07 January 2022 KANNADA Murli Today | Brahma Kumaris

Read and Listen today’s Gyan Murli in Kannada

January 6, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಸರ್ವಶಕ್ತಿವಂತ ತಂದೆಯ ನೆನಪಿನಿಂದ ಆತ್ಮದ ಮೇಲೆ ಹಿಡಿದಿರುವ ವಿಕಾರಗಳ ತುಕ್ಕನ್ನು ಬಿಡಿಸಿಕೊಳ್ಳುವಂತಹ ಪುರುಷಾರ್ಥವನ್ನು ಮಾಡಬೇಕು”

ಪ್ರಶ್ನೆ:: -

ತಂದೆಯ ಜೊತೆ ಬುದ್ಧಿಯೋಗ ಮುರಿಯಲು ಮುಖ್ಯ ಕಾರಣ ಹಾಗೂ ಜೋಡಿಸುವ ಸಹಜ ಪುರುಷಾರ್ಥವೇನು?

ಉತ್ತರ:-

ದೇಹಾಭಿಮಾನದಲ್ಲಿ ಬರುವುದರಿಂದ, ತಂದೆಯ ಆಜ್ಞೆಯನ್ನು ಮರೆಯುವುದರಿಂದ, ಕೆಟ್ಟ ದೃಷ್ಟಿ ಇಟ್ಟುಕೊಳ್ಳುವುದರಿಂದ ಬುದ್ಧಿಯೋಗ ಮುರಿಯುತ್ತದೆ. ಆದ್ದರಿಂದ ತಂದೆಯು ತಿಳಿಸುತ್ತಾರೆ-ಮಕ್ಕಳೇ ಎಷ್ಟು ಸಾಧ್ಯವೊ ಅಷ್ಟು ಆಜ್ಞಾಕಾರಿಗಳಾಗಿ. ದೇಹೀ ಅಭಿಮಾನಿಯಾಗುವ ಪೂರ್ಣ ಪುರುಷಾರ್ಥ ಮಾಡಿ. ಅವಿನಾಶಿ ಭವರೋಗ ವೈದ್ಯನ (ಸರ್ಜನ್) ನೆನಪಿನಿಂದ ಆತ್ಮವನ್ನು ಶುದ್ಧ ಮಾಡಿಕೊಳ್ಳಬೇಕು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನೀವು ಮುಂಬರುವಂತಹ ಪ್ರಪಂಚದ ಅದೃಷ್ಟವಂತರು…

ಓಂ ಶಾಂತಿ. ಶಿವ ಭಗವಾನುವಾಚ. ಮಕ್ಕಳು ಗೀತೆಯನ್ನು ಕೇಳಿದಿರಿ. ನಮ್ಮ ಮುಂದೆ ತಂದೆ ಕುಳಿತಿದ್ದಾರೆ, ಅವರನ್ನು ಪತಿತ ಪಾವನನೆಂದು ಕರೆಯಲಾಗುತ್ತದೆ-ಇದು ಮಕ್ಕಳಿಗೆ ತಿಳಿದಿದೆ. ಪರಮಪಿತ ಪರಮಾತ್ಮನಿಗೆ ಅವಶ್ಯಕವಾಗಿ ಪತಿತ ಪಾವನನೆಂದು ಹೇಳಲಾಗುತ್ತದೆ. ಬ್ರಹ್ಮಾ, ವಿಷ್ಣು, ಶಂಕರರಿಗೆ ಪತಿತ-ಪಾವನರೆಂದು ಹೇಳಲಾಗುವುದಿಲ್ಲ. ಅವರಂತೂ ಜ್ಞಾನಸಾಗರಾಗಿದ್ದಾರೆ. ನಾವು ಆತ್ಮಗಳು ಪರಮಪಿತ ಪರಮಾತ್ಮನಿಂದ ಜ್ಞಾನ ಕೇಳುತ್ತೇವೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ನೀವೀಗ ಆತ್ಮಾಭಿಮಾನಿಗಳಾಗಿದ್ದೀರಿ. ಪ್ರಪಂಚದವರೆಲ್ಲರು ದೇಹಾಭಿಮಾನಿಗಳಾಗಿದ್ದಾರೆ. ಆತ್ಮಾಭಿಮಾನಿಗಳು ಶ್ರೇಷ್ಠಾಚಾರಿಗಳಾಗುತ್ತಾರೆ. ಪರಮಾತ್ಮನೇ ಕುಳಿತು ಅವರನ್ನು ಆತ್ಮಾಭಿಮಾನಿಯನ್ನಾಗಿ ಮಾಡುತ್ತಾರೆ. ತಂದೆ ತಿಳಿಸುತ್ತಾರೆ-ಆತ್ಮವೇ ಪಾಪಾತ್ಮ, ಪುಣ್ಯಾತ್ಮ ಆಗುತ್ತದೆ. ಪಾಪ ಜೀವ ಅಥವಾ ಪುಣ್ಯ ಜೀವ ಎಂದು ಹೇಳುವುದಿಲ್ಲ. ಆತ್ಮನಲ್ಲಿಯೇ ಸಂಸ್ಕಾರ ಇರುತ್ತದೆ. ಶರೀರವಾದರೆ ಮತ್ತೆ ಮತ್ತೆ ವಿನಾಶವಾಗಿ ಬಿಡುತ್ತದೆ. ಮಕ್ಕಳು ತಿಳಿದುಕೊಂಡಿದ್ದೀರಿ-ಶಿವಬಾಬಾರವರಿಗೆ ಅವಿನಾಶಿ ಸರ್ಜನ್ ಎಂದು ಹೇಳುತ್ತಾರೆ. ಆತ್ಮವು ಅವಿನಾಶಿ, ತಂದೆಯು ಸಹ ಅವಿನಾಶಿಯಾಗಿದ್ದಾರೆ. ಆತ್ಮ ಎಂದಿಗೂ ವಿನಾಶ ಆಗುವುದಿಲ್ಲ. ಆದರೆ ಆತ್ಮನಿಗೆ ಭೂತಗಳ ತುಕ್ಕು ಹಿಡಿದಿದೆ. ತುಂಬಾ ನಂಬರ್ ವನ್ ಕೊಳಕು ಕಾಮ ವಿಕಾರದ್ದಾಗಿದೆ. ನಂತರ ಕ್ರೋಧದ ಭೂತ ಆಗಿದೆ. ಆತ್ಮಗಳಿಗೆ ತಂದೆ ಕುಳಿತು ತಿಳಿಸಿ ಕೊಡುತ್ತಿರುವಾಗ ಈ ಪಕ್ಕಾ ನಿಶ್ಚಯವು ಇರಬೇಕಾಗಿದೆ, ಪರಮಪಿತ ಪರಮಾತ್ಮ ಸಾಧಾರಣ ಬ್ರಹ್ಮಾ ಶರೀರದಲ್ಲಿ ಪ್ರವೇಶ ಮಾಡುತ್ತಾರೆ. ಪರಮಪಿತ ಪರಮಾತ್ಮನು ಇವರ ರಥದ ರಥಿಯಾಗಿದ್ದಾರೆ. ಇದು ಕುದುರೆ ಗಾಡಿಯ ರಥವಲ್ಲ. ಪರಮಪಿತ ಪರಮಾತ್ಮ ಮಕ್ಕಳಿಗೆ ತಿಳಿಸಿ ಕೊಡುತ್ತಿದ್ದಾರೆ-ಹೇ ಆತ್ಮ ನಿಮ್ಮ ಮೇಲೆ ಪಂಚ ವಿಕಾರಗಳ ತುಕ್ಕು ಹಿಡಿದಿದೆ. ಪಂಚ ವಿಕಾರಗಳೆಂದು ರಾವಣನಿಗೆ ಕರೆಯಲಾಗುತ್ತದೆ. ರಾವಣ ತುಕ್ಕು ಹಿಡಿದಿರುವ ಕಾರಣವೇ ನೀವೆಲ್ಲರೂ ವಿಕಾರಿ ಹಾಗೂ ದುಃಖಿಗಳಾಗಿ ಬಿಟ್ಟಿದ್ದೀರಿ. ನಾನೀಗ ನಿಮ್ಮ ಈ ತುಕ್ಕನ್ನು ಬಿಡಿಸುತ್ತಿದ್ದೇನೆ. ಈ ತುಕ್ಕನ್ನು ಬಿಡಿಸುವಂತಹ ಸರ್ಜನ್ ನಾನೊಬ್ಬನೇ ಆಗಿದ್ದೇನೆ. ಬೇರೆ ಯಾವ ಮನುಷ್ಯ ಆತ್ಮರು ಸರ್ಜನ್ ಆಗಲು ಸಾಧ್ಯವಿಲ್ಲ. ಮನುಷ್ಯರೆಂದಿಗೂ ಆತ್ಮರ ಪಾಪವನ್ನು ದೂರ ಮಾಡಲು ಸಾಧ್ಯವಿಲ್ಲ. ಈ ಪಾಪವನ್ನು ದೂರ ಮಾಡಲಿಕ್ಕೋಸ್ಕರ ಸರ್ವ ಶಕ್ತಿವಂತ ಪರಮಾತ್ಮನ ಅವಶ್ಯಕತೆಯಿದೆ. ಪರಮಾತ್ಮ ಹೇಳುತ್ತಾರೆ, ಹೇ ಜೀವಾತ್ಮಗಳೇ, ಹೇ ನನ್ನ ಮಕ್ಕಳೇ! ನನ್ನನ್ನು ನೆನಪು ಮಾಡಿದಾಗ ನಿಮ್ಮ ಆತ್ಮನ ಪಾಪ ನಾಶವಾಗಿ ಬಿಡುತ್ತದೆ. ನೆನಪು ಮಾಡದೆ ಇದ್ದರೆ ಪಾಪ ನಾಶವಾಗುವುದಿಲ್ಲ. ಧಾರಣೆಯು ಸಹ ಆಗುವುದಿಲ್ಲ, ಆಗ ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳುವುದಿಲ್ಲ. ತುಕ್ಕು ಹಿಡಿದಿರುವಂತಹವರಿಗೆ ಪತಿತರೆನ್ನಲಾಗುತ್ತದೆ. ಯಾವಾಗ ಆತ್ಮ ಪತಿತವಾಗುತ್ತದೆ ಆಗ ಆತ್ಮಕ್ಕೆ ಪತಿತ ಶರೀರ ಸಿಗುತ್ತದೆ. ಸತೋಪ್ರಧಾನ ಆತ್ಮ ಇದ್ದಾಗ ಸತೋಪ್ರಧಾನ ಶರೀರ ಸಿಗುತ್ತದೆ. ಹೇಗೆ ಹಿಟ್ಟಿನಲ್ಲಿರುವ ಉಪ್ಪಿನ ಸಮಾನ ನಿಧಾನ-ನಿಧಾನವಾಗಿ ತುಕ್ಕು ಹಿಡಿಯುತ್ತದೆ, ನಂತರ ದ್ವಾಪರದಲ್ಲಿ ತುಕ್ಕು ಜಾಸ್ತಿ ಹಿಡಿಯುತ್ತದೆ. ಆತ್ಮನ ಕಲೆಗಳು ನಿಧಾನ ನಿಧಾನವಾಗಿ ಕಡಿಮೆಯಾಗುತ್ತವೆ. ಹದಿನಾರರಿಂದ ಹದಿನಾಲ್ಕು ಕಲೆ ಆಗುವ ವೇಳೆಗೆ ಒಂದು ಸಾವಿರದ ಇನ್ನೂರ ಐವತ್ತು ವರ್ಷಗಳು ಬೇಕಾಗುತ್ತದೆ. ನಾವು ಬ್ರಹ್ಮಾಕುಮಾರ ಕುಮಾರಿಯರು ರಾಮನ ಮಕ್ಕಳೆಂಬ ನೆನಪು ಇರಬೇಕಾಗಿದೆ. ಉಳಿದವರೆಲ್ಲರೂ ರಾವಣನ ಮಕ್ಕಳಾಗಿದ್ದಾರೆ. ಏಕೆಂದರೆ ವಿಷ(ವಿಕಾರ)ದಿಂದ ಜನ್ಮ ಪಡೆಯುತ್ತಾರೆ. ಸತ್ಯಯುಗದಲ್ಲಿ ವಿಕಾರಯಿರುವುದೇ ಇಲ್ಲ. ಈ ಸಮಯದಲ್ಲಿ ಒಂದುವೇಳೆ ಎಷ್ಟೇ ಆಶೀರ್ವಾದ ಮಾಡುವವರಿದ್ದರೂ ಸಹ ಅವರಿಗಿಂತ ಮೇಲೆ ಮತ್ತೊಬ್ಬರು ಅವರಿಗೂ ಆಶೀರ್ವಾದ ಮಾಡುವವರಿರುತ್ತಾರೆ. ಹೇಗೆ ಪೋಪ್ ರವರಿಗೆ ಆಶೀರ್ವಾದ ಕೊಡುವಂತಹವರೆಂದು ಹೇಳಲಾಗುತ್ತದೆ, ಆದರೆ ಅವರಿಗೂ ಆ ಪರಮಪಿತ ಪರಮಾತ್ಮನ ಆಶೀರ್ವಾದ ಬೇಕಾಗುತ್ತದೆ. ಏಕೆಂದರೆ ಅವರು ಶ್ರೇಷ್ಠಾತಿ ಶ್ರೇಷ್ಠರಾಗಿದ್ದಾರೆ. ನೀವು ಶ್ರೀಮತದಂತೆ ನಡೆದಾಗ ಆಶೀರ್ವಾದ ಸಿಗುತ್ತದೆ. ಆಜ್ಞಾಕಾರಿ ಅಲ್ಲದವರಿಗೆ ಆಶೀರ್ವಾದ ಹೇಗೆ ಸಿಗುತ್ತದೆ? ಆದ್ದರಿಂದ ದೇಹೀ ಅಭಿಮಾನಿಯಾಗಿರೆಂದು ತಂದೆ ತಿಳಿಸುತ್ತಿದ್ದಾರೆ. ದೇಹಾಭಿಮಾನದಲ್ಲಿದ್ದರೆ ಆಜ್ಞೆ ಉಲ್ಲಂಘನೆಯೆಂದರ್ಥ, ಹಾಗೂ ಪದವಿ ಭ್ರಷ್ಟ ಆಗಿ ಬಿಡುತ್ತದೆ. ಈಗ ತಂದೆ ಬಂದಿದ್ದಾರೆ, ನೀವು ಭಾರತವನ್ನು ಶ್ರೇಷ್ಠಾಚಾರಿಯಾಗುವ ಸೇವೆ ಮಾಡುತ್ತಿದ್ದೀರಿ, ನಿಮಗೆ ಮೂರು ಹೆಜ್ಜೆ ಭೂಮಿಯು ಸಹ ಸಿಗುವುದೂ ಕಷ್ಟ. ಈಗ ನಾನು ನಿಮಗಾಗಿ ಇಡೀ ಪ್ರಪಂಚವನ್ನೇ ಹೊಸದನ್ನಾಗಿ ಮಾಡಿ ಬಿಡುತ್ತೇನೆ. ನಾವು ಶ್ರೇಷ್ಠ ಸೇವೆಯಲ್ಲಿದ್ದೇವೆಂದು ಪ್ರದರ್ಶನಿಯಲ್ಲಿ ದೊಡ್ಡವರಿಗೂ ನೀವು ತಿಳಿಸಿಕೊಡಬಹುದು. ಭಾರತವನ್ನು ಶ್ರೇಷ್ಠಾಚಾರಿಯಾಗಿ ಮಾಡುತ್ತಿದ್ದೇವೆ, ಅದು ಹೇಗೆ? ಅದನ್ನು ಬಂದು ತಿಳಿದುಕೊಳ್ಳಿ. ನಾವು ನಿಮಗೆ ತಿಳಿಸಿಕೊಡುತ್ತೇವೆ. ಪ್ರದರ್ಶಿನಿಯನ್ನು ತೋರಿಸುತ್ತಾ ಈ ರೀತಿ ತಿಳಿಸಿ ಕೊಡಬೇಕು-ಶ್ರೀಮತವು ಒಬ್ಬ ಪರಮಾತ್ಮನದ್ದಾಗಿದೆ, ಅವರು ಸದಾ ಏಕರಸವಾಗಿ ಪವಿತ್ರವಾಗಿದ್ದಾರೆ. ಅವರು ಅಭೋಕ್ತ, ಅಸೋಚತ (ಯೋಚನೆ ರಹಿತರು) ಜ್ಞಾನಸಾಗರರಾಗಿದ್ದಾರೆ. ಅವರೆ ಸ್ವರ್ಗ ಸ್ಥಾಪನೆ ಮಾಡುತ್ತಾರೆ. ನಾವು ಅವರ ಶ್ರೀಮತದಂತೆ ಭಾರತದ ಸೇವೆ ಮಾಡುತ್ತಿದ್ದೇವೆ. ಪಾಂಡವರಿಗೆ ಮೂರು ಹೆಜ್ಜೆ ಭೂಮಿಯು ಸಿಗಲಿಲ್ಲವೆಂಬ ಗಾಯನವಿದೆ. ತಿಳಿಸಿಕೊಡಲು ತುಂಬಾ ವಿಶಾಲ ಬುದ್ಧಿ ಬೇಕಾಗುತ್ತದೆ. ವಿಶಾಲ ಬುದ್ಧಿಯು ಸಹ ಯೋಗದಲ್ಲಿದ್ದಾಗ ಬರುತ್ತದೆ. ದೇಹಾಭಿಮಾನದ ತುಕ್ಕು ಸಹ ಆಗಲೇ ಹೋಗುತ್ತದೆ. ತಂದೆ ಸೇವೆಗಾಗಿ ಈ ರೀತಿ ಸಲಹೆ ಕೊಡುತ್ತಾರೆ. ತಾವು ಪ್ರತಿಜ್ಞೆ ಮಾಡಿರುವಂತಹ ಪೋಟೋ ಸಹಿತ ಅನ್ಯರಿಗೆ ತೋರಿಸಿ ಸೇವೆ ಮಾಡಿ. ಈ ರೀತಿ ಪೋಟೋ ಮುಖ್ಯ ಕೇಂದ್ರ ಹಾಗೂ ದೆಹಲಿ ಮುಂತಾದ ಸೇವಾಕೇಂದ್ರಗಳಲ್ಲಿರಬೇಕು. ಇಲ್ಲಿ ತುಂಬಾ ವಿಶಾಲ ಬುದ್ಧಿಯವರು ಬೇಕಾಗುತ್ತದೆ. ಮೂರು ನಾಲ್ಕು ಪ್ರತಿಗಳು ಪೋಟೋ ಇರಬೇಕಾಗುತ್ತದೆ. ಆದರೆ ಮಾಯೆ ಯಾವ ಸಮಯದಲ್ಲಾದರೂ ಯಾವ ಮಗುವಿನ ಮೇಲೆ ಬೇಕಾದರೂ ವಿಜಯಿಯಾಗಬಹುದು. ಆಮೇಲೆ ಆಶ್ಚರ್ಯವಾಗಿ ಪರಮಪಿತ ಪರಮಾತ್ಮನ ಮಕ್ಕಳಾಗುತ್ತಾರೆ ವಿಶ್ವ ರಾಜ್ಯ ಭಾಗ್ಯ ತೆಗೆದುಕೊಳ್ಳುತ್ತಾರೆ, ಮತ್ತೆ ಹೊರಟು ಹೋಗಿ ಬಿಡುತ್ತಾರೆ.

ಈಗ ಬೇಹದ್ದಿನ ತಂದೆ ತಿಳಿಸುತ್ತಿದ್ದಾರೆ ನಾನು ಇಡೀ ಪ್ರಪಂಚವನ್ನು ಪರಿವರ್ತನೆ ಮಾಡುತ್ತೇನೆ. ಆ ಮೇಲೆ ನಿಮಗೆ ಫಸ್ರ್ಟ್ ಕ್ಲಾಸ್ ಸೃಷ್ಟಿ ಮಾಡಿ ಕೊಡುತ್ತೇನೆ. ನೀವು ಅಲ್ಲಿಗೆ ಹೋಗಿ ರಾಜ್ಯಭಾರ ಮಾಡುತ್ತೀರಿ. ಉಳಿದೆಲ್ಲದುರ ವಿನಾಶವಾಗಿ ಬಿಡುತ್ತದೆ. ಮಕ್ಕಳು ಅವಶ್ಯಕವಾಗಿ ಆತ್ಮಾಭಿಮಾನಿಯಾಗಬೇಕು. ಪವಿತ್ರರಾಗುವ ಅಧಿಕಾರ ಎಲ್ಲರಿಗೂ ಇದೆ, ತಂದೆಯೇ ಬಂದು ಹೇಳುತ್ತಿದ್ದಾರೆ-ನೀವು ನನ್ನೊಂದಿಗೆ ಯೋಗವಿಡಿ, ಜ್ಞಾನಮೃತವನ್ನು ಕುಡಿಯುವುದರಿಂದ ಶ್ರೇಷ್ಠಾಚಾರಿಗಳಾಗಿ ಬಿಡುತ್ತೀರಿ. ಸನ್ಯಾಸಿಗಳು ವಿಕಾರಗಳನ್ನು ತಿರಸ್ಕರಿಸುತ್ತಾರೆ, ಪವಿತ್ರವಾಗಿರುವುದು ಒಳ್ಳೆಯದಲ್ಲವೇ? ದೇವತೆಗಳು ಸಹ ಪವಿತ್ರವಾಗಿದ್ದರು. ಪತಿತರಿಂದ ಪಾವನರನ್ನಾಗಿ ತಂದೆಯೇ ಬಂದು ಮಾಡುತ್ತಾರೆ. ಅಲ್ಲಿ ಎಲ್ಲರೂ ನಿರ್ವಿಕಾರಿಗಳಾಗಿರುತ್ತಾರೆ. ಅದು ನಿರ್ವಿಕಾರಿ ಪ್ರಪಂಚವೇ ಆಗಿದೆ. ಭಾರತ ನಿರ್ವಿಕಾರಿಯಾಗಿದ್ದಾಗ ಚಿನ್ನದ ಪಕ್ಷಿಯಾಗಿತ್ತು. ಈ ರೀತಿ ಮಾಡಿದವರು ಯಾರು? ಅವಶ್ಯಕವಾಗಿ ತಂದೆಯೇ ಮಾಡಿರಬೇಕು. ಆತ್ಮನೇ ಅಪವಿತ್ರ ರೋಗಿಯಾಗಿದೆ. ಈಗ ಆತ್ಮಗಳ ಸರ್ಜನ್ ಪರಮಾತ್ಮ ಆಗಿದ್ದಾರೆ. ಮನುಷ್ಯರು ಆತ್ಮಗಳಿಗೆ ಸರ್ಜನ್ ಆಗಲು ಸಾಧ್ಯವಿಲ್ಲ. ತಂದೆ ತಿಳಿಸುತ್ತಾರೆ ನಾನು ಸ್ವಯಂ ಪತಿತ ಪಾವನ ಆಗಿದ್ದೇನೆ. ನನ್ನನ್ನು ಎಲ್ಲರೂ ನೆನಪು ಮಾಡುತ್ತಾರೆ. ಪವಿತ್ರರಾಗಿರುವುದು ಒಳ್ಳೆಯದಲ್ಲವೇ. ಸಾಧು-ಸಂತರು ಮುಂತಾದವರೆಲ್ಲರೂ ನನ್ನನ್ನು ನೆನಪು ಮಾಡುತ್ತಾ ಬಂದಿದ್ದಾರೆ. ಪತಿತ-ಪಾವನ ಬಾ ಎಂದು ಜನ್ಮ-ಜನ್ಮಾಂತರದಿಂದ ನೆನಪು ಮಾಡುತ್ತಿದ್ದಾರೆ. ಅಂದಾಗ ಭಗವಂತ ಒಬ್ಬರಾಗಿದ್ದಾರೆ, ಭಕ್ತರೇ ಭಗವಂತನೆಂದಲ್ಲ. ಭಗವಂತನನ್ನು ತಿಳಿದುಕೊಂಡಿಲ್ಲ. ನಾನು ಕಲ್ಪದ ಹಿಂದೆಯೂ ಸಹ ತಿಳಿಸಿಕೊಟ್ಟಿದ್ದೆ. ಭಗವಾನುವಾಚ-ನಾನು ನಿಮಗೆ ರಾಜಯೋಗ ಕಲಿಸುತ್ತೇನೆ. ನಾನು ಬ್ರಹ್ಮಾರವರ ಶರೀರದಲ್ಲಿ ಬರುತ್ತೇನೆ, ಯಾರು ಪೂಜ್ಯರಾಗಿದ್ದರು ಅವರೇ ಪೂಜಾರಿಗಳಾಗಿದ್ದಾರೆ. ಪಾವನ ರಾಜರಾಗಿದ್ದಂತಹವರು ಈಗ ಪತಿತ ಪ್ರಜೆಗಳಾಗಿದ್ದಾರೆ. ನಾವು ಪ್ರಜಾಪಿತ ಬ್ರಹ್ಮಾರವರ ಮಕ್ಕಳು ಬ್ರಹ್ಮಾಕುಮಾರ-ಕುಮಾರಿಯರಾಗಿದ್ದೇವೆ ಎಂಬ ನಿಶ್ಚಯ ನಿಮಗಿದೆ. ಪರಮಪಿತ ಪರಮಾತ್ಮನು ಈ ಬ್ರಹ್ಮಾ ರ ಮುಖಾಂತರ ಬ್ರಾಹ್ಮಣರನ್ನು ರಚಿಸಿದ್ದಾರೆ. ಬ್ರಾಹ್ಮಣರಿಗೆ ದಾನ ಮಾಡಲಾಗುತ್ತದೆ. ಯಾವ ದಾನ ಕೊಡುತ್ತೇನೆ. ಇಡೀ ವಿಶ್ವದ ದಾನ ಕೊಡುತ್ತೇನೆ. ಯಾರು ಶೂದ್ರರಿಂದ ಬ್ರಾಹ್ಮಣರಾಗಿ ನನ್ನ ಸೇವೆ ಮಾಡುತ್ತಾರೆ, ಅವರ ಸಮ್ಮುಖದಲ್ಲಿ ಕುಳಿತು ತಿಳಿಸುತ್ತಿದ್ದಾರೆ-ನಿಮ್ಮ ದೃಷ್ಟಿ ಎಂದಿಗೂ ಕುದೃಷ್ಟಿಯಾಗಬಾರದು. ಪ್ರದರ್ಶನಿಯಲ್ಲಿ ತಿಳಿಸಲು ತುಂಬಾ ಧೈರ್ಯ ಬೇಕಾಗುತ್ತದೆ. ಪತಿತ-ಪಾವನ ತಂದೆ ಒಬ್ಬರೇ ಆಗಿದ್ದಾರೆ. ನೀವು ಅವರನ್ನು ನೆನಪು ಮಾಡುತ್ತೀರಿ, ಜ್ಞಾನ ಸಾಗರನಿಂದ ಬಂದಂತಹ ಜ್ಞಾನ ಗಂಗೆಯರಾಗಿದ್ದೀರಿ. ಇವರಿಗೆ ಶಿವಶಕ್ತಿಯರೆಂದು ಕರೆಯಲಾಗುತ್ತದೆ. ಶಿವ ತಂದೆಯ ಜೊತೆ ಸಂಬಂಧ ಜೋಡಿಸುವುದರಿಂದ ಶಕ್ತಿ ಸಿಗುತ್ತದೆ. ಪಂಚ ವಿಕಾರಗಳೆಂಬ ತುಕ್ಕು ಹೊರಟು ಹೋಗುತ್ತದೆ. ಸೂಜಿ ಶುದ್ಧವಿದ್ದರೆ ಅಯಸ್ಕಾಂತವು ಆಕರ್ಷಿಸುತ್ತದೆ. ನಿಮ್ಮ ಆತ್ಮಗಳ ಮೇಲೆ ಮಾಯೆಯ ತುಕ್ಕು ಹಿಡಿಯಲ್ಪಟ್ಟಿದೆ. ಈಗ ನನ್ನ ಜೊತೆ ಸಂಬಂಧ ಜೋಡಿಸುವ ಕಾರಣ ತುಕ್ಕು ಬಿಟ್ಟು ಹೋಗುತ್ತದೆ. ಇದು ರಾವಣ ರಾಜ್ಯವಾಗಿದೆ. ಎಲ್ಲರ ಬುದ್ಧಿ ತಮೋಪ್ರಧಾನವಾಗಿದೆ. ಆ ಕಾರಣ ಪರಮಾತ್ಮ ಈ ರೀತಿ ಹೇಳಿದ್ದಾರೆ-ನಾನು ಬಂದು ಅಜಮಿಳರಂತಹ ಪಾಪಿಗಳನ್ನು, ಗಣಿಕೆಯರನ್ನು, ಸಾಧು ಮುಂತಾದವರನ್ನು ಉದ್ಧಾರ ಮಾಡುತ್ತೇನೆ. ಸರ್ವರನ್ನು ಶ್ರೇಷ್ಠಾಚಾರಿಗಳನ್ನಾಗಿ ಮಾಡುವಂತಹವರು ತಂದೆ ಒಬ್ಬರೇ ಆಗಿದ್ದಾರೆ. ಪತಿತ ಪಾವನ ತಂದೆ ಬಂದು ಈ ಮಾತೆಯರ ಮುಖಾಂತರ ಭಾರತವನ್ನು ಪಾವನ ಮಾಡುತ್ತಾರೆ. ಆದ್ದರಿಂದ ಪತಿತರಾಗಿರುವ ಕಾರಣ ನಮ್ಮನ್ನು ರಕ್ಷಿಸಿಯೆಂದು ಮಾತೆಯರು ಕರೆಯುತ್ತಾರೆ. ಪುರುಷರು ಪವಿತ್ರರಾಗಲು ಬಿಡುವುದಿಲ್ಲ. ನೀವು ಸರ್ಕಾರದವರಿಗೂ ಸಹ ಈ ರೀತಿ ಹೇಳಬೇಕು-ಈ ಮಾತಿನಲ್ಲಿ ನಮಗೆ ಸಹಯೋಗ ಕೊಡಿ, ಆದರೆ ಹೇಳುವಂತಹ ಸಹೋದರಿಯರು ತುಂಬಾ ಶಕ್ತಿಶಾಲಿಯಿರ ಬೇಕಾಗುತ್ತದೆ. ಒಂದುವೇಳೆ ನಂತರವು ತಮ್ಮ ಸಂಬಂಧಿಕರ ನೆನಪಿನಲ್ಲೇ ಇದ್ದರೆ ಇನ್ನೂ ಅಧೋಗತಿಯಾಗಿ ಬಿಡುತ್ತದೆ. ತಂದೆ ಎಲ್ಲಾ ಮಾತುಗಳನ್ನು ತಿಳಿಸಿ ಕೊಡುತ್ತಿರುತ್ತಾರೆ. ಯುಕ್ತಿ ಹೇಗೆ ಮಾಡಬೇಕೆಂದೂ ಸಹ ಹೇಳುತ್ತಿರುತ್ತಾರೆ. ಈಗ ಮಕ್ಕಳ ಸುಖದ ದಿನಗಳು ಬರುತ್ತಿವೆ. ನಾನು ನಿಮಗೆ ಸ್ವರ್ಣಯುಗವನ್ನಾಗಿ ಮಾಡಿಕೊಡುತ್ತೇನೆ, ಅದನ್ನೇ ಸ್ವರ್ಗವೆಂದು ಕರೆಯಲಾಗುತ್ತದೆ. ಈಗ ಶ್ರೀಮತ ಹೇಳುತ್ತದೆ-ತಂದೆಯಾದ ನನ್ನ ಜೊತೆ ಸಂಬಂಧ ಜೋಡಿಸಿದಾಗ ನಿಮ್ಮ ತುಕ್ಕು ಬಿಟ್ಟು ಹೋಗುತ್ತದೆ. ಇಲ್ಲವೆಂದರೆ ಅಷ್ಟು ಶ್ರೇಷ್ಠ ಪದವಿಯನ್ನು ಪಡೆದುಕೊಳ್ಳುವುದಿಲ್ಲ. ಧಾರಣೆಯು ಆಗುವುದಿಲ್ಲ. ಯಾವುದೇ ವಿಕರ್ಮವನ್ನು ಮಾಡಬಾರದು. ದೇಹಾಭಿಮಾನದಲ್ಲಿ ಬರುವುದರಿಂದ ಬುದ್ಧಿಯೋಗ ಮುರಿದು ಬೀಳುತ್ತದೆ. ಈ ಬ್ರಹ್ಮಾ ತಂದೆಯು ಸಹ ಆ ಶಿವ ತಂದೆಯನ್ನು ನೆನಪು ಮಾಡುತ್ತಾರೆ. ಪರಮಪಿತ ಪರಮಾತ್ಮನು ಈ ಬ್ರಹ್ಮಾರವರ ಶರೀರದಲ್ಲಿ ಕುಳಿತು ಇವರಿಗೆ ಹೇಳುತ್ತಾರೆ-ಹೇ ಬ್ರಹ್ಮನ ಆತ್ಮ, ಹೇ ರಾಧೆಯ ಆತ್ಮ ನನ್ನನ್ನು ನೆನಪು ಮಾಡಿದಾಗ ನಿಮ್ಮ ತುಕ್ಕು ಬಿಟ್ಟು ಹೋಗುತ್ತದೆ. ತಮ್ಮನ್ನು ಆತ್ಮನೆಂದು ತಿಳಿದು ಶ್ರೀಮತದಂತೆ ನಡೆದುಕೊಂಡಾಗ ತಂದೆಯ ನೆನಪು ಇರುತ್ತದೆ. ಲೋಭವು ಕಡಿಮೆಯೇನಲ್ಲ. ಯಾವುದಾದರು ರುಚಿಯಾದ ವಸ್ತುವನ್ನು ನೋಡಿದಾಗ ತಿನ್ನುವ ಮನಸ್ಸಾಗುತ್ತದೆ. ಇದಕ್ಕೆ ಲೋಭವೆಂದು ಕರೆಯಲಾಗುತ್ತದೆ.

ಬಾಬಾ ತಿಳಿಸುತ್ತಿದ್ದಾರೆ-ಮಾಯೆ ಇಲಿಯಂತೆ ಉರುಬಿ ನಂತರ ಕಚ್ಚುತ್ತದೆ. ಶಾಸ್ತ್ರಗಳಲ್ಲೂ ಸಹ ಈ ರೀತಿ ಅನೇಕ ಕಾಲ್ಪನಿಕ ಕಥೆಗಳನ್ನು ಬರೆದಿದ್ದಾರೆ. ಸನ್ಯಾಸಿಗಳು ಈ ಚಿತ್ರಗಳನ್ನು ನೋಡಿ ನಿಮ್ಮದು ಕಲ್ಪನೆಯೆಂದು ಹೇಳುತ್ತಾರೆ. ತಂದೆ ಪ್ರತಿ ಮಾತುಗಳನ್ನು ಮಕ್ಕಳಿಗೆ ತಿಳಿಸಿರುತ್ತಾರೆ. ನಾವು ಏನೇ ಮಾಡಿದರು ತಂದೆಗೆ ಗೊತ್ತಾಗುವುದಿಲ್ಲವೆಂದು ತಿಳಿಯಬಾರದು. ಈ ಪ್ರಪಂಚದಲ್ಲಿ ಎಷ್ಟೊಂದು ಕೊಳಕಿದೆ ಎಂಬುದು ತಂದೆಯು ತಿಳಿದು ಕೊಂಡಿದ್ದಾರೆ. ಅಬಲೆಯರ ಮೇಲೆ ಅತ್ಯಾಚಾರ ಆಗಲೇಬೇಕು. ತಮ್ಮನ್ನು ಯುಕ್ತಿಯಿಂದ ರಕ್ಷಿಸಿಕೊಳ್ಳಬೇಕು. ಇಲ್ಲವೆಂದರೆ ಪದವಿ ಭ್ರಷ್ಟವಾಗುತ್ತದೆ. ನಾಟಕನುಸಾರವಾಗಿ ಇದೆಲ್ಲಾ ನಡೆಯುತ್ತದೆಂದು ತಿಳಿಸಲಾಗುತ್ತದೆ. ಬಾಬಾ ತಿಳಿಸುತ್ತಲೇ ಇರುತ್ತಾರೆ. ಆದರೂ ತಿಳಿದುಕೊಳ್ಳುವುದಿಲ್ಲವೆಂದರೆ ಕೆಲವರು ದಾಸ-ದಾಸಿಯಾಗುತ್ತಾರೆ, ಕೆಲವರು ಪ್ರಜೆಗಳು ಆಗುತ್ತಾರೆ. ನಾಟಕವೇ ಈ ರೀತಿ ಮಾಡಲ್ಪಟ್ಟಿದೆ. ಏನು ತಾನೆ ಮಾಡಲು ಸಾಧ್ಯ. ಬಡವರು, ಶ್ರೀಮಂತರು, ಪ್ರಜೆ ಎಲ್ಲರೂ ಅವಶ್ಯವಾಗಿ ಆಗಬೇಕಾಗಿದೆ. ತಂದೆ ಬರುವುದೇ ಭಾರತದಲ್ಲಿ. ಇದು ನರಕವಾಗಿದೆ. ತಂದೆ ಬಂದು ಇಡೀ ಪ್ರಪಂಚವನ್ನು ಸ್ವರ್ಗ ಮಾಡುತ್ತಾರೆ. ಬೆಣ್ಣೆ ಪೂರ್ತಿ ಭಾರತಕ್ಕೆ ಸಿಗುತ್ತದೆ. ಕಥೆಯಂತೂ ಸಹಜವಾಗಿದೆ, ಆದರೆ ಜ್ಞಾನ ಯೋಗದಲ್ಲಿರಬೇಕೆಂದರೆ ಧೈರ್ಯ ಬೇಕಾಗುತ್ತದೆ. ಶ್ರೀಮತದಂತೆ ನಡೆಯದಿದ್ದರೆ ಪದವಿ ಭ್ರಷ್ಟವಾಗಿ ಬಿಡುತ್ತದೆ. ಬಾಬಾ ಈ ರೀತಿ ತಿಳಿಸಿ ಕೊಡಿಯೆಂದು ಅದೇಶ ನೀಡುತ್ತಾರೆ. ತಿಳಿಸಿ ಕೊಡುವಂತಹವರು ತುಂಬಾ ಬುದ್ಧಿವಂತರಾಗಿರಬೇಕು. ತಂದೆಯೊಂದಿಗೆ ಎಷ್ಟೊಂದು ಪ್ರೀತಿ ಇರಬೇಕು. ಮಕ್ಕಳು ತುಂಬಾ ಪ್ರೀತಿಯಿಂದ ತಂದೆಗೆ ಈ ರೀತಿ ಬರೆಯುತ್ತಾರೆ-ನಾವು ಶಿವ ತಂದೆಯ ರಥಕ್ಕೋಸ್ಕರ ಸ್ವೆಟರ್ ಕಳುಹಿಸುತ್ತಿದ್ದೇವೆ. ಶಿವತಂದೆ ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ. ನಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತಿದ್ದಾರೆ. ಬುದ್ಧಿಯಲ್ಲಿ ಆ ತಂದೆಯ (ಬ್ರಹ್ಮಾ ಬಾಬಾ) ನೆನಪು ಬರುತ್ತದೆ. ಶಿವ ತಂದೆಯ ರಥಕ್ಕೆ ನಾವು ಟೋಲಿ ಕಳುಹಿಸುತ್ತೇವೆ. ಶಿವ ತಂದೆ ರಥವನ್ನು ನಾವು ಶೃಂಗರಿಸುತ್ತೇವೆ. ಹೇಗೆ ಹುಸ್ಸೇನ್ ನ ಕುದುರೆಯನ್ನು ಶೃಂಗರಿಸುತ್ತಾರೆ. ಇದು ಸತ್ಯ-ಸತ್ಯವಾದ ಕುದುರೆಯಾಗಿದೆ. ತಂದೆಯೇ ಪಾವನ ಮಾಡುವ ಪತಿತ-ಪಾವನರಾಗಿದ್ದಾರೆ. ತಂದೆಯು