27 December 2021 KANNADA Murli Today | Brahma Kumaris

Read and Listen today’s Gyan Murli in Kannada

December 26, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಭಾರತ ಭೂಮಿಯು ಸುಖದಾತ ತಂದೆಯ ಜನ್ಮಭೂಮಿಯಾಗಿದೆ, ತಂದೆಯೇ ಬಂದು ಎಲ್ಲಾ ಮಕ್ಕಳನ್ನು ದುಃಖದಿಂದ ಬಿಡುಗಡೆ ಮಾಡುತ್ತಾರೆ”

ಪ್ರಶ್ನೆ:: -

ಎಲ್ಲದಕ್ಕಿಂತ ಶ್ರೇಷ್ಠ ಬಹಳ ದೊಡ್ಡದಾದ ಕಥೆಯು ಯಾವುದಾಗಿದೆ ಅದು ನೀವು ಮಕ್ಕಳಿಗಾಗಿ ಸಾಮಾನ್ಯವಾಗಿದೆ?

ಉತ್ತರ:-

ಈ ಡ್ರಾಮಾದ ಆದಿ-ಮಧ್ಯ-ಅಂತ್ಯ ಶ್ರೇಷ್ಠವಾದುದು ಮತ್ತು ಬಹಳ ದೊಡ್ಡದಾಗಿದೆ, ಈ ಕಥೆಯನ್ನು ಮನುಷ್ಯರು ತಿಳಿದುಕೊಳ್ಳಲು ಸಾಧ್ಯವಿಲ್ಲ. ನೀವು ಮಕ್ಕಳಿಗಾಗಿ ಈ ಕಥೆಯು ಬಹಳ ಸಾಮಾನ್ಯವಾಗಿದೆ. ನೀವು ತಿಳಿದುಕೊಂಡಿದ್ದೀರಿ-ಹೇಗೆ ಈ ನಾಟಕವು ಚಾಚೂ ತಪ್ಪದೆ ಪುನರಾವರ್ತನೆಯಾಗುತ್ತದೆ, ಈ ಏಣಿಯು ಹೇಗೆ ಸುತ್ತುತ್ತಾ ಇರುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಓಂ ನಮಃ ಶಿವಾಯ……

ಓಂ ಶಾಂತಿ. ಮಧುರಾತಿ ಮಧುರ ಅನನ್ಯ ಮಕ್ಕಳು ಮಹಿಮೆಯ ಗೀತೆಯನ್ನು ಕೇಳಿದಿರಿ. ಯಾರ ಮಹಿಮೆ? ಸರ್ವಶ್ರೇಷ್ಠನಾದ ಭಗವಂತನ ಮಹಿಮೆ. ಅವರನ್ನೇ ಪತಿತ-ಪಾವನ, ದುಃಖಹರ್ತ-ಸುಖಕರ್ತನೆಂದು ಹೇಳುತ್ತಾರೆ. ಸುಖ ಕೊಡುವವರನ್ನು ನೆನಪು ಮಾಡಲಾಗುತ್ತದೆ. ಸುಖ ನೀಡುವವರು ಒಬ್ಬರೇ ಪರಮಪಿತ ಪರಮಾತ್ಮನಾಗಿದ್ದಾರೆಂದು ಮಕ್ಕಳು ತಿಳಿದುಕೊಂಡಿದ್ದೀರಿ. ಎಲ್ಲಾ ಮನುಷ್ಯ ಮಾತ್ರರು ಅವರನ್ನೇ ನೆನಪು ಮಾಡುತ್ತಾರೆ ಮತ್ತು ಅನ್ಯ ಧರ್ಮದವರೂ ಸಹ ಹೇಳುತ್ತಾರೆ – ತಂದೆಯು ಬಂದು ದುಃಖದಿಂದ ಬಿಡುಗಡೆ ಮಾಡಿ ಸುಖ ಕೊಡುತ್ತಾರೆ. ಆದರೆ ಸುಖವನ್ನು ತಂದೆಯು ಕೊಡುತ್ತಾರೆ, ಮತ್ತೆ ದುಃಖವನ್ನು ಯಾರು ಕೊಡುತ್ತಾರೆ ಎಂಬುದನ್ನು ತಿಳಿದುಕೊಂಡಿಲ್ಲ, ಇದನ್ನು ನೀವೇ ತಿಳಿದುಕೊಂಡಿದ್ದೀರಿ. ಹೊಸ ಪ್ರಪಂಚವೇ ನಂತರ ಹಳೆಯದಾದಾಗ ಅದಕ್ಕೆ ದುಃಖಧಾಮವೆಂದು ಹೇಳಲಾಗುತ್ತದೆ. ಕಲಿಯುಗದ ಅಂತ್ಯದ ನಂತರ ಮತ್ತೆ ಸತ್ಯಯುಗವು ಅವಶ್ಯವಾಗಿ ಬರುತ್ತದೆ. ಸೃಷ್ಟಿಯು ಒಂದೇ ಆಗಿದೆ, ಮನುಷ್ಯರು ಈ ಸೃಷ್ಟಿ ಚಕ್ರವನ್ನು ತಿಳಿದುಕೊಂಡಿಲ್ಲ ಆದ್ದರಿಂದ ತಂದೆಯು ಕೇಳುತ್ತಾರೆ – ನಿಮ್ಮನ್ನು ಇಷ್ಟು ಬುದ್ಧಿಹೀನರನ್ನಾಗಿ ಮಾಡಿದವರು ಯಾರು? ತಂದೆಯಂತೂ ಯಾರಿಗೂ ದುಃಖ ಕೊಡುವುದಿಲ್ಲ, ತಂದೆಯು ಸದಾ ಸುಖ ಕೊಡುತ್ತಾರೆ. ನಿಮಗೆ ತಿಳಿದಿದೆ – ಸುಖ ಕೊಡುವವರ ಜನ್ಮಸ್ಥಾನವೂ ಭಾರತದಲ್ಲಿದೆ, ದುಃಖ ಕೊಡುವವರ ಜನ್ಮಸ್ಥಾನವೂ ಭಾರತದಲ್ಲಿದೆ. ಭಾರತವಾಸಿಗಳು ಭಲೆ ಶಿವ ಜಯಂತಿಯನ್ನು ಆಚರಿಸುತ್ತಾರೆ ಆದರೆ ಏನನ್ನೂ ತಿಳಿದುಕೊಂಡಿಲ್ಲ. ಇದು ಸರ್ವಶ್ರೇಷ್ಠ ಭಗವಂತನ ಜಯಂತಿಯಾಗಿದೆ. ಅವರ ಹೆಸರಾಗಿದೆ-ಶಿವ, ಇದು ಯಾರಿಗೂ ತಿಳಿದಿಲ್ಲ. ರಾವಣನನ್ನು ಪ್ರತೀ ವರ್ಷವೂ ಸುಡುತ್ತಿರುತ್ತಾರೆ ಆದರೆ ರಾವಣನೆಂದರೆ ಯಾರು, ಯಾವಾಗಿನಿಂದ ಬಂದಿದ್ದಾನೆ? ಏಕೆ ಸುಡುತ್ತಾರೆ ಎಂಬುದೇನನ್ನೂ ತಿಳಿದುಕೊಂಡಿಲ್ಲ. ಡ್ರಾಮಾನುಸಾರ ಇದು ತಿಳಿಯುವುದೇ ಇಲ್ಲ. ತಂದೆಯು ತಿಳಿಸುತ್ತಾರೆ – ಪ್ರತಿಯೊಬ್ಬರ ಪಾತ್ರವು ಬೇರೆ-ಬೇರೆಯಾಗಿದೆ, ಮನುಷ್ಯರ ಪಾತ್ರದ ಗಾಯನವೇ ನಡೆಯುತ್ತದೆ. ಮನುಷ್ಯರೇ ಬುದ್ಧಿವಂತರಾಗಿದ್ದಾರೆ, ಪ್ರಾಣಿಗಳಂತೂ ಬುದ್ಧಿಹೀನವಾಗಿವೆ, ಈ ಸಮಯದಲ್ಲಿ ಮನುಷ್ಯರೂ ಸಹ ಬುದ್ಧಿಹೀನರಾಗಿ ಬಿಟ್ಟಿದ್ದಾರೆ. ದುಃಖಹರ್ತ-ಸುಖಕರ್ತ, ಪತಿತ-ಪಾವನ ಯಾರು? ಪತಿತರು ಹೇಗಾದೆವು ಮತ್ತು ಹೇಗೆ ಪಾವನರಾಗುತ್ತೇವೆ ಎಂಬುದನ್ನೇ ತಿಳಿದುಕೊಂಡಿಲ್ಲ. ಕರೆಯುತ್ತಾರೆ ಆದರೆ ಅರ್ಥವನ್ನೇ ತಿಳಿದಿಲ್ಲ. ಈ ಸಮಯದಲ್ಲಿ ಭಕ್ತಿಮಾರ್ಗವೇ ಇದೆ, ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಶಾಸ್ತ್ರಗಳಲ್ಲಿ ಯಾವುದೇ ಸದ್ಗತಿಯ ಜ್ಞಾನವಿಲ್ಲ, ಕೇವಲ ಜ್ಞಾನ, ಭಕ್ತಿ, ವೈರಾಗ್ಯವೆಂದು ಹೇಳುತ್ತಾರೆ, ಇಷ್ಟು ಮಾತ್ರ ಬುದ್ಧಿಯಲ್ಲಿ ಬರುತ್ತದೆ, ಇದರ ಅರ್ಥವನ್ನೂ ತಿಳಿದುಕೊಂಡಿಲ್ಲ. ಜ್ಞಾನಸಾಗರನು ಒಬ್ಬ ಪರಮಪಿತ ಪರಮಪಿತನೇ ಆಗಿದ್ದಾರೆ, ಅವಶ್ಯವಾಗಿ ಅವರೇ ಜ್ಞಾನ ಕೊಡಬೇಕಾಗಿದೆ. ಅವರೇ ಸದ್ಗುರು, ಸದ್ಗತಿದಾತನಾಗಿದ್ದಾರೆ ಆದ್ದರಿಂದ ಬಂದು ದುರ್ಗತಿಯಿಂದ ಬಿಡುಗಡೆ ಮಾಡಿ ಎಂದು ಕರೆಯುತ್ತಾರೆ. ದ್ವಾಪರದಲ್ಲಿ ಮೊದಲು ನಾವು ಸತೋಪ್ರಧಾನ ಪೂಜಾರಿಗಳಾಗುತ್ತೇವೆ ನಂತರ ಪುನರ್ಜನ್ಮವನ್ನು ತೆಗೆದುಕೊಳ್ಳುತ್ತಾ ಕೆಳಗಿಳಿಯುತ್ತಾ ಬರುತ್ತೇವೆ. ಯಾರೆಲ್ಲಾ ಮನುಷ್ಯರು ಬರುತ್ತಾರೆ ಅವಶ್ಯವಾಗಿ ಏಣಿ ಇಳಿಯಲೇಬೇಕಾಗಿದೆ. ಭಲೆ ಬುದ್ಧ ಮೊದಲಾದವರ ಚಿತ್ರಗಳನ್ನು ಏಣಿಚಿತ್ರದಲ್ಲಿ ತೋರಿಸಿಲ್ಲ. ಒಂದುವೇಳೆ ತೋರಿಸಿದರೂ ಸಹ ಅವರೂ ಏಣಿಯನ್ನು ಇಳಿಯಲೇಬೇಕಲ್ಲವೆ. ಅವರು ಸತೋ, ರಜೋ, ತಮೋದಲ್ಲಿ ಬರಲೇಬೇಕಾಗಿದೆ. ಈಗ ಎಲ್ಲರೂ ತಮೋಪ್ರಧಾನರಾಗಿದ್ದಾರೆ, ಈಗ ತಂದೆಯು ತಿಳಿಸುತ್ತಾರೆ – ಈ ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ. ಇದರಲ್ಲಿ ಅನೇಕ ಪ್ರಕಾರದ ಕರ್ಮಕಾಂಡವಿದೆ. ಜ್ಞಾನ ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ, ಜ್ಞಾನಸಾಗರನೇ ಬಂದು ಸತ್ಯ ಜ್ಞಾನವನ್ನು ತಿಳಿಸುತ್ತಾರೆ. ಅರ್ಧಕಲ್ಪ ದಿನವಾಗಿದೆ, ಅದರಲ್ಲಿ ಭಕ್ತಿಯ ಮಾತೇ ಇರುವುದಿಲ್ಲ. ದಿನದಲ್ಲಿ ಎಂದೂ ಮೋಸ ಹೋಗುವುದಿಲ್ಲ, ಅಲೆದಾಡುವುದಿಲ್ಲ ಅಲ್ಲಿ ಸುಖವೇ ಸುಖವಿರುತ್ತದೆ. ತಂದೆಯ ಆ ಆಸ್ತಿಯು ನಿಮಗೆ ಕಲ್ಪದ ಸಂಗಮದಲ್ಲಿಯೇ ಸಿಗುತ್ತದೆ. ಯಾರಿಗೆ ಕಲ್ಪದ ಮೊದಲು ಜ್ಞಾನವು ಸಿಕ್ಕಿತ್ತೋ ಅವರಿಗೇ ತಂದೆಯು ಜ್ಞಾನವನ್ನು