15 January 2022 KANNADA Murli Today | Brahma Kumaris

Read and Listen today’s Gyan Murli in Kannada

January 14, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಈ ದಾದಾರವರು ನಿಮ್ಮ ಪೋಸ್ಟ್ ಆಫೀಸ್ ಆಗಿದ್ದಾರೆ. ಇವರಿಂದಲೇ ನೀವು ಶಿವಬಾಬಾರ ಆದೇಶವನ್ನು ತೆಗೆದುಕೊಳ್ಳಬೇಕು”

ಪ್ರಶ್ನೆ:: -

ಯಾವ ಮೃತ್ಯು ಎಲ್ಲಕ್ಕಿಂತಲು ಭಯಂಕರವಾಗಿದೆ?

ಉತ್ತರ:-

ಈಶ್ವರನ ಬಳಿ ಜನ್ಮ ಪಡೆದುಕೊಂಡು ಮಾಯೆಗೆ ವಶವಾಗಿ ಈಶ್ವರೀಯ ಜನ್ಮದಿಂದ ಸಾಯಿವುದು, ಈ ಮೃತ್ಯು ಎಲ್ಲಕ್ಕಿಂತಲೂ ಭಯಂಕರವಾಗಿದೆ. ಮಾಯೆಯು ಮಕ್ಕಳಿಂದ ಉಲ್ಟಾ ಕರ್ಮವನ್ನು ಮಾಡಿಸಿದಾಗ ತಂದೆಗೆ ಮಕ್ಕಳ ಮೇಲೆ ದಯೆ ಬರುತ್ತದೆ. ಮಾಯೆಯಿಂದ ಹೆಚ್ಚು ಪೆಟ್ಟನ್ನು ತಿನ್ನದಂತೆ ತಂದೆಯು ಮಕ್ಕಳಿಗೆ ಎಚ್ಚರಿಕೆ ಕೊಡುತ್ತಾರೆ. ಏಕೆಂದರೆ ಮಾಯೆಯ ಪೆಟ್ಟನ್ನು ತಿನ್ನುವುದರಿಂದ ಪ್ರಾಣ ಹೊರಟು ಹೋಗುತ್ತದೆ. ಆಗ ಮ ಪದವಿಯನ್ನು ಪಡೆಯಲಾರಿರಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನಿಮ್ಮನ್ನು ಕರೆಯಲು ಮನಸ್ಸು ಬಯಸುತ್ತದೆ…

ಓಂ ಶಾಂತಿ. ಮನುಷ್ಯರು ದುಃಖಿಗಳಾಗಿರುವ ಸಮಯವೇ ತಂದೆಯನ್ನು ಕರೆಯುವ ಸಮಯವಾಗಿರುತ್ತದೆ, ಏಕೆಂದರೆ ವಿಕಾರಿಗಳಾಗಿರುತ್ತಾರೆ. ದುಃಖಿ ಹೇಗೆ ಆಗುತ್ತಾರೆ? ತಮೋಪ್ರಧಾನ ಮನುಷ್ಯರು ಇದನ್ನು ತಿಳಿದುಕೊಂಡಿಲ್ಲ. ಪಂಚ ವಿಕಾರಗಳೆಂಬ ರಾವಣ ದುಃಖಿಗಳನ್ನಾಗಿ ಮಾಡಿದ್ದಾನೆ. ಒಳ್ಳೆಯದು. ಅವನ ರಾಜ್ಯ ಎಲ್ಲಿಯವರಿಗೆ ನಡೆಯುತ್ತದೆ? ಅಗತ್ಯವಾಗಿ ಪ್ರಪಂಚದ ಅಂತ್ಯದವರೆಗೂ ರಾಜ್ಯ ನಡೆಯುತ್ತದೆ. ಈಗ ರಾವಣ ರಾಜ್ಯವೆಂದು ಕರೆಯಲಾಗುತ್ತದೆ. ರಾಮ ರಾಜ್ಯ, ರಾವಣ ರಾಜ್ಯ ಎಂಬ ಹೆಸರು ಪ್ರಸಿದ್ದಿಯಾಗಿದೆ. ಭಾರತದಲ್ಲಿಯೇ ರಾವಣ ರಾಜ್ಯವನ್ನು ತಿಳಿದುಕೊಂಡಿದ್ದಾರೆ. ರಾವಣನು ಭಾರತದ ಶತ್ರು ಆಗಿದ್ದಾನೆ. ಭಾರತವನ್ನು ರಾವಣನೇ ಬೀಳಿಸಿದ್ದಾನೆ. ದೇವತೆಗಳು ವಾಮ ಮಾರ್ಗದಲ್ಲಿ ಹೋದಾಗಿನಿಂದ ವಿಕಾರಿಗಳಾಗಿದ್ದಾರೆ. ಭಾರತ ನಿರ್ವಿಕಾರಿಯಾಗಿತ್ತು, ಇದು ವಿಕಾರಿ ಹೇಗಾಯಿತು? ಎನ್ನುವುದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ಭಾರತ ಶ್ರೇಷ್ಠಾಚಾರಿಯಾಗಿತ್ತು, ಈಗ ಪತಿತವಾಗಿದೆ ಎನ್ನುವುದು ಭಾರತದ್ದೇ ಮಹಿಮೆಯಾಗಿದೆ. ಪತಿತರಾಗಲು ಆರಂಭ ಆದಾಗಿನಿಂದ ಭಕ್ತರು ಪೂಜಾರಿಗಳಾದರು. ಅಂದಿನಿಂದಲೇ ಭಗವಂತನನ್ನು ನೆನಪು ಮಾಡುತ್ತಾ ಬಂದಿದ್ದಾರೆ. ತಂದೆಯು ಕಲ್ಪದ ಪ್ರತಿ ಸಂಗಮಯುಗೆ-ಯುಗೆ ಬರುತ್ತಾರೆಂಬುದನ್ನು ತಿಳಿಸಿಕೊಡಲಾಗಿದೆ. ಕಲ್ಪದಲ್ಲಿ ನಾಲ್ಕೂ ಯುಗಗಳಿವೆ, ಉಳಿದ ಐದನೇ ಸಂಗಮಯುಗವು ಯಾರಿಗೂ ಗೊತ್ತಿಲ್ಲ. ಅವರಂತೂ ತುಂಬಾ ಸಂಗಮಯುಗಗಳೆಂದು ಹೇಳಿ ಬಿಡುತ್ತಾರೆ. ಯುಗೆ-ಯುಗೆ ಎಂದು ಹೇಳುತ್ತಾರೆಂದರೆ ಎಷ್ಟೊಂದು ಸಂಗಮಗಳು ಆದವು. ಸತ್ಯಯುಗದಿಂದ ತ್ರೇತಾಯುಗ, ತ್ರೇತಾಯುಗದಿಂದ ದ್ವಾಪರಯುಗ, ದ್ವಾಪರದಿಂದ ಕಲಿಯುಗ. ಆದರೆ ಕಲ್ಪದ ಸಂಗಮಯುಗದಲ್ಲಿಯೇ ಬರಬೇಕಾಗುತ್ತದೆ ಎಂದು ತಂದೆಯು ತಿಳಿಸುತ್ತಾರೆ. ಇದನ್ನು ಪುರುಷೋತ್ತಮ ಯುಗವೆಂದು ಹೇಳುತ್ತಾರೆ. ಆಗಲೇ ಮನುಷ್ಯರು ಪತಿತರಿಂದ ಪಾವನ ರಾಗುತ್ತಾರೆ. ಕಲಿಯುಗದ ನಂತರ ಸತ್ಯಯುಗ ಬರುತ್ತದೆ. ಸತ್ಯಯುಗದ ನಂತರ ಏನಾಗುತ್ತದೆ? ತ್ರೇತಾಯುಗ ಬರುತ್ತದೆ. ಸೂರ್ಯ ವಂಶಿ ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಅವರೇ ನಂತರ ಚಂದ್ರವಂಶಿ ಆಗುತ್ತಾರೆ. ತ್ರೇತಾಯುಗದಲ್ಲಿ ರಾಮರಾಜ್ಯವಿರುತ್ತದೆ. ಸತ್ಯಯುಗದಲ್ಲಿ ಲಕ್ಷ್ಮೀ-ನಾರಾಯಣರ ರಾಜ್ಯವಿರುತ್ತದೆ. ಲಕ್ಷ್ಮಿನಾರಾಯಣರ ನಂತರ ರಾಮ ಸೀತೆಯ ರಾಜ್ಯ ಬರುತ್ತದೆ. ಸತ್ಯ ತ್ರೇತಾಯುಗ ಮಧ್ಯದಲ್ಲಿ ಅಗತ್ಯವಾಗಿ ಸಂಗಮ ಇರುತ್ತದೆ. ಸತ್ಯ ತ್ರೇತಾಯುಗ ನಂತರ ಇಬ್ರಾಹಿಂ ಬರುತ್ತಾರೆ. ಅವರು ಆ ಕಡೆಯವರು ಆಗಿದ್ದಾರೆ. ಭಾರತ ದೇಶದೊಂದಿಗೆ ಅವರ ಸಂಬಂಧವಿಲ್ಲ. ದ್ವಾಪರದಲ್ಲಿ ಇನ್ನೂ ತುಂಬಾ ಧರ್ಮಗಳು ಬರುತ್ತವೆ. ಇಸ್ಲಾಮಿ, ಬೌದ್ದ ಧರ್ಮ ಮತ್ತೆ ಕ್ರೈಸ್ತ ಧರ್ಮ ಮುಂತಾದವುಗಳು ಬರುತ್ತವೆ. ಕ್ರೈಸ್ತ ಧರ್ಮ ಸ್ಥಾಪನೆಯಾಗಿ ಎರಡು ಸಾವಿರ ವರ್ಷಗಳಾಯಿತು. ಕೆಲವರು ಹೆಚ್ಚು ಕಡಿಮೆ ಲೆಕ್ಕವನ್ನು ಮಾಡುತ್ತಾರೆ. ಈ ಸಂಗಮದ ನಂತರ ಸತ್ಯಯುಗದಲ್ಲಿ ಹೋಗಬೇಕಾಗುತ್ತದೆ. ಬುದ್ದಿಯಲ್ಲಿ ಈ ಚರಿತ್ರೆ ಭೂಗೋಳ ಇರಬೇಕು. ಶ್ರೇಷ್ಠಾತಿ ಶ್ರೇಷ್ಠ ಭಗವಂತನೆಂದು ಮಹಿಮೆ ಮಾಡಲಾಗುತ್ತದೆ. ಅವರಿಗೆ ತ್ವಮೇವ ಮಾತಾಶ್ಚ ಪಿತ ಅಂತಲೂ ಕರೆಯಲಾಗುತ್ತದೆ. ಇದು ಶ್ರೇಷ್ಠಾತಿ ಶ್ರೇಷ್ಠ ಭಗವಂತನ ಮಹಿಮೆಯಾಗಿದೆ. ನೀವು ತಂದೆ ತಾಯಿಯೆಂದು ಯಾರಿಗೆ ಹೇಳುತ್ತೀರಿ? ಇದನ್ನು ಯಾರು ತಿಳಿದುಕೊಂಡಿಲ್ಲ. ಯಾವುದಾದರೂ ಮೂರ್ತಿಯ ಮುಂದೇ ಹೋಗಿ ನೀವೇ ತಂದೆ-ತಾಯಿ ಎಂದು ಹೇಳಿಬಿಡುತ್ತಾರೆ. ಈಗ ತಂದೆ ತಾಯಿ ಎಂದು ಯಾರಿಗೆ ಹೇಳುವುದು? ಲಕ್ಷ್ಮಿ ನಾರಾಯಣರಿಗೋ? ಬ್ರಹ್ಮಾ ಸರಸ್ವತಿಗೋ? ಶಂಕರ ಪಾರ್ವತಿಗೋ? ಇವರನ್ನು ಜೋಡಿಯಾಗಿ ತೋರಿಸುತ್ತಾರೆ. ಹಾಗಾದರೆ ತಂದೆ ತಾಯಿ ಎಂದು ಯಾರಿಗೆ ಹೇಳಲಾಗುತ್ತದೆ? ಮಾತಾಶ್ಚ ಪಿತ… ಒಬ್ಬರೆ ಇರಬೇಕಾಗುತ್ತದೆ, ಎಂದಾಗ ಅಗತ್ಯವಾಗಿ ರಚೈತನಿಗೆ ಹೇಳಲಾಗುತ್ತದೆ. ಅವರು ತಂದೆಯಾದ ಮೇಲೆ ತಾಯಿಯು ಬೇಕಲ್ಲವೆ. ತಾಯಿ ಯಾರಿಗೆ ಹೇಳುವುದೆಂದು ತಿಳಿದುಕೊಂಡಿಲ್ಲ. ಇದನ್ನು ರಹಸ್ಯಯುಳ್ಳ ಮಾತುಗಳೆಂದು ಕರೆಯಲಾಗುತ್ತದೆ. ತಂದೆಯಿದ್ದಾಗ ತಾಯಿಯು ಇರಬೇಕಾಗುತ್ತದೆ. ಇದು ಒಬ್ಬ ತಂದೆಯ ಮಹಿಮೆಯಾಗಿದೆ. ಈ ಮಹಿಮೆಯು ಬ್ರಹ್ಮ-ವಿಷ್ಣು-ಶಂಕರರಿಗೂ ಸಲ್ಲುವುದಿಲ್ಲ. ಒಬ್ಬರನ್ನೇ ಮಹಿಮೆ ಮಾಡುತ್ತಾರೆ. ಪತಿತ ಪಾವನ ಬಾ ಎಂದು ಮಹಿಮೆ ಮಾಡುತ್ತಾರೆಂದಾಗ ಅಗತ್ಯವಾಗಿ ಅಂತ್ಯದಲ್ಲಿ ಬರುತ್ತಾರೆ. ಯುಗ ಯುಗದಲ್ಲು ಏಕೆ ಬರುತ್ತಾರೆ? ಪತಿತರಾಗುವುದೇ ಅಂತ್ಯದಲ್ಲಿ. ಪತಿತರಿಂದ ಪಾವನ ಮಾಡುವಂತಹ ತಂದೆ ಹಳೆಯ ಪ್ರಪಂಚದಲ್ಲಿಯೆ ಅಗತ್ಯವಗಿ ಬಂದು ಪಾವನ ಮಾಡುತ್ತಾರೆ. ಪರಮಧಾಮದಲ್ಲಿಯೇ ಕೂಳಿತು ಪಾವನ ಮಾಡುತ್ತಾರೇನು? ಸತ್ಯಯುಗವು ಪಾವನ ಪ್ರಪಂಚವಾಗಿದೆ. ಕಲಿಯುಗವು ಪತಿತ ಪ್ರಪಂಚವಾಗಿದೆ. ಹಳೆಯ ಪ್ರಪಂಚವನ್ನು ಹೊಸ ಪ್ರಪಂಚವನ್ನಾಗಿ ಮಾಡುವುದು ತಂದೆಯ ಕರ್ತವ್ಯವಾಗಿದೆ. ಹೊಸ ಪ್ರಪಂಚದ ಸ್ಥಾಪನೆ ಹಳೆಯ ಪ್ರಪಂಚದ ವಿನಾಶ. ಬ್ರಹ್ಮನ ಮುಖಾಂತರ ಯಾರ ಸ್ಥಾಪನೆ ಮಾಡಿಸುತ್ತಾರೆ? ವಿಷ್ಣು ಪುರಿಯ ಸ್ಥಾಪನೆ ಮಾಡಿಸುತ್ತಾರೆ. ಇದು ಬ್ರಹ್ಮಾ ಹಾಗೂ ಬ್ರಾಹ್ಮಣರ ಮುಖಾಂತರ ಸ್ಥಾಪನೆಯಾಗುತ್ತದೆ. ಬ್ರಾಹ್ಮಣರಿಂದ ಯಜ್ಞ ರಚನೆಯಾಗುತ್ತದೆಯಾದ್ದರಿಂದ ಅವಶ್ಯವಾಗಿ ಬ್ರಾಹ್ಮಣರಿಗೆ ಓದಿಸಬೇಕು. ಬ್ರಹ್ಮಾ ಹಾಗೂ ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣಿರಿಗೆ ತಂದೆಯು ರಾಜಯೋಗದ ವಿದ್ಯೆಯನ್ನು ಓದಿಸುತ್ತಿದ್ದಾರೆಂದು ನೀವು ಬರೆಯುತ್ತೀರಿ. ಸರಸ್ವತಿಯು ಅದರಲ್ಲಿಯೇ ಬಂದು ಬಿಡುತ್ತಾರೆ. ಇದು ವಿಚಿತ್ರವಾದ ಬ್ರಾಹ್ಮಣಕುಲವಾಗಿದೆ. ಸಹೋದರ-ಸಹೋದರಿಯರೆಂದಿಗೂ ವಿವಾಹ ಮಾಡಿಕೊಳ್ಳಲಾಗುವುದಿಲ್ಲ. ಯಾರೆ ಬಂದರು ಅವರಿಗೆ ಪರಮಪಿತ ಪರಮತ್ಮನೊಂದಿಗೆ ನಿಮ್ಮ ಸಂಬಂಧವೇನು? ಎಂದು ಪರಿಚಯ ಕೊಡುತ್ತೀರಿ. ಆಗ ಅವರು ತಂದೆ ಎಂದು ಹೇಳುತ್ತಾರೆ. ಹಾಗಾದರೆ ಅವರು ತಂದೆಯಾದರೂ ಇವರು ಅಣ್ಣ (ದಾದಾ) ಆದರು. ತಂದೆಯಿಂದಲೇ ಆಸ್ತಿ ಸಿಗುತ್ತದೆ. ಅವರು ಜ್ಞಾನ ಸಾಗರ ಬೇಹದ್ದಿನ ತಂದೆಯಾಗಿದ್ದಾರೆ. ಜ್ಞಾನವನ್ನು ಬ್ರಹ್ಮನ ಮೂಲಕ ಕೊಡುತ್ತಾರೆ. ಇದು ಈಶ್ವರೀಯ ಮಡಿಲಾಗಿದೆ. ನಂತರ ದೈವೀ ಮಡಿಲು ಸಿಗುತ್ತದೆ. ಇದನ್ನೆಲ್ಲಾ ತಿಳಿಸುವುದು ಸಹಜವಾಗಿದೆ. ನಾಲ್ಕೂ ಯುಗಗಳ ಲೆಕ್ಕವಂತೂ ಸರಿಯಾಗಿದೆ. ಪಾವನರಿಂದ ಪತಿತರಾಗಬೇಕಾಗುತ್ತದೆ. ಹದಿನಾರು ಕಲೆಯಿಂದ ಹದಿನಾಲ್ಕು ಕಲೆ ನಂತರ ಹನ್ನೆರಡು ಕಲೆಯಲ್ಲಿ ಬರಬೇಕಾಗುತ್ತದೆ.

ಮೊಟ್ಟ ಮೊದಲು ನೀವು ತಂದೆಯ ಪರಿಚಯವನ್ನು ಕೊಡಬೇಕು. ತಂದೆಯೊಂದಿಗೆ ಯಾರಾದರು ಹೊಸಬರು ಮಿಲನ ಮಾಡಲು ಬಂದಾಗ ಅವರು ಏನನ್ನೂ ತಿಳಿಯಲಾರರು, ಏಕೆಂದರೆ ತಂದೆಯು ವಿಚಿತ್ರವಾಗಿದ್ದಾರೆ, ಬಾಪ್ ದಾದಾ ಕಂಬೈಂಡ್ ಇದ್ದಾರೆ. ನಾವು ಯಾರೊಂದಿಗೆ ಮಾತನಾಡುತ್ತೇವೆಯೆಂದು ಮಕ್ಕಳಿಗೂ ಮತ್ತೆ ಮತ್ತೆ ಮರೆತು ಹೋಗುತ್ತದೆ. ಶಿವ ತಂದೆಯ ನೆನಪೆ ಬುದ್ದಿಯಲ್ಲಿ ಬರಬೇಕು. ನಾವು ಶಿವ ತಂದೆಯ ಬಳಿ ಹೋಗುತ್ತೇವೆ. ನೀವು ಈ ಬ್ರಹ್ಮ ತಂದೆಯನ್ನು ಏಕೆ ನೆನಪು ಮಾಡುತ್ತೀರಿ? ಶಿವ ತಂದೆಯನ್ನು ನೆನಪು ಮಾಡುವುದರಿಂದಲೇ ವಿಕರ್ಮ ವಿನಾಶವಾಗುತ್ತದೆ. ಒಂದುವೇಳೆ ಫೋಟೋ ತೆಗೆಯುವಾಗ ಬುದ್ದಿ ಶಿವಬಾಬಾ ಹಾಗೂ ಬಾಪ್ ದಾದಾ ಇಬ್ಬರ ಕಡೆಯು ಇರಬೇಕು. ಶಿವಬಾಬಾರವರು ಇರುವ ಕಾರಣ ಈ ದಾದಾರವರು ಇರುತ್ತಾರೆ. ಆಗ ಬಾಪ್ ದಾದಾರವರ ಜೊತೆ ಫೋಟೋ ತೆಗೆಯುತ್ತೀರಿ. ಶಿವ ತಂದೆಯ ಬಳಿ ಈ ದಾದಾರವರ ಮೂಲಕ ಮಿಲನ ಮಾಡಲು ಬಂದಿದ್ದೇವೆ. ಇವರು (ಬ್ರಹ್ಮಾ) ಪೋಸ್ಟ್ ಆಫೀಸ್ ಆಗಿದ್ದಾರೆ. ಇವರ ಮೂಲಕ ಶಿವ ತಂದೆಯ ಆದೇಶವನ್ನು ತೆಗೆದುಕೊಳ್ಳಬೇಕು. ಇದು ತುಂಬಾ ಆಶ್ಚರ್ಯಕರವಾದ ಮಾತಾಗಿದೆ. ಪ್ರಪಂಚವು ಹಳೆಯದಾದಾಗ ಭಗವಂತನೂ ಬರಬೇಕಾಗುತ್ತದೆ. ದ್ವಾಪರದಿಂದ ಪ್ರಪಂಚವು ಪತಿತವಾಗಲು ಆರಂಭವಾಗುತ್ತದೆ. ಅಂತ್ಯದವೇಳಗೆ ಪ್ರಪಂಚವೆಲ್ಲವು ಪತಿತವಾಗಿ ಬಿಡುತ್ತದೆ. ಸತ್ಯಯುಗ ತ್ರೇತಾಯುಗವನ್ನು ಸ್ವರ್ಗ ವೈಕುಂಠವೆಂದು ಕರೆಯಲಾಗುತ್ತದೆ. ಸದಾ ಹೊಸ ಪ್ರಪಂಚವಂತೂ ಇರುವುದಿಲ್ಲ. ಸೃಷ್ಟಿಯ ಅರ್ಧ ಸಮಯವು ಪೂರ್ತಿಯಾದಾಗ ಹಳೆಯದೆಂದು ಕರೆಯಲಾಗುತ್ತದೆ. ಪ್ರತಿಯೊಂದು ವಸ್ತುವಿನ ಆಯಸ್ಸು ಅರ್ಧ ಹಳೆಯದು ಅರ್ಧ ಹೊಸಾದಾಗಿರುತ್ತದೆ. ಆದರೆ ಈ ಸಮಯದ ಶರೀರದ ಮೇಲೆ ಭರವಸೆ ಇಲ್ಲ. ಈ ಎಲ್ಲವನ್ನು ಚಿತ್ರಗಳೊಂದಿಗೆ ತಿಳಿಸಿಕೊಡಬೇಕು. ಇದಂತೂ ಅರ್ಧ ಅರ್ಧ ಕಲ್ಪದ ಪೂರ್ಣ ಲೆಕ್ಕಾಚಾರವಿದೆ. ಇದರಲ್ಲಿ ಸ್ವಲ್ಪವೂ ಪರಿವರ್ತನೆ ಆಗುವುದಿಲ್ಲ. ಒಂದು ವೇಳೆ ಮಧ್ಯದಲಿಯೇ ಕೆಲವು ವಸ್ತುಗಳು ಹಾಳಾಗಬಹುದು ಆದರೆ ಸಮಯಕ್ಕೆ ಮೊದಲು ಎಲ್ಲವೂ ಪರಿವರ್ತನೆ ಆಗುವುದಿಲ್ಲ. ಈ ಹಳೆಯ ಪ್ರಪಂಚದ ವಿನಾಶ ಹೊಸ ಪ್ರಪಂಚ ಸ್ಥಾಪನೆಯು ಸಹ ತನ್ನ ಸಮಯಕ್ಕೆ ಸರಿಯಾಗಿ ಆಗುತ್ತದೆ ವಿನಃ ಹಿಂದು ಮುಂದು ಆಗುವುದಿಲ್ಲ. ನಾವಿರುವ ಮನೆಯು ಸಹ ಯಾವುದೇ ಸಮಯದಲ್ಲಿ ಬೀಳಬಹುದು, ವಾಸಿಸಲು ಸ್ಥಾನವೇ ಇರುವುದಿಲ್ಲ. ಈ ಚಕ್ರವಂತೂ ಅನಾದಿ ಅವಿನಾಶಿಯಾಗಿದೆ. ಇದು ತನ್ನ ಸಮಯಕ್ಕೆ ಅನುಗುಣವಾಗಿ ನಡೆಯುತ್ತಿರುತ್ತದೆ. ಈ ಹಳೆಯ ಪ್ರಪಂಚಕ್ಕೆ ತನ್ನದೆಯಾದ ಪೂರ್ಣ ಆಯಸ್ಸಿದೆ. ಅರ್ಧ ಕಲ್ಪ ರಾಮ ರಾಜ್ಯ ಅರ್ಧಕಲ್ಪ ರಾವಣ ರಾಜ್ಯ. ಯಾವ ರಾಜ್ಯವೂ ಜಾಸ್ತಿ (ಅಧಿಕ) ಆಗುವುದಿಲ್ಲ. ಈಗ ಪೂರ್ತಿ ತ್ರಿಲೋಕದ ಜ್ಞಾನ ನಿಮ್ಮ ಮಕ್ಕಳ ಬುದ್ದಿಯಲ್ಲಿದೆ. ನೀವು ತ್ರಿಲೋಕದ ಮಾಲಿಕನ ಮೂಲಕ ಜ್ಞಾನವನ್ನು ಪಡೆಯುತ್ತಿದ್ದೀರಿ. ಈ ಸಮಯದಲ್ಲಿ ನಿಮ್ಮದು ಶ್ರೇಷ್ಠ ಪದವಿಯಾಗಿದೆ. ಈಗ ನೀವು ತ್ರಿಲೋಕಿನಾಥ ಆಗಿದ್ದೀರಿ, ಏಕೆಂದರೆ ನೀವು ಮೂರು ಲೋಕದ ಜ್ಞಾನವನ್ನು ತಿಳಿದುಕೊಂಡಿರಿವಿರಿ. ನಿಮಗೆ ಮೂಲವತನ, ಸೂಕ್ಷ್ಮ ವತನ, ಸ್ಥೂಲವತನದ ಸಾಕ್ಷಾತ್ಕಾರವಾಗುತ್ತದೆ. ಮಕ್ಕಳ ಬುದ್ದಿಯಲ್ಲಿ ಪೂರ್ಣ ತಿಳುವಳಿಕೆ ಇದೆ. ಬಾಬಾ ತ್ರಿಲೋಕಿನಾಥ, ಮೂರು ಲೋಕಗಳನ್ನು ತಿಳಿದಿರುವವರಾಗಿದ್ದಾರೆ. ನಿಮಗೆ ಮೂರು ಲೋಕದ ಜ್ಞಾನ ಕೊಡುವ ಕಾರಣ ನೀವು ಸಹ ಮಾಸ್ಟರ್ ತ್ರಿಲೋಕಿನಾಥರಾಗಿದ್ದೀರಿ. ತಂದೆಯಲ್ಲಿರುವ ಜ್ಞಾನ ನಿಮ್ಮಲ್ಲಿಯೂ ನಂಬರ್ವಾರ್ ಪುರುಷಾರ್ಥದ ಅನುಸಾರವಾಗಿ ಇದೆ. ಮತ್ತೆ ಸತ್ಯಯುಗದಲ್ಲಿ ನೀವು ವಿಶ್ವಕ್ಕೆ ಮಾಲಿಕರಾಗುತ್ತೀರಿ. ಅಲ್ಲಿ ನಿಮಗೆ ತ್ರಿಲೋಕಿನಾಥರೆಂದು ಹೇಳುವುದಿಲ್ಲ. ಲಕ್ಷ್ಮಿ ನಾರಾಯಣರಿಗೆ ತ್ರಿಲೋಕದ ಜ್ಞಾನವಿರುವುದಿಲ್ಲ. ಸೃಷ್ಟಿಚಕ್ರದ ಜ್ಞಾನವು ಇರುವುದಿಲ್ಲ. ನೀವು ಜ್ಞಾನಪೂರ್ಣ ತಂದೆಯ ಮಕ್ಕಳಾಗಿದ್ದೀರಿ. ಅವರು ನಿಮಗೆ ಓದಿಸಿ ತಮ್ಮ ಸಮಾನ ಮಾಡಿದ್ದಾರೆ. ಮತ್ತೆ ನಾವು ವಿಷ್ಣುಪುರಿಯ ಮಾಲಿಕರಾಗುತ್ತೇವೆಂದು ತಿಳಿದಿದ್ದೀರಿ. ಈಗ ಕಳೆದು ಹೋದ ಸಮಯದ ಜ್ಞಾನವು ನಿಮ್ಮ ಬಳಿಯಿದೆ. ಮನುಷ್ಯರಿಗೆ ಹದ್ದಿನ ಚರಿತ್ರೆ – ಭೂಗೋಳದ ಅರಿವಿದೆ, ನಿಮಗೆ ಬೇಹದ್ದಿನ ಚರಿತ್ರವು-ಭೂಗೋಳವು ಬುದ್ದಿಯಲ್ಲಿದೆ. ಅವರು ಬಾಹುಬಲದ ಯುದ್ದವನ್ನು ತಿಳಿದಿದ್ದಾರೆ ಯೋಗಬಲದ ಯುದ್ದವು ಯಾರಿಗೂ ಗೊತಿಲ್ಲ. ಯೋಗ ಬಲದಿಂದ ನಾವು ವಿಶ್ವದ ಮಾಲೀಕರಾಗುತ್ತೇವೆಂಬುದನ್ನು ನೀವು ತಿಳಿದಿದ್ದೀರಿ. ತ್ರಿಲೋಕಿನಾಥ ತಂದೆ ಇದನ್ನು ಕಲಿಸಿಕೊಡುವವರಾಗಿದ್ದಾರೆ. ಈ ಸಮಯದ ನಿಮ್ಮ ಪದವಿ ತುಂಬಾ ಶೇಷ್ಠವಾಗಿದೆ. ನೀವು ಜ್ಞಾನ ಸಂಪನ್ನ ತಂದೆಯ ಮಕ್ಕಳು ಮಾಸ್ಟರ್ ಜ್ಞಾನ ಸಂಪನ್ನರಾಗಿದ್ದೀರಿ. ತಂದೆಯು ಜ್ಞಾನ ಸಾಗರ ಆನಂದ ಸಾಗರ ಹೇಗೆ ಆಗಿದ್ದಾರೆಂಬುದನ್ನು ನೀವು ತಿಳಿದುಕೊಂಡಿದ್ದೀರಿ. ಅವರಿಗೆ ಸತ್-ಚಿತ್-ಆನಂದ ಸ್ವರೂಪರೆಂದು ಹೇಳಲಾಗುತ್ತದೆ. ನಾವು ಈ ಸಮಯದಲ್ಲಿ ತುಂಬಾ ದುಃಖಿಗಳಾಗಿರುವ ಕಾರಣ ಆ ಆನಂದವನ್ನು ಅನುಭವ ಮಾಡುತ್ತೇವೆ. ನೀವು ಸುಖ ದುಃಖದ ಅಂತರವನ್ನು ಹೋಲಿಕೆ ಮಾಡಬಹುದು. ಆ ಲಕ್ಷ್ಮಿ ನಾರಾಯಣರು ಈ ಮಾತಗಳನ್ನು ತಿಳಿದುಕೊಂಡಿಲ್ಲ. ಅವರು ಕೇವಲ ರಾಜ್ಯ ಭಾರ ಮಾಡುತ್ತಾರೆ. ಅದು ಅವರ ಪ್ರಾಲಬ್ಧವಾಗಿದೆ. ನೀವೂ ಸಹ ಸ್ವರ್ಗದಲ್ಲಿ ಹೋಗಿ ರಾಜ್ಯ ಮಾಡುತ್ತೀರಿ. ಅಲ್ಲಿ ತುಂಬಾ ಒಳ್ಳೊಳ್ಳೆಯ ಮಹಲ್ ಮಾಡುವಿರಿ. ಅಲ್ಲಿ ಯಾವುದೇ ಚಿಂತೆಯ ಮಾತು ಇರುವುದಿಲ್ಲ. ಈ ಎಲ್ಲವನ್ನು ಬುದ್ದಿಯಲ್ಲಿ ಮರೆಯದೆ ಇದ್ದಾಗ ಹೆಚ್ಚು ಖುಷಿಯಾಗುತ್ತದೆ. ಸಂಪೂರ್ಣ ಯಾರು ಇನ್ನೂ ಆಗದ ಕಾರಣ ಬಿರುಗಾಳಿ ಅನೇಕ ಪ್ರಕಾರದಲ್ಲಿ ಬರುತ್ತವೆ. ಆಗ ನೀವು ತುಂಬಾ ಅಚಲವಾಗಿರಬೇಕೆಂದು ತಂದೆ ತಿಳಿಸುತ್ತಾರೆ. ಅಮರನಾಥಕ್ಕೆ ಹೋಗುವವರು ಮತ್ತೆ ಅವಶ್ಯವಾಗಿ ಇಳಿಯಲೇ ಬೇಕು ಹಾಗೆಯೆ ನೀವು ತಂದೆಯ ಬಳಿ ಹೋಗಿ ಹೊಸ ಪ್ರಪಂಚ ಸತ್ಯಯುಗದಲ್ಲಿ ಬರುತ್ತೀರಿ, ಅಲ್ಲಿಂದಲೇ ನೀವು ಇಳಿಯುವುದನ್ನು ಆರಂಭಿಸುತ್ತೀರಿ. ನಮ್ಮದು ಬೇಹದ್ದಿನ ಯಾತ್ರೆಯಾಗಿದೆ. ತಂದೆಯ ಬಳಿ ವಿಶ್ರಾಂತಿಯಲ್ಲಿ ಇರುತ್ತೀರಿ, ನಂತರ ರಾಜಧಾನಿಯಲ್ಲಿ ರಾಜ್ಯ ಮಾಡುತ್ತಾ ಜನ್ಮದ ನಂತರ ಜನ್ಮವನ್ನು ಪಡೆಯುತ್ತಾ ಕೆಳಗೆ ಇಳಿಯುತ್ತ ಬರುವಿರಿ. ಇದನ್ನು ಚಕ್ರವೆಂದಾದರು ಹೇಳಬಹುದು ಅಥವಾ ಹತ್ತಿ – ಇಳಿಯುವುದೆಂದಾದರೂ ಹೇಳಬಹುದು. ಇದರ ಅರ್ಥ ಒಂದೇ ಆಗಿದೆ. ಕೆಳಗಡೆಯಿಂದ (ಸ್ಥೂಲ ಲೋಕ) ಮೇಲ್ಗಡೆ (ಮೂಲ ಲೋಕ) ಹೊರಟು ಹೋಗುವಿರಿ, ಆಮೇಲೆ ಇಳಿಯುವುದನ್ನು ಪ್ರಾರಂಭ ಮಾಡುತ್ತೇವೆ. ಈ ಎಲ್ಲಾ ಮಾತುಗಳನ್ನು ತೀಕ್ಷ್ಣ ಬುದ್ದಿಯುಳ್ಳವರು ಚೆನ್ನಾಗಿ ತಿಳಿದುಕೊಂಡು ಅನ್ಯರಿಗೂ ತಿಳಿಸಿಕೊಡುತ್ತಾರೆ. ಈ ಬ್ರಹ್ಮಾಬಾಬಾನು ಸಹ ತಿಳಿದಿರಲಿಲ್ಲ. ಒಂದುವೇಳೆ ಇವರಿಗೆ ಯಾರಾದರು ಗುರುಗಳು ಇರುವುದಾದರೆ ಆ ಗುರುಗಳಿಗೆ ಇನ್ನೂ ಅನುಯಾಯಿಗಳು ಇರುತ್ತಾರೆ. ಕೇವಲ ಒಬ್ಬರೇ ಅನುಯಾಯಿ ಇರಲು ಸಾಧ್ಯವಿಲ್ಲ. ಶಾಸ್ತ್ರಗಳಲ್ಲಿ ಈ ರೀತಿಯಿದೆ ಭಗವಾನುವಾಚ-ಹೇ ಅರ್ಜುನ, ಅಂದರೆ ಒಬ್ಬನೆ ಅರ್ಜುನನ ಹೆಸರನ್ನು ಬರೆಯಲ್ಪಟ್ಟಿದೆ. ಅರ್ಜುನನ ರಥದಲ್ಲಿ ಕುಳಿತು ಹೇಳುವ ಕಾರಣ ಕೇವಲ ಅವರೊಬ್ಬರೇ ಕೇಳುತ್ತಿದ್ದರು ಎಂದರ್ಥವಲ್ಲ, ಉಳಿದವರು ಇರಬೇಕಲ್ಲವೆ, ಸಂಜಯ ಸಹ ಇರಬೇಕು. ಈ ಬೇಹದ್ದಿನ ಶಾಲೆಯು ಒಮ್ಮೆಯೇ ತೆರೆಯುತ್ತದೆ. ಲೌಕಿಕದ ಶಾಲೆಯೂ ನಡೆಯುತ್ತಾ ಬರುತ್ತದೆ, ಎಂತಹ ರಾಜನಿರುತ್ತಾನೆ ಅಂತಹ ಭಾಷೆ ಇರುತ್ತದೆ. ಸತ್ಯಯುಗದಲ್ಲಿಯು ಶಾಲೆಗೆ ಹೋಗುತೀರಲ್ಲವೆ. ಭಾಷೆ, ಕೆಲಸ, ಕಾರ್ಯಎಲ್ಲವನ್ನೂ ಕಲಿಯುವಿರಿ. ಅಲ್ಲಿ ಸಹ ಎಲ್ಲವೂ ತಯಾರಾಗುತ್ತದೆ. ಎಲ್ಲದಕ್ಕಿಂತ ಉತ್ತಮವಾದ ವಸ್ತು ಸ್ವರ್ಗದಲ್ಲಿ ಆಗುತ್ತದೆ. ಅದೆಲ್ಲವು ನಂತರ ಹಳೆಯದಾಗಿ ಬಿಡುತ್ತದೆ. ದೇವತೆಗಳಿಗೆ ಒಳ್ಳೊಳ್ಳೆಯ ವಸ್ತುಗಳು ಸಿಗುತ್ತದೆ. ಇಲ್ಲೇನು ಸಿಗುತ್ತದೆ? ಹೊಸಾ ಪ್ರಪಂಚದಲ್ಲಿ ಎಲ್ಲವು ಹೊಸದೇ ಸಿಗುತ್ತದೆ. ಈ ಎಲ್ಲಾ ಮಾತುಗಳನ್ನು ತಿಳಿದುಕೊಂಡು ಎಲ್ಲಾ ಮನುಷ್ಯರಿಗು ತಿಳಿಸಬೇಕು. ನಾವೀಗ ಸಂಗಮಯುಗದಲ್ಲಿದ್ದೇವೆ, ನಮಗೋಸ್ಕರ ಪ್ರಪಂಚ ಪರಿವರ್ತನೆಯಾಗುತ್ತಿದೆ. ನಾಟಕದ ಅನುಸಾರವಾಗಿ ನಾನು ಪುನಃ ಬಂದಿದ್ದೇನೆ. ಏಕೆಂದರೆ ನಿಮ್ಮನ್ನು ಪತಿತರಿಂದ ಪಾವನ ದೇವೀ ದೇವತಗಳನ್ನಾಗಿ ಮಾಡಲು. ಈ ಚಕ್ರವು ಸುತ್ತುತ್ತಲೇ ಇರುತ್ತದೆ. ಪ್ರಜಾಪಿತ ಬ್ರಹ್ಮನ ಮುಖಾಂತರ ಅಗತ್ಯವಾಗಿ ಬ್ರಾಹ್ಮಣರನ್ನು ರಚಿಸಿರಬೇಕು. ಬ್ರಾಹ್ಮಣರ ಮೂಲಕವೇ ಯಜ್ಞ ರಚಿಸಿದೆ. ಬ್ರಾಹ್ಮಣರೇ ದೇವತೆಗಳಾಗುತ್ತಾರೆ. ಆದ್ದರಿಂದ ವಿರಾಟ ರೂಪದ ಚಿತ್ರವು ಅಗತ್ಯವಿದೆ, ಇದರಿಂದ ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರೆ ದೇವತೆಗಳಾಗುತ್ತಾರೆಂದು ಸಿದ್ದವಾಗುತ್ತದೆ. ವೃದ್ದಿಯು ಆಗುತ್ತಾ ಹೋಗುತ್ತದೆ. ದೇವತೆಗಳೇ ಕ್ಷತ್ರಿಯ, ವೈಶ್ಯ, ಶೂದ್ರರಾಗುತ್ತಾರೆ. ಈ ಸಂಗಮಯುಗವು ಸಹ ಸುಪ್ರಸಿದ್ದಿಯಾಗಿದೆ. ಆತ್ಮ ಪರಮಾತ್ಮ ಬಹಳ ಕಾಲ ಬೇರೆ ಆಗಿದ್ದರು. . . . . . . . ಏರುವ ಕಲೆ ನಂತರ ಇಳಿಯುವ ಕಲೆ. . . . . . . ಇದನ್ನೆಲ್ಲಾ ತಿಳಿಸಬೇಕು. ಮೊದಲು ಈಶ್ವರೀಯ ಸಂತಾನರು, ನಂತರ ದೇವತಾ ಸಂತಾನರು ಆ ಮೇಲೆ ಸ್ವಲ್ಪ ಸ್ವಲ್ಪವೇ ಕಡಿಮೆಯಾಗುತ್ತಾ ಹೋಗುತ್ತದೆ. ದುಃಖಹರ್ತಾ ಸುಖಕರ್ತನೆಂದು ಯಾರಿಗೆ ಹೇಳುತ್ತೀರಿ? ಎಂದು ನೀವು ಕೇಳಬಹುದು. ಅವರು ಅವಶ್ಯಕವಾಗಿ ಪರಮಪಿತ ಪರಮಾತ್ಮನಿಗೆಂದು ಹೇಳುತ್ತಾರೆ. ವಿಷ್ಣು ಪುರಿ ಆಗುವವೇಳೆಗೆ ಪ್ರಪಂಚದ ದುಃಖವೆಲ್ಲವೂ ಅಳಿಸಿ ಹೋಗುತ್ತದೆ. ಬ್ರಾಹ್ಮಣರ ದುಃಖ ದೂರವಾಗಿ ಸುಖ ಪ್ರಾಪ್ತಿಯಾಗುತ್ತದೆ. ಇದು ಒಂದು ಸೆಕಂಡಿನ ಮಾತು. ಲೌಕಿಕ ತಂದೆಯ ಮಡಿಲನ್ನು ಬಿಟ್ಟು ಪಾರಲೌಕಿಕ ಮಡಿಲಲ್ಲಿ ಬಂದು ಬಿಟ್ಟಿದ್ದೀರಿ, ಇದು ಖುಷಿಯ ಮಾತಾಗಿದೆ.

