21 January 2022 KANNADA Murli Today | Brahma Kumaris

Read and Listen today’s Gyan Murli in Kannada

January 20, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಬುದ್ಧಿವಂತರಾಗಿ ಪ್ರತಿಯೊಂದು ಕರ್ಮವನ್ನು ಮಾಡಬೇಕು, ಮಾಯೆ ಯಾವುದೇ ಪಾಪ ಕರ್ಮ ಮಾಡಿಸದಂತೆ ಸಂಭಾಲನೆ ಮಾಡಿಕೊಳ್ಳಬೇಕು”

ಪ್ರಶ್ನೆ:: -

ತಂದೆ ಹೆಸರನ್ನು ಪ್ರಸಿದ್ಧಿ ಮಾಡಲು ಯಾವ ಧಾರಣೆಗಳು ಇರಬೇಕಾಗಿದೆ?

ಉತ್ತರ:-

ತಂದೆ ಹೆಸರನ್ನು ಪ್ರಸಿದ್ಧಿ ಮಾಡಲು ನಂಬಿಕಸ್ತರು, ಪ್ರಾಮಾಣಿಕರಾಗಬೇಕು. ಸತ್ಯತೆಯ ಜೊತೆ ಸೇವೆ ಮಾಡಿ. ಹರಿಯುವ ಗಂಗೆಯಾಗಿ ಎಲ್ಲರಿಗೂ ತಂದೆಯ ಸಂದೇಶವನ್ನು ಕೊಡುತ್ತಾ ಹೋಗಿ. ತಮ್ಮ ಕರ್ಮೇಂದ್ರಿಯಗಳ ಮೇಲೆ ಪೂರ್ಣ ನಿಯಂತ್ರಣದಲ್ಲಿ ಇಟ್ಟುಕೊಂಡು ಆಸೆಗಳನ್ನು ಬಿಟ್ಟು ನಿಯಮನುಸಾರವಾಗಿ ನಡೆಯಬೇಕು. ಸೋಮಾರಿಗಳಾಗಬಾರದು. ಜ್ಞಾನ ಯೋಗವನ್ನು ಮೊದಲು ಸ್ವಯಂ ಧಾರಣೆ ಮಾಡಬೇಕು. ಆಗ ತಂದೆಯ ಹೆಸರನ್ನು ಪ್ರಸಿದ್ಧ ಮಾಡಬಹುದು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಇಂದಿನ ಮನುಷ್ಯನಿಗೆ ಏನಾಗಿ ಬಿಟ್ಟಿದೆ……

ಓಂ ಶಾಂತಿ. ಇದು ಇಂದಿನ ಭಾರತದ ಸ್ಥಿತಿಯಾಗಿದೆ. ಒಂದು ಹಾಡಿನಲ್ಲಿ ಭಾರತವು ಕೆಳಗಡೆ ಇಳಿದಿರುವ ಸ್ಥಿತಿ ಗತಿಯನ್ನು ತೋರಿಸಿದ್ದಾರೆ. ಬೇರೆ ಒಂದು ಗೀತೆಯಲ್ಲಿ ಭಾರತದ ಮಹಿಮೆಯನ್ನು ಮಾಡಿದ್ದಾರೆ. ಪ್ರಪಂಚದವರು ಈ ಮಾತುಗಳನ್ನು ತಿಳಿದುಕೊಂಡಿಲ್ಲ. ನೀವು ಮಕ್ಕಳಲ್ಲೂ ಸಹ ಕೆಲವರಷ್ಟೆ ತಿಳಿದುಕೊಂಡಿದ್ದಾರೆ-ಭಾರತವೇ 100% ಬುದ್ದಿವಂತ ದೇಶವಾಗಿತ್ತು ಹಾಗು ಈಗ 100% ಬುದ್ದಿಹೀನ ದೇಶವಾಗಿದೆ. ಎರಡು ಸಾವಿರ ಐನೂರು ವರ್ಷಗಳವರೆಗೂ 100% ಬುದ್ಧಿವಂತ ದೇಶವಾಗಿರುತ್ತದೆ, ನಂತರ ಪೂರ್ತಿಯಾಗಿ ಬುದ್ದಿಹೀನ ದೇಶವಾಗಿಬಿ ಡುತ್ತದೆ, ಈ ರೀತಿ ಆಗಬೇಕಾದರೂ ಸಹ ಮತ್ತೆ ಅರ್ಧಕಲ್ಪ ಬೇಕಾಗುತ್ತದೆ. ಪೂರ್ತಿ ಬುದ್ಧಿಹೀನರನ್ನು ಮತ್ತೆ ಒಂದೇ ಜನ್ಮದಲ್ಲಿ ತಂದೆಯು ಬುದ್ದಿವಂತರನ್ನಾಗಿ ಮಾಡುತ್ತಾರೆ. ಯಾವುದಾದರು ಬುದ್ಧಿಹೀನ ಕೆಲಸ ಮಾಡಿದಾಗ ಮನಸ್ಸು ತಿನ್ನುತ್ತಿರುತ್ತದೆ. ಮಾಡಿರುವ ಪಾಪ ನೆನಪಿಗೆ ಬರುತ್ತಿರುತ್ತದೆ. ಆದ್ದರಿಂದ ಈಗ ಚೆನ್ನಾಗಿ ತಿಳಿದುಕೊಂಡು ಪ್ರತಿಯೊಂದು ಕರ್ಮ ಮಾಡಬೇಕು. ಯಾವುದೇ ವಿರುದ್ಧ ಕರ್ಮವಾಗದಂತೆ ನಮ್ಮನ್ನು ನಾವೇ ಸಂಭಾಲನೆ ಮಾಡಿಕೊಳ್ಳಬೇಕು. ಮಾಯೆಯ ಯುದ್ದ ನಮಗೆ ತಿಳಿಯದಂತೆ ಆಗುತ್ತಿರುತ್ತದೆ. ಕಾಮ ವಿಕಾರದ ಅರ್ಧ ನಶೆ ಬರುತ್ತಿರುತ್ತದೆ. ಆಗ ಬಿರುಗಾಳಿ ಬಂದಿತೆಂದು ಮಕ್ಕಳು ತಂದೆಗೆ ಪತ್ರ ಬರೆಯುತ್ತಾರೆ. ಕಾಮ ವಿಕಾರವೇನು ಕಡಿಮೆಯಲ್ಲ, ಅನೇಕ ಪ್ರಕಾರದ ನಶೆ ನಮ್ಮ ತಲೆಯನ್ನು ಬಿಸಿ ಮಾಡಿ ಬಿಡುತ್ತದೆ. ದೇಹದ ಜೊತೆಯ ಪ್ರೀತಿ ಈ ರೀತಿ ಇರುತ್ತದೆ, ಬುದ್ಧಿ ಅವರ ಕಡೆ ಹೋಗುತ್ತಿರುತ್ತದೆ. ಯೋಗ ಸರಿಯಿಲ್ಲದ ಕಾರಣ ಸ್ಥಿತಿ ಕಚ್ಚಾ ಆಗಿದ್ದು ತುಂಬಾ ನಷ್ಟ ಆಗುತ್ತದೆ. ತಂದೆಯ ಬಳಿ ತುಂಬಾ ಈ ರೀತಿ ರಿಪೋರ್ಟ್ ಬರುತ್ತಿರುತ್ತದೆ. ಇದು ಕಠಿಣವಾದ ಬಿರುಗಾಳಿಯಾಗಿದೆ. ಲೋಭವೂ ಸಹ ತುಂಬಾ ಸತಾಯಿಸುತ್ತದೆ. ಅಂತಹವರು ನಿಯಮ ವಿರುದ್ದವಾಗಿ ನಡೆದುಕೊಳ್ಳುತ್ತಾರೆ. ಆ ಸನ್ಯಾಸಿಗಳಿದ್ದಂತೆ ನೀವು ಸಹ ಸನ್ಯಾಸಿಗಳಾಗಿದ್ದೀರಿ. ಅವರು ಹಠಯೋಗಿಗಳಾಗಿದ್ದಾರೆ. ನೀವು ರಾಜಯೋಗಿಗಳಾಗಿದ್ದೀರಿ. ಅವರಲ್ಲೂ ಸಹ ನಂಬರ್ವಾರ್ ಇರುತ್ತಾರೆ. ಕೆಲವರು ತಮ್ಮ ಕುಟೀರದಲ್ಲಿದ್ದುಕೊಂಡೇ ಊಟ ಅಲ್ಲಿಗೆ ತರಿಸಿಕೊಳ್ಳುತ್ತಾರೆ ಅಥವಾ ಬೇಡಿ ತಿನ್ನುತ್ತಾರೆ. ವಿಕಾರಗಳನ್ನು ಸನ್ಯಾಸ ಮಾಡುವ ಕಾರಣ ಅವರ ಪವಿತ್ರತೆ ಮನುಷ್ಯರನ್ನು ಆಕರ್ಷಣೆ ಮಾಡುತ್ತದೆ. ಅವರಲ್ಲಿಯೂ ಸಹ ನಂಬರ್ವಾರ್ ಇದ್ದಾರೆ. ಇಲ್ಲಿ ಸಹ ಜ್ಞಾನ ಯೋಗದ ಶಕ್ತಿ ಬೇಕಾಗುತ್ತದೆ. ಎಷ್ಟು ಯೋಗದಲ್ಲಿರುತ್ತಾರೆ ಆಗ ಯಾವ ಮಾತುಗಳ ಬಗ್ಗೆ ಚಿಂತೆಯಿರುವುದಿಲ್ಲ. ಯೋಗ ಆರೋಗ್ಯದ ಚಿನ್ಹೆಯಾಗಿದೆ. ಆದರು ಹಳೆಯ ವಿಕರ್ಮದ ಫಲವನ್ನು ಭೋಗಿಸಬೇಕಾಗುತ್ತದೆ. ಎಲ್ಲಾ ಯೋಗದ ಮೇಲೆ ಆಧಾರಿತವಾಗಿದೆ. ಈ ರೀತಿ ಅಲ್ಲ ನನಗೆ ಇಂತಹ ವಸ್ತು ಬೇಕಾಗಿದೆ……. ಸನ್ಯಾಸಿಗಳು ಹೇಗೆ ಬೇಡುವುದಿಲ್ಲ. ಅವರಲ್ಲಿಯೂ ಯೋಗಬಲವಿರುತ್ತದೆ. ತತ್ವಯೋಗಿಗಳಲ್ಲಿ ಶಕ್ತಿಯಿರುತ್ತದೆ. ಕೆಲವರು ನಕಲಿ ಸನ್ಯಾಸಿಗಳಿರುತ್ತಾರೆ. ಅವರು ಔಷಧಿಯ ಆಧಾರದಿಂದ ನಡೆದುಕೊಳ್ಳುತ್ತಾರೆ. ಅದು ಕೃತಕವಾದ ಸನ್ಯಾಸವಾಗಿದೆ.

ನಿಮಗೆ ಆಧಾರ ಯೋಗವಾಗಿದೆ. ತಂದೆಯೊಂದಿಗೆ ನಿಮ್ಮ ಯೋಗವಿದೆ, ಇದರಿಂದ ಶ್ರೇಷ್ಠ ಪದವಿ ಸಿಗುತ್ತದೆ. ನಿಮ್ಮ ದೇವೀ-ದೇವತಾ ಧರ್ಮದಲ್ಲಿ ತುಂಬಾ ಸುಖವಿದೆ. ಅದಕ್ಕಾಗಿ ನಿಮಗೆ ಶ್ರೀಮತ ಸಿಗುತ್ತಿರುತ್ತದೆ. ಆ ಸನ್ಯಾಸಿಗಳಿಗೆ ಯವುದೇ ಈಶ್ವರೀಯ ಮತ ಸಿಗುವುದಿಲ್ಲ. ನಿಮಗೆ ಈಶ್ವರನೇ ಬಂದು ಮತ ಕೊಡುತ್ತಾರೆ. ಇಪ್ಪತ್ತೊಂದು ಜನ್ಮಗಳವರೆಗೆ ಪ್ರಾಪ್ತಿಯುಳ್ಳ ಎಷ್ಟು ದೊಡ್ಡ ಆಸ್ತಿ ಸಿಗುತ್ತದೆ. ಪರಮಪಿತ ಪರಮಾತ್ಮನೇ ಬಂದು ಓದಿಸುತ್ತಿದ್ದಾರೆ, ಆದರೆ ಮಕ್ಕಳು ತಂದೆಯನ್ನು ಮರೆತು ಬಿಡುತ್ತಾರೆ. ಯೋಗ ಸರಿಯಿದ್ದಾಗ ಈ ಲೋಭ, ಮೋಹ ಮುಂತಾದ ವಿಕಾರಗಳು ಸತಾಯಿಸುವುದಿಲ್ಲ. ಅದು ಬೇಕು, ಇದು ಬೇಕು ಎಂದು ಅನೇಕರಿಗೆ ಸತಾಯಿಸುತ್ತದೆ. ಪಕ್ಕಾ ಸನ್ಯಾಸಿಗಳಲ್ಲಿ ಇದು ಇರುವುದಿಲ್ಲ. ಅವರು ಕೇವಲ ಒಳಗಡೆ ಇದ್ದು ಕಿಟಿಕಿಯಿಂದ ಎಲ್ಲವನ್ನು ಪಡೆಯುತ್ತಾರೆ. ಇಲ್ಲಿಯು ಸಹ ಹಾಗೆಯೇ. ವಾಸ್ತವದಲ್ಲಿ ಈಶ್ವರನ ಭಂಡಾರದಿಂದ ನಿಯಮಕ್ಕೆ ಅನುಗುಣವಾಗಿ ಪಡೆದು, ಅದರಂತೆ ನಡೆದುಕೊಳ್ಳುವುದು ಸರಿಯಾಗಿದೆ. ಮನುಷ್ಯರಿಗೆ ತುಂಬಾ ಆಸೆಗಳು ಬರುತ್ತಿರುತ್ತವೆ. ಆಸೆ ಪೂರ್ಣವಾಗದ ಕಾರಣ ಸೋಮಾರಿಗಳು ಆಗಿ ಬಿಡುತ್ತಾರೆ. ಇಲ್ಲಿ ಎಲ್ಲರೂ ನಂಬಿಕಸ್ತರು, ಪ್ರಾಮಾಣಿಕರಾಗಿರಬೇಕು. ಎಲ್ಲ ಆಸೆಗಳನ್ನು ದೂರ ಮಾಡಿಕೊಳ್ಳಬೇಕು. ಮಕ್ಕಳು ನೀವು ತುಂಬಾ ಶ್ರೇಷ್ಠಾಚಾರಿಗಳಾಗಬೇಕು.

ಮಕ್ಕಳು ತಂದೆ ಹೆಸರನ್ನು ಪ್ರಸಿದ್ಧಿ ಮಾಡಲೆಂದು ತಂದೆಯು ಎಲ್ಲಾ ಪ್ರಕಾರದಿಂದ ಪುರುಷಾರ್ಥವನ್ನು ಮಾಡಿಸುತ್ತಾರೆ. ಮೊದಲಿಗೆ ಯೋಗದಲ್ಲಿರಬೇಕು ನಂತರ ಜ್ಞಾನವನ್ನು ಧಾರಣೆ ಮಾಡಿ ಅನ್ಯರಿಗೂ ಮಾಡಿಸಬೇಕು. ಗಂಗೆಯರು ಹರಿಯಬೇಕು, ಸತ್ಯ ಯೋಗ ಏನೆಂಬುದನ್ನು ತಿಳಿಸಿ ಕೊಡಬೇಕು. ಸರ್ವರಿಗೂ ತಂದೆ ಭಗವಂತನಾಗಿದ್ದಾರೆ. ಕೃಷ್ಣ ಪರಮಪಿತ ಪರಮಾತ್ಮನಾಗುವುದಿಲ್ಲ. ಈಗ ತಂದೆ ತಿಳಿಸಿ ಕೊಡುತ್ತಾರೆ – ನನ್ನನ್ನು ನೆನಪು ಮಾಡಿದಾಗ ನಾನು ಶಾಂತಿ ಹಾಗೂ ಸುಖದ ಆಸ್ತಿ ಕೊಡುತ್ತೇನೆ. ಎಷ್ಟು ಸಹಜ ಮಾತಾಗಿದೆ. ನಮ್ಮಲ್ಲಿ ಒಂದಲ್ಲ ಒಂದು ಬಲಹೀನತೆ ಇದ್ದಾಗ ಯಾರಿಗೂ ಬಾಣ ನಾಟುವುದಿಲ್ಲ. ತುಂಬಾ ಸೇವೆಯಂತೂ ಇದೆ. ಮನುಷ್ಯರಿಗೆ ಸ್ಮಶಾನದಲ್ಲಿ ಬಿಡವು (ಫ್ರೀ) ಇರುತ್ತದೆ. ಮಕ್ಕಳು ಬುದ್ದಿವಂತರಾಗಿದ್ದು, ಸೇವೆಯಲ್ಲಿ ಆಸಕ್ತಿಯಿದ್ದು, ಯಾವುದೇ ವಿಕಾರ ಇಲ್ಲದಾಗ ಹೋಗಿ ತಿಳಿಸಿಕೊಡಬಹುದು. ಈ ರೀತಿ ಹೇಳಿ-ಒಬ್ಬ ತಂದೆಯನ್ನು ನೆನಪು ಮಾಡಿ, ಅವರಿಂದಲೇ ಫಲ ಅರ್ಥಾತ್ ಆಸ್ತಿ ದೊರೆಯಲ್ಪಡುತ್ತದೆ. ನಿಮಗೆ ಸನ್ಯಾಸಿ, ಹಠಯೋಗಿ, ಗುರು ಮುಂತಾದವರು ಏನು ಕೊಡುತ್ತಾರೆ. ಅವರು ಯಾವ ಶಿಕ್ಷಣ ಕೊಡುತ್ತಾರೆ ಅದರಿಂದ ಅಲ್ಪಕಾಲದ ಸುಖ ಸಿಗುತ್ತದೆ. ಬಾಕಿ ಉಳಿದಿದ್ದೆಲ್ಲಾ ದುಃಖವನ್ನು ಕೊಡುತ್ತಾರೆ ಹಾಗೂ ಈ ತಂದೆಯಂತೂ ಸುಖದ ಮಾರ್ಗ ತೋರಿಸುತ್ತಾರೆ. ಈಗ ನನ್ನನ್ನು ನೆನಪು ಮಾಡಿರೆಂದು ತಂದೆ ಹೇಳುತ್ತಾರೆ ವಿನಾಶ ಮುಂದೆ ನಿಂತಿದೆ, ನನ್ನನ್ನು ನೆನಪು ಮಾಡಿದಾಗ ಸ್ವರ್ಗದ ಮಾಲಿಕರಾಗುತ್ತೀರಿ. ಪವಿತ್ರರಂತೂ ಇರಬೇಕು. ಎಲ್ಲರಿಗೂ ಆಮಂತ್ರಣ ಕೊಡಬೇಕಾಗುತ್ತದೆ. ದಿನ-ಪ್ರತಿದಿನ ಜ್ಞಾನದ ಬಿಂದುಗಳನ್ನು ಸಹಜ ಮಾಡಿ ಕೊಡಲಾಗುತ್ತದೆ. ದೊಡ್ಡ ಪಟ್ಟಣಗಳಲ್ಲಿ ಸ್ಮಶಾನಕ್ಕೆ ತುಂಬಾ ಜನ ಬರುತ್ತಾರೆ. ಸ್ಮಶಾನದಲ್ಲಿ ತುಂಬಾ ಸೇವೆ ನಡೆಯುತ್ತದೆ. ಮಕ್ಕಳು ನಮಗೆ ಫ್ರೀ ಇಲ್ಲ ಎಂದು ಹೇಳುತ್ತಾರೆ. ಒಳ್ಳೆಯದು ರಜಾ ತೆಗೆದುಕೊಂಡು ಸೇವೆ ಮಾಡಬೇಕು. ಸೇವೆಯಲ್ಲಿ ತುಂಬಾ ಲಾಭವಿದೆ. ವಿನಾಶ ಆಗಿಯೇ ಆಗುತ್ತದೆ. ಭೂಕಂಪ ಮುಂತಾದವುಗಳು ಆಗುತ್ತವೆ. ಎಲ್ಲ ಅಣೆಕಟ್ಟು ಮುಂತಾದವು ಹೊಡೆದುಹೋಗುತ್ತವೆ. ತುಂಬಾ ಆಪತ್ತು ಬರುವುದಿದೆ. ಯಾರಲ್ಲಿ ಜ್ಞಾನವಿರುತ್ತದೆ ಅವರಂತೂ ನೃತ್ಯ ಮಾಡುತ್ತಿರುತ್ತಾರೆ. ಯಾರು ಸೇವಾಧಾರಿ ಮಕ್ಕಳಿದ್ದಾರೆ ಅವರೇ ಅಂತಿಮದಲ್ಲಿ ಹನುಮಂತನಂತೆ ಅಚಲವಾಗಿರುತ್ತಾರೆ. ಕೆಲವರು ಬಾಂಬ್ ಶಬ್ದಕ್ಕೆ ಸತ್ತು ಹೋಗಿ ಬಿಡುತ್ತಾರೆ. ಹನುಮಂತನದು ಒಂದು ಉದಾಹರಣಾಗಿದೆ. ಆದರೆ ನೂರೆಂಟು ಮಂದಿ ಶಕ್ತಿಶಾಲಿ ಸಾಹಸವುಳ್ಳವರಿರುತ್ತಾರೆ. ಆ ಶಕ್ತಿ ಸೇವೆಯಿಂದ ಬರುತ್ತದೆ. ತಂದೆ ತಿಳಿಸುತ್ತಾರೆ-ಮಕ್ಕಳೇ ಸೇವೆ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಿರಿ, ಇಲ್ಲವಾದರೆ ಆಮೇಲೆ ಪಶ್ಚಾತ್ತಾಪ ಪಡೆಯಬೇಕಾಗುತ್ತದೆ. ಆದ್ದರಿಂದ ಮೊದಲೇ ನಾನು ಹೇಳುತ್ತಿದ್ದೇನೆ ಶ್ರೇಷ್ಠ ಪದವಿ ಪಡೆದುಕೊಳ್ಳಿ. ಯಾರಿಗಾದರು ತಿಳಿಸುವುದು ತುಂಬಾ ಸುಲಭವಾಗಿದೆ. ಮಂದಿರಗಳಲ್ಲಿ ನೀವು ಹೋಗಿ ತಿಳಿಸಿಕೊಡಬಹುದು. ಇವರಿಗೆ ಈ ರಾಜ್ಯ ಕೊಟ್ಟವರು ಯಾರು?ತಕ್ಷಣ ಭಗವಂತ ಕೊಟ್ಟರೆಂದು ಹೇಳುತ್ತಾರೆ. ಈ ಧನ ನಿಮಗೆ ಕೊಟ್ಟವರು ಯಾರು ಎಂದು ಕೇಳಿದರೆ, ತಕ್ಷಣ ಭಗವಂತನೇ ಕೊಟ್ಟರು ಎಂದು ಹೇಳಿ ಬಿಡುತ್ತಾರೆ. ಲಕ್ಷ್ಮೀ ನಾರಾಯಣರಿಗೆ ಭಗವಂತ ಈ ಹಣ ಹೇಗೆ ಕೊಟ್ಟರೆಂದು ತಿಳಿಸಿಕೊಡಬೇಕು. ತಂದೆಯನ್ನು ತಿಳಿದುಕೊಳ್ಳುವುದರಿಂದ ನೀವು ಸಹ ಇಂತಹ ಪದವಿಯನ್ನು ಪಡೆದುಕೊಳ್ಳಬಹುದು. ಬನ್ನಿ ನಿಮಗೆ ತಿಳಿಸಿಕೊಡುತ್ತೇವೆ ಅಥವಾ ಇಂತಹ ವಿಳಾಸಕ್ಕೆ ಹೋಗಿ ತಿಳಿದುಕೊಳ್ಳಿ. ಇಲ್ಲಿ ಹಣ ಏನು ಕೊಡುವ ಆವಶ್ಯಕತೆಯಿಲ್ಲ. ಮಕ್ಕಳ ಬುದ್ದಿಯಲ್ಲಿ ಎಲ್ಲಾ ರಹಸ್ಯಗಳಿವೆ. ಲಕ್ಷ್ಮೀ-ನಾರಾಯಣ, ಸೀತಾ-ರಾಮರವರಿಗೆ ಈ ರಾಜ್ಯ ಕೊಟ್ಟವರು ಯಾರು? ಅವಶ್ಯವಾಗಿ ಭಗವಂತನಿಂದ ದೊರೆತಿರಬೇಕು. ಸೂರ್ಯವಂಶಿ ಚಂದ್ರವಂಶಿ ರಾಜಧಾನಿ ಸ್ಥಾಪನೆಯಾಗುತ್ತದೆ. ಹೇಗೆ ಲಕ್ಷ್ಮೀ-ನಾರಾಯಣರ ನಂತರ ರಾಮ-ಸೀತೆಯರಿಗೆ ರಾಜ್ಯ ಕೊಡುತ್ತಾರೆನ್ನುವುದನ್ನು ನೀವು ಸಾಕ್ಷಾತ್ಕಾರ ಮಾಡಿಕೊಂಡಿದ್ದೀರಿ. ಲಕ್ಷ್ಮೀ-ನಾರಾಯಣರು ಭಗವಂತನಿಂದ ಪಡೆಯುತ್ತಾರೆ, ಈ ರೀತಿ ತಿಳಿಸಿಕೊಡುಬಹುದಲ್ಲವೆ. ಮಾತುಗಳು ತುಂಬಾ ಸಹಜ ಹಾಗೂ ಮಧುರವಾಗಿವೆ. ಶ್ರೇಷ್ಠಾತಿ ಶ್ರೇಷ್ಠ ತಂದೆಯೆಂದು ತಿಳಿಸಿಕೊಡಿ. ಆ ಪರಮಪಿತ ಪರಮಾತ್ಮನನ್ನು ತಿಳಿದುಕೊಂಡಿದ್ದಾರಾ? ತಂದೆ ತಿಳಿಸುತ್ತಾರೆ ನನ್ನನ್ನು ನೆನಪು ಮಾಡಿ. ನನ್ನ ಒಬ್ಬನನ್ನೇ ನೆನಪು ಮಾಡಿ. ಕೃಷ್ಣನಿಗೆ ತಂದೆಯೆಂದು ಹೇಳುವುದಿಲ್ಲ. ಕೃಷ್ಣನು ಹಿಂದಿನ ಜನ್ಮದಲ್ಲಿ ಕಲಿತಿರುವ ಈ ರಾಜಯೋಗದಿಂದ ಈಗ ಕೃಷ್ಣನ ಪದವಿಯನ್ನು ಪಡೆದಿದ್ದಾನೆ. ಇಂತಹ ಪಾಯಿಂಟ್ಸನ್ನು ಎಂದಿಗೂ ಮರೆಯದಂತೆ ಬರೆದುಕೊಳ್ಳಬೇಕು. ಮನುಷ್ಯರು ಯಾವುದಾದರು ಮಾತು ನೆನಪಿಟ್ಟುಕೊಳ್ಳಬೇಕೆಂದರೆ ಗಂಟು ಹಾಕಿಕೊಳ್ಳುತ್ತಾರೆ. ನೀವು ಕೇವಲ ಎರಡು ಮಾತಿನ ಗಂಟು ಹಾಕಿಕೊಂಡು ಬಿಡಿ. ಯಾರಿಗೇಯಾದರು ಕೇವಲ ಈ ಎರಡು ಮಾತುಗಳನ್ನು ಹೇಳುತ್ತೀರಿ. ತಂದೆ ತಿಳಿಸುತ್ತಿದ್ದಾರೆ ಮನ್ಮನಾಭವ, ಮಧ್ಯಾಜಿಭವ. ಪ್ರದರ್ಶನಿಯಲ್ಲಿ ತುಂಬಾ ಸೇವೆ ಮಾಡಬಹುದು. ತಂದೆ ನಮ್ಮೆಲ್ಲರಿಗೂ ಸಂದೇಶ ಕೊಡಲು ಹೇಳಿದ್ದಾರೆ. ಸರ್ವ ಧರ್ಮಾನಿ….. ನೀವು ಆತ್ಮ ಒಬ್ಬರೇ ಆಗಿದ್ದೀರಿ. ನೀವು ಈಗ ನನ್ನನ್ನು ನೆನಪು ಮಾಡಿದಾಗ ವಿಕರ್ಮ ವಿನಾಶವಾಗಿ ನೀವು ನನ್ನ ಬಳಿಗೆ ಬಂದು ಬಿಡುತ್ತೀರಿ. ಈ ಅಂತಿಮ ಜನ್ಮದಲ್ಲಿ ಪವಿತ್ರರಾಗಬೇಕು. ಅಮರ ಲೋಕಕ್ಕೆ ಹೋಗಬೇಕಾದರೆ ನನ್ನನ್ನು ನೆನಪು ಮಾಡಿ. ಈ ರೀತಿ ತಿಳಿಸಿಕೊಡುವಂತಹ ವ್ಯಾಪಾರ ಮಾಡಿದರೆ ಸಾಕು. ಅರ್ಧಕಲ್ಪ ಭಕ್ತಿಯ ಪೆಟ್ಟನ್ನು ತಿಂದಿದ್ದೀರಿ. ಈ ಜನ್ಮದಲ್ಲಿ ಸರ್ವರಿಗೂ ಈ ಸಂದೇಶ ಕೊಡಬೇಕು. ನೀವು ತಂದೆ ಏನು ಹೇಳುತ್ತಾರೆಂಬುದನ್ನು ಎಲ್ಲಾ ಕಡೆ ಸಾರಬಹುದು. ತಂದೆಯ ಈ ಸಂದೇಶವನ್ನು ಕೊಡಬೇಕು. ತಂದೆ ತಿಳಿಸುತ್ತಾರೆ ನನ್ನನ್ನು ನೆನಪು ಮಾಡಿ. ಹೆಚ್ಚಾಗಿ ತಿಳಿದುಕೊಳ್ಳಬೇಕಾದರೆ ಬಂದು ತಿಳಿದುಕೊಳ್ಳಿ. ಈ ರೀತಿ ನೀವು ತುಂಬಾ ಸೇವೆ ಮಾಡಬಹುದು. ಖರ್ಚು-ವೆಚ್ಚಗಳೆಲ್ಲವು ಸಿಗುತ್ತಿರುತ್ತದೆ. ಊಟ ಬೇಕಾದರೆ ಸ್ವಯಂ ಮಾಡಿಕೊಳ್ಳಬಹುದು. ಈ ರೀತಿ ಸೇವೆ ಮಾಡಬಹುದು. ಸೇವೆಗಾಗಿ ತುಂಬಾ ಅವಕಾಶಗಳಿವೆ. ಅದೃಷ್ಟದಲ್ಲಿಯಿಲ್ಲವೆಂದರೆ ಏನು ತಾನೆ ಮಾಡಲು ಸಾಧ್ಯ. ವ್ಯಕ್ತಿಯನ್ನು ನೋಡಬೇಕಾಗುತ್ತದೆ. ಒಳ್ಳೆಯದು ನಾನು ನಿಮಗೆ ಕಿಟ್ ಬ್ಯಾಗ್ ಮಾಡಿಕೊಡುತ್ತೇನೆ. ಸ್ವಲ್ಪವೆ ರಹಸ್ಯ ಯಾರಿಗಾದರು ತಿಳಿಸಿಕೊಡಬೇಕು. ಭಕ್ತಿಯ ಫಲವನ್ನು ಕೊಡಲು ತಂದೆ ಬಂದಿದ್ದಾರೆ, ಈಗ ನೀವು ಅಶರೀರಯಾಗಿ ಮನೆಗೆ ಹಿಂತಿರುಗಬೇಕಾದುದರಿಂದ ನನ್ನನ್ನು ನೆನಪು ಮಾಡಿದಾಗ, ನಿಮ್ಮ ಕರ್ಮಾತೀತ ಸ್ಥಿತಿಯಾಗಿ ಬಿಡುತ್ತದೆ ಎಂದು ತಂದೆ ಹೇಳುತ್ತಿದ್ದಾರೆ. ತಾವು ಸ್ವರ್ಗದ ಮಾಲಿಕರನ್ನಾಗಿ ಮಾಡುತ್ತೇನೆಂದು ತಂದೆ ಗ್ಯಾರೆಂಟಿ ಕೊಡುತ್ತಾರೆ. ಇದರಿಂದ ತುಂಬಾ ಜನಕ್ಕೆ ಸಂದೇಶ ಸಿಗಬಹುದು. ತಮ್ಮ-ತಮ್ಮ ಊರುಗಳಲ್ಲಿ ಸಹ ಸೇವೆ ಮಾಡಬಹುದು ಅಥವಾ ಹೊರಗಡೆ ಬೇಕಾದರು ಹೋಗಿ ಖರ್ಚು-ವೆಚ್ಚವು