28 November 2021 KANNADA Murli Today | Brahma Kumaris

Read and Listen today’s Gyan Murli in Kannada

November 27, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಸ್ವಮಾನದಿಂದಲೇ ಸನ್ಮಾನದ ಪ್ರಾಪ್ತಿ

♫ ಕೇಳು ಇಂದಿನ ಮುರ್ಲಿ (audio)➤

ಇಂದು ಬಾಪ್ದಾದಾ ನಾಲ್ಕಾರು ಕಡೆಯ ಸ್ವಮಾನಧಾರಿ ಮಕ್ಕಳನ್ನು ನೋಡುತ್ತಿದ್ದಾರೆ. ಸ್ವಮಾನಧಾರಿ ಮಕ್ಕಳಿಗೇ ಇಡೀ ದಿನ ಸನ್ಮಾನವಾಗುತ್ತದೆ. ಒಂದು ಜನ್ಮ ಸ್ವಮಾನಧಾರಿಗಳು, ಇಡೀ ಕಲ್ಪ ಸನ್ಮಾನಧಾರಿಗಳಾಗುವಿರಿ. ತಮ್ಮ ರಾಜ್ಯದಲ್ಲಿಯೂ ರಾಜ್ಯಾಧಿಕಾರಿಗಳಾಗುವ ಕಾರಣ ಪ್ರಜೆಗಳ ಮೂಲಕ ಸನ್ಮಾನವು ಪ್ರಾಪ್ತಿಯಾಗುತ್ತದೆ ಮತ್ತು ಅರ್ಧಕಲ್ಪ ಭಕ್ತರ ಮೂಲಕ ಸನ್ಮಾನ ಪ್ರಾಪ್ತಿ ಮಾಡಿಕೊಳ್ಳುತ್ತೀರಿ. ಈಗ ತಮ್ಮ ಅಂತಿಮ ಜನ್ಮದಲ್ಲಿಯೇ ಭಕ್ತರ ಮೂಲಕ ದೇವಾತ್ಮ ಅಥವಾ ಶಕ್ತಿಯ ರೂಪದ ಸನ್ಮಾನವನ್ನು ನೋಡುತ್ತಿದ್ದೀರಿ ಮತ್ತು ಕೇಳುತ್ತಿದ್ದೀರಿ. ಎಷ್ಟು ಪ್ರೇಮದಿಂದ ಈಗಲೂ ಸನ್ಮಾನ ನೀಡುತ್ತಿದ್ದಾರೆ! ಇಷ್ಟು ಶ್ರೇಷ್ಠ ಭಾಗ್ಯವನ್ನು ಹೇಗೆ ಪ್ರಾಪ್ತಿ ಮಾಡಿಕೊಂಡಿರಿ! ಮುಖ್ಯವಾಗಿ ಕೇವಲ ಒಂದು ಮಾತಿನ ತ್ಯಾಗದ ಕಾರಣ ಈ ಭಾಗ್ಯವಿದೆ, ಯಾವುದರ ತ್ಯಾಗ ಮಾಡಿದಿರಿ? ದೇಹಾಭಿಮಾನದ ತ್ಯಾಗ ಮಾಡಿದಿರಿ ಏಕೆಂದರೆ ದೇಹಾಭಿಮಾನದ ತ್ಯಾಗವಿಲ್ಲವೆಂದರೆ ಸ್ವಮಾನದಲ್ಲಿ ಸ್ಥಿತರಾಗಲು ಸಾಧ್ಯವೇ ಇಲ್ಲ. ಈ ತ್ಯಾಗಕ್ಕೆ ಪ್ರತಿಫಲವಾಗಿ ಭಾಗ್ಯವಿದಾತ ಭಗವಂತನು ಈ ಭಾಗ್ಯದ ವರದಾನ ನೀಡಿದ್ದಾರೆ. ಎರಡನೇ ಮಾತೇನೆಂದರೆ – ಸ್ವಯಂ ತಂದೆಯು ತಾವು ಮಕ್ಕಳಿಗೆ ಸ್ವಮಾನ ಕೊಟ್ಟಿದ್ದಾರೆ. ತಂದೆಯು ಮಕ್ಕಳನ್ನು ಚರಣಗಳ ದಾಸ ಹಾಗೂ ದಾಸಿಯಾಗುವುದರಿಂದ ಬಿಡಿಸಿ ತನ್ನ ತಲೆಯ ಕಿರೀಟವನ್ನಾಗಿ ಮಾಡಿಕೊಂಡರು. ಎಷ್ಟು ದೊಡ್ಡ ಸ್ವಮಾನವನ್ನು ಕೊಟ್ಟರು! ಇಂತಹ ಸ್ವಮಾನವನ್ನು ಪ್ರಾಪ್ತಿ ಮಾಡಿಕೊಳ್ಳುವ ಮಕ್ಕಳ ಪ್ರತಿ ತಂದೆಯೂ ಸನ್ಮಾನ ಇಡುತ್ತಾರೆ. ತಂದೆಯು ಮಕ್ಕಳನ್ನು ಸದಾ ತನಗಿಂತಲೂ ಮುಂದಿಡುತ್ತಾರೆ, ಸದಾ ಮಕ್ಕಳ ಗುಣಗಾನ ಮಾಡುತ್ತಾರೆ. ಪ್ರತೀದಿನ ಬಹಳ ಪ್ರೀತಿಯಿಂದ ನೆನಪು, ಪ್ರೀತಿಯನ್ನು ಕೊಡಲು ಪರಮಧಾಮದಿಂದ ಸಾಕಾರವತನಕ್ಕೆ ಬರುತ್ತಾರೆ. ಅಲ್ಲಿಂದಲೇ ಕಳುಹಿಸುವುದಿಲ್ಲ ಆದರೆ ಇಲ್ಲಿ ಬಂದು ಕೊಡುತ್ತಾರೆ. ನಿತ್ಯವೂ ನೆನಪು ಪ್ರೀತಿ ಸಿಗುತ್ತಿದೆಯಲ್ಲವೆ, ಇಷ್ಟು ಶ್ರೇಷ್ಠ ಸನ್ಮಾನವನ್ನು ಮತ್ತ್ಯಾರೂ ಕೊಡಲು ಸಾಧ್ಯವಿಲ್ಲ. ಸ್ವಯಂ ತಂದೆಯೇ ಸನ್ಮಾನ ನೀಡಿದ್ದಾರೆ ಆದ್ದರಿಂದ ಅವಿನಾಶಿ ಸನ್ಮಾನಕ್ಕೆ ಅಧಿಕಾರಿಗಳಾಗಿದ್ದೀರಿ. ಇಂತಹ ಶ್ರೇಷ್ಠತೆಯ ಅನುಭವ ಮಾಡುತ್ತೀರಾ? ಸ್ವಮಾನ ಮತ್ತು ಸನ್ಮಾನ – ಎರಡಕ್ಕೂ ಪರಸ್ಪರ ಸಂಬಂಧವಿದೆ.