ಇದು ಎಲ್ಲಕ್ಕಿಂತಲು ಅತಿ ದೊಡ್ಡ ಪರೀಕ್ಷೆಯಾಗಿದೆ. ಇದರಿಂದ ರಾಜರಿಗೂ ರಾಜರಾಗುತ್ತೀರಿ. ಈ ರಾಜಯೋಗವನ್ನು ಪರಮಪಿತ ಪರಮಾತ್ಮನ ವಿನಃ ಬೇರೆ ಯಾರು ಕಲಿಸಲು ಸಾಧ್ಯವಿಲ್ಲ. ಈ ಚಿತ್ರವು ಬಹಳ ಚೆನ್ನಾಗಿದೆ. ನನಗೆ ಪರಮಪಿತ ಪರಮಾತ್ಮನೊಂದಿಗೆ ಯಾವ ಸಂಬಂಧವಿಲ್ಲವೆಂದು ಯಾರು ಹೇಳುತ್ತಾರೆ? ಇಂತಹ ನಾಸ್ತಿಕರೊಂದಿಗೆ ಮಾತನಾಡಬಾರದು. ನಡೆಯುತ್ತಾ-ನಡೆಯುತ್ತಾ ಮಾಯೆಯು ಮಕ್ಕಳಿಂದಲೂ ಒಮ್ಮೊಮ್ಮೆ ಉಲ್ಟಾ (ತಪ್ಪು) ಕೆಲಸವನ್ನು ಮಾಡಿಸಿ ಬಿಡುತ್ತದೆ. ಇಂತಹವರ ಮೇಲೆ ತಂದೆಗೆ ದಯೆ ಬರುತ್ತದೆ. ಆದರು ಎಚ್ಚರವಾಗಿ ಎಂದು ತಿಳಿಸುತ್ತಾರೆ. ಹೆಚ್ಚು ಮಾಯೆಯಿಂದ ಪೆಟ್ಟನ್ನು ತಿನ್ನಬೇಡಿ. ಒಂದುವೇಳೆ ಹೆಚ್ಚು ಪೆಟ್ಟು ತಿಂದರೆ ಪದವಿಯನ್ನು ಪಡೆಯುವುದಿಲ್ಲ. ಮಾಯೆಯಂತೂ ಪ್ರಾಣ ಹೋಗುವಂತೆ ಜೋರಾಗಿ ಪೆಟ್ಟನ್ನು ಕೊಡುತ್ತದೆ. ಮಾಯೆಗೆ ವಶವಾಗಿ ಸತ್ತು ಹೋದರೆ ಮತ್ತೆ ಜನ್ಮದಿನವನ್ನು ಆಚರಿಸಲು ಆಗುವುದಿಲ್ಲ. ಆಗ ಮಗು ಸತ್ತು ಹೋಯಿತ್ತೆಂದು ಹೇಳುತ್ತಾರೆ. ಈಶ್ವರನ ಬಳಿ ಜನ್ಮ ಪಡೆದು ಮತ್ತೆ ಸಾಯುವುದು ಎಲ್ಲಕ್ಕಿಂತಲೂ ಭಯಂಕರವಾದ ಮೃತ್ಯುವಾಗಿದೆ. ನಿಮಗೆ ಯಾವುದೇ ಮಾತು ಇಷ್ಟವಾಗಿಲ್ಲವೆಂದರೆ ಬಿಟ್ಟು ಬಿಡಿ. ಸಂಶಯವೆನಿಸುವುದನ್ನು ನೋಡಬೇಡಿ. ತಂದೆಯು ತಿಳಿಸುತ್ತಾರೆ-ಮನ್ಮಾನಾಭವ, ನನ್ನನ್ನು ನೆನಪು ಮಾಡಿ ಹಾಗೂ ಸ್ವದರ್ಶನ ಚಕ್ರ ತಿರಿಗಿಸಿರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯ ಸಮಾನ ಮಾಸ್ಟರ್ ನಾಲೆಜ್ ಫುಲ್ ಆಗಬೇಕು. ಜ್ಞಾನ ಚಿಂತನೆ(ಸ್ಮರಣೆ) ಮಾಡುತ್ತಾ ಅಪಾರ ಖುಷಿಯಲ್ಲಿರಬೇಕು. ಆನಂದದ ಅನುಭವ ಮಾಡಬೇಕು.

