26 March 2022 KANNADA Murli Today | Brahma Kumaris

Read and Listen today’s Gyan Murli in Kannada

March 25, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈಗ ಬೇಹದ್ದಿನ ರಾತ್ರಿ ಪೂರ್ತಿಯಾಗುತ್ತಿದೆ, ಹಗಲು ಬರುವುದಿದೆ, ಹಿಂತಿರುಗಿ ಮನೆಗೆ ಹೋಗಲೇ ಬೇಕು, ಆದ್ದರಿಂದ ಈಗ ಬಾಗಿಲು-ಬಾಗಿಲು ಅಲೆಯುವುದನ್ನು ಸಮಾಪ್ತಿ ಮಾಡಿ”

ಪ್ರಶ್ನೆ:: -

ಯಾವ ಒಂದು ಅಭ್ಯಾಸದ ಆಧಾರದ ಮೇಲೆ ನೀವು ಮಕ್ಕಳು ಸೇವೆಯನ್ನು ಬಹಳ ಚೆನ್ನಾಗಿ ಮಾಡಬಹುದು?

ಉತ್ತರ:-

ಕಡಿಮೆಯಲ್ಲಿ-ಕಡಿಮೆ ಎಂಟು ಘಂಟೆಗಳವರೆಗೆ ನೆನಪು ಇರಬೇಕು. ಈ ಅಭ್ಯಾಸ ಇದ್ದರೆ ಸೇವೆಯನ್ನು ಚೆನ್ನಾಗಿ ಮಾಡಬಹುದು. ಏಕೆಂದರೆ ನೆನಪಿನಿಂದ ಮಾತ್ರ ಇಡೀ ವಿಶ್ವದಲ್ಲಿ ಪವಿತ್ರತೆ ಹಾಗೂ ಶಾಂತಿಯ ಪ್ರಕಂಪನಗಳು ಹರಡುತ್ತದೆ. ನೆನಪಿನಿಂದಲೇ ವಿಕರ್ಮ ವಿನಾಶವಾಗುತ್ತದೆ ಹಾಗೂ ಶ್ರೇಷ್ಠ ಪದವಿ ಸಿಗುತ್ತದೆ. ಆದ್ದರಿಂದ ಈ ಆತ್ಮೀಯ ಯಾತ್ರೆಯಲ್ಲಿ ಎಂದೂ ಸುಸ್ತಾಗಬಾರದು. ದೇಹಾಭಿಮಾನವನ್ನು ಬಿಟ್ಟು ದೇಹೀ-ಅಭಿಮಾನಿಗಳಾಗುವ ನಿರಂತರ ಅಭ್ಯಾಸ ಮಾಡಬೇಕು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ರಾತ್ರಿಯ ಪ್ರಯಾಣಿಕನೇ ಸುಸ್ತಾಗ ಬೇಡ..

ಓಂ ಶಾಂತಿ. ಮಕ್ಕಳು ಈ ಎಚ್ಚರಿಕೆಯನ್ನು ಕೇಳಿದಿರಿ. ತಂದೆ ಮಕ್ಕಳಿಗೆ ಎಚ್ಚರಿಕೆ ಕೊಡುತ್ತಿದ್ದಾರೆ, ಹೇ ರಾತ್ರಿಯ ಪ್ರಯಾಣಿಕನೇ ……. ಏಕೆಂದರೆ ನಿಮಗಾಗಿ ಈಗ ಹಗಲು ಬರುತ್ತಿದೆ. ಇದಾಗಿದೆ ಬೇಹದ್ದಿನ ಹಗಲು ಹಾಗೂ ರಾತ್ರಿ. ಬೇಹದ್ದಿನ ರಾತ್ರಿ ಪೂರ್ತಿ ಆಗುತ್ತದೆ ಹಾಗೂ ಬೇಹದ್ದಿನ ಹಗಲು ಸ್ಥಾಪನೆಯಾಗುತ್ತಿದೆ. ಈಗ ನೀವು ಮಕ್ಕಳು (ಆತ್ಮಗಳು) ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಯಾವುದಕ್ಕೆ ನೀವು ಅರ್ಧಕಲ್ಪ ಭಕ್ತಿ ಮಾಡಿದ್ದೀರಿ, ಆದರೆ ನಿಮಗೆ ತಂದೆ ಸಿಗಲೇ ಇಲ್ಲ. ಏಕೆಂದರೆ ತಂದೆಯ ನಾಮ ರೂಪವನ್ನು ಬದಲಿಸಿ ಬಿಟ್ಟಿದ್ದಾರೆ. ಈಗ ನಿಮಗೆ ಗೊತ್ತಿದೆ – ನಮ್ಮನ್ನು ಹಗಲು ಅಥವಾ ಕಲಿಯುಗದಿಂದ ಸತ್ಯಯುಗದಲ್ಲಿ ಕರೆದುಕೊಂಡು ಹೋಗಲು ಮಾರ್ಗವನ್ನು ತಿಳಿಸಿ ಕೊಡುತ್ತಿದ್ದಾರೆ. ತಂದೆ ತಿಳಿಸಿ ಕೊಡುತ್ತಾರೆ- ಯಾರು ವಿಕಾರದಿಂದ ಜನ್ಮ ಪಡೆಯುತ್ತಾರೆ, ಅವರಿಗೆ ಭ್ರಷ್ಟಾಚಾರಿಗಳು ಎಂದು ಹೇಳಲಾಗುತ್ತದೆ. ಭಾರತವಾಸಿಗಳು ತಂದೆಯನ್ನೇ ಮರೆತು ಬಿಟ್ಟಿದ್ದಾರೆ, ಗೀತೆಯ ಭಗವಂತ ನಿರಾಕಾರ ತಂದೆ ಆಗಿದ್ದಾರೆ, ಆದರೆ ಸಾಕಾರ ಕೃಷ್ಣನನ್ನು ತೋರಿಸಿದ್ದಾರೆ. ಇದಾಗಿದೆ ದೊಡ್ಡದರಲ್ಲಿ ದೊಡ್ಡ ತಪ್ಪಾಗಿದೆ. ಈ ಕಾರಣ ಅರ್ಧಕಲ್ಪ ದುಃಖವನ್ನು ಅನುಭವಿಸಬೇಕಾಯಿತು. ತಪ್ಪು ಮಾಡಿದ ಕಾರಣ ದುಃಖವನ್ನು ಅನುಭವಿಸಲೇಬೇಕಾಗಿದೆ. ಈ ಪಾತ್ರವೂ ಸಹ ನಾಟಕದಲ್ಲಿ ಮಾಡಲ್ಪಟ್ಟಿದೆ. ಭಕ್ತಿ ಮಾರ್ಗದಲ್ಲಿ ಅಲೆದಾಡುತ್ತಾ ಇರುತ್ತಾರೆ. ತಂದೆಯನ್ನು ತಿಳಿದು ಕೊಂಡಿದ್ದರೆ ಅಲೆದಾಡುವ ಅವಶ್ಯಕತೆ ಇರುತ್ತಿರಲಿಲ್ಲ. ನೀವು ಈಗ ತಂದೆಯನ್ನು ತಿಳಿದು ಕೊಂಡಿದ್ದೀರಿ. ಒಂದುವೇಳೆ ಶ್ರೀಕೃಷ್ಣ ತನ್ನ ರೂಪದಲ್ಲಿ ಬಂದರೆ ಅವರನ್ನು ಗುರುತು ಹಿಡಿಯುವುದರಲ್ಲಿ ಯಾವುದೇ ಕಷ್ಟವಾಗುವುದಿಲ್ಲ. ತಕ್ಷಣ ಎಲ್ಲರೂ ತಿಳಿದುಕೊಳ್ಳುತ್ತಾರೆ. ಆದರೆ ಇದು ಬಹಳ ಗುಪ್ತವಾಗಿದೆ, ನೀವು ಮಕ್ಕಳೂ ಸಹ ಮರೆಯುತ್ತೀರಿ. ಕೃಷ್ಣನನ್ನು ಯಾರೂ ಸಹ ಮರೆಯುವುದಿಲ್ಲ. ಇಡೀ ವಿಶ್ವ ಕೃಷ್ಣನ ಪ್ರೀತಿಯಲ್ಲಿ ಬಂಧಿತವಾಗಿದೆ. ಶ್ರೀ ಕೃಷ್ಣನು ನಮ್ಮನ್ನು ಸ್ವರ್ಗದಲ್ಲಿ ಕರೆದುಕೊಂಡು ಹೋಗುತ್ತಾನೆ, ಏಕೆಂದರೆ ಕೃಷ್ಣನು ಸ್ವರ್ಗದ ಮಾಲೀಕನೆಂದು ತಿಳಿದುಕೊಳ್ಳುತ್ತಾರೆ. ಅವನನ್ನು ಯಾರೂ ಬಿಡುವುದೇ ಇಲ್ಲ ಆದರೆ ತಿಳಿಸಿಕೊಡುವ ಯುಕ್ತಿ ಬೇಕು. ಒಂದುವೇಳೆ ತಿಳಿಸಿಕೊಡುವ ಯುಕ್ತಿ ಗೊತ್ತಿಲ್ಲವೆಂದರೆ ಡಿಸ್ಸರ್ವೀಸ್ ಮಾಡಿಬಿಡುತ್ತಾರೆ ಏಕೆಂದರೆ ಸ್ವಯಂ ತಾವೇ ತಿಳಿದು ಕೊಂಡಿರುವುದಿಲ್ಲ. ಅನ್ಯರಿಗೆ ಒಳ್ಳೆರೀತಿಯಲ್ಲಿ ಸಿದ್ಧ ಮಾಡಿ ಲೆಕ್ಕಾಚಾರವನ್ನು ತಿಳಿಸಿಕೊಡಬೇಕು. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಹೇ ಪತಿತ ಪಾವನ ಸೀತಾ-ರಾಮ ಎಂದು ಹಾಡುತ್ತಾರೆ ಆದರೆ ಪತಿತ-ಪಾವನ ಯಾರು ಮಾಡುತ್ತಾರೆಂದು ಯಾರೂ ಸಹ ತಿಳಿದು ಕೊಂಡಿಲ್ಲ. ಗೀತೆಯ ಭಗವಂತ ಶ್ರೀಕೃಷ್ಣನೆಂದು ತಿಳಿದುಕೊಂಡು ಬಿಟ್ಟಿದ್ದಾರೆ. ರಾಮನನ್ನ ಕುರಿತು ಯಾವುದೇ ಶಾಸ್ತ್ರವಿಲ್ಲ. ರಾಮಾಯಣ ರಾಮಚಂದ್ರನ ಶಾಸ್ತ್ರವೇನಲ್ಲ. ಕ್ಷತ್ರಿಯ ಧರ್ಮವನ್ನು ರಾಮ ಸ್ಥಾಪನೆ ಮಾಡಲಿಲ್ಲ. ಬ್ರಾಹ್ಮಣ, ದೇವತಾ ಹಾಗೂ ಕ್ಷತ್ರಿಯ ಈ ಮೂರೂ ಧರ್ಮಗಳನ್ನು ಒಬ್ಬ ಶಿವ ತಂದೆ ಸ್ಥಾಪನೆ ಮಾಡುತ್ತಾರೆ. ನಮ್ಮಲ್ಲಿಯೂ ಕೆಲವರೇ ಈ ಮಾತನ್ನು ತಿಳಿದುಕೊಳ್ಳುತ್ತಾರೆ. ರಾಜ ರಾಣಿಯರಂತು ಒಬ್ಬರೇ ಇರುತ್ತಾರೆ. ಪ್ರಜೆಗಳು ಮತ್ತು ದಾಸ ದಾಸಿಯರು ಅನೇಕರು ಅಗುತ್ತಾರೆ. ಹಾಗೆಯೇ ರಾಜನ ಹತ್ತಿರ ಅನೇಕ ದಾಸ ದಾಸಿಯರು ಇರುತ್ತಾರೆ. ಕೆಲವರು ಮನೋರಂಜನೆಗೋಸ್ಕರ, ಕೆಲವರು ನೃತ್ಯ ಮಾಡುವ ಸಲುವಾಗಿ, ನೃತ್ಯದ ಆಸಕ್ತಿಯೂ ಸಹ ಬಹಳಷ್ಟು ಇರುತ್ತದೆ. ಆದರೆ ರಾಜ ರಾಣಿಯರು ಕೆಲವರಷ್ಟೆ ಆಗುತ್ತಾರೆ. ಯಾರು ಒಳ್ಳೆ ರೀತಿಯಲ್ಲಿ ತಿಳಿದುಕೊಳ್ಳುತ್ತಾರೆ ಹಾಗೂ ಅನ್ಯರಿಗೂ ತಿಳಿಸಿಕೊಡುತ್ತಾರೆ ಎಂದು ಪ್ರದರ್ಶನದಲ್ಲಿನ ಸೇವೆಯಿಂದ ಗೊತ್ತಾಗುತ್ತದೆ. ಮೊದಲು ಈ ಮಾತನ್ನು ತಿಳಿಸಿ ಕೊಡಬೇಕಾಗಿದೆ – ಭಗವಂತನನ್ನು ತಿಳಿದುಕೊಳ್ಳದ ಕಾರಣ ಸರ್ವವ್ಯಾಪಿಯೆಂದು ಹೇಳಿಬಿಟ್ಟಿದ್ದಾರೆ. ಎರಡನೆಯದಾಗಿ ಕೃಷ್ಣನನ್ನು ಭಗವಂತ ಎಂದು ಕರೆದಿರುವ ಕಾರಣ, ಸ್ವರ್ಗದ ರಚಯಿತ ಶಿವಬಾಬಾರವರ ಹೆಸರು ಯಾರಿಗೂ ಗೊತ್ತಾಗುವುದಿಲ್ಲ. ನಿರಾಕಾರ ತಂದೆಯೇ ಎಲ್ಲರ ರಚಯಿತ ಅಗಿದ್ದಾರೆ. ಅವರೊಬ್ಬರನ್ನೇ ನೆನಪು ಮಾಡಬೇಕಾಗಿದೆ, ಅವರೇ ರಾಜಯೋಗವನ್ನು ಕಲಿಸಿಕೊಡುತ್ತಾರೆ. ಆದರೆ ಗೀತೆಯಲ್ಲಿ ಕೃಷ್ಣ ಭಗವಾನುವಾಚ ಎಂದು ಬರೆದಿದ್ದಾರೆ, ಆ ಕಾರಣದಿಂದ ಕೈಯಲ್ಲಿ ಗೀತೆಯನ್ನು ಕೊಟ್ಟು ಸುಳ್ಳು ಪ್ರತಿಜ್ಞೆಯನ್ನು ತೆಗೆದುಕೊಳ್ಳುತ್ತಾರೆ. ಈಗ ಹೇಳಿ ಶ್ರೀ ಕೃಷ್ಣ ಎಲ್ಲಾ ಕಡೆ ಇದ್ದಾನೆಯೇ! ಅಥವಾ ನಿರಾಕಾರ ಪರಮಾತ್ಮ ಎಲ್ಲಾ ಕಡೆ ಇದ್ದಾರೆಯೇ! ಎಲ್ಲರೂ ಗೊಂದಲಕ್ಕೊಳಗಾಗಿದ್ದಾರೆ.

