03 December 2021 KANNADA Murli Today | Brahma Kumaris

Read and Listen today’s Gyan Murli in Kannada

2 December 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಬೆಳಗ್ಗೆ-ಬೆಳಗ್ಗೆ ಎದ್ದು ಶಿವ ತಂದೆಗೆ ಅವಶ್ಯವಾಗಿ ಗುಡ್ಮಾರ್ನಿಂಗ್ ಹೇಳಬೇಕು, ಏಳುತ್ತಿದ್ದಂತೆಯೇ ಶಿವ ತಂದೆಯ ನೆನಪು ಬರಲಿ, ಯಾವುದೇ ದೇಹಧಾರಿಯ ನೆನಪಲ್ಲ”

ಪ್ರಶ್ನೆ:: -

ಯಾವ ಕಾಂಟ್ರಾಕ್ಟ್ನ್ನು ಒಬ್ಬ ತಂದೆಯ ವಿನಃ ಮತ್ತ್ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ?

ಉತ್ತರ:-

ಪಾವನ ಪ್ರಪಂಚವನ್ನಾಗಿ ಮಾಡುವ ಕಾಂಟ್ರಾಕ್ಟ್ ಒಬ್ಬ ತಂದೆಯದಾಗಿದೆ. ಈ ಕಾಂಟ್ರಾಕ್ಟ್ ನ್ನು ಮತ್ತ್ಯಾರೂ ತೆಗೆದುಕೊಳ್ಳಲು ಸಾಧ್ಯವಿಲ್ಲ. ಸನ್ಯಾಸಿಗಳು ಪಾವನರಿದ್ದು ಈ ಪ್ರಪಂಚವನ್ನು ಸ್ವಲ್ಪ ತಣಿಸುತ್ತಾರೆ. ಆದರೆ ಪಾವನ ಪ್ರಪಂಚವನ್ನಾಗಿ ಮಾಡುವ ಕಾಂಟ್ರಾಕ್ಟ್ ತೆಗೆದುಕೊಳ್ಳುವುದಿಲ್ಲ. ತಂದೆಯು ಮಕ್ಕಳಿಗೆ ಪಾವನರಾಗುವ ಯುಕ್ತಿಯನ್ನು ತಿಳಿಸುತ್ತಾರೆ – ಮಕ್ಕಳೇ, ಉದ್ಯೋಗ-ವ್ಯವಹಾರಗಳನ್ನು ಮಾಡುತ್ತಲೂ ಒಬ್ಬ ತಂದೆಯನ್ನು ನೆನಪು ಮಾಡಿ. ಒಬ್ಬ ತಂದೆಯೊಂದಿಗೆ ಬುದ್ಧಿಯೋಗವನ್ನಿಡಿ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಇಂದು ಬೆಳಗ್ಗೆ-ಬೆಳಗ್ಗೆ ಬಂದವರು ಯಾರು…..

ಓಂ ಶಾಂತಿ. ಆತ್ಮಿಕ ಮಕ್ಕಳ ಪ್ರತಿ ತಂದೆಯು ತಿಳಿಸುತ್ತಾರೆ – ಒಂದುವೇಳೆ ಶಿವ ಭಗವಾನುವಾಚ ಎಂದು ಹೇಳಿದರೂ ಸಹ ಇಂದು ಅನೇಕ ಮನುಷ್ಯರು ಶಿವ ಎಂದು ಹೆಸರನ್ನು ಇಟ್ಟುಕೊಂಡಿರುತ್ತಾರೆ ಆದ್ದರಿಂದ ಈ ರೀತಿ ಹೇಳಬೇಕಾಗುತ್ತದೆ – ಆತ್ಮಿಕ ತಂದೆಯು ಆತ್ಮಿಕ ಮಕ್ಕಳ ಪ್ರತಿ ಮೊಟ್ಟ ಮೊದಲು ನೆನಪು-ಪ್ರೀತಿಯನ್ನು ಕೊಡುತ್ತಿದ್ದಾರೆ. ಮುಂಜಾನೆ ಮೊದಲು ಗುಡ್ಮಾರ್ನಿಂಗ್ ಹೇಳಲಾಗುತ್ತದೆ. ನೀವೂ ಸಹ ಗುಡ್ಮಾರ್ನಿಂಗ್ ಹೇಳಿದಿರಿ. ಬೆಳಗ್ಗೆ-ಬೆಳಗ್ಗೆ ಬಂದು ಯಾರು ಬಂದು ಗುಡ್ಮಾರ್ನಿಂಗ್ ಹೇಳುತ್ತಾರೆ? ಮುಂಜಾನೆ ತಂದೆಯೇ ಬರುತ್ತಾರೆ. ಇದು ಬೇಹದ್ದಿನ ಬೆಳಗ್ಗೆ ಮತ್ತು ರಾತ್ರಿಯಾಗಿದೆ, ಇದನ್ನು ಯಾವುದೇ ಮನುಷ್ಯರೂ ತಿಳಿದುಕೊಂಡಿಲ್ಲ. ಮಕ್ಕಳಲ್ಲಿಯೂ ಸಹ ನಂಬರ್ವಾರ್ ಪುರುಷಾರ್ಥದನುಸಾರ ತಿಳಿದುಕೊಂಡಿದ್ದೀರಿ. ಭಲೆ ಮಕ್ಕಳಾಗಿರಬಹುದು ಆದರೆ ಮುಂಜಾನೆಯೆದ್ದು ತಂದೆಯನ್ನು ನೆನಪು ಮಾಡುವುದಿಲ್ಲ. ಮುಂಜಾನೆ ಎದ್ದು ಮೊಟ್ಟ ಮೊದಲು ಶಿವ ತಂದೆಯೊಂದಿಗೆ ಗುಡ್ಮಾರ್ನಿಂಗ್ ಹೇಳುವುದು ಅರ್ಥಾತ್ ನೆನಪು