01 April 2022 KANNADA Murli Today | Brahma Kumaris

Read and Listen today’s Gyan Murli in Kannada

March 31, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಸದ್ಗತಿಯಲ್ಲಿ ಹೋಗಬೇಕೆಂದರೆ ತಂದೆಯೊಂದಿಗೆ ಪ್ರತಿಜ್ಞೆ ಮಾಡಿ - ಬಾಬಾ ನಾವು ನಿಮ್ಮನ್ನೇ ನೆನಪು ಮಾಡುತ್ತೇವೆ”

ಪ್ರಶ್ನೆ:: -

ಯಾವ ಪುರುಷಾರ್ಥದ ಆಧಾರದಿಂದ ಸತ್ಯಯುಗೀ ಜನ್ಮಸಿದ್ದ ಅಧಿಕಾರ ಪ್ರಾಪ್ತಿಯಾಗುತ್ತದೆ?

ಉತ್ತರ:-

ಈಗ ಎಲ್ಲದರಿಂದ ಭಿಕಾರಿಯಾಗುವುದಕ್ಕೆ ಹೇಳುತ್ತಾರೆ. ಅರ್ಥಾತ್ ಎಲ್ಲವನ್ನು ಮರೆಯುವ ಪುರುಷಾರ್ಥ ಮಾಡಿ, ಹಳೆಯ ಪ್ರಪಂಚದಿಂದ ಮಮತ್ವವನ್ನು ಅಳಿಸಿ, ಸಂಪೂರ್ಣ ಮರೆತಾಗ ಸತ್ಯಯುಗೀ ಜನ್ಮಸಿದ್ದ ಅಧಿಕಾರವು ಪ್ರಾಪ್ತಿಯಾಗುತ್ತದೆ. ಮಧುರ ಮಕ್ಕಳೇ, ಈಗ ಟ್ರಸ್ಟಿಗಳಾಗಿ, ಕೆಲಸಕ್ಕೆ ಬಾರದಿರುವುದನ್ನು ಪರಿವರ್ತನೆ ಮಾಡಿಕೊಳ್ಳಿ, ತಂದೆ ಹಾಗೂ ಆಸ್ತಿಯನ್ನು ನೆನಪು ಮಾಡಿದಾಗ ನೀವು ಸ್ವರ್ಗದಲ್ಲಿ ಬರುತ್ತೀರಿ. ವಿನಾಶವು ಮುಂದೆ ನಿಂತಿದೆ, ಆದುದರಿಂದ ಈಗ ಹಳೆಯ ಎಲ್ಲಾ ವಿಸ್ತಾರವನ್ನು ಸಾರದಲ್ಲಿ ತಂದುಕೊಳ್ಳಿ ಎಂದು ತಂದೆಯು ಹೇಳುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಭೋಲಾನಾಥನಿಗಿಂತ ಭಿನ್ನ..

ಓಂ ಶಾಂತಿ. ನೀವು ವಿದ್ಯಾರ್ಥಿಗಳಾಗಿದ್ದೀರಿ. ಶ್ರೇಷ್ಠಾತಿ ಶ್ರೇಷ್ಠ ಜ್ಞಾನಪೂರ್ಣ ತಂದೆಯು ನಿಮಗೆ ಓದಿಸುತ್ತಾರೆ. ಆದುದರಿಂದ ಅಗತ್ಯವಾಗಿ ಪುಸ್ತಕದಲ್ಲಿ ಬರೆದುಕೊಳ್ಳಬೇಕು ಏಕೆಂದರೆ ಮತ್ತೆ ಪುನರಾವರ್ತನೆ ಮಾಡಬೇಕಾಗುತ್ತದೆ ಹಾಗೂ ಅನ್ಯರಿಗೆ ತಿಳಿಸಿಕೊಡಲು ಸಹಜವಾಗುತ್ತದೆ. ಇಲ್ಲವಾದರೆ ಮಾಯೆ ಈ ರೀತಿ ಇದೆ, ಬಹಳ ಪಾಯಿಂಟ್ಸನ್ನು ಮರೆಯುವಂತೆ ಮಾಡುತ್ತದೆ. ಈ ಸಮಯದಲ್ಲಿ ಮಕ್ಕಳ ಯುದ್ಧ ಮಾಯಾ ರಾವಣನೊಂದಿಗೆ ನಡೆಯುತ್ತಿದೆ. ನೀವು ಶಿವ ತಂದೆಯನ್ನು ಎಷ್ಟು ನೆನಪು ಮಾಡುತ್ತೀರಿ ಮಾಯೆಯೂ ಸಹ ಮರೆಸಲು ಅಷ್ಟೇ ಪ್ರಯತ್ನ ಪಡುತ್ತದೆ. ಜ್ಞಾನದ ಪಾಯಿಂಟನ್ನು ಮರೆಸಲು ಪ್ರಯತ್ನ ಪಡುತ್ತದೆ. ಕೆಲವೊಮ್ಮೆ ಬಹಳ ಉತ್ತಮ ಪಾಯಿಂಟ್ಸ್ ನೆನಪು ಬರುತ್ತದೆ ಮತ್ತೆ ಅದೇ ಕ್ಷಣದಲ್ಲಿ ಮರೆತು ಹೋಗುತ್ತದೆ ಏಕೆಂದರೆ ಇದು ಹೊಸ ಜ್ಞಾನವಾಗಿದೆ. ತಂದೆಯು ತಿಳಿಸುತ್ತಾರೆ – ಕಲ್ಪದ ಹಿಂದೆ ಈ ಜ್ಞಾನವನ್ನು ಬ್ರಾಹ್ಮಣರಾದ ನಿಮಗೇ ಕೊಟ್ಟಿದ್ದೆನು. ಬ್ರಹ್ಮನ ಮೂಲಕ ಬ್ರಾಹ್ಮಣರನ್ನೇ ನನ್ನವರನ್ನಾಗಿ ಮಾಡುತ್ತೇನೆ. ಈ ಮಾತುಗಳನ್ನು ಯಾವುದೇ ಗೀತೆಯಲ್ಲಿ ಬರೆಯಲ್ಪಟ್ಟಿಲ್ಲ. ಶಾಸ್ತ್ರಗಳನ್ನಂತು ನಂತರ ಬರೆಯುತ್ತಾರೆ. ಯಾವಾಗ ಧರ್ಮ ಸ್ಥಾಪನೆ ಮಾಡುತ್ತಾರೆ, ಆ ಸಮಯದಲ್ಲಿ ಎಲ್ಲಾ ಶಾಸ್ತ್ರಗಳು ಬರೆಯುವುದಿಲ್ಲ. ಮಕ್ಕಳಿಗೆ ತಿಳಿಸಲಾಗಿದೆ – ಮೊಟ್ಟ ಮೊದಲು ಜ್ಞಾನ ನಂತರ ಭಕ್ತಿ. ಮೊದಲು ಸತೋಪ್ರಧಾನ ನಂತರ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ಮನುಷ್ಯರು ಯಾವಾಗ ರಜೋದಲ್ಲಿ ಬರುತ್ತಾರೆ, ಆಗ ಭಕ್ತಿ ಪ್ರಾರಂಭವಾಗುತ್ತದೆ. ಸತೋಪ್ರಧಾನ ಸಮಯದಲ್ಲಿ ಭಕ್ತಿ ಇರುವುದಿಲ್ಲ. ಭಕ್ತಿಮಾರ್ಗವೂ ಡ್ರಾಮಾದಲ್ಲಿ ನಿಗಧಿಯಾಗಿದೆ. ಈ ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದಲ್ಲಿ ಕೆಲಸಕ್ಕೆ ಬರುತ್ತದೆ. ನೀವು ಈ ಜ್ಞಾನ ಹಾಗೂ ಯೋಗದ ಪುಸ್ತಕಗಳನ್ನು ಓದಿ ರಿಫ್ರೆಷ್ ಆಗುವ ಸಲುವಾಗಿ ಮಾಡುತ್ತೀರಿ. ಆದರೆ ಮಾರ್ಗದರ್ಶಕರ (ಶಿಕ್ಷಕರ) ವಿನಃ ಯಾರಿಗೂ ತಿಳಿದುಕೊಳ್ಳಲು ಆಗುವುದಿಲ್ಲ. ಶ್ರೀಮತ್ ಭಗವಂತ ಗೀತೆಯ ಮಾರ್ಗದರ್ಶಕರಾಗಿದ್ದಾರೆ. ಅವರು ವಿಶ್ವದ ರಚಯಿತ ಆಗಿದ್ದು ಸ್ವರ್ಗವನ್ನು ರಚಿಸುತ್ತಾರೆ. ಅವರು ಸರ್ವರಿಗೂ ತಂದೆಯಾಗಿರುವುದರಿಂದ ತಂದೆಯಿಂದ ಆಸ್ತಿಯ ರೂಪದಲ್ಲಿ ಸ್ವರ್ಗದ ರಾಜ್ಯಭಾಗ್ಯ ಸಿಗಬೇಕಾಗುತ್ತದೆ. ಸತ್ಯಯುಗದಲ್ಲಿ ದೇವೀ-ದೇವತೆಗಳ ರಾಜ್ಯವಿರುತ್ತದೆ. ನೀವು ಸಂಗಮಯುಗದ ಬ್ರಾಹ್ಮಣರಾಗಿದ್ದೀರಿ. ವಿಷ್ಣು ಚಿತ್ರದಲ್ಲಿ 4 ವರ್ಣಗಳನ್ನು ತೋರಿಸುತ್ತಾರಲ್ಲವೇ! ದೇವತಾ, ಕ್ಷತ್ರಿಯ, ವೈಶ್ಯಾ, ಶೂದ್ರ….. 5ನೆಯದು ಬ್ರಾಹ್ಮಣ ವರ್ಣವಾಗಿದೆ ಆದರೆ ಅವರಿಗೆ ಇದು ಸಂಪೂರ್ಣವಾಗಿ ಗೊತ್ತಿಲ್ಲ. ಬ್ರಾಹ್ಮಣ ವರ್ಣವು ಶ್ರೇಷ್ಠಾತಿ ಶ್ರೇಷ್ಠ ವರ್ಣವಾಗಿದೆ. ಶ್ರೇಷ್ಠಾತಿ ಶ್ರೇಷ್ಠ ಪರಮಪಿತ ಪರಮಾತ್ಮನನ್ನೂ ಸಹ ಮರೆತಿದ್ದಾರೆ. ಬ್ರಹ್ಮ, ವಿಷ್ಣು, ಶಂಕರರ ರಚಯಿತ ಶಿವ ಆಗಿದ್ದಾರೆ. ತ್ರಿಮೂರ್ತಿ ಬ್ರಹ್ಮಾ ಎಂದು ಹೇಳುತ್ತಾರೆ, ಆದರೆ ಈ ಮಾತಿನ ಅರ್ಥವು ಸ್ಪಷ್ಟವಾಗುವುದಿಲ್ಲ. ಒಂದುವೇಳೆ ಬ್ರಹ್ಮಾ, ವಿಷ್ಣು, ಶಂಕರ ಈ ಮೂವರು ಸಹೋದರರಾದರೆ ಇವರಿಗೆ ತಂದೆ ಬೇಕಲ್ಲವೇ! ಆದುದರಿಂದ ಬ್ರಾಹ್ಮಣ, ದೇವೀ-ದೇವತಾ ಹಾಗೂ ಕ್ಷತ್ರಿಯ…….. ಈ ಮೂರು ಧರ್ಮದ ರಚಯಿತ ಆ ನಿರಾಕಾರ ತಂದೆ ಆಗಿದ್ದಾರೆ. ಅವರಿಗೆ ಗೀತೆಯ ಭಗವಂತನೆಂದು ಕರೆಯಲಾಗುತ್ತದೆ. ದೇವತೆಗಳಿಗೂ ಸಹ ಭಗವಂತನೆಂದು ಹೇಳುವುದಿಲ್ಲ ಹಾಗಾದರೆ ಮನುಷ್ಯರಿಗೆ ಹೇಗೆ ಹೇಳಲು ಸಾಧ್ಯ? ಶಿವ ತಂದೆ ಶ್ರೇಷ್ಠಾತಿ ಶ್ರೇಷ್ಠ ಆಗಿದ್ದಾರೆ ಮತ್ತೆ ಸೂಕ್ಷ್ಮವತನವಾಸಿ ಬ್ರಹ್ಮಾ, ವಿಷ್ಣು, ಶಂಕರ, ಆಮೇಲೆ ಈ ವತನದಲ್ಲಿ ಮೊಟ್ಟ ಮೊದಲು ಶ್ರೀಕೃಷ್ಣನು ಶ್ರೇಷ್ಠನಾಗಿದ್ದಾನೆ. ಮೊದಲಿಗೆ ಶಿವ ಜಯಂತಿ ಆಚರಿಸಲಾಗುತ್ತದೆ. ತ್ರಿಮೂರ್ತಿ ಜಯಂತಿ ಎಂದು ಎಲ್ಲಿಯೂ ತೋರಿಸುವುದಿಲ್ಲ ಏಕೆಂದರೆ ಈ ತ್ರಿಮೂರ್ತಿಗಳಿಗೆ ಯಾರು ಜನ್ಮ ಕೊಡುತ್ತಾರೆಂದು ಯಾರಿಗೂ ಗೊತ್ತಿಲ್ಲ. ಇದನ್ನು ತಂದೆಯೇ ಬಂದು ತಿಳಿಸುತ್ತಾರೆ. ಅವರು ಸರ್ವಶ್ರೇಷ್ಠ ವಿಶ್ವದ ಮಾಲೀಕ, ಹೊಸ ವರ್ಷದ ರಚಯಿತ ಆಗಿದ್ದಾರೆ. ಸ್ವರ್ಗದಲ್ಲಿ ಈ ಲಕ್ಷ್ಮೀ-ನಾರಾಯಣರು ರಾಜ್ಯ ಮಾಡುತ್ತಾರೆ. ಸೂಕ್ಷ್ಮವತನದಲ್ಲಿ ರಾಜಧಾನಿಯ ಪ್ರಶ್ನೆ ಬರುವುದಿಲ್ಲ. ಇಲ್ಲಿ ಯಾರು ಪೂಜ್ಯರಾಗುತ್ತಾರೆ, ಅವರೇ ಪೂಜಾರಿಯಾಗುತ್ತಾರೆ. ದೇವತಾ, ಕ್ಷತ್ರಿಯ….. ಈಗ ಮತ್ತೆ ಬ್ರಾಹ್ಮಣರಾಗಿದ್ದಾರೆ. ಈ ವರ್ಣಗಳು ಭಾರತದ ವರ್ಣಗಳು ಆಗಿವೆ ಹಾಗೂ ಯಾರಿಗೂ ಈ ವರ್ಣಗಳು ಹೋಲಿಕೆಯಾಗುವುದಿಲ್ಲ. ಕೇವಲ ನೀವು ಮಾತ್ರ ಈ 5 ವರ್ಣಗಳಲ್ಲಿ ಸುತ್ತುತ್ತೀರಿ. ನೀವು 84 ಜನ್ಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ನಾವು ಭಾರತವಾಸಿಗಳೇ ದೇವೀ-ದೇವತಾ ಧರ್ಮದವರಾಗಿದ್ದು, ಅವರೇ 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆಂದು ನೀವು ಯಥಾರ್ಥವಾಗಿ ತಿಳಿದುಕೊಂಡಿದ್ದೀರಿ. ಈ ಜ್ಞಾನದ ಮೂರನೆಯ ನೇತ್ರವು ಕೇವಲ ಬ್ರಾಹ್ಮಣರಾದ ನಿಮಗೆ ಮಾತ್ರ ತೆರೆಯುತ್ತದೆ. ಮತ್ತೆ ಈ ಜ್ಞಾನವು ಪ್ರಾಯಲೋಪವಾಗುತ್ತದೆ. ಆಮೇಲೆ ಗೀತಾ ಶಾಸ್ತ್ರ ಎಲ್ಲಿಂದ ಬಂತು! ಯಾವಾಗ ಕ್ರೈಸ್ತನು ಧರ್ಮ ಸ್ಥಾಪನೆ ಮಾಡುತ್ತಾನೆ, ಆಗ ಬೈಬಲ್ನ್ನು ಹೇಳುವುದಿಲ್ಲ. ಅವರು ಪವಿತ್ರತೆಯ ಬಲದಿಂದ ಧರ್ಮ ಸ್ಥಾಪನೆ ಮಾಡುತ್ತಾರೆ. ಬೈಬಲ್ ಮೊದಲಾದವುಗಳು ನಂತರ ಮಾಡುತ್ತಾರೆ, ಮತ್ತೆ ಯಾವಾಗ ಕ್ರಿಶ್ಚಯನ್ ಧರ್ಮದ ವೃದ್ಧಿಯಾಗುತ್ತದೆ, ಆಗ ಚರ್ಚ್ ಮೊದಲಾದವುಗಳನ್ನು ಮಾಡುತ್ತಾರೆ. ಅದೇ ರೀತಿ ಅರ್ಧಕಲ್ಪದ ನಂತರ ಭಕ್ತಿಮಾರ್ಗ ಪ್ರಾರಂಭವಾಗುತ್ತದೆ. ಮೊದಲು ಒಬ್ಬರ ಅವ್ಯಭಿಚಾರಿ ಭಕ್ತಿಯಾಗುತ್ತದೆ. ನಂತರ ಬ್ರಹ್ಮಾ, ವಿಷ್ಣು, ಶಂಕರರ ಪೂಜೆ ಮಾಡುತ್ತಾರೆ. ಈಗ ನೋಡಿ! ಪಂಚ ತತ್ವಗಳನ್ನು ಪೂಜೆ ಮಾಡುತ್ತಿರುತ್ತಾರೆ, ಇದನ್ನು ತಮೋಪ್ರಧಾನ ಪೂಜೆ ಎಂದು ಕರೆಯಲಾಗುತ್ತದೆ. ಅದೂ ಸಹ ಅಗತ್ಯವಾಗಿ ಆಗಲೇಬೇಕು. ಭಕ್ತಿಮಾರ್ಗದಲ್ಲಿ ಶಾಸ್ತ್ರವು ಬೇಕಾಗುತ್ತದೆ. ದೇವೀ-ದೇವತಾ ಧರ್ಮಶಾಸ್ತ್ರ ‘ಗೀತೆ’ಯಾಗಿದೆ. ಬ್ರಾಹ್ಮಣ ಧರ್ಮದ ಯಾವ ಶಾಸ್ತ್ರವೂ ಇಲ್ಲ. ಈಗ ಮಹಾಭಾರತದ ಯುದ್ಧದ ವೃತ್ತಾಂತವು ಗೀತೆಯಲ್ಲಿದೆ. ರುದ್ರ ಜ್ಞಾನ ಯಜ್ಞದಿಂದ ವಿನಾಶ ಜ್ವಾಲೆ ಪ್ರಜ್ವಲವಾಯಿತೆಂದು ಗಾಯನವಿದೆ. ಅಗತ್ಯವಾಗಿ ಯಾವಾಗ ವಿನಾಶವಾಗುತ್ತದೆ, ಆಗ ಸತ್ಯಯುಗೀ ರಾಜಧಾನಿ ಸ್ಥಾಪನೆಯಾಗುತ್ತದೆ. ಆದುದರಿಂದ ಭಗವಂತನೇ ಈ ಯಜ್ಞವನ್ನು ರಚಿಸಿದ್ದಾರೆ, ಇದನ್ನು ರುದ್ರ ಜ್ಞಾನ ಯಜ್ಞವೆಂದು ಕರೆಯಲಾಗುತ್ತದೆ. ಈ ಜ್ಞಾನವನ್ನು ಶಿವ ತಂದೆಯೇ ಕೊಡುತ್ತಾರೆ. ವಾಸ್ತವದಲ್ಲಿ ಭಾರತದ ಶಾಸ್ತ್ರ ಒಂದೇ ಆಗಿದೆ. ಹೇಗೆ ಕ್ರಿಶ್ಚಯನ್ನರ ಧರ್ಮಶಾಸ್ತ್ರ ಬೈಬಲ್ ಆಗಿದೆ – ಕ್ರೈಸ್ತನ ಜೀವನ ಕಥೆಯನ್ನು ಜ್ಞಾನ ಎಂದು ಹೇಳುವುದಿಲ್ಲ. ನಮಗೆ ಜ್ಞಾನದ ಜೊತೆ ಸಂಬಂಧವಿದೆ. ಜ್ಞಾನ ಕೊಡುವಂತಹವರೂ ಸಹ ಒಬ್ಬರೇ ಆಗಿದ್ದಾರೆ. ಅವರೇ ವಿಶ್ವದ ಮಾಲೀಕರಾಗಿದ್ದಾರೆ. ಅವರಿಗೆ ಬ್ರಹ್ಮಾಂಡದ ಮಾಲೀಕರೆಂದು ಹೇಳಬಹುದು, ಸೃಷ್ಟಿಯ ಮಾಲೀಕರಾಗುವುದಿಲ್ಲ. ನೀವು ಮಕ್ಕಳು ಸೃಷ್ಟಿಯ ಮಾಲೀಕರಾಗುತ್ತೀರಿ. ನಾನು ಅಗತ್ಯವಾಗಿ ಬ್ರಹ್ಮಾಂಡದ ಮಾಲೀಕನಾಗಿದ್ದೇನೆಂದು ತಂದೆ ಹೇಳುತ್ತಾರೆ. ಮಕ್ಕಳ ಜೊತೆ ನಾನು ಬ್ರಹ್ಮಲೋಕದಲ್ಲಿರುತ್ತೇನೆ. ಹೇಗೆ ಅಲ್ಲಿ ತಂದೆ ಇರುತ್ತಾರೆ, ನಾವೂ ಸಹ ಅಲ್ಲಿಗೆ ಹೋಗುತ್ತೇವೆ ಆದುದರಿಂದ ನಾವು ಬ್ರಹ್ಮಲೋಕದ ಮಾಲೀಕರಾಗುತ್ತೇವೆ.

