28 March 2022 KANNADA Murli Today | Brahma Kumaris

Read and Listen today’s Gyan Murli in Kannada

March 27, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಮನುಷ್ಯರ ಮತದಂತೆ ಅರ್ಧಕಲ್ಪದವರೆಗು ನಡೆಯುತ್ತೀರಿ, ಈಗ ನನ್ನ ಶ್ರೀಮತದಂತೆ ನಡೆದು ಪಾವನರಾದರೆ ಪಾವನ ಪ್ರಪಂಚದ ಮಾಲೀಕರಾಗುತ್ತೀರಿ”

ಪ್ರಶ್ನೆ:: -

ಬೇಹದ್ದಿನ ತಂದೆ ಮಕ್ಕಳಿಗೆ ಯಾವ ಆಶೀರ್ವಾದವನ್ನು ಕೊಡುತ್ತಾರೆ, ಹಾಗೂ ಆ ಆಶೀರ್ವಾದ ಯಾವ ಮಕ್ಕಳಿಗೆ ಪ್ರಾಪ್ತಿಯಾಗುತ್ತದೆ?

ಉತ್ತರ:-

ಮಕ್ಕಳೇ ನೀವು 21 ಜನ್ಮಗಳು ಸದಾಸುಖಿ ಹಾಗೂ ಅಮರವಾಗುತ್ತೀರೆಂದು ತಂದೆ ಆಶೀರ್ವಾದ ಕೊಡುತ್ತಾರೆ. ನಿಮ್ಮನ್ನು ಎಂದಿಗೂ ಕಾಲ ಕಬಳಿಸುವುದಿಲ್ಲ, ಅಕಾಲ ಮೃತ್ಯು ಆಗುವುದಿಲ್ಲ. ಕಾಮಧೇನು ತಾಯಿ ನಿಮ್ಮ ಎಲ್ಲಾ ಮನೋಕಾಮನೆಗಳನ್ನು ಪೂರ್ಣ ಮಾಡುತ್ತಾರೆ. ಆದರೆ ನೀವು ಈ ವಿಷವನ್ನು(ವಿಕಾರ) ಬಿಡಬೇಕಾಗುತ್ತದೆ. ಯಾರು ಶ್ರೀಮತದಂತೆ ಈ ಅಂತಿಮ ಜನ್ಮದಲ್ಲಿ ಪವಿತ್ರರಾಗಿದ್ದು ಹಾಗೂ ಅನ್ಯರನ್ನು ಪವಿತ್ರ ಮಾಡುತ್ತಾರೆ, ಅವರಿಗೆ ಆಶೀರ್ವಾದ ಪ್ರಾಪ್ತಿಯಾಗುತ್ತದೆ. ಮಕ್ಕಳೇ ವಿಶ್ವ ಪರಿವರ್ತನೆ ಆಗುತ್ತಿದೆ ಆದುದರಿಂದ ಅಗತ್ಯವಾಗಿ ಪಾವನರಾಗಿ ಎಂದು ತಂದೆ ಹೇಳುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಓಂ ನಮಃ ಶಿವಾಯ..

ಓಂ ಶಾಂತಿ. ಭಗವಂತನ ಮಕ್ಕಳು ಹಾಡನ್ನು ಕೇಳಿದಿರಿ. ಎಲ್ಲರೂ ಭಗವಂತನ ಮಕ್ಕಳಾಗಿದ್ದಾರೆ. ಪ್ರಪಂಚದಲ್ಲಿರುವ ಮನುಷ್ಯ ಮಾತ್ರರೆಲ್ಲರು ಭಗವಂತನನ್ನು ತಂದೆ ಎಂದು ಹೇಳುತ್ತಾರೆ. ಸರ್ವರಿಗೂ ತಂದೆ ಒಬ್ಬರೇ ಆಗಿದ್ದಾರೆ. ಲೌಕಿಕ ತಂದೆಗೆ ಸರ್ವರ ತಂದೆ ಎಂದು ಹೇಳುವುದಿಲ್ಲ. ಬೇಹದ್ದಿನ ತಂದೆ ಸರ್ವರಿಗೂ ತಂದೆ ಆಗಿದ್ದಾರೆ. ಇವರು ಸರ್ವರ ಸದ್ಗತಿದಾತ ಆಗಿದ್ದಾರೆ, ಇವರ ಮಹಿಮೆಯು ಎಲ್ಲರಿಗಿಂತ ಶ್ರೇಷ್ಠವಾಗಿದೆ. ಎಲ್ಲರೂ ಆ ನಿರಾಕಾರ ತಂದೆಯನ್ನು ನೆನಪು ಮಾಡುತ್ತಾರೆ. ನೀವು ಆತ್ಮವೂ ಸಹ ನಿರಾಕಾರ, ಅದೇ ರೀತಿ ತಂದೆಯೂ ಸಹ ನಿರಾಕಾರ ಆಗಿದ್ದಾರೆ. ನಿರಾಕಾರ ತಂದೆಯ ಮಹಿಮೆಯನ್ನು ನೀವು ಕೇಳಿದಿರಿ. ಪರಮಪಿತ ಪರಮಾತ್ಮ ಶಿವ ತಂದೆ ತಾವು ಸರ್ವ ಶ್ರೇಷ್ಠ ಹಾಗೂ ಸರ್ವರ ಸದ್ಗತಿದಾತ ಆಗಿದ್ದೀರಿ. ನೀವು ಸರ್ವರ ಸದ್ಗತಿ ಮಾಡಿದಾಗ ಅವರು ಸ್ವರ್ಗದ ಮಾಲೀಕ ದೇವೀ-ದೇವತೆಗಳಾಗುತ್ತಾರೆ. ಮನುಷ್ಯರು ಮನುಷ್ಯರಿಗೆ ಸದ್ಗತಿ ಕೊಡಲು ಸಾಧ್ಯವಿಲ್ಲ. ಮನುಷ್ಯರಿಗೆ ಈ ರೀತಿ ಮಹಿಮೆ ಮಾಡುವುದಿಲ್ಲ. ಮಕ್ಕಳಿಗೆ ಈಗ ಬೇಹದ್ದಿನ ತಂದೆಯಿಂದ ಆಸ್ತಿ ಸಿಗುತ್ತದೆ. ಅರ್ಧಕಲ್ಪ ನೀವು ಆ ಪ್ರಾಲಬ್ದವನ್ನು ಪಡೆಯುತ್ತೀರಿ. ಅದನ್ನು ರಾಮರಾಜ್ಯವೆಂದು ಕರೆಯಲಾಗುತ್ತದೆ ನಂತರ ದ್ವಾಪರದಿಂದ ರಾವಣ ರಾಜ್ಯ ಆರಂಭವಾಗುತ್ತದೆ. ಪಂಚ ವಿಕಾರಗಳೆಂಬ ಭೂತ ಪ್ರವೇಶವಾಗುತ್ತದೆ. ಹೇಗೆ ಆ ಭೂತ (ಅಶುದ್ದ ಆತ್ಮ) ಯಾರಲ್ಲಾದರೂ ಪ್ರವೇಶವಾದರೆ, ಅವರನ್ನೂ ಸಹ ಭೂತವನ್ನಾಗಿ ಮಾಡುತ್ತದೆ. ಹಾಗೆಯೇ ಈ ಭೂತಗಳಲ್ಲಿ ಕಾಮ ಮಹಾಶತ್ರು ನಂಬರ್‍ವನ್ ಭೂತವಾಗಿದೆ. ಅರ್ಧಕಲ್ಪ ಈ ಭೂತ ನಿಮ್ಮನ್ನು ಬಹಳ ದುಃಖಿಗಳನ್ನಾಗಿ ಮಾಡಿದೆ. ಈಗ ಈ ಭೂತಗಳ ಮೇಲೆ ವಿಜಯಿಗಳಾಗಿ ಪವಿತ್ರರಾದಾಗ ಪವಿತ್ರ ಪ್ರಪಂಚಕ್ಕೆ ಮಾಲೀಕರಾಗುತ್ತೀರಿ. ತಂದೆಯು ಎಲ್ಲರಿಂದ ಪ್ರತಿಜ್ಞೆ ಮಾಡಿಸುತ್ತಾರೆ. ನೀವು ಪವಿತ್ರರಾಗುವ ರಾಖಿಯನ್ನು ಕಟ್ಟಿಕೊಂಡಾಗ 21 ಜನ್ಮಗಳಿಗೆ ಸ್ವರ್ಗ, ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರೆಂದು ತಂದೆ ಹೇಳುತ್ತಾರೆ. ನಾನು ಪತಿತರಿಂದ ಪಾವನರನ್ನಾಗಿ ಮಾಡಲು ಬಂದಿದ್ದೇನೆ. ದೇವೀ-ದೇವತೆಗಳ ರಾಜ್ಯವಿದ್ದಾಗ ಭಾರತ ಪಾವನವಾಗಿತ್ತು, ಆಗ ಸುಖಧಾಮವೆಂಬ ಹೆಸರಿತ್ತು, ಈಗ ದುಃಖಧಾಮವಾಗಿದೆ. ಮೊದಲನೆಯದಾಗಿ ಕಾಮ ವಿಕಾರಕ್ಕೆ ವಶೀಭೂತರಾಗುವುದು, ಎರಡನೆಯದಾಗಿ ಯುದ್ಧ-ಜಗಳ ಮೊದಲಾದವುಗಳಿಂದ ದುಃಖ ಕೊಡುತ್ತಾರೆ. ತಂದೆಯು ಸಂಗಮಯುಗದಲ್ಲಿ ಬರುತ್ತಾರೆ. ಇದು ಕಲ್ಯಾಣಕಾರಿ ಸಂಗಮಯುಗವಾಗಿದೆ. ನೀವು ತಮ್ಮ ಕಲ್ಯಾಣ ಮಾಡಿಕೊಂಡು ಸುಖಧಾಮದಲ್ಲಿ ಹೋಗಲು ಬಂದಿದ್ದೀರಿ. ಅದಕ್ಕಾಗಿ ನನ್ನ ಶ್ರೀಮತದಂತೆ ನಡೆಯಬೇಕೆಂದು ತಂದೆ ತಿಳಿಸುತ್ತಾರೆ. ಅರ್ಧಕಲ್ಪದಿಂದ ಮನುಷ್ಯನ ಮತದಂತೆ ನಡೆಯುತ್ತಾ ಬಂದಿದ್ದೀರಿ. ಸದ್ಗತಿದಾತ ಒಬ್ಬ ತಂದೆ ಅಗಿದ್ದಾರೆ, ತಂದೆಯ ಶ್ರೀಮತದಿಂದ ನೀವು ಸ್ವರ್ಗದ ಮಾಲೀಕರಾಗುತ್ತೀರಿ. ಹೀಗೆ ಈ ಶಾಸ್ತ್ರಗಳನ್ನೆಲ್ಲಾ ಓದುತ್ತಾ ಈಗ ಕಲಿಯುಗದ ಅಂತ್ಯದಲ್ಲಿ ಬಂದು ತಲುಪಿದ್ದೀರಿ ಹಾಗೂ ತಮೋಪ್ರಧಾನ ಸ್ಥಿತಿಯನ್ನು ತಲುಪಬೇಕಾಯಿತು. ತಮ್ಮನ್ನೇ ಈಶ್ವರನೆಂದು ಹೇಳಿಕೊಂಡು ಪ್ರಪಂಚದಲ್ಲಿ ತಮ್ಮ ಪೂಜೆ ಮಾಡಿಸಿಕೊಳ್ಳುತ್ತಾರೆ ಏಕೆಂದರೆ ಶಾಸ್ತ್ರಗಳಲ್ಲಿ ಪ್ರಹಲ್ಲಾದನ ಮಾತನ್ನು ಈ ರೀತಿ ಕೇಳಿದ್ದಾರೆ, ಸ್ಥಂಭದಿಂದ ಭಗವಾನ್ ನರಸಿಂಹ ಬಂದು ಹಿರಣ್ಯ ಕಷ್ಶಪನನ್ನು ಕೊಂದನೆಂದು ತೋರಿಸುತ್ತಾರೆ. ಈಗ ಆ ರೀತಿ ಕಂಬದಿಂದ ಬಂದು ಯಾರನ್ನೂ ಕೊಲ್ಲುವುದಿಲ್ಲ. ಆದರೆ ಈಗ ಎಲ್ಲವೂ ವಿನಾಶವಾಗುತ್ತದೆ. ಈ ಸಾಧು-ಸಂತ, ಮಹಾತ್ಮ, ಅಜಮಿಳರಂತಹ ಪಾಪಾತ್ಮರನ್ನೂ ನಾನು ಬಂದು ಉದ್ಧಾರ ಮಾಡುತ್ತೇನೆಂದು ತಂದೆ ಹೇಳುತ್ತಾರೆ.

ತಂದೆಯು ಬಂದು ಜ್ಞಾನಾಮೃತದ ಕಳಶವನ್ನು ಮಾತೆಯರ ಮೇಲೆ ಇಡುತ್ತಾರೆ. ಮಾತಾ ಗುರು ವಿನಃ ಯಾರ ಸದ್ಗತಿಯು ಆಗುವುದಿಲ್ಲ. ಜಗದಂಬಾ ಎಲ್ಲರ ಮನೋಕಾಮನೆಗಳನ್ನು ಪೂರ್ಣ ಮಾಡುವಂತಹ ಕಾಮಧೇನು ಆಗಿದ್ದಾರೆ. ನೀವೆಲ್ಲರೂ ಅವರ ಮಕ್ಕಳಾಗಿದ್ದೀರಿ. ನೀವು ಯಾವ ಮನುಷ್ಯರ ಮಾತನ್ನು ಕೇಳಬೇಡಿ ಎಂದು ತಂದೆಯು ತಿಳಿಸುತ್ತಾರೆ. ಪತಿತರನ್ನು ಪಾವನ ಮಾಡುವಂತಹ ತಂದೆ ನಾನು ಒಬ್ಬನೇ ಆಗಿದ್ದೇನೆ. ಹಾಗಾದರೆ ಪತಿತರನ್ನಾಗಿ ಮಾಡುವವರೂ ಸಹ ಯಾರಾದರೂ ಇರಬೇಕು! ರಾವಣ ರಾಜ್ಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಈಗ ಆ ಪತಿತ ಪಾವನ ತಂದೆ ಸ್ವರ್ಗದ ಆಸ್ತಿಯನ್ನು ಕೊಡಲು ಬಂದಿದ್ದಾರೆ. ನೀವು 21 ಜನ್ಮಗಳವರೆಗೆ ನೀವು ಸುಖಿಗಳಾಗುತ್ತೀರೆಂದು ಆಶೀರ್ವಾದ ಕೊಡುತ್ತಾರೆ. ಲೌಕಿಕ ತಾಯಿ-ತಂದೆಯೂ ಸಹ ಆಶೀರ್ವಾದ ಮಾಡುತ್ತಾರೆ. ಅದು ಅಲ್ಪಕಾಲದ ಸುಖಕ್ಕಾಗಿ, ಇವರು ಬೇಹದ್ದಿನ ಮಾತಾ-ಪಿತ…. ಮಕ್ಕಳೇ, ನೀವು ಸದಾ ಅಮರವಾಗಿರಿ ಎಂದು ಆಶೀರ್ವಾದ ಕೊಡುತ್ತಾರೆ. ಅಲ್ಲಿ ನಿಮಗೆ ಮೃತ್ಯು ಇರುವುದಿಲ್ಲ, ಅಕಾಲಮೃತ್ಯು ಸಹ ಆಗುವುದಿಲ್ಲ. ಸದಾ ಸುಖಿಗಳಾಗಿರುತ್ತೀರಿ. ಕಾಮಧೇನು ನಿಮ್ಮೆಲ್ಲಾ ಕಾಮನೆಗಳನ್ನು ಪೂರ್ಣಮಾಡುತ್ತಾರೆ. ಅದಕ್ಕಾಗಿ ಕೇವಲ ವಿಷವನ್ನು ಬಿಡಬೇಕಾಗುತ್ತದೆ ಏಕೆಂದರೆ ಅಪವಿತ್ರರು ಅಲ್ಲಿಗೆ ಹೋಗಲು ಸಾಧ್ಯವಿಲ್ಲ. ನಾನು ನಿಮ್ಮನ್ನು ಮನೆಗೆ ಹಿಂತಿರುಗಿ ಕರೆದುಕೊಂಡು ಹೋಗಲು ಬಂದಿದ್ದೇನೆ, ಅದಕ್ಕಾಗಿ ನೀವು ಪಾವನರಾಗಬೇಕೆಂದು ತಂದೆ ತಿಳಿಸುತ್ತಾರೆ. ಮಕ್ಕಳಿಗೆ ಇನ್ನು ನಾವು ವಿವಾಹ ಮಾಡಬೇಕೆಂದು ಹೇಳಬಾರದು ಏಕೆಂದರೆ ತಮ್ಮನ್ನು ಹಾಗೂ ಅನ್ಯರನ್ನು ಪತಿತರನ್ನಾಗಿ ಮಾಡಬಾರದು. ಈ ಮೃತ್ಯುಲೋಕದ ಅಂತಿಮ ಜನ್ಮದಲ್ಲಿ ಅಗತ್ಯವಾಗಿ ಪವಿತ್ರರಾಗಬೇಕು. ಆಗ ಮಾತ್ರ ಅಮರಲೋಕದಲ್ಲಿ ಹೋಗಬಹುದು. ತಂದೆ ಕುಳಿತು ಆತ್ಮಗಳಿಗೆ ತಿಳಿಸಿಕೊಡುತ್ತಾರೆ – ಆತ್ಮವೇ ಧಾರಣೆ ಮಾಡುತ್ತದೆ. ತಂದೆ ಆತ್ಮಗಳಿಗೆ ನನ್ನ ಮಕ್ಕಳೆಂದು ಹೇಳುತ್ತಾರೆ. ನೀವು ಆತ್ಮಗಳು ಪರಮಧಾಮದಲ್ಲಿದ್ದವರು, ಆದುದರಿಂದ ನಾನು ನಿಮ್ಮನ್ನು ಪುನಃ ಕರೆದೊಯ್ಯಲು ಬಂದಿದ್ದೇನೆ. ಯಾರು ಪವಿತ್ರರಾಗುತ್ತಾರೆ ಅವರನ್ನು ಜೊತೆಯಲ್ಲಿ ಕರೆದೊಯ್ಯುತ್ತೇನೆ, ನಂತರ ನಿಮ್ಮನ್ನು ಪರಮಧಾಮದಿಂದ ಸ್ವರ್ಗಕ್ಕೆ ಕಳಿಸಿಕೊಡುತ್ತೇನೆ. ಮೀರಾ ವಿಕಾರವನ್ನು ತ್ಯಾಗ ಮಾಡಿದ ಕಾರಣ ಅವರ ಹೆಸರು ಎಷ್ಟೊಂದು ಪ್ರಖ್ಯಾತವಾಗಿದೆ. ಮಕ್ಕಳೇ, ಈ ಹಳೆಯ ಪ್ರಪಂಚ ಪರಿವರ್ತನೆಯಾಗುತ್ತಿದೆ ಎಂದು ತಂದೆ ಹೇಳುತ್ತಾರೆ. ಹೊಸ ಪ್ರಪಂಚದಲ್ಲಿ ದೇವತೆಗಳು ರಾಜ್ಯ ಮಾಡುತ್ತಿದ್ದರು. ನಾನು ಬ್ರಹ್ಮನ ಮೂಲಕ ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ಶ್ರೇಷ್ಠ ದೇವತೆಗಳಾಗುವ ಸಲುವಾಗಿ ನಿಮಗೆ ಶ್ರೀಮತ ಕೊಡುತ್ತೇನೆ. ಈಗ ಕೃಷ್ಣಪುರಿಗೆ ಹೋಗಬೇಕು. ಕೃಷ್ಣಪುರಿಯನ್ನು ಬಹಳ ಮಹಿಮೆ ಮಾಡುತ್ತಾರೆ. ಶ್ರೀಕೃಷ್ಣ ಸರ್ವಗುಣ ಸಂಪನ್ನನಾಗಿದ್ದಾನೆ. ನನ್ನ ಮತದಂತೆ ನಡೆದಾಗ ನೀವು ಲಕ್ಷ್ಮೀ-ನಾರಾಯಣರಾಗುತ್ತೀರಿ. ಯಾರು ಕಲ್ಪದ ಹಿಂದೆ ಆಸ್ತಿಯನ್ನು ತೆಗೆದುಕೊಂಡಿರುತ್ತಾರೆ, ಅವರು ಮಾತ್ರ ಶ್ರೀಮತದಂತೆ ನಡೆಯುವರು. ಇಲ್ಲವಾದರೆ ಆಸುರೀ ಮತದಂತೆ ನಡೆಯುತ್ತಾರೆ. ಬ್ರಹ್ಮಾ ತಂದೆಯೂ ಸಹ ನಿರಾಕಾರನಿಂದ ಮತ ತೆಗೆದುಕೊಳ್ಳುತ್ತಾರೆ. ಶಿವ ತಂದೆ ಬ್ರಹ್ಮಾರವರ ಶರೀರದಲ್ಲಿ ಪ್ರವೇಶ ಮಾಡಿ ನಿಮಗೆ ಮತ ಕೊಡುತ್ತಾರೆ. ನೀವೆಲ್ಲರೂ ಪ್ರಿಯತಮೆಯರು ಹಾಗೂ ಭಕ್ತಿಯರು ಆಗಿದ್ದೀರೆಂದು ಹೇಳುತ್ತಾರೆ. ಒಬ್ಬರೇ ಪ್ರಿಯತಮ ಅಥವಾ ಭಗವಂತ ಆಗಿದ್ದಾರೆ. ಮನುಷ್ಯರನ್ನೆಂದು ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಈ ಉಲ್ಟಾ ಮತದಿಂದ ಎಲ್ಲರೂ ದುರ್ಗತಿಯಲ್ಲಿ ಬರಬೇಕಾಯಿತು. ಎಲ್ಲರನ್ನು ಪಾರು ಮಾಡುವಂತಹವರು ನಾನೊಬ್ಬನೇ ಆಗಿದ್ದೇನೆ. ಆ ಗುರುಗಳು ನನ್ನ ಮನೆಯನ್ನು ತಿಳಿದುಕೊಂಡಿಲ್ಲವಾದ್ದರಿಂದ ಅವರು ನನ್ನ ಬಳಿ ಹೇಗೆ ಬರುತ್ತಾರೆ, ಮನುಷ್ಯರು ಎಲ್ಲಿಗೇ ಹೋದರೂ ಕೈ ಮುಗಿಯುತ್ತಾರೆ. ಆದುದರಿಂದ ನಾನು ಸ್ವಯಂ ಎಲ್ಲರನ್ನು ಕರೆದೊಯ್ಯಲು ಬಂದಿದ್ದೇನೆ. ಮತ್ತೆ ನಿಮ್ಮನ್ನು ಸ್ವರ್ಗದಲ್ಲಿ ಕಳಿಸಿಕೊಡುತ್ತೇನೆ. ಇದು ಸೂರ್ಯವಂಶ ವಿಷ್ಣು ಪುರಿಯಾಗಿದೆ. ತ್ರೇತಾಯುಗಕ್ಕೆ ರಾಮ ರಾಜ್ಯವೆಂದು ಕರೆಯಲಾಗುತ್ತದೆ. ಆ ಯುಗದ ನಂತರ ರಾವಣ ರಾಜ್ಯ ಆರಂಭವಾಗಿ ಭಾರತ ಶಿವಾಲಯದಿಂದ ವೇಶ್ಯಾಲಯವಾಗುತ್ತದೆ. ಇದೇ ಭಾರತ ಸಂಪೂರ್ಣ ನಿರ್ವಿಕಾರಿಯಾಗಿತ್ತು, ಈಗ ಇದೇ ಭಾರತ ಸಂಪೂರ್ಣ ವಿಕಾರಿಯಾಗಿದೆ. ಈಗ ನೀವು ರಾಜಯೋಗವನ್ನು ಕಲಿತು ಇಡೀ ವಿಶ್ವದ ಮೇಲೆ ವಿಜಯಿಗಳಾಗುತ್ತೀರಿ. ಎರಡು ಮಂಗಗಳ ಕಥೆ ಇದೆಯಲ್ಲವೆ. ಅವು ಪರಸ್ಪರ ಯುದ್ಧ ಮಾಡಿದಾಗ ವಿಶ್ವರೂಪಿ ಬೆಣ್ಣೆ ನಿಮಗೆ ಸಿಗುತ್ತದೆ ಆದುದರಿಂದ ಈಗ ನೀವು ಶಿವ ತಂದೆ ಹಾಗೂ ಸ್ವರ್ಗವನ್ನು ನೆನಪು ಮಾಡಿ. ಗೃಹಸ್ಥ ವ್ಯವಹಾರದಲ್ಲಿರುತ್ತಾ ಪವಿತ್ರವಾದರೆ, ಪವಿತ್ರ ಪ್ರಪಂಚಕ್ಕೆ ಮಾಲೀಕರಾಗುತ್ತೀರಿ. ಪವಿತ್ರತೆಗಾಗಿ ಬಹಳ ಹತ್ಯಾಚಾರ ನಡೆಯುತ್ತದೆ. ನೀವು ಇಂದು ನಿರ್ವಿಕಾರಿಗಳಾಗುವ ಕಾರಣ ಕಲ್ಪದ ಹಿಂದಿನಂತೆ ಈಗಲೂ ಹತ್ಯಾಚಾರ ನಡೆಯುತ್ತದೆ. ಅಮೃತವನ್ನು ಬಿಟ್ಟು ವಿಷವನ್ನೇಕೆ ತಿನ್ನಬೇಕೆಂದು ಹೇಳುತ್ತಾರೆ. ಅಮೃತವನ್ನು ಕುಡಿಯುತ್ತಾ ನೀವು ಮನುಷ್ಯರಿಂದ ದೇವತೆಗಳಾಗುತ್ತೀರಿ. ಯಾರು ಪಕ್ಕಾ ಬ್ರಾಹ್ಮಣರಾಗಿರುತ್ತಾರೆ, ಅವರು ಎಷ್ಟೇ ಕಷ್ಟವಾದರೂ ವಿಕಾರಕ್ಕೆ ವಶವಾಗುವುದಿಲ್ಲ. ಸಹನೆ ಮಾಡಿಕೊಂಡಷ್ಟು ಶ್ರೇಷ್ಠ ಪದವಿ ಸಿಗುತ್ತದೆ. ಶಿವ ತಂದೆಯನ್ನು ನೆನಪು