11 December 2021 KANNADA Murli Today | Brahma Kumaris

Read and Listen today’s Gyan Murli in Kannada

December 10, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ನೀವೀಗ ವಿಚಿತ್ರವಾದ ಆತ್ಮಿಕ ಯಾತ್ರಿಕರಾಗಿದ್ದೀರಿ, ನೀವು ಈ ಯಾತ್ರೆಯಿಂದ 21 ಜನ್ಮಗಳಿಗಾಗಿ ನಿರೋಗಿಯಾಗಬೇಕಾಗಿದೆ”

ಪ್ರಶ್ನೆ:: -

ಸತ್ಯಯುಗದಲ್ಲಿ ಯಾವ ಮಾತು ಕೆಲಸಕ್ಕೆ ಬರುವುದಿಲ್ಲವೋ ಅದು ಭಕ್ತಿಮಾರ್ಗದಲ್ಲಿ ತಂದೆಯ ಕೆಲಸಕ್ಕೆ ಬರುತ್ತದೆ?

ಉತ್ತರ:-

ದಿವ್ಯದೃಷ್ಟಿಯ ಚಾಬಿ (ಬೀಗದ ಕೈ). ಸತ್ಯಯುಗದಲ್ಲಿ ಇದರ ಅವಶ್ಯಕತೆಯಿರುವುದಿಲ್ಲ. ಯಾವಾಗ ಭಕ್ತಿಮಾರ್ಗವು ಆರಂಭವಾಗುತ್ತದೆಯೋ ಆಗ ಭಕ್ತರನ್ನು ಖುಷಿ ಪಡಿಸುವುದಕ್ಕಾಗಿ ಸಾಕ್ಷಾತ್ಕಾರ ಮಾಡಿಸಬೇಕಾಗುತ್ತದೆ. ಈ ಸಮಯದಲ್ಲಿ ಈ ಚಾಬಿಯು ತಂದೆಯ ಕೆಲಸಕ್ಕೆ ಬರುತ್ತದೆ, ಆದ್ದರಿಂದ ತಂದೆಗೆ ದಿವ್ಯದೃಷ್ಟಿದಾತನೆಂದು ಹೇಳಲಾಗುತ್ತದೆ. ತಂದೆಯು ನೀವು ಮಕ್ಕಳಿಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಡುತ್ತಾರೆಯೇ ಹೊರತು ದಿವ್ಯದೃಷ್ಟಿಯ ಚಾಬಿಯನ್ನಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಸತ್ತರೂ ನಿಮ್ಮ ಮಡಿಲಿನಲ್ಲಿಯೇ, ಬದುಕಿದರೂ ನಿಮ್ಮ ಮಡಿಲಿನಲ್ಲಿಯೇ….

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯನ್ನು ಕೇಳಿದಿರಿ. ಆತ್ಮಿಕ ಮಕ್ಕಳಿಗೆ ಆಂಗ್ಲ ಭಾಷೆಯಲ್ಲಿ ಸ್ಪಿರಿಚ್ಯುಯಲ್ ಚಿಲ್ಡ್ರನ್ ಎಂದು ಹೇಳಲಾಗುತ್ತದೆ. ಸ್ಪಿರಿಚ್ಯುಯಲ್ ಫಾದರ್ ಮತ್ತು ಸ್ಪಿರಿಚ್ಯುಯಲ್ ಚಿಲ್ಡ್ರನ್. ಈಗ ಇದಂತೂ ಆತ್ಮಿಕ ಮಕ್ಕಳಿಗೆ ತಿಳಿದಿದೆ – ನಾವಾತ್ಮರಿಗೆ ಅಲ್ಲಿ ಶರೀರವಿರುವುದಿಲ್ಲ, ಆದ್ದರಿಂದ ಅಲ್ಲಿ ಯಾವುದೇ ವಾರ್ತಾಲಾಪ ನಡೆಯುವುದಿಲ್ಲ. ಯಾವಾಗ ಇಬ್ಬರಿಗೂ ಶರೀರವಿರುವುದೋ ಆಗಲೇ ಪರಸ್ಪರ ವಾರ್ತಾಲಾಪವಾಗುವುದು. ಆತ್ಮರಿಗೆ ಇಲ್ಲಂತೂ ತಮ್ಮ-ತಮ್ಮ ಶರೀರವಿದೆ, ಬಾಕಿ ಯಾರು ಜ್ಞಾನಸಾಗರ ಆತ್ಮಿಕ ತಂದೆಯಿದ್ದಾರೆಯೋ ಅವರಿಗೇ ತಮ್ಮ ಶರೀರವಿಲ್ಲ, ಅವರು ನಿರಾಕಾರನಾಗಿದ್ದಾರೆ. ಶಾಂತಿಧಾಮದಲ್ಲಿ ನಾವಾತ್ಮರೂ ಸಹ ಅಶರೀರಿಯಾಗಿರುತ್ತೇವೆ ಎಂದು ಮಕ್ಕಳೂ ತಿಳಿದುಕೊಂಡಿದ್ದೀರಿ. ಹೇಗೆ ತಂದೆಯು ಅಶರೀರಿ ಹಾಗೂ ವಿಚಿತ್ರನಾಗಿದ್ದಾರೆಯೋ ಹಾಗೆಯೇ ನೀವಾತ್ಮರೂ ಸಹ ಅಲ್ಲಿ ಅಶರೀರಿಯಾಗಿರುತ್ತೀರಿ. ಇದು ತಿಳಿದುಕೊಳ್ಳುವ ಮಾತಾಗಿದೆ. ಅಶರೀರಿಯಾಗಿ ಬಂದಿದ್ದೇವೆ, ಅಶರೀರಿಯಾಗಿ ಹೋಗಬೇಕಾಗಿದೆ ಎಂಬ ಮಾತನ್ನೂ ಹೇಳುತ್ತಾರೆ ಅಂದರೆ ಈ ಶರೀರರೂಪಿ ವಸ್ತ್ರವಿರುವುದಿಲ್ಲ. ಆತ್ಮವು ಶಾಂತಿಧಾಮದಲ್ಲಿದ್ದಾಗ ಅಶರೀರಿಯಾಗಿರುತ್ತದೆ, ಶಾಂತಿಯಲ್ಲಿರುತ್ತದೆ. ಈಗ ಆತ್ಮಿಕ ತಂದೆಯು ಈ ಜ್ಞಾನವನ್ನು ತಿಳಿಸುತ್ತದೆ, ಇಡೀ ಪ್ರಪಂಚದಲ್ಲಿ ಆತ್ಮಿಕ ತಂದೆಯು ಮತ್ತ್ಯಾರೂ ಇಲ್ಲ, ಮತ್ತೆಲ್ಲರೂ ಶರೀರದ ತಂದೆಯರಾಗಿದ್ದಾರೆ. ಆತ್ಮಿಕ ತಂದೆಯು ಸ್ವಯಂ ಹೇಳುತ್ತಾರೆ – ನಾನು ಅಶರೀರಿಯಾಗಿದ್ದೆನು, ಆದ್ದರಿಂದ ಮಾತನಾಡುವ ಸಮಯದಲ್ಲಿ ಶರೀರದ ಆಧಾರ ತೆಗೆದುಕೊಳ್ಳಬೇಕಾಗುತ್ತದೆ. ಭಲೆ ಶಾಸ್ತ್ರಗಳಲ್ಲಿ ಪ್ರಕೃತಿಯ ಆಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ಬರೆದಿದ್ದಾರೆ ಆದರೆ ತಂದೆಯು ತಿಳಿಸುತ್ತಾರೆ – ಪ್ರಕೃತಿಯಿಂದಲೇ ಶರೀರವು ಮಾಡಲ್ಪಟ್ಟಿದೆ. ನಾನು ಸಾಧಾರಣ ಶರೀರದ ಆಧಾರ ತೆಗೆದುಕೊಳ್ಳುತ್ತೇನೆ.

