01 December 2021 KANNADA Murli Today | Brahma Kumaris

Read and Listen today’s Gyan Murli in Kannada

November 30, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಕ್ರೋಧವೂ ಬಹಳ ದೊಡ್ಡ ಮುಳ್ಳಾಗಿದೆ, ಇದರಿಂದ ಅನೇಕರಿಗೆ ದುಃಖ ಸಿಗುತ್ತದೆ ಆದ್ದರಿಂದ ಈ ಮುಳ್ಳನ್ನು ತೆಗೆದು ಸತ್ಯ-ಸತ್ಯ ಹೂಗಳಾಗಿ”

ಪ್ರಶ್ನೆ:: -

ಮುಳ್ಳುಗಳಿಂದ ಹೂಗಳಾಗುವಂತಹ ಮಕ್ಕಳಿಗೆ ತಂದೆಯು ಯಾವ ಧೈರ್ಯವನ್ನು ಕೊಡುತ್ತಾರೆ?

ಉತ್ತರ:-

ಮಕ್ಕಳೇ, ಇಲ್ಲಿಯವರೆಗೆ ಮುಳ್ಳುಗಳಿಂದ ಹೂಗಳಾಗುವುದರಲ್ಲಿ ಮಾಯೆಯು ಯಾವ ವಿಘ್ನ ಹಾಕುತ್ತದೆಯೋ ಈ ವಿಘ್ನಗಳು ಒಂದು ದಿನ ಸಮಾಪ್ತಿಯಾಗುತ್ತವೆ. ನೀವೆಲ್ಲರೂ ಸ್ವರ್ಗದಲ್ಲಿ ಹೋಗುತ್ತೀರಿ. ಈ ಕಲಿಯುಗೀ ಮುಳ್ಳುಗಳು ಸಮಾಪ್ತಿಯಾಗುತ್ತವೆ. ತಂದೆಯು ನಿಮ್ಮನ್ನು ಸಂಗಮಯುಗೀ ಹೂಗುಚ್ಛದಲ್ಲಿ ಇಟ್ಟಿದ್ದಾರೆ. ಮಾಯೆಯು ಭಲೆ ಬಾಡಿಸಿ ಬಿಡುತ್ತದೆ ಆದರೆ ಜ್ಞಾನದ ಬೀಜವು ಅವಿನಾಶಿಯಾಗಿದೆ – ಈ ಬೀಜವು ವಿನಾಶವಾಗಲು ಸಾಧ್ಯವಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಅವರು ನಮ್ಮನ್ನು ಅಗಲುವುದಿಲ್ಲ…….

ಓಂ ಶಾಂತಿ. ಶಿವ ತಂದೆಯು ಬ್ರಹ್ಮಾರವರ ತನುವಿನಿಂದ ಮಧುರಾತಿ ಮಧುರ ಅನನ್ಯ ಆತ್ಮಿಕ ಮಕ್ಕಳ ಪ್ರತಿ ಗುಹ್ಯ ರಹಸ್ಯ ಅಥವಾ ಜ್ಞಾನವನ್ನು ತಿಳಿಸುತ್ತಿದ್ದಾರೆ. ಒಂದಂತು ಮಕ್ಕಳು ಗೀತೆಯನ್ನು ಕೇಳಿದಿರಿ, ಭಲೆ ಎಷ್ಟಾದರೂ ದುಃಖವನ್ನು ಸಹನೆ ಮಾಡಬೇಕಾಗಲಿ, ಬಾಬಾ ನಾವು ನಿಮ್ಮ ಮೇಲೆ ಬಲಿಹಾರಿಯಾಗುತ್ತೇವೆ ಎಂದು. ದುಃಖವು ಏಕೆ ಆಗುತ್ತದೆ? ಏಕೆಂದರೆ ಮನುಷ್ಯರಿಗೆ ವಿಷ(ವಿಕಾರ)ವು ಸಿಗುವುದಿಲ್ಲ. ಇದಂತೂ ಮಕ್ಕಳಿಗೆ ಗೊತ್ತಿದೆ, ನಾವು ಆತ್ಮನನ್ನಾಗಲಿ ಪರಮಾತ್ಮನನ್ನಾಗಲಿ ತಿಳಿದುಕೊಂಡಿರಲಿಲ್ಲ. ತಮ್ಮನ್ನು ತಾವು ಮತ್ತು ತಂದೆಯನ್ನು ಅರಿತಿರಲಿಲ್ಲ ಆದ್ದರಿಂದ ಹೇಗೆ ಪ್ರಾಣಿ ಬುದ್ಧಿಯವರಾಗಿದ್ದೆವು, ಲೌಕಿಕ ಸಂಬಂಧದಲ್ಲಂತೂ ತಮ್ಮನ್ನು ತಿಳಿದುಕೊಂಡಿರುತ್ತಾರೆ. ಲೌಕಿಕ ತಂದೆಯನ್ನೂ ತಿಳಿದುಕೊಂಡಿರುತ್ತಾರೆ. ಈ ಸಮಯದ ಮನುಷ್ಯರು ತನ್ನನ್ನು ಮತ್ತು ಪಾರಲೌಕಿಕ ತಂದೆಯನ್ನು ಸ್ವಲ್ಪವೂ ತಿಳಿದುಕೊಂಡಿಲ್ಲ. ಪರಮಾತ್ಮನಿಗೆ ಯಾವುದೇ ನಾಮ, ರೂಪ, ದೇಶ, ಕಾಲ ಇಲ್ಲವೇ ಇಲ್ಲ ಎಂದು ಹೇಳಿ ಬಿಡುತ್ತಾರೆ ಅಂದಮೇಲೆ ಆತ್ಮಕ್ಕೂ ಇರಬಾರದು. ಆತ್ಮವನ್ನೂ ಸಹ ಅವರು ತಿಳಿದುಕೊಂಡಿಲ್ಲ. ಆತ್ಮವೇ ಪರಮಾತ್ಮನೆಂದು ಹೇಳಿ ಬಿಡುತ್ತಾರೆ. ನೀವೀಗ ಅರಿತುಕೊಂಡಿದ್ದೀರಿ, ಅವರು ಕೇವಲ ನಾಮ ಮಾತ್ರಕ್ಕೆ ಆತ್ಮ ಮತ್ತು ಜೀವ ಎಂದು ಹೇಳಿ ಬಿಡುತ್ತಾರೆ. ಆತ್ಮ ಅವಿನಾಶಿಯಾಗಿದೆ, ಜೀವವು ವಿನಾಶಿಯಾಗಿದೆ. ಆತ್ಮವೆಂದರೇನು? ಅದರ ರಂಗು-ರೂಪವೇನಾಗಿದೆ? ಹೆಸರಂತೂ ಆತ್ಮವೆಂದು ಗೊತ್ತಿದೆ ಆದರೆ ಅದು ಹೇಗಿದೆ, ಏನು ಮಾಡುತ್ತದೆ? ಹೇಗೆ ಪಾತ್ರವನ್ನು ಅಭಿನಯಿಸುತ್ತದೆ? ಎಷ್ಟು ಸಮಯ ಪಾತ್ರವನು ಅಭಿನಯಿಸುತ್ತದೆ? ಈ ಆತ್ಮದ ಜ್ಞಾನದ ವರ್ಣನೆಯನ್ನು ಯಾರೂ ಮಾಡಲು ಸಾಧ್ಯವಿಲ್ಲ. ನೀವೀಗ ತಿಳಿದುಕೊಂಡಿದ್ದೀರಿ, ಆತ್ಮವು ಚಿಕ್ಕ ನಕ್ಷತ್ರವಾಗಿದೆ. ಆತ್ಮದಲ್ಲಿ ಇಡೀ 84 ಜನ್ಮಗಳ ಅವಿನಾಶಿ ಪಾತ್ರವು ನಿಗಧಿತವಾಗಿದೆ. ಶಂಕರಾಚಾರ್ಯರ ಆತ್ಮವೂ ಸಹ ತಮ್ಮ ಪಾತ್ರವನ್ನು ಅಭಿನಯಿಸುತ್ತಿದೆ. ಆತ್ಮವು ಹೇಗೆ ಸತೋಪ್ರಧಾನತೆಯಿಂದ ನಂತರ ಸತೋ, ರಜೋ, ತಮೋದಲ್ಲಿ ಬರುತ್ತದೆಯೆಂದು ಯಾರೂ ತಿಳಿದುಕೊಂಡಿಲ್ಲ. ಕೇವಲ ಭೃಕುಟಿಯ ನಡುವೆ ಹೊಳೆಯುವ ನಕ್ಷತ್ರವೆಂದು ಹೇಳಿ ಬಿಡುತ್ತಾರೆ, ಮತ್ತೇನೂ ತಿಳಿದುಕೊಂಡಿಲ್ಲ. ಆತ್ಮವನ್ನು ತಿಳಿಯದಿದ್ದರೆ ಪರಮಾತ್ಮನನ್ನು ತಿಳಿದುಕೊಳ್ಳಲಿಲ್ಲ ಎಂದರ್ಥ. ಈ ಸಮಯದಲ್ಲಿ ಇದು ಮುಳ್ಳುಗಳ ಕಾಡಾಗಿದೆ, ಎಲ್ಲರೂ ಮುಳ್ಳುಗಳಾಗಿದ್ದಾರೆ. ರಚಯಿತ ಪರಮಪಿತ ಪರಮಾತ್ಮನನ್ನಾಗಲಿ, ರಚನೆಯ ಆದಿ-ಮಧ್ಯ-ಅಂತ್ಯವನ್ನಾಗಲಿ ತಿಳಿದುಕೊಂಡಿಲ್ಲ. ನೀವು ಮಕ್ಕಳು ಆತ್ಮ ಮತ್ತು ಪರಮಾತ್ಮನನ್ನು ತಿಳಿದುಕೊಂಡಿದ್ದೀರಿ, ಅದು ನಂಬರ್ವಾರ್ ಪುರುಷಾರ್ಥದ ಅನುಸಾರ. ಬಹಳ ಮಕ್ಕಳು ಯಥಾರ್ಥ ರೀತಿಯಿಂದ ತಿಳಿದುಕೊಂಡಿಲ್ಲ. ದೇಹಾಭಿಮಾನವಿರುವ ಕಾರಣ ಸಂಪೂರ್ಣ ಧಾರಣೆಯಾಗುವುದಿಲ್ಲ. ನಂಬರ್ವಾರಂತೂ ಇರುತ್ತಾರಲ್ಲವೆ! ಬಾಬಾ ಹೀಗೇಕೆ ಎಂದು ಕೇಳುತ್ತಾರೆ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಈಗ ರಾಜಧಾನಿಯು ಸ್ಥಾಪನೆಯಾಗುತ್ತಿದೆ, ಇದರಲ್ಲಿ ಎಲ್ಲಾ ಪ್ರಕಾರದವರೂ ಬೇಕು. ಕಲ್ಲು ಬುದ್ಧಿಯವರೇ ಕನಿಷ್ಟ ಪದವಿ ಪಡೆಯುವರು. ಒಂದುವೇಳೆ ತಾನು ಅರಿತುಕೊಂಡರೂ ಅನ್ಯರಿಗೂ ತಿಳಿಸುವರು. ಮುಂದೆ ಹೋದಂತೆ ತಿಳಿಸತೊಡಗುತ್ತೇವೆಂದು ನೀವು ಹೇಳುತ್ತೀರಿ ಆದರೆ ಇಂತಹವರೂ ಸಹ ಯಾರಾದರೂ ಬೇಕು ಆಗಲೇ ಕಡಿಮೆ ಪದವಿ ಸಿಗುವುದಲ್ಲವೆ. ರಾಜನೆಲ್ಲಿ! ಪ್ರಜೆಗಳೆಲ್ಲಿ! ಎಷ್ಟೊಂದು ಅಂತರವಿದೆ. ಇಲ್ಲಂತೂ ರಾಜಾ, ಪ್ರಜೆ ಎಲ್ಲರಿಗೂ ದುಃಖವಿದೆ. ಸತ್ಯಯುಗದಲ್ಲಿ ರಾಜನಿಗಾಗಲಿ, ಪ್ರಜೆಗಳಿಗಾಗಲಿ ದುಃಖವಿರುವುದಿಲ್ಲ ಆದರೆ ಪದವಿಗಳಲ್ಲಿ ಅಂತರವಿರುತ್ತದೆ. ಪೂರ್ಣ ಧಾರಣೆಯಿಲ್ಲದ ಕಾರಣ ಯಾರಿಗೂ ತಿಳಿಸಲು ಸಾಧ್ಯವಾಗುವುದಿಲ್ಲ. ಆಗ ಯಾವುದಾದರೊಂದು ಮುಳ್ಳು ಚುಚ್ಚುತ್ತಾ ಇರುತ್ತದೆ, ಕೆಲವೊಮ್ಮೆ ಲೋಭ, ಕೆಲವೊಮ್ಮೆ ಮೋಹ….. ಭೂತಗಳು ಪ್ರವೇಶವಾಗುತ್ತಾ ಇರುವುದು. ಇದೂ ಸಹ ಅವಶ್ಯವಾಗಿ ಆಗಬೇಕಾಗಿದೆ.

ನೀವು ಪ್ರಜಾಪಿತ ಬ್ರಹ್ಮಾಕುಮಾರ-ಕುಮಾರಿಯಾಗಿದ್ದೀರಿ. ಪ್ರಜಾಪಿತನ ತಂದೆ ಯಾರು? ಶಿವಬಾಬಾ. ಬಾಕಿ ಶಿವನಿಗೆ ಯಾರೂ ತಂದೆಯಿಲ್ಲ. ಈ ಬ್ರಹ್ಮಾ-ವಿಷ್ಣು-ಶಂಕರನೂ ಸಹ ಶಿವನ ರಚನೆಯಾಗಿದ್ದಾರೆ ಅಂದಮೇಲೆ ಎಲ್ಲರೂ ಆತ್ಮರಾಗಿ ಬಿಟ್ಟರು. ಪರಮಪಿತ ಪರಮಾತ್ಮನು ಒಬ್ಬರೇ ಆಗಿದ್ದಾರೆ. ಬ್ರಹ್ಮಾ-ವಿಷ್ಣು-ಶಂಕರ ಅಥವಾ ಲಕ್ಷ್ಮೀ-ನಾರಾಯಣ ಮೊದಲಾದ ಯಾವುದೇ ತ್ಮರಿಂದ ಮನುಷ್ಯಾತ್ಮರಿಂದ ಎಂದೂ ಗತಿ-ಸದ್ಗತಿಯ ಆಸ್ತಿ ಸಿಗಲು ಸಾಧ್ಯವಿಲ್ಲ. ಮನುಷ್ಯರು ಆತ್ಮನನ್ನಾಗಲಿ, ಪರಮಾತ್ಮನನ್ನಾಗಲಿ ಯಥಾರ್ಥವಾಗಿ ತಿಳಿದುಕೊಂಡಿಲ್ಲ. ಒಬ್ಬ ಪರಮಪಿತ ಪರಮಾತ್ಮನೇ ಆತ್ಮಾನುಭೂತಿ ಮಾಡಿಸಬಲ್ಲರು. ಜ್ಞಾನದಿಂದ ಸದ್ಗತಿಯಾಗುತ್ತದೆ, ಜ್ಞಾನವನ್ನು ಒಬ್ಬ ತಂದೆಯೇ ಕೊಡುತ್ತಾರೆ. ಕೆಲವು ಮಕ್ಕಳು ಯಜ್ಞದ ಸ್ಥೂಲ ಸೇವೆಯನ್ನು ಬಹಳ ಮಾಡುತ್ತಾರೆ, ಈ ಸಬ್ಜೆಕ್ಟ್ನಿಂದಲೂ ಅಂಕಗಳು ಬಹಳ ಸಿಗುತ್ತವೆ, ಈಗ ನೀವು ಮಕ್ಕಳಿಗೆ ತಂದೆಯು ಅಮರ ಕಥೆ, ಮೂರನೇ ನೇತ್ರದ ಕಥೆಯನ್ನು ತಿಳಿಸುತ್ತಾರೆ. ಇದು ವಾಸ್ತವದಲ್ಲಿ ಕಥೆಯಲ್ಲ, ಇದು ಆತ್ಮಿಕ ಜ್ಞಾನವಾಗಿದೆ, ಸ್ವಯಂನ್ನು ಅರಿತುಕೊಳ್ಳುವುದಾಗಿದೆ. ಅವರಂತೂ ಹೇಗೆ ನೀರಿನಿಂದ ಗುಳ್ಳೆಯು ಹೊರಬರುತ್ತದೆ ಮತ್ತೆ ಅದರಲ್ಲಿಯೇ ಸೇರಿ ಹೋಗುತ್ತದೆ ಎಂದು ಹೇಳುತ್ತಾರೆ. ನಾವು ಬ್ರಹ್ಮತತ್ವದಿಂದ ಹುಟ್ಟಿ ಪಾತ್ರವನ್ನು ಅಭಿನಯಿಸಿ ಮತ್ತೆ ಬ್ರಹ್ಮ್ದಲ್ಲಿಯೇ ಲೀನವಾಗಿ ಬಿಡುತ್ತೇವೆ ಅಥವಾ ಬ್ರಹ್ಮವೇ ಆಗಿಬಿಡುತ್ತೇವೆಂದು ಹೇಳಿ ಬಿಡುತ್ತಾರೆ. ರಚನೆ ಮತ್ತು ರಚಯಿತನ ಜ್ಞಾನವೇ ಇಲ್ಲ. ಜ್ಞಾನವನ್ನು ತಂದೆಯೇ ಬಂದು ತಿಳಿಸುತ್ತಾರೆ, ಅವರ ಹೆಸರಾಗಿದೆ – ಶಿವ. ಮತ್ತೆ ಅವರಿಗೆ ಕೆಲವರು ರುದ್ರನೆಂದೂ ಹೇಳುತ್ತಾರೆ, ಕೆಲವರು ಪಾಪ ಕಟೇಶ್ವರನೆಂದೂ ಹೇಳುತ್ತಾರೆ. ಅನೇಕ ಹೆಸರುಗಳನ್ನು ಇಟ್ಟು ಪೂಜಾ ಸಾಮಗ್ರಿಯನ್ನು ಹೆಚ್ಚಿಸಿ ಬಿಟ್ಟಿದ್ದಾರೆ. ಪರಮಾತ್ಮನು ಯಾವ-ಯಾವ ಕರ್ತವ್ಯವನ್ನು ಮಾಡಿದ್ದಾರೆಯೋ ಅದರಂತೆಯೇ ಭಿನ್ನ-ಭಿನ್ನ ಹೆಸರುಗಳನ್ನಿಟ್ಟು ಬಹಳ ಮಂದಿರಗಳನ್ನು ಕಟ್ಟಿಸಿದ್ದಾರೆ. ಈಗ ತಂದೆಯು ತಿಳಿಸುತ್ತಾರೆ – ಇದು ಮುಳ್ಳುಗಳ ಪ್ರಪಂಚ, ವಿಷದ ಸಾಗರವಾಗಿದೆ. ಈಶ್ವರ ಸರ್ವವ್ಯಾಪಿಯಲ್ಲ ಎಂಬುದನ್ನೂ ಸಹ ಎಲ್ಲರಿಂದ ಬರೆಸಬೇಕಾಗಿದೆ. ತಂದೆಯು ಬಂದು ಭಾರತವನ್ನು ಸ್ವರ್ಗವನ್ನಾಗಿ ಮಾಡುತ್ತಾರೆ. ಇದರಿಂದ ಇಡೀ ಪ್ರಪಂಚವು ಸ್ವರ್ಗವಾಗಿ ಬಿಡುತ್ತದೆ, ಇದೂ ಸಹ ಯಾರ ಬುದ್ಧಿಯಲ್ಲಿಯೂ ಬರುವುದಿಲ್ಲ. ಶಾಸ್ತ್ರಗಳೆಲ್ಲವೂ ಭಕ್ತಿಯದಾಗಿದೆ ಬಾಕಿ ಪ್ರತಿಯೊಬ್ಬರಿಗೆ ತಮ್ಮ-ತಮ್ಮ ಕೆಲಸದ ಜ್ಞಾನವಿದೆ. ಬಡಿಗನಿಗೆ ಅದರದ್ದೇ ಜ್ಞಾನವಿರುತ್ತದೆ, ವೈದ್ಯರಿಗೆ ವೈದ್ಯಕೀಯ ಜ್ಞಾನವಿರುತ್ತದೆ ಆದರೆ ಇದು ಆತ್ಮಿಕ ಜ್ಞಾನವಾಗಿದೆ. ಅದನ್ನು ಒಬ್ಬ ಪರಮಾತ್ಮನೇ ಬಂದು ಕೊಡುತ್ತಾರೆ. ಯಾರಿಗೆ ಪರಮಾತ್ಮನೆಂದು ಹೇಳಲಾಗುತ್ತದೆ ಎಂಬುದು ಮನುಷ್ಯರಿಗೆ ಗೊತ್ತೇ ಇಲ್ಲ. ಗೀತೆಯಲ್ಲಿ ಶ್ರೀಕೃಷ್ಣನ ಹೆಸರನ್ನು ಹಾಕಿ ಬಿಟ್ಟಿದ್ದಾರೆ. ಮುಖ್ಯ ಮಾತೇ ಇದಾಗಿದೆ. ಮೂಲ ತಾಯಿಯನ್ನೇ ಖಂಡನೆ ಮಾಡಿ ಬಿಟ್ಟಿದ್ದಾರೆ ಅಂದಮೇಲೆ ಉಳಿದೆಲ್ಲಾ ಶಾಸ್ತ್ರಗಳೆಲ್ಲವೂ ಸುಳ್ಳಾಯಿತು. ನಕಲಿ ವಜ್ರಗಳ ಗಣಿಗಳಿರುತ್ತವೆ ಹಾಗೆಯೇ ಇವೂ ಸಹ ನಕಲಿ ವಜ್ರಗಳಾಗಿವೆ. ಪಾರಸ ಬುದ್ಧಿಯವರು ಪಾರಸಪುರಿ ಸತ್ಯಯುಗದಲ್ಲಿ ಇರುತ್ತಾರೆ, ಇದಂತೂ ನರಕವಾಗಿದೆ. ಹೇ ಪತಿತ-ಪಾವನ ಬನ್ನಿ ಎಂದು ಕರೆಯುತ್ತಾರೆ ಅಂದಮೇಲೆ ಅವಶ್ಯವಾಗಿ ಪತಿತವಾಗಿದ್ದಾರೆ. ನರಕ ಮತ್ತು ಸ್ವರ್ಗ ಎರಡೂ ಭಾರತದಲ್ಲಿಯೇ ಇದೆ. ಯಾರಾದರೂ ಶರೀರ ಬಿಟ್ಟರೆ ಸ್ವರ್ಗಸ್ಥರಾದರೆಂದು ಹೇಳುತ್ತಾರೆ ಆದರೆ ಸ್ವರ್ಗವೆಂದು ಸತ್ಯಯುಗಕ್ಕೆ ಹೇಳಲಾಗುತ್ತದೆ. ಪರಮಾತ್ಮನು ಸ್ವರ್ಗಸ್ಥಾಪನೆ ಮಾಡುತ್ತಾರೆ, ನರಕದ್ದಲ್ಲ ಎಂಬುದು ಬುದ್ಧಿಯಲ್ಲಿ ಬರುವುದಿಲ್ಲ. ರಾವಣ ರಾಜ್ಯವು ಯಾವಾಗಿನಿಂದ ಆರಂಭವಾಗುತ್ತದೆ ಎಂಬುದೂ ಸಹ ಯಾರಿಗೂ ತಿಳಿದಿಲ್ಲ. ಭಲೆ ಬಹಳ ಶಾಸ್ತ್ರಗಳನ್ನು ಓದುತ್ತಾರೆ, ಬ್ರಹ್ಮಚರ್ಯದಲ್ಲಿಯೂ ಇರುತ್ತಾರೆ ಆದರೆ ಜನ್ಮವಂತೂ ವಿಕಾರದಿಂದ ಆಗುತ್ತದೆಯಲ್ಲವೆ. ಸಾಧು-ಸಂತರೂ ಸಹ ಸಾಧನೆ ಮಾಡುತ್ತಾರೆ, ತಂದೆಯಿಂದ ಮುಕ್ತಿಯನ್ನು ಕೇಳುತ್ತಾರೆ ಏಕೆಂದರೆ ಛೀ ಛೀ ಪ್ರಪಂಚದಲ್ಲಿರಲು ಇಷ್ಟವಿಲ್ಲ. ಈಗ ತಂದೆಯು ತಿಳಿಸುತ್ತಾರೆ – ಮೊದಲು ಆತ್ಮವು ಹೇಗೆ ಜನನ-ಮರಣದಲ್ಲಿ ಬರುತ್ತದೆ, ಹೇಗೆ ಸತ್ಯ ಚಿನ್ನದಲ್ಲಿ ತುಕ್ಕು ಸೇರುತ್ತದೆ, ಹೇಗೆ 84 ಜನ್ಮಗಳ ಪಾತ್ರವನ್ನು ಅಭಿನಯಿಸುತ್ತದೆ ಎಂದು ಆತ್ಮದ ಜ್ಞಾನ ತಿಳಿಯಬೇಕಾಗಿದೆ. ಎಲ್ಲರಿಗಿಂತ ಹೆಚ್ಚು ಪಾತ್ರವು ನಿಮ್ಮದಾಗಿದೆ. ನೀವು ದೇವಿ-ದೇವತೆಗಳಾಗಿದ್ದವರು ಪೂರ್ಣ 84 ಜನ್ಮಗಳನ್ನು ತೆಗೆದುಕೊಳ್ಳುತ್ತೀರಿ. ಲಕ್ಷ್ಮೀ-ನಾರಾಯಣರು ರಾಜ್ಯಭಾರ ಮಾಡಿದರು ನಂತರ ಎಲ್ಲಿ ಹೋದರು? ಅವರ ಆತ್ಮವಂತೂ ಅವಶ್ಯವಾಗಿ ಜನ್ಮ ತೆಗೆದುಕೊಂಡಿರುತ್ತದೆಯಲ್ಲವೆ. ಈಗ ಅವರು ಎಲ್ಲಿದ್ದಾರೆ? ಯಾರೂ ತಿಳಿದುಕೊಂಡಿಲ್ಲ. ಕ್ರಿಶ್ಚಿಯನ್ನರು ತಿಳಿದುಕೊಂಡಿರುತ್ತಾರೆ – ಕ್ರೈಸ್ಟ್ ಈ ಸಮಯದಲ್ಲಿ ಯಾವುದೇ ಕನಿಷ್ಠ ಪಾತ್ರದಲ್ಲರುವರು. ನೀವಂತೂ ಬಹಳ ಚೆನ್ನಾಗಿ ತಿಳಿದುಕೊಂಡಿದ್ದೀರಿ, ಲಕ್ಷ್ಮೀ-ನಾರಾಯಣರು ಯಾರು ಸ್ವರ್ಗದ ಮಾಲೀಕರಾಗಿದ್ದರೋ ಅವರೇ ಪುನರ್ಜನ್ಮ ತೆಗೆದುಕೊಂಡು 84 ಜನ್ಮಗಳನ್ನು ಪೂರ್ಣ ಮಾಡಬೇಕಾಗಿದೆ. ಎಲ್ಲಾ ಆತ್ಮರು 84 ಜನ್ಮಗಳನ್ನು ತೆಗೆದುಕೊಳ್ಳುವುದಿಲ್ಲ. ಈ ಜ್ಞಾನವು ನಿಮ್ಮ ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಯೋಗದಲ್ಲಿ ಇಲ್ಲದಿದ್ದರೆ ಮುಳ್ಳುಗಳಿಂದ ಹೂಗಳಾಗಲು ಸಾಧ್ಯವಿಲ್ಲ. ಯೋಗದಿಂದಲೇ ವಿಕರ್ಮಗಳು ವಿನಾಶವಾಗುತ್ತವೆ ಮತ್ತು ಸತೋಪ್ರಧಾನ ಹೂಗಳಾಗುತ್ತೀರಿ. ಎಲ್ಲಯವರೆಗೆ ಇಲ್ಲಿರುತ್ತೀರೋ ಅಲ್ಲಿಯವರೆಗೆ ಒಂದಲ್ಲಒಂದು ಮುಳ್ಳಿನ ಅಂಶವಿರುತ್ತದೆ. ಹೂಗಳಾಗಿ ಬಿಟ್ಟರೆ ಮತ್ತೆ ನೀವು ಇಲ್ಲಿರಲು ಸಾಧ್ಯವಿಲ್ಲ. ಸತ್ಯಯುಗಕ್ಕೆ ಹೂದೋಟವೆಂದು ಹೇಳಲಾಗುತ್ತದೆ. ನೀವೀಗ ಮುಳ್ಳುಗಳ ಕಾಡು ಅಥವಾ ರಾವಣ ರಾಜ್ಯದಲ್ಲಿದ್ದೀರಿ. ಎಲ್ಲರೂ ಮುಳ್ಳುಗಳಾಗಿದ್ದಾರೆ. ಯಾರು ಅನೇಕ ಮುಳ್ಳುಗಳನ್ನು ಹೂಗಳನ್ನಾಗಿ ಮಾಡುತ್ತಾರೆಯೋ ಅವರಿಗೇ ಸತ್ಯ ಸುಗಂಧಭರಿತ ಹೂವು ಎಂದು ಹೇಳಲಾಗುತ್ತದೆ. ಒಂದು ಹೂವಿನ ರಾಜನಿರುತ್ತದೆ, ಅದು ಶ್ವೇತ ಬಣ್ಣದಿಂದ ಕೂಡಿರುತ್ತದೆ. ಅದನ್ನು ಟೇಬಲ್ನ ಮೇಲೆ ಇಡುತ್ತಾರೆ, ಅದು ಅರಳುತ್ತಾ ಇರುತ್ತದೆ. ಪರಿಮಳವು ಹೆಚ್ಚುತ್ತಾ ಇರುತ್ತದೆ. ಇಂತಹ ಹೂಗಳು ಯಾರೂ ಆಗುವುದಿಲ್ಲ. ಈಗ ರಾಜಾ ಹೂ ಇದೆಯೆಂದರೆ ರಾಣಿಹೂ ಇರಬೇಕು (ರಾತ್ರಿ ರಾಣಿ). ಗುಲಾಬಿ, ಸಂಪಿಗೆ ಇತ್ಯಾದಿ ಒಳ್ಳೊಳ್ಳೆಯ ಹೂಗಳಿವೆ, ಪುಷ್ಫ ಪ್ರದರ್ಶನವನ್ನು ತೋರಿಸುತ್ತಾರೆ. ಅಲ್ಲಿ ಎಲ್ಲಾ ಒಳ್ಳೊಳ್ಳೆಯ ಹೂಗಳನ್ನು ತೆಗೆದುಕೊಂಡು ಬರುತ್ತಾರೆ, ಯಾರು ಒಳ್ಳೊಳ್ಳೆಯ ಹೂಗಳನ್ನು ತರುವರೋ ಅವರಿಗೆ ಬಹುಮಾನವು ಸಿಗುತ್ತದೆ. ನೀವೂ ಸಹ ಈಗ ಹೂದೋಟವನ್ನು ಮಾಡುತ್ತೀರಲ್ಲವೆ. ಶಿವನ ಮೇಲೆ ಹೂಗಳನ್ನು ಅರ್ಪಿಸುತ್ತಾರೆ, ಸುಗಂಧರಾಜ ಮತ್ತು ಎಕ್ಕದ ಹೂಗಳನ್ನೂ ಅರ್ಪಿಸುತ್ತಾರೆ. ತಂದೆಯು ತಿಳಿಸಿದ್ದಾರೆ- ನಾನು ಇಲ್ಲಿ ನೀವು ಮಕ್ಕಳನ್ನು ಹೂಗಳನ್ನಾಗಿ ಮಾಡುವ ಪಾತ್ರವನ್ನು ಅಭಿನಯಿಸುತ್ತೇನೆ. ಯಾರು ಗುಲಾಬಿ ಹೂವಾಗಿದ್ದಾರೆ, ಯಾರು ಸಂಪಿಗೆಯಾಗಿದ್ದಾರೆ ಮತ್ತು ಯಾರು ಚೆಂಡು ಮಲ್ಲಿಗೆಯಾಗಿದ್ದಾರೆ, ಯಾರು ಎಕ್ಕದ ಹೂವಾಗಿದ್ದಾರೆ ಎಂಬುದನ್ನು ನಾನು ತಿಳಿದುಕೊಂಡಿದ್ದೇನೆ. ಎಲ್ಲದಕ್ಕಿಂತ ಕನಿಷ್ಟವಾಗಿದೆ – ಎಕ್ಕದ ಹೂ. ಅದರ ಚಲನೆಯೇ ಮುಳ್ಳಗಳಂತೆ ಇರುತ್ತದೆ. ಕೆಲಕೆಲವರು ಬಹಳ ತೀಕ್ಷ್ಣ ಮುಳ್ಳುಗಳಾಗಿದ್ದಾರೆ, ಕ್ರೋಧವೂ ಸಹ ಒಂದು ಮುಳ್ಳಾಗಿದೆ. ಅನೇಕರಿಗೆ ದುಃಖವನ್ನು ಕೊಡುತ್ತದೆ, ನೀವೀಗ ಮುಳ್ಳುಗಳ ಪ್ರಪಂಚದಿಂದ ದೂರವಿದ್ದೀರಿ, ಸಂಗಮದಲ್ಲಿದ್ದೀರಿ. ಮುಳ್ಳುಗಳಿಂದ ಹೂಗಳಾಗುತ್ತಿದ್ದೀರಿ. ಹೇಗೆ ಮಾಲಿಯು ಮುಳ್ಳುಗಳನ್ನು ತೆಗೆದು ಹೂಗಳನ್ನು ಬೇರೆ ಕುಂಡದಲ್ಲಿ ಇಡುತ್ತಾರೆ ಹಾಗೆಯೇ ತಂದೆಯೂ ಸಹ ತಮ್ಮನ್ನು ಬೇರ್ಪಡಿಸಿದ್ದಾರೆ. ನೀವು ಸಂಗಮದಲ್ಲಿದ್ದೀರಿ, ನಿಮ್ಮದು ರಿಪೇರಿಯಾಗುತ್ತಾ ಇರುತ್ತದೆ ಆದರೂ ಸಹ ಮಾಯೆಯು ಮುಳ್ಳನ್ನಾಗಿ ಮಾಡಿ ಬಿಡುತ್ತದೆ. ಒಂದೇ ಸಾರಿ ನನ್ನವರಾಗಿ ಬಿಟ್ಟರಲ್ಲವೆ ಆದ್ದರಿಂದ ಮಾಯೆಯ ವಿಘ್ನವೂ ಸಹ ಒಂದು ದಿನ ಸಮಾಪ್ತಿಯಾಗುತ್ತವೆ ನಂತರ ಈ ಕುಂಡದಲ್ಲಿ ಹಾಕಿರುವ ಹೂಗಳೆಲ್ಲರೂ ಸ್ವರ್ಗದಲ್ಲಿ ಹೋಗುವಿರಿ. ಕಲಿಯುಗೀ ಮುಳ್ಳುಗಳು ಭಸ್ಮವಾಗುತ್ತಾರೆ. ನೀವು ಕೆಲವರೇ ಹೂಗಳಾಗಿರುತ್ತೀರಿ, ನಿಮ್ಮನ್ನು ಸಂಗಮಯುಗೀ ಹೂ ಕುಂಡದಲ್ಲಿ ಹಾಕಲಾಗಿದೆ, ಬೀಜವು ಬಿತ್ತನೆಯಾಗಿದೆ. ಮಾಯೆಯ ಬಿರುಗಾಳಿ ಬಂದರೆ ಬಾಡಿಸುತ್ತದೆ, ಆದರೂ ಬಿತ್ತನೆ ಮಾಡಿರುವ ಜ್ಞಾನದ ಅವಿನಾಶಿ ಬೀಜವೆಂದೂ ವಿನಾಶವಾಗುವುದಿಲ್ಲ.