ಮಾಡುತ್ತಾ ಪ್ರಾಣವನ್ನು ಬಿಡುತ್ತಾರೆ – ಇದು ಶಿವ ತಂದೆಯ ಆಜ್ಞೆಯಾಗಿದೆ. ಈ ಆಜ್ಞೆಯು ಎಲ್ಲರ ಸಲುವಾಗಿದೆ ಆದುದರಿಂದ ನನ್ನನ್ನು ನೆನಪು ಮಾಡಿದಾಗ ನೀವು ನನ್ನ ಬಳಿ ಪರಮಧಾಮಕ್ಕೆ ಬರುತ್ತೀರಿ. ಶಿವ ತಂದೆ ಇವರ ಮುಖದ ಮೂಲಕ ಆತ್ಮಗಳ ಜೊತೆ ಮಾತನಾಡುತ್ತಾರೆ. ಅವರೂ ಸಹ ಮನುಷ್ಯರಾಗಿದ್ದಾರೆ. ಮನುಷ್ಯರು ಮನುಷ್ಯರನ್ನೆಂದಿಗೂ ಪಾವನ ಮಾಡಲು ಸಾಧ್ಯವಿಲ್ಲ. ಪತಿತರನ್ನು ಪಾವನ ಮಾಡು ಎಂದು ತಂದೆಯನ್ನು ಕರೆಯುತ್ತಾರೆ. ನಾನು ಅವಶ್ಯವಾಗಿ ಪತಿತ ಪ್ರಪಂಚದಲ್ಲಿ ಬರಬೇಕಾಗುತ್ತದೆ ಏಕೆಂದರೆ ಇಲ್ಲಿ ಯಾರೂ ಪಾವನರಿಲ್ಲ. ನಾನು ನಿಮ್ಮನ್ನು ಈ ಕೃಷ್ಣನಂತೆ ಪಾವನ, ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆಂದು ತಂದೆ ತಿಳಿಸುತ್ತಾರೆ. ಯಾರಾದರೂ ನಾನು ಬಂಧನದಲ್ಲಿದ್ದೇನೆಂದು ಹೇಳಿದರೆ ತಂದೆ ತಾನೆ ಏನು ಮಾಡುತ್ತಾರೆ? ನಿಮಗೆ ಗೃಹಸ್ಥ ವ್ಯವಹಾರದಲ್ಲಿರುತ್ತಾ ಶ್ರೀಮತದಂತೆ ನಡೆದು ಶ್ರೇಷ್ಠರಾಗಬೇಕೆಂಬ ಜ್ಞಾನ ಸಿಗುತ್ತದೆ. ನೀವೆಲ್ಲರೂ ಈಶ್ವರೀಯ ಪರಿವಾರದವರಾಗಿದ್ದೀರಿ. ಶಿವ ತಂದೆ, ಬ್ರಹ್ಮಾ ದಾದಾ, ನೀವು ಬ್ರಾಹ್ಮಣ-ಬ್ರಾಹ್ಮಣಿಯರು ಮಕ್ಕಳು, ಮೊಮ್ಮಕ್ಕಳಾಗಿದ್ದೀರಿ. ನಿಮ್ಮೆಲ್ಲರಿಗೂ ಸ್ವರ್ಗದ ರಾಜ್ಯಭಾಗ್ಯ ಸಿಗುತ್ತದೆ. ತಂದೆಯು ನಿಮಗೆ ಸ್ವರ್ಗದ ಆಸ್ತಿಯನ್ನು ಕೊಡುವ ಕಾರಣ ನೀವು ತಂದೆಗೆ ವಾರಸುದಾರರಾಗಿದ್ದೀರಿ. ಅಗತ್ಯವಾಗಿ ನಾವು ಸ್ವರ್ಗದಲ್ಲಿರಬೇಕಾಗಿದೆ, ಆದರೆ ಈಗ ನಾವು ನರಕದಲ್ಲಿ ಏಕೆ? ಇದು ರಾವಣ ರಾಜ್ಯವಾಗಿರುವ ಕಾರಣ ನೀವು ನರಕದಲ್ಲಿದ್ದೀರಿ. ಈಗ ನಾನು ನಿಮ್ಮನ್ನು ಸ್ವರ್ಗದಲ್ಲಿ ಕರೆದೊಯ್ಯಲು ಬಂದಿದ್ದೇನೆ. ತಂದೆ ಅಂಬಿಗನಾಗಿ ಎಲ್ಲರನ್ನು ಸ್ವರ್ಗಕ್ಕೆ ಪಾರು ಮಾಡುತ್ತಿದ್ದಾರೆ. ಶ್ರೀಕೃಷ್ಣ ಎಲ್ಲರಿಗೂ ತಂದೆ ಆಗಲು ಸಾಧ್ಯವಿಲ್ಲ. ಈಗ ಒಬ್ಬ ತಂದೆಯನ್ನು ನೆನಪು ಮಾಡಬೇಕು. ಅನೇಕರನ್ನು ನೆನಪು ಮಾಡುವುದೆಂದರೆ ಭಕ್ತಿ ಮಾರ್ಗವಾಗುತ್ತದೆ. ಒಬ್ಬ ತಂದೆಯನ್ನು ನೆನಪು ಮಾಡಿದಾಗ ಅಂತ್ಯಮತಿ ಸೋ ಗತಿ ಆಗುತ್ತದೆ, ಒಬ್ಬ ತಂದೆಯ ಶ್ರೀಮತವೆಂದು ಹೇಳಲಾಗುತ್ತದೆ. ಅನೇಕ ಗುರುಗಳ ಮತವೆಂದು ಹೇಳುವುದಿಲ್ಲ. ಅವರು ತಂದೆಗೆ ನಾಮ ರೂಪದಿಂದ ಭಿನ್ನವೆಂದು ಹೇಳುತ್ತಾರೆ, ಆದರೆ ನಾಮ-ರೂಪದಿಂದ ಭಿನ್ನವಾಗಿರುವ ವಸ್ತು ಯಾವುದೂ ಸಹ ಇರುವುದಿಲ್ಲ. ಆಕಾಶ ವಿಶಾಲವಾದ ಮೈದಾನದಂತಿದ್ದರೂ ಸಹ ಹೆಸರಂತು ಇದೆಯಲ್ಲವೇ. ಈಗ ಭಾರತ ಬಹಳ ಬಡದೇಶವಾಗಿದ್ದು ದಿವಾಳಿಯಾಗಿದೆ. ಯಾವಾಗ ಭಾರತ ಈ ರೀತಿ ಆಗುತ್ತದೆ ಆಗ ನಾನು ಬಂದು ಭಾರತವನ್ನು ಚಿನ್ನದ ಪಕ್ಷಿಯನ್ನಾಗಿ ಮಾಡುತ್ತೇನೆಂದು ತಂದೆ ಹೇಳುತ್ತಾರೆ. ಈ ಬಿದುರಿನ ಕಾಡಿಗೆ ಬೆಂಕಿ ಬೀಳಲೇಬೇಕು. ಹಳೆಯ ಪ್ರಪಂಚವು ಸಮಾಪ್ತಿಯಾಗಿ ಹೊಸ ಪ್ರಪಂಚವಾಗುತ್ತದೆ.

