23 February 2022 KANNADA Murli Today | Brahma Kumaris

Read and Listen today’s Gyan Murli in Kannada

February 22, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಪ್ರೀತಿಯಿಂದ ಮಧುರ ತಂದೆಯೇ ಎಂದು ಹೇಳಿದಾಗ ಮುಖದಲ್ಲಿ ಕಳೆ ಬಂದು ಬಿಡುತ್ತದೆ. ಈಶ್ವರ ಅಥವಾ ಪ್ರಭು ಎಂದು ಹೇಳುವುದರಿಂದ ಅಷ್ಟು ಮಜಾ ಬರುವುದಿಲ್ಲ”

ಪ್ರಶ್ನೆ:: -

ಯಾವ ಒಂದು ವ್ಯಾಪಾರ ಸರ್ವಶಕ್ತಿವಂತ ತಂದೆಯದಾಗಿದೆ, ಮನುಷ್ಯರದಲ್ಲ?

ಉತ್ತರ:-

ಪತಿತರನ್ನು ಪಾವನ ಮಾಡುವುದು, ಇಡೀ ವಿಶ್ವವನ್ನು ಹೊಸದನ್ನಾಗಿ ಮಾಡುವ ವ್ಯಾಪಾರ ತಂದೆಯದಾಗಿದೆ. ತಂದೆಯು ಪಾವನರಾಗಲು ಶಕ್ತಿ ಕೊಡುತ್ತಾರೆ. ಈ ವ್ಯಾಪಾರವನ್ನು ಮನುಷ್ಯರು ಮಾಡಲು ಸಾಧ್ಯವಿಲ್ಲ. ಭಗವಂತ ಏನು ಬೇಕಾದರು ಮಾಡುತ್ತಾರೆ, ಖಾಯಿಲೆಯನ್ನು ಗುಣ ಮಾಡುತ್ತಾರೆಂದು ಮನುಷ್ಯರು ತಿಳಿದುಕೊಂಡಿದ್ದಾರೆ. ಆದರೆ ತಂದೆ ತಿಳಿಸುತ್ತಾರೆ – ನಾನು ಈ ರೀತಿಯ ಆಶೀರ್ವಾದ ಮಾಡುವುದಿಲ್ಲ. ತಂದೆಯು ಮಕ್ಕಳಿಗೆ ಕೇವಲ ಪಾವನರಾಗುವ ಯುಕ್ತಿ ತಿಳಿಸುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಎದ್ದೇಳಿ ಪ್ರಿಯತಮೆಯರೇ ಎದ್ದೇಳಿ…….

ಓಂ ಶಾಂತಿ. ಬೇಹದ್ದಿನ ತಂದೆ ಮಕ್ಕಳನ್ನು ಎಚ್ಚರಗೊಳಿಸುತ್ತಿದ್ದಾರೆ. ತಂದೆ- ತಾಯಿಯಿಂದ ಸುಖ ಸಿಗುತ್ತದೆ ಅವರು ಬಂದು ಅಂಧಕಾರ ರಾತ್ರಿಯಿಂದ ಜಾಗೃತಗೊಳಿಸುತ್ತಾರೆ. ನೀವು ಮಾತ-ಪಿತಾರ ಮಕ್ಕಳಾಗಿದ್ದೀರಿ, ಈಗ ನಿಮಗೆ ಗೊತ್ತಿದೆ ನಾವು ಘೋರ ಅಂಧಕಾರದಲ್ಲಿದ್ದೆವು, ಈಗ ಜಾಗೃತರಾಗುತ್ತಿದ್ದೇವೆ. ನಮ್ಮದು ಈಶ್ವರೀಯ ಪರಿವಾರವಾಗಿದೆ. ಇಡೀ ಪ್ರಪಂಚ ಹಾಗೂ ಮನುಷ್ಯ ಮಾತ್ರರೆಲ್ಲರೂ ಪರಮಾತ್ಮನ ಕುಟುಂಬದವರಾಗಿದ್ದಾರೆ. ಪರಮಾತ್ಮನನ್ನು ತಂದೆ-ತಾಯಿಯೆಂದು ಹೇಳುತ್ತಾರೆ. ಪರಮಾತ್ಮ ತಂದೆಯು ತಾಯಿ ಇಲ್ಲದೆ ಮಕ್ಕಳಿಗೆ ಹೇಗೆ ಜನ್ಮ ಕೊಡುತ್ತಾರೆ. ವಿಶೇಷ ಭಾರತವಾಸಿಯರು ಪರಮಾತ್ಮನನ್ನು ತಂದೆ-ತಾಯಿಯೆಂದು ಹೇಳುತ್ತಾರೆಂದರೆ, ಇದು ಕುಟುಂಬವಾಯಿತಲ್ಲವೆ. ಅವರಂತೂ ಹಾಡುತ್ತಾರೆ, ನೀವು ವಾಸ್ತವಿಕತೆಯಲ್ಲಿ ಇದ್ದೀರಿ. ಮತ್ತು ಪರಮಾತ್ಮ ತಂದೆಯು ತನ್ನ ಪರಿವಾರವನ್ನು ಎಚ್ಚರಿಸುತ್ತಿದ್ದಾರೆ. ಎದ್ದೇಳಿ ಮಕ್ಕಳೇ ಈಗ ರಾತ್ರಿ ಪೂರ್ತಿ ಆಗುತ್ತಿದೆ. ಈಗ ಹಗಲು ಬರುತ್ತಿದೆ. ಜ್ಞಾನ ಸೂರ್ಯ ಪ್ರಕಟವಾಗುತ್ತಾರೆಂದು ಹಾಡುತ್ತಾರೆ, ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಎಷ್ಟೇ ವೇದ, ಶಾಸ್ತ್ರವನ್ನು ಓದಿದ್ದರೂ ಸಹ ಇದರ ಅರ್ಥ ತಿಳಿದುಕೊಂಡಿಲ್ಲ. ಯಾರು ತಿಳಿದುಕೊಂಡಿದ್ದೀರಿ ಅವರು ಚೆನ್ನಾಗಿ ಜ್ಞಾನದ ಸಂಪಾದನೆ ಮಾಡಿಕೊಳ್ಳಬೇಕು. ಯಾರು ಅರ್ಥ ಮಾಡಿಕೊಂಡಿಲ್ಲ ಅವರು ದಿವಾಳಿಯಾಗುತ್ತಾರೆ. ತಂದೆ ತಿಳಿಸುತ್ತಾರೆ ಮಾಯೆಯು ನಿಮ್ಮನ್ನು ಬುದ್ಧಿಹೀನರನ್ನಾಗಿ ಮಾಡಿ ಬಿಟ್ಟಿದೆ. ಒಂದು ಕಡೆ ಹೇಳುತ್ತಾರೆ ಪರಮಾತ್ಮ ತಂದೆ, ಮತ್ತೊಂದು ಕಡೆ ಹೇಳುತ್ತಾರೆ ಪರಮಾತ್ಮ ಸರ್ವವ್ಯಾಪಿಯೆಂದು. ಒಂದು ಕಡೆ ಹೇಳುತ್ತಾರೆ ಆತ್ಮ ಸಹೋದರ-ಸಹೋದರರಾಗಿದ್ದಾರೆ, ಒಬ್ಬ ತಂದೆಯ ಮಕ್ಕಳೆಂದು, ಮತ್ತೊಂದೆಡೆ ಹೇಳುತ್ತಾರೆ ಎಲ್ಲಿ ನೋಡಿದರಲ್ಲಿ ಪರಮಾತ್ಮ ಇದ್ದಾರೆ, ನಾವೇ ಪರಮಾತ್ಮ ಎಂದೂ ಹೇಳಿ ಬಿಡುತ್ತಾರೆ. ಈಗ ತಂದೆ ತಿಳಿಸಿಕೊಡುತ್ತಾರೆ ನಾವು ಪರಮಧಾಮದಿಂದ ಬಂದಿದ್ದೇವೆ. ಎಲ್ಲ ಧರ್ಮದವರು ತಮ್ಮ ಭಾಷೆಯಲ್ಲಿ ಹೇಳುತ್ತಾರೆ “ಹೇ ಪರಮಾತ್ಮ ತಂದೆಯೆಂದು”. ಹಾಗಾದರೆ ತಂದೆ-ತಾಯಿಯ ಪರಿವಾರವಾಯಿತಲ್ಲವೆ. ಯಾರನ್ನು ನೀವು ನೆನಪು ಮಾಡುತ್ತೀರಿ, ಅವರ ಕರ್ತವ್ಯವನ್ನು ತಿಳಿದುಕೊಂಡಿಲ್ಲ. ಅವರು ಇಷ್ಟು ದೊಡ್ಡ ಪ್ರಪಂಚವನ್ನು ರಚನೆ ಮಾಡಿದ್ದಾರೆ. ತಂದೆಯಲ್ಲಿ ಪೂರ್ತಿ ಜ್ಞಾನ ಇದೆ, ಅವರನ್ನೇ ಜ್ಞಾನ ಸಾಗರ, ನಾಲೆಡ್ಜ್ ಫುಲ್ ಹಾಗೂ ಸತ್ಯ ಎಂದು ಕರೆಯಲಾಗುತ್ತದೆ. ಅವರು ಸದಾ ಸತ್ಯವನ್ನೇ ಹೇಳುವರು.

