12 December 2021 KANNADA Murli Today | Brahma Kumaris

Read and Listen today’s Gyan Murli in Kannada

December 11, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಯೋಗಯುಕ್ತ-ಯುಕ್ತಿಯುಕ್ತರಾಗುವ ಯುಕ್ತಿ

♫ ಕೇಳು ಇಂದಿನ ಮುರ್ಲಿ (audio)➤

ಇಂದು ಬಾಪ್ದಾದಾ ತನ್ನ ಸರ್ವ ಮಕ್ಕಳಲ್ಲಿ ವಿಶೇಷ ಎರಡು ಪ್ರಕಾರದ ಮಕ್ಕಳನ್ನು ನೋಡುತ್ತಿದ್ದಾರೆ. ಒಂದನೆಯ ಪ್ರಕಾರದವರು ಸದಾ ಯೋಗಯುಕ್ತರು ಮತ್ತು ಪ್ರತೀ ಮಾತಿನಲ್ಲಿ ಯುಕ್ತಿಯುಕ್ತರಾಗಿದ್ದಾರೆ. ಎರಡನೆಯವರು ಯೋಗಿಗಳಾಗಿದ್ದಾರೆ ಆದರೆ ಸದಾ ಯೋಗಯುಕ್ತರಲ್ಲ ಮತ್ತು ಸದಾ ಪ್ರತೀ ಕರ್ಮದಲ್ಲಿ ಸ್ವತಹ ಯುಕ್ತಿಯುಕ್ತರೂ ಅಲ್ಲ. ಮನಸ್ಸಾ-ವಾಚಾ ಹಾಗೂ ಕರ್ಮ – ಮೂರರಲ್ಲಿಯೂ ಕೆಲಕೆಲವೊಮ್ಮೆ ಕೆಲವೊಂದರಲ್ಲಿ ಯುಕ್ತಿಯುಕ್ತರಾಗಿಲ್ಲ. ವಾಸ್ತವದಲ್ಲಿ ಬ್ರಾಹ್ಮಣ ಜೀವನ ಅರ್ಥಾತ್ ಸ್ವತಹ ಯೋಗಯುಕ್ತ ಮತ್ತು ಸದಾ ಯುಕ್ತಿಯುಕ್ತವಾದುದು. ಬ್ರಾಹ್ಮಣ ಜೀವನದ ಅಲೌಕಿಕತೆ ಹಾಗೂ ವಿಶೇಷತೆ ಮತ್ತು ಭಿನ್ನ ಹಾಗೂ ಪ್ರಿಯ ಸ್ಥಿತಿಯು ಇದೇ ಆಗಿದೆ – “ಯೋಗಯುಕ್ತ” ಮತ್ತು “ಯುಕ್ತಿಯುಕ್ತ” ಆದರೆ ಕೆಲವು ಮಕ್ಕಳು ಈ ವಿಶೇಷತೆಯಲ್ಲಿ ಸಹಜ ಮತ್ತು ಸ್ವಾಭಾವಿಕವಾಗಿ ನಡೆಯುತ್ತಿದ್ದಾರೆ ಮತ್ತು ಕೆಲವರು ಗಮನವನ್ನೂ ಇಡುತ್ತಾರೆ ಆದರೂ ಸಹ ಸದಾ ಎರಡು ಮಾತುಗಳ ಅನುಭವ ಮಾಡಲು ಸಾಧ್ಯವಿಲ್ಲ, ಇದಕ್ಕೆ ಕಾರಣವೇನು? ಜ್ಞಾನವಂತೂ ಎಲ್ಲರಿಗೂ ಇದೆ ಮತ್ತು ಎಲ್ಲರ ಲಕ್ಷ್ಯವೂ ಒಂದೇ ಆಗಿದೆ – ಆದರೂ ಸಹ ಕೆಲವರು ಲಕ್ಷ್ಯದ ಆಧಾರದಿಂದ ಇವೆರಡೂ ಲಕ್ಷ್ಯಗಳು ಅರ್ಥಾತ್ ಯೋಗಯುಕ್ತ ಮತ್ತು ಯುಕ್ತಿಯುಕ್ತ ಸ್ಥಿತಿಯ ಅನುಭೂತಿಗೆ ಸಮೀಪವಿದ್ದಾರೆ. ಇನ್ನೂ ಕೆಲವರು ಕೆಲವೊಮ್ಮೆ ತೀವ್ರ ಪುರುಷಾರ್ಥದಿಂದ ಸಮೀಪ ಬರುತ್ತಾರೆ ಆದರೆ ಕೆಲವೊಮ್ಮೆ ಸಮೀಪ, ಇನ್ನೂ ಕೆಲವೊಮ್ಮೆ ನಡೆಯುತ್ತಾ-ನಡೆಯುತ್ತಾ ಯಾವುದಾದರೊಂದು ಕಾರಣಕ್ಕೆ ವಶರಾಗಿ ನಿಂತು ಬಿಡುತ್ತಾರೆ ಆದರೆ ಸದಾ ಲಕ್ಷಣದ ಸಮೀಪ ಅನುಭೂತಿ ಮಾಡುವುದಿಲ್ಲ. ಸರ್ವ ಬ್ರಾಹ್ಮಣ ಆತ್ಮರಲ್ಲಿ ಈ ಶ್ರೇಷ್ಠಲಕ್ಷ್ಯದವರೆಗೆ ನಂಬರ್ವನ್ ಸಮೀಪ ಯಾರು? ಬ್ರಹ್ಮಾತಂದೆ ಅಂದಮೇಲೆ ಯಾವ ವಿಧಿಯನ್ನು ಅಳವಡಿಸಿಕೊಂಡ ಕಾರಣ ಈ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಂಡರು? ಸದಾ ಯೋಗಯುಕ್ತರಾಗಿರುವ ಸರಳ ವಿಧಿಯಾಗಿದೆ – ಸದಾ ತನ್ನನ್ನು “ಸಾರಥಿ” ಮತ್ತು “ಸಾಕ್ಷಿ” ಎಂದು ತಿಳಿದು ನಡೆಯುವುದು.

