08 March 2022 KANNADA Murli Today | Brahma Kumaris
Read and Listen today’s Gyan Murli in Kannada
7 March 2022
Morning Murli. Om Shanti. Madhuban.
Brahma Kumaris
ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.
“ಮಧುರ ಮಕ್ಕಳೇ - ಒಬ್ಬ ತಂದೆ ಜೊತೆಯಲ್ಲಿ ಸತ್ಯ-ಸತ್ಯ ಪ್ರೀತಿ ಇಟ್ಟುಕೊಳ್ಳಿ, ಅವರ ಮತದಂತೆ ನಡೆಯುವದರಿಂದ ಎಲ್ಲಾ ಮಿತ್ರ ಸಂಬಂಧಿ ಮೊದಲಾದವರಿಂದ ಮಮತೆ (ಮೋಹ) ದೂರವಾಗುತ್ತದೆ”
ಪ್ರಶ್ನೆ:: -
ಯಾವ ಶಬ್ದವನ್ನು ತಂದೆ ವಿನಃ ಯಾವ ಮನುಷ್ಯನು ಸಹ ಹೇಳಲು ಸಾಧ್ಯವಿಲ್ಲ?
ಉತ್ತರ:-
ನಾನು ಆತ್ಮಗಳ ತಂದೆ ನಿಮಗೆ ಓದಿಸಲು ಬಂದಿದ್ದೇನೆ, ನಾನು ನಿಮ್ಮನ್ನು ನನ್ನ ಜೊತೆ ಹಿಂತಿರುಗಿ ಕರೆದೊಯ್ಯುತ್ತೇನೆ. ಈ ಶಬ್ದವನ್ನು ತಂದೆ ವಿನಃ ಯಾವ ಮನುಷ್ಯನಲ್ಲಿ ಹೇಳುವ ಶಕ್ತಿಯಿಲ್ಲ. ಈ ಹೊಸ ಜ್ಞಾನ ಹೊಸ ಪ್ರಪಂಚದ ಸಲುವಾಗಿ, ಸ್ವಯಂ ಆತ್ಮಿಕ ತಂದೆ ನಮಗೆ ಓದಿಸುತ್ತಿದ್ದಾರೆ, ನಾವು ಈಶ್ವರೀಯ ವಿದ್ಯಾರ್ಥಿಗಳಾಗಿದ್ದೇವೆ-ಎಂಬ ನಿಶ್ಚಯ ನಿಮಗೆ ಇದೆ.
♫ ಕೇಳು ಇಂದಿನ ಮುರ್ಲಿ (audio)➤
ಗೀತೆ:-
ಭೋಲಾನಾಥನಿಗಿಂತ ಭಿನ್ನ ವಾದವರು…..
ಓಂ ಶಾಂತಿ. ಮಕ್ಕಳಿಗೆ ಸದಾ ಕೊಡುವಂತಹವರು ಸಾಮಾನ್ಯವಾಗಿ ತಂದೆ ಆಗಿರುತ್ತಾರೆ. ಒಬ್ಬ ತಂದೆ ಐದು-ಎಂಟು ಮಕ್ಕಳಿಗೆ ಆಸ್ತಿ ಕೊಡುವಂತಹ ಹದ್ದಿನ ತಂದೆ ಆಗಿದ್ದಾರೆ. ಸರ್ವರ ಬೇಹದ್ದಿನ ತಂದೆ ಒಬ್ಬರೇ ಆಗಿದ್ದು ಬೇಹದ್ದಿನ ಆಸ್ತಿ ಕೊಡುತ್ತಾರೆ. ಲೌಕಿಕ ತಂದೆಯರಂತು ಅನೇಕರಿದ್ದಾರೆ. ಇವರಿಗೆ ಅನೇಕ ಮಕ್ಕಳಿದ್ದು ಎಲ್ಲಾ ಮಕ್ಕಳಿಗೆ ತಂದೆ ಆಗಿದ್ದಾರೆ. ಬ್ರಹ್ಮಾ, ವಿಷ್ಣು, ಶಂಕರನಿಗೆ ತಂದೆ ಎಂದು ಹೇಳುವುದಿಲ್ಲ. ಶಂಕರನ ಕರ್ತವ್ಯ ಬೇರೆ ಆಗಿದೆ. ಅವರು ಕೊಡುವಂತಹ ದಾತನಲ್ಲ. ಒಬ್ಬ ನಿರಾಕಾರ ತಂದೆ ದಾತನಿಂದ ಆಸ್ತಿ ಸಿಗುತ್ತದೆ. ಅವರು ಶ್ರೇಷ್ಠಾತಿ ಶ್ರೇಷ್ಠ ಮೂಲವತನದಲ್ಲಿ ಇರುವಂತಹ ಪರಮಪಿತ ಆಗಿದ್ದಾರೆ. ತಿಳಿಸಿಕೊಡುವಾಗ ಬಹಳ ಯುಕ್ತಿಯಿಂದ ತುಂಬಾ ಮಧುರವಾಗಿ ತಿಳಿಸಿಕೊಡಬೇಕು. ಕಾಮ ಮಹಾಶತ್ರುವಾಗಿದೆ. ಇದರ ಮೇಲೆ ವಿಜಯಿಗಳಾಗಬೇಕು. ಕನ್ಯೆಯರು ಸ್ವತಂತ್ರವಾಗಿರುತ್ತಾರೆ. ಅನೇಕ ಮನುಷ್ಯರು ಬ್ರಹ್ಮಚರ್ಯದಲ್ಲಿ ಇರುವುದನ್ನು ಇಷ್ಟ ಪಡುವಂತಹವರೂ ಸಹ ಇರುತ್ತಾರೆ. ವಿಕಾರಿ ಪರಿವಾರದಲ್ಲಿ ಹೋಗಲು ಇಷ್ಟ ಪಡದೆ ದೂರ ಇರುತ್ತಾರೆ, ದೂರ ಇರಲು ಅಭ್ಯಂತರಯೇನೂ ಇಲ್ಲ. ಕನ್ಯೆಯರ ಕನ್ಯೆಯ್ಯನೆಂದು ತಂದೆಯು ಪ್ರಖ್ಯಾತವಾಗಿದ್ದಾರೆ. ಕೃಷ್ಣ ಕನ್ಯೆಯರ ತಂದೆಯಲ್ಲ, ಕನ್ಯೆಯರು ಅರ್ಥಾತ್ ಬ್ರಹ್ಮಾಕುಮಾರಿಯರಾಗಿದ್ದಾರೆ. ಕೃಷ್ಣ ಕುಮಾರಿಯರಲ್ಲ. ಕೃಷ್ಣನಿಗೆ ಪ್ರಜಾಪಿತನೆಂದು ಹೇಳುವುದಿಲ್ಲ. ಇಲ್ಲಿ ಕನ್ಯೆಯರು, ಮಾತೆಯರು ಬಹಳ ಸಹನೆ ಮಾಡಿಕೊಳ್ಳಬೇಕಾಗುತ್ತದೆ. ಆದರೂ ಸಹ ಸ್ವಚ್ಚ ಮನಸ್ಸಿರಬೇಕಾಗುತ್ತದೆ. ಬುದ್ದಿಯ ಸಂಬಂಧ ಒಬ್ಬ ತಂದೆಯ ಜೊತೆ ಇದ್ದಾಗ ಅನೇಕರೊಂದಿಗಿನ ಸಂಬಂಧ ತಾನೆ ತಾನಾಗಿ ದೂರವಾಗುತ್ತದೆ. ಒಬ್ಬ ತಂದೆಗೆ ಮಗುವಾಗಿ ಅವರ ಮತದಂತೆ ನಡೆಯಬೇಕೆಂಬ ಪಕ್ಕಾ ನಿಶ್ಚಯವಿರಬೇಕು. ನೀವು ತಮ್ಮ ಪತಿಗೂ ಸಹ ಈಗ ಕೃಷ್ಣಪುರಿ ಸ್ಥಾಪನೆ ಆಗುತ್ತಿದೆಯೆಂದು ತಿಳಿಸಿಕೊಡಬೇಕೆಂದು ತಂದೆ ತಿಳಿಸಿದ್ದಾರೆ. ಕಂಸಪುರಿ ವಿನಾಶಕ್ಕಾಗಿ ತಯಾರಿ ಆಗುತ್ತಿದೆ, ಒಂದುವೇಳೆ ಕೃಷ್ಣಪುರಿಗೆ ಹೋಗಬೇಕೆಂದರೆ ವಿಕಾರಗಳನ್ನು ಬಿಡಬೇಕಾಗುತ್ತದೆ. ಕೃಷ್ಣಪುರಿಗೆ ಹೋಗಲು ಸಂಪೂರ್ಣ ನಿರ್ವಿಕಾರಿ ಆಗಬೇಕು. ಈಗ ನಿಮ್ಮ ಹಾಗು ನನ್ನ ಕಲ್ಯಾಣ ಮಾಡಬೇಕು. ಮತ್ತು ನಾವಿಬ್ಬರು ಒಬ್ಬ ಪರಮಾತ್ಮನ ಮಕ್ಕಳಾಗಿದ್ದೇವೆ. ನೀವೂ ಸಹ ಭಗವಂತ ನಮ್ಮ ತಂದೆ ಆಗಿದ್ದಾರೆಂದು ಹೇಳುತ್ತಿರುವಾಗ ನಾವು ಪರಸ್ಪರ ಸಹೋದರ-ಸಹೋದರಿಯಾಗಿದ್ದೇವೆ. ಆದುದರಿಂದ ನಾವು ವಿಕಾರದಲ್ಲಿ ಹೋಗಬಾರದು. ಭಾರತ ಪವಿತ್ರವಾಗಿದ್ದಾಗ ಎಲ್ಲರೂ ಸುಖಿಗಳಾಗಿದ್ದರು. ಹೀಗಂತು ಎಲ್ಲರು ದುಃಖಿಗಳಾಗಿದ್ದಾರೆ. ನರಕದಲ್ಲಿ ಮುಳುಗುತ್ತಿರುತ್ತಾರೆ. ಇಬ್ಬರು ಪವಿತ್ರರಾಗಿರುತ್ತೇವೆಂದು ಕೈಯಲ್ಲಿ ಕೈ ಕೊಟ್ಟು ಸ್ವರ್ಗಕ್ಕೆ ಹೋಗಬೇಕೆಂದು ತಂದೆ ತಿಳಿಸುತ್ತಾರೆ. ಈಗ ನಾವು ಸುಮ್ಮನೆ ಏಕೆ ಇಪ್ಪತ್ತೊಂದು ಜನ್ಮಗಳ ಆಸ್ತಿ ಕಳೆದುಕೊಳ್ಳಬೇಕು!ಈ ರೀತಿ ಪ್ರತಿನಿತ್ಯ ತಿಳಿಸುವುದರಿಂದ ಅವರ ಮನಸ್ಸು ಪರಿವರ್ತನೆ ಆಗಿ ಬಿಡುತ್ತದೆ. ಕನ್ಯೆಯರು ಸ್ವತಂತ್ರರಾಗಿದ್ದು ಸಂಗದಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕು. ಈ ಅಪವಿತ್ರ, ಭ್ರಷ್ಟಾಚಾರಿ ಪ್ರಪಂಚವು ಸಮಾಪ್ತಿ ಆಗುತ್ತದೆ. ಆದುದರಿಂದ ತಂದೆ ತಿಳಿಸುತ್ತಾರೆ-ಪವಿತ್ರರಾದಾಗ ಪವಿತ್ರ ಪ್ರಪಂಚದ ಮಾಲೀಕರಾಗುತ್ತೀರಿ. ಈ ರೀತಿ ಯುಕ್ತಿಯಿಂದ ತಿಳಿಸಿಕೊಡುತ್ತಾ, ಅಪವಿತ್ರರನ್ನು ಜ್ಞಾನದ ಭೂ-ಭೂ (ಸಂಜೀವಿನಿಯಂತೆ) ತಮ್ಮ ಸಮಾನ ಮಾಡಿಕೊಳ್ಳಬೇಕು. ಶಕ್ತಿ ಸೈನ್ಯದಲ್ಲಿ ಶಕ್ತಿ ಇರಬೇಕಲ್ಲವೆ! ಮಕ್ಕಳೆಲ್ಲರನ್ನು ಪಾಲನೆ ಮಾಡುತ್ತಾ ಮೋಹವಿರಬಾರದು, ಬುದ್ದಿಯ ಸಂಬಂಧ ಒಬ್ಬ ತಂದೆಯ ಜೊತೆ ಇರಬೇಕು. ಈ ಚಿಕ್ಕಪ್ಪ, ಮಾಮಾ…. ಮೊದಲಾದವರೆಲ್ಲರು ನಾಟಕದ ಪಾತ್ರಧಾರಿಗಳಾಗಿದ್ದಾರೆ. ಈಗ ನಾಟಕ ಮುಗಿಯುತ್ತಿರುವ ಕಾರಣ ಎಲ್ಲರು ಹಿಂತಿರುಗಬೇಕು. ವಿಕರ್ಮಗಳ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿಕೊಳ್ಳಬೇಕು. ಈ ಹಳೆಯ ಪ್ರಪಂಚದಿಂದ ಮನಸ್ಸನ್ನು ದೂರ ಮಾಡಿಕೊಳ್ಳಬೇಕು. ಒಬ್ಬ ತಂದೆಯನ್ನು ನೆನಪು ಮಾಡಬೇಕು. ಶ್ರೀಮತದಂತೆ ನಡೆದಾಗ ಸ್ವರ್ಗದ ರಾಜ್ಯಭಾಗ್ಯವನ್ನು ಪಡೆದುಕೊಳ್ಳುತ್ತೀರೆಂದು ತಂದೆ ತಿಳಿಸುತ್ತಾರೆ. ಭಗವಂತನ ಶ್ರೀಮತವಾಗಿದೆ ರಾಜಯೋಗದಿಂದ ರಾಜರಿಗೂ ರಾಜಾ ಆಗುತ್ತೇವೆ. ಈ ಮೃತ್ಯುಲೋಕವಂತು ಸಮಾಪ್ತಿ ಆಗಿ ಬಿಡುತ್ತದೆ. ತಂದೆಯಿಂದ ಇಪ್ಪತ್ತೊಂದು ಜನ್ಮಗಳ ಆಸ್ತಿಯನ್ನು ಏಕೆ ಪಡೆಯಬಾರದು? ಒಂದುವೇಳೆ ಶ್ರದ್ದೆಯಿಂದ ಓದಿದರೆ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುತ್ತೇವೆಂದು ವಿದ್ಯಾರ್ಥಿಗಳು ತಿಳಿದುಕೊಳ್ಳುತ್ತಾರೆ. ಅದೇ ರೀತಿ ಇಲ್ಲಿಯು ಉತ್ತಮ ಅಂಕಗಳನ್ನು ಅರ್ಥಾತ್ ಪುರುಷಾರ್ಥ ಮಾಡಿದಾಗ ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳುತ್ತೇವೆ. ರಾಜಕುಮಾರ-ರಾಜಕುಮಾರಿ ಆಗುವ ಲಕ್ಷ್ಯವಿದ್ದರೂ ಸಹ ಎಲ್ಲರೂ ಆಗಲು ಸಾಧ್ಯವಿಲ್ಲ. ಅನೇಕ ಪ್ರಜೆಗಳಾಗುತ್ತಾ ಹೋಗುತ್ತಾರೆ. ನಿಧಾನ ನಿಧಾನವಾಗಿ ಪ್ರದರ್ಶನದಿಂದ ಬಹಳ ಪ್ರಭಾವ ಬೀರುತ್ತದೆ.
ಈಗ ಯಾವ ಪಾತ್ರ ನಡೆಯುತ್ತಾಯಿದೆ, ಅದು ಐದು ಸಾವಿರ ವರ್ಷದ ಹಿಂದೆಯು ಸಹ ನಡೆದಿತ್ತು, ಎಂದು ನೀವು ತಿಳಿದುಕೊಂಡಿದ್ದೀರಿ. ನಾನು ಸಹ ನಾಟಕದ ಬಂಧನದಲ್ಲಿ ಬಂದಿಸಲ್ಪಟ್ಟಿದ್ದು, ಪಾತ್ರವಿಲ್ಲದೆ ನಾನು ಏನು ಮಾಡಲು ಸಾಧ್ಯವಿಲ್ಲವೆಂದು ತಂದೆ ತಿಳಿಸುತ್ತಾರೆ. ಸ್ವದರ್ಶನ ಚಕ್ರದಿಂದ ನಾನು ಯಾರ ತಲೆಯನ್ನು ತೆಗೆದುಬಿಡುವೆನೆಂದು ಅರ್ಥವಲ್ಲ, ಸ್ವದರ್ಶನ ಚಕ್ರದ ಅರ್ಥ ಮಕ್ಕಳು ತಿಳಿದುಕೊಂಡಿದ್ದೀರಿ. ಆದರೆ ಶಾಸ್ತ್ರಗಳಲ್ಲಿ ಅನೇಕ ಕಥೆಗಳನ್ನು ಬರೆದು ಬಿಟ್ಟಿದ್ದಾರೆ. ಸ್ವದರ್ಶನವೆಂದರೆ ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದುಕೊಳ್ಳುವುದಾಗಿದೆ. ಸ್ವ ಅರ್ಥಾತ್ ಆತ್ಮ ದರ್ಶನವೆಂದು ಅರ್ಥ. ಸೃಷ್ಟಿ ಚಕ್ರವೆಂದರೆ ನಾವು ಎಂಬತ್ತನಾಲ್ಕು ಜನ್ಮಗಳಲ್ಲಿ ಬರುತ್ತೇವೆ. ಸೂರ್ಯವಂಶ, ಚಂದ್ರವಂಶ….. ಈ ರೀತಿ ಈಗ ಚಕ್ರ ಪೂರ್ತಿಯಾಗಿದೆ. ಪುನಃ ಪುನರಾರಂಭವಾಗುತ್ತದೆ. ಇದು ಭಾರತದ ಚಕ್ರವಾಗಿದ್ದು, ಆದಿಯಿಂದ ಅಂತ್ಯದವರೆಗೆ ಭಾರತವಾಸಿಗಳ ಪಾತ್ರವಿದೆ. ಭಾರತದ ಎರಡು ಯುಗ ಪೂರ್ಣವಾಯಿತೆಂದರೆ ಅರ್ಧ ಪ್ರಪಂಚ ಪೂರ್ಣವಾಯಿತೆಂದು ಅರ್ಥ, ಈ ಎರಡು ಯುಗಗಳನ್ನು ವೈಕುಂಠವೆಂದು ಹೇಳುತ್ತಾರೆ. ಉಳಿದೆಲ್ಲಾ ಧರ್ಮಗಳು ನಂತರ ಬರುತ್ತವೆ. ಬೇರೆ ಧರ್ಮದವರಿಗೆ ಈ ರೀತಿ ತಿಳಿಸಿಕೊಡಬೇಕು-ನೀವು ಬರುವ ಮೊದಲು ಸ್ವರ್ಗ, ಹೊಸ ಪ್ರಪಂಚವಿತ್ತು, ಈಗ ಹಳೆಯ ಪ್ರಪಂಚ ಇದೆ. ಆದಿಯಲ್ಲಿ ಸೂರ್ಯವಂಶ, ಚಂದ್ರವಂಶ ಇದ್ದರೆಂದು ನೀವು ತಿಳಿದುಕೊಂಡಿದ್ದೀರಿ. ಆ ಎರಡು (ಸೂರ್ಯವಂಶ, ಚಂದ್ರವಂಶ) ರಾಜಧಾನಿಗಳು ಪೂರ್ಣವಾದ ಮೇಲೆ ಮಧ್ಯದಲ್ಲಿ ಉಳಿದ ಧರ್ಮಗಳು ಬರುತ್ತವೆ. ಅದು ಹೊಸ ಹಾಗು ಹಳೆಯ ಪ್ರಪಂಚದ ಮಧ್ಯವಾಗಿರುತ್ತದೆ. ಮೊದಲು ಅರ್ಧಕಲ್ಪ ಕೇವಲ ಭಾರತವೇ ಇತ್ತು, ನಾಟಕ ಪೂರ್ತಿ ಭಾರತೀಯರ ಮೇಲೆ ಮಾಡಲ್ಪಟ್ಟಿದೆ. ನಾವೇ ಶ್ರೇಷ್ಠಾಚಾರಿ ಡಬಲ್ ಕಿರೀಟವುಳ್ಳ ರಾಜರಾಗಿದ್ದರು. ಈಗ ನಾವೇ ಭ್ರಷ್ಟಾಚಾರಿ ಆಗಿದ್ದೇವೆ. ಪೂಜ್ಯರಿಂದ ಪೂಜಾರಿ ಹೇಗಾಗುವುರೆಂದು ಯಾರು ಸಹ ತಿಳಿಸಿಕೊಡಲು ಸಾಧ್ಯವಿಲ್ಲ. ತಿಳಿಸಿಕೊಡಲು ಎಷ್ಟೊಂದು ಸಹಜವಾಗಿದೆ. ಈ ಆತ್ಮಿಕ ಜ್ಞಾನವನ್ನು ಪರಮಪಿತ ಪರಮಾತ್ಮ ಮಕ್ಕಳಿಗೆ ನೀಡುತ್ತಿದ್ದಾರೆ. ಆದುದರಿಂದ ನೀವು ಸಹ ಆತ್ಮಗಳ ತಂದೆ ನಮಗೆ ಜ್ಞಾನ ಕೊಡುತ್ತಿದ್ದಾರೆಂದು ತಿಳಿದುಕೊಂಡಿದ್ದೀರಿ. ತಂದೆಯು ಸಹ ನಾನು ಆತ್ಮಗಳಿಗೆ ಓದಿಸಿ, ಆತ್ಮಗಳನ್ನು ಜೊತೆಯಲ್ಲಿ ಹಿಂತಿರುಗಿ ಕರೆದುಕೊಂಡು ಹೋಗುತ್ತೇನೆಂದು ಹೇಳುವ ಶಕ್ತಿ ಯಾವ ಮನುಷ್ಯರಿಗೂ ಇಲ್ಲವೆಂದು ತಂದೆಯು ತಿಳಿಸುತ್ತಿದ್ದಾರೆ. ಒಂದುವೇಳೆ ತಮ್ಮನ್ನು ಬ್ರಹ್ಮಾಕುಮಾರ-ಕುಮಾರಿ ಎಂದು ಹೇಳಿಕೊಳ್ಳುತ್ತಾ ಅಲ್ಪ-ಸ್ವಲ್ಪ ಈ ಜ್ಞಾನವನ್ನು ಅನುಕರಣೆ ಮಾಡಿದರು ಸಹ ಮನೆಗೆ ಯಾರೂ ಸಹ ಹಿಂತಿರುಗಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ಏಕೆಂದರೆ ಸತ್ಯ, ಸತ್ಯವೇ ಆಗಿದ್ದು, ಸತ್ಯವನ್ನು ಎಂದಿಗೂ ಬಚ್ಚಿಡಲು ಸಾಧ್ಯವಿಲ್ಲ. ಓಹೋ ಪ್ರಭು! ನೀವು ಹೇಳುವುದು ಸತ್ಯವಾಗಿದ್ದು, ಉಳಿದೆಲ್ಲವು ಅಸತ್ಯವಾಗಿದೆ ಎಂದು ಅಂತ್ಯದಲ್ಲಿ ಎಲ್ಲರು ಅಗತ್ಯವಾಗಿ ಹೇಳುತ್ತಾರೆ. ಪರಮಪಿತ ಪರಮಾತ್ಮ ಸತ್ಯವಾಗಿದ್ದು ನಿರಾಕಾರನಾಗಿದ್ದಾರೆ. ಶಿವರಾತ್ರಿಯ ಅರ್ಥವನ್ನು ಸಹ ತಿಳಿದುಕೊಂಡಿಲ್ಲ. ಒಂದುವೇಳೆ ತಂದೆಯು ಕೃಷ್ಣನ ಶರೀರದಲ್ಲಿ ಬರುವುದಾದರೆ ನಾನು ಕೃಷ್ಣನ ಶರೀರದಲ್ಲಿ ಬಂದು ನಿಮಗೆ ಜ್ಞಾನ ಕೊಡುತ್ತೇನೆಂದು ತಿಳಿಸುತ್ತಿದ್ದರು. ಆದರೆ ಇದು ಸಾಧ್ಯವಿಲ್ಲ. ಇದು ಜ್ಞಾನವಾಗಿದೆ, ಇಲ್ಲಿ ಬಹಳ ಚೆನ್ನಾಗಿ ಗಮನ ಕೊಡಬೇಕು. ನಾವು ಈಶ್ವರೀಯ ವಿದ್ಯಾರ್ಥಿ ಎಂಬ ಮಾತು ಬುದ್ದಿಯಲ್ಲಿ ಇಲ್ಲದಾಗ ಈ ಜ್ಞಾನ ಬುದ್ದಿಯಲ್ಲಿ ಕುಳಿತುಕೊಳ್ಳುವುದಿಲ್ಲ. ನಿಮ್ಮ ಅನೇಕ ಜನ್ಮಗಳ ಅಂತಿಮ ಜನ್ಮ ಇದಾಗಿದೆ. ಈ ಮೃತ್ಯುಲೋಕ ಈಗ ಸಮಾಪ್ತಿ ಆಗುತ್ತದೆ. ಆದುದರಿಂದ ನಾನು ನಿಮ್ಮನ್ನು ಅಮರಪುರಿಗೆ ಮಾಲೀಕರನ್ನಾಗಿ ಮಾಡಲು ಬಂದಿದ್ದೇನೆ. ಇದು ಸತ್ಯ ನಾರಾಯಣನಾಗುವ ಕಥೆ ಅರ್ಥಾತ್ ನರನಿಂದ ನಾರಾಯಣಾಗುವ ಜ್ಞಾನವಾಗಿದೆ ವಿನಃ ಕಥೆಯಲ್ಲ. ಬಹಳ ಹಳೆಯ, ಪ್ರಾಚೀನವಾಗಿರುವದನ್ನು ಕಥೆಯೆಂದು ಹೇಳಲಾಗುತ್ತದೆ. ಆದರೆ ಇದು ಗುರಿ ಉದ್ದೇಶ ಇರುವಂತಹ ಜ್ಞಾನವಾಗಿದೆ. ಇದು ಕಾಲೇಜ್ ಸಹ ಆಗಿದ್ದು ಇಲ್ಲಿಯ ಚರಿತ್ರೆ ಭೂಗೋಳ ಹಳೆಯ ಕಥೆ ಆಯಿತಲ್ಲವೆ. ಯಾವ ಯಾವ ರಾಜ ರಾಜ್ಯ ಮಾಡುತ್ತಿದ್ದನೆಂದು ಚರಿತ್ರೆ ಭೂಗೋಳವಿರುತ್ತದೆ. ಈ ನಾಟಕದಲ್ಲಿ ನನ್ನ ಪಾತ್ರ ಇದೆ ಎಂದು ತಂದೆ ತಿಳಿಸುತ್ತಾರೆ. ಬ್ರಹ್ಮನಿಂದ ಸ್ಥಾಪನೆ, ಶಂಕರನಿಂದ ವಿನಾಶವಾಗುತ್ತದೆ. ವಿನಾಶದ ಸಲುವಾಗಿ ಅವರು ಅಣ್ವಸ್ತ್ರಗಳನ್ನು ಮಾಡಲೇಬೇಕಾಗಿದೆ. ಯಾದವರು, ಕೌರವರು, ಪಾಂಡವರು ಏನು ಮಾಡಿ ಹೋದರೆಂದು ಶಾಸ್ತ್ರಗಳಲ್ಲಿ ತಪ್ಪಾಗಿ ಬರೆದಿದ್ದಾರೆ. ತಮ್ಮ ಕುಲದ ವಿನಾಶ ತಾವೇ ಮಾಡಿಕೊಂಡರು ಎಂದು ಯಾದವರಿಗಾಗಿ ಯಥಾರ್ಥವಾಗಿ ಬರೆದಿದ್ದಾರೆ. ಉಳಿದಂತೆ ಪಾಂಡವ ಹಾಗು ಕೌರವರಿಗೆ ಯುದ್ದವನ್ನು ತೋರಿಸುವರು, ಆದರೆ ಆ ರೀತಿಯಲ್ಲಿ ಯುದ್ದವಾಗಲು ಸಾಧ್ಯವಿಲ್ಲ. ಮುಖ್ಯ ಮಾರ್ಗದರ್ಶಕ, ಪತಿತ ಪಾವನ, ಮುಕ್ತಿದಾತ ಪರಮಪಿತ ಪರಮಾತ್ಮ ನಿಮ್ಮ ಜೊತೆಯಲ್ಲಿದ್ದಾರೆ. ರಾವಣ ರಾಜ್ಯದಿಂದ ಬಿಡಿಸಿ ರಾಮರಾಜ್ಯಕ್ಕೆ ಕರೆದುಕೊಂಡು ಹೋಗುತ್ತಾರೆ. ಈ ರಾವಣ ರಾಜ್ಯ ಸಮಾಪ್ತಿ ಆಗಿ ಸೋತ ನಂತರ ಪಾವನ ಶ್ರೇಷ್ಠಾಚಾರಿ ಸತ್ಯಯುಗದ ರಾಜ್ಯ ಪ್ರಾರಂಭವಾಗುವುದೆಂದು ತಂದೆ ತಿಳಿಸುತ್ತಿದ್ದಾರೆ. ಮಕ್ಕಳೂ ಸಹ ತಿಳಿದುಕೊಂಡು ಬೇರೆಯವರಿಗೂ ತಿಳಿಸಿಕೊಡುತ್ತೀರಿ, ಆದರೆ ನಿಮ್ಮ ವಿನಃ ಬೇರೆ ಯಾರಿಗೂ ಇದು ತಿಳಿದಿರುವುದಿಲ್ಲ. ಭಕ್ತಿಮಾರ್ಗದ ಶಾಸ್ತ್ರಗಳನ್ನು ಬಹಳ ತಿಳಿದುಕೊಂಡಿರುತ್ತಾರೆ. ಭಕ್ತಿಯಿಂದ ಭಗವಂತನನ್ನು ಪಡೆಯುತ್ತೇವೆಂದು ತಿಳಿದುಕೊಂಡಿರುತ್ತಾರೆ. ಅರ್ಧಕಲ್ಪ ಭಕ್ತಿ ಮಾರ್ಗ, ಈಗ ಭಕ್ತಿಯ ಅಂತ್ಯವಾಗಿರುವ ಕಾರಣ ಜ್ಞಾನ ಸಾಗರ ತಂದೆ ಬಂದು ಜ್ಞಾನದ ಇಂಜಕ್ಷನ್ ಕೊಡುತ್ತಾರೆ. ಇದು ಮಕ್ಕಳ ಪತಿತ ಪಾವನ ಗಾಡ್ ಫಾದರ್ಲೀ ವಿದ್ಯಾರ್ಥಿ ಜೀವನವಾಗಿದೆ. ಪತಿತ ಪಾವನ ಅರ್ಥಾತ್ ಸದ್ಗುರು, ಓ ಗಾಡ್ ಫಾದರ್ ಅರ್ಥಾತ್ ಪರಮಪಿತ ಪರಮಾತ್ಮ ಹಾಗು ಅವರೇ ಶಿಕ್ಷಕನ ರೂಪದಲ್ಲಿ ರಾಜಯೋಗವನ್ನು ಕಲಿಸುತ್ತಾರೆ. ಇದು ಎಷ್ಟೊಂದು ಸಹಜ ಮಾತಾಗಿದೆ. ಮೊಟ್ಟ ಮೊದಲು ಪತಿತ ಪಾವನವೆಂದು ಅಗತ್ಯವಾಗಿ ಬರೆಯಬೇಕು. ಗುರು ಎಲ್ಲರಿಗಿಂತ ತೀಕ್ಷ್ಣವಾಗಿರುತ್ತಾರೆ. ಗುರು ದುರ್ಗತಿಯಿಂದ ಬಿಡಿಸಿ ಸದ್ಗತಿಯನ್ನು ಕೊಡುತ್ತಾರೆಂದು ತಿಳಿದುಕೊಂಡಿದ್ದಾರೆ. ತಂದೆ ಬಹಳ ಚೆನ್ನಾಗಿ ತಿಳಿಸಿಕೊಡುತ್ತಿದ್ದರೂ ಸಹ ಕೆಲವರ ಬುದ್ದಿಯಲ್ಲಿ ನಾನು ಭಗವಂತನ ಮಗು ಅಗತ್ಯವಾಗಿ ಅವರಿಂದ ಆಸ್ತಿ ಸಿಗಬೇಕಾಗಿದೆ ಎಂದು ತಿಳಿದುಕೊಂಡಿರುವುದಿಲ್ಲ. ಮಕ್ಕಳೇ ನೀವು ರಾವಣನ ಮೇಲೆ ವಿಜಯಿಗಳಾದಾಗ ಜಗತ್‍ಜೀತ್ ಆಗುತ್ತೀರೆಂದು ತಂದೆ ತಿಳಿಸುತ್ತಾರೆ. ಶ್ರೀಮತದಂತೆ ನಡೆಯುತ್ತಾ ತಂದೆಯಂತೆ ಮಕ್ಕಳೂ ಸಹ ಮಧುರರಾಗಬೇಕು. ಯುಕ್ತಿಯಿಂದ ತಿಳಿಸಿಕೊಡಬೇಕು ಏಕೆಂದರೆ ಸಮಯ ಬರುತ್ತಾ ತಿಳಿದುಕೊಳ್ಳುತ್ತಾರೆ, ಹಾಗು ನಿಮ್ಮ ಮೇಲೆ ವಿಶ್ವಾಸವಿಡುತ್ತಾರೆ. ಯುದ್ಧ ಪ್ರಾರಂಭವಾಗುವುದನ್ನು ನೋಡುತ್ತಾ ತಂದೆಯಿಂದ ಆಸ್ತಿ ಪಡೆದುಕೊಳ್ಳುವ ಪುರುಷಾರ್ಥದಲ್ಲಿ ತೊಡುಗುತ್ತಾರೆ. ಈ ರೀತಿ ಯುದ್ಧ ಮೊದಲಾದ ಸಮಯದಲ್ಲಿ ವಿಕಾರದ ಮಾತು ಸಹ ನೆನಪಿರುವುದಿಲ್ಲ. ಆದುದರಿಂದ ವಿನಾಶದ ಮೊದಲು ವಿಕಾರೀ ಜೀವನದ ಅನುಭವ ಮಾಡೋಣವೆಂದು ಹೇಳುವುದಿಲ್ಲ. ಅಂತಹ ಸಮಯದಲ್ಲಿ ತಮ್ಮನ್ನು ರಕ್ಷಣೆ ಮಾಡಿಕೊಳ್ಳಬೇಕು. ಜನ್ಮ-ಜನ್ಮಾಂತರದಿಂದ ಕಾಮ ವಿಕಾರದ ಕಾರಣ ನಿಮ್ಮ ಜೀವನ ಈ ರೀತಿ ದುಃಖಿ ಆಗಿ ಬಿಟ್ಟಿದೆ. ಪವಿತ್ರತೆಯಲ್ಲಿ ಸುಖವಿದೆ, ಪವಿತ್ರತೆಯ ಕಾರಣ ಸನ್ಯಾಸಿಗಳನ್ನು ಪೂಜಿಸುತ್ತಾರೆ, ಆದರೆ ಈ ಸಮಯದ ಪ್ರಪಂಚದಲ್ಲಿ ಬಹಳ ಮೋಸ ತುಂಬಿದೆ. ಹೇಳಿ-ಕೇಳುವಂತಹ ಮಾಲೀಕನಿಲ್ಲ. ಪ್ರಜೆಗಳಿಂದ, ಪ್ರಜೆಗಳ ರಾಜ್ಯವಾಗಿದೆ. ಸ್ವರ್ಗದಲ್ಲಿ ನಂಬರ್‍ವನ್ ಲಕ್ಷ್ಮಿ-ನಾರಾಯಣರ ರಾಜ್ಯವಿತ್ತು, ಆದರೆ ಅದೇ ಭಾರತ ಎನ್ನುವುದನ್ನು ಮರೆತು ಬಿಟ್ಟಿದ್ದಾರೆ. ರುದ್ರ ಮಾಲೆ, ನಂತರ ವಿಷ್ಣು ಮಾಲೆ ಆಗಿದೆ. ಬ್ರಾಹ್ಮಣರ ಮಾಲೆ ಮಾಡಲು ಸಾಧ್ಯವಿಲ್ಲ. ಏಕೆಂದರೆ ಸ್ಥಿತಿಯು ಏರು-ಪೇರು ಆಗುತ್ತಿರುತ್ತದೆ. ಇಂದು ಐದು-ಆರನೇ ಸ್ಥಾನದಲ್ಲಿದ್ದು, ನಾಳೆ ನೋಡಿದಾಗ ಇರುವುದೇ ಇಲ್ಲ. ಆಸ್ತಿ ಹಾಗು ರಾಜ್ಯಭಾಗ್ಯದಿಂದ ದೂರವಾಗಿ ಬಿಡುತ್ತಾರೆ. ಅಂತಹವರು ಪ್ರಜಾಪದವಿಗೆ ಯೋಗ್ಯರಾಗಬೇಕಾಗಿದೆ. ತಂದೆಯ ಮನೆಯನ್ನು ಬಿಟ್ಟು ಹೋಗುವಂತಹವರು ಪ್ರಜೆಯಲ್ಲೂ ಉತ್ತಮ ಪದವಿ ಪಡೆಯಲು ಸಾಧ್ಯವಿಲ್ಲ. ಭಯಂಕರವಾದ ವಿಕರ್ಮವನ್ನು ಮಾಡಿ ಬಿಡುತ್ತಾರೆ. ನೀವೀಗ ರುದ್ರ ಮಾಲೆಯಿಂದ ವಿಷ್ಣು ಮಾಲೆ, ಮುಳ್ಳುಗಳಿಂದ ಹೂಗಳು ಆಗುತ್ತಿದ್ದೀರಿ. ರುದ್ರ ಮಾಲೆಯಲ್ಲಿ ಸಂಪೂರ್ಣವಾಗಿ ಬಂದರೆ ರಾಜ್ಯಭಾಗ್ಯದಲ್ಲಿ ಬಂದು ಬಿಡುತ್ತೀರಿ. ಸ್ವಯಂ ಭಗವಂತನೆ ಓದಿಸುವಂತಹ ಈ ವಿದ್ಯೆ ಎಷ್ಟೊಂದು ವಂಡರ್‍ಫುಲ್ ಆಗಿದೆ. ಹೊಸ ಪ್ರಪಂಚಕ್ಕಾಗಿ ಹೊಸ ಜ್ಞಾನ, ನೀವು ಹೊಸ ಪ್ರಪಂಚದ ಮಾಲೀಕರಾಗಿದ್ದೀರಿ. ಈಗ ನೀವು ಹಳೆಯ ಪ್ರಪಂಚದಲ್ಲಿ ಕವಡೆ ಸಮಾನ ಆಗಿ ಬಿಟ್ಟಿದ್ದೀರಿ. ಸೃಷ್ಟಿ ಚಕ್ರ ಹಾಗು ತ್ರಿಮೂರ್ತಿ ಚಿತ್ರ ಮುಖ್ಯವಾಗಿರುವ ಕಾರಣ ಬಹಳ ದೊಡ್ಡದಾದ ಚಿತ್ರವನ್ನು ಮಾಡಿಸಬೇಕು. ಮಾಡಿ ತೋರಿಸಲು ತಂದೆಯು ಆಹ್ವಾನ ಮಾಡುತ್ತಾರೆ. ಒಳ್ಳೆಯದು.
ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್‍ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.
ಧಾರಣೆಗಾಗಿ ಮುಖ್ಯಸಾರ:-
1. ಯಾವ ಸಂಬಂಧದ ಮೋಹದಲ್ಲಿ ಬಂಧಿಸಿಕೊಳ್ಳಬಾರದು. ಆಂತರ್ಯದ ಸತ್ಯತೆ, ಸ್ವಚ್ಚತೆಯಿಂದ ನಿರ್ಬಂಧನರಾಗಬೇಕು. ವಿಕರ್ಮದ ಲೆಕ್ಕಾಚಾರವನ್ನು ಸಮಾಪ್ತಿ ಮಾಡಿಕೊಳ್ಳಬೇಕು.
2. ಮಧುರ ಮಾತು ಹಾಗು ಯುಕ್ತಿ ಯುಕ್ತ ಮಾತಿನಿಂದ ಸೇವೆ ಮಾಡಬೇಕು. ಪುರುಷಾರ್ಥ ಮಾಡಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಬೇಕು.
ವರದಾನ:-
ಯಾರು ಸೆಕೆಂಡಿನಲ್ಲಿ ನಿಯಂತ್ರಣಾ ಶಕ್ತಿಯ ಮೂಲಕ ತಪ್ಪನ್ನು ಸರಿ ಪಡಿಸುವುದರಲ್ಲಿ ಪರಿವರ್ತನೆ ಮಾಡುವರೋ ಅವರೇ ಶ್ರೇಷ್ಠ ಪುರುಷಾರ್ಥಿ ಆಗಿದ್ದಾರೆ. ಆದರೆ ಅದು ಹೀಗಾಗಬಾರದು- ವ್ಯರ್ಥವನ್ನು ನಿಯಂತ್ರಣ ಮಾಡಲು ಬಯಸುತ್ತೇನೆ, ಇದು ತಪ್ಪು ಎಂದು ತಿಳಿಯುತ್ತೇನೆ ಆದರೆ ಅರ್ಧ ಗಂಟೆಯವರೆಗೂ ಅದೇ ನಡೆಯುತ್ತಿರುತ್ತದೆ. ಇದಕ್ಕೆ ಸ್ವಲ್ಪ-ಸ್ವಲ್ಪ ಅಧೀನ ಹಾಗೂ ಸ್ವಲ್ಪ-ಸ್ವಲ್ಪ ಅಧಿಕಾರಿ ಆಗಿರುವುದೆಂದು ಹೇಳಲಾಗುತ್ತದೆ. ಯಾವಾಗ ಇದು ಸತ್ಯವಲ್ಲ, ಅಯಥಾರ್ಥ ಅಥವಾ ವ್ಯರ್ಥ ಎಂದು ತಿಳಿಯುತ್ತೀರಿ, ಆಗ ಅದೇ ಸಮಯದಲ್ಲಿ ಬ್ರೇಕ್ ಆಗಿ ಬಿಡುವುದೇ ಶ್ರೇಷ್ಠ ಪುರುಷಾರ್ಥವಾಗಿದೆ. ನಿಯಂತ್ರಣಾ ಶಕ್ತಿಯ ಅರ್ಥವು ಇದಲ್ಲ- ಇಲ್ಲಿ ಬ್ರೇಕ್ ಹಿಡಿಯಲಾಯಿತು, ಆದರೆ ಅದು ಅಲ್ಲಿ ಸ್ಟಾಪ್ ಆಯಿತು.
ಸ್ಲೋಗನ್:-
ಅಮೂಲ್ಯ ಜ್ಞಾನ ರತ್ನ (ದಾದಿಯರ ಹಳೆಯ ಡೈರಿಯಿಂದ):
ಈ ಪುರುಷಾರ್ಥದ ಸಮಯದಲ್ಲಿ ಪ್ರತಿಯೊಬ್ಬರಲ್ಲಿಯೂ ಏನಾದರೊಂದು ಕೊರತೆಯು ಅವಶ್ಯವಾಗಿ ಇರುತ್ತದೆ, ಅದನ್ನು ದೈವೀ ಗುಣಗಳಿಂದ ಸಂಪನ್ನಗೊಳಿಸುವುದಕ್ಕಾಗಿ ಪ್ರತಿಯೊಬ್ಬರೂ ಪುರುಷಾರ್ಥ ಮಾಡುತ್ತಾರೆ. ಕೆಲವರಲ್ಲಿ ಧೈರ್ಯತೆಯ ಗುಣವಿಲ್ಲ, ಕೆಲವರಲ್ಲಿ ಸಹನಶೀಲತೆಯ ಗುಣವಿಲ್ಲ, ಅದೇ ರೀತಿ ಅನ್ಯ ಗುಣವಿಲ್ಲ, ಅದನ್ನು ಧಾರಣೆ ಮಾಡಿಕೊಳ್ಳುವುದಕ್ಕಾಗಿ ಸ್ವಯಂ ಮಾಲೀಕನಾಗುತ್ತಾ, ಆ ಗುಣಗಳನ್ನು ತಮ್ಮ ಬಳಿ ಸೆಳೆಯಬೇಕು. ಆ ಗುಣವು ಅವರ ಬಳಿ ಹಾಗೆಯೇ ಬರುವುದಿಲ್ಲ, ಮಾಲೀಕನಲ್ಲಿ ಕೊರತೆಯಿರುವ ಕಾರಣ ಗುಣವು ಹೇಳುತ್ತದೆ – ನಾನು ಯಾರೊಂದಿಗೆ ಮಿತ್ರತ್ವವನ್ನಿಡುತ್ತೇನೆ. ಅದಕ್ಕೆ ಮಾಲೀಕನೊಂದಿಗೆ ಪ್ರೀತಿಯಿರುವುದಿಲ್ಲ, ಆದರೆ ಯಾರು ಮಾಲೀಕನಾಗಿ ನಿಂತಿರುತ್ತಾರೆಯೋ ಅವರನ್ನೇ ಗುಣವೂ ಪ್ರೀತಿ ಮಾಡುತ್ತದೆ. ಜ್ಞಾನಿಗಂತು ಗುಣವೇ ಪ್ರಿಯವಾಗುತ್ತದೆ ಅಲ್ಲವೆ. ಆ ಗುಣವು ಸೆಳೆಯುವಂತದ್ದಾಗಿದೆ ಆದ್ದರಿಂದ ಮಾಲೀಕನನ್ನು ಸೆಳೆಯುತ್ತದೆ ಆದರೆ ಸ್ವಯಂ ಮಾಲೀಕತ್ವದಲ್ಲಿ ಸ್ಥಿತರಾಗಿರುವುದರಿಂದ ಗುಣವು ತಾನಾಗಿಯೇ ಅವರಲ್ಲಿ ಅವಶ್ಯವಾಗಿ ಬಂದು ಬಿಡುತ್ತದೆ. ಅಂದಮೇಲೆ ತಮ್ಮ ಮಾಲೀಕತ್ವದಲ್ಲಿ ಸಂಪೂರ್ಣ ನಿಶ್ಚಯವಿರಬೇಕು. ನಾನಾತ್ಮ ಪರಮಾತ್ಮನ ಸಂತಾನನಾಗಿದ್ದೇನೆ ಎಂಬ ನಿಶ್ಚಯವಿದ್ದರೆ ಸಂಪೂರ್ಣವಾಗಿ ದೈವೀ ಗುಣವೂ ಬರುತ್ತಿರುತ್ತದೆ. ನಿಶ್ಚಯದಿಂದಲೇ ದೈವೀಗುಣವು ಬರುತ್ತದೆ. ಜ್ಞಾನ ಬಿಂದುಗಳನ್ನು ಉಪಯೋಗಿಸುವುದರಲ್ಲಿ ಸಮಯ ಹಿಡಿಸುವುದಿಲ್ಲ ಆದರೆ ದೈವೀ ಗುಣವನ್ನು ಧಾರಣೆ ಮಾಡುವುದರಲ್ಲಿ ಸಮಯ ಹಿಡಿಸುತ್ತದೆ. ಒಳ್ಳೆಯದು. ಓಂ ಶಾಂತಿ.
➤ Email me Murli: Receive Daily Murli on your email. Subscribe!