ಈಗ ನೀವು ತಿಳಿದುಕೊಂಡಿದ್ದೀರಿ ಅಮರನಾಥ ಶಿವ ತಂದೆಯು ನಮಗೆ ಅಮರಕಥೆ ಹೇಳಿ ಅಮರಲೋಕದ ಮಾಲಿಕರನ್ನಾಗಿ ಮಾಡುತ್ತಿದ್ದಾರೆ. ಯಾರೆಲ್ಲಾ ತಂದೆಯಿಂದ ಓದುವ ಮಕ್ಕಳಿದ್ದಾರೆ ಅವರೆಲ್ಲಾ ಪಾರ್ವತಿಯರಾಗಿದ್ದಾರೆ. ನಿಮಗೆ ಅಮರಕಥೆ ತಿಳಿಸುತ್ತಿದ್ದಾರೆ. 5000 ವರ್ಷಗಳ ಹಿಂದೆ ಸ್ವರ್ಗವಿತ್ತು. ಸೃಷ್ಟಿಯ ಈ ನಾಟಕ ಪುನರಾವರ್ತಿಸುತ್ತಿದೆ, ಮೊದಲು ಸತ್ಯಯುಗ ನಂತರ ತ್ರೇತಾಯುಗ ಬರುತ್ತದೆ, ಆಗ ಹೊಸ ಮನೆಯಿಂದ ಹಳೆಮನೆ ಆಗುತ್ತದೆ. ಈಗ ನಿಮ್ಮದು ಏರುವ ಕಲೆ ಆಗಿದೆ. ನಿಮ್ಮ ಏರುವ ಕಲೆ ಸರ್ವರಿಗೂ ಬಲ ಕೊಡುತ್ತದೆ……. ಎಂದು ಹಾಡುತ್ತಾರೆ ಮನುಷ್ಯ ಮಾತ್ರರೆಲ್ಲರೂ ತಮೊಪ್ರಧಾನ ದುಃಖದಿಂದ ಮುಕ್ತರಾಗಿ ಸತೊಪ್ರಧಾನರಾಗಿ ಬಿಡುತ್ತಾರೆ. ಸೃಷ್ಟಿಯು ಸತೋಪ್ರಧಾನವಾಗಿ ಬಿಡುತ್ತದೆ, ಪರಮಪಿತ ಪರಮಾತ್ಮ ಅಥವಾ ಕೇವಲ ಈಶ್ವರನೆಂದು ಹೇಳುವುದರಿಂದ ತಂದೆಯ ಪ್ರೀತಿ ಸಿಗುವುದಿಲ್ಲ, ತಮ್ಮನ್ನು ತಂದೆಯ ಮಗುವೆಂದು ತಿಳಿದು ಕರೆದಾಗ ಆಸ್ತಿಯ ಬಗ್ಗೆ ಆಕರ್ಷಣೆ ಆಗುತ್ತದೆ. ನಾವೆಲ್ಲರೂ ತಂದೆಯ ಮಕ್ಕಳಾಗಿದ್ದೇವೆ, ಎಲ್ಲಾ ಆತ್ಮಗಳು ತಂದೆಯ ಮಕ್ಕಳೇ ಆಗಿದ್ದಾರೆ, ಆದರೆ ಈಗ ತಂದೆಯು ಈ ರಚನೆಯನ್ನು ರಚಿಸಿದ್ದಾರೆ. ಪತಿತ-ಪಾವನ ಸೀತಾ ರಾಮ ಎಂದು ಹೇಳುವರು, ಸತ್ಯಯುಗದಲ್ಲಿ ಪತಿತ-ಪವನ ಬಾ ಎಂದು ಹೇಳುವುದಿಲ್ಲ. ಏಕೆಂದರೆ ಅವರು ಪಾವನರಾಗಿರುತ್ತಾರೆ. ಸಾಧುಸಂತರೆಲ್ಲರೂ ಈ ರೀತಿ ಹಾಡುತ್ತಿರುತ್ತಾರೆ. ಗಾಂಧೀಜಿಯೂ ಸಹ ಹೊಸ ಜಗತ್ತಿನಲ್ಲಿ ರಾಮ ರಾಜ್ಯವಿರಲಿ ಎಂದು ಹೇಳುತ್ತಿದ್ದರು, ಅವರ ಕೈಯಲ್ಲಿ ಗೀತೆಯಿರುತ್ತಿತ್ತು – ಏಕೆಂದರೆ ಗೀತೆಯಿಂದ ಮಹಾ ವಿನಾಶ ಹಾಗೂ ಹೊಸ ಪ್ರಪಂಚ ಸ್ಥಾಪನೆ ಆಗಿತ್ತೆಂದು ತಿಳಿದುಕೊಂಡಿದ್ದರು. ಗೀತೆ ಸರ್ವ ಶಾಸ್ತ್ರಮಯಿ ಶಿರೋಮಣಿ ಹಾಗು ಗೀತೆ ತಾಯಿ ಆಗಿದೆ. ಒಳ್ಳೆಯದು . ಆ ತಾಯಿಯ ಪತಿಯಾರು? ಭಗವಂತ ಅವರೇ ಪತಿತರನ್ನು ಪಾವನ ಮಾಡುವವರಾಗಿದ್ದಾರೆ. ಭಗವಾನುವಾಚ ಕೃಷ್ಣನನ್ನು ಪತಿತ ಪಾವನ ಎಂದು ಹೇಳುವುದಿಲ್ಲ. ಮನುಷ್ಯರು ಎಂದೂ ಪತಿತರನ್ನು ಪಾವನ ಮಾಡಲು ಸಾಧ್ಯವಿಲ್ಲ. ಮಧುರ ಮಕ್ಕಳು ನೀವು ಈಗ ಹೇಳುತ್ತೀರಿ ಆತ್ಮ-ಪರಮಾತ್ಮ ಬೇರೆ ಆಗಿದ್ದಾರೆ , ಹೀಗೂ ಹೇಳುತ್ತಾರೆ ಮಹಾನ್ಆತ್ಮ, ಪುಣ್ಯಾತ್ಮ, ಆದರೆ ‘ಮಹಾನ್ ಪರಮಾತ್ಮ’ ಎಂದು ಹೇಳುವುದಿಲ್ಲ. ಆದರೂ ತಮ್ಮನ್ನು ತಾವು ಶಿವೋಹಂ, ಪರಮಾತ್ಮ ಎಂದು ಏಕೆ ಹೇಳುತ್ತಾರೆ? ಪುಣ್ಯಾತ್ಮ, ಪಾಪಾತ್ಮ ಎಂದು ಹೇಳುತ್ತಾರೆ, ಆದರೆ ಆತ್ಮ ನಿರ್ಲೇಪವೆಂದು ಹೇಳುತ್ತಾರೆ. ನೀವು ಬ್ರಾಹ್ಮಣರು 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಕೆಲವರು ಈಗಲೂ ಸಹ ಪರಮಧಾಮದಿಂದ ಬರುತ್ತಾ ಇರುತ್ತಾರೆ. ಈಗ ಬಾಬಾ ಹೇಳುತ್ತಾರೆ ಎದ್ದೇಳಿ ಪ್ರಿಯತಮೆಯರೇ ಎದ್ದೇಳಿ….. ಕನ್ಯೆಯರು ಯಾವಾಗ ಮಾಡಿಕೊಳ್ಳುತ್ತಾರೆ ಆಗ ಅವರ ತಲೆಯ ಮೇಲೆ ಮಡಕೆ ಇಟ್ಟು ಅದರಲ್ಲಿ ದೀಪ ಬೆಳಗಿಸುತ್ತಾರೆ, ತಂದೆ ಹೇಳುತ್ತಾರೆ ಆತ್ಮ ಜ್ಯೋತಿಯ ಎಣ್ಣೆ ಮುಗಿದು ಹೋಗಿದೆ. ಈಗ ನನ್ನನ್ನು ನೆನಪು ಮಾಡಿದಾಗ ಎಣ್ಣೆ ತುಂಬುತ್ತಾ ತುಂಬುತ್ತಾ (ಶಕ್ತಿ ತುಂಬುತ್ತಾ ಆತ್ಮವೆಂಬ ದೀಪ) ದೀಪ ಉರಿಯಲು ಪ್ರಾರಂಭವಾಗುತ್ತದೆ. ನಂತರ ನೀವು ನನ್ನ ಬಳಿ ಬಂದು ಬಿಡುತ್ತೀರಿ. ಆ ನಿರಾಕಾರ ತಂದೆಯೇ ರಚೈತ, ನಿರ್ದೇಶಕ ಹಾಗೂ ಮುಖ್ಯ ಪಾತ್ರಧಾರಿ ಆಗಿದ್ದಾರೆ. ನೆನಪು ಯಾರನ್ನು ಮಾಡುತ್ತಾರೆ? ಬ್ರಹ್ಮನನ್ನೇ? ವಿಷ್ಣುವನ್ನೇ? ಇಲ್ಲ. ಎಲ್ಲರೂ ದುಃಖದಲ್ಲಿ ಶಿವ ತಂದೆಯನ್ನು ನೆನಪು ಮಾಡುತ್ತಾರೆ. ಇದು ಸುಖ-ದುಃಖ, ಸೋಲು -ಗೆಲುವಿನ ಆಟವಾಗಿದೆ. ಮಾಯೆಯು ಸೋಲಿಸಿ ಬಿಡುತ್ತದೆ, ತಂದೆ ವಿಜಯದ ಮಾಲೆ ತೊಡಿಸುತ್ತಾರೆ. ತಂದೆ ಸರ್ವ ಶಕ್ತಿವಂತ ಆಗಿದ್ದಾರೆ. ಭಗವಂತನ ಆಶಿರ್ವಾದವಿದ್ದರೆ ಖಾಯಿಲೆ ಗುಣವಾಗಿ ಬಿಡುತ್ತದೆಯೆಂದು ಪ್ರಪಂಚದವರು ತಿಳಿದುಕೊಂಡಿದ್ದಾರೆ, ಬಾಬಾ ತಿಳಿಸುತ್ತಾರೆ ನಾನು ಈ ವ್ಯಾಪಾರ ಮಾಡಲು ಬಂದಿಲ್ಲ, ಪತಿತರನ್ನು ಪಾವನ ಮಾಡುವುದು ನನ್ನ ಕರ್ತವ್ಯವಾಗಿದೆ. ತಂದೆ ಶ್ರೇಷ್ಠರಲ್ಲಿ ಶ್ರೇಷ್ಠ ಮಾಲೆಯ ಮಣಿಯಾಗಿದ್ದಾರೆ. ಈಗ ನೀವು ತಿಳಿದುಕೊಂಡಿದ್ದೀರಿ ನಾವು ಈಶ್ವರೀಯ ಪರಿವಾರದವರೆಂದು ಶಿವಬಾಬಾರವರ ಮಹಿಮೆಯು ಅಪರಮಪಾರವಾಗಿದೆ. ಭಾರತದಲ್ಲಿ ವಜ್ರ, ವೈಢೂರ್ಯಗಳ ಅರಮನೆಗಳಿದ್ದವು, ತಂದೆ ವಿಧಾತ ಆಗಿದ್ದಾರೆ. ನೆನಪಿನಲ್ಲಿ ಕುಳಿತಾಗ ಮೊದಲು ತಂದೆ ನೆನಪಿಗೆ ಬರುತ್ತಾರೆ. ಬ್ರಹ್ಮ,ವಿಷ್ಣು,ಶಂಕರರು ಸೂಕ್ಷ್ಮವತನವಾಸಿಗಳು. ಬ್ರಹ್ಮರ ಮುಖಾಂತರ ಸ್ಥಾಪನೆ ಆಗುತ್ತಿದೆ. ಈ ಸಮಯದಲ್ಲಿ ನೀವು ಈಶ್ವರೀಯ ಪರಿವಾರದವರಾಗಿದ್ದೀರಿ, ನಂತರ ದೈವೀ ಪರಿವಾರದವರಾಗುತ್ತೀರಿ, ಇದೆಲ್ಲವೂ ಕೇವಲ ಸಂಗಮ ಯುಗದಲ್ಲಿ ನಡೆಯುತ್ತದೆ. ಸೂರ್ಯವಂಶಿ, ಚಂದ್ರವಂಶಿಯ ವಿರಾಟ ರೂಪ ಚಿತ್ರ ಇದೆ. ಕೇವಲ ಶಿಖೆಯನ್ನು (ಬ್ರಾಹ್ಮಣರಿಗೆ) ತೋರಿಸಿಲ್ಲ. ದೇವತಾ ಕ್ಷತ್ರಿಯ… ಆದರೆ ದೇವತೆಗಳಿಗಿಂತ ಮೊದಲು ಯಾರಿದ್ದರು? ಈಗ ಬೇಹದ್ದಿನ ಮನ್ಮನಾಭವ, ತಂದೆ ಹೇಳುತ್ತಾರೆ ನನ್ನ ಜೊತೆ ಬುದ್ದಿಯೋಗ ಜೋಡಿಸಿ ಹಾಗೂ ಬೇಹದ್ದಿನ ಆಸ್ತಿ ತೆಗೆದುಕೊಳ್ಳಿರಿ. ಈಗ ತೆಗೆದುಕೊಂಡರೆ ಜನ್ಮ ಜನ್ಮಾಂತರದಲ್ಲೂ ತೆಗೆದುಕೊಳ್ಳುತ್ತೀರಿ. ಸತ್ಯಯುಗ, ತ್ರೇತಾವರೆಗೂ 21 ಜನ್ಮ ಬೇಹದ್ದಿನ ಆಸ್ತಿ ತೆಗೆದುಕೊಳುತ್ತೀರಿ. ಹದ್ದಿನ ಆಸ್ತಿ ಈಗ ಏನೇನೂ ಇಲ್ಲ. ಮತ್ತೆ ತಂದೆಯಿಂದ ತೆಗೆದುಕೊಳ್ಳಬೇಕು. ಅವರು ಹೇಳುತ್ತಾರೆ ಪರಮಾತ್ಮ ನಾಮ ರೂಪದಿಂದ ಭಿನ್ನವಾಗಿದೆ, ಅವರು ಹೇಗೆ ಇಲ್ಲಿಗೆ ಬರುತ್ತಾರೆ. ಅರೆಗೀತೆಯಲ್ಲಿದೆ ಶ್ರೀಮತ್ಭಗವತ್ ಗೀತೆ ಎಂದು, ಆದರೆ ಭಗವಾನುವಾಚ – ಕೃಷ್ಣನನ್ನು ಭಗವಂತನೆಂದು ಒಪ್ಪಿಕೊಳ್ಳುವುದಿಲ್ಲ. ಇದೆಲ್ಲವೂ ನಾಟಕದಲ್ಲಿ ನಿಗಧಿಯಾಗಿದೆ. ಭಗವಂತ ನಿರಾಕಾರ ಜ್ಞಾನ ಸಾಗರ ಆಗಿದ್ದಾರೆ. ನಂತರ ಕೃಷ್ಣನ ಮಹಿಮೆ ನಡೆಯುತ್ತದೆ, ಅವರ ಮಹಿಮೆಯೇ ಬೇರೆಯಾಗಿದೆ – ಸರ್ವಗುಣ ಸಂಪನ್ನ, 16 ಕಲಾ ಸಂಪೂರ್ಣ…. ಈ ಸಮಯದಲ್ಲಿ ಎಲ್ಲರೂ ಹಿಂಸೆ ಕೊಡುವ ಆಯುಧಗಳನ್ನು ಉಪಯೋಗಿಸುವವರಾಗಿದ್ದಾರೆ. ಲಕ್ಷ್ಮೀ-ನಾರಾಯಣರಿಗೆ ಹೀಗೆ ಹೇಳುವುದಿಲ್ಲ, ಅವರಂತು ಸಂಪೂರ್ಣ ಶ್ರೇಷ್ಟಾಚಾರಿ ಆಗಿದ್ದರು. ಪ್ರತಿಯೊಂದು ಆತ್ಮರಲ್ಲೂ ಬೇರೆ ಬೇರೆ ಪಾತ್ರವಿದೆ. ಎಷ್ಟು ಚಿಕ್ಕ ಆತ್ಮವಾಗಿದೆ, ಅದರಲ್ಲಿ ಎಲ್ಲಾ ಪಾತ್ರವೂ ತುಂಬಿದೆ. ತಂದೆ ಹೇಳುತ್ತಾರೆ ನಾನೂ ಕೂಡ ಆತ್ಮನೆ, ಆದರೆ ನನ್ನನ್ನು ಸುಪ್ರೀಂ (ಶ್ರೇಷ್ಠ ಆತ್ಮ) ಎನ್ನುತ್ತಾರೆ. ಭಕ್ತಿಮಾರ್ಗದಲ್ಲಿ ದೊಡ್ಡ ದೊಡ್ಡ ಲಿಂಗ ಮಾಡಿ ಪೂಜಿಸುತ್ತಾರೆ, ಆತ್ಮನಂತು ನಕ್ಷತ್ರದ ಸಮಾನವಿರುತ್ತದೆ. ಡ್ರಾಮಾದಲ್ಲಿ ಎಷ್ಟೊಂದು ಪಾತ್ರಧಾರಿಗಳಿದ್ದಾರೆ. ಪ್ರತಿಯೊಬ್ಬರಿಗೂ ಅವರದೇ ಆದ ಪಾತ್ರವಿದೆ. ಇದಕ್ಕೆ ಮಾಡಿ ಮಾಡಲ್ಪಟ್ಟ ನಾಟಕ ಎಂದು ಹೇಳಲಾಗುತ್ತದೆ. ಸಾಮಾನ್ಯವಾಗಿ ನಾಟಕದಲ್ಲಿ ಕೇವಲ ನಾಲ್ಕು ಗಂಟೆಯ ರೀಲ್ ಇರುತ್ತದೆ. ಆದರೆ ಈ ಸೃಷ್ಠಿ ನಾಟಕವು 5000 ವರ್ಷಗಳದ್ದಾಗಿದೆ. ಪ್ರಪಂಚದವರು ಕಲಿಯುಗದ ಆಯಸ್ಸು ನಾಲ್ಕು ಲಕ್ಷದ ಮುವತ್ತೆರಡು ಸಾವಿರ ವರ್ಷವೆಂದು ಹೇಳಿದ್ದಾರೆ, ಇದು ಸುಳ್ಳು, ಪ್ರಪಂಚದವರ ಎದುರಿಗೆ ಮೃತ್ಯು ನಿಂತಿದ್ದರೂ ಇನ್ನೂ ಘೋರ ಅಂಧಕಾರದಲ್ಲಿ ಇದ್ದಾರೆ. ತಂದೆಯು ಈಗ ನಮ್ಮನ್ನು ಎಚ್ಚರಿಸುತ್ತಿದ್ದಾರೆ-ಮಕ್ಕಳೇ, ನೀವು ಭಕ್ತರು ಭಗವಂತನ್ನು ನೆನಪು ಮಾಡುತ್ತಾ ಬಂದಿದ್ದೀರಿ. ಈಗ ಭಕ್ತಿಮಾರ್ಗ ಸಮಾಪ್ತಿಯಾಯಿತು, ನಾನು ನಿಮಗೆ ಜ್ಞಾನದಿಂದ ಬೆಳಕು ನೀಡಲು ಬಂದಿದ್ದೇನೆ. ಈ ಸಮಯದಲ್ಲಿ ನೋಡಿ ಮನುಷ್ಯರಲ್ಲಿ ಎಷ್ಟೊಂದು ಕ್ರೋಧವಿದೆ! ಯುದ್ಧವನ್ನು ಕಲಿಯುತ್ತಿದ್ದಾರೆ. ಯಾವಾಗ ರಾವಣ ರಾಜ್ಯ ಪ್ರಾರಂಭವಾಯಿತು, ಅಂದಿನಿಂದ ಇದೆಲ್ಲವೂ ಆರಂಭವಾಗುತ್ತದೆ. ಸತ್ಯಯುಗದಲ್ಲಂತೂ ರಾಮ ರಾಜ್ಯವಿರುತ್ತದೆ. ಈಗ ನಾನು ನಿಮ್ಮನ್ನು ರಾಜರಿಗೂ – ರಾಜರನ್ನಾಗಿ ಮಾಡುತ್ತೇನೆಂದು ತಂದೆಯು ತಿಳಿಸುತ್ತಿದ್ದಾರೆ. ಪುನಃ ನೀವು ಕೆಳಗಡೆ ಇಳಿದಾಗ ಪಾವನ ರಾಜರು ಆಗಿ ಮತ್ತೆ ಪತಿತರಾಗಿ ಬಿಡುತ್ತೀರಿ. ಈಗಂತೂ ಆ ಪತಿತ ರಾಜರೂ ಸಹ ಇಲ್ಲದಂತಾಗಿದೆ. ತಂದೆ ತಿಳಿಸುತ್ತಾರೆ – ಮಕ್ಕಳೇ ನೀವು ಸದಾ ಶಿವ ತಂದೆಯು ಇವರ ಮೂಲಕ ತಿಳಿಸುತ್ತಿದ್ದಾರೆಂದು ತಿಳಿದುಕೊಳ್ಳಬೇಕು. ಯಾರು ಇದನ್ನು ಕೇಳಿ ಮಹಾರಾಜ ಮಹಾರಾಣಿ ಆಗಿದ್ದರು, ಅವರೇ ಈಗ ಪತಿತರಾಗಿದ್ದಾರೆ. ಇದು ಆಸುರೀ ಸೃಷ್ಠಿಯಾಗಿದೆ, ಅದು ಈಶ್ವರೀಯ ಸೃಷ್ಟಿಯಾಗಿದೆ. ರಾಮ ಹಾಗೂ ರಾವಣ ಹೆಸರು ಪ್ರಖ್ಯಾತವಾಗಿದೆ. ರಾವಣನ ಅರ್ಥವನ್ನು ಯಾರೂ ಸಹ ತಿಳಿದುಕೊಂಡಿಲ್ಲ. ರಾವಣನೆಂದರೆ ನರ ಹಾಗು ನಾರಿಯಲ್ಲಿನ ಪಂಚ ವಿಕಾರವಾಗಿದೆ, ಹೀಗೆ ಹತ್ತು ತಲೆಯನ್ನು ತೋರಿಸುತ್ತಾರೆ, ಆದುದರಿಂದ ಈ ಕಲಿಯುಗಕ್ಕೆ ರಾವಣ ರಾಜ್ಯವೆಂದು