28 December 2021 KANNADA Murli Today | Brahma Kumaris

Read and Listen today’s Gyan Murli in Kannada

December 27, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನಾನು ಆತ್ಮನಾಗಿದ್ದೇನೆ, ನಾನು ಆತ್ಮನಾಗಿದ್ದೇನೆ... ಎಂದು ಅಭ್ಯಾಸ ಮಾಡಿರಿ, ಶರೀರದ ಪರಿವೆಯನ್ನು ಬಿಡಬೇಕು, ಕೇವಲ ಶಿವ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ಮನೆಗೆ ಹೋಗಬೇಕಾಗಿದೆ”

ಪ್ರಶ್ನೆ:: -

ಶಿವ ತಂದೆಗೆ ಯಾವ ಮಕ್ಕಳ ಪ್ರತಿ ಬಹಳ-ಬಹಳ ದಯೆ ಬರುತ್ತದೆ?

ಉತ್ತರ:-

ಯಾವ ಮಕ್ಕಳು ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥವಾಗಿ ಕಳೆಯುತ್ತಾರೆ, ತಂದೆಯ ಮಕ್ಕಳಾಗಿಯೂ ತಂದೆಯ ಸೇವೆ ಮಾಡುವುದಿಲ್ಲವೋ ಅವರ ಪ್ರತಿ ತಂದೆಗೆ ಬಹಳ ದಯೆ ಬರುತ್ತದೆ. ತಂದೆಯು ತಿಳಿಸುತ್ತಾರೆ – ನನ್ನ ಮಕ್ಕಳಾಗಿದ್ದೀರೆಂದರೆ ಫಸ್ಟ್ಗ್ರೇಡ್ ಆಗಿ ತೋರಿಸಿರಿ. ಯಾವ ಜ್ಞಾನರತ್ನಗಳು ಸಿಗುತ್ತವೆಯೋ ಅದರ ದಾನ ಮಾಡಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಅದೃಷ್ಟವನ್ನು ಬೆಳಗಿಸಿಕೊಂಡು ಬಂದಿದ್ದೇನೆ…….

ಓಂ ಶಾಂತಿ. ಹೇಗೆ ತಂದೆಯು ಜ್ಞಾನ ಸಾಗರನಾಗಿದ್ದಾರೆ, ಮಕ್ಕಳಿಗೂ ಸಹ ಸೃಷ್ಟಿಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾ ಇರುತ್ತಾರೆ ಮತ್ತು ಚಿತ್ರಗಳ ಬಗ್ಗೆ ಚೆನ್ನಾಗಿ ತಿಳಿಸುತ್ತಿರುತ್ತಾರೆ. ತಂದೆಗೆ ಏಣಿ ಚಿತ್ರದ ಮೇಲೆ ಇಡೀ ರಾತ್ರಿ ವಿಚಾರ ನಡೆಯುತ್ತಿತ್ತು ಏಕೆಂದರೆ ಇದರ ಬಗ್ಗೆ ತಿಳಿಸಲು ಎಲ್ಲದಕ್ಕಿಂತ ಒಳ್ಳೆಯ ಚಿತ್ರವಾಗಿದೆ ಮತ್ತು ಭಾರತವಾಸಿಗಳಿಗೋಸ್ಕರ ಇದೆ. ಶಿವ ತಂದೆಯು ಜ್ಞಾನಸಾಗರನಾಗಿದ್ದಾರೆ, ಈ ತಂದೆಯೂ ಸಹ ಜ್ಞಾನದ ಹುರುಪು ತುಂಬುತ್ತಾ ಇರುತ್ತಾರೆ. ಇದಕ್ಕೆ ವಿಚಾರ ಸಾಗರ ಮಂಥನವೆಂದು ಹೇಳಲಾಗುತ್ತದೆ. ನೀವು ಮಕ್ಕಳಿಗೆ ಬಹಳ ಕಡಿಮೆ ವಿಚಾರ ಸಾಗರ ಮಂಥನ ನಡೆಯುತ್ತದೆ. ಕೆಲವು ಮಕ್ಕಳಿಗಂತೂ ವಿಚಾರ ಸಾಗರ ಮಂಥನ ನಡೆಯುವುದೇ ಇಲ್ಲ. ಪ್ರತಿಯೊಬ್ಬರೂ ಬುದ್ಧಿಯನ್ನು ಓಡಿಸಬೇಕು. ಏಣಿಯ ಚಿತ್ರದ ಮೇಲೆ ಬಹಳ ವಿಚಾರಗಳು ನಡೆಯುತ್ತವೆ. ಮೂಲವತನವನ್ನೂ ಸಹ ಮೇಲ್ಭಾಗದಲ್ಲಿ ತೋರಿಸಬೇಕಾಗಿದೆ. ಏಣಿಯಂತೂ ಸ್ಥೂಲವತನದ್ದಾಗಿದೆ, 84 ಜನ್ಮದ್ದಾಗಿದೆ. ಜ್ಞಾನವಿಲ್ಲದಿದ್ದರೆ ಈ ಚಿತ್ರವನ್ನು ಯಾರೂ ರಚಿಸಲು ಸಾಧ್ಯವಿಲ್ಲ. ಜ್ಞಾನವು ನೀವು ಮಕ್ಕಳಲ್ಲಿಯೇ ಇದೆ. ಏಣಿಚಿತ್ರವನ್ನು ಚಿತ್ರಿಸುತ್ತಿದ್ದರೂ ಸಹ ವಿಚಾರ ಸಾಗರ ಮಂಥನ ನಡೆಯುತ್ತಿರಬೇಕು. ಇದು ಬಹಳ ಒಳ್ಳೆಯ ಚಿತ್ರಗಳಾಗಿವೆ, ಮೇಲೆ ಮೂಲವತನವೂ ಸಹ ಅವಶ್ಯವಾಗಿ ಇರಬೇಕು. ಆತ್ಮರು ಮೂಲವತನದಲ್ಲಿ ನಕ್ಷತ್ರಗಳಂತೆ ಇರುತ್ತಾರೆಂದು ತಿಳಿಸಲಾಗುತ್ತದೆ. ಮೂಲವತನದ ನಂತರ ಬ್ರಹ್ಮಾ, ವಿಷ್ಣು, ಶಂಕರ ಪುರಿ, ಅದಕ್ಕೆ ಸೂಕ್ಷ್ಮವತನವೆಂದು ಹೇಳಲಾಗುತ್ತದೆ. ಏಣಿಯ ಚಿತ್ರದಲ್ಲಿ ಕೇವಲ ಭಾರತವನ್ನೇ ತೋರಿಸುತ್ತಾರೆ. ಭಾರತವು ಪಾವನವಾಗಿತ್ತು, ಈಗ ಪತಿತವಾಗಿದೆ. ಈ ಮಾತುಗಳನ್ನು ಅದರಲ್ಲಿ ಬರೆಯಬೇಕಾಗುತ್ತದೆ. ಮನುಷ್ಯರು ಏನನ್ನೂ ತಿಳಿದುಕೊಂಡಿಲ್ಲ. ಯಾರು ಪೂಜ್ಯರಾಗಿದ್ದರೋ ಅವರೇ ಪೂಜಾರಿಯಾಗಿದ್ದಾರೆ, ಇದು ಯಾರಿಗೂ ತಿಳಿದಿಲ್ಲ. ನಿಮ್ಮಲ್ಲಿಯೂ ನಂಬರ್ವಾರ್ ತಿಳಿದುಕೊಂಡಿದ್ದೀರಿ. ರಾಜಧಾನಿಯು ಸ್ಥಾಪನೆಯಾಗುತ್ತಿದೆ. ಕೆಲವರಂತೂ ಬಹಳ ಚೆನ್ನಾಗಿ ಪುರುಷಾರ್ಥ ಮಾಡತೊಡಗುತ್ತಾರೆ. ನಾನು ಆತ್ಮನಾಗಿದ್ದೇನೆ…. ಶರೀರವನ್ನು ಮರೆಯುತ್ತಾರೆ, ಮತ್ತೇನೂ ಕಾಣುವುದಿಲ್ಲ ಏಕೆಂದರೆ ತಂದೆಯು ತಿಳಿಸುತ್ತಾರೆ – ನೀವು ತಮ್ಮನ್ನು ಆತ್ಮನೆಂದು ತಿಳಿಯಿರಿ. ಶರೀರದ ಪರಿವೆಯು ಹೊರಟು ಹೋಗಲಿ. ತಾನು ಸತ್ತರೆ ತನ್ನ ಪಾಲಿಗೆ ಜಗತ್ತೇ ಸತ್ತಂತೆ ಎಂದು ಹೇಳುತ್ತಾರಲ್ಲವೆ. ಶಿವ ತಂದೆಯನ್ನು ನೆನಪು ಮಾಡುತ್ತಾ-ಮಾಡುತ್ತಾ ತಮ್ಮ ಮನೆಗೆ ಹೋಗಬೇಕಾಗಿದೆ. ಈ ಸ್ಥಿತಿಯನ್ನು ರೂಪಿಸಿಕೊಳ್ಳುವುದರಲ್ಲಿಯೇ ಪರಿಶ್ರಮವಿದೆ, ಏಣಿಚಿತ್ರದಲ್ಲಿಯೂ ಸಹ ತಿಳಿಸಲಾಗುತ್ತದೆ – ಭಾರತದಲ್ಲಿ ಆದಿ ಸನಾತನ ದೇವಿ-ದೇವತಾ ಧರ್ಮವಿದ್ದಾಗ ಸುಖ, ಶಾಂತಿ, ಪವಿತ್ರತೆಯಿತ್ತು. ಈಗ ಮನುಷ್ಯರು ದುಃಖಿಯಾಗಿದ್ದಾರೆ ಆದ್ದರಿಂದ ಮನೆಯನ್ನು ನೆನಪು ಮಾಡುತ್ತಾರೆ. ಯಾರಿಗೆ ಆಗಲಿ ಈ ಏಣಿಚಿತ್ರದಲ್ಲಿ ತಿಳಿಸಲು ಬಹಳ ಚೆನ್ನಾಗಿರುತ್ತದೆ. ಏಣಿಯ ಮುಂದೆ ಹೋಗಿ ಕುಳಿತುಕೊಂಡಾಗಲೂ ಸಹ ಬುದ್ಧಿಯಲ್ಲಿರಲಿ – ನಾವು ಭಾರತವಾಸಿಗಳು 84 ಜನ್ಮಗಳನ್ನು ತೆಗೆದುಕೊಂಡಿದ್ದೇವೆ. 