13 January 2022 KANNADA Murli Today | Brahma Kumaris

Read and Listen today’s Gyan Murli in Kannada

January 12, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಈ ಮುಳ್ಳಿನ ಕಾಡನ್ನು, ದೈವೀ ಹೂತೋಟವನ್ನಾಗಿ ಮಾಡಬೇಕಾಗಿದೆ, ಹೊಸ ಜಗತ್ತಿನ ನಿರ್ಮಾಣ ಮಾಡಬೇಕಾಗಿದೆ”

ಪ್ರಶ್ನೆ:: -

ನೀವು ಮಕ್ಕಳು ತಂದೆಯ ಜೊತೆ ಸೇರಿ ಯಾವ ಸೇವೆಯನ್ನು ಮಾಡುತ್ತೀರಿ ಯಾವುದನ್ನು ಬೇರೆ ಯಾರು ಮಾಡಲು ಸಾಧ್ಯವಿಲ್ಲ?

ಉತ್ತರ:-

ಇಡೀ ವಿಶ್ವದಲ್ಲಿ ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯನ್ನು ಸ್ಥಾಪನೆ ಮಾಡುವ ಸೇವೆ ನೀವು ಮಕ್ಕಳೇ ತಂದೆಯ ಜೊತೆ ಜೊತೆ ಮಾಡುತ್ತೀರಿ ಇದನ್ನು ಅನ್ಯರು ಯಾರು ಮಾಡಲು ಸಾಧ್ಯವಿಲ್ಲ, ನೀವು ಈಗ ಹೊಸ ಜಗತ್ತಿನ ತಳಪಾಯ ಹಾಕುತ್ತಿದ್ದೀರಿ. ಆದ್ದರಿಂದ ಖಂಡಿತವಾಗಿ ಈ ಹಳೆಯ ಜಗತ್ತು ವಿನಾಶವಾಗುತ್ತದೆ, ದೈವೀ ಹೂತೋಟವನ್ನು ಸ್ಥಾಪನೆ ಮಾಡುವುದು, ಮುಳ್ಳಿನ ಕಾಡನ್ನು ಸಮಾಪ್ತಿ ಮಾಡುವುದು ಇದು ತಂದೆಯ ಕರ್ತವ್ಯ ಆಗಿದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಓಂ ನಮಃ ಶಿವಾಯಃ…

ಓಂ ಶಾಂತಿ. ಯಾವಾಗ ಯಾರಾದರು ಸಾಧು, ಸಂತರು, ವಿದ್ವಾಂಸರು ಭಾಷಣ ಮಾಡುತ್ತಾರೆಂದಾಗ ಮೊದಲು ಯಾರಿಗಾದರು ನಮಸ್ತೆ ಮಾಡುತ್ತಾರೆ. ಕೆಲವರು ಶಿವಾಯ ನಮಃ ಹೇಳುತ್ತಾರೆ, ಕೆಲವರು ಕೃಷ್ಣ ನಮಃ ಹೇಳುತ್ತಾರೆ, ಕೆಲವರು ಗಣೇಶ ನಮಃ ಹೇಳುತ್ತಾರೆ, ಆದರೆ ನಮಸ್ತೆಯನ್ನು ಶ್ರೇಷ್ಠಾತಿ ಶ್ರೇಷ್ಠ ತಂದೆಗೆ ಮಾಡಬೇಕಾಗಿದೆ. ಮಕ್ಕಳಿಗೆ ತಿಳಿದಿದೆ ಶ್ರೇಷ್ಠಾತಿ ಶ್ರೇಷ್ಠ ಒಬ್ಬರೇ ಭಗವಂತ ಆಗಿದ್ದಾರೆ. ಅವರ ಹೆಸರೇ ಶಿವ ಆಗಿದೆ. ಶಿವಾಯ ನಮಃ ಎಂದು ಹಾಡುತ್ತಾರೆ. ಶಿವನನ್ನು ಸದಾ ತಂದೆ ಎಂದು ಕರೆಯಲಾಗುತ್ತದೆ ತಂದೆ ಮೊಟ್ಟ ಮೊದಲ ರಚನೆಯನ್ನು ರಚಿಸುತ್ತಾರೆ. ತಂದೆಯನ್ನು ರಚಯಿತ ಎಂದು ಸೃಷ್ಟಿಯನ್ನು ರಚನೆ ಎಂದು ಕರೆಯಲಾಗುತ್ತದೆ. ತಂದೆಯು ರಚನೆ ಮಾಡುವ ಸೃಷ್ಟಿ ಹೊಸ ಸೃಷ್ಟಿಯಾಗಿದೆ. ಆದರೆ ತಂದೆಯು ಹಳೆಯ ಜಗತ್ತಿನಲ್ಲಿಯೇ ಬರುತ್ತಾರೆ. ಆದ್ದರಿಂದಲೇ ತಂದೆಯನ್ನು ಪತಿತ-ಪಾವನ ಎಂದು ಕರೆಯಲಾಗುತ್ತದೆ. ಇಡೀ ಜಗತ್ತಿನ ಮಾನವರೆಲ್ಲರೂ ಅದರಲ್ಲಿಯು ವಿಶೇಷವಾಗಿ ಭಾರತವಾಸಿಗಳು ತಂದೆಯನ್ನು ಪತಿತ ಪಾವನ ಬಾ ಎಂದು ನೆನಪು ಮಾಡುತ್ತಾರೆ. ಯಾವಾಗ ಎಲ್ಲರು ದುಃಖಿ ಹಾಗೂ ಪತಿತರಾಗುತ್ತಾರೆ ಆಗ ತಂದೆಯನ್ನು ಕರೆಯುತ್ತಾರೆ. ಆದರೆ ಎಂದಿನಿಂದ ದುಃಖಗಳಾದೆವು ಹಾಗೂ ಎಂದಿನಿಂದ ತಂದೆಯನ್ನು ನೆನಪು ಮಾಡುತ್ತಾ ಬಂದೆವು ಯಾರಿಗೂ ಗೊತ್ತಿಲ್ಲ. ಈಗ ತಂದೆ ಕುಳಿತು ತಿಳಿಸುತ್ತಾರೆ-ಕಲ್ಪದ ಮೊದಲೂ ಸಹ ತಿಳಿಸಿದ್ದೆ ಹೇ ಮಕ್ಕಳೇ ನೀವು ನಿಮ್ಮ ಸುಖ-ದುಃಖದ ಜನ್ಮಗಳ ಬಗ್ಗೆ ತಿಳಿದುಕೊಂಡಿಲ್ಲ. ನಾನು ಜ್ಞಾನದ ಸಾಗರ, ಆಗಿದ್ದೇನೆ. ನಾನೇ ಕುಳಿತು ನಿಮಗೆ ತಿಳಿಸುತ್ತಿದ್ದೇನೆ. ತಂದೆ ತಿಳಿಸುತ್ತಾರೆ ನಾನು ಮನುಷ್ಯ ಸೃಷ್ಟಿಯ ಬೀಜರೂಪ ಆಗಿದ್ದೇನೆ. ನನ್ನನ್ನು ಪತಿತ ಪಾವನ ಎಂದು ಕರೆಯುತ್ತಾರೆ ಅಂದಾಗ ಅವಶ್ಯಕ ಪತಿತ ಜಗತ್ತೂ ಸಹ ಇದೆ. ಪಾವನ ಜಗತ್ತೂ ಸಹ ಇತ್ತು. ಪಾವನ ಜಗತ್ತನ್ನು ಸ್ವರ್ಗ ಅಥವಾ ಹೂತೋಟ ಎಂದು ಹೇಳಲಾಗುತ್ತದೆ. ಪುನಃ ಅದೇ ಜಗತ್ತು ಪತಿತವಾದಾಗ ಅದನ್ನೆ ಮುಳ್ಳಿನ ಕಾಡು ಎಂದು ಹೇಳಲಾಗುತ್ತದೆ. ಐದು ಸಾವಿರ ವರ್ಷಗಳ ಮೊದಲು ಭಾರತ ಹೂತೋಟವಾಗಿತ್ತು. ಮನುಷ್ಯರು ಬಹಳ ಸುಖಗಳಾಗಿದ್ದರು. ಹೊಸ ಪ್ರಪಂಚದಲ್ಲಿ ಭಾರತ ದೇಶ ಮಾತ್ರ ಇತ್ತು. ಆಗ ಬೇರೆ ಯಾವುದೇ ಖಂಡದ ಹೆಸರು ಚಿಹ್ನೆಗಳು ಇರಲಿಲ್ಲ. ಹೊಸ ಭಾರತದಲ್ಲಿ ಹೊಸ ದೆಹಲಿಯು ಇತ್ತು, ಅದನ್ನು ಫರಿಸ್ತಾನ ಎಂದು ಹೇಳಲಾಗುತಿತ್ತು.

ಭಾರತ ವಜ್ರ ಸಮಾನ ಇತ್ತು ಅದನ್ನು ಸುಖಧಾಮವೆಂದು ಹೇಳಲಾಗುತಿತ್ತು ಈಗ ಭಾರತ ಹಳೆಯದಾಗಿದೆ. ಅದನ್ನು ದುಃಖಧಾಮವೆಂದು ಹೇಳಲಾಗುತ್ತದೆ. ಈಗ ತಂದೆ ಹೇಳುತ್ತಾರೆ ವರ್ತಮಾನದ ದೆಹಲಿಯಲ್ಲಿ ವಿಶ್ವ ನವ ನಿರ್ಮಾಣ ಪ್ರದರ್ಶನಿ ನಡೆಯುತ್ತದೆ. ಮನುಷ್ಯರಿಗೆ ವಿಶ್ವ ಹೊಸದು ಹೇಗೆ ಆಗುತ್ತದೆ ಎಂಬುದವನ್ನು ತಿಳಿಸಲು ಈ ಚಿತ್ರಗಳನ್ನು ಮುಂದಿಟ್ಟುಕೊಂಡು ಅನ್ಯರು ಯಾರು ಇದರ ಬಗ್ಗೆ ತಿಳಿಸಲು ಸಾಧ್ಯವಿಲ್ಲ. ಇಂತಹ ನವ ನಿರ್ಮಾಣ ಪ್ರದರ್ಶನಿಯನ್ನು ತೆರೆಯಲು ಸಾಧ್ಯವಿಲ್ಲ. ಇದನ್ನು ಮೊದಲ ಭಾರಿ. ಬ್ರಹ್ಮಾಕುಮಾರ ಕುಮಾರಿಯರು ತಿಳಿಸುತ್ತಿದ್ದಾರೆ. ಭಾರತ ಹೊಸದು ಆಗಿದ್ದಾಗ ಸುಖಯಾಗಿತ್ತು. ಲಕ್ಷ್ಮಿ ನಾರಾಯಣರು ರಾಜ್ಯ ಮಾಡುತ್ತಿದ್ದರು. ವಿಷ್ಣುಪುರಿ ಹೊಸ ಜಗತ್ತಾಗಿತ್ತು. ಹೊಸ ಜಗತ್ತಿನ ನಿರ್ಮಾಣ ಮಾಡುವುದು ತಳಹದಿ ಹಾಕುವುದು ಪರಮಪಿತ ಪರಮಾತ್ಮನ ಕರ್ತವ್ಯ ಆಗಿದೆ. ಭಾರತವಾಸಿಯರು ತಮ್ಮನ್ನು ಪತಿತ ಭ್ರಷ್ಠಾಚಾರಿ ಎಂದು ಹೇಳಿಕೊಳ್ಳುತ್ತಾರೆಂದಾಗ ಅವರು ನವ ನಿರ್ಮಾಣ ಮಾಡಲು ಸಾಧ್ಯವಿಲ್ಲ. ನಿಮಗೆ ತಿಳಿದಿದೆ ಭಾರತೀಯರು ಯಾವ ಯಾವ ಅಡಿಪಾಯ ಹಾಕುತ್ತಾರೆ ಎಂದು. ತಂದೆ ಹೇಳುತ್ತಾರೆ ನಾನು ಸ್ವರ್ಗ ಹೊಸ ಪ್ರಪಂಚದ ಅಡಿಪಾಯವನ್ನು ಹಾಕುತ್ತೇನೆ. ಹಳೆಯ ಜಗತ್ತು ವಿನಾಶ ಆಗಲೇ ಬೇಕು. ಇದಾಗಿದೆ ಮುಳ್ಳಿನ ಕಾಡು. ಇದರಲ್ಲಿ ಮನುಷ್ಯರು ಮುಳ್ಳುಗಳು ಆಗಿದ್ದಾರೆ. ಪರಸ್ಪರ ಒಬ್ಬರಿಗೊಬ್ಬರು ದುಃಖವನ್ನೇ ಕೊಡುತ್ತಾರೆ. ಭಾರತ ಅಲ್ಲಿನ ಹೂದೋಟವಾಗಿತ್ತು. ಯಾವುದನ್ನು ಗಾಡ್ಫಾದರ್ (ಪರಮಾತ್ಮ) ಸ್ಥಾಪನೆ ಮಾಡಿದ್ದರು. ಅವರಿಗೆ ಶಿವಾಯ ನಮಃ ಎಂದು ಹೇಳಲಾಗುತ್ತದೆ. ಶಿವಬಾಬಾ ಹೇಗೆ ಸ್ಥಾಪನೆ ಮಾಡಿದರು?ಅವಶ್ಯಕ ಬ್ರಹ್ಮನ ಮೂಲಕ ಅಲ್ಲಿನ ಹೂದೋಟ, ಅಥವಾ ದೈವೀ ಹೂದೋಟದ ಸ್ಥಾಪನೆ ಮಾಡುತ್ತಿದ್ದಾರೆ. ಮುಳ್ಳಿನ ಕಾಡಿನ ಪರಿವರ್ತನೆ, ದೈವೀ ಸ್ವರಾಜ್ಯವನ್ನು ಸ್ಥಾಪನೆ ಮಾಡುತ್ತಿದ್ದಾರೆ. ಇಲ್ಲಿ ಮಕ್ಕಳಿಗೆ ಆಮಂತ್ರಣ ನೀಡುತ್ತಾರೆ. ಮಕ್ಕಳು ತಂದೆಗೆ ನಿಮಂತ್ರಣ ನೀಡಿದ್ದೇವೆ. ಬಾಬಾ ಬಂದು ನೋಡಿ, ನಾವು ಚಿತ್ರಗಳ ಬಗ್ಗೆ ಹೇಗೆ ತಿಳಿಸುತ್ತೇವೆ, ಹೊಸ ಜಗತ್ತಿನ ಸ್ಥಾಪನೆ, ಹಾಗು ಹಳೆ ಜಗತ್ತಿನ ವಿನಾಶ ಹೇಗೆ ಆಗುತ್ತದೆ ಎಂದು. ತಾವು ಬಂದು ನೋಡಿ ಹಾಗೂ ಶ್ರೀಮತವನ್ನು ನೀಡಿ, ಹೇಗೆ ಮಕ್ಕಳು ಕರೆಯುತ್ತಾರೆ. ಈಗ ಈ ಚಿತ್ರಗಳ ಬಗ್ಗೆ ಯಾರಾದರು ತಿಳಿಸುವುದು ಬಹಳ ಸಹಜ. ಮೇಲೆ ಪರಮಪಿತ ಈ ರೀತಿ ಪರಮಾತ್ಮನ ಚಿತ್ರವಿದೆ. ಶಿವಾಯ ನಮಃ ಸರ್ವರಿಗೂ ಶ್ರೇಷ್ಠರಾಗಿದ್ದಾರೆ, ಅವರು ಈಗ ಪುನಃ ಹೊಸ ಜಗತ್ತನ್ನು ನಿರ್ಮಾಣ ಮಾಡುತ್ತಿದ್ದಾರೆ. ಹೊಸ ಭಾರತದಲ್ಲಿ ದೇವೀ-ದೇವತಾ ಲಕ್ಷ್ಮಿನಾರಾಯಣರ ರಾಜ್ಯ ಇತ್ತು. ಶ್ರೇಷ್ಠರಲ್ಲಿ ಶ್ರೇಷ್ಠರಾದ ಪರಮಪಿತ ಪರಮಾತ್ಮ ಪುನಃ ಸೂರ್ಯವಂಶಿ, ಚಂದ್ರವಂಶಿ ರಾಜಧಾನಿಯನ್ನು ಬ್ರಹ್ಮಾ ಹಾಗು ಬ್ರಹ್ಮಾಕುಮಾರ ಕುಮಾರಿಯರ ಮೂಲಕ ಸ್ಥಾಪನೆ ಮಾಡುತಿದ್ದಾರೆ. ಅವರು (ಲಕ್ಷ್ಮಿ ನಾರಾಯಣರು) ಸತ್ಯಯುಗದ ಆದಿಯಲ್ಲಿ ಇದ್ದರು ಎಂದರೆ ಕಲಿಯುಗದ ಅಂತ್ಯದಲ್ಲಿಯೇ ಅವಶ್ಯಕವಾಗಿ ಸ್ಥಾಪನೆ ಮಾಡಿರಬೇಕು. ಅದನ್ನೇ ಈ ಸಂಗಮಯುಗದಲ್ಲಿ ಮಾಡುತ್ತಿದ್ದಾರೆ. ವಾಸ್ತವದಲ್ಲಿ ಎಲ್ಲಿ ಆತ್ಮಗಳು ಶಿವನ ಸಂತಾನರು ಹಾಗು ಪ್ರಜಾಪಿತನಿಗೂ ಮಕ್ಕಳು ಆಗಿದ್ದಾರೆ. ಪ್ರತಿಯೊಂದು ಆತ್ಮನಲ್ಲಿ ಎಲ್ಲಾ ಪಾತ್ರವು ನಿಗಧಿಯಾಗಿದೆ. 