01 January 2022 KANNADA Murli Today | Brahma Kumaris

Read and Listen today’s Gyan Murli in Kannada

December 31, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಸದಾ ಸೇವೆಯ ಆಲೋಚನೆಯಲ್ಲಿರಬೇಕು, ಜ್ಞಾನಿ ಆತ್ಮ ಆಗಬೇಕು. ಸಮಯವನ್ನು ವ್ಯರ್ಥವಾಗಿ ಕಳೆಯಬಾರದು”

ಪ್ರಶ್ನೆ:: -

ಜ್ಞಾನವಂತ ಮಕ್ಕಳ ಚಿಹ್ನೆ ಏನು?

ಉತ್ತರ:-

ಅವರು ಸದಾ ಸೇವೆಯಲ್ಲಿ ತೊಡಗಿರುತ್ತಾರೆ. ಅವಿನಾಶಿ ಜ್ಞಾನರತ್ನಗಳ ದಾನ ಮಾಡುವುದರಲ್ಲಿ ಅವರಿಗೆ ಖುಷಿಯಿರುತ್ತದೆ. ಅವರೊಂದಿಗೆ ತಂದೆಯು ರಾಜಿಯಾಗಿರುತ್ತಾರೆ. ಅವರು ಎಂದಿಗೂ ತಿಂಡಿ ತೀರ್ಥದ ಚಿಂತೆಯಲ್ಲಿ ಸಮಯವನ್ನು ಕಳೆಯುವುದಿಲ್ಲ. ಅವರಿಗೆ ಎಂದೂ ಅಳು ಬರುವುದಿಲ್ಲ. ಅವರಿಗೆ ಎಂದಿಗೂ ನಾನು ಇಂತಹವರಿಗೆ ಜ್ಞಾನ ಕೊಟ್ಟೆನೆಂಬ ಅಹಂಕಾರ ಬರುವುದಿಲ್ಲ. ಅವರು ಸದಾ ತಂದೆಯೇ ಕೊಡುತ್ತಾರೆಂದು ಹೇಳುತ್ತಿರುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ದುಃಖಿಗಳ ಮೇಲೆ ದಯೆ ತೋರಿಸು……