ತಾವೆಲ್ಲಾ ಶ್ರೇಷ್ಠಾತ್ಮರು ಈ ರಥಕ್ಕೆ ಸಾರಥಿಯಾಗಿದ್ದೀರಿ, ರಥವನ್ನು ನಡೆಸುವಂತಹ ಆತ್ಮ ಸಾರಥಿಯಾಗಿದ್ದೀರಿ. ಈ ಸ್ಮೃತಿಯು ಸ್ವತಹವಾಗಿಯೇ ಈ ರಥ ಅಥವಾ ದೇಹದಿಂದ ಭಿನ್ನ ಮಾಡಿ ಬಿಡುತ್ತದೆ. ಯಾವುದೇ ಪ್ರಕಾರದ ದೇಹದ ಪರಿವೆಯಿಂದ ಭಿನ್ನ ಮಾಡಿ ಬಿಡುತ್ತದೆ. ದೇಹಭಾನವು ಇಲ್ಲವೆಂದರೆ ಸಹಜವಾಗಿ ಯೋಗಯುಕ್ತರಾಗಿ ಬಿಡುತ್ತೀರಿ ಮತ್ತು ಪ್ರತೀ ಕರ್ಮದಲ್ಲಿ ಯೋಗಯುಕ್ತ, ಯುಕ್ತಿಯುಕ್ತರು ಸ್ವತಹ ಆಗಿ ಬಿಡುತ್ತೀರಿ. ಸ್ವಯಂನ್ನು ಸಾರಥಿಯೆಂದು ತಿಳಿಯುವುದರಿಂದ ಸರ್ವ ಕರ್ಮೇಂದ್ರಿಯಗಳು ತನ್ನ ನಿಯಂತ್ರಣದಲ್ಲಿ ಇರುತ್ತವೆ ಅರ್ಥಾತ್ ಸರ್ವ ಕರ್ಮೇಂದ್ರಿಯಗಳನ್ನು ಸದಾ ಲಕ್ಷ್ಯ ಮತ್ತು ಲಕ್ಷಣದ ಗುರಿಯ ಸಮೀಪಕ್ಕೆ ತರುವ ನಿಯಂತ್ರಣ ಶಕ್ತಿಯು ಬಂದು ಬಿಡುತ್ತದೆ. ಸ್ವಯಂ “ಸಾರಥಿ”ಯಾವುದೇ ಕರ್ಮೇಂದ್ರಿಯಕ್ಕೆ ವಶವಾಗುವುದಿಲ್ಲ ಏಕೆಂದರೆ ಮಾಯೆಯು ಯಾರ ಮೇಲಾದರೂ ಯುದ್ಧ ಮಾಡುತ್ತದೆಯೆಂದರೆ ಮಾಯೆಯು ಯುದ್ಧ ಮಾಡುವ ವಿಧಿಯು ಇದೇ ಆಗಿರುತ್ತದೆ – ಮೊದಲು ಅದು ಯಾವುದಾದರೊಂದು ಸ್ಥೂಲ ಕರ್ಮೇಂದ್ರಿಯ ಅಥವಾ ಸೂಕ್ಷ್ಮ ಶಕ್ತಿಗಳಾದ “ಮನ-ಬುದ್ಧಿ-ಸಂಸ್ಕಾರ”ದ ಪರವಶರನ್ನಾಗಿ ಮಾಡಿ ಬಿಡುತ್ತದೆ. ತಾವು ಸಾರಥಿ ಆತ್ಮರಿಗೆ ತಂದೆಯಿಂದ ಯಾವ ಮಹಾಮಂತ್ರವು ವಶೀಕರಣ ಮಂತ್ರ ಸಿಕ್ಕಿದೆಯೋ ಅದನ್ನು ಪರಿವರ್ತನೆ ಮಾಡಿ ವಶೀಕರಣದ ಬದಲು ವಶೀಭೂತರನ್ನಾಗಿ ಮಾಡಿ ಬಿಡುತ್ತದೆ ಮತ್ತು ಒಂದು ಮಾತಿನಲ್ಲಿ ವಶೀಭೂತರಾಗಿ ಬಿಟ್ಟರೆ ಎಲ್ಲಾ ಭೂತಗಳು ಪ್ರವೇಶವಾಗಿ ಬಿಡುತ್ತವೆ ಏಕೆಂದರೆ ಈ ಭೂತಗಳಲ್ಲಿ ಪರಸ್ಪರ ಒಗ್ಗಟ್ಟಿದೆ. ಒಂದು ಭೂತವು ಬಂದಿತೆಂದರೆ ಅದು ಮತ್ತೆಲ್ಲಾ ಭೂತಗಳ ಆಹ್ವಾನ ಮಾಡುತ್ತದೆ ನಂತರ ಏನಾಗುವುದು? ಈ ಭೂತವು ಸಾರಥಿಯಿಂದ ಸ್ವಾರ್ಥಿಯನ್ನಾಗಿ ಮಾಡಿ ಬಿಡುತ್ತದೆ ಮತ್ತು ತಾವೇನು ಮಾಡುತ್ತೀರಿ? ಯಾವಾಗ ಸಾರಥಿತನದ ಸ್ಮೃತಿಯಲ್ಲಿ ಬರುತ್ತೀರೋ ಆಗ ಭೂತಗಳನ್ನು ಓಡಿಸುವ ಯುದ್ಧ ಮಾಡುತ್ತೀರಿ, ಯುದ್ಧದ ಸ್ಥಿತಿಯನ್ನು ಯೋಗಯುಕ್ತ ಸ್ಥಿತಿಯೆಂದು ಹೇಳುವುದಿಲ್ಲ ಆದ್ದರಿಂದ ಯೋಗಯುಕ್ತ ಮತ್ತು ಯುಕ್ತಿಯುಕ್ತ ಗುರಿಯ ಸಮೀಪಕ್ಕೆ ಹೋಗುವ ಬದಲು ನಿಂತು ಬಿಡುತ್ತೀರಿ ಮತ್ತು ಮೊದಲ ನಂಬರಿನ ಸ್ಥಿತಿಯಿಂದ ಎರಡನೇ ನಂಬರಿಗೆ ಬಂದು ಬಿಡುತ್ತೀರಿ. ಸಾರಥಿ ಎಂದರೆ ಅವರು ವಶರಾಗುವವರಲ್ಲ ಬದಲಾಗಿ ವಶಪಡಿಸಿಕೊಂಡು ನಡೆಸುವವರಾಗಿರುತ್ತಾರೆ ಅಂದಮೇಲೆ ತಾವೆಲ್ಲರೂ ಯಾರಾಗಿದ್ದೀರಿ? ಸಾರಥಿಗಳಲ್ಲವೆ.

ಸಾರಥಿ ಅರ್ಥಾತ್ ಆತ್ಮಾಭಿಮಾನಿ ಏಕೆಂದರೆ ಆತ್ಮನೇ ಸಾರಥಿಯಾಗಿದೆ, ಬ್ರಹ್ಮಾ ತಂದೆಯು ಈ ವಿಧಿಯಿಂದ ನಂಬರ್ವನ್ ಸಿದ್ಧಿಯನ್ನು ಪ್ರಾಪ್ತಿ ಮಾಡಿಕೊಂಡರು ಆದ್ದರಿಂದ ತಂದೆಯೂ ಸಹ ಇವರಿಗೆ ಸಾರಥಿಯಾದರು. ಸಾರಥಿಯಾಗುವ ನೆನಪಾರ್ಥವನ್ನು ತಂದೆಯು ಮಾಡಿ ತೋರಿಸಿದರು. ಫಾಲೋ ಫಾದರ್ ಮಾಡಿರಿ. ಸಾರಥಿಯಾಗಿ ಸದಾ ಸಾರಥಿ ಜೀವನದಲ್ಲಿ ಅತಿ ಭಿನ್ನ ಮತ್ತು ಪ್ರಿಯ ಸ್ಥಿತಿಯನ್ನು ಅನುಭವ ಮಾಡಿಸಿದರು ಏಕೆಂದರೆ ದೇಹವನ್ನು ಅಧೀನ ಮಾಡಿಕೊಂಡು ತಂದೆಯು ಪ್ರವೇಶಿಸುತ್ತಾರೆ ಅರ್ಥಾತ್ ಸಾರಥಿಯಾಗುತ್ತಾರೆಯೇ ಹೊರತು ದೇಹಕ್ಕೆ ಅಧೀನರಾಗುವುದಿಲ್ಲ ಆದ್ದರಿಂದ ಭಿನ್ನ ಮತ್ತು ಪ್ರಿಯರಾಗಿದ್ದಾರೆ. ಹಾಗೆಯೇ ತಾವೆಲ್ಲಾ ಬ್ರಾಹ್ಮಣ ಆತ್ಮರೂ ಸಹ ತಂದೆಯ ಸಮಾನ ಸಾರಥಿ ಸ್ಥಿತಿಯಲ್ಲಿರಿ. ನಡೆಯುತ್ತಾ-ತಿರುಗಾಡುತ್ತಾ ಇದನ್ನು ಪರಿಶೀಲನೆ ಮಾಡಿಕೊಳ್ಳಿ – ನಾನು ಸಾರಥಿ ಅರ್ಥಾತ್ ಸರ್ವರನ್ನು ನಡೆಸುವಂತಹ ಭಿನ್ನ ಮತ್ತು ಪ್ರಿಯಸ್ಥಿತಿಯಲ್ಲಿ ಸ್ಥಿತನಾಗಿದ್ದೇನೆಯೇ? ಇದನ್ನೂ ಮಧ್ಯ-ಮಧ್ಯದಲ್ಲಿ ಪರಿಶೀಲಿಸಿಕೊಳ್ಳಿ. ಇಡೀ ದಿನ ಹಾಗೆಯೇ ಕಳೆದು ಹೋದ ಮೇಲೆ ನಂತರ ರಾತ್ರಿಯಲ್ಲಿ ಪರಿಶೀಲನೆ ಮಾಡಿಕೊಳ್ಳುವುದಲ್ಲ, ಇಡೀ ದಿನ ಕಳೆದು ಹೋಯಿತೆಂದರೆ ಕಳೆದು ಹೋಗಿರುವ ಸಮಯವು ಸದಾಕಾಲಕ್ಕಾಗಿ ಸಂಪಾದನೆಯಿಂದ ಹೊರಟು ಹೋಯಿತು ಆದ್ದರಿಂದ ಕಳೆದುಕೊಂಡ ಮೇಲೆ ಎಚ್ಚೆತ್ತುಕೊಳ್ಳಬೇಡಿ, ಇದನ್ನು ಸ್ವತಹ ಸ್ವಾಭಾವಿಕ ಸಂಸ್ಕಾರವನ್ನಾಗಿ ಮಾಡಿಕೊಳ್ಳಿ. ಯಾವುದನ್ನು? ಪರಿಶೀಲನೆ ಮಾಡಿಕೊಳ್ಳುವ ಸಂಸ್ಕಾರ. ಹೇಗೆ ಯಾರದೇ ಯಾವುದೇ ಹಳೆಯ ಸಂಸ್ಕಾರವು ಈ ಬ್ರಾಹ್ಮಣ ಜೀವನದಲ್ಲಿ ಈಗಲೂ ಸಹ ಮುಂದುವರೆಯುವುದರಲ್ಲಿ ವಿಘ್ನರೂಪ ಆಗಿ ಬಿಡುತ್ತದೆ ಎಂದರೆ ಬಯಸದಿದ್ದರೂ ಸಂಸ್ಕಾರಕ್ಕೆ ವಶರಾಗಿ ಬಿಡುತ್ತೇವೆ ಎಂದು ಹೇಳುತ್ತೀರಲ್ಲವೆ. ಯಾವುದನ್ನು ಮಾಡಲು ಬಯಸದಿದ್ದರೂ ಸಹ ಅದನ್ನು ಮಾಡಿ ಬಿಡುತ್ತೀರಿ, ಯಾವಾಗ ಉಲ್ಟಾ ಸಂಸ್ಕಾರವು ಬಯಸದಿದ್ದರೂ ಸಹ ಯಾವುದೇ ಕರ್ಮ ಮಾಡಿಸಿ ಬಿಡುತ್ತದೆ ಅಂದಮೇಲೆ ಈ ಸ್ವಾಭಾವಿಕ ಪರಿಶೀಲನೆಯ ಶುದ್ಧ ಸಂಸ್ಕಾರವನ್ನು ನಿಮ್ಮಿಂದ ಅಳವಡಿಸಿಕೊಳ್ಳಲು ಸಾಧ್ಯವಿಲ್ಲವೆ? ಪರಿಶ್ರಮವಿಲ್ಲದೆ ಪರಿಶೀಲನೆಯ ಶುದ್ಧ ಸಂಸ್ಕಾರವು ಸ್ವತಹವಾಗಿ ಕಾರ್ಯ ಮಾಡಿಸುತ್ತಾ ಇರುತ್ತದೆ. ಮರೆತು ಹೋಗುತ್ತೇವೆ ಅಥವಾ ಬಹಳ ಬ್ಯುಜಿûಯಾಗಿರುತ್ತೇವೆ ಎಂದು ಹೇಳುವುದಿಲ್ಲ. ಅಶುದ್ಧ ಅಥವಾ ವ್ಯರ್ಥ ಸಂಸ್ಕಾರವಿದೆ, ಕೆಲವು ಮಕ್ಕಳಲ್ಲಿ ಅಶುದ್ಧ ಸಂಸ್ಕಾರವಿಲ್ಲದಿದ್ದರೆ ವ್ಯರ್ಥ ಸಂಸ್ಕಾರವಾದರೂ ಇರುತ್ತದೆ. ಈ ಅಶುದ್ಧ, ವ್ಯರ್ಥ ಸಂಸ್ಕಾರವು ಮರೆಸಿದರೂ ಸಹ ಮರೆತು ಹೋಗುವುದಿಲ್ಲ ಮತ್ತು ನಂತರ ಇದನ್ನೇ ಹೇಳುತ್ತೀರಿ – ನನಗೆ ಅಂತಹ ಭಾವನೆಯಿರಲಿಲ್ಲ ಆದರೆ ಏನು ಮಾಡುವುದು? ಇದು ನನ್ನ ಹಳೆಯ ಸ್ವಭಾವವಾಗಿದೆ ಅಥವಾ ಸಂಸ್ಕಾರವಾಗಿದೆ ಅಂದಮೇಲೆ ಅಶುದ್ಧ ಸಂಸ್ಕಾರವು ಮರೆತರೂ ಮರೆಯುವುದಿಲ್ಲ ಆದರೆ ಶುದ್ಧ ಸಂಸ್ಕಾರವು ಹೇಗೆ ಮರೆತು ಹೋಗುತ್ತದೆ? ಸಾರಥಿತನದ ಸ್ಥಿತಿಯು ಸ್ವತಹವಾಗಿ ಸ್ವ-ಉನ್ನತಿಯ ಶುದ್ಧ ಸಂಸ್ಕಾರವನ್ನು ಇಮರ್ಜ್ ಮಾಡುತ್ತದೆ ಮತ್ತು ಸ್ವಾಭಾವಿಕವಾಗಿ ಸಮಯ ಪ್ರಮಾಣ ಸಹಜವಾಗಿ ಪರಿಶೀಲನೆ ನಡೆಯುತ್ತಾ ಇರುತ್ತದೆ, ಅಶುದ್ಧ ಹವ್ಯಾಸದಿಂದ ದೂರವಾಗಿ ಬಿಡುತ್ತೀರಿ ಮತ್ತು ಈ ಹವ್ಯಾಸದಿಂದ ಬಲವಾಗಿ ಬಿಡುತ್ತೀರಿ. ಅಂದಾಗ ಕೇಳಿದಿರಾ – ಸದಾ ಯೋಗಯುಕ್ತ-ಯುಕ್ತಿಯುಕ್ತರಾಗಿರುವ ವಿಧಿ ಏನಾಗಿದೆ? ಸಾರಥಿಯಾಗಿ ನಡೆಯುವುದು. ಸಾರಥಿಯು ಸ್ವತಹ ಸಾಕ್ಷಿಯಾಗಿ ಮಾಡುತ್ತಾರೆ, ನೋಡುತ್ತಾರೆ, ಕೇಳುತ್ತಾರೆ. ಸಾಕ್ಷಿಯಾಗಿ ನೋಡುವ, ಕೇಳುವ, ಮಾಡುವ ಎಲ್ಲದರಲ್ಲಿಯೂ ಎಲ್ಲವನ್ನೂ ಮಾಡುತ್ತಿದ್ದರೂ ಸಹ ನಿರ್ಲೇಪವಾಗಿರುತ್ತಾರೆ ಅರ್ಥಾತ್ ಮಾಯೆಯ ಲೇಪದಿಂದ ಭಿನ್ನವಾಗಿರುತ್ತಾರೆ ಅಂದಮೇಲೆ ಪಾಠವನ್ನು ಪಕ್ಕಾ ಮಾಡಿಕೊಂಡಿರಲ್ಲವೆ. ಬ್ರಹ್ಮಾ ತಂದೆಯನ್ನು ಫಾಲೋ ಮಾಡುವವರಾಗಿದ್ದೀರಲ್ಲವೆ. ಬ್ರಹ್ಮಾ ತಂದೆಯೊಂದಿಗೆ ಬಹಳ ಪ್ರೀತಿಯಿದೆ ಅಂದಮೇಲೆ ಪ್ರೀತಿಗೆ ಗುರುತಾಗಿದೆ – “ಸಮಾನರಾಗುವುದು” ಅರ್ಥಾತ್ ಫಾಲೋ ಮಾಡುವುದು.

