02 January 2022 KANNADA Murli Today | Brahma Kumaris

Read and Listen today’s Gyan Murli in Kannada

January 1, 2022

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ವಾಚಾ ಸೇವೆಯ ಜೊತೆಗೆ ಮನಸಾ ಸೇವೆಯನ್ನೂ ಸ್ವಾಭಾವಿಕವನ್ನಾಗಿ ಮಾಡಿಕೊಳ್ಳಿ, ಶುಭಭಾವನಾ ಸಂಪನ್ನರಾಗಿರಿ.

♫ ಕೇಳು ಇಂದಿನ ಮುರ್ಲಿ (audio)➤

ಇಂದು ನವ ವಿಶ್ವ ನಿರ್ಮಾತ, ವಿಶ್ವದ ತಂದೆಯು ತನ್ನ ಸಮೀಪ ಜೊತೆಗಾರರು, ನವ ನಿರ್ಮಾಣ ಕರ್ತರಾದ ಮಕ್ಕಳನ್ನು ನೋಡುತ್ತಿದ್ದಾರೆ. ತಾವೆಲ್ಲಾ ಮಕ್ಕಳು ತಂದೆಯ ನವನಿರ್ಮಾಣ ಮಾಡುವ ಕಾರ್ಯದಲ್ಲಿ ಸಮೀಪ ಸಂಬಂಧಿಯಾಗಿದ್ದೀರಿ. ಹೇಗೆ ವಿಶ್ವ ನವ ನಿರ್ಮಾಣದ ಕಾರ್ಯದಲ್ಲಿ ಪ್ರಕೃತಿಯೂ ಸಹಯೋಗಿಯಾಗಿದೆ, ವರ್ತಮಾನ ಸಮಯದ ಪ್ರಖ್ಯಾತರಾದ ವೈಜ್ಞಾನಿಕ ಮಕ್ಕಳೂ ಸಹ ಸಹಯೋಗಿಯಾಗಿದ್ದಾರೆ ಆದರೆ ತಾವೆಲ್ಲರೂ ಸಮೀಪ ಜೊತೆಗಾರರಾಗಿದ್ದೀರಿ. ಎಲ್ಲಾ ಮಕ್ಕಳ ಈ ಬ್ರಾಹ್ಮಣ ಜೀವನದ ವಿಶೇಷ ಕರ್ತವ್ಯ ಅಥವಾ ಸೇವೆ ಏನಾಗಿದೆ? ದಿನ-ರಾತ್ರಿ ಸೇವೆಯ ಉಮ್ಮಂಗ-ಉತ್ಸಾಹದಲ್ಲಿ ಹಾರುತ್ತಿದ್ದೀರಿ. ಯಾವ ಕಾರ್ಯಕ್ಕಾಗಿ? ವಿಶ್ವವನ್ನು ಹೊಸದನ್ನಾಗಿ ಮಾಡುವುದಕ್ಕಾಗಿ. ಪ್ರಪಂಚದವರು ಹೊಸ ವರ್ಷವನ್ನು ಆಚರಿಸುತ್ತಾರೆ ಆದರೆ ತಮ್ಮ ಹೃದಯದಲ್ಲಿ ಈ ವಿಶ್ವವನ್ನು ಇಂತಹ ಹೊಸದನ್ನಾಗಿ ಮಾಡಿ ಬಿಡಬೇಕು ಎಲ್ಲಾ ಮಾತುಗಳೂ ಹೊಸದಾಗಿ ಬಿಡಲಿ ಎಂಬ ಲಗನ್ ಇದೆ. ಮನುಷ್ಯ, ಪ್ರಕೃತಿ ಎಲ್ಲವೂ ಸತೋಪ್ರಧಾನವಾಗಿ ಬಿಡಲಿ. ಹಳೆಯ ಪ್ರಪಂಚವನ್ನಂತೂ ನೋಡುತ್ತಲೇ ಇದ್ದೀರಿ, ನಾಲ್ಕಾರು ಕಡೆ ಹಾಹಾಕಾರವಿದೆ ಅಂದಾಗ ಹಾಹಾಕಾರದ ಪ್ರಪಂಚದಿಂದ ಜಯ-ಜಯಕಾರದ ಪ್ರಪಂಚವನ್ನು ಮಾಡುತ್ತಿದ್ದೀರಿ. ಇದರಲ್ಲಿ ಪ್ರತೀ ಘಳಿಗೆ, ಪ್ರತೀ ಕರ್ಮ, ಪ್ರತೀ ವಸ್ತು ಹೊಸದಾಗಿ ಬಿಡುವುದು. ವಾಸ್ತವದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಎಲ್ಲವೂ ಹೊಸದೇ ಇಷ್ಟವಾಗುತ್ತದೆಯಲ್ಲವೆ. ಹಳೆಯ ವಸ್ತುಗಳು ಒಂದುವೇಳೆ ಇಷ್ಟವಾಗುತ್ತದೆಯೆಂದರೂ ಸಹ ನೆನಪಾರ್ಥಕ್ಕೆ ಮಾತ್ರ, ಉಪಯೋಗಿಸಲು ಇಷ್ಟವಾಗುವುದಿಲ್ಲ. ಕೇವಲ ಮ್ಯೂಜಿಯಂನಲ್ಲಿ ಸ್ಮರಣಾರ್ಥಕವಾಗಿ ಇಡುತ್ತಾರೆ ಆದರೆ ಹೊಸ ವಸ್ತುವು ಪ್ರತಿಯೊಬ್ಬರಿಗೂ ಇಷ್ಟವಾಗುತ್ತದೆ. ಈ ಸಮಯದಲ್ಲಿ ತಾವು ಬ್ರಾಹ್ಮಣ ಆತ್ಮರು ಹಳೆಯ ಪ್ರಪಂಚದಲ್ಲಿದ್ದರೂ ಸಹ ಹೊಸ ಪ್ರಪಂಚದಲ್ಲಿದ್ದೀರಿ, ಅನ್ಯ ಆತ್ಮರು ಹಳೆಯ ಪ್ರಪಂಚದಲ್ಲಿದ್ದಾರೆ ಆದರೆ ತಾವು ಎಲ್ಲಿದ್ದೀರಿ? ತಾವು ಹೊಸ ಯುಗ, “ಸಂಗಮದಲ್ಲಿ” ಇರುತ್ತೀರಿ. ಹಳೆಯ ಜೀವನವು ಸಮಾಪ್ತಿಯಾಯಿತು ಮತ್ತು ಈಗ ಹೊಸ ಬ್ರಾಹ್ಮಣ ಜೀವನದಲ್ಲಿದ್ದೀರಿ. ಪ್ರಪಂಚದವರು ಒಂದು ದಿನ ಹೊಸ ವರ್ಷವನ್ನು ಆಚರಿಸುತ್ತಾರೆ ಆದರೆ ತಮಗಂತೂ ಇರುವುದೇ ಹೊಸ ಯುಗ, ಹೊಸ ಜೀವನ. ಪ್ರತೀ ಕರ್ಮ, ಪ್ರತೀ ಸೆಕೆಂಡ್ ಹೊಸದಾಗಿದೆ, ನೀವು ಸಂಗಮದಲ್ಲಿದ್ದೀರಿ. ಒಂದು ಕಡೆ ಹಳೆಯ ಪ್ರಪಂಚ, ಇನ್ನೊಂದು ಕಡೆ ಹೊಸ ಪ್ರಪಂಚವನ್ನು ನೋಡುತ್ತಿದ್ದೀರಿ ಅಂದಮೇಲೆ ಬುದ್ಧಿಯು ಯಾವ ಕಡೆ ಹೋಗುತ್ತದೆ? ಹೊಸದರ ಕಡೆಯೋ ಅಥವಾ ಕೆಲವೊಮ್ಮೆ ಹಳೆಯ ಪ್ರಪಂಚದ ಕಡೆಯೂ ಹೊರಟು ಹೋಗುತ್ತದೆಯೋ? ಹಳೆಯ ಪ್ರಪಂಚವು ಇಷ್ಟವಾಗುತ್ತದೆಯೇ? ಯಾವ ವಸ್ತುವು ಇಷ್ಟವಾಗುವುದಿಲ್ಲವೋ ಅಂದಮೇಲೆ ಅದರಲ್ಲಿ ಬುದ್ಧಿಯು ಏಕೆ ಹೋಗುತ್ತದೆ? ಹಳೆಯ ಪ್ರಪಂಚದಿಂದ ದುಃಖ, ಅಶಾಂತಿ, ಬೇಸರದ ಅನುಭವ ಮಾಡಿ ಬಿಟ್ಟಿದ್ದೀರೋ ಅಥವಾ ಇನ್ನೂ ಸ್ವಲ್ಪ ಅನುಭವ ಮಾಡಬೇಕಾಗಿದೆಯೋ?

