10 January 2022 KANNADA Murli Today | Brahma Kumaris

Read and Listen today’s Gyan Murli in Kannada

January 9, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಶ್ರೀಮತದನುಸಾರ ಎಲ್ಲರ ಆತ್ಮಿಕ ಪಾಲನೆ ಮಾಡಬೇಕಾಗಿದೆ, ಖುಷಿಯ ಔಷಧಿಯನ್ನು ಸೇವನೆ ಮಾಡಿ ಹಾಗೂ ಅನ್ಯರಿಗೂ ಸೇವನೆ ಮಾಡಿಸುವುದೇ ಸತ್ಯವಾದ ಪಾಲನೆ (ಸತ್ಕಾರ) ಮಾಡುವುದಾಗಿದೆ”

ಪ್ರಶ್ನೆ:: -

ಜ್ಞಾನದಲ್ಲಿ ಆಧ್ಯಾತ್ಮಿಕತೆಯ ಹರಿತ ತುಂಬುವ ವಿಧಿಯೇನಾಗಿದೆ, ಅದರಿಂದ ಯಾವ-ಯಾವ ಲಾಭಗಳಾಗುತ್ತದೆ?

ಉತ್ತರ:-

ಯಾವಾಗ ಯಾರಿಗಾದರೂ ಜ್ಞಾನವನ್ನು ತಿಳಿಸುತ್ತೀರೆಂದರೆ, ಆತ್ಮನೆಂದು ತಿಳಿದು ಆತ್ಮನಿಗೆ ಜ್ಞಾನವನ್ನು ಕೊಡಿ. ಇದರಿಂದ ಆಧ್ಯಾತ್ಮಿಕತೆಯ ಹರಿತವು ತುಂಬುತ್ತದೆ. ಈ ಹೊಸ ಅಭ್ಯಾಸದಿಂದ ಜ್ಞಾನವನ್ನು ಯಾರಿಗೇ ತಿಳಿಸುತ್ತೀರೆಂದರೆ ತಕ್ಷಣದಲ್ಲಿ ನಾಟಿ ಬಿಡುತ್ತದೆ. ಶರೀರದ ಪರಿವೆಯು ಸಮಾಪ್ತಿಯಾಗುವುದು. ನಂತರದಲ್ಲಿ ಮಾಯೆಯ ಬಿರುಗಾಳಿಗಳು ಅಥವಾ ಕೆಟ್ಟ ಸಂಕಲ್ಪಗಳೂ ಬರುವುದಿಲ್ಲ. ಕೆಟ್ಟ ದೃಷ್ಟಿಯೂ ಇರುವುದಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಜ್ಞಾನದ ಮೂರನೇ ನೇತ್ರವನ್ನು ಕೊಡುವಂತಹ ಆತ್ಮಿಕ ತಂದೆಯು ಕುಳಿತು ಆತ್ಮಿಕ ಮಕ್ಕಳಿಗೆ ತಿಳಿಸುತ್ತಾರೆ. ಜ್ಞಾನದ ಮೂರನೇ ನೇತ್ರವನ್ನು ತಂದೆಯವರಲ್ಲದೆ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಈಗ ನೀವು ಮಕ್ಕಳಿಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆ. ಇದರಿಂದ ಈ ಹಳೆಯ ಪ್ರಪಂಚವು ಬದಲಾಗುವುದಿದೆ ಎಂಬುದನ್ನೀಗ ನೀವು ತಿಳಿದುಕೊಂಡಿದ್ದೀರಿ. ಇದನ್ನ್ಯಾರು ಬದಲಾಯಿಸುವರು ಮತ್ತು ಹೇಗೆ ಬದಲಾಯಿಸುವರೆಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ ಏಕೆಂದರೆ ಅವರಿಗೆ ಜ್ಞಾನದ ಮೂರನೇ ನೇತ್ರವೇ ಇಲ್ಲ. ನೀವು ಮಕ್ಕಳಿಗೀಗ ಜ್ಞಾನದ ಮೂರನೇ ನೇತ್ರವು ಸಿಕ್ಕಿದೆಅದರಿಂದ ನೀವು ಸೃಷ್ಟಿಯ ಆದಿ-ಮಧ್ಯ-ಅಂತ್ಯವನ್ನು ತಿಳಿದು ಬಿಟ್ಟಿದ್ದೀರಿಇದಾಗಿದೆ ಜ್ಞಾನದ ಸ್ಯಾಕ್ರೀನ್. ಸ್ಯಾಕ್ರೀನ್ನ ಒಂದು ಹನಿಯೂ ಸಹ ಬಹಳ ಮಧುರವಾಗಿರುತ್ತದೆ. ಜ್ಞಾನದ ಆ ಒಂದು ಅಕ್ಷರವೇ ಮನ್ಮನಾಭವ ಎನ್ನುವುದಾಗಿದೆ. ಈ ಅಕ್ಷರವು ಎಲ್ಲದಕ್ಕಿಂತಲೂ ಅತಿ ಮಧುರವಾಗಿದೆ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿರಿತಂದೆಯು ಶಾಂತಿಧಾಮ ಹಾಗೂ ಸುಖಧಾಮದ ಮಾರ್ಗವನ್ನು ತಿಳಿಸುತ್ತಿದ್ದಾರೆ. ತಂದೆಯು ಬಂದಿರುವುದೇ ಮಕ್ಕಳಿಗೆ ಸ್ವರ್ಗದ ಆಸ್ತಿಯನ್ನು ಕೊಡುವುದಕ್ಕಾಗಿಅಂದಮೇಲೆ ಮಕ್ಕಳಿಗೆಷ್ಟು ಖುಶಿಯಿರಬೇಕು! ಹೇಳುತ್ತಾರೆ – ಖುಶಿಯಂತ ಔಷಧಿಯೇ ಇಲ್ಲ. ಯಾರು ಸದಾ ಖುಷಿಯಲ್ಲಿಯೇ ಇರುತ್ತಾರೆ ಅವರಿಗಾಗಿ ಅದು ಔಷಧಿಯಾಗಿ ಬಿಡುತ್ತದೆ. 21 ಜನ್ಮಗಳಲ್ಲಿ ಮೋಜಿನಲ್ಲಿರುವವರಿಗೆ ಇದು ಬಹಳ ಶಕ್ತಿಶಾಲಿ ಔಷಧಿಯಾಗಿದೆ. ಈ ಔಷಧಿಯನ್ನು ಸದಾ ಒಬ್ಬರಿನೊಬ್ಬರಿಗೆ ಕುಡಿಸುತ್ತಿರಿಇದೇ ಪಾಲನೆ ಅಥವಾ ಸತ್ಕಾರವನ್ನು ಒಬ್ಬರಿನ್ನೊಬ್ಬರಿಗೆ ಮಾಡಬೇಕಾಗಿದೆ. ಇಂತಹ ಸತ್ಕಾರ ಅಥವಾ ಪಾಲನೆಯನ್ನು ಮತ್ತ್ಯಾವುದೇ ಮನುಷ್ಯನು ಮನುಷ್ಯನಿಗೆ ಮಾಡಲು ಸಾಧ್ಯವಿಲ್ಲ.

ನೀವು ಮಕ್ಕಳು ಶ್ರೀಮತದನುಸಾರ ಸರ್ವರ ಆತ್ಮಿಕ ಪಾಲನೆ ಮಾಡುತ್ತೀರಿ. ಸತ್ಯ-ಸತ್ಯವಾದ ಖುಷಿಯ ಸಮಾಚಾರವೂ ಸಹ ತಂದೆಯ ಪರಿಚಯ ಕೊಡುವುದಾಗಿದೆ. ಮಧುರ ಮಕ್ಕಳು ತಿಳಿದಿದ್ದಾರೆ – ಬೇಹದ್ದಿನ ತಂದೆಯ ಮೂಲಕ ನಮಗೆ ಜೀವನ್ಮುಕ್ತಿಯ ಔಷಧಿಯು ಸಿಗುತ್ತದೆ. ಸತ್ಯಯುಗದಲ್ಲಿ ಭಾರತವು ಜೀವನ್ಮುಕ್ತವಾಗಿತ್ತುಪಾವನವಿತ್ತು. ತಂದೆಯು ಬಹಳ ಶ್ರೇಷ್ಠವಾದ ಔಷಧಿಯನ್ನು ಕೊಡುತ್ತಾರೆ. ಆದ್ದರಿಂದಲೇ ಮಹಿಮೆಯಿದೆ – ಅತೀಂದ್ರಿಯ ಸುಖವನ್ನು ಕೇಳಬೇಕೆಂದರೆ ಗೋಪ-ಗೋಪಿಕೆಯರಿಂದ ಕೇಳಿ ತಿಳಿದುಕೊಳ್ಳಿರಿ. ಜ್ಞಾನ ಹಾಗೂ ಯೋಗದ ಫಸ್ಟ್ಕ್ಲಾಸ್ ಅದ್ಭುತವಾದ ಔಷಧಿಯು ಇದಾಗಿದೆ ಮತ್ತು ಈ ಔಷಧಿಯು ಒಬ್ಬರೇ ಆತ್ಮಿಕ ಸರ್ಜನ್ನ ಬಳಿಯಿದೆ. ಮತ್ತ್ಯಾರಿಗೂ ಈ ಔಷಧಿಯ ಬಗ್ಗೆ ಗೊತ್ತೇ ಇಲ್ಲ. ತಂದೆಯು ಹೇಳುವರು – ಮಧುರ ಮಕ್ಕಳೇನಿಮಗಾಗಿ ಅಂಗೈಯಲ್ಲಿ ಮುಕ್ತಿ-ಜೀವನ್ಮುಕ್ತಿಯ ಉಡುಗೊರೆಯನ್ನು ತೆಗೆದುಕೊಂಡು ಬಂದಿರುವೆನುಈ ಉಡುಗೊರೆಯು ನನ್ನ ಬಳಿಯೇ ಇರುತ್ತದೆ. ಕಲ್ಪ-ಕಲ್ಪವೂ ನಾನೇ ಬಂದು ನಿಮಗೆ ಕೊಡುವೆನುನಂತರದಲ್ಲಿ ರಾವಣನು ಕಸಿದುಕೊಳ್ಳುವನು. ಹಾಗಾದರೆ ಈಗ ನೀವು ಮಕ್ಕಳಿಗೆಷ್ಟು ಖುಷಿಯ ನಶೆಯೇರಿರಬೇಕು! ನಿಮಗೆ ಗೊತ್ತಿದೆ – ನಮಗೆ ಒಬ್ಬರೇ ತಂದೆಶಿಕ್ಷಕ ಹಾಗೂ ಸತ್ಯ-ಸತ್ಯವಾದ ಸದ್ಗುರುವಾಗಿದ್ದಾರೆಅವರು ನಮ್ಮ ಜೊತೆಯಲ್ಲಿ ಕರೆದುಕೊಂಡು ಹೋಗುವರು. ಅತಿ ಪ್ರಿಯವಾದ ತಂದೆಯಿಂದ ನಮಗೆ ವಿಶ್ವದ ರಾಜ್ಯಭಾಗ್ಯವು ಸಿಗುವುದುಇದೇನಾದರೂ ಕಡಿಮೆ ಮಾತೇ! ಅಂದಮೇಲೆ ಸದಾ ಹರ್ಷಿತವಾಗಿರಬೇಕು. ಈಶ್ವರೀಯ ವಿದ್ಯಾರ್ಥಿ ಜೀವನವು ಅತ್ಯಮೂಲ್ಯವಾದ ಜೀವನವಾಗಿದೆಇದು ಈಗಿನದೇ ಗಾಯನವಲ್ಲವೆ. ನಂತರ ನೀವು ಹೊಸ ಪ್ರಪಂಚದಲ್ಲಿಯೂ ಖುಷಿಯಲ್ಲಿಯೇ ಇರುತ್ತೀರಿ. ಸತ್ಯ-ಸತ್ಯವಾದ ಖುಷಿಯನ್ನು ಯಾವಾಗ ಆಚರಿಸುತ್ತೇವೆ ಎನ್ನುವುದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ಮನುಷ್ಯರಲ್ಲಂತು ಸತ್ಯಯುಗದ ತಿಳುವಳಿಕೆಯೇ ಇಲ್ಲ ಆದ್ದರಿಂದ ಇಲ್ಲಿಯೇ ಆಚರಿಸುತ್ತಾ ಇರುತ್ತಾರೆ. ಆದರೆ ಈ ಹಳೆಯ ತಮೋಪ್ರಧಾನ ಪ್ರಪಂಚದಲ್ಲಂತು ಎಲ್ಲಿಂದ ಖುಷಿಯು ಬರುತ್ತದೆಇಲ್ಲಂತು ಅಯ್ಯೊ-ಅಯ್ಯೊ ಎನ್ನುತ್ತಿರುತ್ತಾರೆಇದು ಎಷ್ಟೊಂದು ದುಃಖದ ಪ್ರಪಂಚವಾಗಿದೆ.

