22 January 2022 KANNADA Murli Today | Brahma Kumaris

Read and Listen today’s Gyan Murli in Kannada

January 21, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೆ, ನೀವು ಮಕ್ಕಳು ಯಾವುದೇ ಪ್ರಕಾರದ ಇಚ್ಚೆಯನ್ನು ಇಟ್ಟುಕೊಳ್ಳಬಾರದಾಗಿದೆ. ಯಾರಿಂದಲೂ ಏನನ್ನೂ ಬೇಡಬಾರದಾಗಿದೆ. ಏಕೆಂದರೆ ನೀವು ದಾತನ ಮಕ್ಕಳು ಕೊಡುವಂತವರಾಗಿದ್ದೀರಿ”

ಪ್ರಶ್ನೆ:: -

ನೀವು ಈಶ್ವರೀಯ ವಿಧ್ಯಾರ್ಥಿಗಳಾಗಿದ್ದೀರಿ ನಿಮ್ಮ ಲಕ್ಷ್ಯ ಏನಾಗಿದೆ? ಏನಾಗಿಲ್ಲ?

ಉತ್ತರ:-

ನಿಮ್ಮ ಲಕ್ಷ್ಯವಾಗಿದೆ – ತಂದೆಯಿಂದ ಸಿಕ್ಕಿರುವ ಜ್ಞಾನವನ್ನು ಧಾರಣೆ ಮಾಡುವುದು ಹಾಗೂ ಗೌರವಯುತ ತೇರ್ಗಡೆ ಆಗುವುದು. ಬಾಕಿ ಇದುಬೇಕು ಇದು ಬೇಕು ಎನ್ನುವ ಇಚ್ಚೆ ಇಟ್ಟುಕೊಳ್ಳುವುದು ನಿಮ್ಮ ಲಕ್ಷ್ಯವಲ್ಲ. ನೀವು ಯಾವುದೇ ಮನುಷ್ಯರಿಗೆ ಕೊಡುವುದು ತೆಗೆದುಕೊಳ್ಳುವುದು ಮಾಡಿ ಲೆಕ್ಕಾಚಾರ ಬೆಳೆಸಿಕೊಳ್ಳಬಾರದಾಗಿದೆ. ತಂದೆಯ ನೆನಪಲ್ಲಿದ್ದು ಕರ್ಮಾತೀತ ರಾಗುವ ಪುರುಷಾರ್ಥ ಮಾಡಿರಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಬಾಲ್ಯದ ದಿನಗಳನ್ನು ಮರೆಯ ಬೇಡ……

ಓಂ ಶಾಂತಿ. ಇದಾಗಿದೆ ಆತ್ಮೀಯ ತಂದೆ ಹಾಗೂ ಆತ್ಮೀಯ ಮಕ್ಕಳ ಸಂಬಂಧ ಎಂಬುದನ್ನು ಮಕ್ಕಳು ತಿಳಿದುಕೊಂಡಿದ್ದೀರಿ. ಈಗ ಆತ್ಮೀಯ ತಂದೆ ಹಾಗೂ ಮಕ್ಕಳು ಸನ್ಮುಖದಲ್ಲಿ ಕುಳಿತಿದ್ದಾರೆ. ಸನ್ಯಾಸಿಗಳು ಒಂದು ವೇಳೆ ತಮ್ಮ ಆಶ್ರಮದಿಂದ ಬೇರೆ ಸ್ಥಾನದಲ್ಲಿ ಹೋದರೆ, ಇಂತಹ ಸನ್ಯಾಸಿ ಇಂತಹ ಸ್ಥಾನದಲ್ಲಿ ಇರುವಂತವರಾಗಿದ್ದಾರೆ ಎಂದು ಹೇಳುತ್ತಾರೆ. ಅವರು ಗೀತಾ ಶಾಸ್ತ್ರಗಳನ್ನೆಲ್ಲಾ ಓದುತ್ತಾರೆ, ಇದೇನೂ ಹೊಸ ಮಾತಲ್ಲ. ಆದರೆ ಸರ್ವವ್ಯಾಪಿ ಎಂದು ಹೇಳುವುದರಿಂದ ಸಂಪೂರ್ಣ ಜ್ಞಾನವೇ ಸಮಾಪ್ತಿ ಆಗಿ ಬಿಡುತ್ತದೆ. ಈಗ ಇಲ್ಲಂತೂ ಆತ್ಮೀಯ ತಂದೆಯಿದ್ದಾರೆ ಅವರನ್ನೇ ಎಲ್ಲಾ ಆತ್ಮರೂ ನೆನಪು ಮಾಡುತ್ತಾರೆ. ಓ ಪರಮಪಿತ ಪರಮಾತ್ಮ ಎಂದು ಆತ್ಮನೇ ಹೇಳುತ್ತದೆ. ಯಾವಾಗ ದುಃಖವಾಗುತ್ತದೊ ಆಗ ಲೌಕಿಕದವರನ್ನು ನೆನಪು ಮಾಡುವುದಿಲ್ಲ, ಬೇಹದ್ದಿನ ತಂದೆಯನ್ನೇ ಎಲ್ಲರೂ ನೆನಪು ಮಾಡುತ್ತಾರೆ. ಸನ್ಯಾಸಿಯರು ಬ್ರಹ್ಮತತ್ವವನ್ನು ನೆನಪು ಮಾಡುತ್ತಾರೆ. ಅವರಂತೂ ತತ್ವ ಜ್ಞಾನಿ ಆಗಿದ್ದಾರೆ. ತಂದೆಯನ್ನೇ ನೆನಪು ಮಾಡುವುದಿಲ್ಲ. ಶಿವೋಹಂ ಎಂಬುದಾಗಿಯೂ ನಾನಾತ್ಮನೇ ಪರಮಾತ್ಮನಾಗಿದ್ದೇನೆ ಎಂಬುದಾಗಿಯೂ ಹೇಳುತ್ತಾರೆ. ಆದರೆ ಬ್ರಹ್ಮತತ್ವವು ವಾಸಿಸುವ ಸ್ಥಾನವಾಗಿದೆ. ಇದಂತೂ ಸಂಪೂರ್ಣ ಹೊಸ ಜ್ಞಾನವಾಗಿದೆ. ನಂತರ ಈ ಜ್ಞಾನವು ಪ್ರಾಯಲೋಪವಾಗುತ್ತದೆ. ಇಲ್ಲಿರುವ ಶಾಸ್ತ್ರಗಳಲ್ಲಿ ನನ್ನ ಜ್ಞಾನ ಇಲ್ಲವೆಂದು ಬಾಬಾ ಹೇಳುತ್ತಾರೆ, ತಂದೆಯ ಜ್ಞಾನ ಇಲ್ಲದಿರುವ ಕಾರಣ ಯಾರಿಗಾದರೂ ಇದನ್ನು ತಿಳಿಸಿಕೊಟ್ಟಾಗ ಇದಂತೂ ಹೊಸ ಮಾತಾಗಿದೆಯೆಂದು ಹೇಳುತ್ತಾರೆ. ನಿರಾಕಾರ ಪರಮಾತ್ಮ ಜ್ಞಾನ ಕೊಡುತ್ತಾರೆಂಬುದು ಅವರ ಬುದ್ದಿಯಲ್ಲಿ ಬರುವುದೇ ಇಲ್ಲ. ಅವರಂತೂ ಕೃಷ್ಣನೇ ಜ್ಞಾನ ಹೇಳಿದ ಎಂದು ತಿಳಿದುಕೊಂಡಿದ್ದಾರೆ. ಆದ್ದರಿಂದ ಈ ಜ್ಞಾನ ಕೇಳಿದಾಗ ಗೊಂದಲರಾಗುತ್ತಾರೆ. ತಂದೆಯಂತೂ ಒಂದೊಂದು ಮಾತನ್ನು ಸಿದ್ದ ಮಾಡಿ ಹೇಳುತ್ತಾರೆ. ಭಕ್ತಿ ಮಾರ್ಗದಲ್ಲಿ ನೀವೆಲ್ಲರೂ ನೆನಪು ಮಾಡುತ್ತೀರಿ. ಭಕ್ತರಂತೂ ಎಲ್ಲರೂ ಭಕ್ತರೇ ಆಗಿದ್ದಾರೆ. ಆದ್ದರಿಂದ ಭಗವಂತ ಒಬ್ಬನೇ ಇರಬೇಕು. ಎಲ್ಲರಲ್ಲೂ ಭಗವಂತನಿದ್ಧಾನೆ ಎಂದು ತಿಳಿದುಕೊಳ್ಳುವುದರಿಂದ ಎಲ್ಲರನ್ನೂ ಪೂಜಿಸತೊಡಗುತ್ತಾರೆ. ಮೊದಲು ಅವ್ಯಭಿಚಾರಿ ಒಬ್ಬ ಶಿವನದೇ ಪೂಜೆ/ಭಕ್ತಿ ನಡೆಯುತ್ತದೆ. ಆದರೆ ಅವರು ಏನು ಮಾಡಿ ಹೋದರು ಎಂಬ ಜ್ಞಾನ ಇರುವುದಿಲ್ಲ. ಹಾಗೂ ಯಾವಾಗ ಬಂದಿದ್ದರು ಎಂಬುದನ್ನೂ ತಿಳಿಯಲಾರರು ಆದರೂ ಅದು ಸತೋಪ್ರಧಾನ ಭಕ್ತಿಯಾಗಿದೆ. ಯಾರಿಂದ ಸುಖ ಸಿಗುತ್ತದೊ ಅವರದೇ ಪೂಜೆ ಮಾಡಲಾಗುತ್ತದೆ. ಲಕ್ಷ್ಮಿ-ನಾರಾಯಣರ ರಾಜ್ಯದಲ್ಲೂ ಅಪಾರ ಸುಖವಿತ್ತು. ಅವರು ಸ್ವರ್ಗದ ದೇವತೆಗಳಾಗಿದ್ದರು. ಲಕ್ಷ್ಮಿ-ನಾರಾಯಣರನ್ನು ಸತ್ಯಯುಗದ ಮೊಟ್ಟ ಮೊದಲ ಮಹರಾಜ ಮಹಾರಾಣಿ ಎಂದು ಒಪ್ಪುತ್ತಾರೆ. ಆದರೆ ಸತ್ಯಯುಗದ ಆಯಸ್ಸನ್ನು ತಿಳಿದುಕೊಂಡಿಲ್ಲ. ತಂದೆ ಪ್ರತಿಯೊಂದು ಮಾತನ್ನೂ ಮಕ್ಕಳಿಗಾಗಿಯೇ ತಿಳಿಸಿಕೊಡುತ್ತಾರೆ. ಮಕ್ಕಳೇ ಬ್ರಾಹ್ಮಣರಾಗುತ್ತಾರೆ. ಇದಂತೂ ಹೊಸ ರಚನೆ ಆಗಿದೆಯಲ್ಲವೆ. ಪರಮಪಿತ ಪರಮಾತ್ಮ ಪ್ರಜಾಪಿತ ಬ್ರಾಹ್ಮನ ಮೂಲಕ ಹೊಸ ಸೃಷ್ಟಿಯನ್ನು ರಚನೆ ಮಾಡುತ್ತಾರೆ ಎಂಬುದಾಗಿ ನೀವು ಎಲ್ಲರಿಗೂ ತಿಳಿಸಿಕೊಡಬಹುದು. ಇದನ್ನಂತೂ ಎಲ್ಲರೂ ತಿಳಿದುಕೊಳ್ಳುತಾರೆ. ಇಲ್ಲದಿದ್ದರೆ ಪ್ರಜಾಪಿತ ಎಂದು ಏಕೆ ಹೇಳುತ್ತಾರೆ? ಎಂಬುದನ್ನು ನೀವು ಮಕ್ಕಳೇ ತಿಳಿದುಕೊಳ್ಳಬಲ್ಲಿರಿ. ಬೇರೆ ಯಾರು ತಿಳಿದುಕೊಳ್ಳಲು ಸಾಧ್ಯವಿಲ್ಲ. ಅವರಿಗೆ ಈ ಹೊಸ ಹೊಸ ಮಾತುಗಳು ಅರ್ಥವಾಗುವುದಿಲ್ಲ. ಯಾವಾಗ ಕೇಳುತ್ತಾ-ಕೇಳುತ್ತಾ ಪಕ್ಕಾ ಆಗಿ ಬಿಡುತ್ತಾರೊ ಆಗ ನಾವೆಷ್ಟು ಅಂಧಕಾರದಲ್ಲಿದ್ದೇವೆ ಎಂಬುದಾಗಿ ತಿಳಿದುಕೊಳ್ಳುತ್ತಾರೆ. ಭಗವಂತನನ್ನಾಗಲಿ ದೇವತೆಗಳನ್ನಾಗಿಲಿ ಈ ಮೊದಲು ತಿಳಿದುಕೊಂಡಿರಲಿಲ್ಲ. ಯಾರು ಭೂತಕಾಲದಲ್ಲಿ ಆಗಿ ಹೋದರೊ ಅವರದ್ದೇ ಭಕ್ತಿ ಮಾಡಲಾಗುತ್ತದೆ. ಯಾವ ಪರಮಪಿತ ಪರಮಾತ್ಮನ ಜಯಂತಿಯನ್ನು ಆಚರಿಸುವಿರೂ ಅವರೊಂದಿಗೆ ನಿಮ್ಮ ಸಂಬಂಧ ಏನು? ಎಂದು ನೀವು ಕೇಳಿದರೆ ಅವರು ಏನೂ ಹೇಳಲಾರರು ಕೃಷ್ಣನ ಪ್ರತಿಯಾಗಿ ಮಾತ್ರ ಅವನು ಬೆಣ್ಣೆ ಕದ್ದ, ಇದು ಮಾಡಿದ, ಅದು ಮಾಡಿದ, ಎಂಬುದಾಗಿ ತಿಳಿದುಕೊಂಡಿದ್ದಾರೆ. ಎಷ್ಟೊಂದು ಅಜ್ಞಾನಿಗಳಾಗಿದ್ದಾರೆ! ದಾತನಂತೂ ಒಬ್ಬ ಈಶ್ವರ ಆಗಿದ್ದಾರೆ, ಕೃಷ್ಣಿನಿಗೆ ದಾತ ಎಂದು ಹೇಳಲಾಗದು. ಆದರೆ ಮನುಷ್ಯರಂತೂ ಗೊಂದಲದಲ್ಲಿದ್ದಾರೆ. ಇದೆಲ್ಲವೂ ಸಹ ಡ್ರಾಮಾದಲ್ಲಿ ನಿಶ್ಚಿತವಾಗಿದೆ. ಬಾಬಾ ಎಷ್ಟೊಂದು ಚೆನ್ನಾಗಿ ತಿಳಿಸಿಕೊಡುತ್ತಾರೆ. ಈ ಎಲ್ಲಾ ಮಾತುಗಳು ಮನುಷ್ಯರ ಬುದ್ದಿಯಲ್ಲಿ ಸ್ವಲ್ಪವೂ ಕುಳಿತುಕೊಳ್ಳುವುದಿಲ್ಲ. ಒಂದುವೇಳೆ ಒಬ್ಬೊಬ್ಬರದೇ 84 ಜನ್ಮಗಳ ವೃತ್ತಾಂತವನ್ನು ಹೇಳಲು ಪ್ರಾರಂಭಿಸಿದರೆ ಎಷ್ಟಾಗುತ್ತದೆಂಬುದನ್ನು ಹೇಳಲಾಗದು. ಆದರೆ ತಂದೆ ತಿಳಿಸುತ್ತಾರೆ – ಈ ಎಲ್ಲಾ ಮಾತುಗಳನ್ನು ಬಿಟ್ಟು ನನೊಬನನ್ನೇ ನೆನಪು ಮಾಡಿರಿ. ಕೆಲವೊಮ್ಮೆ ಸ್ವಲ್ಪ ವಿಸ್ತಾರದಲ್ಲಿ ಹೇಳಿದರೆ ಮನುಷ್ಯರ ಸಂಶಯ ದೂರವಾಗಬಹುದು. ಬಾಕಿ ಕೆಲವೇ ಮಾತುಗಳೇನಂದರೆ – ನನ್ನನ್ನು ನೆನಪು ಮಾಡಿರಿ. ಹೇಗೆ ಈಶ್ವರನನ್ನು ನೆನಪು ಮಾಡಿ ಎಂದು ಮಂತ್ರವನ್ನು ಕೊಡಲಾಗುತ್ತದೆಯಲ್ಲವೆ. ಆದರೆ ಈಶ್ವರನನ್ನು ನೆನಪು ಮಾಡಿದರೆ ಎಲ್ಲಾ ವಿಕರ್ಮ ವಿನಾಶವಾಗುತ್ತದೆಂದು ಹಾಗೂ ನೀವು ಈಶ್ವರನ ಬಳಿಗೆ ಹೋಗುವಿರಿ ಎಂದು ಅವರು ಹೇಳುವುದಿಲ್ಲ. ಗಂಗಾ ನದಿಯ ಸ್ನಾನದಿಂದ ವಿಕರ್ಮ ವಿನಾಶ ಆಗುವುದಿಲ್ಲವೆಂಬುದನ್ನು ತಂದೆಯೇ ತಿಳಿಸಿಕೊಡುತ್ತಾರೆ. ಈ ಸಮಯದಲ್ಲಿ ಪ್ರತಿಯೊಬ್ಬರ ಮೇಲೂ ವಿಕರ್ಮದ ಹೊರೆ ಬಹಳ ದೊಡ್ಡದಿದೆ. ಸುಕರ್ಮ ಸ್ವಲ್ಪವೇ ಇದೆ. ಆದರೆ ವಿಕರ್ಮ ಜನ್ಮ ಜನ್ಮಾಂತರದ್ದು ಇದೆ. ಎಷ್ಟೇ ಜ್ಞಾನ ಯೋಗದಲ್ಲಿದ್ದರೂ ಇಷ್ಟೊಂದು ಭಾರೀ ವಿಕರ್ಮ ನಾಶವಾಗುವುದಿಲ್ಲ. ಆದರೆ ಯಾವಾಗ ಕರ್ಮಾತೀತರಾಗುವಿರೊ ಆಗ ನಿಮಗೆ ಹೊಸ ಜನ್ಮ ಹೊಸ ಯುಗದಲ್ಲಿ ಸಿಗುತ್ತದೆ. ಒಂದುವೇಳೆ ಸ್ವಲ್ಪ ಏನಾದರೂ ವಿಕರ್ಮ ಉಳಿದು ಬಿಟ್ಟರೂ ಮಕ್ಕಳಿಗೆ ಅತ್ಯುತ್ತಮ ರೀತಿಯಲ್ಲಿ ಜ್ಞಾನ ಸಿಗುತಿರುತ್ತದೆ. ಬೇರೇನೂ ಅರ್ಥವಾಗದಿದ್ದರೂ ಕೇವಲ ನನ್ನನ್ನು ನೆನಪು ಮಾಡಿ ಆಗಲೂ ಸ್ವರ್ಗದಲ್ಲಿ ಶ್ರೇಷ್ಠ ಪದವಿ ಪಡೆಯುವಿರಿ. ಪರಮಾತ್ಮ ಸ್ನೇಹಿತ-ಒಂದು ದಿನಕ್ಕಾಗಿ ರಾಜ್ಯಭಾಗ್ಯ ಕೊಡುತ್ತಿದ್ದರು, ಎಂಬ ಕಥೆಯೂ ಇದೆಯಲ್ಲವೆ. ತಂದೆಯೇ ತಂದೆ, ತಾಅಯಿ, ಶಿಕ್ಷಕ, ಬಂದು (ತ್ವಮೇವ ಮಾತಶ್ಚ ಪಿತ ಬಂಧು) ಎಲ್ಲವೂ ಆಗಿ ಬಿಟ್ಟಿದ್ದಾರೆ, ಅಂದಮೇಲೆ ಪರಮಾತ್ಮ ಮಿತ್ರ ಆದರಲ್ಲವೆ. ಅಲ್ಲಾಃ ಅವಲ್ದೀನ್ ಖುದಾ ದೋಸ್ತ್ ಈ ಕಥೆಗಳು ಈ ಸಮಯದ್ದೇ ಆಗಿದೆ. ಬಾಬಾ ಮಕ್ಕಳಿಗೆ ಒಂದು ಸೆಕೆಂಡಿನಲ್ಲಿ ಸ್ವರ್ಗದ ರಾಜ್ಯಭಾಗ್ಯ ಕೊಡುತ್ತಾರೆ. ಯಾವಾಗ ಮಕ್ಕಳು ಧ್ಯಾನದಲ್ಲಿ ಹೋಗುತ್ತಿದ್ದರೋ ಆಗ ರಾಜಕುಮಾರ ರಾಜಕುಮಾರಿ ಆಗುತ್ತಿದ್ದರು ಹಾಗೂ ಅಲ್ಲಿಯ ಎಲ್ಲಾ ಸಮಾಚಾರಗಳನ್ನು ಬಂದು ತಿಳಿಸುತ್ತಿದ್ದರು. ಈಗ ನೀವು ತಂದೆಯನ್ನು ಅರಿತುಕೊಂಡಿದ್ದೀರಿ. ಎಲ್ಲರೂ ಅವರನ್ನು ಸ್ವರ್ಗದ ರಚೈತ ಎಂದು ಹೇಳುತ್ತಾರೆ. ಆದ್ದರಿಂದ ಅವಶ್ಯವಾಗಿ ಹೊಸ ಪ್ರಪಂಚ ಸ್ವರ್ಗವನ್ನೇ ರಚಿಸುತ್ತಾರೆ. ಭಾರತವೇ ಸುವರ್ಣ ಯುಗವಾಗಿತ್ತು. ಆ ಸಮಯದಲ್ಲಿ ಬೇರೆ ಯಾವುದೇ ಧರ್ಮವಿರಲಿಲ್ಲ. ಕ್ರಿಸ್ತನಿಗಿಂತ ಮೂರು ಸಾವಿರ ವರ್ಷಕ್ಕೆ ಮೊದಲು ಭಾರತ ಸ್ವರ್ಗವಾಗಿತ್ತು ಎಂಬುದಾಗಿ ಕ್ರಿಶ್ಚಯನ್ನರೂ ಸಹ ಹೇಳುತ್ತಾರೆ. ಅಲ್ಲಿ ಲಕ್ಷ್ಮಿ ನಾರಾಯಣ ರಾಜ್ಯಭಾರ ಮಾಡುತ್ತಿದ್ದರು. ಅಂದಾಗ ನೀವು ಕೇಳಿ-ಇವರಿಗೆ ಈ ಆಸ್ತಿ ಎಲ್ಲಿಂದ ಸಿಕ್ಕಿತು? ಭಾರತವಾಸಿಗಳಿಗೆ ಇವರೊಂದಿಗೆ ಏನು ಸಂಬಂಧವಿದೆ? ಮೊಟ್ಟ ಮೊದಲು ಇವರೇ ಸ್ವರ್ಗದ ಮಾಲಿಕರಾಗಿದ್ದರು. ಈಗಂತೂ ನರಕವಿದೆ. ಅಂದಮೇಲೆ ಇವರು ಎಲ್ಲಿ ಹೋದರು? ಜನನ ಮರಣವನ್ನಂತೂ ಎಲ್ಲರೂ ಒಪ್ಪುತ್ತಾರಲ್ಲವೆ. ಆತ್ಮ ಜನನ ಮರಣದಲ್ಲಿ ಬರುವುದರಿಂದಲೇ 84 ಜನ್ಮವನ್ನು ತೆಗೆದುಕೊಳ್ಳುತ್ತದೆ, ಇಲ್ಲದಿದ್ದರೆ ಹೇಗೆ ತೆಗೆದುಕೊಳ್ಳುತ್ತದೆ. ಪ್ರಪಂಚದಲ್ಲಂತೂ ಅನೇಕ ಮತಗಳಿವೆ. ಕೆಲವರು ಪುನರ್ಜನ್ಮ ಒಪ್ಪಿದರೆ ಕೆಲವರು ಒಪ್ಪುವುದಿಲ್ಲ. ಅಂತಹವರನ್ನು ಪರಮಪಿತ ಪರಮಾತ್ಮನೊಂದಿಗೆ ನಿಮಗೆ ಏನು ಸಂಬಂಧವಿದೆ? ಎಂದು ಕೇಳಬೇಕು. ಈ ಬ್ರಹ್ಮಾ ವಿಷ್ಣು ಶಂಕರ ಯಾರು? ಇವರು ಎಲ್ಲಿಯ ನಿವಾಸಿಗಳು? ಎಂಬುದನ್ನೂ ಕೇಳಿರಿ ನೀವಂತೂ ಇವರು ಸೂಕ್ಷ್ಮವತನ ನಿವಾಸಿಗಳು ಎಂದು ಹೇಳುವಿರಿ. ಬೇರೆ ಯಾರೂ ಹೇಳಲು ಸಾಧ್ಯವಿಲ್ಲ. ನಿಮಗಂತೂ ಎಷ್ಟೊಂದು ಸಹಜವಾಗಿದೆ. ಮಾತೆಯರಿಗೆ ಯಾವುದೇ ನೌಕರಿ ಇತ್ಯಾದಿಗಳ ಅಗತ್ಯವಿಲ್ಲ. ಮನೆಯಲ್ಲಿ ಇರುವವರಾಗಿದ್ದೀರಿ. ಯಾವುದೇ ಕೆಲಸ ಕಾರ್ಯಗಳ ಜಂಜಾಟವಿಲ್ಲ. ಆದ್ದರಿಂದ ತಂದೆಯಿಂದ ಆಸ್ತಿಯನ್ನು