ಈಗ ನೀವು ಮಕ್ಕಳು ಬೆಳಿಗ್ಗೆ ಎದ್ದು ಎಲ್ಲರಿಗೆ ತಿಳಿಸುವ ಅಭ್ಯಾಸ ಮಾಡಬೇಕಾಗಿದೆ. (ರಾಜ ಜನಕನ ಉದಾಹರಣೆ) ಅಷ್ಟಾವಕ್ರನು ಜನಕನಿಗೆ ಜ್ಞಾನವನ್ನು ಕೊಟ್ಟನೆಂದು ಹೇಳುತ್ತಾರೆ. ಆದರೆ ಅದು ಯಾವುದೇ ಬ್ರಹ್ಮ ಜ್ಞಾನವೇನಲ್ಲ, ಇದು ಬ್ರಹ್ಮ ಜ್ಞಾನವಾಗಿದೆ. ಬ್ರಹ್ಮಾಕುಮಾರಿಯರು ಆ ಜ್ಞಾನವನ್ನು ಕೊಡುತ್ತಿದ್ದಾರೆ. ಜ್ಞಾನಕೊಡುವವರು ಬ್ರಹ್ಮ-ಕುಮಾರಿಯರೇನಲ್ಲ. ಅವರು ಬ್ರಹ್ಮತತ್ವವನ್ನು ಈಶ್ವರನೆಂದು ತಿಳಿದುಕೊಳ್ಳುತ್ತಾರೆ, ಆದರೆ ತತ್ವವೇನು ಈಶ್ವರನೇನಲ್ಲ. ಈಶ್ವರ ತಂದೆಯಾಗಿದ್ದಾರೆ. ತಂದೆಯ ಹೆಸರು ಶಿವ ಎಂದಾಗಿದೆ. ಬ್ರಹ್ಮ ತತ್ವವಾಗಿದೆ. ಈ ಎಲ್ಲಾ ಮಾತುಗಳನ್ನು ಮಂಧ ಬುದ್ದಿಯವರು ತಿಳಿದುಕೊಳ್ಳಲು ಸಾಧ್ಯವಿಲ್ಲ. ನಂಬರ್ವಾರ್ ಆಗಿರುತ್ತಾರೆ. ದಾಸ-ದಾಸಿಯರೂ ಆಗುತ್ತಾರೆ. ನಾವು ಅನ್ಯರಿಗೆ ಚೆನ್ನಾಗಿ ತಿಳಿಸಿಕೊಡಲು ಸಾಧ್ಯವಿಲ್ಲವೆಂದರೆ ನಮ್ಮ ಪಾತ್ರ ಸತ್ಯಯುಗದಲ್ಲಿ ಕೊನೆಯಲ್ಲಿ ಇದೆ ಎಂದು ತಿಳಿಯಬೇಕು. ಮತ್ತೆ ಪುರುಷಾರ್ಥ ಮಾಡಬೇಕು. ಪ್ರಪಂಚದಲ್ಲಿ ಏನೆಲ್ಲಾ ಕಲಿಸುತ್ತಾರೆ ಅವರು ದೇಹಾಭಿಮಾನದಿಂದಲೇ ಕಲಿಸುತ್ತಾರೆ. ನೀವು ಬ್ರಾಹ್ಮಣರನ್ನು ಬಿಟ್ಟು ಬೇರೆ ಯಾರೂ ದೇಹೀ-ಅಭಿಮಾನಿಗಳು ಇಲ್ಲ. ನಿಮ್ಮಲ್ಲೂ ಸಹ ನಂಬರ್ವಾರ್ ಇದ್ದೀರಿ. ಯಾರು ಆತ್ಮ ಅಭಿಮಾನಿಗಳಾಗಿರುತ್ತಾರೆ, ಅವರು ಅತ್ಮ ಸ್ಮೃತಿಯಲ್ಲಿ ತಿಳಿಸಿ ಕೊಡುತ್ತಾರೆ. ಆತ್ಮ ಈ ಇಂದ್ರಿಯಗಳ ಮೂಲಕ ಮೂಲಕ ಮಾತನಾಡುತ್ತದೆ. ನನ್ನ ಇಂದ್ರಿಯ ಸರಿಯಿಲ್ಲ, ನಾನು ಕೇಳಲು ಸಾಧ್ಯವಿಲ್ಲವೆಂದು ಆತ್ಮವೇ ಹೇಳುತ್ತದೆ. ದೇಹೀ-ಅಭಿಮಾನಿ ಅಗುವುದರಲ್ಲಿ ಪರಿಶ್ರಮವಿದೆ. ಸತ್ಯಯುಗದಲ್ಲಿ ದೇಹೀ-ಅಭಿಮಾನಿಗಳಾಗಿರುತ್ತಾರೆ. ಆದರೆ ಪರಮಾತ್ಮನ ಜ್ಞಾನವಿರುವುದಿಲ್ಲ. ತಂದೆ ತಿಳಿಸುತ್ತಾರೆ ನನ್ನ ಸ್ಮರಣೆಯನ್ನು ಯಾರೂ ಮಾಡುವುದಿಲ್ಲ ಅಲ್ಲಿ ಅವಶ್ಯಕತೆಯೇ ಇರುವುದಿಲ್ಲ. ಸ್ಮರಣೆ ಅಥವಾ ನೆನಪು ಒಂದೇ ಅಗಿದೆ. ಭಕ್ತಿಯಲ್ಲಿ ಮಾಲೆಯನ್ನು ಕೈಯಲ್ಲಿ ಹಿಡಿದು ಬಾಯಿಂದ ರಾಮ-ರಾಮ ಎಂದು ಹೇಳುತ್ತಿರುತ್ತಾರೆ. ಇಲ್ಲಂತೂ ರಾಮ ಎಂಬ ಶಬ್ದ ಹೇಳುವುದು ತಪ್ಪಾಗುತ್ತದೆ. ಸರಿಯಾದ ಶಬ್ದ ಶಿವತಂದೆ. ಆದರೆ ಶಿವ-ಶಿವ ಎಂದು ಹೇಳಬಾರದು. ತಂದೆಯ ನೆನಪು ಮಾಡಲು ಹೆಸರನ್ನು ತೆಗೆದುಕೊಳ್ಳುತ್ತಾರೇನು. ತಂದೆಯ ನೆನಪು ಮಾಡುವುದು-ಯಾತ್ರೆಯಾಗಿದೆ. ಶಾರೀರಿಕ ಯಾತ್ರೆಯನ್ನು ಮಾಡುವಾಗಲೂ ಸಹ ನೆನಪು ಮಾಡಲಾಗುತ್ತದೆ – ನಾವು ಅಮರನಾಥಕ್ಕೆ ಹೋಗುತ್ತಿದ್ದೇವೆ. ಅಲ್ಲಿಯ ಹೆಸರನ್ನು ನೆನಪು ಮಾಡಲಾಗುತ್ತದೆ. ನೀವು ಏನನ್ನೂ ಜಪ ಮಾಡಬೇಕಿಲ್ಲ. ನಾಟಕ ಪೂರ್ತಿಯಾಗಲಿದೆ ಎಂದು-ನೀವು ತಿಳಿದಿದ್ದೀರಿ. ನಮ್ಮ 84 ಜನ್ಮಗಳು ಪೂರ್ತಿಯಾಯಿತು, ಈ ಹಳೆಯ ವಸ್ತ್ರವನ್ನು ಬಿಡಬೇಕಾಗಿದೆ. ಪಾತ್ರ ಮಾಡುತ್ತಾ ಮಾಡುತ್ತಾ ಪತಿತರಾಗಲೇ ಬೇಕಾಗಿದೆ. ಮನುಷ್ಯ ಸೃಷ್ಟಿರೂಪಿ ವೃಕ್ಷದ ಬೇರು ಸಡಿಲವಾಗಿದೆ ಎಂದು ತಂದೆ ತಿಳಿಸುತ್ತಾರೆ. ಕೇವಲ ರೆಂಬೆ-ಕೊಂಬೆಗಳು ಉಳಿದುಕೊಂಡಿವೆ. ಇವೂ ಸಹ ತಮೋಪ್ರಧಾನವಾಗಿದೆ. ವೃಕ್ಷದ ಆಯಸ್ಸು ಪೂರ್ಣವಾಗಲಿದೆ. ಮತ್ತೆ ಈ ನಾಟಕ ಪುನರಾವರ್ತನೆಯಾಗಲಿದೆ. ಪ್ರತಿಯೊಬ್ಬರೂ ತಮ್ಮ-ತಮ್ಮ ಪಾತ್ರವನ್ನು ಅಭಿನಯಿಸುತ್ತಾರೆ. ಬೇರೆ ಯಾವುದೇ ಜಗತ್ತು ಇಲ್ಲ. ಒಂದು ವೇಳೆ ಇದ್ದಿದ್ದರೆ ನಾವು ಏಕೆ ಓದಬೇಕಾಗಿದೆ. ತಂದೆ ನೀವು ಬಂದು ರಾಜಯೋಗವನ್ನು ಕಲಿಸಿ ಗೀತಾಜ್ಞಾನವನ್ನು ತಿಳಿಸಿ, ಪಾವನರನ್ನಾಗಿ ಮಾಡಿ ಎಂದು ಹೇಳುತ್ತಾರೆ. ನಾವು ಹೇಗೆ ಪತಿತರಾದೆವು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ನಾವೇ ಪಾವನರಾಗಿದ್ದೆವು ಎಂಬುದನ್ನು ನೀವು ತಿಳಿದಿದ್ದೀರಿ. ನಂತರ ಈ ನಾಟಕ ಮತ್ತೆ ಪುನರಾವರ್ತನೆಯಾಗುತ್ತದೆ.