ತಂದೆಯು ನೀವು ಮಕ್ಕಳಿಗೆ ಎಷ್ಟೊಂದು ಸಹಜ ಮಾರ್ಗವನ್ನು ತಿಳಿಸುತ್ತಾರೆ – ಗ್ರಹಸ್ಥ ವ್ಯವಹಾರದಲ್ಲಿರುತ್ತಾ ಕಮಲ ಪುಷ್ಪ ಸಮಾನವಾಗಿರಿ. ವ್ಯಾಪಾರ-ವ್ಯವಹಾರ ಮುಂತಾದವನ್ನು ಮಾಡುತ್ತಿದ್ದರೂ ನನ್ನನ್ನು ನೆನಪು ಮಾಡುತ್ತಿರಿ. ಹೇಗೆ ನೆನಪು ಮಾಡುತ್ತೀರೆಂದರೆ ಪ್ರಿಯತಮ-ಪ್ರಿಯತಮೆಯಂತೆ. ಅವರಂತು ಒಬ್ಬರಿನ್ನೊಬ್ಬರು ನೆನಪು ಮಾಡುತ್ತಿರುತ್ತಾರೆ. ಇಲ್ಲಿ ಆ ಮಾತಿಲ್ಲಇಲ್ಲಂತು ನೀವೆಲ್ಲರೂ ಒಬ್ಬ ಪ್ರಿಯತಮನಿಗೆ ಜನ್ಮ-ಜನ್ಮಾಂತರದಿಂದ ಪ್ರಿಯತಮೆಯರಾಗಿ ಇರುತ್ತೀರಿ. ತಂದೆಯೆಂದಿಗೂ ನಿಮ್ಮ ಪ್ರಿಯತಮೆ ಆಗುವುದಿಲ್ಲನೀವು ಆ ಪ್ರಿಯತಮನೊಂದಿಗೆ ಭೇಟಿಯಾಗುವುದಕ್ಕಾಗಿ ನೆನಪು ಮಾಡುತ್ತಾ ಬಂದಿದ್ದೀರಿ. ಯಾವಾಗ ದುಃಖವು ಹೆಚ್ಚಾಗುತ್ತದೆಯೋ ಆಗ ಹೆಚ್ಚು ಸ್ಮರಿಸುತ್ತೀರಿ. ಮಹಿಮೆಯಲ್ಲಿಯೂ ಇದೆ – ದುಃಖಲ್ಲಿ ಎಲ್ಲರೂ ಸ್ಮರಿಸುತ್ತಾರೆಸುಖದಲ್ಲಿ ಯಾರೂ ಸ್ಮರಿಸುವುದಿಲ್ಲ…. ಈ ಸಮಯದಲ್ಲಿ ತಂದೆಯೂ ಸರ್ವಶಕ್ತಿವಂತನಾಗಿದ್ದಾರೆಅದೇರೀತಿ ದಿನಕಳೆದಂತೆ ಮಾಯೆಯೂ ಸರ್ವಶಕ್ತಿವಂತತಮೋಪ್ರಧಾನವಾಗುತ್ತಾ ಹೋಗುತ್ತದೆ. ಆದ್ದರಿಂದ ಈಗ ತಂದೆಯು ಹೇಳುತ್ತಾರೆ – ಮಧುರ ಮಕ್ಕಳೇದೇಹಿ-ಅಭಿಮಾನಿ ಆಗಿರಿ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯಾದ ನನ್ನನ್ನು ನೆನಪು ಮಾಡಿರಿ ಹಾಗೂ ಜೊತೆ-ಜೊತೆಗೆ ದೈವೀ ಗುಣಗಳ ಧಾರಣೆಯನ್ನೂ ಮಾಡಿಕೊಳ್ಳುತ್ತೀರೆಂದರೆನೀವು ಈ ರೀತಿ (ಲಕ್ಷ್ಮೀ-ನಾರಾಯಣ) ಆಗಿ ಬಿಡುವಿರಿ. ಈ ವಿದ್ಯಾಭ್ಯಾಸದಲ್ಲಿ ಮುಖ್ಯವಾದ ಮಾತೇ ನೆನಪಿನದಾಗಿದೆ. ಸರ್ವ ಶ್ರೇಷ್ಠವಾದ ತಂದೆಯನ್ನು ಬಹಳ ಪ್ರೀತಿ ಹಾಗೂ ಸ್ನೇಹದಿಂದ ನೆನಪು ಮಾಡಬೇಕುಆ ಸರ್ವಶ್ರೇಷ್ಠ ತಂದೆಯೇ ಹೊಸ ಪ್ರಪಂಚದ ಸ್ಥಾಪನೆ ಮಾಡುವವರಾಗಿದ್ದಾರೆ. ತಂದೆಯು ತಿಳಿಸುತ್ತಾರೆ – ನಾನು ನೀವು ಮಕ್ಕಳಿಗೆ ವಿಶ್ವದ ರಾಜ್ಯ ಮಾಲೀಕರನ್ನಾಗಿ ಮಾಡುವುದಕ್ಕಾಗಿ ಬಂದಿರುವೆನು ಆದ್ದರಿಂದ ನನ್ನನ್ನು ನೆನಪು ಮಾಡುತ್ತೀರೆಂದರೆನಿಮ್ಮ ಅನೇಕ ಜನ್ಮಗಳ ಪಾಪವು ತುಂಡಾಗುವುದು. ಪತಿತ ಪಾವನ ತಂದೆಯು ಹೇಳುತ್ತಾರೆ – ನೀವು ಬಹಳ ಪತಿತರಾಗಿ ಬಿಟ್ಟಿದ್ದೀರಿ. ಆದ್ದರಿಂದ ಈಗ ನನ್ನನ್ನು ನೆನಪು ಮಾಡಿರಿ ಅದರಿಂದ ನೀವು ಪಾವನರಾಗಿಪಾವನ ಪ್ರಪಂಚದ ಮಾಲೀಕರಾಗಿ ಬಿಡುತ್ತೀರಿ. ಪತಿತ-ಪಾವನ ಎಂದು ತಂದೆಯನ್ನೇ ಕರೆಯುವರಲ್ಲವೆಈಗ ತಂದೆಯು ಬಂದಿದ್ದಾರೆ ಅಂದಮೇಲೆ ಅವಶ್ಯವಾಗಿ ಪಾವನರಾಗಬೇಕಾಗುತ್ತದೆ. ತಂದೆಯು ದುಃಖಹರ್ತ ಸುಖಕರ್ತನಾಗಿದ್ದಾರೆಅವಶ್ಯವಾಗಿ ಸತ್ಯಯುಗದಲ್ಲಿ ಪಾವನ ಪ್ರಪಂಚವಿತ್ತು ಅಂದಮೇಲೆ ಎಲ್ಲರೂ ಸುಖಿಯಾಗಿದ್ದರು. ಈಗ ಪುನಃ ತಂದೆಯು ಹೇಳುವರು – ಮಕ್ಕಳೇಶಾಂತಿಧಾಮ ಹಾಗೂ ಸುಖಧಾಮವನ್ನು ನೆನಪು ಮಾಡುತ್ತಿರಿ. ಈಗಿರುವುದು ಸಂಗಮಯುಗಅಂಬಿಗನು ನಿಮ್ಮನ್ನು ಈ ದಡದಿಂದ ಆ ದಡಕ್ಕೆ ಕರೆದೊಯ್ಯುವರು. ಜೀವನ ದೋಣಿಯಂತು ಒಬ್ಬರದಲ್ಲಇಡೀ ಪ್ರಪಂಚವೇ ಒಂದು ದೊಡ್ಡ ಜಹಾಜು ಆಗಿದೆಅದನ್ನು ಪಾರು ಮಾಡಿ ಕರೆದೊಯ್ಯುವರು.

