06 April 2022 KANNADA Murli Today | Brahma Kumaris

Read and Listen today’s Gyan Murli in Kannada

April 5, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಜ್ಞಾನದ ಗುಹ್ಯ ಮಾತುಗಳನ್ನು ಸಿದ್ಧ ಮಾಡುವ ಸಲುವಾಗಿ ವಿಶಾಲ ಬುದ್ಧಿಯವರಾಗಿ ಬಹಳ ಯುಕ್ತಿಯಿಂದ ತಿಳಿಸಿಕೊಡಬೇಕು - ಹಾವು ಸಾಯಬೇಕು, ಕೋಲು ಮುರಿಯಬಾರದು”

ಪ್ರಶ್ನೆ:: -

ಹಾಹಾಕಾರದ ಸಮಯದಲ್ಲಿ ತೇರ್ಗಡೆಯಾಗಲು ಮುಖ್ಯವಾಗಿ ಯಾವ ಗುಣ ಅಗತ್ಯವಾಗಿ ಇರಬೇಕಾಗಿದೆ?

ಉತ್ತರ:-

ಧೈರ್ಯತೆಯ ಗುಣ, ಯುದ್ಧದ ಸಮಯದಲ್ಲಿ ನಿಮ್ಮ ಪ್ರತ್ಯಕ್ಷತೆಯಾಗುತ್ತದೆ. ಯಾರು ಶಕ್ತಿಶಾಲಿಯಾಗಿರುತ್ತಾರೆ, ಅವರೇ ತೇರ್ಗಡೆಯಾಗುತ್ತಾರೆ. ಗಾಬರಿಯಾಗುವವರು ಫೇಲ್ ಆಗುತ್ತಾರೆ. ಅಂತ್ಯದಲ್ಲಿ ನೀವು ಮಕ್ಕಳ ಪ್ರಭಾವವು ಪ್ರತ್ಯಕ್ಷವಾಗಿ ಅಹೋ ಪ್ರಭು ನಿನ್ನ ಲೀಲೆ ಎಂದು ಹೇಳುತ್ತಾರೆ……. ಗುಪ್ತ ವೇಷದಲ್ಲಿ ಪರಮಾತ್ಮ ಬಂದಿದ್ದಾರೆಂದು ಎಲ್ಲರೂ ತಿಳಿದುಕೊಳ್ಳುತ್ತಾರೆ.

ಪ್ರಶ್ನೆ:: -

ಎಲ್ಲದಕ್ಕಿಂತಲೂ ದೊಡ್ಡ ಸೌಭಾಗ್ಯ ಯಾವುದಾಗಿದೆ?

ಉತ್ತರ:-

ಸ್ವರ್ಗದಲ್ಲಿ ಬರುವುದೂ ಸಹ ಎಲ್ಲಕ್ಕಿಂತ ದೊಡ್ಡ ಸೌಭಾಗ್ಯವಾಗಿದೆ. ಸ್ವರ್ಗದ ಸುಖವನ್ನು ನೀವು ಮಕ್ಕಳು ಮಾತ್ರ ನೋಡುತ್ತೀರಿ. ಅಲ್ಲಿ ಆದಿ-ಮಧ್ಯ-ಅಂತ್ಯ ದುಃಖ ಇರುವುದಿಲ್ಲ. ಈ ಮಾತು ಮನುಷ್ಯರ ಬುದ್ಧಿಯಲ್ಲಿ ಕಷ್ಟದಿಂದ ಕುಳಿತುಕೊಳ್ಳುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನವ ವಯಸ್ಸಿನ ಮೊಗ್ಗುಗಳು.

