29 December 2021 KANNADA Murli Today | Brahma Kumaris

Read and Listen today’s Gyan Murli in Kannada

December 28, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವು ಅರ್ಧಕಲ್ಪಕ್ಕಾಗಿ ಸುಖಧಾಮದಲ್ಲಿ ರಜಾ ದಿನವನ್ನು ಆಚರಿಸುತ್ತೀರಿ ಏಕೆಂದರೆ ಅಲ್ಲಿ ದುಃಖದ ಹೆಸರು-ಚಿಹ್ನೆಯೂ ಇರುವುದಿಲ್ಲ”

ಪ್ರಶ್ನೆ:: -

ಬ್ರಾಹ್ಮಣ ಮಕ್ಕಳಿಗೆ ತಂದೆಯು ಅಂತಹ ಯಾವ ಯುಕ್ತಿಯನ್ನು ತಿಳಿಸುತ್ತಾರೆ, ಆ ಯುಕ್ತಿಯಿಂದ ನೀವು ತಮ್ಮ ಜೀವನವನ್ನು ಸಫಲ ಮಾಡಿಕೊಳ್ಳುತ್ತೀರಿ?

ಉತ್ತರ:-

ತಂದೆಯು ತಿಳಿಸುತ್ತಾರೆ – ಮಧುರ ಮಕ್ಕಳೇ, ತಮ್ಮ ಜೀವನವನ್ನು ಸಫಲ ಮಾಡಿಕೊಳ್ಳಬೇಕೆಂದರೆ ತಮ್ಮ ತನು-ಮನ-ಧನ ಎಲ್ಲವನ್ನೂ ಈಶ್ವರೀಯ ಸೇವೆಯಲ್ಲಿ ತೊಡಗಿಸಿರಿ. ಫಾಲೋಫಾದರ್ ಮಾಡಿ ನಂತರ ನೋಡಿರಿ, ಇದಕ್ಕೆ ಪ್ರತಿಯಾಗಿ ನಿಮಗೆ ಏನು ಸಿಗುತ್ತದೆ! ಆತ್ಮವು ಪಾರಸವಾಗಿ ಬಿಡುತ್ತದೆ. ಬಹಳ ಸುಂದರ ಶರೀರವು ಪ್ರಾಪ್ತಿಯಾಗುತ್ತದೆ. ಅಪಾರಧನವು ಸಿಗುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಕೊನೆಗೂ ಆ ದಿನ ಇಂದು ಬಂದಿತು…

ಓಂ ಶಾಂತಿ. ತಂದೆಯು ಓಂ ಶಾಂತಿ ಹೇಳಿದಾಗ ಈ ದಾದಾರವರೂ ಓಂ ಶಾಂತಿ ಹೇಳುತ್ತಾರೆ, ಮಕ್ಕಳೂ ಸಹ ಆಂತರ್ಯದಲ್ಲಿ ಓಂ ಶಾಂತಿ ಹೇಳುತ್ತೀರಿ. ಯಾರಾದರೂ ಭಾಷಣ ಮಾಡುವಾಗ ಓಂ ಶಾಂತಿ ಎಂದು ಹೇಳುತ್ತಾರೆಂದರೆ ಅಲ್ಲಿ ಕುಳಿತಿರುವವರೆಲ್ಲರೂ ಸಹ ಓಂಶಾಂತಿ ಎಂದು ಹೇಳುತ್ತಾರೆ. ಅವಶ್ಯವಾಗಿ ಪ್ರತ್ಯುತ್ತರ ಕೊಡಬೇಕಾಗಿದೆ. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ಆತ್ಮರು ಮತ್ತು ಪರಮಾತ್ಮನ ಮಿಲನವಾಗುತ್ತಿದೆ. ಆತ್ಮರು ಪರಮಾತ್ಮನಿಂದ ಬಹಳಕಾಲ ಅಗಲಿದ್ದರು ಎಂದು ಗಾಯನವಿದೆ. ಯಾರಿಂದ ಬಹಳ ಕಾಲ ಅಗಲಿರುವರೋ ಅವರೊಂದಿಗೆ ಸನ್ಮುಖದಲ್ಲಿ ಮಿಲನ ಮಾಡುತ್ತೀರಿ. ಅವರು ತಮ್ಮ ಪಾತ್ರವನ್ನು ಅಭಿನಯಿಸಲು ಬರುತ್ತಾರೆ. ಅವರಿಗಾಗಿ ಭಕ್ತಿಮಾರ್ಗದಲ್ಲಿ ಎಷ್ಟೊಂದು ಹುಡುಕುತ್ತಾ ಇರುತ್ತಾರೆ, ಕೊನೆಗೆ ಆ ದಿನವೂ ಬರುತ್ತದೆ ಯಾವಾಗ ತಂದೆಯೊಂದಿಗೆ ಮಿಲನವಾಗುತ್ತದೆ. ಕೇವಲ ಒಂದು ಭಾರತವೇ ಅವಿನಾಶಿ ಖಂಡವಾಗಿದೆ, ಉಳಿದೆಲ್ಲವೂ ವಿನಾಶಿ ಖಂಡಗಳಾಗಿವೆ. ಹೊಸ ಪ್ರಪಂಚದಲ್ಲಿ ಕೇವಲ ಭಾರತವೇ ಇರುತ್ತದೆ, ಭಾರತವೆಂದೂ ವಿನಾಶವಾಗುವುದಿಲ್ಲ, ಇದು ಸದಾ ಇರುತ್ತದೆ. ಈಗಂತೂ ಎಷ್ಟೊಂದು ಖಂಡಗಳಿವೆ, ಭಾರತದಲ್ಲಿ ದೇವಿ-ದೇವತೆಗಳ ರಾಜ್ಯವಿದ್ದಾಗ ಅಲ್ಲಿ ಯಾವುದೇ ಖಂಡವಿರಲಿಲ್ಲ. ಕೇವಲ ಭಾರತವಾಸಿಗಳೇ ಇದ್ದರು, ಮತ್ತ್ಯಾವುದೇ ಮನುಷ್ಯರಿರಲಿಲ್ಲ. ಭಾರತದಲ್ಲಿ ಕೇವಲ ಸೂರ್ಯವಂಶೀ ದೇವಿ-ದೇವತೆಗಳ ರಾಜ್ಯವಿತ್ತು, ಈಗ ಕೇವಲ ಅವರ ಚಿತ್ರಗಳಷ್ಟೇ ಉಳಿದುಕೊಂಡಿವೆ, ನೆನಪಾರ್ಥವಂತೂ ಇರಬೇಕಲ್ಲವೆ. ಇದು ಮೊದಲು ಎಷ್ಟು ಚಿಕ್ಕವೃಕ್ಷವಾಗಿರುತ್ತದೆ. ಅದಕ್ಕೆ ರಾಮ ರಾಜ್ಯ, ಈಶ್ವರೀಯ ರಾಜ್ಯವೆಂದು ಹೇಳಲಾಗುತ್ತದೆ. ಈಶ್ವರನ ಸ್ಥಾಪನೆಯಲ್ಲವೆ. ಈಗಂತೂ ಆಸುರೀ ಸ್ಥಾಪನೆಯಾಗಿದೆ ಮತ್ತು ಸತ್ಯಯುಗವು ದೈವೀ ಸ್ಥಾಪನೆಯಾಗಿದೆ. ಈಶ್ವರನ ಸ್ಥಾಪನೆಯು ಅರ್ಧಕಲ್ಪ ನಡೆಯುತ್ತದೆ ನಂತರ ಆಸುರೀ ಸ್ಥಾಪನೆಯಾಗುತ್ತದೆ. ಅದಕ್ಕೆ ರಾವಣ ರಾಜ್ಯವೆಂದು ಹೇಳಲಾಗುತ್ತದೆ. ಅದು ನಿರ್ವಿಕಾರಿ ಪ್ರಪಂಚ, ಇದು ವಿಕಾರಿ ಪ್ರಪಂಚವಾಗಿದೆ. ಸೃಷ್ಟಿ ಚಕ್ರವು ಹೇಗೆ ಸುತ್ತುತ್ತದೆ? ದೇವಿ-ದೇವತೆಗಳು ಎಲ್ಲಿ ಹೋದರು, ಪಾವನರೇ ನಂತರ ಹೇಗೆ ಪತಿತರಾದರು ಎಂದು ಪ್ರಪಂಚದಲ್ಲಿ ಇದನ್ನು ಯಾರೂ ತಿಳಿದುಕೊಂಡಿಲ್ಲ. ಏಣಿಯನ್ನು ಇಳಿಯುತ್ತಾರಲ್ಲವೆ ಆಗ ಕಲೆಗಳು ಕಡಿಮೆಯಾಗತೊಡಗುತ್ತವೆ. ಹೇಗೆ ಚಂದ್ರನಿಗೆ ಗ್ರಹಣ ಹಿಡಿದಾಗ ದಾನ ಕೊಟ್ಟರೆ ಗ್ರಹಣ ಬಿಡುವುದೆಂದು ಹೇಳಲಾಗುತ್ತದೆ. ಈಗ ತಂದೆಯು ತಿಳಿಸುತ್ತಾರೆ – 5 ವಿಕಾರಗಳನ್ನು ಬಿಡಿ, ಯಾವಾಗ ನೀವು ರಾವಣನ ಬಂಧನದಿಂದ ಮುಕ್ತರಾಗುವಿರೋ ಆಗ ರಾಮ ರಾಜ್ಯದ ಸ್ಥಾಪನೆಯಾಗುವುದು. ಅಲ್ಲಿ ಈ ಪಂಚ ವಿಕಾರಗಳಿರುವುದಿಲ್ಲ, ಇದೂ ಸಹ ಯಾರಿಗೂ ತಿಳಿದಿಲ್ಲ. ಇವು ಸದಾಕಾಲದಿಂದ ನಡೆದುಬರುತ್ತಿದೆ ಎಂದು ಮನುಷ್ಯರು ತಿಳಿದುಕೊಳ್ಳುತ್ತಾರೆ, ಪ್ರಪಂಚದಲ್ಲಿ ಮನುಷ್ಯರದು ಅನೇಕ ಮತಗಳಿವೆ, ನಿಮ್ಮದು ಏಕಮತವಾಗಿದೆ. ಇದಕ್ಕೆ ಅದ್ವೈತ ಮತವೆಂದು ಹೇಳಲಾಗುತ್ತದೆ. ಈ ಕಲಿಯುಗದಲ್ಲಿ ಆಸುರೀ ಮತವಿದೆ.

ನೀವು ತಿಳಿದುಕೊಂಡಿದ್ದೀರಿ – ಭಾರತವಾಸಿಗಳಾದ ನಾವು ರಾಮ ರಾಜ್ಯದಲ್ಲಿದ್ದೆವು, ಪೂಜ್ಯರೇ ನಂತರ ಪೂಜಾರಿಗಳಾಗಿದ್ದೇವೆ. ಈಗ ನೀವು ಮಕ್ಕಳ ಬುದ್ಧಿಯಲ್ಲಿ ಈ ಜ್ಞಾನವಿದೆ- ನಾವೇ ಪೂಜ್ಯರಾಗಿದ್ದೆವು ನಂತರ 84 ಜನ್ಮಗಳನ್ನು ತೆಗೆದುಕೊಂಡು ಪೂಜಾರಿಗಳಾಗಿದ್ದೇವೆ. ಮನುಷ್ಯರು ಪರಮಾತ್ಮನೇ ಪೂಜ್ಯ, ಪೂಜಾರಿಯಾಗುತ್ತಾರೆ, ಈ ಲೀಲೆಯೆಲ್ಲವೂ ಅವರದೇ ಆಗಿದೆ, ಎಲ್ಲರೂ ಪರಮಾತ್ಮನ ಅವತಾರವೇ ಆಗಿದ್ದಾರೆ ಎಂದು ತಿಳಿದುಕೊಳ್ಳುತ್ತಾರೆ. ಈಗ ನೀವು ಮಕ್ಕಳಿಗಂತೂ ಬಹಳ ಖುಷಿಯಾಗುತ್ತದೆ ಏಕೆಂದರೆ ಯಾವ ತಂದೆಯನ್ನು ಅರ್ಧಕಲ್ಪ ನೆನಪು ಮಾಡಿದ್ದೀರಿ ಅವರೇ ಈಗ ದೊರೆತಿದ್ದಾರೆ. ದುಃಖದಲ್ಲಿ ಎಲ್ಲರೂ ಸ್ಮರಣೆ ಮಾಡುವರು, ಸುಖದಲ್ಲಿ ಯಾರೂ ಮಾಡುವುದಿಲ್ಲವೆಂದು ಹೇಳುತ್ತಾರೆ. ಅದೇ ಆತ್ಮರು ಯಾವಾಗ ದುಃಖದಲ್ಲಿ ಬರುವರೋ ಆಗ ತಂದೆಯನ್ನು ನೆನಪು ಮಾಡುತ್ತಾರೆ. ಸತ್ಯಯುಗದಲ್ಲಿ ಯಾರೂ ತಂದೆಯನ್ನು ಕರೆಯುವುದಿಲ್ಲ. ಈಗ ಆತ್ಮರದು ಪರಮಾತ್ಮನೊಂದಿಗೆ ಮೇಳವಾಗುತ್ತದೆ. ತಂದೆಯೇ ಜ್ಞಾನಸಾಗರನಾಗಿದ್ದಾರೆ, ಇದರಲ್ಲಿ ನೀರಿನ ಸಾಗರದ ಮಾತಲ್ಲ. ಸಂಗಮದಲ್ಲಿ ನೋಡಿ, ಎಷ್ಟು ದೊಡ್ಡ ಕುಂಭಮೇಳವಾಗುತ್ತದೆ! ಈಗ ನಿಮ್ಮದು ಸತ್ಯ-ಸತ್ಯವಾದ ಮೇಳವಾಗಿದೆ. ಎಲ್ಲರೂ ಒಟ್ಟಿಗೆ ಮಿಲನಮಾಡಲು ಸಾಧ್ಯವಿಲ್ಲ. ಒಬ್ಬೊಬ್ಬರು ಒಂದೊಂದು ಕಡೆಯಿಂದ ಬರುತ್ತೀರಿ. ಮೇಳದಲ್ಲಿ ಎಷ್ಟು ಲಕ್ಷಾಂತರ ಮನುಷ್ಯರು ಸ್ನಾನ ಮಾಡಬೇಕಾಗುತ್ತದೆ, ಜನ್ಮ-ಜನ್ಮಾಂತರದಿಂದ ಈ ಸ್ನಾನವನ್ನು ಮಾಡುತ್ತಲೇ ಬಂದಿದ್ದಾರೆ. ಈ ಮೇಳವು ಆಗುತ್ತಲೇ ಇರುತ್ತದೆ ಎಂದು ಹೇಳುತ್ತಾರೆ. ಚಿಕ್ಕದು ಮತ್ತು ದೊಡ್ಡ ಕುಂಭವೆಂದೂ ಹೇಳುತ್ತಾರೆ. ಈಗ ತಂದೆಯು ಪತಿತರನ್ನು ಪಾವನ ಮಾಡಲು ಒಂದೇ ಬಾರಿ ಬರುತ್ತಾರೆ. ಗಂಗೆಯು ಪತಿತ-ಪಾವನಿಯಾಗಿದ್ದರೆ ಈಗ ಗಂಗೆಯು ಜ್ಞಾನವನ್ನು ತಿಳಿಸುತ್ತದೆಯೇ? ಇಲ್ಲಂತೂ ಪತಿತ-ಪಾವನ ತಂದೆಯು ಕುಳಿತು ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ಈಗ ಪ್ರಪಂಚದ ಸ್ಥಿತಿ ಏನಾಗಿದೆ ಎಂಬುದನ್ನು ಮಕ್ಕಳು ತಿಳಿದುಕೊಂಡಿದ್ದೀರಿ, ವಿನಾಶವನ್ನೂ ನೋಡಿದ್ದೀರಿ. ಅರ್ಜುನನೆಂದರೆ ಈ ಬ್ರಹ್ಮನೇ ಅಲ್ಲವೆ. ಇದು ಮನುಷ್ಯನ ರಥವಾಗಿದೆ, ಇವರು (ಬ್ರಹ್ಮಾ) ತಿಳಿಸುತ್ತಾರೆ- ನಾನು ವಿನಾಶವನ್ನೂ ನೋಡಿದೆನು, ನಮ್ಮ ರಾಜಧಾನಿಯನ್ನೂ ನೋಡಿದೆನು ಆಗ ಎಲ್ಲವನ್ನೂ ಬಿಟ್ಟೆನು. ಮನೆ ಇತ್ಯಾದಿಗಳೆಲ್ಲವನ್ನೂ ಕೂಡಲೇ ಬಿಟ್ಟು ಬಿಟ್ಟರು ಏಕೆಂದರೆ ಎಲ್ಲವೂ ವಿನಾಶವಾಗಲಿದೆ, ಇದೇನೂ ಹೊಸ ಮಾತಲ್ಲ.

ಇದು ಈಶ್ವರೀಯ ದರ್ಬಾರ್ ಆಗಿದೆ, ಇದರಲ್ಲಿ ಪತಿತರು ಕುಳಿತುಕೊಳ್ಳುವಂತಿಲ್ಲ. ಇಲ್ಲದಿದ್ದರೆ ಅವರು ಒಮ್ಮೆಲೆ ರಸಾತಳದಲ್ಲಿ ಹೊರಟು ಹೋಗುವರು ಆದ್ದರಿಂದ ಪತಿತರಿಗೆ ಇಲ್ಲಿ ಬರಲು ಅನುಮತಿಯಿಲ್ಲ. ಹೀಗೆ ಕೆಲಕೆಲವರು ಬಂದು ಬಿಡುತ್ತಾರೆ, ನಾವು ವಿಕಾರದಲ್ಲಿ ಹೋಗುವುದು ಇವರಿಗೇನು ತಿಳಿಯುತ್ತದೆ ಎಂದು ತಿಳಿದುಕೊಳ್ಳುತ್ತಾರೆ. ಇದು ಬಹಳ ಕೆಟ್ಟದ್ದಾಗಿದೆ. ವಿದೇಶದಲ್ಲಿ ನಾಲ್ಕೈದು ಮಕ್ಕಳಿಗೆ ಜನ್ಮ ನೀಡುವವರಿಗೆ ಬಹುಮಾನ ಸಿಗುತ್ತದೆ. ಸತ್ಯಯುಗದಲ್ಲಂತೂ ಒಂದೇ ಮಗುವಿರುತ್ತದೆ, ಅಲ್ಲಿ ವಿಕಾರದ ಮಾತೇ ಇರುವುದಿಲ್ಲ. ಅಲ್ಲಂತೂ ರಾವಣ ರಾಜ್ಯವೇ ಇರುವುದಿಲ್ಲ, ಅದು ರಾಮ ರಾಜ್ಯವಾಗಿದೆ. ಕನ್ಯೆಗೆ ವಿವಾಹವಾದಾಗ ಗುಪ್ತ ರೀತಿಯಿಂದ ಕನ್ಯೆಗೆ ಬಹಳಷ್ಟು ಕೊಡುತ್ತಾರೆ, ಅದು ಯಾರಿಗೂ ತಿಳಿಯುವುದಿಲ್ಲ. ತಂದೆಯೂ ತಿಳಿಸುತ್ತಾರೆ – ಮಕ್ಕಳೇ, ನಿಮಗೆ ಗುಪ್ತ ದಾನವನ್ನು ಕೊಡುತ್ತೇನೆ, ನಾನು ಏನನ್ನು ಕೊಡುತ್ತಿದ್ದೇನೆ ಎಂಬುದು ಯಾರಿಗಾದರೂ ಅರ್ಥವಾಗುತ್ತದೆಯೇ? ಇದು ಗುಪ್ತವಾಗಿದೆ. ಈ ಬಿ.ಕೆ.ಗಳು ವಿಶ್ವದ ಮಾಲೀಕರಾಗುತ್ತಾರೆ ಎಂಬುದು ಯಾರಿಗೂ ಅರ್ಥವಾಗುವುದಿಲ್ಲ. ನೀವೀಗ ಇದನ್ನು ತಿಳಿದುಕೊಂಡಿದ್ದೀರಿ, ನಾವು ವಿಶ್ವದ ಮಾಲೀಕರಾಗಿದ್ದೆವು ನಂತರ 84 ಜನ್ಮಗಳನ್ನು ತೆಗೆದುಕೊಳ್ಳುತ್ತೇವೆ. ನಾವು ಕಲ್ಪ-ಕಲ್ಪವೂ ತಂದೆಯಿಂದ ಆಸ್ತಿಯನ್ನು ಪಡೆಯುತ್ತೇವೆ. ಬಾಬಾ, ನಾವು ಕಲ್ಪ-ಕಲ್ಪವೂ ತಮ್ಮೊಂದಿಗೆ ಮಿಲನ ಮಾಡುತ್ತೇವೆ, ಕಲ್ಪದ ಮೊದಲೂ ಸಹ ಮಿಲನ ಮಾಡಿದ್ದೆವು ಎಂದು ಹೇಳುತ್ತಾರೆ. ತಂದೆಗೇ ರಾಮನೆಂದು ಹೇಳುತ್ತಾರೆ. ಆ ತ್ರೇತಾಯುಗದ ರಾಮನಲ್ಲ, ರಾಜಾ ರಾಮನನ್ನು ಕೇವಲ ಅವರ ಮಗನಷ್ಟೇ ತಂದೆಯೆಂದು ಕರೆಯುವರು. ಇವರಂತೂ ಬೇಹದ್ದಿನ ತಂದೆಯಾಗಿದ್ದಾರೆ, ಈಗ ತಂದೆಯು ನೀವು ಮಕ್ಕಳಿಗೆ ತಿಳಿಸುತ್ತಾರೆ – ನೀವು ಮಕ್ಕಳು ದೈವೀಗುಣಗಳನ್ನು ಧಾರಣೆ ಮಾಡಿ ಈ ರೀತಿ ಆಗಬೇಕಾಗಿದೆ. ಈ ದೇವಿ-ದೇವತೆಗಳಿಗೆ ಎಷ್ಟೊಂದು ಮಹಿಮೆ ಮಾಡುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಅಚ್ಯುತಂ, ಕೇಶವಂ…. ಎಂದು ಹಾಡುತ್ತಾರೆ, ಈಗ ರಾಮನೆಲ್ಲಿ ನಾರಾಯಣನೆಲ್ಲಿ! ಎಲ್ಲರನ್ನು ಸೇರಿಸಿ ಬಿಡುತ್ತಾರೆ. ಅರ್ಥವೇನೂ ಇಲ್ಲ. ಈಗ ತಂದೆಯು ನಿಮಗೆ ಸಾರರೂಪದಲ್ಲಿ ಎಲ್ಲವನ್ನೂ ತಿಳಿಸುತ್ತಾರೆ. ದ್ವಾಪರದಿಂದ ಭಕ್ತಿಮಾರ್ಗವು ಆರಂಭವಾಗುತ್ತದೆ, 84 ಜನ್ಮಗಳ ಚಕ್ರವನ್ನು ಸುತ್ತಿ ಕೆಳಗಿಳಿಯಲೇಬೇಕಾಗುತ್ತದೆ. 