03 January 2022 KANNADA Murli Today | Brahma Kumaris

Read and Listen today’s Gyan Murli in Kannada

January 2, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಬ್ರಹ್ಮನಿಂದ ವಿಷ್ಣು, ವಿಷ್ಣುವಿನಿಂದ ಬ್ರಹ್ಮಾ ಹೇಗೆ ಆಗುತ್ತಾರೆ, ಇಬ್ಬರೂ ಒಬ್ಬರ ನಾಭಿಯಿಂದ ಇನ್ನೊಬ್ಬರು ಹೇಗೆ ಹುಟ್ಟುತ್ತಾರೆ ಎಂಬುದನ್ನು ಸಿದ್ಧ ಮಾಡಿ ಜನರಿಗೆ ತಿಳಿಸಿರಿ”

ಪ್ರಶ್ನೆ:: -

ಯಾವ ಗುಪ್ತ ಮಾತನ್ನು ಸೂಕ್ಷ್ಮ ಬುದ್ಧಿಯುಳ್ಳ ಮಕ್ಕಳೇ ತಿಳಿದುಕೊಳ್ಳಲು ಸಾಧ್ಯ?

ಉತ್ತರ:-

ನಮ್ಮೆಲ್ಲರ ಹಿರಿಯ ತಾಯಿ ಈ ಬ್ರಹ್ಮಾ ಆಗಿದ್ದಾರೆ, ನಾವು ಅವರ ಮುಖ ವಂಶಾವಳಿ ಆಗಿದ್ದೇವೆ. ಇದು ಬಹಳ ಗುಪ್ತ ಮಾತಾಗಿದೆ. ಸರಸ್ವತಿಯು ಬ್ರಹ್ಮನ ಮಗಳಾಗಿದ್ದಾರೆ. ಅವರು ಎಲ್ಲರಿಗಿಂತ ಬುದ್ಧಿವಂತರಾಗಿದ್ದಾರೆ, ವಿದ್ಯಾ ದೇವಿಯಾಗಿದ್ದಾರೆ. ತಂದೆಯು ಜ್ಞಾನದ ಕಲಶವನ್ನು ಮಾತೆಯರಿಗೆ ಕೊಟ್ಟಿದ್ದಾರೆ. ಮಾತೆಯ ಜೋಗುಳದ ಗಾಯನವೂ ಇದೆ. ವಿಶ್ವದಲ್ಲಿ ಶಾಂತಿ ಹೇಗೆ ಸ್ಥಾಪನೆ ಆಗುತ್ತದೆಯೆಂಬುದನ್ನು ಮಾತೆಯರೇ ತಿಳಿಸಿ ಕೊಡಬೇಕು.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಭೋಲಾನಾಥನಿಂದ ಭಿನ್ನ….

ಓಂ ಶಾಂತಿ. ಕೆಟ್ಟು ಹೋಗಿರುವವರನ್ನು ಸರಿಪಡಿಸುವವರೆಂದು ಅವಶ್ಯವಾಗಿ ಭಗವಂತನಿಗೇ ಹೇಳಲಾಗುತ್ತದೆಯೇ ಹೊರತು ಶಂಕರಿನಿಗಲ್ಲ. ಅಂಬಿಗನೆಂತಲೂ ಶಿವನಿಗೇ ಹೇಳಲಾಗುವುದೇ ವಿನಃ ಶಂಕರನಿಗಾಗಲಿ/ವಿಷ್ಣುವಿಗಾಗಲಿ ಹೇಳಲಾಗುವುದಿಲ್ಲ. ಪರಮಪಿತ ಎಂದು ಹೇಳುವುದರಿಂದ ಬುದ್ಧಿ ನಿರಾಕಾರನ ಕಡೆ ಹೋಗಿ ಬಿಡುತ್ತದೆ. ತ್ರಿಮೂರ್ತಿಯ ಚಿತ್ರವಂತೂ ಬಹಳ ಪ್ರಸಿದ್ಧಿಯಾಗಿದೆ. ಸರ್ಕಾರದ ರಾಷ್ಟ್ರ ಮುದ್ರೆಯನ್ನೂ ಸಹ ಪ್ರಾಣಿಗಳಿಂದ ಮಾಡಲ್ಪಟ್ಟಿದೆ. ಹಾಗೂ ಅದರ ಮೇಲೆ ಸತ್ಯ ಮೇವ ಜಯತೆ ಎಂದು ಬರೆಯಲ್ಪಟ್ಟಿದೆ. ಪ್ರಾಣಿಗಳ ಚಿತ್ರವನ್ನು ಕೊಟ್ಟಿರುವುದರಿಂದ ಅದಕ್ಕೆ ಯಾವುದೇ ಅರ್ಥವಿಲ್ಲದಂತಾಗುತ್ತದೆ. ಸರ್ಕಾರದ ರಾಷ್ಟ್ರ ಮುದ್ರೆಯ ಅಚ್ಚು(ಸೀಲ್) ಸಹ ಇರುತ್ತದೆ. ಯಾವುದೆಲ್ಲ ದೊಡ್ಡ ದೊಡ್ಡ ರಾಜಧಾನಿಗಳಿವೆಯೋ ಅವುಗಳ ರಾಷ್ಟ್ರ ಮುದ್ರೆ ಇರುತ್ತದೆ. ಭಾರತದಲ್ಲಿ ತ್ರಿಮೂರ್ತಿ ಚಿತ್ರವು ಹೆಸರುವಾಸಿಯಾಗಿದೆ. ಅದರಲ್ಲಿ ಬ್ರಹ್ಮ ವಿಷ್ಣು ಶಂಕರರನ್ನು ತೋರಿಸಿದ್ದಾರೆ ಆದರೆ ಜ್ಞಾನವಿಲ್ಲದ ಕಾರಣ ಶಿವನನ್ನು ತೆಗೆದು ಹಾಕಿದ್ದಾರೆ. ಪರಮಪಿತ ಎನ್ನುವುದರಿಂದ ಬುದ್ಧಿಯು ನಿರಾಕಾರನ ಕಡೆಗೆ ಹೋಗಿ ಬಿಡುತ್ತದೆ. ಬ್ರಹ್ಮ ವಿಷ್ಣು ಶಂಕರರನ್ನು ಪರಮಪಿತ ಎಂದು ಹೇಳುವುದಿಲ್ಲ. ಆತ್ಮಗಳ ಪಿತನನ್ನು ಪರಮಪಿತ ಎನ್ನಲಾಗುತ್ತದೆ. ಅವರಂತೂ ಶ್ರೇಷ್ಠಾತಿ ಶ್ರೇಷ್ಠರಾಗಿದ್ದಾರೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತನನ್ನೇ ತೋರಿಸುತ್ತಾರೆಯೇ ಹೊರತು ಬ್ರಹ್ಮಾ ವಿಷ್ಣು ಶಂಕರರನ್ನು ಶ್ರೇಷ್ಠಾತಿ ಶ್ರೇಷ್ಠ ಎಂದು ಹೇಳುವುದಿಲ್ಲ. ಶ್ರೇಷ್ಠಾತಿ ಶ್ರೇಷ್ಠ ಒಬ್ಬ ಭಗವಂತನಾಗಿದ್ದಾರೆ. ಇದನ್ನಂತೂ ಎಲ್ಲರು ತಿಳಿದುಕೊಂಡಿದ್ದಾರೆ ಸಿಖ್ಖ್ ಧರ್ಮದವರೂ ಸಹ ಅವರ ಮಹಿಮೆ ಮಾಡುತ್ತಾರೆ. ಮನುಷ್ಯರನ್ನು ದೇವತೆಗಳನ್ನಾಗಿ ಒಬ್ಬ ಭಗವಂತನ ಹೊರತಾಗಿ ಬೇರೆ ಯಾರೂ ಮಾಡಲು ಸಾಧ್ಯವಿಲ್ಲವೆಂಬ ಜ್ಞಾನ ಗುರುನಾನಕ್ರವರೆಗೂ ಇತ್ತು. ಸತ್ಯಯುಗದಲ್ಲಿ ಅವಶ್ಯವಾಗಿ ದೇವತೆಗಳಿರುತ್ತಾರೆ. ಆದರೆ ದೇವತೆಗಳನ್ನು ಪರಮಾತ್ಮನೇ ರಚನೆ ಮಾಡುತ್ತಾರೆ. ಅವರು ದೇವತೆಗಳನ್ನು ಹೇಗೆ ರಚಿಸುತ್ತಾರೆಂಬುದನ್ನು ಯಾರು ತಿಳಿದುಕೊಂಡಿಲ್ಲ. ಕೊಳಕಾದ ಬಟ್ಟೆಯನ್ನು ತೊಳೆಯುತ್ತಾರೆಂದು ಮಹಿಮೆ ಮಾಡುತ್ತಾರೆ. ಆದ್ದರಿಂದ ಯಾರು ಪತಿತ ಮನುಷ್ಯರಿದ್ದಾರೋ ಅವರನ್ನೇ ದೇವತೆಯರನ್ನಾಗಿ ಮಾಡಲಾಗುತ್ತದೆ. ಆದರೆ ಯಾವಾಗ ಮಾಡಿದರೆಂಬುದನ್ನೂ ಸಹ ಬರೆದಿಲ್ಲ. ಅವಶ್ಯವಾಗಿ ಈ ಸಮಯದಲ್ಲಿಯೇ ಪರಮಾತ್ಮ ಮನುಷ್ಯರನ್ನು ದೇವತೆ ಮಾಡಿದರೆಂಬುದನ್ನು ನೀವು ತಿಳಿದಿದ್ದೀರಿ. ಅವರು ಅವಶ್ಯವಾಗಿ ದುರ್ಗತಿಯಿಂದ ಸದ್ಗತಿ ಮಾಡಿರಬೇಕು. ಭ್ರಷ್ಟಾಚಾರಿಗಳನ್ನೂ ಸಹ ಶ್ರೇಷ್ಠಾಚಾರಿ ಮಾಡಿರಬೇಕು. ಆದ್ದರಿಂದ ಈ ಭಾರತದಲ್ಲಿಯೇ ಶ್ರೇಷ್ಠಾಚಾರಿ ದೇವತೆಗಳಿದ್ದರೆಂಬುದನ್ನು ನೀವು ತಿಳಿಸಿಕೊಡಬಲ್ಲಿರಿ. ಗುರುನಾನಕ್ ಯಾವಾಗ ಸೃಷ್ಟಿಯಲ್ಲಿ ಬಂದರೊ ಆಗ ಭ್ರಷ್ಠಾಚಾರಿ ಪ್ರಪಂಚವೇ ಇತ್ತಲ್ಲವೆಆದ್ದರಿಂದ ಅವರ ಗಾಯನ ಮಾಡುತ್ತಾರೆ. ಲಕ್ಷ್ಮೀ-ನಾರಾಯಣರ ಚಿತ್ರವೂ ಇತ್ತಲ್ಲವೆಅದರ ಜೊತೆಗೆ ಇವರ ಸ್ಪರ್ಧೆ (ಕಾಂಪಿಟೇಶನ್) ಆಗುತ್ತದೆ. ಗುರು ಗೋವಿಂದ ಸಿಂಗರ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಾರೆ. ಅವರು ಸಿಖ್ಖ್ ಧರ್ಮದ ರಚೈತ ಆಗಿದ್ಧಾರೆ. ಅವರು ಭಗವಂತ ನಿರಾಕಾರ ನಿರಹಂಕಾರಿ ಎಂಬುದನ್ನು ಸ್ವತಃ ತಾವೂ ಹೇಳುತ್ತಾರೆ. ಭಗವಂತ ಬಂದು ಪತಿತ ಮನುಷ್ಯರನ್ನು ಪಾವನ ಮಾಡುತ್ತಾರೆಂಬುದಾಗಿಯೂ ಹೇಳುತ್ತಾರೆ. ಶ್ರೀಕೃಷ್ಣ ನಂತರ ಮನುಷ್ಯರನ್ನು ದೇವತೆ ಮಾಡಲು ಸಾಧ್ಯವಿಲ್ಲ. ರಾಜಯೋಗವನ್ನು ಕಲಿಸಿ ಮಹಾರಾಜ ಮಹಾರಾಣಿಯರನ್ನಾಗಿ ಮಾಡುತ್ತೇನೆಂದು ಗೀತೆಯಲ್ಲೂ ಬರೆಯಲ್ಪಟ್ಟಿದೆ. ಆದ್ದರಿಂದ ಪತಿತ ಪಾವನ ನೆಂದು ಪರಮಾತ್ಮನನ್ನೇ ಹೇಳಲಾಗುತ್ತದೆ. ಅವರು ಅವಶ್ಯವಾಗಿ ಭ್ರಷ್ಟಾಚಾರಿ ಪ್ರಪಂಚದಲ್ಲಿಯೇ ಬರುತ್ತಾರೆ. ಅವರನ್ನೇ ಬಂದು ಪಾವನ ಮಾಡು ಎಂದು ಹೇಳುತ್ತಾರೆ. ಶ್ರೇಷ್ಠಾಚಾರಿಗಳನ್ನಾಗಿ ಮಾಡುವವರು ಒಬ್ಬ ನಿರಾಕಾರಿ ತಂದೆಯಾಗಿದ್ದಾರೆ. ಶ್ರೇಷ್ಠಾತಿ ಶ್ರೇಷ್ಠ ಭಗವಂತನಾಗಿದ್ದಾರೆ. ನಂತರ ಬ್ರಹ್ಮಾ ವಿಷ್ಣು ಶಂಕರ ಇವರೂ ಸಹ ಪರಮಾತ್ಮನ ರಚನೆಯಾಗಿದ್ದಾರೆ. ಆದರೆ ಪರಮಾತ್ಮನ ಚಿತ್ರ ಇಲ್ಲವೇ ಇಲ್ಲ. ವಿಷ್ಣುವಿನಿಂದ ಬ್ರಹ್ಮ ಆಗುತ್ತಾರೆ. ಬ್ರಹ್ಮನ ಮೂಲಕ ಸ್ಥಾಪನೆ ನಂತರ ಅದೇ ಬ್ರಹ್ಮಾ ಸರಸ್ವತಿಯರೇ ಲಕ್ಷ್ಮಿ ನಾರಾಯಣರಾಗುತ್ತಾರೆ. ನಾವೇ ವಿಷ್ಣುವಿನ ಎರಡು ರೂಪ ಲಕ್ಷ್ಮಿ ನಾರಾಯಣರಾಗುತ್ತೇವೆಂದು ಬ್ರಹ್ಮಾ ಹೇಳುತ್ತಾರೆ. ನಂತರ ನಾವೇ ಬ್ರಹ್ಮಾ ಸರಸ್ವತಿಯರ ಎರಡು ರೂಪವೆಂದು ಲಕ್ಷ್ಮೀ-ನಾರಾಯಣ ಹೇಳುತ್ತಾರೆ. ನಾವೇ ದೇವತೆಗಳು ನಂತರ ಕ್ಷತ್ರಿಯವೈಶ್ಯಶೂದ್ರರಾಗುತ್ತೇವೆ. ಇದೆಲ್ಲ ತಿಳಿದುಕೊಳ್ಳುವ ಮಾತಾಗಿದೆ. ಯಾವ ಬ್ರಹ್ಮಾರವರ ಶರೀರದಲ್ಲಿ ನಾನು ಪ್ರವೇಶವಾಗಿರುವೆನೊ ಅವರದ್ದು 84 ಜನ್ಮ ಪೂರ್ಣವಾಯಿತೆಂದು ಬಾಬಾ ತಿಳಿಸುತ್ತಾರೆ ಬಾಕಿ ಯಾವುದೇ ರಥದ ಮಾತಿಲ್ಲ. ಅದೆಲ್ಲವೂ ಸುಳ್ಳಾಗಿದೆ. ಈ ಸಂಗಮಯುಗದ ಬಗ್ಗೆ ಯಾರಿಗೂ ಗೊತ್ತಿಲ್ಲ. ಮನುಷ್ಯರನ್ನು ಘೋರ ಅಂಧಕಾರದಲ್ಲಿ ಹಾಕಿ ಬಿಟ್ಟಿದ್ದಾರೆ. ಕಲಿಯುಗದ ಆಯಸ್ಸನ್ನೂ ಅಷ್ಟೇ ತೋರಿಸಿದ್ದಾರೆ. ಇಂತಹ ತಮ್ಮ ಮಾತುಗಳನ್ನೆಲ್ಲ ಬರೆದು ಮನುಷ್ಯರನ್ನು ಘೋರ ಅಂಧಕಾರದಲ್ಲಿ ಹಾಕಿಬಿಟ್ಟಿದ್ದಾರೆ. ನನ್ನನ್ನು ಯಾರು ಗುರುತು ಹಿಡಿಯುವರೊ ಅವರ ಮುಂದೆಯೇ ನಾನು ಪ್ರತ್ಯಕ್ಷವಾಗುತ್ತೇನೆಂದು ಬಾಬಾ ಹೇಳುತ್ತಾರೆ ಉಳಿದವರಂತೂ ನನ್ನನ್ನು ಅರಿತುಕೊಳ್ಳುವುದೇ ಇಲ್ಲ. ಇವರು ಯಾರೆಂಬುದನ್ನೂ ಅವರು ತಿಳಿದುಕೊಳ್ಳುವುದಿಲ್ಲ. ಬಾಬಾ ಯಾವುದಾದರು ದೊಡ್ಡ ಸಭೆಯಲ್ಲಿ ಹೋದರೆ ಬಾಬಾನನ್ನು ಅವರು ತಿಳಿದುಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಇವರು ಅತ್ಯಂತ ಹಿರಿಯ ಅಥಾರಿಟಿ ಎಂಬುದನ್ನು ಪದೇ-ಪದೇ ಮಕ್ಕಳು ಮರೆಯುತ್ತಾರೆ. ಕ್ರಿಶ್ಚಿಯನ್ನರ ಪೋಪ್ ನನ್ನು ನೋಡಿ ಎಷ್ಟೊಂದು ಗೌರವಿಸುತ್ತಾರೆ. ಇವರು ಯಾರು? ಕ್ರಿಶ್ಚಿಯನ್ ಧರ್ಮದ ಮನೆತನದವರಾಗಿದ್ದಾರೆ. ಇದು ಅವರ ಅಂತಿಮ ಜನ್ಮವಾಗಿದೆ. ಕ್ರೈಸ್ಟ್ ನ ಸಮಯದಿಂದ ಪುನರ್ಜನ್ಮ ಪಡೆಯುತ್ತಾ ಪಡೆಯುತ್ತಾ ಈ ಅಂತಿಮದಲ್ಲಿ ತಮೋಪ್ರಧಾನ ಅವಸ್ಥೆಯಲ್ಲಿದ್ಧಾರೆ. ಎಲ್ಲರೂ ಪತಿತರಾಗಿದ್ದಾರೆ ಪರಸ್ಪರ ದುಃಖ ಕೊಡುತ್ತಿರುತ್ತಾರೆ. ಬಾಬಾ ಹೇಳುತ್ತಾರೆ-ಇದೂ ಸಹ ಮಾಡಿ ಮಾಡಲ್ಪಟ್ಟಿರುವ ಆಟವಾಗಿದೆ. ಆದ್ದರಿಂದ ಸರ್ವ ಶ್ರೇಷ್ಠ ನಿರಾಕಾರ ಭಗವಂತನಾಗಿದ್ದಾರೆ. ನಂತರ ಬ್ರಹ್ಮಾ ವಿಷ್ಣು ಶಂಕರನಾಗಿದ್ದಾರೆ. ಬ್ರಹ್ಮನ ಮೂಲಕ ಸ್ಥಾಪನೆಯಾಗುತ್ತದೆ. ಯಾರ ಮೂಲಕ ಸ್ಥಾಪನೆ ಆಗುವುದೋ ಅವರಿಂದಲೇ ಪಾಲನೆಯೂ ಆಗುವುದು. ಆದ್ದರಿಂದ ಈ ಬ್ರಹ್ಮಾ ಸರಸ್ವತಿಯೇ ನಂತರ ಲಕ್ಷ್ಮೀ ನಾರಾಯಣ ಆಗಬೇಕಾಗಿದೆ. ಲಕ್ಷ್ಮಿ ನಾರಾಯಣರೇ ಬಂದು ಈಗ ಬ್ರಹ್ಮ ಸರಸ್ವತಿಯರಾಗಿದ್ದಾರೆ. ಈ ಸರಸ್ವತಿಯೂ ಪ್ರಜಾಪಿತನ ಮುಖವಂಶಾವಳಿಯಾಗಿದ್ದಾರೆ. ಕೃಷ್ಣನನ್ನು ಪ್ರಜಾಪಿತ ಎಂದು ಹೇಳಲಾಗುವುದಿಲ್ಲ . ಇವರ ಹೆಸರೇ ಪ್ರಜಾಪಿತ ಬ್ರಹ್ಮಾ ಆಗಿದೆ. ಅವಶ್ಯವಾಗಿ ಬ್ರಹ್ಮನ ಜೊತೆಯಲ್ಲಿ ಬ್ರಾಹ್ಮಣರೂ ಇರಬೇಕು. ಶಿವಬಾಬಾ ಹೇಳುತ್ತಾರೆ-ಮೊದಲು ನಾನು ಬ್ರಹ್ಮನನ್ನು ದತ್ತು ತೆಗೆದುಕೊಳ್ಳುತ್ತೇನೆ. ನನಗೆ ಇವರನ್ನೇ ಬ್ರಹ್ಮನನ್ನಾಗಿ ಮಾಡಬೇಕಾಗಿದೆ. ಇವರು ಸಂಪೂರ್ಣ 84 ಜನ್ಮವನ್ನು ಮುಗಿಸಿ ಈಗ ಅಂತಿಮ ಜನ್ಮದಲ್ಲಿದ್ದಾರೆ. ಬ್ರಹ್ಮನಂತೂ ಒಬ್ಬರೇ ಆಗಿದ್ದಾರಲ್ಲವೇ. ಇವರು ತಮ್ಮ ಜನ್ಮವನ್ನು ಅರಿತುಕೊಂಡಿಲ್ಲ. ಆದ್ದರಿಂದ ಯಾವಾಗ ಬ್ರಹ್ಮನಿಗೆ ಇದೆಲ್ಲವನ್ನು ತಿಳಿಸುವೆನೂ ಆಗ ಬ್ರಾಹ್ಮಣರೂ ಇರಲೇಬೇಕು. ಬ್ರಾಹ್ಮಣರು ಬ್ರಹ್ಮನ ಮುಖವಂಶಾವಳಿಯಾಗಿದ್ದಾರೆ. ಇವರೆಲ್ಲರು ದತ್ತು ಮಕ್ಕಳು ಕುಮಾರ ಕುಮಾರಿಯರಾಗಿದ್ದಾರೆ. ಇವರೆಲ್ಲರೂ ಅವಶ್ಯವಾಗಿ ಬ್ರಹ್ಮನ ಮುಖವಂಶಾವಳಿ ಆಗಿದ್ಧಾರೆ. ಇದೆಲ್ಲವೂ ತಿಳಿದುಕೊಳ್ಳುವ ಮಾತಾಗಿದೆ. ಸ್ವಯಂ ಶಿವಬಾಬಾ ಹೇಳುತ್ತಾರೆ ನಾನು ಇವರ ಬಹಳ ಜನ್ಮಗಳ ಅಂತಿಮ ಜನ್ಮದ ಸಮಯದಲ್ಲಿ ಬರಬೇಕಾಗಿದೆ. ಸತ್ಯಯುಗದಲ್ಲಿ ಮೊಟ್ಟ ಮೊದಲು ಈ ಲಕ್ಷ್ಮೀ ನಾರಾಯಣರೇ ಇದ್ದರು. ಆದ್ದರಿಂದ ಇವರು ಅವಶ್ಯವಾಗಿ 84 ಜನ್ಮಗಳನ್ನು ತೆಗೆದುಕೊಂಡಿರಬೇಕು. ಉಳಿದವರೆಲ್ಲಾ ಕಡಿಮೆ ಜನ್ಮ ತೆಗೆದುಕೊಂಡಿರಬೇಕು. ಈ ಬ್ರಹ್ಮನೇ ನಂತರ ಚತುರ್ಭುಜ ವಿಷ್ಣುವಾಗುತ್ತಾರೆ. ಆದ್ದರಿಂದ ತಿಳಿದುಕೊಳ್ಳಲು ಎಷ್ಟೊಂದು ಮಾತುಗಳಿವೆ. ಕೃಷ್ಣ ಈ ಜ್ಞಾನವನ್ನು ಕೊಡಲು ಸಾಧ್ಯವಿಲ್ಲ ಎಂಬುದು ಮೊಟ್ಟ ಮೊದಲು ನಿಶ್ಚಯವಿರಬೇಕು. ಒಳ್ಳೆಯದು-ನೀನೇ ಪೂಜ್ಯನೀನೇ ಪೂಜಾರಿ ಎಂದು ಹಾಡುತ್ತಾರೆ. ಭಕ್ತಿ ಮಾರ್ಗದಲ್ಲಿ ಪೂಜಾರಿಜ್ಞಾನ ಮಾರ್ಗದಲ್ಲಿ ಪೂಜ್ಯರಾಗಿದ್ದಾರೆ. ವಿಷ್ಣುವಿನ ಎರಡು ರೂಪ ಅವಶ್ಯವಾಗಿ ಪೂಜ್ಯರಿದ್ದರು. ನಂತರ ಈ ಬ್ರಹ್ಮನೇ ಪೂಜಾರಿಯಾಗಿ ವಿಷ್ಣುವಿನ ಪೂಜೆ ಮಾಡುತ್ತಾರೆ. ನಾನೇ ವಿಷ್ಣುವಿನ ಪೂಜಾರಿ ಆಗಿದ್ದೆ ಎಂದು ಹೇಳುತ್ತಾರೆ. ಈಗ ನಾನೇ ವಿಷ್ಣುವಿನ ಸಮಾನ ಪೂಜ್ಯನಾಗುತ್ತಿದ್ದೇನೆ. ನಾನೇ ಅದಾಗಿದ್ದೇನೆ. (ತತತ್ವಂ) ಇದನ್ನೇ ಅತ್ಯಂತ ಗುಹ್ಯ ಮಾತು ಎಂಬುದನ್ನು ಹೇಳಲಾಗುತ್ತದೆ. ಬ್ರಹ್ಮಾ ಎಲ್ಲಿಂದ ಬಂದರು! ವಿಷ್ಣು ಎಲ್ಲಿಗೆ ಹೋದರು! ಇದೆಲ್ಲವನ್ನು ನೀವೇ ತಿಳಿದುಕೊಂಡಿರುವಿರಿ. ವಿಷ್ಣುವಿನ ಎರಡು ರೂಪ ಲಕ್ಷ್ಮೀ ನಾರಾಯಣರು 84 ಜನ್ಮ ಪೂರ್ಣ ಮಾಡಿ ಅಂತಿಮದಲ್ಲಿ ಪತಿತರಾಗಲೇಬೇಕು. ದೈವೀ ರಾಜಧಾನಿ ಪತಿತವಾದಾಗಲೇ ನಾನು ಬಂದು ಹೊಸ ರಾಜಧಾನಿಯ ಸ್ಥಾಪನೆ ಮಾಡಿ ಅನೇಕ ಧರ್ಮಗಳ ನಾಶ ಮಡುತ್ತೇನೆ. ನಾನು ಪುನಃ ಸಹಜ ರಾಜಯೋಗ ಕಲಿಸಿ ಶ್ರೇಷ್ಠಾಚಾರಿ ದೇವಿ-ದೇವತಾ ಧರ್ಮದ ಸ್ಥಾಪನೆ ಮಾಡಿಉಳಿದೆಲ್ಲಾ ಭ್ರಷ್ಠಾಚಾರಿ ಧರ್ಮಗಳಿವೆಯೋ ಅದೆಲ್ಲದರ ವಿನಾಶ ಮಾಡಿಸುತ್ತೇನೆ. ರಾಮ ರಾಜ್ಯದಲ್ಲಿ ಅನ್ಯ ಯಾವುದೇ ಧರ್ಮಗಳಿರುವುದಿಲ್ಲ. ಈಗ ಎಲ್ಲಾ ಧರ್ಮಗಳಿವೆ. ಭಾರತದ ಧರ್ಮ ಇಲ್ಲವೇ ಇಲ್ಲ. ಅದೀಗ ಪುನಃ ಸ್ಥಾಪನೆಯಾಗುತ್ತದೆ. ಚಿತ್ರವೂ ಇದೆ. ತ್ರಿಮೂರ್ತಿಯ ಮೇಲೆ ಶಿವನ ಚಿತ್ರವೂ ಇದೆ. ಬ್ರಹ್ಮಾ-ಸರಸ್ವತಿಯರೇ ಲಕ್ಷ್ಮೀ-ನಾರಾಯಣರು ಮತ್ತು ಅವರೇ ರಾಧ ಕೃಷ್ಣರಾಗಿದ್ದಾರೆ. ರಾಧೆಯೇ ಬೇರೆ ರಾಜಧಾನಿಯವರು ಹಾಗೂ ಕೃಷ್ಣನೇ ಬೇರೆ ರಾಜಧಾನಿಯವರಾಗಿದ್ಧಾರೆ. ಜ್ಞಾನದ ವೀಣೆ ರಾಧೆಯ ಬಳಿ ಇರುವುದಿಲ್ಲ. ಈ ಸರಸ್ವತಿಯೇ ಜ್ಞಾನ ಪಡೆದು ಭವಿಷ್ಯದಲ್ಲಿ ರಾಧೆ ಆಗುತ್ತಾರೆ. ಸರಸ್ವತಿಯನ್ನೇ ಜ್ಞಾನ ದೇವತೆ ಎಂದು ಹೇಳಲಾಗುತದೆ. ಅವರಿಗೆ ಅವಶ್ಯವಾಗಿ ಬಾಬಾರವರೇ ಜ್ಞಾನ ಕೊಟ್ಟಿರಬೇಕಲ್ಲವೇ. ಸರಸ್ವತಿ ಬ್ರಹ್ಮನ ಮಗಳಾಗಿದ್ದಾರೆ. ಪ್ರಜಾಪಿತ ಬ್ರಹ್ಮಾರಿದ್ದರೆಂದ ಮೇಲೆ ಜಗದಂಬೆಯೂ ಇರಬೇಕು. ವಾಸ್ತವದಲ್ಲಿ ಇದು ಗುಪ್ತ ಮಾತಾಗಿದೆ. ಹಿರಿಯ ತಾಯಿಯಂತೂ ಈ ಬ್ರಹ್ಮಾನೇ ಆಗಿದ್ದಾರೆ. ಇವರ ಮೂಲಕವೇ ಮಾತೆಯರಿಗೆ ಜ್ಞಾನ ಕೊಡಲಾಗುತ್ತದೆ. ಬ್ರಹ್ಮನ ಮುಖದಿಂದಲೇ ಎಲ್ಲರನ್ನೂ ದತ್ತು ತೆಗೆದುಕೊಳ್ಳುವ ಕಾರಣ ಇವರನ್ನೇ ಹಿರಿಯ ತಾಯಿ ಎನ್ನಲಾಗುತ್ತದೆ. ಬುದ್ಧಿವಂತರಲ್ಲಿ ಅತೀ ಬುದ್ಧಿವಂತರು ಈ ಬ್ರಹ್ಮನ ಮಗಳು ಸರಸ್ವತಿಯಾಗಿದ್ದಾರೆ. ಇವರು ಎಲ್ಲಿಂದ ಬಂದರುಬ್ರಹ್ಮನಿಗೆ ಪತ್ನಿಯಂತೂ ಇಲ್ಲ. ಅವರಂತೂ ಪ್ರಜಾಪಿತನಾಗಿದ್ದಾರೆ. ಆದ್ದರಿಂದ ಈ ಸರಸ್ವತಿಯೂ ಬ್ರಹ್ಮನ ಮುಖವಂಶಾವಳಿಯಾಗಿದ್ದಾರೆ. ಈ ನಾಟಕವೂ ಸಹ ಅನಾದಿ ಮಾಡಿ ಮಾಡಲ್ಪಟ್ಟಿದೆ. ಆದ್ದರಿಂದ ಸರಸ್ವತಿಯು ವಿದ್ಯಾ ದೇವಿಯಾಗಿದ್ದಾರೆ. ಧಾರ್ಮಿಕ ಸಮ್ಮೇಳನಗಳು ಏನೆಲ್ಲಾ ನಡೆಯುತ್ತವೆಯೋ ಅಲ್ಲೆಲ್ಲ ಶಿವ ತಂದೆ ಹೋಗಲು ಸಾಧ್ಯವಿಲ್ಲ. ಏಕೆಂದರೆ ಅವರು ನಿರಾಕಾರನಾಗಿದ್ದಾರೆ. ಬ್ರಹ್ಮನನ್ನೂ ಕಳಿಸಲಾಗುವುದಿಲ್ಲ. ಮಾತೆಯರ ಮಹಿಮೆಯಿದೆ. ಆದ್ದರಿಂದ ಎಲ್ಲಾ ಧರ್ಮಗಳಿಗೂ ಮಾತೆಯರು ಮುಖ್ಯಸ್ಥರಾಗಬೇಕು. ಸರ್ವರ ಮಾತೆ ಜಗದಂಬಾ ಎಲ್ಲಾ ಧರ್ಮದವರಿಗೂ ಜ್ಞಾನದ ಜೋಗುಳ ಹಾಡಬೇಕು. ಮಕ್ಕಳು ತಾಯಿಯ ಮೂಲಕವೇ ಜನ್ಮ ಪಡೆಯುತ್ತಾರೆ. ಜಗದಂಬ ಎಲ್ಲರ ತಾಯಿ ಅಂದಮೇಲೆ ಎಲ್ಲರೂ ಅವರಿಗೇ ವಂದನೆ ಸಲ್ಲಿಸಬೇಕುಈ ಭ್ರಷ್ಟಾಚಾರಿ ಪ್ರಪಂಚ ಶೇಷ್ಠಾಚಾರಿ ಹೇಗೆ ಆಗುತ್ತದೆಭಾರತದಲ್ಲಿ ಶಾಂತಿಯ ಸ್ಥಾಪನೆ ಹೇಗೆ ಆಗಲಿದೆ ಎಂಬುದನ್ನು ಈ ಮಾತೆಯರು ತಿಳಿಸಕೊಡಬಹುದು. ರಾವಣ ರಾಜ್ಯದಲ್ಲಂತೂ ಶಾಂತಿಯಿರಲು ಸಾಧ್ಯವಿಲ್ಲ. ಶಾಂತಿ ಎಲ್ಲಿಂದ ಸಿಗುತ್ತದೆ ಎಂಬುದು ಈ ಮಾತೆಯರು ತಿಳಿಸಿಕೊಡಲು ಸಾಧ್ಯವಿದೆ. ಶಾಂತಿಧಾಮವು – ನಿರ್ವಾಣಧಾಮವೂ ಸಹ ಆಗಿದೆ. ಇದಾಗಿದೆ ದುಃಖಧಾಮ, ಸತ್ಯಯುಗವು ಸುಖಧಾಮವಾಗಿದೆ. ಅವಶ್ಯವಾಗಿ ಸತ್ಯಯುಗದಲ್ಲಿ ಒಂದೇ ರಾಜ್ಯವಿತ್ತು. ಅಲ್ಲಿ ಸುಖ-ಶಾಂತಿ-ಪವಿತ್ರತೆ ಎಲ್ಲವೂ ಇತ್ತು. ಈಗಂತೂ ಇಲ್ಲ. ಆದ್ದರಿಂದ ಅವಶ್ಯವಾಗಿ ಡ್ರಾಮಾ ಪೂರ್ಣಗೊಳ್ಳುತ್ತಿದೆ. ವೃಕ್ಷದ ಆಯಸ್ಸೂ ಸಹ ಪೂರ್ಣಗೊಳ್ಳುತ್ತಿದೆ. ದೇವತೆಗಳ 84 ಜನ್ಮವೂ ಪೂರ್ಣವಾಗುತ್ತದೆ. 