ಓಂ ಶಾಂತಿ. ಈಗ ಮಕ್ಕಳಿಗೆ ತಿಳಿದಿದೆ ತಂದೆ ನಮ್ಮ ಮೇಲೆ ದಯೆ ತೋರಿಸಿದ್ದರು. ಈಗ ಮತ್ತೆ ದಯೆ ತೋರಿಸುತ್ತಿದ್ದಾರೆ. ದಯೆ ತೋರಿಸುವವರು ಯಾರಾಗಿದ್ದಾರೆ? ನಿರ್ದಯೆ ತೋರಿಸುವವರು ಯಾರಾಗಿದ್ದಾರೆ? ಈಗ ನೀವು ಮಕ್ಕಳಷ್ಟೆ ತಿಳಿದುಕೊಂಡಿದ್ದೀರಿ. ತಂದೆ ಭಾರತದ ಮೇಲೆ ದಯೆ ತೋರಿಸಿದ್ದರು. ಅರ್ಥಾತ್ ಭಾರತವನ್ನು ವಜ್ರದಂತೆ ಮಾಡಿದ್ದರು, ಶ್ರೇಷ್ಠಾಚಾರಿ ದೈವೀ ಸ್ವರಾಜ್ಯವನ್ನು ಕೊಟ್ಟಿದ್ದರು. ಈ ಲಕ್ಷ್ಮೀ ನಾರಾಯಣರಿಗೆ ರಾಜ್ಯಭಾಗ್ಯವನ್ನು ಕೊಟ್ಟವರು ಯಾರು? ಇದನ್ನು ನೀವು ಈಗ ತಿಳಿದುಕೊಳ್ಳುತ್ತಿದ್ದೀರಿ. ಅವಶ್ಯಕವಾಗಿ ಪರಮಪಿತ ಪರಮಾತ್ಮನೇ ಈ ರಚನೆಯನ್ನು ರಚಿಸಿದ್ದಾರೆ. ದೇವತೆಗಳು ಪರಮಪಿತ ಪರಮಾತ್ಮನಿಂದ ಆಸ್ತಿಯನ್ನು ಪಡೆದಿದ್ದರು ಇದನ್ನು ಪ್ರಪಂಚದವರು ತಿಳಿದುಕೊಂಡಿಲ್ಲ. ಭಾರತವಾಸಿಗಳ ಸ್ವರಾಜ್ಯವಿತ್ತು. ತಂದೆ ದಯೆ ತೋರಿಸಿದ್ದರು. ಪುನಃ ತಂದೆಯಿಂದ ದಯೆ ಬೇಡುತ್ತಿದ್ದಾರೆ. ದುಃಖಿ ಕಂಗಾಲ್(ಬಡವರು) ಭ್ರಷ್ಟಾಚಾರಿಗಳನ್ನಾಗಿ ಮಾಡಿದ ನಿರ್ದಯಿ ಯಾರು? ಅವರ ಬೊಂಬೆಯನ್ನು ಪ್ರತಿ ವರ್ಷವು ಸುಡುತ್ತಿರುತ್ತಾರೆ. ಈ ರಾವಣನೇ ದುಃಖ ಕೊಟ್ಟಿದ್ದಾನೆ. ಯಾರು ದುಃಖ ಕೊಡುತ್ತಾರೆ ಅಥವಾ ತೊಂದರೆ ಕೊಡುತ್ತಾರೆ ಅವರ ಪ್ರತಿಕಾರಕ್ಕಾಗಿ ಹಾಗೂ ಅವರನ್ನು ಅವಹೇಳನ ಮಾಡಲಿಕ್ಕಾಗಿ ಬೊಂಬೆ ಮಾಡಿ ಸುಡುತ್ತಾರೆ. ತಂದೆ ತಿಳಿಸುತ್ತಾರೆ-ಇದೆಲ್ಲವೂ ಪತಿತವಾಗಿದೆ. ಸ್ವಯಂನ್ನು ಪತಿತರೆಂದು ಒಪ್ಪಿಕೊಳ್ಳುತ್ತಾರೆ, ಮತ್ತೆ ನಾನೇ ಈಶ್ವರನೆಂದು ಒಪ್ಪಿಕೊಳ್ಳುತ್ತಾರೆ. ಸಮಾಚಾರ ಪತ್ರದಲ್ಲಿ ಕ್ರೈಸ್ತನ ಮೂರು ಸಾವಿರದ ವರ್ಷದ ಹಿಂದೆ ಭಾರತ ಫರಿಸ್ಥಾನ ಆಗಿತ್ತೆಂದು ಬರೆಯುತ್ತಾರೆ. ಮೊಟ್ಟ ಮೊದಲು ದೇವೀ-ದೇವತಾ ಧರ್ಮವಿತ್ತು, ನಂತರ ಇಸ್ಲಾಂ ಧರ್ಮ, ಬೌದ್ದ ಧರ್ಮ ಮುಂತಾದವುಗಳು ಬರುತ್ತವೆ. ಮಕ್ಕಳಿಗೆ ಎಲ್ಲಾ ಲೆಕ್ಕಾಚಾರವನ್ನು ತಿಳಿಸಿ ಕೊಟ್ಟಿದ್ದಾರೆ. ಮಧ್ಯದಲ್ಲಿ ಬೇರೆ ಎರಡು ಧರ್ಮಗಳು ಬಂದು ಬಿಡುತ್ತವೆ. ಭಾರತವಾಸಿಗಳು ಚಿತ್ರಗಳನ್ನು ಮಾನ್ಯತೆ ಮಾಡುತ್ತಾರೆ, ಆದುದರಿಂದ ಈ ಪ್ರಶ್ನಾವಳಿಯನ್ನು ಮಾಡಲಾಗಿದೆ. ಇದನ್ನು ತಿಳಿಸಿ ಕೊಡುವುದು ತುಂಬಾ ಸಹಜವಾಗಿದೆ. ಆದರೆ ಯಾರಲ್ಲಿ ಜ್ಞಾನ ಇರುವುದಿಲ್ಲ ಅವರಿಗೆ ಬುದ್ಧು ಎಂದು ಕರೆಯಲಾಗುತ್ತದೆ. ಜ್ಞಾನವನ್ನು ಕೇಳಿ ಅನ್ಯರಿಗೂ ಹೇಳಬೇಕು. ಬೇರೆ ಸೇವೆ ತುಂಬಾ ಇದೆ ಆದರೆ ಅದು ಸ್ಥೂಲ ಸೇವೆಯಾಗಿದೆ. ಕೆಲವರು ಕಮಾಂಡರ್, ಕೆಲವರು ಜನರಲ್, ಕೆಲವರು ಕಾಲಾಳುಗಳು ಇರುತ್ತಾರೆ. ತಿಂಡಿ-ತೀರ್ಥ ಮಾಡುವವರು ಇರುತ್ತಾರೆ-ಇದು ಸಹ ಸೇವೆಯಾಗಿದೆ, ಫಲ ಅಗತ್ಯವಾಗಿ ಈ ಸೇವೆಗೂ ಸಿಗುತ್ತದೆ. ನಾವು ಜ್ಞಾನಿ ಆತ್ಮಗಳ ಸೇವೆಯನ್ನು ಮಾಡುತ್ತೇವೆಂದು ತಿಳಿದುಕೊಳ್ಳುತ್ತಾರೆ. ಸೇವೆ ಮಾಡುವಂತಹವರು ಸದಾ ತಂದೆಯ ಹೃದಯದಲ್ಲಿರುತ್ತಾರೆ. ಅವರ ಮಹಿಮೆಯನ್ನು ಎಲ್ಲರೂ ಮಾಡುತ್ತಾರೆ. ಜ್ಞಾನಿ ಆತ್ಮರು ತಂದೆಗೆ ಅತಿ ಪ್ರಿಯರಾಗಿರುತ್ತಾರೆಂಬುದು ಅತಿ ಅವಶ್ಯಕವಾಗಿದೆ. ಇದರ ಅರ್ಥ ಬೇರೆಯವರು ಪ್ರಿಯರಲ್ಲ ಎಂದು ಅರ್ಥವಲ್ಲ. ಅವರವರ ಸೇವೆಯಿಂದ ಕಾಣುತ್ತಿರುತ್ತದೆ. ಒಂದುವೇಳೆ ನಾನು ತಂದೆಯ ಹೃದಯದಲ್ಲಿದ್ದೇನೆಯೇ ಎಂದು ತಂದೆಯನ್ನು ಕೇಳಿದರೆ ತಂದೆ ತಿಳಿಸಿಕೊಡುತ್ತಾರೆ. ಉಳಿದ ಹಾಗೆ ಕೇವಲ ಅನ್ಯರಿಂದ ಸೇವೆ ತೆಗೆದುಕೊಳ್ಳುವವರಿಗೆ ಏನು ಸಿಗುತ್ತದೆ. ರಾಜಧಾನಿಯಲ್ಲಿ ಬಂದರೂ ಸಹ ಶ್ರೇಷ್ಠ ಪದವಿಯನ್ನು ಪಡೆಯುವುದಿಲ್ಲ. ನೀವು ಮಿತ್ರ ಸಂಬಂಧಿಗಳ ಸೇವೆಯನ್ನು ತುಂಬಾ ಮಾಡಬಹುದು. ಅಂದರೆ ಸೇವಾ ಮನೋಭಾವನೆ ಇಟ್ಟುಕೊಳ್ಳಬೇಕು. ವ್ಯರ್ಥವಾಗಿ ಸಮಯವನ್ನು ಕಳೆಯಬಾರದು. ಅಂತಹವರಿಗೆ ಬಾಬಾ ಬುದ್ಧು ಎಂದು ಹೇಳುತ್ತಾರೆ. ಬಾಬಾ ಎಷ್ಟೊಂದು ಒಳ್ಳೊಳ್ಳೆಯ ಜ್ಞಾನದ ಮಾತುಗಳನ್ನು ತಿಳಿಸಿ ಕೊಡುತ್ತಾರೆ. ಈ ಪ್ರಶ್ನಾವಳಿಯು ತುಂಬಾ ಚೆನ್ನಾಗಿದೆ. ಜಗದಂಬಾ ಸರಸ್ವತಿ ಜ್ಞಾನ-ಜ್ಞಾನೇಶ್ವರಿಯಾಗಿದ್ದಾರೆ. ಲಕ್ಷ್ಮಿ ರಾಜರಾಜೇಶ್ವರಿಯಾಗಿದ್ದಾರೆ. ಇದು ಸತ್ಯಯುಗದ ಮಹಿಮೆಯಾಗಿದೆ. ಜಗದಂಬಾರವರ ಮಹಿಮೆ ಈ ಸಮಯದ್ದಾಗಿದೆ. ಮಕ್ಕಳಲ್ಲಿ ನಿರಂತರವಾದ ಧಾರಣೆ ಇರಬೇಕು. ಪರಿಪಕ್ವ ಸ್ಥಿತಿಯಾದಾಗ ತಂದೆ ಹೃದಯವನ್ನು ಗೆಲ್ಲುತ್ತೇವೆ. ಶಾಲೆಯಲ್ಲಿಯೂ ಸಹ ವಿದ್ಯಾರ್ಥಿಗಳು ನಂಬರ್ವಾರ್ ಮನಸ್ಸನ್ನು ಗೆಲ್ಲುತ್ತಾರೆ, ಏಕೆಂದರೆ ಭಿನ್ನತೆ ಇರುತ್ತದೆ. ಈ ಜ್ಞಾನವನ್ನು ತಿಳಿಸಿಕೊಡಲು ತುಂಬಾ ಚೆನ್ನಾಗಿದೆ. ಜಗದಂಬಾರವರಿಗೆ ಧನಲಕ್ಷ್ಮಿಯೆಂದು ಹೇಳುವುದಿಲ್ಲ. ಇವರು ಜಗದಂಬಾ ಆಗಿದ್ದಾರೆ, ಇವರಿಗೆ ಪರಮಾತ್ಮ ಜ್ಞಾನ ಕೊಟ್ಟಿದ್ದಾರೆ. ಆದುದರಿಂದ ವಿದ್ಯಾ ದೇವತೆಯೆಂದು ಸರಸ್ವತಿಗೆ ಗಾಯನವಿದೆ. ಈ ಸಮಯದ ಈ ನಾಮ ರೂಪದಲ್ಲಿ ವಿದ್ಯಾ(ಜ್ಞಾನ) ದೇವತೆಯಾಗಿದ್ದಾರೆ. ಈ ಜ್ಞಾನದಿಂದಲೇ ನಂತರ ಪದವಿಯನ್ನು ಪಡೆಯುತ್ತಾರೆ. ಲಕ್ಷ್ಮಿಯ ಹಿಂದಿನ ಜನ್ಮದಲ್ಲಿ ಜ್ಞಾನ ಪಡೆದ ಕಾರಣ ಲಕ್ಷ್ಮಿಯಾದರು. ಲಕ್ಷ್ಮಿಯ ಹಿಂದಿನ ಜನ್ಮದಲ್ಲಿ ಜಗದಂಬಾ ಆಗಿದ್ದರು, ಇಲ್ಲಿ ಸ್ಪಷ್ಟವಾದ ರಹಸ್ಯವಿದೆ. ಭೂತ, ವರ್ತಮಾನ, ಭವಿಷ್ಯ(ಪಾಸ್ಟ್, ಪ್ರೆಸೆಂಟ್, ಫ್ಯುಚರ್)ಏನು ಆಗುತ್ತಾರೆ. ಒಂದೊಂದು ಮಾತು ತುಂಬಾ ಚೆನ್ನಾಗಿವೆ. ಲಕ್ಷ್ಮೀ ಹೇಗೆ ಎಂಬತ್ತನಾಲ್ಕು ಜನ್ಮಗಳು ಪಡೆಯುತ್ತಾರೆ, ಎಲ್ಲಿ-ಎಲ್ಲಿ ಪಡೆಯುತ್ತಾರೆ, ಇದೆಲ್ಲಾ ತಿಳಿಸುವಂತಹ ಮಾತುಗಳಾಗಿವೆ. ತಿಳಿಸಲು ಖುಷಿಯಾಗುತ್ತದೆ. ದಾನ ಕೊಡಲು ಖುಷಿಯಾಗುತ್ತದೆ ಅಲ್ಲವೆ?

ತಂದೆ ಅವಿನಾಶಿ ಜ್ಞಾನರತ್ನಗಳ ದಾನ ಕೊಡುತ್ತಿರುವಾಗ ನೀವು ಅನ್ಯರಿಗೆ ದಾನ ಕೊಡುವ ಸೇವೆಯನ್ನು ಮಾಡಬೇಕಾಗಿದೆ. ಕೇವಲ ಮಮ್ಮಾ ಬಾಬಾರವರ ಹಿಂದೆ ಇರಬಾರದು. ಸೇವೆಯಲ್ಲಿ ತೊಡಗಿದ್ದಾಗ ತಂದೆ ರಾಜಿಯಾಗುತ್ತಾರೆ. ಜ್ಞಾನವಂತರು ಸೇವೆಯಲ್ಲಿ ತೊಡಗಿರುತ್ತಾರೆ. ಸೇವೆಯಲ್ಲಿ ತೊಡಗದಿದ್ದರೆ ಬುದ್ಧು ಎನ್ನಲಾಗುತ್ತದೆ. ಅಂತಹವರು ನಾನು ತಂದೆಯ ಹೃದಯದಲ್ಲಿ ಇರುವುದಿಲ್ಲವೆಂದು ತಿಳಿಯುತ್ತಾರೆ. ಬಹಳ ಮಂದಿ ವ್ಯರ್ಥವಾದ ತಿಂಡಿ ತೀರ್ಥದ ಆಲೋಚನೆಯಲ್ಲಿ ತೊಡಗಿರುತ್ತಾರೆ. ನಮ್ಮ ಗುರಿ ಉದ್ದೇಶವನ್ನು ಹೊರಗಡೆ ಬರೆಯಲ್ಪಟ್ಟಿದೆ. ಈ ರೀತಿ ಹೆಸರನ್ನು ಬರೆಯಲ್ಪಟ್ಟಿದೆ-ಇದು ಪತಿತ ಪಾವನ ಪರಮಪಿತ ಪರಮಾತ್ಮನ ವಿದ್ಯಾಲಯವಾಗಿದೆ (ಗಾಡ್ ಫಾದರ್ಲೀ ಯೂನಿರ್ವಸಿಟಿ). ಪುನಃ ತಂದೆಯಿಂದ 21 ಜನ್ಮಗಳಿಗೆ ಆರೋಗ್ಯ, ಐಶ್ವರ್ಯ, ಸಂತೋಷದ ಆಸ್ತಿ ಸಿಗುತ್ತದೆ. ಬೋರ್ಡ್ ಮೇಲೆ ಆಕ್ಯುಪೇಷನ್(ಲಕ್ಷ್ಯವನ್ನು) ಪೂರ್ಣವಾಗಿ ಬರೆಯಲಾಗಿದೆ. ಶಿವ ಬಾಬಾರವರ ಹಾಗೂ ಲಕ್ಷ್ಮೀ ನಾರಾಯಣರ ಚಿತ್ರವಿದೆ. ಗುರಿ-ಉದ್ದೇಶವನ್ನು ಬರೆಯಲಾಗಿದೆ. ಆದರೆ ಸ್ವಲ್ಪವೂ ತಿಳಿದುಕೊಳ್ಳುವುದಿಲ್ಲ. ಕೇಳುವುದೂ ಸಹ ಇಲ್ಲ. ಅಂಗಡಿ ಇದ್ದರೆ ಅದರ ಮುಂದೆ ಬೋರ್ಡ್ ಹಾಕಿರುತ್ತಾರೆ. ಇದು ಹಾಲಿನ ಅಂಗಡಿಯಗಿದೆ, ಬೋರ್ಡ್ ಮೂಲಕ ಯಾವ ಅಂಗಡಿ ಎಂದು ತಿಳಿದುಬರುತ್ತದೆ. ಸತ್ಸಂಗದಲ್ಲಿ ಎಂದಿಗೂ ಬೋರ್ಡ್ ಹಾಕುವುದಿಲ್ಲ. ಅದು ತಾನೇ-ತಾನಾಗಿ ಹೆಸರುವಾಸಿಯಾಗಿ ಬಿಡುತ್ತದೆ. ಇಲ್ಲಿಯಾದರೋ 21 ಜನ್ಮಗಳಿಗೆ ದೈವೀ ಪದವಿ ಪ್ರಾಪ್ತಿಯಾಗುವ ಶಿಕ್ಷಣ ಸಿಗುತ್ತದೆ ಎಂದು ಬೋರ್ಡ್ ಹಾಕಲಾಗಿದೆ. ಆದರೂ ಬುದ್ದಿಯಲ್ಲಿ ಕುಳಿತುಕೊಳ್ಳದ ಕಾರಣ ಒಳಗಡೆ ಬಂದು ಈ ರೀತಿ ಕೇಳುತ್ತಾರೆ-ಇಲ್ಲಿಯ ಉದ್ದೇಶ ಏನು? ಬೋರ್ಡ್ ಓದದ ಕಾರಣ ಇಲ್ಲಿಯ ಗುರಿ ಉದ್ದೇಶವನ್ನು ತಿಳಿದುಕೊಳ್ಳಲಾಗುವುದಿಲ್ಲ. ಇದು ಯಾವ ಅಂಗಡಿ ಎಂದು ನೋಡಬೇಕು. ಆದರೂ ಸ್ವಲ್ಪವು ತಿಳಿದುಕೊಳ್ಳುವುದಿಲ್ಲ. ಆದಿ ದೇವನ ಹೆಸರು ಮಹಾವೀರ್, ಹನುಮಾನ್ ಎಂದು ಇಟ್ಟಿರುತ್ತಾರೆ. ಆದರೆ ಇವರು ಯಾರು, ಯಾವಾಗ ಇದ್ದರು ಎಂಬ ಮಾತನ್ನು ತಿಳಿದುಕೊಂಡಿಲ್ಲ.

ಮಕ್ಕಳಲ್ಲಿ ತಿಳಿಸಿ ಕೊಡುವಂತಹ ಸಾಹಸ ಇರಬೇಕು. ತಿಳಿಸಿ ಕೊಡುವಂತಹವರಲ್ಲಿ ಒಂದುವೇಳೆ ಯಾವುದೇ ವಿಕಾರವಿದ್ದರೆ ಅವರ ಮಾತು ಯಾರಿಗೂ ನಾಟುವುದಿಲ್ಲ. ಒಂದುವೇಳೆ ಯಾರಿಗಾದರೂ ಬಾಣ ನಾಟಿದರೆ ಅಲ್ಲಿ ಶಿವ ತಂದೆ ತಿಳಿಸಿಕೊಟ್ಟಿರುತ್ತಾರೆ. ಯಾರಲ್ಲಿ ಅವಗುಣವಿರುತ್ತದೆ ಅವರ ಮಾರ್ಗದರ್ಶನ ಯಾರ ಮೇಲೂ ಪ್ರಭಾವ ಬೀರುವುದಿಲ್ಲ. ಆಗ ತಂದೆಯೇ ಬಂದು ದೃಷ್ಟಿ ಕೊಡುತ್ತಾ ಜ್ಞಾನ ಕೊಡುತ್ತಾರೆ. ಆ ಸಮಯದಲ್ಲಿ ನಾನು ಇವರಿಗೆ ತುಂಬಾ ಚೆನ್ನಾಗಿ ಜ್ಞಾನ ಹೇಳಿದೆ ಎಂದು ತಿಳಿಯಬಾರದು. ನಾನು ಹೇಳಿದ ಜ್ಞಾನದಿಂದ ಇವರಲ್ಲಿ ಪರಿವರ್ತನೆ ಬಂದಿದೆ, ಎಂದು ತಿಳಿದುಕೊಳ್ಳುವುದು ಉಲ್ಟಾ ಅಹಂಕಾರವಾಗಿದೆ. ಯಾರಲ್ಲಿ ಅಳುವ ಅಭ್ಯಾಸವಿದೆ, ಅವರು ಯಾರಿಗಾದರೂ ಜ್ಞಾನ ಹೇಳಲು ಸಾಧ್ಯವಿಲ್ಲ. ಅಂತಹವರು ವಿಧವೆ ಆಗಿ ಬಿಟ್ಟರು. ನಾನು ಯಾರಿಗಾದರು ಜ್ಞಾನ ಕೊಡಬಲ್ಲೆನೆಂದು ಅವರೆಂದಿಗೂ ತಿಳಿಯಬಾರದು. ತಂದೆಯೇ ಅವರ ಕಲ್ಯಾಣ ಮಾಡಿ ಬಿಡುತ್ತಾರೆ. ಅಳುವಂತವರು ದುರ್ಗತಿಯನ್ನು ಹೊಂದುತ್ತಾರೆ. ನಾವು ಹರ್ಷಿತ ಮುಖದ ದೇವೀ-ದೇವತೆಗಳಾಗುವವರೆಂದು ತಿಳಿದಿರಬೇಕು. ಒಂದು ವೇಳೆ ಅಳುತ್ತೀರೆಂದರೆ ನೀವು ಕನಿಷ್ಠ ಕರ್ಮ ಮಾಡಿರುತ್ತೀರಿ, ಅದು ಮೋಸ ಮಾಡುತ್ತದೆ. ಒಳ್ಳೊಳ್ಳೆಯ ಮಕ್ಕಳೂ ಸಹ ಅಳುತ್ತಾರೆ. ಆಗ ತಂದೆ ಯಾರನ್ನಾದರು ಕಲ್ಯಾಣ ಮಾಡಬೇಕೆಂದರೆ ಸ್ವಯಂ ಬಂದು ದೃಷ್ಟಿ ಕೊಡುತ್ತಾರೆ. ಅಳುವವರು ವಿಧವೆಯಾಗಿದ್ದಾರೆ. ಇಲ್ಲಿ ನಾವು ರಾಮನಿಗೆ ಆಗಿದ್ದೇವೆ ಎಂದು ಹೇಳಿ ಮತ್ತೆ ದುಃಖಿ ಆದರೆ ಅವರ ರಾಮ ಸತ್ತು ಹೋದರೆಂದು ಅರ್ಥ, ಅರ್ಥಾತ್ ರಾಮನಿಂದ ಬುದ್ದಿಯೋಗ ದೂರ ಬೇಮುಖ ಆಗಿರುತ್ತದೆ. ನಮ್ಮ ಸ್ಥಿತಿ ಬಹಳ ಚೆನ್ನಾಗಿರಬೇಕು. ಒಂದುವೇಳೆ ಯಾರಾದರು ಪ್ರಭಾವಿತರಾದರೆ ಅದು ತಂದೆಯ ಶಕ್ತಿಯಾಗಿರುತ್ತದೆ. ತಂದೆ ಸತ್ಯವಾಗಿರುವ ಕಾರಣ ಅವರು ಹೇಳುವ ಮಾತುಗಳಲ್ಲಿ ಯಾವ ತಪ್ಪು ಆಗುವುದಿಲ್ಲ. ಒಂದುವೇಳೆ ಒಂದು ಅಕ್ಷರ ತಪ್ಪಿ ಹೋದರೆ ಭಾಗ್ಯ ಮಾಡು ವಂತಹವರು ಕುಳಿತಿದ್ದಾರೆ. ಇದನ್ನು ತಿಳಿದುಕೊಳ್ಳಬೇಕಾದರೆ ಉತ್ತಮ ವಿಶಾಲ ಬುದ್ಧಿಯಿರಬೇಕು. ತಂದೆಯು ಸದಾ ಸೇವೆಯಲ್ಲಿರುತ್ತಾರೆ. ಮಕ್ಕಳೂ ಸಹ ಸೇವೆಯಲ್ಲಿರಬೇಕು. ಬಿ.ಕೆ. ಎಂದು ಹೇಳಿಕೊಂಡಾಗ ಸಹಯೋಗವನ್ನು ಕೊಡುತ್ತಾರೆ. ಇನ್ನೂ ಕೆಲವರು ತುಂಬಾ ನಷ್ಟ ಮಾಡುತ್ತಾರೆ. ಇದನ್ನು ತಂದೆಯು ಹಾಗು ಜಿಜ್ಞಾಸುಗಳಿಬ್ಬರು ತಿಳಿದುಕೊಂಡಿರುತ್ತಾರೆ. ಇವರ ಚಲನೆ ಈ ರೀತಿಯಿದೆ, ಇವರು ಸರಿಯಿಲ್ಲ ಆಗ ತಂದೆಗೆ ಇವರನ್ನು ತಮ್ಮ ಬಳಿ ಕರೆದುಕೊಳ್ಳಿ ಎಂದು ಪತ್ರ ಬರೆಯುತ್ತಾರೆ.