ಆತ್ಮಿಕ ತಂದೆಯು ಆತ್ಮಿಕ ಸರ್ಜನ್ ಎಂದು ಹೇಳಲಾಗುತ್ತದೆ ಏಕೆಂದರೆ ನೆನಪು ಅಥವಾ ಯೋಗವನ್ನು ಕಲಿಸುತ್ತಾರೆ, ಇದರಿಂದ ನಾವಾತ್ಮರು ಸದಾ ನಿರೋಗಿಗಳಾಗಿ ಬಿಡುತ್ತೇವೆ. 21 ಜನ್ಮಗಳವರೆಗೆ ಎಂದೂ ರೋಗಿಗಳಾಗುವುದಿಲ್ಲ ನಂತರ ಮಾಯಾರಾಜ್ಯವಾದಾಗ ನಾವು ರೋಗಿಗಳಾಗಿ ಬಿಡುತ್ತೇವೆ. ತಂದೆಯು ಬಂದು ನಮ್ಮನ್ನು 21 ಜನ್ಮಗಳಿಗಾಗಿ ನಿರೋಗಿಗಳನ್ನಾಗಿ ಮಾಡುತ್ತಾರೆ. ತಂದೆಗೆ ಯಾತ್ರೆಯನ್ನು ಕಲಿಸುವಂತಹ ಮಾರ್ಗದರ್ಶಕನೆಂದೂ ಹೇಳಲಾಗುತ್ತದೆ. ನಾವು ವಿಚಿತ್ರವಾದ ಆತ್ಮಿಕ ಯಾತ್ರಿಕರಾಗಿದ್ದೇವೆ. ಈ ಆತ್ಮಿಕ ಯಾತ್ರೆಯನ್ನು ಮತ್ತ್ಯಾವುದೇ ಮನುಷ್ಯ ಮಾತ್ರರು ಪ್ರಪಂಚದಲ್ಲಿ ತಿಳಿದುಕೊಂಡಿಲ್ಲ. ವಿಶೇಷವಾಗಿ ಭಾರತ ಮತ್ತು ಇಡೀ ಪ್ರಪಂಚ, ಯಾವಾಗಲೂ ಇದೇರೀತಿ ಹೇಳಲಾಗುತ್ತದೆ. ವಿಶೇಷವಾಗಿ ನಮಗೆ ಈ ಆತ್ಮಿಕ ಯಾತ್ರೆಯನ್ನು ಕಲಿಸುತ್ತಾರೆ. ಯಾರು ಕಲಿಸುತ್ತಾರೆ? ಆತ್ಮಿಕ ತಂದೆ. ದೈಹಿಕ ಯಾತ್ರೆಗಳನ್ನಂತೂ ಮನುಷ್ಯರು ಜನ್ಮ-ಜನ್ಮಾಂತರದಿಂದ ಮಾಡುತ್ತಾ ಬಂದಿದ್ದಾರೆ. ಕೆಲಕೆಲವರಂತೂ ಒಂದು ಜನ್ಮದಲ್ಲಿ 2-4 ಯಾತ್ರೆಗಳನ್ನಾದರೂ ಮಾಡುತ್ತಾರೆ. ಅದು ಜೀವಾತ್ಮರ ಯಾತ್ರೆಯೆಂದು ಹೇಳುತ್ತಾರೆ ಮತ್ತು ಇದು ಆತ್ಮರ ಯಾತ್ರೆಯಾಗಿದೆ. ಇವು ಬಹಳ ತಿಳಿದುಕೊಳ್ಳುವ ಮಾತುಗಳಾಗಿವೆ. ನಡೆಯುತ್ತಾ-ತಿರುಗಾಡುತ್ತಾ ಬುದ್ಧಿಯಲ್ಲಿ ತಂದೆಯನ್ನು ನೆನಪಿಟ್ಟುಕೊಳ್ಳಬೇಕಾಗಿದೆ ಆಗ ಅಂತ್ಯಮತಿ ಸೋ ಗತಿಯಾಗಿ ಬಿಡುವುದು. ತಂದೆಯ ನೆನಪಿನಲ್ಲಿ ನಾವು ತಂದೆಯ ಬಳಿಗೆ ಹೊರಟು ಹೋಗುತ್ತೇವೆ. ಈಗ ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯು ಈ ಯಾತ್ರೆಯನ್ನು ಕಲಿಸುತ್ತಾರೆ. ಗೀತೆಯಲ್ಲಿ ಮನ್ಮನಾಭವ ಅಕ್ಷರವಿದೆ ಆದರೆ ಅದರ ಅರ್ಥವನ್ನು ಯಾರೂ ತಿಳಿದುಕೊಂಡಿಲ್ಲ. ತಂದೆಯು ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿರಿ ಅದರಿಂದ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಮತ್ತೇನಾಗುವುದು? ನೀವು ಮಕ್ಕಳು ತಿಳಿದುಕೊಂಡಿದ್ದೀರಿ, ನಾವು ನೆನಪಿನಿಂದ ತಮೋಪ್ರಧಾನರಿಂದ ಸತೋಪ್ರಧಾನರಾಗಿ ಬಿಡುತ್ತೇವೆ. ಈ ಸಮಯದಲ್ಲಿ ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಇಡೀ ವೃಕ್ಷವು ಜಡಜಡೀಭೂತವಾಗಿ ಬಿಟ್ಟಿದೆ. ಈಗ ಆತ್ಮವು ಸತೋಪ್ರಧಾನವಾಗುವುದು ಹೇಗೆ? ಹಿಂತಿರುಗಿ ಮನೆಗೆ ಹೋಗುವುದು ಹೇಗೆ? ಅಲ್ಲಂತೂ ಪವಿತ್ರ ಆತ್ಮರೇ ಇರುತ್ತಾರೆ. ಮತ್ತೆ ಇಲ್ಲಿ ಬಂದು ಶರೀರ ಧಾರಣೆ ಮಾಡುತ್ತಾ ರಜೋ, ತಮೋದಲ್ಲಿ ಬರುತ್ತಾರೆ. ಪ್ರತೀ ವಸ್ತುವಿಗೂ ಹಂತಗಳಿರುತ್ತವೆ. ಪ್ರಪಂಚವು ಬದಲಾಗುತ್ತಿದೆ ಎಂದು ಹಾಡುತ್ತಾರೆ. ಇದಕ್ಕೆ ಹಳೆಯ ಪ್ರಪಂಚ, ಕಲಿಯುಗವೆಂದು ಹೇಳಲಾಗುತ್ತದೆ. ಹೊಸ ಪ್ರಪಂಚಕ್ಕೆ ಸತ್ಯಯುಗ, ಸ್ವರ್ಗವೆಂದು ಹೇಳಲಾಗುತ್ತದೆ. ಈಗ ಮಕ್ಕಳ ಬುದ್ಧಿಯಲ್ಲಿ ಇದು ಇರಬೇಕಾಗಿದೆ, ಯಾವಾಗ ಸತ್ಯಯುಗವಿತ್ತೋ ಆಗ ಆದಿ ಸನಾತನ ದೇವಿ-ದೇವತಾ ಧರ್ಮವಿತ್ತು ಈಗ ಆ ಧರ್ಮವಿಲ್ಲ. ದೇವತಾ ಧರ್ಮವು ಇಸ್ಲಾಂ, ಬೌದ್ಧ, ಕ್ರಿಶ್ಚಿಯನ್…. ಇವು ಮುಖ್ಯವಾಗಿದೆ. ಯುಗಗಳಲ್ಲಿಯೂ ಮುಖ್ಯವಾಗಿ ನಾಲ್ಕು ಯುಗಗಳಿವೆ. ಬಾಕಿ ಈ ಬ್ರಾಹ್ಮಣರ ಸಂಗಮಯುಗವು ಗುಪ್ತ ಯುಗವಾಗಿದೆ. ಪರಮಪಿತ ಪರಮಾತ್ಮನೇ ಬಂದು ಬ್ರಾಹ್ಮಣ, ದೇವತಾ, ಕ್ಷತ್ರಿಯ ಧರ್ಮವನ್ನು ಸ್ಥಾಪನೆ ಮಾಡುತ್ತಾರೆ. ಇವೆಲ್ಲಾ ಮಾತುಗಳನ್ನು ಮಕ್ಕಳು ನೆನಪಿಟ್ಟುಕೊಳ್ಳಬೇಕು ಮತ್ತು ತಮ್ಮ ಬುದ್ಧಿಯೋಗವನ್ನು ತಂದೆಯ ಜೊತೆ ಜೋಡಿಸಬೇಕಾಗಿದೆ. ವಿಕರ್ಮಾಜೀತರಾಗುವುದೇ ಮೂಲ ಮಾತಾಗಿದೆ. ನಾವು ಸಂಪೂರ್ಣ ಸತೋಪ್ರಧಾನ ಪವಿತ್ರರಾಗಿದ್ದೆವು, ಮೂಲತಃ 24 ಕ್ಯಾರೇಟ್ ಚಿನ್ನದಂತೆ ಇದ್ದೆವು ನಂತರ ಸತೋದಲ್ಲಿ ಬಂದು 22 ಕ್ಯಾರೇಟ್ ಆದೆವು. ನಂತರ ರಜೋದಲ್ಲಿ 18 ಕ್ಯಾರೇಟ್, ತಮೋದಲ್ಲಿ 9 ಕ್ಯಾರೇಟ್ ಚಿನ್ನದಂತಾದೆವು. ಚಿನ್ನಕ್ಕೂ ಡಿಗ್ರಿಗಳಿರುತ್ತವೆ, ಇದು ಆತ್ಮದ ಮಾತಾಗಿದೆ. ಹೇಗೆ ಭ್ರಮರಿಯು ಛೀ ಛೀ ಕೀಟಗಳನ್ನು ತೆಗೆದುಕೊಂಡು ಬರುತ್ತದೆ. ಅದನ್ನು ಭೂ ಭೂ (ಜ್ಞಾನದ ಧ್ವನಿ) ಮಾಡಿ ತನ್ನ ಸಮಾನ ಮಾಡುತ್ತದೆ. ನೀವೂ ಸಹ ಜ್ಞಾನದ ಭೂ ಭೂ ಮಾಡಿ ಮನುಷ್ಯರಿಂದ ದೇವತೆಗಳನ್ನಾಗಿ ಮಾಡುತ್ತೀರಿ. ಭ್ರಮರಿಯು ಕೀಟಗಳನ್ನು ತಂದು ಮನೆಯಲ್ಲಿ ಏಕಾಂತದಲ್ಲಿ ಇಡುತ್ತದೆ. ಅದಕ್ಕೂ ಎಷ್ಟೊಂದು ತಿಳುವಳಿಕೆಯಿದೆ! ನೀವಾತ್ಮರಲ್ಲಿಯೂ ಡ್ರಾಮಾನುಸಾರ ಪಾತ್ರವು ನಿಗಧಿತವಾಗಿದೆ.

