10 March 2022 KANNADA Murli Today | Brahma Kumaris

Read and Listen today’s Gyan Murli in Kannada

March 9, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಯಾರನ್ನು ಇಡೀ ಪ್ರಪಂಚ ನೆನಪು ಮಾಡುತ್ತಿದೆ, ಆ ಭಗವಂತನೇ ನಿಮ್ಮ ಸಮ್ಮುಖದಲ್ಲಿ ಕುಳಿತಿದ್ದಾರೆ, ನೀವು ಇಂತಹ ತಂದೆಯಿಂದ ಮರೆಯದಂತೆ ಸಂಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಿ”

ಪ್ರಶ್ನೆ:: -

ತಂದೆಯ ಶ್ರೀಮತದಂತೆ ಯಥಾರ್ಥವಾಗಿ ನಡೆಯುವ ಶಕ್ತಿ ಯಾವ ಮಕ್ಕಳಲ್ಲಿರುತ್ತದೆ?

ಉತ್ತರ:-

ಯಾರು ತಮ್ಮ ಸತ್ಯ-ಸತ್ಯ ದಿನಚರಿಯನ್ನು ತಂದೆಗೆ ಹೇಳಿ ಪ್ರತಿ ಹೆಜ್ಜೆಯಲ್ಲಿ ತಂದೆಯಿಂದ ಸಲಹೆಯನ್ನು ತೆಗೆದುಕೊಳ್ಳುತ್ತಾರೆ. ತಂದೆಯಿಂದ ಆಜ್ಞೆಯನ್ನು ಪಡೆದಾಗ ಅದರಂತೆ ನಡೆಯುವ ಶಕ್ತಿ ಪ್ರಾಪ್ತಿಯಾಗುತ್ತದೆ. ಮಕ್ಕಳೇ ಆ ಸಂಪಾದನೆ ಹಿಂದೆ ಈ ಸಂಪಾದನೆಯನ್ನು ಕಳೆದುಕೊಳ್ಳಬೇಡಿ, ಏಕೆಂದರೆ ಅದು ನಯಾ ಪೈಸೆ ಸಂಪಾದನೆ ಎಲ್ಲವು ಸಮಾಪ್ತಿ ಆಗುವುದಾಗಿದೆ ಎಂದು ತಂದೆ ಮಕ್ಕಳಿಗೆ ಶ್ರೀಮತ ಕೊಡುತ್ತಾರೆ. ಪ್ರತಿ ಮಾತಿನಲ್ಲಿ ಶ್ರೀಮತವನ್ನು ತೆಗೆದುಕೊಳ್ಳುತ್ತಾ ಬಹಳ ಎಚ್ಚರಿಕೆಯಿಂದ ಇರಬೇಕು. ತಮ್ಮನ್ನು ತಾವು ಸಂಭಾಲನೆ ಮಾಡಿಕೊಂಡು ನಡೆಯಬೇಕು. ತಮ್ಮ ಮತವನ್ನು ನಡೆಸಬಾರದು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಆಕಾಶ ಸಿಂಹಾಸನವನ್ನು ಬಿಟ್ಟು ಬಾ….

ಓಂ ಶಾಂತಿ. ಎಲ್ಲಾ ಮಕ್ಕಳು ಯಾರ ಸಮ್ಮುಖದಲ್ಲಿ ಕುಳಿತಿದ್ದೀರಿ? ಬೇಹದ್ದಿನ ತಂದೆ ಹಾಗೂ ದಾದಾರವರ ಸಮ್ಮುಖದಲ್ಲಿ ಕುಳಿತಿದ್ದೇವೆ. ಇವರು ಬಹಳ ವಿಚಿತ್ರವಾಗಿದ್ದಾರೆ. ಬೇಹದ್ದಿನ ತಂದೆ ಪರಮಪಿತ ಪರಮಾತ್ಮ ಹಾಗೂ ಬೇಹದ್ದಿನ ದಾದಾ ಪ್ರಜಾಪಿತ ಬ್ರಹ್ಮ, ಇವರಿಬ್ಬರು ಸಮ್ಮುಖದಲ್ಲಿ ಕುಳಿತಿದ್ದಾರೆ. ಯಾರ ಸಮ್ಮುಖದಲ್ಲಿ? ಮಕ್ಕಳ ಸಮ್ಮುಖದಲ್ಲಿ. ಇದು ಈಶ್ವರೀಯ ಪರಿವಾರವಾಗಿದ್ದು ಬೇಹದ್ದಿನ ತಂದೆ ಕುಳಿತು ಮಕ್ಕಳಿಗೆ ಓದಿಸುತ್ತಿದ್ದಾರೆ ಅಥವಾ ಸಹಜ ರಾಜಯೋಗವನ್ನು ಕಲಿಸುತ್ತಿದ್ದಾರೆ. ಈ ಮಾತು ಬುದ್ದಿಯಲ್ಲಿದ್ದರೆ ಅಪಾರವಾದ ಖುಷಿ ಇರುತ್ತದೆ. ಗೀತೆಯಲ್ಲೂ ಸಹ ಓ ತಂದೆ ಬಾ ಎಂದು ಕರೆಯುತ್ತಾರೆ. ಈ ಸಮಯದಲ್ಲಿ ಬಹಳ ದುಃಖವಿದೆ. ಆದುದರಿಂದ ಪರಮಾತ್ಮನನ್ನು ಆಹ್ವಾನ ಮಾಡುತ್ತಿರುತ್ತಾರೆ, ಹಾಗೂ ಅವರೀಗ ನಿಮ್ಮ ಸಮ್ಮುಖದಲ್ಲಿ ಕುಳಿತಿದ್ದಾರೆ. ಬೇಹದ್ದಿನ ತಂದೆ ಈ ದಾದಾರವರ ಮುಖಾಂತರ ಓದಿಸುತ್ತಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ಮಕ್ಕಳಲ್ಲೂ ಸಹ ನಂಬರ್‍ವಾರ್ ಪುರುಷಾರ್ಥದನುಸಾರ ನಿಶ್ಚಯವಿದೆ. ವಕೀಲರಾಗುವ ವಿದ್ಯೆಯನ್ನು ಓದುವಾಗ ನಮಗೆ ಅಗತ್ಯವಾಗಿ ವಕೀಲರೇ ಓದಿಸುತ್ತಿದ್ದಾರೆಂಬ ನಿಶ್ಚಯವಿರುತ್ತದೆ. ಇಂತಹ ಸರ್ಜನ್ ನಮಗೆ ಸರ್ಜನ್ನಾಗುವ ವಿದ್ಯೆಯನ್ನು ಕಲಿಸುತ್ತಿದ್ದಾರೆ ಎಂದು ತಿಳಿದುಕೊಳ್ಳುತ್ತಾರೆ. ಆದರೆ ಇದು ಬಹಳ ವಂಡರ್‍ಫುಲ್ ವಿದ್ಯೆ ಆಗಿದೆ. ಈಗೀಗ ನಮಗೆ ಬೇಹದ್ದಿನ ನಿರಾಕಾರ ತಂದೆ ಓದಿಸಿ ರಾಜಯೋಗವನ್ನು ಕಲಿಸುತ್ತಿದ್ದಾರೆಂಬ ಪಕ್ಕಾ ನಿಶ್ಚಯವಿದೆ ಎಂದು ಹೇಳುತ್ತಾರೆ. ಆದರೆ ಈಗೀಗ ಒಂದುವೇಳೆ ಹೊರಗಡೆ ಹೋದರೆ ನಿಶ್ಚಯ ಸಮಾಪ್ತಿಯಾಗುತ್ತದೆ. ಇದು ಇಲ್ಲಿಯ ಆಶ್ಚರ್ಯದ ಮಾತಾಗಿದೆ. ಭಗವಂತ ಯಾರನ್ನು ಇಡೀ ವಿಶ್ವ ನೆನಪು ಮಾಡುತ್ತದೆ ಅವರೇ ಮಕ್ಕಳ ಸಮ್ಮುಖದಲ್ಲಿ ಕುಳಿತು ಹೇಳುತ್ತಾರೆ-ಈಗ ತಂದೆಯೊಂದಿಗೆ ಆಸ್ತಿ ಪಡೆಯುವಂತಹ ಉತ್ತಮ ಪುರುಷಾರ್ಥವನ್ನು ಮಾಡಿ. ಆದರೆ ಮಕ್ಕಳು ಒಂದು ಸೆಕೆಂಡಿನಲ್ಲಿ ಮರೆತು ಹೋಗುತ್ತೇವೆಂದು ಹೇಳುತ್ತಾರೆ. ನೀವು ಬೇಹದ್ದಿನ ತಂದೆಯ ಸಮ್ಮುಖದಲ್ಲಿ ಕುಳಿತಿದ್ದೀರಿ. ಹಾಗೂ ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತದಂತೆ ನಡೆಯಬೇಕಾಗುತ್ತದೆ. ಯಾರು ನಡೆಯುತ್ತಾರೆ, ಅವರ ಸಮಾಚಾರ ತಂದೆಗೆ ತಿಳಿಯುತ್ತದೆ. ಮಕ್ಕಳ ಆಗು-ಹೋಗುಗಳ ಸಮಾಚಾರ ತಂದೆಗೆ ತಿಳಿಯಬೇಕು. ತಂದೆಗೆ ಮಕ್ಕಳ ಸಮಾಚಾರ ತಿಳಿದರೆ ಆ ಸಮಯದಲ್ಲಿ ಏನು ಮಾಡಬೇಕೆಂದು ಸಲಹೆ ನೀಡುತ್ತಾರೆ. ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತವನ್ನು ತೆಗೆದುಕೊಳ್ಳಬೇಕು. ಇದು ಈಶ್ವರೀಯ ವಿಶ್ವ ವಿದ್ಯಾಲಯವಾಗಿದೆ. ಆದುದರಿಂದ ಇಲ್ಲಿ ಬಹಳ ಶ್ರದ್ದೆಯಿಂದ ಓದಬೇಕಾಗುತ್ತದೆ. ಇಂದು ಓದಿ ನಾಳೆ ಕಾರ್ಯ ನಿಮಿತ್ತ ಓದನ್ನು ನಿಲ್ಲಿಸಬಾರದು. ಈ ಕೆಲಸ ಕಾರ್ಯವು ನಯಾ ಪೈಸೆಯ ಕೆಲಸ ಕಾರ್ಯವಾಗಿದೆ. ಈ ಪ್ರಪಂಚದಲ್ಲಿ ಮನುಷ್ಯರು ಏನೆಲ್ಲಾ ಸಂಪಾದನೆ ಮಾಡುತ್ತಾರೆ, ಅದು ಅವಿನಾಶಿಯಾಗಿರುವಂತಹ ಸಂಪಾದನೆ ಅಲ್ಲ. ಅದೆಲ್ಲಾ ವಿನಾಶವಾಗುತ್ತದೆ. ತಂದೆ ಮಕ್ಕಳಗಾಗಿ ಸಂಪಾದನೆ ಮಾಡಿ, ಮಕ್ಕಳು, ಮೊಮ್ಮಕ್ಕಳು, ಮುಮ್ಮೊಕ್ಕಳಿಗಾಗುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಮತ್ತೆ ಮಗ ತಂದೆಯಾದರೆ ತನ್ನ ಮಕ್ಕಳಿಗಾಗಿ ಸಂಪಾದನೆ ಮಾಡಲು ಪ್ರಯತ್ನ ಪಡುತ್ತಾರೆ. ಈಗ ವಿನಾಶ ಮುಂದೆ ನಿಂತಿದೆ. ತಂದೆಗೆ ಮಕ್ಕಳ ದಿನಚರಿ ತಿಳಿದಿದ್ದರೆ ಸಲಹೆಯನ್ನು ಕೊಡುತ್ತಾರೆ. ಮಕ್ಕಳು ಹೆಜ್ಜೆ-ಹೆಜ್ಜೆಯಲ್ಲಿ ಸಲಹೆಯನ್ನು ಕೇಳಬೇಕು. ವಿಕರ್ಮವಾಗದಂತೆ ಗಮನವಿರಬೇಕು. ಇದು ಬೇಹದ್ದಿನ ಮನೆಯಾಗಿದೆ. ತಂದೆ ಕುಳಿತು ಈ ರೀತಿ ತಿಳಿಸಿಕೊಡುತ್ತಾರೆ-ಹೇಗೆ ಲೌಕಿಕ ತಂದೆಯು ಕುಳಿತು ತಿಳಿಸಿಕೊಡುವಂತೆ ತಿಳಿಸಿಕೊಡುತ್ತಿದ್ದಾರೆ. ನಾವು ಬ್ರಾಹ್ಮಣರೆಂದು ಎಲ್ಲಾ ಮಕ್ಕಳು ತಿಳಿದುಕೊಂಡಿದ್ದಾರೆ. ಭಗವಂತ ನಿಮಗೆ ಏನಾಗಬೇಕೆಂದು ಯಾರನ್ನಾದರೂ ಕೇಳಬೇಕು. ಅವರು ಪರಮಾತ್ಮನನ್ನು ಸರ್ವರ ಪಿತನೆಂದು ಹೇಳುತ್ತಾರೆ. ನಂತರ ಅವರು ಎಲ್ಲಿದ್ದಾರೆಂದು ಕೇಳಬೇಕು, ಆಗ ಅವರು ಸರ್ವವ್ಯಾಪಿ ಎಂದು ಹೇಳುತ್ತಾರೆ. ಬೇಹದ್ದಿನ ತಂದೆಯನ್ನು ತಿಳಿದುಕೊಂಡಿಲ್ಲ. ನೀವು ಈಗ ತಂದೆಯನ್ನು ಯಥಾರ್ಥವಾಗಿ ತಿಳಿದುಕೊಂಡಿದ್ದೀರಿ, ಆದರೆ ಈಗ ನೀವು ದೈವೀ ಮತದಂತೆ ನಡೆಯಬೇಕು. ತಂದೆ ದೇವೀ-ದೇವತೆಗಳನ್ನಾಗಿ ಮಾಡಲು ಬಂದಿದ್ದಾರೆ. ಆದುದರಿಂದ ಹೆಜ್ಜೆ-ಹೆಜ್ಜೆಯಲ್ಲಿ ಶ್ರೀಮತದಂತೆ ನಡೆಯಬೇಕು. ಯಾತ್ರೆಯಲ್ಲಿ ಮಾರ್ಗದರ್ಶಕರು ಬಹಳ ಗಮನದಿಂದ ಎಲ್ಲಾ ಯಾತ್ರಿಕರಿಗೆ ಎಚ್ಚರಿಕೆಯನ್ನು ಕೊಡುತ್ತಾರೆ. ತೀರ್ಥ ಯಾತ್ರೆ ಮೊದಲಾದವುಗಳನ್ನು ಒಪ್ಪಿಕೊಳ್ಳದವರೂ ಸಹ ಇದ್ದಾರೆ. ತೀರ್ಥ ಯಾತ್ರೆ ಅರ್ಥಾತ್ ಭಕ್ತಿಯಾಗಿದೆ. ತೀರ್ಥ ಯಾತ್ರೆಯನ್ನು ಒಪ್ಪಿಕೊಳ್ಳ್ಳದವರು ಭಕ್ತಿಯನ್ನು ಒಪ್ಪಿಕೊಳ್ಳದಂತೆ. ಅರ್ಧಕಲ್ಪ ಭಕ್ತಿ ಮಾರ್ಗ ನಡೆಯುತ್ತದೆ. ಭಗವಂತನನ್ನು ಹುಡುಕುತ್ತಾರೆ ಹಾಗೂ ಭಗವಂತನಿಗಾಗಿ ಬಹಳ ಭಾವನೆ ಇರುತ್ತದೆ. ಶಿವನ ಮುಂದೆ ಬಹಳಷ್ಟು ಭಕ್ತರು ಹೋಗುತ್ತಾರೆ. ಅವರಿಗೆ ಸಾಕ್ಷಾತ್ಕಾರವಾಗಬೇಕೆಂಬ ಭಾವನೆ ಇರುತ್ತದೆ. ನಂತರ ಅವರಿಗೆ ಸಾಕ್ಷಾತ್ಕಾರವಾದರೆ ಬಹಳ ಖುಷಿಯಿಂದ ನಮಗೆ ಭಗವಂತ ಅಥವಾ ಕೃಷ್ಣ ಅಥವಾ ಹನುಮಂತನ ದರ್ಶನವಾದಾಗ ನಮಗೆ ಇನ್ನೇನು ಮುಕ್ತಿ ದೊರೆಯಿತೆಂದು ತಿಳಿದುಕೊಳ್ಳುತ್ತಾರೆ, ಆದರೆ ಯಾರೂ ಸಹ ಆ ರೀತಿ ಮುಕ್ತಿಯನ್ನು ಪಡೆಯಲು ಸಾಧ್ಯವಿಲ್ಲ.