ಮಾಡುವುದರಿಂದ ಬಹಳ ಖುಷಿಯಿರುವುದು ಆದರೆ ಬಹಳ ಮಕ್ಕಳು ಬೆಳಗ್ಗೆ ಎದ್ದು ತಂದೆಯನ್ನು ನೆನಪು ಮಾಡುವುದೇ ಇಲ್ಲ. ಭಕ್ತಿಮಾರ್ಗದಲ್ಲಿಯೂ ಮನುಷ್ಯರು ಮುಂಜಾನೆಯೆದ್ದು ಭಕ್ತಿ ಮಾಡುತ್ತಾರೆ, ಪೂಜೆ ಮಾಡುತ್ತಾರೆ. ಮಂತ್ರವನ್ನು ಜಪಿಸುತ್ತಾರೆ. ಅವರು ಸಾಕಾರದ ಭಕ್ತಿ ಮಾಡುತ್ತಾರೆ. ಆಗ ಅವರಿಗೆ ಮೂರ್ತಿಯ ನೆನಪು ಬಂದು ಬಿಡುತ್ತದೆ. ಶಿವನ ಪೂಜಾರಿಯಾಗಿದ್ದರೆ ಅವರು ಶಿವನನ್ನು ದೊಡ್ಡ ಲಿಂಗದ ರೂಪದಲ್ಲಿ ಮಾಡುತ್ತಾರೆ. ಆ ಲಿಂಗವೇ ನೆನಪಿಗೆ ಬರುತ್ತದೆ. ಅದೂ ಸಹ ತಪ್ಪಾಗಿದೆ. ಈಗಂತೂ ನೀವು ಮಕ್ಕಳು ತಮ್ಮನ್ನು ಆತ್ಮ ನಿಶ್ಚಯ ಮಾಡಿಕೊಳ್ಳಬೇಕು ಮತ್ತು ಮುಂಜಾನೆಯೆದ್ದು ತಂದೆಯೊಂದಿಗೆ ಮಾತನಾಡಿರಿ – ಬಾಬಾ, ಗುಡ್ಮಾರ್ನಿಂಗ್. ಆದರೆ ಈ ಅಭ್ಯಾಸವು ಯಾರಿಗೂ ಇಲ್ಲವೆಂದು ತಂದೆಗೆ ಗೊತ್ತಿದೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ನಿಮ್ಮ ತಲೆಯ ಮೇಲೆ ಅರ್ಧಕಲ್ಪ ಹೊರೆಯಿದೆ, ಅದು ಇಳಿಯುವುದೇ ಇಲ್ಲ ಏಕೆಂದರೆ ನೆನಪು ಮಾಡುವುದಿಲ್ಲ. ಕೆಲಕೆಲವರಿಗೆ ಪಾಪವು ಇನ್ನಷ್ಟು ಹೆಚ್ಚಾಗುತ್ತಾ ಹೋಗುತ್ತದೆ. ಹೇಗೆ ಇಲಿಯೂ ಗಾಳಿ ಬಿಟ್ಟು ನಂತರ ಕಚ್ಚುತ್ತದೆಯೋ ಹಾಗೆಯೇ ಮಾಯೆಯೂ ಸಹ ಇಲಿಯಂತೆ ಕಚ್ಚುತ್ತಾ ಇರುತ್ತದೆ. ತಲೆಯ ಕೂದಲನ್ನು ಕತ್ತರಿಸಿ ಬಿಡುತ್ತದೆ, ಅದು ಅರ್ಥವಾಗುವುದೇ ಇಲ್ಲ. ಭಲೆ ಯಾರಾದರೂ ತಮ್ಮನ್ನು ಜ್ಞಾನಿಗಳೆಂದು ತಿಳಿದುಕೊಳ್ಳಬಹುದು ಆದರೆ ನೆನಪಿನಲ್ಲಿ ಬಹಳ ಕಚ್ಚಾ ಇದ್ದಾರೆ ಎಂದು ತಂದೆಯು ಚೆನ್ನಾಗಿ ತಿಳಿದುಕೊಂಡಿದ್ದಾರೆ. ತಮ್ಮ ಹೃದಯದಲ್ಲಿ ಕೇಳಿಕೊಳ್ಳಿ – ನಾನು ಮುಂಜಾನೆಯೆದ್ದು ತಂದೆಯನ್ನು ನೆನಪು ಮಾಡುತ್ತೇನೆಯೇ? ಬೇಹದ್ದಿನ ತಂದೆಯು ನಿಮಗೆ ಬೇಹದ್ದಿನ ಮುಂಜಾನೆಯಲ್ಲಿ ಬಂದು ಸಿಕ್ಕಿದ್ದಾರೆ. ಸನ್ಯಾಸಿಗಳೂ ಸಹ ಎದ್ದು ಬ್ರಹ್ಮ್ತತ್ವವನ್ನು ನೆನಪು ಮಾಡುತ್ತಾರೆ. ಮನುಷ್ಯರಂತೂ ಏಳುತ್ತಿದ್ದಂತೆಯೇ ಮಿತ್ರ ಸಂಬಂಧಿ, ತಮ್ಮ ಜೊತೆಗಾರ ಮೊದಲಾದವರನ್ನು ನೆನಪು ಮಾಡುತ್ತಾರೆ. ಭಕ್ತರಾಗಿದ್ದಾರೆ ತಮ್ಮ ದೇವತೆಗಳನ್ನು ನೆನಪು ಮಾಡುತ್ತಾರೆ. ಪಾಪಾತ್ಮರು ಪಾಪಾತ್ಮರಿಗೇ ಗುಡ್ಮಾರ್ನಿಂಗ್ ಹೇಳುತ್ತಾರೆ ಅಥವಾ ನೆನಪು ಮಾಡುತ್ತಾರೆ. ನೆನಪು ಮುಂಜಾನೆ ಮಾಡಲಾಗುತ್ತದೆ, ಭಕ್ತಿಯೂ ಸಹ ಮುಂಜಾನೆಯ ಸಮಯದಲ್ಲಿಯೇ ಮಾಡುತ್ತಾರೆ ಆದರೆ ಭಗವಂತನ ಭಕ್ತಿಯನ್ನು ಯಾರೂ ಮಾಡುವುದಿಲ್ಲ ಏಕೆಂದರೆ ಭಗವಂತನನ್ನು ಅರಿತುಕೊಂಡಿಲ್ಲ. ಭಲೆ ಭಕ್ತಿಯ ಫಲವನ್ನು ಕೊಡುವವರು ಭಗವಂತನೇ ಆಗಿದ್ದಾರೆಂದು ಹೇಳುತ್ತಾರೆ, ಓ ಗಾಡ್ಫಾದರ್ ಎಂದೂ ಹೇಳುತ್ತಾರೆ. ಇದನ್ನು ಆತ್ಮವೇ ಹೇಳುತ್ತದೆ ಆದರೆ ಪರಮಾತ್ಮನನ್ನು ಯಾರೂ ಯಥಾರ್ಥವಾಗಿ ತಿಳಿದುಕೊಂಡಿಲ್ಲ. ಯಾವಾಗ ಸ್ವಯಂ ಭಗವಂತನೇ ಬಂದು ತಮ್ಮ ಪರಿಚಯ ಕೊಡುವರೋ ಆಗಲೇ ಇದನ್ನು ತಿಳಿದುಕೊಳ್ಳಲು ಸಾಧ್ಯ. ಇಲ್ಲವೆಂದರೆ ಎಲ್ಲರೂ ನೇತಿ-ನೇತಿ ಅರ್ಥಾತ್ ಗೊತ್ತಿಲ್ಲ ಗೊತ್ತಿಲ್ಲ ಎಂದೇ ಹೇಳುತ್ತಾರೆ ಆದ್ದರಿಂದ ಪರಮಾತ್ಮನು ಈ ಸಮಯದಲ್ಲಿಯೇ ಬಂದು ನಾನು ಯಾರು ಎಂಬುದನ್ನು ತಿಳಿಸುತ್ತಾರೆ ಆದರೆ ಬಹಳ ಮಕ್ಕಳಲ್ಲಿಯೂ ಅರ್ಥಾತ್ ದೊಡ್ಡ-ದೊಡ್ಡ ಮಹಾರಥಿಗಳೂ ಸಹ ತಂದೆಯನ್ನು ಪೂರ್ಣ ಅರಿತುಕೊಂಡಿಲ್ಲ. ಪ್ರೀತಿಯಿಂದ ತಂದೆಯನ್ನು ನೆನಪು ಮಾಡುವುದಿಲ್ಲ. ಮುಂಜಾನೆ ಎದ್ದು ಪ್ರೀತಿಯಿಂದ ಗುಡ್ಮಾರ್ನಿಂಗ್ ಹೇಳುವುದು, ಜ್ಞಾನದ ಚಿಂತನೆಯಲ್ಲಿ ಇರುವುದನ್ನೂ ಮಾಡುವುದಿಲ್ಲ. ನೆನಪು ಮಾಡಿದಾಗಲೇ ಖುಷಿಯ ನಶೆಯಿರುವುದು ಆದರೆ ಆ ನಶೆಯೇರಲು ಮಾಯೆಯು ಬಿಡುವುದಿಲ್ಲ. ಒಂದುವೇಳೆ ಎಲ್ಲಿಯಾದರೂ ತಂದೆಗೆ ಅಗೌರವ ಮಾಡಿದರೆ ಮಾಯೆಯು ಒಮ್ಮೆಲೇ ಬುದ್ಧಿಯೋಗವನ್ನು ತುಂಡರಿಸಿ ಬಿಡುತ್ತದೆ ನಂತರ ವ್ಯರ್ಥ ಮಾತುಗಳಲ್ಲಿಯೇ ಬುದ್ಧಿಯು ತೊಡಗಿರುತ್ತದೆ. ಸ್ವರ್ಗದ ಮಾಲೀಕರಾಗುವುದು ಚಿಕ್ಕಮ್ಮನ ಮನೆಯಂತಲ್ಲ. ಪ್ರಜೆಗಳಾಗುವುದಂತೂ ಸಹಜವಾಗಿದೆ, ಮುಂದೆ ಹೋದಂತೆ ನೋಡುತ್ತೀರಿ, 30-40 ವರ್ಷದಿಂದ ಇರುವವರೂ ಸಹ ಜ್ಞಾನವನ್ನು ಬಿಟ್ಟು ಹೋಗುತ್ತಾರೆ. ಮಾಯೆಯು ಹಾರಿಸಿ ಬಿಡುತ್ತದೆ. ರಾಜ್ಯ ಪದವಿಯನ್ನು ಪಡೆಯಲು ಸಾಧ್ಯವಿಲ್ಲ. ಮೊದಲೇ ಸತ್ತು ಹೋಗುತ್ತಾರೆ (ಜ್ಞಾನ ಬಿಟ್ಟು ಹೋಗುತ್ತಾರೆ) ಅಂದಮೇಲೆ ರಾಜ್ಯಭಾಗ್ಯವು ಹೇಗೆ ಸಿಗುವುದು! ತಂದೆಯು ಈ ರಹಸ್ಯವನ್ನು ತೆರೆಯುವುದಿಲ್ಲ. ಮಾಯೆಯೂ ಸಹ ನೋಡುತ್ತದೆ – ನಾನು ಅರ್ಧಕಲ್ಪ ರಾಜ್ಯ ಮಾಡುವವನಾಗಿದ್ದೇನೆ, ಇವರು ನನ್ನಮೇಲೆ ಜಯ ಗಳಿಸುತ್ತಾರೆ ಎಂದು. ಮತ್ತೆ ಶಿವ ತಂದೆಯನ್ನು ಒಮ್ಮೆಲೆ ಮರೆತು ಹೋಗುತ್ತಾರೆ. ಕೆಲವೊಂದೆಡೆ ಇವರ (ಬ್ರಹ್ಮಾ ತಂದೆಯ) ನಾಮ-ರೂಪದಲ್ಲಿ ಸಿಲುಕುತ್ತಾರೆ. ಶಿವ ತಂದೆಯನ್ನು ನೆನಪು ಮಾಡುವುದಿಲ್ಲ, ಯಾರಲ್ಲಿ ಕ್ರೋಧ, ಲೋಭ, ಮೋಹದ ಭೂತವಿರುವುದೋ ಅವರೇನು ತಂದೆಯನ್ನು ನೆನಪು ಮಾಡುವರು! ಇಷ್ಟು ನಾಮ-ರೂಪದಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. ಅದರ ಮಾತೇ ಕೇಳಬೇಡಿ. ದೇಹಾಭಿಮಾನದಲ್ಲಿ ಸಿಲುಕುತ್ತಾರೆ, ಶಿವ ತಂದೆಯು ತಿಳಿಸುತ್ತಾರೆ – ಗೃಹಸ್ಥದಲ್ಲಿದ್ದು ಪ್ರಿಯತಮನಾದ ನನ್ನನ್ನು ನೆನಪು ಮಾಡುತ್ತಾ ಇರಿ ಆಗ ಕರ್ಮಾತೀತ ಸ್ಥಿತಿಯಾಗುವುದು. ಮೂಲಮಾತು ನೆನಪು ಮಾಡುವುದಾಗಿದೆ, ಇದರಲ್ಲಿಯೇ ಪರಿಶ್ರಮವಿದೆ. ನೆನಪು ಮಾಡದೆ ಸತೋಪ್ರಧಾನರಾಗಲು ಸಾಧ್ಯವಿಲ್ಲ, ಶ್ರೇಷ್ಠ ಪದವಿಯನ್ನು ಪಡೆಯುವುದಕ್ಕೂ ಸಾಧ್ಯವಿಲ್ಲ, ಬುದ್ಧಿಯೋಗ ಬೇರೆ ಕಡೆ ಅಲೆಯುತ್ತಾ ಇರುವುದು. ಕೆಲವು ಮಕ್ಕಳಂತೂ ಬಹಳ ಪ್ರೀತಿಯಿಂದ, ಅಂತರಾಳದಿಂದ ತಂದೆಯನ್ನು ನೆನಪು ಮಾಡುತ್ತಾರೆ. ತಂದೆಗೆ ಗುಡ್ಮಾರ್ನಿಂಗ್ ಹೇಳಿದ ನಂತರ, ಬಾಬಾ ನಾವು ನಿಮ್ಮ ನೆನಪಿನಲ್ಲಿರುತ್ತೇವೆ ಏಕೆಂದರೆ ತಲೆಯ ಮೇಲೆ ಬಹಳಷ್ಟು ಪಾಪಗಳ ಹೊರೆಯಿದೆ ಎಂದು ಹೇಳಬೇಕು. ಒಂದುವೇಳೆ ತಂದೆಯ ನೆನಪಿನಲ್ಲಿ ಇಲ್ಲದಿದ್ದರೆ ಪಾಪಗಳ ಹೊರೆಯು ಹೇಗೆ ಕಳೆಯುವುದು! ಅರ್ಧಕಲ್ಪದ ದೇಹಾಭಿಮಾನವಿರುವ ಕಾರಣ ಅದು ಹೋಗುವುದೇ ಇಲ್ಲ. ಅಲ್ಲಿ ದೇವತೆಗಳು ಆತ್ಮಾಭಿಮಾನಿಯಾಗಿರುತ್ತಾರೆ. ಭಲೆ ಪರಮಾತ್ಮನನ್ನು ತಿಳಿದುಕೊಂಡಿರುವುದಿಲ್ಲ ಆದರೆ ಇದಂತೂ ತಿಳಿದಿರುತ್ತದೆ – ನಾನಾತ್ಮನು ಒಂದು ಶರೀರವನ್ನು ಬಿಟ್ಟು ಇನ್ನೊಂದನ್ನು ತೆಗೆದುಕೊಳ್ಳುತ್ತೇನೆ. ಒಂದುವೇಳೆ ರಚಯಿತನನ್ನು ಅರಿತುಕೊಂಡರೆ ರಚನೆ, ತಂದೆಯ ಆಸ್ತಿಯನ್ನೂ ಅರಿತುಕೊಳ್ಳುವರು. ಅಲ್ಲಿ ಈ ಜ್ಞಾನವಿರುವುದೇ ಇಲ್ಲ. ತಂದೆಯು ತಿಳಿಸುತ್ತಾರೆ – ನಾನು ನಿಮಗೆ ಈ ಜ್ಞಾನವನ್ನು ತಿಳಿಸುತ್ತೇನೆ, ನಂತರ ಇದು ಪ್ರಾಯಲೋಪವಾಗಿ ಬಿಡುತ್ತದೆ ಮತ್ತೆ ಈ ಜ್ಞಾನವು ಪರಂಪರೆಯಾಗಿ ನಡೆಯುವುದಿಲ್ಲ. ಮನುಷ್ಯರು ಆತ್ಮನನ್ನಾಗಲಿ, ಪರಮಾತ್ಮನನ್ನಾಗಲಿ ತಿಳಿದುಕೊಂಡಿಲ್ಲ. ಎಲ್ಲಾ ಆತ್ಮರಿಗೆ ತಮ್ಮ-ತಮ್ಮ ಪಾತ್ರವು ಹೇಗೆ ಸಿಕ್ಕಿದೆಯೆಂಬುದನ್ನು ನೀವೀಗ ತಿಳಿದುಕೊಂಡಿದ್ದೀರಿ. ನೀವು ಬಹಳ ಒಳ್ಳೆಯ ಪಾತ್ರಧಾರಿಗಳಾಗಿದ್ದೀರಿ. ಈ ಸಮಯದಲ್ಲಿ ನೀವು ವಿಶ್ವವನ್ನು ತಮ್ಮ ರಾಜ್ಯವನ್ನಾಗಿ ಮಾಡಿಕೊಳ್ಳುತ್ತೀರಿ. ನಿಮ್ಮದು ಹೀರೋ ಮತ್ತು ಹೀರೋಯಿನ್ ಪಾತ್ರವಾಗಿದೆ, ಮೂಲ ಮಾತು ತಂದೆಯನ್ನು ನೆನಪು ಮಾಡಬೇಕಾಗಿದೆ. ತಂದೆಗೆ ಗೊತ್ತಿದೆ – ಪ್ರದರ್ಶನಿಯಲ್ಲಿ ಬಹಳ ಮಕ್ಕಳು ಚೆನ್ನಾಗಿ ಸರ್ವೀಸ್ ಮಾಡುತ್ತಾರೆ ಆದರೆ ನೆನಪಿನಲ್ಲಿ ಬಹಳ ನಿರ್ಬಲರಾಗಿದ್ದಾರೆ. ಮುಂಜಾನೆಯೆದ್ದು ತಂದೆಯೊಂದಿಗೆ ಹೇಗೆ ಗುಡ್ಮಾರ್ನಿಂಗ್ ಹೇಳಬೇಕು ಎಂಬ ಬುದ್ಧಿಯೂ ಇಲ್ಲ. ಭಲೆ ವಿಷಯದ ಮೇಲೆ ಬಹಳ ಚೆನ್ನಾಗಿ ಮಂಥನ ಮಾಡುತ್ತಾರೆ. ಅದು ಸಾಮಾನ್ಯ ಮಾತಾಗಿದೆ. ಪ್ರತಿನಿತ್ಯ ಹೊಸ-ಹೊಸ ಭಾಷಣದ ವಿಷಯಗಳನ್ನು ತೆಗೆದುಕೊಂಡು ತಿಳಿಸಬಹುದು ಆದರೆ ಮುಖ್ಯ ಮಾತು ತಂದೆಯನ್ನು ಪ್ರೀತಿಯಿಂದ ನೆನಪು ಮಾಡಿದಾಗಲೇ ಪಾಪವು ಕಳೆಯುವುದು.

ತಂದೆಗೆ ಗೊತ್ತಿದೆ – ಮಕ್ಕಳಿಗೆ ಇನ್ನೂ ಆ ಸ್ಥಿತಿಯು ಬಂದಿಲ್ಲ, ತಂದೆಯು ಹೆಸರನ್ನು ಹೇಳುವುದಿಲ್ಲ. ಒಂದುವೇಳೆ ತಂದೆಯು ಹೆಸರನ್ನು ತಿಳಿಸಿ ಬಿಟ್ಟರೆ ಈಗ ಪೈಸೆಯಷ್ಟು ಯಾವ ಸ್ಥಿತಿಯಿದೆಯೋ ತಿಳಿದ ನಂತರ ಅದೂ ಸಹ ಕಡಿಮೆಯಾಗುವುದು. ಈ ಜ್ಞಾನದಲ್ಲಿ ತಿಳುವಳಿಕೆ ಇರಬೇಕಾಗಿದೆ. ಯಾರಾದರೂ ನೋಡಿ ನೀವು ಸಪ್ಪೆಯಾಗಿ ಕಾಣಿಸುತ್ತೀರಿ, ಆರೋಗ್ಯ ಸರಿಯಿಲ್ಲವೆ ಎಂದು ಹೇಳಿದ್ದನ್ನು ಕೇಳಿಸಿಕೊಳ್ಳುತ್ತಿದ್ದಂತೆಯೇ ಜ್ವರ ಬಂದು ಬಿಡಬಾರದು. ಇಷ್ಟು ಕಚ್ಚಾ ಆಗಬಾರದು, ಧೈರ್ಯವಿರಬೇಕು. ಸೇವಾಧಾರಿ ಮಕ್ಕಳು ಎಂದೂ ಬಿಟ್ಟು ಹೋಗುವುದಿಲ್ಲ. ಅವರು ತಮ್ಮ ನಶೆಯಲ್ಲಿರುತ್ತಾರೆ. ಉದ್ಯೋಗ-ವ್ಯವಹಾರಗಳನ್ನು ಮಾಡುತ್ತಾ ತಂದೆಯ ನೆನಪು ಮಾಡಬೇಕಾಗಿದೆ, ತಂದೆಗೆ ಗುಡ್ಮಾರ್ನಿಂಗ್ ಹೇಳುತ್ತಿರಬೇಕು – ಇದು ಉನ್ನತ ಗುರಿಯಾಗಿದೆ. ರಾಜ್ಯ ಪದವಿಯನ್ನು ಪಡೆಯಬೇಕೆಂದರೆ ಪರಿಶ್ರಮ ಪಡಬೇಕಾಗಿದೆ. ಯಾರು ಕಲ್ಪದ ಹಿಂದೆ ಆಗಿದ್ದರೋ ಅವರಿಗೆ ಮುಂದೆ ಹೋದಂತೆ ಅರ್ಥವಾಗುತ್ತಾ ಹೋಗುವುದು. ಯಾರನ್ನೂ ಬಚ್ಚಿಡಲು ಸಾಧ್ಯವಿಲ್ಲ. ಶಾಲೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ತಿಳಿದುಕೊಂಡಿರುತ್ತಾರೆ ಮತ್ತು ರಿಜಿಸ್ಟರ್ ಇಟ್ಟುಕೊಂಡಿರುತ್ತಾರೆ, ಅದರಿಂದಲೂ ಅರ್ಥವಾಗುತ್ತದೆ. ಅದರಲ್ಲಿ ಮುಖ್ಯವಾಗಿ ಭಾಷೆಯ ಸಬ್ಜೆಕ್ಟ್ ಇರುತ್ತದೆ, ಇಲ್ಲಿ ನೆನಪಿನ ಸಬ್ಜೆಕ್ಟ್ ಮುಖ್ಯವಾಗಿದೆ. ಜ್ಞಾನವಂತೂ ಸಹಜವಾಗಿದೆ, ಇದನ್ನು ಮಕ್ಕಳೂ ತಿಳಿಸಬಲ್ಲರು. ಬಾಲ್ಯದಲ್ಲಿ ಧಾರಣೆ ಮಾಡಿಕೊಳ್ಳಲು ಬುದ್ಧಿಯು ತೀಕ್ಷ್ಣವಾಗಿರುತ್ತದೆ, ವೃದ್ಧರು ಇಷ್ಟೊಂದು ತಿಳಿಸಲು ಸಾಧ್ಯವಿಲ್ಲ. ಇಲ್ಲಿಯೂ ಸಹ ತಂದೆಯು ಕುಮಾರಿಯರಿಗೇ ಹೆಚ್ಚು ಮಾನ್ಯತೆ ಕೊಡುತ್ತಾರೆ, ಕೇವಲ ನಾಮ-ರೂಪದಲ್ಲಿ ಸಿಲುಕಿ ಎಲ್ಲಿಯೂ ತಲೆ ಕೆಳಕಾಗಬಾರದು. ಈ ಸಮಯದಲ್ಲಿ ಎಲ್ಲಾ ಮನುಷ್ಯರು ಗೂಬೆಯಂತೆ ತಲೆ ಕೆಳಕಾಗಿ ಬಿಟ್ಟಿದ್ದಾರೆ ಮತ್ತೆ ಅವರನ್ನು ಸರಿ ಪಡಿಸುವುದರಿಂದ ಅಲ್ಲಾನ ಮಕ್ಕಳಾಗಿ ಬಿಡುತ್ತಾರೆ. ಪರಮಾತ್ಮನನ್ನು ಸರ್ವವ್ಯಾಪಿ ಎಂದು ಹೇಳಿರುವುದರಿಂದಲೇ ಎಲ್ಲಾ ಮನುಷ್ಯರು ಪರಮಾತ್ಮನಿಂದ ವಿಮುಖರಾಗಿ ಬಿಟ್ಟಿದ್ದಾರೆ. ಸನ್ಯಾಸಿಗಳು ತಮ್ಮ ಪೂಜೆಯನ್ನೂ ಮಾಡಿಸಿಕೊಳ್ಳುತ್ತಾರೆ, ವಾಸ್ತವದಲ್ಲಿ ನೀವು ನಮಗೇಕೆ ಹೂಗಳನ್ನು ಹಾಕುತ್ತೀರಿ ಎಂದು ಹೇಳಬೇಕಲ್ಲವೆ ಆದರೆ ಹೇಳುವುದಿಲ್ಲ. ಅವರನ್ನು ಎಲ್ಲರೂ ತಮ್ಮ ಗುರುಗಳನ್ನಾಗಿ ಮಾಡಿಕೊಳ್ಳುತ್ತಾರೆ. ಅವರು ಸನ್ಯಾಸಿಗಳು ಇವರು ಗೃಹಸ್ಥಿಗಳು ಅಂದಮೇಲೆ ಅವರ ಅನುಯಾಯಿಗಳಾಗಲು ಹೇಗೆ ಸಾಧ್ಯ! ಯಾವಾಗ ಸನ್ಯಾಸಿಗಳಂತೆ ಇವರೂ ಸಹ ಸನ್ಯಾಸಿಗಳಾದಾಗಲೇ ಅನುಯಾಯಿಗಳೆಂದು ಹೇಳಬಹುದು. ಆದರೆ ನೀವು ತಮ್ಮನ್ನು ಅನುಯಾಯಿಗಳೆಂದು ಹೇಳಿಕೊಳ್ಳಬೇಡಿ ಎಂದು ಯಾರೂ ಸಹ ತಿಳಿಸುವುದಕ್ಕೂ ಸಾಧ್ಯವಿಲ. ನೀವು ಅನುಯಾಯಿಗಳಾಗಿದ್ದೀರಿ ಎಂದು ತಂದೆಯು ಯಾರಿಗೂ ಹೇಳಲು ಸಾಧ್ಯವಿಲ್ಲ. ಯಾವಾಗ ಪಾವನರಾಗುವ ಪ್ರತಿಜ್ಞೆ ಮಾಡುವರೋ ಆಗಲೇ ಅನುಯಾಯಿಗಳೆಂದು ಹೇಳಿಕೊಳ್ಳಬಹುದು. ಪ್ರತಿಜ್ಞೆ ಮಾಡಿದಾಗ ಸ್ವಯಂ ಬರೆದು ಕಳುಹಿಸುತ್ತಾರೆ ಆದರೆ ಯಾವಾಗ ಬಿದ್ದು ಮುಖ ಕಪ್ಪು ಮುಖ ಮಾಡಿಕೊಳ್ಳುತ್ತಾರೆಯೋ ಆಗ ಬರೆಯುವುದಿಲ್ಲ ಏಕೆಂದರೆ ಸಂಕೋಚವಾಗುತ್ತದೆ.

