12 January 2022 KANNADA Murli Today | Brahma Kumaris

Read and Listen today’s Gyan Murli in Kannada

January 11, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಂದೆಯಿಂದ ಪೂರ್ಣ ಆಸ್ತಿ ಪಡೆಯಲು ವಿಕಾರಗಳ ದಾನವನ್ನು ಅವಶ್ಯಕವಾಗಿ ಕೊಡಬೇಕು. ದೇಹಿ ಅಭಿಮಾನಿಗಳಾಗಬೇಕು. ಮಮ್ಮಾ ಬಾಬಾ ಎಂದು ಹೇಳುವಿರೆಂದಮೇಲೆ ಅವರಂತೆಯೇ ಯೋಗ್ಯರಾಗಬೇಕು”

ಪ್ರಶ್ನೆ:: -

ಆಸ್ತಿಕರಾಗಿರುವ ಮಕ್ಕಳೂ ಸಹ ಯಾವ ಒಂದು ಮಾತಿನ ಕಾರಣ ನಾಸ್ತಿಕರಾಗುತ್ತಾರೆ?

ಉತ್ತರ:-

ದೇಹಾಭಿಮಾನದ ಕಾರಣ. ಅಂತಹವರು ನಾವೆಲ್ಲಾ ತಿಳಿದುಕೊಂಡಿದ್ದೇವೆ ಎಂದು ಹೇಳುತ್ತಾರೆ. ಹಳೆಯ ನಡವಳಿಕೆ (ಸ್ವಭಾವ) ಬಿಡುವುದೇ ಇಲ್ಲ. ಜ್ಞಾನದ ಗುಂಡು (ಗೋಲಿ) ಬಿದ್ದ ನಂತರವೂ ಮಾಯೆಯ ಗುಂಡು (ಗೋಲಿ) ತಿನ್ನುತ್ತಿರುತ್ತಾರೆ. ನಾನು ಆತ್ಮನಾಗಿದ್ದೇನೆ, ದೇಹೀ ಅಭಿಮಾನಿ ಆಗಬೇಕಾಗಿದೆ, ಈ ಮಾತನ್ನು ಮರೆಯುವುದರಿಂದ ಆಸ್ತಿಕರಾಗಿರುವವರೂ ಸಹ ನಾಸ್ತಿಕರಾಗಿ ಬಿಡುತ್ತಾರೆ. ಈಶ್ವರೀಯ ಮಡಿಲಿನಿಂದ ಸತ್ತು ಹೋಗುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಇಂದಿಲ್ಲದಿದ್ದರೆ ನಾಳೆ…

ಓಂ ಶಾಂತಿ. ಅದು ಸಹ ಗಡಿಯಾರವಾಗಿದೆ, ಇದು ಬೇಹದ್ದಿನ ಗಡಿಯಾರವಾಗಿದೆ. ಅದರಲ್ಲೂ ಕಾಲುಭಾಗ ಅರ್ಧಭಾಗ ಮುಕ್ಕಾಲು ಹಾಗೂ ಒಂದು ಎಂಬಂತೆ ತೋರಿಸಲಾಗಿದೆ ಪೂರ್ಣವಾಗಿ ನಾಲ್ಕೂ ಭಾಗಗಳನ್ನಾಗಿ ಮಾಡಲಾಗಿದೆ 15-15 ನಿಮಿಷಗಳು ಸಿಕ್ಕಿವೆ. ಹಾಗೆಯೇ ಇಲ್ಲಿಯು ಸಹ ಒಂದರಿಂದ ಪ್ರಾರಂಭಿಸಲಾಗುತ್ತದೆ. ಇದರಲ್ಲಿ ಅರ್ಧಕಲ್ಪ ರಾತ್ರಿ ಅರ್ಧಕಲ್ಪ ಹಗಲಾಗಿದೆ. ಹೇಗೆ ನಕ್ಷೆಯಲ್ಲೂ ತೋರಿಸುತ್ತಾರೆ, ಉತ್ತರ ಭಾಗದಲ್ಲಿ ಆರು ತಿಂಗಳು ರಾತ್ರಿ ಇದ್ದರೆ ಅವಶ್ಯವಾಗಿ ದಕ್ಷಣ ಭಾಗದಲ್ಲಿ ಆರು ತಿಂಗಳು ಹಗಲಿರುತ್ತದೆ. ಇಲ್ಲಿಯೂ ಸಹ ಬ್ರಹ್ಮನ ರಾತ್ರಿ ಅರ್ಧಕಲ್ಪವಾದರೆ ಬ್ರಹ್ಮನ ಹಗಲು ಅರ್ಧಕಲ್ಪವಿರುತ್ತದೆ. ಆದರೆ ಇದು ಡ್ರಾಮಾದ ಚಕ್ರವಾಗಿದೆ ಎಂಬುದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ಇದಕ್ಕೆ ಕಲ್ಪವೃಕ್ಷವೆಂತಲೂ ಹೇಳಲಾಗುತ್ತದೆ. ಇದರ ಆಯಸ್ಸು ಎಷ್ಟಾಗಿದೆ, ಹೆಸರೇ ಆಗಿದೆ ಕಲ್ಪವೃಕ್ಷ. ಇಷ್ಟು ಆಯಸ್ಸು ಆಗಿರುವ ದೊಡ್ಡ ವೃಕ್ಷವಂತೂ ಬೇರೆ ಯಾವುದೂ ಇಲ್ಲ. ಆದ್ದರಿಂದ ಇದನ್ನು ಆಲದ ಮರದೊಂದಿಗೆ ಹೋಲಿಸಲಾಗುತ್ತದೆ. ಅದರದ್ದೂ ಸಹ ಬೇರು ಕಳಚಿಕೊಂಡು ವೃಕ್ಷ ಮಾತ್ರ ನಿಂತಿದೆ. ಆದ್ದರಿಂದ ಒಂದು ಕಾಲು ಮುರಿದು ಹೋಗಿದೆ ಎಂದು ಗಾಯನ ಮಾಡಲಾಗಿದೆ. ಬಾಕಿ ಮೂರು ಕಾಲಿನಲ್ಲಿ ನಿಂತಿದೆ ಅರ್ಧಕಲ್ಪ ಹಗಲು ಅರ್ಧಕಲ್ಪ ರಾತ್ರಿ ಹಾಗೂ ಅರ್ಧಕಲ್ಪ ಜ್ಞಾನ ಅರ್ಧಕಲ್ಪ ಭಕ್ತಿ ಎಂಬುದನ್ನು ಪ್ರಪಂಚದಲ್ಲಿ ಯಾರೂ ತಿಳಿದುಕೊಂಡಿಲ್ಲ. ಆ ಗಡಿಯಾರವನ್ನು ಅರ್ಧ ಅರ್ಧ ಮಾಡಲಾಗದು. ಅವರು ಸತ್ಯಯುಗಕ್ಕೇ ಬಹಳ ಸಮಯ ಕೊಟ್ಟಿದ್ದರಿಂದ ಅರ್ಧ ಅರ್ಧ ಆಗುವುದಿಲ್ಲ. ಆಗ ಯಾವುದೇ ಲೆಕ್ಕಚಾರವೂ ಉಳಿಯುವುದಿಲ್ಲ. ಮನುಷ್ಯರು ನಾಸ್ತಿಕ ಹಾಗೂ ಆಸ್ತಿಕ ಶಬ್ದದ ಅರ್ಥವನ್ನು ತಿಳಿದುಕೊಂಡಿಲ್ಲ. ಸೃಷ್ಟಿಯ ಅರ್ಧಕಲ್ಪ ಆಸ್ತಿಕವಾಗಿರುತ್ತದೆ, ಅರ್ಧಕಲ್ಪ ನಾಸ್ತಿಕವಾಗಿರುತ್ತದೆ. ಅಲ್ಲಿ ಆಸ್ತಿಕತನದ ಆಸ್ತಿಯು ತಂದೆಯಿಂದ ಸಿಗುತ್ತದೆ. ಶಿವರಾತ್ರಿ ಯಾವಾಗ ಆಗುತ್ತದೆ, ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ತಂದೆ ಬಂದು ರಾತ್ರಿಯನ್ನು ಹಗಲನ್ನಾಗಿ ಮಾಡಲು ಸಮಯವಂತೂ ಹಿಡಿಸುತದೆಯಲ್ಲವೆ. ತಂದೆಯೇ ಬಂದು ಭಕ್ತಿಯ ಫಲವನ್ನು ಕೊಟ್ಟು ಭಕ್ತಿಯಿಂದ ಬಿಡಿಸಬೇಕಾಗಿದೆ. ಪರಮಪಿತ ಪರಮಾತ್ಮ ಬರುವುದೂ ಅತೀ ಅವಶ್ಯಕವಾಗಿದೆ. ಪತಿತಪಾವನ ಬಾ ಎಂದು ಕರೆಯುತ್ತಾರೆಅಲ್ಲವೆ. ಪತಿತ ಪಾವನ ಯಾರಾಗಿದ್ದಾರೆ ಇದನ್ನು ತಿಳಿದುಕೊಂಡಿಲ್ಲ. ಆದ್ದರಿಂದ ನಾಸ್ತಿಕರೆಂದು ಹೇಳಲಾಗುತ್ತದೆ. ತಿಳಿದುಕೊಂಡವರಲ್ಲೂ ನಂಬರ್ವಾರ್ ಇದ್ದಾರೆ. ಇಲ್ಲಿ ಇರುವವರೂ ಸಹ ಸರಿಯಾಗಿ ತಿಳಿದುಕೊಳ್ಳದ ಕಾರಣ ಆಶ್ಚರ್ಯವಾಗಿ ಕೇಳುತ್ತಾರೆ ಹೇಳುತ್ತಾರೆ ನಂತರ ಓಡಿ ಹೋಗುತ್ತಾರೆ. ಬಾಬಾರವರ ಮೊಟ್ಟ ಮೊದಲ ಆಜ್ಞೆಯಾಗಿದೆ-ಪವಿತ್ರತೆ. ಬಹಳ ಸೆಂಟರ್ಗಳಲ್ಲಿ ವಿಕಾರಿ ಮನುಷ್ಯರೂ ಸಹ ಅಮೃತವನ್ನು ಕುಡಿಯಲು ಹೋಗುತ್ತಾರೆ. ಅಂತವರು ಏನನ್ನೂ ಧಾರಣೆ ಮಾಡಲು ಸಾಧ್ಯವಿಲ್ಲ. ವಿಕಾರವನ್ನೂ ಬಿಡುವುದಿಲ್ಲ. ಯಾರು ಅಮೃತವನ್ನು ಬಿಟ್ಟು ವಿಷ ಕುಡಿಯುತ್ತಾರೊ ಅವರಿಗೆ ಭಸ್ಮಾಸುರ ಎಂದು ಹೇಳಲಾಗುತ್ತದೆ. ಕಾಮ ಚಿತೆಯ ಮೇಲೆ ಏರಿ ಭಸ್ಮ ಆಗಿ ಬಿಡುತ್ತಾರೆ. ದೇವತೆ ಆಗುವುದಿಲ್ಲ. ಆದ್ದರಿಂದ ಮೊದಲು ವಿಕಾರಗಳ ದಾನವನ್ನು ಕೊಡಬೇಕು. ದಾನ ಕೊಟ್ಟು ನಂತರವೇ ನೀವು ಮಮ್ಮ ಬಾಬಾ ಎಂದು ಹೇಳಲು ಯೋಗ್ಯರಾಗುವಿರಿ. ಕ್ರೋಧವೂ ಸಹ ಕಡಿಮೆಯೇನಲ್ಲ. ಕ್ರೋಧದಲ್ಲಿ ಬಂದು ಮೊದಲು ಬೈಯಲು ತೊಡಗುತ್ತಾರೆ ನಂತರ ಹೊಡೆದಾಡಲು ಶುರು