ತಂದೆ ಹೇಳುತ್ತಾರೆ – ನೀವೆಲ್ಲಾ ಆತ್ಮಗಳು ನನ್ನ ಜೊತೆ ಬ್ರಹ್ಮಾಂಡದಲ್ಲಿರುತ್ತೀರಿ. ಆದುದರಿಂದ ನಾನು ಹಾಗೂ ನೀವು ಬ್ರಹ್ಮಾಂಡದ ಮಾಲೀಕರಾಗಿದ್ದೇವೆ ಆದರೆ ನನಗಿಂತಲೂ ನಿಮ್ಮ ಪದವಿ ಶ್ರೇಷ್ಠವಾಗಿದೆ. ನೀವು ಮಹಾರಾಜಾ-ಮಹಾರಾಣಿ ಆಗುತ್ತೀರಿ, ನೀವೇ ಪೂಜ್ಯರಿಂದ ಮತ್ತೆ ಪೂಜಾರಿಗಳಾಗುತ್ತೀರಿ. ನಾನು ಬಂದು ಪತಿತರನ್ನು ಪಾವನ ಮಾಡುತ್ತೇನೆ. ನಾನು ಜನನ ಮರಣ ರಹಿತನಾಗಿದ್ದೇನೆ, ಮತ್ತೆ ಸಾಧಾರಣ ಶರೀರವನ್ನು ಆಧಾರ ತೆಗೆದುಕೊಂಡು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ನಿಮಗೆ ಹೇಳುತ್ತೇನೆ. ನಿಮ್ಮ ವಿನಃ ಯಾವುದೇ ವಿಧ್ವಾನ-ಪಂಡಿತರು ಬ್ರಹ್ಮಾಂಡ, ಸೂಕ್ಷ್ಮವತನ ಹಾಗೂ ಸೃಷ್ಟಿಚಕ್ರದ ರಹಸ್ಯವನ್ನು ತಿಳಿದುಕೊಂಡಿಲ್ಲ. ನೀವು ಜ್ಞಾನ ಸಾಗರ, ಪವಿತ್ರತಾ ಸಾಗರ, ಪರಮಪಿತ ಪರಮಾತ್ಮನೇ ಆಗಿದ್ದಾರೆಂದು ತಿಳಿದುಕೊಂಡಿದ್ದೀರಿ. ಅವರು ನಮಗೆ ಜ್ಞಾನವನ್ನು ಕೊಟ್ಟಾಗ, ಅವರ ಮಹಿಮೆಯನ್ನು ಮಾಡಲಾಗುತ್ತದೆ. ಒಂದುವೇಳೆ ಅವರು ಜ್ಞಾನವನ್ನು ಕೊಡದೆ ಇದ್ದಿದ್ದರೆ ಈ ಮಹಿಮೆಯನ್ನು ಹೇಗೆ ಮಾಡುತ್ತಿದ್ದರು? ಅವರು ಒಮ್ಮೆಯೇ ಬಂದು ಮಕ್ಕಳಿಗೆ 21 ಜನ್ಮಗಳಿಗೆ ಆಸ್ತಿಯನ್ನು ಕೊಡುತ್ತಾರೆ. 21 ಜನ್ಮಗಳಿಗೇ ಮಾತ್ರ ಮಿತಿ ಇದೆ. ಅರ್ಥಾತ್ ಸದಾಕಾಲಕ್ಕಾಗಿ ಕೊಡುತ್ತಾರೆಂದು ಅರ್ಥವಲ್ಲ. 21 ಪೀಳಿಗೆ ಅರ್ಥಾತ್ 21 ವೃದ್ಧಾಪ್ಯದವರೆಗೂ ಕೊಡುತ್ತಾರೆ. ಪೀಳಿಗೆ ಎಂದು ವೃದ್ಧಾಪ್ಯಕ್ಕೆ ಹೇಳಲಾಗುತ್ತದೆ. ನಿಮಗೆ 21 ಪೀಳಿಗೆ ರಾಜ್ಯಭಾಗ್ಯ ಸಿಗುತ್ತದೆ. ಒಂದರ ನಂತರ ಮತ್ತೊಂದು 21 ಕುಲದ ಉದ್ಧಾರವಾಗುತ್ತದೆ ಎಂದು ಅರ್ಥವಲ್ಲ. ಈ ರಾಜಯೋಗದಿಂದ ನೀವು ರಾಜರಿಗೂ ರಾಜರಾಗುತ್ತೀರೆಂದು ತಿಳಿಸಲಾಗಿದೆ, ರಾಜರಾದ ಮೇಲೆ ಈ ಜ್ಞಾನದ ಆವಶ್ಯಕತೆ ಇರುವುದಿಲ್ಲ. ಏಕೆಂದರೆ ಅಲ್ಲಿ ನೀವು ಸದ್ಗತಿಯಲ್ಲಿರುತ್ತೀರಿ. ಆದುದರಿಂದ ದುರ್ಗತಿಯಲ್ಲಿ ಇರುವವರಿಗೆ ಈ ಜ್ಞಾನ ಬೇಕಾಗುತ್ತದೆ. ಈಗ ನೀವು ಸದ್ಗತಿಯಲ್ಲಿ ಹೋಗುತ್ತೀರಿ, ನಂತರ ಮಾಯಾ ರಾವಣನು ದುರ್ಗತಿಯಲ್ಲಿ ತರುತ್ತಾನೆ. ಈಗ ಸದ್ಗತಿಯಲ್ಲಿ ಹೋಗಬೇಕೆಂದರೆ ತಂದೆಗೆ ಮಕ್ಕಳಾಗಬೇಕಾಗುತ್ತದೆ ಹಾಗೂ ಬಾಬಾ ಸದಾ ನಿಮ್ಮನ್ನು ನೆನಪು ಮಾಡುತ್ತಿರುತ್ತೇವೆ, ದೇಹಾಭಿಮಾನವನ್ನು ಬಿಟ್ಟು ನಾವು ದೇಹೀ-ಅಭಿಮಾನಿಯಾಗಿರುತ್ತೇವೆ, ಗೃಹಸ್ಥ ವ್ಯವಹಾರದಲ್ಲಿದ್ದು ಪವಿತ್ರವಾಗಿರುತ್ತೇವೆಂದು ಪ್ರತಿಜ್ಞೆಯನ್ನು ಮಾಡಬೇಕಾಗುತ್ತದೆ. ಇದು ಹೇಗೆ ಸಾಧ್ಯ ಎಂದು ಹೇಳುತ್ತಾರೆ. ಅರೇ…! ಈ ಅಂತಿಮ ಜನ್ಮದಲ್ಲಿ ಪವಿತ್ರರಾಗಿ ನನ್ನ ಜೊತೆ ಸಂಬಂಧವನ್ನು ಜೋಡಿಸಿದಾಗ ಅಗತ್ಯವಾಗಿ ನಿಮ್ಮ ವಿಕರ್ಮ ವಿನಾಶವಾಗುತ್ತದೆ, ಹಾಗೂ ಚಕ್ರವನ್ನು ನೆನಪು ಮಾಡಿದಾಗ ಚಕ್ರವರ್ತಿ ರಾಜಾ ಆಗುತ್ತೀರೆಂದು ತಂದೆ ಹೇಳುತ್ತಾರೆ. ತಂದೆಯಿಂದ ಅಗತ್ಯವಾಗಿ ಸ್ವರ್ಗದ ಆಸ್ತಿ ಸಿಗುತ್ತದೆ. ರಾಜ್ಯಭಾಗ್ಯವು ನಿಮ್ಮ ಜನ್ಮಸಿದ್ದ ಅಧಿಕಾರವಾಗಿದೆ. ಅದನ್ನು ಈಗ ನೀವು ತೆಗೆದುಕೊಳ್ಳುತ್ತಿದ್ದೀರಿ, ನಂತರ ಯಾರು ಎಷ್ಟು ಪ್ರತಿಜ್ಞೆ ಮಾಡುತ್ತಾರೆ ಹಾಗೂ ತಂದೆಯ ಜೊತೆ ಸಹಯೋಗಿಗಳಾಗಿರುತ್ತಾರೆ…… ವಿನಾಶವು ಮುಂದೆ ನಿಂತಿದೆ ಎಂದು ನೀವು ತಿಳಿದುಕೊಂಡಿದ್ದೀರಿ. ಪ್ರಾಕೃತಿಕ ವಿಕೋಪಗಳೂ ಸಹ ಬಂದೇ ಬಿಡುತ್ತವೆ ಆದುದರಿಂದ ನಿಮ್ಮ ಹಳೆಯ ಎಲ್ಲವನ್ನು ಟ್ರಾನ್ಸಫರ್ ಮಾಡಿಕೊಳ್ಳಿ. ನೀವು ಟ್ರಸ್ಟಿಗಳಾಗಿ ಬಿಡಿ. ಬಾಬಾ ಚಿನ್ನದ ವ್ಯಾಪಾರಿ ಆಗಿದ್ದಾರೆ. ನಮ್ಮ ಹಳೆಯದನ್ನು ತೆಗೆದುಕೊಂಡು ಹೊಸ ವಸ್ತುವನ್ನು ಕೊಡುತ್ತಾರೆ. ಮನುಷ್ಯರು ಸತ್ತಾಗ ಅವರ ಎಲ್ಲಾ ಹಳೆಯ ವಸ್ತುಗಳನ್ನು ಕರ್ಮ ಮಾಡುವವರಿಗೆ ಕೊಡುತ್ತಾರೆ. ನಿಮ್ಮದೂ ಸಹ ಈ ಹಳೆಯದೆಲ್ಲವೂ ವಿನಾಶವಾಗುವುದಿದೆ ಆದುದರಿಂದ ಹಳೆಯ ವಸ್ತುಗಳೊಂದಿಗೆ ಮಮತೆಯನ್ನು ಅಳಿಸಿಕೊಂಡು ಒಂದೇ ಸಾರಿ ಬಡವರಾಗಿ. ಬೆಗ್ಗರ್ ಟು ಪ್ರಿನ್ಸ್ ತಂದೆ ಹಾಗೂ ಆಸ್ತಿಯನ್ನು ನೆನಪು ಮಾಡಿದಾಗ ನೀವು ಸ್ವರ್ಗದ ಮಾಲೀಕರಾಗುತ್ತೀರಿ, ಅದು ನಿಮ್ಮ ಜನ್ಮಸಿದ್ದ ಅಧಿಕಾರವಾಗುತ್ತದೆ. ವಿಶ್ವದ ರಚಯಿತ ಯಾರು? ಎಂದು ಯಾರಾದರು ಬಂದಾಗ ಅವರನ್ನು ಕೇಳಬೇಕು. ಪರಮಪಿತ ಪರಮಾತ್ಮನಲ್ಲವೇ. ಅವರು ಸ್ವರ್ಗದ ರಚಯಿತನಾಗಿದ್ದಾರೆ. ಯಾವಾಗ ತಂದೆ ಸ್ವರ್ಗವನ್ನು ರಚನೆ ಮಾಡುತ್ತಾರೆ, ಆಗ ನಾವು ನರಕದಲ್ಲಿಯೇ ಏಕೆ ಇರಬೇಕು? ಸ್ವರ್ಗದ ಮಾಲೀಕರು ಏಕೆ ಆಗಬಾರದು! ನಿಮಗೆ ರಾವಣನು ನರಕದ ರಾಜ್ಯವನ್ನಾಗಿ ಮಾಡಿದ್ದಾನೆ. ತಂದೆಯು ಸ್ವರ್ಗದ ರಾಜ್ಯಭಾಗ್ಯವನ್ನು ಮಾಡುವಂತಹವರಾಗಿದ್ದಾರೆ. ರಾವಣ ದುಃಖಿಯನ್ನಾಗಿ ಮಾಡುತ್ತಾನೆ, ಆಗ ರಾವಣನಿಂದ ದುಃಖಿಗಳಾಗಿ ಅವನನ್ನು ಸುಡಲು ಪ್ರಯತ್ನ ಮಾಡುತ್ತಾರೆ, ಆದರೆ ರಾವಣ ಸುಡುವುದಿಲ್ಲ. ರಾವಣ ಎಂತಹ ವಸ್ತು ಆಗಿದ್ದಾನೆಂದು ಮನುಷ್ಯರು ತಿಳಿದುಕೊಂಡಿಲ್ಲ. ಕ್ರೈಸ್ತನ 3000 ವರ್ಷದ ಮೊದಲು ಅವರು ಗೀತೆ ಹೇಳಿದ್ದರೆಂದು ಹೇಳುತ್ತಾರೆ. ಆದರೆ ಆ ಸಮಯದಲ್ಲಿ ಯಾವ ಧರ್ಮವಿತ್ತೆಂದು ತಿಳಿಸಬೇಕು. ಮಾಯೆಯು ಸಂಪೂರ್ಣವಾಗಿ ಪತಿತರನ್ನಾಗಿ ಮಾಡಿದೆ. ಸ್ವರ್ಗದ ರಚಯಿತ ಯಾರೆಂದು ಯಾರಿಗೂ ಗೊತ್ತಿಲ್ಲ. ನಾಟಕದಲ್ಲಿ ಪಾತ್ರಧಾರಿಗಳಾಗಿದ್ದು, ನಾಟಕದ ರಚಯಿತನನ್ನು