ಸ್ವಮಾನಧಾರಿಗಳು ತಮಗೆ ಪ್ರಾಪ್ತಿಯಾಗಿರುವ ಸ್ವಮಾನದಲ್ಲಿರುತ್ತಾ ಸ್ವಮಾನದ ಸನ್ಮಾನದಲ್ಲಿಯೂ ಇರುತ್ತಾರೆ ಮತ್ತು ಅನ್ಯರನ್ನೂ ಸನ್ಮಾನದಿಂದ ನೋಡುತ್ತಾರೆ, ಮಾತನಾಡುತ್ತಾರೆ ಹಾಗೂ ಸಂಪರ್ಕದಲ್ಲಿ ಬರುತ್ತಾರೆ. ಸ್ವ-ಸನ್ಮಾನದ ಅರ್ಥವೇ ಆಗಿದೆ – ಸ್ವಯಂಗೆ ಸನ್ಮಾನ ಕೊಡುವುದು. ಹೇಗೆ ತಂದೆಯು ವಿಶ್ವದ ಸರ್ವ ಆತ್ಮರ ಮೂಲಕ ಸನ್ಮಾನವನ್ನು ಪ್ರಾಪ್ತಿ ಮಾಡಿಕೊಳ್ಳುವವರಾಗಿದ್ದಾರೆ, ಪ್ರತಿಯೊಬ್ಬರೂ ಸನ್ಮಾನ ಕೊಡುತ್ತಾರೆ ಆದರೆ ಎಷ್ಟು ತಂದೆಗೆ ಸನ್ಮಾನ ಸಿಗುವುದೋ ಅಷ್ಟೇ ಎಲ್ಲಾ ಮಕ್ಕಳಿಗೂ ಸನ್ಮಾನ ಕೊಡುತ್ತಾರೆ. ಅವರು ಕೊಡುವುದಿಲ್ಲವೆಂದರೆ ಅವರು ದೇವತೆಗಳಾಗುವುದಿಲ್ಲ. ಅನೇಕ ಜನ್ಮಗಳು ದೇವತೆಗಳಾಗುತ್ತೀರಿ ಮತ್ತು ಅನೇಕ ಜನ್ಮಗಳು ದೇವತಾ ರೂಪದ ಪೂಜೆಯು ನಡೆಯುತ್ತದೆ. ಒಂದು ಜನ್ಮ ಬ್ರಾಹ್ಮಣರಾಗುತ್ತೀರಿ ಆದರೆ ಅನೇಕ ಜನ್ಮಗಳು ದೇವತಾ ರೂಪದಲ್ಲಿ ರಾಜ್ಯ ಮಾಡುತ್ತೀರಿ ಹಾಗೂ ಪೂಜ್ಯರಾಗುತ್ತೀರಿ. ದೇವತೆ ಅರ್ಥಾತ್ ಕೊಡುವವರು. ಒಂದುವೇಳೆ ಈ ಜನ್ಮದಲ್ಲಿ ಈ ಸನ್ಮಾನ ಕೊಡಲಿಲ್ಲವೆಂದರೆ ಹೇಗೆ ದೇವತೆಗಳಾಗುವಿರಿ, ಅನೇಕ ಜನ್ಮಗಳಲ್ಲಿ ಸನ್ಮಾನವನ್ನು ಹೇಗೆ ಪ್ರಾಪ್ತಿ ಮಾಡಿಕೊಳ್ಳುವಿರಿ? ಫಾಲೋ ಫಾದರ್, ಸಾಕಾರ ಸ್ವರೂಪದಲ್ಲಿ ಬ್ರಹ್ಮಾ ತಂದೆಯನ್ನು ನೋಡಿದಿರಿ, ಸದಾ ಸ್ವಯಂನ್ನು ವಿಶ್ವ ಸೇವಾಧಾರಿ ಎಂದು ಕರೆಸಿಕೊಂಡರು, ಮಕ್ಕಳ ಸೇವಕನೆಂದು ಕರೆಸಿಕೊಂಡರು ಮತ್ತು ಮಕ್ಕಳನ್ನು ಮಾಲೀಕರನ್ನಾಗಿ ಮಾಡಿದರು. ಸದಾ ಮಾಲೀಕನಿಗೆ ವಂದನೆ ಮಾಡಿದರು. ಸದಾ ಚಿಕ್ಕಮಕ್ಕಳಿಗೂ ಸಹ ಸನ್ಮಾನದ ಸ್ನೇಹ ಕೊಟ್ಟರು. ಭವಿಷ್ಯದಲ್ಲಿ ಆಗಲಿರುವ ವಿಶ್ವ ಕಲ್ಯಾಣಕಾರಿಗಳೆಂಬ ರೂಪದಿಂದ ನೋಡಿದರು, ಕುಮಾರ-ಕುಮಾರಿಯರನ್ನು ಯುವ ಸ್ಥಿತಿಯಲ್ಲಿ ಇರುವವರನ್ನು ಸದಾ ವಿಶ್ವದ ಪ್ರಸಿದ್ಧ ಮಹಾನ್ ಆತ್ಮರಿಗೆ ಛಾಲೆಂಜ್ ಮಾಡುವವರು, ಅಸಂಭವವನ್ನು ಸಂಭವ ಮಾಡುವವರು, ಮಹಾತ್ಮರ ತಲೆಯನ್ನೂ ಬಾಗಿಸುವವರು ಎಂಬ ಪವಿತ್ರ ಆತ್ಮರ ಸನ್ಮಾನದಿಂದ ನೋಡಿದರು. ಸದಾ ತನಗಿಂತಲೂ ಕಮಾಲ್ ಮಾಡುವ ಮಹಾನ್ ಆತ್ಮರೆಂದು ತಿಳಿದು ಸನ್ಮಾನ ನೀಡಿದರಲ್ಲವೆ! ಹಾಗೆಯೇ ವೃದ್ಧರನ್ನೂ ಸಹ ಸದಾ ಅನುಭವಿ ಆತ್ಮರು, ಜೊತೆಗಾರರ ಸನ್ಮಾನದಿಂದ ನೋಡಿದರೆ ಬಂಧನದಲ್ಲಿ ಇರುವವರನ್ನು ನಿರಂತರ ನೆನಪಿನಲ್ಲಿ ನಂಬರ್ವನ್ ಆಗುವ ಸನ್ಮಾನದಿಂದ ನೋಡಿದರು ಆದ್ದರಿಂದ ನಂಬರ್ವನ್ ಅವಿನಾಶಿ ಸನ್ಮಾನಕ್ಕೆ ಅಧಿಕಾರಿಯಾದರು. ರಾಜ್ಯ ಸನ್ಮಾನದಲ್ಲಿಯೂ ನಂಬರ್ವನ್ ವಿಶ್ವ ಮಹಾರಾಜನ್ ಮತ್ತು ಪೂಜ್ಯ ರೂಪದಲ್ಲಿಯೂ ತಂದೆಯ ಪೂಜೆಯ ನಂತರ ಮೊದಲ ಪೂಜ್ಯರು ಲಕ್ಷ್ಮೀ-ನಾರಾಯಣರೇ ಆಗುತ್ತಾರೆ ಅಂದಾಗ ರಾಜ್ಯ ಸನ್ಮಾನ ಮತ್ತು ಪೂಜ್ಯ ಸನ್ಮಾನ ಎರಡರಲ್ಲಿಯೂ ನಂಬರ್ವನ್ ಆಗಿ ಬಿಟ್ಟರು ಏಕೆಂದರೆ ಸರ್ವರಿಗೆ ಸ್ವಮಾನ-ಸನ್ಮಾನ ನೀಡಿದರು. ಸನ್ಮಾನ ಕೊಟ್ಟರೆ ನಾನು ಕೊಡುವೆನು ಎಂದು ಯೋಚಿಸಲಿಲ್ಲ, ಸನ್ಮಾನ ಕೊಡುವವರು ನಿಂಧಕರನ್ನೂ ತಮ್ಮ ಮಿತ್ರರೆಂದು ತಿಳಿದುಕೊಳ್ಳುತ್ತಾರೆ. ಕೇವಲ ಸನ್ಮಾನ ಕೊಡುವವರನ್ನು ತನ್ನವರೆಂದು ತಿಳಿದುಕೊಳ್ಳುವುದಿಲ್ಲ, ನಿಂದನೆ ಮಾಡುವವರನ್ನೂ ಸಹ ತನ್ನವರೆಂದು ತಿಳಿದುಕೊಳ್ಳುತ್ತಾರೆ ಏಕೆಂದರೆ ಇಡೀ ಪ್ರಪಂಚವೇ ತನ್ನ ಪರಿವಾರವಾಗಿದೆ. ಸರ್ವ ಆತ್ಮರಿಗೆ ಬುನಾದಿಯು ತಾವು ಬ್ರಾಹ್ಮಣರಾಗಿದ್ದೀರಿ. ಎಲ್ಲಾ ಶಾಖೆಗಳು ಅರ್ಥಾತ್ ಭಿನ್ನ-ಭಿನ್ನ ಧರ್ಮದ ಆತ್ಮರೂ ಸಹ ಮೂಲ ಬೇರಿನಿಂದಲೇ ಬಂದಿದ್ದಾರೆ ಅಂದಾಗ ಎಲ್ಲರೂ ತಮ್ಮವರಾದರಲ್ಲವೆ. ಇಂತಹ ಸ್ವಮಾನಧಾರಿಗಳು ಸದಾ ತಮ್ಮನ್ನು ಮಾ|| ರಚಯಿತನೆಂದು ತಿಳಿದು ಸರ್ವರ ಪ್ರತಿ ಸನ್ಮಾನದಾತರಾಗುತ್ತಾರೆ. ಸದಾ ತಮ್ಮನ್ನು ಆದಿ ದೇವ ಬ್ರಹ್ಮನ ಆದಿ ರತ್ನಗಳೇ ಆದಿ ಪಾತ್ರಧಾರಿ ಅತ್ಮರೆಂದು ತಿಳಿಯುತ್ತೀರಾ? ಇಷ್ಟೊಂದು ನಶೆಯಿದೆಯೇ? ಎಲ್ಲರೂ ಕೇಳಿಸಿಕೊಂಡಿರಾ? ಮಕ್ಕಳಿಗೇನು ಸನ್ಮಾನವಿದೆ, ವೃದ್ಧರ ಸನ್ಮಾನವೇನಾಗಿದೆ, ಯುವಕರಿಗೇನಿದೆ? ಆದಿಪಿತ ಬ್ರಹ್ಮನು ನಮ್ಮನ್ನು ಇಷ್ಟು ಸನ್ಮಾನದಿಂದ ನೋಡಿದರು, ಎಷ್ಟೊಂದು ನಶೆಯಿರಬೇಕು! ಸದಾ ಇದನ್ನು ಸ್ಮೃತಿ ಇಟ್ಟುಕೊಳ್ಳಿ- ಆದಿಆತ್ಮನು ಯಾವ ಶ್ರೇಷ್ಠ ದೃಷ್ಠಿಯಿಂದ ನೋಡಿದರೆ ಅದೇರೀತಿ ಶ್ರೇಷ್ಠ ಸ್ಥಿತಿಯ ಸೃಷ್ಟಿಯಲ್ಲಿರುತ್ತೇವೆ. ಹೀಗೆ ತಮ್ಮೊಂದಿಗೆ ಪ್ರತಿಜ್ಞೆ ಮಾಡಿ. ಪ್ರತಿಜ್ಞೆಯಂತೂ ಮಾಡುತ್ತಿರುತ್ತೀರಲ್ಲವೆ? ಮಾತಿನಿಂದಲೂ ಪ್ರತಿಜ್ಞೆ ಮಾಡುತ್ತೀರಿ, ಮನಸ್ಸಿನಿಂದಲೂ ಮಾಡುತ್ತೀರಿ ಮತ್ತು ಬರೆದೂ ಮಾಡುತ್ತೀರಿ ಆದರೂ ಮರೆತು ಹೋಗುತ್ತೀರಿ. ಆದ್ದರಿಂದ ಪ್ರತಿಜ್ಞೆಯ ಲಾಭವನ್ನು ಪಡೆಯುವುದಿಲ್ಲ. ನೆನಪಿಟ್ಟುಕೊಂಡರೂ ಸಹ ಲಾಭವನ್ನು ತೆಗೆದುಕೊಳ್ಳುವರು. ಎಲ್ಲರೂ ತಮ್ಮನ್ನು ಪರಿಶೀಲನೆ ಮಾಡಿಕೊಳ್ಳಿ – ಎಷ್ಟು ಬಾರಿ ಪ್ರತಿಜ್ಞೆ ಮಾಡಿದ್ದೇವೆ ಮತ್ತು ಎಷ್ಟು ಬಾರಿ ನಿಭಾಯಿಸಿದ್ದೇವೆ? ನಿಭಾಯಿಸುವುದು ಬರುತ್ತದೆಯೇ ಅಥವಾ ಕೇವಲ ಪ್ರತಿಜ್ಞೆ ಮಾಡುವುದು ಬರುತ್ತದೆಯೇ? ಅಥವಾ ಬದಲಾಗುತ್ತಾ ಇರುತ್ತೀರಾ? ಕೆಲವೊಮ್ಮೆ ಪ್ರತಿಜ್ಞೆ ಮಾಡುವವರು, ಕೆಲವೊಮ್ಮೆ ನಿಭಾಯಿಸುವವರಾಗಿದ್ದೀರಾ?

