09 December 2021 KANNADA Murli Today | Brahma Kumaris

Read and Listen today’s Gyan Murli in Kannada

December 9, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಂದೆಯು ನಿಮಗೆ ರಾಜಯೋಗವನ್ನು ಕಲಿಸಲು ಬಂದಿದ್ದಾರೆ, ತಂದೆಯ ವಿನಃ ಮತ್ತ್ಯಾವುದೇ ದೇಹಧಾರಿಗಳು ನಿಮಗೆ ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ”

ಪ್ರಶ್ನೆ:: -

ತೀವ್ರ ಭಕ್ತಿ ಮಾಡುವುದರಿಂದ ಯಾವ ಪ್ರಾಪ್ತಿಯಾಗುತ್ತದೆ? ಯಾವ ಪ್ರಾಪ್ತಿ ಆಗುವುದಿಲ್ಲ?

ಉತ್ತರ:-

ಯಾರಾದರೂ ತೀವ್ರ ಭಕ್ತಿ ಮಾಡಿದರೆ ಸಾಕ್ಷಾತ್ಕಾರವಾಗುತ್ತದೆ ಬಾಕಿ ಯಾರದೇ ಸದ್ಗತಿಯಾಗುವುದಿಲ್ಲ. ಯಾರೂ ಹಿಂತಿರುಗಿ ಹೋಗುವುದಿಲ್ಲ. ತಂದೆಯ ವಿನಃ ಯಾರೂ ಸಹ ಮರಳಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ. ನೀವು ಮಾಡಿ-ಮಾಡಲ್ಪಟ್ಟ ಈ ನಾಟಕವನ್ನು ಅರಿತುಕೊಂಡಿದ್ದೀರಿ. ನಿಮಗೆ ಆತ್ಮದ ಯಥಾರ್ಥ ಜ್ಞಾನವಿದೆ, ಆತ್ಮವೇ ಸ್ವರ್ಗವಾಸಿ ಮತ್ತು ನರಕವಾಸಿಯಾಗುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಓಂ ಶಾಂತಿ. ಆತ್ಮಿಕ ಮಕ್ಕಳ ಪ್ರತಿ ಆತ್ಮಿಕ ತಂದೆಯು ಓಂ ಶಾಂತಿಯ ಅರ್ಥವನ್ನು ತಿಳಿಸಿದ್ದಾರೆ. ಓಂ ಎಂದರೆ ನಾನು ಎಂದು ಹೇಳಲಾಗುತ್ತದೆ. ನಾನಾತ್ಮ, ನನ್ನದು ಶರೀರ ಎರಡು ವಸ್ತುಗಳಿವೆ. ಓಂ ಶಾಂತಿ ಅರ್ಥಾತ್ ಶಾಂತಿಯು ನನ್ನ ಸ್ವಧರ್ಮವಾಗಿದೆ ಎಂದು ಆತ್ಮವು ಹೇಳಿತು. ಆತ್ಮದ ನಿವಾಸ ಸ್ಥಾನವು ಶಾಂತಿಧಾಮ ಅಥವಾ ಪರಮಧಾಮವಾಗಿದೆ, ಅದು ನಿರಾಕಾರಿ ಪ್ರಪಂಚವಾಗಿದೆ. ಇದು ಸಾಕಾರಿ ಮನುಷ್ಯರ ಪ್ರಪಂಚವಾಗಿದೆ. ಮನುಷ್ಯರಲ್ಲಿ ಆತ್ಮವಿದೆ ಮತ್ತು ಈ ಶರೀರವು ಪಂಚ ತತ್ವಗಳಿಂದಾಗಿದೆ. ಆತ್ಮವು ಅವಿನಾಶಿಯಾಗಿದೆ, ಅದು ಎಂದೂ ಸಾಯುವುದಿಲ್ಲ. ಆತ್ಮದ ತಂದೆ ಯಾರು? ಶರೀರದ ತಂದೆಯಂತೂ ಪ್ರತಿಯೊಬ್ಬರಿಗೂ ಬೇರೆ-ಬೇರೆಯಿರುತ್ತಾರೆ. ಬಾಕಿ ಎಲ್ಲಾ ಆತ್ಮರ ತಂದೆಯು ಒಬ್ಬರೇ ಪರಮಪಿತ ಪರಮಾತ್ಮನಾಗಿದ್ದಾರೆ. ಅವರ ಮೂಲ ಹೆಸರಾಗಿದೆ – ಶಿವ. ಮೊಟ್ಟ ಮೊದಲು ಶಿವ ಪರಮಾತ್ಮಾಯ ನಮಃ ಎಂದು ಹೇಳುತ್ತಾರೆ ನಂತರ ಬ್ರಹ್ಮ ದೇವತಾಯ ನಮಃ, ವಿಷ್ಣು ದೇವತಾಯ ನಮಃ ಎಂದು ಹೇಳುತ್ತಾರೆ, ಅವರಿಗೆ ಭಗವಂತನೆಂದು ಹೇಳಲು ಸಾಧ್ಯವಿಲ್ಲ. ಎಲ್ಲದಕ್ಕಿಂತ ಶ್ರೇಷ್ಠನು ನಿರಾಕಾರ ಪರಮಾತ್ಮನಾಗಿದ್ದಾರೆ ನಂತರ ಸೂಕ್ಷ್ಮ ದೇವತೆಗಳು, ಇಲ್ಲಿ ಎಲ್ಲರೂ ಮನುಷ್ಯರಾಗಿದ್ದಾರೆ ಆದ್ದರಿಂದ ಈಗ ಪ್ರಶ್ನೆ ಬರುತ್ತದೆ – ಆತ್ಮದ ರೂಪವೇನಾಗಿದೆ? ಭಾರತದಲ್ಲಿ ಶಿವನ ಪೂಜೆ ಮಾಡುತ್ತಾರೆ, ಶಿವಕಾಶಿ ಶಿವಕಾಶಿ ಎಂದು ಹೇಳುತ್ತಾರೆ. ಅವರು ಲಿಂಗವನ್ನು ಮಾಡುತ್ತಾರೆ, ಕೆಲವರು ದೊಡ್ಡ ಆಕಾರದಲ್ಲಿ ಮಾಡುತ್ತಾರೆ, ಕೆಲವರು ಚಿಕ್ಕದು. ಆದರೆ ಹೇಗೆ ಆತ್ಮನ ರೂಪವಿದೆಯೋ ಹಾಗೆಯೇ ಪರಮಾತ್ಮನ ರೂಪವಿದೆ, ಪರಮ ಆತ್ಮ ಎಂಬುದನ್ನು ಸೇರಿಸಿ ಪರಮಾತ್ಮ ಎಂದು ಹೇಳುತ್ತಾರೆ. ಪರಮಾತ್ಮನಿಗಾಗಿ ಅಖಂಡ ಜ್ಯೋತಿ ಸ್ವರೂಪನೆಂದು ಕೆಲವರು ಹೇಳುತ್ತಾರೆ. ಬ್ರಹ್ಮ ಮಹಾತತ್ವವೇ ಪರಮಾತ್ಮನೆಂದು ಕೆಲವರು ಹೇಳುತ್ತಾರೆ. ಈಗ ತಂದೆಯು ತಿಳಿಸುತ್ತಾರೆ – ಹೇಗೆ ನೀವಾತ್ಮರು ಬಿಂದುವಾಗಿದ್ದೀರೋ ಹಾಗೆಯೇ ನನ್ನ ರೂಪವೂ ಬಿಂದುವಾಗಿದೆ. ಯಾವಾಗ ರುದ್ರನ ಪೂಜೆ ಮಾಡುತ್ತಾರೆಯೋ ಅದರಲ್ಲಿ ಲಿಂಗವನ್ನೇ ಮಾಡುತ್ತಾರೆ. ಶಿವನ ದೊಡ್ಡ ಲಿಂಗ ಮತ್ತು ಸಾಲಿಗ್ರಾಮಗಳನ್ನು ಚಿಕ್ಕ-ಚಿಕ್ಕ ಗಾತ್ರದಲ್ಲಿ ಮಾಡಿಸುತ್ತಾರೆ. ಮನುಷ್ಯರಿಗೆ ಯಥಾರ್ಥವಾಗಿ ಆತ್ಮದ ಜ್ಞಾನವಾಗಲಿ, ಪರಮಾತ್ಮನ ಜ್ಞಾನವಾಗಲಿ ಇಲ್ಲ ಅಂದಮೇಲೆ ಆ ಮನುಷ್ಯರಿಂದೇನು ಪ್ರಯೋಜನ! ಎಲ್ಲರಲ್ಲಿ ಪಂಚ ವಿಕಾರಗಳು ಪ್ರವೇಶವಾಗಿದೆ, ದೇಹಾಭಿಮಾನದಲ್ಲಿ ಬಂದು ಒಬ್ಬರು ಇನ್ನೊಬ್ಬರನ್ನು ಕುಟುಕುತ್ತಾ ಇರುತ್ತಾರೆ. ಈ ವಿಕಾರವೇ ದುಃಖ ಕೊಡುವಂತಹದ್ದಾಗಿದೆ. ಯಾರಾದರೂ ಶರೀರ ಬಿಟ್ಟರೆ ದುಃಖವಾಯಿತು, ಇದೂ ಸಹ ಮುಳ್ಳು ಚುಚ್ಚಿದಂತೆ. ಯಾವ ಮನುಷ್ಯರಿಗೂ ಆತ್ಮಾನುಭೂತಿಯಾಗಲಿ, ಪರಮಾತ್ಮಾನುಭೂತಿಯಾಗಲಿ ಇಲ್ಲ. ಚಹರೆಯು ಮನುಷ್ಯರದು, ಗುಣಗಳು ವಿಕಾರಿಯಾಗಿದೆ ಆದ್ದರಿಂದ ರಾವಣ ಸಂಪ್ರದಾಯವೆಂದು ಹೇಳಲಾಗುತ್ತದೆ ಏಕೆಂದರೆ ರಾವಣ ರಾಜ್ಯವಾಗಿದೆ. ನಮಗೆ ರಾಮ ರಾಜ್ಯ ಬೇಕೆಂದು ಹೇಳುತ್ತಾರೆ. ಗೀತೆಯಲ್ಲಿಯೂ ಶಬ್ಧವಿದೆ- ಕೌರವ ಸಂಪ್ರದಾಯ, ಪಾಂಡವ ಸಂಪ್ರದಾಯ ಮತ್ತು ಯಾದವ ಸಂಪ್ರದಾಯ. ಈಗ ನೀವು ಮಕ್ಕಳು ರಾಜಯೋಗವನ್ನು ಕಲಿಯುತ್ತಿದ್ದೀರಿ. ರಾಜಯೋಗವನ್ನು ಶ್ರೀಕೃಷ್ಣನು ಕಲಿಸಲು ಸಾಧ್ಯವಿಲ್ಲ. ಕೃಷ್ಣನು ಸತ್ಯಯುಗದ ರಾಜಕುಮಾರನಾಗಿದ್ದಾನೆ. ಅವನ ಮಹಿಮೆಯಾಗಿದೆ- ಸರ್ವಗುಣ ಸಂಪನ್ನ….. ಪ್ರತಿಯೊಬ್ಬರ ಕರ್ತವ್ಯ, ಮಹಿಮೆಯು ಬೇರೆ-ಬೇರೆಯಾಗಿದೆ. ರಾಷ್ಟ್ರಪತಿಯ ಕರ್ತವ್ಯವೇ ಬೇರೆ, ಪ್ರಧಾನ ಮಂತ್ರಿಯ ಕರ್ತವ್ಯವೇ ಬೇರೆ. ಈಗ ಇವರು ಶ್ರೇಷ್ಠಾತಿ ಶ್ರೇಷ್ಠ ಬೇಹದ್ದಿನ ತಂದೆಯಾಗಿದ್ದಾರೆ, ಇವರ ಕರ್ತವ್ಯವನ್ನೂ ಸಹ ಮನುಷ್ಯರೇ ತಿಳಿದುಕೊಳ್ಳುವರು. ಪ್ರಾಣಿಗಳು ತಿಳಿದುಕೊಳ್ಳಲು ಸಾಧ್ಯವೇ! ಮನುಷ್ಯರು ಯಾವಾಗ ತಮೋಪ್ರಧಾನ ಆಗಿ ಬಿಡುತ್ತಾರೆಯೋ ಆಗ ಒಬ್ಬರು ಇನ್ನೊಬ್ಬರಿಗೆ ನಿಂದನೆ ಮಾಡುತ್ತಾರೆ. ಇದು ಹಳೆಯ ಕಲಿಯುಗೀ ಪ್ರಪಂಚವಾಗಿದೆ, ಇದಕ್ಕೆ ನರಕವೆಂದು ಹೇಳಲಾಗುತ್ತದೆ, ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಸತ್ಯಯುಗಕ್ಕೆ ನಿರ್ವಿಕಾರಿ ಪ್ರಪಂಚವೆಂದು ಹೇಳಲಾಗುತ್ತದೆ. ಆತ್ಮವು ಈ ಕರ್ಮೇಂದ್ರಿಯಗಳ ಮೂಲಕ ನಮಗೆ ರಾಮರಾಜ್ಯ ಬೇಕು, ಹೇ ಪತಿತ-ಪಾವನ ತಾವು ಬಂದು ಪಾವನ ಮಾಡಿ, ಶಾಂತಿಧಾಮ-ಸುಖಧಾಮದಲ್ಲಿ ಕರೆದುಕೊಂಡು ಹೋಗಿ ಎಂದು ಹೇಳುತ್ತದೆ. ತಂದೆಯು ತಿಳಿಸುತ್ತಾರೆ – ಸುಖ ದುಃಖದ ಆಟವು ಮಾಡಲ್ಪಟ್ಟಿದೆ, ಮಾಯೆಯೊಂದಿಗೆ ಸೋಲುವುದೇ ಸೋಲು, ಮಾಯೆಯೊಂದಿಗೆ ಗೆಲ್ಲುವುದೇ ಗೆಲುವು. ಯಾರಿಗೆ ಪೂಜೆ ಮಾಡುತ್ತಾರೆಯೋ ಅವರ ಕರ್ತವ್ಯವನ್ನೇ ಅರಿತುಕೊಂಡಿಲ್ಲ. ಇದಕ್ಕೆ ಅಂಧಶ್ರದ್ಧೆ ಅಥವಾ ಗೊಂಬೆಗಳ ಪೂಜೆಯೆಂದು ಹೇಳಲಾಗುತ್ತದೆ. ಹೇಗೆ ಮಕ್ಕಳು ಗೊಂಬೆಗಳನ್ನು ಮಾಡಿ ಆಟವಾಡಿದ ನಂತರ ಅದನ್ನು ಒಡೆದು ಹಾಕುತ್ತಾರೆ. ಮನುಷ್ಯರು ಶಿವ ಪರಮಾತ್ಮಾಯ ನಮಃ ಎಂದು ಹಾಡುತ್ತಾರೆ ಆದರೆ ಅರ್ಥವನ್ನು ತಿಳಿದುಕೊಂಡಿಲ್ಲ. ಶಿವನು ಶ್ರೇಷ್ಠಾತಿ ಶ್ರೇಷ್ಠ ತಂದೆಯಾಗಿದ್ದಾರೆ. ಬ್ರಹ್ಮನಿಗೂ ಸಹ ಪ್ರಜಾಪಿತನೆಂದು ಹೇಳುತ್ತಾರೆ. ಪ್ರಜೆಗಳೆಂದರೆ ಮನುಷ್ಯ ಸೃಷ್ಟಿ. ಶಿವನು ಆತ್ಮರ ತಂದೆಯಾಗಿದ್ದಾರೆ. ಎಲ್ಲರಿಗೂ ಇಬ್ಬರು ತಂದೆಯರಿದ್ದಾರೆ ಆದರೆ ಎಲ್ಲಾ ಆತ್ಮರ ತಂದೆಯು ಶಿವನಾಗಿದ್ದಾರೆ, ಅವರಿಗೆ ದುಃಖಹರ್ತ-ಸುಖಕರ್ತನೆಂದು ಹೇಳಲಾಗುತ್ತದೆ. ಕಲ್ಯಾಣಕಾರಿ ಎಂದೂ ಹೇಳುತ್ತಾರೆ. ದೇವತೆಗಳ ಮುಂದೆ ತಾವು ಸರ್ವಗುಣ ಸಂಪನ್ನರು, ನಾವು ನೀಚರು ಪಾಪಿಗಳಾಗಿದ್ದೇವೆ, ನಮ್ಮಲ್ಲಿ ಯಾವುದೇ ಗುಣವಿಲ್ಲವೆಂದು ಮಹಿಮೆಯನ್ನು ಹಾಡುತ್ತಾರೆ. ಸಂಪೂರ್ಣ ತುಚ್ಛ ಬುದ್ಧಿಯವರಾಗಿದ್ದಾರೆ. ದೇವತೆಗಳು ಸ್ವಚ್ಛ ಬುದ್ಧಿಯವರಾಗಿದ್ದರು, ಇಲ್ಲಿ ಎಲ್ಲರೂ ವಿಕಾರಿ ಪತಿತರಾಗಿದ್ದಾರೆ ಆದ್ದರಿಂದ ಗುರುಗಳನ್ನು ಮಾಡಿಕೊಳ್ಳುತ್ತಾರೆ. ವಾಸ್ತವದಲ್ಲಿ ಯಾರು ಸದ್ಗತಿ ಮಾಡುವರೋ ಅವರೇ ಗುರುವಾಗಿದ್ದಾರೆ. ಗುರುಗಳನ್ನು ವಾನಪ್ರಸ್ಥದಲ್ಲಿ ಮಾಡಿಕೊಳ್ಳಲಾಗುತ್ತದೆ. ನಾವು ಭಗವಂತನ ಬಳಿ ಹೋಗಲು ಬಯಸುತ್ತೇವೆಂದು ಹೇಳುತ್ತಾರೆ, ಸತ್ಯಯುಗದಲ್ಲಿ ವಾನಪ್ರಸ್ಥ ಸ್ಥಿತಿಯೆಂದು ಹೇಳುವುದಿಲ್ಲ. ಅಲ್ಲಿ ಇದು ತಿಳಿದಿರುತ್ತದೆ – ನಾವು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳಬೇಕಾಗಿದೆ. ಇಲ್ಲಿ ಮನುಷ್ಯರು ಮುಕ್ತಿಯಲ್ಲಿ ಹೋಗುವುದಕ್ಕಾಗಿ ಗುರುಗಳನ್ನು ಮಾಡಿಕೊಳ್ಳುತ್ತಾರೆ ಆದರೆ ಯಾರೂ ಹೋಗುವುದಿಲ್ಲ. ಇವರೆಲ್ಲರೂ ಭಕ್ತಿಮಾರ್ಗದ ಗುರುಗಳಾಗಿದ್ದಾರೆ. ಶಾಸ್ತ್ರಗಳೆಲ್ಲವೂ ಭಕ್ತಿಮಾರ್ಗದ್ದಾಗಿದೆ, ಇದನ್ನು ತಂದೆಯೇ ತಿಳಿಸುತ್ತಾರೆ. ತಂದೆಯು ಒಬ್ಬರೇ ಆಗಿದ್ದಾರೆ, ಅವರೇ ಭಗವಂತನಾಗಿದ್ದಾರೆ. ಮನುಷ್ಯರಿಗೆ ಭಗವಂತನೆಂದು ಹೇಳಲು ಹೇಗೆ ಸಾಧ್ಯ! ಇಲ್ಲಂತೂ ಎಲ್ಲರಿಗೆ ಭಗವಂತನೆಂದು ಹೇಳುತ್ತಿರುತ್ತಾರೆ, ಸಾಯಿಬಾಬಾ ಭಗವಂತ, ನಾನೂ ಭಗವಂತ, ನೀವೂ ಭಗವಂತ, ಕಲ್ಲು-ಮುಳ್ಳು ಎಲ್ಲದರಲ್ಲಿ ಭಗವಂತನಿದ್ದಾರೆ ಎಂದು ಹೇಳಿಬಿಡುತ್ತಾರೆ. ನೀವೂ ಸಹ ಮೊದಲು ಕಲ್ಲು ಬುದ್ಧಿಯವರು ನರಕವಾಸಿಗಳಾಗಿದ್ದೀರಿ, ಈಗ ಸಂಗಮಯುಗಿಗಳಾಗಿದ್ದೀರಿ. ಮಹಿಮೆಯೆಲ್ಲವೂ ಸಂಗಮಯುಗದ್ದಾಗಿದೆ, ಪುರುಷೋತ್ತಮ ಮಾಸವನ್ನು ಆಚರಿಸುತ್ತಾರಲ್ಲವೆ ಆದರೆ ಅದರಲ್ಲಿ ಯಾರೂ ಉತ್ತಮ ಪುರುಷರಾಗುವುದಿಲ್ಲ. ನೀವೀಗ ಮನುಷ್ಯರಿಂದ ದೇವತೆಗಳು ಎಷ್ಟೊಂದು ಉತ್ತಮ ಪುರುಷರಾಗಿದ್ದೀರಿ! ತಂದೆಯು ತಿಳಿಸುತ್ತಾರೆ – ನಾನು ಕಲ್ಪದ ಸಂಗಮಯುಗದಲ್ಲಿ ಭಾರತವನ್ನು ಪುರುಷೋತ್ತಮವನ್ನಾಗಿ ಮಾಡಲು ಬರುತ್ತೇನೆ. ಇದನ್ನೂ ಸಹ ಮಕ್ಕಳಿಗೆ ತಿಳಿಸಿದ್ದಾರೆ – ಹೇಗೆ ಆತ್ಮವು ಬಿಂದುವಾಗಿದೆಯೋ ಹಾಗೆಯೇ ಪರಮಪಿತ ಪರಮಾತ್ಮನೂ ಬಿಂದುವಾಗಿದ್ದಾರೆ. ಭೃಕುಟಿಯ ನಡುವೆ ಹೊಳೆಯುವ ನಕ್ಷತ್ರವೆಂದು ಹೇಳುತ್ತಾರೆ, ಆತ್ಮವು ಸೂಕ್ಷ್ಮವಾಗಿದೆ, ಅದನ್ನು ಬುದ್ಧಿಯಿಂದ ಅರಿತುಕೊಳ್ಳಲಾಗುತ್ತದೆ. ಈ ಕಣ್ಣುಗಳಿಂದ ನೋಡಲು ಸಾಧ್ಯವಾಗುವುದಿಲ್ಲ. ದಿವ್ಯ ದೃಷ್ಟಿಯಿಂದ ನೋಡಬಹುದಾಗಿದೆ. ಉದಾಹರಣೆಗೆ: ಯಾರಾದರೂ ತೀವ್ರ ಭಕ್ತಿ ಮಾಡುತ್ತಾರೆಂದರೆ ಅದರಿಂದ ಸಾಕ್ಷಾತ್ಕಾರವಾಗುತ್ತದೆ ಆದರೆ ಅದರಿಂದ ಏನಾದರೂ ಸಿಕ್ಕಿತೇ? ಏನೂ ಇಲ್ಲ. ಸಾಕ್ಷಾತ್ಕಾರದಿಂದ ಸದ್ಗತಿಯಂತೂ ಆಗಲು ಸಾಧ್ಯವಿಲ್ಲ, ಸದ್ಗತಿದಾತ, ದುಃಖಹರ್ತ-ಸುಖಕರ್ತನು ಒಬ್ಬ ತಂದೆಯೇ ಆಗಿದ್ದಾರೆ. ಈ ಪ್ರಪಂಚವೇ ವಿಕಾರಿಯಾಗಿದೆ. ಸಾಕ್ಷಾತ್ಕಾರದಿಂದ ಯಾರೂ ಸ್ವರ್ಗಕ್ಕೆ ಹೋಗುವುದಿಲ್ಲ. ಶಿವನ ಭಕ್ತಿ ಮಾಡಿದರು, ಸಾಕ್ಷಾತ್ಕಾರವಾಯಿತೆಂದರೆ ಏನಾಯಿತು? ತಂದೆಯ ವಿನಃ ಮತ್ತ್ಯಾರೂ ಮರಳಿ ಕರೆದುಕೊಂಡು ಹೋಗಲು ಸಾಧ್ಯವಿಲ್ಲ, ಇದು ಮಾಡಿ-ಮಾಡಲ್ಪಟ್ಟ ನಾಟಕವಾಗಿದೆ. ಮಾಡಿ-ಮಾಡಲ್ಪಟ್ಟಿರುವುದೇ ಆಗುತ್ತಿದೆ ಎಂದು ಹೇಳುತ್ತಾರೆ ಆದರೆ ಅರ್ಥವೇನನ್ನೂ ತಿಳಿದುಕೊಂಡಿಲ್ಲ. ಆತ್ಮದ ಜ್ಞಾನವೂ ಇಲ್ಲ. ಪ್ರತಿಯೊಂದು ಆತ್ಮವು 84 ಲಕ್ಷ ಜನ್ಮಗಳನ್ನು ತೆಗೆದುಕೊಳ್ಳುತ್ತದೆ, ಅದರಲ್ಲಿ ಒಂದು ಮನುಷ್ಯನ ಜನ್ಮವು ದುರ್ಲಭವಾಗಿದೆ ಎಂದು ಹೇಳುತ್ತಾರೆ ಆದರೆ ಈ ರೀತಿಯ ಯಾವುದೇ ಮಾತಿಲ್ಲ, ಮನುಷ್ಯರದಂತೂ ದೊಡ್ಡ ಪಾತ್ರವೇ ನಡೆಯುತ್ತದೆ. ಮನುಷ್ಯರೇ ಸ್ವರ್ಗವಾಸಿಗಳು, ಮನುಷ್ಯರೇ ನರಕವಾಸಿಗಳಾಗುತ್ತಾರೆ. ಭಾರತವೇ ಎಲ್ಲದಕ್ಕಿಂತ ಶ್ರೇಷ್ಠ ಖಂಡವಾಗಿತ್ತು. ಲಕ್ಷ್ಮೀ-ನಾರಾಯಣರ ರಾಜ್ಯವಿತ್ತು, ಅಲ್ಲಂತೂ ಬಹಳ ಕೆಲವರೇ ಮನುಷ್ಯರಿರುತ್ತಾರೆ. ಒಂದು ಮತ, ಒಂದು ಧರ್ಮವಿತ್ತು, ಭಾರತವು ಇಡೀ ವಿಶ್ವದ ಮಾಲೀಕನಾಗಿತ್ತು, ಮತ್ತ್ಯಾವುದೇ ಧರ್ಮವಿರಲಿಲ್ಲ. ಇದು ವಿದ್ಯೆಯಾಗಿದೆ. ಇದನ್ನು ಯಾರು ಓದಿಸುತ್ತಾರೆ? ಭಗವಾನುವಾಚ – ನಾನು ನಿಮ್ಮನ್ನು ಈ ರಾಜಯೋಗದ ಮೂಲಕ ರಾಜರಿಗೂ ರಾಜರನ್ನಾಗಿ ಮಾಡುತ್ತೇನೆ. ಭಗವಂತನು ಯಾರಿಗೆ ಗೀತೆಯನ್ನು ತಿಳಿಸಿದರು, ಗೀತೆಯಿಂದ ನಂತರ ಏನಾಯಿತು ಎಂದು ಯಾರಿಗೂ ತಿಳಿದಿಲ್ಲ. ಗೀತೆಯ ನಂತರ ಮಹಾಭಾರತವಾಗಿದೆ, ಗೀತೆಯಲ್ಲಿ ರಾಜಯೋಗವಿದೆ. ಭಗವಾನುವಾಚ – ನನ್ನೊಬ್ಬನನ್ನೇ ನೆನಪು ಮಾಡಿದರೆ ನಿಮ್ಮ ಪಾಪಗಳು ಭಸ್ಮವಾಗುತ್ತವೆ. ಮನ್ಮನಾಭವದ ಅರ್ಥವೇನೆಂದರೆ ತಂದೆಯು ಹೇಳುತ್ತಾರೆ, ಯಾರು ಸೂರ್ಯವಂಶಿ ಪೂಜ್ಯರಾಗಿದ್ದಿರೋ ಅವರೇ ನಂತರ ಶೂದ್ರವಂಶಿ ಪೂಜಾರಿಗಳಾಗಿ ಬಿಟ್ಟಿದ್ದೀರಿ. ವಿರಾಟ ರೂಪದ ಅರ್ಥವನ್ನೂ ಸಹ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ವಿರಾಟ ರೂಪದಲ್ಲಿ ಬ್ರಾಹ್ಮಣರನ್ನು ತೋರಿಸುವುದೇ ಮರೆ ಮಾಡಿ ಬಿಟ್ಟಿದ್ದಾರೆ. ಬ್ರಾಹ್ಮಣರಂತೂ ಬಹಳ ಮಂದಿ ಎಂದು ಗಾಯನವಾಗುತ್ತದೆ. ಪ್ರಜಾಪಿತ ಬ್ರಹ್ಮನ ಸಂತಾನರಲ್ಲವೆ. ತಂದೆಯು ಬ್ರಹ್ಮಾರವರ ಮೂಲಕವೇ ರಚನೆಯನ್ನು ರಚಿಸುತ್ತಾರೆ, ದತ್ತು ಮಾಡಿಕೊಳ್ಳುತ್ತಾರೆ. ನೀವೀಗ ಶ್ರೇಷ್ಠ ಬ್ರಾಹ್ಮಣರಾಗಿದ್ದೀರಿ. ನಿಮ್ಮನ್ನು ರಚಿಸುವವರು ಸರ್ವಶ್ರೇಷ್ಠ ಭಗವಂತನಾಗಿದ್ದಾರೆ, ಅವರೇ ಎಲ್ಲರ ತಂದೆಯಾಗಿದ್ದಾರೆ. ಬ್ರಹ್ಮನಿಗೂ ಅವರು ತಂದೆಯಾಗಿದ್ದಾರೆ, ಪೂರ್ಣ ರಚನೆಗೆ ತಂದೆಯಾಗಿದ್ದಾರೆ ಅಂದಮೇಲೆ ರಚನೆಯಾದ ನೀವು ಪರಸ್ಪರ ಸಹೋದರರಾದಿರಿ. ಆಸ್ತಿಯು ತಂದೆಯಿಂದ ಸಿಗುತ್ತದೆಯೇ ಹೊರತು ಸಹೋದರನಿಂದಲ್ಲ. ಶಿವ ಜಯಂತಿಯನ್ನೂ ಆಚರಿಸಲಾಗುತ್ತದೆ. ಇಂದಿಗೆ 5000 ವರ್ಷಗಳ ಮೊದಲು ಬ್ರಹ್ಮನ ತನುವಿನಲ್ಲಿ ಶಿವ ತಂದೆಯು ಬಂದಿದ್ದರು, ದೇವಿ-ದೇವತಾ ಧರ್ಮವನ್ನು ಸ್ಥಾಪನೆ ಮಾಡಿದ್ದರು, ಬ್ರಾಹ್ಮಣರೇ ರಾಜಯೋಗವನ್ನು ಕಲಿತಿದ್ದಿರಿ, ಅದನ್ನು ಮತ್ತೆ ನೀವೀಗ ಕಲಿಯುತ್ತಿದ್ದೀರಿ. ಭಾರತವು ಮೊದಲು ಶಿವಾಲಯವಾಗಿತ್ತು. ಶಿವ ತಂದೆಯು ಶಿವಾಲಯ(ಸ್ವರ್ಗ)ವನ್ನು ರಚಿಸಿದರು ಮತ್ತು ಭಾರತವಾಸಿಗಳೇ ಸ್ವರ್ಗದಲ್ಲಿ ರಾಜ್ಯಭಾರ ಮಾಡುತ್ತಿದ್ದರು, ಈಗ ಎಲ್ಲಿ ರಾಜ್ಯ ಮಾಡುತ್ತಾರೆ? ಈಗ ಪತಿತ ಪ್ರಪಂಚ ನರಕವಾಗಿದೆ, ನಾವು ನರಕವಾಸಿಗಳೆಂಬುದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ಇಂತಹವರು ಶರೀರ ಬಿಟ್ಟರು, ಸ್ವರ್ಗವಾಸಿಯಾದರು ಎಂದು ಹೇಳುತ್ತಾರೆ ಅಂದಮೇಲೆ ತಮ್ಮನ್ನು ನರಕವಾಸಿಯೆಂದು ತಿಳಿದುಕೊಳ್ಳಬೇಕಲ್ಲವೆ.

ತಂದೆಯು ತಿಳಿಸುತ್ತಾರೆ – ನಾನು ನೀವು ಮಕ್ಕಳನ್ನು ಸ್ವರ್ಗವಾಸಿಗಳನ್ನಾಗಿ ಮಾಡಿದ್ದೆನು, ಇಂದಿಗೆ 5000 ವರ್ಷಗಳಾಯಿತು. ಮೊದಲು ನೀವು ಬಹಳ ಸಾಹುಕಾರರಾಗಿದ್ದಿರಿ, ಇಡೀ ವಿಶ್ವದ ಮಾಲೀಕರಾಗಿದ್ದಿರಿ ಅಂದಮೇಲೆ ಅವಶ್ಯವಾಗಿ ಭಗವಂತನೇ ಈ ರೀತಿ ಮಾಡಿರುವರು. ಭಗವಾನುವಾಚ – ನಾನು ನಿಮ್ಮನ್ನು ರಾಜಾಧಿರಾಜರನ್ನಾಗಿ ಮಾಡುತ್ತೇನೆ ಅಂದಮೇಲೆ ಅವಶ್ಯವಾಗಿ ರಾಜರೂ ಆಗುತ್ತಾರೆ, ಪ್ರಜೆಗಳೂ ಆಗುತ್ತಾರೆ. ಅರ್ಧಕಲ್ಪ ದಿನ, ಸ್ವರ್ಗವಾಗಿದೆ. ಅರ್ಧಕಲ್ಪ ರಾತ್ರಿ ನರಕವಾಗಿದೆ. ಈಗ ತಂದೆಯು ಒಂದು ಬಾರಿ ಬರುವರಲ್ಲವೆ, ತಂದೆಯು ಎಲ್ಲರ ಮಾರ್ಗದರ್ಶಕನಾಗಿದ್ದಾರೆ, ಅವರು ಎಲ್ಲರನ್ನೂ ಮರಳಿ ಕರೆದುಕೊಂಡು ಹೋಗುತ್ತಾರೆ. ಅಲ್ಲಿಂದ ಮತ್ತೆ ಮೃತ್ಯುಲೋಕದಲ್ಲಿ ಬರುವುದಿಲ್ಲ. ಒಬ್ಬ ತಂದೆಯೇ ಅಂಧರಿಗೆ ಊರುಗೋಲಾಗಿದ್ದಾರೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಈ ರಾವಣ ರಾಜ್ಯದ ವಿನಾಶವಾಗಲಿದೆ. ಇದು ಅದೇ ಮಹಾಭಾರತ ಯುದ್ಧವಾಗಿದೆ, ಮನುಷ್ಯರಂತೂ ಏನನ್ನೂ ತಿಳಿದುಕೊಳ್ಳುವುದಿಲ್ಲ. ಭಾರತವಾಸಿಗಳು ತಾವೇ ಪೂಜ್ಯರು, ತಾವೇ ಪೂಜಾರಿಗಳಾಗಿದ್ದಾರೆ, ಏಣಿ ಇಳಿಯುತ್ತಾ-ಇಳಿಯುತ್ತಾ ವಾಮಮಾರ್ಗದಲ್ಲಿ ಹೋಗುವುದರಿಂದ ಪೂಜಾರಿಗಳಾಗಿ ಬಿಡುತ್ತಾರೆ. ಮೊದಲು ನಾವೆಲ್ಲರೂ ಪೂಜ್ಯರು, ಸೂರ್ಯವಂಶಿಯರಾಗಿದ್ದೆವು ನಂತರ ಎರಡು ಕಲೆಗಳು ಕಡಿಮೆಯಾಗಿ ಚಂದ್ರವಂಶಿಯರಾದೆವು. ಇನ್ನೂ ಕೆಳಗಿಳಿಯುತ್ತಾ ಪೂಜಾರಿಗಳಾಗಿದ್ದೇವೆ. ಮೊಟ್ಟ ಮೊದಲು ಶಿವನ ಪೂಜೆಯಾಗುತ್ತದೆ, ಅದಕ್ಕೆ ಅವ್ಯಭಿಚಾರಿ ಪೂಜೆಯೆಂದು ಹೇಳಲಾಗುತ್ತದೆ. ಈಗ ತಂದೆಯು ತಿಳಿಸುತ್ತಾರೆ – ಒಬ್ಬ ನಿರಾಕಾರ ತಂದೆಯನ್ನು ನೆನಪು ಮಾಡಿರಿ, ಮತ್ತ್ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು. ಹೇ ಪತಿತ-ಪಾವನ ಬಂದು ನಮ್ಮನ್ನು ಪಾವನ ಮಾಡಿರಿ ಎಂದು ಕರೆಯುತ್ತಾರೆ. ನನ್ನ ವಿನಃ ಮತ್ತ್ಯಾರಾದರೂ ಹೇಗೆ ಪಾವನ ಮಾಡುವರು? ಏಣಿಚಿತ್ರದಲ್ಲಿ ತೋರಿಸಿದ್ದಾರೆ – ಕಲಿಯುಗದ ಅಂತ್ಯದಲ್ಲಿ ಏನಾಗುತ್ತದೆ ಎಂದು. ಪಂಚ ತತ್ವಗಳಿಗೂ ಭಕ್ತಿ ಮಾಡುತ್ತಾರೆ. ಸಾಧು-ಸಂತರು ಬ್ರಹ್ಮತತ್ವದ ಸಾಧನೆ ಮಾಡುತ್ತಾರೆ. ಸ್ವರ್ಗದಲ್ಲಿ ಇದ್ಯಾವುದೂ ಇರುವುದಿಲ್ಲ. ಇದೆಲ್ಲಾ ನಾಟಕವು ಭಾರತದ ಪ್ರತಿ ಮಾಡಲ್ಪಟ್ಟಿದೆ, 84 ಜನ್ಮಗಳನ್ನು ತೆಗೆದುಕೊಳ್ಳುತ್ತಾರೆ. ಇಲ್ಲಿ ಭಕ್ತಿಮಾರ್ಗದ ಯಾವುದೇ ದಂತಕಥೆಗಳಿಲ್ಲ. ಇದಂತೂ ವಿದ್ಯೆಯಾಗಿದೆ, ಇಲ್ಲಿ ಒಬ್ಬ ತಂದೆಯನ್ನು ನೆನಪು ಮಾಡಿರಿ ಎಂದು ಶಿಕ್ಷಣ ಸಿಗುತ್ತದೆ. ಬ್ರಹ್ಮಾ, ವಿಷ್ಣು, ಶಂಕರನನ್ನೂ ನೆನಪು ಮಾಡಬಾರದು, ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದಾಗಿದೆ. ನಮಗೆ ಒಬ್ಬ ಶಿವ ತಂದೆಯ ವಿನಃ ಮತ್ತ್ಯಾರೂ ಇಲ್ಲವೆಂದು ನೀವು ಮಕ್ಕಳೂ ಸಹ ಹೇಳುತ್ತೀರಿ. ತಂದೆಯೂ ಹೇಳುತ್ತಾರೆ- ಮಕ್ಕಳೇ, ಗೃಹಸ್ಥ ವ್ಯವಹಾರದಲ್ಲಿದ್ದು ಕಮಲಪುಷ್ಫ ಸಮಾನ ಪವಿತ್ರರಾಗಿರಿ. ಪತಿತ-ಪಾವನನೆಂದು ನನ್ನೊಬ್ಬನಿಗೇ ಹೇಳುತ್ತಾರೆ. ಅಂದಮೇಲೆ ಮನುಷ್ಯರು ಗುರುಗಳಾಗಲು ಹೇಗೆ ಸಾಧ್ಯ! ಯಾವಾಗ ಸ್ವಯಂ ತಾನೇ ಮರಳಿ ಹೋಗಲು ಸಾಧ್ಯವಿಲ್ಲ ಅಂದಮೇಲೆ ಅನ್ಯರನ್ನು ಹೇಗೆ ಕರೆದುಕೊಂಡು ಹೋಗುವರು? ಮತ್ತು ಜ್ಯೋತಿಯಲ್ಲಿ ಜ್ಯೋತಿ ಸಮಾವೇಶವಾಗುವುದೂ ಇಲ್ಲ. ಪಾತ್ರವನ್ನಭಿನಯಿಸುವವರೆಲ್ಲರೂ ಇಲ್ಲಿ ಪುನರ್ಜನ್ಮದಲ್ಲಿದ್ದಾರೆ, ನೀವೆಲ್ಲರೂ ಪ್ರಿಯತಮೆಯರಾಗಿದ್ದೀರಿ. ಒಬ್ಬ ಪ್ರಿಯತಮನನ್ನು ನೆನಪು ಮಾಡುತ್ತೀರಿ. ಅವರು ದಯಾಹೃದಯಿ, ಮುಕ್ತಿದಾತನಾಗಿದ್ದಾರೆ. ಇಲ್ಲಿ ದುಃಖವಿದೆ, ಆದ್ದರಿಂದಲೇ ಅವರನ್ನು ನೆನಪು ಮಾಡುತ್ತಾರೆ. ಸತ್ಯಯುಗದಲ್ಲಿ ಯಾರೂ ನೆನಪು ಮಾಡುವುದಿಲ್ಲ. ತಂದೆಯು ತಿಳಿಸುತ್ತಾರೆ – ನನ್ನ ಪಾತ್ರವೇ ಸಂಗಮಯುಗದಲ್ಲಿದೆ, ಬಾಕಿ ಯುಗೇ ಯುಗೇ ಎಂಬ ಶಬ್ಧವನ್ನು ತಪ್ಪಾಗಿ ಬರೆದು ಬಿಟ್ಟಿದ್ದಾರೆ. ಈ ಕಲ್ಯಾಣಕಾರಿ ಪುರುಷೋತ್ತಮ ಯುಗವು ಯಾರಿಗೂ ಗೊತ್ತಿಲ್ಲ. ಮೊದಲ ಮುಖ್ಯ ಮಾತಾಗಿದೆ – ತಂದೆಯನ್ನು ಅರಿತುಕೊಳ್ಳುವುದು, ಇಲ್ಲದಿದ್ದರೆ ತಂದೆಯಿಂದ ಆಸ್ತಿಯನ್ನು ಹೇಗೆ ತೆಗೆದುಕೊಳ್ಳುವಿರಿ! ರಚನೆಯಿಂದ ಆಸ್ತಿಯು ಸಿಗಲು ಸಾಧ್ಯವಿಲ್ಲ. ತಂದೆಯು