11 January 2022 KANNADA Murli Today | Brahma Kumaris

Read and Listen today’s Gyan Murli in Kannada

January 10, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಜ್ಞಾನದ ಬುಲ್-ಬುಲ್ ಪಕ್ಷಿಯಾಗಿ ತಮ್ಮ ಸಮಾನ ಮಾಡಿಕೊಳ್ಳುವ ಸೇವೆ ಮಾಡಿ. ನನ್ನ ನೆನಪಿನ ಯಾತ್ರೆ ಸರಿಯಾಗಿದೆಯೇ ಎಂದು ತಮ್ಮ ಮನಸ್ಸನ್ನು ತಾವೇ ಕೇಳಿಕೊಳ್ಳಬೇಕು”

ಪ್ರಶ್ನೆ:: -

ಯಾವ ವಿಶೇಷ ಪುರುಷಾರ್ಥದಿಂದ ಬಡವರಿಂದ ಶ್ರೀಮಂತ (ಬೆಗ್ಗರ್ ಟು ಪ್ರಿನ್ಸ್)ರಾಗಬಹುದು?

ಉತ್ತರ:-

ಬಡವರಿಂದ ಶ್ರೀಮಂತರಾಗಬೇಕಾದರೆ ಬುದ್ದಿ ಸ್ವಚ್ಚವಾಗಿರಬೇಕು. ಒಬ್ಬ ತಂದೆಯ ವಿನಃ ಬೇರೆ ಯಾರು ನೆನಪಿಗೆ ಬರಬಾರದು. ಈ ಶರೀರವು ನನ್ನದಲ್ಲ. ಈ ರೀತಿ ಬದುಕಿದ್ದು ಸಾಯುವಂತಹ ಪುರುಷಾರ್ಥ ಮಾಡುವಂತಹವರೇ ಬಡವರಾಗಿದ್ದಾರೆ. ಅವರದು ವಾನಪ್ರಸ್ಥ ಸ್ಥಿತಿಯಾಗಿದೆ, ಏಕೆಂದರೆ ಅವರ ಬುದ್ದಿಯಲ್ಲಿರುತ್ತದೆ – ಈಗ ತಂದೆಯ ಜೊತೆ ಮನೆಗೆ ಹೋಗಬೇಕು ಪುನಃ ಸುಖಧಾಮದಲ್ಲಿ ಬರಬೇಕು.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಮಧುರ-ಮಧುರ ಮಕ್ಕಳು ತಿಳಿದುಕೊಂಡಿದ್ದೀರಿ, ವಿದ್ಯೆಯಲ್ಲಿ ಹೆಚ್ಚು ಯಾವ ಮಾತಿಗೆ ಗಮನ ಕೊಡಬೇಕು. ಸರ್ವ ಗುಣ ಸಂಪನ್ನ, ಹದಿನಾರು ಕಲಾ ಸಂಪೂರ್ಣ, ಸಂಪೂರ್ಣ ನಿರ್ವಿಕಾರಿ, ಮರ್ಯಾದಾ ಪುರುಷೋತ್ತಮ, ಅಹಿಂಸ ಪರಮೋಧರ್ಮಿಯಾಗಬೇಕು. ನಮಲ್ಲಿ ಈ ಎಲ್ಲಾ ಗುಣಗಳಿವೆಯೇ? ನಮ್ಮನ್ನು ನಾವು ನೋಡಿಕೊಳ್ಳಬೇಕು. ನಾವು ಏನಾಗಬೇಕಾಗಿದೆ ಆ ಕಡೆ ಗಮನ ಹೋಗುತ್ತದೆಯಲ್ಲವೆ. ಇದು ಹೇಗೆ ಆಗುತ್ತೀರಿ? ಓದಿ ಹಾಗೂ ಓದಿಸುವುದರಿಂದ. ಬೇಹದ್ದಿನ ತಂದೆಯನ್ನು ಇಡೀ ದಿನ ಎಷ್ಟು ನೆನಪು ಮಾಡುತ್ತೀರಿ, ಎಷ್ಟು ಜನರಿಗೆ ಓದಿಸುತ್ತೀರಿ! ಇದುವರೆಗು ಯಾರು ಸಂಪೂರ್ಣ ಆಗಿಲ್ಲ. ನಂಬರ್ವಾರ್ ಪುರುಷಾರ್ಥದನುಸಾರವಾಗಿ ಇದ್ದೇವೆ. ತಂದೆ ಒಂದೊಂದು ಮಗುವನ್ನು ಗಮನಿಸುತ್ತಾರೆ – ಈ ಮಗು ಏನು ಮಾಡುತ್ತಿದ್ದಾರೆ? ಬಾಬಾನ ಪ್ರತಿಯಾಗಿ ಏನು ಸೇವೆ ಮಾಡುತ್ತಿದ್ದಾರೆ?ಎಷ್ಟು ಆತ್ಮರ ಅದೃಷ್ಟವನ್ನು ಶ್ರೇಷ್ಠಾತಿ ಶ್ರೇಷ್ಠ ಮಾಡುತ್ತಿದ್ದಾರೆ? ಪ್ರತಿಯೊಬ್ಬರು ತಮ್ಮ ಸ್ಥಿತಿ ಹಾಗೂ ತಮ್ಮ ಖುಷಿಯನ್ನು ತಿಳಿದುಕೊಂಡಿರುತ್ತಾರೆ. ಅತೀಂದ್ರಿಯ ಸುಖದ ಜೀವನ ಪ್ರತಿಯೊಬ್ಬರಿಗೂ ಅನುಭವ ಆಗುತ್ತದೆ. ಮಕ್ಕಳಿಗೆ ಈ ಮಾತಿನ ನಿಶ್ಚಯ ಇದೆ-ತಂದೆಯ ನೆನಪಿನಿಂದಲೇ ತಮೋಪ್ರಧಾನದಿಂದ ಸತೋಪ್ರಧಾನರಾಗುತ್ತೇವೆ. ಇದಕ್ಕೆ ಸಹಜ ಉಪಾಯ ನೆನಪಿನ ಯಾತ್ರೆಯಾಗಿದೆ. ನಮ್ಮ ಮನಸ್ಸನ್ನು ನಾವೇ ಕೇಳಿಕೊಳ್ಳಬೇಕು-ನಮ್ಮ ನೆನಪಿನ ಯಾತ್ರೆ ಸರಿಯಾಗಿದೆಯಾ? ಅನ್ಯರನ್ನು ನಮ್ಮ ಸಮಾನ ಮಾಡುತ್ತಿದ್ದೇವೆಯೇ? ಜ್ಞಾನದ ಬುಲ್-ಬುಲ್ ಪಕ್ಷಿಯಾಗಿದ್ದೇವಾ? ನೀವು ಬ್ರಾಹ್ಮಣರೇ ದೈವೀ ಗುಣಗಳನ್ನು ಧಾರಣೆ ಮಾಡಿ ದೇವತೆಗಳಾಗುತ್ತೀರಿ. ನಿಮ್ಮ ವಿನಃ ಬೇರೆ ಯಾರು ದೇವೀ-ದೇವತೆಗಳಾಗುವಂತಹವರಿಲ್ಲ. ನೀವು ದೈವೀ ಮನೆತನದ ಸಂಬಂಧಿಯಾಗುತ್ತೀರಿ. ಅಲ್ಲಿ ನಿಮ್ಮದು ದೈವೀ ಪರಿವಾರವಾಗಿರುತ್ತದೆ. ನಾವು ದೈವೀ ಪರಿವಾರದವರಾಗುವ ಇಚ್ಚೆಯಿಂದ ಪುರುಷಾರ್ಥ ಮಾಡುತ್ತಿದ್ದೇವೆಂದು ತಿಳಿದುಕೊಂಡಿದ್ದೀರಿ. ಮಕ್ಕಳು ನಿಯಮನುಸಾರವಾಗಿ ಓದಬೇಕು. ಒಂದು ದಿನವು ಗೈರು ಹಾಜರಿಯಾಗಬಾರದು. ಒಂದುವೇಳೆ ಆರೋಗ್ಯ ಸರಿಯಿಲ್ಲದೆ ಮಂಚದ ಮೇಲೆ ಮಲಿಗಿದ್ದರು ಸಹ ಬುದ್ದಿಯಲ್ಲಿ ಶಿವ ತಂದೆಯ ನೆನಪಿರಬೇಕು. ಆತ್ಮ ತಿಳಿದುಕೊಂಡಿದೆ-ನಾವು ತಂದೆಯ ಮಕ್ಕಳಾಗಿದ್ದೇವೆ, ತಂದೆ ನಮ್ಮನ್ನು ಮನೆಗೆ ಕರೆದುಕೊಂಡು ಹೋಗಲು ಬಂದಿದ್ದಾರೆ. ಎಷ್ಟೊಂದು ಸಹಜ ನೆನಪಾಗಿದೆ. ಇದು ಸಹ ಅಭ್ಯಾಸವಿರಬೇಕು. ಬುದ್ದಿಯಲ್ಲಿ ಒಬ್ಬ ತಂದೆಯ ನೆನಪಿರಬೇಕು. ತಂದೆ ಬಂದಿದ್ದಾರೆ ನಾವು ಶಾಂತಿಧಾಮದಲ್ಲಿ ಹೋಗಿ ಪುನಃ ಸುಖಧಾಮದಲ್ಲಿ ಬರುತ್ತೇವೆ. ಒಬ್ಬ ಶಿವ ತಂದೆಯ ನೆನಪಿರಲು ಅಂತಿಮದವರೆಗು ತುಂಬಾ ಪರಿಶ್ರಮ ಪಡಬೇಕು. ಎಲ್ಲಾ ಸಂಗವನ್ನು ಬಿಟ್ಟು ಒಬ್ಬ ತಂದೆಯ ಸಂಗವನ್ನು ಮಾಡಬೇಕು. ಮುಖದಿಂದ ಯಾವ ಜಪವನ್ನು ಮಾಡಬಾರದು ಅನ್ಯರನ್ನು ನಮ್ಮ ಸಮಾನ ಮಾಡಲು ಓದಿಸಬೇಕು. ತಂದೆ ತಿಳಿಸುತ್ತಿದ್ದಾರೆ, ನೀವು ಯಾವ ಸತೋಪ್ರಧಾನ ಸ್ಥಿತಿಯಲ್ಲಿದ್ದಿರಿ ಆ ಅವಸ್ಥೆಯನ್ನು ತಲುಪಬೇಕಾಗಿದೆ, ಆ ಸ್ಥಿತಿಯಲ್ಲಿ ಹೋಗಿ ಪುನಃ ಅದೇ ಸ್ಥಿತಿಯಲ್ಲಿ ಸತ್ಯಯುಗಕ್ಕೆ ಬರಬೇಕು. ಎಷ್ಟೊಂದು ಸಹಜವಾಗಿದೆಯಲ್ಲವೆ?ನೀವು ಭಕ್ತಿ ಮಾರ್ಗದಲ್ಲಿ ಈ ರೀತಿ ಮಹಿಮೆ ಮಾಡುತ್ತಿದ್ದೀರಿ-ನೀವು ಯಾವಾಗ ಬರುತ್ತೀರಿ ಆಗ ನಾವು ಎಲ್ಲಾ ಸಂಗವನ್ನು ಬಿಟ್ಟು ನಿಮ್ಮ ಒಬ್ಬರ ಸಂಗವನ್ನು ಮಾಡುತ್ತೇವೆ, ಇದರಲ್ಲಿ ತುಂಬಾ ಶ್ರಮ ಪಡಬೇಕಾಗುತ್ತದೆ. ಪವಿತ್ರತೆ ಮುಖ್ಯವಾಗಿದೆ. ಗೃಹಸ್ಥ ವ್ಯವಹಾರದಲ್ಲಿದ್ದು ಕಮಲ ಪುಷ್ಪ ಸಮಾನ ಆಗಬೇಕು. ಆ ಕಮಲವು ಸಹ ನೀರಿನಿಂದ, ಭೂಮಿಯಿಂದ ಮೇಲಿರುತ್ತದೆ. ನೀವು ಚೈತನ್ಯ ಹೂಗಳು ನೆಲದ ಮೇಲಿರುವ ಕಾರಣ ನೀವು ಸಹ ಪ್ರತಿಜ್ಞೆ ಮಾಡಬೇಕು-ನಾವು ಪವಿತ್ರರಾಗಿದ್ದು ನಿಮ್ಮ ಒಬ್ಬರನ್ನೇ ನೆನಪು ಮಾಡುತ್ತೇವೆ. ಅಂತ್ಯದಲ್ಲಿ ನಿಮ್ಮ ವಿನಃ ಬೇರೆ ಯಾರ ನೆನಪು ಬರಬಾರದು. ಯಾವ ಅವಗುಣವು ಇರಬಾರದು. ಯಾರು ಈ ರೀತಿಯಾಗುತ್ತಾರೆ ಅವರು ಸದಾ ಹರ್ಷಿತರಾಗಿರುತ್ತಾರೆ. ಈ ಅಭ್ಯಾಸವನ್ನು ತುಂಬಾ ಮಾಡಬೇಕು. ಮಕ್ಕಳು ತಿಳಿದಿದ್ದಾರೆ ಒಮ್ಮೊಮ್ಮೆ ಸ್ಥಿತಿಯು ಬಾಡಿ ಹೋಗುತ್ತದೆ. ಮಾಯೆ ತಕ್ಷಣ ಮುಟ್ಟಿದರೆ ಮುನಿ ಮಾಡಿ ಬಿಡುತ್ತದೆ. ಪ್ರತಿಯೊಬ್ಬರು ತಮ್ಮನ್ನು ತಾವು ಅಗತ್ಯವಾಗಿ ಕೇಳಿಕೊಳ್ಳಬೇಕು. ನಾನು ಎಷ್ಟು ತಂದೆಯ ನೆನಪಿನಲ್ಲಿದ್ದು ಹರ್ಷಿತವಾಗಿರುತ್ತೇನೆ. ತಂದೆಯ ಸೇವೆಗೆ ಎಷ್ಟು ಸಮಯ ಕೊಡುತ್ತೇನೆ. ಒಂದುವೇಳೆ ಯಾರು ಹೇಗಾದರು ಇರಲಿ ನೀವು ಮಕ್ಕಳು ಸೇವೆ ಮಾಡುತ್ತಿರಬೇಕು. ತಂದೆಯು ಸಹ ಆಸ್ತಿಗೆ ಯಾರು ಯೋಗ್ಯರಾಗಿದ್ದಾರೆಂದು ಪರಿಶೀಲನೆ ಮಾಡುತ್ತಾರೆ. ಹೇಗೆ ಚೇಳಿಗೆ ಇದು ಕಲ್ಲು ಅಥವಾ ಮೃದು ವಸ್ತು ಎಂದು ಗೊತ್ತಾಗುತ್ತದೆ, ಅದು ಕಲ್ಲಿನ ಮೇಲೆ ಎಂದಿಗು ಕುಟುಕುವುದಿಲ್ಲ. ನಿಮ್ಮ ಕರ್ತವ್ಯವು ಸಹ ಇದೇ ಆಗಿದೆ. ನೀವು ಬೇಹದ್ದಿನ ತಂದೆಯ ವಿದ್ಯಾರ್ಧಿಗಳಲ್ಲವೆ. ವಿದ್ಯೆಯ ಮೇಲೆ ತುಂಬಾ ಆಧಾರವಾಗಿದೆ. ಆರಂಭದಲ್ಲಿ ಮಕ್ಕಳು ಒಂದು ದಿನವು ಮುರಳಿ ಇಲ್ಲದೆ ಇರುತ್ತಿರಲ್ಲಿಲ್ಲ, ಎಷ್ಟೊಂದು ತಡವರಿಸುತ್ತಿದ್ದರು. (ಮುರಳಿ ಸಮಯದಲ್ಲಿ ಹಿರಿಯ ಸಹೋದರಿಯರು “ನಿನ್ನ ಮುರಳಿಯಲ್ಲಿದೆ ಜಾದು” ಎಂಬ ಹಾಡನ್ನು ಹಾಡಿದರು) ಬಂಧನದಲ್ಲಿ ಇರುವವರಿಗೆ ಮುರಳಿಯನ್ನು ಹೇಗೆ ತಲುಪಿಸುತ್ತಿದ್ದರು. ಮುರಳಿಯಲ್ಲಿ ಜಾದು ಇದೆಯಲ್ಲವೆ. ಯಾವ ಜಾದು? ವಿಶ್ವದ ಮಾಲಿಕರನ್ನಾಗಿ ಮಾಡುವ ಜಾದು ಇದುಕ್ಕಿಂತ ದೊಡ್ಡ ಜಾದು ಬೇರೆ ಯಾವುದೂ ಇಲ್ಲ. ಆ ಸಮಯದಲ್ಲಿ ನೀವು ಮುರಳಿಗೆ ಎಷ್ಟೊಂದು ಬೆಲೆ ಕೊಡುತ್ತಿದ್ದೀರಿ. ಮುರಳಿಯನ್ನು ತಲುಪಿಸಲು ಎಷ್ಟೊಂದು ಪ್ರಯತ್ನ ಪಡುತ್ತಿದ್ದೀರಿ. ವಿದ್ಯೆಯಿಲ್ಲದೆ ಅವರ ಸ್ಥಿತಿ ಏನಾಗಿರುತ್ತದೆಯೋ ಎಂದು ತಿಳಿಯುತ್ತಿದ್ದೀರಿ ಆದರೆ ಇಲ್ಲಿ ತಂದೆಯು ತಿಳಿದುಕೊಂಡಿದ್ದಾರೆ – ಅನೇಕ ಮಕ್ಕಳು ಮುರಳಿಗೆ ಗಮನ ಕೊಡುವುದಿಲ್ಲ. ಮುರಳಿಯಂತೂ ಮಕ್ಕಳನ್ನು ರಿಫ್ರೆಷ್ ಮಾಡುತ್ತದೆ. ಭಗವಂತ ನಿಮ್ಮನ್ನು ವಿಶ್ವದ ಮಾಲಿಕರನ್ನಾಗಿ ಮಾಡುತ್ತಾರೆ. ಅವರ ಮುರಳಿಯನ್ನು ಕೇಳದಿದ್ದರೆ ಭಗವಂತ ಟೀಚರ್ ಏನು ಹೇಳುತ್ತಾರೆ. ತಂದೆಗೆ ಆಶ್ಚರ್ಯವೇ ಆಗುತ್ತದೆ. ನಡೆಯುತ್ತಾ-ನಡೆಯುತ್ತಾ ಮಾಯೆಯು ತುಂಬಾ ಮಕ್ಕಳಿಗೆ ಇಂತಹ ಬಿರುಗಾಳಿಯನ್ನು ತಂದುಬಿಡುತ್ತದೆ ಮುರಳಿ ಓದುವುದು, ಮುರಳಿ ಸಮಯದಲ್ಲಿ ಬರುವುದನ್ನು ಬಿಟ್ಟು ಬಿಡುತ್ತಾರೆ. ಜ್ಞಾನದೊಂದಿಗೆ ತಿರಸ್ಕಾರ ಅರ್ಥಾತ್ ತಂದೆಯನ್ನು ತಿರಸ್ಕರಿಸಿದಂತೆ ಆಗುತ್ತದೆ. ತಂದೆಯ ಜೊತೆ ತಿರಸ್ಕಾರ ಅರ್ಥಾತ್ ವಿಶ್ವರಾಜ್ಯ ಭಾಗ್ಯದೊಂದಿಗೆ ತಿರಸ್ಕಾರ. ಮಾಯೆ ಸಂಪೂರ್ಣವಾಗಿ ಕೆಳಗೆ ತಂದು ಬಿಡುತ್ತದೆ. ಒಂದೇ ಸಾರಿಗೆ ಬುದ್ದಿಯನ್ನು ನಾಶ ಮಾಡಿ ಬಿಡುತ್ತದೆ ಆಗ ಏನನ್ನು ತಿಳಿಯುವುದಾಗುವುದಿಲ್ಲ. ಭಕ್ತಿಯು ತುಂಬಾ ಮಾಡುತ್ತಿರುತ್ತಾರೆ. ಆದರೆ ಪೂರ್ತಿ ಅಂಧಶ್ರದ್ದೆ, ಬುದ್ದಿಹೀನರಾಗಿರುತ್ತಾರೆ. ಸ್ವಯಂ ತಂದೆಯೇ ತಿಳಿಸುತ್ತಿದ್ದಾರೆ ನೀವು ಎಷ್ಟೊಂದು ಯೋಗ್ಯರು ಆಗಿದ್ದೀರಿ, ಈಗ ಬುದ್ಧಿಹೀನರು ಆಗಿ ಬಿಟ್ಟಿದೀರಿ. ಈಗ ನಾನು ನೀವು ಮಕ್ಕಳನ್ನು ಯೋಗ್ಯರನ್ನಾಗಿ ಮಾಡಲು ಬಂದಿದ್ದೇನೆ. ಆದುದರಿಂದ ಅವಶ್ಯಕವಾಗಿ ಶ್ರೀಮತದಂತೆ ನಡೆಯಬೇಕು. ತಂದೆ ತಿಳಿಸುತ್ತಾರೆ-ಇಲ್ಲಿ ಬೇರೆ ಏನು ಮಾಡಬೇಕಾಗಿಲ್ಲ, ಕೇವಲ ತಂದೆಯನ್ನು ನೆನಪು ಮಾಡಿ ಹಾಗು ಓದಿರಿ. ಶಾಲೆಯಲ್ಲಿ ಮಕ್ಕಳು ಓದನ್ನು ಓದುತ್ತಾರೆ ಹಾಗು ಶಿಕ್ಷಕನನ್ನು ಸಹ ನೆನಪು ಮಾಡುತ್ತಾರೆ. ನಡೆತೆಯನ್ನು ಸುಧಾರಣೆ ಮಾಡಿಕೊಳ್ಳಬೇಕು. ನಿಮ್ಮ ಗುರಿ ಉದ್ದೇಶ ಮುಂದೆ ನಿಂತಿದೆ, ನೀವು ಈ ರೀತಿ ಆಗಬೇಕು, ಅವರ ನಡೆತೆ ಉತ್ತಮವಾಗಿರುವ ಕಾರಣ ಮನುಷ್ಯರು ಅವರ ಮಹಿಮೆಯನ್ನು ಈ ರೀತಿ ಮಾಡುತ್ತಾರೆ-ತಾವು ಸರ್ವ ಗುಣ ಸಂಪನ್ನರು… ಮನುಷ್ಯರಿಗೆ ಎಲ್ಲಿಯವರೆಗೆ ತಂದೆಯ ಪರಿಚಯ ಸಿಗುವುದಿಲ್ಲ ಅಲ್ಲಿಯ ವರೆಗೆ ಅಂಧಕಾರದಲ್ಲಿ ಇರುತ್ತಾರೆ. ಇಡೀ ಪ್ರಪಂಚದ ಮನುಷ್ಯರು ಈ ಸಮಯದಲ್ಲಿ ನಿಧನಿಕರಾಗಿದ್ದಾರೆ. ಅಂತಹವರಿಗೆ ತಂದೆಯ ಸಂದೇಶವನ್ನು ತಲುಪಿಸಬೇಕು. ನೀವು ಬೇಹದ್ದಿನ ತಂದೆಯ ಮಕ್ಕಳಾಗಿದ್ದೀರಲ್ಲವೆ. ತಂದೆ ತಿಳಿಸುತ್ತಾರೆ ನನ್ನನ್ನು ನೆನಪು ಮಾಡಿದಾಗ ನಿಮ್ಮ ವಿಕರ್ಮ ವಿನಾಶವಾಗಿ ಬಿಡುತ್ತದೆ. ಮಕ್ಕಳು ಸರ್ವರಿಗು ಸಂದೇಶ ತಲುಪಿಸುವಂತಹ ಯುಕ್ತಿಯನ್ನು ಹುಡಕಬೇಕು. ಸಮಾಚಾರ ಪತ್ರಿಕೆಯ ಮೂಲಕ ಎಲ್ಲಿರಿಗೆ ಈ ಸಂದೇಶ ತಲುಪುತ್ತದೆ-ಒಬ್ಬ ತಂದೆಯನ್ನು ನೆನಪು ಮಾಡಿದಾಗ ಪಾವನರಾಗಿ ಬಿಡುತ್ತೀರಿ. ಎಲ್ಲಾ ಆತ್ಮಗಳು ಮೊದಲು ಪಾವನರಾಗಿದ್ದರು, ಈಗ ಎಲ್ಲರು ಪತಿತರಾಗಿದ್ದಾರೆ. ಇಲ್ಲಿ ಯಾವುದೇ ಪವಿತ್ರ ಆತ್ಮನು ಇರಲು ಸಾಧ್ಯವಿಲ್ಲ. ಪವಿತ್ರ ಆತ್ಮಗಳು ಪವಿತ್ರ ಪ್ರಪಂಚದಲ್ಲಿರುತ್ತಾರೆ ಆತ್ಮಗಳು ಪವಿತ್ರವಾಗಿಬಿಟ್ಟಾಗ ಈ ಹಳೆಯ ವಸ್ತ್ರವನ್ನು ತೊರೆಯಲೇ ಬೇಕಾಗುತ್ತದೆ. ಆತ್ಮ ಪಾವನವಾಗಿದ್ದು ಶರೀರ ಪತಿತವಾಗಿರಲು ಸಾಧ್ಯವಿಲ್ಲ. ತಂದೆಯನ್ನು ನೆನಪು