ಟೀಚರ್ಸ್ ಏನು ತಿಳಿದುಕೊಳ್ಳುತ್ತೀರಿ? ನಿಭಾಯಿಸುವವರ ಪಟ್ಟಿಯಲ್ಲಿದ್ದೀರಲ್ಲವೆ. ಶಿಕ್ಷಕಿಯರನ್ನು ಬಾಪ್ದಾದಾ ಸದಾ ಸಹ ಶಿಕ್ಷಕರೆಂದು ಹೇಳುತ್ತಾರೆ. ಅಂದಮೇಲೆ ಜೊತೆಗಾರರ ವಿಶೇಷತೆಯೇನಿರುತ್ತದೆ? ಜೊತೆಗಾರರು ಸಮಾನರಾಗಿರುತ್ತಾರೆ. ತಂದೆಯು ಎಂದಾದರೂ ಬದಲಾಗುತ್ತಾರೆಯೇ? ಶಿಕ್ಷಕಿಯರೂ ಸಹ ಪ್ರತಿಜ್ಞೆ ಮತ್ತು ಅದರ ಲಾಭ ಎರಡರ ಸಮತೋಲನೆಯನ್ನು ಇಟ್ಟುಕೊಳ್ಳುವವರಾಗಿದ್ದಾರೆ. ಪ್ರತಿಜ್ಞೆ ಹೆಚ್ಚು ಲಾಭ ಕಡಿಮೆ – ಈ ಬ್ಯಾಲೆನ್ಸ್ ಇರುವುದಿಲ್ಲ. ಯಾರು ಎರಡನ್ನೂ ಬ್ಯಾಲೆನ್ಸ್ ಇಟ್ಟುಕೊಳ್ಳುವರೋ ಅವರಿಗೆ ವರದಾತ ತಂದೆಯ ಮೂಲಕ ಈ ವರದಾನ ಅಥವಾ ಬ್ಲೆಸ್ಸಿಂಗ್ ಸಿಗುತ್ತದೆ. ಅವರು ಸದಾ ಧೃಡ ಸಂಕಲ್ಪದಿಂದ ಕರ್ಮದಲ್ಲಿ ಸಫಲತಾ ಮೂರ್ತಿಗಳಾಗುತ್ತಾರೆ. ಸಹ ಶಿಕ್ಷಕರದು ಇದೇ ವಿಶೇಷ ಕರ್ಮವಾಗಿದೆ – ಸಂಕಲ್ಪ ಮತ್ತು ಕರ್ಮ ಸಮಾನವಾಗಿರಲಿ. ಸಂಕಲ್ಪ ಶ್ರೇಷ್ಠ ಮತ್ತು ಕರ್ಮ ಸಾಧಾರಣವಾದರೆ ಇದಕ್ಕೆ ಸಮಾನತೆಯೆಂದು ಹೇಳುವುದಿಲ್ಲ. ಆದ್ದರಿಂದ ಸದಾ ಟೀಚರ್ಸ್ ತಮ್ಮನ್ನು “ಸಹ ಶಿಕ್ಷಕರು” ಅರ್ಥಾತ್ “ತಂದೆಯ ಸಮಾನ ಶಿಕ್ಷಕರು” ಎಂದು ತಿಳಿದು ಈ ಸ್ಮೃತಿಯಲ್ಲಿ ಸಮರ್ಥರಾಗಿ ನಡೆಯಿರಿ. ಬಾಪ್ದಾದಾರವರಿಗೆ ಟೀಚರ್ಸ್ನ ಧೈರ್ಯವನ್ನು ನೋಡಿ ಖುಷಿಯಾಗುತ್ತದೆ. ಧೈರ್ಯವನ್ನಿಟ್ಟು ಸೇವೆಗೆ ನಿಮಿತ್ತರಾಗಿ ಬಿಟ್ಟಿದ್ದೀರಲ್ಲವೆ ಆದರೆ ಈಗ ಸದಾ ಈ ಸ್ಲೋಗನ್ ಸದಾ ನೆನಪಿಟ್ಟುಕೊಳ್ಳಿ – “ಧೈರ್ಯಶಾಲಿ ಶಿಕ್ಷಕಿಯರು ತಂದೆಗೆ ಸಮಾನ” ಇದನ್ನೆಂದೂ ಮರೆಯಬೇಡಿ. ಆಗ ಸ್ವತಹವಾಗಿ ಸಮಾನರಾಗುವ ಲಕ್ಷ್ಯವು “ಬಾಪ್ದಾದಾ ತಮ್ಮ ಸನ್ಮುಖದಲ್ಲಿರುವರು ಅರ್ಥಾತ್ ಜೊತೆಯಿರುವರು” ಒಳ್ಳೆಯದು.

ನಾಲ್ಕಾರು ಕಡೆಯ ಸ್ವಮಾನಧಾರಿ ಸೋ ಸನ್ಮಾನಧಾರಿ ಮಕ್ಕಳಿಗೆ, ಬಾಪ್ದಾದಾ ನಯನಗಳ ಸನ್ಮುಖದಲ್ಲಿ ನೋಡುತ್ತಾ ಸನ್ಮಾನದ ದೃಷ್ಟಿಯಿಂದ ನೆನಪು, ಪ್ರೀತಿಯನ್ನು ಕೊಡುತ್ತಿದ್ದೇವೆ. ಸದಾ ರಾಜ್ಯ ಸನ್ಮಾನ ಮತ್ತು ಪೂಜ್ಯ ಸನ್ಮಾನದ ಸಮಾನ ಜೊತೆಗಾರ ಮಕ್ಕಳಿಗೆ ನೆನಪು, ಪ್ರೀತಿ ಹಾಗೂ ನಮಸ್ತೆ.