ಬ್ರಹ್ಮಾರವರ ಮೂಲಕ ದತ್ತು ಮಾಡಿಕೊಂಡಿದ್ದಾರೆ. ಇಷ್ಟೊಂದು ಮಂದಿ ಪ್ರಜೆಗಳು ಹೇಗೆ ರಚಿಸಲ್ಪಡುವರು ಎಂಬುದನ್ನು ಮನುಷ್ಯರು ತಿಳಿದುಕೊಂಡಿಲ್ಲ. ಪ್ರಜಾಪಿತನಿದ್ದಾರಲ್ಲವೆ. ಸರಸ್ವತಿಯು ತಾಯಿಯೋ ಅಥವಾ ಮಗಳಾಗಿದ್ದಾರೆಯೋ? ಎಂಬುದನ್ನೂ ಸಹ ಯಾರೂ ತಿಳಿದುಕೊಂಡಿಲ್ಲ. ನಿಮಗೆ ತಾಯಿಯಂತು ಗುಪ್ತವಾಗಿದ್ದಾರೆ, ಶಿವ ತಂದೆಯು ಬ್ರಹ್ಮಾರವರ ಮೂಲಕ ನಿಮ್ಮನ್ನು ದತ್ತು ಮಾಡಿಕೊಳ್ಳುತ್ತಾರೆ. ನೀವೀಗ ರಾಜ ಋಷಿಗಳಾಗಿದ್ದೀರಿ. ಋಷಿ ಶಬ್ಧವು ಪವಿತ್ರತೆಯ ಸಾಂಕೇತಿಕವಾಗಿದೆ. ಸನ್ಯಾಸಿಗಳು ಹಠಯೋಗಿಗಳಾಗಿದ್ದಾರೆ, ಅವರು ರಾಜಯೋಗವನ್ನು ಕಲಿಸಲು ಸಾಧ್ಯವಿಲ್ಲ. ಯಾವ ಗೀತೆಯನ್ನು ತಿಳಿಸುತ್ತಾರೆಯೋ ಅದೂ ಸಹ ಭಕ್ತಿಮಾರ್ಗದ್ದಾಗಿದೆ, ಎಷ್ಟೊಂದು ಗೀತೆಗಳನ್ನು ರಚಿಸಿದ್ದಾರೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ನಾನು ಸಂಸ್ಕೃತದಲ್ಲಂತೂ ಓದಿಸುವುದಿಲ್ಲ, ಶ್ಲೋಕ ಇತ್ಯಾದಿಗಳ ಮಾತೂ ಇಲ್ಲ. ನಾನು ಬಂದು ನಿಮಗೆ ರಾಜಯೋಗವನ್ನು ಕಲಿಸುತ್ತೇನೆ. ರಾಜಯೋಗದಿಂದ ನೀವು ಪಾವನರಾಗಿ ಪಾವನ ಪ್ರಪಂಚದ ಮಾಲೀಕರಾಗಿ ಬಿಡುತ್ತೀರಿ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಎಂದೂ ಯಾವುದೇ ದೇಹಧಾರಿಯನ್ನು ನೆನಪು ಮಾಡಬಾರದು. ನನ್ನವರು ಒಬ್ಬ ಶಿವ ತಂದೆಯ ವಿನಃ ಮತ್ತ್ಯಾರೂ ಇಲ್ಲ, ಈ ಪಾಠವನ್ನು ಪಕ್ಕಾ ಮಾಡಿಕೊಳ್ಳಬೇಕಾಗಿದೆ.

2. ತಂದೆಯ ಸಮಾನ ಆತ್ಮಿಕ ಮಾರ್ಗದರ್ಶಕರಾಗಿ ಎಲ್ಲರಿಗೆ ಮನೆಯ ಮಾರ್ಗವನ್ನು ತಿಳಿಸಬೇಕಾಗಿದೆ. ಅಂಧರಿಗೆ ಊರುಗೋಲಾಗಬೇಕಾಗಿದೆ.

ವರದಾನ:-

ಸಂಪೂರ್ಣ ಕರ್ಮಾತೀತರಾಗುವುದರಲ್ಲಿ ವ್ಯರ್ಥ ಸಂಕಲ್ಪಗಳ ಬಿರುಗಾಳಿಗಳೇ ವಿಘ್ನ ಹಾಕುತ್ತದೆ. ಈ ದೂರುಗಳನ್ನು ಸಮಾಪ್ತಿಗೊಳಿಸಲು ತಮ್ಮ ಮನಸ್ಸನ್ನು ಪ್ರತೀ ಸಮಯದಲ್ಲಿ ಬ್ಯುಸಿಯಾಗಿಡಿ, ಸಮಯವನ್ನು ನಿಗಧಿ ಪಡಿಸುವ ವಿಧಿಯನ್ನು ಕಲಿಯಿರಿ. ಇಡೀ ದಿನದಲ್ಲಿ ಮನಸ್ಸನ್ನು ಎಲ್ಲೆಲ್ಲಿ ಬ್ಯುಸಿಯಾಗಿಡಬೇಕು ಎಂಬುದರ ಯೋಜನೆ ಮಾಡಿಕೊಳ್ಳಿರಿ. ಪ್ರತಿನಿತ್ಯವೂ ತಮ್ಮ ಮನಸ್ಸನ್ನು 4 ಮಾತುಗಳಲ್ಲಿ ಬ್ಯುಸಿಯಾಗಿಡಿ – 1. ಮಿಲನ (ಆತ್ಮಿಕ ವಾರ್ತಾಲಾಪ), 2. ವರ್ಣನೆ (ಸೇವೆ), 3. ಮಗ್ನರಾಗುವುದು ಹಾಗೂ 4. ಲಗನ್ನಲ್ಲಿ ಇರುವುದು. ಇದರಿಂದ ಸಮಯದಲ್ಲಿ ಸಫಲರಾಗುತ್ತೀರಿ ಹಾಗೂ ವ್ಯರ್ಥದ ದೂರುಗಳು ಸಮಾಪ್ತಿ ಆಗುತ್ತವೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top