05 January 2022 KANNADA Murli Today | Brahma Kumaris

Read and Listen today’s Gyan Murli in Kannada

January 4, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನಿಮಗೀಗ ಹೊಸ ಜೀವನ ದೊರಕಿದೆ, ಹಳೆಯ ಜೀವನ ಪರಿವರ್ತನೆ ಆಗಿ ಬಿಟ್ಟಿದೆ. ಏಕೆಂದರೆ ನೀವೀಗ ಈಶ್ವರನ ಸಂತಾನರಾಗಿದ್ದೀರಿ. ನಿಮ್ಮ ಪ್ರೀತಿ ಒಬ್ಬ ತಂದೆಯೊಂದಿಗೆ ಇರಬೇಕು”

ಪ್ರಶ್ನೆ:: -

ಬ್ರಾಹ್ಮಣರಿಂದ ದೇವತೆಗಳಾಗುವವರ ಮುಖ್ಯ ಚಿಹ್ನೆ ಏನಾಗಿರುತ್ತದೆ?

ಉತ್ತರ:-

ಬ್ರಹ್ಮಾ ಮುಖವಂಶಾವಳಿ ಬ್ರಾಹ್ಮಣರೆಲ್ಲರೂ ಏಕಮತದವರಾಗಿರುತ್ತಾರೆ. ಇಲ್ಲಿ ಎಂದಿಗೂ ಮತಭೇದ ಆಗುವುದಿಲ್ಲ, ಪರಸ್ಪರರಲ್ಲಿ ಕೀಳರಿಮೆ ಬರುವುದಿಲ್ಲ. ಲೌಕಿಕದಲ್ಲಿ ಬ್ರಾಹ್ಮಣರೆಂದು ಹೇಳಿಕೊಳ್ಳುವವರಲ್ಲಿ ಅನೇಕ ಮತಗಳಿರುತ್ತವೆ. ಕೆಲವರು ತಮ್ಮನ್ನು ಪುಷ್ಕರನಿ ಬ್ರಾಹ್ಮಣರು, ಕೆಲವರು ಸಾರಸಿದ್ದ ಬ್ರಾಹ್ಮಣರೆಂದು ಹೇಳಿಕೊಳ್ಳುತ್ತಾರೆ. ನೀವು ಬ್ರಾಹ್ಮಣರು ಒಬ್ಬ ತಂದೆಯ ಮತದಿಂದ ದೇವತೆಗಳಾಗುತ್ತೀರಿ. ದೇವತೆಗಳಲ್ಲಿ ಎಂದಿಗೂ ಕೀಳರಿಮೆ ಬರುವುದಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಯಾವ ದಿನದಿಂದ ನಾವು-ನೀವು ಮಿಲನವಾದೆವು……

ಓಂ ಶಾಂತಿ. ಯಾವಾಗ ಜೀವಾತ್ಮಗಳು ಹಾಗೂ ಪರಮಾತ್ಮ ಅಥವಾ ಮಕ್ಕಳು ಮತ್ತೆ ತಂದೆಯನ್ನು ಮಿಲನ ಮಾಡಿದಾಗ ಹೊಸ ಪ್ರೀತಿ ಉಂಟಾಗುತ್ತದೆ, ಏಕೆಂದರೆ ಎಲ್ಲರೊಂದಿಗಿನ ಪ್ರೀತಿ ದೂರವಾಗಿರುತ್ತದೆ. ಹೇಗೆ ಕನ್ಯೆ ಮೊದಲು ತವರು ಮನೆಯನ್ನು ಪ್ರೀತಿಸುತ್ತಾಳೆ. ನಿಶ್ಚಿತಾರ್ಥದ ನಂತರ ಹೊಸ ಸಂಬಂಧದಿಂದ ಪ್ರೀತಿಯನ್ನು ಪಡೆಯುತ್ತಾಳೆ ಅವಳಿಗಾಗಿ ಅತ್ತೆ ಮನೆ ಹೊಸದಾಗಿರುತ್ತದೆ. ಹೊಸ ಪ್ರಪಂಚದ ಜೊತೆ ಹೊಸ ಪ್ರೀತಿ ಜೋಡಿಸಲ್ಪಡುವಿರೆಂದಾಗ ಪರಿವಾರದ ಎಲ್ಲರೊಂದಿಗೆ ಪ್ರೀತಿ ಇರುತ್ತದೆ. ಈ ರೀತಿ ಗಾಯನವು ಇದೆ ಆತ್ಮಗಳು ಪರಮಾತ್ಮ ಬಹಳ ಕಾಲದವರೆಗೆ ಬೇರೆಯಾಗಿದ್ದರು……………. ಇದು ಸುಂದರವಾದ ಹೊಸ ಮಿಲನವಾಗಿದೆ. ಅಲ್ಲಿ ಹೊಸ ಮನೆ, ಹೊಸ ಸಂಬಂಧವಿರುತ್ತದೆ ಎಂದು ನೀವು ತಿಳಿದುಕೊಂಡಿದ್ದೀರಿ. ನಾವು ಬ್ರಹ್ಮಕುಮಾರ ಹಾಗೂ ಬ್ರಹ್ಮಕುಮಾರಿಯರಾಗಿದ್ದೇವೆ, ಶೂದ್ರ ಕುಮಾರ ಹಾಗೂ ಶೂದ್ರ ಕುಮಾರಿಯರಲ್ಲ. ಬ್ರಹ್ಮಾ ಹಾಗೂ ಬ್ರಹ್ಮಾಕುಮಾರಿಯರಿಗೆ ಪರಸ್ಪರ ಎಷ್ಟೊಂದು ಪ್ರೀತಿಯಿದೆ ಏಕೆಂದರೆ ನಾವು ಈಶ್ವರೀಯ ಸಂತಾನರಾಗಿದ್ದೇವೆ. ಈಶ್ವರ ನಿರಾಕಾರ ಆಗಿದ್ದಾರೆ. ಸಾಕಾರದಲ್ಲಿ ಅವರ ಪ್ರೀತಿ ಬೇಕಲ್ಲವೇ. ನಿರಾಕಾರನನ್ನು ಹೇಗೆ ಪ್ರೀತಿ ಮಾಡುತ್ತೀರಿ? ಆತ್ಮ ಶರೀರದಿಂದ ಬೇರೆಯಾದಾಗ ಪ್ರೀತಿ ಮಾಡಲಾಗುವುದಿಲ್ಲ. ಆತ್ಮ ಹಾಗೂ ಪರಮಾತ್ಮ ಸಾಕಾರದಲ್ಲಿ ಸಂಧಿಸಿ ಪ್ರೀತಿ ಮಾಡಬೇಕಾಗುತ್ತದೆ. ಸಾಕಾರ ರೂಪದಲ್ಲಿ ಈ ರೀತಿ ಹೇಳುತ್ತಿರುತ್ತಾರಷ್ಟೆ – ನೀವು ತಾಯಿ-ತಂದೆ…….. ನೀವು ಬಂದಾಗ ನಿಮ್ಮ ಕೃಪೆಯಿಂದ ನಮಗೆ ಅಪಾರವಾದ ಸುಖ ಸಿಗುತ್ತದೆ. ಪತಿತ ಪಾವನ ಬಾ……… ಎಂದು ಕರೆಯುತ್ತಾರಲ್ಲವೇ. ಭಾರತ ಮಹಾನ್ ಆಗಿತ್ತು. ಆಗ ಅಪಾರವಾದ ಸುಖವಿತ್ತು. ಅದರ ಹೆಸರು ಸುಖಧಾಮವಾಗಿತ್ತು. ಈಗ ದುಃಖಧಾಮವಿದೆ. ನಾವು ಆತ್ಮಗಳು ಶಾಂತಿಧಾಮದಲ್ಲಿರುತ್ತೇವೆ. ಅಲ್ಲಿ ಆತ್ಮಗಳು ಪವಿತ್ರವಾಗಿರುತ್ತೇವೆ. ಯಾವ ಅಪವಿತ್ರ ಆತ್ಮನು ಇರಲಾಗುವುದಿಲ್ಲ. ಈಗ ನಿಮಗೆ ತಂದೆ ಸಿಕ್ಕಿದ್ದಾರೆ ಆದ್ದರಿಂದ ಹೊಸ ಜೀವನ ಸಿಕ್ಕಿದೆ. ಅವರು ನಮ್ಮ ಹಾಗೆ ಜನನ-ಮರಣ ಚಕ್ರದಲ್ಲಿ ಬರುವುದಿಲ್ಲ. ಅವರೂ ಸಹ ಆತ್ಮವೇ ಆಗಿದ್ದಾರೆ, ಆದರೆ ಪರಮಾತ್ಮನಾಗಿದ್ದಾರೆ. ಪರಂಧಾಮದಲ್ಲಿರುತ್ತಾರೆ. ನಾವು ಆತ್ಮಗಳೂ ಸಹ ಪರಂಧಾಮದಲ್ಲಿರುವಂತಹ ಪರಮಪಿತ ಪರಮಾತ್ಮನ ಮಕ್ಕಳಾಗಿದ್ದೆವು, ನಮ್ಮೆಲ್ಲರ ಮನೆಯಂತು ಅದೇ ಆಗಿದೆ. ಮನೆಯ ನೆನಪು ಸಹ ಎಲ್ಲರಿಗೂ ಇದೆ. ಯಾರಾದರೂ ಸತ್ತು ಹೋದಾಗ ನಿರ್ವಾಣಕ್ಕೆ ಹೋದರೆಂದು ಹೇಳುತ್ತಾರೆ. ಅದು ವಾಣಿಯಿಂದ ದೂರವಿರುವ ಸ್ಥಾನವಾಗಿದೆ. ಈಗ ತಂದೆಯನ್ನು ನೆನಪು ಮಾಡುತ್ತೇವೆ. ತಂದೆ ಬಂದಾಗ ಮತ್ತೆ ಹೊಸ ಮಾತುಗಳನ್ನು ತಿಳಿಸುತ್ತಾರೆ. ಮನುಷ್ಯರು ಈ ನಾಟಕವನ್ನು ತಿಳಿದುಕೊಂಡಾಗ ಈ ರೀತಿ ಹೇಳಬೇಕು-ನಾವು ಇಡುವ ಹೆಜ್ಜೆ ಒಂದೊಂದು ಸೆಕೆಂಡಿಗೂ ಹೊಸದಾಗಿರುತ್ತದೆ. ಬೇಹದ್ದಿನ ನಾಟಕವು ಸುತ್ತುತ್ತಿರುತ್ತದೆ. ತಂದೆ ಬಂದು ಹೊಸ ಮಾತುಗಳನ್ನು ತಿಳಿಸುತ್ತಾರೆ. ಮಕ್ಕಳಾದ ನಿಮ್ಮನ್ನು ತ್ರಿಕಾಲದರ್ಶಿ, ತ್ರಿನೇತ್ರಿಯನ್ನಾಗಿ ಮಾಡುತ್ತಿದ್ದೇನೆ. ತಂದೆ ಬ್ರಹ್ಮಾಂಡದ ಮಾಲೀಕರಾಗಿದ್ದಾರೆ, ತ್ರಿಲೋಕದ ಮಾಲೀಕರು ಆಗಿದ್ದಾರೆ. ಏಕೆಂದರೆ ಮೂರು ಲೋಕಗಳ ಜ್ಞಾನ ಕೊಡುತ್ತಾರೆ. ನೀವು ತ್ರಿಲೋಕದ ಮಾಲೀಕರು ಆಗುವುದಿಲ್ಲ. ನೀವು ವಿಶ್ವದ ಮಾಲೀಕ ಮಹಾರಾಜ-ಮಹಾರಾಣಿ ಆಗುತ್ತೀರಿ. ತ್ರಿಲೋಕ ಅರ್ಥಾತ್ ಮೂರು ಲೋಕಗಳನ್ನು ತಿಳಿಯಲಾಗುತ್ತದೆ. ಮಾಲೀಕರು ಒಂದೇ ಲೋಕ ಸ್ವರ್ಗಕ್ಕೆ ಆಗುತ್ತೀರಿ. ಇವು ಹೊಸ-ಹೊಸ ಮಾತುಗಳಾಗಿವೆ. ತಂದೆಗೆ ಮಕ್ಕಳಾಗಿರುವುದೇ ಆಸ್ತಿ ತೆಗೆದುಕೊಳ್ಳುವುದಕ್ಕೋಸ್ಕರ. ಯಾರಿಗಾದರೂ ಈ ರೀತಿ ತಿಳಿಸುವುದು ತುಂಬಾ ಸಹಜವಾಗಿದೆ. ಭಗವಂತನೊಂದಿಗೆ ನಿಮ್ಮ ಸಂಬಂಧವೇನೆಂದು ಕೇಳಿ. ಭಗವಂತ ಸ್ವರ್ಗದ ರಚೈತ ಆಗಿದ್ದಾರೆ, ಮಾತಾ-ಪಿತ ಆಗಿದ್ದಾರೆ. ಭಗವಂತನಿಗೆ ನರಕ ಅಥವಾ ದುಃಖಧಾಮದ ರಚೈತನೆಂದು ಹೇಳುವುದಿಲ್ಲ. ಪರಮಪಿತ ಪರಮಾತ್ಮ ಬ್ರಹ್ಮನ ಮುಖಾಂತರ ಸ್ವರ್ಗದ ಸ್ಥಾಪನೆ ಮಾಡುತ್ತಾರೆ. ಅವಶ್ಯಕವಾಗಿ ಸ್ವರ್ಗವನ್ನೇ ರಚಿಸುತ್ತಾರಲ್ಲವೇ. ಪರಮಾತ್ಮ ಬ್ರಹ್ಮನ ಮುಖಾಂತರ ಬ್ರಾಹ್ಮಣ ಧರ್ಮವನ್ನು ರಚಿಸುತ್ತಾರೆ, ಅವರಿಗೆ ರಾಜಯೋಗ ಕಲಿಸಿ ಕೊಡುತ್ತಾರೆ. ಅವರೇ ಪುನಃ ಬ್ರಾಹ್ಮಣರಿಂದ ದೇವತೆಗಳಾಗುತ್ತಾರೆ. ಈ ಸಮಯದಲ್ಲಿ ನೀವು ಬ್ರಾಹ್ಮಣರಾಗಿದ್ದೀರಿ. ವಿಷ್ಣು ಧರ್ಮದಲ್ಲಿ ಹೋಗುತ್ತೀರಿ. ಬ್ರಾಹ್ಮಣ ಧರ್ಮವೂ ಬೇಕಲ್ಲವೇ. ಪ್ರಜಾಪಿತ ಬ್ರಹ್ಮನ ಮುಖಾಂತರ ಮುಖವಂಶಾವಳಿ ಬ್ರಾಹ್ಮಣರನ್ನು ರಚಿಸುತ್ತಾರೆ, ಅವರೇ ಮಕ್ಕಳಾಗುತ್ತಾರೆ. ಸನ್ಯಾಸಿಗಳೂ ಸಹ ಮುಖದಿಂದ ರಚಿಸುತ್ತಾರೆ, ಆದರೆ ಅವರು ಮಕ್ಕಳನ್ನು ರಚಿಸುವುದಿಲ್ಲ, ಅವರು ಅನುಯಾಯಿಗಳನ್ನು ರಚಿಸುತ್ತಾರೆ. ಅವರಿಗೆ ವಂಶ ಎಂದು ಹೇಳಲಾಗುವುದಿಲ್ಲ. ಅವರು ಮುಖದಿಂದಲೇ ಹೇಳುತ್ತಾರೆ ನೀವು ನಮ್ಮ ಅನುಯಾಯಿಗಳಾಗಿದ್ದೀರಿ. ವಂಶವಾದರೆ ಆಸ್ತಿ ಸಿಗಬೇಕಾಗುತ್ತದೆ. ದಿನ ಪ್ರತಿ ದಿನ ಬ್ರಹ್ಮಾ ಮುಖವಂಶಾವಳಿಯು ವೃದ್ಧಿಯಾಗುತ್ತಾ ಹೋಗುತ್ತದೆಯೆಂದು ನೀವು ಮಕ್ಕಳು ತಿಳಿದುಕೊಂಡಿದ್ದೀರಿ. ಬ್ರಹ್ಮಾಕುಮಾರ-ಕುಮಾರಿಯರು ವೃದ್ಧಿ ಆಗುತ್ತಾ ಹೋಗುತ್ತಾರೆ. ದೇವತೆಗಳಿರುವಷ್ಟು ಸಂಖ್ಯೆಯಲ್ಲಿ ಬ್ರಾಹ್ಮಣರಾಗುತ್ತಾರೆ. ಪರಮಪಿತ ಪರಮಾತ್ಮ ಮನುಷ್ಯರನ್ನು ಬ್ರಾಹ್ಮಣರಿಂದ ದೇವತೆಗಳನ್ನಾಗಿ ಮಾಡುತ್ತಾರೆ. ಅವರು ಅವಶ್ಯವಾಗಿ ಸ್ವರ್ಗದ ಮಾಲೀಕರಾಗಿರಬೇಕು. ಮನುಷ್ಯರಿಂದ ದೇವತೆಗಳನ್ನಾಗಿ ಮಾಡುವರೆಂಬ ಮಹಿಮೆ ಪರಮಾತ್ಮನಿಗೆ ಮಾಡುತ್ತಾರೆ. ಈಗ ತಂದೆ ಬಂದು ಹೊಸ-ಹೊಸ ಮಾತುಗಳನ್ನು ತಿಳಿಸುತ್ತಿದ್ದಾರೆ. ಹೊಸ ಪ್ರಪಂಚಕ್ಕಾಗಿ ಹೊಸ ಮಾತುಗಳಾಗಿರುವ ಕಾರಣ ಶಾಸ್ತ್ರಗಳಲ್ಲಿ ಎಲ್ಲಿಯೂ ಈ ಮಾತುಗಳಿಲ್ಲ. ಆದುದರಿಂದ ಮನುಷ್ಯರು ಗೊಂದಲವಾಗುತ್ತಾರೆ.

ನಿಮ್ಮದು ಇದು ಈಶ್ವರೀಯ ಸಂಪ್ರದಾಯವಾಗಿದೆ. ಆದರೆ ಈಶ್ವರನ ಸಂತಾನರಾಗಿ ಮತ್ತೆ ಈಶ್ವರನನ್ನು ಬಿಟ್ಟು ಅಸುರೀ ಸಂಪ್ರದಾಯದವರು ಆಗಿ ಬಿಡುತ್ತಾರೆ. ಒಮ್ಮೆ ಮಮ್ಮಾ ಬಾಬಾ ಎಂದು ಹೇಳಿ, ಜ್ಞಾನ ಕೇಳಿದ ಮೇಲೆ ಅವರಿಗೆ ಅವಶ್ಯವಾಗಿ ಆಸ್ತಿ ಸಿಗುತ್ತದೆ. ಮಮ್ಮಾ ಬಾಬಾ ಎಂದು ಹೇಳುತ್ತಿರುತ್ತಾರೆ. ಪಿತಾಶ್ರಿ, ಮಾತೇಶ್ವರಿ ಎಂದು ಬರೆಯುತ್ತಿರುತ್ತಾರೆ. ಪ್ರಜಾಪಿತ ಬ್ರಹ್ಮನಂತು ಪ್ರಖ್ಯಾತಿಯಾಗಿದ್ದಾರೆ. ಶಿವ ಬಾಬಾರವರು ಸಹ ಹೆಸರುವಾಸಿಯಾಗಿದ್ದಾರೆ. ಭಗವಂತ ತಂದೆ ಎಂದು ಆತ್ಮ ಕರೆಯುತ್ತದೆ. ತಂದೆ ತಿಳಿಸುತ್ತಾರೆ-ನಾನು ಮೊಟ್ಟ ಮೊದಲು ಪ್ರಜಾಪಿತ ಬ್ರಹ್ಮನನ್ನು ದತ್ತು ಮಾಡಿಕೊಳ್ಳುತ್ತೇನೆ. ಈ ಬ್ರಾಹ್ಮಣರು ಬ್ರಹ್ಮನ ದತ್ತು ಮಕ್ಕಳಾಗಿದ್ದಾರೆ. ಹೊಸ ರಚನೆ ಆಯಿತಲ್ಲವೇ. ಅವಶ್ಯವಾಗಿ ಅನೇಕರು ಇರಬೇಕಾಗುತ್ತದೆ. ಇವರೆಲ್ಲರೂ ವಿಷದಿಂದ ಜನ್ಮ ಪಡೆಯಲು ಸಾಧ್ಯವಿಲ್ಲ. ಪ್ರಜಾಪಿತ ಬ್ರಹ್ಮಾ ಹಾಗೂ ಜಗದಂಬಾ ಎಂದು ಕರೆಯಲಾಗುತ್ತದೆ. ಬ್ರಹ್ಮಾ, ವಿಷ್ಣು, ಒಬ್ಬೊಬ್ಬರಾಗಿದ್ದು ಜಗದಂಬಾರವರೂ ಸಹ ಒಬ್ಬರೇ ಆಗಿದ್ದಾರೆ. ಇವರ ಈ ಜೀವನದಂತೆ ಮತ್ತೆಂದಿಗೂ ಇರುವುದಿಲ್ಲ. ಪ್ರತಿಯೊಬ್ಬ ಮನುಷ್ಯನನ್ನು ಕಲ್ಪದ ನಂತರ ಆ ಜೀವನದಲ್ಲಿ ನೋಡಲಾಗುತ್ತದೆ. ಇಲ್ಲಿಯಾದರೋ ಒಬ್ಬರನ್ನೇ ಅನೇಕ ಸ್ವರೂಪಗಳಲ್ಲಿ ಮಾಡಿ ಬಿಟ್ಟಿದ್ದಾರೆ. ಇಲ್ಲಿ ಅನೇಕರ ಹೆಸರು ರಾಧೆ ಕೃಷ್ಣ ಆಗಿರುತ್ತದೆ, ಆದರೆ ಅವರು ಏನೂ ತಿಳಿದುಕೊಂಡಿಲ್ಲ. ರಾಧೆ ಕೃಷ್ಣ ಸ್ವರ್ಗದ ಪ್ರಥಮ ರಾಜಕುಮಾರ-ರಾಜಕುಮಾರಿಯ ಹೆಸರಾಗಿದೆ. ನಾವು ಪತಿತರಾಗಿದ್ದೇವೆ ನಾವು ಈ ಹೆಸರುಗಳನ್ನು ಇಟ್ಟುಕೊಳ್ಳುವುದು ಹೇಗೆ?ಶಿವ ಬಾಬಾ ಹೊಸ ಹೊಸ ಮಾತುಗಳನ್ನು ಹೇಳುತ್ತಿರುತ್ತಾರೆ. ಹೊಸ ಪ್ರಪಂಚಕ್ಕೊಸ್ಕರ ಇದು ಹೊಸ ಮಾತು, ಹೊಸ ಜ್ಞಾನವಾಗಿದೆ. ತಂದೆ ತಿಳಿಸುತ್ತಾರೆ-ನಾನು ಕಲ್ಪದ ಹಿಂದೆಯು ಈ ಹೊಸ ಮಾತುಗಳನ್ನು ಹೇಳಿದ್ದೆನು. ಈಗ ಮತ್ತೆ ಹೇಳುತ್ತಿದ್ದೇನೆ. ಈಗ ನೀವು ಕೇಳುತ್ತಿದ್ದೀರಿ. ನೀವು ದೇವೀ-ದೇವತೆಗಳಾಗಿ ಬಿಟ್ಟಾಗ ಈ ಜ್ಞಾನ ನಾಶವಾಗಿ ಬಿಡುತ್ತದೆ. ಇದು ಸರ್ವ ಶ್ರೇಷ್ಠವಾದ ಗುರಿಯಾಗಿದೆ. ಆಶ್ಚರ್ಯವಾಗಿ ತಂದೆಗೆ ಮಕ್ಕಳಾಗುತ್ತಾರೆ, ಕೇಳುತ್ತಾರೆ, ಹಾಗು ಹೇಳುತ್ತಾರೆ ನಂತರ ಅಹೋ ಮಾಯೆ ಓಡಿಸಿ ಬಿಡುತ್ತದೆ ಎಂದೂ ಸಹ ಗಾಯನವಿದೆ. ನಂತರ ಅಂತಹವರು ಬ್ರಹ್ಮಾಕುಮಾರ-ಕುಮಾರಿಯರ ಬಳಿ ಹೋಗಿ ಎಂದು ಯಾರಿಗೂ ಹೇಳಲಾಗುವುದಿಲ್ಲ. ಇದು ಸಹ ನಾಟಕದಲ್ಲಿ ನಿಗಧಿಯಾಗಿದೆ. ನಥಿಂಗ್ ನ್ಯೂ (ಹೊಸದೇನಲ್ಲ). ತುಂಬಾ ಜನ ಬಂದು ಹೊರಟು ಹೋಗುತ್ತಿರುತ್ತಾರೆ. ಭಟ್ಟಿಯಲ್ಲಿ ಕುಳಿತವರು ಸಹ ಮಾಯೆಗೆ ಸೋತು ಹೊರಟು ಹೋದರು. ಸ್ವರ್ಗದಲ್ಲಂತು ಬರುತ್ತಾರೆ. ಆದರೆ ಪುರುಷಾರ್ಥದಂತೆ ಪದವಿ ಪಡೆಯುತ್ತಾರೆ. ತಮಗಾಗಿ ಅಥವಾ ತಮ್ಮ ಸಂಬಂಧಿಕರಿಗಾಗಿ ಪದವಿಯ ಬಗ್ಗೆ ಕೇಳಿದರೆ ಹೇಳಬಹುದು. ತಾವು ಸಹ ಈ ಸ್ಥಿತಿಯಲ್ಲಿ ನಾನು ಎಂತಹ ಪದವಿ ಪಡೆದುಕೊಳ್ಳುತ್ತೇನೆಂದು ತಿಳಿದುಕೊಳ್ಳಬಹುದು. ತಂದೆ ಕುಳಿತು ತಿಳಿಸಿ ಕೊಡುತ್ತಿದ್ದಾರೆ-ದೆಹಲಿಯಲ್ಲಿ ಸರ್ವ ಧರ್ಮ ಸಮ್ಮೇಳನ ನಡೆಯುತ್ತದೆ. ಅವರು ಸಮ್ಮೇಳನವನ್ನು ವಿಶ್ವದ ಶಾಂತಿಯ ಸ್ಥಾಪನೆಗಾಗಿ ಅಥವಾ ವಿಶ್ವದ ಏಕತೆಗಾಗಿ ಮಾಡುತ್ತಾರೆ ಆದರೆ ಎಲ್ಲರೂ ಸೇರಿ ಒಂದೇ ಆಗಲು ಸಾಧ್ಯವಿಲ್ಲ. ಧಾರ್ಮಿಕ ಮುಖಂಡರ ಸಮ್ಮೇಳನವಾಗಿರಬಹುದು. ಆದರೆ ಅವರಿಗೂ ಧರ್ಮಗಳು ನಂಬರ್ ವಾರ್ ಹೇಗೆ ಸ್ಥಾಪನೆ ಆಗುತ್ತವೆಯೆಂದು ಗೊತ್ತಿಲ್ಲ. ಮೊದಲನೇ ಧರ್ಮ ಯಾವುದಾಗಿದೆ? ಧಾರ್ಮಿಕ ಮುಖಂಡರು ಎಂದರೆ ಆಯಾ ಧರ್ಮದ ಮುಖಂಡರು ಬರಬೇಕು. ಹೇಗೆ ಮುಖ್ಯಮಂತ್ರಿಗಳ ಸಮ್ಮೇಳನ ನಡೆಯುತ್ತದೆ, ಆಗ ಕಲೆಕ್ಟರ್ ಹಾಗೂ ನ್ಯಾಯಾಧೀಶ ಮುಂತಾದವರು ಭಾಗವಹಿಸುವಂತಿಲ್ಲ. ಪರಸ್ಪರ ರಾಜ್ಯ ಪಾಲರ ಸಮ್ಮೇಳನವಾದಾಗ ರಾಜ್ಯ ಪಾಲರೇ ಬರಬೇಕಾಗುತ್ತದೆ. ಒಂದುವೇಳೆ ರಾಜ್ಯ ಪಾಲರು ತಮ್ಮ ಜೊತೆ ತಮ್ಮ ಪ್ರೈವೇಟ್ ಸೆಕ್ರೆಟರಿಯವರನ್ನು ಕರೆ ತರಬಹುದು. ಈ ಎಲ್ಲಾ ಧರ್ಮಗಳು ಹೇಗೆ ಸ್ಥಾಪನೆ ಆಗುತ್ತವೆಂದು ವಿಚಾರ ಮಾಡಬೇಕಾಗಿದೆ. ಎಲ್ಲಕ್ಕಿಂತಲೂ ಅತಿ ದೊಡ್ಡ ಧರ್ಮ ಯಾವುದು? ಆದಿ ಸನಾತನ ದೇವೀ-ದೇವತಾ ಧರ್ಮವಾಗಿತ್ತು. ಆ ಧರ್ಮದ ಮುಖಂಡರು ಎಲ್ಲಿ? ಆ ಧರ್ಮದ ಸ್ಥಾಪನೆ ಯಾರು ಮಾಡಿದರು? ಕೃಷ್ಣನಂತೂ ಇಲ್ಲ. ಒಂದುವೇಳೆ ಇದ್ದರೂ ಸಹ, ಕೃಷ್ಣನನ್ನು ಸಮ್ಮತಿಸುವವರು ಬೇಕಲ್ಲವೇ. ಕೃಷ್ಣನನ್ನು ಸಮ್ಮತಿಸುವವರು ವಲ್ಲಭಾಚಾರಿ (ಇದು ಒಂದು ಬ್ರಾಹ್ಮಣ ಕುಲ) ಅವಶ್ಯಕವಾಗಿ ನಮ್ಮದು ದೇವೀ-ದೇವತಾ ಧರ್ಮವಾಗಿತ್ತು. ಆದರೆ ಆಮೇಲೆ ಹಿಂದೂ ಧರ್ಮ ವೆಂದು ಹೇಳಿ ಬಿಟ್ಟಿದ್ದಾರೆ. ಹಿಂದೂ ಧರ್ಮವಂತೂ ಇಲ್ಲವೇ ಇಲ್ಲ. ದೇವತಾ ಧರ್ಮದವರೂ ಸಹ ಈಗ ಯಾರು ಇಲ್ಲ. ಆದುದರಿಂದ ಧರ್ಮಗಳ ಮುಖಂಡರುಗಳು ಭಾಗವಹಿಸ ಬೇಕಾಗುತ್ತದೆ. ಜೊತೆಯಲ್ಲಿ ಅವರ ಸೆಕ್ರೆಟರಿ ಬರಬಹುದು. ಮುಖ್ಯ ನಾಲ್ಕು ಧರ್ಮಗಳಿವೆ, ಆ ಧರ್ಮಗಳ ಮುಖಂಡರು ಬೇಕಾಗುತ್ತದೆ. ದೇವೀ-ದೇವತಾ ಧರ್ಮದ ಮುಖಂಡ ಯಾರು? ವಿದ್ಯಾ ದೇವತೆ ಸರಸ್ವತಿ, ಪ್ರಜಾಪಿತ ಬ್ರಹ್ಮ ಎಂದು ಮಹಿಮೆ ಮಾಡುತ್ತಾರೆ……. ಅವಶ್ಯಕವಾಗಿ ಅವರೇ ಹಿರಿಯರಾಗಿರಬೇಕು. ಅವರೂ ಸಹ ಬ್ರಹ್ಮಾರವರಿಂದ ಬ್ರಾಹ್ಮಣ ಧರ್ಮವೆಂದು ತಿಳಿದುಕೊಳ್ಳುತ್ತಾರೆ. ಆದರೆ ಬ್ರಹ್ಮಾ ಬ್ರಾಹ್ಮಣರಿಗೆ ಹೇಗೆ ಓದಿಸಿ ದೇವತೆಗಳನ್ನಾಗಿ ಮಾಡಿದ ರೆಂದು ತಿಳಿದುಕೊಂಡಿಲ್ಲ. ಆ ಬ್ರಾಹ್ಮಣರೂ ಸಹ ನಾವು ಬ್ರಹ್ಮನ ಸಂತಾನರೆಂದು ಹೇಳಿ ಕೊಳ್ಳುತ್ತಾರೆ. ಆದರೆ ಜನ್ಮ ಹೇಗೆ ಆಯಿತು, ಇದನ್ನು ತಿಳಿದುಕೊಂಡಿಲ್ಲ. ಆ ಬ್ರಾಹ್ಮಣರಲ್ಲೂ ಕೆಲವರು ಪುಷ್ಕರಣಿ, ಕೆಲವರು ಸಾರಸಿದ್ದ ಇನ್ನೂ ಕೆಲವರು ಬೇರೆ ಬೇರೆಯಾಗಿ ಹೇಳಿ ಕೊಳ್ಳುತ್ತಾರೆ. ಇಲ್ಲಿಯಾದರೂ ಬ್ರಹ್ಮಾರವರ ಮಕ್ಕಳೆಲ್ಲರು ಬ್ರಾಹ್ಮಣರೇ ಆಗಿದ್ದಾರೆ. ಇಲ್ಲಿ ಯಾವುದೇ ಮತಭೇದವಿಲ್ಲ. ಅನ್ಯ ಬ್ರಾಹ್ಮಣರಲ್ಲಿ ತುಂಬಾ ಮತಭೇದವಿರುತ್ತದೆ, ಅಲೌಕಿಕ ಬ್ರಾಹ್ಮಣರಲ್ಲಿ ಹಾಗೂ ದೇವತೆಗಳಲ್ಲಿ ಮತಭೇದ ಇರುವುದಿಲ್ಲ. ಸೂರ್ಯವಂಶ ಸೂರ್ಯವಂಶವೇ ಆಗಿರುತ್ತದೆ, ಮತಭೇದವಿರುವುದಿಲ್ಲ. ಮತಭೇದದಲ್ಲಿ ಎಷ್ಟೊಂದು ನಷ್ಟವಾಗಿ ಬಿಡುತ್ತದೆ. ನೀವು ತಂದೆಯಿಂದ ಹೊಸ-ಹೊಸ ಮಾತುಗಳನ್ನು ಕೇಳುತ್ತೀರಲ್ಲವೆ? ಇಲ್ಲಿ ಯಾವುದೇ ಹಾಡನ್ನು ಹೇಳುವುದಿಲ್ಲ. ಹೊಸ ಪ್ರಕಾರದ ಜ್ಞಾನ ಕೊಡುತ್ತಾರೆ. ಧಾರಣೆ ಮಾಡುವಂತಹ ಇಡೀ ಸೃಷ್ಟಿಯ ಚಕ್ರ ಜ್ಞಾನವನ್ನು ಕೊಡುತ್ತಾರೆ. ಇಂತಹ ತಂದೆ ಶಿಕ್ಷಕ, ಗುರುವಿಗೆ ವಿಚ್ಛೇದನ ಕೊಟ್ಟು ಓದುವುದನ್ನು ಬಿಟ್ಟು ಬಿಡುತ್ತಾರೆಯೇ? ಓದುವುದನ್ನು ಬಿಡುವುದೆಂದರೆ ತಂದೆಯನ್ನು ಬಿಡುವುದೆಂದು ಅರ್ಥ. ವಿದ್ಯಾರ್ಥಿ ಅಲ್ಲವೆಂದರೆ ಮಕ್ಕಳೂ ಸಹ ಆಗಲಾರರು. ತಂದೆಯನ್ನು ಬಿಟ್ಟರೆ ಆಸ್ತಿಯನ್ನು ಕಳೆದುಕೊಂಡಂತೆ. ಪತಿತ-ಪಾವನ ತಂದೆ ಒಬ್ಬರೇ ಆಗಿದ್ದಾರೆ.