ಮಧುರ ಮಕ್ಕಳೇ ಒಬ್ಬ ತಂದೆಯ ಪರಿಚಯವನ್ನು ಕೊಡಿ ಎಂದು ತಂದೆ ಮಕ್ಕಳಿಗೆ ಕುಳಿತು ತಿಳಿಸುತ್ತಿದ್ದಾರೆ. ಈ ಸಮಯ ಎಲ್ಲರು ನಿಧನಿಕರಾಗಿದ್ದಾರೆ, ನೀವೂ ಸಹ ನಿಧನಿಕರಾಗಿದ್ದವರು ತಂದೆಯ ಮೂಲಕ ಎಲ್ಲವನ್ನು ತಿಳಿದುಕೊಳ್ಳುತ್ತಿದ್ದೀರಿ. ನಾವು ನೀಚರು ಪಾಪಿಗಳೆಂದು ಹೇಳುತ್ತೀರಲ್ಲವೆ! ಈ ರೀತಿ ನೀಚರನ್ನಾಗಿ ಯಾರು ಮಾಡಿದರು? ಇದನ್ನು ಯಾರೂ ಸಹ ತಿಳಿದುಕೊಂಡಿಲ್ಲ. ಆದರೆ ತಮ್ಮನ್ನು ಮೂರ್ಖರೆಂದು ಯಾರೂ ತಿಳಿದುಕೊಂಡಿಲ್ಲ. ಈ ನಾಟಕ ಅನಾದಿಯಾಗಿ ಮಾಡಲ್ಪಟ್ಟಿದೆ. ನಾಟಕದ ಅನುಸಾರವಾಗಿ ಎಲ್ಲರೂ ಜನ್ಮಗಳನ್ನು ತೆಗೆದುಕೊಳ್ಳುತ್ತಾ ಕೆಳಗೆ ಇಳಿದು ಭ್ರಷ್ಟಾಚಾರಿಗಳು ಆಗಲೇಬೇಕು. ನಾವು ಈಶ್ವರನ ಪರಿವಾರದವರೆಂದು ಯೋಚಿಸಬೇಕು. ಭಗವಂತ ನಮ್ಮ ತಂದೆ ಆಗಿದ್ದಾರೆ. ಅವರು ನಮ್ಮನ್ನು ಅಗತ್ಯವಾಗಿ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಹಾಗಾದರೆ ನಾವು ಈ ರೀತಿ ದುರ್ಗತಿಯಲ್ಲಿ ಏಕೆ ಬಂದೆವು? ಇದು ಯಾರ ಬುದ್ದಿಯಲ್ಲಿ ಬರುವುದಿಲ್ಲ. ಒಂದುಕಡೆ ಪರಮಾತ್ಮ ಸರ್ವವ್ಯಾಪಿ ಎಂದು ಹೇಳುತ್ತಾರೆ, ಮತ್ತೊಂದು ಕಡೆ ಶಾಂತಿ ಹೇಗೆ ಸ್ಥಾಪನೆಯಾಗುತ್ತ್ತದೆ ಎಂದು ಗೊಂದಲವಾಗುತ್ತಾರೆ. ಶಾಂತಿಗಾಗಿ ಸಮ್ಮೇಳನಗಳನ್ನೂ ಸಹ ಮಾಡುತ್ತಿರುತ್ತಾರೆ. ತಿಳಿಸಿಕೊಟ್ಟರು ಇವರು ತಿಳಿದುಕೊಳ್ಳುವುದಿಲ್ಲ. ಅಂತ್ಯದವೇಳೆಗೆ ತಿಳಿದುಕೊಳ್ಳುತ್ತಾರೆ. ನೀವು ಮಕ್ಕಳು ತಂದೆ ನೆನಪಲ್ಲಿದ್ದು ಕರ್ಮಾತೀತರಾಗಬೇಕು. ನೀವೇ ಸಂಪೂರ್ಣ ನಿರ್ವಿಕಾರಿಗಳಿದ್ದವರು ಈಗ ಪುನಃ ಆಗಬೇಕಾಗಿದೆ. ಈಗ ಇರುವ ಅನೇಕ ಧರ್ಮಗಳು ಸತ್ಯಯುಗದಲ್ಲಿ ಬರುವುದಿಲ್ಲ. ಯಾರು ಸತ್ಯಯುಗದಲ್ಲಿ ಇದಂತವರೇ ಪರಮಾತ್ಮನಿಂದ ಬಹಳ ಸಮಯ ಅಗಲಿ ಹೋಗುತ್ತಾರೆ. ಆ ಮಕ್ಕಳಗಾಗಿ ತಂದೆಯು ಅಗಲಿ ಹೋಗಿ ಸಿಕ್ಕಿರುವ ಮಕ್ಕಳೆಂದು ಕರೆಯುತ್ತಾರೆ. ಆತ್ಮ ಪರಮಾತ್ಮ ಬಹಳ ಕಾಲ ಅಗಲಿ ಹೋಗಿದ್ದೆರೆಂದು ಹೇಳುತ್ತಾರೆ-ಆದರೆ ಯಾವ ಆತ್ಮಗಳು ಮೊದಲು ಪರಮಧಾಮದಿಂದ ಅಗಲಿ ಹೋಗುತ್ತಾರೆ. ಮೊಟ್ಟ ಮೊದಲು ದೇವೀ-ದೇವತಾ ಆತ್ಮಗಳು ಪಾತ್ರ ಮಾಡಲು ಬರುತ್ತಾರೆ. ಅವರನ್ನೇ ತಮ್ಮ ಧರ್ಮದಲ್ಲಿ ಪರಿವರ್ತನೆ ಮಾಡಬೇಕಾಗುತ್ತದೆ. ತಂದೆ ಅವರಿಗಾಗಿ (ದೇವೀ-ದೇವತೆಗಳಿಗೆ) ಬರಬೇಕಾಗುತ್ತದೆ. ಅವರ ಜೊತೆಯಲ್ಲಿ ಎಲ್ಲರಿಗಾಗಿಯೂ ಸಹ ಬರಬೇಕಾಗುತ್ತದೆ, ಏಕೆಂದರೆ ಎಲ್ಲರಿಗೂ ಮುಕ್ತಿ ಕೊಡಬೇಕಾಗಿದೆ. ಈಗ ಆ ದೇವೀ-ದೇವತಾ ಧರ್ಮ ಇಲ್ಲದಂತಾಗಿದ್ದು, ಈಗ ಆ ದೇವೀ-ದೇವತಾ ಧರ್ಮ ಸ್ಥಾಪನೆ ಮಾಡಬೇಕು. ಒಬ್ಬೊಬ್ಬರು ಒಂದೊಂದು ಧರ್ಮದಲ್ಲಿ ಪರಿವರ್ತನೆ ಆಗಿದ್ದಾರೆ. ಅವರೇ ಮರಳಿ ತಮ್ಮ ಧರ್ಮಕ್ಕೆ ಬರುತ್ತಾರೆ. ಇದು ಈ ಧರ್ಮ ಸ್ಥಾಪನೆ ಬಹಳ ವಂಡರ್‍ಫುಲ್ ಆಗಿದೆ. ಆದುದರಿಂದ ಹೇ ಪ್ರಭು ನಿನ್ನ ಶ್ರೀಮತವಿರುವ ಗತಿ ಸದ್ಗತಿಯು ಬಹಳ ವಿಚಿತ್ರವಾಗಿದೆ ಎಂದು ಹೇಳುತ್ತಾರೆ. ಇದನ್ನು ಯಾರೂ ಸಹ ತಿಳಿದುಕೊಳ್ಳಲು ಆಗುವುದಿಲ್ಲ. ದೇವೀ-ದೇವತಾ ಧರ್ಮದ ಸ್ಥಾಪನೆ ಹೇಗೆ ಆಗುತ್ತದೆ! ಇದುವರೆಗೆ ಯಾರು ಪತಿತ ದೇಹಾಭಿಮಾನದಲ್ಲಿದ್ದರು, ಅವರನ್ನು ಪುನಃ ಆತ್ಮಾಭಿಯನ್ನಾಗಿ ಮಾಡುವುದು ಬಹಳ ಶ್ರಮವಾಗುತ್ತದೆ. ಏಕೆಂದರೆ ಮತ್ತೆ-ಮತ್ತೆ ಮರೆತು ಹೋಗುತ್ತಾರೆ. ತಂದೆಯು ಏಳುತ್ತಾ, ಕುಳಿತುಕೊಳ್ಳುತ್ತಾ ನನ್ನನ್ನು ನೆನಪು ಮಾಡಿ ಎಂದು ಹೇಳುತ್ತಾರೆ. ನಿಮ್ಮ ಮೇಲೆ ಬಹಳ ವಿಕರ್ಮದ ಹೊರೆಯಿದೆ. ಹೆಚ್ಚು ಸುಖ ಹಾಗೂ ಹೆಚ್ಚು ದುಃಖವನ್ನು ನೋಡುತ್ತಾರೆ. ಈಗ ನಿಮ್ಮನ್ನು ಪುನಃ ದುಃಖದಿಂದ ಸುಖದ ಕಡೆ ಕರೆದುಕೊಂಡು ಹೋಗುತ್ತಿದ್ದೇನೆ. ಅದಕ್ಕಾಗಿ ನೀವು ಶ್ರೀಮತದಂತೆ ನಡೆಯುತ್ತಾ ಬೇರೆಯವರಿಗೂ ಸಹ ನೆನಪನ್ನು ಮಾಡಿಸಬೇಕು. ಸೃಷ್ಟಿ ಚಕ್ರದ ರಹಸ್ಯವನ್ನು ತಿಳಿಸಿಕೊಡುವುದು ಬಹಳ ಸಹಜವಾಗಿದೆ. ಅದನ್ನೇ ತ್ರಿಕಾಲದರ್ಶಿ ಎಂದು ಕರೆಯಲಾಗುತ್ತದೆ.

ಭಗವಂತ ಸ್ವರ್ಗದ ರಚಯಿತ ಆಗಿದ್ದು ಅವರಿಂದ ಸ್ವರ್ಗದ ಆಸ್ತಿ ಸಿಗುತ್ತದೆ. ಈ ಮಾತನ್ನು ನೀವು ಮಾತ್ರ ತಿಳಿದುಕೊಂಡಿರುವ ಕಾರಣ ಯಾರನ್ನಾದರು ಕೇಳಬಹುದು. ಈಶ್ವರನೇ ಜನ್ಮ ಕೊಟ್ಟಿದ್ದಾರೆಂದು ಹೇಳುತ್ತಾರೆ, ಹಾಗಾದರೆ ಈಶ್ವರನಿಗೆ ಅಧಿಕಾರಿ ಮಕ್ಕಳಾಗಬೇಕಲ್ಲವೆ. ಈಶ್ವರ ತಂದೆ ಸ್ವರ್ಗದ ರಚಯಿತನಾಗಿರುವಾಗ ನೀವು ನರಕದಲ್ಲಿ ಹೇಗೆ ಇರುತ್ತೀರಿ. ಏಕೆಂದರೆ ನಾವು ಮೊದಲು ಸ್ವರ್ಗದಲ್ಲಿದ್ದೆವೆಂದು ನೀವು ತಿಳಿದಿದ್ದೀರಿ. ಈಗ ರಾವಣ ನಮ್ಮನ್ನು ನರಕದಲ್ಲಿ ಬಂಧಿಸಿದ್ದಾನೆ. ಆದರೆ ರಾವಣ ಅಂದರೆ ಎಂತಹ ವಸ್ತು ಆಗಿದ್ದಾನೆಂದು ಯಾರೂ ಸಹ ತಿಳಿದುಕೊಂಡಿಲ್ಲ. ಭಾರತವು ಪ್ರಾಚೀನ ಸ್ವರ್ಗವಾಗಿತ್ತು ಹಾಗೂ ಭಾರತವಾಸಿಗಳು ಸ್ವರ್ಗದ ಮಾಲೀಕರಾಗಿದ್ದರು ಈಗ ಭಾರತ ನರಕವಾಗಿದೆ. ಈ ಆಟವೂ ಸಹ ಇದೇ ರೀತಿ ಮಾಡಲ್ಪಟ್ಟಿದೆ. ರಾಮರಾಜ್ಯ ಹಾಗೂ ರಾವಣರಾಜ್ಯ ಅರ್ಧ-ಅರ್ಧ ಸಮಯವಿರುತ್ತದೆ. ಇದು ಆಟವಾಗಿದೆ. ಈ ಇಬ್ಬರ ಮಧ್ಯದಲ್ಲಿ ಮತ್ತೆ ಏನಾಗುತ್ತದೆ ಎಂದು ತಂದೆಯು ವಿಸ್ತಾರವನ್ನು ತಿಳಿಸುತ್ತಿದ್ದಾರೆ. ಕೆಲವು ನಿಶ್ಚಯ ಬುದ್ದಿ ಮಕ್ಕಳು ನಾವು ತಂದೆಯ ಮುಂದೆ ಕುಳಿತಿದ್ದೇವೆಂದು ತಿಳಿದುಕೊಳ್ಳುತ್ತಾರೆ. ತಂದೆ ತ್ರಿನೇತ್ರಿ, ತ್ರಿಕಾಲದರ್ಶಿ, ತ್ರಿಮೂತ್ರ್ರಿ, ಬ್ರಹ್ಮಾ, ವಿಷ್ಣು, ಶಂಕರರ ರಚಯಿತ ಆಗಿದ್ದಾರೆ. ತ್ರಿಮೂರ್ತಿ ಶಿವನಿಗೆ ಬದಲಾಗಿ ತ್ರಿಮೂರ್ತಿ ಬ್ರಹ್ಮಾ ಎಂದು ಹೆಸರು ಇಟ್ಟಿದ್ದಾರೆ. ಈಗ ತ್ರಿಮೂರ್ತಿಗಳ ರಚಯಿತ ಬ್ರಹ್ಮಾ ಹೇಗೆ ಆಗಿದ್ದಾರೆ? ಬ್ರಹ್ಮನಿಂದ ಸ್ಥಾಪನೆ, ಶಂಕರನಿಂದ ವಿನಾಶ ಎಂದು ಹೇಳುವಾಗ, ಅಗತ್ಯವಾಗಿ ರಚಯಿತ ಬೇರೆಯವರಾಗಿರಬೇಕು. ಇಷ್ಟೊಂದು ಚಿಕ್ಕ ಮಾತನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ಶಿವ ತಂದೆಯು ಬ್ರಹ್ಮನ ಮೂಲಕ ಸ್ವರ್ಗದ ಆಸ್ತಿಯನ್ನಲ್ಲದೆ ಬೇರೇನು ಕೊಡುತ್ತಾರೆ! ವಿಷ್ಣು ಪುರಿಯನ್ನು ಯಾರು ಸ್ಥಾಪನೆ ಮಾಡುತ್ತಾರೆ. ಬ್ರಹ್ಮಾ ವಿಷ್ಣು ಪುರಿ ಅರ್ಥಾತ್ ಲಕ್ಷ್ಮೀ-ನಾರಾಯಣರ ರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದಾರೆ. ಇದು ಯಾರಿಗೂ ತಿಳಿದಿರುವುದಿಲ್ಲ. ವಿಷ್ಣುವಿನ ಚಿತ್ರವನ್ನು ಬೇರೆಯಾಗಿ ಮಾಡಿ ನಾರಾಯಣನೆಂದು ಕರೆಯುತ್ತಾರೆ ಹಾಗೂ ಲಕ್ಷ್ಮೀ-ನಾರಾಯಣರನ್ನು ಬೇರೆ-ಬೇರೆಯಾಗಿ ಮಾಡಿದ್ದಾರೆ. ಆ ಚಿತ್ರವನ್ನು ಬಹಳ ವಿಚಿತ್ರವಾಗಿ ಮಾಡಿದ್ದಾರೆ.

ನೀವು ಮಕ್ಕಳು ಪ್ರದರ್ಶನದಲ್ಲಿ ತಿಳಿಸಿಕೊಡಬೇಕಾಗುತ್ತದೆ. ಒಂದುವೇಳೆ ಪ್ರದರ್ಶನ ನಡೆಯುತ್ತಿದ್ದು ಮಕ್ಕಳು ತಮ್ಮದೇ ಕೆಲಸದಲ್ಲಿ ಬಿಜಿ ಇದ್ದಾಗ ಅವರಿಗೆ ತಂದೆಯನ್ನು ಅರ್ಥ ಮಾಡಿಕೊಂಡಿರುವ ಮಕ್ಕಳೆಂದು ತಿಳಿದುಕೊಳ್ಳುವುದಿಲ್ಲ. ಸ್ವಯಂ ಇವರೇ ಪೂರ್ತಿ ತಿಳಿದುಕೊಂಡಿಲ್ಲವಾದ್ದರಿಂದ ಇವರು ಸೇವೆಯಲ್ಲಿ ಉತ್ಸಾಹವನ್ನು ಇಟ್ಟುಕೊಂಡಿಲ್ಲವೆಂದು ತಂದೆ ತಕ್ಷಣ ತಿಳಿದುಕೊಳ್ಳುತ್ತಾರೆ. ಎಲ್ಲಿಯವರೆಗೆ ತಂದೆಯನ್ನು ಅರ್ಥ ಮಾಡುಕೊಳ್ಳುವುದಿಲ್ಲ, ಅಲ್ಲಿಯವರೆಗೆ ಅವರನ್ನು ಸೇವೆಯಲ್ಲಿ ಹೋಗಿ ಎಂದು ಹೇಳಬಾರದು. ಸ್ವಯಂ ರುಚಿಯಿಂದ ತಂದೆಯ ಸೇವೆಯನ್ನು ಮಾಡಬೇಕು. ಕುರುಡರಿಗೆ ಊರುಗೋಲು ಆಗದೆ ಇದ್ದಾಗ ಅವರನ್ನು ಕುರಡರೆಂದು ಕರೆಯಲಾಗುವುದು. ಸ್ವ-ಇಚ್ಚೆಯಿಂದ ನಾವು ಸೇವೆಯಲ್ಲಿ ಹೋಗುತ್ತೇವೆಂದು ತಂದೆಯಿಂದ ಅನುಮತಿ ಪಡೆಯಬೇಕು. ಯಾರು ಯಾರು ಸೇವೆ ಮಾಡುತ್ತಾರೆಂದು ತಂದೆಯೂ ಸಹ ತಿಳಿದುಕೊಂಡಿದ್ದಾರೆ, ಬಾಬಾ ನಾವು ಸೇವೆಗೆ ತಯಾರಾಗಿದ್ದೇವೆಂದು ಯಾರೂ ಸಹ ಬರೆಯುವುದಿಲ್ಲ. ಮನುಷ್ಯರನ್ನು ಕವಡೆಯಿಂದ ವಜ್ರ ಸಮಾನ ಮಾಡಬೇಕು. ಈ ರೀತಿ ಸೇವೆಗಾಗಿ 10-20-50 ರೂಪಾಯಿಯನ್ನು ಸಂಪಾದನೆ ಮಾಡಲಿಲ್ಲವೆಂದರೆ ಏನಾಯಿತು? ಅನೇಕರ ಕಲ್ಯಾಣ ಮಾಡಬೇಕು. ಆದರೆ ಸ್ವಯಂ ತಂದೆಯನ್ನು ಯಥಾರ್ಥವಾಗಿ ತಿಳಿದುಕೊಳ್ಳಬೇಕು. ತಂದೆಯನ್ನು ಕೋಟಿಯಲ್ಲಿ ಕೆಲವರು ಮಾತ್ರ ತಿಳಿದುಕೊಳ್ಳುತ್ತಾರೆ. ತಂದೆಯ ಬಳಿ ಸೇವಾಧಾರಿಗಳು ಬಹಳ ಕಡಿಮೆ ಇದ್ದಾರೆ, ಸೇವಾಧಾರಿಗಳನ್ನು ಟೆಲಿಗ್ರಾಮ್ ಮಾಡಿ ಕರೆಸಿಕೊಳ್ಳಬೇಕಾಗುತ್ತದೆ. ಸ್ವ ಇಚ್ಚೆಯಿಂದ ನಾವು ಸೇವೆಗೆ ತಯಾರಾಗಿದ್ದೇವೆಂದು ಹೇಳುವುದಿಲ್ಲ. ತಂದೆಯೂ ಸಹ ಸೇವೆಯಲ್ಲಿ ಆಸಕ್ತಿ ಇರುವ ಮಕ್ಕಳನ್ನು ನೋಡುತ್ತಾರೆ. ಪ್ರಾಣಿ ಸಮಾನ ಇರುವ ಮನುಷ್ಯರನ್ನು ದೇವತೆಗಳನ್ನಾಗಿ ಮಾಡಬೇಕು. ನೀವು ಮಕ್ಕಳು ನಿರಹಂಕಾರಿ ಆಗಬೇಕು. ಮುಖ್ಯಸ್ಥರಲ್ಲಿ ಬಹಳ ನಮ್ರತೆ ಇರಬೇಕು. ತಂದೆ ಎಷ್ಟೊಂದು ನಿರಹಂಕಾರಿಯಾಗಿದ್ದಾರೆ, ಆದರೆ ಕೆಲವು ಮಕ್ಕಳಲ್ಲಿ ಬಹಳ ಅಹಂಕಾರವಿರುತ್ತದೆ. ನಾನೇನು ಕರ್ಮ ಮಾಡುತ್ತೇನೆ, ನನ್ನನ್ನು ನೋಡಿ ಇತತರರು ಮಾಡುತ್ತಾರೆ. ಅದರ ಪ್ರತಿಫಲ ಅವರ ಸ್ಥಿತಿಯು ಬಲಹೀನವಾಗುತ್ತದೆ. ಮಕ್ಕಳೇ ಎಲ್ಲವನ್ನು ನಿಮ್ಮ ಕೈಯಿಂದ ನೀವೇ ಮಾಡಿಕೊಳ್ಳಬೇಕೆಂದು ತಂದೆ ಹೇಳುತ್ತಾರೆ. ತಂದೆ ಎಷ್ಟೊಂದು ಸಾಧಾರಣವಾಗಿ ಓದಿಸುತ್ತಿದ್ದಾರೆ. ಮನುಷ್ಯರು ಪರಮಾತ್ಮನನ್ನು ಸರ್ವ ಶಕ್ತಿವಂತನೆಂದು ತಿಳಿದು ಅವರು ಏನು ಬೇಕಾದರೂ ಮಾಡುತ್ತಾರೆಂದು ತಿಳಿದುಕೊಳ್ಳುತ್ತಾರೆ. ಆದರೆ ತಂದೆಯೂ ನಾನು ಸೇವಕನಾಗಿ ಮಕ್ಕಳ ಸೇವೆಯಲ್ಲಿ ಬರುತ್ತೇನೆಂದು ತಿಳಿಸುತ್ತಾರೆ. ಹೇ! ಜ್ಞಾನ ಸಾಗರ, ಪತಿತ ಪಾವನ ಬಾ ಎಂದು ಕರೆಯುತ್ತಾರೆ. ಹೇ ಸುಖ ಸಾಗರ ತಂದೆಯೇ ಬಾ, ಬಂದು ನಮ್ಮನ್ನು ಪಾವನ ಮಾಡು ಎಂದು ಕರೆಯುತ್ತಾರೆ. ಆದುದರಿಂದ ತಂದೆಯು ಬಂದು ಮಕ್ಕಳ ಸೇವೆಯನ್ನು ಮಾಡಬೇಕಾಗುತ್ತದೆ. ತಂದೆಯು ಒಮ್ಮೊಮ್ಮೆ ಸಾಧಾರಣ ಸ್ಥಾನಗಳಲ್ಲಿ ಇರಬೇಕಾಗುತ್ತದೆ. ಎಂತೆಂತಹ ವಿಘ್ನಗಳು ಬರುತ್ತಿದ್ದವು, ಲಾಕಾ ಭವನ್‍ಗೂ ಸಹ ಬೆಂಕಿ ಇಟ್ಟರು. ಎಲ್ಲವೂ ಪ್ರತ್ಯಕ್ಷವಾಗಿ ಕಣ್ಮುಂದೆ ನಡೆಯುತ್ತಿತ್ತು. ತಂದೆಯು ನಾಟಕದಲ್ಲಿ ಎಲ್ಲರ ಪಾತ್ರವನ್ನು ತಿಳಿದುಕೊಂಡಿದ್ದಾರೆ, ಆದರೆ ನಾವು ತಿಳಿದುಕೊಂಡಿಲ್ಲ. ಆದುದರಿಂದ ನಾನು ಬರಬೇಕಾಗುತ್ತದೆಂದು ತಂದೆ ತಿಳಿಸುತ್ತಾರೆ. ಸ್ವಯಂ ಭಗವಂತ ಹೇಳುತ್ತಾರೆ-ನಾನೂ ಸಹ ಅಪಶಬ್ದಗಳನ್ನು ಕೇಳಬೇಕಾಗಿದೆ. ಎಲ್ಲರಿಗಿಂತ ಅಧಿಕವಾಗಿ ನಾನು ನಿಂದನೆಯನ್ನು ಕೇಳುತ್ತೇನೆ. ಭಕ್ತಿ ಮಾರ್ಗದಲ್ಲಿಯೂ ಸಹ ನನ್ನನ್ನು ನಿಂದನೆ ಮಾಡಿದ್ದೀರಿ. ಮೂರು ಹೆಜ್ಜೆ ಭೂಮಿಯೂ ಸಹ ನನಗೆ ಸಿಗುವುದಿಲ್ಲ. ಆದರೂ ಸಹ ನಾನು ಎಷ್ಟೊಂದು ನಿರಹಂಕಾರಿಯಾಗಿ ಪಾತ್ರ ಮಾಡುತ್ತಿದ್ದೇನೆ? ಮಮ್ಮಾ ಬಾಬಾ ಮಕ್ಕಳಿಗೆ ಕಲಿಸುವ ಸಲುವಾಗಿ ಎಲ್ಲವನ್ನು ಮಾಡುತ್ತೇನೆ. ನಾನು ಎಷ್ಟೊಂದು ಸಾಧಾರಣವಾಗಿ ಇರಬೇಕಾಗುತ್ತದೆ. ನಾನು ಪತಿತರನ್ನು ಪಾವನ ಮಾಡಬೇಕು ಹಾಗೂ ಮಲೀನ ವಸ್ತ್ರಗಳನ್ನು ಶುದ್ಧ ಮಾಡುವ ದೋಬಿ (ಅಗಸ) ಆಗಿದ್ದೇನೆ. ಅಕ್ಕಸಾಲಿಗನಾಗಿದ್ದೇನೆ, ಎಲ್ಲರನ್ನು ಕರಿಗಿಸಿ ಸತ್ಯ ಚಿನ್ನವನ್ನಾಗಿ ಮಾಡುತ್ತೇನೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್‍ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆ ಸಮಾನ ನಿರಹಂಕಾರಿ, ನಮ್ರಚಿತ್ತರಾಗಬೇಕು. ತಮ್ಮ ಸೇವೆಯನ್ನು ತಮ್ಮ ಕೈಯಿಂದ ಮಾಡಿಕೊಳ್ಳಬೇಕು. ಯಾವುದೇ ಮಾತಿನಲ್ಲಿ ಅಹಂಕಾರ ತೋರಿಸಬಾರದು.

2. ಸೇವೆಗಾಗಿ ಸದಾ ತಯಾರಾಗಿರಬೇಕು. ಸೇವೆಗಾಗಿ ಸ್ವಯಂ ತಾವೇ ಮುನ್ನುಗ್ಗಬೇಕು. ಕವಡೆ ಸಮಾನ ಮನುಷ್ಯರನ್ನು ವಜ್ರ ಸಮಾನ ಮಾಡುವಂತಹ ಸೇವೆ ಮಾಡಬೇಕು.

ವರದಾನ:-

ಯಾರು ಸದಾ ಸಂಪನ್ನವಾಗಿರುತ್ತಾರೆಯೋ ಅವರು ತೃಪ್ತರಾಗಿರುತ್ತಾರೆ. ಅವರ ಮುಂದೆ ಭಲೆ ಯಾರೆಷ್ಟಾದರೂ ಅಸಂತುಷ್ಟಗೊಳಿಸುವ ಪರಿಸ್ಥಿತಿಗಳನ್ನು ತರಬಹುದು ಆದರೆ ಸಂಪನ್ನ, ತೃಪ್ತಾತ್ಮವು ಅಸಂತುಷ್ಟಗೊಳಿಸುವವರನ್ನೂ ಸಂತುಷ್ಟತೆಯ ಗುಣವನ್ನು ಸಹಯೋಗದ ರೂಪದಲ್ಲಿ ಕೊಡುತ್ತಾರೆ. ಇಂತಹ ಆತ್ಮರೇ ದಯಾಹೃದಯಿಯಾಗಿದ್ದು ಶುಭಭಾವನೆ ಹಾಗೂ ಶುಭ ಕಾಮನೆಯ ಮೂಲಕ ಅವರನ್ನೂ ಪರಿವರ್ತನೆ ಮಾಡುವ ಪ್ರಯತ್ನ ಮಾಡುವರು. ಆತ್ಮಿಕ ರಾಯಲ್ ಆತ್ಮದ ಶ್ರೇಷ್ಠ ಕರ್ಮವು ಇದೇ ಆಗಿರುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top