ಸಿಗುತ್ತಿರುತ್ತದೆ. ಯಾರಾದರು ಈ ರೀತಿ ಸೇವೆ ಮಾಡಿ ತೋರಿಸಬೇಕು. ಒಂದುವೇಳೆ ನೀವು ತಮ್ಮ ವ್ಯವಹಾರದಲ್ಲಿದ್ದರು ಸಹ ತುಂಬಾ ಸೇವೆಯನ್ನು ಮಾಡಬಹುದು. ಎಂಟು ಗಂಟೆ ಕೆಲಸ-ಕಾರ್ಯವನ್ನು ಮಾಡಿ. ಎಂಟು ಗಂಟೆ ವಿಶ್ರಾಂತಿ ತೆಗೆದುಕೊಳ್ಳಿ, ಆದರೂ ತುಂಬಾ ಸಮಯ ಉಳಿಯುತ್ತದೆ. ಒಂದು ಗಂಟೆ ಯಾರಾದರು ಸತ್ಯತೆಯಿಂದೆ ಸೇವೆ ಮಾಡಿದರೂ ಸಹ ತುಂಬಾ ಉತ್ತಮ ಪದವಿ ಪಡೆದುಕೊಳ್ಳುತ್ತಾರೆ. ಸೇವೆಗಾಗಿ ನಾಲ್ಕೂ ಕಡೆ ಸುತ್ತುತ್ತಿರಬೇಕು. ಆದರೆ ಇದಕ್ಕಾಗಿ ಧ್ಯರ್ಯ ಬೇಕಾಗುತ್ತದೆ. ಮೊಟ್ಟ ಮೊದಲು ನಾನು ನಿಮ್ಮಿಂದ ಏನು ಬೇಡುವುದಿಲ್ಲವೆಂದು ತಿಳಿಸಬೇಕು. ನಾನು ನಿಮಗೆ ಈಶ್ವರನ ಮಾರ್ಗ ತೋರಿಸಲು ಬಂದಿದ್ದೇನೆ. ನಮಗೆ ಆಜ್ಞೆ ದೊರೆತಿದೆ-ಒಂದು ನಿಮಿಷ ಮಹಾ ಮಂತ್ರ ಕೊಟ್ಟು ಹೊರಟು ಹೋಗುತ್ತೇನೆ. ಇದು ಸಂಜೀವಿನಿ ಮೂಲಿಕೆಯಾಗಿದೆ. ನಾವು ತಂದೆಯ ಸಂದೇಶವನ್ನು ನೀಡಲು ಬಂದಿದ್ದೇವೆ. ನನ್ನೊಬ್ಬನನ್ನೇ ನೆನಪು ಮಾಡಿ ಎಂದು ತಂದೆ ತಿಳಿಸುತ್ತಿದ್ದಾರೆ. ಸೇವೆಯಂತೂ ತುಂಬಾ ಇದೆ. ಆದರೆ ಯಾರಾದರು ಸ್ವಯಂ ದೇಹಾಭಿಮಾನಿಯಾಗಿದ್ದರೆ ಯಾರಿಗೂ ಬಾಣ ನಾಟುವುದೇ ಇಲ್ಲ. ತಂದೆ ಜೊತೆ ಸತ್ಯವಾಗಿರಬೇಕು. ಮಿತ್ರ ಸಂಬಂಧಿಕರನ್ನು ನೆನಪು ಮಾಡುತ್ತಲೇ ಇರಬಾರದು. ಅದು ಬೇಕು-ಇದು ಬೇಕು ಎಂದು ನೀವು ಏನನ್ನು ಬೇಡಬಾರದು. ನೀವು ಯಾರಿಂದಲಾದರೂ ಸಹ ಏನು ಪಡೆಯಬಾರದು. ಯಾರು ಮಾಡಿದ್ದನ್ನು ತಿನ್ನಬಾರದು. ತಾವೇ ಮಾಡಿಕೊಳ್ಳಬಹುದು. ತಾವೇ ಮಾಡಿಕೊಳ್ಳುವುದರಿಂದ ತುಂಬಾ ಶಕ್ತಿ ಬರುತ್ತದೆ. ಆದರೆ ಯಾರು ಇಷ್ಟು ಕಷ್ಟ ಪಡುವುದಿಲ್ಲ. ಮಾಯೆ ತುಂಬಾ ಶಕ್ತಿಶಾಲಿಯಾಗಿದೆ. ದೇಹಾಭಿಮಾನವೆಂಬ ಕಾಯಿಲೆ ತುಂಬಾ ಕಷ್ಟದಿಂದ ಹೋಗುತ್ತದೆ. ತುಂಬಾ ಶ್ರಮ ಪಡಬೇಕಾಗುತ್ತದೆ. ಯೋಗ ಶಕ್ತಿಯಿಲ್ಲದಾಗ ಮಾಡಿಕೊಳ್ಳುವುದನ್ನು ಬಿಟ್ಟು ಬಿಡುತ್ತಾರೆ. ಒಳ್ಳೆಯದು ಯೋಗದಲ್ಲಿದ್ದು ತಿನ್ನಬಹುದು. ದೇಹೀ ಅಭಿಮಾನಿ ಸ್ಥಿತಿಯನ್ನು ಮಾಡಿಕೊಳ್ಳಲು ತುಂಬಾ ಕಷ್ಟ ಪಡಬೇಕಾಗುತ್ತದೆ. ದೊಡ್ಡ-ದೊಡ್ಡ ಸತ್ಸಂಗಗಳಿಗೆ ಹೋಗಿ ಒಂದೇ ಮಾತನ್ನು ತಿಳಿಸಿಕೊಡಿ-ಭಗವಾನುವಾಚ, ನನ್ನೊಬ್ಬನನ್ನೇ ನೆನಪು ಮಾಡಿದಾಗ ನೀವು ಸ್ವರ್ಗದಲ್ಲಿ ಬಂದು ಬಿಡುತ್ತೀರಿ. ಭಾರತ ಸ್ವರ್ಗವಾಗಿತ್ತಲ್ಲವೆ. ವಿಶ್ವದ ಮಾಲಿಕರಾಗುವುದು, ಶ್ರೇಷ್ಠ ಪದವಿ ಪಡೆಯುವುದು ತುಂಬಾ ಕಷ್ಟದ ಮಾತಾಗಿದೆ. ಪ್ರಜೆಯಲ್ಲಿ ಬರುವುದು ದೊಡ್ಡ ಮಾತೇನಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಅಂಗದನಂತೆ ಅಚಲ-ಅಡೋಲರಾಗಬೇಕು, ಸಮಯ ಮಾಡಿಕೊಂಡು ಸತ್ಯತೆಯಿಂದ, ನಿರ್ಭಯರಾಗಿ ಅವಶ್ಯಕವಾಗಿ ಸೇವೆ ಮಾಡಬೇಕು. ಸೇವೆ ಮಾಡುವುದರಿಂದ ಶಕ್ತಿ ಬರುತ್ತದೆ.

2. ದೇಹಾಭಿಮಾನದ ರೋಗದಿಂದ ಕಾಪಾಡಿಕೊಳ್ಳಲು ತುಂಬಾ ಯೋಗಯುಕ್ತರಾಗಿ ಊಟ ಮಾಡಬೇಕು. ಒಂದುವೇಳೆ ತಮ್ಮ ಕೈಯಿಂದ ಮಾಡಿಕೊಂಡು ಶುದ್ಧ ಭೋಜನ ಸ್ವೀಕರಿಸಿದರೆ ಒಳ್ಳೆಯದು.

ವರದಾನ:-

ಹೇಗೆ ಗುಲಾಬಿ ಹೂವು ದುರ್ಗಂಧವಿರುವ ಗೊಬ್ಬರದಿಂದ ಸುಗಂಧದ ಧಾರಣೆ ಮಾಡಿಕೊಂಡು ಸುಗಂಧಭರಿತ ಗುಲಾಬಿ ಆಗಿ ಬಿಡುತ್ತದೆ. ತಾವು ಇಂತಹ ವಿಶ್ವ ಪರಿವರ್ತಕ ಶ್ರೇಷ್ಠಾತ್ಮರು ಅಶುಭ, ವ್ಯರ್ಥ, ಸಾಧಾರಣ ಭಾವನೆ ಮತ್ತು ಭಾವವನ್ನು ಶ್ರೇಷ್ಠತೆಯಲ್ಲಿ, ಅಶುಭ ಭಾವ ಹಾಗೂ ಭಾವನೆಯನ್ನು ಶುಭ ಭಾವ ಮತ್ತು ಭಾವನೆಯಲ್ಲಿ ಪರಿವರ್ತನೆ ಮಾಡಿರಿ, ಹೀಗಿದ್ದಾಗ ಸಹಜ ಹಾಗೂ ಸ್ವತಹವಾಗಿಯೇ ಬ್ರಹ್ಮಾ ತಂದೆಯ ಸಮಾನ ಅವ್ಯಕ್ತ ಫರಿಶ್ತೆಯಾಗುವ ಲಕ್ಷಣಗಳು ಬಂದು ಬಿಡುತ್ತವೆ. ಇದರಿಂದ ಮಾಲೆಯ ಮಣಿ, ಮಣಿಯ ಸಮೀಪಕ್ಕೆ ಬರುತ್ತದೆ.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:

ಬಾಪ್ದಾದಾರವರಿಗೆ ಮಕ್ಕಳೊಂದಿಗೆ ಇಷ್ಟೂ ಪ್ರೀತಿಯಿದೆ, ಅದರಿಂದ ಪ್ರತಿಯೊಂದು ಮಕ್ಕಳು ನನಗಿಂತಲೂ ಮುಂದಿರಲಿ ಎಂದು ತಿಳಿಯುತ್ತಾರೆ. ಪ್ರಪಂಚದಲ್ಲಿಯೂ ಸಹ ಯಾರೊಂದಿಗೆ ಹೆಚ್ಚು ಪ್ರೀತಿಯಿರುತ್ತದೆಯೋ ಅವರನ್ನು ತನಗಿಂತಲೂ ಮುಂದುವರೆಸುತ್ತಾರೆ – ಇದೇ ಪ್ರೀತಿಯ ಚಿಹ್ನೆಯಾಗಿದೆ. ಅಂದಾಗ ಬಾಪ್ದಾದಾರವರೂ ಹೇಳುತ್ತಾರೆ – ನನ್ನ ಮಕ್ಕಳಲ್ಲೀಗ ಯಾವುದೇ ಕೊರತೆಯಿರಬಾರದು, ಎಲ್ಲರೂ ಸಂಪೂರ್ಣ, ಸಂಪನ್ನ ಹಾಗೂ ಸಮಾನರಾಗಿ ಬಿಡಲಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top