ಈ ದಿನವಂತೂ ಮಿಲನ ಮಾಡಲು ಮತ್ತು ಮಿಲನವನ್ನು ಆಚರಿಸಲು ಬಂದಿದ್ದೀರಿ. ತಾವೆಲ್ಲರೂ ಹೊಸ ವರ್ಷವನ್ನು ಆಚರಿಸಲು ದೂರ ದೇಶದಿಂದ ಬಂದು ತಲುಪಿದ್ದೀರಿ ಅಂದಾಗ ಹೊಸ ವರ್ಷಕ್ಕಾಗಿ, ತಮಗಾಗಿ, ವಿಶ್ವ ಸೇವೆಗಾಗಿ ಮತ್ತು ತಮ್ಮ ಸಮೀಪ ಜೊತೆಗಾರರಿಗಾಗಿ, ಪ್ರಕೃತಿಗಾಗಿ ಮತ್ತು ತಮ್ಮ ದೂರದ ಪರಿವಾರಕ್ಕಾಗಿ ಏನನ್ನು ಆಲೋಚಿಸಿದ್ದೀರಿ? ಹೊಸ ವರ್ಷದಲ್ಲಿ ಏನು ಹೊಸದನ್ನು ಮಾಡುವಿರಿ? ಕೇವಲ ತಮಗಾಗಿ ಆಲೋಚಿಸುವುದಿಲ್ಲ ತಾನೇ. ಬೇಹದ್ದಿನ ತಂದೆಯ ಮಕ್ಕಳು ತಾವು ಬೇಹದ್ದಿನವರಾಗಿದ್ದೀರಿ ಅಂದಮೇಲೆ ಎಲ್ಲರ ಬಗ್ಗೆ ಆಲೋಚಿಸುತ್ತಿರಲ್ಲವೇ. ಏಕೆಂದರೆ ಈ ಸಮಯದಲ್ಲಿ ಬಾಪ್ದಾದಾರವರ ಜೊತೆ ತಮ್ಮೆಲ್ಲರ ಜವಾಬ್ದಾರಿಯೂ ಇದೆ. ತಂದೆಯು ಮಾಡಿಸುವವರಾಗಿದ್ದಾರೆ ಆದರೆ ಮಾಡುವುದಕ್ಕೆ ನಿಮಿತ್ತರು ತಾವಾಗಿದ್ದೀರಲ್ಲವೆ!

ಬಾಪ್ದಾದಾರವರು ಎರಡು ವರ್ಷದ ಮೊದಲು ಹೊಸ ವರ್ಷದಲ್ಲಿ ಏನು ನವೀನತೆಯನ್ನು ತರಬೇಕು ಎಂಬುದನ್ನು ಸೂಚನೆ ನೀಡಿದ್ದರು. ಮಧ್ಯದಲ್ಲಿ ಒಂದು ವರ್ಷ ಹೆಚ್ಚಾಗಿ ಸಿಕ್ಕಿ ಬಿಟ್ಟಿತು ಅಂದಾಗ ಇಂದು ಅಮೃತವೇಳೆ ಬಾಪ್ದಾದಾ ನೋಡುತ್ತಿದ್ದೆವು – ಪ್ರತಿಯೊಬ್ಬ ಮಗುವು ತಮ್ಮಲ್ಲಿ ಎಲ್ಲಿಯವರೆಗೆ ನವೀನತೆಯನ್ನು ತಂದುಕೊಂಡಿದ್ದಾರೆ? ಮನಸ್ಸಿನಲ್ಲಿ, ವಾಣಿಯಲ್ಲಿ, ಕರ್ಮದಲ್ಲಿ ಮತ್ತು ಸೇವಾ ಸಂಪರ್ಕದಲ್ಲಿ ಏನು ನವೀನತೆಯನ್ನು ತಂದುಕೊಂಡಿದ್ದೀರಿ? ಹಿಂದಿನ ವರ್ಷ ಮನಸ್ಸಿನ ದಿನಚರಿ ಹೇಗಿತ್ತು ಮತ್ತು ಈಗಿನ ಮನಸ್ಸಿನ ಚಾರ್ಟ್ ಹೇಗಿದೆ? ಹೀಗೆ ಎಲ್ಲಾ ಮಾತುಗಳ ಚಾರ್ಟನ್ನು ಪರಿಶೀಲನೆ ಮಾಡಿಕೊಳ್ಳಿ. ನವೀನತೆ ಅರ್ಥಾತ್ ವಿಶೇಷತೆ ಎಲ್ಲಾ ಮಾತುಗಳಲ್ಲಿ ವಿಶೇಷತೆಯನ್ನು ತಂದು ಕೊಂಡಿರಾ? ಹಾರುವ ಕಲೆ ಲೆಕ್ಕದಿಂದ ಮನಸ್ಸಿನ ವಿಶೇಷತೆ ಹೇಗಿದೆ? ಹಾರುವ ಕಲೆಯವರ ವಿಶೇಷತೆ ಅರ್ಥಾತ್ ಪ್ರತೀ ಸಮಯ, ಪ್ರತಿಯೊಂದು ಆತ್ಮನ ಪ್ರತಿ ಸ್ವತಹ ಶುಭಭಾವನೆ ಮತ್ತು ಶುಭಕಾಮನೆಯ ಶುದ್ಧ ವೈಬ್ರೇಷನ್ ತನಗೆ ಮತ್ತು ಅನ್ಯರಿಗೂ ಅನುಭವವಾಗಲಿ ಅರ್ಥಾತ್ ಮನಸ್ಸಿನಿಂದ ಪ್ರತೀ ಸಮಯ ಸರ್ವ ಆತ್ಮರ ಪ್ರತಿ ಆಶೀರ್ವಾದಗಳು ಸ್ವತಹ ಹೊರಡುತ್ತಿರಲಿ, ಮನಸ್ಸು ಸದಾ ಈ ಸೇವೆಯಲ್ಲಿ ಬ್ಯುಜಿಯಾಗಿರಲಿ. ಹೇಗೆ ವಾಚಾ ಸೇವೆಯಲ್ಲಿ ಸದಾ ಬ್ಯುಜಿಯಾಗಿರುವ ಅನುಭವಿಗಳಾಗಿ ಬಿಟ್ಟಿದ್ದೀರಿ. ಒಂದುವೇಳೆ ಸೇವೆ ಸಿಗಲಿಲ್ಲವೆಂದರೆ ತಮ್ಮನ್ನು ಖಾಲಿ, ಖಾಲಿ ಅನುಭವ ಮಾಡುತ್ತೀರಿ. ಹಾಗೆಯೇ ಪ್ರತೀ ಸಮಯ ವಾಣಿಯ ಜೊತೆ-ಜೊತೆಗೆ ಮನಸ್ಸಾ ಸೇವೆಯು ಸ್ವತಹ ಇರಬೇಕಾಗಿದೆ. ವಾಚಾ ಸೇವೆಗಾಗಿ ಬಹಳ ಒಳ್ಳೆಯ ಯೋಜನೆಗಳನ್ನು ಮಾಡಿಕೊಳ್ಳುತ್ತೀರಿ. ಈ ಸಮ್ಮೇಳನ ಮಾಡೋಣ, ರಾಷ್ಟ್ರೀಯ ಮಟ್ಟದಲ್ಲಿ ಮಾಡೋಣ, ಈಗ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮಾಡೋಣ, ಈಗ ವರ್ಗೀಕರಣ ಸೇವೆ ಮಾಡೋಣ, ಹೀಗೆ ವಾಚಾ ಸೇವೆಯಲ್ಲಿ ತಮ್ಮನ್ನು ವ್ಯಸ್ಥರಾಗಿಟ್ಟುಕೊಳ್ಳಲು ಒಂದರ ಹಿಂದೆ ಒಂದು ಯೋಜನೆಗಳನ್ನು ಮೊದಲೇ ಯೋಚಿಸುತ್ತೀರಿ. ಇದರಲ್ಲಿ ಬ್ಯುಜಿಯಾಗಿರುವುದು ಬಂದು ಬಿಟ್ಟಿದೆ. ಮೆಜಾರಿಟಿ ಒಳ್ಳೆಯ ಉಮಂಗದಿಂದ ಈ ಸೇವೆಯಲ್ಲಿ ಮುಂದುವರೆಯುತ್ತಿದ್ದಾರೆ. ವ್ಯಸ್ಥರಾಗಿರುವ ವಿಧಾನವು ಬಂದು ಬಿಟ್ಟಿದೆ ಆದರೆ ಮನಸ್ಸಾ ಸೇವೆಯಲ್ಲಿಯೂ ಬ್ಯುಸಿಯಾಗಿರುವುದರಲ್ಲಿ ಕೆಲವರೇ ಇದ್ದಾರೆ, ಅನೇಕರಿಲ್ಲ. ಯಾವಾಗ ಯಾವುದೇ ಇಂತಹ ಮಾತು ಸನ್ಮುಖದಲ್ಲಿ ಬರುತ್ತದೆಯೆಂದರೆ ಆ ಸಮಯದಲ್ಲಿ ವಿಶೇಷ ಮನಸ್ಸಾ ಸೇವೆಯ ಸ್ಮೃತಿ ಬರುತ್ತದೆ ಆದರೆ ನಿರಂತರ ಹೇಗೆ ವಾಚಾ ಸೇವೆಯು ಸ್ವಾಭಾವಿಕವಾಗಿ ಬಿಟ್ಟಿದೆಯೋ ಹಾಗೆಯೇ ಮನಸ್ಸಾ ಸೇವೆಯೂ ಜೊತೆ-ಜೊತೆಗೆ ಮತ್ತೆ ಸ್ವಾಭಾವಿಕವಾಗಿರಲಿ. ಈ ವಿಶೇಷತೆಯು ಇನ್ನೂ ಹೆಚ್ಚಿನದಾಗಿ ಬೇಕಾಗಿದೆ. ವಾಣಿಯ ಜೊತೆ-ಜೊತೆಗೆ ಮನಸ್ಸಾ ಸೇವೆಯನ್ನೂ ಮಾಡುತ್ತಾ ಇರಿ ಆಗ ತಮಗೆ ಮಾತನಾಡುವುದು ಕಡಿಮೆಯಾಗುತ್ತದೆ. ಮಾತನಾಡುವುದರಲ್ಲಿ ಯಾವ ಶಕ್ತಿಯನ್ನು ತೊಡಗಿಸುತ್ತೀರೋ ಅದು ಮನಸ್ಸಾ ಸೇವೆಯ ಸಹಯೋಗದ ಕಾರಣ ವಾಣಿಯ ಶಕ್ತಿಯು ಜಮಾ ಆಗುವುದು ಮತ್ತು ಮನಸ್ಸಿನ ಶಕ್ತಿಶಾಲಿ ಸೇವೆಯು ಹೆಚ್ಚು ಸಫಲತೆಯ ಅನುಭವ ಮಾಡಿಸುವುದು. ಈಗ ಎಷ್ಟು ತನು-ಮನ-ಧನ ಮತ್ತು ಸಮಯವನ್ನು ತೊಡಗಿಸುತ್ತೀರೋ ಅದಕ್ಕಿಂತ ಬಹಳ ಕಡಿಮೆ ಸಮಯದಲ್ಲಿ ಹೆಚ್ಚು ಸಫಲತೆ ಸಿಗುವುದು ಮತ್ತು ತನ್ನ ಪ್ರತಿ ಕೆಲಕೆಲವೊಮ್ಮೆ ತನ್ನ ಸ್ವಭಾವವನ್ನು ಪರಿವರ್ತನೆ ಮಾಡಿಕೊಳ್ಳಲು ಅಥವಾ ಸಂಘಟನೆಯಲ್ಲಿ ನಡೆಯಲು, ಸೇವೆಯಲ್ಲಿ ಕಡಿಮೆ ಸಫಲತೆಯನ್ನು ನೋಡಿ ಹೃದಯವಿಧೀರ್ಣರಾಗುವ ಸ್ವಭಾವವನ್ನು ಪರಿವರ್ತನೆ ಮಾಡಿಕೊಳ್ಳಲು ಕೆಲಕೆಲವೊಮ್ಮೆ ಹೆಚ್ಚು ಪರಿಶ್ರಮ ಪಡಬೇಕಾಗಿದೆಯೋ ಅದೆಲ್ಲವೂ ಸಮಾಪ್ತಿ ಆಗಿಬಿಡುವುದು. ಯಾವ ಚಿಕ್ಕ-ಚಿಕ್ಕ ಮಾತುಗಳು ದೊಡ್ಡದಾಗಿ ಬಿಡುತ್ತವೆಯೋ ಅವೆಲ್ಲವೂ ಜಾದುವಿನಂತೆ ಸಮಾಪ್ತಿ ಆಗಿ ಬಿಡುವುದು. ಈಗ ಜಾದುಮಂತ್ರವು ಇಷ್ಟವಾಗುತ್ತದೆಯಲ್ಲವೆ ಅಂದಾಗ ಈ ಅಭ್ಯಾಸವು ಜಾದುಮಂತ್ರ ಆಗಿ ಬಿಡುವುದು. ಎಲ್ಲಿ ಮಂತ್ರವಿರುವುದೋ ಅಲ್ಲಿ ಅಂತರವು ಬೇಗ ಬರುವುದು ಆದ್ದರಿಂದ ಜಾದು ಮಂತ್ರವೆಂದು ಹೇಳುತ್ತಾರೆ. ಅಂದಾಗ ಹೊಸ ವರ್ಷದಲ್ಲಿ ಜಾದುವಿನ ಮಂತ್ರವನ್ನು ಉಪಯೋಗಿಸಿರಿ, ಈ ನವೀನತೆ ಮತ್ತು ವಿಶೇಷತೆಯನ್ನು ನೋಡಿರಿ ಮತ್ತು ಜಾದುವಿನ ಮಂತ್ರವೇನಾಗಿದೆ? ಮನಸ್ಸಾ ಮತ್ತು ವಾಚಾ ಎರಡರ ಬ್ಯಾಲೆನ್ಸ್ ಮಾಡಿ. ಎರಡರ ಬ್ಯಾಲೆನ್ಸ್, ಎರಡರ ಮಿಲನ – ಇದೇ ಜಾದುವಿನ ಮಂತ್ರವಾಗಿದೆ. ಯಾವಾಗ ಮನಸ್ಸಿನಲ್ಲಿ ಸದಾ ಶುಭ ಭಾವನೆ ಹಾಗೂ ಶುಭ ಆಶೀರ್ವಾದಗಳನ್ನು ಕೊಡುವುದು ಸ್ವಾಭಾವಿಕ ಅಭ್ಯಾಸವಾಗಿ ಬಿಡುವುದೋ ಆಗ ತಮ್ಮ ಮನಸ್ಸು ಬ್ಯುಜಿಯಾಗಿ ಬಿಡುವುದು. ಮನಸ್ಸಿನಲ್ಲಿ ಯಾವ ಏರಿಳಿತಗಳು ಬರುತ್ತವೆಯೋ ಅದರಿಂದ ಸ್ವತಹವಾಗಿ ಮುಕ್ತರಾಗುತ್ತೀರಿ. ತಮ್ಮ ಪುರುಷಾರ್ಥದಲ್ಲಿ ಕೆಲವೊಮ್ಮೆ ವ್ಯಾಕುಲರಾಗುತ್ತೀರಿ ಅದೂ ಸಹ ಇರುವುದಿಲ್ಲ. ಜಾದು ಮಂತ್ರವಾಗಿ ಬಿಡುವುದು. ಸಂಘಟನೆಯಲ್ಲಿ ಕೆಲಕೆಲವೊಮ್ಮೆ ಗಾಬರಿಯಾಗುತ್ತೀರಿ, ನಾವಂತೂ “ತಂದೆ ಮತ್ತು ನಾನು” ಎಂದು ಪ್ರತಿಜ್ಞೆ ಮಾಡಿದ್ದೆನು ಆದರೆ ಸಂಘಟನೆಯಲ್ಲಿ ಇರುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದೇನೆಯೇ ಎಂದು ಆಲೋಚಿಸುತ್ತೀರಿ. ತಂದೆಯಂತೂ ಬಹಳ ಒಳ್ಳೆಯವರಾಗಿದ್ದಾರೆ. ತಂದೆಯ ಜೊತೆಯಿರುವುದೂ ಬಹಳ ಚೆನ್ನಾಗಿರುತ್ತದೆ ಆದರೆ ಸಂಘಟನೆಯಲ್ಲಿ ಎಲ್ಲರ ಸಂಸ್ಕಾರಗಳನ್ನು ಅರಿತುಕೊಂಡು ನಡೆಯುವುದು, ಇದು ಬಹಳ ಕಷ್ಟವಾಗಿದೆ ಆದರೆ ಇದೂ ಸಹ ಬಹಳ ಸಹಜವಾಗಿ ಬಿಡುವುದು ಏಕೆಂದರೆ ಮನಸ್ಸಿನಿಂದ, ಹೃದಯದಿಂದ ಪ್ರತಿಯೊಬ್ಬ ಆತ್ಮನ ಪ್ರತಿ ಆಶೀರ್ವಾದಗಳು, ಶುಭಭಾವನೆ, ಶುಭಕಾಮನೆಯು ಶಕ್ತಿಶಾಲಿಯಾಗುವ ಕಾರಣ ಅನ್ಯರ ಸಂಸ್ಕಾರಗಳು ಅದುಮಿಡಲ್ಪಡುತ್ತದೆ. ಅವರು ತಮ್ಮನ್ನು ಎದುರಿಸುವುದಿಲ್ಲ ಮತ್ತು ಆ ಸಂಸ್ಕಾರಗಳು ಅದುಮಿಡುತ್ತಾ-ಅದುಮಿಡುತ್ತಾ ಸಮಾಪ್ತಿ ಆಗಿ ಬಿಡುತ್ತವೆ. ಆಗ ಹೌದು ನಾವು 40 ಜನರ ಜೊತೆಯಲ್ಲಿ ಬೇಕಾದರೂ ಇರಬಲ್ಲೆವು ಎಂದು ಹೇಳುತ್ತಾರೆ, ಈ ವರ್ಷ ನಾಲ್ಕಾರು ಕಡೆಯ ದೇಶ-ವಿದೇಶದ ಮಕ್ಕಳು ಪ್ರತೀ ಸಮಯದ ನವೀನತೆ ಹಾಗೂ ವಿಶೇಷತೆಯನ್ನು ತಮ್ಮಲ್ಲಿ ತಂದುಕೊಳ್ಳಬೇಕಾಗಿದೆ. ಕೆಲಕೆಲವೊಮ್ಮೆ ಆಲೋಚಿಸುತ್ತೀರಲ್ಲವೆ – ಈಗಂತೂ 9 ಲಕ್ಷವೂ ಪೂರ್ಣವಾಗಿಲ್ಲ, ಅಂತ್ಯದವರೆಗೆ 33 ಕೋಟಿ ದೇವತೆಗಳಿರುತ್ತಾರೆ, ಅದರ ಮಾತನ್ನು ಬಿಟ್ಟು ಬಿಡಿ. 9 ಲಕ್ಷವಾದರೂ ಒಳ್ಳೆಯ ಆತ್ಮರು ಬೇಕಾಗಿದೆ. ಮೊದಲ ರಾಜಧಾನಿಯಲ್ಲಿ ಒಳ್ಳೆಯ ಆತ್ಮರು ಬೇಕು, ಪ್ರಜೆಗಳು ಒಳ್ಳೆಯ ನಂಬರ್ವನ್ ಇರಬೇಕು ಏಕೆಂದರೆ 01-01-01 ಆರಂಭವಾಗುವುದು. ಆದ್ದರಿಂದ ಇದರಲ್ಲಿ ಏನೆಲ್ಲಾ ಪರಿಸ್ಥಿತಿ ಇರುವುದೋ, ವ್ಯಕ್ತಿಗಳಿರುವರೋ, ವೈಭವ ಇರುವುದೋ ಅದೆಲ್ಲವೂ ನಂಬರ್ವನ್ ಆಗಿರುವುದು. ಅಂದಮೇಲೆ ಈಗ ನಂಬರ್ವನ್ ಪ್ರಜೆಗಳು 8 ಲಕ್ಷ ಮಂದಿಯನ್ನು ತಯಾರು ಮಾಡಿದ್ದೀರಾ? ಎಷ್ಟು ಲಕ್ಷ ತಯಾರು ಮಾಡಿದ್ದೀರಿ? ತಾವು ಯಾವ ರಿಪೋರ್ಟ್ ಬರೆಯುತ್ತೀರೋ ಅದರಲ್ಲಿ ಕೆಲ-ಕೆಲವೊಮ್ಮೆ ಬರುವವರನ್ನೂ ಸಹ ಸೇರಿಸಿ ಬಿಡುತ್ತೀರಲ್ಲವೆ ಆದರೆ ಈಗಿನ್ನೂ ಅರ್ಧವೂ ಆಗಿಲ್ಲ. ನಂಬರ್ವನ್ ಪ್ರಜೆಗಳೂ ಸಹ ಕೊನೆಪಕ್ಷ ತಂದೆಯ ಸ್ನೇಹದ ಅನುಭವವನ್ನು ಅವಶ್ಯವಾಗಿ ಮಾಡುವರು. ಸಹಯೋಗದಲ್ಲಿರುತ್ತಾರೆ, ಅದಂತೂ ಮೊದಲ ಹೆಜ್ಜೆಯಾಗಿದೆ ಆದರೆ ಎರಡನೇ ಹೆಜ್ಜೆಯಾಗಿದೆ – ಸಹಯೋಗಿ, ಸ್ನೇಹಿಗಳಾಗುತ್ತಾರೆ. ಸಮರ್ಪಣೆಯಾಗುವುದಿಲ್ಲ ಅದು ಬೇರೆ ಮಾತಾಗಿದೆ, ಆದರೆ ಸದಾ ತಂದೆಯ ಸ್ನೇಹವಾದರೂ ಇರಲಿ. ಕೇವಲ ಪರಿಹಾರ ಅಥವಾ ಸಹೋದರ-ಸಹೋದರಿಯರ ಸ್ನೇಹವಲ್ಲ. ಈಗ ಇಲ್ಲಿಯವರೆಗೂ ತಲುಪಿದ್ದಾರೆ – ಯಾವ ಸೇವೆ ಮಾಡುವರೋ ಅವರ ಪ್ರತಿ ಸ್ನೇಹಿಯಾಗುತ್ತಾರೆ ಆದರೆ ಈಗ ತಂದೆಯ ಸ್ನೇಹದ ಅನುಭೂತಿಯಾಗಲಿ. ಅವರ ಹೃದಯದಿಂದಲೂ ಬಾಬಾ ಎಂದು ಬರಲಿ ಆಗ ಪ್ರಜೆಗಳಾಗುವರು. ಬ್ರಹ್ಮನ ಪ್ರಜೆಗಳು, ಮೊದಲ ವಿಶ್ವದ ಮಹಾರಾಜನ ಪ್ರಜೆಗಳಾಗುವರು. ಯಾರ ಪ್ರಜೆಗಳು ಆಗಬೇಕಾಗಿದೆಯೋ ಅವರ ಸ್ನೇಹವಂತೂ ಈಗಿನಿಂದ ಬೇಕಲ್ಲವೆ. ಈಗಿನ್ನೂ ಬಹಳ ಸೇವೆಯು ಉಳಿದುಕೊಂಡಿದೆ ಎಂದು ಯಾವುದನ್ನು ಆಲೋಚಿಸುತ್ತೀರೋ ಅದು ಈಗ ಈ ಮನಸ್ಸಾ-ವಾಚಾದ ಸಮ್ಮಿಲಿತ ಸೇವೆಯಲ್ಲಿ ವಿಹಂಗ ಮಾರ್ಗದ ಸೇವೆಯಲ್ಲಿ ಪ್ರಭಾವವನ್ನು ನೋಡುತ್ತೀರಿ. ಮೊದಲಿನ ಸೇವೆಗಿಂತಲೂ ಈಗಿನ ಸೇವೆಯನ್ನು ವಿಹಂಗ ಮಾರ್ಗದ ಸೇವೆಯೆಂದು ಹೇಳುತ್ತೀರಿ. ಮುಂದೆ ಹೋದಂತೆ ಇನ್ನೂ ವಿಹಂಗ ಮಾರ್ಗದ ಸೇವೆಯ ಅನುಭವ ಮಾಡುತ್ತೀರಿ. ಬಾಪ್ದಾದಾ ಮಕ್ಕಳ ಸೇವೆಯಿಂದ ಖುಷಿಯಾಗಿದ್ದಾರೆ, ಯಾವಾಗ ಒಬ್ಬೊಬ್ಬರ ಸೇವೆಯನ್ನು ನೋಡುವರೋ ಆಗ ಒಬ್ಬೊಬ್ಬರ ಪ್ರತಿಯೂ ಬಹಳ ಸ್ನೇಹವು ಉತ್ಪನ್ನವಾಗುತ್ತದೆ. ದೇಶ-ವಿದೇಶದಲ್ಲಿ ಸೇವೆಯ ಗುಂಗು ಬಹಳ ಚೆನ್ನಾಗಿದೆ, ಎಷ್ಟೊಂದು ಹಳ್ಳಿಗಳಲ್ಲಿ ನಾಲ್ಕಾರು ಕಡೆ ಸೇವೆಯು ಹರಡುತ್ತಿದೆ. ಪರಿಶ್ರಮವನ್ನಂತೂ ಪಡುತ್ತೀರಿ ಆದರೆ ಸ್ನೇಹದ ಕಾರಣ ಪರಿಶ್ರಮವೆನಿಸುವುದಿಲ್ಲ. ಏನಾದರೂ ಮಾಡಿ ತಮ್ಮನ್ನು ಬ್ಯುಜಿಯಾಗಿಟ್ಟುಕೊಳ್ಳಲು ಒಳ್ಳೆಯ ಯುಕ್ತಿಯನ್ನು ರಚಿಸುತ್ತೀರಿ. ತಂದೆಯ ಸ್ನೇಹ ಮತ್ತು ತಂದೆಯ ಸಹಯೋಗವು ಈ ರೀತಿ ನಡೆಸುತ್ತಿದೆ. ಬಾಪ್ದಾದಾ ಮಕ್ಕಳನ್ನು ನೋಡಿ ಖುಷಿ ಪಡುತ್ತಾರೆ – ಎಷ್ಟೊಂದು ಸೇವೆ ಮಾಡುತ್ತಿದ್ದಾರೆ! ಇಲ್ಲಿಯವರೆಗೆ ಎಷ್ಟು ಮಾಡಿದ್ದೀರೋ ಬಹಳ ಚೆನ್ನಾಗಿ ಮಾಡಿದ್ದೀರಿ. ಈಗಿನ್ನೂ ವಿಹಂಗ ಮಾರ್ಗದ ಸೇವೆಗಾಗಿ ಯಾವ ವಿಧಿಯನ್ನು ತಿಳಿಸಿದೆವೋ ಇದರಿಂದ ಕ್ವಾಲಿಟಿ ಆತ್ಮರು ಸಮೀಪ ಬರುವರು ಮತ್ತು ಆ ಕ್ವಾಲಿಟಿ ಆತ್ಮರು ಅನೇಕರಿಗೆ ನಿಮಿತ್ತರಾಗುವರು. ಒಬ್ಬರಿಂದ ಅನೇಕರಾಗುತ್ತಾ ವಿಹಂಗ ಮಾರ್ಗದ ಸೇವೆಯಾಗುವುದು ಆದರೆ ಕ್ವಾಲಿಟಿ ಸೇವೆಯಲ್ಲಿ ಅವರನ್ನು ನಿಮಿತ್ತ ಮಾಡಲು ಅಥವಾ ಅವರ ಬುದ್ಧಿಗೆ ಟಚ್ ಮಾಡಿಸಲು ತಮ್ಮ ಮನಸ್ಸು ಬಹಳ ಶಕ್ತಿಶಾಲಿಯಾಗಿರಬೇಕು ಏಕೆಂದರೆ ಕ್ವಾಲಿಟಿ ಆತ್ಮರು ವಾಣಿಯಲ್ಲಂತೂ ಮೊದಲೇ ಬುದ್ಧಿವಂತರಾಗಿರುತ್ತಾರೆ ಆದರೆ ಅನುಭೂತಿಯಲ್ಲಿ ನಿರ್ಬಲರಾಗಿರುತ್ತಾರೆ. ಸಂಪೂರ್ಣ ಖಾಲಿಯಾಗಿರುತ್ತಾರೆ ಆದ್ದರಿಂದ ಯಾರು ಯಾವ ಮಾತಿನಲ್ಲಿ ನಿರ್ಬಲರಾಗಿರುವರೋ ಅವರಿಗೆ ಅದೇ ನಿರ್ಬಲತೆಯದೇ ಬಾಣವು ನಾಟುತ್ತದೆ ಮತ್ತು ಯಾವಾಗ ಅನುಭೂತಿಯಾಗುವುದೋ ಆಗ ಇವರು ನಮಗಿಂತಲೂ ಉತ್ತಮರಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುವರು ಇಲ್ಲವೆಂದರೆ ತಾವೂ ಸಹ ಬಹಳ ಒಳ್ಳೆಯವರಾಗಿದ್ದೀರಿ ಮತ್ತು ಎಲ್ಲರೂ ಒಳ್ಳೆಯವರಾಗಿದ್ದಾರೆ, ತಮಗೂ ಭಗವಂತ ಆಶೀರ್ವಾದ ಕೊಡಲಿ ಎಂದು ಕೆಲಕೆಲವೊಮ್ಮೆ ಎಲ್ಲರನ್ನೂ ಸೇರಿಸಿ ಬಿಡುತ್ತಾರೆ. ಹೀಗೆ ಹೇಳಿ ಸಮಾಪ್ತಿ ಮಾಡಿ ಬಿಡುತ್ತಾರೆ ಆದರೆ ಇವರು ಆಶೀರ್ವಾದದಿಂದ ನಡೆಯುತ್ತಿದ್ದಾರೆ, ಪರಮಾತ್ಮನ ಆಶೀರ್ವಾದಗಳಿಂದ ಇವರ ಜೀವನವಿದೆ ಎಂಬ ಅನುಭೂತಿಯನ್ನು ಈಗ ಮಾಡಿಸಬೇಕಾಗಿದೆ. ಈಗಿನ್ನೂ ಸ್ವಲ್ಪ-ಸ್ವಲ್ಪ ಅಭಿಮಾನವಿರುತ್ತದೆ, ತಮ್ಮನ್ನು ದೊಡ್ಡವರೆಂದು ತಿಳಿದುಕೊಳ್ಳುವ ಕಾರಣ ಇವರಿಗೆ ಸ್ವಲ್ಪ ಧೈರ್ಯ ತರಿಸೋಣವೆಂದು ತಿಳಿದುಕೊಳ್ಳುತ್ತಾರೆ ಆದರೆ ಯಾವಾಗ ನೀವು ಅನುಭೂತಿ ಮಾಡಿಸುವಿರೋ ಆಗ ಇವರು ನಮಗೂ ಸಹ ಧೈರ್ಯ ತರಿಸುವವರಾಗಿದ್ದಾರೆ ಎಂಬುದನ್ನು ತಿಳಿದುಕೊಳ್ಳುವರು. ಈಗ ಇಂತಹ ಜಾದುವಿನ ಮಂತ್ರವನ್ನು ನಡೆಸಿರಿ, ಈಗಿನ್ನೂ ವಾಣಿಯ ಸೇವೆಯ ಮೂಲಕ ಧರಣಿಯನ್ನು ತಯಾರು ಮಾಡಿದ್ದೀರಿ, ಸ್ವಚ್ಛ ಮಾಡಿದ್ದೀರಿ. ಇಷ್ಟು ಫಲಿತಾಂಶವನ್ನೂ ತಂದಿದ್ದೀರಿ, ಬೀಜವನ್ನೂ ಹಾಕಿದ್ದೀರಿ ಆದರೆ ಈಗ ಆ ಬೀಜಕ್ಕೆ ಪ್ರಾಪ್ತಿಯ ನೀರು ಬೇಕಾಗಿದೆ ಆಗ ಫಲವು ಹೊರ ಬರುವ ಅನುಭವ ಮಾಡುತ್ತೀರಿ. ಮನಸ್ಸಿನ ಕ್ವಾಲಿಟಿಯನ್ನು ಹೆಚ್ಚಿಸಿಕೊಳ್ಳಿ ಆಗ ಕ್ವಾಲಿಟಿ ಆತ್ಮರು ಸಮೀಪ ಬರುವರು. ಇದರಲ್ಲಿ ಡಬಲ್ ಸೇವೆಯಿದೆ, ಸ್ವಯಂನ ಸೇವೆ ಹಾಗೂ ಅನ್ಯರ ಸೇವೆ. ಸ್ವಯಂ ಪುರುಷಾರ್ಥಕ್ಕಾಗಿ ಪ್ರತ್ಯೇಕವಾಗಿ ಪರಿಶ್ರಮ ಪಡಬೇಕಾಗುವುದಿಲ್ಲ, ಪ್ರಾಲಬ್ಧವು ಪ್ರಾಪ್ತಿಯಾಗಿದೆ, ಇಂತಹ ಸ್ಥಿತಿಯ ಅನುಭವವಾಗುವುದು. ಭವಿಷ್ಯ ಪ್ರಾಲಬ್ಧವಂತೂ ವಿಶ್ವದ ರಾಜ್ಯಭಾಗ್ಯವಾಗಿದೆ ಆದರೆ ಈ ಸಮಯದ ಪ್ರಾಲಬ್ಧವೇನೆಂದರೆ – “ಸದಾ ಸ್ವಯಂ ಪ್ರಾಪ್ತಿಗಳಿಂದ ಸಂಪನ್ನರಾಗಿರುವುದು ಮತ್ತು ಸಂಪನ್ನರನ್ನಾಗಿ ಮಾಡಿರುವುದು” ಈ ಸಮಯದ ಪ್ರಾಲಬ್ಧವು ಎಲ್ಲದಕ್ಕಿಂತ ಶ್ರೇಷ್ಠವಾಗಿದೆ. ಭವಿಷ್ಯದ ಪ್ರಾಲಬ್ಧವಂತೂ ಗ್ಯಾರಂಟಿಯಿದೆ. ಭಗವಂತನ ಗ್ಯಾರಂಟಿಯು ಎಂದೂ ಬದಲಾಗಲು ಸಾಧ್ಯವಿಲ್ಲ ಅಂದಾಗ ಇಂತಹ ಹೊಸ ವರ್ಷವನ್ನು ಆಚರಿಸುತ್ತೀರಲ್ಲವೆ. ಎಲ್ಲರಿಗಿಂತ ಮೊದಲು ಸೇವೆಯ ಆರಂಭವನ್ನು ಯಾರು ಮಾಡುವರು? ಮಧುಬನ. ಏಕೆಂದರೆ ಮಧುಬನದವರಿಗೆ ಬಾಪ್ದಾದಾ ಹೇಳುತ್ತೇವೆ – ಸಮೀಪವೂ ಇದ್ದೀರಿ ಮತ್ತು ಹೃದಯದಲ್ಲಿಯೂ ಇದ್ದೀರಿ. ಸದಾ ಬೇಹದ್ದಿನ ಭಂಡಾರದಿಂದ ಬ್ರಹ್ಮಾ ಭೋಜನವನ್ನು ತಿನ್ನುವವರಾಗಿದ್ದೀರಿ. ವಾಸ್ತವದಲ್ಲಿ ತಾವೆಲ್ಲರೂ ಈ ಸಮಯದಲ್ಲಿ ಮಧುಬನದಲ್ಲಿ ಕುಳಿತಿದ್ದೀರಿ, ಮಧುಬನ ನಿವಾಸಿಗಳಾಗಿದ್ದೀರಿ ಮತ್ತು ಒಂದುವೇಳೆ ಯಾರಾದರೂ ತಮ್ಮೊಂದಿಗೆ ನಿಮ್ಮ ಶಾಶ್ವತ ವಿಳಾಸವು ಯಾವುದೆಂದು ಕೇಳಿದರೆ ಮಧುಬನವೆಂದೇ ಹೇಳುತ್ತೀರಲ್ಲವೆ! ಅಥವಾ ಎಲ್ಲಿ ಇರುತ್ತೀರೋ ಅದು ನಿಮ್ಮ ಶಾಶ್ವತ ವಿಳಾಸವೇ? ಬ್ರಹ್ಮಾಕುಮಾರ-ಕುಮಾರಿ ಅರ್ಥಾತ್ ಶಾಶ್ವತ ವಿಳಾಸವು ಒಂದೇ ಆಗಿದೆ, ಬಾಕಿ ಸೇವೆಗಾಗಿ ಅಲ್ಲಿಗೆ ಕಳುಹಿಸಲಾಗಿದೆ. ನಾವಂತೂ ವಿದೇಶಿಗಳಾಗಿದ್ದೇವೆ ಎಂದಲ್ಲ, ನಾವು ಬ್ರಾಹ್ಮಣರಾಗಿದ್ದೇವೆ. ತಂದೆಯು ಅಲ್ಲಿಗೆ ಸೇವಾರ್ಥವಾಗಿ ಕಳುಹಿಸಿದ್ದಾರೆ. ಬುದ್ಧಿಯ ಪ್ರೇರಣೆಯಿಂದ ತಮ್ಮನ್ನು ಅಲ್ಲಿಗೆ ಕಳುಹಿಸಲಾಗಿದೆ, ತಂದೆಯ ಸಂಕಲ್ಪದಿಂದ ಅಲ್ಲಿಗೆ ತಲುಪಿದ್ದೀರಿ. ರಾಜ್ಯಭಾರವನ್ನೂ ಭಾರತದಲ್ಲಿ ಮಾಡುತ್ತೀರೋ ಅಥವಾ ಲಂಡನ್ನಿನಲ್ಲಿಯೊ? ನಾವು ವಿದೇಶದಲ್ಲಿ ಜನಿಸಿರುವ ಕಾರಣ ಅಲ್ಲಿನವರಾಗಿದ್ದೇವೆ ಎಂಬುದನ್ನು ಎಂದಿಗೂ ಆಲೋಚಿಸಬೇಡಿ. ನೀವು ಬ್ರಹ್ಮನಿಂದ ಜನಿಸಿದ್ದೀರಿ, ವಿದೇಶದಿಂದಲ್ಲ. ಹಾಗಿದ್ದರೆ ವಿದೇಶಿ ಕುಮಾರ-ವಿದೇಶಿ ಕುಮಾರಿಯೆಂದು ಕರೆಸಿಕೊಳ್ಳಿರಿ! ನೀವು ಬ್ರಹ್ಮಾಕುಮಾರ-ಬ್ರಹ್ಮಾಕುಮಾರಿಯರಾಗಿದ್ದೀರಲ್ಲವೆ. ಹೇಗೆ ಭಾರತದಲ್ಲಿ ಕೆಲವರು ಯು.ಪಿ.,ಯವರಾಗಿದ್ದಾರೆ, ಕೆಲವರು ದೆಹಲಿಯವರಾಗಿದ್ದಾರೆ ಹಾಗೆಯೇ ತಾವೂ ಸಹ ಸೇವಾರ್ಥಕ್ಕೆ ವಿದೇಶಕ್ಕೆ ಹೋಗಿದ್ದೀರಿ. ತಾವು ವಿದೇಶಿಗಳಲ್ಲ, ಈ ನಶೆಯಿದೆಯಲ್ಲವೆ? ಅದು ಸೇವಾಸ್ಥಾನವಾಗಿದೆ, ಮಧುಬನವು ಜನ್ಮಸ್ಥಾನವಾಗಿದೆ. ಆ ಲೆಕ್ಕಾಚಾರವು ಸಮಾಪ್ತಿಯಾಯಿತು ಆದ್ದರಿಂದಲೇ ಬ್ರಾಹ್ಮಣರಾಗಿರಿ. ಲೆಕ್ಕವು ಸಮಾಪ್ತಿಯಾಯಿತೆಂದರೆ ಲೆಕ್ಕದ ಪುಸ್ತಕವೇ ಭಸ್ಮವಾಯಿತು. ಸರ್ಕಾರದಿಂದ ಬಿಡುಗಡೆ ಆಗುವುದಕ್ಕಾಗಿಯೂ ಪುಸ್ತಕಗಳನ್ನೇ ಸುಟ್ಟು ಹಾಕುತ್ತಾರಲ್ಲವೆ ಅಂದಮೇಲೆ ಹಳೆಯ ಖಾತೆಯನ್ನು ಸಮಾಪ್ತಿ ಮಾಡಿ ಬಿಟ್ಟಿರಲ್ಲವೆ. ಯಾರು ಬುದ್ಧಿವಂತರಾಗಿರುವರೋ ಅವರು ತಮ್ಮ ಪೂರ್ಣ ಖಾತೆಯನ್ನು ಸಮಾಪ್ತಿ ಮಾಡಿಕೊಳ್ಳುತ್ತಾರೆ ಮತ್ತು ಯಾರು ಬುದ್ಧಿವಂತರಲ್ಲವೋ ಅವರು ಒಂದಲ್ಲ ಒಂದು ಸಾಲದಲ್ಲಿ ಸಿಕ್ಕಿ ಹಾಕಿಕೊಂಡಿರುತ್ತಾರೆ. ಬುದ್ಧಿವಂತರೆಂದೂ ಸಿಕ್ಕಿಹಾಕಿಕೊಳ್ಳುವುದಿಲ್ಲ ಅಂದಾಗ ಲೆಕ್ಕಾಚಾರದ ಸಮಾಪ್ತಿಯೆಂದರೆ ಯಾವ ಒಂದು ಮೂಲೆಯಲ್ಲಿಯೂ ಸಾಲವು ಉಳಿದಿಲ್ಲ, ಎಲ್ಲಾ ಖಾತೆಯೂ ಸಮಾಪ್ತಿ. ಎಲ್ಲದಕ್ಕಿಂತ ಒಳ್ಳೆಯ ರೀತಿ-ನೀತಿಗಳು ಬ್ರಾಹ್ಮಣರದಾಗಿದೆ. ಒಳ್ಳೆಯದು.

ನಾಲ್ಕಾರು ಕಡೆಯ ಎಲ್ಲಾ ಸೇವೆಯ ಸಮೀಪ ಜೊತೆಗಾರರಿಗೆ, ಸರ್ವ ಧೈರ್ಯಶಾಲಿ ಮತ್ತು ತಂದೆಯ ಸಹಯೋಗಕ್ಕೆ ಪಾತ್ರರಾದ ಆತ್ಮರಿಗೆ, ಸದಾ ಮನಸ್ಸಾ ಮತ್ತು ವಾಚಾ ಡಬಲ್ ಸೇವೆಯನ್ನು ಒಟ್ಟಿಗೆ ಮಾಡುವಂತಹ ವಿಹಂಗ ಮಾರ್ಗದ ಸೇವಾಧಾರಿಗಳಿಗೆ ಸದಾ ತಂದೆಯ ಸಮಾನ ಸರ್ವ ಆತ್ಮರ ಪ್ರತಿ ಆಶೀರ್ವಾದಗಳನ್ನು ಕೊಡುವಂತಹ ಮಾ|| ಸದ್ಗುರು ಮಕ್ಕಳಿಗೆ ಸದಾ ಸ್ವಯಂನಿಂದ ಪ್ರತೀ ಸಮಯ ನವೀನತೆ ಹಾಗೂ ವಿಶೇಷತೆಯನ್ನು ತರುವಂತಹ ಸರ್ವಶ್ರೇಷ್ಠ ಆತ್ಮರಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.

ವರದಾನ:-

ಡಬಲ್ ಲೈಟ್ ಸ್ಥಿತಿಯು ತೀವ್ರ ಗತಿಯ ಪುರುಷಾರ್ಥದ ಸಂಕೇತವಾಗಿದೆ, ಅದರಿಂದ ಯಾವುದೇ ಪ್ರಕಾರದಲ್ಲಿನ ಹೊರೆಯಾಗಿರಬಹುದು, ಭಲೆ ಪ್ರಕೃತಿಯ ಮೂಲಕ ಅಥವ ವ್ಯಕ್ತಿಗಳ ಮೂಲಕವಾದರೂ ಪರಿಸ್ಥಿತಿಗಳು ಬರಬಹುದು, ಆದರೆ ಪ್ರತಿಯೊಂದು ಪರಿಸ್ಥಿತಿಯು ಸ್ವ-ಸ್ಥಿತಿಯ ಮುಂದೆ ಸ್ವಲ್ಪವೂ ಅನುಭವವಾಗುವುದಿಲ್ಲ. ಡಬಲ್ ಲೈಟ್ ಅರ್ಥಾತ್ ಶ್ರೇಷ್ಠ ಮಟ್ಟದಲ್ಲಿ ಇರುವುದರಿಂದ ಯಾವುದೇ ಪ್ರಕಾರದ ಪ್ರಭಾವವು ಪ್ರಭಾವಿತ ಮಾಡಲು ಸಾಧ್ಯವಿಲ್ಲ. ಕೆಳಗಿನ ಮಾತುಗಳಿಂದ, ಕೆಳಗಿನ ವಾಯುಮಂಡಲದಿಂದ ಮೇಲಿರುವುದರಿಂದ, ಕಡಿಮೆ ಸಮಯದಲ್ಲಿ ಸಂಪೂರ್ಣರಾಗುವ ಶ್ರೇಷ್ಠ ಗುರಿಯನ್ನು ಪ್ರಾಪ್ತಿ ಮಾಡಿಕೊಂಡು ಬಿಡುವಿರಿ.

ಸ್ಲೋಗನ್:-

ಲವಲೀನ ಸ್ಥಿತಿಯ ಅನುಭವ ಮಾಡಿರಿ:

ತಾವು ಲವಲೀನ ಮಕ್ಕಳ ಸಂಘಟನೆಯೇ ತಂದೆಯನ್ನು ಪ್ರತ್ಯಕ್ಷಗೊಳಿಸುತ್ತದೆ. ಸಂಘಟನೆಯಲ್ಲಿ ಈ ಅಭ್ಯಾಸ ಮಾಡಿರಿ – ನಾನು ಬಾಬಾರವರ ಮಗು, ಬಾಬಾ ನನ್ನವರು. ಎಲ್ಲಾ ಸಂಕಲ್ಪಗಳನ್ನು ಇದೊಂದೇ ಶುದ್ಧ ಸಂಕಲ್ಪದಲ್ಲಿ ಸಮಾವೇಶ ಮಾಡಿ ಬಿಡಿ. ಒಂದು ಸೆಕೆಂಡಿಗಾಗಿಯೂ ಈ ಲವಲೀನ ಸ್ಥಿತಿಯಿಂದ ಕೆಳಗಿಳಿಯಬಾರದು.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top