ಬೇಹದ್ದಿನ ತಂದೆಯು ನಮಗೆ ಓದಿಸುತ್ತಿದ್ದಾರೆಅದರಿಂದ ನೀವು ಮಧುರ ಮಕ್ಕಳಿಗೆ ಎಷ್ಟೊಂದು ಖುಷಿಯಾಗಬೇಕುನಿಮಗಾಗಿ ಸದಾ ಖುಷಿಯೇ ಖುಷಿಯಿದೆ. ವಾಹ್! ಇದಂತು ಎಂದೂ ಕೇಳಿಲ್ಲಓದಿಲ್ಲ. ಭಗವಾನುವಾಚ – ನಾನು ನೀವು ಆತ್ಮಿಕ ಮಕ್ಕಳಿಗೆ ರಾಜಯೋಗವನ್ನು ಕಲಿಸುತ್ತಿದ್ದೇನೆಅಂದಮೇಲೆ ಸಂಪೂರ್ಣವಾಗಿ ಕಲಿಯಬೇಕುಧಾರಣೆ ಮಾಡಿಕೊಳ್ಳಬೇಕುಪೂರ್ಣರೀತಿ ವಿದ್ಯಾಭ್ಯಾಸ ಮಾಡಬೇಕು. ವಿದ್ಯೆಯಲ್ಲಂತು ಸದಾ ನಂಬರ್ವಾರ್ ಆಗುತ್ತಾರೆತಮ್ಮನ್ನು ನೋಡಿಕೊಳ್ಳಬೇಕು – ನಾನು ಉತ್ತಮನೇಮಧ್ಯಮನೇ ಅಥವಾ ಕನಿಷ್ಠನೇತಂದೆಯು ಹೇಳುತ್ತಾರೆ – ತಮ್ಮನ್ನು ನೋಡಿಕೊಳ್ಳಿರಿನಾನು ಶ್ರೇಷ್ಠ ಪದವಿ ಪಡೆಯುವುದಕ್ಕೆ ಯೋಗ್ಯನಿದ್ದೇನೆಯೇಆತ್ಮಿಕ ಸೇವೆ ಮಾಡುತ್ತೇನೆಯೇಏಕೆಂದರೆ ತಂದೆಯು ಹೇಳುತ್ತಾರೆ – ಸೇವಾಧಾರಿ ಆಗಿರಿಅನುಸರಣೆ ಮಾಡಿರಿ. ನಾನು ಬಂದಿರುವುದೇ ಸೇವೆಗಾಗಿಪ್ರತಿನಿತ್ಯವೂ ಸೇವೆ ಮಾಡುತ್ತೇನೆ ಆದ್ದರಿಂದ ಈ ರಥವನ್ನು ತೆಗೆದುಕೊಳ್ಳಲಾಗಿದೆ. ಈ ರಥವು ರೋಗಿಯಾದರೂ ನಾನು ಇದರಲ್ಲಿ ಕುಳಿತು ಮುರುಳಿ ಬರೆಸುತ್ತೇನೆ. ಮುಖದಿಂದಂತು ಮಾತನಾಡಲು ಸಾಧ್ಯವಿಲ್ಲದಿದ್ದರೆ ಬರೆದು ಬಿಡುತ್ತೇನೆ ಅದರಿಂದ ಮಕ್ಕಳಿಗೆ ಮುರುಳಿ ಮಿಸ್ ಆಗಬಾರದು ಎಂದು. ಅಂದಮೇಲೆ ನಾನೂ ಸಹ ಸೇವೆಯಲ್ಲಿದ್ದೇನೆ ಅಲ್ಲವೆ. ಇದು ಆತ್ಮಿಕ ಸೇವೆಯಾಗಿದೆನೀವೂ ಸಹ ತಂದೆಯ ಸೇವೆಯಲ್ಲಿಈಶ್ವರನ ಸೇವೆಯಲ್ಲಿ ತೊಡಗಿರಿ. ತಂದೆಯೇ ನಿಮ್ಮನ್ನು ಇಡೀ ವಿಶ್ವದ ಮಾಲೀಕರನ್ನಾಗಿ ಮಾಡಲು ಬಂದಿದ್ದಾರೆಅದರಲ್ಲಿ ಯಾರು ಬಹಳ ಚೆನ್ನಾಗಿ ಪುರುಷಾರ್ಥ ಮಾಡುತ್ತಾರೆಯೋ ಅವರನ್ನೇ ಮಹಾವೀರರೆಂದು ಕರೆಯಲಾಗುತ್ತದೆ. ಯಾರು ತಂದೆಯ ನಿರ್ದೇಶದನುಸಾರ ನಡೆಯುತ್ತಾರೆಯಾರು ಮಹಾವೀರರಾಗಿದ್ದಾರೆ ಎಂದು ನೋಡುತ್ತಾರೆ. ತಂದೆಯ ಆಜ್ಞೆಯಿದೆ – ತಮ್ಮನ್ನು ಆತ್ಮನೆಂದು ತಿಳಿದು ಸಹೋದರ-ಸಹೋದರರನ್ನು ನೋಡಿರಿಈ ಶರೀರವನ್ನು ಮರೆತು ಬಿಡಿ. ತಂದೆಯವರೂ ಸಹ ಶರೀರವನ್ನು ನೋಡುವುದಿಲ್ಲತಂದೆಯೇ ಹೇಳುತ್ತಾರೆ – ನಾನು ಆತ್ಮರನ್ನು ನೋಡುತ್ತೇನೆ. ಈ ತಿಳುವಳಿಕೆಯೂ ಇದೆ – ಆತ್ಮವು ಶರೀರವಿಲ್ಲದೆ ಮಾತನಾಡಲು ಸಾಧ್ಯವಿಲ್ಲನಾನೂ ಸಹ ಈ ಶರೀರದಲ್ಲಿ ಬರುತ್ತೇನೆಲೋನ್ ತೆಗೆದುಕೊಳ್ಳಲಾಗಿದೆ. ಶರೀರದೊಂದಿಗೇ ಆತ್ಮವು ಓದಲು ಸಾಧ್ಯ. ತಂದೆಯ ಸ್ಥಾನವು ಇಲ್ಲಿದೆಇದು ಅಕಾಲ ಸಿಂಹಾಸನವಾಗಿದೆಆತ್ಮವು ಅಕಾಲ ಮೂರ್ತಿಯಾಗಿದೆ. ಆತ್ಮವೆಂದಿಗೂ ಚಿಕ್ಕದು-ದೊಡ್ಡದಾಗುವುದಿಲ್ಲಶರೀರವಷ್ಟೇ ಚಿಕ್ಕದು-ದೊಡ್ಡದಾಗುವುದು. ಯಾರೆಲ್ಲಾ ಆತ್ಮರಿದ್ದಾರೆಯೋ ಅವರೆಲ್ಲರ ಸಿಂಹಾಸನವೂ ಈ ಭೃಕುಟಿಯ ಮಧ್ಯದಲ್ಲಿದೆ. ಶರೀರವಂತು ಎಲ್ಲರದೂ ಭಿನ್ನ-ಭಿನ್ನವಾಗಿರುತ್ತದೆ. ಕೆಲವರ ಅಕಾಲ ಸಿಂಹಾಸನ ಪುರುಷನದಾಗಿದ್ದರೆಕೆಲವರ ಅಕಾಲ ಸಿಂಹಾಸನವು ಸ್ತ್ರೀಯದಾಗಿದೆ. ಕೆಲವರ ಅಕಾಲ ಸಿಂಹಾಸನ ಮಗುವಿನದಾಗಿದೆ. ತಂದೆಯು ಕುಳಿತು ಮಕ್ಕಳಿಗೆ ಆತ್ಮಿಕ ಡ್ರಿಲ್ ಕಲಿಸುತ್ತಿದ್ದಾರೆಯಾವಾಗ ಯಾರೊಂದಿಗೇ ಮಾತನಾಡುತ್ತೀರಿಮೊದಲು ತಮ್ಮನ್ನು ಆತ್ಮನೆಂದು ತಿಳಿಯಿರಿ. ನಾನಾತ್ಮ ಇಂತಹ ಸಹೋದರನೊಂದಿಗೆ ಮಾತನಾಡುತ್ತಿರುವೆನುಶಿವ ತಂದೆಯನ್ನು ನೆನಪು ಮಾಡಿರಿ ಎಂದು ತಂದೆಯ ಸಂದೇಶವನ್ನು ಕೊಡುವೆನು. ಈ ನೆನಪಿನಿಂದಲೇ ತುಕ್ಕು ಬಿಟ್ಟು ಹೋಗುವುದು. ಚಿನ್ನದಲ್ಲಿ ಅಲಾಯಿ ಸೇರ್ಪಡೆಯಾದಾಗ ಚಿನ್ನದ ಬೆಲೆಯು ಕಡಿಮೆಯಾಗಿ ಬಿಡುತ್ತದೆ. ನೀವು ಆತ್ಮರಲ್ಲಿಯೂ ತುಕ್ಕು ಹಿಡಿದಿರುವುದರಿಂದ ಬೆಲೆಯಿಲ್ಲದೇ ಇರುವವರಾಗಿದ್ದೀರಿ. ಈಗ ಪುನಃ ಪಾವನರು ಆಗಬೇಕಾಗಿದೆ. ಈಗ ನೀವು ಆತ್ಮರಿಗೆ ಜ್ಞಾನದ ಮೂರನೇ ನೇತ್ರವು ಸಿಕ್ಕಿರುವುದು. ಆ ನೇತ್ರದಿಂದ ತಮ್ಮ ಸಹೋದರರನ್ನು ನೋಡಿರಿಸಹೋದರ-ಸಹೋದರನನ್ನು ನೋಡುವುದರಿಂದ ಕರ್ಮೇಂದ್ರಿಯಗಳೆಂದಿಗೂ ಚಂಚಲವಾಗುವುದಿಲ್ಲ. ರಾಜ್ಯಭಾಗ್ಯ ತೆಗೆದುಕೊಳ್ಳಬೇಕುವಿಶ್ವದ ಮಾಲೀಕರಾಗಬೇಕೆಂದರೆ ಇಷ್ಟು ಪರಿಶ್ರಮ ಪಡಬೇಕು. ಸಹೋದರ-ಸಹೋದರನೆಂದು ತಿಳಿದು ಎಲ್ಲರಿಗೂ ಜ್ಞಾನವನ್ನು ಕೊಡುತ್ತೀರೆಂದರೆ ಅಭ್ಯಾಸವು ಪರಿಪಕ್ವವಾಗಿ ಬಿಡುತ್ತದೆ. ನೀವೆಲ್ಲರೂ ಸತ್ಯ-ಸತ್ಯವಾದ ಸಹೋದರರಾಗಿದ್ದೀರಿತಂದೆಯವರೂ ಮೇಲಿಂದ ಬಂದಿದ್ದಾರೆನೀವೂ ಸಹ ಬಂದಿದ್ದೀರಿ. ತಂದೆ ಮಕ್ಕಳ ಸಹಿತವಾಗಿ ಸೇವೆ ಮಾಡುತ್ತಿದ್ದಾರೆಸೇವೆ ಮಾಡುವ ಸಾಹಸವನ್ನು ತಂದೆಯವರು ಕೊಡುತ್ತಾರೆ. ಸಾಹಸ ಮಕ್ಕಳದುಸಹಯೋಗ ತಂದೆಯದು….. ಅಂದಮೇಲೆ ನಾನು ಆತ್ಮನು ಸಹೋದರನಿಗೆ ಓದಿಸುತ್ತಿದ್ದೇನೆ ಎಂಬ ಅಭ್ಯಾಸವನ್ನು ಮಾಡಿಕೊಳ್ಳಬೇಕು. ಆತ್ಮವು ಓದುತ್ತದೆಯಲ್ಲವೆ. ಇದಕ್ಕೆ ಆಧ್ಯಾತ್ಮಿಕ ಜ್ಞಾನವೆಂದು ಹೇಳಲಾಗುತ್ತದೆಅದು ಆತ್ಮಿಕ ತಂದೆಯಿಂದಲೇ ಸಿಗುವುದು. ಸಂಗಮದಲ್ಲಿಯೇ ತಂದೆಯು ಬಂದು ಈ ಜ್ಞಾನವನ್ನು ಕೊಡುತ್ತಾರೆ – ತಮ್ಮನ್ನು ಆತ್ಮನೆಂದು ತಿಳಿಯಿರಿ. ನೀವು ಅಶರೀರಿಯಾಗಿ ಬಂದಿದ್ದಿರಿ ಮತ್ತೆ ಇಲ್ಲಿ ಶರೀರ ಧಾರಣೆ ಮಾಡಿಕೊಂಡು 84 ಜನ್ಮಗಳ ಪಾತ್ರವನ್ನು ಅಭಿನಯಿಸಿದಿರಿ. ಈಗ ಪುನಃ ಹಿಂತಿರುಗಿ ಹೊರಡಬೇಕಾಗಿದೆ. ಆದ್ದರಿಂದ ತಮ್ಮನ್ನು ಆತ್ಮನೆಂದು ತಿಳಿದುಸಹೋದರ-ಸಹೋದರನ ದೃಷ್ಟಿಯಿಂದ ನೋಡುವ ಪರಿಶ್ರಮ ಪಡಬೇಕಾಗಿದೆ. ನೀವು ಮಕ್ಕಳು ತಮಗಾಗಿ ಪರಿಶ್ರಮ ಪಡಬೇಕಾಗಿದೆಅನ್ಯರಿಗೇನು ಹೋಗುವುದು. ಮನೆಯೇ ಮೊದಲ ಪಾಠಶಾಲೆ ಅರ್ಥಾತ್ ಮೊದಲು ಸ್ವಯಂನ್ನು ಆತ್ಮನೆಂದು ತಿಳಿದುನಂತರ ಸಹೋದರರಿಗೆ ತಿಳಿಸುತ್ತೀರೆಂದರೆ ಬಹಳ ಚೆನ್ನಾಗಿ ಬಾಣ ನಾಟುವುದು. ಈ ರೀತಿ ಹರಿತ ತುಂಬಬೇಕಾಗಿದೆ. ಪರಿಶ್ರಮ ಪಟ್ಟರೆ ಶ್ರೇಷ್ಠ ಪದವಿಯನ್ನು ಪಡೆಯುವಿರಿತಂದೆಯು ಬಂದಿರುವುದೇ ಫಲ ಕೊಡುವುದಕ್ಕಾಗಿ ಅಂದಮೇಲೆ ಪರಿಶ್ರಮವನ್ನಂತು ಪಡಬೇಕಾಗುವುದು. ಸ್ವಲ್ಪ ಸಹನೆಯನ್ನೂ ಮಾಡಬೇಕಾಗುವುದು.

ಯಾರಾದರೂ ನಿಮಗೆ ಉಲ್ಟಾ ಸುಲ್ಟಾ ಮಾತನ್ನೇನಾದರೂ ಹೇಳಿದರೆ ನೀವು ಶಾಂತವಾಗಿ ಇರಬೇಕು. ನೀವು ಶಾಂತವಾಗಿದ್ದರೆ ಅನ್ಯರೇನು ಮಾಡುವರು. ಎರಡು ಕೈ ಸೇರಿಸಿದಾಗಲೇ ಚಪ್ಪಾಳೆಯಾಗುವುದು. ಒಬ್ಬರ ಮುಖದಿಂದ ಚಪ್ಪಾಳೆಯಾಯಿತುಇನ್ನೊಬ್ಬರು ಶಾಂತವಾಗಿದ್ದರೆ ಅವರೂ ಸಹ ಸ್ವತಹವಾಗಿಯೇ ಶಾಂತವಾಗಿ ಬಿಡುವರು. ಕೈ-ಕೈ ಸೇರುವುದರಿಂದಲೇ ಶಬ್ಧ ಬರುತ್ತದೆ. ಮಕ್ಕಳು ಒಬ್ಬರಿನ್ನೊಬ್ಬರ ಕಲ್ಯಾಣ ಮಾಡಬೇಕಾಗಿದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇಸದಾ ಖುಷಿಯಲ್ಲಿರಬೇಕೆಂದು ಬಯಸುತ್ತೀರೆಂದರೆ ಮನ್ಮನಾಭವ. ತಮ್ಮನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾದಿರಿ. ಸಹೋದರ(ಆತ್ಮರನ್ನು)ನ ಕಡೆ ನೋಡಿರಿಸಹೋದರಿಗೂ ಈ ಜ್ಞಾನ ಕೊಡಿಈ ಹವ್ಯಾಸವಾಗುವುದರಿಂದ ಕೆಟ್ಟ ದೃಷ್ಠಿಯು ಮೋಸ ಮಾಡುವುದಿಲ್ಲ. ಜ್ಞಾನದ ಮೂರನೇ ನೇತ್ರದಿಂದ ಮೂರನೇ ನೇತ್ರವನ್ನು ನೋಡಿತಂದೆಯೂ ಸಹ ನಿಮ್ಮ ಆತ್ಮವನ್ನೇ ನೋಡುತ್ತಾರೆ. ಸದಾ ಆತ್ಮವನ್ನೇ ನೋಡುವ ಪ್ರಯತ್ನ ಪಡಬೇಕುಶರೀರವನ್ನು ನೋಡಲೇಬಾರದು. ಯೋಗ ಮಾಡಿಸುವಾಗಲೂ ತಮ್ಮನ್ನು ಆತ್ಮನೆಂದು ತಿಳಿದು ಸಹೋದರರನ್ನು ನೋಡುತ್ತಾ ಇರುತ್ತೀರೆಂದರೆ ಸೇವೆಯು ಬಹಳ ಚೆನ್ನಾಗಿ ಆಗುವುದು. ತಂದೆಯು ಹೇಳಿದ್ದಾರೆ – ಸಹೋದರರಿಗೆ ತಿಳಿಸಿರಿಎಲ್ಲಾ ಸಹೋದರರಿಗೂ ತಂದೆಯಿಂದ ಆಸ್ತಿಯು ಸಿಗುವುದು. ಈ ಆತ್ಮಿಕ ಜ್ಞಾನವು ಒಂದು ಬಾರಿಯೇ ನೀವು ಬ್ರಾಹ್ಮಣ ಮಕ್ಕಳಿಗೆ ಸಿಗುತ್ತದೆ. ನೀವು ಬ್ರಾಹ್ಮಣರೇ ಮತ್ತೆ ದೇವತೆಗಳು ಆಗುವವರಿದ್ದೀರಿ. ಈ ಸಂಗಮಯುಗವನ್ನು ಬಿಡಬಾರದುಇಲ್ಲದಿದ್ದರೆ ತಾವೇಗೆ ಪಾರಾಗುತ್ತೀರಿ! ಇದು ಅದ್ಭುತವಾದ ಸಂಗಮಯುಗದಅಂದಮೇಲೆ ಮಕ್ಕಳು ಆತ್ಮಿಕ ಯಾತ್ರೆಯಲ್ಲಿರುವ ಹವ್ಯಾಸವನ್ನು ಹಾಕಿಕೊಳ್ಳಬೇಕಾಗಿದೆ. ನಿಮಗಾಗಿ ಲಾಭದ್ದೇ ಮಾತಾಗಿದೆತಂದೆಯ ಶಿಕ್ಷಣವನ್ನು ಸಹೋದರರಿಗೆ ಕೊಡಬೇಕಾಗಿದೆ. ತಂದೆಯು ತಿಳಿಸುತ್ತಾರೆ – ನಾನು ನೀವು ಆತ್ಮರಿಗೆ ತಿಳುವಳಿಕೆ ಕೊಡುತ್ತಿದ್ದೇನೆಆತ್ಮವನ್ನೇ ನೋಡುತ್ತೇನೆ. ಮನುಷ್ಯನು-ಮನುಷ್ಯನೊಂದಿಗೆ ಮಾತನಾಡುವಾಗ ಅವರ ಮುಖವನ್ನು ನೋಡುವರಲ್ಲವೆ. ನೀವು