30 November 2021 KANNADA Murli Today | Brahma Kumaris

Read and Listen today’s Gyan Murli in Kannada

29 November 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ಬೆಳಗ್ಗೆ-ಬೆಳಗ್ಗೆ ಎದ್ದು ತಂದೆಯನ್ನು ನೆನಪು ಮಾಡಿದಾಗ ಸತೋಪ್ರಧಾನರಾಗಿ ಬಿಡುತ್ತೀರಿ, ಅಮೃತವೇಳೆಯ ಸಮಯ ಬಹಳ ಚೆನ್ನಾಗಿರುತ್ತದೆ”

ಪ್ರಶ್ನೆ:: -

ಆಜ್ಞಾಕಾರಿ ಮಕ್ಕಳ ಚಿಹ್ನೆಗಳೇನಾಗಿರುತ್ತವೆ?

ಉತ್ತರ:-

ಆಜ್ಞಾಕಾರಿ ಮಕ್ಕಳೇ ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮಹಾವಾಕ್ಯಗಳನ್ನು ಶಿರಸಾವಹಿಸಿ ಪಾಲಿಸುತ್ತಾರೆ ಅರ್ಥಾತ್ ತಮ್ಮ ಜೀವನದಲ್ಲಿ ಧಾರಣೆ ಮಾಡಿಕೊಳ್ಳುತ್ತಾರೆ. ಅವರ ಚಲನೆಯು ಬಹಳ ಘನತೆಯಿಂದ ಕೂಡಿರುತ್ತದೆ, ಅವರು ಬಹಳ ಧೈರ್ಯವಂತರಾಗಿರುತ್ತಾರೆ. ಅವರಿಗೆ ವಿಶ್ವದ ಮಾಲೀಕತ್ವದ ಗುಪ್ತ ನಶೆಯಿರುವುದು, ಆಜ್ಞಾಕಾರಿ ಮಕ್ಕಳು ತಮ್ಮ ಯಾವುದೇ ಕರ್ಮದಿಂದ ಬಾಪ್ದಾದಾರವರ ನಿಂದನೆಯಾಗಲು ಬಿಡುವುದಿಲ್ಲ. ನಿಂದನೆ ಮಾಡುವಂತಹ ಅರ್ಥಾತ್ ಉಲ್ಲಂಘನೆ ಮಾಡುವಂತಹ ಮಕ್ಕಳು ಬಹಳ ಡಿಸ್ಸರ್ವೀಸ್ ಮಾಡುತ್ತಾರೆ. ಆಜ್ಞಾಕಾರಿ ಮಕ್ಕಳು ಸದಾ ಫಾಲೋ ಫಾದರ್ ಮಾಡುತ್ತಾರೆ, ಎಂದೂ ಉಲ್ಟಾ ಕರ್ಮವನ್ನು ಮಾಡುವುದಿಲ್ಲ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಆಕಾಶ ಸಿಂಹಾಸನವನ್ನು ಬಿಟ್ಟು ಬಾ..

ಓಂ ಶಾಂತಿ. ಮಧುರಾತಿ ಮಧುರ ಆತ್ಮಿಕ ಮಕ್ಕಳು ಗೀತೆಯ ಎರಡು ಶಬ್ಧಗಳನ್ನು ಕೇಳಿದಿರಿ. ಈಗ ಮಕ್ಕಳು ಇದರ ಅರ್ಥವನ್ನು ತಿಳಿದುಕೊಂಡು ಬಿಟ್ಟಿದ್ದೀರಿ – ತಂದೆಯು ಇಲ್ಲಿಯೇ ಇದ್ದಾರೆ. ತಂದೆಯು ಸರಿಯಾದ ಮಾತನ್ನು ತಿಳಿಸುತ್ತಾರೆ, ಏಕೆಂದರೆ ಜ್ಞಾನದ ಬಗ್ಗೆಯಿರಲಿ ಅಥವಾ ಈಶ್ವರನ ಜೊತೆ ಮಿಲನ ಮಾಡುವ ವಿಷಯದಲ್ಲಿ, ಪ್ರತಿಯೊಂದು ಮಾತನ್ನು ಮನುಷ್ಯರೇನು ಹೇಳುತ್ತಾರೆಯೋ ಅದು ತಪ್ಪಾಗಿದೆ. ಈಗ ಆಕಾಶ ಸಿಂಹಾಸನವನ್ನು ಬಿಟ್ಟು ಬಾ…. ಎಂದು ಗೀತೆಯ ಅಕ್ಷರವನ್ನು ಕೇಳಿದಿರಿ ಆದರೆ ಆಕಾಶ ಸಿಂಹಾಸನವೆಂದರೇನು ಎಂಬುದು ಯಾರಿಗೂ ತಿಳಿದಿಲ್ಲ. ಪತಿತ-ಪಾವನನಂತೂ ಬರಲೇಬೇಕಾಗಿದೆ. ಕೆಲವರು ಭಗವಂತನೇ ಇಲ್ಲವೆಂದು ಹೇಳುತ್ತಾರೆ. ಇನ್ನೂ ಕೆಲವರು ಎಲ್ಲರೂ ಭಗವಂತನೇ ಆಗಿದ್ದಾರೆ ಅಂದಾಗ ಏಕೆ ಬರುವರು ಎಂದು ಹೇಳುತ್ತಾರೆ. ಇದನ್ನು ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ – ತಂದೆಯು ಬಂದಿದ್ದಾರೆ. ಆದ್ದರಿಂದ ಗಾಯನ ಇತ್ಯಾದಿ ಏನೆಲ್ಲವೂ ಭಕ್ತಿಮಾರ್ಗದಲ್ಲಿ ಇದೆಯೋ ಅದನ್ನು ಕೇಳಲು ಇಷ್ಟವಾಗುವುದಿಲ್ಲ. ಪತಿತ-ಪಾವನನೇ ಬಂದು ತನ್ನ ಪರಿಚಯವನ್ನು ಕೊಟ್ಟು, ರಚನೆಯ ಆದಿ-ಮಧ್ಯ-ಅಂತ್ಯದ ರಹಸ್ಯವನ್ನು ತಿಳಿಸುತ್ತಾರೆ. ಪ್ರಪಂಚದಲ್ಲಿ ಇರುವವರು ಯಾರೂ ಸಹ ಈ ಮಾತುಗಳನ್ನು ತಿಳಿದುಕೊಂಡಿಲ್ಲ. ಇಲ್ಲಿಯೂ ಎಷ್ಟೊಂದು ಮತದ ವ್ಯಕ್ತಿಗಳಿದ್ದಾರೆ. ಮನುಷ್ಯರು ಪವಿತ್ರವಾಗಲು ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ ಅಂದಾಗ ಅವಶ್ಯವಾಗಿ ಎಲ್ಲಿಯವರೆಗೆ ಭಗವಂತನು ಬರುವುದಿಲ್ಲವೋ ಅಲ್ಲಿಯವರೆಗೆ ಪವಿತ್ರರಾಗಲು ಹೇಗೆ ಸಾಧ್ಯ! ಪರಮಾತ್ಮನೇ ಬಂದು ಶಿಕ್ಷಣ ಕೊಡುತ್ತಾರೆ ಮತ್ತು ಇದರಲ್ಲಿ ಎಷ್ಟು ಪ್ರಾಪ್ತಿ ಇದೆಯೆಂದು ಒತ್ತುಕೊಟ್ಟು ಹೇಳುತ್ತಾರೆ. ನೀವು ತಿಳಿದುಕೊಂಡಿದ್ದೀರಿ, ತಂದೆಯು ಹೇಳುತ್ತಾರೆ – ನನ್ನವರಾಗಿ ಶ್ರೀಮತದಂತೆ ನಡೆಯದಿದ್ದರೆ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಹೇಗೆ ತಂದೆಯು ಮಕ್ಕಳ ಚಲನೆಯು ಸರಿ ಇಲ್ಲದಿರುವುದನ್ನು ನೋಡುತ್ತಾರೆಂದರೆ ಪೆಟ್ಟು ಕೊಡುತ್ತಾರೆ. ಈ ತಂದೆಯಂತೂ ಪೆಟ್ಟು ಕೊಡುವುದಿಲ್ಲ ಕೇವಲ ತಿಳಿಸುತ್ತಾರೆ, ರಕ್ತದಿಂದಲೂ ಸಹ ಬರೆದು ಪ್ರತಿಜ್ಞೆ ಮಾಡುತ್ತಾರೆ ಆದರೂ ಸೋಲನ್ನು ಅನುಭವಿಸುತ್ತಾರೆ. ಪವಿತ್ರರಾಗುವುದರಿಂದ ಏನು ಸಿಗುತ್ತದೆ, ಪತಿತರೆಂದು ಯಾರಿಗೆ ಹೇಳಲಾಗುತ್ತದೆ ಎಂಬುದು ಮನುಷ್ಯರಿಗೆ ತಿಳಿದೇ ಇಲ್ಲ. ತಂದೆಯು ತಿಳಿಸುತ್ತಾರೆ – ಯಾರು ವಿಕಾರದಲ್ಲಿ ಹೋಗುತ್ತಾರೆಯೋ ಅವರು ಪತಿತರಾಗಿದ್ದಾರೆ, ವಿಕಾರವನ್ನು ಬಿಡುವುದು ಅಸಾಧ್ಯವೆಂದು ಮನುಷ್ಯರು ತಿಳಿದುಕೊಳ್ಳುತ್ತಾರೆ. ಆದ್ದರಿಂದ ತಿಳಿಸಿರಿ, ದೇವಿ-ದೇವತೆಗಳು ಸಂಪೂರ್ಣ ನಿರ್ವಿಕಾರಿಗಳಾಗಿದ್ದರು, ಚಿತ್ರಗಳನ್ನು ತೋರಿಸಬೇಕು. ಇದು ನಿರ್ವಿಕಾರಿ ಪ್ರಪಂಚವಾಗಿತ್ತಲ್ಲವೆ. ಪವಿತ್ರತೆಯಿದ್ದಾಗ ಭಾರತವು ಎಷ್ಟೊಂದು ಸಾಹುಕಾರನಾಗಿತ್ತು, ಶಿವಾಲಯವಾಗಿತ್ತು. ವಿಕಾರವಿಲ್ಲದೆ ಪ್ರಪಂಚವು ಹೇಗೆ ವೃದ್ಧಿಯಾಗುವುದು ಎಂದು ಮನುಷ್ಯರಿಗೆ ಚಿಂತೆಯಿರುತ್ತದೆ. ಅರೆ! ಜನಸಂಖ್ಯೆಯು ಕಡಿಮೆಯಾಗಲಿ ಎಂದು ಸರ್ಕಾರವೂ ಸಹ ಈ ವಿಷಯದಲ್ಲಿ ಬೇಸತ್ತು ಹೋಗಿದೆ. ಆದರೂ ಸಹ ಪ್ರತೀ ವರ್ಷವು ಜನಸಂಖ್ಯೆಯು ಎಷ್ಟೊಂದು ಹೆಚ್ಚುತ್ತಿರುತ್ತದೆ. ಕಡಿಮೆ ಆಗುವುದಂತೂ ಬಹಳ ಪರಿಶ್ರಮವಿದೆ. ಇಲ್ಲಿ ಬೇಹದ್ದಿನ ತಂದೆಯು ತಿಳಿಸುತ್ತಾರೆ – ಒಂದುವೇಳೆ ನೀವು ಪವಿತ್ರರಾಗದಿದ್ದರೆ ನಾನು ನಿಮ್ಮನ್ನು ಸ್ವರ್ಗದ ಮಾಲೀಕರನ್ನಾಗಿ ಮಾಡುತ್ತೇನೆ, ಬಹಳ ಭಾರಿ ಆದಾಯವಿದೆ. ಮಕ್ಕಳಿಗೆ ಗೊತ್ತಿದೆ, ಅವಶ್ಯವಾಗಿ ಮಾಯಾಜೀತರಾದಾಗಲೇ ನಾವು ಜಗಜ್ಜೀತರಾಗುವೆವು. ರಾವಣನನ್ನು ಜಯಿಸಿ ರಾಮ ರಾಜ್ಯವನ್ನು ಪಡೆಯುತ್ತೀರಿ, ಅಲ್ಲಿ ಈ ವಿಕಾರವೇ ಇರುವುದಿಲ್ಲ. ಅದನ್ನು ನೀವು ಜಯಿಸಿದಿರಲ್ಲವೆ. ಈ ಮಾತುಗಳನ್ನು ತಿಳಿದುಕೊಳ್ಳುವವರು ಕೆಲವರೇ ವಿರಳ. ವಿಕಾರವಿಲ್ಲದೆ ಪ್ರಪಂಚವು ಹೇಗೆ ನಡೆಯುತ್ತದೆ ಎಂದು ಹೇಳುತ್ತಾರೆ, ಹೀಗೆ ಯಾರು ಮಾತನಾಡುವರೋ ಅವರು ಈ ಆದಿ ಸನಾತನ ಧರ್ಮದವರಲ್ಲ ಎಂದು ತಿಳಿದುಕೊಳ್ಳಿ. ಎಲ್ಲಿಯಾದರೂ ನೀವು ಭಾಷಣ ಮಾಡುತ್ತೀರೆಂದರೆ ನೀವು ಹೇಳಿ, ಭಗವಾನುವಾಚ – ಭಗವಂತನು ತಿಳಿಸುತ್ತಾರೆ ಕಾಮ ಮಹಾಶತ್ರುವಾಗಿದೆ, ಅದರ ಮೇಲೆ ಜಯ ಗಳಿಸಿದರೆ ನೀವು ಜಗಜ್ಜೀತರಾಗುತ್ತೀರಿ. ಇದು ಬಹಳ ನೇರ ಮಾತಾಗಿದೆ ಆದರೂ ಸಹ ಅವರು ತಿಳಿದುಕೊಳ್ಳುವುದಿಲ್ಲ ಅಥವಾ ತಿಳಿಸುವವರಲ್ಲಿ ಬುದ್ಧಿವಂತಿಕೆಯಿಲ್ಲ. ತಂದೆಯಂತೂ ತಿಳಿದುಕೊಳ್ಳುತ್ತಾರೆ, ಮಕ್ಕಳು ರೂಪಾಯಿಯಲ್ಲಿ ಐದು ಆಣೆಯಷ್ಟೂ ಕಲಿತಿಲ್ಲ ಅಥವಾ ಸ್ವಯಂ ಪೂರ್ಣ ಯೋಗಿಯಾಗಿಲ್ಲ ಆದ್ದರಿಂದಲೇ ಶಕ್ತಿ ಸಿಗುವುದಿಲ್ಲ. ನೆನಪಿನಿಂದಲೇ ಶಕ್ತಿಯು ಸಿಗುತ್ತದೆ. ತಂದೆಯು ಸರ್ವಶಕ್ತಿವಂತನಲ್ಲವೆ! ಯೋಗವಿದ್ದಾಗಲೇ ಶಕ್ತಿಯೂ ಸಿಗುವುದು. ಅನೇಕ ಮಕ್ಕಳಲ್ಲಿ ಯೋಗವು ಬಹಳ ಕಡಿಮೆಯಿದೆ, ಯಾರು ಸತ್ಯವಾಗಿ ಬರೆಯುವುದಿಲ್ಲವೋ ನೆನಪಿನ ಚಾರ್ಟ್ ಬರೆಯುವುದೂ ಸಹ ಬಹಳ ವಿರಳ. ಶಿಕ್ಷಕಿಯರೇ ಚಾರ್ಟ್ ಇಡಲಿಲ್ಲವೆಂದರೆ ವಿದ್ಯಾರ್ಥಿಗಳು ಹೇಗೆ ಇಡುವರು! ಅನೇಕ ವಿದ್ಯಾರ್ಥಿಗಳು ಯೋಗದಲ್ಲಿ ಬಹಳ ತೀಕ್ಷ್ಣವಾಗಿದ್ದಾರೆ, ಮುಖ್ಯ ಮಾತು ತಂದೆಯನ್ನು ನೆನಪು ಮಾಡಬೇಕಾಗಿದೆ. ಯೋಗ ಶಬ್ಧವು ಶಾಸ್ತ್ರಗಳಿಂದ ಬಂದಿದೆ, ಮನುಷ್ಯರು ಕೇಳಿ ತಬ್ಬಿಬ್ಬಾಗುತ್ತಾರೆ. ಯೋಗವನ್ನು ಕಲಿಸಿ ಎಂದು ಹೇಳುತ್ತಾರೆ. ಅರೆ! ಯೋಗವನ್ನು ಕಲಿಸಲಾಗುತ್ತದೆಯೇ? ಮುಂಜಾನೆ ಎದ್ದು ತಾವೇ ನೆನಪು ಮಾಡಬೇಕಾಗಿದೆ. ಇದರಲ್ಲಿ ಶಿಕ್ಷಕರೇ ಕುಳಿತು ಕಲಿಸಿ ಕೊಡುವ ಅವಶ್ಯಕತೆಯೇನಿದೆ? ಆದ್ದರಿಂದ ನೆನಪು