ಕರೆಯಲಾಗುತ್ತದೆ. ದೀಪಾವಳಿಯಲ್ಲಿ ಮಹಾಲಕ್ಷ್ಮೀಯನ್ನು ಚತುರ್ಭುಜಧಾರಿಯಾಗಿ ಮಾಡುತ್ತಾರೆ, ಲಕ್ಷ್ಮೀ ಹಾಗೂ ನಾರಾಯಣರಿಬ್ಬರದು ಎರಡೆರಡು ಭುಜಗಳಾಗಿವೆ. ಈಗ ನೀವು ರಾಜರಿಗೂ ರಾಜರಾಗುತ್ತೀರಿ, ಡಬಲ್ ಕಿರೀಟಧಾರಿಗಳಾಗುತ್ತೀರಿ. ಈ ಸಮಯದಲ್ಲಿ ನೀವು ಸ್ವದರ್ಶನ ಚಕ್ರಧಾರಿಗಳಾಗುತ್ತೀರಿ. 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರೆಂದು ಈಗ ನೀವು ತಿಳಿದುಕೊಂಡಿದ್ದೀರಿ. ಬೇಹದ್ದಿನ ತಂದೆಯಿಂದ ಬೇಹದ್ದಿನ ಸುಖ, ಹದ್ದಿನ ತಂದೆಯಿಂದ ಅಲ್ಪಕಾಲದ ಸುಖ ಸಿಗುತ್ತದೆ. ಸತ್ಯಯುಗ ಬ್ರಹ್ಮನ ದಿನವಾಗಿದೆ, ಕಲಿಯುಗ ಬ್ರಹ್ಮನ ರಾತ್ರಿಯಾಗಿದೆ. ಪ್ರಜಾಪಿತನೂ (ಬ್ರಹ್ಮಾ) ಸಹ ಇಲ್ಲಿ ಖಂಡಿತ ಇದ್ದಾರೆ. ಎಲ್ಲರೂ ಶಿವಬಾಬಾರವರ ಸಂತಾನರು. ಪುನಃ ಬ್ರಹ್ಮನ ಮುಖಾಂತರ ಬ್ರಾಹ್ಮಣ ಹಾಗು ಬ್ರಾಹ್ಮಣಿಯರ ರಚನೆಯಾಗುತ್ತದೆ. ಇಲ್ಲವೆಂದರೆ ಇಷ್ಟು ಮಕ್ಕಳನ್ನು ಹೇಗೆ ದತ್ತು ತೆಗೆದುಕೊಳ್ಳುತ್ತಾರೆ! ಶಿವಬಾಬಾ ಬ್ರಹ್ಮಾರವರ ಮುಖಾಂತರ ದತ್ತು ತೆಗೆದುಕೊಳ್ಳುತ್ತಾರೆ, ನೀವು ನನ್ನವರೆಂದು ತಂದೆಯು ತಿಳಿಸುತ್ತಾರೆ. ಈಗ ನಮಗೆ ಹೊಸ ಜನ್ಮ ಸಿಗುತ್ತದೆ. ತಾತನ ಆಸ್ತಿ ನಿಮಗೆ ಈಗ ಸಿಗುತ್ತಿದೆ, ಬ್ರಹ್ಮನ ಮುಖಾಂತರ ವಿಶ್ವದ ರಾಜ್ಯಭಾಗ್ಯ ಸಿಗುತ್ತದೆ. ಬ್ರಹ್ಮಾರವರನ್ನು ಸೂಕ್ಷ್ಮವತನವಾಸಿ ಎಂದು ತೋರಿಸಿದ್ದಾರೆ, ಆದರೆ ಅಲ್ಲಿ ಅವರು ಹೇಗೆ ಸಿಗುತ್ತಾರೆ. ಬಾಬಾರವರಿಗೆ ಮುರಳಿಯನ್ನು ನುಡಿಸಲು ಖಂಡಿತವಾಗಿಯೂ ರಥ ಬೇಕಲ್ಲವೇ. ಭಾರತದ ಮೊಟ್ಟ ಮೊದಲ ಶಾಸ್ತ್ರವಾಗಿದೆ ಗೀತೆ. ಉಳಿದೆಲ್ಲಾ ಶಾಸ್ತ್ರಗಳು ಅದರ ಮಕ್ಕಳಾಗಿದೆ. ಮೊದಲು ದೇವೀ-ದೇವತೆಗಳ ಕುಲವಿತ್ತು, ನಂತರ ಕ್ಷತ್ರಿಯ ಕುಲ…… ಹೀಗೆ ಯಾವ ಧರ್ಮ ಸ್ಥಾಪನೆ ಆಗುತ್ತದೆ ಅದು ಮೊದಲು ಸತೋ, ರಜೋ, ತಮೋಪ್ರಧಾನದಲ್ಲಿ ಬರುತ್ತದೆ. ಹೇಗೆ ಕ್ರೈಸ್ತನ ಆತ್ಮರು ಮೊದಲು ಬಂದಾಗ ಪವಿತ್ರವಾಗಿತ್ತು, ಯಾವುದೇ ವಿಕರ್ಮ ಮಾಡದಿದ್ದಾಗ ಶಿಕ್ಷೆ ಸಿಗುವುದಿಲ್ಲ. ಸತ್ಯಯುಗದಲ್ಲಿ ಪವಿತ್ರ ಆತ್ಮ ಬರುತ್ತದೆ. ಅಲ್ಲಿ ಮಾಯೆಯೂ ಇಲ್ಲ, ದುಃಖವು ಇಲ್ಲ. ದೇವತೆಗಳು ವಾಮ ಮಾರ್ಗದಲ್ಲಿ ಬಂದಾಗ ವಿಕರ್ಮವು ಆರಂಭವಾಗುತ್ತದೆ. ಈ ಮಾತುಗಳನ್ನು ಬಹಳ ತಿಳಿದುಕೊಳ್ಳಬೇಕಾಗಿದೆ. ವಿಕರ್ಮಾಜೀತ್ ವರ್ಷವು ಇದೇ ಅಂದಾಗ ವಿಕರ್ಮದ ವರ್ಷ ಹೇಗೆ ಆರಂಭವಾಗುತ್ತದೆ. ತುಂಬಾ ಕಥೆಗಳಿವೆ. ಮೋಹಜೀತ ರಾಜನ ಕಥೆ, ಮೋಹಜೀತ ರಾಜರು ಶ್ರೀ ಲಕ್ಷ್ಮೀ-ನಾರಾಯಣರಾಗಿದ್ದಾರೆ. ಅದು ರಾಮ ರಾಜ್ಯ, ಇದು ರಾವಣ ರಾಜ್ಯವಾಗಿದೆ. ರಾವಣನನ್ನು ಸುಡುತ್ತಾರೆ. ಅರ್ಧಕಲ್ಪ ರಾಮ ರಾಜ್ಯ ಮತ್ತೆ ಅರ್ಧಕಲ್ಪ ರಾವಣ ರಾಜ್ಯ ಇರುತ್ತದೆ. ಈ ಸ್ವದರ್ಶನ ಚಕ್ರವನ್ನು ನೀವು ಮಾತ್ರ ತಿಳಿದುಕೊಂಡಿದ್ದೀರಿ. ನೀವೆಲ್ಲರು ಈಶ್ವರನ ಮಕ್ಕಳಾಗಿದ್ದೀರಿ. ತಂದೆಯೂ ನಿಮ್ಮನ್ನು ಬ್ರಹ್ಮನ ಮೂಲಕ ಡೈರೆಕ್ಟ್ ದತ್ತು ತೆಗೆದುಕೊಂಡಿದ್ದಾರೆ. ಆದುದರಿಂದ ನಿಮಗೆ ಅಗಲಿ ಹೋಗಿರುವ ಮಕ್ಕಳೆಂದು ಹೇಳುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಆತ್ಮರೂಪಿ ದೀಪವನ್ನು ಸದಾ ಬೆಳಗಿಸಲು ನೆನಪು ಎಂಬ ಎಣ್ಣೆಯನ್ನು ಹಾಕುತ್ತಿರಬೇಕು. ನೆನಪಿನಿಂದ ಆತ್ಮವನ್ನು ಸತೋಪ್ರಧಾನ ಮಾಡಿಕೊಳ್ಳಬೇಕು.

2. ಸದಾ ಜ್ಞಾನವೆಂಬ ಪ್ರಕಾಶದಲ್ಲಿರಬೇಕು. ಬೇಹದ್ದಿನ ನಾಟಕವನ್ನು ಬುದ್ದಿಯಲ್ಲಿ ಇಟ್ಟುಕೊಂಡು ಸ್ವದರ್ಶನ ಚಕ್ರಧಾರಿಗಳಾಗಬೇಕು.

ವರದಾನ:-

ಒಂದುವೇಳೆ ಯಾವುದೇ ತಪ್ಪಾಯಿತೆಂದರೆ, ತಪ್ಪಾದ ನಂತರದಲ್ಲಿ ಏಕೆ, ಏನು, ಹೇಗೆ ಹೀಗಲ್ಲ ಹಾಗೆ….. ಈ ರೀತಿ ಯೋಚಿಸುವುದರಲ್ಲಿಯೇ ಸಮಯವನ್ನು ಕಳೆಯಬಾರದು. ಎಷ್ಟು ಸಮಯದವರೆಗೆ ಯೋಚನಾ ಸ್ವರೂಪರಾಗುತ್ತೀರಿ ಅಷ್ಟೂ ಕಪ್ಪು ಮಚ್ಚೆಯ ಮೇಲೆ ಮಚ್ಚೆಯನ್ನಿಡುತ್ತೀರಿ, ಪರೀಕ್ಷೆಯ ಸಮಯವು ಕಡಿಮೆಯಿರುತ್ತದೆ. ಆದರೆ ವ್ಯರ್ಥ ವಿಚಾರದ ಸಂಸ್ಕಾರವು ಪರೀಕ್ಷೆಯ ಸಮಯವನ್ನು ಹೆಚ್ಚಿಸಿ ಬಿಡುತ್ತದೆ. ಆದ್ದರಿಂದ ವ್ಯರ್ಥ ಸಂಕಲ್ಪಗಳ ತೀವ್ರ ಹರಡುವಿಕೆಯನ್ನು ಪರಿವರ್ತನಾ ಶಕ್ತಿಯಿಂದ, ಸೆಕೆಂಡಿನಲ್ಲಿ ಸ್ಟಾಪ್ ಮಾಡುತ್ತೀರೆಂದರೆ ನಿರ್ವಿಕಲ್ಪ ಸ್ಥಿತಿಯಾಗಿ ಬಿಡುತ್ತದೆ. ಯಾವಾಗ ಈ ಸಂಸ್ಕಾರವು ಇಮರ್ಜ್ ಆಗುತ್ತದೆಯೋ ಆಗ ಭಾಗ್ಯಶಾಲಿ ಆತ್ಮನೆಂದು ಹೇಳಲಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top