುಷರನ್ನು ಪವಿತ್ರರನ್ನಾಗಿ ಮಾಡುತ್ತಾರೆ ಆದರೆ ಶಿವಬಾಬಾ ಸ್ತ್ರೀ-ಪುರುಷ ಇಬ್ಬರನ್ನು ಪತಿತರಾಗುವುದರಿಂದ ರಕ್ಷಣೆ ಮಾಡುತ್ತಾರೆ. ಬಾಬಾ ಶಿಕ್ಷಣವನ್ನು ಕೊಡುತ್ತಾರೆ- ಮಕ್ಕಳೇ, ಒಂದುವೇಳೆ ನೀವು ಪವಿತ್ರರಾಗಿದ್ದು ತೋರಿಸುತ್ತೀರೆಂದರೆ ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ. ಸ್ವರ್ಗದಲ್ಲಿ ಎಲ್ಲರೂ ಸುಖಿಯಾಗಿರುತ್ತಾರೆ ಆದರಿಂದ ಒಳ್ಳೆಯರೀತಿಯಲ್ಲಿ ಪುರುಷಾರ್ಥ ಮಾಡಿ ಶಿವ ತಂದೆಯನ್ನು ನಿಮ್ಮ ಮಗುವನ್ನಾಗಿ ಮಾಡಿಕೊಂಡರೆ ಅವರು ಆಸ್ತಿಯನ್ನು ಕೊಡುತ್ತಾರೆ. ಯಾರು ಎಷ್ಟು ಆಸ್ತಿಯನ್ನು ಕೊಡುತ್ತಾರೆ, ಅಷ್ಟು ನಾವು ಅವರಿಗೆ ಹಿಂತಿರುಗಿಸಿ ಕೊಡುತ್ತಾರೆ ಆದರೆ ಇಲ್ಲಿ ಕೊಡುವುದಿಲ್ಲ. ನೀವು ಏನು ಕೊಡುತ್ತೀರಿ ಅದನ್ನು ನೀವು ಮಕ್ಕಳ ಕಾರ್ಯದಲ್ಲಿಯೇ ತೊಡಗಿಸುತ್ತೇನೆ. ನಾನು ವಿಶ್ವದ ಮಾಲೀಕನಾಗುವುದಿಲ್ಲ, ನೀವು ಆಗುತ್ತೀರಿ. ನಿಮಗೋಸ್ಕರವೇ ಈ ಮನೆ, ಪ್ರದರ್ಶನಿ ಮುಂತಾದವುಗಳಿವೆ. ಇವು ನೀವು ಮಕ್ಕಳ ಸೇವೆಗೋಸ್ಕರವೇ ಇವೆ. ಪುನಃ ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ ಆದ್ದರಿಂದ ಎಷ್ಟು ಬೇಕೋ ಅಷ್ಟು ನನ್ನಿಂದ ತೆಗೆದುಕೊಳ್ಳಿ. ಭಲೆ ನನ್ನನ್ನು ವಾರಸುಧಾರನನ್ನಾಗಿ ಮಾಡಿಕೊಳ್ಳಿ ಅಥವಾ ಬಿಡಿ. ತಮ್ಮ ಮಕ್ಕಳೊಂದಿಗೆ ಸುಖವಾಗಿರಿ ಆದರೆ ಪವಿತ್ರರಾಗಿರಿ ಮತ್ತು ಒಬ್ಬ ತಂದೆಯನ್ನು ನೆನಪು ಮಾಡಿ ಆಗ ಅಂತ್ಯ ಮತಿ ಸೋ ಗತಿಯಾಗಿ ಬಿಡುವುದು. ಉಳಿದ ಯಾವುದೇ ಸುಳ್ಳು ಮಂತ್ರಗಳು ಕೆಲಸಕ್ಕೆ ಬರುವುದಿಲ್ಲ. ನಾನು ನಿಮಗೆ ಕಲ್ಯಾಣಕಾರಿ ಮಂತ್ರವನ್ನು ಕೊಡುತ್ತೇನೆ. ಮಕ್ಕಳೇ, ತಂದೆ ಹಾಗೂ ಆಸ್ತಿಯನ್ನು ನೆನಪು ಮಾಡಿ. ಮಕ್ಕಳು ಜನ್ಮ ಪಡೆಯುತ್ತಾರೆಂದರೆ ಅವರಿಗೆ ಆಸ್ತಿ ಸಿಗಲೇಬೇಕಾಗಿದೆ. ನೀವು