ಮಡುತ್ತಾ-ಮಾಡುತ್ತಾ ತಮ್ಮನ್ನು ತಮೋಪ್ರಧಾನದಿಂದ ಸತೋಪ್ರಧಾನ ಮಾಡಿಕೊಳ್ಳಬೇಕು. ಮೊಟ್ಟ ಮೊದಲು ನೀವು ಇಲ್ಲಿಗೆ ಬಂದಾಗ ಪವಿತ್ರರಾಗಿದ್ದೀರಿ. ಈಗ ಪುನಃ ಪವಿತ್ರರಾಗಬೇಕಾಗಿದೆ. ಆತ್ಮ ಪವಿತ್ರವಾಗಿ ಹೊರಟು ಪುನಃ ಪವಿತ್ರ ಪ್ರಪಂಚದಲ್ಲಿ ಬರುತ್ತದೆ. ಶಾಂತಿಧಾಮದಿಂದ ಮತ್ತೆ ಗರ್ಭ ಮಹೆಲ್ ನಲ್ಲಿ ಬರುತ್ತದೆ. ಅಲ್ಲಿ ದುಃಖದ ಹೆಸರು ಚಿನ್ಹೆಯು ಇರುವುದಿಲ್ಲ. ರಾವಣ ರಾಜ್ಯವೇ ಇರುವುದಿಲ್ಲ. ಆದರೆ ಪುರುಷಾರ್ಥ ಮಾಡಿ ಶ್ರೇಷ್ಠ ಪದವಿ ಪಡೆಯಬೇಕು. ಅದಕ್ಕಾಗಿಯೇ ಈ ವಿದ್ಯೆಯಾಗಿದೆ. ಸ್ವರ್ಗದಲ್ಲಿ ಎಲ್ಲರು ಬರುತ್ತಾರೆ, ಆದರೆ ಶ್ರೇಷ್ಠ ಪದವಿಯನ್ನು ಪಡೆಯಲು ಪುರುಷಾರ್ಥ ಮಾಡಬೇಕಾಗುತ್ತದೆ. ಈಗ ಸ್ವರ್ಗದ ಸ್ಥಾಪನೆ ಹಾಗು ನರಕದ ವಿನಾಶವಾಗುತ್ತದೆಯೆಂದು ತಿಳಿದುಕೊಂಡಿದ್ದೀರಿ. ಶಿವಾಲಯ ಸ್ಥಾಪನೆಯಾದಾಗ ವೇಶ್ಯಾಲಯವು ಸಮಾಪ್ತಿಯಾಗಿ ಬಿಡುತ್ತದೆ. ಶಿವಾಲಯದಲ್ಲಂತೂ ಬರಬೇಕಾಗುತ್ತದೆ. ಕೆಲವರು ಈ ಶರೀರವನ್ನು ಬಿಟ್ಟ ನಂತರ ಹೋಗಿ ರಾಜಕುಮಾರ-ರಾಜಕುಮಾರಿ ಆಗುತ್ತಾರೆ. ಕೆಲವರು ಪ್ರಜೆಗಳಲ್ಲಿ ಹೊರಟು ಹೋಗುತ್ತಾರೆ. ಯಾರ ಬುದ್ದಿ ಸಂಪೂರ್ಣ ಸ್ವಚ್ಚವಾಗಿದೆ, ಒಬ್ಬ ತಂದೆಯ ವಿನಃ ಬೇರೆ ಯಾರ ನೆನಪು ಬರುವುದಿಲ್ಲ ಅವರಿಗೆ ಸಂಪೂರ್ಣ ಬಡವರೆಂದು (ಬೆಗರ್) ಕರೆಯಲಾಗುತ್ತದೆ. ಶರೀರವನ್ನೂ ಸಹ ನೆನಪು ಮಾಡಬಾರದು ಅರ್ಥಾತ್ ಬದುಕಿದ್ದು ಸಾಯಬೇಕು. ನಾವು ಈಗ ನಮ್ಮ ಬೇಹದ್ದಿನ ಮನೆಗೆ ಹೋಗಬೇಕು ನಾವು ನಮ್ಮ ಮನೆಯನ್ನು ಮರೆತು ಬಿಟ್ಟಿದ್ದೇವು. ಈಗ ತಂದೆ ನಮಗೆ ನೆನಪು ತರಿಸಿ ಕೊಟ್ಟಿದ್ದಾರೆ. ತಂದೆ ಮಕ್ಕಳಿಗೆ ತಿಳಿಸುತ್ತಿದ್ದಾರೆ ಮಧುರ-ಮಧುರ ಮಕ್ಕಳೇ ನೀವು ವಾನಪ್ರಸ್ಥಿಗಳಾಗಿದ್ದೀರಿ. ಈ ಸಮಯದಲ್ಲಿ ನಿಮ್ಮೆಲ್ಲರದು ವಾನಪ್ರಸ್ಥ ಸ್ಥಿತಿಯಾಗಿದೆ. ಎಲ್ಲಾ ಮಕ್ಕಳನ್ನು ಶಬ್ದದಿಂದ ದೂರ ಕರೆದುಕೊಂಡು ಹೋಗಲು ಬಂದಿದ್ದೇನೆ. ವಾನಪ್ರಸ್ಥ ಅವಸ್ಥೆಯಲ್ಲಿ ಹೋಗಲು ಎಲ್ಲಾ ಭಕ್ತರು ಭಕ್ತಿ ಮಾಡುತ್ತಾರೆ. ಈಗ ಎಲ್ಲರು ವಾನಪ್ರಸ್ಥ ಅವಸ್ಥೆಯಲ್ಲಿ ಹೇಗೆ ಹೋಗುತ್ತಾರೆಂಬುದನ್ನು ತಂದೆ ತಿಳಿಸುತ್ತಿದ್ದಾರೆ. ಅವರಿಗೆ ಈ ಅಕ್ಷರದ ಅರ್ಥವೇ ಗೊತ್ತಿಲ್ಲ. ಕೇವಲ ಹೆಸರನ್ನಷ್ಟೆ ಕೇಳಿದ್ದಾರೆ. ದ್ವಾಪರದಿಂದ ಲೌಕಿಕ ಗುರುಗಳ ಮುಖಾಂತರ ಬಹಳ ಪುರುಷಾರ್ಥ ಮಾಡಿದ್ದರು ಸಹ ಹಿಂತಿರುಗಿ ಮರಳಿ ಹೋಗಲು ಸಾಧ್ಯವಿಲ್ಲ. ಈಗ ಹಿರಿಯರಾಗಿರಲಿ ಅಥವಾ ಕಿರಿಯರಾಗಿರಲಿ ಎಲ್ಲರು ವಾನಪ್ರಸ್ಥ ಸ್ಥಿತಿಯಲ್ಲಿದ್ದಾರೆಂದು ತಂದೆ ತಿಳಿಸುತ್ತಿದ್ದಾರೆ. ಸತ್ಯ-ಸತ್ಯ ವಾನಪ್ರಸ್ಥ ಸ್ಥಿತಿ ನಿಮ್ಮದಾಗಿದೆ ಕಾರಣ ಮನೆಗೆ ಹಿಂತಿರಗಬೇಕಾಗಿದೆ. ಬೇಹದ್ದಿನ ತಂದೆ ಎಲ್ಲರನ್ನು ಕರೆದೊಯ್ಯಲು ಬಂದಿದ್ದಾರೆ. ಆದುದರಿಂದ ಮಕ್ಕಳಾದ ನಿಮಗೆ ತುಂಬಾ ಖುಷಿಯಾಗಬೇಕು. ನೀವು ತಿಳಿದುಕೊಂಡಿದ್ದೀರಿ ಎಲ್ಲರನ್ನು ತಂದೆಯೇ ಮಧುರ ಶಾಂತಿಯ ಮನೆಗೆ ಕರೆದುಕೊಂಡು ಹೋಗುತ್ತಾರೆ. ಏಕೆಂದರೆ ಆತ್ಮಗಳೆಲ್ಲರಿಗು ಈಗ ಶಾಂತಿ ಬೇಕಾಗಿದೆ. ಇಲ್ಲಿ ಶಾಂತಿಯಿರಲು ಸಾಧ್ಯವಿಲ್ಲ. ಶಾಂತಿಧಾಮದ ಮಾಲಿಕರು ತಂದೆ ಒಬ್ಬರೇ ಆಗಿದ್ದಾರೆ. ಮಾಲಿಕ ಬಂದಾಗಲೇ ಎಲ್ಲರನ್ನು ಕರೆದೊಯ್ಯುತ್ತಾರೆ. ಭಕ್ತಿಯು ಸಹ ಶಾಂತಿಧಾಮಕ್ಕೆ ಹೋಗಲು ಮಾಡುತ್ತಾರೆ. ಯಾರು ಕೂಡ ಸುಖಧಾಮಕ್ಕೆ ಹೋಗುತ್ತೇವೆಂದು ಹೇಳುವುದಿಲ್ಲ. ತಂದೆ ತಿಳಿಸುತ್ತಾರೆ ನಾನು ಮಕ್ಕಳೊಂದಿಗೆ ಪ್ರತಿಜ್ಞೆ ಮಾಡುತ್ತೇನೆ-ಒಂದುವೇಳೆ ನೀವು ನನ್ನ ಶ್ರೀಮತದಂತೆ ನಡೆಯುವುದಾದರೆ ನಿಮ್ಮೆಲ್ಲರನ್ನು ಮನೆಗೆ ಕರೆದುಕೊಂಡು ಹೋಗುತ್ತೇನೆ. ಸುಖಧಾಮಕ್ಕೆ ಹೋಗುವುದಿಲ್ಲವೆಂದರೆ ಶಾಂತಿಧಾಮಕ್ಕೆ ಅಗತ್ಯವಾಗಿ ಕರೆದುಕೊಂಡು ಹೋಗುತ್ತೇನೆ. ಯಾರನ್ನು ಬಿಡುವುದಿಲ್ಲ. ಹೋಗುವುದಿಲ್ಲವೆಂದರೆ ಶಿಕ್ಷೆ ಕೊಟ್ಟು ಏಟು ಕೊಡಿಸಿಯಾದರು ಕರೆದುಕೊಂಡು ಹೋಗುತ್ತೇನೆ. ಚಿಕ್ಕ ಮಕ್ಕಳಿಗೆ ಹೇಗೆ ಶಿಕ್ಷೆ ಕೊಡುತ್ತಾರಲ್ಲವೆ. ಮಕ್ಕಳಾದ ನಿಮ್ಮನ್ನು ಸಹ ಅದೇ ರೀತಿ ಕರೆದುಕೊಂಡು ಹೋಗುತ್ತೇನೆ ಏಕೆಂದರೆ ನಾಟಕದಲ್ಲಿ ಪಾತ್ರವೆ ಈ ರೀತಿಯಿದೆ. ಆದ್ದರಿಂದ ತಮ್ಮ ಸಂಪಾದನೆ ಮಾಡಿಕೊಂಡು ನಡೆದಾಗ ಚೆನ್ನಾಗಿರುತ್ತದೆ. ಉತ್ತಮ ಪದವಿಯು ಸಿಗುತ್ತದೆ. ಅಂತಿಮದಲ್ಲಿ ಬರುವಂತಹವರು ಎಂತಹ ಸುಖವನ್ನು ಪಡೆಯುತ್ತಾರೆ? ನಿಮಗೆ ಇಷ್ಟವಿದೆಯೊ ಅಥವಾ ಇಲ್ಲವೊ, ನಿಮ್ಮ ಎಲ್ಲರ ಶರೀರಕ್ಕೆ ಬೆಂಕಿ ಇಟ್ಟು ಆತ್ಮಗಳನ್ನು ಕರೆದುಕೊಂಡು ಹೋಗುತ್ತೇನೆಂದು ತಂದೆ ತಿಳಿಸುತ್ತಾರೆ. ನನ್ನ ಮತದಂತೆ ನಡೆದು ಒಂದುವೇಳೆ ಸರ್ವಗುಣ ಸಂಪನ್ನ 16 ಕಲೆ ಸಂಪೂರ್ಣರಾದರೆ ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ. ಏಕೆಂದರೆ ನನ್ನನ್ನು ಕರೆದಿರುವುದೆ ಬಂದು ಮನೆಗೆ ಕರೆದುಕೊಂಡು ಹೋಗಿ ಅರ್ಥಾತ್ ಮೃತ್ಯು ಕೊಡಿ ಎಂದು. ಇದು ಎಲ್ಲರಿಗು ತಿಳಿದಿರುವ ಮಾತು, ಇನ್ನೇನು ಮೃತ್ಯು ಬಂದೆ ಬಿಡುತ್ತದೆ. ಅಪವಿತ್ರರು ಯಾರೂ ಸಹ ಇಲ್ಲಿ ಉಳಿಯಾಲಾರರು. ಆದುದರಿಂದ ತಂದೆ ತಿಳಿಸುತ್ತಾರೆ-ನಾನು ಎಲ್ಲರನ್ನು ಈ ಅಪವಿತ್ರ ಪ್ರಪಂಚದಿಂದ ಅವಶ್ಯವಾಗಿ ಕರೆದುಕೊಂಡುಹೋಗುತ್ತೇನೆ. ಯಾರು