ಮಾಡುತ್ತಾರೆ. ಪರಸ್ಪರ ಕೊಲೆಯನ್ನೂ ಸಹ ಮಾಡಿ ಬಿಡುತ್ತಾರೆ. ಸಮಾಚಾರ ಪತ್ರಿಕೆಗಳಲ್ಲಿ ಇಂತಹ ಸುದ್ದಿಗಳನ್ನು ಬಹಳ ಹಾಕುತ್ತಾರೆ. ತಂದೆಯಿಂದ ಆಸ್ತಿ ತೆಗೆದುಕೊಳ್ಳಬೇಕೆಂದಿದ್ದರೆ ಯಾವುದರಿಂದ ದುರ್ಗತಿ ಆಗುತ್ತಿದೆಯೊ ಅದರ ದಾನವನು ಅವಶ್ಯವಾಗಿ ಕೊಡಬೇಕು. ಬಾಬಾ ಹೇಳುತ್ತಾರೆ-ಮಕ್ಕಳೇ ನಿಮಗೆ ಅಶರೀರಗಳಾಗಿ ಹೋಗಬೇಕಾಗಿದೆ. ಆದ್ದರಿಂದ ಈ ದೇಹಭಾನವನ್ನು ಬಿಟ್ಟು ಬಿಡಿ. ಎಷ್ಟೊಂದು ಸಮಯದಿಂದ ನೀವು ದೇಹಾಭಿಮಾನಿಗಳಾಗಿದ್ದೀರಿ. ಸತ್ಯಯುಗದಲ್ಲಿ ನೀವು ಆತ್ಮಾಭಿಮಾನಿಯಾಗಿದ್ದಿರಿ. ಆಗ ನಿಮಗೆ ಗೊತ್ತಿತ್ತು. ನಾವು ಬಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇವೆ. ಅಲ್ಲಿ ಮಾಯೆ ಇರುವುದಿಲ್ಲ. ಆದ್ದರಿಂದಲೇ ದುಃಖದ ಮಾತೂ ಸಹ ಇರುವುದಿಲ್ಲ. ಇಲ್ಲಂತೂ ಯಾರಾದರೂ ಗಣ್ಯ ವ್ಯಕ್ತಿಗಳು ಅನಾರೋಗ್ಯಕ್ಕೋಳಗಾದರೆ ಪೇಪರ್ನಲ್ಲಿ ಹಾಕಿ ಬಿಡುತ್ತಾರೆ. ಅಂತವರನ್ನು ಉಳಿಸಲು ಎಷ್ಟೊಂದು ಪ್ರಯತ್ನ ಮಾಡುತ್ತಾರೆ. ನೋಡಿ ಈ ಸಮಯದಲ್ಲಿ ಪೋಪ್ಗಳಿಗೆ ಎಷ್ಟೊಂದು ಗೌರವಿದೆ. ಆದರೆ ಈ ಸಮಯದಲ್ಲಿ ಎಲ್ಲರೂ ನಾಸ್ತಿಕರಾಗಿದ್ದಾರೆ. ಪರಮಪಿತನನ್ನು ತಿಳಿದುಕೊಂಡಿಲ್ಲವೆಂದ ಮೇಲೆ ನಾಸ್ತಿಕ ಎಂದೇ ಹೇಳಲಾಗುತ್ತದೆಯಲ್ಲವೆ. ಯಾವುದಾದರೂ ತಂದೆಗೆ ಐದು-ಏಳು ಮಕ್ಕಳಿದ್ದಾರೆಂದರೆ ನಮ್ಮ ತಂದೆ ಸರ್ವವ್ಯಾಪಿಯೆಂದು ಹೇಳುತ್ತಾರೇನು? ಇಲ್ಲಿ ಸ್ವಯಂ ತಂದೆಯೇ ಹೇಳುತ್ತಾರೆ ನಾನು ರಚೈತನಾಗಿದ್ದೇನೆ ಹಾಗೂ ಇವರು ನನ್ನ ರಚನೆಯಾಗಿದ್ದಾರೆ. ರಚನೆಯಲ್ಲಿ ರಚೈತ ಹೇಗೆ ವ್ಯಾಪಕನಾಗಲು ಸಾಧ್ಯ. ಎಷ್ಟೊಂದು ಸಹಜ ಮಾತಾಗಿದೆ. ಆದರೂ ತಿಳಿದುಕೊಳ್ಳುವುದಿಲ್ಲ. ಆದ್ದರಿಂದ ಬಾಬಾ ತಿಳಿಸಿಕೊಡುತ್ತಾರೆ, ನಾಸ್ತಿಕರಿಂದ ಆಸ್ತಿಕರನ್ನಾಗಿ ಮಾಡಿರಿ. ಆಗ ಅವರು ಪರಮಪಿತ ಪರಮಾತ್ಮ ನಮ್ಮ ತಂದೆಯಾಗಿದ್ದಾರೆ ಅವರಿಂದ ಆಸ್ತಿ ಪಡೆಯಬೇಕೆನ್ನುವುದು ಅರಿವಾಗುತ್ತದೆ. ಕನ್ಯ ದಾನ ಮಾಡುವಾಗಲೂ ಹಣವನ್ನೇನು ಕೊಡುತ್ತಾರೊ ಅದಕ್ಕೂ ಆಸ್ತಿಯೆಂದೇ ಹೇಳಲಾಗುತ್ತದೆ. ಸುಖದ ಆಸ್ತಿ ಯಾರು ಕೊಡುತ್ತಾರೆ, ದುಃಖದ ಆಸ್ತಿ ಯಾರು ಕೊಡುತ್ತಾರೆ ಎಂಬುದೂ ಸಹ ಯಾರೂ ತಿಳಿದುಕೊಂಡಿಲ್ಲ. ಭಾರತವಾಸಿಗಳು ಸ್ವರ್ಗವನ್ನೆ ಮರೆತು ಬಿಟ್ಟಿದ್ದಾರೆ. ಸ್ವರ್ಗವೆಂಬ ಹೆಸರನ್ನೂ ಹೇಳುತ್ತಾರೆ, ಸ್ವರ್ಗಸ್ಥರಾದರೆಂದೂ ಹೇಳುತ್ತಾರೆ. ಆದರೆ ಏನನ್ನೂ ತಿಳಿದಿಕೊಂಡಿಲ್ಲ. ಆದ್ದರಿಂದ ಬಾಬಾ ಹೇಳುತ್ತಾರೆ, ಮನುಷ್ಯರು ಸಂಪೂರ್ಣ ತುಚ್ಚ ಬುದ್ದಿಯವರಾಗಿದ್ದಾರೆ, ಪತಿತ ಪಾವನ ಬಾ ಎಂದು ಕರೆಯುತ್ತಾರೆ, ಆದರೆ ಸ್ವಯಂನ್ನು ಪತಿತರೆಂದು ತಿಳಿದುಕೊಳ್ಳುವುದಿಲ್ಲ. ಅದಕ್ಕಾಗಿ ಬಾಬಾ ಹೇಳುತ್ತಾರೆ ಮೊದಲು ತಂದೆಯ ಬಗ್ಗೆ ತಿಳಿಸಿಕೊಡಿ. ಪರಮಪಿತ ಪರಮಾತ್ಮನೊಂದಿಗೆ ನಿಮ್ಮ ಸಂಬಂಧ ಏನು? ಆಗ ನಮಗೆ ಗೊತ್ತಿಲ್ಲವೆನ್ನುತ್ತಾರೆ. ಆಗ ಹೇಳಿ ತಂದೆಯನ್ನು ತಿಳಿದುಕೊಂಡಿಲ್ಲವೆ! ಲೌಕಿಕ ತಂದೆಯಂತೂ ಶರೀರದ ರಚೈತನಾಗಿದ್ದಾರೆ, ಆದರೆ ಪರಮಾತ್ಮ ಆತ್ಮಗಳ ರಚೈತನಾಗಿಧಾರೆ. ಅಂದಮೇಲೆ ಏನು ನೀವು ತಂದೆಯನ್ನು ತಿಳಿದುಕೊಂಡಿಲ್ಲವೆ? ಎಷ್ಟೊಂದು ಸಹಜವಾಗಿದೆ. ಆದರೆ ಮಕ್ಕಳ ಬುದ್ದಿಯಲ್ಲಿ ಇದೆಲ್ಲಾ ಕುಳಿತು ಕೊಳ್ಳುವುದಿಲ್ಲ. ಇಲ್ಲವೆಂದರೆ ತಕ್ಷಣ ಸರ್ವೀಸ್ ನಲ್ಲಿ ತೊಡುಗುತ್ತಾರೆ. ಪರಮಪಿತ ಪರಮಾತ್ಮನೊಂದಿಗೆ ಏನು ಸಂಬಂಧ?ಪ್ರಜಾಪಿತ ಬ್ರಹ್ಮನೊಂದಿಗೆ ಏನು ಸಂಬಂಧ? ಅವರಾಗಿದ್ದಾರೆ ಪರಮಪಿತ, ಇವರಾಗಿದ್ದಾರೆ ಪ್ರಜಾಪಿತ, ಅಂದಮೇಲೆ ಪ್ರಜಾಪಿತನಂತೂ ಇಲ್ಲಿಯೇ ಇರಬೇಕಲ್ಲವೆ. ಪ್ರಜಾಪಿತ ಬ್ರಹ್ಮನ ಹೆಸರನ್ನು ಕೇಳಿದ್ದೀರಾ? ನಿರಾಕಾರ ಪರಮಾತ್ಮ ಸೃಷ್ಟಿಯನ್ನು ಹೇಗೆ ರಚಿಸಿ ದರು? ಆದ್ದರಿಂದ ಪ್ರಜಾಪಿತ ಸಾಕಾರವಾಗಿದ್ದಾರೆ ಅವರ ಮಕ್ಕಳು ಬಿ.ಕೆ. ಯರು ಅವಶ್ಯವಾಗಿ ಇರುತ್ತಾರೆ. ಮಕ್ಕಳೇ ಆಸ್ತಿಗೆ ಯೋಗ್ಯರಾಗುತ್ತಾರೆ. ಆದರೆ ಚೆನ್ನಾಗಿರುವ ಮಕ್ಕಳೂ ಸಹ ಯುಕ್ತಿಯಿಂದ ತಿಳಿಸಿ ಕೊಡುವುದಿಲ್ಲ. ಹೊಸ ಹೊಸ ಮಾತನ್ನು ಬಾಬಾ ತಿಳಿಸಿ ಕೊಡುತ್ತಲೇ ಇರುತ್ತಾರೆ ಆದರೂ ಮಕ್ಕಳು ತಮ್ಮ ಹಳೆಯ ಅಭ್ಯಾಸದಂತೆಯೇ ನಡೆಯುತ್ತಿರುತ್ತಾರೆ. ಹೊಸ ಧಾರಣೆಯನ್ನು ಮಾಡುವುದಿಲ್ಲ. ದೇಹ ಅಭಿಮಾನವಿರುತ್ತದೆ. ಆದ್ದರಿಂದ ನನಗೆಲ್ಲಾ ಗೊತ್ತು ಎನ್ನುತ್ತಾರೆ, ಆದರೆ ಮೊದಲ ಮಾತನ್ನೇ ತಿಳಿಯದಿರುವ ಕಾರಣ ತಂದೆಗೆ ವಿಚ್ಚೇದನ ಕೊಟ್ಟು ಬಿಡುತ್ತಾರೆ. ಆಸ್ತಿಕರಿಂದ ನಾಸ್ತಿಕರಾಗಿ ಬಿಡುತ್ತಾರೆ. ಈಶ್ವರೀಯ ಮಡಿಲಲ್ಲಿ ಬಂದು ನಂತರ ಸತ್ತು ಹೋಗುತಾರೆ. ಮಮ್ಮಾ ಬಾಬಾ ಎಂತಲೂ ಹೇಳುತ್ತಾರೆ, ನಂತರ ನೋಡಿ ಹೇಗೆ ಸತ್ತು ಹೋಗುತ್ತಾರೆ. ಮಾಯೆಯ ಪೆಟ್ಟು/ದೇಹಾಭಿಮಾನದ ಪೆಟ್ಟು ತಿಂದು ನಂತರ ಸತ್ತಂತೆ. ಇದಾಗಿದೆ ಜ್ಞಾನದ ಗುಂಡು ಅದಾಗಿದೆ ಮಾಯೆಯ ಗುಂಡು. ಮಾಯೆ ಇಂತಹ ಗುಂಡು ಹೊಡೆಯುತ್ತದೆ ಬರುವುದನ್ನೇ ಬಿಟ್ಟು ಬಿಡುತ್ತಾರೆ. ನೀವು ಪಾಂಡವರು, ನಿಮ್ಮ ಯುದ್ದ ಮಾಯೆಯೊಂದಿಗಿದೆ.