84 ಲಕ್ಷ ಜನ್ಮವಂತೂ ಇರಲು ಸಾಧ್ಯವಿಲ್ಲ. ಇಸ್ಲಾಮಿಬೌದ್ಧ ಧರ್ಮದವರಿಗೂ ಇಷ್ಟೊಂದು ವರ್ಷಗಳು ಆಯಿತೆಂದ ಮೇಲೆ 84 ಲಕ್ಷ ಜನ್ಮ ಹೇಗೆ ಆಗಲು ಸಾಧ್ಯ. ಪರಮಪಿತ ಪರಮಾತ್ಮ ನೊಂದಿಗೆ ಸಂಬಂಧ ಏನಾಗಿದೆಯೆಂಬುದು ಈ ಮಾತೆಯರೇ ತಿಳಿಸಬಲ್ಲರು. ಅವರಂತೂ ರಚಯಿತನಾಗಿದ್ದಾರೆ. ಮೊದಲು ಬ್ರಹ್ಮ ವಿಷ್ಣು ಶಂಕರರನ್ನು ರಚಿಸಿ ನಂತರ ಬ್ರಹ್ಮನ ಮೂಲಕ ಮನುಷ್ಯ ಸೃಷ್ಟಿಯನ್ನು ರಚಿಸುತ್ತಾರೆ. ಅವರು ಇನ್ನು ಯಾವುದೇ ಹೊಸ ಪ್ರಪಂಚ ರಚಿಸುತ್ತಾರೆಂಬ ಮಾತಂತು ಇಲ್ಲ. ಒಂದು ವೇಳೆ ಹೀಗಾಗುವುದಿದ್ದರೆ ಪತಿತ ಪಾವನನೆ ಬಾ ಎಂದು ಮನುಷ್ಯರು ಕರೆಯುವ ಮಾತೇ ಇರುತ್ತಿರಲಿಲ್ಲ. ಈ ಸಮಯದಲ್ಲಿ ಎಲ್ಲರೂ ಪತಿತರಾಗಿ ದುರ್ಗತಿಯನ್ನು ಪಡೆದು ಬಿಟ್ಟಿದ್ದಾರೆ. ಓ ಪರಮಪಿತನೆ ದಯೆ ತೋರಿಸು ಎಂದು ನೆನಪು ಮಾಡುತ್ತಿರುತ್ತಾರೆ. ನಮ್ಮನ್ನು ಈ ಮಾಯಾವಿ ಪ್ರಪಂಚದಿಂದ ಬಿಡಿಸು ಎಂದು ಕೂಗುತ್ತಾರೆ. ಅಂದಮೇಲೆ ಅವರು ದುಃಖವನ್ನು ಕೊಡಲು ಹೇಗೆ ಸಾಧ್ಯ. ದುಃಖ ಕೊಡುವವರು ಅವಶ್ಯವಾಗಿಯೂ ಬೇರೆಯವರಿದ್ದಾರೆ. ಸತ್ಯಯುಗದಲ್ಲಿ ಯಾವಾಗ ಒಂದೇ ರಾಜ್ಯವಿತ್ತೋ ಆಗ ಉಳಿದೆಲ್ಲಾ ಧರ್ಮದ ಆತ್ಮಗಳು ನಿರ್ವಾಣಧಾಮದಲ್ಲಿರುತ್ತಾರೆ. ಈಗಂತೂ ಎಲ್ಲಾ ಧರ್ಮದ ಆತ್ಮರೂ ಇಲ್ಲಿಯೇ ಇದ್ದಾರೆ. ಆದ್ದರಿಂದ ಪುನಃ ಬಾಬಾರಿಗೆ ಒಂದೇ ಧರ್ಮದ ಸ್ಥಾಪನೆ ಮಾಡಬೇಕಾಗುತ್ತದೆ. ಬ್ರಹ್ಮನ ಮೂಲಕ ಸ್ಥಾಪನೆ ಮಾಡುತ್ತಾರೆ. ನಂತರ ಅದೇ ಬ್ರಹ್ಮ ವಿಷ್ಣುವಾಗುತ್ತಾರೆ. ನಂತರ ವಿಷ್ಣುವಿನ ನಾಭಿಯಿಂದ ಬ್ರಹ್ಮ ಹುಟ್ಟುತ್ತಾರೆ. ಯಾರು ಬ್ರಹ್ಮ ದೇವತೆ ಆಗುವವರಿದ್ದರೊ ಅವರ ಮೂಲಕವೇ ನಾನೀಗ ಕುಳಿತು ಜ್ಞಾನ ಕೊಡುತ್ತೇನೆ. ಬಾಕಿ ಪ್ರಪಂಚದವರು ಏನೆಲ್ಲ ಅನೇಕ ಪ್ರಕಾರದ ಚಿತ್ರ ಮಾಡಿದ್ದಾರೋ ಎಂಬುದೇ ಮುಖ್ಯ ಮಾತಾಗಿದೆ. ವಿಷ್ಣುವಿಗೆ ಪರಮಪಿತ ಪರಮಾತ್ಮ ಜನ್ಮ ಕೊಡುತ್ತಾರೆಂಬುದನ್ನು ತಿಳಿಸಿಕೊಡಬೇಕು. ಹಾಗೂ ಅವರು ಬ್ರಹ್ಮನಿಗೂ ಜನ್ಮ ಕೊಡುತ್ತಾರೆ. ದೇವತೆಗಳು ಸತ್ಯಯುಗದವರಾಗಿದ್ದಾರೆ. ಬ್ರಹ್ಮಾ ಎಲ್ಲಿಯವರುಅವಶ್ಯವಾಗಿ ಕಲಿಯುಗದವರೇ ಆಗಿರಬೇಕಲ್ಲವೇ. ಬಹಳ ಜನ್ಮಗಳ ಅಂತಿಮ ಜನ್ಮ ದೇವತೆಗಳದ್ದೇ ಆಗಿರುತ್ತದೆ. ಯಾರು ಶ್ರೇಷ್ಠಾಚಾರಿಗಳಿದ್ದರೊ ಅವರೇ ಭ್ರಷ್ಟಾಚಾರಿಗಳಾಗಿದ್ದಾರೆ. ಎರಡು ಯುಗದಲ್ಲಿ ಸೂರ್ಯವಂಶಿಚಂದ್ರವಂಶಿಯರ ರಾಜ್ಯ ವಿರುತ್ತದೆ. ಲಕ್ಷಾಂತರ ವರ್ಷಗಳ ಮಾತಿಲ್ಲ. ಕ್ರೈಸ್ಟ್ಗೆ 3 ಸಾವಿರ ವರ್ಷಕ್ಕೆ ಮೊದಲು ಸ್ವರ್ಗ ವಿತ್ತೆಂದು ಹೇಳುತ್ತಾರೆ ಇವರೆಲ್ಲರೂ ದತ್ತು ಮಕ್ಕಳಾಗಿದ್ದಾರೆ. ಈಗ ವಿನಾಶವಂತೂ ಎದುರಲ್ಲಿ ನಿಂತಿದೆ. ಭ್ರಷ್ಟಾಚಾರಿ ಭಾರತವನ್ನು ಯಾರೂ ಸಹ ಶ್ರೇಷ್ಠಾಚಾರಿ ಮಾಡಲು ಸಾಧ್ಯವಿಲ್ಲ. ಯಾವಾಗ ದೇವತೆಗಳು ವಾಮ ಮಾರ್ಗದಲ್ಲಿ ನಡೆಯುತ್ತಾರೋ ಆಗ ಈ ಸನ್ಯಾಸಿಗಳು ತಮ್ಮ ಪವಿತ್ರತೆಯ ಬಲದಿಂದ ಭಾರತವನ್ನು ಶೀತಲಗೊಳಿಸುತ್ತಾರೆ. ಈ ಸಮಯದಲ್ಲಂತೂ ಎಲ್ಲರೂ ಪತಿತರಾಗಿದ್ಧಾರೆ. ನದಿಗಳು ಸಾಗರದಿಂದ ಹೊರಡುತ್ತವೆಆದರೆ ಮನುಷ್ಯರು ನದಿಗಳನ್ನೇ ಪತಿತ-ಪಾವನಿ ಎಂದು ತಿಳಿದು ಅದರಲ್ಲಿ ಸ್ನಾನ ಮಾಡುತ್ತಾರೆ. ನಂದಿಗಳಂತೂ ಎಲ್ಲಾ ಸ್ಥಾನಗಳಲ್ಲೂ ಇವೆ. ನದಿ ಹೇಗೆ ಪತಿತ ಪಾವನಿ ಆಗಲು ಸಾಧ್ಯ. ಪತಿತ ಪಾವನ ಒಬ್ಬನೇ ಪರಮಪಿತ ಪರಮಾತ್ಮನಾಗಿದ್ದಾರೆ. ಮನುಷ್ಯರನ್ನು ಭ್ರಷ್ಟಾಚಾರದಿಂದ ಶ್ರೇಷ್ಠಾಚಾರಿಗಳನ್ನಾಗಿ ಮಾಡಲು ಜ್ಞಾನಗಂಗೆ ಬೇಕಾಗಿದೆ. ಬಾಬಾ ಹೇಳುತ್ತಾರೆ-ನಾನು ಸರ್ವ ಶಕ್ತಿವಂತನಾಗಿದ್ದೇನೆ. ನನ್ನನ್ನು ನೆನಪು ಮಾಡುವುದರಿಂದಲೇ ಎಲ್ಲಾ ಪಾಪಕರ್ಮಗಳು ವಿನಾಶವಾಗುತ್ತವೆ. ಒಳ್ಳೆಯದು.

ಧಾರಣೆಗಾಗಿ ಮುಖ್ಯಸಾರ:-

1. ಎಲ್ಲರಿಗಿಂತ ದೊಡ್ಡ ಅಥಾರಿಟಿ ತಂದೆಯಾಗಿದ್ಧಾರೆಅವರನ್ನು ಯಥಾರ್ಥವಾಗಿ ಅರಿತು ಗೌರವಿಸಬೇಕಾಗಿದೆ. ಅವರ ಶ್ರೀಮತದಂತೆ ಪೂರ್ಣ ನಡೆಯಬೇಕು.

2. ಬಾಬಾ ಜ್ಞಾನದ ಕಳಶವನ್ನು ಮಾತೆಯರಿಗೆ ಕೊಟ್ಟಿದ್ದಾರೆ. ಆದ್ದರಿಂದ ಅವರನ್ನು ಮುಂದಿಡಬೇಕಾಗಿದೆ.

ವರದಾನ:-

ಡಬಲ್ ಲೈಟ್ ಎಂಬುದರ ಅರ್ಥವಾಗಿದೆ – ಎಲ್ಲವನ್ನೂ ತಂದೆಗೆ ಅರ್ಪಣೆ ಮಾಡುವುದುತನವೂ ನನ್ನದಲ್ಲ. ಈ ತನುವನ್ನು ಬಾಬಾರವರು ಸೇವಾರ್ಥವಾಗಿ ಕೊಟ್ಟಿದ್ದಾರೆ. ತಮ್ಮ ಪ್ರತಿಜ್ಞೆಯಿದೆ – ತನು-ಮನ-ಧನ ಎಲ್ಲವು ನಿನ್ನದುಯಾವಾಗ ತನುವೇ ನನ್ನದಲ್ಲ ಅಂದಮೇಲೆ ಇನ್ನೇನು ನನ್ನದಿದೆ! ಇದರಿಂದ ಸದಾ ಕಮಲ ಪುಷ್ಪದ ಉದಾಹರಣೆಯು ಸ್ಮೃತಿಯಲ್ಲಿರಲಿ – ನಾನು ಕಮಲ ಪುಷ್ಪ ಸಮಾನ ಭಿನ್ನ ಹಾಗೂ ಪ್ರಿಯವಾದ ಆತ್ಮನಾಗಿದ್ದೇನೆ. ಈ ರೀತಿ ಭಿನ್ನವಾಗಿರುವವರಿಗೆ ಪರಮಾತ್ಮನ ಪ್ರೀತಿಯ ಅಧಿಕಾರವು ಪ್ರಾಪ್ತಿಯಾಗುವುದು.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:

ತಮ್ಮ ನಯನಗಳಲ್ಲಿ ಹಾಗೂ ಮುಖದ ಪ್ರತೀ ಶಬ್ಧದಲ್ಲಿ ತಂದೆಯು ಸಮಾವೇಶವಾಗಿರಲಿ. ಅದಕ್ಕಾಗಿ ತಮ್ಮ ಶಕ್ತಿಶಾಲಿ ಸ್ವರೂಪದ ಮೂಲಕ ಸರ್ವಶಕ್ತಿವಂತನು ಕಂಡು ಬರುತ್ತಾರೆ. ಹೇಗೆ ಸ್ಥಾಪನೆಯ ಆದಿಯಲ್ಲಿ ಬ್ರಹ್ಮಾರವರ ರೂಪದಲ್ಲಿ ಶ್ರೀಕೃಷ್ಣನು ಕಾಣಿಸುತ್ತಿದ್ದನುಅದೇರೀತಿ ಈಗ ತಾವು ಮಕ್ಕಳ ಮೂಲಕ ಸರ್ವಶಕ್ತಿವಂತನು ಕಾಣಿಸಲಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top