20 February 2022 KANNADA Murli Today | Brahma Kumaris

Read and Listen today’s Gyan Murli in Kannada

February 19, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಪುರುಷಾರ್ಥದ ತೀವ್ರ ಗತಿಯ ಕೊರತೆಗೆ ಎರಡು ಮುಖ್ಯ ಕಾರಣಗಳು

♫ ಕೇಳು ಇಂದಿನ ಮುರ್ಲಿ (audio)➤

ಇಂದು ಬ್ರಾಹ್ಮಣರ ಅನಾದಿ ರಚಯಿತ ಬಾಪ್ದಾದಾ ವಿಶೇಷ ತಮ್ಮ ಡೈರೆಕ್ಟ್ ಸಮೀಪ ರಚನೆ, ಶ್ರೇಷ್ಠ ರಚನೆಯಾದ ಬ್ರಾಹ್ಮಣ ಮಕ್ಕಳನ್ನು ನೋಡುತ್ತಿದ್ದಾರೆ. ಬಾಪ್ದಾದಾರವರ ಅತೀ ಪ್ರಿಯ ರಚನೆ ತಾವು ಬ್ರಾಹ್ಮಣ ಆತ್ಮರಾಗಿದ್ದೀರಿ, ಯಾರು ಸಮೀಪ ಮತ್ತು ಸಮಾನರಾಗುವ ಲಕ್ಷ್ಯವನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಂಡು ಮುಂದುವರೆಯುತ್ತಿದ್ದೀರಿ. ಇಂದು ಇಂತಹ ಆದಿ ರಚನೆಯನ್ನು ವಿಶೇಷ ರೂಪದಿಂದ ನೋಡುತ್ತಿದ್ದೆವು. ಸರ್ವ ತೀವ್ರ ಪುರುಷಾರ್ಥಿ ಹಾಗೂ ಪುರುಷಾರ್ಥಿ ಇಬ್ಬರ ಗತಿ ಮತ್ತು ವಿಧಿಯನ್ನು ನೋಡುತ್ತಿದ್ದೇವೆ. ಬಾಪ್ದಾದಾರವರ ಮೂಲಕ ಸಿಕ್ಕಿರುವ ಶ್ರೇಷ್ಠ ಸಹಜ ವಿಧಿಯ ಮೂಲಕ ಕೆಲವೊಮ್ಮೆ ತೀವ್ರ ಗತಿ, ಕೆಲವೊಮ್ಮೆ ತೀವ್ರ, ಕೆಲವೊಮ್ಮೆ ಕಡಿಮೆ ಗತಿ ಎರಡೂ ಪ್ರಕಾರದ ಬ್ರಾಹ್ಮಣ ಮಕ್ಕಳನ್ನು ನೋಡಿದೆವು. ವಿದ್ಯೆ, ಪಾಲನೆ ಮತ್ತು ಪ್ರಾಪ್ತಿ ಎಲ್ಲರಿಗೆ ಒಬ್ಬರ ಮೂಲಕ ಒಂದೇ ಪ್ರಕಾರವಾಗಿ ಸಿಗುತ್ತಿದೆ ಅಂದಮೇಲೆ ಮತ್ತೆ ಗತಿಯಲ್ಲಿ ಅಂತರವೇಕೆ? ತೀವ್ರ ಪುರುಷಾರ್ಥಿ ಅರ್ಥಾತ್ ಫಸ್ಟ್ ಡಿವಿಜನ್ನಲ್ಲಿ ಬರುವವರು ಮತ್ತು ಪುರುಷಾರ್ಥಿ ಅರ್ಥಾತ್ ಸೆಕೆಂಡ್ ಡಿವಿಜನ್ನಲ್ಲಿ ತೇರ್ಗಡೆಯಾಗುವವರು. ಇಂದು ವಿಶೇಷವಾಗಿ ಎಲ್ಲರ ಚಾರ್ಟನ್ನು ಪರಿಶೀಲನೆ ಮಾಡಿದೆವು. ಕಾರಣಗಳಂತೂ ಬಹಳ ಇದೆ ಆದರೆ ವಿಶೇಷವಾಗಿ ಎರಡು ಕಾರಣಗಳಿವೆ. ಎಲ್ಲರ ಬಯಕೆ ಫಸ್ಟ್ ಡಿವಿಜನ್ನಲ್ಲಿ ಬರಬೇಕು ಎಂಬುದೇ ಆಗಿದೆ, ಸೆಕೆಂಡ್ ಡಿವಿಜನ್ನಲ್ಲಿ ಬರಲು ಯಾರೂ ಬಯಸುವುದಿಲ್ಲ. ಆದರೆ ಲಕ್ಷ್ಯ ಮತ್ತು ಲಕ್ಷಣ ಇವೆರಡರಲ್ಲಿ ಅಂತರವಾಗಿ ಬಿಡುತ್ತದೆ. ವಿಶೇಷವಾಗಿ ಯಾವ ಎರಡು ಕಾರಣಗಳನ್ನು ನೋಡಿರಬಹುದು? ಮೊದಲನೆಯದು- ಸಂಕಲ್ಪ ಶಕ್ತಿ. ಇದು ಎಲ್ಲದಕ್ಕಿಂತ ಶ್ರೇಷ್ಠ ಶಕ್ತಿಯಾಗಿದೆ, ಅದನ್ನು ಯಥಾರ್ಥ ರೀತಿಯಿಂದ ಸ್ವಯಂನ ಪ್ರತಿ ಹಾಗೂ ಸೇವೆಯ ಪ್ರತಿ ಸಮಯ ಪ್ರಮಾಣ ಕಾರ್ಯದಲ್ಲಿ ತೊಡಗಿಸುವ ರೀತಿಯು ಯಥಾರ್ಥವಾಗಿಲ್ಲ. ಎರಡನೇ ಕಾರಣವಾಗಿದೆ – ವಾಣಿಯ ಶಕ್ತಿಯನ್ನು ಯಥಾರ್ಥ ರೀತಿ, ಸಮರ್ಥ ರೀತಿಯಿಂದ ಕಾರ್ಯದಲ್ಲಿ ತೊಡಗಿಸುವುದರ ಕೊರತೆ. ಇವೆರಡರಲ್ಲಿನ ಕೊರತೆಗೆ ಕಾರಣವಾಗಿದೆ – ಯೂಸ್ (ಬಳಕೆ) ಬದಲು ಲೂಸ್ (ಸೋರಿಕೆ) ಆಗುತ್ತದೆ. ಶಬ್ಧಗಳಲ್ಲಿ ಸ್ವಲ್ಪವೇ ಅಂತರವಿದೆ ಆದರೆ ಪರಿಣಾಮದಲ್ಲಿ ಬಹಳಷ್ಟು ಅಂತರವಾಗಿ ಬಿಡುತ್ತದೆ. ಬಾಪ್ದಾದಾ ಪೂರ್ಣ ಫಲಿತಾಂಶವನ್ನು ನೋಡಲಿಲ್ಲ, ಕೇವಲ 3-4 ದಿನಗಳ ಫಲಿತಾಂಶವನ್ನು ನೋಡಿದೆವು. ಪ್ರತಿಯೊಬ್ಬರ 3-4 ದಿನಗಳ ಫಲಿತಾಂಶದಲ್ಲಿ ಏನು ನೋಡಿರಬಹುದು? 