ನೀವು ತಿಳಿದುಕೋಂಡಿದ್ದೀರಿ – ಕಲ್ಪದ ಮೊದಲೂ ಸಹ ಆತ್ಮಿಕ ತಂದೆಯಿಂದ ನಾವು ಆತ್ಮಿಕ ಜ್ಞಾನವನ್ನು ಕೇಳಿದ್ದೆವು. ಕಲ್ಪ-ಕಲ್ಪವೂ ಕೇಳುತ್ತಾ ಇರುತ್ತೇವೆ, ನತಿಂಗ್‍ನ್ಯೂ. ಇದನ್ನು ತಂದೆಯೇ ತಿಳಿಸುತ್ತಾರೆ – ಬೀಜಕ್ಕೆ ವೃಕ್ಷದ ಜ್ಞಾನವಿರುತ್ತದೆಯಲ್ಲವೆ. ತಂದೆಯು ನಿಮ್ಮನ್ನು ತ್ರಿಕಾಲದರ್ಶಿಗಳನ್ನಾಗಿ ಮಾಡಲು ಬರುತ್ತಾರೆ. ಮೂರುಕಾಲಗಳ ಜ್ಞಾನವನ್ನು ಕೊಡುತ್ತಾರಲ್ಲವೆ. ನಿಮ್ಮನ್ನು ಜೀವಿಸಿದ್ದಂತೆಯೇ ದತ್ತು ಮಾಡಿಕೊಳ್ಳುತ್ತಾರೆ. ಹೇಗೆ ಕನ್ಯೆಯನ್ನೂ ಸಹ ಜೀವಿಸಿದ್ದಂತೆಯೇ ಇವರು ನನ್ನ ಸ್ತ್ರೀ ಎಂದು ದತ್ತು ಮಾಡಿಕೊಳ್ಳುತ್ತಾರೆ. ಈಗ ಪ್ರಜಾಪಿತ ಬ್ರಹ್ಮನಿಗಂತೂ ಸ್ತ್ರೀ ಯಾರೂ ಇಲ್ಲ ಅಂದಾಗ ಇಲ್ಲಿ ಪರಮಪಿತ ಪರಮಾತ್ಮನು ಬ್ರಹ್ಮನ ಮೂಲಕ ದತ್ತು ಮಾಡಿಕೊಳ್ಳುತ್ತಾರೆ. ಇವರು ನಮ್ಮ ತಂದೆಯಾಗಿದ್ದಾರೆಂದು ನೀವೂ ಹೇಳುತ್ತೀರಿ. ಪರಮಪಿತ ಪರಮಾತ್ಮ ತಂದೆಯೂ ಸಹ ನೀವು ನನ್ನ ಮಕ್ಕಳಾಗಿದ್ದೀರಿ ಎಂದು ಹೇಳುತ್ತಾರೆ. ಶಿವ ತಂದೆಯು ಆತ್ಮಿಕ ತಂದೆಯಾಗಿದ್ದಾರೆ, ಪ್ರಜಾಪಿತ ಬ್ರಹ್ಮಾ ಶರೀರಧಾರಿಯಾಗಿದ್ದಾರೆ. ಆತ್ಮಿಕ ತಂದೆಯು ಇವರ ಶರೀರದಲ್ಲಿ ಬರುವವರೆಗೆ ಜ್ಞಾನವನ್ನು ಹೇಗೆ ತಿಳಿಸುವರು! ಪರಮಪಿತ ಪರಮಾತ್ಮನನ್ನು ಜ್ಞಾನ ಸಾಗರನೆಂದು ಹೇಳಲಾಗುತ್ತದೆ, ಎಲ್ಲಾ ಪ್ರಕಾರದ ಜ್ಞಾನವು ಯಾವಾಗಲೂ ಆತ್ಮನಲ್ಲಿಯೇ ಇರುತ್ತದೆ. ಲೌಕಿಕ ಜ್ಞಾನವನ್ನೂ ಸಹ ಆತ್ಮವೇ ಓದುತ್ತದೆಯಲ್ಲವೆ ಆದರೆ ತಮೋಪ್ರಧಾನರಾಗಿರುವ ಕಾರಣ ಯಾರಿಗೂ ಆತ್ಮಾಭಿಮಾನವಿರುವುದೇ ಇಲ್ಲ. ನೀವೀಗ ಆತ್ಮಾಭಿಮಾನಿಗಳಾಗುತ್ತೀರಿ. ಸತ್ಯಯುಗದಲ್ಲಿ ಈ ಮಾತುಗಳನ್ನು ತಿಳಿಸಲಾಗುವುದಿಲ್ಲ, ಈ ಸಮಯದಲ್ಲಿಯೇ ತಂದೆಯು ತಿಳಿಸುತ್ತಾರೆ – ಮಕ್ಕಳೇ, ನೀವು ತಮ್ಮನ್ನು ಆತ್ಮನೆಂದು ತಿಳಿದು ನನ್ನನ್ನು ನೆನಪು ಮಾಡಿರಿ ಏಕೆಂದರೆ ಈ ಸಮಯದಲ್ಲಿ ತಲೆಯ ಮೇಲೆ ಪಾಪದ ಹೊರೆಯಿದೆ. ಅದನ್ನೂ ಕಳೆಯಬೇಕಾಗಿದೆ. ಪತಿತ-ಪಾವನನೇ ಬಂದು ನಮ್ಮನ್ನು ಪಾವನ ಮಾಡಿ ಎಂದು ಈ ಸಮಯದಲ್ಲಿಯೇ ತಂದೆಯನ್ನು ಕರೆಯುತ್ತಾರೆ. ಆತ್ಮವೇ ಪತಿತ, ತಮೋಪ್ರಧಾನವಾಗಿದೆ ಆದ್ದರಿಂದ ತಂದೆಯನ್ನು ನೆನಪು ಮಾಡುತ್ತದೆ ಆದರೆ ಪರಮಪಿತ ಪರಮಾತ್ಮನು ಬಿಂದು ರೂಪವಾಗಿದ್ದಾರೆ ಎಂಬುದು ಭಕ್ತರಿಗೆ ತಿಳಿದಿಲ್ಲ. ಕೇವಲ ಬಿಂದುವಿಗೆ ಮಂದಿರವನ್ನು ಕಟ್ಟಿಸಲು ಆಗುವುದಿಲ್ಲ, ಶೋಭಿಸುವುದೇ ಇಲ್ಲ ಆದ್ದರಿಂದ ಲಿಂಗಾಕಾರವಾಗಿ ಮಾಡಿಸುತ್ತಾರೆ. ನಂತರ ಸಾಕ್ಷಾತ್ಕಾರಕ್ಕಾಗಿ ಅವರು ಕೋಟಿಸೂರ್ಯ ತೇಜೋಮಯನೆಂದು ಹೇಳುತ್ತಾರೆ ಅಂದಮೇಲೆ ಲಿಂಗವು ಅಷ್ಟು ತೇಜೋಮಯವಾಗಿದೆ? ಹೇಗೆ ಅರ್ಜುನನಿಗಾಗಿ ತೋರಿಸಿದ್ದಾರಲ್ಲವೆ – ಅರ್ಜುನನಿಗೆ ತೇಜೋಮಯ ರೂಪದ ಸಾಕ್ಷಾತ್ಕಾರವಾಯಿತು, ನಾನು ಇದನ್ನು ಸಹಿಸಲಾರೆ ಎಂದು ಹೇಳಿದನು. ಈ ಮಾತನ್ನು ಕೇಳಿಸಿಕೊಂಡಿದ್ದಾರಲ್ಲವೆ. ಇಲ್ಲಿಯೂ ಸಹ ಅನೇಕರಿಗೆ ಸಾಕ್ಷಾತ್ಕಾರವಾಗಿತ್ತು, ಸಾಕು ನಿಲ್ಲಿಸಿ, ನಮ್ಮಿಂದ ಸಹನೆ ಮಾಡಲು ಆಗುವುದಿಲ್ಲವೆಂದು ಹೇಳುತ್ತಿದ್ದರು. ಕಣ್ಣು ಕೆಂಪಗಾಗಿ ಬಿಡುತ್ತಿತ್ತು. ನಮಗೆ ಪರಮಾತ್ಮನ ಸಾಕ್ಷಾತ್ಕಾರವಾಯಿತು ಎಂದು ಅವರು ತಿಳಿದುಕೊಳ್ಳುತ್ತಾರೆ. ಯಾರು ಮಾಡಿಸಿದರು? ಕೃಷ್ಣನಂತೂ ಮಾಡಿಸಲಿಲ್ಲ, ಶಿವ ತಂದೆಯೇ ಸಾಕ್ಷಾತ್ಕಾರ ಮಾಡಿಸಿದರು. ಅವರಿಗೆ ದಿವ್ಯದೃಷ್ಟಿದಾತನೆಂದು ಹೇಳಲಾಗುತ್ತದೆ. ತಂದೆಯು ತಿಳಿಸುತ್ತಾರೆ – ನಾನು ನೀವು ಮಕ್ಕಳಿಗೆ ದಿವ್ಯದೃಷ್ಟಿಯ ಚಾಬಿಯನ್ನು ಕೊಡುವುದಿಲ್ಲ. ಇದು ನನಗೆ ಭಕ್ತಿಮಾರ್ಗದಲ್ಲಿ ಕೆಲಸಕ್ಕೆ ಬರುತ್ತದೆ. ಸತ್ಯಯುಗದಲ್ಲಿ ಇದರ ಅವಶ್ಯಕತೆಯಿರುವುದಿಲ್ಲ. ನೀವು ಪೂಜಾರಿಗಳಿಂದ ಪೂಜ್ಯರಾಗಿ ಬಿಡುತ್ತೀರಿ. ನಾನು ನಿಮಗೆ ವಿಶ್ವದ ರಾಜ್ಯಭಾಗ್ಯವನ್ನು ಕೊಟ್ಟು ಪರಮಧಾಮದಲ್ಲಿ ಹೋಗಿ ಕುಳಿತು ಬಿಡುತ್ತೇನೆ, ನಾನು ಸದಾ ಪೂಜ್ಯನು ಎಂದೂ ಪೂಜಾರಿಯಾಗುವುದಿಲ್ಲ.