ತಿಳಿದುಕೊಂಡಿದ್ದೀರಿ- ನಾವು ಶಿವಬಾಬಾರವರ ಮಕ್ಕಳಾಗಿದ್ದೆವು, ಸ್ವರ್ಗದಲ್ಲಿ ರಾಜ್ಯ ಮಾಡಿದೆವು, ನಂತರ ಕಳೆದುಕೊಂಡೆವು. ಈಗ ತಂದೆಯು ಹೇಳುತ್ತಾರೆ ಮಕ್ಕಳೇ, ನನ್ನನ್ನು ನೆನಪು ಮಾಡಿ, ನನ್ನವರಾಗಿ, ನನ್ನವರಾದಾಗಲೇ ನಿಮಗೆ ಎಷ್ಟು ಸಂಪಾದನೆ ಆಗುತ್ತದೆ. ಗುರು-ಗೋಸಾಯಿ ಮುಂತಾದ ಎಲ್ಲಾ ಸಂಬಂಧವನ್ನು ಬುದ್ಧಿಯಿಂದ ತೆಗೆದು ಹಾಕಿ. ನಾನು ನೀವಾತ್ಮರೊಂದಿಗೆ ಈ ಕರ್ಮೇಂದ್ರಿಯಗಳ ಮುಖಾಂತರ ಮಾತನಾಡುತ್ತೇನೆ. ಶಿವಬಾಬಾ ಬ್ರಹ್ಮನಲ್ಲಿ ಪ್ರವೇಶ ಮಾಡಿದ್ದಾರೆ. ಹೇಗೆ ಬ್ರಾಹ್ಮಣರಿಗೆ ತಿನ್ನಿಸಿದಾಗ ಇವರಲ್ಲಿ ನನ್ನ ಪತಿಯ ಆತ್ಮ ಇವರಲ್ಲಿ ಬಂದಿದೆ ಎಂದು ತಿಳಿಯುತ್ತಾರೆ. ಶರೀರವಂತು ಬರಲು ಸಾಧ್ಯವಿಲ್ಲ. ಶಿವ ತಂದೆಗೂ ತನ್ನದೇ ಆದ ಶರೀರವಿಲ್ಲ ಆದ್ದರಿಂದಲೇ ಅಶರೀರಿ ಎಂದು ಹೇಳುತ್ತಾರೆ. ನೀವೂ ಸಹ ಅಶರೀರಿಯಾಗಿ, ದೇಹದ ಅಹಂಕಾರವನ್ನು ಬಿಡಿ. ಇಡೀಕಲ್ಪ ನೀವು ದೇಹಾಭಿಮಾನದಲ್ಲಿ ಇದ್ದೀರಿ, ಸತ್ಯಯುಗದಲ್ಲಿ ಆತ್ಮಾಭಿಮಾನಿಯಾಗಿ ಇದ್ದೀರಿ ಮತ್ತೆ ನೀವು ದೇಹಾಭಿಮಾನಿಯಾದಾಗ ಆತ್ಮನ ಜ್ಞಾನವು ಮರೆತು ಹೋಯಿತು. ಮೊಟ್ಟ ಮೊದಲು ಖುಷಿಯಿಂದ ಶರೀರವನ್ನು ಬಿಡುತ್ತಾ ಹಾಗೂ ತೆಗೆದುಕೊಳ್ಳುತ್ತಾ ಇದ್ದೀರಿ. ಇದರಿಂದ ನಿಮ್ಮದೇನು ಹೋಗುತ್ತದೆ! ಆತ್ಮನಿಗೆ ಅನಾದಿ ಪಾತ್ರವು ಸಿಕ್ಕಿದೆ ಆದ್ದರಿಂದ ಸ್ವರ್ಗದಲ್ಲಿ ಅಳುವ ಹೆಸರೇ ಇರುವುದಿಲ್ಲ. ಈಗ ನೀವು 63 ಜನ್ಮ ದುಃಖವನ್ನು ಪಡೆಯುತ್ತಾ-ಪಡೆಯುತ್ತಾ ಸಂಪೂರ್ಣವಾಗಿ ತಮೋಪ್ರಧಾನರಾಗಿದ್ದೀರಿ. ಈಗ ಪುನಃ ತಮ್ಮನ್ನು ಆತ್ಮನೆಂದು ತಿಳಿಯಿರಿ, ತಂದೆಯನ್ನು ನೆನಪು ಮಾಡಿ. ಮತ್ತೆ ನೀವೆಲ್ಲಿಗೆ ಹೋದರೂ ನೋಡುತ್ತೀರಿ ಇಂತಹ ಸನ್ಯಾಸಿ ವೇದ-ಶಾಸ್ತ್ರಗಳನ್ನು ತಿಳಿಸುತ್ತಾರೆ. ಇಲ್ಲಿ ನಿರಾಕಾರಿ ಪರಮಾತ್ಮನಂತು