50% ಅರ್ಥಾತ್ ಅರ್ಧ-ಅರ್ಧ. ಸಂಕಲ್ಪ ಮತ್ತು ಮಾತಿನಲ್ಲಿ ಎರಡರಲ್ಲಿ ಶಕ್ತಿಗಳ ಜಮಾದ ಖಾತೆಯು ಶೇ. 50ರಷ್ಟು ಆತ್ಮರ ಜಮಾದ ಖಾತೆ 40% ಇತ್ತು ಹಾಗೂ ವ್ಯರ್ಥ ಮತ್ತು ಸಾಧಾರಣತೆಯ ಖಾತೆಯು 60% ನೋಡಿದೆವು. ಅಂದಾಗ ಆಲೋಚಿಸಿ – ಜಮಾ ಎಷ್ಟಾಯಿತು? ಹೆಚ್ಚು ಭಾರವು ಯಾರದಾಯಿತು? ಅದರಲ್ಲಿಯೂ ವಾಚಾದ ಕಾರಣ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ. ಮನಸ್ಸು ವಾಣಿಯನ್ನೂ ಸಹ ತನ್ನ ಕಡೆ ಸೆಳೆಯುತ್ತದೆ. ಇಂದು ಬಾಪ್ದಾದಾ ವಾಣಿ ಅರ್ಥಾತ್ ಮಾತಿನ ಕಡೆ ವಿಶೇಷ ಗಮನ ತರಿಸುತ್ತಿದ್ದೇವೆ ಏಕೆಂದರೆ ಮಾತಿನ ಸಂಬಂಧ ತನ್ನ ಜೊತೆಯೂ ಇದೆ ಮತ್ತು ಸರ್ವರ ಜೊತೆಯೂ ಇರುತ್ತದೆ. ಮತ್ತೇನು ನೋಡಿದೆವು? ಮನಸ್ಸಿನ ಮೂಲಕ ನೆನಪಿನಲ್ಲಿರಬೇಕಾಗಿದೆ, ಅದಕ್ಕಾಗಿಯೂ ಮಧ್ಯ-ಮಧ್ಯದಲ್ಲಿ ಕಾರ್ಯಕ್ರಮಗಳನ್ನು ಇಟ್ಟುಕೊಳ್ಳುತ್ತಾರೆ ಆದರೆ ಮಾತಿನ ಬದಲಾಗಿ ಹುಡುಗಾಟಿಕೆಯು ಹೆಚ್ಚಿನದಾಗಿದೆ ಆದ್ದರಿಂದ ಬಾಪ್ದಾದಾ ಇದರ ಮೇಲೆ ವಿಶೇಷ ಅಂಡರ್ಲೈನ್ ಮಾಡಿಸುತ್ತಿದ್ದೇವೆ. ಎರಡು ವರ್ಷಗಳ ಮೊದಲು ಬಾಪ್ದಾದಾ ವಿಶೇಷವಾಗಿ ಪುರುಷಾರ್ಥದಲ್ಲಿ, ಸೇವೆಯಲ್ಲಿ ಮುಂದುವರೆಯುವಂತಹ ಮಹಾರಥಿ ಆತ್ಮರಿಗೆ ಹಾಗೂ ಎಲ್ಲರಿಗೆ ವಾಣಿಗಾಗಿ ಮೂರು ಮಾತುಗಳನ್ನು ತಿಳಿಸಿದ್ದೆವು- “ಕಡಿಮೆ ಮಾತನಾಡಿ, ನಿಧಾನವಾಗಿ ಮಾತನಾಡಿ ಮತ್ತು ಮಧುರವಾಗಿ ಮಾತನಾಡಿ” ವ್ಯರ್ಥ ಮಾತಿನ ಚಿಹ್ನೆಯಾಗಿದೆ – ಅವರು ಹೆಚ್ಚು ಮಾತನಾಡುವರು, ಬಲವಂತವಾಗಿ ಸಮಯ ಪ್ರಮಾಣ-ಸಂಘಟನೆಯ ಪ್ರಮಾಣ ತಮ್ಮನ್ನು ನಿಯಂತ್ರಿಸಿಕೊಳ್ಳುವರು ಆದರೆ ಒಳಗಡೆ ಈ ರೀತಿ ಅನುಭವವಾಗುತ್ತದೆ, ಹೇಗೆ ಯಾರು ಶಾಂತಿಯಲ್ಲಿ ಮೌನವಾಗಿರುವುದಕ್ಕಾಗಿ ನಮ್ಮನ್ನು ಬಂಧಿಸಿದ್ದಾರೆ ಎನಿಸುತ್ತದೆ. ವ್ಯರ್ಥ ಮಾತು ಯಾವ ಅತಿ ದೊಡ್ಡ ನಷ್ಟವನ್ನುಂಟು ಮಾಡುತ್ತದೆ? ಒಂದನೆಯದಾಗಿ ಶಾರೀರಿಕ ಶಕ್ತಿಯು ಸಮಾಪ್ತಿಯಾಗುತ್ತದೆ ಏಕೆಂದರೆ ಖರ್ಚಾಗುತ್ತದೆ ಮತ್ತು ಎರಡನೆಯದಾಗಿ ಸಮಯವು ವ್ಯರ್ಥವಾಗಿ ಹೋಗುತ್ತದೆ. ವ್ಯರ್ಥವಾಗಿ ಮಾತನಾಡುವವರ ಹವ್ಯಾಸವು ಏನಿರುತ್ತದೆ? ಚಿಕ್ಕ ಮಾತನ್ನು ಬಹಳ ಉದ್ದಗಲವಾಗಿ ಮಾತನಾಡುವರು ಮತ್ತು ಮಾತನಾಡುವ ರೀತಿಯು ಕಥೆಯ ತರಹ ಇರುವುದು. ಹೇಗೆ ರಾಮಾಯಣ, ಮಹಾಭಾರತದ ಕಥೆಯನ್ನು ಬಹಳ ಆಸಕ್ತಿಯಿಂದ ಕೇಳುತ್ತಾರಲ್ಲವೆ. ಸ್ವಯಂ ರುಚಿಯಿಂದ ಹೇಳುತ್ತಾರೆ, ಅನ್ಯರಿಗೂ ಹೇಳುವ ರುಚಿಯನ್ನು ತರಿಸುತ್ತಾರೆ ಆದರೆ ಫಲಿತಾಂಶವೇನಾಗುತ್ತದೆ? ರಾಮಾಯಣ-ಮಹಾಭಾರತದ ಫಲಿತಾಂಶವೇನಾಗಿದೆ? ರಾಮನು ವನವಾಸಕ್ಕೆ ಹೋದನು, ಕೌರವರು ಮತ್ತು ಪಾಂಡವರ ಯುದ್ಧವಾಯಿತು. ಹೇಗೆ ಕಥೆಯಂತೆ ತೋರಿಸುತ್ತಾರೆ ಆದರೆ ಸಾರವೇನೂ ಇಲ್ಲ. ಸಂಗೀತವು ಬಹಳ ರಮಣೀಕವಾಗಿರುತ್ತದೆ, ಇದಕ್ಕೆ ಕಥೆಯೆಂದು ಹೇಳುತ್ತಾರೆ. ವ್ಯರ್ಥವಾಗಿ ಮಾತನಾಡುವವರು ಮಾಯೆಯ ಪ್ರಭಾವದ ಕಾರಣ ಅವರು ನಿರ್ಬಲ ಆತ್ಮನಾಗಿದ್ದಾರೆ. ಅವರಿಗೆ ಕೇಳುವ ಮತ್ತು ಹೇಳುವ ಜೊತೆಗಾರರು ಬಹಳ ಬೇಗ ತಯಾರಾಗುತ್ತಾರೆ. ಇಂತಹ ಆತ್ಮನು ಏಕಾಂತಪ್ರಿಯ ಆಗಿರಲು ಸಾಧ್ಯವಾಗುವುದಿಲ್ಲ ಆದ್ದರಿಂದ ಅವರು ಜೊತೆಗಾರರನ್ನು ತಯಾರು ಮಾಡಿಕೊಳ್ಳುವುದರಲ್ಲಿ ಬಹಳ ಬುದ್ಧಿವಂತರಾಗಿರುತ್ತಾರೆ. ಹೊರಗಿನಿಂದ ಕೆಲಕೆಲವೊಮ್ಮೆ ಇವರ ಸಂಘಟನೆಯು ಬಹಳ ಶಕ್ತಿಶಾಲಿ ಮತ್ತು ದೊಡ್ಡದಾಗಿದೆ ಎಂಬಂತೆ ಕಾಣುತ್ತದೆ ಆದರೆ ಒಂದು ಮಾತಂತೂ ಸದಾಕಾಲಕ್ಕಾಗಿ ನೆನಪಿಟ್ಟುಕೊಳ್ಳಿ – “ಮಾಯೆಯು ಬಿಟ್ಟು ಹೋಗುವ ಅಂತಿಮ ಚರಣವಾಗಿದೆ ಆದ್ದರಿಂದ ಬೀಳ್ಕೊಡುಗೆಯನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಕೆಲವೊಮ್ಮೆ ತನ್ನ ಬಾಣವನ್ನು ಬಿಡುತ್ತಾ ಇರುತ್ತದೆ” ಆದ್ದರಿಂದ ಕೆಲಕೆಲವೊಮ್ಮೆ ಕೆಲವೊಂದೆಡೆ ಮಾಯೆಯ ಪ್ರಭಾವವು ತನ್ನ ಕೆಲಸ ಮಾಡಿ ಬಿಡುತ್ತದೆ ಅದು ಆರಾಮದಿಂದ ಹೋಗುವಂತಹದ್ದಲ್ಲ. ಕೊನೆ ಘಳಿಗೆಯವರೆಗೂ ಪ್ರತ್ಯಕ್ಷವಾಗಿ ಇಲ್ಲವೆ ಪರೋಕ್ಷವಾಗಿ ಕಹಿಯಾದ ರೂಪದಲ್ಲಿ ಇಲ್ಲವೆ ಬಹಳ ಮಧುರ ರೂಪದಲ್ಲಿ ಮತ್ತು ಹೊಸ-ಹೊಸ ರೂಪಗಳನ್ನು ಧಾರಣೆ ಮಾಡಿಕೊಂಡು ಬ್ರಾಹ್ಮಣರ ಮೇಲೆ ಪ್ರಯೋಗ ನಡೆಸುತ್ತಾ ಇರುತ್ತದೆ. ಇದರಿಂದ ಮುಗ್ಧ ಬ್ರಾಹ್ಮಣರು ಕೆಲವೊಮ್ಮೆ ಏನು ಹೇಳುತ್ತಾರೆ? ಅರೆ! ಬಾಪ್ದಾದಾ ಈ ರೂಪದಲ್ಲಿಯೂ ಮಾಯೆ ಬರುತ್ತದೆ ಎಂಬುದನ್ನು ತಿಳಿಸಿರಲೇ ಇಲ್ಲ! ಹುಡುಗಾಟಿಕೆಯ ಕಾರಣ ತಮ್ಮನ್ನು ಪರಿಶೀಲನೆಯೂ ಮಾಡಿಕೊಳ್ಳುವುದಿಲ್ಲ ಮತ್ತು ಇದನ್ನೇ ಯೋಚಿಸುತ್ತಾರೆ – ಬಾಪ್ದಾದಾರವರಂತೂ ಮಾಯೆ ಬರುವುದು….. ಎಂದು ಹೇಳುತ್ತಾರೆ. ಇದನ್ನು ಅರ್ಧ ಪದವನ್ನು ನೆನಪಿಟ್ಟುಕೊಳ್ಳುತ್ತಾರೆ – ಮಾಯೆ ಬರುವುದು ಎಂದು. ಆದರೆ ಮಾಯಾಜೀತರಾಗಬೇಕು ಎಂಬುದನ್ನು ಮರೆತು ಹೋಗುತ್ತಾರೆ.

ಇನ್ನೊಂದು ಮಾತು – ವ್ಯರ್ಥ ಹಾಗೂ ಸಾಧಾರಣ ಮಾತಿನ ಭಿನ್ನ-ಭಿನ್ನ ರೂಪಗಳನ್ನು ನೋಡಿದೆವು, ಒಂದನೆಯದು – ಎಲ್ಲೆಯಿಂದ ಹೊರಗೆ ಅರ್ಥಾತ್ ಮಿತಿಗಿಂತಲೂ ಆಚೆ ತಮಾಷೆಯ ಮಾತು. ಎರಡನೆಯದು – ಟೀಕಿಸುವಂತೆ ಮಾತನಾಡುವುದು. ಮೂರನೆಯದು- ಅಲ್ಲಿ-ಇಲ್ಲಿನ ಸಮಾಚಾರಗಳನ್ನು ಒಟ್ಟುಗೂಡಿಸಿ ಕೇಳುವುದು-ಹೇಳುವುದು. ನಾಲ್ಕನೆಯದು- ಸ್ವಲ್ಪ ಸೇವಾ ಸಮಾಚಾರ ಮತ್ತು ಸೇವಾ ಸಮಾಚಾರಗಳ ಜೊತೆ ಸೇವಾಧಾರಿಗಳ ಬಲಹೀನತೆಗಳ ಚಿಂತನೆ- ಈ ಮಿಕ್ಸ್ ಚಟ್ನಿ ಮತ್ತು ಐದನೆಯದು- ಆಯುಕ್ತಿಯುಕ್ತ ಮಾತು, ಯಾವುದು ಬ್ರಾಹ್ಮಣರ ಶಬ್ಧಕೋಶದಲ್ಲಿ ಇರಲೇಬಾರದು ಆದರೆ ಈ ಐದು ರೂಪರೇಖೆಗಳನ್ನು ನೋಡಿದೆವು. ಈ ಐದನ್ನು ಬಾಪ್ದಾದಾ ವ್ಯರ್ಥ ಮಾತಿನ ಪಟ್ಟಿಯಲ್ಲಿಯೇ ಎಣಿಕೆ ಮಾಡುತ್ತೇವೆ. ತಮಾಷೆ ಮಾಡುವುದು ಒಳ್ಳೆಯದೇ ಎಂದು ತಿಳಿದುಕೊಳ್ಳಬೇಡಿ. ಯಾವ ತಮಾಷೆಯಲ್ಲಿ ಆತ್ಮೀಯತೆ ಇರುವುದೋ ಅದು ಒಳ್ಳೆಯದಾಗಿದೆ ಮತ್ತು ಯಾರೊಂದಿಗೆ ತಮಾಷೆ ಮಾಡುತ್ತೀರೋ ಆ ಆತ್ಮಕ್ಕೆ ಲಾಭವಾಯಿತೇ, ಸಮಯವು ಸಫಲವಾಯಿತೇ ಅಥವಾ ವ್ಯರ್ಥವಾಗಿ ಕಳೆಯಿತೇ? ರಮಣೀಕತೆಯ ಗುಣವು ಒಳ್ಳೆಯದೇ ಆಗಿದೆ ಎಂದು ಹೇಳಲಾಗುತ್ತದೆ ಆದರೆ ವ್ಯಕ್ತಿ, ಸಮಯ, ಸಂಘಟನೆ, ಸ್ಥಾನ, ವಾಯುಮಂಡಲದ ಪ್ರಮಾಣ ರಮಣೀಕತೆ ಮಾಡಿದರೆ ಅದು ಇಷ್ಟವಾಗುತ್ತದೆ. ಒಂದುವೇಳೆ ಇವೆಲ್ಲಾ ಮಾತುಗಳಲ್ಲಿ ಒಂದು ಮಾತು ಸರಿಯಿಲ್ಲದಿದ್ದರೂ ಸಹ ರಮಣೀಕತೆಯು ವ್ಯರ್ಥ ಸಾಲಿನಲ್ಲಿ ಎಣಿಕೆಯಾಗುವುದು ಮತ್ತು ಅವರಿಗೆ ಯಾವ ಸರ್ಟಿಫಿಕೇಟ್ ಸಿಗುತ್ತದೆ- ಇವರು ಬಹಳ ಚೆನ್ನಾಗಿ ನಗಿಸುತ್ತಾರೆ ಆದರೆ ಹೆಚ್ಚು ಮಾತನಾಡುತ್ತಾರೆ ಅಂದಮೇಲೆ ಇದು ಮಿಕ್ಸ್ ಚಟ್ನಿ ಆಗಿಬಿಟ್ಟಿತಲ್ಲವೆ ಆದ್ದರಿಂದ ಸಮಯದ ಎಲ್ಲೆಯನ್ನಿಟ್ಟುಕೊಳ್ಳಿ, ಇದಕ್ಕೆ ಮರ್ಯಾದಾ ಪುರುಷೋತ್ತಮ ಎಂದು ಹೇಳಲಾಗುತ್ತದೆ. ನನ್ನ ಸ್ವಭಾವವೇ ಹೀಗಿದೆ ಎಂದು ಹೇಳುತ್ತಾರೆ, ಇದು ಎಂತಹ ಸ್ವಭಾವವಾಗಿದೆ? ಬಾಪ್ದಾದಾರವರ ಸ್ವಭಾವವೇ? ಇಂತಹವರಿಗೂ ಮರ್ಯಾದಾ ಪುರುಷೋತ್ತಮರೆಂದು ಹೇಳುವುದಿಲ್ಲ. ಸಾಧಾರಣ ಪುರುಷರೆಂದೇ ಹೇಳಬಹುದು ಆದ್ದರಿಂದ ಮಾತು ಸದಾ ಹೀಗಿರಲಿ ಯಾವ ಮಾತುಗಳನ್ನು ಕೇಳುವವರು ಚಾತ್ರಕರಾಗಿರಬೇಕು- ಇವರು ಏನಾದರೂ ಮಾತನಾಡಲಿ, ನಾವು ಕೇಳೋಣ ಎಂದು. ಇದಕ್ಕೆ ಅಮೂಲ್ಯ ಮಹಾವಾಕ್ಯಗಳೆಂದು ಹೇಳಲಾಗುತ್ತದೆ. ಮಹಾವಾಕ್ಯಗಳು ಬಹಳ ಉದ್ದಗಲವಾಗಿ ಇರುವುದಿಲ್ಲ. ಯಾವಾಗ ಬೇಕೋ ಆಗ ಮಾತನಾಡುತ್ತಿದ್ದರೆ ಅದಕ್ಕೆ ಮಹಾವಾಕ್ಯವೆಂದು ಹೇಳುವುದಿಲ್ಲ ಆದ್ದರಿಂದ ಸದ್ಗುರುವಿನ ಮಕ್ಕಳು ಮಾ|| ಸದ್ಗುರುವಿನ ಮಾತುಗಳು ಮಹಾವಾಕ್ಯ ಆಗಿರುತ್ತದೆಯೇ ಹೊರತು ವಾಕ್ಯವಾಗಿರುವುದಿಲ್ಲ. ವ್ಯರ್ಥವಾಗಿ ಮಾತನಾಡುವವರು ತಮ್ಮ ಬುದ್ಧಿಯಲ್ಲಿ ವ್ಯರ್ಥ ಮಾತುಗಳು, ವ್ಯರ್ಥ ಸಮಾಚಾರ, ನಾಲ್ಕಾರು ಕಡೆಯ ಕಸವನ್ನು ಒಟ್ಟುಗೂಡಿಸಿಕೊಳ್ಳುವರು. ಏಕೆಂದರೆ ಅವರು ಅದಕ್ಕೆ ಕಥೆಯ ರಮಣೀಕ ರೂಪ ಕೊಡಬೇಕಾಗುತ್ತದೆ. ಹೇಗೆ ಶಾಸ್ತ್ರವಾದಿಗಳ ಬುದ್ಧಿಯಿದೆಯಲ್ಲವೆ. ಆದ್ದರಿಂದ ಯಾವ ಸಮಯ ಮತ್ತು ಯಾವ ಸ್ಥಾನದಲ್ಲಿ, ಯಾವ ಮಾತು ಅವಶ್ಯಕವೆನಿಸುವುದೋ, ಯುಕ್ತಿ ಯುಕ್ತ ಆಗಿರುವುದೋ ಸ್ವಯಂನ ಮತ್ತು ಅನ್ಯ ಆತ್ಮರಿಗೆ ಲಾಭದಾಯಕವಾಗಿರುವುದೋ ಅದೇ ಮಾತುಗಳನ್ನು ಮಾತನಾಡಿರಿ. ಮಾತಿನ ಮೇಲೆ ಗಮನ ಕಡಿಮೆಯಿದೆ ಆದ್ದರಿಂದ ಇದರ ಮೇಲೆ ಡಬಲ್ ಅಂಡರ್ಲೈನ್ ಮಾಡಿಕೊಳ್ಳಿ.

ವಿಶೇಷವಾಗಿ ಈ ವರ್ಷ ಮಾತಿನ ಮೇಲೆ ಗಮನವನ್ನಿಡಿ. ಪರಿಶೀಲನೆ ಮಾಡಿಕೊಳ್ಳಿ – ಮಾತಿನ ಮೂಲಕ ಶಕ್ತಿ ಮತ್ತು ಸಮಯವನ್ನು ಎಷ್ಟು ಜಮಾ ಮಾಡಿಕೊಂಡೆವು ಮತ್ತು ಎಷ್ಟು ವ್ಯರ್ಥವಾಗಿ ಹೋಯಿತು? ಯಾವಾಗ ಇದನ್ನು ಪರಿಶೀಲನೆ ಮಾಡಿಕೊಳ್ಳುತ್ತೀರೋ ಆಗ ಸ್ವತಹವಾಗಿ ಅಂತರ್ಮುಖತೆಯ ರಸದ ಅನುಭವ ಮಾಡಬಲ್ಲಿರಿ. ಅಂತರ್ಮುಖತೆಯ ರಸ ಮತ್ತು ಮಾತಿನ ರಸ ಇದರಲ್ಲಿ ರಾತ್ರಿ-ಹಗಲಿನ ಅಂತರವಿದೆ. ಅಂತರ್ಮುಖಿಯು ಸದಾ ಭೃಕುಟಿಯ ಕುಟೀರದಲ್ಲಿ ತಪಸ್ವೀಮೂರ್ತಿಯ ಅನುಭವ ಮಾಡುತ್ತಾನೆ. ತಿಳಿಯಿತೆ!