ನೀವು ಮಕ್ಕಳು ಈಗ ಬುದ್ಧಿವಂತರಾಗಿದ್ದೀರಿ. ಚಲನೆಯಿಂದಲೇ ಇವರು ಎಷ್ಟು ಮಧುರವಾಗಿದ್ದಾರೆ, ಇವರಿಗೆ ಎಷ್ಟು ಚೆನ್ನಾಗಿ ಧಾರಣೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲಾಗುತ್ತದೆ. ತಂದೆಯು ಯಾವ ವಿಷಯಗಳನ್ನು ತಿಳಿಸುತ್ತಾರೆಯೋ ಅದನ್ನು ಬರೆದಿಟ್ಟುಕೊಳ್ಳಬೇಕು, ಇಂದು ಯಾತ್ರೆಯ ವಿಷಯದ ಬಗ್ಗೆ ತಿಳಿಸಬೇಕು. ಯಾತ್ರೆಯು ಎರಡು ಪ್ರಕಾರದ್ದಿರುತ್ತದೆ, ಇದು ನಂಬರ್‍ವನ್ ವಿಷಯವಾಗಿದೆ. ಮನುಷ್ಯರೆಲ್ಲರೂ ಭಕ್ತಿಮಾರ್ಗದಲ್ಲಿ ದೈಹಿಕ ಯಾತ್ರೆಗಳನ್ನು ಮಾಡಿಸುತ್ತಾರೆ, ಜ್ಞಾನಮಾರ್ಗದಲ್ಲಿ ದೈಹಿಕ ಯಾತ್ರೆಯಿರುವುದಿಲ್ಲ, ನಿಮ್ಮದು ಆತ್ಮಿಕ ಯಾತ್ರೆಯಾಗಿದೆ. ತಂದೆಯು ತಿಳಿಸುತ್ತಾರೆ – ನೀವು ಈ ಯಾತ್ರೆಯಿಂದಲೇ ತಮೋಪ್ರಧಾನರಿಂದ ಸತೋಪ್ರಧಾನರಾಗುತ್ತೀರಿ. ಆತ್ಮವು ಪವಿತ್ರನಾಗದೆ ಮನೆಗೆ ಹೋಗಲು ಸಾಧ್ಯವಿಲ್ಲ. ಎಲ್ಲಾ ಆತ್ಮರು ಇಲ್ಲಿಯೇ ಬರುತ್ತಾ ಇರುತ್ತಾರೆ, ಹೋಗುವುದಂತೂ ಯಾರೂ ಇಲ್ಲ. ಸರ್ಕಾರಕ್ಕೂ ನೀವು ತಿಳಿಸಬಹುದು – ಸತ್ಯಯುಗದಲ್ಲಿ ದೇವಿ-ದೇವತೆಗಳ ರಾಜ್ಯವಿದ್ದಾಗ ಒಬ್ಬ ಮಗ, ಒಬ್ಬ ಮಗಳು ಇರುತ್ತಿದ್ದರು, ಅದೂ ಯೋಗಬಲದಿಂದ. ವಿಚಾರ ಮಾಡಿ – ಸತ್ಯಯುಗದಲ್ಲಿ ಎಷ್ಟು ಕಡಿಮೆ ಜನಸಂಖ್ಯೆಯಿರಬಹುದು ಮತ್ತು ಸಂಪೂರ್ಣ ನಿರ್ವಿಕಾರಿ ಲಕ್ಷ್ಮೀ-ನಾರಾಯಣರ ರಾಜ್ಯಭಾರವು ನಡೆಯಿತು ಅಂದಮೇಲೆ ಅವಶ್ಯವಾಗಿ ಮಗನೂ ಇರುವರು. ನಾವು ಯೋಗಬಲದಿಂದ ವಿಶ್ವದ ಮಾಲೀಕರಾಗುತ್ತೇವೆ ಅಂದಮೇಲೆ ಯೋಗಬಲದಿಂದ ಮಕ್ಕಳಾಗಲು ಸಾಧ್ಯವಿಲ್ಲವೆ? ಇದು ಡ್ರಾಮಾದಲ್ಲಿ ನಿಗಧಿಯಾಗಿದೆ, ಪವಿತ್ರರಾಗಿರುವ ಕಾರಣ ಈಗ ಮಗುವಾಗುವುದು ಎಂದು ಸಾಕ್ಷಾತ್ಕಾರವಾಗುತ್ತದೆ, ಆ ಖುಷಿಯಿರುತ್ತದೆ. ವಿಕಾರದ ಯಾವುದೇ ಮಾತಿರುವುದಿಲ್ಲ. ಅಲ್ಲಿ ಮಕ್ಕಳು ಹೇಗೆ ಜನಿಸುತ್ತಾರೆ ಎಂದು ನಿಮ್ಮೊಂದಿಗೆ ಕೆಲವರು ಕೇಳುತ್ತಾರೆ ಆಗ ಹೇಳಿರಿ, ಪಪ್ಪಾಯಿಯ ಗಿಡಗಳು ಗಂಡು ಮತ್ತು ಹೆಣ್ಣು ಒಂದು ಇನ್ನೊಂದರ ಪಕ್ಕದಲ್ಲಿದ್ದಾಗ ಅದರಿಂದ ಫಲ ಬರುತ್ತದೆ. ಒಂದುವೇಳೆ ಒಂದು ಇನ್ನೊಂದರ ಪಕ್ಕದಲ್ಲಿ ಇಲ್ಲದಿದ್ದರೆ ಫಲ ಕೊಡುವುದಿಲ್ಲ. ಅದ್ಬುತವಲ್ಲವೆ. ಅಂದಮೇಲೆ ಸತ್ಯಯುಗದಲ್ಲಿ ಯೋಗಬಲದಿಂದ ಮಕ್ಕಳಾಗಲು ಏಕೆ ಸಾಧ್ಯವಿಲ್ಲ! ನವಿಲಿನ ಉದಾಹರಣೆಯೂ ಇದೆ ಅದಕ್ಕೆ ರಾಷ್ಟ್ರ ಪಕ್ಷಿಯೆಂದು ಹೇಳಲಾಗುತ್ತದೆ. ಪ್ರೇಮದ ಕಣ್ಣೀರಿನಿಂದ ಗರ್ಭ ಧಾರಣೆಯಾಗಿ ಬಿಡುತ್ತದೆ, ಇದು ವಿಕಾರ ಆಗಲಿಲ್ಲ ಅಲ್ಲವೆ. ಈ ಭಾರತವು ಶಿವಾಲಯವಾಗಿತ್ತು, ಶಿವ ತಂದೆಯು ಸ್ಥಾಪನೆ ಮಾಡಿದ್ದರು, ಈಗ ರಾವಣನು ವೇಶ್ಯಾಲಯವನ್ನಾಗಿ ಮಾಡಿದ್ದಾನೆ. ಶಿವ ಜಯಂತಿಯನ್ನು ಆಚರಿಸುತ್ತಾರೆ ಆದರೆ ರಾವಣನ ಜಯಂತಿ ಎಂದು ಯಾರಿಗೂ ತಿಳಿದಿಲ್ಲ. ರಾವಣನ ಬಗ್ಗೆ ಯಾರಿಗೂ ಅರ್ಥವಾಗುವುದಿಲ್ಲ. ದಸರಾ ದಿನದಂದು ರಾವಣನ ಪ್ರತಿಮೆ ಮಾಡಿ ಅದನ್ನು ಸಮಾಪ್ತಿ ಮಾಡುತ್ತಾರೆ. ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ರಾವಣನ ಐದು ವಿಕಾರಗಳನ್ನು ಈ ಪಟಾಕಿಗಳಿಂದ ಸುಡುವುದಲ್ಲ, ಯೋಗಬಲದಿಂದ ವಿಜಯ ಪಡೆಯಬೇಕಾಗಿದೆ. ಯಾವ ಯೋಗವನ್ನು ತಂದೆಯೇ ಬಂದು ಕಲಿಸುತ್ತಾರೆ, ಯೋಗಿ ಭವ, ಪವಿತ್ರ ಭವ ಎಂದು ಹೇಳುತ್ತಾರೆ. ಗೀತೆಯಲ್ಲಿ ಈ ಶಬ್ಧವಿದೆ – ಮನ್ಮನಾಭವ. ನನ್ನನ್ನು ನೆನಪು ಮಾಡಿರಿ, ಈ ಯಾತ್ರೆಯಿಂದಲೇ ನೀವು ಶಾಂತಿಧಾಮಕ್ಕೆ ಹೊರಟು ಹೋಗುವಿರಿ ನಂತರ ಅಮರಲೋಕದಲ್ಲಿ ಬರುವಿರಿ. ಮನುಷ್ಯರು ಯಾತ್ರೆ ಮಾಡಲು ಪವಿತ್ರವಾಗಿರುತ್ತಾರೆ, ಕಾಶಿಗೆ ಹೋಗುವವರೂ ಪವಿತ್ರರಾಗಿರುತ್ತಾರೆ ಆದರೆ ಕಾಶಿಯಲ್ಲಿರುವವರು ಯಾರೂ ಪವಿತ್ರರಾಗಿರುವುದಿಲ್ಲ. ಈ ರಾವಣ ರಾಜ್ಯದಲ್ಲಿ ಪತಿತರೊಂದಿಗೆ ಪತಿತರ ವ್ಯವಹಾರವಿದೆ, ಅಲ್ಲಿ ಪಾವನರ ವ್ಯವಹಾರವು ಪಾವನ ಮನುಷ್ಯರೊಂದಿಗೇ ಇರುತ್ತದೆ ಆದರೂ ಮತ್ತೆ ಕೆಳಗಿಳಿಯಲೇಬೇಕಾಗುತ್ತದೆ.