ತಿಳಿಸುತ್ತಾರೆ ಮತ್ತು ಕಲ್ಪ-ಕಲ್ಪವೂ ತಿಳಿಸುತ್ತಲೇ ಇರುತ್ತಾರೆ. ರಚಯಿತನೇ ರಚನೆಯ ಜ್ಞಾನವನ್ನು ಕೊಡುತ್ತಿದ್ದಾರೆಂದು ಅವರ ಬುದ್ಧಿಯಲ್ಲಿಯೇ ಕುಳಿತುಕೊಳ್ಳುತ್ತದೆ. ಎಷ್ಟೊಂದು ಚಿತ್ರಗಳನ್ನು ಮಾಡಿಸುತ್ತಾರೆ ಮತ್ತು ಅವರ ಕ್ಯಾಲೆಂಡರ್ ಮಾಡಿಸುತ್ತಾರೆ. ಯಾವುದಾದರೂ ಹೊಸ ವಸ್ತು ಬಿಡುಗಡೆಯಾದರೆ ಅದು ಬೇಗ ಸುದ್ಧಿ ಹರಡುತ್ತದೆ, ಈಗ ಭಾರತದಲ್ಲಿ ರಚಯಿತ ತಂದೆಯು ರಚಯಿತ ಮತ್ತು ರಚನೆಯ ಜ್ಞಾನವನ್ನು ತಿಳಿಸುತ್ತಿದ್ದಾರೆ, ಇದೂ ಸಹ ಎಲ್ಲರ ಬಳಿ ವಿದೇಶದವರೆಗೂ ತಲುಪುತ್ತದೆ. ನಂತರ ನಾವೇಕೆ ಸ್ವರ್ಗದಲ್ಲಿ ಇರುವುದಿಲ್ಲವೆಂದು ಹೇಳುವಂತಿಲ್ಲ, ಎಲ್ಲರಿಗೆ ಅರ್ಥವಾಗಿ ಬಿಡುವುದು. ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ, ಇದರಲ್ಲಿ ಸ್ವಲ್ಪವೂ ವ್ಯತ್ಯಾಸವಾಗಲು ಸಾಧ್ಯವಿಲ್ಲ. ಪ್ರಪಂಚದಲ್ಲಿ ಅನೇಕ ಮತಗಳಿವೆ, ಕೆಲವರು ಪ್ರಕೃತಿಯೆಂದು ಹೇಳುತ್ತಾರೆ, ಇನ್ನೂ ಕೆಲವರು ಆತ್ಮವು ನಿರ್ಲೇಪವಾಗಿದೆ ಎಂದು ಹೇಳುತ್ತಾರೆ, ಕೊನೆಯಲ್ಲಿ ಒಬ್ಬ ತಂದೆಯಿಂದಲೇ ಕೇಳುತ್ತಾರೆ ಮತ್ತು ಅವಶ್ಯವಾಗಿ ತಿಳಿದುಕೊಳ್ಳುತ್ತಾರೆ – ನಾವು ಈ ಡ್ರಾಮಾದ ಪಾತ್ರಧಾರಿಗಳಾಗಿದ್ದೇವೆ, ಇದು ವಿಭಿನ್ನ ಧರ್ಮಗಳ ವೃಕ್ಷವಾಗಿದೆ. ಎಲ್ಲರ ಬುದ್ಧಿಯ ಬೀಗವು ತೆರೆಯಲ್ಪಡುವುದು, ಈಗಿನ್ನೂ ಬೀಗ ಹಾಕಲ್ಪಟ್ಟಿದೆ. ನಿಮ್ಮ ಧರ್ಮದ ಮಾತೇ ಬೇರೆಯಾಗಿದೆ, ಬಾಕಿ ಡ್ರಾಮಾನುಸಾರ ಅವರು ಸ್ವರ್ಗದಲ್ಲಿ ಬರಲು ಸಾಧ್ಯವಿಲ್ಲ. ನಮ್ಮ ಧರ್ಮಸ್ಥಾಪಕರು ಇಂತಹ ಸಮಯದಲ್ಲಿ ಬಂದರು. ಕ್ರಿಸ್ತನು ಸ್ವರ್ಗದಲ್ಲಿ ಬಂದರೇ! ಇವೆಲ್ಲಾ ಮಾತುಗಳು ಈ ವೃಕ್ಷದ ಜ್ಞಾನದಿಂದಲೇ ಬುದ್ಧಿಯಲ್ಲಿ ಬರುತ್ತದೆ, ಏಣಿಯ ಚಿತ್ರದಿಂದಲ್ಲ. ಕಲ್ಪವೃಕ್ಷವು ಬಹಳ ಚೆನ್ನಾಗಿದೆ, ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ ಎಂಬುದನ್ನು ತಿಳಿದುಕೊಳ್ಳುತ್ತಾರೆ. ಬಾಕಿ ಯೋಗದ ಮಾತನ್ನು ನೀವು ತಿಳಿದುಕೊಂಡಿದ್ದೀರಿ, ನಾವು ಪಾವನರಾಗಿ ತಂದೆಯನ್ನು ನೆನಪು ಮಾಡುವುದರಿಂದಲೇ ವಿಕರ್ಮಗಳು ವಿನಾಶವಾಗುವುದು. ಯಾವಾಗ ಯೋಗಯುಕ್ತರಾಗುತ್ತೀರಿ ಆಗ ತಮ್ಮ ಬಗ್ಗೆ ಅರ್ಥವಾಗುವುದು. ರಚಯಿತ ಮತ್ತು ರಚನೆಯ ಜ್ಞಾನವನ್ನು ಮುಂದೆ ಹೋದಂತೆ ಎಲ್ಲರೂ ತಿಳಿದುಕೊಳ್ಳುವರು, ಈಗಲ್ಲ. ಡ್ರಾಮಾ ಬಹಳ ಯುಕ್ತಿಯಿಂದ ಮಾಡಲ್ಪಟ್ಟಿದೆ, ಯುದ್ಧವಂತೂ ಆಗಲೇಬೇಕಾಗಿದೆ. ಈಗ ನಿಮ್ಮ ಬುದ್ಧಿಯಲ್ಲಿ ಈ ಡ್ರಾಮಾದ ರಹಸ್ಯವಿದೆ. ಒಂದುವೇಳೆ ಯಾರೇ ಹೊಸಬರು ಬಂದರೆ ಅವರಿಗೆ ಆರಂಭದಿಂದ ತಿಳಿಸಬೇಕಾಗುತ್ತದೆ. ಇದು ಬಹಳ ಉದ್ದವಾದ ಕಥೆಯಾಗಿದೆ. ಬಹಳ ಶ್ರೇಷ್ಠವಾದುದಾಗಿದೆ ಆದರೆ ನಿಮಗಾಗಿ ಸಾಮಾನ್ಯವಾಗಿದೆ. ಈ ಏಣಿಚಿತ್ರವು ಹೇಗೆ ಸುತ್ತುತ್ತದೆ ಎಂಬುದನ್ನು ನೀವು ತಿಳಿದುಕೊಂಡಿದ್ದೀರಿ.