ಇದು ಅತಿ ದೊಡ್ಡ ಪೆಟ್ಟಾಗಿದೆ, ನಂತರ ತಂದೆಯೊಂದಿಗೆ ಬುದ್ಧಿಯೋಗವನ್ನು ಇಡಲು ಸಾಧ್ಯವಿಲ್ಲ. ಪತಿತರನ್ನು ನಾನು ತಿರಸ್ಕರಿಸುತ್ತೇನೆ, ವಿಷ ಕುಡಿಯುವವರು ಬಹಳ ಕೆಟ್ಟವರಾಗಿದ್ದಾರೆ. ಪವಿತ್ರರಾಗುವುದು ಬಹಳ ಒಳ್ಳೆಯದಲ್ಲವೆ. ನಾನು ಪವಿತ್ರ ಪ್ರಪಂಚವನ್ನಾಗಿ ಮಾಡಿಯೇ ತೋರಿಸುತ್ತೇನೆ, ಬಂದು ಪವಿತ್ರರನ್ನಾಗಿ ಮಾಡುವ ಕಾಂಟ್ರಾಕ್ಟ್ನ್ನು ತೆಗೆದುಕೊಳ್ಳುತ್ತೇನೆ. ಕಲ್ಪ-ಕಲ್ಪವೂ ಕಾಂಟ್ರಾಕ್ಟರ್ ಆದ ನನ್ನನ್ನೇ ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಮತ್ತ್ಯಾರೂ ನನ್ನಂತಹ ಕಾಂಟ್ರಾಕ್ಟರ್ ಇರುವುದಿಲ್ಲ, ನನ್ನೊಬ್ಬನಿಗೇ ಕಾಂಟ್ರಾಕ್ಟ್ ಸಿಕ್ಕಿದೆ, ನಾನೇ ಪಾವನ ಪ್ರಪಂಚವನ್ನಾಗಿ ಮಾಡುವೆನು. ಕಲ್ಪ-ಕಲ್ಪವೂ ಜ್ಞಾನವಂತೂ ಈ ಕಾಂಟ್ರಾಕ್ಟನ್ನು ಪೂರ್ಣಗೊಳಿಸುತ್ತೇನೆ. ಸನ್ಯಾಸಿಗಳು ಪವಿತ್ರರಾಗಿದ್ದು ಭಾರತವನ್ನು ತಣಿಸುವ ಕಾಂಟ್ರಾಕ್ಟ್ ಸಿಕ್ಕಿದೆ ಏಕೆಂದರೆ ಭಾರತವೇ ಪವಿತ್ರವಾಗಿತ್ತು, ಅದನ್ನು ಸ್ವರ್ಗವೆಂದು ಹೇಳಲಾಗುತ್ತದೆ. ಅಲ್ಲಿನ ದೇವತೆಗಳು ಸರ್ವಗುಣ ಸಂಪನ್ನರು, ಸಂಪೂರ್ಣ ನಿರ್ವಿಕಾರಿಗಳಾಗಿದ್ದರು. ಅವರ ಮಹಿಮೆಯನ್ನು ಹಾಡುತ್ತಾರೆ, ಈ ಗಾಯನವು ಅನ್ಯ ದೇಶಗಳಲ್ಲಿ ಇಲ್ಲ, ಅಲ್ಲಿ ಚಿತ್ರಗಳೂ ಇಲ್ಲ, ಇವರು ಸ್ವರ್ಗದ ಮಾಲೀಕರಾಗಿದ್ದರು, ಲಕ್ಷ್ಮೀ-ನಾರಾಯಣರನ್ನು ಭಗವಾನ್-ಭಗವತಿಯೆಂದು ಹೇಳುತ್ತಾರೆ. ಬಹಳ ಪ್ರೀತಿಯಿಂದ ಹಳೆಯ ಚಿತ್ರಗಳನ್ನು ಖರೀದಿಸುತ್ತಾರೆ, ದೇವತೆಯಾದ ಕೃಷ್ಣನ ಚಿತ್ರವನ್ನು ತರಿಸುತ್ತಾರೆ. ಎಲ್ಲರಿಗಿಂತ ಹೆಚ್ಚಿನದಾಗಿ ಕೃಷ್ಣನನ್ನು ಪ್ರೀತಿ ಮಾಡುತ್ತಾರೆ.