ಎಲ್ಲಾ ಟೀಚರ್ಸ್ಗೆ ತಂದೆಯೊಂದಿಗೆ ಎಷ್ಟು ಪ್ರೀತಿಯಿದೆ! ತಂದೆಯು ಸದಾ ಟೀಚರ್ಸ್ನ್ನು ತನ್ನ ಸೇವೆಯ ಸಮೀಪ ಜೊತೆಗಾರರೆಂದು ತಿಳಿಯುತ್ತೇವೆ ಅಂದಮೇಲೆ ಮೊದಲು ಟೀಚರ್ಸ್ ಫಾಲೋ ಮಾಡುತ್ತೀರಲ್ಲವೆ! ಇದರಲ್ಲಿ ಸದಾ ಇದೇ ಲಕ್ಷ್ಯವನ್ನು ಇಟ್ಟುಕೊಳ್ಳಿ – “ಮೊದಲು ನಾನು”. ಈರ್ಷ್ಯೆಯಲ್ಲಿ ಮೊದಲು ನಾನು ಎಂಬುದಲ್ಲ, ಇದು ನಷ್ಟವನ್ನು ಉಂಟು ಮಾಡುತ್ತದೆ. ಶಬ್ಧವು ಅದೇ ಆಗಿದೆ – “ಮೊದಲು ನಾನು” ಆದರೆ ಒಂದಾಗಿದೆ – ಈರ್ಷ್ಯೆಗೆ ವಶರಾಗಿ ಮೊದಲು ನಾನು ಎಂದು ಹೇಳುವುದು, ಇದರಿಂದ ಮೊದಲು ಬರುವ ಬದಲು ಹಿಂದುಳಿದು ಬಿಡುತ್ತಾರೆ. ಮೊದಲಿನಿಂದ ಕೊನೆಗೆ ಬಂದು ಬಿಡುತ್ತಾರೆ ಆದ್ದರಿಂದ ಫಾಲೋ ಮಾಡುವುದರಲ್ಲಿ “ಮೊದಲು ನಾನು” ಎಂದು ಹೇಳಿರಿ ಮತ್ತು ಮಾಡಿರಿ ಆಗ ತಾವೇ ಮೊದಲು ಹೊರಟು ಬಿಡುತ್ತೀರಿ. ಬ್ರಹ್ಮಾ ತಂದೆಯು ಮೊದಲು ಹೋದರಲ್ಲವೆ ಅಂದಮೇಲೆ ಸದಾ ಈ ಲಕ್ಷ್ಯವನ್ನಿಟ್ಟುಕೊಳ್ಳಿ – ಟೀಚರ್ಸ್ ಅರ್ಥಾತ್ ಫಾಲೋ ಫಾದರ್ ಮತ್ತು ನಂಬರ್ವನ್ ಫಾಲೋ ಫಾದರ್. ಹೇಗೆ ಬ್ರಹ್ಮಾರವರು ನಂಬರ್ವನ್ ಆದರು ಅಂದಮೇಲೆ ಫಾಲೋ ಮಾಡುವವರೂ ಸಹ ನಂಬರ್ವನ್ ಬರುವ ಲಕ್ಷ್ಯವನ್ನು ಇಟ್ಟುಕೊಳ್ಳಿ. ಎಲ್ಲಾ ಟೀಚರ್ಸ್ ಇದರಲ್ಲಿ ಪಕ್ಕಾ ಇದ್ದೀರಲ್ಲವೆ. ಫಾಲೋ ಮಾಡುವ ಧೈರ್ಯವಿದೆಯಲ್ಲವೆ ಏಕೆಂದರೆ ಟೀಚರ್ಸ್ ಅರ್ಥಾತ್ ನಿಮಿತ್ತರಾಗುವವರು. ಅನೇಕ ಆತ್ಮರಿಗೆ ನಿಮಿತ್ತರಾಗಿದ್ದೀರಿ ಅಂದಮೇಲೆ ನಿಮಿತ್ತರಾಗುವವರ ಮೇಲೆ ಎಷ್ಟೊಂದು ಜವಾಬ್ದಾರಿಯಿದೆ! ಹೇಗೆ ಬ್ರಹ್ಮಾ ತಂದೆಯು ನಿಮಿತ್ತರಾಗಿದ್ದರಲ್ಲವೆ ಆದ್ದರಿಂದ ಬ್ರಹ್ಮಾ ತಂದೆಯನ್ನು ನೋಡಿ ಎಷ್ಟೊಂದು ಮಂದಿ ಬ್ರಾಹ್ಮಣರು ತಯಾರಾದರು! ಅದೇರೀತಿ ಟೀಚರ್ಸ್ ಯಾವುದೇ ಕಾರ್ಯವನ್ನು ಮಾಡುತ್ತೀರಿ, ಅಡಿಗೆಯನ್ನೇ ಮಾಡುತ್ತೀರೋ ಅಥವಾ ಸ್ವಚ್ಛತೆಯನ್ನು ಮಾಡುತ್ತಿದ್ದೀರೋ ಆದರೆ ಪ್ರತೀ ಕರ್ಮ ಮಾಡುತ್ತಾ ಈ ಸ್ಮೃತಿಯಿರಲಿ – ನಾನು ಅನೇಕ ಆತ್ಮರ ಪ್ರತಿ ನಿಮಿತ್ತನಾಗಿದ್ದೇನೆ. ನಾನು “ಯಾವುದನ್ನೂ” ಮತ್ತು “ಹೇಗೆ” ಮಾಡುತ್ತೇನೆಯೋ ನಾನು ನಿಮಿತ್ತ ಆತ್ಮನನ್ನು ನೋಡಿ ಅನ್ಯರೂ ಮಾಡುತ್ತಾರೆ ಆದ್ದರಿಂದ ಬಾಪ್ದಾದಾ ಸದಾ ಹೇಳುತ್ತಾರೆ – ಒಂದು ಕಡೆ ಭಾಷಣ ಮಾಡುವುದು ಮತ್ತು ಇನ್ನೊಂದು ಕಡೆ ಪಾತ್ರೆ ತೊಳೆಯುವುದು – ಎರಡರಲ್ಲಿಯೂ ಯೋಗಯುಕ್ತ-ಯುಕ್ತಿಯುಕ್ತ ಸ್ಥಿತಿಯಿರಲಿ. ಯಾವುದೇ ಕೆಲಸವಾಗಿರಲಿ ಆದರೆ ಸ್ಥಿತಿಯು ಸದಾ ಯೋಗಯುಕ್ತ ಮತ್ತು ಯುಕ್ತಿಯುಕ್ತವಾಗಿರಲಿ. ಭಾಷಣ ಮಾಡುತ್ತಿದ್ದೇವೆಂದು ಹೇಳಿ ಯೋಗಯುಕ್ತರು ಆಗಿರುವುದಲ್ಲ ಮತ್ತು ಪಾತ್ರೆ ತೊಳೆಯುವುದು ಅರ್ಥಾತ್ ಸಾಧಾರಣ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿ ಸಾಧಾರಣ ಸ್ಥಿತಿಯಾಗಿ ಬಿಡುವುದಲ್ಲ, ಪ್ರತೀ ಸಮಯ ಫಾಲೋ ಫಾದರ್ ಮಾಡಿ. ತಿಳಿಯಿತೆ!