ಚೆನ್ನಾಗಿ ಓದುತ್ತಾರೆ ಅವರೇ ಸುಖಧಾಮದಲ್ಲಿ ಬರುತ್ತಾರೆ. ಸುಖಧಾಮ ಆಕಾಶದಲ್ಲಿಲ್ಲ. ನಿಮ್ಮ ನೆನಪಾರ್ಥ ದಿಲ್ವಾಡ ಮಂದಿರವಾಗಿದೆ. ಆದಿ ದೇವ ಕುಳಿತಿದ್ದಾರೆ ಬಾಪ್ ದಾದಾರವರು ಇದ್ದಾರಲ್ಲವೆ. ಇವರ ಶರೀರದಲ್ಲಿ ತಂದೆ ವಿರಾಜಮಾನವಾಗುತ್ತಾರೆ. ಇಲ್ಲಿ ಬಾಪ್ ದಾದಾ ಇಬ್ಬರು ಕುಳಿತಿದ್ದಾರೆಂದು ನೀವು ತಿಳಿದುಕೊಂಡಿದ್ದೀರಿ. ಮಕ್ಕಳು ನೀವು ಆ ಮಂದಿರಕ್ಕೆ ಹೋದಾಗ ಇದು ಬಾಪ್ ದಾದಾರವರ ಮಂದಿರವಾಗಿದೆ ಎಂಬ ವಿಚಾರವಿರಲಿ. ಈ ಸಮಯದಲ್ಲಿ ರಾಜಯೋಗ ಕಲಿಯುತ್ತಿರುವಂತಹವರ ಚಿನ್ಹೆಯಾಗಿದೆ. ಮಹಾರಥಿ, ಕುದುರೆ ಸವಾರರು ಸಹ ಇದ್ದಾರೆ. ಈ ದಾದಾರವರಲ್ಲಿ ಬಾಬಾ ಪ್ರವೇಶ ಮಾಡುತ್ತಾರೆ. ಆದುದರಿಂದ ಅದು ಜಡ ವಾಗಿದೆ, ಇದು ಚೈತನ್ಯವಾಗಿದೆ. ನಿಮ್ಮದೇ ಉದಾಹರಣೆಯನ್ನು ನೋಡಿಕೊಂಡು ಬರುತ್ತೀರಿ. ದಿಲ್ವಾಡ ಮಂದಿರವು ಎಷ್ಟೊಂದು ರಮಣೀಕವಾಗಿದೆ. ಕಲ್ಪ-ಕಲ್ಪ ಅದೇ ರೀತಿ ಮಂದಿರವಾಗುತ್ತದೆ. ಅದನ್ನು ನೀವು ಹೋಗಿ ನೋಡುತ್ತೀರಿ. ಇದೆಲ್ಲಾ ವಿನಾಶ ಆಗುವುದು ಎಂದು ನೀವು ಹೇಳುತ್ತೀರಿ. ಮತ್ತೆ ಹೇಗೆ ಆಗುತ್ತದೆ?ಎಂದು ನೀವು ಕೇಳುತ್ತೀರಿ. ಎಂದಿಗೂ ಈಗ ಸ್ವರ್ಗ ಎಲ್ಲಿದೆ? ಎಂದು ಈ ರೀತಿ ಯೋಚಿಸಬಾರದು. ಆದರೆ ಪುನಃ ಸ್ವರ್ಗದ ಮಹಲ್ ಇರುತ್ತವೆ. ಈ ಬೆಟ್ಟ ಗುಟ್ಟಗಳೆಲ್ಲವು ಮುರಿದು ಹೋಗುತ್ತವೆ. ಪುನಃ ಆಗುತ್ತವೆ. ಆಬು ಮತ್ತೆ ಆಗುತ್ತದೆ. ಬಹಳಷ್ಟು ಮಕ್ಕಳು ಈ ಮಾತಿನಲ್ಲಿ ತುಂಬಾ ಗೊಂದಲವಾಗುತ್ತಾರೆ. ಗೊಂದಲವಾಗುವ ಅವಶ್ಯಕತೆಯಿಲ್ಲವೆಂದು ತಂದೆಯು ಹೇಳುತ್ತಾರೆ. ದ್ವಾರಿಕಾ ಸಮುದ್ರದಡಿ ಹೊರಟು ಹೋಯಿತು, ಮತ್ತೆ ಸಮುದ್ರ ದಡಿಯಿಂದ ಮೇಲೆ ಬರುತ್ತದೆ ಎಂದು ಹೇಳುತ್ತಾರೆ. ಆದರೆ ಕೆಳಗಡೆ ಹೋದಂತಹ ವಸ್ತುಗಳು ಹಾಗೆಯೇ ಸಮಾಪ್ತಿಯಾಗಿ ಬಿಡುತ್ತವೆ. ನಾವು ಸ್ವರ್ಗದಲ್ಲಿ ಮಹಡಿ ಮುಂತಾದವುಗಳನ್ನು ಮಾಡುತ್ತೇವೆಂದು ತಿಳಿದುಕೊಂಡಿದ್ದೀರಿ. ಅಲ್ಲಿ ಎಲ್ಲವು ಸಂಪೂರ್ಣ ಸತೋಪ್ರಧಾನ ಹೊಸ ಹೊಸ ವಸ್ತುಗಳು ಇರುತ್ತವೆ. ನೀವು ಅಲ್ಲಿಯ ಹಣ್ಣು ಮುಂತಾದವುಗಳನ್ನು ನೋಡಿಕೊಂಡು ಬರುತ್ತೀರಿ ಹಾಗು ನಾವು ಅಲ್ಲಿಗೆ ಹೋಗುತ್ತೇವೆಂದು ತಿಳಿದಿದ್ದೀರಿ. ಸೃಷ್ಟಿಯ ಚರಿತ್ರೆ-ಭೂಗೋಳ ಪುನರಾವರ್ತನೆ ಆಗುತ್ತದೆ ಆದರೆ ಸ್ವರ್ಗವು ಸಹ ಪುನರಾವರ್ತನೆ ಆಗುತ್ತದೆ. ಈ ನಿಶ್ಚಯವಿರಬೇಕು. ಆದರೆ ಅದೃಷ್ಟದಲ್ಲಿಲ್ಲದಾಗ ಕೆಲವರು ಇದು ಹೇಗೆ ಎಂದು ಕೇಳುತ್ತಾರೆ. ಇವರೆಲ್ಲರು ಪುನಃ ಬರುತ್ತಾರೆ ಮತ್ತೆ ಮನೆ ಮುಂತಾದವುಗಳು ತಯಾರುಗುತ್ತವೆ.