ಯಾವುದೇ ಶಾಸ್ತ್ರವನ್ನು ಓದುವುದಿಲ್ಲ ಆದರೆ ಆ ಎಲ್ಲಾ ವೇದ-ಶಾಸ್ತ್ರಗಳ ಸಾರವನ್ನು ತಿಳಿಸುವವರಾಗಿದ್ದಾರೆ. ಶಾಸ್ತ್ರವನ್ನು ಓದುತ್ತಾ-ಓದುತ್ತಾ, ನೀವು ಪತಿತರಾಗಿ ಬಿಟ್ಟಿದೀರಿ ಆದ್ದರಿಂದ ಹೇ! ಸದ್ಗತಿದಾತ, ಮುಕ್ತೇಶ್ವರ, ಪಾಪ ಕಟೇಶ್ವರ ಬನ್ನಿ ಎಂದು ಕೂಗುತ್ತೀರಿ. ಈಗ ತಂದೆಯು ಬಂದಿದ್ದಾರೆ. ಹೇಳುತ್ತಾರೆ – ನೀವು ನನ್ನ ಮತದ ಮೇಲೆ ನಡೆಯುವುದರಿಂದ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಇದು ಶ್ರೇಷ್ಠಾತಿ ಶ್ರೇಷ್ಠ ಮತವಾಗಿದೆ. ತಂದೆಯು ಶ್ರೀ ಶ್ರೀ ಆಗಿದ್ದಾರೆ. ಅವರು ಬಂದು ಭ್ರಷ್ಟಾಚಾರಿಯಿಂದ ಶ್ರೇಷ್ಠಾಚಾರಿಯನ್ನಾಗಿ ಮಾಡುತ್ತಾರೆ. ಈಗ ನೀವು ತಿಳಿದುಕೊಂಡಿದ್ದೀರಿ- ಪ್ರತಿಯೊಬ್ಬರಿಗೆ ತಮ್ಮದೇ ಆದ ಪಾತ್ರವು ಸಿಕ್ಕಿದೆ. ಈ ಚಕ್ರವು ತಿರುಗುತ್ತಿರುತ್ತದೆ. ಆತ್ಮವು ವಿನಾಶವಾಗುವುದಿಲ್ಲ, ಅದರಲ್ಲಿನ ಪಾತ್ರವೂ ವಿನಾಶವಾಗುವುದಿಲ್ಲ. ಇದು ಮಾಡಿ-ಮಾಡಲ್ಪಟ್ಟಂತಹ ಆಟವಾಗಿದೆ, ಆ ಆಟದಿಂದ ಯಾರೂ ಮುಕ್ತರಾಗಲು ಸಾಧ್ಯವಿಲ್ಲ. ತಂದೆಯು ಹೇಳುತ್ತಾರೆ – ನಾನೂ ಸಹ ಪತಿತ ಶರೀರದಲ್ಲಿ ಬಂದು ನಿಮ್ಮ ಸೇವೆಯನ್ನು ಮಾಡುತ್ತೇನೆ, ನಾನು ನಿಮಗೆ ಸ್ವರ್ಗದ ಸುಖವನ್ನು ಕೊಡುತ್ತೇನೆ. ನೀವು ಪುನಃ ಎಷ್ಟೊಂದು ವಜ್ರ-ವೈಢೂರ್ಯಗಳ ಮಂದಿರವನ್ನು ಮಾಡುತ್ತೀರಿ, ಅದರಲ್ಲಿ ನನ್ನನ್ನು ಕೂರಿಸುತ್ತೀರಿ. ಈಗ ನಾನು ನಿಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ ಆದರೆ ನನ್ನನ್ನು ತಿಳಿದುಕೊಂಡೇ ಇಲ್ಲ. ವಿಚ್ಛೇದನವನ್ನು ಕೊಟ್ಟು ಬಿಡುತ್ತಾರೆ. ನೀವು ಎಲ್ಲರಿಗೆ ತಂದೆಯ ಪರಿಚಯವನ್ನು ಕೊಡಬೇಕಾಗಿದೆ ಏಕೆಂದರೆ ತಂದೆಯು ಹೇಗೆ ಸ್ವರ್ಗದ ಸ್ಥಾಪನೆ ಮಾಡುತ್ತಾರೆ ಎನ್ನುವುದು ಎಷ್ಟೊಂದು ಸಹಜ ಮಾತಾಗಿದೆ. ಮಾಯೆಯಂತು ಬರುತ್ತದೆ ಆದರೆ ಅದನ್ನು ಓದಿಸುವುದು ನಿಮ್ಮ ಕೆಲಸವಾಗಿದೆ. ನಿಮಗೆ ಶಿವಬಾಬಾರವರ ವಿನಃ ಅನ್ಯ ಯಾರೂ ನೆನಪಿಗೆ ಬರಬಾರದು. ಒಂದು ಗಳಿಗೆ, ಅರ್ಧ ಗಳಿಗೆ…. ನೆನಪು ಮಾಡುವ ಅಭ್ಯಾಸ ಮಾಡಿ. ಕೊನೆಗೆ ಅಂತ್ಯಮತಿ ಸೋ ಗತಿಯಾಗಿ ಬಿಡುವುದು. ಒಂದುವೇಳೆ ಬುದ್ಧಿಯು ಎಲ್ಲಾದರೂ ಸಿಕ್ಕಿ ಹಾಕಿಕೊಂಡರೆ ಹೆಚ್ಚಿನ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಹೇಗೆ ಕಾಶಿ ಕಲ್ವಟಕ್ಕೆ ಹೋಗಿ ಪ್ರಾಣ ಬಿಡುತ್ತಾರೆ, ಅದಕ್ಕೆ ಜೀವಘಾತ ಎಂದು ಹೇಳಲಾಗುತ್ತದೆ. ಆತ್ಮ ತನ್ನ ಜೀವದ (ಶರೀರದ) ಘಾತ ಮಾಡಿಕೊಳ್ಳುತ್ತದೆ ಆದರೆ ಆತ್ಮದ ಘಾತವಾಗುವುದಿಲ್ಲ, ಅದಂತು ಅಮರವಾಗಿದೆ. ಇವೆಲ್ಲವನ್ನು ಧಾರಣೆ ಮಾಡಿ ತಂದೆಯ ನೆನಪಿನಲ್ಲಿ ಇರಬೇಕಾಗಿದೆ, ಎಲ್ಲದರಿಂದ ಮಮತ್ವವನ್ನು ತೆಗೆಯಬೇಕಾಗಿದೆ. ಇದು ಹಳೆಯ ಶರೀರವಾಗಿದೆ, ಇದರೊಂದಿಗೆ ಸಾಕ್ಷಿಯಾಗಿರಬೇಕಾಗಿದೆ. ಈಗ ಹಿಂತಿರುಗಿ ಹೋಗಬೇಕಾಗಿದೆ, ಇಲ್ಲಿ ಯಾವುದೇ ಮೋಜು (ಖುಷಿ) ಇಲ್ಲ. ಭೂಕಂಪದಲ್ಲಿ ಎಲ್ಲರೂ ಸಾಯುತ್ತಾರೆ. ಸಾಯುವ ಮೊದಲು ತಮ್ಮ ಸ್ಥಿತಿಯನ್ನು ಬಲಶಾಲಿಯನ್ನಾಗಿ ಮಾಡಿಕೊಳ್ಳಬೇಕಾಗಿದೆ. ನೀವೆಲ್ಲರೂ ಶಿವಶಕ್ತಿಯರಾಗಿದ್ದೀರಿ. ಸ್ತ್ರೀ-ಪುರುಷರಿಬ್ಬರೂ ಶಿವಬಾಬಾರವರಿಂದ ಶಕ್ತಿಯನ್ನು ಪಡೆಯುವಂತಹ ಪರಿಶ್ರಮ ಪಡುತ್ತಾರೆ. ಮಾತೆಯರಿಗೆ ಹೆಚ್ಚಿನ ಗೌರವವಿದೆ. ನೀವೆಲ್ಲರೂ ಕನ್ಯೆಯರಾಗಿದ್ದೀರಿ. ಬ್ರಹ್ಮಾಕುಮಾರಿಯಂತು ಕನ್ಯೆಯರೂ ಇದ್ದಾರೆ, ಅದರ್ಕುಮಾರಿಯರೂ ಇದ್ದಾರೆ. ಅವರು ನಿರ್ವಿಕಾರಿಯಾಗಿರುತ್ತಾರೆ. ಅದೇ ರೀತಿ ಭೀಷ್ಮ ಪಿತಾಮಹ ಮುಂತಾದವರ ಗಾಯನವೂ ಇದೆ. ಈ ರೀತಿಯು ತುಂಬಾ ಇದ್ದಾರೆ, ಯಾರು ಚಿಕ್ಕಂದಿನಿಂದಲೇ ಭ್ರಷ್ಟಾಚಾರಿಯಾಗಿರುತ್ತಾರೆ. ಯಾವ ಕೆಲಸವನ್ನು