ಮುಂದೆ ಕುಳಿತುಕೊಳ್ಳುತ್ತೀರಿ ಅಂದಮೇಲೆ ಮುಂದೆ ಕುಳಿತುಕೊಳ್ಳಲು ಎಷ್ಟೊಂದು ಇಷ್ಟವಾಗುತ್ತದೆ. ಮತ್ತು ಸದಾ ಮುಂದುವರೆಯುವುದರಲ್ಲಿ ಎಷ್ಟು ಚೆನ್ನಾಗಿರುತ್ತದೆ! ಯಾವುದೇ ಇಂತಹ ಕಠಿಣ ಸಂಸ್ಕಾರವು ಹಿಂದೇಟಾಕುವ ಪ್ರಯತ್ನ ಮಾಡಿದರೆ ಆಗ ಈ ದೃಶ್ಯವನ್ನು ನೆನಪು ಮಾಡಿಕೊಳ್ಳಿ. ಯಾವಾಗ ಮುಂದೆ ಕುಳಿತುಕೊಳ್ಳಲು ಎಷ್ಟು ಚೆನ್ನಾಗಿರುತ್ತದೆ ಅಂದಮೇಲೆ ಮುಂದುವರೆಯುವುದರಲ್ಲಿ ನಾವೇಕೆ ಹಿಂದುಳಿಯಬೇಕು? ಯಾವುದೇ ಮಾತು ಬಂದರೆ ಮಧುಬನಕ್ಕೆ ತಲುಪಿ ಬಿಡಿ ಮತ್ತು ತನ್ನನ್ನು ಧೈರ್ಯ, ಉಮ್ಮಂಗದಲ್ಲಿ ತಂದುಕೊಳ್ಳಿ ಏಕೆಂದರೆ ಹಿಂದೆ ಇರುವವರು ಕೊನೆಯಲ್ಲಿ ಇನ್ನೂ ಅನೇಕರು ಬರುತ್ತಾರೆ. ತಾವೆಲ್ಲರೂ ಒಂದುವೇಳೆ ಹಿಂದೆ ಉಳಿದುಕೊಂಡರೆ ಮತ್ತೆ ಹಿಂದಿರುವವರು ಮುಂದೆ ಬರಬೇಕಾಗುತ್ತದೆ ಆದ್ದರಿಂದ ಸದಾ ಇದನ್ನೇ ಸ್ಮೃತಿಯಿಟ್ಟುಕೊಳ್ಳಿ – ನಾವು ಮುಂದೆ ಇರುವವರಾಗಿದ್ದೇವೆ. ಹಿಂದೆ ಇರುವುದು ಅರ್ಥಾತ್ ಪ್ರಜೆಗಳಾಗುವುದು. ಪ್ರಜೆಗಳಂತೂ ಆಗಬಾರದಲ್ಲವೆ. ಪ್ರಜಾಯೋಗಿಗಳಲ್ಲ, ರಾಜಯೋಗಿಗಳಾಗಿದ್ದೀರಲ್ಲವೆ! ಅಂದಮೇಲೆ ಫಾಲೋ ಫಾದರ್ ಮಾಡಿ. ಒಳ್ಳೆಯದು-

ವಿದೇಶಿಯರು ಏನು ಮಾಡುತ್ತೀರಿ? ಫಾಲೋ ಫಾದರ್ ಮಾಡುತ್ತೀರಲ್ಲವೆ! ಎಲ್ಲಿಯತನಕ ತಲುಪುತ್ತೀರಿ? ಎಲ್ಲರೂ ಮುಂದೆ ಬರುತ್ತೀರಿ. ಯಾರೆಲ್ಲಾ ಬಂದಿದ್ದೀರೋ ಎಲ್ಲರೂ ಫಾಲೋ ಫಾದರ್ ಮಾಡಿ ಫಾಸ್ಟ್ ಮತ್ತು ಫಸ್ಟ್ ಬನ್ನಿರಿ. ಒಬ್ಬರೇ ಮೊಟ್ಟ ಮೊದಲಿಗೆ ಬರುವರು ಎಂದು ತಿಳಿಯಬೇಡಿ. ಫಸ್ಟ್ ಗ್ರೇಡ್ನಲ್ಲಂತೂ ಅನೇಕರಿರುವರಲ್ಲವೆ. ಫಸ್ಟ್ ನಂಬರಿನಲ್ಲಂತೂ ಬ್ರಹ್ಮಾ ತಂದೆಯು ಬರುವರು ಆದರೆ ಫಸ್ಟ್ ಗ್ರೇಡ್ನಲ್ಲಿ ಜೊತೆಗಾರರಿರುತ್ತಾರೆ ಆದ್ದರಿಂದ ಎಲ್ಲರೂ ತಂದೆಯ ಜೊತೆಯಲ್ಲಿ ಬನ್ನಿರಿ. ಒಬ್ಬರೇ ಫಸ್ಟ್ ಇರುವುದಿಲ್ಲ, ಫಸ್ಟ್ ಗ್ರೇಡ್ನವರು ಅನೇಕರಿರುತ್ತಾರೆ ಆದ್ದರಿಂದ ಮೊದಲ ನಂಬರಂತೂ ನಿಗಧಿಯಾಯಿತು ಆದ್ದರಿಂದ ನಾವು ಎರಡನೇ ಗ್ರೇಡ್ನಲ್ಲಿ ಬರುತ್ತೇವೆಂದು ತಿಳಿಯಬೇಡಿ. ಯಾರು ಮೊದಲು ಮಾಡುವರೋ ಅವರೇ ಅರ್ಜುನರು. ಮೊದಲ ನಂಬರಿನವರು ಅರ್ಜುನರು. ಎಲ್ಲರಿಗೂ ಫಸ್ಟ್ನಲ್ಲಿ ಬರುವ ಅವಕಾಶವಿದೆ, ಎಲ್ಲರೂ ಬರಬಹುದಾಗಿದೆ. ಫಸ್ಟ್ಗ್ರೇಡ್ ಅಪರಿಮಿತವಾಗಿದೆ, ಕಡಿಮೆಯಿಲ್ಲ ಆದ್ದರಿಂದ ಎಲ್ಲರೂ ಫಸ್ಟ್ನಲ್ಲಿ ಬರುತ್ತೀರಲ್ಲವೆ, ಪಕ್ಕಾ ಇದ್ದೀರಾ? ಒಳ್ಳೆಯದು!