ತಿಳಿದುಕೊಳ್ಳುವುದು ಅರ್ಥಾತ್ ಆಗುವುದು. ಯಾವುದೇ ಮಾತು ಅರ್ಥವಾಗಿ ಬಿಟ್ಟರೆ ಅವರು ಖಂಡಿತ ಮಾಡುತ್ತಾರೆ, ಖಂಡಿತ ತಿಳಿದುಕೊಳ್ಳುತ್ತಾರೆ. ನಿಮಿತ್ತ ಶಿಕ್ಷಕಿಯರಂತೂ ಬುದ್ಧಿವಂತರಾಗಿಯೇ ಇದ್ದೀರಿ ಆದ್ದರಿಂದಲೇ ಭಾಗ್ಯ ಸಿಕ್ಕಿದೆಯಲ್ಲವೆ. ನಿಮಿತ್ತರಾಗುವ ಭಾಗ್ಯ- ಇದರ ಮಹತ್ವಿಕೆ ಈಗ ಕೆಲಕೆಲವೊಮ್ಮೆ ಸಾಧಾರಣ ಎನಿಸಲೂಬಹುದು ಆದರೆ ಈ ಭಾಗ್ಯವು ಸಮಯದಲ್ಲಿ ಅತೀ ಶ್ರೇಷ್ಠವೆಂಬ ಅನುಭವ ಮಾಡುತ್ತೀರಿ. ಯಾರು ನಿಮಿತ್ತರನ್ನಾಗಿ ಮಾಡಿದರು? ಯಾರು ನಾನಾತ್ಮನನ್ನು ಈ ಸೇವೆಗಾಗಿ ಆಯ್ಕೆ ಮಾಡಿಕೊಂಡರು? ಈ ಸ್ಮೃತಿಯೇ ಸ್ವತಹ ಶ್ರೇಷ್ಠರನ್ನಾಗಿ ಮಾಡಿ ಬಿಡುತ್ತದೆ. “ಮಾಡುವವರು ಯಾರು?” ಒಂದುವೇಳೆ ಈ ಸ್ಮೃತಿಯಲ್ಲಿ ಇದ್ದಿದ್ದೇ ಆದರೆ ಬಹಳ ಸಹಜವಾಗಿ ನಿರಂತರ ಯೋಗಿಗಳಾಗಿ ಬಿಡುತ್ತೀರಿ. ಸದಾ ಹೃದಯದಲ್ಲಿ ತಯಾರು ಮಾಡುವಂತಹ ತಂದೆಯ ಗುಣಗಳ ಗೀತೆಯನ್ನು ಹಾಡುತ್ತಾ ಇರಿ ಆಗ ನಿರಂತರ ಯೋಗಿಗಳಾಗುತ್ತೀರಿ. ಇದು ಕಡಿಮೆ ಮಾತಲ್ಲ. ಇದು ವಿಶ್ವದ ಕೋಟಿಯಲ್ಲಿಯೂ ಕೆಲವರೇ ಆತ್ಮರಲ್ಲಿಯೂ ಎಷ್ಟು ಕಡಿಮೆ ಮಂದಿ ನಿಮಿತ್ತ ಶಿಕ್ಷಕಿಯರಾಗಿದ್ದೀರಿ! ಬ್ರಾಹ್ಮಣ ಪರಿವಾರದಲ್ಲಿಯೂ ಶಿಕ್ಷಕಿಯರು ಎಷ್ಟು ಮಂದಿ ಇದ್ದಾರೆ ಅಂದಮೇಲೆ ಕೆಲವರಲ್ಲಿಯೂ ಕೆಲವರಾದರಲ್ಲವೆ. ಟೀಚರ್ ಅರ್ಥಾತ್ ಸದಾ ಭಗವಂತ ಮತ್ತು ಭಾಗ್ಯದ ಗೀತೆಯನ್ನು ಹಾಡುತ್ತಿರುವವರು. ಬಾಪ್ದಾದಾರವರಿಗೆ ನಿಮಿತ್ತ ಶಿಕ್ಷಕಿಯರ ಪ್ರತಿ ಹೆಮ್ಮೆಯಿರುತ್ತದೆ ಆದರೆ ರಹಸ್ಯಯುಕ್ತ ಶಿಕ್ಷಕಿಯರ ಪ್ರತಿ ಹೆಮ್ಮೆಯಿರುತ್ತದೆ. ಒಳ್ಳೆಯದು.

ಪ್ರವೃತ್ತಿಯವರೂ ಸಹ ಆನಂದವಾಗಿ ಇರುತ್ತೀರಲ್ಲವೆ. ಮಜವಾಗಿರುವವರೋ ಅಥವಾ ಮೂಂಜ್ ಅರ್ಥಾತ್ ಗೊಂದಲದಲ್ಲಿ ಇರುವವರೋ? ಬ್ರಾಹ್ಮಣ ಜೀವನದಲ್ಲಿ ಪ್ರತೀ ಸೆಕೆಂಡ್ ತನು-ಮನ-ಧನ, ಜನದ ಮಜವೇ ಮಜವಿದೆ, ಆರಾಮದಿಂದ ಮಲಗುತ್ತೀರಿ, ಆರಾಮದಿಂದ ತಿನ್ನುತ್ತೀರಿ. ಆರಾಮವಾಗಿ ಇರಿ, ತಿನ್ನಿರಿ, ಮಲಗಿರಿ ಮತ್ತು ಓದಿರಿ. ಇನ್ನೇನಾದರೂ ಬೇಕಾಗಿದೆಯೇ? ಓದುವುದು ಸರಿಯಾಗಿದೆಯೋ ಅಥವಾ ಅಮೃತವೇಳೆ ಮಲಗಿಬಿಡುತ್ತೀರೋ? ಕೆಲವು ಮಕ್ಕಳು ಹೀಗೆ ಮಾಡುತ್ತಾರೆ ಮತ್ತೆ ಹೇಳುತ್ತಾರೆ – ಇಡೀ ರಾತ್ರಿ ಎಚ್ಚರವಾಗಿದ್ದೆವು. ಆದ್ದರಿಂದ ಅಮೃತವೇಳೆ ನಿದ್ರೆ ಬಂದು ಬಿಟ್ಟಿತು. ಒಂದು ಸೇವೆ ಮಾಡಿ ಬಿಟ್ಟರೆ ಅಮೃತವೇಳೆಯನ್ನು ಬಿಟ್ಟು ಬಿಡುವಿರಾ? ಇದರಿಂದ ಜಮಾ ಏನಾಯಿತು? ಹೆಚ್ಚಿನ ಜಮಾ ಆಗಲಿಲ್ಲ. ಒಂದು ಕಡೆ ಸೇವೆ ಮಾಡಿದಿರಿ ಇನ್ನೊಂದು ಕಡೆ ಅಮೃತವೇಳೆಯನ್ನು ತಪ್ಪಿಸಿದಿರಿ ಅಂದಮೇಲೆ ಏನಾಯಿತು? ಆದರೆ ನೇಮಿನಾಥರಂತೆ ಕೇವಲ ತೂಕಡಿಸುತ್ತಾ ಕುಳಿತುಕೊಳ್ಳಬಾರದು. ಅಮೃತವೇಳೆಯ ಟಿ.ವಿ. ಬಹಳ ಚೆನ್ನಾಗಿರುತ್ತದೆ. ಹೇಗೆ ಅವರು ಯೋಗಾಸನಗಳನ್ನು ಮಾಡುತ್ತಾರಲ್ಲವೆ. ಅನೇಕ ಪ್ರಕಾರದ ಭಂಗಿಗಳನ್ನು ಬದಲಾಯಿಸುತ್ತಾ ಇರುತ್ತಾರೆ ಹಾಗೆಯೇ ಇಲ್ಲಿಯೂ ಮಾಡುತ್ತಿರುತ್ತಾರೆ. ಇದು ಸಹಜಯೋಗವಲ್ಲವೆ ಎಂದು ತಿಳಿದು ಅಮೃತವೇಳೆ ಆರಾಮದಿಂದ ಕುಳಿತುಕೊಳ್ಳುತ್ತಾರೆ. ಕೆಲವರ ಸಂಗೀತ (ಗೊರಕೆ) ವಂತೂ ಬಾಪ್ದಾದಾರವರ ಬಳಿ ಬಹಳ ಚೆನ್ನಾಗಿ ಕೇಳಿ ಬರುತ್ತದೆ. ಬಾಪ್ದಾದಾರವರ ಬಳಿ ಅದರದೂ ಕ್ಯಾಸೆಟ್ ಇದೆ. ಆದ್ದರಿಂದ ಈಗ ಡಬಲ್ ಅಂಡರ್ಲೈನ್ ಮಾಡಿಕೊಳ್ಳುತ್ತೀರಲ್ಲವೆ. ನಂತರ ಫಲಿತಾಂಶದಲ್ಲಿ ಎಷ್ಟು ಅಂತರವಾಯಿತು ಎಂಬುದನ್ನು ಬಾಪ್ದಾದಾ ತಿಳಿಸುತ್ತೇವೆ. ಒಳ್ಳೆಯದು.