ಬಾಬಾ 5000 ವರ್ಷಗಳ ಹಿಂದೆ ಮಾಡಿ ಹೋಗಿದ್ದರು, ಅದನ್ನು ಈಗಲೂ ಮಾಡುತ್ತಿದ್ದಾರೆ. ಈ ಮಂದಿರಗಳು ಎಲ್ಲವೂ ಈಗ ಬಿದ್ದು ಹೋಗುತ್ತವೆ ಪುನಃ ಭಕ್ತಿ ಮಾರ್ಗದಲ್ಲಿ ಈ ಮಂದಿರಗಳನ್ನು ಕಟ್ಟುತ್ತಾರೆ. ಈ ಎಲ್ಲಾ ಮಾತುಗಳನ್ನು ಧಾರಣೆ ಮಾಡಿ ತಮ್ಮೊಂದಿಗೆ ತಾವೇ ಮಾತನಾಡಿಕೊಳ್ಳಬೇಕು. ಇದಕ್ಕೆ ವಿಚಾರ ಸಾಗರ ಮಂಥನ ಮಾಡುವುದೆಂದು ಹೇಳುತ್ತಾರೆ. ಭಗವಾನುವಾಚ-ನಿಮ್ಮನ್ನು ನರನಿಂದ ನಾರಾಯಣರನ್ನಾಗಿ ಮಾಡುತ್ತೇನೆ. ಮನುಷ್ಯರು ಈ ಯಾವುದೇ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ. ಬ್ರಹ್ಮನ ಆತ್ಮವೂ ಸಹ ಈಗ ಕೇಳುತ್ತಿದೆ. ಇದನ್ನು ಗಳಿಗೆ-ಗಳಿಗೆಯೂ ನೀವು ಮರೆತು ಹೋಗುತ್ತೀರಿ. ಆಮೆ ಮತ್ತು ಭ್ರಮರಿಯ ಉದಾಹರಣೆಯು ನಿಮಗೋಸ್ಕರವೇ ಇದೆ. ತಂದೆಯ ಪರಿಚಯವನ್ನು ಎಲ್ಲರಿಗೂ ಕೊಡಿ. ಶಿವನ ಪರಿಚಯವಿಲ್ಲದೆ ಅವರನ್ನು ಪೂಜೆ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ನಾವು ಪೂಜೆ ಮಾಡುತ್ತಿದ್ದೆವು ಆದರೆ ಈಗ ಅರಿತುಕೊಂಡಿದ್ದೇವೆ. ಶಿವಬಾಬಾ ನಮ್ಮನ್ನು ಮನುಷ್ಯರಿಂದ ದೇವತೆಯನ್ನಾಗಿ ಮಾಡುತ್ತಿದ್ದಾರೆ. ಅವರೇ ಹೇಳುತ್ತಿದ್ದಾರೆ – ಮಕ್ಕಳೇ, ನೀವು ಕವಡೆಗಳ ಹಿಂದೆ ತಲೆಯನ್ನೇಕೆ ಕೆಡಿಸಿಕೊಳ್ಳುತ್ತೀರಿ. ಇದೆಲ್ಲವೂ ಸಮಾಪ್ತಿಯಾಗುವುದಿದೆ. ಮಕ್ಕಳು ಮೊಮ್ಮಕ್ಕಳು ಯಾರೂ ಇರುವುದಿಲ್ಲ. ಎಲ್ಲರೂ ಸಾಯುವವರಿದ್ದಾರೆ. ನೀವು ಎಲ್ಲರ ಕಲ್ಯಾಣ ಮಾಡುವಂತಹ ಕಲ್ಯಾಣಕಾರಿ ತಂದೆಯ ಮಕ್ಕಳಾಗಿದ್ದೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯನ್ನು ತಮ್ಮ ಟ್ರಸ್ಟಿಯನ್ನಾಗಿ ಮಾಡಿಕೊಂಡು ಎಲ್ಲದರಿಂದ ಮಮತ್ವವನ್ನು ಕಳೆಯಬೇಕಾಗಿದೆ. ಅವಶ್ಯವಾಗಿ ಬೇಹದ್ದಿನ ತಂದೆಯ ಆಜ್ಞಾಕಾರಿ ಮಕ್ಕಳಾಗಬೇಕಾಗಿದೆ.