ಸದಾ ಬ್ರಹ್ಮಾ ತಂದೆಯನ್ನು ಫಾಲೋ ಮಾಡುವವರು, ಸದಾ ಸ್ವತಹ ಯೋಗಯುಕ್ತ-ಯುಕ್ತಿಯುಕ್ತರಾಗಿರುವವರು, ಸದಾ ಸಾರಥಿಯಾಗಿ ಕರ್ಮೇಂದ್ರಿಯಗಳನ್ನು ಶ್ರೇಷ್ಠ ಮಾರ್ಗದಲ್ಲಿ ನಡೆಸುವವರು, ಸದಾ ಗುರಿಯ ಸಮೀಪ ಇರುವವರು ಇಂತಹ ಸರ್ವ ಶ್ರೇಷ್ಠ ಆತ್ಮರಿಗೆ ಬಾಪ್ದಾದಾರವರ ನೆನಪು-ಪ್ರೀತಿ ಹಾಗೂ ನಮಸ್ತೆ.

ಅವ್ಯಕ್ತ ಬಾಪ್~ದಾದಾರವರ ಜೋನ್ ಪ್ರಕಾರ ಉಚ್ಛರಿಸಲ್ಪಟ್ಟ ಮಹಾವಾಕ್ಯಗಳು – ಇಂದೋರ್ ಜೋನ್ ಗ್ರೂಪ್:

ಬಾಪ್ದಾದಾರವರ ಶ್ರೇಷ್ಠ ಮತವು ಶ್ರೇಷ್ಠ ಗತಿಯನ್ನು ಪ್ರಾಪ್ತಿ ಮಾಡಿಸಿತು – ಇಂತಹ ಅನುಭವ ಮಾಡುತ್ತೀರಲ್ಲವೆ! ಮತದಂತೆ ಗತಿಯಾಗುತ್ತದೆ ಅಂದಮೇಲೆ ತಂದೆಯ ಶ್ರೇಷ್ಠ ಮತವಿದೆಯೆಂದರೆ ಗತಿಯೂ ಶ್ರೇಷ್ಠವಾಗಿ ಇರುತ್ತದೆಯಲ್ಲವೇ! ಹೇಗೆ ಅಂತ್ಯ ಮತಿ ಸೊ ಗತಿ ಎಂದು ಹೇಳುತ್ತಾರೆ….. ಈ ರೀತಿ ಏಕೆ ಮಹಿಮೆ ಮಾಡಲಾಗಿದೆ? ಏಕೆಂದರೆ ತಂದೆಯವರು ಚಕ್ರದ ಅಂತಿಮದಲ್ಲಿಯೇ ಬಂದು ಶ್ರೇಷ್ಠ ಮತವನ್ನು ಕೊಡುತ್ತಾರೆ ಅಂದಮೇಲೆ ಅಂತಿಮ ಸಮಯದಲ್ಲಿ ಶ್ರೇಷ್ಠ ಮತವನ್ನು ತೆಗೆದುಕೊಳ್ಳುತ್ತೀರಿ ಹಾಗೂ ಅನೇಕ ಜನ್ಮಗಳ ಸದ್ಗತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಈ ಸಮಯದಲ್ಲಿ ಬೇಹದ್ದಿನ “ಅಂತ್ಯ ಮತಿ ಸೊ ಗತಿ” ಶ್ರೇಷ್ಠವಾಗಿ ಬಿಡುತ್ತದೆ. ಹಾಗಾದರೆ ಈ ಸಮಯದ್ದೇ ನೆನಪಾರ್ಥವು ಭಕ್ತಿಮಾರ್ಗದಲ್ಲಿ ನಡೆದುಬಂದಿದೆ. ಒಂದು ಜನ್ಮದ ಶ್ರೇಷ್ಠ ಮತದಿಂದ ಎಷ್ಟೊಂದು ಜನ್ಮಗಳವರೆಗೆ ಶ್ರೇಷ್ಠ ಗತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತೀರಿ! ಎಲ್ಲಾ ನೆನಪಾರ್ಥಗಳು ಈ ಸಂಗಮಯುಗದ್ದೇ ಆಗಿದೆ. ನೆನಪಾರ್ಥವೇಕೆ ಆಗಿದೆ? ಏಕೆಂದರೆ ಈ ಸಮಯದಲ್ಲಿ ನೆನಪಿನಲ್ಲಿದ್ದು ಕರ್ಮವನ್ನು ಮಾಡುತ್ತೀರಿ. ಪ್ರತಿಯೊಂದು ಕರ್ಮದ ನೆನಪಾರ್ಥವಾಗಿ ಬಿಟ್ಟಿದೆ. ತಾವು ಅಮೃತವೇಳೆಯಲ್ಲಿ ವಿಧಿಪೂರ್ವಕವಾಗಿ ಏಳುತ್ತೀರೆಂದರೆ ನೋಡಿರಿ, ತಮ್ಮ ನೆನಪಾರ್ಥ ಚಿತ್ರಗಳಲ್ಲಿಯೂ ವಿಧಿಪೂರ್ವಕವಾಗಿ ಏಳಿಸುತ್ತಾರೆ ಮತ್ತು ಎಷ್ಟೊಂದು ಪ್ರೀತಿಯಿಂದ ಏಳಿಸುತ್ತಾರೆ. ಅದಂತು ಜಡಚಿತ್ರವಿದೆ ಆದರೆ ಎಷ್ಟೊಂದು ಮನಃಪೂರ್ವಕವಾಗಿ ಸ್ನೇಹದಿಂದ ಏಳಿಸುತ್ತಾರೆ! ಏಳುವುದರ ಜೊತೆಗೆ ನೈವೇದ್ಯವನ್ನೂ ಇಡುತ್ತಾರೆ, ಮಲಗಿಸುವುದನ್ನೂ ಮಾಡುತ್ತಾರೆ ಏಕೆಂದರೆ ತಾವು ಈ ಸಮಯದಲ್ಲಿ ಎಲ್ಲಾ ಕಾರ್ಯಗಳನ್ನು ವಿಧಿಪೂರ್ವಕವಾಗಿ ನೆನಪಿನಲ್ಲಿದ್ದು ಮಾಡುತ್ತೀರಿ. ಸೇವಿಸುವುದೂ ಸಹ ವಿಧಿಪೂರ್ವಕವಾಗಿ, ಭೋಗವನ್ನಿಟ್ಟು ಸೇವಿಸುತ್ತೀರಲ್ಲವೆ ಅಥವಾ ಹೇಗಿದೆಯೋ ಹಾಗೆಯೇ ಸೇವಿಸುತ್ತೀರಾ? ಕೆಲವೊಮ್ಮೆ ಯಾರಿಗಾದರೂ ಊಟ ಕೊಡಬೇಕು. ಆದ್ದರಿಂದ ಅವಸರದಲ್ಲಿ ಭೋಗವನ್ನಿಡಲಿಲ್ಲ – ಈ ರೀತಿಯಂತು ಆಗುವುದಿಲ್ಲವೆ! ಒಂದುವೇಳೆ ಯಾರಿಗಾದರೂ ಕೊಡಬೇಕಾಗುವುದು, ಯಾವುದಾದರೂ ವಿವಶತೆಯಿದೆ ಎಂದರೂ ಸಹ ಮೊದಲು ಭೋಗಕ್ಕಿಡುವುದನ್ನಂತು ತೆಗೆಯಿರಿ. ಯಾರಿಗೋ ಊಟ ಕೊಟ್ಟು ನಂತರ ಭೋಗವನ್ನಿಡುವಂತೆ ಆಗಬಾರದು. ವಿಧಿಪೂರ್ವಕವಾಗಿ ಸೇವಿಸುವುದರಿಂದ ಸಿದ್ಧಿಯು ಪ್ರಾಪ್ತಿಯಾಗುವುದು ಹಾಗೂ ಖುಷಿಯಾಗುತ್ತದೆ, ನಿರಂತರ ಸಹಜವಾಗಿಯೇ ನೆನಪಿರುತ್ತದೆ.