84 ಜನ್ಮಗಳೆಂದು ಗಾಯನವಿದೆ, ಒಮ್ಮೆ ತಂದೆಯು ಕೇಳಿದರು – ಇಲ್ಲಿ ನೀವು ಕುಳಿತಿದ್ದೀರೆಂದರೆ 84 ಜನ್ಮಗಳನ್ನು ತೆಗೆದುಕೊಂಡಿರುವಿರಾ ಅಥವಾ 80-82 ಜನ್ಮಗಳನ್ನು ತೆಗೆದುಕೊಂಡಿರುವಿರಾ? ಎಲ್ಲರೂ ಉತ್ತೀರ್ಣರಾಗುವಿರಾ? ಯಾರು ಇಲ್ಲಿ ಬಿಟ್ಟು ಹೋಗುವರೋ ಅವರ ಜನ್ಮಗಳು ಹೆಚ್ಚು ಕಡಿಮೆಯಾಗುತ್ತದೆಯೇ? ಸ್ಥಿತಿಯ ಅನುಸಾರ ಪ್ರತಿಯೊಬ್ಬರ ಪಾತ್ರವಿರುತ್ತದೆಯಲ್ಲವೆ. ಅನೇಕರು ಇಲ್ಲಿ ಆಶ್ಚರ್ಯವೆನಿಸುವಂತೆ ಜ್ಞಾನವನ್ನು ಬಿಟ್ಟು ಹೊರಟು ಹೋಗುತ್ತಾರೆ ಅಂದಮೇಲೆ ಅವರು ಸತ್ಯಯುಗದಲ್ಲಿ ಹೇಗೆ ಬರುವರು! ಅಂತಹವರು ತಡವಾಗಿ ಪ್ರಜೆಗಳಲ್ಲಿ ಬರುತ್ತಾರೆ ಏಕೆಂದರೆ ಬಹಳ ಗ್ಲಾನಿ ಮಾಡುತ್ತಾರೆ. ಇಷ್ಟು ಮಂದಿಯೆಲ್ಲರೂ ಸೂರ್ಯವಂಶದಲ್ಲಿ ಬರಲು ಸಾಧ್ಯವೇ! ನಂಬರ್ವಾರ್ ಪುರುಷಾರ್ಥದನುಸಾರ ಮಾಲೆಯಾಗುತ್ತದೆ. ತಂದೆಯಂತೂ ಜ್ಞಾನಸಾಗರನಾಗಿದ್ದಾರೆ, ಅವರಲ್ಲಿ ಯಾವ ಜ್ಞಾನವಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಈಗ ನಿಮಗೆ ಜ್ಞಾನವು ಸಿಗುತ್ತಿದೆ, ಅವರಂತೂ ಕೇವಲ ಸ್ತುತಿ ಮಾಡುತ್ತಾರೆ. ಏನನ್ನೂ ತಿಳಿದುಕೊಂಡಿಲ್ಲ, ಇದಕ್ಕೆ ಭಕ್ತಿಮಾರ್ಗವೆಂದು ಹೇಳಲಾಗುತ್ತದೆ. ಯಾವುದೆಲ್ಲಾ ಹಬ್ಬಗಳನ್ನು ಆಚರಿಸಲಾಗುತ್ತದೆ ಅದೆಲ್ಲವೂ ಈ ಸಮಯದ್ದಾಗಿದೆ, ಇದನ್ನು ಮತ್ತೆ ಭಕ್ತಿಮಾರ್ಗದಲ್ಲಿ ಆಚರಿಸುತ್ತಾ ಬರುತ್ತಾರೆ. ನಿಮಗಂತೂ ಅರ್ಧಕಲ್ಪ ಸುಖದ ರಜೆ ಸಿಗುತ್ತದೆ. ಎಂದೂ ದುಃಖದ ಹೆಸರನ್ನೂ ನೋಡುವುದಿಲ್ಲ. ಸುಖಧಾಮದಲ್ಲಿ ರಜೆ ಸಿಕ್ಕಿಬಿಡುತ್ತದೆ ಏಕೆಂದರೆ ನೀವು ಪವಿತ್ರರಾಗುತ್ತೀರಲ್ಲವೆ. ತಂದೆಯು ತಿಳಿಸುತ್ತಾರೆ- ನಿಮ್ಮದು ಇದು ಅಂತಿಮ ಜನ್ಮವಾಗಿದೆ. ಯಾವಾಗ ರಾವಣ ರಾಜ್ಯವು ಆರಂಭವಾಗುತ್ತದೆಯೋ ಅದನ್ನು ಮೃತ್ಯುಲೋಕವೆಂದು ಹೇಳಲಾಗುತ್ತದೆ. ಮೃತ್ಯುಲೋಕದ ವಿನಾಶವಾಗಿ ಅಮರಲೋಕದ ಜಯ ಜಯಕಾರವಾಗುತ್ತದೆ. ಇದು ಸುಖ-ದುಃಖ, ರಾಮ-ರಾವಣನ ಆಟವಾಗಿದೆ, ನೀವು ರಾಮನ ಮೂಲಕ ರಾಜ್ಯವನ್ನು ಪಡೆಯುತ್ತೀರಿ. ರಾವಣನ ಮೂಲಕ ರಾಜ್ಯವನ್ನು ಕಳೆದುಕೊಳ್ಳುತ್ತೀರಿ. ತಂದೆಯು ತಿಳಿಸುತ್ತಾರೆ – ನೀವು ತಮ್ಮ ಜೀವನವನ್ನೇ ಅರಿತುಕೊಂಡಿಲ್ಲ, ಇದನ್ನು ತಂದೆಯೇ ತಿಳಿಸಬಲ್ಲರು, ಮತ್ತ್ಯಾರೂ ತಿಳಿಸಲು ಸಾಧ್ಯವಿಲ್ಲ. ಮನುಷ್ಯರಂತೂ 84 ಲಕ್ಷ ಜನ್ಮಗಳೆಂದು ಹೇಳಿ ಬಿಡುತ್ತಾರೆ. ಹಾಗಿದ್ದರೆ ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳಾಗಿ ಬಿಡುತ್ತದೆ. ಈ ಮಾತುಗಳು ಅರ್ಥವಾಗಲು ಅವರಿಗೆ ಏನೂ ಬುದ್ಧಿಯಲ್ಲಿ ಬರುವುದಿಲ್ಲ, ಕಲ್ಪದ ಆಯಸ್ಸನ್ನು ತಪ್ಪಾಗಿ ಬರೆದು ಬಿಟ್ಟಿದ್ದಾರೆ. ಈ ಶಾಸ್ತ್ರ ಇತ್ಯಾದಿಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ನೀವು ಮಕ್ಕಳಿಗೆ ಎಷ್ಟು ಸಹಜವಾಗಿ ತಿಳಿಸಲಾಗುತ್ತದೆ! ಮುಂದೆ ಹೋದಂತೆ ಇನ್ನೂ ಬಹಳ ಚೆನ್ನಾಗಿ ತಿಳಿಸುಲಾಗುತ್ತದೆ. ಯಾರಾದರೂ ಮರಣ ಹೊಂದಿದರೆ ಆ ಸಮಯದಲ್ಲಿ ಕೇವಲ ಸ್ವಲ್ಪ ವೈರಾಗ್ಯ ಬರುತ್ತದೆ ಅದಕ್ಕೆ ಸ್ಮಶಾನ ವೈರಾಗ್ಯವೆಂದು ಹೇಳಲಾಗುತ್ತದೆ. ಸ್ಮಶಾನದಿಂದ ಹೊರ ಬಂದು ಮಾರುಕಟ್ಟೆಗೆ ಹೋದರೆ ಸಾಕು, ಮಾಂಸ-ಮಧ್ಯಪಾನಗಳನ್ನು ಖರೀದಿಸುತ್ತಾರೆ. ನೀವು ಮಕ್ಕಳಿಗೆ ಈ ಸಮಯದಲ್ಲಿ ಇಡೀ ಹಳೆಯ ಪ್ರಪಂಚದೊಂದಿಗೆ ವೈರಾಗ್ಯವಿದೆ. ತಂದೆಯು ತಿಳಿಸುತ್ತಾರೆ – ಎರಡು ಪ್ರಕಾರದ ವೈರಾಗ್ಯವಿದೆ, ನಿವೃತ್ತಿ ಮಾರ್ಗದವರದು ಅಲ್ಪಕಾಲದ ವೈರಾಗ್ಯವಾಗಿದೆ ಅವರು ಪ್ರವೃತ್ತಿ ಮಾರ್ಗದವರಿಗೆ ಜ್ಞಾನ ಕೊಡುವುದೇ ಇಲ್ಲ. ಇಬ್ಬರೂ ಪವಿತ್ರರಾಗಿರಿ ಎಂಬ ಮಾತನ್ನು ಅವರು ಹೇಳಲು ಸಾಧ್ಯವಿಲ್ಲ. ಅವರು ಗೀತೆಯನ್ನು ತಿಳಿಸಲು ಸಾಧ್ಯವಿಲ್ಲ. ಈಗ ನಿಮಗೆ ಜ್ಞಾನಸಾಗರನಿಂದ ಜ್ಞಾನ ಸಿಗುತ್ತದೆ. ಅವರು ತಿಳಿದುಕೊಳ್ಳುತ್ತಾರೆ ಆದರೆ ಅವರಿಗೆ ಭಯವಿರುತ್ತದೆ. ಮುಂದೆ ಹೋದಂತೆ ಗೀತೆಯನ್ನು ಕೃಷ್ಣನು ಹೇಳಲಿಲ್ಲವೆಂದು ಅವಶ್ಯವಾಗಿ ಒಪ್ಪಿಕೊಳ್ಳುತ್ತಾರೆ. ಒಂದುವೇಳೆ ಆ ಮಾತನ್ನು ಈಗಲೇ ಅವರು ಹೇಳಿ ಬಿಟ್ಟರೆ ಅವರ ಅನುಯಾಯಿಗಳೆಲ್ಲರೂ ಬಿಟ್ಟು ಓಡಿ ಹೋಗುವರು. ಇವರಿಗೆ ಬಿ.ಕೆ.,ಗಳ ಜಾದು ಹಿಡಿದಿದೆ ಎಂದು ಹೇಳಿ ಬಿಡುತ್ತಾರೆ.

ಈಗ ತಂದೆಯು ತಿಳಿಸುತ್ತಾರೆ – ಒಂದುವೇಳೆ ದೇವತೆಗಳಾಗಬೇಕೆಂದರೆ ದೈವೀಗುಣಗಳನ್ನು ಧಾರಣೆ ಮಾಡಿ, ಪವಿತ್ರತೆಯು ಮುಖ್ಯ ಮಾತಾಗಿದೆ. ಇಲ್ಲಿನ ಮನುಷ್ಯರ ಆಹಾರ-ಪಾನೀಯಗಳು ನೋಡಿ, ಎಷ್ಟು ಆಸುರಿಯಾಗಿದೆ! ಜನ್ಮಜನ್ಮಾಂತರದ ಪಾಪಾತ್ಮರಾಗಿದ್ದಾರೆ. ಯಾರೊಬ್ಬರೂ ಪುಣ್ಯಾತ್ಮರಿಲ್ಲ, ನೀವೀಗ ಆಗುತ್ತಿದ್ದೀರಿ. ಸತ್ಯಯುಗದಲ್ಲಿ ಎಲ್ಲರೂ ಪುಣ್ಯಾತ್ಮರಿರುತ್ತಾರೆ. ಅಲ್ಲಿ ಶ್ರೇಷ್ಠಾಚಾರಿ ಪಾವನರಿರುತ್ತಾರೆ, ಇಲ್ಲಿ ಭ್ರಶ್ರೇಷ್ಠಾಚಾರಿ ಪತಿತರಿದ್ದಾರೆ. ಸತ್ಯಯುಗದಲ್ಲಿ ಪಂಚ ವಿಕಾರಗಳಿರುವುದಿಲ್ಲ. ರಾಮ ರಾಜ್ಯ ಮತ್ತು ರಾವಣ ರಾಜ್ಯದಲ್ಲಿ ಎಷ್ಟೊಂದು ಅಂತರವಾಗಿ ಬಿಡುತ್ತದೆ! ಇದಕ್ಕೆ ರಾವಣ ರಾಜ್ಯವೆಂದೇ ಹೇಳುವರಲ್ಲವೆ. ಪತಿತ-ಪಾವನನು ಒಬ್ಬರೇ ಪರಮಾತ್ಮನಾಗಿದ್ದಾರೆ. ಅವರು ನಮ್ಮ ಬೇಹದ್ದಿನ ತಂದೆಯಾಗಿದ್ದಾರೆ ಎಂಬುದನ್ನು ತಿಳಿದುಕೊಂಡಿದ್ದೀರಿ. ಬೇಹದ್ದಿನ ತಂದೆ ರಚಯಿತನನ್ನು ರಚನೆಯು ನೆನಪು ಮಾಡುತ್ತದೆ. ತಂದೆಯು ತಿಳಿಸುತ್ತಾರೆ – ಸತ್ಯಯುಗದಲ್ಲಿ ಒಬ್ಬರೇ ತಂದೆಯಿರುತ್ತಾರೆ, ನಂತರ ದ್ವಾಪರದಿಂದ ಇಬ್ಬರು ತಂದೆಯರಾಗುತ್ತಾರೆ. ಲೌಕಿಕ ಮತ್ತು ಪಾರಲೌಕಿಕ. ಈಗ ನಿಮಗೆ ಮೂವರು ತಂದೆಯರಿದ್ದಾರೆ, ಲೌಕಿಕ, ಪಾರಲೌಕಿಕ ಅಲೌಕಿಕ ತಂದೆ. ಭಕ್ತಿಮಾರ್ಗದಲ್ಲಿ ಲೌಕಿಕ ತಂದೆಯಿದ್ದರೂ ಸಹ ಪಾರಲೌಕಿಕ ತಂದೆಯನ್ನು ನೆನಪು ಮಾಡುತ್ತಾರೆ. ಇಲ್ಲಂತೂ ಇದು ಅದ್ಭುತವಾಗಿದೆ – ತಂದೆ ಮತ್ತು ದಾದಾ. ಇಬ್ಬರೂ ಕುಳಿತಿದ್ದಾರೆ. ಇದನ್ನೂ ನೀವು ಮಕ್ಕಳು ತಿಳಿದುಕೊಂಡಿದ್ದೀರಿ ಆದರೂ ಮತ್ತೆ-ಮತ್ತೆ ಮರೆತು ಬಿಡುತ್ತೀರಿ. ಪ್ರಜಾಪಿತ ಬ್ರಹ್ಮನೆಂದು ಗಾಯನವಿದೆಯಲ್ಲವೆ. ಅವರು ಈಗಲೇ ಸಿಗುತ್ತಾರೆ. ಪ್ರಜಾಪಿತ ಬ್ರಹ್ಮನು ಸಾಕಾರಿಯಾಗಿದ್ದಾರೆ, ಶಿವನು ನಿರಾಕಾರನಾಗಿದ್ದಾರೆ. ಸಾಕಾರ ಮತ್ತು ನಿರಾಕಾರ ಇಬ್ಬರು ಒಟ್ಟಿಗೆ ಇದ್ದಾರೆ, ಇಬ್ಬರದು ಶ್ರೇಷ್ಠ ಸ್ಥಾನವಾಗಿದೆ. ಇವರಿಗಿಂತಲೂ ಹಿರಿಯರು ಮತ್ತ್ಯಾರೂ ಇಲ್ಲ ಆದರೂ ಎಷ್ಟು ಸಾಧಾರಣ ರೀತಿಯಿಂದ ಕುಳಿತಿದ್ದಾರೆ. ವಿದ್ಯೆಯೂ ಸಹ ಮಕ್ಕಳಿಗಾಗಿ ಎಷ್ಟು ಸಹಜವಾಗಿದೆ! ತಂದೆಯು ಕೇವಲ ಇಷ್ಟನ್ನೇ ಹೇಳುತ್ತಾರೆ – ತಮ್ಮನ್ನು ಆತ್ಮನೆಂದು ತಿಳಿದುಕೊಳ್ಳಿ, ಆತ್ಮವು ಅವಿನಾಶಿಯಾಗಿದೆ, ಈ ದೇಹವು ವಿನಾಶಿಯಾಗಿದೆ. ಆತ್ಮವು ಒಂದು ಶರೀರವನ್ನು ಬಿಟ್ಟು ಹೋಗಿ ಮತ್ತೊಂದು ಶರೀರವನ್ನು ತೆಗೆದುಕೊಳ್ಳುತ್ತದೆ, ನಿಮಗೆ ಅಳುವ ಅವಶ್ಯಕತೆಯಿಲ್ಲ. ಮನುಷ್ಯರು ಶರೀರವನ್ನು ನೆನಪು ಮಾಡಿಕೊಳ್ಳುವುದರಿಂದ ಅಳುತ್ತಾರೆ, ನೀವು ಅಳುವ ಅವಶ್ಯಕತೆಯಿಲ್ಲ. ಸತ್ಯಯುಗದಲ್ಲಿ ಎಂದೂ ಅಳುವುದಿಲ್ಲ, ಅಲ್ಲಿ ಮೋಹಜೀತರಾಗಿರುತ್ತಾರೆ. ಇವೆಲ್ಲಾ ಮಾತುಗಳನ್ನು ನಿಮಗೆ ಸಂಗಮದಲ್ಲಿಯೇ ತಿಳಿಸಲಾಗುತ್ತದೆ. ನಿಮಗೆ ಈ ಲಕ್ಷ್ಮೀ-ನಾರಾಯಣರ ಚಿತ್ರವನ್ನು ನೋಡಿ ಬಹಳ ಖುಷಿಯಿರಬೇಕು ಆದ್ದರಿಂದ ತಂದೆಯು ತಿಳಿಸಿದ್ದಾರೆ – ಈ ಲಕ್ಷ್ಮೀ-ನಾರಾಯಣ, ತ್ರಿಮೂರ್ತಿಯ ಬ್ಯಾಡ್ಜ್ನ್ನು ಜೇಬಿನಲ್ಲಿ ಹಾಕಿಕೊಳ್ಳಿ, ಪದೇ-ಪದೇ ಜೇಬಿನಿಂದ ತೆಗೆದು ನೋಡುತ್ತಾ ಇರಿ. ಓಹೋ! ನಾವೇ ಈ ರೀತಿ ಆಗಲಿದ್ದೇವೆ. ಆಗ ಬಹಳ ಖುಷಿಯಾಗುವುದು. ಅನ್ಯರಿಗೂ ಸಹ ತೋರಿಸಿ ಖುಷಿ ಪಡಿಸಿ ನಾವು ಈ ರೀತಿಯಾಗುತ್ತಿದ್ದೇವೆ ಎಂದು. ನೋಡುತ್ತಿದ್ದಂತೆಯೇ ಖುಷಿಯಾಗುವುದು – ನಾನಂತೂ ಶಿವ ತಂದೆಯ ಮಗುವಾಗಿದ್ದೇನೆ, ನನಗೆ ಯಾವುದೇ ಮಾತಿನ ಚಿಂತೆಯಿಲ್ಲ. ಏನಾದರೂ ನಷ್ಟವಾದರೆ ಏನಾಯಿತು! ನಾನಂತೂ ಭವಿಷ್ಯ 21 ಜನ್ಮಗಳಿಗಾಗಿ ಪದಮಾಪತಿಯಾಗುತ್ತೇನೆ.