ತಿಳಿದುಕೊಳ್ಳದವರಿಗೆ ಏನೆಂದು ಹೇಳುವುದು! ಈ ಮಹಾಭಾರತದ ಯುದ್ಧ ವಿನಾಶಕ್ಕಾಗಿ ಅತಿ ದೊಡ್ಡ ಯುದ್ಧವಾಗಿದೆ. ಬ್ರಹ್ಮನ ಮೂಲಕ ಸ್ಥಾಪನೆ ಎಂದು ಹೇಳಲಾಗುತ್ತದೆಯೇ ವಿನಃ ಕೃಷ್ಣನ ಮೂಲಕ ಸ್ಥಾಪನೆ ಎಂದು ಹೇಳುವುದಿಲ್ಲ. ರುದ್ರ ಜ್ಞಾನ ಯಜ್ಞ ಪ್ರಖ್ಯಾತವಾಗಿದೆ, ಇದರಿಂದ ವಿನಾಶ ಜ್ವಾಲೆ ಪ್ರಜ್ವಲವಾಗುತ್ತದೆ. ನಾನು ಈ ಜ್ಞಾನ ಯಜ್ಞವನ್ನು ರಚಿಸುತ್ತೇನೆಂದು ಸ್ವಯಂ ತಂದೆ ಹೇಳುತ್ತಾರೆ. ನೀವು ಆತ್ಮಿಕ ಮಾರ್ಗದರ್ಶಕರು ಸತ್ಯ ಬ್ರಾಹ್ಮಣರಾಗಿದ್ದೀರಿ. ಈಗ ನೀವು ತಂದೆಯ ಸಮೀಪ ಹೋಗಬೇಕಾಗಿದೆ. ಅಲ್ಲಿಂದ ಪುನಃ ಈ ಪತಿತ ಪ್ರಪಂಚಕ್ಕೆ ಬರಬೇಕಾಗುತ್ತದೆ. ಇದು ಸತ್ಯ-ಸತ್ಯ ತೀರ್ಥ ಯಾತ್ರೆಯಾಗಿದ್ದು ಸತ್ಯ ಖಂಡದಲ್ಲಿ ಕರೆದೊಯ್ಯುತ್ತದೆ. ಆ ತೀರ್ಥ ಯಾತ್ರೆಗಳು ಈ ಅಸತ್ಯ ಖಂಡಕ್ಕಾಗಿ. ಅದು ಭೌತಿಕವಾದ ದೇಹಾಭಿಮಾನದ ಯಾತ್ರೆಯಾಗಿದೆ. ಇದು ಆತ್ಮಾಭಿಮಾನದ ಯಾತ್ರೆಯಾಗಿದೆ.

ನಾವು ಮತ್ತೆ ಹೊಸ ಪ್ರಪಂಚಕ್ಕೆ ಹೋಗಿ ನಮ್ಮ ಚಿನ್ನದ ಅರಮನೆಯನ್ನು ಮಾಡುತ್ತೇವೆಂದು ನೀವು ತಿಳಿದುಕೊಂಡಿದ್ದೀರಿ. ಸಾಗರದಡಿಯಿಂದ ಯಾವುದೇ ಅರಮನೆ ಬರುವುದಿಲ್ಲ. ನಿಮಗೆ ಬಹಳ ಖುಷಿ ಆಗಬೇಕಾಗಿದೆ ಹೇಗೆ ಆ ವಿದ್ಯೆಯಲ್ಲಿ ನಾನು ವಕೀಲನಾಗಿ ಈ ರೀತಿ ಮಾಡುತ್ತೇನೆಂದು ವಿಚಾರ ನಡೆಯುತ್ತದೆ. ಅದೇರೀತಿ ನಾವು ಸ್ವರ್ಗದಲ್ಲಿ ಅರಮನೆ ಮಾಡುತ್ತೇವೆಂದು ಚಿಂತನೆ ಮಾಡಬೇಕು. ನಾವು ಅವಶ್ಯವಾಗಿ ಲಕ್ಷ್ಮಿಯನ್ನು ವರಿಸುತ್ತೇವೆ, ಸೀತೆಯನ್ನು ವರಿಸುವುದಿಲ್ಲವೆಂದು ಪ್ರತಿಜ್ಞೆ ಮಾಡುತ್ತೇವೆ. ಲಕ್ಷ್ಮಿಯನ್ನು ವರಿಸಲು ಬಹಳ ಉತ್ತಮವಾದ ಪುರುಷಾರ್ಥವನ್ನು ಮಾಡಬೇಕಾಗುತ್ತದೆ. ಈಗ ತಂದೆ ಹೇಳುವ ಸತ್ಯ ಜ್ಞಾನವನ್ನು ಧಾರಣೆ ಮಾಡುವುದರಿಂದ ನಾವು ದೇವತೆಯಾಗುತ್ತಿದ್ದೇವೆ. ಶ್ರೀಕೃಷ್ಣ ಮೊದಲನೆಯ ಸ್ಥಾನದಲ್ಲಿ ಬರುತ್ತಾನೆ. ಯಾರು ಹತ್ತನೇ ತರಗತಿಯಲ್ಲಿ ತೇರ್ಗಡೆ ಆಗುತ್ತಾರೆಂಬ ಪಟ್ಟಿಯು (ಲಿಸ್ಟ್) ಸಮಾಚಾರ ಪತ್ರಿಕೆಯಲ್ಲಿ ಬರುತ್ತದೆಯಲ್ಲವೇ! ಹಾಗೆಯೇ ನಿಮ್ಮ ಶಾಲೆಯ ಪಟ್ಟಿಯೂ ಸಹ ಸ್ತುತಿಸಲ್ಪಟ್ಟಿದೆ. ಅಷ್ಟರತ್ನಗಳು ಸಂಪೂರ್ಣವಾಗಿ ತೇರ್ಗಡೆಯಾಗುತ್ತಾರೆ, ಅಷ್ಟರತ್ನಗಳ ಪ್ರಖ್ಯಾತಿಯು ಇದೆ, ಆ ಅಷ್ಟ ರತ್ನಗಳೇ ಉಪಯೋಗಕ್ಕೆ ಬರುತ್ತವೆ. ನೂರೆಂಟರ ಮಾಲೆಯನ್ನು ಬಹಳ ಸ್ಮರಿಸುತ್ತಾರೆ. ಕೆಲವರು 16000ದ ಮಾಲೆಯನ್ನು ಮಾಡುತ್ತಾರೆ. ನೀವು ಶ್ರಮವಹಿಸಿ ಭಾರತದ ಸೇವೆಯನ್ನು ಮಾಡುತ್ತೀರಿ, ಆಗ ಎಲ್ಲರೂ ನಿಮ್ಮ ಪೂಜೆಯನ್ನು ಮಾಡುತ್ತಾರೆ. ಒಂದು ಭಕ್ತರ ಮಾಲೆಯಾಗಿದೆ. ಎರಡನೆಯದು ರುದ್ರ ಮಾಲೆಯಾಗಿದೆ.