ತಂದೆಯು ಕುಳಿತು ಮಕ್ಕಳಿಗೆ ತಿಳಿಸುತ್ತಾರೆ, ನೀವು ಮಕ್ಕಳು ಬಹಳ-ಬಹಳ ನಿರ್ಭಯರಾಗಬೇಕಾಗಿದೆ. ಇದನ್ನು ಬರೆಯಿರಿ – ಪ್ರತೀ 5000 ವರ್ಷಗಳ ನಂತರ ಈ ಮೇಳ-ಪ್ರದರ್ಶನಿಯನ್ನು ನಾವು ಸಂಗಮದಲ್ಲಿ ತೋರಿಸಲು ಬಂದಿದ್ದೇವೆ. ಇದನ್ನೂ ಸಹ ಬರೆಯಬೇಕಾಗಿದೆ – ಈ ಯುದ್ಧವು ಹಳೆಯ ಪ್ರಪಂಚವನ್ನು ಹೊಸದನ್ನಾಗಿ ಮಾಡಲು, ನರಕವಾಸಿಗಳನ್ನು ಸ್ವರ್ಗವಾಸಿಗಳನ್ನಾಗಿ ಮಾಡುವ ಸಲುವಾಗಿ ಪ್ರತೀ 5000 ವರ್ಷಗಳ ನಂತರ ನಡೆಯುತ್ತದೆ. ತಂದೆಯು ಅನೇಕ ಸೂಚನೆಗಳನ್ನು ತಿಳಿಸುತ್ತಾರೆ. ಬಹಳ ಸಹಜ ಯುಕ್ತಿಗಳನ್ನು ತಿಳಿಸುತ್ತಾರೆ. ತಂದೆಯನ್ನು ನೆನಪು ಮಾಡಿರಿ ಮತ್ತು ಸ್ವರ್ಗದ ರಾಜ್ಯಭಾಗ್ಯವನ್ನು ಪಡೆಯಿರಿ. ಮನುಷ್ಯರಂತೂ ನೀರಿನಲ್ಲಿ ಮುಳುಗುತ್ತಾ ಇರುತ್ತಾರೆ, ಸಾಗರದಲ್ಲಿ ಹೋಗಬೇಕಲ್ಲವೆ. ನದಿಗಳು ಸಾಗರದಿಂದ ಹುಟ್ಟುತ್ತವೆ, ನದಿಗಳ ತಂದೆಯು ಸಾಗರನಲ್ಲವೆ. ಅಲ್ಲಿಗೆ ಹೋಗಿ ಸ್ನಾನ ಮಾಡಿರಿ ಆದರೆ ಅದು ಉಪ್ಪು ನೀರಾಗಿರುತ್ತದೆ ಆದ್ದರಿಂದ ಸಿಹಿ ನೀರಿನ ನದಿಗಳಲ್ಲಿ ಸ್ನಾನ ಮಾಡುತ್ತಾರೆ. ನೀವೀಗ ಜ್ಞಾನ ಸಾಗರನ ಮಕ್ಕಳಾಗಿದ್ದೀರಿ, ಜ್ಞಾನ ಸಾಗರ, ಪತಿತ-ಪಾವನನು ತಂದೆಯಾಗಿದ್ದಾರೆ. ನೀವು ಅವರ ಮಕ್ಕಳು ಯಾರು ಹೆಚ್ಚು ಸರ್ವೀಸ್ ಮಾಡುತ್ತೀರೋ ಅವರು ಒಳ್ಳೆಯ ಹೂವೆಂದು ತಿಳಿಯಲಾಗುತ್ತದೆ. ಪ್ರದರ್ಶನಿಯಲ್ಲಿಯೂ ಪದೇ-ಪದೇ ಒಳ್ಳೆಯ ಹೂ ತಂದವರನ್ನು ಕರೆಯುತ್ತಾರೆ. ಇವರು ನಮಗಿಂತಲೂ ಬುದ್ಧಿವಂತರೆಂದು ತಿಳಿಯುತ್ತಾರೆ ಆದರೆ ಬುದ್ಧಿವಂತಿಕೆಗೆ ಗೌರವವನ್ನೂ ಕೊಡಬೇಕು. ತಂದೆಯು ಸದಾ ತಿಳಿಸುತ್ತಾರೆ – ಎಂದೂ ಕ್ರೋಧ ಮಾಡಬೇಡಿ, ಪ್ರೀತಿಯಿಂದ ತಿಳಿಸಿ. ಯಾರಾದರೂ ಕ್ರೋಧ ಮಾಡುತ್ತಾರೆಂದರೆ ಇವರಲ್ಲಿ ಕ್ರೂರವಾದ ಭೂತವಿದೆಯೆಂದು ತಂದೆಯು ತಿಳಿಯುತ್ತಾರೆ. ತಂದೆ-ತಾಯಿಯ ಮೇಲೂ ಕ್ರೋಧ ಮಾಡಲು ಹಿಂಜರಿಯುವುದಿಲ್ಲ. ಇನ್ನೂ ದುರ್ಗತಿಯನ್ನು ಹೊಂದುತ್ತಾರೆ. ಬಡವರ ಬಂಧು ಎಂದಾದರೂ ಬಡವರ ಮೇಲೆ ಕ್ರೋಧ ಮಾಡುತ್ತಾರೆಯೇ? ಬಡವರಬಂಧು ತಂದೆ ಬಂದಿರುವುದೇ ಬಡವರನ್ನು ಸಾಹುಕಾರರನ್ನಾಗಿ ಮಾಡಲು. ಇಲ್ಲಿ ಯಾರು ಪದಮಾಪತಿಗಳಿದ್ದಾರೆಯೋ ಅವರು ಇನ್ನೊಂದು ಜನ್ಮದಲ್ಲಿ ನೌಕರ-ಚಾಕರರಾಗಿರುತ್ತಾರೆ. ಬಡವರು ಯಾರು