ನೀವು ಮಕ್ಕಳು ದಧೀಚಿ ಋಷಿಯಂತೆ ಮೂಳೆ-ಮೂಳೆಯನ್ನು ಸವೆಸಬೇಕು. ಕೆಲವರಂತೂ ಆರ್ಡರ್ ಮಾಡಿಕೊಂಡು ನಡೆಯುತ್ತಾರೆ. ತಂದೆ ತಿಳಿಸುತ್ತಾರೆ ಈ ಸಂಪಾದನೆಯಲ್ಲಿಯು ಗ್ರಹಚಾರ ಬರುತ್ತದೆ. ದಶೆಗಳು ಬದಲಾಗುತ್ತವೆ. ಒಮ್ಮೆ ಬೃಹಸ್ಪತಿ, ಒಮ್ಮೆ ಶುಕ್ರ, ಒಮ್ಮೆ ರಾಹುದಶೆ. ಆಮೇಲೆ ಒಮ್ಮೆಯೇ ಚಕನಾಚೂರ್ (ಚೂರ್-ಚೂರ್) ಆಗಿ ಬಿಡುತ್ತಾರೆ. ಬಾಬಾ ತುಂಬಾ ಒಳ್ಳೊಳ್ಳೆಯ ಜ್ಞಾನದ ಪಾಯಿಂಟ್ಸ್(ಬಿಂದು)ಗಳನ್ನು ತಿಳಿಸುತ್ತಿರುತ್ತಾರೆ. ಯಾರೇ ಆದರು ಮೊದಲು ಬೋರ್ಡ್ ಮೇಲೆ ಬರೆದಿರುವ ಗುರಿ-ಉದ್ದೇಶ ಓದಿ ಒಳಗಡೆ ಬಂದು ಆತ್ಮಿಕ ಹೆಮ್ಮೆಯಿಂದ ಈ ರೀತಿ ಹೇಳುತ್ತಾರೆ-ನೀವು ತುಂಬಾ ಚೆನ್ನಾಗಿ ಓದಿ ತಿಳಿದಿರುವ ಬುದ್ದಿವಂತರಾಗಿದ್ದೀರಿ. ಬೋರ್ಡ್ ಮೇಲೆಯು ಸಹ ಬರೆಯಲಾಗಿದೆ-ಪರಮಪಿತ ಪರಮಾತ್ಮನಿಂದ 21 ಜನ್ಮಗಳಿಗೆ ಹಾಗೂ 2500 ವರ್ಷಗಳವರೆಗೆ ಆಸ್ತಿ ಸಿಗುತ್ತದೆ. ಸೂರ್ಯವಂಶಿ ಹಾಗು ಚಂದ್ರವಂಶಿ ರಾಜಧಾನಿ. ಏಕೆಂದರೆ ನಂಬರ್ ವಾರ್ ಗ್ರಾಹಕರಿರುವ ಕಾರಣ ಕೆಲವರು ಚೆನ್ನಾಗಿ ತಿಳಿದುಕೊಳ್ಳುತ್ತಾರೆ. ಇವೆಲ್ಲವು ಶಿವ ತಂದೆಯ ಅಂಗಡಿಗಳಾಗಿವೆ. ಸೇಟ್ ಒಬ್ಬರೇ ಆಗಿದ್ದಾರೆ. ಸಾವಿರಾರು, ಲಕ್ಷಾಂತರ ಅಂದಾಜಿನಲ್ಲಿ ಈ ಅಂಗಡಿಗಳನ್ನು ತೆರೆಯುತ್ತಾ ಹೋಗುತ್ತಾರೆ. ಸನ್ಯಾಸಿಗಳ ಅಂಗಡಿಗಳು ಎಷ್ಟೊಂದು ಇವೆ. ವಿದೇಶದಲ್ಲೂ ಸಹ ಇವೆ. ಭಾರತದ ಪ್ರಾಚೀನ ಯೋಗ ಹಾಗೂ ಜ್ಞಾನವನ್ನು ಸನ್ಯಾಸಿಗಳೇ ನೀಡುತ್ತಾರೆಂದು ವಿದೇಶದವರು ತಿಳಿದುಕೊಂಡಿದ್ದಾರೆ. ಆದರೆ ತಂದೆಯ ವಿನಃ ಬೇರೆ ಯಾರು ಕೊಡುವುದಿಲ್ಲ. ಮನುಷ್ಯರು ಯಾರೂ ಸಹ ಈ ಜ್ಞಾನವನ್ನು ಕೊಡಲಾರರು. ಆದರೆ ಕೇವಲ ಕೊಡುವ ತಂದೆಯ ಸ್ಥಾನದಲ್ಲಿ ಮಗನ ಹೆಸರನ್ನು ಇಟ್ಟಿದ್ದಾರೆ. ಈ ಹಠಯೋಗಿ ಸನ್ಯಾಸಿಗಳು ಏನನ್ನೂ ತಿಳಿದುಕೊಂಡಿಲ್ಲ ಎಂದು ನೀವು ಸಿದ್ಧ ಮಾಡಿ ಹೇಳುತ್ತೀರಿ. ಸ್ವರ್ಗ ಸ್ಥಾಪಕ ಪರಮಪಿತ ಪರಮಾತ್ಮನೇ ಕುಳಿತು ತಿಳಿಸುತ್ತಿದ್ದಾರೆ. ನೀವು ಪೋಪ್ ರವರಿಗೂ ಈ ರೀತಿ ಬರೆಯಬಹುದು – ಭಾರತದ ಯಾತ್ರೆಯಲ್ಲಿ ಬಂದು ತಾವು ಈ ಯಾತ್ರೆಯನ್ನು ಪೂರ್ಣವಾಗಿ ತಿಳಿದುಕೊಳ್ಳಲಿಲ್ಲ. ಒಂದುವೇಳೆ ತಾವು ಹೇಳಿದರೆ ನಿಮ್ಮ ಬಳಿಗೆ ಯಾರನ್ನಾದರೂ ಕಳುಹಿಸಿ ಕೊಡುತ್ತೇವೆ. ಅವರು ಇಲ್ಲಿಗೆ ಬರುವುದಿಲ್ಲ. ಏಕೆಂದರೆ ತುಂಬಾ ಸ್ಥಾನಮಾನವಿರುತ್ತದೆ. ಇಲ್ಲಿಗೆ ಬಡವರು ಬರುತ್ತಾರೆ. ಕ್ರೈಸ್ತ ಬಡವನೆಂದು ಹೇಳುತ್ತಾರೆ. ಈ ಸಮಯದಲ್ಲಿ ನಾವೂ ಸಹ ಬಡವರಾಗಿದ್ದೇವೆ. ಬಡವರಿಂದ (ಬೆಗ್ಗರ್ ಟು ಪ್ರಿನ್ಸ್) ಶ್ರೀಮಂತರಾಗುತ್ತೇವೆ. ಒಂದುವೇಳೆ ಯಾರ ಬಳಿಯಾದರೂ ತುಂಬಾ ಹಣ ಇದ್ದರೂ ಸಹ ಬಡವರು (ಬೆಗ್ಗರ್) ಎಂದರ್ಥ. ಕ್ರೈಸ್ತನಿಗೆ ಬಡವನೆಂದು ಹೇಳುತ್ತಾರೆ. ಬಡವರಾಗಿರುವ ಕಾರಣ ಜ್ಞಾನ ಪಡೆಯಲು ಅವಶ್ಯಕವಾಗಿ ಬರುತ್ತಾರೆ. ಕೈ ಮುಗಿಯ (ಸಲಾಮ್) ಬೇಕಾಗುತ್ತದೆ. ಇದು ಕಯಾಮತ್ (ಅಂತಿಮ ವಿನಾಶ) ಸಮಯವಾಗಿದೆ. ಲೆಕ್ಕಾಚಾರ ಮುಗಿಯಬೇಕಾಗಿದೆ. ನಂಬರ್ ವನ್ ನಮಸ್ಕಾರ ಮಾಡುವವರು (ಬ್ರಹ್ಮಾ ಬಾಬಾ) ಇಲ್ಲಿ ಕುಳಿತುಕೊಂಡಿದ್ದಾರೆ. ಅವರೂ ಸಹ ಬರುತ್ತಾರೆ. ನಿಮ್ಮ ಈ ಸೂರ್ಯ ವಂಶಿ-ಚಂದ್ರವಂಶಿ ರಾಜಧಾನಿ ಸ್ಥಾಪನೆಯಾಗುತ್ತಿದೆ. ಆದ್ದರಿಂದ ಈ ಲಕ್ಷ್ಮೀ ನಾರಾಯಣರ ಚಿತ್ರ ಮುಖ್ಯವಾಗಿದೆ. ಫಸ್ಟ್, ಸೆಕಂಡ್, ಥರ್ಡ್ ಲಕ್ಷ್ಮೀ ನಾರಾಯಣರ ಚಿತ್ರಗಳು ಬರುತ್ತವೆ. ನಮ್ಮ ಚಿತ್ರಗಳೆಲ್ಲವೂ ವಿನಾಶವಾಗಿ ಬಿಡುತ್ತವೆ. ಸರಿಯಾದ ಚಿತ್ರಗಳನ್ನು ಮಾಡಲಾಗುವುದಿಲ್ಲ. ದಿಲ್ವಾಡ ಮಂದಿರದಲ್ಲಿ ಜಗದಂಬಾ ಹಾಗೂ ಲಕ್ಷ್ಮೀ ನಾರಾಯಣರ ಚಿತ್ರವಿದೆ. ಆದರೆ ಇವರೇ ಜ್ಞಾನ-ಜ್ಞಾನೇಶ್ವರಿ ಯಿಂದ ರಾಜ-ರಾಜೇಶ್ವರಿಯಾಗುತ್ತಾರೆಂದು ಯಾರಿಗೂ ಗೊತ್ತಿಲ್ಲ. ಅವಶ್ಯಕವಾಗಿ ಅವರ ಮಕ್ಕಳು ಇರಬೇಕು. ವಿದ್ಯೆ ಸೋರ್ಸ್ ಆಫ್ ಇನ್ಕಮ್ (ಸಂಪಾದನೆ) ಆಗಿದೆ. ಬ್ರಾಹ್ಮಣರೇ ಓದಿ ದೇವೀ-ದೇವತೆಗಳಾಗುತ್ತಾರೆ. ಇದು ಎಷ್ಟೊಂದು ಸ್ಪಷ್ಟವಾಗಿದೆ.