ಓಂ ಶಾಂತಿ. ಭಗವಾನುವಾಚ – ಮೊದಲು ಕೃಷ್ಣ ಭಗವಾನುವಾಚ ಎಂದು ಹೇಳುತ್ತಿದ್ದೀರಿ. ಈಗ ಕೃಷ್ಣ ಭಗವಾನುವಾಚ ಅಲ್ಲ ಎಂದು ನೀವು ಮಕ್ಕಳಿಗೆ ನಿಶ್ಚಯವಾಗಿದೆ. ಕೃಷ್ಣನಂತು ತ್ರಿಕಾಲದರ್ಶಿ ಅರ್ಥಾತ್ ಸ್ವದರ್ಶನ ಚಕ್ರಧಾರಿ ಅಲ್ಲ. ಈಗ ಒಂದುವೇಳೆ ಭಕ್ತರು ಕೇಳಿದರೆ ಕೋಪ ಬರುತ್ತದೆ. ನೀವು ಇವರ ಗೌರವವನ್ನು ಏಕೆ ಕಡಿಮೆ ಮಾಡುತ್ತೀರಿ ಎಂದು ಹೇಳುತ್ತಾರೆ. ಯಾವಾಗ ಅವರಿಗೆ ಕೃಷ್ಣನಲ್ಲಿ ನಿಶ್ಚಯ ಇರುವುದರಿಂದ ಅವರೇ ಸ್ವದರ್ಶನ ಚಕ್ರಧಾರಿಯಾಗಿದ್ದಾರೆ. ಏಕೆಂದರೆ ಸಾಮಾನ್ಯವಾಗಿ ಸ್ವದರ್ಶನ ಚಕ್ರವನ್ನು ವಿಷ್ಣು ಅಥವಾ ಕೃಷ್ಣನಿಗೆ ಕೊಡುತ್ತಾರೆ. ಶ್ರೀಕೃಷ್ಣ ಹಾಗೂ ವಿಷ್ಣುವಿಗೆ ಯಾವ ಸಂಬಂಧವಿದೆ ಎಂದು ಯಾರಿಗೂ ಗೊತ್ತಿಲ್ಲ. ಕೊಲ್ಲುವ ಸಲುವಾಗಿ ಕೇವಲ ಚಕ್ರವನ್ನು ಕೊಟ್ಟಿದ್ದಾರೆ. ಅದನ್ನು ಒಂದು ಹಿಂಸಕ ಆಯುಧವನ್ನಾಗಿ ಮಾಡಿದ್ದಾರೆ. ವಾಸ್ತವದಲ್ಲಿ ಅವರಬಳಿ ಹಿಂಸಕ ಹಾಗೂ ಅಹಿಂಸಕ ಎರಡು ಚಕ್ರಗಳು ಇರಲಿಲ್ಲ. ಜ್ಞಾನವೂ ಸಹ ರಾಧೆ, ಕೃಷ್ಣ ಅಥವಾ ವಿಷ್ಣುವಿನ ಬಳಿ ಇರುವುದಿಲ್ಲ. ಯಾವ ಜ್ಞಾನ? ಸೃಷ್ಟಿ ಚಕ್ರವನ್ನು ತಿರುಗಿಸುವ ಜ್ಞಾನ. ಅದು ಕೇವಲ ನಿಮ್ಮಲ್ಲಿ ಮಾತ್ರ ಇದೆ. ಇದು ಬಹಳ ರಹಸ್ಯ ಮಾತಾಗಿದೆ ಆದರೆ ಭಾರತವಾಸಿಗಳು ಸಂಪೂರ್ಣವಾಗಿ ವಿಪರೀತ ಮಾತುಗಳಾಗಿವೆ. ಈಗ ಅವರು ತಿಳಿದುಕೊಳ್ಳಬೇಕು ಹಾಗೂ ಪ್ರೀತಿಯನ್ನು ಉಳಿಸಿಕೊಳ್ಳುವಂತೆ ಯುಕ್ತಿಯಿಂದ ತಿಳಿಸಿಕೊಡಬೇಕು. ನೇರವಾಗಿ ಹೇಳಿದರೆ ಕೋಪಿಸಿಕೊಂಡು ದೇವತೆಗಳ ನಿಂದನೆ ಮಾಡುತ್ತಾರೆಂದು ಆರೋಪಿಸುತ್ತಾರೆ. ಏಕೆಂದರೆ ನೀವು ಬ್ರಾಹ್ಮಣರನ್ನು ಬಿಟ್ಟು ಅವರೆಲ್ಲರೂ ಒಂದೇ ಸಮಾನ ಇದ್ದಾರೆ. ನೀವು ಎಷ್ಟೊಂದು ಚಿಕ್ಕ-ಚಿಕ್ಕ ಮಕ್ಕಳಾಗಿದ್ದೀರಿ. ಚಿಕ್ಕ-ಚಿಕ್ಕ ಮಕ್ಕಳು ಪ್ರದರ್ಶನದಲ್ಲಿ ತಿಳಿಸಿಕೊಡುವಷ್ಟು ಯೋಗ್ಯರಾಗಿ ಬುದ್ಧಿವಂತರಾಗಬೇಕೆಂದು ತಂದೆ ತಿಳಿಸುತ್ತಾರೆ. ಯಾವ ಮಕ್ಕಳಲ್ಲಿ ಜ್ಞಾನವಿರುತ್ತದೆಯೋ ಅವರು ಸ್ವಯಂ ಪ್ರದರ್ಶನದಲ್ಲಿ ತಿಳಿಸಿಕೊಡಲು ತಯಾರಾಗುತ್ತಾರೆ. ನಿಮಿತ್ತ ಸಹೋದರಿರಲ್ಲಿ ಬಹಳ ವಿಶಾಲಬುದ್ಧಿ ಇರಬೇಕು. ಪ್ರದರ್ಶನದಲ್ಲಿ ತಿಳಿಸಿಕೊಡಲು ಸೇವಾಧಾರಿಗಳನ್ನು ಕಳುಹಿಸಬೇಕು.

ಪ್ರತಿಯೊಬ್ಬ ಮನುಷ್ಯ ಮಾತ್ರನನ್ನು ಅಗತ್ಯವಾಗಿ ತಮೋಪ್ರಧಾನರಾಗುತ್ತಾರೆ ಎಂದು ನೀವು ತಿಳಿದುಕೊಂಡಿದ್ದೀರಿ. ಅದರಲ್ಲಿಯೂ ವಿಶೇಷವಾಗಿ ಭಾರತವಾಸಿಗಳು ದೇವೀ-ದೇವತಾ ಧರ್ಮದವರೇ ಎಲ್ಲರಿಗಿಂತ ಕೆಳಗಡೆ ಇಳಿದಿದ್ದಾರೆ. ಮೊದಲು ಎಲ್ಲರಿಗಿಂತ ಸತೋಪ್ರಧಾನವಾಗಿದ್ದವರು ಈಗ ಎಲ್ಲರಿಗಿಂತ ತಮೋಪ್ರಧಾನವಾಗಿದ್ದಾರೆ. ಅವರು ಸಂಪೂರ್ಣ ಶ್ರೇಷ್ಠವಾದ ವೈಕುಂಠದ ಮಾಲೀಕರಾಗಿದ್ದರು, ಅವರೇ ಈಗ ನರಕದ ಮಾಲೀಕರಾಗಿದ್ದಾರೆ. ಈ ಶರೀರ ಹಳೆಯ ಚಪ್ಪಲಿಯಾಗಿದೆ. ಇಂತಹ ಶರೀರದಲ್ಲಿ ನಾವು ಓದುತ್ತಿದ್ದೇವೆಂದು ಮಕ್ಕಳ ಬುದ್ಧಿಯಲ್ಲಿರಬೇಕು. ದೇವೀ-ದೇವತಾ ಧರ್ಮದವರ ಶರೀರವೇ ಎಲ್ಲರಗಿಂತ ಜಾಸ್ತಿ ಹಳೆಯ ಚಪ್ಪಲಿಯಾಗಿದೆ. ಭಾರತ ಶಿವಾಲಯವಾಗಿತ್ತು, ದೇವತೆಗಳ ರಾಜ್ಯವಿತ್ತು, ವಜ್ರ ವೈಢೂರ್ಯಗಳ ಅರಮನೆ ಇತ್ತು ಈಗಂತು ವೇಶ್ಯಾಲಯವಾಗಿದೆ. ನಾಟಕದನುಸಾರವಾಗಿ ಪುನಃ ಇದನ್ನು ವೇಶ್ಯಾಲಯದಿಂದ ಶಿವಾಲಯವಾಗಲೇಬೇಕು. ಎಲ್ಲರಿಗಿಂತ ಜಾಸ್ತಿ ಭಾರತವಾಸಿಗಳೇ ಇಳಿದಿದ್ದಾರೆಂದು ತಂದೆ ತಿಳಿಸುತ್ತಾರೆ. ಅರ್ಧಕಲ್ಪ ನೀವು ವಿಷಯ ವಿಕಾರಗಳಲ್ಲಿದ್ದು ಅಜಾಮಿಳರಂತಹ ಪಾಪಾತ್ಮರೂ ಸಹ ಭಾರತದಲ್ಲಿಯೇ ಇದ್ದರು. ಎಲ್ಲಕ್ಕಿಂತಲೂ ವಿಕಾರದಲ್ಲಿ ಹೋಗುವುದು ಅತಿದೊಡ್ಡ ಪಾಪವಾಗಿದೆ. ಯಾವ ಶ್ರೀಕೃಷ್ಣ ಸಂಪೂರ್ಣ ನಿರ್ವಿಕಾರಿಯಾಗಿದ್ದು ಸುಂದರವಾಗಿದ್ದ. ಈಗ ಶ್ಯಾಮ (ಪತಿತ) ಆಗಿದ್ದಾನೆ. ಯಾವಾಗ ಸಂಪೂರ್ಣ ತಮೋಪ್ರಧಾನವಾಗುತ್ತಾರೆ, ಆಗ ನಾನು ಬಂದು ಅವರನ್ನು ಸಂಪೂರ್ಣ ಸತೋಪ್ರಧಾನ ಮಾಡುತ್ತೇನೆಂದು ತಂದೆ ಹೇಳುತ್ತಾರೆ. ಈಗ ಯಾರಿಗೂ ಸಂಪೂರ್ಣ ನಿರ್ವಿಕಾರಿ ಎಂದು ಹೇಳಲು ಸಾಧ್ಯವಿಲ್ಲ. ಒಂದುವೇಳೆ ಈ ಜನ್ಮ ಸ್ವಲ್ಪ ಚೆನ್ನಾಗಿರಬಹುದು ಆದರೆ ಈಗ ಬಹಳ ವ್ಯತ್ಯಾಸವಿದೆ, ಏಕೆಂದರೆ ಹಿಂದಿನ ಜನ್ಮದಲ್ಲಿ ಅಜಮಿಳನಂತೆ ಆಗಿರಬೇಕು. ನಾನು ಪತಿತ ಪ್ರಪಂಚದಲ್ಲಿ ಹಾಗೂ ಪತಿತ ಶರೀರದಲ್ಲಿಯೇ ಪ್ರವೇಶ ಮಾಡುತ್ತೇನೆ. ಯಾರು