ಬಿಹಾರ್ ಗ್ರೂಪ್ :

ಎಲ್ಲರೂ ತಮ್ಮನ್ನು ಸ್ವರಾಜ್ಯ ಅಧಿಕಾರಿ ಎಂದು ತಿಳಿಯುವಿರಾ? ಸ್ವಯಂನ ರಾಜ್ಯವು ಸಿಕ್ಕಿದೆಯೇ ಅಥವಾ ಇನ್ನೂ ಸಿಗಬೇಕಿದೆಯೇ? ಸ್ವರಾಜ್ಯದ ಪರಿಭಾಷೆ ಆಗಿದೆ – ಯಾವಾಗ ಬೇಕು, ಹೇಗೆ ಬೇಕೋ ಹಾಗೆಯೇ ಕರ್ಮೇಂದ್ರಿಯಗಳ ಮೂಲಕ ಕರ್ಮ ಮಾಡಿಸಲು ಸಾಧ್ಯವಾಗಬೇಕು. ಕರ್ಮೇಂದ್ರಿಯಜೀತರು ಅರ್ಥಾತ್ ಸ್ವರಾಜ್ಯ ಅಧಿಕಾರಿ ಎಂದು. ಇಂತಹ ಸ್ವರಾಜ್ಯ ಅಧಿಕಾರಿ ಆಗಿರುವಿರಾ ಅಥವಾ ಕೆಲವೊಮ್ಮೆ ತಮ್ಮನ್ನೇ ಕರ್ಮೇಂದ್ರಿಗಳು ನಡೆಸುತ್ತದೆಯೇ? ಕೆಲವೊಮ್ಮೆ ತಮ್ಮನ್ನು ಮನಸ್ಸು ನಡೆಸುತ್ತದೆಯೇ ಅಥವಾ ತಾವು ಮನಸ್ಸನ್ನು ನಡೆಸುವಿರಾ? ಕೆಲವೊಮ್ಮೆ ಮನಸ್ಸು ವ್ಯರ್ಥ ಸಂಕಲ್ಪವನ್ನು ಮಾಡುತ್ತದೆಯೇ ಅಥವಾ ಇಲ್ಲವೇ? ಒಂದುವೇಳೆ ಕೆಲವೊಮ್ಮೆ ಮಾಡುತ್ತದೆ ಎಂದರೆ, ಆ ಸಮಯದಲ್ಲಿ ಸ್ವರಾಜ್ಯ ಅಧಿಕಾರಿ ಎಂದು ಹೇಳುವುದೇ? ಸ್ವರಾಜ್ಯವು ಬಹಳ ದೊಡ್ಡ ಶಕ್ತಿಯಾಗಿದೆ. ರಾಜ್ಯ ಶಕ್ತಿಯನ್ನು ಭಲೆ ಯಾರಾದರೂ ನಿರ್ವಹಣೆ ಮಾಡಬಹುದು, ಹೇಗೆ ನಡೆಸಬೇಕೆಂದು ತಿಳಿಯುವರೋ ಹಾಗೆಯೇ ನಡೆಸಬಹುದು, ಈ ಮನಸ್ಸು-ಬುದ್ಧಿ-ಸಂಸ್ಕಾರವಂತು ಆತ್ಮನ ಶಕ್ತಿಗಳಾಗಿವೆ. ಆತ್ಮವು ಈ ಮೂರರ ಮಾಲೀಕನಾಗಿದೆ. ಒಂದುವೇಳೆ ಕೆಲವೊಮ್ಮೆ ಸಂಸ್ಕಾರವು ತನ್ನ ಕಡೆಗೆ ಸೆಳೆಯುತ್ತದೆಯೆಂದರೆ ಮಾಲೀಕರೆಂದು ಹೇಳಲಾಗುತ್ತದೆಯೇ? ಹಾಗಾದರೆ ಸ್ವರಾಜ್ಯ-ಶಕ್ತಿ ಅರ್ಥಾತ್ ಕರ್ಮೇಂದ್ರಿಯಜೀತರು. ಯಾರು ಹೀಗೆ ಕರ್ಮೇಂದ್ರಿಯಜೀತರಾಗಿದ್ದಾರೆಯೋ ಅವರೇ ವಿಶ್ವದ… ರಾಜ್ಯ ಶಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳಲು ಸಾಧ್ಯವಾಗುವುದು. ಸ್ವರಾಜ್ಯ ಅಧಿಕಾರಿಯೇ ವಿಶ್ವ-ರಾಜ್ಯಾಧಿಕಾರಿ ಆಗುವನು. ಅಂದಮೇಲೆ ತಾವು ಬ್ರಾಹ್ಮಣ ಆತ್ಮರ ಸ್ಲೋಗನ್ ಇದೇ ಆಗಿದೆ- `ಸ್ವರಾಜ್ಯವು ಬ್ರಾಹ್ಮಣ ಜೀವನದ ಜನ್ಮ-ಸಿದ್ಧ ಅಧಿಕಾರವಾಗಿದೆ’. ಸ್ವರಾಜ್ಯ ಅಧಿಕಾರಿಯ ಸ್ಥಿತಿಯು ಸದಾ ಮಾಸ್ಟರ್ ಸರ್ವಶಕ್ತಿವಂತನದಾಗಿರುತ್ತದೆ, ಯಾವುದೇ ಶಕ್ತಿಯ ಕೊರತೆಯಿರುವುದಿಲ್ಲ. ಸ್ವರಾಜ್ಯ ಅಧಿಕಾರಿಯು ಸದಾ ಧರ್ಮ ಅರ್ಥಾತ್ ಧಾರಣಾ ಮೂರ್ತಿಯೂ ಆಗಿರುತ್ತಾನೆ ಮತ್ತು ರಾಜ್ಯ ಅರ್ಥಾತ್ ಶಕ್ತಿಶಾಲಿಯೂ ಆಗಿರುವನು. ಈಗ ರಾಜ್ಯದಲ್ಲಿ ಯಾವುದಾದರೊಂದು ಏರುಪೇರುಗಳಿವೆ ಏಕೆ? ಏಕೆಂದರೆ ಧರ್ಮ ಶಕ್ತಿಯು ಬೇರ್ಪಟ್ಟಿದೆ ಮತ್ತು ಸ್ವರಾಜ್ಯ ಶಕ್ತಿಯು ಬೇರ್ಪಟ್ಟಿದೆ ಆದ್ದರಿಂದ ಅಂಗವಿಕಲನಾಗಿದೆಯಲ್ಲವೆ! ಒಂದು ಶಕ್ತಿಯಿದೆಯಲ್ಲವೆ ಆದ್ದರಿಂದ ಏರುಪೇರುಗಳಿವೆ. ಇದೇರೀತಿ ತಮ್ಮಲ್ಲಿಯೂ ಸಹ ಒಂದುವೇಳೆ ಧರ್ಮ ಮತ್ತು ರಾಜ್ಯ – ಇವೆರಡೂ ಶಕ್ತಿಗಳಿಲ್ಲದಿದ್ದರೆ ವಿಘ್ನಗಳು ಬರುತ್ತವೆ, ಏರುಪೇರುಗಳಲ್ಲಿ ತರುತ್ತದೆ, ಯುದ್ಧ ಮಾಡಬೇಕಾಗುತ್ತದೆ. ಎರಡೂ ಶಕ್ತಿಗಳಿದ್ದರೆ ಸದಾಕಾಲವೂ ನಿಶ್ಚಿಂತ ಚಕ್ರವರ್ತಿಯಾಗಿರುತ್ತೀರಿ, ತಮ್ಮಬಳಿ ಯಾವುದೇ ವಿಘ್ನಗಳು ಬರಲು ಸಾಧ್ಯವಿಲ್ಲ. ಅಂದಮೇಲೆ ಈ ರೀತಿಯಾಗಿ ನಿಶ್ಚಿಂತ ಚಕ್ರವರ್ತಿಯಾಗಿದ್ದೀರಾ? ಅಥವಾ ಸ್ವಲ್ಪ-ಸ್ವಲ್ಪ ಶರೀರದ ಕಡೆ, ಸಂಬಂಧದ ಕಡೆ…. ಚಿಂತೆಯಿರುತ್ತದೆಯೇ? ಪಾಂಡವರಲ್ಲಿ ಸಂಪಾದಿಸುವ ಚಿಂತೆಯಿರುತ್ತದೆ. ಪರಿವಾರವನ್ನು ನಡೆಸಬೇಕೆಂಬ ಚಿಂತೆಯಿರುತ್ತದೆಯೇ ಅಥವಾ ನಿಶ್ಚಿಂತರಾಗಿ ಇರುತ್ತೀರಾ? ನಡೆಸುವವರು ನಡೆಸುತ್ತಿದ್ದಾರೆ, ಮಾಡಿಸುವವರು ಮಾಡಿಸುತ್ತಿದ್ದಾರೆ – ಈ ರೀತಿಯಾಗಿ ನಿಮಿತ್ತವಾಗಿದ್ದು ಮಾಡುವವರೇ ನಿಶ್ಚಿಂತ ಚಕ್ರವರ್ತಿಗಳಾಗುವರು. “ನಾನು ಮಾಡುತ್ತಿದ್ದೇನೆ” ಇಂತಹ ಪರಿವೆಯಲ್ಲಿ ಬರುತ್ತೀರೆಂದರೆ ನಿಶ್ಚಿಂತವಾಗಿರಲು ಸಾಧ್ಯವಿಲ್ಲ. ಆದರೆ `ತಂದೆಯ ಮೂಲಕ ನಿಮಿತ್ತವಾಗಿ ಇರುವೆನು’ ಎಂಬ ಸ್ಮೃತಿಯಲ್ಲಿದ್ದರೆ ನಿಶ್ಚಿಂತತೆ ಅಥವಾ ನಿಶ್ಚಿಂತ ಜೀವನದ ಅನುಭವ ಮಾಡುವಿರಿ, ಯಾವುದೇ ಚಿಂತೆಗಳಿರುವುದಿಲ್ಲ. ನಾಳೆ ಏನಾಗುವುದೋ ಎಂಬ ಚಿಂತೆಯೂ ಇರುವುದಿಲ್ಲ. ಕೆಲವೊಮ್ಮೆಗಾದರೂ ಇಂತಹ ಚಿಂತೆಯಿರುತ್ತದೆಯೇ – ನಾಳೆ ಏನಾಗುವುದೋ, ಹೇಗಾಗುವುದೋ? ಗೊತ್ತಿಲ್ಲ ವಿನಾಶವು ಯಾವಾಗ ಆಗುವುದೋ, ಏನಾಗುವುದೋ? ಮಕ್ಕಳ ಭವಿಷ್ಯವು ಏನಾಗುವುದೋ? ಮೊಮ್ಮಕ್ಕಳದೇನಾಗುವುದೋ ಎಂಬ ಚಿಂತೆಯಿರುತ್ತದೆಯೇ? ನಿಶ್ಚಿಂತ ಚಕ್ರವರ್ತಿಗಳಲ್ಲಿ ಸದಾ ಈ ನಿಶ್ಚಯವಿರುತ್ತದೆ- ಏನಾಗುತ್ತಿದೆಯೋ ಅದು ಒಳ್ಳೆಯದಾಗುತ್ತಿದೆ, ಮತ್ತು ಏನಾಗುವುದೋ ಅದು ಇನ್ನಷ್ಟು ಬಹಳ ಒಳ್ಳೆಯದಾಗಿರುತ್ತದೆ ಏಕೆಂದರೆ ಮಾಡಿಸುವವರು ಸರ್ವ ಶ್ರೇಷ್ಠನಾಗಿದ್ದಾರಲ್ಲವೆ! ಇಂತಹವರಿಗೆ ನಿಶ್ಚಯ ಬುದ್ಧಿ ವಿಜಯಿಗಳೆಂದು ಹೇಳಲಾಗುವುದು. ಈ ರೀತಿ ಆಗಿದ್ದೀರಾ ಅಥವಾ ಚಿಂತಿಸುತ್ತಿದ್ದೀರಾ? ಆಗಲೇಬೇಕಲ್ಲವೆ! ಇಷ್ಟು ಶ್ರೇಷ್ಠ ರಾಜ್ಯವೇ ಸಿಕ್ಕಿದೆ ಅಂದಮೇಲೆ ಚಿಂತಿಸುವ ಮಾತೇನಿದೆ? ಯಾರಾದರೂ ತನ್ನ ಅಧಿಕಾರವನ್ನು ಬಿಡುವರೇ? ಗುಡಿಸಿಲಿನಲ್ಲಿಯೇ ಇರಬಹುದು, ಆ ಸ್ವಲ್ಪ ಆಸ್ತಿಯನ್ನೂ ಸಹ ಬಿಡುವುದಿಲ್ಲ. ಇದಂತು ಎಷ್ಟೊಂದು ಶ್ರೇಷ್ಠವಾದ ಪ್ರಾಪ್ತಿಯಾಗಿದೆ. ಅಂದಮೇಲೆ ಇದು ನನ್ನ ಅಧಿಕಾರವಾಗಿದೆ ಎಂಬ ಸ್ಮೃತಿಯಿಂದ, ಸದಾ ಅಧಿಕಾರಿಯಾಗಿದ್ದು ಹಾರುತ್ತಿರಿ. ಈ ವರದಾನವನ್ನು ಸದಾ ನೆನಪಿಟ್ಟುಕೊಳ್ಳಿರಿ – “ಸ್ವರಾಜ್ಯ ನಮ್ಮ ಜನ್ಮ-ಸಿದ್ಧ ಅಧಿಕಾರವಾಗಿದೆ”. ಪರಿಶ್ರಮ ಪಡುವವರಲ್ಲ, ಅಧಿಕಾರಿಯಾಗಿದ್ದೇವೆ. ಒಳ್ಳೆಯದು! ಬಿಹಾರ್ ಎಂದರೆ ಸದಾ ವಸಂತ ಋತುವಿನಲ್ಲಿ (ಶಾಂತಿಯಲ್ಲಿ) ಇರುವವರು, ಎಲೆ ಉದುರುವ ಕಾಲದಲ್ಲಿ ಹೋಗಬಾರದು. ಕೆಲವೊಮ್ಮೆಗೂ ಬಿರುಗಾಳಿಗಳು ಬರಬಾರದು, ಸದಾ ವಸಂತ ಋತುವಿರಲಿ. ಒಳ್ಳೆಯದು.