2. ಅನೇಕ ಪ್ರಕಾರದ ಬಿರುಗಾಳಿಗಳ ಮಧ್ಯದಲ್ಲಿದ್ದರೂ ಸ್ವಯಂನ್ನು ಅಚಲವಾಗಿರಬೇಕು. ಮಾಯೆಯ ಪೆಟ್ಟಿನಿಂದ ರಕ್ಷಿಸಿಕೊಳ್ಳಲು ತುಂಬಾ ಎಚ್ಚರಿಕೆಯಿಂದಿರಬೇಕು.

ವರದಾನ:-

ದಿವ್ಯ ಗುಣಗಳು ಅತ್ಯಂತ ಶ್ರೇಷ್ಠವಾದ ಪ್ರಭು ಪ್ರಸಾದವಾಗಿದೆ. ಈ ಪ್ರಸಾದವನ್ನು ಚೆನ್ನಾಗಿ ಹಂಚಿರಿ. ಒಬ್ಬರಿನ್ನೊಬ್ಬರಲ್ಲಿ ಇರುವಂತಹ ಸ್ನೇಹದ ಸಂಕೇತವಾಗಿ ಸ್ಥೂಲದಲ್ಲಿ ಸಿಹಿಯನ್ನು ತಿನ್ನಿಸುತ್ತಾರೆಯೋ ಅದೇರೀತಿ ಗುಣಗಳೆಂಬ ಈ ಸಿಹಿಯನ್ನು ತಿನ್ನಿಸಿರಿ. ಯಾವ ಆತ್ಮನಿಗೆ ಯಾವ ಶಕ್ತಿಯು ಅವಶ್ಯಕತೆಯಿದೆಯೋ ಅದನ್ನು ತಮ್ಮ ಮನಸ್ಸಾ ಅರ್ಥಾತ್ ಶುದ್ಧ ವೃತ್ತಿ, ಪ್ರಕಂಪನಗಳ ಮೂಲಕ ಶಕ್ತಿಗಳ ದಾನ ಮಾಡಿ ಹಾಗೂ ಕರ್ಮದ ಮೂಲಕ ಗುಣ ಮೂರ್ತಿಯಾಗಿದ್ದು ಗುಣ ಧಾರಣೆ ಮಾಡಿಕೊಳ್ಳುವುದರಲ್ಲಿ ಸಹಯೋಗ ಕೊಡಿ. ಇದೇ ವಿಧಿಯಿಂದ “ಫರಿಶ್ತೆಯಿಂದ ದೇವತಾ” ಆಗುವ ಸಂಗಮಯುಗದ ಲಕ್ಷ್ಯವೇನಿದೆಯೋ ಅದು ಸಹಜವಾಗಿ ಸರ್ವರಲ್ಲಿ ಪ್ರತ್ಯಕ್ಷವಾಗಿ ಕಾಣಿಸುವುದು.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:

ಪರಮಾತ್ಮನ ಪ್ರೀತಿಯ ಅನುಭವದಲ್ಲಿ ಸಹಯೋಗಿಯಾಗಿ ಹಾರುತ್ತಿರಿ. ಪರಮಾತ್ಮನ ಪ್ರೀತಿಯು ಹಾರಿಸುವ ಸಾಧನವಾಗಿದೆ. ಹಾರುವವರೆಂದಿಗೂ ಧರಣಿಯ ಆಕರ್ಷಣೆಯಲ್ಲಿ ಬರಲು ಸಾಧ್ಯವಿಲ್ಲ. ಮಾಯೆಯು ಎಷ್ಟೇ ಆಕರ್ಷಣೀಯವಾಗಿ ಇರಲಿ ಆದರೆ ಆ ಆಕರ್ಷಣೆಯು ಹಾರುವ ಕಲೆಯವರ ಬಳಿಗೆ ತಲುಪಲು ಸಾಧ್ಯವಿಲ್ಲ.

Daily Murli in Kannada

Email me Murli: Receive Daily Murli on your email. Subscribe!

1 thought on “15 January 2022 KANNADA Murli Today | Brahma Kumaris”

  1. 💧🙏 JAY BABA JAY 🌹🌹🌹🌹🌹🌹🌹🌹🌹🌹🌹🌹🌹🌹🌹🕊️🕊️🕊️🕊️🕊️☀️

Leave a Comment

Your email address will not be published. Required fields are marked *

Scroll to Top