ಸಹ ತಮ್ಮನ್ನು ಶೃಂಗಾರ ಮಾಡುತ್ತಿದ್ದಾರೆ. ಬ್ರಹ್ಮಾ ತಂದೆಯೂ ಸಹ ಶಿವ ತಂದೆ ಹಾಗೂ ತನ್ನ ಪದವಿಯನ್ನು ನೆನಪು ಮಾಡುತ್ತಾರೆ. ಇವರಿಬ್ಬರೂ ಪಕ್ಕಾ ಆಗಿದ್ದಾರೆ-ಜ್ಞಾನ-ಜ್ಞಾನೇಶ್ವರಿ ಮತ್ತೆ ರಾಜ-ರಾಜೇಶ್ವರಿಯಾಗುತ್ತಾರೆ ಅಂದಾಗ ಅವಶ್ಯಕವಾಗಿ ಅವರ ಮಕ್ಕಳು ಇರಬೇಕಲ್ಲವೇ. ನಂಬರ್ ವಾರ್ ಪುರುಷಾರ್ಥ ಅನುಸಾರವಾಗಿ ಮಾಲೀಕರಾಗುತ್ತಾರೆ. ಯಾರು ಎಷ್ಟು ಸೇವೆ ಮಾಡುತ್ತಾರೆ ಅಂತಹ ಪದವಿಯನ್ನು ಪಡೆಯುತ್ತಾರೆ. ರಾಜಯೋಗದಿಂದ ರಾಜ-ರಾಜೇಶ್ವರಿಯಾಗುತ್ತಾರೆ, ತಂದೆ ಎಲ್ಲಾ ಉಪಾಯಗಳನ್ನು ತಿಳಿಸುತ್ತಿದ್ದಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾ ರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಂದೆಯ ಆಶೀರ್ವಾದಗಳನ್ನು ತೆಗೆದುಕೊಳ್ಳಲು ಆಜ್ಞಾಕಾರಿಯಾಗಬೇಕು. ದೇಹೀ ಅಭಿಮಾನಿಯಾಗುವ ಆಜ್ಞೆ ಪಾಲನೆ ಮಾಡಬೇಕು.

2. ಮಾಯೆಯು ಇಲಿ ಆಗಿದೆ, ಅದರಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕು. ಲೋಭಿಯಾಗಬಾರದು. ಶ್ರೀಮತದಂತೆ ಪೂರ್ಣವಾಗಿ ನಡೆಯುತ್ತಿರಬೇಕು.

ವರದಾನ:-

ಜ್ಞಾನಿ-ಯೋಗಿ ಆತ್ಮರಂತು ಆಗಿದ್ದೀರಿ, ಈಗ ಜ್ಞಾನ, ಯೋಗದ ಶಕ್ತಿಯನ್ನು ಪ್ರಯೋಗದಲ್ಲಿ ತರುವಂತಹ ಪ್ರಯೋಗಿ ಆತ್ಮವಾಗಿರಿ. ವಿಜ್ಞಾನದ ಸಾಧನಗಳ ಪ್ರಯೋಗವು ಲೈಟ್ನ ಮೂಲಕವಾಗುತ್ತದೆಯೋ ಹಾಗೆಯೇ ಶಾಂತಿಯ ಶಕ್ತಿಯ ಆಧಾರವೂ ಲೈಟ್ ಆಗಿರುವುದಾಗಿದೆ. ಅವಿನಾಶಿ ಪರಮಾತ್ಮ ಲೈಟ್, ಆತ್ಮಿಕ ಲೈಟ್ ಹಾಗೂ ಜೊತೆ-ಜೊತೆಗೆ ಪ್ರತ್ಯಕ್ಷ ಸ್ಥಿತಿಯೂ ಲೈಟ್. ಯಾವಾಗ ಯಾವುದೇ ಪ್ರಯೋಗ ಮಾಡಲು ಬಯಸುತ್ತೀರೆಂದರೆ ಲೈಟ್ ಆಗಿದ್ದೇನೆಯೇ ಅಥವ ಇಲ್ಲವೇ? ಎಂದು ಪರಿಶೀಲನೆ ಮಾಡಿರಿ. ಒಂದುವೇಳೆ ಸ್ಥಿತಿ ಹಾಗೂ ಸ್ವರೂಪ ಡಬಲ್ ಲೈಟ್ ಆಗಿರುತ್ತದೆಯೆಂದರೆ ಪ್ರಯೋಗದ ಸಫಲತೆಯು ಸಹಜವಾಗಿ ಆಗುವುದು.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:

ತ್ಯಾಗಿ ಹಾಗೂ ತಪಸ್ವಿ ಆತ್ಮರು ಸದಾ ತಂದೆಯ ಲಗನ್ನಿನಲ್ಲಿ ಮಗ್ನವಾಗಿರುತ್ತಾರೆ. ಅವರು ಪ್ರೇಮದ ಸಾಗರ, ಜ್ಞಾನ, ಆನಂದ, ಸುಖ, ಶಾಂತಿಯ ಸಾಗರನಲ್ಲಿ ಸಮಾವೇಶವಾಗಿ ಇರುತ್ತಾರೆ. ಈ ರೀತಿ ಸಮಾವೇಶವಾಗಿರುವ ಮಕ್ಕಳೇ ಸತ್ಯ ತಪಸ್ವಿಗಳಾಗಿದ್ದಾರೆ. ಅವರಿಂದ ಸ್ವತಹವಾಗಿಯೇ ಪ್ರತಿಯೊಂದು ಮಾತಿನ ತ್ಯಾಗವಾಗಿ ಬಿಡುತ್ತದೆ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top