ಬ್ರಹ್ಮಾತಂದೆಯು ಎಲ್ಲವನ್ನು ಕೊಟ್ಟು ಬಿಟ್ಟರು ಅಂದಮೇಲೆ ಲಾಭದಲ್ಲಿದ್ದಾರೆಯೋ ಅಥವಾ ನಷ್ಟದಲ್ಲಿದ್ದಾರೆಯೋ! ಈಗ ತಂದೆಯು ಸನ್ಮುಖದಲ್ಲಿ ತಿಳಿಸುತ್ತಿದ್ದಾರೆ, ನಿಮ್ಮ ಈ ಹಣ-ಅಂತಸ್ತು ಎಲ್ಲವೂ ಮಣ್ಣು ಪಾಲಾಗಲಿದೆ. ತಮ್ಮ ಜೀವನವನ್ನು ಸಫಲ ಮಾಡಿಕೊಳ್ಳಬೇಕೆಂದರೆ ತಮ್ಮ ತನು, ಮನ, ಧನವನ್ನು ಇದರಲ್ಲಿ ತೊಡಗಿಸಿರಿ. ನಂತರ ಇದಕ್ಕೆ ಪ್ರತಿಯಾಗಿ ನಿಮಗೆ ಏನು ಸಿಗುತ್ತದೆಯೆಂಬುದನ್ನು ನೋಡಿರಿ. ಆತ್ಮವು ಪಾರಸವಾಗುತ್ತದೆ ಮತ್ತು ಶರೀರವೂ ಸುಂದರ, ಧನವೂ ಅಪಾರವಾಗಿ ಸಿಗುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ನಾನು ಶಿವ ತಂದೆಯ ಮಗುವಾಗಿದ್ದೇನೆ, ನಾನು ಭವಿಷ್ಯ 21 ಜನ್ಮಗಳಿಗಾಗಿ ಪದಮಾಪತಿಯಾಗುತ್ತೇನೆ ಎಂಬ ಖುಷಿಯಲ್ಲಿರಬೇಕು ಮತ್ತು ಎಲ್ಲರನ್ನೂ ಖುಷಿ ಪಡಿಸಬೇಕಾಗಿದೆ. ಯಾವುದೇ ಮಾತಿನ ಚಿಂತೆ ಮಾಡಬಾರದು.

2. ಒಬ್ಬ ತಂದೆಯ ಅದ್ವೈತ ಮತದಂತೆ ನಡೆದು ಬೇಹದ್ದಿನ ವೈರಾಗಿಗಳಾಗಬೇಕು. ಒಬ್ಬ ತಂದೆಯನ್ನು ಫಾಲೋ ಮಾಡಬೇಕಾಗಿದೆ.

ವರದಾನ:-

ವಿಶ್ವ ಕಲ್ಯಾಣಕಾರಿ ಆಗುವುದಕ್ಕಾಗಿ – ಮುಖ್ಯವಾಗಿ ಎರಡು ಧಾರಣೆಗಳ ಅವಶ್ಯಕತೆಯಿದೆ. ಒಂದು – ಈಶ್ವರೀಯ ಆತ್ಮಿಕ ಸುಗಂಧ ಹಾಗೂ ಇನ್ನೊಂದು – ದಯೆ. ಒಂದುವೇಳೆ ಇವೆರಡೂ ಒಟ್ಟೊಟ್ಟಿಗೆ ಹಾಗೂ ಸಮಾನವಾಗಿ ಇದ್ದರೆ ಆತ್ಮೀಯತೆಯ ಸ್ಥಿತಿಯಾಗಿ ಬಿಡುತ್ತದೆ. ಹಾಗಾದರೆ ಯಾವಾಗ ಯಾವುದೇ ಕರ್ತವ್ಯವನ್ನು ಮಾಡುತ್ತೀರಿ ಅಥವಾ ಮುಖದಿಂದ ಶಬ್ಧಗಳ ವರ್ಣನೆ ಮಾಡುತ್ತೀರೆಂದರೆ ಪರಿಶೀಲನೆ ಮಾಡಿರಿ – ದಯೆ ಹಾಗೂ ಆತ್ಮಿಕ ಸುಗಂಧವೆರಡೂ ಸಮಾನ ರೂಪದಲ್ಲಿದೆಯೇ? ಶಕ್ತಿಗಳ ಚಿತ್ರಗಳಲ್ಲಿ ಇವೆರಡು ಗುಣಗಳ ಸಮಾನತೆಯನ್ನು ತೋರಿಸುತ್ತಾರೆ. ಇದರ ಆಧಾರದ ಮೇಲೆ ವಿಶ್ವ ನವ ನಿರ್ಮಾಣದ ನಿಮಿತ್ತರಾಗಬಹುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top