ಪಡೆಯಬೇಕು. ಪುರುಷುರಿಗಂತೂ ನೌಕರಿಯ ಅಗತ್ಯವಿದೆ. ಆದ್ದರಿಂದ ನೀವು ತಮ್ಮ ಆಸ್ತಿ ಪಡೆದುಕೊಳ್ಳಿ ಎಂದು ಬಾಬಾ ಮಾತೆಯರಿಗೆ ಹೇಳುತ್ತಾರೆ. ಶ್ರೀಮಂತರಿಗೆ ಎಷ್ಟೊಂದು ಚಿಂತೆಯಿರುತ್ತದೆ. ಪ್ರಪಂಚದಲ್ಲಿ ಲಂಚದ ಹಾವಳಿ ಬಹಳ ಇರುತ್ತದೆ. ನಿಮಗೆ ಲಂಚ ತೆಗೆದುಕೊಳ್ಳುವ ಅಗತ್ಯವೇನೂ ಇಲ್ಲ. ಅದಂತೂ ವ್ಯಾಪಾರಿಗಳ ಕೆಲಸವಾಗಿದೆ. ನೀವು ಇವುಗಳಿಂದ ಮುಕ್ತರಿದ್ದೀರಿ. ಆದರೂ ಮಾಯೆ ಇಂತಹದಾಗಿದೆ, ಜುಟ್ಟನ್ನೇ ಹಿಡಿದು ಬಿಡುತ್ತದೆ. ಆದ್ದರಿಂದ ಏನಾದರೂ ಸ್ವಲ್ಪ ಇಚ್ಚೆ ಇರುವುದರಿಂದ ಜಿಜ್ಞಾಸುಗಳಿಂದ ಕೇಳುತ್ತಿರುತ್ತಾರೆ. ಆದರೆ ಬಾಬಾ ಹೇಳುತ್ತಾರೆ ಮಕ್ಕಳೇ ಯಾರಿಂದಲೂ ಏನನ್ನೂ ಬೇಡಬೇಡಿ. ನೀವು ದಾತನ ಮಕಳಾಗಿದ್ದೀರಲ್ಲವೇ. ನೀವು ಅನ್ಯರಿಗೆ ಕೊಡ ಬೇಕೆ ಹೊರತು ಕೇಳಬಾರದು. ನಿಮಗೇನು ಬೇಕಾಗಿದೆಯೊ ಅದು ಶಿವಬಾಬಾರಿಂದ ಸಿಗುತ್ತದೆ. ಬೇರೆ ಯಾರಿಂದಲಾದರು ತೆಗೆದುಕೊಂಡರೆ ಅವರದ್ದೇ ನೆನಪು ಬರುತ್ತದೆ. ಪ್ರತಿಯೊಂದು ವಸ್ತುವನ್ನೂ ಶಿವಬಾಬಾರಿಂದಲೇ ತೆಗೆದುಕೊಂಡರೆ ನಿಮಗೆ ಪದೇ ಪದೇ ತಂದೆಯೇ ನೆನಪಿಗೆ ಬರುತ್ತಾರೆ. ನೀವು ಕೊಡುವುದು-ತೆಗೆದುಕೊಳ್ಳುವುದು ನನ್ನೊಂದಿಗಿದೆ ಎಂದು ಶಿವಬಾಬಾ ಹೇಳುತ್ತಾರೆ. ಈ ಬ್ರಹ್ಮಾ ಮಧ್ಯದಲ್ಲಿ ದಳ್ಳಾಳಿಯಾಗಿದ್ದಾರೆ. ಬಾಕಿ ಕೊಡುವಂತವನು ನಾನಾಗಿದ್ದೇನೆ. ನೀವು ಬ್ರಹ್ಮನ ಮೂಲಕ ನನ್ನೊಂದಿಗೆ ಸಂಬಂಧ ಇಟ್ಟುಕೊಳ್ಳಿರಿ. ಅನ್ಯರಿಂದ ಏನಾದರೂ ನೀವು ಯಾವುದೇ ವಸ್ತುಗಳನ್ನು ತೆಗೆದುಕೊಂಡಿದ್ದೇ ಆದರೆ ನಂತರ ನಿಮಗೆ ಅವರೇ ನೆನಪಿಗೆ ಬರುತ್ತಾರೆ ನಂತರ ನೀವು ವ್ಯಭಿಚಾರಿಗಳಾಗುವಿರಿ. ತಂದೆಯ ಭಂಡಾರದಿಂದಲೇ ನಿಮಗೆ ಬೇಕಾದ ವಸ್ತುಗಳನ್ನು ತೆಗೆದುಕೊಳ್ಳಿ. ಬೇರೆ ಯಾರಿಂದಲೂ ಕೇಳಬೇಡಿ. ಇಲ್ಲದಿದ್ದರೆ ಕೊಟ್ಟವರಿಗೆ ನಷ್ಟ ಆಗುತ್ತದೆ. ಏಕೆಂದರೆ ಅವರು ಶಿವಬಾಬಾರ ಭಂಡಾರದಲ್ಲಿ ಕೊಟ್ಟಿಲ್ಲ. ಏನೇ ಕೊಡುವುದಿದ್ದರೂ ಶಿವಬಾಬಾರ ಭಂಡಾರಕ್ಕೆ ಕೊಡಬೇಕು. ಮನುಷ್ಯರೊಂದಿಗೆ ಅನೇಕ ಜನ್ಮಗಳಿಂದ ಲೆಕ್ಕಾಚಾರ ಬೆಳಿಸಿದ್ದೀರಿ. ಈಗ ನಿಮ್ಮೆಲ್ಲರ ಲೆಕ್ಕಾಚಾರ ನೇರವಾಗಿ ಶಿವಬಾಬಾರೊಂದಿಗಿರಲಿ. ಆದರೆ ಮಕ್ಕಳಲ್ಲಿ ಲೋಭದ ಭೂತ ಇರುವುದನ್ನೂ ಬಾಬಾ ತಿಳಿದುಕೊಂಡಿದ್ದಾರೆ. ನಾವು ಶಿವಬಾಬಾರನ್ನು ನೋಡಿಯೇ ಇಲ್ಲವೆಂದು ಕೆಲವು ಮಕ್ಕಳು ಹೇಳುತ್ತಾರೆ. ಅರೆ ನಿಮ್ಮನ್ನು ನೀವು ನೋಡಿದ್ದೀರಾ? ನಿಮಗೆ ತಮ್ಮ ಆತ್ಮದ ಸಾಕ್ಷಾತ್ಕಾರ ಆಗಿದೆಯೇ? ನಮಗೆ ಶಿವಬಾಬಾರವರ ಸಾಕ್ಷಾತ್ಕಾರ ಆಗಲಿ ಎಂದು ಹೇಳಲು, ನಾವು ಆತ್ಮ ಭೃಕುಟಿಯ ಮಧ್ಯದಲ್ಲಿ ಇದ್ದೇವೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಅಂದಮೇಲೆ ಶಿವಬಾಬಾರವರು ಸಹ ಭೃಕುಟಿಯ ಮದ್ಯದಲ್ಲಿಯೇ ಇರಬೇಕು. ಆತ್ಮ ಒಂದು ಶರೀರ ಬಿಟ್ಟು ಮತ್ತೊಂದು ಶರೀರವನ್ನು ಪಡೆಯುತ್ತದೆ ಎಂಬುದನ್ನೂ ನೀವು ತಿಳಿದುಕೊಂಡಿದ್ದೀರಿ. ಕೆಲವೊಮ್ಮೆ ಆತ್ಮನ ಸಾಕ್ಷಾತ್ಕಾರ ಆಗುವ ಸಾಧ್ಯತೆಯೂ ಇದೆ. ಆತ್ಮ ನಕ್ಷತ್ರದಂತಿದೆ. ಸಾಕ್ಷಾತ್ಕಾರವೂ ದಿವ್ಯ ದೃಷ್ಟಿಯಿಂದಲೇ ಆಗುತ್ತದೆ. ಒಳ್ಳೆಯದು ನೀವು ಕೃಷ್ಣನ ಭಕ್ತಿ ಮಾಡಿದಾಗ ಸಾಕ್ಷಾತ್ಕಾರ ಆಗುತ್ತದೆಂದು ತಿಳಿಯಿರಿ. ಆದರೆ ಅದರಿಂದ ಏನು ಲಾಭ? ಹಾಗೆಯೇ ಪರಮಾತ್ಮನ ಸಾಕ್ಷಾತ್ಕಾರವೂ ಆಗುತ್ತದೆಂದುಕೊಳ್ಳಿ ಆದರೆ ಲಾಭವೇನಿದೆ? ನಿಮಗಂತೂ ವಿದ್ಯೆ ಓದಬೇಕಲ್ಲವೆ. ಭಕ್ತಿ ಮಾರ್ಗದಲ್ಲಿ ಸಾಕ್ಷಾತ್ಕಾರವಾದರೆ ಎಷ್ಟೊಂದು ಗಾಯನ ಮಾಡುತ್ತಾರೆ. ಆದರೆ ಸಿಗುವುದು ಏನು ಇಲ್ಲ. ಶಿವಬಾಬಾ ಜ್ಞಾನದ ಸಾಗರವಾಗಿದ್ದಾರೆ. ಬ್ರಹ್ಮಾರವರಿಗೆ ಜ್ಞಾನದ ಸಾಗರ ಎಂದು ಹೇಳುವುದಿಲ್ಲ ಅಲ್ಲವೆ. ಬ್ರಹ್ಮಾರವರಿಗೂ ತಂದೆಯಿಂದಲೇ ಜ್ಞಾನ ಸಿಗುತ್ತದೆ. ಈ ದಿನಗಳಲ್ಲಂತೂ ಪೂಜೆಯನ್ನೂ ಮಾಡುತ್ತಾರೆ, ಆದರೆ ಯಾರ ಚರಿತ್ರಯೂ ತಿಳಿದಿಲ್ಲ. ಹಾಗೂ ಈ ಜ್ಞಾನ ರತ್ನಗಳನ್ನು ತಿಳಿದುಕೊಳ್ಳಲಾರರು. ರತ್ನವನ್ನು ತೆಗೆದುಕೊಳ್ಳುತ್ತಾ ತೆಗೆದುಕೊಳ್ಳುತ್ತಾ ಕೆಲವರನ್ನು ಮಾಯೆ ಮಂಗನನ್ನಾಗಿ ಮಾಡಿ ಬಿಡುತ್ತದೆ. ಆಗ ನಮಗೆ ರತ್ನಗಳು ಬೇಡವೆಂದು ಹೇಳುತ್ತಾರೆ. ಆದರೂ ಅಂತವರು ಶಿವಾಲಯದಲ್ಲಿ ಬರುತ್ತಾರೆಂದು ಶಿವಬಾಬಾ ತಿಳಿಸುತ್ತಾರೆ ಆದರೆ ಪ್ರಜೆಗಳಲ್ಲೂ ಕಡಿಮೆ ಪದವಿ ಪಡೆಯುತ್ತಾರೆ. ಪುರುಷಾರ್ಥ ಮಾಡಿ ಶ್ರೇಷ್ಟ ಪದವಿ ಪಡೆಯಬೇಕು. ಬಾಬಾ ಹೇಳುತ್ತಾರೆ-ನಾನು ನಿಮಗೆ ವೈಕುಂಠದ ರಾಜ್ಯಭಾಗ್ಯ ಕೊಡಲು ಬಂದಿದ್ದೇನೆ. ನೀವೀಗ ಪುರುಷಾರ್ಥ ಮಾಡಿ ಅನ್ಯರನ್ನೂ ತಮ್ಮ ಸಮಾನ ಮಾಡಿಕೊಳ್ಳಿ. ಶಿವಬಾಬಾ ಯಾರಾಗಿದ್ದಾರೆಂಬುದನ್ನು ನೀವು ಮಂದಿರಗಳಲ್ಲಿರುವ ಪೂಜಾರಿಗಳೊಂದಿಗೂ ಕೇಳಬಹುದು. “ಬೆಂಕಿ ಕೇಳಲು ಬಂದವರು ಮಾಲಿಕರಾಗಿ ಕುಳಿತರು” ಎಂಬುದಾಗಿ ಹೇಳುತ್ತಾರಲ್ಲವೇ. ಕೆಲವೊಂದು ಪೂಜಾರಿಗಳ ಬುದ್ದಿಯಲ್ಲಿ ಚೆನ್ನಾಗಿ ಕುಳಿತು ಬಿಡುತ್ತದೆ, ನಾವು ಸಹ ಪೂಜಾರಿಗಳಾಗಿದ್ದೇವು, ಈಗ ಪೂಜ್ಯರಾಗುತ್ತಿದ್ದೇವೆ. ಈ ಲಕ್ಷ್ಮಿ ನಾರಾಯಣರೂ ಸಹ ಯಾವ ಪುರುಷಾರ್ಥದಿಂದ ಪೂಜ್ಯರಾದರೆಂಬುದನ್ನು ನೀವು ತಿಳಿಸಿ ಕೊಡಬಹುದು. ಬಾಬಾ ಹೇಳುತ್ತಾರೆ-ಎಲ್ಲಿ ನನ್ನ ಭಕ್ತರಿದ್ದಾರೋ ಅವರಿಗೂ ತಿಳಿಸಿಕೊಡಿ. ಶಿವನ ಮಂದಿರದಲ್ಲಿ ಲಕ್ಷ್ಮಿ ನಾರಾಯಣರ ಮಂದಿರದಲ್ಲಿ ಭಕ್ತರಿರುತ್ತಾರೆ. ಅಲ್ಲಿಗೆ ಹೋಗಿ ಪೂಜಾರಿಗಳಿಗೆ ತಿಳಿಸಿಕೊಡಿ. ನಂತರ ಅವರು ಅನ್ಯರಿಗೆ ತಿಳಿಸುತ್ತಾರೆ. ಪೂಜಾರಿ ಜಗದಂಬೆಯ ಚರಿತ್ರೆಯನ್ನು ಅನ್ಯರಿಗೆ ತಿಳಿಸಿದ್ದೆ ಆದರೆ ಎಲ್ಲರೂ ಖುಷಿಯಾಗುತ್ತಾರೆ. ಅವರಿಗೆ ಈ ಎಲ್ಲಾ ಮಾತುಗಳನ್ನು ತಿಳಿದುಕೊಳ್ಳಲು ಹೇಳಬೇಕು. ನೀವು ಯಾರಿಗಾದರೂ ಈ ದೇವತೆಗಳ ಜೀವನ ಕಥೆಯನ್ನು ಹೇಳಿದ್ದೇ ಆದರೆ ನಿಮಗೆ ತುಂಬಾ ಹಣ ಸಿಗುತ್ತದೆಯೆಂದು ಪೂಜಾರಿಗಳಿಗೆ ಹೇಳಿರಿ. ಯಾವ ಮಕ್ಕಳು ದೇಹೀ ಅಭಿಮಾನಿಯಾಗಿರುತ್ತಾರೋ ಅವರೇ ಈ ಎಲ್ಲಾ ಮಾತನ್ನು ಅನ್ಯರಿಗೆ ತಿಳಿಸಿಕೊಡಬಲ್ಲರು. ದೇಹಾಭಿಮಾನಿಗಳಿಗೆ ಇಡೀ ದಿನ ಇದು ಬೇಕು ಆದು ಬೇಕು ಎಂಬ ಇಚ್ಚೆಯಿರುತ್ತದೆ. ವಿಧ್ಯಾರ್ಥಿಗಳಿಗಂತೂ ಜ್ಞಾನದ ಇಚ್ಚೆಯಿರಬೇಕು ನಾನು ಶ್ರೇಷ್ಠ ರೀತಿಯಲ್ಲಿ ಉತ್ತೇರ್ಣನಾಗಬೇಕೆಂಬ ಆಸಕ್ತಿಯಿರಬೇಕು. ಇದಾಗಿದೆ ವಿದ್ಯೆಯ ಲಕ್ಷ್ಯ.

ಡ್ರಾಮಾದ ರಹಸ್ಯವನ್ನೂ ತಿಳಿದುಕೊಳ್ಳಬೇಕು. ಸೃಷ್ಟಿ ನಾಟಕವು ತುಂಬಾ ದೊಡ್ಡದಲ್ಲ. ಆದರೆ ಶಾಸ್ತ್ರಗಳಲ್ಲಿ ಇದರ ಆಯಸ್ಸನ್ನು ದೊಡ್ಡದಾಗಿ ಮಾಡಿದ್ದಾರೆ. ಆದ್ದರಿಂದ ಇದೆಲ್ಲವೂ ಬುದ್ದಿಯಲ್ಲಿ ಬಂದು ಬಿಡಬೇಕು. ಸೇವೆಯಂತೂ ಬಹಳವಿದೆ. ಯಾರಾದರೂ ಈ ಸೇವೆ ಮಾಡಿ ತೋರಿಸಿರಿ. ತಂದೆಯಿಂದ ಕೃಪೆಯನ್ನೆಂದೂ ಕೇಳುವುದಿಲ್ಲ. ಭಗವಂತ ಗಂಡು ಮಗುವನ್ನು ಕೊಟ್ಟರೆ ಕುಲವು ವೃದ್ದಿಯಾಗುತ್ತದೆ ಎಂದು ಹೇಳುತ್ತಾರೆ. ಆದರೆ ತಂದೆಯಂತೂ ತಮ್ಮ ಈಶ್ವರೀಯ ಕುಲದ ವೃದ್ದಿಯನ್ನು ಮಾಡುತ್ತಿದ್ದಾರಲ್ಲವೆ. ಈ ಸಮಯದಲ್ಲಿ ಈಶ್ವರೀಯ ಕುಲದ ವೃದ್ಧಿಯಾಗುತ್ತಿದೆ ನಂತರ ದೈವೀ ಕುಲದ ವೃದ್ಧಿಯಾಗುತದೆ. ನೀವೆಲ್ಲರು ಈಶ್ವರೀಯ ಸಂತಾನವಾಗಿದ್ದೀರಿ. ಆದ್ದರಿಂದ ತಂದೆ ಹೇಳುತ್ತಾರೆ – ಅದು ಬೇಕು ಇದು ಬೇಕೆಂಬ ಇಚ್ಚೆಯನ್ನು ಬಿಟ್ಟು ನನೊಬ್ಬನನ್ನೇ ನೆನಪು ಮಾಡಿರಿ. ಬಂಧನ ಇತ್ಯಾದಿಯೂ ಇರುತ್ತದೆ. ಇದೆಲ್ಲವೂ ಕರ್ಮಗಳ ಲೆಕ್ಕಾಚಾರವಾಗಿದೆ. ಬ್ರಹ್ಮಬಾಬಾನನ್ನು ನೋಡಿ ಎಷ್ಟೊಂದು ನಿಂದನೆ ಮಡುತ್ತಾರೆ. ಆದರೆ ಡಿಸ್ಸರ್ವೀಸ್ ಮಾಡುವುದು ಸಹಜ ಸೇವೆ ಮಾಡುವುದೇ ಕಷ್ಟ. ಒಬ್ಬರು ಕೆಟ್ಟವರಿದ್ದರೆ ಹತ್ತು-ಇಪ್ಪತ್ತು ಜನರನ್ನೂ ಕೆಟ್ಟವರನ್ನಾಗಿ ಮಾಡಿ ಬಿಡುತ್ತಾರೆ. ಉಳಿದಂತೆ ಐದು-ಎಂಟು ಬಹಳ ಪರಿಶ್ರಮದಿಂದ ಉಳಿದುಕೊಳ್ಳುತ್ತಾರೆ. ಕೆಲವರು ಸೇವಾಕೇಂದ್ರಕ್ಕೆ ಬರುತ್ತಲೂ ಇರುತ್ತಾರೆ ಹಾಗೂ ಕಪ್ಪು ಮುಖ ಮಾಡಿಕೊಂಡರೆ ಅದರ ಪ್ರಭಾವ ಬಹಳ ಸಮಯವಿರುತ್ತದೆ. ರಿಜಿಸ್ಟರ್ನಲ್ಲಿಯೇ ಗೊತ್ತಾಗುತ್ತದೆ. ನಾಲ್ಕೂ ಐದು ವರ್ಷ ಬಂದು ನಂತರ ಬರುವುದನ್ನು ನಿಲ್ಲಿಸಿ ಬಿಡುತ್ತಾರೆ. ತಂದೆ ತಿಳಿಸುತ್ತಾರೆ-ಈ ರೀತಿ ಮಾಡುವುದರಿಂದ ನೀವು ರಾಜ್ಯ ಪದವಿ ಪಡೆಯುವುದಿಲ್ಲ. ಇಂದ್ರ ಪ್ರಸ್ಥದ ಕಥೆಯು ಇದೆ. ಇಂತಹವರು ಕಲ್ಲಾದರೆಂದು ನೀವೂ ಸಹ ಕಲ್ಲು ಬುದ್ಧಿಯವರಾಗಿ ಬಿಡುತ್ತೀರಿ. ಪಾರಸ ಬುದ್ದಿಯವರಾಗಲು ಸಾಧ್ಯವಿಲ್ಲ. ಇಷ್ಟಾದರು ಪುರುಷಾರ್ಥ ಮಾಡುವುದಿಲ್ಲ ಇದೂ ಸಹ ಡ್ರಾಮಾದಲ್ಲಿ ನಿಗಿದಿಯಾಗಿದೆ. ರಾಜಧಾನಿಯಲ್ಲಿ ನಂಬರ್ವಾರ್ ಬೇಕು ನೌಕರ, ಚಂಡಾಲ ಮುಂತಾದವರೆಲ್ಲರೂ ಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಲೌಕಿಕದ ಎಲ್ಲಾ ಇಚ್ಚೆಗಳನ್ನು ಬಿಟ್ಟು ಈಶ್ವರೀಯ ಕುಲದ ವೃದ್ಧಿ ಮಾಡುವುದರಲ್ಲಿ ಸಹಯೋಗಿಗಳಾಗಿರಿ, ಯಾವುದೇ ಡಿಸ್ ಸರ್ವೀಸ್ ಕೆಲಸ ಮಾಡಬಾರದು.

2. ಕೊಡುವುದು ತೆಗೆದುಕೊಳ್ಳುವುದು ಒಬ್ಬ ತಂದೆಯೊಂದಿಗಿರಲಿ. ಯಾವುದೇ ದೇಹಧಾರಿಗಳೊಂದಿಗೆ ಇರಬಾರದು.

ವರದಾನ:-

ಅಂತಿಮ ಸಮಯದಲ್ಲಿ ನಾಲ್ಕೂ ಕಡೆಗಳಲ್ಲಿ ವ್ಯಕ್ತಿಗಳ, ಪ್ರಕೃತಿಯ ಏರುಪೇರು ಮತ್ತು ಶಬ್ಧವಿರುತ್ತದೆ. ಚೀರಾಡುವ, ಅಲುಗಾಡಿಸುವ ವಾಯುಮಂಡಲವಿರುತ್ತದೆ. ಇಂತಹ ಸಮಯದಲ್ಲಿ ಸೆಕೆಂಡಿನಲ್ಲಿ ಅವ್ಯಕ್ತ ಫರಿಶ್ತೆಯಿಂದ ನಿರಾಕಾರಿ ಅಶರೀರಿ ಆತ್ಮನಾಗಿದ್ದೇನೆ – ಈ ಅಭ್ಯಾಸವೇ ವಿಜಯಿಯನ್ನಾಗಿ ಮಾಡುವುದು. ಆದ್ದರಿಂದ ಬಹಳ ಸಮಯದ ಅಭ್ಯಾಸವಿರಲಿ – ಮಾಲೀಕನಾಗಿದ್ದು ಯಾವಾಗ ಬೇಕು ಆಗ ಮುಖದಿಂದ ವಾದ್ಯ ಮೊಳಗಲಿ, ಯಾವಾಗ ಬೇಕೋ ಆಗ ಕಿವಿಗಳ ಮೂಲಕ ಕೇಳಿಸಿಕೊಳ್ಳಲಿ. ಒಂದುವೇಳೆ ಬಯಯದಿದ್ದರೆ ಸೆಕೆಂಡಿನಲ್ಲಿ ಸ್ಟಾಪ್ ಆಗಿ ಬಿಡಬೇಕು – ಈ ಅಭ್ಯಾಸವು ಸ್ಮರಣೆ ಅರ್ಥಾತ್ ವಿಜಯ ಮಾಲೆಯಲ್ಲಿ ಕರೆದುಕೊಂಡು ಬರುತ್ತದೆ.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:
ಆದಿ ಕಾಲ, ಅಮೃತವೇಳೆಯಲ್ಲಿ ತಮ್ಮ ಹೃದಯದಲ್ಲಿ ಪರಮಾತ್ಮನ ಪ್ರೀತಿಯನ್ನು ಸಂಪೂರ್ಣ ರೂಪದಿಂದ ಧಾರಣೆ ಮಾಡಿಕೊಳ್ಳಿರಿ. ಒಂದುವೇಳೆ ಹೃದಯದಲ್ಲಿ ಪರಮಾತ್ಮನ ಪ್ರೀತಿ, ಪರಮಾತ್ಮನ ಶಕ್ತಿಗಳು, ಪರಮಾತ್ಮನ ಜ್ಞಾನವು ತುಂಬಿದ್ದರೆ, ಎಂದಿಗೂ ಅನ್ಯ ಯಾವುದೇ ಕಡೆಗೆ ಸೆಳೆತ ಅಥವಾ ಸ್ನೇಹವುಂಟಾಗಲು ಸಾಧ್ಯವಿಲ್ಲ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top