ಪೂರ್ತಿ 84 ಜನ್ಮಗಳನ್ನು ತೆಗೆದುಕೊಂಡು ತಮೋಪ್ರಧಾನವಾಗಿರುತ್ತಾರೆ, ಅವರ ಶರೀರದಲ್ಲಿ ಬರುತ್ತೇನೆಂದು ತಂದೆ ಹೇಳುತ್ತಾರೆ. ಒಂದುವೇಳೆ ಈ ಸಮಯದಲ್ಲಿ ಒಳ್ಳೆಯ ಮನೆಯಲ್ಲಿ ಜನ್ಮ ತೆಗೆದಿಕೊಂಡಿರುತ್ತಾರೆ ಏಕೆಂದರೆ ಮತ್ತೆ ತಂದೆಗೆ ರಥ ಆಗಬೇಕು. ನಾಟಕವೂ ಸಹ ನಿಯಮದನುಸಾರವಾಗಿ ಮಾಡಲ್ಪಟ್ಟಿದೆ ಆದುದರಿಂದ ಸಾಧಾರಣ ರಥವನ್ನು ತೆಗೆದುಕೊಂಡಿದ್ದೇನೆ. ಇದೂ ಸಹ ತಿಳಿದುಕೊಳ್ಳುವ ಮಾತಾಗಿದೆ. ಸೇವೆ ಮಾಡುವ ಬಹಳ ಆಸಕ್ತಿ ಇರಬೇಕು, ತಂದೆಯನ್ನು ನೋಡಿ..! ಎಷ್ಟೊಂದು ಆಸಕ್ತಿ ಇದೆ. ತಂದೆಯಂತು ಪತಿತ ಪಾವನ ಆಗಿದ್ದಾರೆ. ಸರ್ವರ ಅವಿನಾಶಿ ಸರ್ಜನ್ ಆಗಿದ್ದಾರೆ. ನಿಮಗೆ ಹೇಗೆ ಉತ್ತಮ ಔಷಧಿಯನ್ನು ಕೊಡುತ್ತಾರೆ. ನೀವು ನನ್ನನ್ನು ನೆನಪು ಮಾಡುವುದರಿಂದ ಎಂದಿಗೂ ರೋಗಿ ಆಗುವುದಿಲ್ಲವೆಂದು ಹೇಳುತ್ತಾರೆ ನಂತರ ನೀವು ಯಾವುದೇ ಔಷಧಿಯನ್ನು ತೆಗೆದುಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಇದು ಶ್ರೀಮತವಾಗಿದೆ, ಇದು ಯಾವುದೇ ಗುರುಗಳ ಮಂತ್ರವಲ್ಲ. ತಂದೆ ಹೇಳುತ್ತಾರೆ – ನೀವು ನನ್ನನ್ನು ನೆನಪು ಮಾಡುವುದರಿಂದ ನಿಮ್ಮ ವಿಕರ್ಮ ವಿನಾಶವಾಗುತ್ತದೆ ನಂತರ ಮಾಯೆಯ ವಿಘ್ನ ಬರುವುದಿಲ್ಲ. ನೀವು ಮಹಾವೀರರೆಂದು ಹೇಳಿಸಿಕೊಳ್ಳುತ್ತೀರಿ. ಶಾಲೆಯಲ್ಲಿ ಅಂತ್ಯದಲ್ಲಿ ಫಲಿತಾಂಶ ಹೊರ ಬರುತ್ತದೆ. ಇಲ್ಲಿಯೂ ಸಹ ಅಂತ್ಯದಲ್ಲಿ ಗೊತ್ತಾಗುತ್ತದೆ. ಯಾವಾಗ ಯುದ್ಧ ಪ್ರಾರಂಭವಾಗುತ್ತದೆ, ಆಗ ನಿಮ್ಮ ಪ್ರತ್ಯಕ್ಷತೆಯಾಗುತ್ತದೆ. ಆಗ ನೀವು ಎಷ್ಟು ನಿರ್ಭಯರು ಧೈರ್ಯಶಾಲಿಗಳಾಗಿದ್ದೀರೆಂದು ನೋಡುತ್ತೇವೆ. ತಂದೆಯಂತು ನಿರ್ಭಯರಲ್ಲವೇ! ಎಷ್ಟೇ ಹಾಹಾಕಾರವಾಗಲಿ, ಧೈರ್ಯದಿಂದ ನಾವು ಮನೆಗೆ ಹೋಗಬೇಕೆಂದು ಹೇಳಬೇಕು. ನೀವು ಬರುವುದಾದರೆ ಬನ್ನಿ. ನಮ್ಮ ಗುರಿ ಅಬು ಪರ್ವತವಾಗಿದೆ. ಅಬುಪರ್ವತಕ್ಕೆ ಹೋಗಿ ತಂದೆಯ ಮಿಲನ ಮಾಡೋಣ. ಗಾಬರಿಯಾಗಬಾರದು, ಗಾಬರಿಯಾದರೆ ತೇರ್ಗಡೆಯಾಗುವುದಿಲ್ಲ. ಎಷ್ಟೊಂದು ಶಕ್ತಿಶಾಲಿಯಾಗಬೇಕು. ಮೊದಲಿಗೆ ಬರಗಾಲದ ಆಪತ್ತು ಬರುತ್ತದೆ. ಹೊರಗಡೆಯಿಂದ ದವಸ ಧಾನ್ಯ ಬರುವುದಿಲ್ಲ, ಹೊಡೆದಾಟ ನಡೆಯುತ್ತದೆ. ಆ ಸಮಯದಲ್ಲಿ ನೀವು ಎಷ್ಟೊಂದು ಧೈರ್ಯವುಳ್ಳವರಾಗಬೇಕು. ಯುದ್ಧದಲ್ಲಿ ಎಷ್ಟೊಂದು ಶಕ್ತಿಶಾಲಿಗಳಿರುತ್ತಾರೆ, ಸಾಯಿಸಬೇಕು ಹಾಗೂ ಸಾಯಬೇಕೆಂದು ಹೇಳುತ್ತಾರೆ. ಜೀವದ ಭಯವಿರುವುದಿಲ್ಲ, ಒಂದು ಶರೀರವನ್ನು ಬಿಟ್ಟು ಮತ್ತೊಂದು ಶರೀರವನ್ನು ತೆಗೆದುಕೊಳ್ಳುತ್ತೇನೆಂಬ ಜ್ಞಾನ ಇರುವುದಿಲ್ಲ. ಅಂತಹವರಿಗೆ ಸೇವೆ ಮಾಡಬೇಕು. ಅವರು ಗುರುನಾನಕ್ಗೆ ಜಯವಾಗಲಿ…. ಹನುಮಂತನಿಗೆ ಜಯವಾಗಲಿ ಹೇಳಿ ಎಂದು ಕಲಿಸುತ್ತಾರೆ. ಆದರೆ ಶಿವ ತಂದೆಯನ್ನು ನೆನಪು ಮಾಡುವುದೇ ನಿಮ್ಮ ಶಿಕ್ಷಣವಾಗಿದೆ. ನೌಕರಿ ಅಥವಾ ದೇಶ ಸೇವೆ ಮಾಡಲೇಬೇಕು. ಹೇಗೆ ನೀವು ಶಿವ ತಂದೆಯನ್ನು ನೆನಪು ಮಾಡುತ್ತೀರಿ. ಅದೇ ರೀತಿ ಯಾರೂ ಸಹ ನೆನಪು ಮಾಡುವುದಿಲ್ಲ. ಶಿವ ತಂದೆಯ ಭಕ್ತರು ಅನೇಕರಿದ್ದಾರೆ. ಆದರೆ ನಿಮಗೆ ತಂದೆಯನ್ನು ನೆನಪು ಮಾಡುವುದು ತಂದೆಯ ಆದೇಶವಾಗಿದೆ. ಈಗ ಮನೆಗೆ ಹಿಂತಿರುಗಿ ಪುನಃ ಸ್ವರ್ಗದಲ್ಲಿ ಬರಬೇಕು. ಈಗ ಸೂರ್ಯವಂಶ ಹಾಗೂ ಚಂದ್ರವಂಶ ಎರಡು ರಾಜ್ಯಗಳ ಸ್ಥಾಪನೆಯಾಗುತ್ತಿದೆ. ಈ ಜ್ಞಾನ ಎಲ್ಲರಿಗೂ ಸಿಗುತ್ತದೆ. ಯಾರು ಯಾರು ಪ್ರಜೆಯಾಗಲು ಯೋಗ್ಯರಾಗಿರುತ್ತಾರೆ, ಅವರು ಅಷ್ಟು ಮಾತ್ರ ತಿಳಿದುಕೊಳ್ಳುತ್ತಾರೆ. ಎಲ್ಲಾ ಕಡೆ ನಿಮ್ಮ ಪ್ರಭಾವ ಬಹಳ ಹರಡುತ್ತದೆ. ಆಗ ಓಹೋ ಪ್ರಭು! ನಿನ್ನ ಲೀಲೆ ಎಂದು ಹೇಳುತ್ತಾ ಗುಪ್ತ ವೇಷದಲ್ಲಿ ಪರಮಾತ್ಮ ಬಂದಿದ್ದಾರೆಂದು ಆಗ ತಿಳಿದುಕೊಳ್ಳುತ್ತಾರೆ. ಯಾರಾದರೂ ಪರಮಾತ್ಮ ಅಥವಾ ಆತ್ಮನ ಸಾಕ್ಷಾತ್ಕಾರ ಆಗಬೇಕೆಂದು ಹೇಳಬೇಕು. ಆದರೆ ಸಾಕ್ಷಾತ್ಕಾರದಿಂದ ಏನೂ ಲಾಭವಿಲ್ಲ. ಕೇವಲ ಪ್ರಕಾಶದ ಕಿರಣವನ್ನು ನೋಡುತ್ತಾರೆ ಆದರೆ ಇದು ಯಾರಾಗಿದ್ದಾರೆಂದು ತಿಳಿದುಕೊಳ್ಳಲು ಆಗುವುದಿಲ್ಲ. ಇದು ಆತ್ಮನ ಸಾಕ್ಷಾತ್ಕಾರವೇ ಅಥವಾ ಪರಮಾತ್ಮನ ಸಾಕ್ಷಾತ್ಕಾರವೇ ಎಂದು ತಿಳಿಯುವುದಿಲ್ಲ. ದೇವತೆಗಳ ಸಾಕ್ಷಾತ್ಕಾರದಲ್ಲಿ ಸ್ವಲ್ಪ ಆಡಂಬರವಿರುತ್ತದೆ. ಆಗ ಖುಷಿಯಾಗುತ್ತದೆ. ಆದರೆ ಆತ್ಮ-ಪರಮಾತ್ಮನ ಸಾಕ್ಷಾತ್ಕಾರದಲ್ಲಿ ಪರಮಾತ್ಮನ ರೂಪ ಯಾವುದಾಗಿದೆ ಎಂದು ತಿಳಿಯುವುದಿಲ್ಲ. ಎಷ್ಟೆಷ್ಟು ಸಮಯ ಅಂತ್ಯವಾಗುತ್ತಾ ಹೋಗುತ್ತದೆ ಆಗ ತಂದೆ ಬುದ್ಧಿಯ ಬೀಗವನ್ನು ತೆರೆಯುತ್ತಾ ಹೋಗುತ್ತಾರೆ. ಸ್ವರ್ಗದಲ್ಲಿ ಬರುವುದೂ ಸಹ ಸೌಭಾಗ್ಯವಾಗಿದೆ. ಸ್ವರ್ಗದ ಸುಖವನ್ನು ನಿಮ್ಮ ವಿನಃ ಬೇರೆ ಯಾರೂ ಸಹ ನೋಡಲು ಸಾಧ್ಯವಿಲ್ಲ. ಸ್ವರ್ಗದಲ್ಲಿ ಯಥಾ ರಾಜಾ, ರಾಣಿ ತಥಾ ಪ್ರಜೆಗಳಿರುತ್ತಾರೆ. ಈಗ ಹೊಸ ದೆಹಲಿ ಎಂದು ಹೆಸರನ್ನು ಇಟ್ಟಿದ್ದಾರೆ ಆದರೆ ನವಭಾರತ ಯಾವಾಗ ಇತ್ತು, ಈಗಂತೂ ಹಳೆಯ ಭಾರತವಾಗಿದೆ. ಹೊಸ ಭಾರತದಲ್ಲಿ ಕೇವಲ ದೇವತಾ ಧರ್ಮವಿತ್ತು. ಬಹಳ ಕಡಿಮೆ ಮಂದಿ ಇದ್ದರು. ಈಗ ಎಷ್ಟೊಂದು ಜನಸಂಖ್ಯೆಯಾಗಿ ಹಗಲು-ರಾತ್ರಿಯ ಅಂತರವಾಗಿದೆ. ಸಮಾಚಾರ ಪತ್ರಿಕೆಯಿಂದ ತಿಳಿಸಬಹುದು. ನೀವು ಹೊಸ ದೆಹಲಿ, ಹೊಸ ಭಾರತ ಎಂದು ಹೇಳುತ್ತೀರಿ, ಆದರೆ ನವ ಭಾರತ, ಹೊಸ ದೆಹಲಿಯಂತು ಹೊಸ ಪ್ರಪಂಚದಲ್ಲಿರುತ್ತದೆ. ಅದಂತು ವೈಕುಂಠವಾಗಿರುತ್ತದೆ. ಆದುದರಿಂದ ನೀವು ಹೇಗೆ ಮಾಡಲು ಸಾಧ್ಯ? ಇಲ್ಲಂತು ಅನೇಕ ಧರ್ಮಗಳಿವೆ. ಅಲ್ಲಿ ಒಂದೇ ಧರ್ಮವಿತ್ತು. ಇದೆಲ್ಲಾ ತಿಳಿದುಕೊಳ್ಳುವ ಮಾತುಗಳಾಗಿವೆ. ನಾವೆಲ್ಲರೂ ಮೂಲವತನದಿಂದ ಬಂದಿದ್ದೇವೆ. ನಾವೆಲ್ಲಾ ಆತ್ಮಗಳು ಕಿರಣಗಳಂತೆ ಇದ್ದೇವೆ ಹಾಗೂ ಅಂಡಾಕಾರದಲ್ಲಿರುವ ಕಾರಣ ಬ್ರಹ್ಮಾಂಡವೆಂಬ ಹೆಸರನ್ನು ಇಟ್ಟಿದ್ದಾರೆ. ಅದು ಬ್ರಹ್ಮತತ್ವವಾಗಿದೆ. ಅದರಲ್ಲಿ ಈ ನಕ್ಷತ್ರಗಳು ಇವೆ. ಎಂದಿಗೂ ಯಾವುದೇ ನಕ್ಷತ್ರ ಬೀಳುವುದಿಲ್ಲ. ನಿರ್ವಾಣಧಾಮದಲ್ಲಿ ಆತ್ಮಗಳಿರುತ್ತೇವೆಂದು ಈಗ ನೀವು ಮಕ್ಕಳಿಗೆ ತಿಳಿದಿದೆ. ಅಲ್ಲಿ ಆತ್ಮಗಳು ಶರೀರವಿಲ್ಲದ ಕಾರಣ ಮಾತನಾಡುವುದಿಲ್ಲ. ನಾವು ಆತ್ಮಗಳು