ಶಬ್ಧವು ಸರಿಯಾಗಿದೆ, ಯೋಗವೆಂಬುದು ಕಲಿಯುವ ಮಾತಲ್ಲ, ಈ ಹವ್ಯಾಸ ಮಾಡಿಕೊಳ್ಳಬಾರದು. ತಂದೆಯು ತಿಳಿಸುತ್ತಾರೆ – ತನ್ನನ್ನು ಆತ್ಮನೆಂದು ತಿಳಿದು ತಂದೆಯನ್ನು ನೆನಪು ಮಾಡಿದರೆ ಸತೋಪ್ರಧಾನರಾಗಿ ಬಿಡುತ್ತೀರಿ. ಅಮೃತವೇಳೆ ನೆನಪು ಮಾಡುವುದು ಒಳ್ಳೆಯದಾಗಿದೆ. ಭಕ್ತಿಯನ್ನೂ ಸಹ ಮುಂಜಾನೆ ಎದ್ದು ಮಾಡುತ್ತಾರೆ. ಇದೂ ಸಹ ತಂದೆಯನ್ನು ನೆನಪು ಮಾಡಿದಂತೆ. ಏಕೆ ನೆನಪು ಮಾಡುತ್ತಾರೆ? ಏಕೆಂದರೆ ತಂದೆಯಿಂದ ಆಸ್ತಿ ಸಿಗಬೇಕಾಗಿದೆ. ಭಲೆ ಭಕ್ತಿಮಾರ್ಗದಲ್ಲಿ ಶಿವನನ್ನು ನೆನಪು ಮಾಡುತ್ತಾರೆ ಆದರೆ ಶಿವನಿಂದ ಏನು ಸಿಗುವುದು ಎಂಬುದು ಅವರಿಗೆ ತಿಳಿದಿಲ್ಲ. ಇದನ್ನು ಕೇವಲ ನೀವು ಮಕ್ಕಳೇ ತಿಳಿದುಕೊಂಡಿದ್ದೀರಿ. ಈಗ ತಂದೆಯು ಶ್ರೀಮತ ಕೊಡುತ್ತಾರೆ – ತಮ್ಮ ಕಲ್ಯಾಣಕ್ಕಾಗಿ ನನ್ನನ್ನು ನೆನಪು ಮಾಡಿರಿ, ನೆನಪಿನಿಂದಲೇ ಶಕ್ತಿ ಬರುತ್ತದೆ. ಶಕ್ತಿಯಿಂದ ವಿಕರ್ಮಗಳು ವಿನಾಶವಾಗುತ್ತವೆ, ಜ್ಞಾನದಿಂದ ವಿಕರ್ಮಗಳು ವಿನಾಶವಾಗುವುದಿಲ್ಲ. ಜ್ಞಾನದಿಂದ ಪದವಿಯು ಸಿಗುವುದು. ನೆನಪಿನಿಂದಲೇ ಪತಿತರಿಂದ ಪಾವನರಾಗುತ್ತೀರಿ. ಅನೇಕ ಮಕ್ಕಳು ಇದರಲ್ಲಿ ಅನುತ್ತೀರ್ಣರಾಗಿದ್ದಾರೆ. ಬಹಳ ಒಳ್ಳೊಳ್ಳೆಯ ಮಕ್ಕಳೂ ಸಹ ಐದಾಣೆಯಷ್ಟೂ ವಿರಳ ನೆನಪು ಮಾಡುತ್ತಾರೆ. ಕೆಲವರಂತೂ ಒಂದು ಪೈಸೆಯಷ್ಟೂ ನೆನಪು ಮಾಡುವುದಿಲ್ಲ. ಇದರಲ್ಲಿ ಬಹಳ ಪರಿಶ್ರಮವಿದೆ. ಜ್ಞಾನವನ್ನು ಬಹು ಬೇಗನೆ ಕಲಿಯುತ್ತಾರೆ ಆದರೆ ನೆನಪಿನಲ್ಲಿದ್ದಾಗಲೇ ದೋಣಿಯು ಪಾರಾಗುವುದು. ಆಗಲೇ ಜನ್ಮ-ಜನ್ಮಾಂತರದ ವಿಕರ್ಮಗಳು ವಿನಾಶವಾಗುತ್ತವೆ. ನಂತರ ಪುಣ್ಯಾತ್ಮರಾಗಿ ಬಿಡುತ್ತೀರಿ. ನಮ್ಮನ್ನು ಪತಿತರಿಂದ ಪಾವನ ಮಾಡಿ ಎಂದು ತಂದೆಯನ್ನು ಕರೆಯುತ್ತಾರೆ. ಪಾವನರಂತೂ ಅನೇಕರಾಗುತ್ತಾರೆ ಆದರೆ ಯಾರು ಚೆನ್ನಾಗಿ ನೆನಪಿನಲ್ಲಿರುವರೋ ಅವರೇ ಶ್ರೇಷ್ಠ ಪದವಿಯನ್ನು ಪಡೆಯುವರು. ನಿಮಗಿಂತಲೂ ಬಂಧನದಲ್ಲಿ ಇರುವವರು ಹೆಚ್ಚು ನೆನಪು ಮಾಡುತ್ತಾರೆ. ನೆನಪಿನಿಂದಲೇ ವಿಕರ್ಮಗಳು ವಿನಾಶವಾಗುತ್ತವೆ. ಪವಿತ್ರರಾಗಿರುವುದು ಅಸಂಭವವೆಂದು ಯಾರಾದರೂ ಹೇಳಿದರೆ ಅಂತಹವರೊಂದಿಗೆ ಮಾತನಾಡಲೂಬಾರದು. ನಿರ್ವಿಕಾರಿ ಭಾರತವಿದ್ದಾಗ ಸತೋಪ್ರಧಾನವಾಗಿತ್ತು ಆದರೆ ಸಾಹುಕಾರರ ಬುದ್ಧಿಯಲ್ಲಿ ಈ ಜ್ಞಾನ ಕುಳಿತುಕೊಳ್ಳುವುದು ಅಸಂಭವವಾಗಿದೆ ಏಕೆಂದರೆ ನೆನಪಿನಲ್ಲಿಯೇ ಪರಿಶ್ರಮವಿದೆ.