ಮಕ್ಕಳು ಶ್ರೀಮತದಂತೆ ಸ್ವರ್ಗದ ರಾಜಧಾನಿಯನ್ನು ಸ್ಥಾಪನೆ ಮಾಡುತ್ತಿದ್ದೀರಿ. ಇದು ಈಶ್ವರೀಯ ವಿದ್ಯೆಯಾಗಿದೆ. ಉಳಿದೆಲ್ಲವೂ ಆಸುರಿ ವಿದ್ಯೆಗಳಾಗಿವೆ. ಈ ವಿದ್ಯೆಯಿಂದ ನೀವು ಸ್ವರ್ಗವಾಸಿಗಳಾಗುತ್ತೀರಿ, ಆ ವಿದ್ಯೆಯಿಂದ ನೀವು ನರಕವಾಸಿಗಳಾಗುತ್ತೀರಿ. ಈಗ ಈ ದೈವೀ ವೃಕ್ಷವು ದಿನ-ಪ್ರತಿದಿನ ವೃದ್ಧಿಯಾಗುತ್ತದೆ, ಹಾಗೆಯೇ ಮಾಯೆಯ ಬಿರುಗಾಳಿಯೂ ಸಹ ಬರುತ್ತದೆ ಆದುದರಿಂದ ತಂದೆಯು ಇದನ್ನು ದುಃಖಧಾಮವೆಂದು ಹೇಳುತ್ತಾರೆ. ಈಗ ನೀವು ನನ್ನನ್ನು ನೆನಪು ಮಾಡಿ, ಪರಮಧಾಮವನ್ನು ನೆನಪು ಮಾಡಿ ಹಾಗೂ ಸುಖಧಾಮವನ್ನು ನೆನಪು ಮಾಡಿದಾಗ ನಿಮ್ಮ ಜೀವನವೆಂಬ ಹಡಗು ಪಾರಾಗುತ್ತದೆ. ತಂದೆ ದುಃಖಧಾಮದಿಂದ ಶಾಂತಿಧಾಮಕ್ಕೆ ಕರೆದುಕೊಂಡು ಹೋಗಲು ಬರುತ್ತಾರೆ. ನಂತರ ಸುಖಧಾಮದಲ್ಲಿ ಕಳುಹಿಸುತ್ತಾರೆ. ಈಗ ದುಃಖಧಾಮವನ್ನು ಮರೆತು ತಂದೆ ಹಾಗೂ ಆಸ್ತಿಯನ್ನು ನೆನಪು ಮಾಡಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್‍ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಜ್ಞಾನ ಹಾಗೂ ಯೋಗದಿಂದ ತಮ್ಮ ಬಂಧನಗಳನ್ನು ಸಮಾಪ್ತಿ ಮಾಡಿಕೊಳ್ಳಬೇಕು. ಈ ದುಃಖಧಾಮವನ್ನು ಮರೆತು ಶಾಂತಿಧಾಮ ಹಾಗೂ ಸುಖಧಾಮವನ್ನು ನೆನಪು ಮಾಡಬೇಕು.