ನನ್ನನ್ನು ಜ್ಞಾನ ಸಾಗರನೆಂದು ಕರೆಯುತ್ತಾರೆಂದು ತಂದೆ ತಿಳಿಸುತ್ತಾರೆ. ಜ್ಞಾನ ಸಾಗರನಿಂದ ಜ್ಞಾನ ಗಂಗೆಯರು ಹೊರಟಿದ್ದಾರೆಯೋ ಅಥವಾ ನೀರಿನ ಗಂಗೆ ಹೊರಟಿದೆಯೊ?ಅಲ್ಲಿ ಗಂಗೆಯ ಚಿತ್ರವನ್ನೂ ದೇವಿಯ ರೂಪದಲ್ಲಿಯೇ ತೋರಿಸುತ್ತಾರೆ. ಆದರೂ ಇವರು ಯಾರೆಂಬುದು ಬುದ್ದಿಯಲ್ಲಿ ಬರುವುದಿಲ್ಲ. ದೇವೀ ದೇವತೆಗಳಂತೂ ಯಾರಿಗೂ ಅಮೃತವನ್ನು ಕುಡಿಸಲು ಸಾಧ್ಯವಿಲ್ಲ. ಯಜ್ಞವನ್ನು ಯಾವಾಗಲೂ ಬ್ರಾಹ್ಮಣರಿಂದಲೇ ರಚಿಸಲಾಗುತ್ತದೆ. ಯಜ್ಞದಲ್ಲಿ ಯುದ್ದದ ಮಾತು ಎಲ್ಲಿಂದ ಬರಬೇಕು? ಈ ಎಲ್ಲಾ ಮಾತುಗಳನು ಬುದ್ಧಿವಂತ ಮಕ್ಕಳೇ ತಿಳಿದುಕೊಳ್ಳುತ್ತಾರೆ. ಬುದ್ದು (ತಿಳುವಳಿಕೆ ಇಲ್ಲದ) ಮಕ್ಕಳು ಮರೆತು ಬಿಡುತ್ತಾರೆ. ವಿದ್ಯಾಲಯಗಳಲ್ಲೂ ನಂಬರ್ ವಾರ್ ಅದೃಷ್ಟವಂತರಿರುತ್ತಾರೆ. ಒಂದು ವೇಳೆ ಶಾಲೆಯಲ್ಲಿ ಹನ್ನೆರಡು ತಿಂಗಳು ಕುಳಿತರೂ ಸಹ ವಿದ್ಯೆಯ ಕಡೆಗೆ ಗಮನವಿಲ್ಲದಿದ್ದರೆ ಓದಲು ಸಾಧ್ಯವಿಲ್ಲ. ತಂದೆಯಂತೂ ಆತ್ಮರಿಗೆ ಓದಿಸುತ್ತಾರೆ. ಅಲ್ಲಿಯಂತೂ ಮನುಷ್ಯರು ಓದಿಸುತ್ತಾರೆ. ತಂದೆಯಂತೂ ಹೇ ಆತ್ಮರೆ ಕೇಳುತ್ತಿರುವಿರಾ? ಎಂದು ಆತ್ಮರೊಂದಿಗೆ ಮಾತನಾಡುತ್ತಾರೆ. ಬೇರೆ ಯರೂ ಈ ರೀತಿ ಆತ್ಮರೊಂದಿಗೆ ಮಾತನಾಡಲು ಸಾಧ್ಯವಿಲ್ಲ. ಪುನಃ ತಂದೆ ಕೇಳುತ್ತಾರೆ-ಹೇ ಅದೃಷ್ಟ ನಕ್ಷತ್ರಗಳೇ ನಾನು ನಿಮಗೆ ಓದಿಸುತ್ತಿದ್ದೇನೆಂಬುದನ್ನು ತಿಳಿದುಕೊಂಡಿರುವಿರಾ? ಆತ್ಮನೇ ಮಾಡುತ್ತದೆ ಹಾಗೂ ಮಾಡಿಸುತ್ತದೆ. ಮಾಡಿ ಮಾಡಿಸುವಂತವರು ಆತ್ಮನೂ ಆಗಿದೆ, ಪರಮಾತ್ಮನೂ ಆಗಿದ್ದಾರೆ. ಹೇಗೆ ಆತ್ಮ ಆತ್ಮನಿಂದ ಮಾಡಿಸುತ್ತದೆಯೋ ಹಾಗೆಯೇ ಪರಮಾತ್ಮ ತಂದೆಯೂ ಆತ್ಮರಿಂದ ಮಾಡಿಸುತ್ತಾರೆ. ನಾನು ನೀವು ಆತ್ಮರಿಂದ ಒಳ್ಳೆಯ ಕೆಲಸವನ್ನು ಮಾಡಿಸುತ್ತೇನೆಂದು ತಂದೆ ಹೇಳುತ್ತಾರೆ. ಎಲ್ಲರಿಗೂ ನೀವು ತಂದೆಯ ಪರಿಚಯ ಕೊಡಬೇಕು. ಮೊಟ್ಟ ಮೊದಲು ಈ ಪ್ರಶ್ನಾವಳಿಗಳನ್ನು ತಯಾರಿಸಿ, ಇವರಾಗಿದ್ದಾರೆ ಪಾರಲೌಕಿಕ ಪರಮಪಿತ ಪರಮಾತ್ಮ, ಅವರಾಗಿದ್ದಾರೆ ಲೌಕಿಕ ಪಿತ. ಆತ್ಮ ಹಾಗೂ ಶರೀರ ಬೇರೆ ಬೇರೆಯಾಗಿದೆ ಲೌಕಿಕ ತಂದೆ ಶರೀರದ ಪಿತನಾಗಿದ್ದಾರೆ. ಪರಮಾತ್ಮ ಆತ್ಮಗಳ ಪಿತನಾಗಿದ್ದಾರೆ. ಅವರಾಗಿದ್ದಾರೆ ಹಿರಿಯ ತಂದೆ. ಉಳಿದ ಎಲ್ಲಾ ಭಕ್ತರು ಅವರನ್ನೇ ನೆನಪು ಮಾಡುತ್ತಾರೆ. ಸರ್ವರ ಪತಿತ ಪಾವನ ಅವರೇ ಆಗಿದ್ದಾರೆ. ಇಂದಿನ ದಿನಗಳಲ್ಲಿ ಅನೇಕ ಗುರುಗಳಿದ್ದಾರೆ. ಅವರು ಸ್ವಯಂಗೆ ಜಗತ್ ಗುರು ಎಂದು ಹೆಸರಿಟ್ಟುಕೊಳ್ಳುತ್ತಾರೆ. ಜಗತ್ ಅಂಬೆಯರೂ ಬಹಳ ಜನ ಹುಟ್ಟಿಕೊಂಡಿದ್ದಾರೆ. ಇದೆಲ್ಲವೂ ಸುಳ್ಳಾಗಿದೆ. ಸುಳ್ಳಿನಲ್ಲಿ ಸತ್ಯದ ಅರಿವಾಗುವುದು ಕಷ್ಟವಾಗಿದೆ. ದೊಡ್ಡ ದೊಡ್ಡ ಹೆಸರನ್ನು ಇಟ್ಟುಕೊಂಡು ಕುಳಿತಿರುತ್ತಾರೆ. ಆದರೆ ಸತ್ಯವನ್ನು ಮುಚ್ಚಿಡಲು ಆಗುವುದಿಲ್ಲ. ಸತ್ಯವು ಎಂದೂ ಬಚ್ಚಿಡಲಾಗುವುದಿಲ್ಲವೆಂದು ಹೇಳುತ್ತಾರಲ್ಲವೆ. ಏಕೆಂದರೆ ನೃತ್ಯವಂತೂ ಪ್ರಸಿದ್ದಿಯಾಗಿದೆ. ನೀವೀಗ ಜ್ಞಾನವನ್ನು ಧಾರಣೆ ಮಾಡಿ ಆಸ್ತಿಕರಾಗಿರುವಿರಿ ಅಂದಮೇಲೆ ಸ್ವರ್ಗದಲ್ಲಿ ನೃತ್ಯ ಮಾಡಿರಿ. ದೇವತೆಗಳೇ ನೃತ್ಯ ಮಾಡುತ್ತಾರಲ್ಲವೆ. ಪತಿತ ಪ್ರಪಂಚವೇ ನರಕವಾಗಿದೆ. ಇಂತಹ ಪತಿತ ನರಕ ಪ್ರಪಂಚವನ್ನು ಸ್ವರ್ಗ ಪಾವನವನ್ನಾಗಿ ಯಾವ ಗುರುಗಳು ಅಥವಾ ಸಾಧುಗಳು ಮಾಡಲು ಸಾಧ್ಯವಿಲ್ಲ. ಸತ್ಯಹೀನ ನರಕವೆಂದು ಈ ಜಗತ್ತಿಗೇ ಹೇಳಲಾಗುತ್ತದೆ. ಸ್ವರ್ಗಕ್ಕೆ ಶಿವಾಲಯವೆಂದು ಹೇಳಲಾಗುತ್ತದೆ. ಪರಮಪಿತ ನಮ್ಮ ತಂದೆಯಾಗಿದ್ದಾರೆ, ಅವರು ಪ್ರಜಾಪಿತ ಬ್ರಹ್ಮನ ಮೂಲಕನೇ ಬ್ರಾಹ್ಮಣರ ರಚನೆ ಮಾಡುತ್ತಾರೆ. ಆದ್ದರಿಂದ ನಾವು ಶಿವಬಾಬಾರವರ ಮೊಮ್ಮಕ್ಕಳೂ ಆಗಿದ್ದೇವೆ. ಆಸ್ತಿಯನ್ನೂ ಸಹ ಅವರೇ ಕೊಡುತ್ತಾರೆ. ಜ್ಞಾನಸಾಗರನೂ ಅವರೇ ಆಗಿದ್ದಾರೆ. ಅವರು ಅವಿನಾಶಿ ಜ್ಞಾನರತ್ನಗಳನ್ನು ಬ್ರಹ್ಮನ ಮೂಲಕ ಕೊಡುತ್ತಾರೆ. ಮೊದಲು ಬ್ರಹ್ಮಾರವರಿಗೂ ಸಿಗುತ್ತದೆ ನಂತರ ಅವರ ವಂಶಾವಳಿಗೆ ಸಿಗುತ್ತದೆ. ಲೌಕಿಕ ಶಾಲೆಗಳಲ್ಲಿ ಕೆಲವರು ಕೊನೆಯಲ್ಲಿ ಬಂದರೂ ವಿದ್ಯೆಯನ್ನು ಚೆನ್ನಾಗಿ ಓದುವುದರಿಂದ ತೀವ್ರವಾಗಿ ಮುಂದುವರಿಯುತ್ತಾರೆ. ಇಲ್ಲಿಯೂ ಸಹ ಚೆನ್ನಾಗಿ ಓದಬೇಕು ಹಾಗೂ ಓದಿಸಬೇಕು. ಯಾರು ಚೆನ್ನಾಗಿ ಧಾರಣೆ ಮಾಡುವುದಿಲ್ಲವೊ ಅವರಲ್ಲಿ ಏನಾದರೂ ಕೊರತೆಗಳು ಇರುತ್ತವೆ, ಇಂತಹವರು ಅನ್ಯರನ್ನು ತನ್ನ ಸಮಾನ ಮಾಡಿಕೊಳ್ಳಲು ಸಾಧ್ಯವಿಲ್ಲ. ಕಾಮ ವಿಕಾರದ ನಶೆ ಸ್ವಲ್ಪವೇ ಸ್ವಲ್ಪ ಏರಿದರೂ ಏನೂ ಧಾರಣೆ ಆಗುವುದಿಲ್ಲ. ಬಾಬಾ ಕಾಮ ವಿಕಾರದ ಬಿರುಗಾಳಿ ಬಹಳ ಬರುತ್ತದೆ ಬೆತಾಳವನ್ನಾಗಿ ಮಾಡುತ್ತದೆಯೆಂದು ಮಕ್ಕಳು ತಂದೆಗೆ ಪತ್ರ ಬರೆಯುತ್ತಾರೆ.

ಬಾಬಾ ಹೇಳುತ್ತಾರೆ-ಕಾಮ ಮಹಾಶತ್ರುನಾಗಿದೆ. ಯೋಗಬಲದಿಂದ ವಿಜಯಗಳಾಗಿರಿ. ಕಲ್ಪದ ಮೊದಲೂ ಸಹ ನೀವೇ ಅದರ ಮೇಲೆ ವಿಜಯಗಳಾಗಿದ್ದೀರಿ. ತಂದೆಯ ಆಸನದಲ್ಲಿ ಕುಳಿತಿರುವಿರಿ. ಇವರ ಹಿಂದೆ ರಾಯಲ್ ಮನೆತನವು ಸಹ ಇದೆ. ಕೇವಲ ಒಂದು ಜನ್ಮ ಪವಿತ್ರವಾಗುವುದರಿಂದ ಬಹಳ ಶ್ರೇಷ್ಠ ಪದವಿಯನ್ನು ಪಡೆಯುವಿರಿ. ಪವಿತ್ರವಾಗಿರದಿದ್ದರೆ. ಬಹಳಷ್ಟು ಕಳೆದುಕೊಳ್ಳುವಿರಿ. ನಮ್ಮ ಎದುರಲ್ಲಿಯೇ ಮೃತ್ಯು ನಿಂತಿದೆ ಅಪಘಾತ ಮುಂತಾದವುಗಳು ಎಷ್ಟೊಂದು ಆಗುತ್ತಿರುತ್ತವೆ. ರಜೋಪ್ರಧಾನದ ಸಮಯದಲ್ಲಿ ಇಷ್ಟೊಂದು ಮೃತ್ಯು ಸಂಭವಿಸುವುದಿಲ್ಲ. ಈಗಂತೂ ವಿಪರೀತವಾಗಿದೆ. ಮೊದಲು ಇಷ್ಟೊಂದು ಯಂತ್ರ ಮುಂತಾದವುಗಳಿರಲಿಲ್ಲ. ಮೊದಲು ಯುದ್ದವು ವಿಮಾನ ಅಥವಾ ಹಡುಗುಗಳಲ್ಲಿ ಆಗುತ್ತಿರಲಿಲ್ಲ. ಇದೆಲ್ಲವೂ ಇತ್ತೀಚೆಗೆ ಕಂಡು ಹಿಡಿದಿದ್ದಾರೆ. ಮೊದಲು ಸತ್ಯಯುಗದಲ್ಲಿ ಇತ್ತು. ಅಂದಮೇಲೆ ಸಂಗಮಯುಗದಲ್ಲೂ ಇರಲೇಬೇಕು. ವಿಜ್ಞಾನದ ಸುಖವೆಲ್ಲವೂ ಪುನಃ ನಿಮಗೆ ಸ್ವರ್ಗದಲ್ಲಿ ಸಿಗಬೇಕಾಗಿದೆ. ವಿಮಾನಗಳನ್ನು ಮಾಡುವವರು ಪುನಃ ಅಲ್ಲಿಯೂ ಇರುತ್ತಾರೆ. ಪ್ರಜೆಗಳಲ್ಲಿ ಯಾರಾದರೂ ಬರುತ್ತಾರೆ. ಸಂಸ್ಕಾರ ತೆಗೆದುಕೊಂಡು ಹೋಗುತ್ತಾರೆ ನಂತರ ಒಂದು ತಯಾರಿಸುತ್ತಾರೆ. ಈಗ ವಿನಾಶಕ್ಕಾಗಿ ಮಾಡುತ್ತಾರೆ ನಂತರ ಅದು ಸುಖದ ಕೆಲಸದಲ್ಲಿ ಉಪಯೋಗವಾಗುತ್ತದೆ. ಅಲ್ಲಿಯು ವಿಮಾನಗಳು ಸಂಪೂರ್ಣ ಸುಖ ಕೊಡುವಂತಹವು ಆಗಿರುತ್ತವೆ. ಈ ಜಗತ್ತು ಮಾಯೆಯ ಆರ್ಭಟದಿಂದೆ ವಿನಾಶವಾಗಲಿದೆ. ವಿನಾಶವಂತೂ ಅವಶ್ಯವಾಗಿ ಆಗಲೇ ಬೇಕಲ್ಲವೆ. ಬ್ರಾಹ್ಮಣರ ಮೂಲಕ ಯಜ್ಞವನ್ನೂ ರಚಿಸಲಾಗಿದೆ. ಇದರಲ್ಲಿ ಸಂಪೂರ್ಣ ಹಳೆಯ ಪ್ರಪಂಚ ಸ್ವಾಹಾ ಆಗಲಿದೆ. ಬ್ರಾಹ್ಮಣರ ಮೂಲಕವೇ ಯಜ್ಞವನ್ನು ರಚಿಸಲಾಗುತ್ತದೆ. ಈ ಯಜ್ಞದ ಫಲವು ಸಹ ಬ್ರಾಹ್ಮಣರಿಗೆ ಸಿಗುತ್ತದೆ. ಬ್ರಾಹ್ಮಣ ವರ್ಣವೇ ದೇವತಾ ವರ್ಣವಾಗುತ್ತದೆ. ಶಿವಬಾಬಾ ಬ್ರಹ್ಮನ ಮೂಲಕ ಬ್ರಾಹ್ಮಣರನ್ನಾಗಿ ಮಾಡುತ್ತಾರೆ. ಈ ಬ್ರಾಹ್ಮಣರೇ ದೇವತೆಯಾಗುತ್ತಾರೆ. ಎಷ್ಟೊಂದು ನೇರ ಮಾತಾಗಿದೆಯಲ್ಲವೆ. ಆದರೆ ತಂದೆಗೆ ಮಕ್ಕಳನ್ನು ನೋಡಿದಾಗ ಆಶ್ಚರ್ಯ ವಾಗುತ್ತದೆ. ಇಷ್ಟು ಸಹಜವಾದ ಮಾತುಗಳನ್ನೂ ಸಹ ಧಾರಣೆ ಮಾಡುವುದಿಲ್ಲ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯೊಂದಿಗೆ ಸದಾ ಸತ್ಯವಂತರಾಗಿರಬೇಕು. ವಿಕಾರಗಳ ದಾನ ಕೊಟ್ಟು ನಂತರ ಭಸ್ಮಾಸುರರು ಆಗಬಾರದಾಗಿದೆ. ಪವಿತ್ರತೆಯ ಆಜ್ಞೆಯನ್ನು ಅವಶ್ಯವಾಗಿ ಪಾಲನೆ ಮಾಡಬೇಕಾಗಿದೆ.

2. ವಿಕಾರಗಳ ಸೂಕ್ಷ್ಮ ನಶೆಯನ್ನು ಯೋಗ ಭಲದಿಂದ ಭಸ್ಮ ಮಾಡಿಕೊಳ್ಳಬೇಕಾಗಿದೆ. ವಿದ್ಯೆಯನ್ನು ಚೆನ್ನಾಗಿ ಓದಿ ಹಾಗೂ ಓದಿಸಬೇಕಾಗಿದೆ.

ವರದಾನ:-

ತೀವ್ರ ಪುರುಷಾರ್ಥಿಯ ಮುಂದೆ ಸದಾ ಲಕ್ಷ್ಯವಿರುತ್ತದೆ. ಅವರೆಂದಿಗೂ ಇಲ್ಲಿ-ಅಲ್ಲಿ ನೋಡುವುದಿಲ್ಲ, ಮೊದಲ ನಂಬರಿನಲ್ಲಿ ಬರುವಂತಹ ಆತ್ಮರ ಮುಂದೆ ವ್ಯರ್ಥವು ಕಾಣಿಸುತ್ತಿದ್ದರೂ ನೋಡುವುದಿಲ್ಲ, ವ್ಯರ್ಥ ಮಾತುಗಳು ಕೇಳಿಸುತ್ತಿದ್ದರೂ ಆಲಿಸುವುದಿಲ್ಲ. ಅವರು ಲಕ್ಷ್ಯವನ್ನು ಮುಂದಿಟ್ಟುಕೊಂಡು ಬ್ರಹ್ಮಾ ತಂದೆಯನ್ನು ಅನುಸರಿಸುತ್ತಾರೆ. ಬ್ರಹ್ಮಾ ತಂದೆಯವರು ಹೇಗೆ ತನ್ನನ್ನು ಮಾಡುವವನೆಂದು ತಿಳಿದುಕೊಂಡು ಕರ್ಮ ಮಾಡಿದರು, ಎಂದಿಗೂ ಮಾಡಿಸುವವನೆಂದು ತಿಳಿಯಲಿಲ್ಲ. ಆದ್ದರಿಂದ ಜವಾಬ್ದಾರಿ ನಿಭಾಯಿಸುತ್ತಿದ್ದರೂ ಸದಾ ಹಗುರವಾಗಿದ್ದರು. ಇದೇರೀತಿ ತಂದೆಯನ್ನು ಅನುಸರಿಸಿರಿ.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:
ತಂದೆಗೆ ಮಕ್ಕಳೊಂದಿಗೆ ಇಷ್ಟೂ ಪ್ರೀತಿಯಿದೆ, ಆ ಪ್ರೀತಿಯ ಪ್ರತ್ಯುತ್ತರವನ್ನು ಕೊಡುವುದಕ್ಕಾಗಿ ಪ್ರತಿನಿತ್ಯವೂ ಇಷ್ಟು ದೊಡ್ಡ ಪತ್ರವನ್ನು ಬರೆಯುತ್ತಾರೆ, ನೆನಪು-ಪ್ರೀತಿ ಕೊಡುತ್ತಾರೆ ಹಾಗೂ ಸಂಗಾತಿಯಾಗಿ ಸದಾ ಜೊತೆ ನಿಭಾಯಿಸುತ್ತಾರೆ. ಅಂದಾಗ ಈ ಪ್ರೀತಿಯಲ್ಲಿ ತಮ್ಮಲ್ಲಿರುವ ಎಲ್ಲಾ ಬಲಹೀನತೆಗಳನ್ನು ಅರ್ಪಣೆ ಮಾಡುತ್ತಾ ಸಮಾನ ಸ್ಥಿತಿಯಲ್ಲಿ ಸ್ಥಿತರಾಗಿ ಬಿಡಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top