ಪರಮಧಾಮದಲ್ಲಿ ಇರುವವರಾಗಿದ್ದೇವೆಂದು ನೀವು ಹೇಳಬಹುದು. ಇದು ಹೊಸ ಮಾತಾಗಿದೆ. ಶಾಸ್ತ್ರಗಳಲ್ಲಿ ನೀರ ಮೇಲಿನ ಗುಳ್ಳೆ ಎಂದು ಶಾಸ್ತ್ರಗಳಲ್ಲಿ ಬರೆದಿದ್ದಾರೆ. ಅದು ನೀರಿನಲ್ಲಿ ಸಮಾವೇಶವಾಗಿ ಬಿಡುತ್ತದೆ. ಪತಿತ ಪಾವನ ತಂದೆ ಎಲ್ಲಾ ಮಕ್ಕಳನ್ನು ಕರೆದುಕೊಂಡು ಹೋಗಲು ತಂದೆ ಬಂದಿದ್ದಾರೆ ಎಂದು ಈಗ ನೀವು ತಿಳಿದುಕೊಂಡಿದ್ದೀರಿ. 5000 ವರ್ಷದ ನಂತರ ಭಾರತ ಸ್ವರ್ಗವಾಗುತ್ತದೆ. ಈ ಜ್ಞಾನ ಯಾರ ಬುದ್ಧಿಯಲ್ಲಿಲ್ಲ. ನಾವೇ ರಾಜ್ಯ ತೆಗೆದುಕೊಳ್ಳುತ್ತೇವೆ, ನಾವೇ ರಾಜ್ಯ ಕಳೆದುಕೊಳ್ಳುತ್ತೇವೆಂದು ತಂದೆ ಬಂದು ತಿಳಿಸುತ್ತಾರೆ. ಇದಕ್ಕೆ ಅಂತ್ಯವಿಲ್ಲ. ಈ ನಾಟಕದಿಂದ ಯಾರೂ ಬಿಡುಗಡೆಯಾಗುವುದಿಲ್ಲ. ಇದು ಎಷ್ಟೊಂದು ಸಹಜ ಮಾತಾಗಿದೆ. ಆದರೂ ಯಾರ ಬುದ್ಧಿಯಲ್ಲಿಯೂ ಸಹ ನಿಲ್ಲುವುದಿಲ್ಲ. ಈಗ ಆತ್ಮನಿಗೆ 84 ಜನ್ಮಗಳ ಚಕ್ರ ಗೊತ್ತಾಗಿದೆ, ಇದರಿಂದ ಚಕ್ರವರ್ತಿ ಮಹಾರಾಜಾ-ಮಹಾರಾಣಿ ಆಗುತ್ತೇವೆ. ಇದೆಲ್ಲವೂ ಸಮಾಪ್ತಿ ಆಗುತ್ತದೆ. ವಿನಾಶ ಮುಂದೆ ನಿಂತಿದೆ. ಹಣ ಸಂಪಾದನೆ ಮಾಡುವ ಲೋಭವನ್ನೇಕೆ ಇಟ್ಟುಕೊಳ್ಳಬೇಕು. ಸೇವೆ ಮಾಡುವಂತಹ ಮಗನಿದ್ದಾಗ ಅವರ ಖಜಾನೆಯಿಂದ ಪಾಲನೆ ನಡೆಯುತ್ತದೆ ಏಕೆಂದರೆ ಸೇವೆ ಮಾಡದೆ ಇದ್ದರೆ ಶ್ರೇಷ್ಠ ಪದವಿ ಸಿಗುವುದಿಲ್ಲ. ನಾವು ಇಷ್ಟೊಂದು ಸೇವೆ ಮಾಡುತ್ತೇವೆಂದರೆ ಶ್ರೇಷ್ಠ ಪದವಿ ಪ್ರಾಪ್ತಿಯಾಗುತ್ತದೆ ಎಂದು ತಂದೆಯನ್ನು ಕೇಳಬಹುದು. ಬಹುಷಃ ನೀವು ಪ್ರಜೆಯಲ್ಲಿ ಹೋಗಬಹುದೆಂದು ಅನಿಸುತ್ತದೆ ಎಂದು ತಂದೆ ಹೇಳುತ್ತಾರೆ. ಎಲ್ಲವೂ ಇಲ್ಲಿಯೇ ಗೊತ್ತಾಗುತ್ತದೆ. ಚಿಕ್ಕ-ಚಿಕ್ಕ ಮಕ್ಕಳಿಗೂ ಸಹ ಕಲಿಸಿ ಪ್ರದರ್ಶನದಲ್ಲಿ ಸೇವೆ ಮಾಡಿ ತಂದೆಗೆ ಶೃಂಗಾರ ಮಾಡುವಂತೆ ಬುದ್ಧಿವಂತರನ್ನಾಗಿ ಮಾಡಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯ ಸಮಾನ ನಿರ್ಭಯ ಹಾಗೂ ಧೈರ್ಯದಿಂದ ಇರಬೇಕು, ಧೈರ್ಯದಿಂದ ಕೆಲಸ ಮಾಡಬೇಕು. ಗಾಬರಿಯಾಗಬಾರದು.