ಆತ್ಮನೊಂದಿಗೆ ಮಾತನಾಡುತ್ತೀರಿ ಆದ್ದರಿಂದ ಆತ್ಮವನ್ನೇ ನೋಡಬೇಕು. ಭಲೆ ಶರೀರದ ಮೂಲಕ ತಿಳುವಳಿಕೆ ಕೊಡುತ್ತೀರಿ ಆದರೆ ಇದರಲ್ಲಿ ಶರೀರದ ಪರಿವೆಯನ್ನು ಬಿಡಬೇಕಾಗುತ್ತದೆ. ಪರಮಾತ್ಮ ತಂದೆಯು ಈ ಜ್ಞಾನವನ್ನು ನಮಗೆ ಕೊಡುತ್ತಿದ್ದಾರೆಂದು ನಿಮ್ಮ ಆತ್ಮವು ತಿಳಿಯುತ್ತದೆತಂದೆಯೂ ಹೇಳುತ್ತಾರೆ – ಆತ್ಮರನ್ನು ನೋಡುತ್ತೇನೆಆತ್ಮರೂ ಸಹ ಹೇಳುತ್ತಾರೆ – ನಾವು ಪರಮಾತ್ಮ ತಂದೆಯನ್ನು ನೋಡುತ್ತಿದ್ದೇವೆ. ಅವರಿಂದ ಜ್ಞಾನವನ್ನು ಪಡೆಯುತ್ತಿದ್ದೇವೆಇದಕ್ಕೆ ಆತ್ಮನು ಆತ್ಮನ ಜೊತೆ ಆಧ್ಯಾತ್ಮಿಕ ಜ್ಞಾನದ ಲೇವಾದೇವಿ ಎಂದು ಹೇಳಲಾಗುತ್ತದೆ. ಆತ್ಮದಲ್ಲಿಯೇ ಜ್ಞಾನವಿದೆ, ಆತ್ಮನಿಗೇ ಕೊಡಬೇಕಾಗಿದೆಇದು ಹೇಗೆಂದರೆ ಹರಿತವಿದ್ದಂತೆ. ನಿಮ್ಮ ಜ್ಞಾನದಲ್ಲಿ ಈ ಹರಿತವು ತುಂಬುತ್ತದೆಯೆಂದರೆಯಾರಿಗಾದರೂ ತಿಳಿಸುವುದರಿಂದ ತಕ್ಷಣವೇ ಬಾಣ ನಾಟುವುದು. ತಂದೆಯು ಹೇಳುತ್ತಾರೆ – ಬಾಣ ನಾಟುವುದೋ ಅಥವಾ ಇಲ್ಲವೋ ಎಂದು ಅಭ್ಯಾಸ ಮಾಡಿ ನೋಡಿ. ಈ ಹೊಸ ಹವ್ಯಾಸ ಮಾಡಿಕೊಂಡಾಗಲೇ ಶರೀರದ ಪರಿವೆಯು ಹೊರಟು ಹೋಗುವುದು. ಮಾಯೆಯ ಬಿರುಗಾಳಿಯು ಕಡಿಮೆ ಬರುತ್ತವೆಕೆಟ್ಟ ಸಂಕಲ್ಪಗಳು ಬರುವುದಿಲ್ಲಕೆಟ್ಟ ದೃಷ್ಟಿಯೂ ಇರುವುದಿಲ್ಲ. ನಾವು ಆತ್ಮರು 84 ಜನ್ಮಗಳ ಚಕ್ರವನ್ನು ಸುತ್ತಿಕೊಂಡು ಬಂದೆವುಈ ನಾಟಕವು ಈಗ ಪೂರ್ಣವಾಗುವುದಿದೆ. ಅದಕ್ಕಾಗಿ ಈಗ ತಂದೆಯ ನೆನಪಿನಲ್ಲಿರಬೇಕುಈ ನೆನಪಿನಿಂದಲೇ ತಮೋಪ್ರಧಾನರಿಂದ ಸತೋಪ್ರಧಾನರಾಗಿದೆಸತೋಪ್ರಧಾನ ಪ್ರಪಂಚದ ಮಾಲೀಕರಾಗುತ್ತೇವೆ. ಇದೆಷ್ಟು ಸಹಜವಿದೆ! ತಂದೆಗೆ ಗೊತ್ತಿದೆ – ಮಕ್ಕಳಿಗೆ ಈ ಶಿಕ್ಷಣ ಕೊಡುವುದೂ ಸಹ ನನ್ನ ಪಾತ್ರವಾಗಿದೆ. ಇದೇನೂ ಹೊಸ ಮಾತಲ್ಲಪ್ರತೀ 5000 ವರ್ಷಗಳ ನಂತರ ನಾವು (ಶಿವ ತಂದೆ) ಬರಬೇಕಾಗುತ್ತದೆ. ಇದರಲ್ಲಿ ನಾನು ಬಂಧಿತನಾಗಿದ್ದೇನೆಕುಳಿತು ಮಕ್ಕಳಿಗೆ ತಿಳಿಸುತ್ತೇನೆ – ಮಧುರ ಮಕ್ಕಳೇ, ಆತ್ಮಿಕ ನೆನಪಿನ ಯಾತ್ರೆಯಲ್ಲಿ ಇರುತ್ತೀರೆಂದರೆ ಅಂತ್ಯಮತಿ ಸೋ ಗತಿಯಾಗುವುದು. ಇದು ಅಂತ್ಯ ಕಾಲವಲ್ಲವೆ. ನನ್ನೊಬ್ಬನನ್ನೇ ನೆನಪು ಮಾಡುತ್ತೀರೆಂದರೆ ನಿಮ್ಮ ಸದ್ಗತಿಯಾಗುವುದು. ನೆನಪಿನ ಯಾತ್ರೆಯಿಂದ ಬುನಾದಿಯು ಶಕ್ತಿಶಾಲಿ ಆಗಿ ಬಿಡುವುದು. ನೀವು ಮಕ್ಕಳಿಗೆ ದೇಹಿ-ಅಭಿಮಾನಿಯಾಗುವ ಈ ಶಿಕ್ಷಣವು ಒಂದೇ ಬಾರಿ ಸಿಗುತ್ತದೆ, ಇದೆಷ್ಟು ಅದ್ಭುತವಾದ ಜ್ಞಾನವಾಗಿದೆ. ಬಾಬಾರವರು ಅದ್ಭುತ ಅಂದಮೇಲೆ ಬಾಬಾರವರ ಜ್ಞಾನವೂ ಅದ್ಭುತವಾಗಿದೆ. ಇದನ್ನು ಯಾರೂ ಸಹ ತಿಳಿಸಲು ಸಾಧ್ಯವಿಲ್ಲ. ಈಗ ಹಿಂತಿರುಗಿ ಹೊರಡಬೇಕು. ಆದ್ದರಿಂದ ತಂದೆಯು ತಿಳಿಸುತ್ತಾರೆ – ಮಧುರ ಮಕ್ಕಳೇತಮ್ಮನ್ನು ಆತ್ಮನೆಂದು ಆತ್ಮನಿಗೆ ಜ್ಞಾನ ಕೊಡಿಮೂರನೇ ನೇತ್ರದಿಂದ ಸಹೋದರ-ಸಹೋದರನನ್ನು ನೋಡಬೇಕಾಗಿದೆ – ಈ ಅಭ್ಯಾಸ ಮಾಡಿರಿ. ಇದರಲ್ಲಿಯೇ ಬಹಳ ಪರಿಶ್ರಮವಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾ-ಪಿತ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ತಂದೆಯ ಆತ್ಮಿಕ ಮಕ್ಕಳಿಗೆ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಜ್ಞಾನದ ಮೂರನೇ ನೇತ್ರದಿಂದ ಆತ್ಮವನ್ನು ನೋಡುವ ಅಭ್ಯಾಸ ಮಾಡಬೇಕಾಗಿದೆ. ಪ್ರಯತ್ನ ಪಡಬೇಕು – ಸದಾ ಆತ್ಮವನ್ನೇ ನೋಡಬೇಕುಶರೀರವನ್ನಲ್ಲಇದರಿಂದ ಕೆಟ್ಟ ವಿಚಾರಗಳೂ ಬರುವುದಿಲ್ಲ. ಕೆಟ್ಟ ಸಂಕಲ್ಪಗಳು ಸಮಾಪ್ತಿಯಾಗಿ ಬಿಡುತ್ತವೆ.

2. ಚಪ್ಪಾಳೆಯನ್ನು ಎರಡು ಕೈಗಳಿಂದ ಉಂಟಾಗುತ್ತದೆ, ಆದ್ದರಿಂದ ಯಾವಾಗ ನಿಮಗೆ ಯಾರಾದರೂ ಉಲ್ಟಾ ಸುಲ್ಟಾ ಮಾತನ್ನು ಹೇಳಿದಾಗ ಶಾಂತವಾಗಿ ಇರಬೇಕು. ಒಂದುವೇಳೆ ನೀವು ಶಾಂತವಾಗಿದ್ದರೆ ಸ್ವತಹವಾಗಿಯೇ ಅನ್ಯರು ಶಾಂತವಾಗಿ ಬಿಡುವರು.

ವರದಾನ:-

ಬ್ರಹ್ಮಾ ತಂದೆಯವರೊಂದಿಗೆ ನಮಗೆ ಬಹಳ ಪ್ರೀತಿಯಿದೆ ಎಂದೇನಾದರೂ ಹೇಳುತ್ತೀರೆಂದರೆಪ್ರೀತಿಯ ಸಂಕೇತವಾಗಿದೆ – ತಂದೆಯವರ ಪ್ರೀತಿಯು ಯಾರೊಂದಿಗಿತ್ತು ಅವರೊಂದಿಗೆ ಪ್ರೀತಿಯಿರಲಿ. ಯಾವುದೇ ಕರ್ಮವನ್ನು ಮಾಡಿಕರ್ಮ ಮಾಡುವ ಮೊದಲುಮಾತನಾಡುವ ಮೊದಲುಸಂಕಲ್ಪ ಮಾಡುವ ಮೊದಲು ಪರಿಶೀಲನೆ ಮಾಡಿರಿ – ಇದು ಬ್ರಹ್ಮಾ ತಂದೆಯವರಿಗೆ ಪ್ರಿಯವಾಗಿರುವುದೇಬ್ರಹ್ಮಾ ತಂದೆಯಲ್ಲಿ ವಿಶೇಷ ವಿಶೇಷತೆಯು ಇದೇ ಇದ್ದಿತು – ಯೋಚಿಸಿರುವುದನ್ನು ಮಾಡುವುದುಏನನ್ನು ಹೇಳಿದರೋ ಅದನ್ನು ಮಾಡಿದರು. ವಿರೋಧವಿದ್ದರೂ ಸಹ ಸದಾ ತನ್ನ ಸ್ಥಿತಿಯಲ್ಲಿ ಸ್ಥಿತರಾಗಿದ್ದರು. ಅಂದಮೇಲೆ ಪ್ರೀತಿಯ ಪ್ರತ್ಯಕ್ಷ ಪ್ರಮಾಣ ಕೊಡುವುದು ಅಂದರೆ ತಂದೆಯನ್ನು ಅನುಸರಿಸುತ್ತಾ ಸುಪುತ್ರ ಹಾಗೂ ಸಮಾನರಾಗುವುದು.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:

ಪರಮಾತ್ಮನ ಪ್ರೀತಿಯು ಅಕೂಟವಾಗಿದೆಅಟಲವಾಗಿದೆಅದು ಸರ್ವರಿಗೂ ಪ್ರಾಪ್ತಿಯಾಗಲು ಸಾಧ್ಯವಾಗುವಷ್ಟು ಇದೆ. ಆದರೆ ಪರಮಾತ್ಮನ ಪ್ರೀತಿಯ ಪ್ರಾಪ್ತಿಯ ವಿಧಿಯಾಗಿದೆ – ಭಿನ್ನರಾಗಿರುವುದು. ಎಷ್ಟು ಭಿನ್ನವಾಗಿರುತ್ತೀರಿ ಅಷ್ಟು ಪರಮಾತ್ಮನ ಪ್ರೀತಿಯ ಅಧಿಕಾರವು ಪ್ರಾಪ್ತಿಯಾಗುವುದು. ಇಂತಹ ಭಿನ್ನ ಹಾಗೂ ಪ್ರಿಯವಾದ ಆತ್ಮರೇ ಲವಲೀನ ಸ್ಥಿತಿಯ ಅನುಭವ ಮಾಡಲು ಸಾಧ್ಯವಾಗುವುದು.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top