84 ಜನ್ಮಗಳನ್ನು ಸಿದ್ಧ ಮಾಡಬೇಕಾಗಿದೆ ನಂತರ ಈ ಲೆಕ್ಕದಿಂದ ತಿಳಿಸಬೇಕು, ಯಾರು ಅರ್ಧಕಲ್ಪದ ನಂತರ ಬರುವರೋ ಅವರದು ಅವಶ್ಯವಾಗಿ ಕಡಿಮೆ ಜನ್ಮಗಳಿರುತ್ತವೆ. ಇಡೀ ದಿನ ಬುದ್ಧಿಯಲ್ಲಿ ಈ ಜ್ಞಾನವು ಹನಿಯುತ್ತಾ ಇರಲಿ. ಸತ್ಯ-ತ್ರೇತಾಯುಗದಲ್ಲಿ ಸಂಪೂರ್ಣ ನಿರ್ವಿಕಾರಿ ಪೂಜ್ಯರಾಗಿದ್ದಿರಿ ನಂತರ ವಿಕಾರೀ ಪೂಜಾರಿಗಳಾದಿರಿ. ವಿಕಾರಿಗಳಾಗುವ ಕಾರಣದಿಂದಲೇ ತಮ್ಮನ್ನು ಹಿಂದೂಗಳೆಂದು ಕರೆಸಿಕೊಳ್ಳುತ್ತಾ ಇರುತ್ತಾರೆ. ಮತ್ತ್ಯಾರೂ ತಮ್ಮ ಹೆಸರನ್ನು ಬದಲಾಯಿಸಿಕೊಂಡಿಲ್ಲ. ಈಗ ನೀವು ಮಕ್ಕಳಿಗೆ ಈ ಜ್ಞಾನವು ಸಿಗುತ್ತದೆ, ಜ್ಞಾನಸಾಗರ ತಂದೆಯು ನಿಮಗೆ ಹೊಸ ಜ್ಞಾನವನ್ನು ಕೊಡುತ್ತಿದ್ದಾರೆ. ಏಣಿಯ ಚಿತ್ರದ ಬಗ್ಗೆ ಮಕ್ಕಳು ಬಹಳ ಗಮನ ಕೊಡಬೇಕಾಗಿದೆ. ಕೇವಲ ಚಿತ್ರದ ಮುಂದೆ ಕುಳಿತುಕೊಂಡರೂ ಸಹ ಎಲ್ಲವೂ ಬುದ್ಧಿಯಲ್ಲಿ ಬಂದು ಬಿಡುತ್ತದೆ. ಇಡೀ ರಾತ್ರಿ ಬುದ್ಧಿ ಓಡುತ್ತಿರಲಿ. 84 ಜನ್ಮಗಳ ಚಕ್ರದ ಬಗ್ಗೆ ಹೇಗೆ ತಿಳಿಸುವುದು ಎಂದು. ಅರ್ಧಕಲ್ಪ ರಾವಣ ರಾಜ್ಯವಾಗಿದೆ ನಂತರ ಯಾರು ಬರುವವರಿದ್ದಾರೆಯೋ ಅವರು ಈ ಜ್ಞಾನವನ್ನು ತೆಗೆದುಕೊಳ್ಳುವುದಿಲ್ಲ. ಸತ್ಯ-ತ್ರೇತಾಯುಗದಲ್ಲಿ ಬರುವವರೇ ತಿಳಿದುಕೊಳ್ಳುತ್ತಾರೆ. ಯಾರು ಸತ್ಯ-ತ್ರೇತಾ ಯುಗದಲ್ಲಿ ಬರುವುದೇ ಇಲ್ಲವೋ ಅವರು ಈ ಜ್ಞಾನವನ್ನು ತಿಳಿದುಕೊಳ್ಳುವುದೂ ಇಲ್ಲ. ಈಗಂತೂ ಭಾರತದ ಜನಸಂಖ್ಯೆಯುಎಷ್ಟೊಂದಿದೆ. ಸತ್ಯ-ತ್ರೇತಾಯುಗದಲ್ಲಿ ಕೇವಲ ಒಬ್ಬ ಮಗ, ಒಬ್ಬ ಮಗಳಿರುತ್ತಾರೆ. ನಂತರ ಸ್ವಲ್ಪ ಗಡಿಬಿಡಿಯಾಗುತ್ತದೆ ಆದರೆ ವಿಕಾರದ ಮಾತಿರುವುದಿಲ್ಲ. ರಾವಣ ರಾಜ್ಯವಾಗುವುದೇ ದ್ವಾಪರದಲ್ಲಿ ಆದರೆ ತ್ರೇತಾದಲ್ಲಿ ಎರಡು ಕಲೆಗಳು ಕಡಿಮೆಯಾಗುವುದರಿಂದ ಪವಿತ್ರತೆಯು ಸ್ವಲ್ಪ ಕಡಿಮೆಯಾಗಿ ಬಿಡುತ್ತದೆ. ರಾವಣ ರಾಜ್ಯ ಮತ್ತು ರಾಮ ರಾಜ್ಯವನ್ನೂ ಸಹ ಯಾರು ತಿಳಿದುಕೊಂಡಿಲ್ಲ. ರಾಜ್ಯ ಪದವಿಯನ್ನು ಪಡೆಯುವವರು ಚೆನ್ನಾಗಿ ಓದುತ್ತಾರೆ. ಅನ್ಯರ ಕಲ್ಯಾಣ ಮಾಡುವ ಉಮ್ಮಂಗವಿರಬೇಕಾಗಿದೆ ಆದರೆ ಅದೃಷ್ಟದಲ್ಲಿ ಇಲ್ಲದಿದ್ದರೆ ಪುರುಷಾರ್ಥವನ್ನೇ ಮಾಡುವುದಿಲ್ಲ. ಧಾರಣೆ ಮಾಡುತ್ತಾ ಹೋದಾಗ ಸೇವೆಗಾಗಿ ತಂದೆಯು ಕಳುಹಿಸುವರು. ಯಾರಿಗೆ ಸರ್ವೀಸಿನ ಉಮ್ಮಂಗವಿದೆಯೋ ಅವರು ಹಗಲು-ರಾತ್ರಿ ಸರ್ವೀಸ್ ಮಾಡುತ್ತಾರೆ. ಏಣಿಯ ರಹಸ್ಯವನ್ನು ಯಾರಾದರೂ ಅರ್ಥ ಮಾಡಿಕೊಂಡರೆ ಅವರಿಗೆ ಬಹಳ ಖುಷಿಯಾಗುವುದು. ತಂದೆಯು ಜ್ಞಾನಸಾಗರನಾಗಿದ್ದಾರೆ, ನಾವು ಮಕ್ಕಳು ನದಿಗಳಾಗಿದ್ದೇವೆ, ಅಂತಹ ಶೋ ತೋರಿಸಬೇಕಾಗಿದೆ. ದಿನ-ಪ್ರತಿದಿನ ವೃದ್ಧಿಯಾಗುತ್ತಾ ಹೋಗುವುದು. ರಾಜಧಾನಿಯಂತೂ ಸ್ಥಾಪನೆಯಾಗಲೇಬೇಕಾಗಿದೆ. ಏಣಿಯಲ್ಲಿಯೂ ತೋರಿಸಲಾಗಿದೆ – ಸತ್ಯಯುಗ ಶ್ರೇಷ್ಠಾಚಾರಿ ಪಾವನ ಭಾರತವೇ ಈಗ ಪತಿತ ಭ್ರಷ್ಠಾಚಾರಿ ದುರ್ಗತಿಯನ್ನು ಹೊಂದಿದ ಭಾರತವಾಗಿದೆ. ಎಲ್ಲರೂ ದುರ್ಗತಿಯನ್ನು ಹೊಂದಿದ್ದಾರೆ ಆದ್ದರಿಂದ ತಂದೆಯು ಬಂದು ಸದ್ಗತಿ ಮಾಡುತ್ತಾರೆ. ಇದರಲ್ಲಿ ಭಲೆ ಕೆಲವು ಆತ್ಮರು ಒಳ್ಳೆಯವರೂ ಅಥವಾ ಕೆಟ್ಟವರೂ ಇರುತ್ತಾರೆ. ಧಾರ್ಮಿಕ ವ್ಯಕ್ತಿಗಳು ಇಷ್ಟೊಂದು ಪಾಪಕರ್ಮ ಮಾಡುವುದಿಲ್ಲ, ವೇಶ್ಯೆಯರು ಮೊದಲಾದವರು ಬಹಳ ಪಾಪ ಮಾಡುತ್ತಾರೆ. ಇದು ವೇಶ್ಯಾಲಯವಾಗಿದೆ, ಸತ್ಯಯುಗ ಶಿವಾಲಯವಾಗಿರುತ್ತದೆ. ಅದನ್ನು ಶಿವ ತಂದೆಯು ಸ್ಥಾಪನೆ ಮಾಡುತ್ತಾರೆ. ಅದಕ್ಕೆ ಕೃಷ್ಣಪುರಿಯೆಂದೂ ಹೇಳುತ್ತಾರೆ ಅರ್ಥಾತ್ ಕೃಷ್ಣಾಲಯವೆಂದಾದರೂ ಹೇಳಬಹುದು ಆದರೆ ಶಿವ ತಂದೆಯೇ ಸ್ಥಾಪನೆ ಮಾಡುತ್ತಾರಲ್ಲವೆ. ಈ ಏಣಿಯ ಚಿತ್ರವು ಅವಶ್ಯವಾಗಿದೆ, ಇದರ ಕಡೆ ಬಹಳ ಗಮನ ಕೊಡಬೇಕಾಗಿದೆ. ಏಣಿಯ ಚಿತ್ರವನ್ನು ನೋಡುತ್ತಿದ್ದಂತೆಯೇ ಇಡೀ 84 ಜನ್ಮಗಳ ಚಕ್ರದ ಜ್ಞಾನವು ಬುದ್ಧಿಯಲ್ಲಿ ಬಂದು ಬಿಡುತ್ತದೆ ಆದರೆ ಆಂತರ್ಯದಲ್ಲಿ ಬಹಳ ಶುದ್ಧವಾಗಿರಬೇಕು. ಶಿವ ತಂದೆಯೊಂದಿಗೆ ಯೋಗವಿದ್ದಾಗಲೇ ನಶೆಯೇರುವುದು ಮತ್ತು ಪದವಿಯನ್ನೂ ಪಡೆಯುವರು. ಏನು ಸಿಕ್ಕಿದರೆ ಅದೇ ಸಾಕು, ಅದೃಷ್ಟದಲ್ಲಿ ಏನಿರುವುದೋ ಅದೇ ಆಗುವುದು ಎಂದು ಹೇಳಬಾರದು. ಸರ್ವೀಸಿನ ಉಮ್ಮಂಗವಿರಬೇಕು. ಶರೀರದ ಮೇಲೆ ಯಾವುದೇ ಭರವಸೆಯಿಲ್ಲ, ಮುಂದೆ ಹೋದಂತೆ ವಿಕೋಪಗಳೂ ಸಹ ಬಹಳ ಜೋರಾಗಿ ಬರುತ್ತವೆ ನಂತರ ಖಾಲಿ ಕೈಯಲ್ಲಿ ಹೋಗುತ್ತಾರೆ. ಭೂಕಂಪಗಳಲ್ಲಿ ಲಕ್ಷಾಂತರ ಮಂದಿ ಶರೀರ ಬಿಡುತ್ತಾರೆ ಅಂದಮೇಲೆ ಭಯವಿರಬೇಕು. ಯೋಗದ ಯಾತ್ರೆಯಿಂದ ನಾವು ಸತೋಪ್ರಧಾನರಾಗಿ ಅನ್ಯರನ್ನೂ ಮಾಡಬೇಕಾಗಿದೆ. ಧನ ದಾನ ಮಾಡಿದರೆ ಅದೆಂದೂ ಮುಗಿಯುವುದಿಲ್ಲ, ಪರಿಶ್ರಮ ಪಡಬೇಕಾಗಿದೆ. ತಂದೆಯಂತೂ ತಿಳಿಸುತ್ತಲೇ ಇರುತ್ತಾರೆ – ಮಕ್ಕಳೇ, 21 ಜನ್ಮಗಳಿಗಾಗಿ ತಮ್ಮ ಕಾಲಿನ ಮೇಲೆ ನಿಂತಿರಬೇಕಾಗಿದೆ ಆದ್ದರಿಂದ ಚೆನ್ನಾಗಿ ಪುರುಷಾರ್ಥ ಮಾಡುತ್ತಾ ಇರಿ. ಈಗಲೇ ಪುರುಷಾರ್ಥದ ಸಮಯವಾಗಿದೆ, ಪ್ರಪಂಚದಲ್ಲಿ ಯಾರಿಗೂ ಸಹ ಹೇಗೆ 21 ಜನ್ಮಗಳಿಗಾಗಿ ರಾಜ್ಯಭಾಗ್ಯವು ಸಿಗುತ್ತದೆಯೆಂಬುದು ತಿಳಿದಿಲ್ಲ. ನೀವು ಈ ಏಣಿಯ ಚಿತ್ರದಲ್ಲಿ ಬಹಳ ಚೆನ್ನಾಗಿ ತಿಳಿಸಬಹುದು. 84 ಜನ್ಮಗಳು ಹೇಗೆ? ಎಂದು. ಮೇಲ್ಭಾಗದಲ್ಲಿಯೂ ಸಹ ಬರೆಯಲ್ಪಟ್ಟಿದೆ – ಶಿವ ಭಗವಾನುವಾಚ, ನಿರಾಕಾರ ಪತಿತ-ಪಾವನ ಜ್ಞಾನಸಾಗರನು ತಿಳಿಸುತ್ತಿದ್ದಾರೆ. ಯಾರಿಗೆ ತಿಳಿಸುತ್ತಾರೆಯೋ ಅವರು ಮತ್ತೆ ಅನ್ಯರಿಗೂ ತಿಳಿಸುತ್ತಾರೆ – ಮಕ್ಕಳೇ, ಈಗ ನಿಮಗೆ ಕುಬೇರನ ಖಜಾನೆ ಸಿಗುತ್ತದೆ ಅಂದಮೇಲೆ ಅದನ್ನು ತೆಗೆದುಕೊಳ್ಳಬೇಕಲ್ಲವೆ. ಶ್ರೇಷ್ಠ ಪದವಿಯನ್ನು ಪಡೆಯಬೇಕು, ಇದು ಪ್ರವೃತ್ತಿ ಮಾರ್ಗದ ಜ್ಞಾನವಾಗಿದೆ. ಒಂದೇ ಮನೆಯಲ್ಲಿ ಒಬ್ಬರು ಜ್ಞಾನದಲ್ಲಿದ್ದಾರೆ, ಇನ್ನೊಬ್ಬರು ಇಲ್ಲವೆಂದರೆ ಅವಶ್ಯವಾಗಿ ಏರುಪೇರಾಗುವುದು. ಈಗ ಸಸಿಯ ನಾಟಿಯಾಗುತ್ತಿದೆ. ನಾವು ಪೂಜ್ಯರಿಂದ ಹೇಗೆ ಪೂಜಾರಿಗಳಾದೆವು ಎಂಬ ರಹಸ್ಯವು ಬಹಳ ತಿಳಿದುಕೊಳ್ಳುವಂತಾಗಿದೆ. ಯಾರು ಎಲ್ಲರಿಗಿಂತ ಹೆಚ್ಚು ಪೂಜ್ಯಪಾವನರಾಗುವರೋ ಅವರೇ ಹೆಚ್ಚು ಪತಿತರಾಗುತ್ತಾರೆ. ಇವರ ಬಹಳ ಜನ್ಮಗಳ ಅಂತಿಮದಲ್ಲಿಯೇ ಪ್ರವೇಶ ಮಾಡಿದ್ದಾರೆ. ಎಲ್ಲರೂ ಪತಿತರಾಗಿದ್ದಾರಲ್ಲವೆ, ತಂದೆಯೂ ತಿಳಿಸುತ್ತಾರೆ, ದಾದಾರವರೂ ತಿಳಿಸುತ್ತಾರೆ ಮತ್ತು ದಾದಿಯರೂ ತಿಳಿಸುತ್ತಾರೆ. ಸಹೋದರ-ಸಹೋದರಿಯರ ಕರ್ತವ್ಯವೇ ಇದಾಗಿದೆ. ಗೃಹಸ್ಥ ವ್ಯವಹಾರದಲ್ಲಿರುತ್ತಾ, ಕಮಲಪುಷ್ಫ ಸಮಾನರಾಗಿದ್ದರೆ ನಿಮಗಿಂತಲೂ ತೀಕ್ಷ್ಣವಾಗಿ ಹೋಗುವರು. ಯಾರು ಮುಳ್ಳಿನ ಕಾಡಿನಲ್ಲಿರುತ್ತಾ ಸರ್ವೀಸ್ ಮಾಡುವರೋ ಅವರಿಗೆ ಹೆಚ್ಚು ಫಲ ಸಿಗುತ್ತದೆ ಅಂದರೆ ಗೃಹಸ್ಥ ವ್ಯವಹಾರದಲ್ಲಿರುತ್ತಾ ಬಹಳ ಚೆನ್ನಾಗಿ ಸರ್ವೀಸ್ ಮಾಡುತ್ತಾರೆಂದರೆ ಅವರಿಗೆ ಸರ್ವೀಸಿನಲ್ಲಿ ಬಹಳ ಮಜಾ ಬರುವುದು. ಶಿವ ತಂದೆಯೂ ಸಹ ಸಹಯೋಗವನ್ನಂತೂ ಕೊಡುತ್ತಾರಲ್ಲವೆ. ಸರ್ವೀಸನ್ನು ಬಿಟ್ಟು ಇಂತಹ ಸ್ಥಾನಕ್ಕೆ ಹೋಗಿ ಎಂದು ಹೇಳುತ್ತಾರೆ. ಹೇಗೆ ನೋಡಿ, ಪ್ರೋಜೆಕ್ಟರ್ ಶೋಗಾಗಿ ನಿಮಂತ್ರಣ ಸಿಗುತ್ತದೆ, ನಾಲ್ಕೈದು ಮುಖ್ಯ ಚಿತ್ರಗಳನ್ನು ತೆಗೆದುಕೊಂಡು ಹೋಗಿ ಅಲ್ಲಿ ಸರ್ವೀಸ್ ಮಾಡಿ ಬನ್ನಿರಿ. ಯಾರು ಸರ್ವೀಸಿನಲ್ಲಿ ಆಸಕ್ತಿ ಹೊಂದಿರುವರೋ ಅವರು ಬಾಬಾ, ನಾವು ಹೋಗಿ ತಿಳಿಸುತ್ತೇವೆಂದು ಹೇಳುತ್ತಾರೆ. ಅಲ್ಲಿ ಸೇವಾಕೇಂದ್ರಗಳನ್ನು ತೆರೆಯಬಹುದು, ಬಹಳಷ್ಟು ನಿಮಂತ್ರಣ ಸಿಗುತ್ತದೆ. ಸೇವೆಯು ವೃದ್ಧಿಯಾಗುತ್ತಾ ಇರುತ್ತದೆ. ತಂದೆಯು ಗಾಯನವನ್ನಂತೂ ಮಾಡುತ್ತಾರಲ್ಲವೆ. ನಿಮಗೂ ಬಹಳ ಚೆನ್ನಾಗಿ ಸರ್ವೀಸ್ ಮಾಡುತ್ತಾರೆ ಎಂದು. ಕೆಲವರಂತೂ ಸರ್ವೀಸ್ ಎಂದರೆ ಮೂರು ಮೈಲಿ ದೂರ ಓಡುತ್ತಾರೆ, ಸರ್ವೀಸಿನ ಉಮ್ಮಂಗವನ್ನು ಇಟ್ಟುಕೊಂಡಾಗ ಸಹಯೋಗವೂ ಸಿಗುತ್ತದೆ. ಎಷ್ಟು ತಂದೆಯ ಸರ್ವೀಸ್ ಮಾಡುವಿರೋ ಅಷ್ಟು ಶಕ್ತಿ ಸಿಗುತ್ತದೆ, ಆಯಸ್ಸು ಹೆಚ್ಚುತ್ತದೆ, ಖುಷಿಯ ನಶೆಯೇರುತ್ತದೆ. ತಮ್ಮ ಕುಲದಲ್ಲಿ ಪ್ರಸಿದ್ಧರೂ ಆಗುತ್ತಾರೆ. ಪುರುಷಾರ್ಥದಿಂದ ಇಷ್ಟೂ ಶ್ರೇಷ್ಠರಾಗುತ್ತೀರಿ ಅಂದಮೇಲೆ ಅಷ್ಟು ಪುರುಷಾರ್ಥ ಮಾಡಬೇಕಲ್ಲವೆ. ಚಲನೆಯಿಂದಲೇ ತಿಳಿದುಬರುತ್ತದೆ – ಯಾರಿಗೆ ಸರ್ವೀಸಿನ ಉಮ್ಮಂಗವಿದೆಯೆಂದು. ದಿನ-ರಾತ್ರಿ ತಮ್ಮ ಸಂಪಾದನೆಯ ಚಿಂತನೆ ಇಟ್ಟುಕೊಳ್ಳಬೇಕಾಗಿದೆ, ಬಹಳ ದೊಡ್ಡ ಸಂಪಾದನೆಯಾಗಿದೆ. ತಂದೆಗೂ ಸಹ ಕೆಲಕೆಲವೊಮ್ಮೆ ಹೋಗಿ ಮಕ್ಕಳನ್ನು ರಿಫ್ರೆಶ್ ಮಾಡುವುದೇ ಎಂದು ವಿಚಾರ ಬರುತ್ತದೆ. ತಂದೆಗೆ ಸೇವಾಧಾರಿ ಮಕ್ಕಳೇ ನೆನಪಿಗೆ ಬರುತ್ತಾರೆ. ಅಮೃತವೇಳೆ ವಿಚಾರ ಸಾಗರ ಮಂಥನದ ನರ್ತನವು ಚೆನ್ನಾಗಿ ನಡೆಯುತ್ತದೆ. ಯಾರದು ಯಾವ ಕೆಲಸವೋ ಅದರಲ್ಲಿಯೇ ತೊಡಗಿರುತ್ತಾರೆ. ಮುಂಜಾನೆ ವಿಚಾರ ಸಾಗರ ಮಂಥನ ನಡೆಯುತ್ತದೆ, ಮಕ್ಕಳೂ ಸಹ ಮೊದಲು ಮುರುಳಿಯನ್ನು ಚೆನ್ನಾಗಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ರಿವೈಜ್ ಮಾಡಬೇಕು ಅನಂತರ ಬಂದು ಮುರುಳಿಯನ್ನು ತಿಳಿಸಬೇಕು. ಮೊದಲು ತಂದೆಯು ರಾತ್ರಿ 2 ಗಂಟೆಗೆ ಎದ್ದು ಬರೆಯುತ್ತಿದ್ದರು ನಂತರ ಮುಂಜಾನೆ ಮಮ್ಮಾರವರು ಮುರುಳಿಯನ್ನು ಓದಿ ತಿಳಿಸುತ್ತಿದ್ದರು. ಭಲೆ ಮುರುಳಿ ಕೈಯಲ್ಲಿಲ್ಲದಿದ್ದರೂ ಸಹ ಬಹಳ ಚೆನ್ನಾಗಿ ತಿಳಿಸಬಲ್ಲರು. ಯಾವ-ಯಾವ ಮಕ್ಕಳಿಗೆ ಮುರುಳಿಯನ್ನು ಓದುವ ಮತ್ತು ಅದರ ಬಗ್ಗೆ ಚಿಂತನೆ ಮಾಡುವ ಆಸಕ್ತಿಯಿದೆಯೋ ಅವರು ಸರ್ವೀಸ್ ಮಾಡುತ್ತಾ ಇರುತ್ತಾರೆ. ಮುರುಳಿ ಓದುವುದರಿಂದ ಜಾಗೃತರಾಗಿ ಬಿಡುತ್ತಾರೆ. ಈ ಮುರುಳಿಯನ್ನು ಮುದ್ರಿಸುವ ಕೆಲಸವು ಬಹಳ ಜೋರಾಗಿ ನಡೆಯುವುದು, ಈ ಟೇಪ್ನಲ್ಲಿ ರೆಕಾರ್ಡ್ ಮಾಡುವ ಕಾರ್ಯವೂ ಸಹ ಮುಂದೆ ಹೆಚ್ಚುತ್ತಾ ಹೋಗುವುದು. ಮುರುಳಿಯು ವಿದೇಶದವರೆಗೂ ಹೋಗುವುದು. ಯಾರ ಬುದ್ಧಿಯಲ್ಲಿ ಆದರೂ ಕುಳಿತು ಬಿಟ್ಟರೆ ಒಮ್ಮೆಲೆ ನಶೆಯೇರುವುದು. ಏಳುತ್ತಾ-ಕುಳಿತುಕೊಳ್ಳುತ್ತಾ 84 ಜನ್ಮಗಳ ಚಕ್ರವು ಬುದ್ಧಿಯಲ್ಲಿ ಸುತ್ತುತ್ತಾ ಇರುವುದು. ಕೆಲವರ ಬುದ್ಧಿಯಲ್ಲಂತೂ ಏನೂ ಕುಳಿತುಕೊಳ್ಳುವುದಿಲ್ಲ, ಖುಷಿಯ ನಶೆಯೇರುವುದಿಲ್ಲ.

ನಿಮ್ಮದು ಇಡೀ ದಿನ ಇದೇ ಉದ್ಯೋಗವಿರಬೇಕು. ಇದು ಶ್ರೇಷ್ಠಾತಿ ಶ್ರೇಷ್ಠ ಉದ್ಯೋಗ(ವ್ಯಾಪಾರ)ಆಗಿದೆ. ತಂದೆಗೆ ವ್ಯಾಪಾರಿಯೆಂದೂ ಹೇಳಲಾಗುತ್ತದೆಯಲ್ಲವೆ. ಈ ಅವಿನಾಶಿ ಜ್ಞಾನ ರತ್ನಗಳ ವ್ಯಾಪಾರವನ್ನು ಕೆಲವರೇ ವಿರಳ ಮಾಡುವರು. ಇಡೀ ದಿನ ಬುದ್ಧಿಯಲ್ಲಿ ಇದೇ ಸುತ್ತುತ್ತಿರಬೇಕು ಮತ್ತು ಖುಷಿಯಲ್ಲಿ ಮಸ್ತರಾಗಿರಬೇಕು. ಇದು ಆಂತರಿಕ ಖುಷಿಯಾಗಿದೆ, ಆತ್ಮಕ್ಕೆ ಖುಷಿಯಾಗುತ್ತದೆ – ಓಹೋ! ನಮಗೆ ತಂದೆಯು ಸಿಕ್ಕಿ ಬಿಟ್ಟಿದ್ದಾರೆ. ಬೇಹದ್ದಿನ ತಂದೆಯು 84 ಜನ್ಮಗಳ ಕಥೆಯನ್ನು ತಿಳಿಸಿದ್ದಾರೆ. ಮಕ್ಕಳು ತಂದೆಗೆ, ಶಿಕ್ಷಕರಿಗೆ ಅಭಿನಂದನೆಗಳನ್ನು ತಿಳಿಸುತ್ತಾರಲ್ಲವೆ. ವಿದ್ಯಾರ್ಥಿಗಳು ಶಿಕ್ಷಕರ ಮೂಲಕ ಚೆನ್ನಾಗಿ ತೇರ್ಗಡೆಯಾದರೆ ಮತ್ತೆ ಶಿಕ್ಷಕರಿಗೆ ಉಡುಗೊರೆಯನ್ನು ಕಳುಹಿಸುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ತಂದೆಯು ನಮಗೆ ಶ್ರೇಷ್ಠ ವಿದ್ಯೆಯನ್ನು ಓದಿಸುತ್ತಾರೆ ಯಾವುದರಿಂದ ನಾವು ವಿಶ್ವದ ಮಾಲೀಕರಾಗಿ ಬಿಡುತ್ತೇವೆ. ಇದು ಬಹಳ ಸಹಜ ವಿದ್ಯೆಯಾಗಿದೆ ಆದರೆ ಪೂರ್ಣ ಗಮನ ಕೊಡುವುದಿಲ್ಲ. ಇದು ಫಸ್ಟ್ಕ್ಲಾಸ್ ಜ್ಞಾನವಾಗಿದೆ, ಇದನ್ನು ತಿಳಿದುಕೊಳ್ಳುವುದರಿಂದ ಭವಿಷ್ಯದಲ್ಲಿ ಕುಬೇರನ ಖಜಾನೆ ಸಿಗುತ್ತದೆ. ಚಮತ್ಕಾರವಲ್ಲವೆ!