ತಂದೆಯು ತಿಳಿಸಿದ್ದಾರೆ – ಅರ್ಧಕಲ್ಪ ದಿನ, ಅರ್ಧಕಲ್ಪ ರಾತ್ರಿಯಾಗುತ್ತದೆ, ಇದೂ ಸಹ ಬ್ರಾಹ್ಮಣರ ಮಾತಾಗಿದೆ. ಬ್ರಾಹ್ಮಣರೇ ಮತ್ತೆ ದೇವತೆಗಳಾಗುತ್ತೀರಿ. ಹೊಸ ಪ್ರಪಂಚದಲ್ಲಿ ಲಕ್ಷ್ಮೀ-ನಾರಾಯಣರು ಎಲ್ಲಿಂದ ಬಂದರು? ಯಾವುದೇ ಯುದ್ಧವನ್ನಂತೂ ಮಾಡಲಿಲ್ಲ. ಮಹಾಭಾರತ ಯುದ್ಧವನ್ನು ತೋರಿಸುತ್ತಾರೆ ಆದರೆ ನಂತರ ಅದರ ಫಲಿತಾಂಶ ಏನನ್ನೂ ತೋರಿಸುವುದಿಲ್ಲ. ಪಂಚ ಪಾಂಡವರಿದ್ದರು ಎಂದು ಹೇಳುತ್ತಾರೆ, ನೀವು ಎಷ್ಟೊಂದು ಮಂದಿ ಪಾಂಡವರಿದ್ದೀರಿ, ನೀವು ಆತ್ಮಿಕ ಪಂಡರಾಗಿದ್ದೀರಿ. ಎಲ್ಲರೂ ಈಗ ಹಿಂತಿರುಗಿ ಹೋಗಬೇಕು ಎಂಬುದನ್ನು ತಿಳಿದುಕೊಂಡಿದ್ದೀರಿ, ತಂದೆಯು ಬರುವುದೇ ಎಲ್ಲರನ್ನೂ ಕರೆದುಕೊಂಡು ಹೋಗಲು, ಅವರು ಸುಪ್ರೀಂ ಮಾರ್ಗದರ್ಶಕ ಅಥವಾ ಮುಕ್ತಿದಾತನಾಗಿದ್ದಾರೆ, ಮಾಯೆಯಿಂದ ಮುಕ್ತ ಮಾಡಿ ಜೊತೆ ಕರೆದುಕೊಂಡು ಹೋಗುತ್ತಾರೆ. ಜೊತೆಯಲ್ಲಿ ಕರೆದುಕೊಂಡು ಹೋಗಲು ಮಾರ್ಗದರ್ಶಕರಂತೂ ಅವಶ್ಯವಾಗಿ ಬೇಕಾಗಿದೆ. ಈ ಮಾತುಗಳನ್ನು ಬುದ್ಧಿಯಲ್ಲಿ ನೆನಪಿಟ್ಟುಕೊಳ್ಳಬೇಕು. ಆ ಶಾಸ್ತ್ರಗಳಂತೂ ಗ್ರಂಥಗಳಲ್ಲಿ ಮುದ್ರಿತವಾಗಿದೆ. ಯಾರು ಬೇಕಾದರೂ ಹೋಗಿ ಓದಬಹುದು. ಈ ಜ್ಞಾನವನ್ನು ತಂದೆಯೇ ತಿಳಿಸುತ್ತಾರೆ ಮತ್ತೆ ಶಾಸ್ತ್ರಗಳನ್ನು ಓದುವ ಮಾತೇ ಇಲ್ಲ. ತಂದೆಯಿಂದ ಕೇಳಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ನೆನಪಿನ ಯಾತ್ರೆ ನಂಬರ್‍ವನ್ ಆಗಿದೆ, ಅದರಿಂದಲೇ ಪವಿತ್ರರಾಗುತ್ತೀರಿ. ಚರಿತ್ರೆ-ಭೂಗೋಳವನ್ನು ಯಾರೂ ತಿಳಿಸಲು ಸಾಧ್ಯವಿಲ್ಲ. ಈ ಯಾತ್ರೆಯಲ್ಲಿ ಬಹಳ ಮಕ್ಕಳು ಕಚ್ಚಾ ಇದ್ದಾರೆ, ನೆನಪಿನಲ್ಲಿಯೇ ವಿಘ್ನಗಳು ಬೀಳುತ್ತವೆ. ಜ್ಞಾನವು ಬಹಳ ಸಹಜವಾಗಿದೆ.