ನಾಲ್ಕಾರು ಕಡೆಯ ಶ್ರೇಷ್ಠ ಲಕ್ಷ್ಯ ಮತ್ತು ಶ್ರೇಷ್ಠ ಲಕ್ಷಣಗಳನ್ನು ಧಾರಣೆ ಮಾಡಿಕೊಳ್ಳುವಂತಹ ತೀವ್ರ ಪುರುಷಾರ್ಥಿ ಆತ್ಮಗಳಿಗೆ, ಸದಾ ತಮ್ಮ ಮಾತನ್ನು ಸಮಯ ಮತ್ತು ಸಂಯಮದಲ್ಲಿ ಇಟ್ಟುಕೊಳ್ಳುವಂತಹ ಪುರುಷೋತ್ತಮ ಆತ್ಮರಿಗೆ, ಸದಾ ಮಹಾವೀರರಾಗಿ ಮಾಯೆಯ ಸರ್ವ ರೂಪಗಳನ್ನು ಅರಿತುಕೊಳ್ಳುವಂತಹ ಜ್ಞಾನಪೂರ್ಣ ಆತ್ಮರಿಗೆ, ಸದಾ ಪ್ರತೀ ಸೆಕೆಂಡ್ ಮೋಜಿನಲ್ಲಿ ಇರುವಂತಹ ನಿಶ್ಚಿಂತ ಚಕ್ರವರ್ತಿಗಳಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.

ಅವ್ಯಕ್ತ ಬಾಪ್ದಾದಾರವರು ಪಾರ್ಟಿಯೊಂದಿಗೆ ವಾರ್ತಾಲಾಪ:

1. ಶಾಂತಿಯ ಶಕ್ತಿಯನ್ನು ಬಹಳ ಚೆನ್ನಾಗಿ ತಿಳಿದಿದ್ದೀರಾ? ಶಾಂತಿಯ ಶಕ್ತಿಯು ಸೆಕೆಂಡಿನಲ್ಲಿ ತಮ್ಮ ಶಾಂತಿಧಾಮಕ್ಕೆ ತಲುಪಿಸಿ ಬಿಡುತ್ತದೆ. ವಿಜ್ಞಾನಿಗಳಂತು ಬಹಳ ತೀವ್ರ ಗತಿಯಿರುವ ಯಂತ್ರಗಳನ್ನು ತಯಾರು ಮಾಡುವ ಪ್ರಯತ್ನದಲ್ಲಿರುತ್ತಾರೆ. ಆದರೆ ತಮ್ಮ ಯಂತ್ರವೆಷ್ಟು ತೀವ್ರ ಗತಿಯದಾಗಿದೆ! ಯೋಚಿಸಿದಿರಿ ಮತ್ತು ತಲುಪಿದಿರಿ! ಇಂತಹ ಯಂತ್ರವು ವಿಜ್ಞಾನದಲ್ಲಿದೆಯೇ, ಯಾವುದು ಇಷ್ಟೂ ದೂರಕ್ಕೆ ಖರ್ಚಿಲ್ಲದೆಯೇ ತಲುಪಿ ಬಿಡುತ್ತದೆ? ಅವರಂತು ಒಂದೊಂದು ಯಂತ್ರವನ್ನು ತಯಾರು ಮಾಡುವುದರಲ್ಲಿ ಎಷ್ಟೊಂದು ಖರ್ಚು ಮಾಡುತ್ತಾರೆ, ಎಷ್ಟೊಂದು ಸಮಯ ಮತ್ತು ಎಷ್ಟೊಂದು ಶಕ್ತಿಯನ್ನು ಉಪಯೋಗಿಸುತ್ತಾರೆ, ತಾವೇನು ಮಾಡುವಿರಿ? ಖರ್ಚಿಲ್ಲದೆಯೇ ಸಿಕ್ಕಿ ಬಿಟ್ಟಿದೆ. ಈ ಸಂಕಲ್ಪದ ಶಕ್ತಿಯು ಅತ್ಯಂತ ವೇಗದ್ದಾಗಿದೆ. ತಮಗೆ ಶುಭ ಸಂಕಲ್ಪದ ಯಂತ್ರವು ಸಿಕ್ಕಿದೆ, ದಿವ್ಯ ಬುದ್ಧಿ ಸಿಕ್ಕಿದೆ. ಶುದ್ಧ ಮನಸ್ಸು ಹಾಗೂ ದಿವ್ಯ ಬುದ್ಧಿಯಿಂದ ತಲುಪಿ ಬಿಡುತ್ತೀರಿ.ಯಾವಾಗ ಬೇಕೋ ಆಗ ಹಿಂತಿರುಗಿ ಬನ್ನಿರಿ, ಯಾವಾಗ ಬೇಕೋ ಆಗ ಹೊರಟು ಬಿಡಿ. ವಿಜ್ಞಾನಿಗಳಾದರೂ ಋತುವನ್ನು ನೋಡಬೇಕಾಗುವುದು, ತಾವಂತು ಇದ್ಯಾವುದನ್ನೂ ನೋಡಬೇಕಾಗುವುದಿಲ್ಲ- ಇಂದು ಮೋಡಗಳಿವೆಯೇ, ಹೋಗಲು ಸಾಧ್ಯವಿಲ್ಲವೇ! ವರ್ತಮಾನದಲ್ಲಿ ನೋಡಿ – ಮೋಡಗಳಷ್ಟೆ ಅಲ್ಲ, ಸ್ವಲ್ಪ ಮಂಜಿದ್ದರೂ ವಿಮಾನವು ಹಾರುವುದಕ್ಕಾಗುವುದಿಲ್ಲ ಮತ್ತು ತಮ್ಮ ವಿಮಾನವು ಎವರೆಡಿ ಆಗಿದೆಯೇ ಅಥವ ಕೆಲವೊಮ್ಮೆ ಮಂಜು ಆವರಿಸುತ್ತದೆಯೇ? ಎವರೆಡಿ ಇದೆಯೇ? ಸೆಕೆಂಡಿನಲ್ಲಿ ಹೋಗಲು ಸಾಧ್ಯವಾಗುವಷ್ಟು ತೀವ್ರ ಗತಿಯಿಂದ ಕೂಡಿದೆಯೇ? ಮಾಯೆಯೇನಾದರೂ ಅಡಚಣೆ ಹಾಕುವುದಿಲ್ಲವೇ? ಮಾಸ್ಟರ್ ಸರ್ವಶಕ್ತಿವಂತನನ್ನು ಯಾರೂ ಅಡ್ಡಿ ಮಾಡಲು ಸಾಧ್ಯವಿಲ್ಲ. ಎಲ್ಲಿ ಸರ್ವ ಶಕ್ತಿಗಳಿವೆಯೋ ಅಲ್ಲಿ ಯಾರು ತಡೆಯುವರು! ಯಾವುದೇ ಶಕ್ತಿಯ ಕೊರತೆಯಿದ್ದರೆ ಸಮಯದಲ್ಲಿ ಮೋಸವುಂಟಾವುದು. ತಮ್ಮಲ್ಲಿ ಸಹನಾ ಶಕ್ತಿ ಇದೆ, ನಿರ್ಣಯ ಶಕ್ತಿಯಲ್ಲಿ ಕೊರತೆಯಿದ್ದೀರಿ ಎಂದು ತಿಳಿದುಕೊಳ್ಳಿರಿ, ಯಾವಾಗ ಅಂತಹ ಯಾವುದೇ ಪರಿಸ್ಥಿತಿಯು ಬರುತ್ತದೆ, ಅದರಲ್ಲಿ ನಿರ್ಣಯ ಮಾಡಬೇಕಾಗುತ್ತದೆ. ಆ ಸಮಯದಲ್ಲಿ ನಷ್ಟವಾಗಿ ಬಿಡುತ್ತದೆ. ಆ ಸಮಯದಲ್ಲಿ ಒಂದು ಕ್ಷಣದಲ್ಲಿ ಆಯಿತು ಅಥವಾ ಇಲ್ಲ ಎನ್ನುವ ನಿರ್ಣಯ ತೆಗೆದುಕೊಳ್ಳಬೇಕಾಗುವುದು, ಆದರೆ ಅದರ ಪರಿಣಾಮ ಎಷ್ಟು ದೊಡ್ಡದಾಗಿರುತ್ತದೆ! ಅಂದಮೇಲೆ ತಮ್ಮ ಬಳಿಯಿರುವ ಎಲ್ಲಾ ಶಕ್ತಿಗಳನ್ನು ಪರಿಶೀಲನೆ ಮಾಡಿರಿ. ಎಲ್ಲವೂ ಸರಿಯಿದೆ, ಸರಿಯಾಗಿ ನಡೆಯುತ್ತಿದೆ, ಯೋಗವನ್ನಂತು ಮಾಡುತ್ತಿದ್ದೇವೆ, ಈ ರೀತಿಯಲ್ಲ ಆದರೆ ಯೋಗದಿಂದ ಯಾವ ಪ್ರಾಪ್ತಿಗಳಾಗುತ್ತವೆಯೋ ಅವೆಲ್ಲವೂ ಇದೆಯೇ? ಅಥವಾ ಸ್ವಲ್ಪದರಲ್ಲಿಯೇ ಅಂದರೆ ತಂದೆಯಂತು ನಮ್ಮವರಾಗಿ ಬಿಟ್ಟರು ಎಂದು ಖುಷಿಯಾಗಿದ್ದೀರಾ? ತಂದೆಯಂತು ತಮ್ಮವರಾಗಿದ್ದಾರೆ ಆದರೆ ಆಸ್ತಿಯೂ ತಮ್ಮದಾಗಿದೆಯೇ ಅಥವಾ ಕೇವಲ ತಂದೆಯನ್ನು ಪಡೆದಿರುವುದಷ್ಟೇ ಸರಿಯೇ? ಆಸ್ತಿಯ ಮಾಲೀಕರಾಗಬೇಕಲ್ಲವೇ? ತಂದೆಯ ಆಸ್ತಿಯು ಸರ್ವಶಕ್ತಿಗಳಾಗಿವೇ ಆದ್ದರಿಂದ ತಂದೆಯ ಮಹಿಮೆಯಲ್ಲಿ ಸರ್ವಶಕ್ತಿವಂತ ಆಲ್ಮೈಟಿ ಅಥಾರಿಟಿ ಎನ್ನುವುದಿದೆ. ಸರ್ವಶಕ್ತಿಗಳ ಜಮಾ ಇದೆಯೇ? ಅಥವಾ ಸಂಪಾದಿಸಿದೆನು ಮತ್ತು ತಿಂದೆನು ಎನ್ನುವಷ್ಟಿದೆಯೇ! ಬಾಪ್ದಾದಾರವರು ತಿಳಿಸಿದ್ದಾರೆ – ಮುಂದೆ ನಡೆದಂತೆ ತಾವು ಮಾಸ್ಟರ್ ಸರ್ವಶಕ್ತಿವಂತರ ಬಳಿ ಎಲ್ಲಾ ಭಿಕಾರಗಳಾಗಿ ಬರುತ್ತಾರೆ. ಹಣ ಅಥವಾ ಆಹಾರದ ಭಿಕಾರಿಗಳಲ್ಲ ಆದರೆ ಶಕ್ತಿಗಳ ಬಿಕಾರಿಗಳು ಬರುವರು. ಅಂದಮೇಲೆ ತಮ್ಮ ಬಳಿ ಅದರ ಜಮಾ ಆಗಿದ್ದರೆ ಕೊಡುವರಲ್ಲವೆ! ಯಾರ ಬಳಿ ತನಗಿಂತಲೂ ಹೆಚ್ಚಾಗಿ ಇರುತ್ತದೆಯೋ ಅವರೇ ದಾನ ಕೊಡಲು ಸಾಧ್ಯ. ಒಂದುವೇಳೆ ತನಗೆಷ್ಟು ಬೇಕಾಗಿದೆಯೋ ಅಷ್ಟಿದ್ದರೆ ದಾನವನ್ನೇನು ಕೊಡುವರು? ಅಂದಮೇಲೆ ದಾನ ಕೊಡುವಷ್ಟು ಜಮಾ ಮಾಡಿರಿ. ಸಂಗಮದಲ್ಲಿ ಮತ್ತೇನು ಕಾರ್ಯವಿದೆ? ಜಮಾ ಮಾಡುವುದೇ ಕಾರ್ಯ ಸಿಕ್ಕಿದೆ. ಇಡೀ ಕಲ್ಪದಲ್ಲಿ ಮತ್ತ್ಯಾವುದೇ ಯುಗದಲ್ಲಿಯೂ ಈ ಜಮಾ ಮಾಡಲು ಸಾಧ್ಯವಿಲ್ಲ. ನಂತರದಲ್ಲಂತು ಖರ್ಚು ಮಾಡಬೇಕಾಗುತ್ತದೆ, ಜಮಾ ಮಾಡಿಕೊಳ್ಳಲು ಸಾಧ್ಯವಿಲ್ಲ. ಅಂದಮೇಲೆ ಜಮಾ ಮಾಡುವ ಸಮಯದಲ್ಲೇನಾದರೂ ಜಮಾ ಮಾಡದಿದ್ದರೆ, ಅಂತ್ಯದಲ್ಲೇನು ಹೇಳಬೇಕಾಗುತ್ತದೆ? “ಈಗಿಲ್ಲದಿದ್ದರೆ ಮತ್ತೆಂದಿಗೂ ಇಲ್ಲ” ನಂತರದಲ್ಲಂತು ಟೂಲೇಟ್ ಬೋರ್ಡ್ ಹಾಕಲಾಗುತ್ತದೆ. ಈಗಂತು ಲೇಟ್ ಬೋರ್ಡ್ ಇದೆ, ಟೂಲೇಟ್ ಇಲ್ಲ.

ಮಾತೆಯರೆಲ್ಲರೂ ಇಷ್ಟು ಜಮಾ ಮಾಡಿಟ್ಟಿದ್ದೀರಾ? ಶಿವಶಕ್ತಿ ಆಗಿದ್ದೀರಾ ಅಥವ ಮನೆಯ ಮಾತೆಯಾಗಿದ್ದೀರಾ? ಶಿವಶಕ್ತಿ ಎಂದು ಹೇಳುವುದರಿಂದ ಶಕ್ತಿಗಳ ನೆನಪು ಬರುತ್ತದೆ. ಯಾವ ಮಾತೆಯರನ್ನು ತಂದೆಯು ಶಿವಶಕ್ತಿಯನ್ನಾಗಿ ಮಾಡಿ ಬಿಟ್ಟರು! ಒಂದುವೇಳೆ ಯಾರಾದರೂ ಮುಖ ನೋಡಲು ಬಂದರೆ ಏನು ಹೇಳುವಿರಿ? ಇಂತಹ ಶಿವಶಕ್ತಿಯಿದ್ದಾರೆಯೇ? ಆದರೆ ತಂದೆಯು ಯಾವ ಆತ್ಮರನ್ನು ಗುರುತಿಸಿದ್ದಾರೆಯೋ ಅವರು ಶಕ್ತಿಶಾಲಿಗಳು. ತಂದೆಯನ್ನು ಆತ್ಮರನ್ನು ನೋಡುತ್ತಾರೆ, ವೃದ್ಧರನ್ನಲ್ಲ, ಯುವಕರನ್ನೂ ನೋಡುವುದಿಲ್ಲ, ಮಕ್ಕಳನ್ನೂ ನೋಡುವುದಿಲ್ಲ. ಆತ್ಮವಂತು ವೃದ್ಧ ಅಥವಾ ಚಿಕ್ಕದಾಗುವುದಿಲ್ಲ. ಅಂದಮೇಲೆ ನಮ್ಮನ್ನು ಬಾಬಾರವರು ಶಿವಶಕ್ತಿಯನ್ನಾಗಿ ಮಾಡಿ ಬಿಟ್ಟರೆಂಬ ಖುಷಿಯಿದೆಯಲ್ಲವೆ! ಪ್ರಪಂಚದಲ್ಲಿ ಯಾರೆಷ್ಟಾದರೂ ವಿದ್ಯಾವಂತ ಮಾತೆಯರಿರಬಹುದು ಆದರೆ ತಂದೆಯವರಿಗೆ ಹಳ್ಳಿಯವರೇ ಪ್ರಿಯರಾಗಿದ್ದಾರೆ, ಏಕೆ? “ಸತ್ಯ ಹೃದಯದವರ ಮೇಲೆ ಪ್ರಭು ಪ್ರಸನ್ನವಾಗುವರು”. ತಂದೆಗೆ ಸತ್ಯ ಹೃದಯವು ಪ್ರಿಯವೆನಿಸುತ್ತದೆ. ಯಾರು ಮುಗ್ದರಾಗಿರುತ್ತಾರೆಯೋ ಅವರಿಗೆ ಸುಳ್ಳು-ಕಪಟ ಮಾಡುವುದೇ ಬರುವುದಿಲ್ಲ. ಯಾರು ಚಾಲಾಕಿ, ಚತುರರಾಗಿರುತ್ತಾರೆಯೋ ಅವರಲ್ಲಿ ಇವೆಲ್ಲಾ ಮಾತುಗಳಿರುತ್ತವೆ. ಅಂದಮೇಲೆ ಯಾರ ಹೃದಯ ಮುಗ್ದವಾಗಿರುತ್ತದೆಯೋ ಅರ್ಥಾತ್ ಪ್ರಪಂಚದ ಮಾಯಾವಿ ಚತುರತೆಯಿಂದ ದೂರವಿರುತ್ತಾರೆಯೋ ಅವರೇ ತಂದೆಯವರೆಗೆ ಅತಿ ಪ್ರಿಯವಾಗಿದ್ದಾರೆ. ತಂದೆಯು ಸತ್ಯ ಹೃದಯವನ್ನು ನೋಡುತ್ತಾರೆ. ಉಳಿದಂತೆ ವಿದ್ಯೆಯನ್ನಾಗಲಿ, ಮುಖವನ್ನಾಗಲಿ, ಹಳ್ಳಿಯನ್ನಾಗಲಿ, ಹಣವನ್ನಾಗಲಿ ನೋಡುವುದಿಲ್ಲ. ಸತ್ಯ ಹೃದಯವಿರಬೇಕು ಆದ್ದರಿಂದ ತಂದೆಯ ಹೆಸರು `ಹೃದಯರಾಮ’ಎನ್ನುವುದಿದೆ. ಒಳ್ಳೆಯದು.

ವರದಾನ:-

ಧೃಡ ನಿಶ್ಚಯವು ಭಾಗ್ಯವನ್ನು ನಿಶ್ಚಿತಗೊಳಿಸುತ್ತದೆ. ಹೇಗೆ ಬ್ರಹ್ಮಾ ತಂದೆಯು ಮೊದಲ ನಂಬರಿನಲ್ಲಿ ನಿಶ್ಚಿತವಾಗಿ ಬಿಟ್ಟರು ಹಾಗೆಯೇ ನಾವು ಮೊದಲ ದರ್ಜೆಯಲ್ಲಿ ಬರಲೇಬೇಕು ಎಂಬ ಧೃಡ ನಿಶ್ಚಯವಿರಲಿ. ಡ್ರಾಮಾದಲ್ಲಿ ಪ್ರತಿಯೊಂದು ಮಗುವಿಗೂ ಸುವರ್ಣಾವಕಾಶವಿದೆ. ಕೇವಲ ಅಭ್ಯಾಸದಲ್ಲಿ ಗಮನವಿರಬೇಕು, ಇದರಿಂದ ಮೊದಲ ನಂಬರನ್ನು ಪಡೆಯಬಹುದು ಆದ್ದರಿಂದ ಮಾಸ್ಟರ್ ಜ್ಞಾನಪೂರ್ಣನಾಗಿರುತ್ತಾ ಪ್ರತಿಯೊಂದು ಕರ್ಮವನ್ನು ಮಾಡುತ್ತಿರಿ. ಜೊತೆಯ ಅನುಭವವನ್ನು ಹೆಚ್ಚಿಸಿಕೊಳ್ಳುತ್ತೀರೆಂದರೆ ಎಲ್ಲವೂ ಸಹಜವಾಗುವುದು, ಯಾರ ಜೊತೆ ಸ್ವಯಂ ಸರ್ವಶಕ್ತಿವಂತ ತಂದೆಯಿದ್ದಾರೆಯೋ ಅವರ ಮುಂದೆ ಮಾಯೆಯು ಕಾಗದದ ಹುಲಿಯಾಗಿರುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top