ಮನೆಗೆ ಹಿಂತಿರುಗಿ ಹೋಗಬೇಕೆಂದು ತಂದೆಯು ತಿಳಿಸುತ್ತಾರೆ. ತಂದೆಯಂತು ಮನೆಯಲ್ಲಿಯೇ ಇರುತ್ತಾರೆ. ನಾವು ಪರಮಧಾಮದಲ್ಲಿ ಇರುತ್ತೇವೆಂದು ಹೇಳುತ್ತಾರೆ, ಮತ್ತೆ ಮರೆತುಬಿಡುತ್ತಾರೆ. ಆತ್ಮವೂ ಸಹ ಬ್ರಹ್ಮಾಂಡದಲ್ಲಿ ಇರುತ್ತದೆ. ಈ ಸೃಷ್ಠಿಯಲ್ಲಿ ಮನುಷ್ಯರಿರುತ್ತಾರೆ. ಬ್ರಹ್ಮಾಂಡದಲ್ಲಿ ಆತ್ಮಗಳಿರುತ್ತಾರೆ, ಮತ್ತೆ ಇಲ್ಲಿ ಪಾತ್ರವನ್ನಭಿನಯಿಸಲು ಬರುತ್ತಾರೆ. ಮೇಲೆ ಆಕಾಶ ತತ್ವವಿದೆ, ಎಲ್ಲರ ಕಾಲುಗಳು ಭೂಮಿಯ ಮೇಲೆ ಇದೆ, ಆದರೆ ಶರೀರ ಎಲ್ಲಿದೆ? ಆತ್ಮಗಳು ನಕ್ಷತ್ರವಾಗಿ ಬ್ರಹ್ಮಾಂಡದಲ್ಲಿ ಇರುತ್ತವೆ. ಅಲ್ಲಿ (ಆತ್ಮರೂಪಿ) ನಕ್ಷತ್ರಗಳು ಬೀಳುವ ಮಾತೇ ಇಲ್ಲ. ವಿಜ್ಞಾನಿಗಳು ರಾಕೆಟ್ನಲ್ಲಿ ಹೋಗುತ್ತಾರೆ, ಸುತ್ತು ಹಾಕಲು ಹೊರಗಡೆ ಸಹ ಇಳಿಯುತ್ತಾರೆ. ಬೀಳುವೆವು ಎಂಬ ಭಯವಿರುವುದಿಲ್ಲ. ಮನುಷ್ಯರು ಆಕಾಶ ತತ್ವದಲ್ಲಿ ನಿಲ್ಲುವಷ್ಟು ಆಕರ್ಷಣೆ ಇರುತ್ತದೆ. ಹಾಗಾದರೆ ಇಷ್ಟು ಚಿಕ್ಕ ಆತ್ಮ ಮಹಾತತ್ವದಲ್ಲಿ ಏಕೆ ಉಳಿದುಕೊಳ್ಳುವುದಿಲ್ಲ. ಉಳಿದುಕೊಳ್ಳುವ ಸ್ಥಾನವೂ ಅಲ್ಲಿಯೇ ಇದೆ, ಇಷ್ಟು ದೊಡ್ಡ ಸೂರ್ಯ, ಚಂದ್ರ, ನಕ್ಷತ್ರಗಳು ಅಲ್ಲಿ ಹೇಗೆ ಉಳಿದುಕೊಂಡಿವೆ. ಯಾವುದೇ ಹಗ್ಗವೂ ಸಹ ಇಲ್ಲ. ಇದೆಲ್ಲವೂ ನಾಟಕವೂ ಮಾಡಲ್ಪಟ್ಟಿದೆ. ನಾವು 84 ಜನ್ಮಗಳ ಚಕ್ರದಲ್ಲಿ ಬರುತ್ತೇವೆ. ಇದು ವೃಕ್ಷವಾಗಿದೆ. ಎಷ್ಟು ದೊಡ್ಡ ರೆಂಬೆ-ಕೊಂಬೆಗಳಿವೆ. ಚಿಕ್ಕ-ಚಿಕ್ಕದಾಗಿದ್ದರೆ ಕಣ್ಣಿಗೆ ಕಾಣುತ್ತಿರಲಿಲ್ಲ. ತಂದೆಯೂ ಸಹ ಸಾರ ರೂಪದಲ್ಲಿ ತಿಳಿಸಿಕೊಡುತ್ತಾರೆ. ಯಾರು ಅಂತ್ಯದಲ್ಲಿ ಬರುತ್ತಾರೆ, ಅವರು ಬಹಳ ಕಡಿಮೆ ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಉಳಿದಂತೆ ಒಂದೊಂದು ಧರ್ಮದ ಒಂದೊಂದು ಆತ್ಮಗಳ ಲೆಕ್ಕಾಚಾರವನ್ನು ತಿಳಿಸುವುದಿಲ್ಲ. ಬ್ರಹ್ಮನ ಮೂಲಕ ಬ್ರಾಹ್ಮಣ, ದೇವತಾ, ಕ್ಷತ್ರಿಯ ಧರ್ಮಗಳ ಸ್ಥಾಪನೆಯಾಗುತ್ತಿದೆ ಎಂದು ನಿಮಗೆ ಗೊತ್ತಿದೆ. ಯಾರ ಮುಖಾಂತರ ಸ್ಥಾಪನೆಯಾಗುತ್ತದೆ ಅವರ ಮೂಲಕವೇ ಪಾಲನೆಯಾಗುತ್ತದೆ. ಬ್ರಹ್ಮಾ, ವಿಷ್ಣು, ಶಂಕರ ಈ ತ್ರಿಮೂರ್ತಿಗಳು ಬೇರೆ ಬೇರೆ ಆಗಿದ್ದಾರೆ. ಬ್ರಹ್ಮನಿಗೆ ಈ ರೀತಿ ಮೂರು ಮುಖಗಳಿರಲು ಸಾಧ್ಯವಿಲ್ಲ. ಮಕ್ಕಳೇ, ನೀವು ಸಂಪೂರ್ಣ ಬುದ್ದಿಹೀನರಾಗಿ ಬಿಟ್ಟಿದ್ದೀರೆಂದು ತಂದೆ ಹೇಳುತ್ತಾರೆ. ತಂದೆ ಬಂದು ಬುದ್ದಿವಂತರನ್ನಾಗಿ ಮಾಡುತ್ತಾರೆ. ಈಗ ನೀವೆಲ್ಲಾ ಸೀತೆಯರು ರಾವಣನ ಜೈಲಿನಲ್ಲಿ ಬಂದಿಸಲ್ಪಟ್ಟಿದ್ದೀರಿ. ನೀವೇ ಕಪಿ ಸೈನ್ಯ ಆಗಿದ್ದು, ನಿಮ್ಮ ಸೈನ್ಯವನ್ನೇ ತಂದೆ ಆರಿಸಿಕೊಂಡಿದ್ದಾರೆ. ನಿಮ್ಮನ್ನು ಮಂದಿರಕ್ಕೆ ಯೋಗ್ಯರನ್ನಾಗಿ ಮಾಡುತ್ತಿದ್ದಾರೆ. ಈಗ ರಾಜಧಾನಿ ಸ್ಥಾಪನೆಯಾಗುತ್ತಿದೆ. ಯಾರೆಷ್ಟು ಶ್ರೀಮತದಂತೆ ನಡೆಯುತ್ತಾರೆ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ನಮ್ಮ ಮಮ್ಮಾ-ಬಾಬಾರವರು ನಂಬರ್ವನ್ನಲ್ಲಿ ಬರುತ್ತಾರೆಂದು ನೀವು ತಿಳಿದುಕೊಂಡಿದ್ದೀರಿ, ಸ್ಥೂಲವತನದಲ್ಲಿ ನಮ್ಮ ಮುಂದೆ ಕುಳಿತುಕೊಂಡಿರುತ್ತಾರೆ. ಸೂಕ್ಷ್ಮವತನದಲ್ಲಿಯೂ ಕುಳಿತುಕೊಂಡಿರುವುದನ್ನು ನೀವು ನೋಡುತ್ತೀರಿ ಮತ್ತು ವೈಕುಂಠದಲ್ಲಿಯೂ ನೋಡುತ್ತೀರಿ. ಆದಿಯಲ್ಲಿ ತಂದೆ ಅನೇಕರಿಗೆ ಸಾಕ್ಷಾತ್ಕಾರ ಮಾಡಿಸಿದ್ದರು, ಆದರೆ ಸಾಕ್ಷಾತ್ಕಾರವನ್ನು ನೋಡಿದವರೆಲ್ಲಾ ಶ್ರೀಕೃಷ್ಣನಾಗಲು ಸಾಧ್ಯವಿಲ್ಲ. ಪುರುಷಾರ್ಥವನ್ನು ಮಾಡಿಸುವ ಸಲುವಾಗಿ ಬಾಲ ಲೀಲೆಯನ್ನು ತೋರಿಸುತ್ತಾರೆ. ಪುರುಷಾರ್ಥದ ಹೊರತು ಮಹಾರಾಜ-ಮಹಾರಾಣಿಯಾಗಲು ಸಾಧ್ಯವಿಲ್ಲ. ಯಾರು ನಿಶ್ಚಯ ಬುದ್ದಿಯವರಾಗಿರುತ್ತಾರೆ ಅವರು ಒಮ್ಮೆಯೇ ಪರಿವರ್ತನೆಯಾಗಿ ಬಿಡುತ್ತಾರೆ. ತಂದೆ ನಾವು ನಿಮ್ಮನ್ನು ಎಂದೂ ಬಿಡುವುದಿಲ್ಲ ಎಂದು ಹೇಳುತ್ತಾರೆ, ಆದರೆ ಕೆಲವರು ಹೇಳುತ್ತಾ ಜ್ಞಾನವನ್ನು ಬಿಡುತ್ತಾರೆ, ಆಶ್ಚರ್ಯವಾಗಿ ಕೆಲವರು ಜ್ಞಾನವನ್ನು ಕೇಳಿ ಮತ್ತೆ ಹೊರಟು ಹೋಗುತ್ತಾರೆ. ಇದು ಮೊದಲಿನ ಗಾದೆಯಾಗಿದೆ. ಈಗಲೂ ಇದೆಲ್ಲವೂ ನಡೆಯುತ್ತಲೇ ಇರುತ್ತದೆ. ಕಲ್ಪದ ಹಿಂದೆಯೂ ಇದೇ ರೀತಿ ಹೊರಟು ಹೋಗಿದ್ದರೆಂದು ಹೇಳುತ್ತಾರೆ. ಅಂತಹವರಿಗೆ ಯಾರ ಮೇಲೂ ಭರವಸೆ ಇರುವುದಿಲ್ಲ, ತಮ್ಮ ಶ್ವಾಸದ ಮೇಲೂ ಭರವಸೆ ಇರುವುದಿಲ್ಲ. ಇಂತಹವರು ತಂದೆಯಿಂದ ದೂರವಾಗಿ ಸತ್ತು ಹೋಗುತ್ತಾರೆ. ಈಶ್ವರೀಯ ಜನ್ಮದಿನವನ್ನು ಮಾಡಿಯೂ ಸಹ ಸತ್ತು ಹೋಗುತ್ತಾರೆ ಅಥವಾ ತಂದೆಯ ಕೈಯನ್ನು ಬಿಟ್ಟು ಬಿಡುತ್ತಾರೆ. ಆದ್ದರಿಂದ ತಂದೆ ಗಳಿಗೆ-ಗಳಿಗೆಗೂ ಹೇಳುತ್ತಲೇ ಇರುತ್ತಾರೆ – ನೀವು ಈ ರೀತಿ ತಿಳಿದುಕೊಳ್ಳಿ, ನಾವು ಈಗ ನಮ್ಮ ಮಧುರ ಮನೆಗೆ ಹೋಗಬೇಕಾಗಿದೆ, ಆಗ ತಂದೆ ಹಾಗೂ ಮನೆ ನೆನಪಿಗೆ ಬರುತ್ತದೆ. ಭಕ್ತಿಮಾರ್ಗದಲ್ಲಿಯೂ ಸಹ ಅರ್ಧಕಲ್ಪ ನೆನಪು ಮಾಡಿದ್ದೀರಿ ಆದರೆ ಹಿಂತಿರುಗಿ ಯಾರೂ ಹೋಗಲು ಸಾಧ್ಯವಿಲ್ಲ. ತಿಳಿದುಕೊಳ್ಳದಿದ್ದರೆ ಹೋಗಲು ಹೇಗೆ ಸಾಧ್ಯ? ಅವರು ಆತ್ಮಿಕ ಯಾತ್ರಿಕರಾಗಲು ಸಾಧ್ಯವಿಲ್ಲ. ನೀವು ಈಗ ಯಾತ್ರಿಕರಾಗಿದ್ದೀರಿ. ಯಾರು ಎಷ್ಟು ನೆನಪು ಮಾಡುತ್ತಾರೆ ಅವರ ಪಾಪ ಸಮಾಪ್ತಿಯಾಗುತ್ತಾ ಹೋಗುತ್ತದೆ. ಯಾತ್ರೆಯ ಬಗ್ಗೆ ಗಮನವಿರಬೇಕು. ಅಂತ್ಯದ ವೇಳೆಗೆ ನಿಮ್ಮ ಸೇವೆ 8 ಗಂಟೆಯಾದರೆ ಬಹಳ ಒಳ್ಳೆಯದು. ಇದಕ್ಕೇ ಶಾಂತಿ ಹಾಗೂ ಪವಿತ್ರತೆಯ ಪ್ರಕಂಪನಗಳು ಹರಡುವುದು ಎಂದು ಹೇಳಲಾಗುತ್ತದೆ. ನೆನಪಿನಿಂದ ವಿಕರ್ಮ ವಿನಾಶವಾಗುತ್ತದೆ, ಹಾಗೂ ಶ್ರೇಷ್ಠ ಪದವಿ ಸಿಗುತ್ತದೆ. ಆದ್ದರಿಂದಲೇ ಹೇಳುತ್ತಾರೆ- ರಾತ್ರಿಯ ಪ್ರಯಾಣಿಕನೇ ಸುಸ್ತಾಗಬೇಡ. ಕಲಿಯುಗದ ಅಂತ್ಯವೆಂದರೆ ಬ್ರಹ್ಮನ ರಾತ್ರಿ ಪೂರ್ಣಗೊಳ್ಳುವುದು. ಎಲ್ಲರೂ ಹಿಂತಿರುಗಿ ಮನೆಗೆ ಹೋಗುವ ಸಲುವಾಗಿ ಆತ್ಮೀಯ ಮನೆಯನ್ನು ನೆನಪು ಮಾಡಬೇಕಾಗಿದೆ ಏಕೆಂದರೆ ಆತ್ಮವು ಈಗ ಮನೆಗೆ ಹಿಂತಿರುಗಬೇಕಾಗಿದೆ ಆದ್ದರಿಂದ ಶರೀರದ ಅಭಿಮಾನವನ್ನು ಬಿಡಬೇಕಾಗಿದೆ, ದೇಹೀ-ಅಭಿಮಾನಿಗಳಾಗಬೇಕು. ಇದು ನೆನಪಿನ ಯಾತ್ರೆಯಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಪಕ್ಕಾ ನಿಶ್ಚಯ ಬುದ್ಧಿಯವರಾಗಿ ತಂದೆಯ ಕೈಯನ್ನು ಎಂದೂ ಬಿಡುವುದಿಲ್ಲವೆಂದು ದೃಢಸಂಕಲ್ಪ ಮಾಡಬೇಕು, ಮತ್ತು ಮನೆಯನ್ನು ಗಳಿಗೆ-ಗಳಿಗೆಗೂ ನೆನಪು ಮಾಡಬೇಕು.