2. ವಿನಾಶ ನಿಮ್ಮ ಮುಂದೆ ನಿಂತಿದೆ ಆದುದರಿಂದ ಹೆಚ್ಚು ಹಣವನ್ನು ಸಂಪಾದನೆ ಮಾಡುವ ಲೋಭವನ್ನು ಇಟ್ಟುಕೊಳ್ಳಬಾರದು. ಶ್ರೇಷ್ಠ ಪದವಿಗಾಗಿ ಈಶ್ವರೀಯ ಸೇವೆಯನ್ನು ಮಾಡಿ ಸಂಪಾದನೆಯನ್ನು ಜಮಾ ಮಾಡಿಕೊಳ್ಳಬೇಕು.

ವರದಾನ:-

ಬಾಪ್ದಾದಾರವರ ಮೂಲಕ ಎಲ್ಲಾ ಮಕ್ಕಳಿಗೂ ಅಕೂಟ ಖಜಾನೆಯು ಸಿಕ್ಕಿರುತ್ತದೆ. ಆ ಖಜಾನೆಯನ್ನು ತಮ್ಮ ಬಳಿಯೆಷ್ಟು ಜಮಾ ಮಾಡಿಕೊಂಡಿದ್ದಾರೆಯೋ ಅಷ್ಟು ತಮ್ಮ ಚಲನೆ ಹಾಗೂ ಚಹರೆಯಲ್ಲಿ ಆತ್ಮಿಕ ನಶೆಯು ಕಾಣಿಸುವುದು. ಜಮಾ ಮಾಡಿಕೊಳ್ಳುವ ಆತ್ಮಿಕ ನಶೆಯ ಅನುಭವವಾಗುವುದು. ಯಾರೆಷ್ಟು ಆತ್ಮಿಕ ನಶೆಯಲ್ಲಿ ಇರುತ್ತಾರೆಯೋ ಅಷ್ಟು ಅವರ ಪ್ರತೀ ಕರ್ಮದಲ್ಲಿ ನಿಶ್ಚಿಂತ ಚಕ್ರವರ್ತಿಯ ಹೊಳಪು ಕಾಣಿಸುತ್ತದೆ ಏಕೆಂದರೆ ಎಲ್ಲಿ ನಶೆಯಿದೆಯೋ ಅಲ್ಲಿ ಚಿಂತೆಯಿರಲು ಸಾಧ್ಯವಿಲ್ಲ. ಯಾರು ಹೀಗೆ ನಿಶ್ಚಿಂತ ಚಕ್ರವರ್ತಿಯಾಗಿ ಇರುತ್ತಾರೆಯೋ ಅವರು ಸದಾ ಪ್ರಸನ್ನಚಿತ್ತರಾಗಿರುತ್ತಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top