ನೀವು ತಿಳಿದುಕೊಂಡಿದ್ದೀರಿ-ಸೋಮನಾಥ ಮಂದಿರವನ್ನು ಲೂಟಿ ಮಾಡಿಕೊಂಡು ಹೋಗುತ್ತಾರೆ, ಪುನಃ ಮಂದಿರವನ್ನು ಮಾಡುತ್ತಾರೆ. ಈ ಆಟ ಪೂಜ್ಯರಿಂದ ಪೂಜಾರಿ, ಪೂಜಾರಿಯಿಂದ ಪೂಜ್ಯರಾಗುವ ಆಟವಾಗಿದೆ. ಬ್ರಾಹ್ಮಣ, ದೇವತ, ಕ್ಷತ್ರಿ, ವೈಶ್ಯ, ಶೂದ್ರ….. ಈ ರೀತಿ ಚಕ್ರವಾಗಿದೆ. ಮಕ್ಕಳು ನೀವು ಪದಮಾಪದಮ್ ಭಾಗ್ಯಶಾಲಿಯಾಗುತ್ತೀರಿ. ನಿಮ್ಮ ಹೆಜ್ಜೆಯಲ್ಲಿ ಪದಮದ ಮುದ್ರೆ ಹಾಕಲ್ಪಟ್ಟಿದೆ. ನೀವು ತಿಳಿದಿದ್ದೀರಿ ನಮ್ಮ ಪ್ರತಿ ಹೆಜ್ಜೆಯಲ್ಲಿ ಪದಮಗಳಿವೆ ಅರ್ಥಾತ್ ವಿದ್ಯೆಯು ಪದಮಗಳಿಂದ ತುಂಬಿದೆ. ಎಷ್ಟು ಓದುತ್ತೀರಿ ಅಷ್ಟು ಪದವಿಯನ್ನು ಪಡೆಯುತ್ತೀರಿ. ಸತ್ಯಯುಗ ಸ್ವರ್ಣಯುಗವಾಗಿದೆ. ಅಲ್ಲಿಯ ನೆಲವು ತುಂಬಾ ಸುಂದರವಾಗಿರುತ್ತದೆ. ಸುಂದರವಾದ ಮನೆಗಳಿರುತ್ತವೆ. ಪ್ರತಿಯೊಂದು ವಸ್ತು ಸತೋಪ್ರಧಾನವಾಗಿರುತ್ತದೆ. ನೋಡುತ್ತಿದಂತೆ ನಯನಗಳು ಶೀತಲವಾಗಿ ಬಿಡುತ್ತವೆ. ಇಂತಹ ರಾಜಧಾನಿಗೆ ಮಾಲಿಕರಾಗಬೇಕಾದರೆ ಎಷ್ಟು ಒಳ್ಳೆಯ ಪುರುಷಾರ್ಥ ಮಾಡಬೇಕು. ಪುರುಷಾರ್ಥದಿಂದ ಪ್ರಾರಬ್ಧವಾಗುತ್ತದೆ. ಮಕ್ಕಳ ಬುದ್ದಿಯಲ್ಲಿ ಈ ಜ್ಞಾನವಿದೆ. ತಂದೆಯನ್ನು ನೆನಪು ಮಾಡಬೇಕು. ಲೌಕಿಕ ಸಂಬಂಧದಿಂದ ಮಮತ್ವವನ್ನು ಅಳಿಸಿಕೊಂಡು ಒಬ್ಬ ತಂದೆಯನ್ನು ನೆನಪು ಮಾಡಬೇಕು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯ ನೆನಪಿನಲ್ಲಿದ್ದು ಸದಾ ಹರ್ಷಿತರಾಗಿರಬೇಕು. ಎಂದಿಗೂ ಮುದುಡಬಾರದು. ಆರೋಗ್ಯ ಸರಿಯಿಲ್ಲದಿದ್ದರು ಮುರಳಿಯನ್ನು ಅವಶ್ಯಕವಾಗಿ ಕೇಳಬೇಕು ಅಥವಾ ಓದಬೇಕು.

2. ವಿದ್ಯೆಯಿಂದ ಹೆಜ್ಜೆ-ಹೆಜ್ಜೆಯಲ್ಲಿ ಪದಮಗಳ ಜಮಾ ಮಾಡಿಕೊಳ್ಳಬೇಕು ಹಾಗು ಎಲ್ಲಾ ಸಂಗವನ್ನು ಬಿಟ್ಟು ಒಬ್ಬ ತಂದೆಯ ಸಂಗವನ್ನು ಮಾಡಬೇಕು.

ವರದಾನ:-

ಹೇಗೆ ಬ್ರಹ್ಮಾ ತಂದೆಯವರು ಪ್ರತೀ ಕಾರ್ಯದಲ್ಲಿ ಧೃಡ ಸಂಕಲ್ಪದಿಂದ ಸಫಲತೆಯನ್ನು ಪ್ರಾಪ್ತಿ ಮಾಡಿಕೊಂಡರು, ಒಬ್ಬ ತಂದೆಯ ಹೊರತು ಮತ್ತ್ಯಾರೂ ಇಲ್ಲ ಎನ್ನುವುದನ್ನು ಪ್ರತ್ಯಕ್ಷ ಕರ್ಮ ಮಾಡಿ ತೋರಿಸಿದರು. ಎಂದಿಗೂ ಬೇಸರವಾಗಲಿಲ್ಲ, ಸದಾ ಹೊಸದೇನಲ್ಲ ಎನ್ನುವಂತಹ ಪಾಠದಿಂದ ವಿಜಯಿಯಾಗಿದ್ದರು, ಹಿಮಾಲಯ ಪರ್ವತದಂತಹ ದೊಡ್ಡ ಮಾತನ್ನೂ ಸಹ ಸಾಸಿವೆಯಷ್ಟು ಮಾಡಿ, ಪರಿಹಾರ ತೆಗೆದರು. ಎಂದಿಗೂ ಗಾಬರಿಯಾಗಲಿಲ್ಲ. ಇದೇರೀತಿ ಸದಾ ವಿಶಾಲ ಹೃದಯವನ್ನಿಟ್ಟುಕೊಳ್ಳಿರಿ, ದಿಲ್ಖುಷ್ ಆಗಿರಿ. ಪ್ರತೀ ಹೆಜ್ಜೆಯಲ್ಲಿ ಬ್ರಹ್ಮಾ ತಂದೆಯನ್ನು ಅನುಸರಿಸುತ್ತೀರೆಂದರೆ ಸಮೀಪ ಹಾಗೂ ಸಮಾನರು ಆಗಿ ಬಿಡುತ್ತೀರಿ.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:

ಬೇಹದ್ದಿನ ಪ್ರಾಪ್ತಿಗಳಲ್ಲೆಷ್ಟು ಮಗ್ನರಾಗಿರುತ್ತೀರಿ ಅಷ್ಟೇ ಅಲ್ಪಕಾಲದ ಆಕರ್ಷಣೆಗಳಿಂದ ದೂರವಿದ್ದು, ಪರಮಾತ್ಮನ ಪ್ರೀತಿಯಲ್ಲಿ ಸಮಾವೇಶವಾಗುವ ಅನುಭವ ಮಾಡುವಿರಿ. ತಮ್ಮ ಈ ಲವಲೀನ ಸ್ಥಿತಿಯು ವಾತಾವರಣದಲ್ಲಿ ಆತ್ಮೀಯತೆಯ ಸುಗಂಧವು ಹರಡುವುದು.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top