2. ದೇಹೀ-ಅಭಿಮಾನಿಯಾಗುವ ಪರಿಶ್ರಮ ಪಡಬೇಕು. ಪಂಚ ವಿಕಾರರೂಪಿ ರಾವಣನ ಬಂಧನದಿಂದ ಬಿಡಿಸಿಕೊಳ್ಳಲು ಶ್ರೀಮತದಂತೆ ನಡೆಯಬೇಕು. ಮಂದಿರದ ಪೂಜೆಗೆ ಯೋಗ್ಯರಾಗುವಂತಹ ಪುರುಷಾರ್ಥವನ್ನು ಮಾಡಬೇಕಾಗಿದೆ.

ವರದಾನ:-

ಯಾರು ಜ್ಞಾನ ಸ್ವರೂಪ ಯೋಗಿ ಆತ್ಮರಿದ್ದಾರೆಯೋ ಅವರು ಸದಾ ಸರ್ವಶಕ್ತಿಗಳ ಅನುಭೂತಿ ಮಾಡುತ್ತಾ ವಿಜಯಿಯಾಗುವರು. ಯಾರು ಕೇವಲ ಸ್ನೇಹಿ ಅಥವಾ ಭಾವನಾ ಸ್ವರೂಪರಾಗಿರುತ್ತಾರೆಯೋ ಅವರ ಮನಸ್ಸು ಹಾಗೂ ಮುಖದಿಂದ ಸದಾ ಬಾಬಾ ಬಾಬಾ ಎಂಬುದಿರುತ್ತದೆ ಆದ್ದರಿಂದ ಸಮಯ-ಸಮಯದಲ್ಲಿ ಸಹಯೋಗವು ಪ್ರಾಪ್ತಿಯಾಗುತ್ತದೆ. ಆದರೆ ಸಮಾನರಾಗುವುದರಲ್ಲಿ ಜ್ಞಾನಿ-ಯೋಗಿ ಆತ್ಮರು ಸಮೀಪವಿದ್ದಾರೆ ಆದ್ದರಿಂದ ಎಷ್ಟು ಭಾವನೆಯಿರುವುದೋ ಅಷ್ಟೇ ಜ್ಞಾನ ಸ್ವರೂಪರು ಆಗಿರಿ. ಜ್ಞಾನ ಯುಕ್ತ ಭಾವನೆ ಹಾಗೂ ಸ್ನೇಹ ಸಂಪನ್ನ ಯೋಗ- ಇವೆರಡರ ಸಮತೋಲವು ಹಾರುವ ಕಲೆಯ ಅನುಭವ ಮಾಡಿಸುತ್ತಾ ತಂದೆಯ ಸಮಾನರನ್ನಾಗಿ ಮಾಡಿ ಬಿಡುತ್ತದೆ.