84 ಜನ್ಮಗಳನ್ನು ಯಾರು ಪಡೆಯುತ್ತಾರೆ, ಅವರೇ ಮೊದಲನೆ ಪಾತ್ರಧಾರಿಗಳಾಗಿರುತ್ತಾರೆ. ಪುನರ್ಜನ್ಮದ ಪದ್ದತಿ ಸತ್ಯಯುಗದ ಪ್ರಾರಂಭದಿಂದಲೇ ನಡೆಯುತ್ತಾ ಬಂದಿದೆ ಸತೋಪ್ರಾಧಾನ ನಂತರ ಸತೋ, ರಜೋ, ತಮೋ ಆಗುತ್ತಾರೆ. ಸತೋಪ್ರಧಾನರಿದ್ದಾಗ ಸೂರ್ಯವಂಶಿ ಲಕ್ಷ್ಮಿನಾರಾಯಣ ರಾಜ್ಯ ಇತ್ತು. ಹದಿನಾರು ಕಲಾ ಸಂಪೂರ್ಣರಾಗಿದ್ದರು ನಂತರ ಹದಿನಾಲ್ಕು ಕಲೆಯುಳ್ಳವರಾದಿರಿ. ಈ ಎರಡು ಯುಗಗಳು ಹೂದೋಟವಾಗಿತ್ತು ಅದಾಗಿದೆ ಸುಖಧಾಮ. ಈ ಚಿತ್ರಗಳ ಬಗ್ಗೆ ತಿಳಿಸುವುದು ಬಹಳ ಸಹಜ ಆಗಿದೆ. ಮೇಲೆ ಶಿವಬಾಬಾರವರ ಚಿತ್ರವಿದೆ. ಇವರ ಮೂಲಕ ವಿಶ್ವ ನವ ನಿರ್ಮಾಣ ಆಗುತ್ತದೆ. ಬ್ರಹ್ಮಾ ವಿಷ್ಣು ಶಂಕರರ ರಚೈತನೇ ಶಿವ ಆಗಿದ್ದಾರೆ. ಇದನ್ನು ಮಕ್ಕಳು ತಿಳಿಸಬೇಕಾಗಿದೆ. ಹೊಸ ಜಗತ್ತಿನ ಸ್ಥಾಪನೆ ಹಾಗೂ ಹಳೆಯ ಜಗತ್ತಿನ ವಿನಾಶ ಆಗುತ್ತದೆ. ಈಗ ಎಲ್ಲಾ ಧರ್ಮಗಳು ಇದೆ. ಆದರೆ ಕೇವಲ ದೇವೀ-ದೇವತಾ ಧರ್ಮ ಮಾತ್ರ ಇಲ್ಲದಂತಾಗಿದೆ. ಈ ಒಂದು ಧರ್ಮ ಮಾತ್ರ ಪ್ರಾಯಃಲೋಪವಾಗಿದೆ. ದೇವೀ ದೇವತಾ ಧರ್ಮದವರಾಗಿದ್ದವರೇ ತಮ್ಮನ್ನು ಹಿಂದೂ-ಧರ್ಮದವರೆಂದು ಹೇಳಿಕೊಳ್ಳುತ್ತಾರೆ. ಏಕೆಂದರೆ ಸತ್ಯಯುಗದಲ್ಲಿ ಎಲ್ಲರೂ ಪಾವನರಾಗಿದ್ದರು. ಈಗ ಎಲ್ಲರೂ ಪತಿತರಾಗಿದ್ದಾರೆ. ತಂದೆಯ ಹೆಸರೇ ಪತಿತ-ಪಾವನ ಎಂದು ಹಾಗಾದರೆ ಪತಿತರನ್ನು ಪಾವನವನ್ನಾಗಿ ಮಾಡುವವರು ಯಾರು?ಎಂಬುದನ್ನು ತಂದೆಯೇ ತಿಳಿಸಿಕೊಡುತ್ತಾರೆ. ನಂತರ ನೀವು ಮಕ್ಕಳು ಅನ್ಯ ಸಹೋದರ-ಸಹೋದರಿಯರಿಗೆ ತಿಳಿಸಿಕೊಡುತ್ತೀರಿ. ಪತಿತರನ್ನಾಗಿ ಮಾಡುವವನು ರಾವಣ, ಆದ್ದರಿಂದ ರಾವಣನ್ನು ಪ್ರತಿವರ್ಷ ಸುಡುತ್ತಾರೆ. ರಾವಣನಿಗೆ ಯಾವುದೇ ರೂಪವಿಲ್ಲ. ರಾವಣನೂ ಸಹ ಗುಪ್ತವಾಗಿದ್ದಾರೆ. ಐದು ವಿಕಾರ ಸ್ತ್ರೀಯರದು ಐದು ವಿಕಾರ ಪುರುಷನದ್ದಾಗಿದೆ. ಭಾರತದ ಅತೀ ದೊಡ್ಡ ಶತ್ರು ರಾವಣನಾಗಿದ್ದಾನೆ. ಭಾರತವನ್ನು ಕವಡೆಯ ಸಮಾನ ಮಾಡಿದ್ದಾನೆ. ಈ ರಾವಣನ ಮೇಲೆ ನನ್ನ ಮತದಂತೆ ನಡೆದು ವಿಜಯ ಪಡೆದುಕೊಳ್ಳಿ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿದ್ದಾರೆ. ಆದ್ದರಿಂದ ಪರಮಪಿತ ಪರಮಾತ್ಮನ ಶ್ರೀಮತವು ಬೇಕಾಗಿದೆ. ಶ್ರೀಮತ ಭಗವಂತನ ಮತವಾಗಿದೆ. ಭಗವಾನುವಾಚ, ಹೇ ಮಕ್ಕಳೇ! ಅಥವಾ ಆತ್ಮಗಳೇ, ನೀವು ಇಷ್ಟು ಸಮಯ ದೇಹದ ಅಭಿಮಾನದಲ್ಲಿದ್ದಿರಿ ಈಗ ದೇಹೀಅಭಿಮಾನಿಗಳಾಗಿ. ನೀವು ಆತ್ಮರು ಅಮರರಾಗಿದ್ದೀರಿ. ನೀವೇ ಒಂದು ಶರೀರವನ್ನು ಬಿಟ್ಟು ಮತ್ತೊಂದನ್ನು ಪಡೆಯುತ್ತೀರಿ. ಶಿವತಂದೆ ಹೇಳುತ್ತಾರೆ-ಹೇ ಬ್ರಹ್ಮಾ, ನೀವೂ ಸಹ ನಿಮ್ಮನ್ನು ತಿಳಿದುಕೊಂಡಿಲ್ಲ. ಅರ್ಧ ಕಲ್ಪ ಬ್ರಹ್ಮನ ಹಗಲು, ಅರ್ಧಕಲ್ಪ ಬ್ರಹ್ಮನ ರಾತ್ರಿಯೆಂದು ನಿಮಗಾಗಿಯೇ ಗಾಯನ(ಮಹಿಮ)ಮಾಡುತ್ತಾರೆ. ನೀವು ಮಕ್ಕಳು ಈ ಎಲ್ಲಾ ಮಾತುಗಳನ್ನು ತಿಳಿದುಕೊಂಡಿದ್ದೀರಿ. ಆದ್ದರಿಂದಲೇ ಪ್ರದರ್ಶನಿಯನ್ನೂ ಸಹ ನೀವೇ ಮಾಡುತ್ತೀರಿ, ಈಗ ಈ ಚಿತ್ರಗಳ ಮೂಲಕ ತಿಳಿಸಿ. ಬ್ರಹ್ಮ ಹಾಗೂ ಬ್ರಹ್ಮಾಕುಮಾರ ಕುಮಾರಿಯರು ಪರಮಪಿತ ಪರಮಾತ್ಮನಿಂದ ತನ್ನ ಅಸ್ತಿಯನ್ನು ಪಡೆಯುತ್ತಿದ್ದಾರೆ. ಜ್ಞಾನಸೂರ್ಯ ಉದಯಿಸುವಾಗ ಅಜ್ಞಾನ ಅಂಧಕಾರ ದೂರವಾಯಿತೆಂದು ಗಾಯನವಿದೆ. ಇದು ಈ ಆಕಾಶದಲ್ಲಿರುವ ಸೂರ್ಯನಲ್ಲ. ನಾನು ಜ್ಞಾನಸೂರ್ಯ ಈಗ ಜ್ಞಾನಮಳೆಯನ್ನು ಸುರಿಸುತ್ತಿದ್ದೇನೆ. ಯಾವುದರಿಂದ ನೀವು ಪತಿತರು ಪಾವನರಾಗುತ್ತೀರಿ. ಮಳೆಯ ನೀರು ಯಾರನ್ನು ಪಾವನ ಮಾಡಲು ಸಾಧ್ಯವಿಲ್ಲ. ನನ್ನನ್ನೇ ಪತಿತ ಪಾವನ ಎಂದು ಹೇಳುತ್ತಾರೆ. ಪತಿತರಿಂದ ಪಾವನರು, ಪಾವನರಿಂದ ಪತಿತರು ಹೇಗೆ ಆಗುತ್ತೀರಿ ಎನ್ನು ವ ಜ್ಞಾನ ನನ್ನಲ್ಲಿದೆ. ಹೊಸ ಪ್ರಪಂಚವನ್ನು ಪಾವನ ಹಳೆಯ ಪ್ರಪಂಚವನ್ನು ಪತಿತ ಎಂದು ಹೇಳಲಾಗುತ್ತದೆ. ಪತಿತ ಪ್ರಪಂಚವನ್ನಾಗಿ ರಾವಣ ಮಾಡುತ್ತಾನೆ. ರಾವಣನಿಗೆ ಭೂತ (ಸೈತಾನ್)ವೆಂದು, ರಾಮನಿಗೆ ಭಗವಂತನೆಂದು ಹೇಳಲಾಗುತ್ತದೆ. ಆ ರಾಮನು ತ್ರೇತಾದ ಸೀತಾ-ರಾಮನಲ್ಲ. ನೀವು ಮಕ್ಕಳು ಸ್ಥಾಪನೆ ಹಾಗೂ ವಿನಾಶದ ರಹಸ್ಯವನ್ನು ತಿಳಿಸಬೇಕಾಗಿದೆ. ಆದ್ದರಿಂದಲೇ ನವ ನಿರ್ಮಾಣ ಚಿತ್ರ ಪ್ರದರ್ಶನಿ ಆಗಿದೆ. ಪರಮಪಿತ ಪರಮಾತ್ಮ ಬ್ರಹ್ಮನ ಮೂಲಕ ಸುಖದಾಮದ ಸ್ಥಾಪನೆ ಮಾಡುತ್ತಾರೆಂದು ಯಾವುದೇ ಶಾಸ್ತ್ರಗಳಲ್ಲಿಲ್ಲ. ರಾವಣ ದುಃಖಧಾಮವನ್ನಾಗಿ ಮಾಡುತ್ತಾನೆ. ತಂದೆ ಬಂದು ಸುಖಧಾಮವನ್ನಾಗಿ ಮಾಡುತ್ತಾರೆ. ಅರ್ಧ ಕಲ್ಪ ಸುಖ, ಅರ್ಧ ಕಲ್ಪ ದುಃಖ. ಸತ್ಯಯುಗ ತ್ರೇತಾಯುಗ ಹಗಲು, ದ್ವಾಪರ ಕಲಿಯುಗ ರಾತ್ರಿ, ರಾತ್ರಿಯ ಕತ್ತಲಿನಲ್ಲಿ ಭಗವಂತನನ್ನು ಹುಡುಕುತ್ತಾರೆ, ತಡವರಿಸುತ್ತಾರೆ ಪೆಟ್ಟನ್ನು ತಿನ್ನುತ್ತಾರೆ. ಇದು ಡ್ರಾಮಾದಲ್ಲಿ ನಿಗದಿ ಆಗಿದೆ. ಅರ್ಧಕಲ್ಪ ಜ್ಞಾನ, ಅರ್ಧಕಲ್ಪ ಭಕ್ತಿ. ಜ್ಞಾನಸಾಗರ ಅಥವಾ ಜ್ಞಾನಸೂರ್ಯ ಎಂದು ಪರಮಪಿತ ಪರಮಾತ್ಮನಿಗೆ ಹೇಳಲಾಗುತ್ತದೆ. ಭಾರತವೇ ಶಿವನ ಜನ್ಮಭೂಮಿ ಆಗಿದೆ. ನಾನು ಪತಿತರನ್ನು ಪಾವನ ಮಾಡಲು ಪತಿತ ಪ್ರಪಂಚದಲ್ಲಿಯೇ ಬರಬೇಕಾಗುತ್ತದೆ. ಯಾರು ಪೂಜ್ಯ ಲಕ್ಷ್ಮಿನಾರಾಯಣರಾಗಿದ್ದರು ಅವರೇ ಪೂಜಾರಿಗಳಾಗಿದ್ದಾರೆ. ನೀವೇ ಪೂಜ್ಯ ನೀವೇ ಪೂಜಾರಿ. ಅದೇ ಲಕ್ಷ್ಮಿನಾರಾಯಣರ ಆತ್ಮ ಯಾರು 84 ಜನ್ಮಗಳನ್ನು ಭಿನ್ನ ಭಿನ್ನ ನಾಮ ರೂಪದಲ್ಲಿ ಜನ್ಮ ಪಡೆಯುತ್ತಾರೆ. ಯಾವುದನ್ನು ಬ್ರಹ್ಮಾ ಸ್ಥಾಪನೆ ಮಾಡುತ್ತಾರೆ ಅವರೇ ಅದರ ಪಾಲನೆಯನ್ನು ಮಾಡುತ್ತಾರೆ. ಈ ಆತ್ಮನೇ ಪತಿತವಾಗಿದೆ. ಪುನಃ ಅವರ ಶರೀರದಲ್ಲಿಯೇ ಬಂದು ಅವರಿಗೆ ಬ್ರಹ್ಮಾ ಎಂದು ಹೆಸರಿಡುತ್ತೇನೆ. ಮೊಟ್ಟ ಮೊದಲು ಈ ಮಾತನ್ನು ತಿಳಿಸಿ, ಪರಮಪಿತ ಪರಮಾತ್ಮನ ಜೊತೆ ನಿಮಗೆ ಸಂಭಂಧವೇನು? ಅವಶ್ಯಕವಾಗಿ ತಂದೆ ಎಂದು ಹೇಳುತ್ತಾರೆ. ಅವರು ಎಲ್ಲಾ ಆತ್ಮಗಳ ತಂದೆ ಆಗಿದ್ದಾರೆ. ಶಿವಬಾಬಾರವರಿಗೆ ತಾವೆಲ್ಲರು ಮಕ್ಕಳು ಆಗಿದ್ದೀರಿ. ಈ ಸಮಯದಲ್ಲಿ ಭಕ್ತರು ಎಲ್ಲರು ಭಗವಂತನನ್ನೇ ನೆನಪು ಮಾಡುತ್ತಾರೆ. ಭಕ್ತರು ಹೇಳುತ್ತಾರೆ. ಹೇ ಭಗವಂತ ನಮಗೆ ಭಕ್ತಿಯ ಫಲ ಕೊಡು. ನಾವು ದುಃಖಗಳಾಗಿದ್ದೇವೆ. ಜೀವನ್ಮುಕ್ತಿ ಕೊಡು. ಸಾಧುಗಳು ಸಾಧನೆ ಮಾಡುತ್ತಾರೆ. ನಮಗೆ ಮುಕ್ತಿ ಜೀವನ್ಮುಕ್ತಿ ಬೇಕೆಂದು ಈಗ ಎಲ್ಲರು ಕೂಗುತ್ತಾರೆ. ಪತಿತ ಪಾವನ ಬಾ ಪಾವನ ಮಾಡು ಎಂದು. ತಂದೆ ಮಕ್ಕಳಿಗೆ ಆದೇಶ ಕೊಡುತ್ತಾರೆ ಈ ರೀತಿ ತಿಳಿಸಿ – ನಾವು ಆತ್ಮಗಳು ಶಾಂತಿಧಾಮ ನಿವಾಸಿಗಳು ಈಗ ಬಂದು ಶರೀರ ಬಿಟ್ಟು ಮತ್ತೊಂದು ಪಡೆದು ಪಾತ್ರ ಮಾಡಬೇಕಾಗಿದೆ. ವರ್ಣಗಳನ್ನು ದಾಟಿ ಬರಬೇಕಾಗುತ್ತದೆ. ಈ ಡ್ರಾಮ ಅವಿನಾಶಿಯಾಗಿ ಮಾಡಲ್ಪಟ್ಟಿದೆ. ಚಕ್ರವು ಸುತ್ತುತ್ತಲೇ ಇರುತ್ತದೆ. ಹೇಗೆ ಸುತುತ್ತಾದೆಂಬುದನ್ನೂ ಸಹ ತಿಳಿದುಕೊಳ್ಳಬೇಕಾಗುತ್ತದೆ. ಪತಿತ ಪಾವನರು ಒಬ್ಬರೇ. ರಚಯಿತನು ಒಬ್ಬರೆ. ಜಗತ್ತು ಒಂದೇ ಆಗಿದೆ. ಪಾವನರಿಂದ ಪತಿತರು ಹೇಗೆ ಆದೆವು?