ತಂದೆಯು ತಿಳಿಸುತ್ತಾರೆ – ಇದು ಸೃಷ್ಟಿಚಕ್ರವಾಗಿದೆ. ಇದರ ನಾಲ್ಕೂ ಭಾಗಗಳು ಸರಿಸಮವಾಗಿವೆ. ಒಂದುವೇಳೆ ಇದರ ಆಯಸ್ಸು ಲಕ್ಷಾಂತರ ವರ್ಷಗಳಾಗಿದ್ದರೆ ಮನುಷ್ಯರು ಹೆಚ್ಚಾಗಿ ಬಿಡುತ್ತಿದ್ದರು. ಜನಸಂಖ್ಯೆಯು ಕಡಿಮೆಯಾಗಬೇಕೆಂದು ಸರ್ಕಾರವೂ ಸಹ ಹೇಳುತ್ತದೆ ಆದರೆ ಇದು ತಂದೆಯ ಕೆಲಸವಾಗಿದೆ. ಮನುಷ್ಯರೆಲ್ಲರೂ ದೈಹಿಕ ಯುಕ್ತಿಗಳನ್ನೇ ರಚಿಸುತ್ತಿರುತ್ತಾರೆ. ತಂದೆಯದು ಇದು ಆತ್ಮಿಕ ಯುಕ್ತಿಯಾಗಿದೆ. ತಂದೆಯು ತಿಳಿಸುತ್ತಾರೆ – ನಾನು ಅನೇಕ ಧರ್ಮಗಳ ವಿನಾಶ ಮಾಡಿ ಒಂದು ಧರ್ಮದ ಸ್ಥಾಪನೆ ಮಾಡಲು ಬರುತ್ತೇನೆ. ಒಂದು ಮತವು ಸತ್ಯಯುಗದಲ್ಲಿಯೇ ಇರುವುದು, ಇಲ್ಲಿರಲು ಸಾಧ್ಯವಿಲ್ಲ. ತಮ್ಮನ್ನು ಯಾರೂ ಸಹ ಪರಸ್ಪರ ಸಹೋದರನೆಂದು ತಿಳಿದುಕೊಳ್ಳುವುದೇ ಇಲ್ಲ. ತಂದೆಯು ಮಕ್ಕಳಿಗೆ ಬಹಳ ಯುಕ್ತಿಗಳನ್ನು ತಿಳಿಸುತ್ತಾ ಇರುತ್ತಾರೆ. ತಮ್ಮ ಬಳಿ ಭಾಷಣದ ವಿಷಯಗಳ ಪಟ್ಟಿಯನ್ನು ಇಟ್ಟುಕೊಳ್ಳಬೇಕು. ಒಂದೊಂದು ವಿಷಯವೂ ಬಹಳ ಸುಂದರವಾಗಿದೆ. ತಂದೆಯು ತಿಳಿಸುತ್ತಾರೆ – ನೀವು ಮಕ್ಕಳು ಹೆಚ್ಚು ಟಾಂ ಟಾಂ ಹೊಡೆಯಬಾರದು, ಕೇವಲ ಇಷ್ಟನ್ನೇ ತಿಳಿಸಬೇಕು – ಶಿವ ತಂದೆಯು ಹೇಳುತ್ತಾರೆ, ನಾನು ಎಲ್ಲಾ ಆತ್ಮರ ತಂದೆ ಪರಮ ಆತ್ಮನಾಗಿದ್ದೇನೆ. ನನ್ನನ್ನೇ ಭಗವಂತನೆಂದು ಹೇಳುತ್ತಾರೆ. ಯಾವುದೇ ಮನುಷ್ಯರಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಆತ್ಮಿಕ ಯಾತ್ರೆ ಮತ್ತು ದೈಹಿಕ ಯಾತ್ರೆಯ ವಿಷಯವು ಬಹಳ ಚೆನ್ನಾಗಿದೆ. ದೈಹಿಕ ಯಾತ್ರೆಯು ಮೃತ್ಯುಲೋಕದಲ್ಲಿ ಇರುತ್ತದೆ, ಇದು ಮೃತ್ಯುಲೋಕ, ಅದು ಅಮರಲೋಕವಾಗಿದೆ. ನೀವು ಮಕ್ಕಳು ಕಲ್ಪ-ಕಲ್ಪವೂ ತಂದೆಯ ಜೊತೆ ಸಹಯೋಗಿಗಳಾಗುತ್ತೀರಿ, ಆದ್ದರಿಂದ ನೀವು ಆತ್ಮೀಯ ಮಧುರ ಮಕ್ಕಳಾಗಿದ್ದೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್‍ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಾವು ಬುದ್ಧಿವಂತರಾಗಿ ಅನ್ಯರನ್ನೂ ಮಾಡಬೇಕಾಗಿದೆ. ತಮ್ಮ ಚಲನೆಯನ್ನು ಬಹಳ ರಾಯಲ್ ಮತ್ತು ಮಧುರವಾಗಿಟ್ಟುಕೊಳ್ಳಬೇಕಾಗಿದೆ.