ತಂದೆಯು ತಿಳಿಸುತ್ತಾರೆ – ಮಧುರ ಮಕ್ಕಳೇ, ಭಕ್ತಿಮಾರ್ಗದಲ್ಲಿ ನೀವು ಎಷ್ಟೊಂದು ಕಷ್ಟ ಪಟ್ಟಿದ್ದೀರಿ, ಇದೂ ಸಹ ಡ್ರಾಮಾದಲ್ಲಿ ನಿಗಧಿಯಾಗಿದೆ. ಈ ಸುಖ-ದುಃಖದ ಆಟವು ನಿಮ್ಮಮೇಲೆ ಮಾಡಲ್ಪಟ್ಟಿದೆ. ನೀವು ಬಹಳ ಶ್ರೇಷ್ಠರೂ ಆಗುತ್ತೀರಿ ಮತ್ತು ಕನಿಷ್ಠರೂ ಆಗುತ್ತೀರಿ. ಮಧುರ ಮಕ್ಕಳೇ, ನಾನು ಈ ಮನುಷ್ಯ ಸೃಷ್ಟಿಯ ಬೀಜರೂಪನಾಗಿದ್ದೇನೆ, ವೃಕ್ಷದ ಸಂಪೂರ್ಣ ಜ್ಞಾನವು ನನ್ನಬಳಿಯೇ ಇರುವುದು. ಆಲದಮರದ ಉದಾಹರಣೆಯು ಇದರ ಮೇಲಿದೆ. ಸನ್ಯಾಸಿಗಳೂ ಸಹ ಉದಾಹರಣೆ ಕೊಡುತ್ತಾರೆ ಆದರೆ ಅವರ ಬುದ್ಧಿಯಲ್ಲಿ ಏನೂ ಇಲ್ಲ. ಹೇಗೆ ಆದಿ ಸನಾತನ ದೇವಿ-ದೇವತಾ ಧರ್ಮವು ಪ್ರಾಯಲೋಪವಾಗುತ್ತದೆ ಎಂದು ನೀವು ತಿಳಿದುಕೊಂಡಿದ್ದೀರಿ. ಈಗ ಅದರ ಬುನಾದಿಯೇ ಇಲ್ಲ ಬಾಕಿ ಇಡೀ ವೃಕ್ಷವು ನಿಂತಿದೆ. ಎಲ್ಲಾ ಧರ್ಮಗಳಿವೆ ಆದರೆ ಒಂದು ಧರ್ಮವಿಲ್ಲ. ಆಲದ ಮರದ ಬುನಾದಿಯೇ ಇಲ್ಲ ಆದರೂ ವೃಕ್ಷವು ಸದಾ ಹಚ್ಚ ಹಸುರಾಗಿರುತ್ತದೆ. ಅನ್ಯ ವೃಕ್ಷಗಳ ಬುಡವಿಲ್ಲದಿದ್ದರೆ ಒಣಗಿ ಹೋಗುತ್ತದೆ ಏಕೆಂದರೆ ಬುಡದ ಮೂಲಕವೇ ನೀರು ಸಿಗುತ್ತದೆ ಆದರೆ ಆಲದ ಮರವು ಮಾತ್ರ ಬಹಳ ತಾಜಾ ಆಗಿ ನಿಂತಿರುತ್ತದೆ. ಇದು ಅದ್ಭುತವಲ್ಲವೆ! ಹಾಗೆಯೇ ಈ ವೃಕ್ಷದಲ್ಲಿಯೂ ಸಹ ದೇವಿ-ದೇವತಾ ಧರ್ಮವೇ ಇಲ್ಲ, ಯಾರೂ ತಮ್ಮನ್ನು ತಿಳಿದುಕೊಳ್ಳುವುದೇ ಇಲ್ಲ. ದೇವತಾ ಧರ್ಮದ ಬದಲು ಹಿಂದೂ ಎಂದು ಹೇಳಿ ಬಿಟ್ಟಿದ್ದಾರೆ. ಯಾವಾಗಿನಿಂದ ರಾವಣ ರಾಜ್ಯವು ಆರಂಭವಾಗಿದೆಯೋ ಆಗಿನಿಂದಲೂ ದೇವಿ-ದೇವತೆಗಳೆಂದು ಕರೆಸಿಕೊಳ್ಳಲು ಅರ್ಹರಾಗಿಲ್ಲ ಆದ್ದರಿಂದ ಹಿಂದೂಗಳೆಂದು ಹೆಸರನ್ನು ಬದಲಾಯಿಸಿದ್ದಾರೆ, ಕೇವಲ ದೇವತೆಗಳ ಜಡ ಚಿತ್ರಗಳು ಮಾತ್ರ ನಿದರ್ಶನವಾಗಿ ಉಳಿದಿದೆ. ಇವುಗಳಿಂದ ಸ್ವರ್ಗದಲ್ಲಿ ಅವರ ರಾಜ್ಯವಿತ್ತೆಂದು ತಿಳಿದುಕೊಳ್ಳುತ್ತಾರೆ ಆದರೆ ಆ ಸ್ವರ್ಗವು ಯಾವಾಗ ಇತ್ತೆಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಸತ್ಯಯುಗದ ಆಯಸ್ಸನ್ನು ಬಹಳ ಉದ್ದಗಲ ಮಾಡಿ ಬಿಟ್ಟಿದ್ದಾರೆ. ಏನು ಕಳೆದು ಹೋಗಿದೆಯೋ ಅದು ಮತ್ತೆ ತನ್ನ ಸಮಯದಲ್ಲಿಯೇ ಪುನರಾವರ್ತನೆಯಾಗುವುದು. ಅದೇ ಮುಖ ಲಕ್ಷಣಗಳು ಈಗ ಇರಲು ಸಾಧ್ಯವೇ! ಅದು ಮತ್ತೆ ಸತ್ಯಯುಗದಲ್ಲಿಯೇ ಇರುತ್ತದೆ, ಈ ಜ್ಞಾನವನ್ನು ನೀವೇ ತಿಳಿದುಕೊಂಡಿದ್ದೀರಿ ಬಾಕಿ ಅವರೆಲ್ಲರೂ ಭಕ್ತಿ ಮಾಡುತ್ತಾ-ಮಾಡುತ್ತಾ ಪತಿತರಾಗುತ್ತಾ ಇರುತ್ತಾರೆ. ಪಾವನ ಪ್ರಪಂಚವಿತ್ತು ಎಂದು ನಿಮಗೆ ತಂದೆಯು ತಿಳಿಸುತ್ತಾರೆ. ತಾವು ಸರ್ವಜ್ಞನಾಗಿದ್ದೀರಿ ಎಂದು ಹೇಳುತ್ತಾರೆ. ಅದಕ್ಕೆ ತಂದೆಯು ತಿಳಿಸುತ್ತಾರೆ – ನಾನು ಒಬ್ಬೊಬ್ಬರ ಹೃದಯದಲ್ಲಿ ಕುಳಿತು ನೋಡುವುದಿಲ್ಲ. ಬಾಬಾ, ತಾವಂತೂ ಎಲ್ಲವನ್ನೂ ತಿಳಿದುಕೊಂಡಿದ್ದೀರಿ, ನಾವು ವಿಕಾರದಲ್ಲಿ ಹೋಗುತ್ತೇವೆ, ತಾವು ಎಲ್ಲವನ್ನೂ ತಿಳಿದುಕೊಂಡಿರುತ್ತೀರಿ ಎಂದು ಹೇಳುತ್ತಾರೆ. ತಂದೆಯು ತಿಳಿಸುತ್ತಾರೆ – ನಾನು ಇಡೀ ದಿನ ಕುಳಿತು ಇದನ್ನೇ ತಿಳಿದುಕೊಳ್ಳುತ್ತೇನೆಯೇ? ನಾನಂತೂ ಪತಿತರನ್ನು ಪಾವನ ಮಾಡಲು ಬಂದಿದ್ದೇನೆ.

ನಾವು ತಂದೆಯಿಂದ ಸುಖದ ಆಸ್ತಿಯನ್ನು ತೆಗೆದುಕೊಳ್ಳುತ್ತಿದ್ದೇವೆಂದು ನಿಮಗೆ ತಿಳಿದಿದೆ. ಉಳಿದೆಲ್ಲರೂ ಮರಳಿ ಮುಕ್ತಿಧಾಮಕ್ಕೆ ಹೋಗುವರು, ಹೇಗೆ ಹೋಗುತ್ತಾರೆ? ಇದರಲ್ಲಿ ನಿಮ್ಮದೇನು ಹೋಗುತ್ತಿದೆ? ತಂದೆಯೇ ಬಂದು ಮುಕ್ತಿ-ಜೀವನ್ಮುಕ್ತಿಯಲ್ಲಿ ಕರೆದುಕೊಂಡು ಹೋಗುತ್ತಾರೆ. ಲೆಕ್ಕಾಚಾರಗಳೆಲ್ಲವನ್ನು ಮುಗಿಸಿ ಎಲ್ಲರೂ ಹೋಗಬೇಕಾಗಿದೆ. ನೀವು ಸತೋಪ್ರಧಾನರಾಗಬೇಕಾಗಿದೆ. ನೀವು ಅನ್ಯ ಮಾತುಗಳಲ್ಲಿ ಏಕೆ ಹೋಗುತ್ತೀರಿ? ತಮೋಪ್ರಧಾನರಿಂದ ಸತೋಪ್ರಧಾನರನ್ನಾಗಿ ಮಾಡುವವರು ಒಬ್ಬರೇ ತಂದೆಯಾಗಿದ್ದಾರೆ. ಭಕ್ತಿಮಾರ್ಗದಲ್ಲಿ ಜ್ಞಾನದ ಅಂಶವೂ ಇಲ್ಲ, ಜ್ಞಾನ ಮತ್ತು ಭಕ್ತಿಯೆಂದು ಹೇಳುತ್ತಾರೆ, ಆಗ ಕೇಳಿರಿ – ಜ್ಞಾನವು ಎಷ್ಟು ಸಮಯ ಮತ್ತು ಭಕ್ತಿಯು ಎಷ್ಟು ಸಮಯ ನಡೆಯುತ್ತದೆ? ಆಗ ಏನೂ ಹೇಳಲು ಸಾಧ್ಯವಾಗುವುದಿಲ್ಲ. ಭಕ್ತಿಯೇ ಬೇರೆಯಾಗಿದೆ, ಸ್ವಯಂ ತಂದೆಯೇ ತಿಳಿಸುತ್ತಾರೆ – ನಾನು ಹೇಗೆ ಬರುತ್ತೇನೆ, ಯಾರಲ್ಲಿ ಪ್ರವೇಶ ಮಾಡುತ್ತೇನೆ. ಮನುಷ್ಯರು ಭಕ್ತಿಮಾರ್ಗದಲ್ಲಿ ಸಿಕ್ಕಿ ಹಾಕಿಕೊಂಡಿರುವ ಕಾರಣ ನನ್ನನ್ನು ಅರಿತುಕೊಳ್ಳುವುದು ಬಹಳ ಕಷ್ಟವಾಗುತ್ತದೆ ಆದ್ದರಿಂದ ನೀವು ಶಿವ ಶಂಕರನ ಚಿತ್ರದಲ್ಲಿ ತಿಳಿಸಿದಾಗ ಅವರು ಇಬ್ಬರನ್ನೂ ಒಂದು ಮಾಡಿ ಬಿಡುತ್ತಾರೆ. ಒಬ್ಬರು ಸೂಕ್ಷ್ಮವತನವಾಸಿ, ಇನ್ನೊಬ್ಬರು ಪರಮಧಾಮ ನಿವಾಸಿ, ಇಬ್ಬರದೂ ಸ್ಥಾನವು ಬೇರೆ-ಬೇರೆಯಾಗಿದೆ ಅಂದಮೇಲೆ ಒಂದೇ ಹೆಸರಿಡಲು ಹೇಗೆ ಸಾಧ್ಯ! ಒಬ್ಬರು ನಿರಾಕಾರಿ, ಇನ್ನೊಬ್ಬರು ಆಕಾರಿ. ಶಿವ-ಶಂಕರ ಎಂದು ಹೇಳಿ ಬಿಡುತ್ತೀರಿ ಆದರೆ ಶಂಕರನಲ್ಲಿ ಶಿವನು ಪ್ರವೇಶವಾಗಿದ್ದಾರೆ ಎಂದು ಹೇಳಲು ಸಾಧ್ಯವೇ? ಶಿವ-ಶಂಕರನೆಂದು ಹೇಳಿ ಬಿಡುತ್ತಾರೆ, ತಂದೆಯು ತಿಳಿಸುತ್ತಾರೆ – ನಾನಂತೂ ಈ ಬ್ರಹ್ಮನಲ್ಲಿ ಪ್ರವೇಶ ಮಾಡುತ್ತೇನೆ. ಶಿವ-ಶಂಕರ ಒಂದೇ ಎಂದು ನಿಮಗೆ ಯಾರು ಹೇಳಿದರು? ಶಂಕರನಿಗೆ ಎಂದೂ ಯಾರೂ ಗಾಡ್ಫಾದರ್ ಎಂದು ಹೇಳುವುದಿಲ್ಲ. ಶಂಕರನಿಗೆ ಕೊರಳಿನಲ್ಲಿ ಸರ್ಪವನ್ನು ತೋರಿಸಿ ಚಹರೆಯನ್ನು ಹೇಗೆ ಮಾಡಿ ಬಿಟ್ಟಿದ್ದಾರೆ! ಮತ್ತು ಎತ್ತಿನ ಮೇಲೆ ಸವಾರಿಯನ್ನು ತೋರಿಸುತ್ತಾರೆ. ಶಂಕರನನ್ನು ಭಗವಂತನೆಂದು ಒಪ್ಪುವುದಿಲ್ಲ, ಒಬ್ಬ ಶಿವ ತಂದೆಯೇ ಭಕ್ತಿಯಲ್ಲಿ ಎಲ್ಲರ ಮನೋಕಾಮನೆಗಳನ್ನು ಪೂರ್ಣ ಮಾಡುತ್ತಾರೆ. ಶಂಕರನ ಪ್ರತಿ ಕೇವಲ ಕಣ್ಣು ತೆರೆದ ಕೂಡಲೇ ವಿನಾಶವಾಯಿತೆಂದು ಹೇಳುತ್ತಾರೆ ಬಾಕಿ ಸೂಕ್ಷ್ಮವತನದಲ್ಲಿ ಯಾವುದೇ ಎತ್ತು, ಸರ್ಪ ಇತ್ಯಾದಿಗಳಿರುತ್ತವೆಯೇ? ಅವಂತೂ ಇಲ್ಲಿನ ರಚನೆಯಾಗಿದೆ, ಮನುಷ್ಯರು ಎಷ್ಟು ಕಲ್ಲು ಬುದ್ಧಿಯವರಾಗಿ ಬಿಟ್ಟಿದ್ದಾರೆ. ನಾವು ಪತಿತರಾಗಿದ್ದೇವೆ ಎಂಬುದನ್ನೇ ತಿಳಿದುಕೊಳ್ಳುವುದಿಲ್ಲ. ತಂದೆಯು ತಿಳಿಸುತ್ತಾರೆ – ನಾನು ಈ ಸಾಧುಗಳ ಉದ್ಧಾರವನ್ನೂ ಮಾಡಲು ಬಂದಿದ್ದೇನೆ. ಏನಾದರೂ ಪ್ರಾಪ್ತಿಗಾಗಿ ಸಾಧನೆ ಮಾಡಲಾಗುತ್ತದೆ ಅಂದಮೇಲೆ ಸಾಧುಗಳು ತಮ್ಮನ್ನು ಶಿವ ಅಥವಾ ಭಗವಂತನೆಂದು ಕರೆಸಿಕೊಳ್ಳಲು ಹೇಗೆ ಸಾಧ್ಯ? ಶಿವನಿಗಂತೂ ಸಾಧನೆ ಮಾಡುವ ಅವಶ್ಯಕತೆಯೇ ಇಲ್ಲ. ಇವರ ಹೆಸರೇ ಆಗಿದೆ – ಸನ್ಯಾಸಿಗಳು. ಅಂದಮೇಲೆ ಭಗವಂತನಿಗೆ ಎಂದಾದರೂ ಸನ್ಯಾಸ ಮಾಡಬೇಕಾಗುತ್ತದೆಯೇ ? ಸನ್ಯಾಸ ಧಾರಣೆ ಮಾಡುವವರು ಕಾವಿ ಬಟ್ಟೆಗಳನ್ನು ಧರಿಸಬೇಕಾಗುತ್ತದೆ ಅಂದಮೇಲೆ ಭಗವಂತನೂ ಈ ವೇಷವನ್ನು ಧಾರಣೆ ಮಾಡಬೇಕಾಗುತ್ತದೆಯೇ? ಅವರಂತೂ ಪತಿತ-ಪಾವನನಾಗಿದ್ದಾರೆ. ನಾನು ಇವರ(ಸನ್ಯಾಸಿ) ಉದ್ಧಾರವನ್ನೂ ಮಾಡುತ್ತೇನೆಂದು ತಿಳಿಸುತ್ತಾರೆ. ಡ್ರಾಮಾನುಸಾರ ಪ್ರತಿಯೊಬ್ಬರೂ ತಮ್ಮ-ತಮ್ಮ ಪಾತ್ರವನ್ನು ಅಭಿನಯಿಸುತ್ತಾರೆ. ಭಕ್ತಿಮಾರ್ಗದಲ್ಲಿ ಮನುಷ್ಯರು ಏನೆಲ್ಲವನ್ನು ಮಾಡುತ್ತಾರೆ ತಿಳಿದುಕೊಂಡಿಲ್ಲ. ಶಾಸ್ತ್ರಗಳಿಂದ ಯಾರದೇ ಸದ್ಗತಿಯಾಗುವುದಿಲ್ಲ. ಒಬ್ಬ ಸತ್ಯ ತಂದೆಯಿಂದಲೇ ಸದ್ಗತಿಯಾಗುತ್ತದೆ, ಡ್ರಾಮಾನುಸಾರ ಈ ಶಾಸ್ತ್ರಗಳು ಅವಶ್ಯಕವಾಗಿದೆ. ಗೀತೆಯಲ್ಲಿ ಏನೇನು ಬರೆದು ಬಿಟ್ಟಿದ್ದಾರೆ! ಗೀತೆಯನ್ನು ಯಾರು ತಿಳಿಸಿದರು ಎಂಬುದೂ ಸಹ ಯಾರಿಗೂ ಗೊತ್ತಿಲ್ಲ. ನೀವು ಮುಖ್ಯವಾಗಿ ಗೀತೆಯ ಮೇಲೆ ಒತ್ತು ಕೊಡಬೇಕಾಗಿದೆ. ಗೀತೆಯೇ ಸರ್ವಶಾಸ್ತ್ರಮಯಿ ಶಿರೋಮಣಿಯಾಗಿದೆ, ಈಗ ಈ ಧರ್ಮ ಶಾಸ್ತ್ರಗಳನ್ನು ಯಾರು ಮತ್ತು ಯಾವಾಗ ರಚಿಸಿದರು ಮತ್ತು ಇದರಿಂದ ಏನಾಯಿತು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಗೀತೆಯಲ್ಲಿ ಏನೆಲ್ಲವನ್ನೂ ಬರೆಯುತ್ತಾ ಬಂದಿದ್ದೀರೋ ಅದು ಮತ್ತೆ ಪುನರಾವರ್ತನೆಯಾಗುವುದು. ನಾವು ಅದಕ್ಕೆ ಒಳ್ಳೆಯದು ಅಥವಾ ಕೆಟ್ಟದ್ದೆಂದು ಹೇಳುವುದಿಲ್ಲ ಆದರೆ ಇದು ಭಕ್ತಿಮಾರ್ಗದ ಸಾಮಗ್ರಿಯೆಂದು ತಿಳಿದುಕೊಂಡಿದ್ದೇವೆ, ಇದರಿಂದ ಮನುಷ್ಯರು ಇಳಿಯುತ್ತಾ ಬರುತ್ತಾರೆ, 84 ಜನ್ಮಗಳನ್ನು ತೆಗೆದುಕೊಳ್ಳುತ್ತಾ-ತೆಗೆದುಕೊಳ್ಳುತ್ತಾ ಇಳಿಯುವ ಕಲೆಯಲ್ಲಿ ಬರಲೇಬೇಕಾಗಿದೆ. ಯಾವಾಗ ಎಲ್ಲರೂ ತಮ್ಮ-ತಮ್ಮ ಪಾತ್ರವನ್ನು ಅಭಿನಯಿಸಲು ಬಂದುಬಿಡುವರು, ಅಂತ್ಯದಲ್ಲಿ ತಂದೆಯು ಎಲ್ಲರನ್ನೂ ಕರೆದುಕೊಂಡು ಹೋಗಲು ಬರುತ್ತಾರೆ ಆದ್ದರಿಂದ ಅವರಿಗೆ ಪತಿತ-ಪಾವನ, ಸರ್ವರ ಸದ್ಗತಿದಾತನೆಂದು ಹೇಳಲಾಗುತ್ತದೆ. ಅವರು ಯಾವಾಗ ಬರುತ್ತಾರೆಯೋ ಆಗಲೇ ರಚಯಿತ ಮತ್ತು ರಚನೆಯ ಆದಿ-ಮಧ್ಯ-ಅಂತ್ಯದ ಜ್ಞಾನವನ್ನು ತಿಳಿಸುತ್ತಾರೆ. ಈಗ ತಂದೆಯೇ ಕುಳಿತು ಓದಿಸುತ್ತಾರೆ ಎಂಬುದನ್ನೂ ಸಹ ಮಾಯೆಯು ಪದೇ-ಪದೇ ಮರೆಸಿ ಬಿಡುತ್ತದೆ, ಇಲ್ಲದಿದ್ದರೆ ಭಗವಂತನೇ ನಮಗೆ ಓದಿಸಿ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಂದರೆ ಎಷ್ಟೊಂದು ಖುಷಿಯಿರಬೇಕು! ಸತ್ಯಯುಗದಲ್ಲಿ ಈ ಜ್ಞಾನವಿರುವುದಿಲ್ಲ. ಮತ್ತೆ ಭಕ್ತಿಮಾರ್ಗದಲ್ಲಿ ಅದೇ ಭಕ್ತಿಯ ಶಾಸ್ತ್ರಗಳು ರಚಿಸಲ್ಪಡುತ್ತವೆ. 2500 ವರ್ಷಗಳು ಈ ಪಾತ್ರವನ್ನು ಅಭಿನಯಿಸಲೇಬೇಕಾಗಿದೆ, ಈ ಚಕ್ರದ ಜ್ಞಾನವು ನಿಮ್ಮ ಬುದ್ಧಿಯಲ್ಲಿದೆ. ಅವರಂತೂ ಪತಿತ-ಪಾವನ ತಂದೆಯನ್ನಾಗಲಿ, ಪಾವನರಿಂದ ಯಾರು ಪತಿತರನ್ನಾಗಿ ಮಾಡುತ್ತಾರೆಂಬುದನ್ನೂ ತಿಳಿದಿಲ್ಲ. ಕೇವಲ ಗೊಂಬೆಗಳನ್ನು ಮಾಡಿ ಆಟವಾಡುತ್ತಾ ಇರುತ್ತಾರೆ, ಏನನ್ನೂ ತಿಳಿದುಕೊಳ್ಳುವುದಿಲ್ಲ. ನೀವೂ ಸಹ ಭಾರತವಾಸಿಗಳಾಗಿದ್ದೀರಿ ಎಂದು ನಿಮಗೆ ಹೇಳುತ್ತಾರೆ ಅಂದಮೇಲೆ ಕೇವಲ ಭಾರತವಾಸಿಗಳು ಏನನ್ನೂ ತಿಳಿದುಕೊಂಡಿಲ್ಲ. ಬುದ್ಧಿಹೀನರಾಗಿದ್ದಾರೆಂದು ನೀವು ಹೇಗೆ ಹೇಳುತ್ತೀರಿ! ನೀವು ಹೇಳಿರಿ – ಇದನ್ನು ಬೇಹದ್ದಿನ ತಂದೆಯು ಹೇಳುತ್ತಾರೆ, ಅವರೇ ಜ್ಞಾನವನ್ನು ಕೊಡುತ್ತಿದ್ದಾರೆ. ನಾವು ಅವರ ಮೂಲಕ ಬುದ್ಧಿವಂತರಾಗಿದ್ದೇವೆ, ಪ್ರದರ್ಶನಿಯಲ್ಲಿ ಅನೇಕರು