ಬಾಬಾ ಹೇಳುತ್ತಾರೆ ನಾನು ಮಕ್ಕಳ ಶೃಂಗಾರ ಮಾಡಬೇಕು. ತಂದೆ ಸೇವೆ ಮಾಡಿದರೆ ಫಲ ಮಕ್ಕಳಿಗೆ ಸಿಗುವುದಿಲ್ಲ. ಮಕ್ಕಳ ಶ್ರಮದ ಫಲ ಮಕ್ಕಳಿಗೆ ಸಿಗುತ್ತದೆ. ನಾನು ಸೇವೆ ಮಾಡುತ್ತೇನೆ, ಯಾರಿಗಾದರೂ ದೃಷ್ಟಿ ಕೊಡುತ್ತೇನೆ, ಅದು ಅವರ ಅದೃಷ್ಟವಾಗಿರುತ್ತದೆ. ಜಗದಂಬಾ ಯಾರಾಗಿದ್ದಾರೆ, ಎಂತಹ ಪ್ರಾಲಬ್ದ ಪಡೆದರು-ಈ ಮಾತುಗಳು ಮನುಷ್ಯರಿಗೆ ಗೊತ್ತಿಲ್ಲ. ತಂದೆ ತಿಳಿಸುತ್ತಾರೆ-ಮಧುರ ಮಕ್ಕಳೇ ಅಳುವುದು ಅಪಶಕುನವಾಗಿದೆ. ಇದು ತಂದೆಯ ಮನೆಯಲ್ಲವೆ. ಸ್ವಯಂ ಅಳುವಂತಹವರು ಅನ್ಯರ ಸೇವೆ ಮಾಡಿ ಹೇಗೆ ಖುಷಿ ಪಡೆಸುತ್ತಾರೆ? ಇಲ್ಲಿ ನಗುವುದನ್ನು ಕಲಿಯಬೇಕು. ನಗುವುದು ಅರ್ಥಾತ್ ಮುಗುಳ್ನಗೆ. ಶಬ್ದದಲ್ಲಿ ನಗಬಾರದು, ಎಷ್ಟೊಂದು ಶಿಕ್ಷಣ ಕೊಡಲಾಗುತ್ತದೆ. ಜ್ಞಾನ ಪಾಯಿಂಟ್ಸ್(ಬಿಂದು)ಗಳನ್ನು ತಿಳಿಸಲಾಗುತ್ತದೆ. ದಿನ-ಪ್ರತಿದಿನ ಜ್ಞಾನ ಸಹಜವಾಗುತ್ತಾ ಹೋಗುತ್ತದೆ. ನಿಮ್ಮಲ್ಲೂ ಶಕ್ತಿ ಬರುತ್ತಾ ಹೋಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾ ರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಎಂದಿಗೂ ತಮ್ಮ ಅಹಂಕಾರವನ್ನು ತೋರಿಸಬಾರದು. ದಧೀಚಿ ಋಷಿಯಂತೆ ಸೇವೆಯಲ್ಲಿ ಮೂಳೆ-ಮೂಳೆಯನ್ನು ಸವೆಸಬೇಕು.