ಸ್ಲೋಗನ್:-

ಮಾತೇಶ್ವರಿಜೀ….ರವರ ಅಮೂಲ್ಯ ಮಹಾವಾಕ್ಯ –

ಓಂ ಶಿವೋಹಂ, ಹಮ್ ಸೊ ಸೊ ಹಮ್ – ಈ ಶಬ್ಧಗಳ ಯಥಾರ್ಥವಾದ ಪರಿಭಾಷೆ

ಓಂ ಶಾಂತಿ. ಹಮ್ ಸೊ ಸೊ ಹಮ್, ಶಿವೋಹಂ, ಅಹಂ ಆತ್ಮ ಸೊ ಪರಮಾತ್ಮ – ಈ ಶಬ್ಧವೇನು ಉಚ್ಚರಿಸುತ್ತೇವೆ, ಇದನ್ನು ಯಾರು ಉಚ್ಚರಿಸುತ್ತಾರೆ ಹಾಗೂ ಈ ಶಬ್ಧಗಳ ಯಥಾರ್ಥ ಅರ್ಥವೇನು? ಯಾವಾಗ ಓಂ ಅಕ್ಷರವನ್ನು ಹೇಳುತ್ತೇವೆಯೋ ಅದರ ಅರ್ಥವಾಗಿದೆ – ನಾನು ಆತ್ಮ ಶಾಂತ ಸ್ವರೂಪನಾಗಿದ್ದೇನೆ, ಈ ನಿಶ್ಚಯವಾದ ನಂತರ ನಾನು ಆತ್ಮನೇ ಪರಮಾತ್ಮಎಂದು ಹೇಳಲು ಸಾಧ್ಯವಿಲ್ಲ. ಹಾಗಾದರೆ ನಂತರ ಇದೇ ರೀತಿ ತಿಳಿಯುತ್ತೇವೆ – ನಾನು ಆತ್ಮ ಪರಮಾತ್ಮನ ಮಗುವಾಗಿದ್ದೇನೆ. ಅಂದಮೇಲೆ ಈ ಓಂ ಶಬ್ಧವನ್ನು ಹೇಳುವುದು ಆತ್ಮರ ಅಧಿಕಾರವಾಗಿದೆ. ಆನಂತರ ಯಾವಾಗ ಹಮ್ ಸೊ ಸೊ ಹಮ್ ಶಬ್ಧವನ್ನು ಹೇಳುತ್ತೇವೆಯೋ ಅದರ ಅರ್ಥವಾಗಿದೆ- ನಾವೇ ಪೂಜ್ಯರೀಗ ಪೂಜಾರಿಯಾದೆವು. ನಾವೇ ಪೂಜ್ಯರು ಎಂಬ ಶಬ್ಧವನ್ನೂ ಸಹ ಆತ್ಮನೇ ಹೇಳಲು ಸಾಧ್ಯ. ಅಹಂ ಆತ್ಮನೇ ಪರಮಾತ್ಮನೆಂದು ಮನುಷ್ಯರೇನು ಹೇಳುತ್ತಾರೆಯೋ, ಆ ಶಬ್ಧವನ್ನು ಕೇವಲ ಈಗ ಪರಮಾತ್ಮನೇ ಹೇಳಲು ಸಾಧ್ಯ ಏಕೆಂದರೆ ಅವರೂ ಸಹ ಒಂದು ಆತ್ಮ, ಪರಮ ಆತ್ಮನಾಗಿದ್ದಾರೆ. ಶಿವೋಹಂ ಎಂಬ ಶಬ್ಧವನ್ನೇನು ಹೇಳುತ್ತಾರೆ, ಅದನ್ನೂ ಪರಮಾತ್ಮನೇ ಹೇಳಬಹುದು ಏಕೆಂದರೆ ಅವರು ಶಿವ ಆಗಿದ್ದಾರೆ ಅಂದಮೇಲೆ ಈ ಶಬ್ಧಗಳ ಅರ್ಥವನ್ನೂ ಆಗಲೇ ತಿಳಿಯಲಾಗುತ್ತದೆ, ಯಾವಾಗ ಪರಮಾತ್ಮನೇ ಬಂದು ಈ ಜ್ಞಾನವನ್ನು ಕೊಡುತ್ತಾರೆ. ಉಳಿದ ಬೇರೆ ಧರ್ಮದವರಿಗೆ, ಕ್ರಿಶ್ಚಿಯನ್ ಮುಂತಾದವರಿಗೆ ನಾವೇ ಮತ್ತೆ ಪೋಪ್ ಆಗುತ್ತೇವೆ ಎಂಬುದು ಗೊತ್ತಿಲ್ಲ. ಅವರಿಗೆ ಈ ತಿಳುವಳಿಕೆಯೂ ಇಲ್ಲ. ನಮಗಷ್ಟೇ ಈಗ ನಾವೇ ದೇವತೆಗಳಾಗುತ್ತೇವೆ ಎಂಬ ಜ್ಞಾನವು ಸಿಕ್ಕಿದೆ. ನಮ್ಮ ಮುಂದೆ ದೇವತೆಗಳ ನೆನಪಾರ್ಥ ಚಿತ್ರಗಳಿವೆ ಮತ್ತು ಜೊತೆ-ಜೊತೆಗೆ ಅವರ ಜೀವನ ಚರಿತ್ರೆಯ ಇತಿಹಾಸ, ಗೀತಾ ಭಾಗವತವು ನಮ್ಮ ಮುಂದೆ ಇದೆ ಏಕೆಂದರೆ ನಾವು ಆದಿಯಿಂದ ಅಂತ್ಯದವರೆಗೆ ಅಂದರೆ ಇಡೀ ಕಲ್ಪದ ಚಕ್ರದಲ್ಲಿದ್ದೇವೆ ಮತ್ತು ಆ ಧರ್ಮಪಿತರು ಯಾವಾಗ ಬರುತ್ತಾರೆಯೋ ಆಗ ಅವರು ಕಲ್ಪದ ಮಧ್ಯದ ಸಮಯದಲ್ಲಿ ಬರುತ್ತಾರೆ. ಆದ್ದರಿಂದ ಅವರು ಹಮ್ ಸೊ ಶಬ್ಧವನ್ನು ಹೇಳಲು ಸಾಧ್ಯವಿಲ್ಲ, ಓಂ ಶಬ್ಧವನ್ನು ಹೇಳಬಹುದು. ಒಳ್ಳೆಯದು. ಓಂ ಶಾಂತಿ.

Daily Murli in Kannada

Email me Murli: Receive Daily Murli on your email. Subscribe!

1 thought on “26 March 2022 KANNADA Murli Today | Brahma Kumaris”

Leave a Comment

Your email address will not be published. Required fields are marked *

Scroll to Top