ಅಂದಮೇಲೆ ಅಮೃತವೇಳೆಯಿಂದ ರಾತ್ರಿಯವರೆಗೆ ಏನೆಲ್ಲಾ ಕರ್ಮವನ್ನು ಮಾಡುತ್ತೀರಿ, ನೆನಪಿನ ವಿಧಿಪೂರ್ವಕವಾಗಿ ಮಾಡಿದಾಗ ಪ್ರತೀ ಕರ್ಮದ ಸಿದ್ಧಿಯು ಸಿಗುವುದು. ಸಿದ್ಧಿ ಎಂದರೆ ಪ್ರತ್ಯಕ್ಷಫಲದ ಪ್ರಾಪ್ತಿಯಾಗುತ್ತಾ ಇರುತ್ತದೆ. ಅತಿ ಶ್ರೇಷ್ಠವಾದ ಸಿದ್ಧಿಯೆಂದರೆ ಪ್ರತ್ಯಕ್ಷಫಲದ ರೂಪದಲ್ಲಿ ಅತೀಂದ್ರಿಯ ಸುಖದ ಅನುಭೂತಿಯಾಗುವುದು. ಸದಾ ಸುಖದ ಪ್ರಕಂಪನಗಳಲ್ಲಿ, ಖುಷಿಯ ಪ್ರಕಂಪನಗಳಲ್ಲಿ ತೇಲಾಡುತ್ತಾ ಇರುವಿರಿ. ಮೊದಲು ಪ್ರತ್ಯಕ್ಷಫಲ ಸಿಗುತ್ತದೆ, ನಂತರ ಭವಿಷ್ಯಫಲವು ಸಿಗುವುದು. ಈ ಸಮಯದ ಪ್ರತ್ಯಕ್ಷಫಲವು ಭವಿಷ್ಯ ಅನೇಕ ಜನ್ಮಗಳ ಫಲಕ್ಕಿಂತಲೂ ಶ್ರೇಷ್ಠವಾದುದು. ಒಂದುವೇಳೆ ಈಗ ಪ್ರತ್ಯಕ್ಷಫಲವನ್ನು ಅನುಭವಿಸದಿದ್ದರೆ, ಇಡೀ ಕಲ್ಪದಲ್ಲೆಂದಿಗೂ ಪ್ರತ್ಯಕ್ಷಫಲವು ಸಿಗುವುದಿಲ್ಲ. ಈಗೀಗ ಮಾಡಿದಿರಿ, ಈಗೀಗ ಸಿಕ್ಕಿತು- ಇದಕ್ಕೆ ಪ್ರತ್ಯಕ್ಷಫಲವೆಂದು ಹೇಳಲಾಗುವುದು. ಸತ್ಯಯುಗದಲ್ಲಿಯೂ ಯಾವ ಫಲ ಸಿಗುತ್ತದೆಯೋ ಅದು ಈ ಜನ್ಮದ್ದೇ ಸಿಗುತ್ತದೆ, ಮುಂದಿನ ಜನ್ಮದಲ್ಲ. ಆದರೆ ಇಲ್ಲೇನು ಸಿಗುತ್ತದೆಯೋ ಅದು ಪ್ರತ್ಯಕ್ಷಫಲವಾಗಿದೆ ಅರ್ಥಾತ್ ಈಗೀಗ ಪಡೆಯುವ ಫಲವಾಗಿದೆ. ಅಂದಮೇಲೆ ಪ್ರತ್ಯಕ್ಷಫಲದಿಂದ ವಂಚಿತರಾಗಬಾರದು, ಸದಾ ಫಲವನ್ನು ಅನುಭವಿಸುವುದಂತು ಚೆನ್ನಾಗಿರುತ್ತದೆ ಅಲ್ಲವೆ! ಇಂತಹ ಭಾಗ್ಯವನ್ನೆಂದಿಗಾದರೂ ಯೋಚಿಸಿದ್ದಿರಾ? ಭಗವಂತನ ಮೂಲಕ ಸಿಗುತ್ತದೆ ಎಂಬುದನ್ನು ಸ್ವಪ್ನದಲ್ಲಿಯೂ ಇರಲಿಲ್ಲ! ಅಂದಮೇಲೆ ಯಾವ ಮಾತು ಸ್ವಪ್ನ-ಸಂಕಲ್ಪದಲ್ಲಿಯೂ ಇರಲಿಲ್ಲವೋ ಅದು ಆಗಿಬಿಟ್ಟಿತೆಂದರೆ ಎಷ್ಟೊಂದು ಖುಷಿಯಾಗುತ್ತದೆ! ವರ್ತಮಾನ ಸಮಯದಲ್ಲಿ ಯಾರಿಗಾದರೂ ಲಾಟರಿಯಿಂದ ಹಣ ಬರುತ್ತದೆಯೆಂದರೆ ಎಷ್ಟೊಂದು ಖುಷಿಯಾಗುತ್ತದೆ! ಇದಂತು ಪ್ರತ್ಯಕ್ಷಫಲವಾಗಿದೆ, ಇದರಿಂದ ಭವಿಷ್ಯದ ಫಲವೂ ಆಗಿ ಬಿಡುತ್ತದೆ. ಅಂದಮೇಲೆ ನಶೆಯಿರುತ್ತದೆಯಲ್ಲವೆ, ಕೆಲವೊಮ್ಮೆ ಹೆಚ್ಚು ಕೆಲವೊಮ್ಮೆ ಕಡಿಮೆಯಂತು ಆಗುವುದಿಲ್ಲವೇ? ಸದಾ ಏಕರಸ ಸ್ಥಿತಿಯಲ್ಲಿ ಹಾರುತ್ತಿರಿ. ಸೆಕೆಂಡಿನಲ್ಲಿ ಹಾರುವುದನ್ನು ಕಲಿತಿದ್ದೀರಲ್ಲವೆ ಅಥವ ಹಾರುವುದರಲ್ಲಿ ಹೆಚ್ಚು ಸಮಯ ಹಿಡಿಸುತ್ತದೆಯೇ? ಸಂಕಲ್ಪ ಮಾಡಿದೆವು ಮತ್ತು ತಲುಪಿದೆ ಎನ್ನುವಷ್ಟು ತೀವ್ರಗತಿಯಿದೆಯೇ? ಒಳ್ಳೆಯದು!

