29 March 2022 KANNADA Murli Today | Brahma Kumaris

Read and Listen today’s Gyan Murli in Kannada

March 28, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಎಷ್ಟು ಪ್ರೀತಿಯಿಂದ ಯಜ್ಞದ ಸೇವೆ ಮಾಡುತ್ತೀರೋ ಅಷ್ಟು ಸಂಪಾದನೆ ಆಗುತ್ತದೆ, ಸೇವೆ ಮಾಡುತ್ತಾ-ಮಾಡುತ್ತಾ ನೀವು ಬಂಧನ ಮುಕ್ತರಾಗುತ್ತೀರಿ ಹಾಗೂ ಸಂಪಾದನೆ ಜಮಾ ಆಗುತ್ತದೆ”

ಪ್ರಶ್ನೆ:: -

ತಮ್ಮನ್ನು ಸದಾ ಖುಷಿಯಾಗಿಟ್ಟುಕೊಳ್ಳಲು ಯಾವ ಯುಕ್ತಿಯನ್ನು ತಮ್ಮದನ್ನಾಗಿ ಮಾಡಿಕೊಳ್ಳಬೇಕು?

ಉತ್ತರ:-

ನಿಮ್ಮನ್ನು ಸದಾ ಸೇವೆಯಲ್ಲಿ ವ್ಯಸ್ತವಾಗಿಟ್ಟುಕೊಂಡಾಗ ಸದಾ ಖುಷಿ ಇರುತ್ತದೆ. ಸಂಪಾದನೆ ಆಗುತ್ತಿರುತ್ತದೆ. ಸೇವೆಯ ಸಮಯದಲ್ಲಿ ವಿಶ್ರಾಂತಿಯ ಆಲೋಚನೆ ಬರಬಾರದು. ಎಷ್ಟು ಅಧಿಕವಾಗಿ ಸೇವೆ ಸಿಗುತ್ತದೆ, ಅಷ್ಟು ಖುಷಿಯಾಗಬೇಕು. ಪ್ರಾಮಾಣಿಕರಾಗಿ ಪ್ರೀತಿಯಿಂದ ಸೇವೆ ಮಾಡಬೇಕು. ಸೇವೆಯ ಜೊತೆ-ಜೊತೆಯಲ್ಲಿ ಮಧುರರೂ ಸಹ ಆಗಬೇಕು. ಯಾವುದೇ ಅವಗುಣ ಮಕ್ಕಳಲ್ಲಿ ಇರಬಾರದು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಈ ಸಮಯ ಕಳೆಯುತ್ತಿದೆ….

ಓಂ ಶಾಂತಿ. ಇದನ್ನು ಯಾರು ಹೇಳುತ್ತಾರೆ? ಇದನ್ನು ತಂದೆ ಮಕ್ಕಳಿಗೆ ಹೇಳುತ್ತಾರೆ. ಇದು ಬೇಹದ್ದಿನ ಮಾತಾಗಿದೆ. ಮನುಷ್ಯ ಯಾವಾಗ ವೃದ್ದನಾಗುತ್ತಾನೆ, ಆಗ ಈ ರೀತಿ ತಿಳಿದುಕೊಳ್ಳುತ್ತಾನೆ-ಎಲ್ಲವೂ ಹೋಗಿ ಇನ್ನೇನು ಸ್ವಲ್ಪ ಸಮಯ ಉಳಿದಿದೆ. ಏನಾದರೂ ಉತ್ತಮ ಕರ್ಮ ಮಾಡೋಣ ಎಂದು ತಿಳಿದುಕೊಳ್ಳುತ್ತಾನೆ. ಆದುದರಿಂದ ವಾನಪ್ರಸ್ಥ ಜೀವನದಲ್ಲಿ ಸತ್ಸಂಗಗಳಲ್ಲಿ ಭಾಗವಹಿಸುತ್ತಾನೆ. ಏಕೆಂದರೆ ಇದುವರೆಗೂ ಗೃಹಸ್ಥದಲ್ಲಿ ಬಹಳಷ್ಟು ಮಾಡಿದ್ದು ಈ ಸ್ವಲ್ಪ ಸಮಯವಾದರೂ ಉತ್ತಮ ಕಾರ್ಯ ಮಾಡೋಣವೆಂದು ತಿಳಿದುಕೊಳ್ಳುತ್ತಾನೆ. ವಾನಪ್ರಸ್ಥಿ ಅರ್ಥಾತ್ ವಿಕಾರಗಳನ್ನು ಬಿಡುವುದಾಗಿದೆ. ಮನೆ-ಮಠದೊಂದಿಗೆ ಸಂಬಂಧವನ್ನು ಬಿಟ್ಟು ಸತ್ಸಂಗಕ್ಕೆ ಹೋಗುತ್ತಾರೆ. ಸತ್ಯಯುಗದಲ್ಲಿ ಇಂತಹ ಮಾತುಗಳಿರುವುದಿಲ್ಲ. ಇನ್ನು ಸ್ವಲ್ಪವೇ ಸಮಯವಿದೆ ಹಾಗೂ ಜನ್ಮ-ಜನ್ಮಾಂತರದ ಪಾಪದ ಹೊರೆ ತಲೆಯ ಮೇಲಿದೆ ಆದುದರಿಂದ ಈಗಲೇ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಿ. ಆ ಜನರು ಸಾಧು-ಸಂತರ ಸಂಗವನ್ನೇನೊ ಮಾಡುತ್ತಾರೆ, ಆದರೆ ಸಂಬಂಧ ಜೋಡಿಸಲು ಯಾವುದೇ ಗುರಿ ಇರುವುದಿಲ್ಲ. ಆದರೆ ಅಂತಹ ಸಂಗದಲ್ಲಿರುವ ಕಾರಣ ಪಾಪ ಕಡಿಮೆ ಆಗುತ್ತದೆ. ವಿಕಾರಗಳಿಂದ ಬಹಳ ಪಾಪವಾಗುತ್ತದೆ. ವ್ಯಾಪಾರ ವ್ಯವಹಾರವನ್ನೇನೊ ಬಿಡುತ್ತಾರೆ ಆದರೆ ಈ ಸಮಯದಲ್ಲಿ ತಮೋಪ್ರಧಾನ ಸ್ಥಿತಿಯಿರುವ ಕಾರಣ ವಿಕಾರಗಳನ್ನು ಬಿಡುವುದೇ ಇಲ್ಲ. 70-80 ವರ್ಷವಾದರೂ ಮಕ್ಕಳ ಜನ್ಮವಾಗುತ್ತಿರುತ್ತದೆ. ಈಗ ಈ ರಾವಣ ರಾಜ್ಯ ಸಮಾಪ್ತಿಯಾಗುತ್ತದೆ ಎಂದು ತಂದೆ ತಿಳಿಸುತ್ತಾರೆ. ಸಮಯ ಬಹಳ ಕಡಿಮೆಯಿರುವ ಕಾರಣ ತಂದೆಯ ಜೊತೆ ಸಂಬಂಧವನ್ನು ಜೋಡಿಸುತ್ತಾ ಸ್ವದರ್ಶನ ಚಕ್ರವನ್ನು ತಿರುಗಿಸುತ್ತಿರಬೇಕು. ಇನ್ನು ಮನೆಗೆ ಹಿಂತಿರುಗಲು ಬಹಳ ಕಡಿಮೆ ಸಮಯವಿದೆ. ತಲೆಯ ಮೇಲೆ ಪಾಪದ ಹೊರೆಯಿರುವ ಕಾರಣ ಎಷ್ಟು ಸಾಧ್ಯವೋ ಅಷ್ಟು ಸಮಯ ತೆಗೆದು ನನ್ನನ್ನು ನೆನಪು ಮಾಡಿ. ನೀವು ಕರ್ಮಯೋಗಿಗಳಾಗಿರುವ ಕಾರಣ ವ್ಯಾಪಾರ-ವ್ಯವಹಾರ ಕರ್ಮವನ್ನಂತೂ ಮಾಡಬೇಕು. 8 ಗಂಟೆ ಇಲ್ಲಿ ತೊಡಗಿಸಬೇಕು. ಇದೂ ಸಹ ಅಂತ್ಯದಲ್ಲಿ ಆಗುತ್ತದೆ. ಕೇವಲ ವಯಸ್ಸಾಗಿರುವ ವೃದ್ಧರೇ ನೆನಪು ಮಾಡಬೇಕೆಂದು ತಿಳಿಯಬಾರದು. ಎಲ್ಲರ ಮೃತ್ಯು ಈಗ ಬಹಳ ಸಮೀಪವಿದೆ. ಇದು ಎಲ್ಲರಿಗಾಗಿ ಶಿಕ್ಷಣವಾಗಿದೆ. ನಾವು ಆತ್ಮರಾಗಿದ್ದೇವೆ, ಪರಮಧಾಮದಿಂದ ಬಂದಿದ್ದೇವೆಂದು ಚಿಕ್ಕಮಕ್ಕಳಿಗೂ ಸಹ ತಿಳಿಸಿಕೊಡಬೇಕು. ಗೃಹಸ್ಥವನ್ನು ಪಾಲನೆ ಮಾಡುತ್ತಾ ಈ ಶಿಕ್ಷಣವನ್ನು ತೆಗೆದುಕೊಳ್ಳಬೇಕು. ನಂತರ ಸೇವಾಧಾರಿಯಾದಾಗ ಬಂಧನವು ಸ್ವತಹವಾಗಿ ಬಿಡುಗಡೆಯಾಗುತ್ತದೆ, ಆಗ ಮನೆಯವರೂ ಸಹ ನೀವು ಸೇವೆ ಮಾಡಿ ಎಂದು ಹೇಳುತ್ತಾರೆ. ನಾವು ಮನೆ ಹಾಗೂ ಮಕ್ಕಳನ್ನು ನೋಡಿಕೊಳ್ಳುತ್ತೇವೆ ಅಥವಾ ನೌಕರರನ್ನು ಇಟ್ಟುಕೊಳ್ಳುತ್ತೇವೆಂದು ಹೇಳುತ್ತಾರೆ. ಅದರಿಂದ ಅವರಿಗೂ ಸಹ ಲಾಭವಿದೆ. ಒಂದುವೇಳೆ ಮನೆಯಲ್ಲಿ 5-6 ಮಕ್ಕಳಿದ್ದು ಸಹೋದರಿಗೆ ಈಶ್ವರೀಯ ಸೇವೆ ಮಾಡಲು ಇಷ್ಟವಿದ್ದರೆ, ಉತ್ತಮ ಸೇವಾಧಾರಿಯಾಗಿದ್ದಾಗ ಮಕ್ಕಳನ್ನು ನೋಡಿಕೊಳ್ಳಲು ನೌಕರರನ್ನು ಇಟ್ಟುಕೊಳ್ಳುವುದರಿಂದ ತಮ್ಮ ಹಾಗೂ ಅನ್ಯರ ಕಲ್ಯಾಣವಾಗುತ್ತದೆ. ಮನೆಯವರಿಬ್ಬರೂ ಸಹ ಸೇವೆಯಲ್ಲಿ ತೊಡಗಬಹುದು. ಸೇವೆ ಮಾಡಲು ಅನೇಕ ವಿಧಿಗಳಿವೆ. ಬೆಳಗ್ಗೆ ಸಾಯಂಕಾಲ ಸೇವೆ ಮಾಡಬಹುದು. ದಿನದಲ್ಲಿ ಮಾತೆಯರಿಗೆ ಅಗತ್ಯವಾಗಿ ಕ್ಲಾಸ್ ಇರಬೇಕು. ಬ್ರಹ್ಮಾಕುಮಾರ-ಕುಮಾರಿಯರು ಸೇವೆ ಸಮಯದಲ್ಲಿ ನಿದ್ರೆ ಮಾಡಬಾರದು. ಕೆಲವು ಮಕ್ಕಳು ಉಪಾಯದಿಂದ ಸಮಯವನ್ನು ಮಾಡಿಕೊಳ್ಳುತ್ತಾರೆ. ದಿನದಲ್ಲಿ ಯಾರೂ ಬಾರದಿರಲಿ ಎಂದು ತಿಳಿದುಕೊಳ್ಳುತ್ತಾರೆ. ವ್ಯಾಪಾರಿ ಅಥವಾ ನೌಕರಿ ಮಾಡುವಂತಹವರಿಗೆ ದಿನದಲ್ಲಿ ನಿದ್ರೆ ಮಾಡಲು ಸಮಯವಿರುವುದಿಲ್ಲ. ಇಲ್ಲಿ ಎಷ್ಟು ಸೇವೆಯನ್ನು ಮಾಡುತ್ತೀರಿ ಅಷ್ಟು ಸಂಪಾದನೆಯೇ ಸಂಪಾದನೆ ಆಗುತ್ತದೆ. ಇದರಿಂದ ಬಹಳ ಲಾಭವಿದೆ. ಇಡೀದಿನ ಸೇವೆಯಲ್ಲಿ ವ್ಯಸ್ತರಾಗಿರಬೇಕು. ಹೀಗೆ ಪ್ರದರ್ಶನದಲ್ಲಿ ಬಹಳಷ್ಟು ವ್ಯಸ್ತವಾಗಿದ್ದು ಬಾಬಾ, ಹೇಳುತ್ತಾ ಗಂಟಲು ಕಟ್ಟುತ್ತದೆ ಎಂದು ಹೇಳುತ್ತಾರೆ ಏಕೆಂದರೆ ಅಕಸ್ಮಾತ್ ಸೇವೆ ಮಾಡುವ ಕಾರಣ ಈ ರೀತಿ ಆಗುತ್ತದೆ, ಆದರೆ ಸದಾ ಎಷ್ಟೊಂದು ಸೇವೆ ಮಾಡುವಂತಹವರಿರುತ್ತಾರೆ ಅವರಿಗೆ ಎಂದೂ ಗಂಟಲು ಕಟ್ಟುವುದಿಲ್ಲ. ಅಭ್ಯಾಸವಾಗುವ ಕಾರಣ ಧಣಿವಾಗುವುದಿಲ್ಲ, ಆದರೂ ಎಲ್ಲರೂ ಒಂದೇರೀತಿ ಇರಲು ಸಾಧ್ಯವಾಗುವುದಿಲ್ಲ. ಕೆಲವರು ಬಹಳ ಪ್ರಾಮಾಣಿಕರಾಗಿ ಅಧಿಕ ಸೇವೆ ದೊರೆತಷ್ಟು ಅವರಿಗೆ ಖುಷಿ ಆಗುತ್ತದೆ ಏಕೆಂದರೆ ಸೇವೆಯ ಫಲ ಸಿಗುತ್ತದೆ. ಯಾರು ಉತ್ತಮ ಸೇವೆ ಮಾಡುತ್ತಾರೆ ಅವರಿಗೆ ಉತ್ತಮವಾದ ಫಲ ಪ್ರಾಪ್ತಿಯಾಗುತ್ತದೆ. ನೀವು ಬಹಳ ಮಧುರರಾಗಬೇಕು. ಅವಗುಣಗಳನ್ನು ತೆಗೆದು ಹಾಕಬೇಕು. ಶ್ರೀಕೃಷ್ಣನಿಗೆ ಸರ್ವಗುಣ ಸಂಪನ್ನ……. ಎಂದು ಮಹಿಮೆ ಮಾಡುತ್ತಾರೆ. ಈ ಪ್ರಪಂಚದವರಲ್ಲಿ ಎಲ್ಲಾ ಆಸುರಿ ಗುಣಗಳಿವೆ. ಯಾವುದೇ ಬಲಹೀನತೆ ಇಲ್ಲದಂತೆ ಮಧುರರಾಗಬೇಕು. ಈ ರೀತಿ ಸೇವೆ ಮಾಡುವುದರಿಂದ ಆಗಬಹುದು. ನೀವು ಎಲ್ಲಿಬೇಕಾದರೂ ಹೋಗಿ ಸೇವೆ ಮಾಡಬಹುದು. ಎಲ್ಲರನ್ನು ರಾವಣನ ಬಂಧನದಿಂದ ಬಿಡಿಸಬೇಕು. ಮೊದಲು ತಮ್ಮ ಜೀವನವನ್ನು ಶ್ರೇಷ್ಠ ಮಾಡಿಕೊಳ್ಳಬೇಕು. ಒಂದುವೇಳೆ ನಾವು ಹಾಗೆಯೇ ಕುಳಿತು ಬಿಟ್ಟರೆ ನಮಗೆ ನಷ್ಟವಾಗುತ್ತದೆ. ಮೊದಲು ಈ ಆತ್ಮಿಕ ಸೇವೆಯನ್ನು ಮಾಡಬೇಕು. ಕೆಲವರನ್ನು ನಿರೋಗಿಯನ್ನಾಗಿ, ಹಣವಂತರನ್ನಾಗಿ, ಧೀರ್ಘಾಯುವುಳ್ಳವರನ್ನಾಗಿ ಮಾಡಬೇಕು. ಇಡೀದಿನ ಸೇವೆಯ ಆಲೋಚನೆ ಇರಬೇಕು. ಅಂತಹ ಮಕ್ಕಳು ತಂದೆಯ ಹೃದಯವನ್ನು ಗೆದ್ದು ಸಿಂಹಾಸನ ಅಧಿಕಾರಿ ಆಗುತ್ತಾರೆ. ಮೊದಲು ತಂದೆಯ ಪರಿಚಯವನ್ನು ಕೊಡಬೇಕು, ತಂದೆ ಸ್ವರ್ಗದ ರಚಯಿತ ಆಗಿದ್ದಾರೆ. ನೀವು ಅವರನ್ನು ತಿಳಿದುಕೊಂಡಿದ್ದೀರಾ? ಪರಮಪಿತ ಪರಮಾತ್ಮನ ಜೊತೆ ನಿಮ್ಮ ಸಂಬಂಧವೇನು? ತಂದೆಯ ಜೊತೆ ಪ್ರೀತಿಯುಂಟಾಗುವಂತೆ ಪರಿಚಯವನ್ನು ಕೊಡಬೇಕು. ನಾನು ಕಲ್ಪದ ಸಂಗಮದಲ್ಲಿ ಬಂದು ನರಕವನ್ನು ಸ್ವರ್ಗವನ್ನಾಗಿ ಮಾಡುತ್ತೇನೆಂದು ತಂದೆಯು ತಿಳಿಸುತ್ತಾರೆ, ಕೃಷ್ಣನು ಈ ರೀತಿ ಹೇಳಲು ಸಾಧ್ಯವಿಲ್ಲ ಏಕೆಂದರೆ ಕೃಷ್ಣನು ಸ್ವರ್ಗದ ರಾಜಕುಮಾರನಾಗಿರುತ್ತಾನೆ. ಕೃಷ್ಣನ ರೂಪವೂ ಸಹ ಪರಿವರ್ತನೆ ಆಗುತ್ತದೆ, ವೃಕ್ಷದಲ್ಲಿ ಮೇಲೆ ಪತಿತ ಪ್ರಪಂಚದಲ್ಲಿ ಬ್ರಹ್ಮಾ ನಿಂತಿದ್ದಾರೆಂದು ತಿಳಿಸಿಕೊಡಬೇಕು. ಆ ಬ್ರಹ್ಮಾ ಪತಿತರಾಗಿದ್ದು ವೃಕ್ಷದ ಕೆಳಗಡೆ ತಪಸ್ಸನ್ನೂ ಮಾಡುತ್ತಿದ್ದಾರೆ. ಜೊತೆಯಲ್ಲಿ ಬ್ರಹ್ಮನ ಮುಖವಂಶಾವಳಿಯೂ ಇದೆ. ಪರಮಪಿತ ಪರಮಾತ್ಮ ಬಂದು ಪತಿತರನ್ನು ಪಾವನ ಮಾಡುತ್ತಾರೆ. ಪತಿತರೇ ಮತ್ತೆ ಪಾವನರಾಗುತ್ತಾರೆ. ಕೃಷ್ಣನಿಗೆ ಶ್ಯಾಮ-ಸುಂದರನೆಂದು ಹೇಳುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಈಗ ಕೃಷ್ಣನೂ ಸಹ ಪತಿತನಾಗಿದ್ದಾನೆಂದು ನೀವು ತೀಳಿಸಿಕೊಡಬಹುದು. ಬ್ರಹ್ಮನ ನಿಜ ಹೆಸರು ಬ್ರಹ್ಮಾ ಎಂದಲ್ಲ. ಅದೇರೀತಿ ನಿಮಗೂ ಹೆಸರುಗಳನ್ನು ಪರಿವರ್ತನೆ ಮಾಡಲಾಯಿತು. ಅದೇರೀತಿ ಶಿವ ತಂದೆಯು ಇವರನ್ನು ದತ್ತು ತೆಗೆದುಕೊಂಡಿದ್ದಾರೆ, ಇಲ್ಲವೆಂದರೆ ಶಿವ ತಂದೆಯು ಬ್ರಹ್ಮನನ್ನು ಎಲ್ಲಿಂದ ತರುತ್ತಾರೆ. ಅವರು ಸ್ತ್ರೀಯಂತು ಅಲ್ಲ, ಅಗತ್ಯವಾಗಿ ದತ್ತು ತೆಗೆದುಕೊಂಡಿರಬೇಕು. ನಾನು ಇವರಲ್ಲಿಯೇ (ಬ್ರಹ್ಮಾ) ಪ್ರವೇಶವಾಗುತ್ತೇನೆಂದು ತಂದೆಯು ತಿಳಿಸುತ್ತಾರೆ. ಪ್ರಜಾಪಿತನು ಸೂಕ್ಷ್ಮ ಲೋಕದಲ್ಲಿರಲು ಸಾಧ್ಯವಿಲ್ಲ, ಇಲ್ಲಿಯೇ ಇರಬೇಕು. ಮೊಟ್ಟ ಮೊದಲು ಈ ನಿಶ್ಚಯವಿರಬೇಕು – ತಂದೆಯು ಈ ಸಾಧಾರಣ ಶರೀರದಲ್ಲಿ ಬರುತ್ತೇನೆ. ಗೋಶಾಲೆ ಎಂಬ ಹೆಸರಾಗಿರುವ ಕಾರಣ ಎತ್ತು ಹಾಗೂ ಹಸುವನ್ನು ತೋರಿಸುತ್ತಾರೆ. ಈಗ ಈ ಗೋವುಗಳಿಗೆ ಜ್ಞಾನ ಕೊಟ್ಟಿದ್ದೇನೆ, ಗೋವುಗಳನ್ನು ಕಳ್ಳತನ ಮಾಡಿದ್ದೇನೆಂದು ಬರೆದಿದ್ದಾರೆ. ಈ ಧರ್ಮದಲ್ಲಿ ಇರುವದೆಲ್ಲವೂ ಭಕ್ತಿಮಾರ್ಗದಲ್ಲಿ ನಿಗಧಿಯಾಗಿದೆ. ಈಗ ಮಕ್ಕಳು ನೀವು ತೀಳಿದುಕೊಂಡಿದ್ದೀರಿ, ಈಗ ಈ ಹಳೆಯ ಪ್ರಪಂಚವು ವಿನಾಶವಾಗಿ ಹೊಸ ಪ್ರಪಂಚದ ಸ್ಥಾಪನೆಯಾಗುತ್ತಿದೆ. ಸೃಷ್ಟಿಚಕ್ರದ ಬಗ್ಗೆ ತಿಳಿಯುವುದರಿಂದ ನೀವು ಭವಿಷ್ಯದಲ್ಲಿ ರಾಜಕುಮಾರ-ರಾಜಕುಮಾರಿಯಾಗುತ್ತೀರಿ. ಅಮರಲೋಕದಲ್ಲಿ ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳುತ್ತೀರಿ. ನೀವು ಇಲ್ಲಿ ಓದುವುದು ಭವಿಷ್ಯ ಹೊಸ ಪ್ರಪಂಚಕ್ಕಾಗಿ. ನೀವು ಈ ಹಳೆಯ ಪ್ರಪಂಚವನ್ನು ಬಿಟ್ಟು ರಾಯಲ್ ಶ್ರೀಮಂತನ ಮನೆಯಲ್ಲಿ ಜನ್ಮ ತೆಗೆದುಕೊಳ್ಳುತ್ತೀರಿ. ಮೊದಲು ಮಗುವಾಗಿದ್ದು ನಂತರ ದೊಡ್ಡವರಾಗಿ ವಿಶಾಲವಾದ ಅರಮನೆಯನ್ನು ಮಾಡುತ್ತಾರೆ. ತತತ್ವಮ್ ಅರ್ಥಾತ್ ಮಮ್ಮಾ-ಬಾಬಾ ಹೇಗೆ ಓದುತ್ತಾರೆ, ಅದೇರೀತಿ ನೀವು ಓದಿದರೆ ಶ್ರೇಷ್ಠ ಪದವಿಯನ್ನು ಪಡೆಯುತ್ತೀರೆಂದು ಶಿವ ತಂದೆಯು ತಿಳಿಸುತ್ತಾರೆ. ರಾತ್ರಿ ಎಚ್ಚರವಾಗಿದ್ದು ವಿಚಾರ ಸಾಗರ ಮಂಥನ ಮಾಡಿದರೆ ಖುಷಿಯಾಗುತ್ತದೆ. ಆ ಸಮಯದಲ್ಲಿ ಅಪಾರವಾದ ಖುಷಿಯಲ್ಲಿ ಬರುತ್ತೀರಿ. ದಿನದಲ್ಲಿ ವ್ಯವಹಾರ ಮೊದಲಾದವುಗಳ ಬಂಧನವಿರುತ್ತದೆ. ರಾತ್ರಿಯ ವೇಳೆ ಯಾವ ಬಂಧನವಿರುವುದಿಲ್ಲ. ರಾತ್ರಿ ತಂದೆಯ ನೆನಪಿನಲ್ಲಿ ಮಲಗಿಕೊಂಡರೆ ಮುಂಜಾನೆ ತಂದೆಯೂ ಮಂಚವನ್ನು ಅಲುಗಾಡಿಸಿ ಏಳಿಸುತ್ತಾರೆ. ಈ ರೀತಿ ಅನೇಕರು ತಮ್ಮ ಅನುಭವವನ್ನು ಬರೆಯುತ್ತಾರೆ. ಸಾಹಸವಿದ್ದಿದ್ದೇ ಆದರೆ ತಂದೆಯ ಸಹಯೋಗವಿರುತ್ತದೆ. ತಮ್ಮ ಮೇಲೆ ತಾವೇ ಗಮನವಿಟ್ಟುಕೊಳ್ಳಬೇಕು. ಸನ್ಯಾಸಿಗಳ ಧರ್ಮವೇ ಬೇರೆಯಾಗಿದೆ. ಈ ಧರ್ಮದ ವಂಶದವರು ಯಾರು ಇರುತ್ತಾರೆ, ಅವರು ಮಾತ್ರ ದೇವತೆ ಆಗುತ್ತಾರೆ. ಬೇರೆ ಧರ್ಮದಲ್ಲಿ ಪರಿವರ್ತನೆಯಾಗಿರುವವರು ಪುನಃ ತಮ್ಮ ಧರ್ಮದಲ್ಲಿ ಬರುತ್ತಾರೆ. ಸನ್ಯಾಸ ಧರ್ಮದಲ್ಲಿ ಒಂದೆರಡು ಕೋಟಿ ಪಾತ್ರಧಾರಿಗಳಿರುತ್ತಾರೆಂದು ತಿಳಿದುಕೊಳ್ಳಿ, ಅವರು ಪುನಃ ಸನ್ಯಾಸ ಧರ್ಮದಲ್ಲಿಯೇ ಬರುತ್ತಾರೆ. ಈ ನಾಟಕವು ಬಹಳ ಲೆಕ್ಕಾಚಾರವಾಗಿ ಮಾಡಲ್ಪಟ್ಟಿದೆ. ಯಾರು ಯಾವ, ಯಾವ ಧರ್ಮದಲ್ಲಿ ಪರಿವರ್ತನೆಯಾಗಿರುತ್ತಾರೆ, ಅವರು ಮತ್ತೆ ತಮ್ಮ ಧರ್ಮದಲ್ಲಿ ಸೇರಿಕೊಳ್ಳುತ್ತಾರೆ. ಇದೆಲ್ಲಾ ಜ್ಞಾನವು ಬುದ್ದಿಯಲ್ಲಿ ಕುಳಿತುಕೊಳ್ಳಬೇಕು. ನಾವು ಶಿವ ತಂದೆಯ ಸಂತಾನ ಆತ್ಮಗಳಾಗಿದ್ದೇವೆಂದು ಹೇಳುತ್ತೇವೆ. ಇಡೀ ವಿಶ್ವದ ರಚಯಿತ ತಂದೆಯಾಗಿದ್ದಾರೆ. ರಚಯಿತ ಶಿವ ತಂದೆಗೆ ನಾವು ಮಕ್ಕಳಾಗಿದ್ದೇವೆ. ನಾವು ವಿಶ್ವದ ಮಾಲೀಕರಾಗಿದ್ದೇವೆಂಬ ಮಾತು ಬುದ್ದಿಯಲ್ಲಿದ್ದಾಗ ಅಪಾರವಾದ ಖುಷಿಯಿರುತ್ತದೆ. ಅನ್ಯರಿಗೆ ಮಾರ್ಗವನ್ನು ತೋರಿಸುತ್ತಾ ಖುಷಿ ಕೊಡಬೇಕು. ದಯಾಹೃದಯಿಗಳಾಗಬೇಕು. ನೀವಿರುವ ಸ್ಥಾನದ ಸೇವೆ ಮಾಡಬೇಕು. ಎಲ್ಲರಿಗೂ ಆಮಂತ್ರಣ ಕೊಟ್ಟು ತಂದೆಯ ಪರಿಚಯವನ್ನು ಕೊಡಬೇಕು. ಒಂದುವೇಳೆ ಬಹಳಷ್ಟು ತಿಳಿದುಕೊಳ್ಳಲು ಇಷ್ಟ ಪಡುತ್ತಾರೆಂದರೆ ಸೃಷ್ಟಿಚಕ್ರ ಹೇಗೆ ಸುತ್ತುತ್ತದೆ ಎಂದು ತಿಳಿಸಿಕೊಡಬೇಕು. ಬಹಳ ಸೇವೆ ಇದೆ ಆದರೆ ಒಳ್ಳೊಳೆಯ್ಳ ಮಕ್ಕಳ ಮೇಲೆ ಒಮ್ಮೊಮ್ಮೆ ಗ್ರಹಚಾರ ಕುಳಿತುಕೊಂಡಾಗ ತಿಳಿಸಿಕೊಡುವ ಆಸಕ್ತಿಯೇ ಹೊರಟು ಹೋಗುತ್ತದೆ, ಇಲ್ಲವೆಂದರೆ ತಂದೆಗೆ ಸೇವೆಯ ಫಲಿತಾಂಶವನ್ನು ತಿಳಿಸಬೇಕು. ಆಗ ತಂದೆಯು ಖುಷಿಯಾಗುತ್ತಾರೆ. ಇವರಿಗೆ ಸೇವೆಯಲ್ಲಿ ಆಸಕ್ತಿಯಿದೆ ಎಂದು ತಂದೆ ತಿಳಿದುಕೊಳ್ಳುತ್ತಾರೆ. ಕೆಲವೊಮ್ಮೆ ಮಂದಿರಗಳಿಗೆ, ಕೆಲವೊಮ್ಮೆ ಸ್ಮಶಾನದಲ್ಲಿ, ಕೆಲವೊಮ್ಮೆ ಚರ್ಚ್ಗೆ ಹೋಗಿ ಸೇವೆ ಮಾಡಬೇಕು. ಪರಮಪಿತ ಪರಮಾತ್ಮನಿಗೂ ನಿಮಗೂ ಏನು ಸಂಬಂಧವಿದೆ? ಎಂದು ಕೇಳಬೇಕು. ತಂದೆಯ ಸಂಬಂಧವಿದೆಯೆಂದರೆ ಮಕ್ಕಳೆಂದು ಹೇಳಬೇಕು. ಸ್ವರ್ಗದ ರಚಯಿತ ಪರಮಪಿತ ಪರಮಾತ್ಮನೆಂದು ಕರೆಯುವ ಕಾರಣ ಅವರು ಅಗತ್ಯವಾಗಿ ಸ್ವರ್ಗವನ್ನು ಸ್ಥಾಪನೆ ಮಾಡಬೇಕಾಗುತ್ತದೆ. ಈ ರೀತಿ ತಿಳಿಸಿಕೊಡುವುದು ಎಷ್ಟು ಸಹಜವಾಗಿದೆ! ಸಮಯ ಕಳೆದಂತೆ ಬಹಳ ವಿಪತ್ತುಗಳು ಬರುತ್ತವೆ. ಆಗ ಮನುಷ್ಯರಲ್ಲಿ ವೈರಾಗ್ಯ ಬರುತ್ತದೆ. ಹೇಗೆ ಸ್ಮಶಾನದಲ್ಲಿ ಮನುಷ್ಯರಿಗೆ ವೈರಾಗ್ಯ ಬರುವಂತೆ ಇಡೀ ಪ್ರಪಂಚದ ಸ್ಥಿತಿ ಸ್ಮಶಾನದಂತೆ ಆಗುತ್ತದೆ ಆದರೆ ಇದರಿಂದ ಲಾಭವೇನೂ ಇಲ್ಲ. ಅದಕ್ಕೆ ಬದಲಾಗಿ ಪರಮಾತ್ಮನನ್ನು ಪಡೆಯುವ ಮಾರ್ಗದಲ್ಲಿ ನಡೆಯಬೇಕು. ಗುರು ಮೊದಲಾದವರನ್ನು ಬಂಧನದಿಂದ ಬಿಡುಗಡೆ ಆಗುವ ಮಾರ್ಗವನ್ನು ಕೇಳುತ್ತಾರೆ.