2. ಆತ್ಮಿಕ ಯಾತ್ರೆಯಲ್ಲಿ ತತ್ಪರರಾಗಿರಬೇಕಾಗಿದೆ. ತಮ್ಮ ಬಳಿ ಒಳ್ಳೊಳ್ಳೆಯ ವಿಷಯಗಳನ್ನು ಬರೆದಿಟ್ಟುಕೊಳ್ಳಬೇಕು. ಒಂದೊಂದು ವಿಷಯದ ಮೇಲೆ ವಿಚಾರ ಸಾಗರ ಮಂಥನ ಮಾಡಬೇಕಾಗಿದೆ.

ವರದಾನ:-

ಯಾವ ಮಕ್ಕಳು ಸದಾ ಆಂತರ್ಯದ ಸ್ಥಿತಿಯಲ್ಲಿ ಅಥವಾ ಆಂತರ್ಯದ ಸ್ವರೂಪದಲ್ಲಿ ಸ್ಥಿತರಾಗಿದ್ದು ಅಂತರ್ಮುಖಿ ಆಗಿರುತ್ತಾರೆಯೋ ಅವರೆಂದಿಗೂ ಯಾವುದೇ ಮಾತಿನಲ್ಲಿ ಗುಪ್ತವಾಗಲು ಸಾಧ್ಯವಿಲ್ಲ. ಹಳೆಯ ಪ್ರಪಂಚ, ಸಂಬಂಧ, ಸಂಪತ್ತು, ಪದಾರ್ಥ, ಯಾವುದು ಅಲ್ಪಕಾಲದ ಹಾಗೂ ತೋರ್ಪಡಿಕೆಗೆ ಇದೆಯೋ ಅದರಿಂದ ಮೋಸ ಹೋಗಲು ಸಾಧ್ಯವಿಲ್ಲ. ಆಂತರ್ಯದ ಸ್ವರೂಪದ ಸ್ಥಿತಿಯಲ್ಲಿ ಇರುವುದರಿಂದ ತಮ್ಮ ಶಕ್ತಿ ಸ್ವರೂಪವೇನು ಗುಪ್ತವಾಗಿದೆ, ಅದು ಪ್ರತ್ಯಕ್ಷವಾಗಿ ಬಿಡುತ್ತದೆ. ಹಾಗೂ ಈ ಸ್ವರೂಪದಿಂದಲೇ ತಂದೆಯ ಪ್ರತ್ಯಕ್ಷತೆ ಆಗುವುದು. ಹಾಗಾದರೆ ಇಂತಹ ಶ್ರೇಷ್ಠ ಕರ್ತವ್ಯವನ್ನು ಮಾಡುವವರೇ ಸತ್ಯ ಸ್ನೇಹಿಯಾಗಿದ್ದಾರೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top