ತಂದೆಯು ತಿಳಿಸುತ್ತಾರೆ – ಗೃಹಸ್ಥ ವ್ಯವಹಾರದಲ್ಲಿ ಇರುತ್ತಾ ಅವರೊಂದಿಗೂ ಸಂಬಂಧವನ್ನು ನಿಭಾಯಿಸಿರಿ. ವಾಸ್ತವದಲ್ಲಿ ಕಾಯಿದೆಗಳು ಬಹಳ ಕಠಿಣವಾಗಿದೆ, ನೀವು ಜನ್ಮ-ಜನ್ಮಾಂತರವಂತೂ ಪಾಪಾತ್ಮರಿಗೆ ದಾನ ಮಾಡುತ್ತಾ ಪಾಪಾತ್ಮರಾಗುತ್ತಾ ಬಂದಿರಿ. ನೀವೀಗ ಪಾಪಾತ್ಮರಿಗೆ ಹಣವನ್ನು ಕೊಡುವಂತಿಲ್ಲ ಆದರೆ ತಾತನ ಆಸ್ತಿಯಾಗಿದ್ದರೆ ಕೊಡಲೇಬೇಕಾಗುತ್ತದೆ. ಆದ್ದರಿಂದ ತಂದೆಯು ಹೇಳುತ್ತಾರೆ – ಮೊದಲು ಎಲ್ಲಾ (ಲೌಕಿಕದ) ಕರ್ತವ್ಯಗಳನ್ನು ಮುಗಿಸಿ ನಂತರ ಸಮರ್ಪಣೆಯಾಗಿ ಬಿಡಿ. ಇಂತಹವರು ಕೋಟಿಯಲ್ಲಿ ಕೆಲವರೇ ಇರುತ್ತಾರೆ. ಬಹಳ ದೊಡ್ಡ ಗುರಿಯಾಗಿದೆ, ತಂದೆಯನ್ನು ಫಾಲೋ ಮಾಡಬೇಕಾಗಿದೆ. ನಷ್ಟಮೋಹಿಗಳಾಗುವುದು ಚಿಕ್ಕಮ್ಮನ ಮನೆಯಂತಲ್ಲ. ಬಹಳ ಪರಿಶ್ರಮವಿದೆ. ವಿಶ್ವದ ಮಾಲೀಕರಾಗುವುದು ಎಷ್ಟು ದೊಡ್ಡ ಪ್ರಾಪ್ತಿಯಾಗಿದೆ! ಕಲ್ಪ-ಕಲ್ಪವೂ ಯಾರು ವಿಶ್ವದ ಮಾಲೀಕರಾದರೋ ಅವರೇ ಆಗುವರು. ಡ್ರಾಮಾದ ರಹಸ್ಯವು ಕೆಲವರ ಬುದ್ಧಿಯಲ್ಲಿಯೇ ಕುಳಿತುಕೊಳ್ಳುತ್ತದೆ, ಸಾಹುಕಾರರಂತೂ ಜ್ಞಾನವನ್ನು ಕೇಳುವುದು ಬಹಳ ವಿರಳ. ಬಡವರಂತೂ ಬಾಬಾ ಇದೆಲ್ಲವೂ ತಮ್ಮದಾಗಿದೆ ಎಂದು ಕೂಡಲೇ ಹೇಳಿ ಬಿಡುತ್ತಾರೆ ಮತ್ತೆ ಅವರು ಸೇವೆಯನ್ನೂ ಮಾಡಬೇಕಾಗಿದೆ. ಪಾವನರಾಗುವುದಕ್ಕಾಗಿ ನೆನಪೂ ಬೇಕು, ಇಲ್ಲದಿದ್ದರೆ ಬಹಳ ಶಿಕ್ಷೆಯನ್ನು ಅನುಭವಿಸಬೇಕಾಗುವುದು. ಶಿಕ್ಷೆಯನ್ನು ಅನುಭವಿಸಿದರೆ ಪದವಿಯೂ ಕಡಿಮೆಯಾಗುವುದು, ಯಾರು ನೆನಪು ಮಾಡುವುದಿಲ್ಲವೋ ಅವರು ಶಿಕ್ಷೆಯನ್ನು ಅನುಭವಿಸುತ್ತಾರೆ. ಜ್ಞಾನವನ್ನು ಎಷ್ಟಾದರೂ ತಿಳಿದುಕೊಳ್ಳಲಿ ಅದರಿಂದ ವಿಕರ್ಮಗಳು ವಿನಾಶವಾಗುವುದಿಲ್ಲ. ಪೆಟ್ಟು ತಿಂದಮೇಲೆ ಅಲ್ಪಸ್ವಲ್ಪ ಪದವಿಯನ್ನು ಪಡೆಯುವುದು ಆಸ್ತಿಯಾಯಿತೇ? ತಂದೆಯಿಂದ ಪೂರ್ಣ ಆಸ್ತಿಯನ್ನು ತೆಗೆದುಕೊಳ್ಳಬೇಕೆಂದರೆ ತಂದೆಗೆ ಆಜ್ಞಾಕಾರಿಗಳಾಗಬೇಕು. ಶ್ರೇಷ್ಠಾತಿ ಶ್ರೇಷ್ಠ ತಂದೆಯ ಮಹಾವಾಕ್ಯಗಳನ್ನು ಶಿರಸಾವಹಿಸಿ ಮಾಡಬೇಕು. ಕೃಷ್ಣನ ಆತ್ಮವೂ ಸಹ ಈ ಸಮಯದಲ್ಲಿ ಆಸ್ತಿಯನ್ನು ತೆಗೆದುಕೊಳ್ಳುತ್ತಿದೆ. ಈ ಲಕ್ಷ್ಮೀ-ನಾರಾಯಣರ ಬಹಳ ಜನ್ಮಗಳ ಅಂತಿಮದಲ್ಲಿ ನಾನು ಪುನಃ ಅವರಿಗೆ ಓದಿಸಿ ಆಸ್ತಿಯನ್ನು ಕೊಡುತ್ತೇನೆ. ನಿಮ್ಮಲ್ಲಿಯೂ ರಾಜಕುಮಾರ-ಕುಮಾರಿಯರಾಗುವವರಿದ್ದೀರಲ್ಲವೆ. ರಾಯಲ್ ಮನೆತನದವರ ಚಲನೆಯು ಬಹಳ ತಾಳ್ಮೆಯಿಂದ ಕೂಡಿರುತ್ತದೆ, ಗುಪ್ತ ನಶೆಯಿರುತ್ತದೆ. ತಂದೆಯು ಎಷ್ಟು ಸಾಧಾರಣವಾಗಿರುತ್ತಾರೆ, ಅವರಿಗೆ ಗೊತ್ತಿದೆ- ಇನ್ನು ಸ್ವಲ್ಪವೇ ಸಮಯವಿದೆ. ನಾನು ಹೋಗಿ ವಿಶ್ವ ಮಹಾರಾಜ ಆಗಬೇಕಾಗಿದೆ, ಇವರೂ ಸಹ ಪತಿತನಾಗಿದ್ದರು, ಇವರು ತಂದೆಯ ರಥವಾಗಿದ್ದಾರೆ ಆದ್ದರಿಂದ ಇಲ್ಲಿ ಗದ್ದುಗೆಯ ಮೇಲೆ ಕುಳಿತುಕೊಳ್ಳಬೇಕಾಗುತ್ತದೆ. ಇಲ್ಲದಿದ್ದರೆ ತಂದೆಯು