ತಂದೆ ತಿಳಿಸುತ್ತಾರೆ-ಇದು ಅಂತಿಮ ಸಮಯವಾಗಿದೆ, ಎಲ್ಲರೂ ಲೆಕ್ಕಾಚಾರವನ್ನು ಮುಗಿಸಿಕೊಂಡು ಹಿಂತಿರುಗಲೇಬೇಕು. ಚಿನ್ನವನ್ನು ಬೆಂಕಿಯಲ್ಲಿ ಹಾಕಿದಾಗ ಶುದ್ಧವಾಗಿ ಬಿಡುತ್ತದೆ. ಈಗ ಇಡೀ ಪ್ರಪಂಚಕ್ಕೆ ಬೆಂಕಿ ಬೀಳುತ್ತದೆ, ಆದರೆ ಈ ಅಗ್ನಿಯಲ್ಲಿ ಆತ್ಮ ಪಾವನ ಆಗುವುದಿಲ್ಲ. ಇಲ್ಲಿ ಯೋಗಬಲದ ಮಾತಾಗಿದೆ ಅಥವಾ ಶಿಕ್ಷೆ ಪಡೆದು ಶರೀರವನ್ನು ಬಿಡುತ್ತೀರಿ, ಆಗ ಲೆಕ್ಕಾಚಾರ ಮುಗಿಯುತ್ತದೆ. ಪಾಪದ ಲೆಕ್ಕಾಚಾರವನ್ನು ಮುಗಿಸಿಕೊಂಡು ಪಾವನರಾಗಿ ಹಿಂತಿರುಗಬೇಕು. ಹಿಂತಿರುಗುವ ಸಮಯ ಇದೇ ಆಗಿದೆ. ಮಹಾಭಾರತ ಯುದ್ದವೂ ಸಹ ಇದೆ. ಹೋಳಿಯನ್ನು ಆಚರಿಸುತ್ತೇವೆ. ರಾವಣ ರಾಜ್ಯ ಸಮಾಪ್ತಿ ಆದ ನಂತರ ಬಹಳ ಕಡಿಮೆ ಮನುಷ್ಯರಿರುತ್ತಾರೆ. ಈಗ ರಾವಣ ರಾಜ್ಯದಲ್ಲಿ ಬಹಳ ಮನುಷ್ಯರಿದ್ದಾರೆ. ಇವರೆಲ್ಲರು ಎಲ್ಲಿ ಹೋಗುತ್ತಾರೆ?ಅವಶ್ಯವಾಗಿ ಮುಕ್ತಿದಾತರೂ ಸಹ ಬೇಕಾಗುತ್ತದೆ. ತಂದೆ ತಿಳಿಸುತ್ತಾರೆ ನಾನು ಎಲ್ಲರ ಜ್ಯೋತಿಯನ್ನು ಬೆಳಗಿಸಿ ಮನೆಗೆ ಕರೆದುಕೊಂಡು ಹೋಗುತ್ತೇನೆ. ಪುನಃ ಅವರು ತಮ್ಮ-ತಮ್ಮ ಪಾತ್ರವನ್ನು ಅಭಿನಯಿಸಬೇಕಾಗುತ್ತದೆ. ನಾವು ದೇವೀ-ದೇವತಾ ಧರ್ಮದಲ್ಲಿ ಬರುತ್ತೇವೆಂದು ತಿಳಿದುಕೊಂಡಿದ್ದೇವೆ. ನಾವು ಮುಕ್ತಿಧಾಮಕ್ಕೆ ಹೊರಟು ಪುನಃ ದೇವೀ-ದೇವತೆಗಳಾಗಿ ಹಿಂತಿರುಗುತ್ತೇವೆ. 84 ಜನ್ಮ ಪಡೆಯಬೇಕಾಗುತ್ತದೆ. ಸೂರ್ಯವಂಶೀ-ಚಂದ್ರವಂಶೀ-ವೈಶ್ಯವಂಶೀ-ಶೂದ್ರವಂಶದವರಾಗುತ್ತೇವೆ. ಚಕ್ರ ಪೂರ್ಣ ಬುದ್ಧಿಯಲ್ಲಿ ಬಂದು ಬಿಟ್ಟಿತು. ಬನ್ನಿ ನಾವು ನಿಮಗೆ ಶಿವ ತಂದೆಯ ಕರ್ತವ್ಯದ ಬಗ್ಗೆ ತಿಳಿಸುತ್ತೇವೆಂದು ಆತ್ಮ ಹೇಳುತ್ತದೆ. ಮಕ್ಕಳ ವಿನಃ ಬೇರೆ ಯಾರು ತಿಳಿಸಿಕೊಡಲು ಸಾಧ್ಯವಿಲ್ಲ. ಅವರು ಪರಮಾತ್ಮನಿಗೆ ನಿರಾಕಾರ ನೆಂದು ಹೇಳಿ ಪರಮಾತ್ಮನ ಕರ್ತವ್ಯದ ಬಗ್ಗೆ ಏನೆಂದು ತಿಳಿಸುತ್ತಾರೆ! ಅವರಂತು ಪತಿತ-ಪಾವನರಾಗಿದ್ದಾರೆ, ಆದುದರಿಂದ ಆವಶ್ಯವಾಗಿ ಪಾವನ ಮಾಡಲು ಅವರು ಬರಬೇಕಾಗುತ್ತದಲ್ಲವೇ! ಹೇಗೆ ರಾಜಯೋಗವನ್ನು ಕಲಿಸುತ್ತಾರೆ? ಬ್ರಹ್ಮನ ಮುಖಾಂತರ ದೇವೀ-ದೇವತಾ ಧರ್ಮದ ಸ್ಥಾಪನೆ ಹೇಗೆ ಆಗುತ್ತದೆ, ಇದನ್ನೆಲ್ಲಾ ನಾವು ನಿಮಗೆ ತಿಳಿಸಿಕೊಡುತ್ತೇವೆ. ತಿಳಿಸಿಕೊಡಲು ತಂದೆಯೇ ಬರುತ್ತಾರೆ, ಕೃಷ್ಣನು ಬರುವುದಿಲ್ಲ. ತುಂಬಾ ಅಂತರವಿದೆ. ಜನ್ಮ-ಮರಣ ರಹಿತನೆಲ್ಲಿ, ಕೃಷ್ಣ ಪೂರ್ತಿ 84 ಜನ್ಮಗಳನ್ನು ಪಡೆಯುತ್ತಾನೆ. ಶಾಸ್ತ್ರಗಳಲ್ಲಿ ಅನಾವಶ್ಯಕ ಮಾತುಗಳನ್ನು ಬರೆದು ಬಿಟ್ಟಿದ್ದಾರೆ. ತಂದೆ ಕುಳಿತು ಎಲ್ಲಾ ಮಾತುಗಳನ್ನು ತಿಳಿಸುತ್ತಾರೆ, ಮಕ್ಕಳಿಗೆ ತಾನೆ ತಿಳಿಸಿ ಕೊಡುತ್ತಾರೆ. ಕಲ್ಪದ ಹಿಂದೆ ಯಾರು ಓದಿದ್ದಾರೋ ಅವರೇ ಓದುತ್ತಾರೆ, ಇಲ್ಲವೆಂದರೆ ಹೊರಟು ಹೋಗುತ್ತಾರೆ. ಇದು ಹೊಸ ಮಾತೇನಲ್ಲ. ಆದರೂ ತಂದೆಗೆ ಸದಾ ಮಕ್ಕಳ ಮೇಲೆ ಪ್ರೀತಿಯಿರುತ್ತದೆ. ಪುನಃ ಬಂದು ತಂದೆಯಿಂದ ಆಸ್ತಿ ಪಡೆಯುವರೆಂದು ತಿಳಿದುಕೊಳ್ಳುತ್ತಾರೆ. ಆದರೆ ಅದೃಷ್ಟದಲ್ಲಿ ಇಲ್ಲವೆಂದರೆ ಏನು ಮಾಡುತ್ತಾರೆ? ತಂದೆಗೆ ಪ್ರೀತಿಯಿದೆಯಲ್ಲವೇ? ಏಕೆಂದರೆ ಭಕ್ತಿ ಮಾರ್ಗದಲ್ಲಿ ಭಗವಂತನನ್ನು ತುಂಬಾ ನೆನಪು ಮಾಡುತ್ತಾರೆ. ದೇವೀ-ದೇವತಾ ಧರ್ಮದವರು ಅವಶ್ಯಕವಾಗಿ ಜಾಸ್ತಿ ನೆನಪು ಮಾಡುತ್ತಾರೆ. ಆತ್ಮವೇ ಸುಖವನ್ನು ಪಡೆದುಕೊಳ್ಳುತ್ತದೆ, ಆದುದರಿಂದ ದುಃಖದಲ್ಲಿ ತಂದೆಯನ್ನು ನೆನಪು ಮಾಡುತ್ತದೆ. ಅವರೇ ತುಂಬಾ ಭಕ್ತಿ ಮಾಡಿ ಪೂಜಾರಿಗಳಿಂದ ಪೂಜ್ಯರಾಗುತ್ತಾರೆ. ದೇವೀ-ದೇವತಾ ಧರ್ಮದ ವೃಕ್ಷಾರೋಹಣ ನಡೆಯುತ್ತಿದೆ.