ಎಂದು ಕೇಳಿ. ರಾವಣನ ಅಸುರಿ ಮತದಂತೆ ನಡೆದುಕೊಂಡಿದ್ದರಿಂದ 5 ವಿಕಾರಗಳು ಬಂದು ಬಿಡುತ್ತವೆ 5 ವಿಕಾರಗಳಿಗೆ ರಾವಣನ ಮತ ಎಂದು ಹೇಳಲಾಗುತ್ತದೆ. ಆದ್ದರಿಂದಲೇ ರಾವಣನನ್ನು ಸುಡುತ್ತಾರೆ. ಆದರೆ ರಾವಣ ಸುಟ್ಟು ಹೋಗುವುದೇ ಇಲ್ಲ. ಈಗ ತಂದೆ ಹೇಳುತ್ತಾರೆ ಈಗ ರಾವಣನ ಮೇಲೆ ವಿಜಯ ಪಡೆಯಬೇಕಾಗಿದೆ. ಯಾರು ವಿಜಯ ಪಡೆಯುತ್ತಾರೆ ಅವರೇ ರಾಮ ರಾಜ್ಯದ ಮಾಲಿಕರಾಗುತ್ತಾರೆ. ಇದಾಗಿದೆ ಅಂತಿಮ ಜನ್ಮ ಅರ್ಥಾತ್ ಸೃಷ್ಟಿಯ ಅಂತ್ಯವಾಗಿದೆ. ಸೃಷ್ಟಿಯ ಆದಿಯನ್ನು ತಂದೆಯೇ ಮಾಡುತ್ತಾರೆ. ಅಂತ್ಯದ ವಿನಾಶವನ್ನು ತಂದೆಯೇ ಮಾಡುತ್ತಾರೆ. ತಂದೆ ಹೇಳುತ್ತಾರೆ ನಾನು ಹೊಸ ಜಗತ್ತಿನ ತಳಹದಿಯನ್ನು ಹಾಕುತ್ತೇನೆ ಹಾಗೂ ಹಳೆಯ ಜಗತ್ತಿನ ವಿನಾಶವನ್ನು ತಂದೆಯೇ ಮಾಡಿಸುತ್ತೇನೆ. ಬ್ರಹ್ಮನಿಂದ ಸ್ಥಾಪನೆಯೆಂದು ಹೇಳಲಾಗುತ್ತದೆಯಾದರೂ. ಬ್ರಹ್ಮಾ ಒಬ್ಬರಿಂದಲೇ ಆಗುವುದಿಲ್ಲ. ಬ್ರಹ್ಮಾಕುಮಾರ ಹಾಗೂ ಬ್ರಹ್ಮಾಕುಮಾರಿಯ ಮೂಲಕ ಭಾರತವನ್ನು ದೈವೀ ಹೂದೋಟವನ್ನಾಗಿ ಮಾಡುತ್ತೇನೆ. ಇದಾಗಿದೆ ಮುಳ್ಳಿನ ಕಾಡು ಇದಕ್ಕೆ ಈಗ ಬೆಂಕಿ ಬೀಳಲಿದೆ. ಈಗ ನೀವು ಜಾಗೃತರಾಗಿದ್ದೀರಿ. ಮನುಷ್ಯರು ನಿದ್ರೆ ಮಾಡುತ್ತಿದ್ದಾರೆ ಇಲ್ಲಿ ದುಃಖ ಅಶಾಂತಿ ಇದೆ. ಮಕ್ಕಳು ಸದಾ ತಮ್ಮ ಶಾಂತಿಧಾಮ ಮಧುರ ಮನೆಯನ್ನು ನೆನಪು ಮಡಬೇಕಾಗಿದೆ. ಆಗ ಮಧುರ ರಾಜ್ಯಭಾಗ್ಯವು ಆಸ್ತಿಯ ರೂಪದಲ್ಲಿ ಪ್ರಾಪ್ತಿಯಾಗುತ್ತದೆ ಆಗಿತ್ತು. ಈಗ ಈ ರಾವಣ ರಾಜ್ಯವನ್ನು ಮರೆಯುತ್ತಾ ಹೋಗಿ ಭಾರತವು ಫರಿಸ್ತಾನ ಆಗಿದೆ ಈಗ ಅದೇ ಸ್ಮಶಾನ ಆಗಿದೆ. ಪುನಃ ಫರಿಸ್ತಾನ ಆಗುತ್ತದೆ. ಇದಾಗಿದೆ ಚಕ್ರ. ಹೊಸ ವಿಶ್ವ ನಿರ್ಮಾಣವಾಗಿ ಬಿಟ್ಟರೆ ಹಳೆಯ ಜಗತ್ತಿಗೆ ಬೆಂಕಿ ಹತ್ತುತ್ತದೆ. ಈಗ ನೀವು ಹೊಸ ಜಗತ್ತಿಗೆ ತಯಾರು ಆಗಬೇಕಾಗಿದೆ. ಅಲ್ಲಿಗೆ ಹೋಗಿ, ವಜ್ರ ವೈಡೂರ್ಯಗಳ ಮಹಲ್ ಮಾಡುತ್ತೀರಿ. ಈಗಿರುವವಂತು ಗುಡಿಸಲು ಆಗಿದೆ. ಕಲ್ಪಕಲ್ಪದಲ್ಲಿಯು ಪತಿತ ಜಗತ್ತಿನಿಂದ ಪಾವನ ಜಗತ್ತು ಆಗುತ್ತದೆ. ಪಾವನ ಇರುವುದು ಪತಿತ ಆಗುತ್ತದೆ. ಪತಿತ ಕ್ರಮಣವಾಗಿ ಆಗುತ್ತದೆ. ಮನೆ ಹೊಸದು ಬೇಗ ನಿರ್ಮಾಣ ಆಗುತ್ತದೆ. ಹಳೆಯದು ಆಗುವುದರಲ್ಲಿ ಸಮಯ ಬೇಕಾಗುತ್ತದೆ. ಜ್ಞಾನದಿಂದ ನೀವು ಹೊಸ ವಿಶ್ವಕ್ಕೆ ಮಾಲಿಕರಾಗುತ್ತೀರಿ. ಈಗನೀವು 16 ಕಲಾ ಸಂಪನ್ನರು ಆಗುತ್ತಿದ್ದೀರಿ ನಂತರ ಎರಡು ಕಲೆ ಕ್ರಮೇಣ ನಿಧಾನವಾಗಿ ಕಡಿಮೆ ಆಗಿ 14 ಕಲೆ ಆಗುತ್ತದೆ. ಈ ಆಟ ಭಾರತ ದೇಶದ್ದೇ ಆಗಿದೆ. ರಾವಣನಿಂದ ಸೋಲೇ ಸೋಲು ಈಗ ಶ್ರೀಮತದ ಆಧಾರದ ಮೇಲೆ ವಿಜಯವನ್ನು ಪಡೆಯುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಶ್ರೀಮತದಂತೆ ಭಾರತವನ್ನು ಪಾವನ ಮಾಡುವ ಸೇವೆ ಮಾಡಬೇಕಾಗಿದೆ. ರಾವಣನ ಮತವನ್ನು ಬಿಟ್ಟು ಒಬ್ಬ ತಂದೆಯ ಶ್ರೀಮತದಂತೆ ನಡೆಯಬೇಕಾಗಿದೆ.

2. ಈ ದುಃಖಧಾಮವನ್ನು ಮರೆತು ತನ್ನ ಮಧುರ ಮನೆ ಶಾಂತಿಧಾಮವನ್ನು ನೆನಪು ಮಾಡಬೇಕಾಗಿದೆ. ಸ್ವಯಂನ್ನು ಹೊಸ ಜಗತ್ತಿಗೆ ಹೋಗಲು ತಯಾರು ಮಾಡಿಕೊಳ್ಳಬೇಕಾಗಿದೆ.

ವರದಾನ:-

ಒಬ್ಬೊಬ್ಬ ಬ್ರಾಹ್ಮಣ ಆತ್ಮ, ಶ್ರೇಷ್ಠ ಆತ್ಮನ ಪ್ರತೀ ಕರ್ಮದಲ್ಲಿ ಬ್ರಹ್ಮಾ ತಂದೆಯ ಕರ್ಮದ ದರ್ಪಣವಾಗಲಿ. ಬ್ರಹ್ಮಾ ತಂದೆಯ ಕರ್ಮವು ತಮ್ಮ ಕರ್ಮದ ದರ್ಪಣದಲ್ಲಿ ಕಂಡುಬರಲಿ. ಯಾವ ಮಕ್ಕಳು ಪ್ರತೀ ಕರ್ಮದಲ್ಲಿ ಇಷ್ಟೂ ಗಮನವನ್ನಿಡುತ್ತಾರೆಯೋ ಅವರು ಮಾತನಾಡುವ, ನಡೆಯುವ, ಏಳುವ, ಕುಳಿತುಕೊಳ್ಳುವ, ಎಲ್ಲಾ ಕರ್ಮವು ಬ್ರಹ್ಮಾ ತಂದೆಯ ಸಮಾನವಾಗುವುದು. ಪ್ರತೀ ಕರ್ಮವು ವರದಾನಕ್ಕೆ ಯೋಗ್ಯವಾಗಿರುವುದು, ಮುಖದಿಂದ ಸದಾ ವರದಾನವೇ ಬರುತ್ತಿರುತ್ತದೆ. ಸಾಧಾರಣ ಕರ್ಮದಲ್ಲಿಯೂ ವಿಶೇಷತೆಯೇ ಕಾಣಿಸುತ್ತದೆ. ಅಂದಾಗ ಈ ಸರ್ಟಿಫಿಕೇಟ್ ತೆಗೆದುಕೊಂಡಾಗ ತಂದೆಯ ಸಮಾನ ಎಂದು ಹೇಳಲಾಗುವುದು.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:
ತಂದೆಗೆ ಮಕ್ಕಳೊಂದಿಗೆ ಇಷ್ಟೂ ಪ್ರೀತಿಯಿದೆ, ಆದ್ದರಿಂದ ಸದಾ ಹೇಳುತ್ತಾರೆ – ಮಕ್ಕಳು ಯಾರಾಗಿದ್ದೀರಿ, ಹೇಗಿದ್ದೀರಿ ನನ್ನವರಾಗಿದ್ದೀರಿ. ಅದೇರೀತಿ ತಾವೂ ಸಹ ಸದಾ ಪ್ರೀತಿಯಲ್ಲಿ ಲವಲೀನವಾಗಿರಿ, ಹೃದಯದಿಂದ ಹೇಳಿ – ಬಾಬಾ, ತಾವೇ ನನಗೆ ಸರ್ವಸ್ವವಾಗಿದ್ದೀರಿ. ಎಂದಿಗೂ ಅಸತ್ಯ ರಾಜ್ಯದ ಪ್ರಭಾವದಲ್ಲಿ ಬರಬಾರದು, ತಮ್ಮ ಸತ್ಯ ಸ್ವರೂಪದಲ್ಲಿ ಸ್ಥಿತರಾಗಿರಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top