ಎಲ್ಲಿ ಕುಳಿತುಕೊಳ್ಳುವುದು! ಇವರೂ ಸಹ ನಿಮ್ಮ ಹಾಗೆಯೇ ವಿದ್ಯಾರ್ಥಿಯಾಗಿದ್ದಾರೆ, ಓದುತ್ತಾರೆ. ಬಹಳ ಮಂದಿ ಮಕ್ಕಳು ತಂದೆಯನ್ನು ಅರಿತುಕೊಂಡಿಲ್ಲ. ತಂದೆಯ ಜೊತೆ ಧರ್ಮರಾಜನೂ ಇದ್ದಾರೆ. ತಂದೆಯು ಹೇಳುತ್ತಾರೆ – ನನ್ನ ಆಜ್ಞೆಯನ್ನು ಪಾಲಿಸಲಿಲ್ಲ, ನನ್ನ ನಿಂದನೆ ಮಾಡಿದಿರೆಂದರೆ ಧರ್ಮರಾಜನು ಬಹಳ ಶಿಕ್ಷೆಗಳನ್ನು ಕೊಡುವರು. ಡೈರೆಕ್ಟ್ ನನ್ನ ಅಥವಾ ನನ್ನ ಮಕ್ಕಳಿಗೆ ನೀವು ಉಲ್ಲಂಘನೆ ಮಾಡುತ್ತೀರಿ ಎಂದರ್ಥ. ತಂದೆಗೆ ಇವರೊಬ್ಬರೇ ಬಹಳ ಅನನ್ಯ ಮಗುವಾಗಿದ್ದಾರೆ. ಪ್ರೀತಿಯಂತೂ ಇದೆಯಲ್ಲವೆ, ಇವರಿಗೆ ನಿಂದನೆ ಮಾಡುತ್ತೀರೆಂದರೆ ಎಷ್ಟೊಂದು ಶಿಕ್ಷೆಗಳನ್ನು ಅನುಭವಿಸಬೇಕಾಗುವುದು! ಸ್ವಲ್ಪ ಆಪತ್ತುಗಳು ಬರಲಿ ಆಗ ನೋಡಿ, ಎಷ್ಟು ಮಂದಿ ಓಡಿ ಬರುತ್ತಾರೆ. ನೀವೆಲ್ಲರೂ ಓಡಿ ಬಂದಿದ್ದೀರಲ್ಲವೆ. ಇವರು ಯಾವುದೇ ಜಾದು ಇತ್ಯಾದಿಗಳನ್ನು ಮಾಡಲಿಲ್ಲ, ಜಾದೂಗಾರನು ಶಿವ ತಂದೆಯಾಗಿದ್ದಾರೆ. ಇವರಲ್ಲಿ ಶಿವ ತಂದೆಯು ಬರುತ್ತಾರೆ ಎಂಬುದೂ ಸಹ ಅನೇಕರಿಗೆ ಗಮನವಿರುವುದಿಲ್ಲ. ಶಿವ ತಂದೆಯ ಮುಂದೆ ನಾವು ಏನಾದರೂ ಉಲ್ಟಾ ಮಾಡಿ ಬಿಟ್ಟರೆ ಇವರು ಅಯೋಗ್ಯ ಮಗುವೆಂದು ತಂದೆಯು ಹೇಳುವರು. ಇವರಲ್ಲಿ ಡಬಲ್ ಇದ್ದಾರಲ್ಲವೆ ಆದ್ದರಿಂದ ಪತ್ರದಲ್ಲಿ ಬಾಪ್ದಾದಾ ಎಂದು ಬರೆಯುತ್ತಾರೆ ಆದರೆ ಬಾಪ್ದಾದಾ ಹೇಗೆ ಒಟ್ಟಿಗೆ ಇದ್ದಾರೆ ಎಂಬುದನ್ನೂ ಸಹ ಮಕ್ಕಳು ತಿಳಿದುಕೊಳ್ಳುವುದಿಲ್ಲ. ತಂದೆಯು ದಾದಾರವರ ಮೂಲಕ ಆಸ್ತಿಯನ್ನು ಕೊಡುತ್ತಾರೆ. ತಾವಾಗಿಯೇ ಮಾತನಾಡಿಸಬೇಕು – ನೀವು ತಿಳಿದುಕೊಂಡಿದ್ದೀರಾ – ಬಾಪ್ದಾದಾ ಯಾರು ಎಂದು. ಭಲೆ ಯಾರಾದರೂ ನೀವು ಯಾರಿಗೆ ಬಾಪ್ದಾದಾ ಎಂದು ಹೇಳುತ್ತೀರಿ ಎಂದು ಕೇಳಿದರೆ ಬಾಪ್ದಾದಾ ಎಂದು ಒಬ್ಬರಿಗೆ ಹೆಸರಿರಲು ಸಾಧ್ಯವಿಲ್ಲ ಆದ್ದರಿಂದ ಮಕ್ಕಳು ಯುಕ್ತಿಯಿಂದ ತಿಳಿಸಬೇಕು. ಯಾವಾಗ ನೀವು ಅವರಿಗೆ ತಿಳಿಸುವಿರೋ ಆಗಲೇ ಶಿವ ತಂದೆಯು ದಾದಾರವರ ಮೂಲಕ ಆಸ್ತಿಯನ್ನು ಕೊಡುತ್ತಾರೆ. ಈಗ ವಿನಾಶವಾಗಲಿದೆ ಎಂಬುದು ಅವರ ಬುದ್ಧಿಯಲ್ಲಿ ಕುಳಿತುಕೊಳ್ಳುವುದು. ಅವರಿಂದ ನಾವು ರಾಜಯೋಗವನ್ನು ಕಲಿಯುತ್ತಿದ್ದೇವೆ. ಈಗ ತಾವು ಕಲಿಯಿರಿ, ಅರ್ಧಕಲ್ಪ ಯಾವ ತಂದೆಯನ್ನು ಕರೆದೆವೋ ಆ ತಂದೆಯು ಜ್ಞಾನವನ್ನು ಕೊಡಲು ಬಂದಿದ್ದಾರೆ ಎಂದು ತಿಳಿಸಿರಿ, ಆಗಲೂ ಸಹ ನಮಗೆ ತಿಳಿದುಕೊಳ್ಳಲು ಬಿಡುವಿಲ್ಲವೆಂದು ಹೇಳುತ್ತಾರೆ. ಆಗ ತಾವು ದೇವಿ-ದೇವತಾ ಧರ್ಮದವರಲ್ಲ, ಸ್ವರ್ಗದ ಸುಖವು ನಿಮ್ಮ ಅದೃಷ್ಟದಲ್ಲಿ ಇಲ್ಲವೆಂದು ಹೇಳಿರಿ ಬಾಕಿ ಇಲ್ಲಿ ತಲೆ ಬಾಗುವಂತಿಲ್ಲ. ಸನ್ಯಾಸಿಗಳ ಮುಂದೆ ಚರಣಗಳಿಗೆ ತಲೆ ಬಾಗುತ್ತಾರೆ. ಇಲ್ಲಿ ತಂದೆಯಂತೂ ಗುಪ್ತವಾಗಿದ್ದಾರಲ್ಲವೆ. ಮುಂದೆ ಹೋದಂತೆ ಬಹಳ ಪ್ರಭಾವ ಬೀರುವುದು, ಆ ಸಮಯದಲ್ಲಿ ಬಹಳ ಜನಸಂದಣಿ ಆಗುವುದು. ಜನಸಂದಣಿಯಲ್ಲಿ ಎಷ್ಟೊಂದು ಮನುಷ್ಯರು ಸತ್ತುಹೋಗುತ್ತಾರೆ. ಪ್ರಧಾನಮಂತ್ರಿ ಮೊದಲಾದವರ ದರ್ಶನ ಮಾಡುವುದಕ್ಕಾಗಿ ಎಷ್ಟೊಂದು ಸಾಲು ನಿಲ್ಲುತ್ತದೆ. ಇಲ್ಲಿ ಮಕ್ಕಳ ಜೊತೆ ತಂದೆಯೂ ಎಷ್ಟು ಗುಪ್ತವಾಗಿ ಕುಳಿತಿದ್ದಾರೆ. ಇಲ್ಲಿ ಯಾರನ್ನು ನೋಡುತ್ತಾರೆ? ಇವರು ವಜ್ರ ವ್ಯಾಪಾರಿಯಾಗಿದ್ದರು ಎಂದು ಇವರ ಬಗ್ಗೆ ತಿಳಿದುಕೊಂಡಿದ್ದಾರೆ. ಬ್ರಹ್ಮಾರವರ ಮೂಲಕ ಮನುಷ್ಯ ಸೃಷ್ಟಿಯನ್ನು ಹೇಗೆ ರಚಿಸಿದರೆಂದು ಶಾಸ್ತ್ರಗಳಲ್ಲಿಯೂ ಇದೆ. ತಂದೆಯು ತಿಳಿಸುತ್ತಾರೆ – ನಾನು ಇವರಲ್ಲಿ ಪ್ರವೇಶ ಮಾಡಿ ರಚಿಸುತ್ತೇನೆ. ಇದೂ ಸಹ ಬರವಣಿಗೆಯಿದೆ ಆದರೆ ಕಲ್ಲು ಬುದ್ಧಿಯವರಾಗಿರುವ ಕಾರಣ ತಿಳಿದುಕೊಳ್ಳುವುದಿಲ್ಲ. ತಂದೆಯು ಬಂದು ಮಕ್ಕಳನ್ನು ಪತಿತರಿಂದ ಪಾವನರನ್ನಾಗಿ ಮಾಡಿ ವರ್ಗಾವಣೆ ಮಾಡುತ್ತಾರೆ ಬಾಕಿ ಯಾವುದೇ ಹೊಸ ರಚನೆಯನ್ನು ರಚಿಸುವುದಿಲ್ಲ. ಇದು ಪತಿತರನ್ನು ಪಾವನರನ್ನಾಗಿ ಮಾಡುವ ಯುಕ್ತಿಯಾಗಿದೆ. ವಿರಾಟ ರೂಪದ ಚಿತ್ರವು ಅವಶ್ಯವಾಗಿ ಇರಬೇಕು. ಚಿತ್ರವು ದೊಡ್ಡದಾಗಿದ್ದರೆ ತಿಳಿಸುವುದರಲ್ಲಿಯೂ ಸಹಜವಾಗುವುದು. ಕಲ್ಲು ಬುದ್ಧಿಯವರಿಂದ ಪಾರಸ ಬುದ್ಧಿಯವರನ್ನಾಗಿ ಮಾಡುವುದು ಸಹಜ ಮಾತೇನಲ್ಲ. ಕೆಲವರಂತೂ ತವೆಯಂತೆ ನೋಡಿ ಹೊರಟು ಹೋಗುತ್ತಾರೆ. ಪ್ರಜೆಗಳಾಗುವುದಿದ್ದರೆ ಅವರ ಬುದ್ಧಿಯಲ್ಲಿ ಅಲ್ಪಸ್ವಲ್ಪವಾದರೂ ಕುಳಿತುಕೊಳ್ಳುವುದು. ನಾವೆ ಬ್ರಾಹ್ಮಣರು, ಬ್ರಾಹ್ಮಣರಿಂದ ದೇವತೆಗಳು. ಇಲ್ಲಿ ಹಮ್ ಸೋ ಸೋ ಹಮ್ನ ಅರ್ಥವನ್ನು ತಂದೆಯು ಎಷ್ಟು ಚೆನ್ನಾಗಿ ತಿಳಿಸಿದ್ದಾರೆ. ಸನ್ಯಾಸಿಗಳು ಆತ್ಮವೇ ಪರಮಾತ್ಮನೆಂದು ಹೇಳುತ್ತಾರೆ. ಇಲ್ಲಿ ನೀವು ತಿಳಿದುಕೊಂಡಿದ್ದೀರಿ, ನಾವು ಆತ್ಮರಾಗಿದ್ದೇವೆ, ನಾವಾತ್ಮರು ಮೊದಲು ಬ್ರಾಹ್ಮಣರು ನಂತರ ದೇವತೆಗಳು ಮತ್ತೆ ನಾವೇ ಕ್ಷತ್ರಿಯರು…. ಆಗುತ್ತೇವೆ. ನಾವು ಎಷ್ಟೊಂದು ವರ್ಣಗಳಲ್ಲಿ ಬರುತ್ತೇವೆ, 84 ಜನ್ಮಗಳ ಚಕ್ರವನ್ನು ಸುತ್ತುತ್ತೇವೆ ಬಾಕಿ ಯಾರು ಕೊನೆಯಲ್ಲಿ ಬರುತ್ತಾರೆಯೋ ಅವರದು ಎಷ್ಟು ಜನ್ಮಗಳಿರಬಹುದು ಎಂಬ ಲೆಕ್ಕವನ್ನು ನೀವು ತೆಗೆಯಬಹುದು. ತಂದೆಗೆ ಪ್ರಿಯವಾದ ಚಿತ್ರಗಳನ್ನು ಮಡಿಸಬೇಕು. ಇಬ್ಬರು ನಾಲ್ಕು ಮಂದಿ ಒಳ್ಳೆಯ ಮಕ್ಕಳು ಚಿತ್ರಗಳನ್ನು ಮಾಡಿಸುವುದರಲ್ಲಿ ಸಹಯೋಗ ನೀಡಬೇಕು. ತಂದೆಯು ಖರ್ಚು ಮಾಡುವುದಕ್ಕಾಗಿ ತಯಾರಿದ್ದಾರೆ ಮತ್ತೆ ತಂದೆಯು ತಾವಾಗಿಯೇ ಹುಂಡಿಯನ್ನು ತುಂಬಿಸುವರು ಆದ್ದರಿಂದ ತಂದೆಯು ಹೇಳುತ್ತಾರೆ- ಮುಖ್ಯ ಚಿತ್ರಗಳನ್ನು ಟ್ರಾನ್ಸ್ಲೈಟ್ನಿಂದ ಮಾಡಿಸಬೇಕು. ಮನುಷ್ಯರು ನೋಡಿ ಖುಷಿ ಪಡುತ್ತಾರೆ, ಇಡೀ ಪ್ರದರ್ಶನಿಯು ಈ ರೀತಿಯಾಗಬೇಕು ಆದರೆ ಮಕ್ಕಳನ್ನು ನಿಲ್ಲಿಸುವುದಕ್ಕಾಗಿ ತಂದೆಯೂ ಪರಿಶ್ರಮ ಪಡಬೇಕಾಗುತ್ತದೆ.