2. ಧರ್ಮರಾಜನ ಕಠಿಣ ಶಿಕ್ಷೆಗಳಿಂದ ಮುಕ್ತರಾಗಲು ಈಗಿನಿಂದಲೇ ಇಂತಹ ಸ್ಥಿತಿಯನ್ನು ಮಾಡಿಕೊಳ್ಳಬೇಕು, ಯಾವುದರಿಂದ ಅಂತ್ಯದ ಗಳಿಗೆಯಲ್ಲಿ ಒಬ್ಬ ತಂದೆಯ ವಿನಃ ಬೇರೆ ಯಾರೂ ನೆನಪಿಗೆ ಬರಬಾರದು. ಬುದ್ಧಿ ಎಲ್ಲಿಯೂ ಸಿಕ್ಕಿ ಹಾಕಿಕೊಳ್ಳದಿರಲಿ.

ವರದಾನ:-

ಹೇಗೆ ಸೇವೆಯಲ್ಲಿ ಬಹಳ ಮುಂದುವರೆಯುತ್ತಾ ಇದ್ದೀರಿ, ಹಾಗೆಯೇ ಸ್ವ-ಉನ್ನತಿಯಲ್ಲಿಯೂ ಸಂಪೂರ್ಣ ಗಮನವಿರಲಿ. ಯಾರಿಗೆ ಈ ಸಮತೋಲನವಿಡುವುದು ಬರುತ್ತದೆಯೋ ಅವರು ಸದಾ ಆಶೀರ್ವಾದಗಳನ್ನು ತೆಗೆದುಕೊಳ್ಳುತ್ತಾರೆ ಹಾಗೂ ಕೊಡುತ್ತಾ ಇರುತ್ತಾರೆ. ಸಮತೋಲನದ ಪ್ರಾಪ್ತಿಯೇ ಆಶೀರ್ವಾದವಾಗಿದೆ. ಸಮತೋಲನವಿಡುವವರಿಗೆ ಆಶೀರ್ವಾದ ಸಿಗಲಿಲ್ಲ – ಹೀಗಾಗಲು ಸಾಧ್ಯವೇ ಇಲ್ಲ. ಮಾತಾಪಿತಾ ಹಾಗೂ ಪರಿವಾರದ ಆಶೀರ್ವಾದಗಳಿಂದ ಸದಾ ಮುಂದುವರೆಯುತ್ತಾ ಸಾಗಿರಿ, ಈ ಆಶೀರ್ವಾದಗಳೇ ಪಾಲನೆಯಾಗಿದೆ. ಇದರಲ್ಲಿ ಕೇವಲ ಆಶೀರ್ವಾದಗಳನ್ನು ತೆಗೆದುಕೊಳ್ಳುತ್ತಾ ಹಾಗೂ ಎಲ್ಲರಿಗೂ ಕೊಡುತ್ತಾ ಸಾಗುತ್ತೀರೆಂದರೆ ಸಹಜವಾಗಿಯೇ ಸಫಲತಾಮೂರ್ತಿ ಆಗಿ ಬಿಡುವಿರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top