2. ಅಲ್ಪ-ಸ್ವಲ್ಪ ಸಹನೆ ಮಾಡಿಕೊಳ್ಳಬೇಕಾದರೂ ಪ್ರಾಣವನ್ನು ತ್ಯಾಗ ಮಾಡಬೇಕಾದರೂ ಸರಿ, ತಂದೆ ನಮಗೆ ಪಾವನರಾಗಲು ನೀಡಿರುವ ಆಜ್ಞೆಯಂತೆಯೇ ನಡೆಯಬೇಕು. ಎಂದಿಗೂ ಪತಿತರಾಗಬಾರದು.

ವರದಾನ:-

ಸಂಗಮಯುಗದಲ್ಲಿ ಬ್ರಾಹ್ಮಣರು ಬ್ರಾಹ್ಮಣರಿಂದ ಫರಿಶ್ತೆಯಾಗಬೇಕಾಗಿದೆ, ಫರಿಶ್ತಾ ಎಂದರೆ ಯಾರಲ್ಲಿ ಹಳೆಯ ಪ್ರಪಂಚ, ಹಳೆಯ ಸಂಸ್ಕಾರ, ಹಳೆಯ ದೇಹದ ಬಗ್ಗೆ ಯಾವುದೇ ಆಕರ್ಷಣೆಯ ಸಂಬಂಧವಿಲ್ಲ. ಮೂರರಿಂದಲೂ ಮುಕ್ತವಾಗಿರುವವರು ಆದ್ದರಿಂದ ಡ್ರಾಮಾದಲ್ಲಿ ಮೊದಲು ಮುಕ್ತಿಯ ಆಸ್ತಿಯಿದೆ ನಂತರ ಜೀವನ್ಮುಕ್ತಿಯ ಆಸ್ತಿ. ಹಾಗಾದರೆ ಫರಿಶ್ತಾ ಎಂದರೆ ಮುಕ್ತ ಹಾಗೂ ಮುಕ್ತವಾದ ಫರಿಶ್ತೆಯೇ ಜೀವನ್ಮುಕ್ತ ದೇವತೆಯಾಗುವರು. ಯಾವಾಗ ಈ ರೀತಿ ಬ್ರಾಹ್ಮಣನಿಂದ ಸರ್ವ ಆಕರ್ಷಣೆಗಳಿಂದ ಮುಕ್ತವಾದ ಫರಿಶ್ತಾ ಸೋ ದೇವತೆಯಾಗುವಿರಿ, ಆಗಲೇ ಪ್ರಕೃತಿಯೂ ಹೃದಯಪೂರ್ವಕವಾಗಿ ಹಾಗೂ ಪ್ರೀತಿಯಿಂದ ತಮ್ಮೆಲ್ಲರ ಸೇವೆಯನ್ನು ಮಾಡುವುದು.

ಸ್ಲೋಗನ್:-

ಮಾತೇಶ್ವರಿಜೀ…. ರವರ ಅಮೂಲ್ಯ ಮಹಾವಾಕ್ಯ – ಪರಮಾತ್ಮನು ಮಾಡಿ -ಮಾಡಿಸುವವರು ಹೇಗೆ?