ತಂದೆಯ ನೆನಪು ಮುಖ್ಯವಾಗಿದೆ, ನೆನಪಿನಿಂದಲೇ ನೀವು ಪತಿತರಿಂದ ಪಾವನ ಸೃಷ್ಟಿಯ ಮಾಲೀಕರಾಗಿ ಬಿಡುತ್ತೀರಿ ಮತ್ತ್ಯಾವುದೇ ಉಪಾಯವಿಲ್ಲ. ನಡೆಯುತ್ತಾ-ತಿರುಗಾಡುತ್ತಾ ತಂದೆಯನ್ನು ನೆನಪು ಮಾಡಿರಿ, ಚಕ್ರವನ್ನು ನೆನಪು ಮಾಡಬೇಕು. ನಿಮ್ಮ ಸ್ವಭಾವವು ಬಹಳ ಘನತೆಯಿಂದ ಕೂಡಿರಲಿ. ನಡೆಯುತ್ತಾ-ನಡೆಯುತ್ತಾ ಕೆಲವರನ್ನು ಲೋಭವು, ಕೆಲವರನ್ನು ಮೋಹವು ಹಿಡಿದುಕೊಳ್ಳುತ್ತದೆ. ಇನ್ನೂ ಕೆಲವರು ತಮಗೆ ಪ್ರಿಯವಾದ ವಸ್ತುಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅದು ಸಿಗದಿದ್ದರೆ ರೋಗಿಯಾಗಿ ಬಿಡುತ್ತಾರೆ. ಆದ್ದರಿಂದ ಯಾವುದೇ ಹವ್ಯಾಸಾವನ್ನು ಇಟ್ಟುಕೊಳ್ಳಬಾರದು. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ತಮ್ಮ ಕಲ್ಯಾಣ ಮಾಡಿಕೊಳ್ಳುವುದಕ್ಕಾಗಿ ತಂದೆಯ ಆಜ್ಞೆಯನ್ನು ಪಾಲಿಸಬೇಕಾಗಿದೆ. ಬಾಪ್ದಾದಾರವರಿಗೆ ಎಂದೂ ಉಲ್ಲಂಘನೆ ಮಾಡಬಾರದು. ಯಾವುದೇ ಲೋಭ, ಮೋಹದ ಹವ್ಯಾಸವನ್ನು ಇಟ್ಟುಕೊಳ್ಳಬಾರದು.

2. ತಮ್ಮ ಸ್ವಭಾವವನ್ನು ಬಹಳ ರಾಯಲ್ ಮಾಡಿಕೊಳ್ಳಬೇಕಾಗಿದೆ. ಬೆಳಗ್ಗೆ-ಬೆಳಗ್ಗೆ ಅಮೃತವೇಳೆ ಎದ್ದು ತಂದೆಯನ್ನು ನೆನಪು ಮಾಡುವ ಅಭ್ಯಾಸ ಮಾಡಬೇಕಾಗಿದೆ.

ವರದಾನ:-

ತಮ್ಮ ಸತ್ಯ ಸ್ಥಾನದಲ್ಲಿ ಸ್ಥಿತರಾಗುವುದೇ ನೆನಪಿನ ಯಾತ್ರೆಯಾಗಿದೆ, ಯಾರಾಗಿದ್ದೇನೆ ಹೇಗಿದ್ದೇನೆಯೋ ಅದರಲ್ಲಿ ಸ್ಥಿತರಾಗಿರಬೇಕು – ಇದೇ ಸತ್ಯ ಸ್ವರೂಪದ ನಿಶ್ಚಯ ಹಾಗೂ ಅನೇಕ ಬಾರಿಯ ವಿಜಯದ ಸ್ಮೃತಿಯಿಂದ ಸದಾ ನಶೆಯ ಸ್ಥಿತಿಯ ಸಾಗರನಲ್ಲಿ ತೇಲಾಡುತ್ತಿರುತ್ತೀರಿ. ಯಾವಾಗ ಸುಖದಾತನ ಮಕ್ಕಳಾಗಿದ್ದೀರಿ ಅಂದಮೇಲೆ ದುಃಖದ ಪ್ರಕಂಪನಗಳು ಹೇಗೆ ಬರಲು ಸಾಧ್ಯವಾಗುವುದು! ಸರ್ವಶಕ್ತಿವಂತನ ಮಕ್ಕಳು ಶಕ್ತಿಹೀನರಾಗಲು ಹೇಗೆ ಸಾಧ್ಯ! ಇದೇ ಸ್ಥಾನದ ಅನುಭವಗಳಲ್ಲಿ ಇರುತ್ತೀರೆಂದರೆ ತಮ್ಮ ಮೂರ್ತಿಯಿಂದ ತಂದೆ ಅಥವಾ ಶಿಕ್ಷಕನ ಚಹರೆಯು ಸ್ವತಹವಾಗಿಯೇ ಪ್ರತ್ಯಕ್ಷವಾಗುವುದು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top