ಎಲ್ಲಿಯಾದರೂ ಸಮ್ಮೇಳನ ಮುಂತಾದವುಗಳು ನಡೆಯುವಾಗ ಮುಖ್ಯ ಧರ್ಮದವರನ್ನು ಕರೆಯಬೇಕಾಗುತ್ತದೆ. ಬ್ರಹ್ಮಾ ಕುಮಾರ-ಕುಮಾರಿಯರನ್ನು ಕರೆದರೆ ಪೂರ್ತಿ ಮಾರ್ಗದರ್ಶನ ಕೊಡುತ್ತಾರೆ. ಪ್ರಜಾಪಿತ ಬ್ರಹ್ಮನ ಮಕ್ಕಳು ಬ್ರಹ್ಮಾಕುಮಾರ-ಕುಮಾರಿಯರೇ ಈಗ ಏನು ಮಾಡಬೇಕೆಂದು ಪೂರ್ತಿಯಾಗಿ ಮಾರ್ಗದರ್ಶನ ಕೊಡುತ್ತಾರೆ. ನೀವು ಶಾಂತಿಯನ್ನು ಬಯಸುತ್ತೀರಿ ಆದರೆ ಶಾಂತಿ ಅಂತೂ ನಿರ್ವಾಣಧಾಮದಲ್ಲಿಯೇ ಸಿಗುತ್ತದೆ. ಈಗ ಅನೇಕ ಧರ್ಮಗಳಿವೆ, ಇದು ದುಃಖಧಾಮವಿದೆ. ಒಂದೇ ಧರ್ಮವಿದ್ದಾಗ ಸುಖ-ಶಾಂತಿ ಎಲ್ಲವು ಇತ್ತು. ಈಗ ಇದೆಲ್ಲವೂ ಅವಶ್ಯಕವಾಗಿ ವಿನಾಶವಾಗುತ್ತದೆ. ಈ ಮಾತಿನಲ್ಲಿ ಖುಷಿಯಾಗಬೇಕಾಗಿದೆ, ಸ್ವರ್ಗದ ಬಾಗಿಲು ತೆರೆಯುತ್ತಿದೆ. ಈ ರೀತಿಯಾಗಿ ಮಕ್ಕಳು ತಿಳಿಸಿಕೊಡಬೇಕು. ತಿಳಿದುಕೊಂಡಿರಲ್ಲವೇ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಎಂದಿಗೂ ತಂದೆಯನ್ನು ಅಥವಾ ವಿದ್ಯೆಯನ್ನು ಬಿಟ್ಟು ಆಸ್ತಿಯನ್ನು ಕಳಿದುಕೊಳ್ಳಬಾರದು. ಏಕತೆ (ಒಂದೇ ಮತ) ಯಲ್ಲಿರಬೇಕು.

2. ಶಿಕ್ಷೆಗಳಿಂದ ಬಿಡುಗಡೆಯಾಗಲು ಯೋಗಬಲದಿಂದ ಹಳೆಯದೆಲ್ಲಾ ಲೆಕ್ಕಾ-ಚಾರವನ್ನು ಮುಗಿಸಿಕೊಳ್ಳಬೇಕು.

ವರದಾನ:-

ನಿಮಿತ್ತತನದ ಭಾವವು ಹೊರೆಯನ್ನು ಸಹಜವಾಗಿಯೇ ಸಮಾಪ್ತಿಗೊಳಿಸುತ್ತದೆ. ನನ್ನ ಜವಾಬ್ದಾರಿ ಇದೆ, ನಾನೇ ಜವಾಬ್ದಾರಿ ನಿಭಾಯಿಸಬೇಕು, ನಾನೇ ಯೋಚಿಸಬೇಕು….. ಇದೆಲ್ಲವೂ ಹೊರೆಯಾಗುತ್ತದೆ. ಜವಾಬ್ದಾರಿಯು ತಂದೆಯದು ಮತ್ತು ತಂದೆಯು ನಿಮಿತ್ತನನ್ನಾಗಿ ಮಾಡಿದ್ದಾರೆಂಬ ಸ್ಮೃತಿಯಿಂದ ಡಬಲ್ ಲೈಟ್ ಆಗಿರುತ್ತಾ, ಹಾರುವ ಕಲೆಯ ಅನುಭವ ಮಾಡುತ್ತಿರಿ. ಎಲ್ಲಿ ನನ್ನದೆನ್ನುವುದಿದೆಯೋ ಅಲ್ಲಿ ಹೊರೆಯಿದೆ. ಆದ್ದರಿಂದ ಎಂದಿಗೂ ಯಾವುದೇ ಕಾರ್ಯದಲ್ಲಿ ಹೊರೆಯ ಅನುಭವ ಮಾಡುತ್ತೀರೆಂದರೆ ಪರಿಶೀಲನೆ ಮಾಡಿರಿ – ಎಲ್ಲಿಯಾದರೂ ತಪ್ಪಾಗಿ ನಿನ್ನದೆನ್ನುವುದಕ್ಕೆ ಬದಲು ನನ್ನದೆಂದು ಹೇಳುವುದಿಲ್ಲವೇ!

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:

ಹೇಗೆ ಯಾರಾದರೂ ಸಾಗರದಲ್ಲಿ ಸಮಾವೇಶವಾಗುತ್ತಾರೆಂದರೆ, ಆ ಸಮಯದಲ್ಲಿ ಸಾಗರವನ್ನು ಬಿಟ್ಟು ಮತ್ತೇನೂ ಕಾಣಿಸುವುದಿಲ್ಲ. ಅದೇರೀತಿ ತಾವು ಮಕ್ಕಳು ಸರ್ವಗುಣಗಳ ಸಾಗರನಲ್ಲಿ ಸಮಾವೇಶವಾಗಿಬಿಡಿ. ತಂದೆಯಲ್ಲಿ ಸಮಾವೇಶವಾಗಬಾರದು ಆದರೆ ತಂದೆಯ ನೆನಪಿನಲ್ಲಿ, ಸ್ನೇಹದ ಸಾಗರನಲ್ಲಿ ಸಮಾವೇಶವಾಗಿ ಬಿಡಬೇಕು.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top