ಬಹಳ ಮನುಷ್ಯರು ಈ ರೀತಿ ತಿಳಿದುಕೊಂಡು ಕುಳಿತಿದ್ದಾರೆ – ಈ ಅನಾದಿ ಮಾಡಿ-ಮಾಡಲ್ಪಟ್ಟಂತಹ ಸೃಷ್ಟಿಯಲ್ಲಿ ಡ್ರಾಮಾವೇನು ನಡೆಯುತ್ತಿದೆ, ಅದೆಲ್ಲವೂ ಪರಮಾತ್ಮನೇ ನಡೆಸುತ್ತಿದ್ದಾರೆ. ಆದ್ದರಿಂದ ಅವರು ಹೇಳುತ್ತಾರೆ – ಮನುಷ್ಯರ ಹಸ್ತಕ್ಷೇಪವಿಲ್ಲ…. ಮಾಡಿ-ಮಾಡಿಸುವಂತಹ ಸ್ವಾಮಿ….. ಎಲ್ಲವನ್ನೂ ಪರಮಾತ್ಮನೇ ಮಾಡುತ್ತಾರೆ. ಸುಖ-ದುಃಖವೆಂಬ ಎರಡು ಭಾಗವನ್ನೂ ಪರಮಾತ್ಮನೇ ಮಾಡಿದ್ದಾರೆ. ಈಗ ಇಂತಹ ಬುದ್ಧಿಯವರನ್ನು ಎಂತಹ ಬುದ್ಧಿಯವರೆಂದು ಹೇಳುವುದು? ಅವರು ಮೊಟ್ಟ ಮೊದಲು ಇದನ್ನು ತಿಳಿಯುವುದು ಅವಶ್ಯಕವಿದೆ – ಇದು ಅನಾದಿ ಮಾಡಿ-ಮಾಡಲ್ಪಟ್ಟ ಸೃಷ್ಟಿಯ ಆತ್ಮವಾಗಿದೆ, ಈಗ ಪರಮಾತ್ಮನೇನು ಮಾಡುತ್ತಾರೆಯೋ ಅದೇ ನಡೆಯುತ್ತದೆ. ಅದನ್ನೇ ನಾವು ಹೇಳುತ್ತೇವೆ-ಇದು ಮಾಡಿ-ಮಾಡಲ್ಪಟ್ಟಂತಹ ಆಟವು ಸ್ವತಹವಾಗಿಯೇ ನಡೆಯುತ್ತಿರುತ್ತದೆ. ಮತ್ತೆ ಪರಮಾತ್ಮನಿಗಾಗಿ ಹೇಳುತ್ತಾರೆ- ಇದೆಲ್ಲವನ್ನೂ ಪರಮಾತ್ಮನೇ ಮಾಡುತ್ತಾರೆ, ಪರಮಾತ್ಮನನ್ನು ಮಾಡಿ-ಮಾಡಿಸುವವರು ಎಂದು ಹೇಗೆ ಹೇಳುತ್ತಾರೆ, ಹಾಗಾದರೆ ಈ ಹೆಸರು ಯಾವ ಹಸ್ತಿಯ ಮೇಲೆ ಬಂದಿದೆ? ಈಗ ಈ ಮಾತುಗಳನ್ನು ತಿಳಿಯಬೇಕಾಗಿದೆ. ಮೊದಲುಇದನ್ನು ತಿಳಿದುಕೊಳ್ಳಬೇಕು – ಈ ಸೃಷ್ಟಿಯ ಅನಾದಿ ನಿಯಮವೇನಿದೆಯೋ ಅದು ಮಾಡಿ-ಮಾಡಲ್ಪಟ್ಟಿರುವುದಾಗಿದೆ, ಹೇಗೆ ಪರಮಾತ್ಮನೂ ಅನಾದಿ ಆಗಿದ್ದಾರೆ, ಮಾಯೆಯೂ ಅನಾದಿ ಆಗಿದೆ ಹಾಗೆಯೇ ಈ ಚಕ್ರವೂ ಆದಿಯಿಂದ ಹಿಡಿದು ಅಂತ್ಯದವರೆಗೂ ಅನಾದಿ-ಅವಿನಾಶಿಯಾಗಿ ಮಾಡಿ-ಮಾಡಲ್ಪಟ್ಟಿರುವುದಾಗಿದೆ. ಬೀಜದಲ್ಲಿ ಇಡೀ ವೃಕ್ಷದ ಜ್ಞಾನವಿದೆಯಲ್ಲವೆ ಮತ್ತು ವೃಕ್ಷದಲ್ಲಿ ಅವಶ್ಯವಾಗಿ ಬೀಜವಿದೆ, ಎರಡೂ ಕಂಬೈಂಡ್ ಆಗಿದೆ, ಎರಡೂ ಅವಿನಾಶಿಯಾದುದು, ಉಳಿದಂತೆ ಬೀಜದ ಕಾರ್ಯವೇನು? ಬೀಜವನ್ನು ಬಿತ್ತನೆ ಮಾಡುವುದು ವೃಕ್ಷವು ಹೊರಬರುವುದು. ಒಂದುವೇಳೆ ಬೀಜವನ್ನು ಬಿತ್ತದೇ ಇದ್ದರೆ ವೃಕ್ಷದ ಉತ್ಪತ್ತಿಯಾಗುವುದಿಲ್ಲ. ಹಾಗಾದರೆ ಸ್ವಯಂ ಪರಮಾತ್ಮನೂ ಸಹ ಇಡೀ ಸೃಷ್ಟಿಯ ಬೀಜರೂಪವಾಗಿದ್ದಾರೆ ಹಾಗೂ ಪರಮಾತ್ಮನ ಪಾತ್ರವಾಗಿದೆ- ಬೀಜ ಬಿತ್ತುವುದು. ಪರಮಾತ್ಮನೇ ಹೇಳುತ್ತಾರೆ – ನಾನು ಯಾವಾಗ ಬೀಜವನ್ನು ಬಿತ್ತುವೆನೋ ಆಗಲೇ ಪರಮಾತ್ಮ ಆಗುತ್ತೇನೆ. ಒಂದುವೇಳೆ ಬೀಜವನ್ನೇ ಬಿತ್ತದಿದ್ದರೆ ವೃಕ್ಷವು ಹೇಗೆ ಹೊರ ಬರುತ್ತದೆ! ನನ್ನ ಹೆಸರು ಪರಮಾತ್ಮನೇ ಆಗಿದೆ, ಯಾವಾಗ ಪರಮ ಕಾರ್ಯವಿದೆ, ಸ್ವಯಂ ನಾನೇ ಪಾತ್ರಧಾರಿಯಾಗಿ ಬೀಜವನ್ನು ಬಿತ್ತುತ್ತೇನೆ, ಇದೇ ನನ್ನ ಕಾರ್ಯವಾಗಿದೆ. ಸೃಷ್ಟಿಯ ಆದಿಯನ್ನೂ ಮಾಡುತ್ತೇನೆ ಮತ್ತು ಅಂತ್ಯವನ್ನೂ ಮಾಡುತ್ತೇನೆ, ನಾನು ಮಾಡುವವನಾಗಿ ಬೀಜ ಬಿತ್ತುತ್ತೇನೆ. ಬೀಜ ಬಿತ್ತುವುದರ ಅರ್ಥವಾಗಿದೆ – ರಚನೆ ಮಾಡುವುದು. ಹಳೆಯ ಸೃಷ್ಟಿಯ ಅಂತ್ಯ ಹಾಗೂ ಹೊಸ ಸೃಷ್ಟಿಯ ಆದಿ ಮಾಡುವುದಕ್ಕೇ ಹೇಳಲಾಗುತ್ತದೆ – ಪರಮಾತ್ಮನೇ ಎಲ್ಲವನ್ನೂ ಮಾಡುತ್ತಾನೆ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top