ಚೆನ್ನಾಗಿ ಓದುವರೋ ಅವರು ಹೋಗಿ ರಾಜ-ರಾಣಿಯಾಗುತ್ತಾರೆ, ಯಾರು ಈಶ್ವರೀಯ ಸೇವೆಗೆ ಏನನ್ನೂ ಕೊಡುವುದಿಲ್ಲ. ಇಂತಹವರೂ ಸೇವಾಕೇಂದ್ರಕ್ಕೆ ಬರುತ್ತಾರೆ ಸ್ವಲ್ಪ ಬೀಜಬಿತ್ತಿದರೂ ನಮ್ಮ ಭವಿಷ್ಯವು ಎಷ್ಟು ಶ್ರೇಷ್ಠವಾಗುವುದು ಎಂಬುದು ಅವರಿಗೆ ಗೊತ್ತೇ ಇಲ್ಲ. ಸುಧಾಮನ ಉದಾಹರಣೆಯಿದೆಯಲ್ಲವೆ. ಈಶ್ವರಾರ್ಥವಾಗಿ ದಾನ ಮಾಡುತ್ತಾರೆ, ಇನ್ನೊಂದು ಜನ್ಮದಲ್ಲಿ ಫಲ ಸಿಗುತ್ತದೆಯೆಂದು ತಿಳಿಯುತ್ತಾರೆ. ತಂದೆಯಂತೂ ಬರೆದು ಕಳುಹಿಸುತ್ತಾರೆ – ಮಕ್ಕಳೇ, ನಿಮಗೆ ಒಂದು ಇಟ್ಟಿಗೆಯ ಬದಲು ಮಹಲು ಸಿಗುತ್ತದೆ. ಇಲ್ಲಿ ಕವಡೆಗಳನ್ನು ಕೊಡುತ್ತೀರೆಂದರೆ ಅಲ್ಲಿ ವಜ್ರಗಳಾಗುತ್ತವೆ ಆದ್ದರಿಂದ ಒಂದು ಹಿಡಿ ಅವಲಕ್ಕಿಯ ಗಾಯನವಿದೆ. ಗುರುನಾನಕರ ಮಂದಿರಕ್ಕೆ ಹೋಗುತ್ತಾರೆ. ಒಂದಲ್ಲ ಒಂದನ್ನು ಅವಶ್ಯವಾಗಿ ಇಡುತ್ತಾರೆ ಆದರೆ ಇಲ್ಲಂತೂ ತಂದೆಯು ದಾತನಲ್ಲವೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಬಹಳ-ಬಹಳ ನಿರ್ಭಯರಾಗಿ ಮುಳ್ಳುಗಳನ್ನು ಹೂಗಳನ್ನಾಗಿ ಮಾಡುವ ಸೇವೆ ಮಾಡಬೇಕಾಗಿದೆ. ಎಲ್ಲರಲ್ಲಿ ಅವಿನಾಶಿ ಬೀಜವನ್ನು ಬಿತ್ತನೆ ಮಾಡಬೇಕಾಗಿದೆ.

2. ಕ್ರೋಧವು ಬಹಳ ದೊಡ್ಡ ಮುಳ್ಳಾಗಿದೆ, ಅದನ್ನು ಬಿಟ್ಟು ಬಹಳ-ಬಹಳ ಪ್ರಿಯರಾಗಬೇಕಾಗಿದೆ. ಪ್ರೀತಿಯಿಂದ ಸರ್ವೀಸ್ ಮಾಡಬೇಕಾಗಿದೆ. ಸೇವಾಧಾರಿಗಳಿಗೆ ಗೌರವ ಕೊಡಬೇಕಾಗಿದೆ.

ವರದಾನ:-

ಸದಾ ಏಕರಸ ಒಲವು-ಉತ್ಸಾಹದಲ್ಲಿ ಇರುವುದಕ್ಕಾಗಿ – ಯಾರೇ ಸಂಬಂಧದಲ್ಲಿ ಬರುತ್ತಾರೆ ಅವರನ್ನು ಸಂತುಷ್ಟಗೊಳಿಸುವ ಒಲವಿರಲಿ. ಯಾರನ್ನೇ ನೋಡಿದರೂ ಪ್ರತೀ ಸಮಯದಲ್ಲಿ ಅವರಿಂದ ಗುಣವನ್ನು ಗ್ರಹಿಸುತ್ತಿರಿ. ಸರ್ವ ಗುಣಗಳ ಬಲವು ಸಿಗುವುದರಿಂದ ಉತ್ಸಾಹವು ಸದಾಕಾಲಕ್ಕಾಗಿ ಇರುತ್ತದೆ. ಯಾವಾಗ ಅನ್ಯರ ಭಿನ್ನ-ಭಿನ್ನ ಸ್ವರೂಪ, ಭಿನ್ನ-ಭಿನ್ನ ಮಾತುಗಳನ್ನು ನೋಡುತ್ತಾ, ಕೇಳುತ್ತಾ ಇರುತ್ತೀರಿ ಆಗಲೇ ಉತ್ಸಾಹವು ಕಡಿಮೆಯಾಗುವುದು. ಆದರೆ ಗುಣವನ್ನು ನೋಡುವ ಒಲವಿದ್ದರೆ ಏಕರಸವಾದ ಉತ್ಸಾಹವಿರುವುದು ಹಾಗೂ ಸರ್ವ ಗುಣಗಳನ್ನು ನೋಡುವುದರಿಂದ ತಾವೂ ಸಹ ಗುಣಮೂರ್ತಿ ಆಗಿ ಬಿಡುತ್ತೀರಿ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top