ನೀವು ಮಕ್ಕಳು ಇದೇ ಚಿಂತೆಯನ್ನು ಇಟ್ಟುಕೊಳ್ಳಬೇಕಾಗಿದೆ – ನಾವು ಸತೋಪ್ರಧಾನರಾಗಬೇಕಾಗಿದೆ. ಮಾಯೆಯು ಬಹಳ ಅಲೆದಾಡಿಸುತ್ತದೆ. ನಾಮ-ರೂಪದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ, ಶಿವ ತಂದೆಯನ್ನು ನೆನಪೇ ಮಾಡುವುದಿಲ್ಲ. ತಂದೆಯು ಮತ್ತೆ-ಮತ್ತೆ ತಿಳಿಸುತ್ತಾರೆ – ನಮಗೆ ಶಿವ ತಂದೆಯು ತಿಳಿಸುತ್ತಿದ್ದಾರೆ, ಈ ಬ್ರಹ್ಮಾರವರು ಏನೂ ಹೇಳುವುದಿಲ್ಲವೆಂದು ಸದಾ ತಿಳಿದುಕೊಳ್ಳಿ. ಆದರೂ ಸಹ ಶಿವ ತಂದೆಯನ್ನು ಮರೆತು ನಾಮ-ರೂಪವನ್ನು ನೆನಪು ಮಾಡುತ್ತಾ ಇರುತ್ತಾರೆಯೋ ಅಂತಹವರು ಯಾವ ಪದವಿಯನ್ನು ಪಡೆಯುವರು! ಮೊದಲು ಶ್ರೀಮತದಂತೆ ನಡೆಯಬೇಕಾಗಿದೆ, ಶಿವ ತಂದೆಯು ತಿಳಿಸುತ್ತಾರೆ – ಮಕ್ಕಳೇ, ಭೂತಗಳನ್ನು ಓಡಿಸಿರಿ. ದೇಹಾಭಿಮಾನವನ್ನು ಓಡಿಸಿರಿ. ನಾವಾತ್ಮರಾಗಿದ್ದೇವೆ ಮತ್ತು ಬಹಳ ಮಧುರರಾಗಬೇಕಾಗಿದೆ. ತಂದೆಯು ತಿಳಿಸುತ್ತಾರೆ – ದೇಹ ಸಹಿತ ದೇಹದ ಎಲ್ಲಾ ಸಂಬಂಧಗಳನ್ನು ಮರೆಯುತ್ತಾ ಹೋಗಿ, ನನ್ನನ್ನು ನೆನಪು ಮಾಡಿ. ಕೈ ಕೆಲಸ ಮಾಡುತ್ತಿರಲಿ, ಬುದ್ಧಿಯು ನನ್ನನ್ನು ನೆನಪು ಮಾಡಲಿ. ನಾನು ಬಹಳ ಹಳೆಯ ಪ್ರಿಯತಮನಾಗಿದ್ದೇನೆ, ಈ ರೀತಿ ಮತ್ತ್ಯಾರಿಗೂ ತಿಳಿಸಲು ಬರುವುದಿಲ್ಲ. ತಂದೆಯೇ ಈ ಸಮಯದಲ್ಲಿ ಬಂದು ನಿಮ್ಮನ್ನು ಆತ್ಮಿಕ ಪ್ರಿಯತಮೆಯರನ್ನಾಗಿ ಮಾಡಿಕೊಳ್ಳುತ್ತಾರೆ. ಈಗ ನಮ್ಮ ಪ್ರಿಯತಮನಾದ ಶಿವ ತಂದೆಯು ಬಂದಿದ್ದಾರೆಂದು ನೀವಾತ್ಮರಿಗೆ ತಿಳಿದಿದೆ. ಅವರಿಂದ ಸ್ವರ್ಗದ ಆಸ್ತಿಯನ್ನು ಪಡೆಯಬೇಕಾಗಿದೆ. ಇಂತಹ ಶಿವ ತಂದೆಗೆ ಬೆಳಗ್ಗೆ-ಬೆಳಗ್ಗೆ ಎದ್ದು ಗುಡ್ಮಾರ್ನಿಂಗ್ ಹೇಳಬೇಕು, ನೆನಪು ಮಾಡಬೇಕು. ಎಷ್ಟು ನೆನಪು ಮಾಡುತ್ತೀರಿ ಅಷ್ಟು ಪಾಪಗಳೂ ಸಹ ಕಳೆಯುವುದು, ದೇಹಾಭಿಮಾನವು ಕಳೆಯುವುದು. ಇಂತಹ ಅಭ್ಯಾಸ ಮಾಡುತ್ತಾ-ಮಾಡುತ್ತಾ ಸ್ಥಿತಿಯು ಪಕ್ಕಾ ಆಗಿ ಬಿಡುತ್ತದೆ. ನೆನಪಿನಲ್ಲಿ ಕುಳಿತುಕೊಂಡಿರುತ್ತೀರಿ, ಗ್ರಾಹಕರು ಬಂದರೂ ಸಹ ಅವರಕಡೆ ಗಮನ ಹೋಗುವುದಿಲ್ಲ. ಗ್ರಾಹಕರಿಗೆ ಬೇಕಾದುದನ್ನು ಕೊಟ್ಟ ನಂತರ ಮತ್ತೆ ತಂದೆಯ ನೆನಪಿನಲ್ಲಿರಬೇಕು. ಈ ರೀತಿ ನೀವು ಕರ್ಮಾತೀತರಾಗುವ ಪುರುಷಾರ್ಥ ಮಾಡಬೇಕಾಗಿದೆ. ತಂದೆಯು ಬಹಳ ಯುಕ್ತಿಗಳನ್ನು ತಿಳಿಸುತ್ತಾರೆ. ಇವರ (ಬ್ರಹ್ಮಾ) ಮೇಲಂತೂ ಬಹಳ ಜವಾಬ್ದಾರಿಯಿದೆ, ಇವರಿಗಿಂತಲೂ ಹೆಚ್ಚಿನದಾಗಿ ನೆನಪು ಮಾಡುವ ಅವಕಾಶವು ನಿಮಗೆ ಸಿಗುತ್ತದೆ. ಬ್ರಹ್ಮಾ ತಂದೆಯು ಉದಾಹರಣೆಯನ್ನು ತಿಳಿಸುತ್ತಾರೆ- ಭೋಜನದ ಸಮಯದಲ್ಲಿ ಶಿವ ತಂದೆಯನ್ನು ನೆನಪು ಮಾಡಿ. ನಾವಿಬ್ಬರೂ (ಬಾಬಾ ಮತ್ತು ದಾದಾ) ಒಟ್ಟಿಗೆ ತಿನ್ನೋಣವೆಂದು ಕುಳಿತುಕೊಳ್ಳುತ್ತೇನೆ ಆದರೆ ಮತ್ತೆ ಮರೆತು ಹೋಗುತ್ತೇನೆ. ಎಲ್ಲರಿಗಿಂತ ಹೆಚ್ಚಿನ ಜಂಜಾಟವು ಈ ತಂದೆಯ ಮೇಲಿರುತ್ತದೆ. ತಂದೆಯ ಜೊತೆ ಬಹಳ ಪ್ರೀತಿಯಿರಬೇಕು. ರಾತ್ರಿ 12 ಗಂಟೆಯ ನಂತರ ಎ.ಎಂ ಆರಂಭವಾಗುತ್ತದೆ. ರಾತ್ರಿಯಲ್ಲಿ ಬೇಗನೆ ಮಲಗಿ, ಮುಂಜಾನೆ ಬೇಗನೆ ಎದ್ದು ನೆನಪು ಮಾಡಬೇಕು. ಏಳುತ್ತಿದ್ದಂತೆಯೇ “ಬಾಬಾ ಗುಡ್ಮಾರ್ನಿಂಗ್” ಎಂದು ಹೇಳಿ, ಮತ್ತೆ ಬೇರೆ ಕಡೆ ಬುದ್ಧಿಯು ಹೋಗಬಾರದು. ತಂದೆಯಂತೂ ಪ್ರತಿಯೊಬ್ಬ ಮಗುವನ್ನೂ ತಿಳಿದುಕೊಂಡಿದ್ದಾರೆ. ನಿಮ್ಮದು ಭವಿಷ್ಯಕ್ಕಾಗಿ ಬಹಳ ಸಂಪಾದನೆಯಿದೆ. ಕಲ್ಪ-ಕಲ್ಪಾಂತರವೂ ಈ ಸಂಪಾದನೆಯು ಕೆಲಸಕ್ಕೆ ಬರುವುದು ಆದ್ದರಿಂದ ಯಾವುದೇ ಭೂತವು ಬರಬಾರದು. ಕ್ರೋಧವೂ ಕಡಿಮೆಯಿಲ್ಲ, ಮೋಹವೂ ಸಹ ಕೆಟ್ಟದ್ದಾಗಿದೆ. ಎಷ್ಟು ಸಾಧ್ಯವೋ ತಂದೆಯ ನೆನಪಿನಲ್ಲಿ ಕುಳಿತು ಪಾವನರಾಗಬೇಕಾಗಿದೆ. ಹೇಗೆ ತಂದೆಯು ಜ್ಞಾನಸಾಗರನಾಗಿದ್ದಾರೆಯೋ ಅದೇರೀತಿ ಮಕ್ಕಳೂ ಆಗಬೇಕಾಗಿದೆ ಆದರೆ ಸಾಗರವು ಒಂದೇ ಇರುತ್ತದೆಯಲ್ಲವೆ. ಉಳಿದೆಲ್ಲವುಗಳಿಗೆ ನದಿಯೆಂದು ಹೇಳುತ್ತಾರೆ. ಕ್ರೋಧವು ಎರಡನೇ ನಂಬರಿನ ಶತ್ರುವಾಗಿದೆ, ಬಹಳ ನಷ್ಟವನ್ನುಂಟು ಮಾಡುತ್ತದೆ. ಒಬ್ಬರು ಇನ್ನೊಬ್ಬರ ಪ್ರಾಣವನ್ನೇ ತೆಗೆಯುತ್ತಾರೆ. ಲೋಭಿಯೂ ಸಹ ಒಬ್ಬರು ಇನ್ನೊಬ್ಬರ ಪ್ರಾಣವನ್ನು ಹಿಂಡುತ್ತಾರೆ. ಮೋಹದ ಭೂತವಂತೂ ಸತ್ಯನಾಶ ಮಾಡಿ ಬಿಡುತ್ತದೆ. ಮೋಹದ ಕಾರಣ ಶಿವ ತಂದೆಯ ನೆನಪನ್ನು ಮರೆತು ತಮ್ಮ ಮಕ್ಕಳನ್ನು ನೆನಪು ಮಾಡುತ್ತಾ ಇರುತ್ತಾರೆ. ನಷ್ಟಮೋಹಿಗಳು ಅಡೋಲ ಸ್ಥಿತಿಯಲ್ಲಿರುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಚೆನ್ನಾಗಿ ಸರ್ವೀಸ್ ಮಾಡುವ ಜೊತೆ ಜೊತೆಗೆ ಅಂತರಾಳದಿಂದ ತಂದೆಯನ್ನು ನೆನಪು ಮಾಡಬೇಕಾಗಿದೆ. ಮುಂಜಾನೆ ಏಳುತ್ತಿದ್ದಂತೆಯೇ ಪ್ರೀತಿಯಿಂದ “ಬಾಬಾ ಗುಡ್ಮಾರ್ನಿಂಗ್” ಎಂದು ಹೇಳಬೇಕಾಗಿದೆ. ಕರ್ಮ ಮಾಡುತ್ತಿದ್ದರೂ ಸಹ ನೆನಪಿನ ಅಭ್ಯಾಸ ಮಾಡಬೇಕಾಗಿದೆ.

2. ಯಾವುದೇ ದೇಹಧಾರಿಯು ನಾಮ-ರೂಪದಲ್ಲಿ ಸಿಲುಕಬಾರದು, ಜ್ಞಾನದ ಚಿಂತನೆಯಲ್ಲಿ ಇರಬೇಕಾಗಿದೆ, ವ್ಯರ್ಥ ಮಾತುಗಳನ್ನಾಡಬಾರದು.

ವರದಾನ:-

ಹೇಗೆ ಅಲೆಗಳಲ್ಲಿ ತೇಲಾಡುತ್ತಾ ಅಥವಾ ಮುಳುತ್ತಿರುವ ಆತ್ಮವು ಒಂದು ಹುಲ್ಲು ಕಡ್ಡಿಯ ಆಶ್ರಯವನ್ನು ಹುಡುಕುತ್ತದೆಯೋ ಹಾಗೆಯೇ ದುಃಖದ ಒಂದು ಅಲೆಯನ್ನು ಬರಲು ಬಿಡಿ, ನಂತರ ನೋಡಿ – ಅನೇಕ ಆತ್ಮರು ಸುಖ-ಶಾಂತಿಯ ಭಿಕಾರಿ ಆತ್ಮರು ಚಡಪಡಿಸುತ್ತಾ ತಮ್ಮ ಬಳಿ ಬರುವರು. ಇಂತಹ ಬಾಯಾರಿರುವ ಆತ್ಮರ ಬಾಯಾರಿಕೆ ನೀಗಿಸುವುದಕ್ಕಾಗಿ – ತಮ್ಮನ್ನು ಅತೀಂದ್ರಿಯ ಸುಖ ಅಥವಾ ಸರ್ವ ಶಕ್ತಿಗಳಿಂದ, ಸರ್ವ ಖಜಾನೆಗಳಿಂದ ಸಂಪನ್ನಗೊಳಿಸಿರಿ. ಇಷ್ಟೂ ಸರ್ವ ಖಜಾನೆಗಳನ್ನು ಜಮಾ ಮಾಡಿರಬೇಕು, ಅದರಿಂದ ತಮ್ಮ ಸ್ಥಿತಿಯೂ ಸ್ಥಿರವಾಗಿ ಇರಲಿ ಹಾಗೂ ಅನ್ಯ ಆತ್ಮರನ್ನೂ ಸಂಪನ್ನರನ್ನಾಗಿ ಮಾಡಲು ಸಾಧ್ಯವಾಗಲಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top