ಇಂದೋರ್ ಜೋನಿನವರೆಲ್ಲರೂ ಸಂತುಷ್ಟವಾಗಿದ್ದೀರಲ್ಲವೆ, ಮಾತೆಯರು ಸದಾ ಸಂತುಷ್ಟವಾಗಿ ಇದ್ದೀರಾ? ಕೆಲವೊಮ್ಮೆ ಪರಿವಾರದಲ್ಲಿ ಲೌಕಿಕದಿಂದ ಅಸಂತುಷ್ಟರಂತು ಆಗುವುದಿಲ್ಲವೇ? ಕೆಲವೊಮ್ಮೆ ಬೇಸರವಾಗುತ್ತದೆಯೇ? ಕೆಲವೊಮ್ಮೆ ಚಂಚಲವಿರುವ ಮಕ್ಕಳಿಂದ ಬೇಸರವಾಗುವುದಿಲ್ಲವೇ? ಎಂದಿಗೂ ಸಹ ಬೇಸರವಾಗಬಾರದು, ತಾವೆಷ್ಟು ಬೇಸರವಾಗುವಿರಿ, ಅವರು ಅಷ್ಟೇ ಬೇಸರ ಪಡಿಸುವರು. ಆದ್ದರಿಂದ ನಿಮಿತ್ತರಾಗಿದ್ದು, ಸೇವಾಧಾರಿಯಾಗಿದ್ದು ಸೇವೆ ಮಾಡಿರಿ. ನನ್ನ ಮಗು ಮತ್ತೆ ಈ ರೀತಿ ಮಾಡುತ್ತದೆ ಎಂಬ ನನ್ನದೆನ್ನುವುದು ಬಂದರೆ ಬೇಸರವಾಗುವಿರಿ! ಅಂದಾಗ ಎಲ್ಲಿ ನನ್ನದೆನ್ನುವುದು ಇರುತ್ತದೆಯೋ ಅಲ್ಲಿ ಬೇಸರವಾಗುವಿರಿ ಹಾಗೂ ಎಲ್ಲಿ ನಿನ್ನದು-ನಿನ್ನದು (ತಂದೆಯದು) ಬರುತ್ತದೆಯೋ ಅಲ್ಲಿ ತೇಲಾಡುತ್ತೀರಿ. ಹಾಗಾದರೆ ತೇಲಾಡುವವರಲ್ಲವೆ! ಸದಾ ನಿನ್ನದು ಅಂದರೆ ಸ್ವಮಾನದಲ್ಲಿರುವುದು. ನನ್ನದು-ನನ್ನದು ಎಂದು ಹೇಳುವುದೆಂದರೆ ಅಭಿಮಾನ ಬರುವುದು, ನಿನ್ನದು-ನಿನ್ನದು ಎನ್ನುವುದೆಂದರೆ ಸ್ವಮಾನದಲ್ಲಿರುವುದು. ಹಾಗಾದರೆ ಸದಾ ಸ್ವಮಾನದಲ್ಲಿ ಇರುವವರು ಅರ್ಥಾತ್ ನಿನ್ನದೆಂದು ಸ್ವೀಕರಿಸುವುದು – ಇದನ್ನೇ ನೆನಪಿಟ್ಟುಕೊಳ್ಳಿರಿ. ಒಳ್ಳೆಯದು.

ಡಬಲ್ ವಿದೇಶಿಗಳೂ ಸಹ ಅಗಲಿ ಮರಳಿ ಸಿಕ್ಕಿರುವವರು, ಸ್ವಲ್ಪವೇ ಇದ್ದಾರೆ. ಇದರಲ್ಲೆಷ್ಟು ಖುಷಿಯಿರುತ್ತದೆ ಎಂಬುದನ್ನು ವರ್ಣನೆ ಮಾಡಬಲ್ಲಿರಾ? ಬೇಹದ್ದಿನ ತಂದೆಯಾಗಿದ್ದಾರೆ ಅಂದಮೇಲೆ ಪ್ರಾಪ್ತಿಯೂ ಬೇಹದ್ದಿನದಾಗಿದೆ ಆದ್ದರಿಂದ ಅದ್ದನ್ನು ಎಣಿಕೆ ಮಾಡಲು ಸಾಧ್ಯವಿಲ್ಲ. ಬಾಪ್ದಾದಾರವರಂತು ಡಬಲ್ ವಿದೇಶಿ ಮಕ್ಕಳನ್ನು ತೀವ್ರ ಪುರುಷಾರ್ಥಿಯ ಲೆಕ್ಕದಿಂದ ನೋಡಿ ಖುಷಿಯಾಗುವರು. ಭಾರತವಾಸಿಗಳಂತು ಭಾರತದ ಮಾತುಗಳನ್ನು ತಿಳಿದುಕೊಂಡಿದ್ದಾರೆ ಆದರೆ ಇವರುಗಳು ತಿಳಿಯದೇ ಇದ್ದರೂ ಇಷ್ಟು ಸಮೀಪ ತೀವ್ರ ಪುರುಷಾರ್ಥಿ ಆಗಿ ಬಿಟ್ಟರು, ಅಂದಾಗ ಚಮತ್ಕಾರವಲ್ಲವೆ! ಹಾಗಾದರೆ ಡಬಲ್ ಭಾಗ್ಯಶಾಲಿ ಆಗಿ ಬಿಟ್ಟಿರಿ! ಮತ್ತು ಭಾರತವಾಸಿಗಳಿಗೇನು ನಶೆಯಿದೆ – ನಾವೇ ಪ್ರತೀ ಕಲ್ಪದಲ್ಲಿ ಅವಿನಾಶಿ ಭಾರತವಾಸಿ ಆಗುವೆವು. ಅವಿನಾಶಿ ಖಂಡ ಭಾರತವೇ ಆಗಿದೆ ಎಂಬ ನಶೆಯಿದೆಯಲ್ಲವೆ! ಪ್ರತಿಯೊಬ್ಬರಿಗೂ ತಮ್ಮ-ತಮ್ಮ ನಶೆಯಿದೆ. ಎಲ್ಲರೂ ಭಾರತದಲ್ಲಿಯೇ ಬರಬೇಕಾಗುತ್ತದೆ ಅಲ್ಲವೆ ಹಾಗೂ ಕುಳಿತಿರುವುದೂ ಭಾರತದಲ್ಲಿಯೇ ಕುಳಿತಿದ್ದೀರಿ. ಒಳ್ಳೆಯದು – ಎಲ್ಲರಿಗೂ ನೆನಪುಗಳು.

ವರದಾನ:-

ನೆನಪಾರ್ಥದಲ್ಲಿ ಯೋಗಿಯ ಮಸ್ತಕದಲ್ಲಿ ಮೂರನೇ ನೇತ್ರವನ್ನು ತೋರಿಸುತ್ತಾರೆ. ತಾವು ಸತ್ಯ ಯೋಗಿ ಮಕ್ಕಳೂ ಸಹ ತಮ್ಮ ಮಸ್ತಕದ ಮೂಲಕ ಮೂರನೇ ನೇತ್ರದ ಸಾಕ್ಷಾತ್ಕಾರ ಮಾಡಿಸುವುದಕ್ಕಾಗಿ – ಸದಾ ಒಬ್ಬ ತಂದೆಯ ಸಂಗದಲ್ಲಿರಿ. ಒಬ್ಬ ತಂದೆ, ಇನ್ನೊಂದು ನಾನು, ಮೂರನೆಯವರು ಯಾರೂ ಇಲ್ಲ – ಇಂತಹ ಸ್ಥಿತಿಯು ಯಾವಾಗ ಆಗಿ ಬಿಡುತ್ತದೆಯೋ ಆಗ ಮೂರನೇ ನೇತ್ರದ ಸಾಕ್ಷಾತ್ಕಾರ ಆಗುವುದು. ಒಂದುವೇಳೆ ಬುದ್ಧಿಯಲ್ಲಿ ಮೂರನೆಯದು ಬಂದಿತೆಂದರೆ, ಮೂರನೇ ನೇತ್ರವು ಬಂಧ್ ಆಗಿ ಬಿಡುತ್ತದೆ. ಆದ್ದರಿಂದ ಸದಾ ಮೂರನೇ ನೇತ್ರವು ತೆರೆದಿರಲಿ. ಇದಕ್ಕಾಗಿ ನೆನಪಿಟ್ಟುಕೊಳ್ಳಿರಿ – ಮೂರನೆಯವರು ಯಾರೂ/ಯಾವುದೂ ಇಲ್ಲ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top