ನೀವು ತಮ್ಮ ಮಕ್ಕಳ ಪಾಲನೆ ಮಾಡುತ್ತಾ ಈಶ್ವರೀಯ ಸೇವೆಯನ್ನು ಮಾಡಬೇಕು. ಮಮ್ಮಾ ಬಾಬಾರವರಿಗೆ ಎಷ್ಟೊಂದು ಮಕ್ಕಳಿದ್ದಾರೆ. ಇದು ಹದ್ದಿನ ಗೃಹಸ್ಥ ವ್ಯವಹಾರವಾಗಿದೆ. ತಂದೆ ಬೇಹದ್ದಿನ ಮಾಲೀಕರಾಗಿದ್ದಾರೆ. ಬಾಬಾ ಬೇಹದ್ದಿನ ಸಹೋದರ, ಸಹೋದರಿಯರಿಗೆ ತಿಳಿಸುತ್ತಾರೆ – ಇದು ಎಲ್ಲರ ಅಂತಿಮ ಜನ್ಮವಾಗಿದೆ, ತಂದೆಯು ವಜ್ರ ಸಮಾನರನ್ನಾಗಿ ಮಾಡಲು ಬಂದಿದ್ದಾರೆ. ಮತ್ತೆ ನೀವು ಕವಡೆಗಳ ಹಿಂದೆ ಏಕೆ ಹೋಗುತ್ತೀರಿ? ಬೆಳಗ್ಗೆ ಹಾಗೂ ಸಾಯಂಕಾಲ ವಜ್ರ ಸಮಾನರಾಗುವ ಸೇವೆಯನ್ನು ಮಾಡಬೇಕು. ಉಳಿದ ಸಮಯ ಕವಡೆಗಳ ವ್ಯಾಪಾರ ಮಾಡಿ. ಯಾರು ನಿರಂತರವಾಗಿ ಸೇವೆಯಲ್ಲಿ ತೊಡಿಗಿರುತ್ತಾರೆ ಅವರು ಮತ್ತೆ-ಮತ್ತೆ ನೆನಪಿನಲ್ಲಿರುವ ಅಭ್ಯಾಸವಾಗಿ ಬಿಡುತ್ತದೆ. ಅವರು ಯಾರ ಜೊತೆ ಕೆಲಸ ಮಾಡುತ್ತಾರೆ, ಅವರಿಗೂ ಸಹ ಜೀವನದ ಗುರಿಯನ್ನು ತೋರಿಸುತ್ತಾರೆ ಆದರೆ ಕೋಟಿಯಲ್ಲಿ ಕೆಲವರು ಮಾತ್ರ ಇದನ್ನು ತಿಳಿದುಕೊಳ್ಳುತ್ತಾರೆ. ಇಂದಿಲ್ಲದಿದ್ದರೆ ಮುಂದೆ ಎಂದಾದರೂ ನಮ್ಮ ಸ್ನೇಹಿತರು ನಮಗೆ ದಾರಿ ತೋರಿಸಿದ್ದರೆಂದು ನೆನಪು ಮಾಡಿಕೊಳ್ಳುತ್ತಾರೆ ಆದರೆ ಪದವಿ ಪಡೆದುಕೊಳ್ಳಬೇಕೆಂದರೆ ಧೈರ್ಯಬೇಕು. ಭಾರತದ ಸಹಜಯೋಗ ಹಾಗೂ ಜ್ಞಾನ ಪ್ರಖ್ಯಾತವಾಗಿದೆ ಆದರೆ ಅದು ಹೇಗೆ, ಏನಾಗಿತ್ತು ಎಂದು ಯಾರೂ ತಿಳಿದುಕೊಂಡಿಲ್ಲ. ಈ ಹಬ್ಬಗಳೆಲ್ಲವೂ ಸಂಗಮಯುಗದ ನೆನಪಾರ್ಥವಾಗಿದೆ. ಸತ್ಯಯುಗದಲ್ಲಿ ಕೇವಲ ರಾಜ್ಯಭಾಗ್ಯವಿರುತ್ತದೆ. ಈ ಚರಿತ್ರೆ ಎಲ್ಲವೂ ಸಂಗಮಯುಗದ ಚರಿತ್ರೆ ಆಗಿದೆ. ದೇವತೆಗಳಿಗೆ ಈ ರಾಜ್ಯಭಾಗ್ಯವು ಹೇಗೆ ದೊರೆಯಿತೆಂದು ಈಗ ನೀವು ತೀಳಿದುಕೊಂಡಿದ್ದೀರಿ. ನಾವೇ ರಾಜ್ಯವನ್ನು ತೆಗೆದುಕೊಂಡು ಕಳೆದುಕೊಳ್ಳುತ್ತೇವೆಂಬ ಜ್ಞಾನವಿದೆ. ಈಗ ಯಾರು ಎಷ್ಟು ಸೇವೆ ಮಾಡುತ್ತಾರೆ ಅದಕ್ಕೆ ಅನುಗುಣವಾಗಿ ಜನ್ಮ ಪಡೆಯುತ್ತಾರೆ. ಈಗ ಪ್ರದರ್ಶನದ ಸೇವೆ ಬಹಳ ವೃದ್ದಿಯಾಗುತ್ತದೆ. ಹಳ್ಳಿ-ಹಳ್ಳಿಯಲ್ಲಿ ಪ್ರೋಜೆಕ್ಟರನಿಂದ ಸೇವೆ ನಡೆಯುತ್ತದೆ. ಸಮಯ ಕಳೆದಂತೆ ಈ ಸೇವೆ ಬಹಳ ವಿಸ್ತಾರವಾಗುತ್ತದೆ. ಮಕ್ಕಳೂ ಸಹ ವೃದ್ದಿಯಾಗುತ್ತಾರೆ. ಆಗ ಈ ಭಕ್ತಿಮಾರ್ಗಕ್ಕೆ ಅಷ್ಟೊಂದು ಬೆಲೆ ಇರುವುದಿಲ್ಲ. ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ ಆದುದರಿಂದ ಇದು ಹೀಗೆ ಏಕೆ ಆಯಿತೆಂದು ಪ್ರಶ್ನೆ ಮಾಡಬಾರದು. ಈ ರೀತಿ ಮಾಡಿದ್ದರೆ ಈ ರೀತಿ ಆಗುತಿತ್ತು! ಎಂದೂ ಸಹ ಹೇಳಬಾರದು. ಏನು ಕಳೆಯಿತೋ ಅದು ಒಳ್ಳೆಯದೇ ಆಯಿತು. ಮುಂದೆ ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಮಾಯೆ ವಿಕರ್ಮ ಮಾಡಿಸದಂತೆ ನೋಡಿಕೊಳ್ಳಬೇಕು. ಅನೇಕ ರೀತಿಯ ಬಿರುಗಾಳಿ ಬಂದರೂ ಸಹ ಕರ್ಮೇಂದ್ರಿಯಗಳಿಂದ ಯಾವ ವಿಕರ್ಮವನ್ನು ಮಾಡಬಾರದು. ವ್ಯರ್ಥ ಸಂಕಲ್ಪಗಳು ಬಹಳ ಬರುತ್ತವೆ. ಮತ್ತೆ ಧೈರ್ಯಗೆಡದೆ ಪುರುಷಾರ್ಥ ಮಾಡಿ ಶಿವ ತಂದೆಯನ್ನು ನೆನಪು ಮಾಡಬೇಕು. ಬೇಸರ ಮಾಡಿಕೊಳ್ಳಬಾರದು. ಕೆಲವರು ತಂದೆಗೆ ಈ ರೀತಿ ಪತ್ರ ಬರೆಯುತ್ತಾರೆ-ಬಾಬಾ 15-20 ವರ್ಷಗಳಿಂದ ಅನಾರೋಗ್ಯದ ಕಾರಣ ಪವಿತ್ರವಾಗಿದ್ದೆನು, ಆದರೆ ಈಗ ಮನಸ್ಸಲ್ಲಿ ಬಹಳ ಅಶುದ್ದ ಸಂಕಲ್ಪಗಳು ಬರುತ್ತವೆ. ಬಿರುಗಾಳಿಗಳಂತೂ ಬಹಳ ಬರುತ್ತವೆ, ಮಾಯೆಯು ದುಃಖವನ್ನು ಕೊಟ್ಟರೂ ಸಹ ಮಾಯೆಗೆ ಸೋಲಬಾರದೆಂದು ತಂದೆಯು ಸಲಹೆಯನ್ನು ಕೊಡುತ್ತಾರೆ ಏಕೆಂದರೆ ಇದು ನಿಮ್ಮ ವಿಕರ್ಮದ ಲೆಕ್ಕಾಚಾರವೆಂದು ತಿಳಿಯಬೇಕು. ಈ ಲೆಕ್ಕಾಚಾರವು ಯೋಗಬಲದಿಂದ ಮಾತ್ರ ಸಮಾಪ್ತಿಯಾಗುತ್ತದೆ, ಭಯ ಪಡಬಾರದು. ಮಾಯೆಯು ಬಹಳ ಶಕ್ತಿಶಾಲಿಯಾಗಿದೆ. ಯಾರನ್ನೂ ಬಿಡುವುದಿಲ್ಲ. ಸೇವೆ ಬಹಳಷ್ಟು ಇರುವುದರಿಂದ ಯಾರು ಬೇಕಾದರೂ ಮಾಡಬಹುದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ದಿನದಲ್ಲಿ ಶರೀರ ನಿರ್ವಹಣೆಗಾಗಿ ಕರ್ಮ ಮಾಡಿ ಹಾಗೂ ಬೆಳಗ್ಗೆ ಸಾಯಂಕಾಲದಲ್ಲಿ ಜೀವನವನ್ನು ವಜ್ರ ಸಮಾನವನ್ನಾಗಿ ಮಾಡುವ ಆತ್ಮಿಕ ಸೇವೆಯನ್ನು ಅಗತ್ಯವಾಗಿ ಮಾಡಬೇಕು. ಎಲ್ಲರನ್ನು ರಾವಣನ ಬಂಧನದಿಂದ ಬಿಡಿಸಬೇಕು.

2. ಮಾಯೆಯು ಯಾವ ವಿಕರ್ಮವನ್ನೂ ಮಾಡಿಸದಂತೆ ಬಹಳ ಎಚ್ಚರಿಕೆಯಿಂದಿರಬೇಕು. ಕರ್ಮೇಂದ್ರಿಯಗಳಿಂದ ಎಂದಿಗೂ ಯಾವುದೇ ವಿಕರ್ಮವನ್ನು ಮಾಡಬಾರದು. ಆಸುರೀ ಗುಣಗಳನ್ನು ತೆಗೆದು ಹಾಕಬೇಕು.

ವರದಾನ:-

ತಪಸ್ಸಿನ ಚಾರ್ಟ್ನಲ್ಲಿ ಸ್ವಯಂಗೆ ಸರ್ಟಿಫಿಕೇಟ್ ಕೊಡುವವರಂತು ಅನೇಕರಿದ್ದಾರೆ ಆದರೆ ಯಾವಾಗ ಹೃದಯಪೂರ್ವಕವಾದ ತಪಸ್ಸಿರುತ್ತದೆಯೋ, ಸರ್ವರ ಬಗ್ಗೆ ಹೃದಯದ ಪ್ರೀತಿಯಿರುತ್ತದೆಯೋ, ನಿಮಿತ್ತ ಭಾವ ಮತ್ತು ಶುಭ ಭಾವವಿರುವುದೋ ಆಗಲೇ ಸರ್ವರಿಂದ ಸಂತುಷ್ಟತೆಯ ಸರ್ಟಿಫಿಕೇಟ್ ಪ್ರಾಪ್ತಿಯಾಗುವುದು. ಇಂತಹ ಮಕ್ಕಳು ಸರ್ವರ ಆಶೀರ್ವಾದಗಳಿಗೆ ಅಧಿಕಾರಿಯಾಗಿ ಬಿಡುತ್ತಾರೆ. ಕೊನೆಪಕ್ಷದಲ್ಲಿ 95% ಆತ್ಮರು ಸಂತುಷ್ಟತೆಯ ಸರ್ಟಿಫಿಕೇಟ್ ಕೊಟ್ಟು, ಎಲ್ಲರ ಮುಖದಿಂದ ಇವರು ನಂಬರ್ವನ್ ಎಂದು ಮುಖದಿಂದ ಬರಬೇಕು, ಇಂತಹ ಆಶೀರ್ವಾದಗಳ ಸರ್ಟಿಫಿಕೇಟ್ ಸರ್ವರ ಹೃದಯದಿಂದ ಪ್ರಾಪ್ತಿ ಮಾಡಿಕೊಳ್ಳುವವರೇ ತಂದೆಯ ಸಮಾನರಾಗುವರು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top