ಬರುತ್ತಾರೆ, ಈ ಜ್ಞಾನವು ಬಹಳ ಚೆನ್ನಾಗಿದೆ ಎಂದು ಹೇಳುತ್ತಾರೆ. ಹೊರಗಡೆ ಹೋಗುತ್ತಿದ್ದಂತೆಯೇ ಸಮಾಪ್ತಿ ಏಕೆಂದರೆ ಅವರೆಲ್ಲರೂ ರಾವಣನ ಶಿಷ್ಯರಾಗಿದ್ದಾರೆ. ನೀವೀಗ ರಾಮನ ಶಿಷ್ಯರಾಗಿದ್ದೀರಿ. ನಮಗೆ ರಚಯಿತ ತಂದೆಯು ತಿಳಿಸುತ್ತಿದ್ದಾರೆ – ಪತಿತರಿಂದ ಪಾವನರನ್ನಾಗಿ ಮಾಡುತ್ತಿದ್ದಾರೆ ಎಂಬುದು ನೀವು ಮಕ್ಕಳ ಬುದ್ಧಿಯಲ್ಲಿದೆ ಮತ್ತು ತಂದೆಯು ನಮ್ಮ ಕಲ್ಯಾಣ ಮಾಡುತ್ತಾರೆ, ನಾವು ಮತ್ತೆ ಅನ್ಯರ ಕಲ್ಯಾಣ ಮಾಡಬೇಕಾಗಿದೆ. ಅನೇಕರ ಕಲ್ಯಾಣ ಎಷ್ಟು ಮಾಡುವಿರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತೀರಿ, ಇದು ಆತ್ಮಿಕ ಸೇವೆಯಾಗಿದೆ. ಆತ್ಮರಿಗೇ ತಿಳಿಸಲಾಗುತ್ತದೆ. ಆತ್ಮವೇ ತಿಳಿದುಕೊಳ್ಳುತ್ತದೆ, ಅರ್ಧಕಲ್ಪ ನೀವು ದೇಹಾಭಿಮಾನಿಗಳಾಗುತ್ತೀರಿ. ದೇಹೀ-ಅಭಿಮಾನಿಗಳಾಗುವುದರಿಂದ ಅರ್ಧಕಲ್ಪ ಸುಖ, ದೇಹಾಭಿಮಾನಿಗಳಾಗುವುದರಿಂದ ಅರ್ಧಕಲ್ಪ ದುಃಖ. ಎಷ್ಟೊಂದು ಅಂತರವಿದೆ! ನೀವು ವಿಶ್ವದ ಮಾಲೀಕರಾಗಿದ್ದಾಗ ಯಾವುದೇ ಧರ್ಮವಿರಲಿಲ್ಲ, ಈಗ ಎಷ್ಟೊಂದು ಜನಸಂಖ್ಯೆಯಿದೆ! ನೀವೀಗ ಸಂಗಮದಲ್ಲಿದ್ದೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ನೆನಪಿನ ಬಲದಿಂದ ಎಲ್ಲಾ ಲೆಕ್ಕಾಚಾರಗಳನ್ನು ಮುಗಿಸಿ ಸತೋಪ್ರಧಾನರಾಗಿ ಹಿಂತಿರುಗಿ ಮನೆಗೆ ಹೋಗಬೇಕಾಗಿದೆ. ಅನ್ಯ ಯಾವುದೇ ಮಾತುಗಳಲ್ಲಿ ಹೋಗಬಾರದು.

2. ಭಗವಂತನು ನಮಗೆ ಓದಿಸಿ ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ, ಇದೇ ಖುಷಿಯಲ್ಲಿರಬೇಕಾಗಿದೆ. ಆತ್ಮಿಕ ಸೇವೆ ಮಾಡಬೇಕಾಗಿದೆ.

ವರದಾನ:-

ಹೇಗೆ ಯಾವುದೇ ಸಿಂಪಲ್ ಆಗಿರುವ ವಸ್ತುವೇನಾದರೂ ಸ್ವಚ್ಛವಾಗಿರುತ್ತದೆ ಎಂದರೆ ತನ್ನ ಕಡೆ ಅವಶ್ಯವಾಗಿ ಆಕರ್ಷಿಸುತ್ತದೆ. ಅದೇರೀತಿ ಮನಸ್ಸಿನ ಸಂಕಲ್ಪಗಳಲ್ಲಿ, ಸಂಬಂಧದಲ್ಲಿ, ವ್ಯವಹಾರದಲ್ಲಿ, ಚಲನೆ-ವಲನೆಯಲ್ಲಿಯೂ ಯಾರೂ ಸರಳವಾಗಿ ಹಾಗೂ ಸ್ವಚ್ಛವಾಗಿರುತ್ತಾರೆಯೋ ಅವರು ಉದಾಹರಣೆಯಾಗಿದ್ದು, ಸರ್ವರನ್ನೂ ತನ್ನ ಕಡೆಗೆ ಸ್ವತಹವಾಗಿ ಆಕರ್ಷಿಸುತ್ತಾರೆ. ಸರಳ ಅರ್ಥಾತ್ ಸಾಧಾರಣ. ಸಾಧಾರಣತೆಯಿಂದಲೇ ಮಹಾನತೆಯು ಪ್ರಸಿದ್ಧವಾಗುವುದು. ಯಾರು ಸಾಧಾರಣ ಅರ್ಥಾತ್ ಸಾಧಾರಣವಾಗಿ ಇರುವುದಿಲ್ಲವೋ ಅವರು ಸಮಸ್ಯಾ ರೂಪವಾಗಿ ಬಿಡುತ್ತಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top