2. ಸದಾ ಹರ್ಷಿತಮುಖರಾಗಿರಬೇಕು, ಎಂದಿಗೂ ಅಳಬಾರದು, ಅಳುವುದೆಂದರೆ ವಿಧವೆಯಾಗುವುದು. ಆದ್ದರಿಂದ ಮುಗುಳ್ನಗುತ್ತಾ ಇರಬೇಕು, ಜೋರಾಗಿ (ಶಬ್ದದಲ್ಲಿ) ನಗಬಾರದು.

ವರದಾನ:-

ಸಹಜಯೋಗದ ಅರ್ಥವೇ ಆಗಿದೆ – ಒಬ್ಬರನ್ನು ನೆನಪು ಮಾಡುವುದು. ಒಬ್ಬರ ವಿನಃ ಮತ್ತ್ಯಾರೂ ಇಲ್ಲ. ತನು-ಮನ-ಧನ-ಎಲ್ಲವೂ ನಿಮ್ಮದು, ನನ್ನದೇನೂ ಇಲ್ಲ – ಈ ರೀತಿ ನಿಮಿತ್ತರಾಗಿದ್ದು ಡಬಲ್ ಲೈಟ್ ಆಗಿರುವವರೇ ಸಹಜಯೋಗಿ ಆಗಿದ್ದಾರೆ. ಇದರ ಸಹಜ ವಿಧಿ ಏನೆಂದರೆ – ಒಬ್ಬರನ್ನು ನೆನಪು ಮಾಡುವುದು, ಒಬ್ಬರಲ್ಲಿಯೇ ಸರ್ವಸ್ವವನ್ನು ಅನುಭವ ಮಾಡುವುದು. ತಂದೆಯವರೇ ಪ್ರಪಂಚವೆಂದಾಗ ನೆನಪು ಸಹಜವಾಗಿ ಬಿಡುತ್ತದೆ. ಅರ್ಧಕಲ್ಪದಲ್ಲಿ ಪರಿಶ್ರಮ ಪಟ್ಟೆವು, ಈಗ ತಂದೆಯವರು ಪರಿಶ್ರಮದಿಂದ ಮುಕ್ತಗೊಳಿಸಿದ್ದಾರೆ. ಆದರೆ ಮತ್ತೇನಾದರೂ ಪರಿಶ್ರಮ ಪಡಬೇಕಾಗುತ್ತಿದೆಯೆಂದರೆ ಅದರ ಕಾರಣವಾಗಿದೆ- ತಮ್ಮ ಬಲಹೀನತೆ.

ಸ್ಲೋಗನ್:-

ವಿಶೇಷ ಗಮನ:

ಈ ಜನವರಿ ತಿಂಗಳು ನಮ್ಮೆಲ್ಲರಿಗಾಗಿ ಅತಿ ಪ್ರಿಯವಾದ ಪಿತಾಶ್ರಿ ಬ್ರಹ್ಮಾಬಾಬಾರವರ ಸಂಪನ್ನತೆ ಹಾಗೂ ಸಂಪೂರ್ಣತೆಯ ವಿಶೇಷ ತಿಂಗಳಾಗಿದೆ. ಇಡೀ ತಿಂಗಳಿನಲ್ಲಿ ವಿಶೇಷವಾಗಿ ನಾವೆಲ್ಲಾ ಬ್ರಹ್ಮಾವತ್ಸರು ಶಿವ ತಂದೆಯ ಜೊತೆ-ಜೊತೆಗೆ ಬ್ರಹ್ಮಾ ತಂದೆಯ ಸ್ನೇಹದಲ್ಲಿ ಸಮಾವೇಶವಾಗಿರುತ್ತೇವೆ. ಬಾಬಾ ಹೇಳುತ್ತಾರೆ – ಈ ಸ್ನೇಹದಲ್ಲಿ ಸಮಾವೇಶವಾಗುವುದೂ ಸಹ ಸಮಾನರಾಗುವುದಾಗಿದೆ. ಭಕ್ತರು ಈ ಸ್ನೇಹದಲ್ಲಿ ಸಮಾವೇಶವಾಗುವ ಸ್ಥಿತಿಗಾಗಿಯೇ ಹೇಳಿದ್ದಾರೆ – ಆತ್ಮವು ಪರಮಾತ್ಮನಲ್ಲಿ ಸಮಾವೇಶವಾಗುತ್ತದೆ ಎಂದು. ಅಂದಮೇಲೆ ಬನ್ನಿ, ನಾವೆಲ್ಲರೂ ಇಡೀ ತಿಂಗಳು ಲವಲೀನ ಸ್ಥಿತಿಯಲ್ಲಿ ಸಮಾವೇಶವಾಗುವ ಅನುಭವ ಮಾಡೋಣ. ಇದೇ ಲಕ್ಷ್ಯದಿಂದ ಪ್ರತಿನಿತ್ಯದ ಮುರುಳಿಯ ಕೆಳಗೆ ಪ್ರೀತಿಯಲ್ಲಿ ಲವಲೀನರಾಗುವ ಒಂದು ವಿಶೇಷ ಅಂಶವನ್ನು ಬರೆಯುತ್ತಿದ್ದೇವೆ, ತಾವೂ ಇದರ ಅನುಸಾರವಾಗಿಯೇ ಪ್ರತಿನಿತ್ಯದ ಮುರುಳಿ ಕ್ಲಾಸಿನ ನಂತರ 10 ನಿಮಿಷಗಳು ಯೋಗಾಭ್ಯಾಸವನ್ನು ಮಾಡಿರಿ.

ಲವಲೀನ ಸ್ಥಿತಿಯ ಅನುಭವ ಮಾಡಿರಿ:

ಪ್ರೀತಿಯ ಸಾಗರ ತಂದೆಯ ಜೊತೆ ಮಿಲನ ಮಾಡುತ್ತಾ ಪ್ರೀತಿಯಿಂದ ಬಾಬಾ ಎನ್ನಿರಿ ಹಾಗೂ ಅದೇ ಪ್ರೀತಿಯಲ್ಲಿ ಸಮಾವೇಶವಾಗಿ ಬಿಡಿ. ಲಗನ್ನಿನಲ್ಲಿ ಮಗ್ನವಾಗಿ ಬಿಡಿ. ಈ ಲವಲೀನ ಸ್ಥಿತಿಯು ಮತ್ತೆಲ್ಲಾ ಮಾತುಗಳನ್ನು ಸಹಜವಾಗಿಯೇ ಸಮಾಪ್ತಿ ಮಾಡಿ ಬಿಡುತ್ತದೆ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top