ಶ್ರೀಮತ್ಭಗವದ್ಗೀತೆಯ ಮಾತಾಪಿತ ಶಿವ ಆಗಿದ್ದಾರೆಂದು ನೀವು ಈಗ ತಿಳಿದುಕೊಂಡಿದ್ದೀರಿ. ದೈವೀ ರಾಜ್ಯದಲ್ಲಿ ಮೊಟ್ಟ ಮೊದಲು ಶ್ರೀಕೃಷ್ಣ ಜನ್ಮ ತೆಗೆದುಕೊಳ್ಳುತ್ತಾನೆ. ರಾಧೆಯೂ ಸಹ ಜನ್ಮ ತೆಗೆದುಕೊಂಡಿರಬೇಕು ಹಾಗೂ ಇನ್ನೂ ಅನೇಕರು ತೇರ್ಗಡೆ ಅಗಿರಬೇಕು. ಪರಮಪಿತ ಪರಮಾತ್ಮನಿಂದ ವಿಮುಖರಾದ ಕಾರಣ ಇಡೀ ಪ್ರಪಂಚ ನಿಧನಿಕವಾಗಿದೆ. ಆದುದರಿಂದ ಪರಸ್ಪರ ಯುದ್ಧ ಜಗಳ ಮಾಡುತ್ತಿರುತ್ತಾರೆ. ಯಾರು ಧಣಿ-ಧೋಣಿ ಇಲ್ಲದಂತಾಗಿದೆ. ಈಗ ನೀವು ಎಲ್ಲರಿಗೂ ತಂದೆಯ ಪರಿಚಯವನ್ನು ಕೊಡಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಯಾಗಿ ನೆನಪಿನ ಯಾತ್ರೆಯಲ್ಲಿರಬೇಕು. ಈ ಅಂತಿಮ ಜನ್ಮದಲ್ಲಿ ಪವಿತ್ರರಾಗಿದ್ದು ತಂದೆಗೆ ಸಂಪೂರ್ಣ ಸಹಯೋಗಿಗಳಾಗಬೇಕು.

2. ಹಳೆಯ ಏನೆಲ್ಲಾ ವಸ್ತುಗಳಿವೆ, ಅವುಗಳೊಂದಿಗೆ ಮಮತ್ವವನ್ನು ತೆಗೆದು ಹಾಕಿ, ಟ್ರಸ್ಟಿಯಾಗಿ ತಂದೆ ಹಾಗೂ ಆಸ್ತಿಯನ್ನು ನೆನಪು ಮಾಡುತ್ತಾ ವಿಶ್ವದ ಮಾಲೀಕರಾಗಬೇಕು.

ವರದಾನ:-

ಸದಾ ನೆನಪಿರಲಿ – ಸಭ್ಯತೆಯೇ ಸತ್ಯತೆಯ ಸಂಕೇತವಾಗಿದೆ. ಒಂದುವೇಳೆ ತಮ್ಮಲ್ಲಿ ಸತ್ಯತೆಯ ಶಕ್ತಿಯಿದ್ದರೆ ಸಭ್ಯತೆಯನ್ನೆಂದಿಗೂ ಬಿಡಬಾರದು. ಸತ್ಯತೆಯನ್ನು ಸಿದ್ಧ ಮಾಡಿರಿ ಆದರೆ ಸಭ್ಯತೆಯಿಂದ ಕೂಡಿರಲಿ. ಸಭ್ಯತೆಯ ಸಂಕೇತ ನಿರ್ಮಾಣವಾಗಿರುವುದು ಹಾಗೂ ಅಸಭ್ಯತೆಯ ಸಂಕೇತ ಜಿದ್ದು ಮಾಡುವುದಾಗಿದೆ. ಯಾವಾಗ ಸಭ್ಯತೆಯಿಂದ ನುಡಿ ಹಾಗೂ ನಡೆಯಿದ್ದಾಗ ಸಫಲತೆಯು ಸಿಗುವುದು ಹಾಗೂ ಇದೇ ಮುಂದುವರೆಯುವ ಸಾಧನವಾಗಿದೆ. ಒಂದುವೇಳೆ ಸತ್ಯತೆಯಿದೆ, ಸಭ್ಯತೆಯಿಲ್ಲದಿದ್ದರೆ ಸಫಲತೆಯು ಸಿಗಲು ಸಾಧ್ಯವಿಲ್ಲ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top