ನಾನು ಯಾವ ಗ್ರೇಡ್ನಲ್ಲಿದ್ದೇನೆಂದು ಪ್ರತಿಯೊಬ್ಬ ಮಗುವು ತಿಳಿದುಕೊಳ್ಳಬಹುದು. ಎಲ್ಲವೂ ಸರ್ವೀಸಿನ ಮೇಲೆ ಆಧಾರಿತವಾಗಿದೆ. ತಂದೆಯಂತೂ ಮಕ್ಕಳೇ, ತರ್ಡ್ಗ್ರೇಡ್ನಿಂದ ಫಸ್ಟ್ಗ್ರೇಡ್ನಲ್ಲಿ ಬಂದು ಬಿಡಿ ಆಗ ಪದವಿಯನ್ನು ಪಡೆಯುವಿರಿ ಎಂದು ಹೇಳುತ್ತಾರೆ. 21 ಜನ್ಮಗಳ ಫಲಿತಾಂಶವು ಬರುತ್ತದೆ. ತಂದೆಗಂತೂ ದಯೆ ಬರುತ್ತದೆ. ಕೆಲವರು ಸಮಯವನ್ನು ವ್ಯರ್ಥವಾಗಿ ಕಳೆಯುತ್ತಾರೆ. ತಂದೆಯು ತಿಳಿಸುತ್ತಾರೆ – ಡ್ರಾಮಾನುಸಾರ ಸದ್ಗತಿ ನೀಡುವುದಕ್ಕಾಗಿ ನಾನು ಬರಬೇಕಾಗುತ್ತದೆ. ಇದು ದುರ್ಗತಿಯ ಪ್ರಪಂಚವಾಗಿದೆ. ನೀವು ದುರ್ಗತಿಯಲ್ಲಿದ್ದೀರಾ ಎಂದು ಕೇಳಿದರೆ ನಮಗಾಗಿ ಇಲ್ಲಿಯೇ ಸ್ವರ್ಗವಿದೆ, ನಾವು ಸ್ವರ್ಗದಲ್ಲಿ ಕುಳಿತಿದ್ದೇವೆಂದು ಹೇಳುತ್ತಾರೆ. ಸ್ವರ್ಗವೆಂದು ಸತ್ಯಯುಗಕ್ಕೆ ಹೇಳಲಾಗುತ್ತದೆ ಎಂಬುದು ಬುದ್ಧಿಯಲ್ಲಿ ಬರುವುದಿಲ್ಲ, ದೊಡ್ಡ-ದೊಡ್ಡ ಪಂಡಿತರು, ವಿದ್ವಾಂಸರಿದ್ದಾರೆ ಆದರೆ ಯಾರಿಗೂ ಸಹ ಇದು ಹಳೆಯ ತಮೋಪ್ರಧಾನ ಪ್ರಪಂಚವಾಗಿದೆ ಎಂಬುದು ಬುದ್ಧಿಯಲ್ಲಿ ಬರುವುದಿಲ್ಲ. ಬಹಳ ಅಭಿಮಾನದಿಂದ ಕುಳಿತಿದ್ದಾರೆ. ಎಷ್ಟೊಂದು ಭಕ್ತಿಮಾರ್ಗದ ಪ್ರಭಾವವಿದೆ. ಭಕ್ತಿಯದು ಬಹಳ ಆಡಂಬರವಿದೆ. ಕುಂಭಮೇಳದಲ್ಲಿ ಲಕ್ಷಾಂತರ ಮಂದಿ ಹೋಗುತ್ತಾರೆ, ಇದು ಅಂತಿಮ ಶೋ ಆಗಿದೆ. ಇತ್ತಕಡೆ ಬರಲು ಮಾಯೆಯು ಬಿಡುವುದಿಲ್ಲ, ಇಲಿಯಂತೆ ಗಾಳಿಯನ್ನು ಊದಿ ಇಡೀ ರಕ್ತವನ್ನು ಹೀರಿ ಬಿಡುತ್ತದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಬೆಳಗ್ಗೆ-ಬೆಳಗ್ಗೆ ಎದ್ದು ವಿಚಾರ ಸಾಗರ ಮಂಥನ ಮಾಡಬೇಕಾಗಿದೆ. ಮುರುಳಿಯನ್ನು ಓದಿ ಅದರಬಗ್ಗೆ ಚಿಂತನೆ ಮಾಡಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಅವಿನಾಶಿ ಜ್ಞಾನರತ್ನಗಳ ವ್ಯಾಪಾರ ಮಾಡಬೇಕಾಗಿದೆ.

2. ಸರ್ವೀಸಿನ ಬಹಳ-ಬಹಳ ಉಮ್ಮಂಗವನ್ನಿಟ್ಟುಕೊಳ್ಳಬೇಕಾಗಿದೆ. ಶರೀರದ ಮೇಲೆ ಯಾವುದೇ ಭರವಸೆಯಿಲ್ಲ, ಆದ್ದರಿಂದ 21 ಜನ್ಮಗಳ ಸಂಪಾದನೆಯನ್ನು ಈಗಲೇ ಜಮಾ ಮಾಡಿಕೊಳ್ಳಬೇಕಾಗಿದೆ.

ವರದಾನ:-

ಹೇಗೆ ವಿಜ್ಞಾನವು ಅಂತಹ ಅನ್ವೇಷಣೆ ಮಾಡಿದೆ, ಏನೆಲ್ಲವನ್ನೂ ಬರೆಯಲಾಗಿದೆಯೋ ಅದೆಲ್ಲವೂ ಸಮಾಪ್ತಿಯಾಗಿ ಬಿಡುತ್ತದೆ, ಗೊತ್ತೇ ಆಗುವುದಿಲ್ಲ. ಅದೇರೀತಿ ತಾವು ಶಾಂತಿಯ ಶಕ್ತಿಯಿಂದ ತಮ್ಮ ರಿಜಿಸ್ಟರ್ನ್ನು ಪ್ರತಿನಿತ್ಯವೂ ಸ್ವಚ್ಛಗೊಳಿಸುತ್ತೀರೆಂದರೆ ಪ್ರಭುಪ್ರಿಯ ಅಥವಾ ದೈವೀ ಲೋಕಪ್ರಿಯರು ಆಗಿ ಬಿಡುತ್ತೀರಿ. ಸತ್ಯತೆ-ಸ್ವಚ್ಛತೆಯನ್ನಂತು ಎಲ್ಲರೂ ಇಷ್ಟ ಪಡುತ್ತಾರೆ ಆದ್ದರಿಂದ ಒಂದು ದಿನದಲ್ಲಿ ಮಾಡಿರುವ ವ್ಯರ್ಥ ಸಂಕಲ್ಪ ಅಥವಾ ವ್ಯರ್ಥ ಕರ್ಮವನ್ನು, ಇನ್ನೊಂದು ದಿನದಲ್ಲಿ ಲೀಕ್ ಆಗದಿರಲಿ. ಕಳೆದು ಹೋದದ್ದನ್ನು ಕಳೆದು ಬಿಂದುವನ್ನಿಡುತ್ತೀರೆಂದರೆ ರಿಜಿಸ್ಟರ್ ಸ್ವಚ್ಛವಾಗಿರುತ್ತದೆ ಹಾಗೂ ತಂದೆಯು ಖುಷಿಯಾಗಿ ಬಿಡುತ್ತಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top