2. ಆತ್ಮಿಕ ದೃಷ್ಟಿಯಿಂದ ಸೃಷ್ಟಿಯನ್ನೇ ಪರಿವರ್ತಿಸುವವರು ಎಂದು ತಮ್ಮಿಂದ ಅನುಭವ ಮಾಡುವಿರಾ? ದೃಷ್ಟಿಯಿಂದ ಸೃಷ್ಟಿಯು ಪರಿವರ್ತನೆ ಆಗಿ ಬಿಡುತ್ತದೆ ಎಂದು ಕೇಳುತ್ತಿದ್ದೆವು ಆದರೀಗ ಆತ್ಮಿಕ ದೃಷ್ಟಿಯಿಂದ ಸೃಷ್ಟಿಯ ಪರಿವರ್ತನೆ ಆಗಿ ಬಿಟ್ಟಿತಲ್ಲವೆ! ಇದರ ಅನುಭವಿ ಆಗಿ ಬಿಟ್ಟಿದ್ದೀರಿ. ತಮಗಂತು ಈಗ ತಂದೆಯ ಪ್ರಪಂಚವಾಗಿದ್ದಾರೆ, ಅಂದಮೇಲೆ ಸೃಷ್ಟಿಯು ಬದಲಾಯಿತು. ಹಿಂದಿನ ಜಗತ್ತು ಅರ್ಥಾತ್ ಪ್ರಪಂಚಕ್ಕೂ, ಮತ್ತು ಈಗಿನ ಪ್ರಪಂಚದಲ್ಲಿ ಇರುವುದಕ್ಕೂ ಅಂತರವಾಗಿ ಬಿಟ್ಟಿತಲ್ಲವೆ! ಮುಂಚೆ ಇದ್ದಂತಹ ಪ್ರಪಂಚದಲ್ಲಿ ಬುದ್ಧಿಯು ಅಲೆದಾಡುತ್ತಿತ್ತು ಹಾಗೆಯೇ ಈಗ ತಂದೆಯೇ ಪ್ರಪಂಚವಾಗಿ ಬಿಟ್ಟರು. ಅದರಿಂದ ಬುದ್ಧಿಯ ಅಲೆದಾಟವು ಬಂಧ್ ಆಯಿತು ಮತ್ತು ಏಕಾಗ್ರವಾಗಿ ಬಿಟ್ಟಿತು. ಏಕೆಂದರೆ ಮುಂಚೆ ಇದ್ದಂತಹ ಜೀವನದಲ್ಲಿ ಕೆಲವೊಮ್ಮೆ ದೇಹದ ಸಂಬಂಧದಲ್ಲಿ, ಕೆಲವೊಮ್ಮೆ ದೇಹದ ಪದಾರ್ಥದಲ್ಲಿ…. ಅನೇಕದರ ಕಡೆ ಬುದ್ಧಿಯು ಹೋರಟು ಹೋಗುತ್ತಿತ್ತು. ಈಗ ಇದೆಲ್ಲವೂ ಬದಲಾಗಿ ಬಿಟ್ಟಿತು. ಈಗಲೂ ದೇಹದ ನೆನಪಿರುತ್ತದೆಯೇ ಅಥವಾ ದೇಹಿಯ ನೆನಪಿರುವುದೇ? ಒಂದುವೇಳೆ ದೇಹದ ಕಡೆ ಬುದ್ಧಿಯು ಹೋಗುತ್ತದೆಯೆಂದರೆ, ಇದು ತಪ್ಪು ಎಂದು ತಿಳಿಯುತ್ತೀರಲ್ಲವೆ! ನಂತರ ದೇಹದ ಬದಲಾಗಿ ತಮ್ಮನ್ನು ದೇಹೀ ಎಂದು ತಿಳಿದುಕೊಳ್ಳುವ ಅಭ್ಯಾಸವನ್ನು ಮಾಡುತ್ತೀರಿ. ಹಾಗಾದರೆ ತಮ್ಮ ಪ್ರಪಂಚವೇ ಬದಲಾಯಿತಲ್ಲವೆ! ಮತ್ತು ಸ್ವಯಂ ತಾವೂ ಬದಲಾಗಿ ಬಿಟ್ಟಿರಿ. ತಂದೆಯವರೇ ತಮ್ಮ ಪ್ರಪಂಚವೇ ಅಥವಾ ಈಗಲೂ ಸ್ಥೂಲ ಜಗತ್ತಿನಲ್ಲೇನಾದರೂ ಉಳಿದಿದೆಯೇ? ವಿನಾಶಿ ಧನ ಅಥವಾ ವಿನಾಶಿ ಸಂಬಂಧದ ಕಡೆಗಂತು ಬುದ್ಧಿಯು ಹೋಗುವುದಿಲ್ಲವೇ? ಈಗ ನನ್ನದೇನೂ ಇಲ್ಲ, “ನನ್ನ ಬಳಿ ಬಹಳಷ್ಟು ಹಣವಿದೆ” ಎಂಬ ಈ ಸಂಕಲ್ಪ ಅಥವಾ ಸ್ವಪ್ನದಲ್ಲಿಯೂ ಇರುವುದಿಲ್ಲ ಏಕೆಂದರೆ ಎಲ್ಲವನ್ನೂ ತಂದೆಗೆ ಸಮರ್ಪಣೆ ಮಾಡಿದ್ದೇವೆ. ನನ್ನದನ್ನು ನಿನ್ನದೆಂದು ಸಮರ್ಪಿಸಿದ್ದೀರಲ್ಲವೆ! ಅಥವಾ ನನ್ನದೂ ಸಹ ನನ್ನದೆ ಹಾಗೂ ತಂದೆಯದೂ ನನ್ನದಾಗಿದೆ – ಈ ರೀತಿಯಾಗಿ ತಿಳಿಯುವುದಿಲ್ಲವೇ? ಈ ವಿನಾಶಿ ತನು-ಮನ, ಹಳೆಯ ಮನಸ್ಸು ನನ್ನದಲ್ಲ, ತಂದೆಯವರಿಗೆ ಕೊಟ್ಟಿದ್ದೇವೆ. ಪರಿವರ್ತನೆಯಾಗಲು ಮೊಟ್ಟ ಮೊದಲು `ಸರ್ವಸ್ವವೂ ನಿನ್ನದು’ ಎಂಬ ಸಂಕಲ್ಪವನ್ನೇ ಮಾಡಿದಿರಿ, ನಿನ್ನದು ಎಂದು ಹೇಳುವುದರಲ್ಲಿಯೇ ಲಾಭವಿದೆ, ಇದರಲ್ಲಿ ತಂದೆಗೇನೂ ಲಾಭವಿಲ್ಲ, ತಮಗೇ ಲಾಭವಿದೆ. ಏಕೆಂದರೆ ನನ್ನದು ಎನ್ನುವುದರಿಂದ ಬಂಧನಕ್ಕೆ ಒಳಗಾಗುವಿರಿ, ಹೊರೆ ಇರುವವರಾಗುತ್ತೀರಿ ಮತ್ತು ನಿನ್ನದು ಎನ್ನುವುದರಿಂದ ನಿರ್ಲಿಪ್ತರಾಗುತ್ತೀರಿ, ಡಬಲ್ಲೈಟ್ “ಟ್ರಸ್ಟಿ”(ನಿಮಿತ್ತ) ಆಗಿ ಬಿಡುತ್ತೀರಿ. ಅಂದಮೇಲೆ ಯಾವುದು ಒಳ್ಳೆಯದು! ಹಗುರರಾಗುವುದು ಒಳ್ಳೆಯದೇ ಅಥವಾ ಹೊರೆಯನ್ನು ಹೊರುವುದು ಒಳ್ಳೆಯದೇ? ವರ್ತಮಾನ ಸಮಯದಲ್ಲಿ ಕೆಲವರು ಶರೀರದಿಂದಲೂ ದಪ್ಪಗಿರುತ್ತಾರೆಂದರೆ ಇಷ್ಟವಾಗುವುದಿಲ್ಲ. ಎಲ್ಲರೂ ಸಹ ತನ್ನನ್ನು ಹಗುರವಾಗಿಡುವ ಪ್ರಯತ್ನವನ್ನೇ ಮಾಡುತ್ತಾರೆ ಏಕೆಂದರೆ ಹೊರೆ(ಶರೀರದ ತೂಕ ಹೆಚ್ಚಾಗುವುದು)ಯಾಗುವುದು ಎಂದರೆ ನಷ್ಟವಾಗುವುದು ಎಂದರ್ಥ ಮತ್ತು ಇದರಿಂದ ಲಾಭವಿದೆ. ಇದೇರೀತಿ ನನ್ನದು-ನನ್ನದು ಎನ್ನುವುದರಿಂದ ಬುದ್ಧಿಯ ಮೇಲೆ ಹೊರೆಯುಂಟಾಗುತ್ತದೆ, ನಿನ್ನದು-ನಿನ್ನದು ಎನ್ನುವುದರಿಂದ ಬುದ್ಧಿಯು ಹಗುರವಾಗಿ ಬಿಡುತ್ತದೆ. ಎಲ್ಲಿಯವರೆಗೆ ಹಗುರವಾಗುವುದಿಲ್ಲವೋ ಅಲ್ಲಿಯವರೆಗೆ ಶ್ರೇಷ್ಠ ಸ್ಥಿತಿಯವರೆಗೆ ತಲುಪಲು ಸಾಧ್ಯವಿಲ್ಲ. ಹಾರುವ ಕಲೆಯೇ ಆನಂದದ ಅನುಭೂತಿಯನ್ನು ಮಾಡಿಸುತ್ತದೆ, ಹಗುರವಾಗಿ ಇರುವುದರಲ್ಲಿಯೇ ಆನಂದವಿದೆ. ಒಳ್ಳೆಯದು!

ಯಾವಾಗ ತಂದೆಯೇ ಸಿಕ್ಕಿದರೆಂದಾಗ, ಅವರ ಮುಂದೆ ಮಾಯೆಯೇನಾಗಿದೆ? ಮಾಯೆಯು ದುಃಖಿಯನ್ನಾಗಿ ಮಾಡುವಂತದ್ದು ಮತ್ತು ತಂದೆಯವರು ಆಸ್ತಿಯನ್ನು ಕೊಡುವವರು, ಪ್ರಾಪ್ತಿ ಮಾಡಿಸುವವರು. ಇಂತಹ ಪ್ರಾಪ್ತಿ ಮಾಡಿಸುವ ತಂದೆಯಂತು ಇಡೀ ಕಲ್ಪದಲ್ಲಿಯೂ ಸಿಗುವುದಿಲ್ಲ! ಸ್ವರ್ಗದಲ್ಲಿಯ್ತೂ ಸಿಗುವುದಿಲ್ಲ. ಹಾಗಾದರೆ ಇದನ್ನು ಒಂದು ಸೆಕೆಂಡಿಗಾಗಿಯೂ ಮರೆಯಬಾರದು, ಅಲ್ಪಕಾಲದ ಪ್ರಾಪ್ತಿಯನ್ನು ಮಾಡಿಸುವವರನ್ನೇ ಮರೆಯುವುದಿಲ್ಲ ಅಂದಾಗ ಬೇಹದ್ದಿನ ಪ್ರಾಪ್ತಿ ಮಾಡಿಸುವಂತಹ ತಂದೆಯನ್ನು ಮರೆಯಲು ಸಾಧ್ಯವೇ! ಅಂದಾಗ ಸದಾ ಇದನ್ನೇ ನೆನಪಿಟ್ಟುಕೊಳ್ಳಿರಿ – ನಾವು ಟ್ರಸ್ಟಿ ಆಗಿದ್ದೇವೆ. ಜೀವನದಲ್ಲಿ ಮತ್ತೇನು ಬೇಕು! ಆನಂದ, ಸಂಗೀತ ಮತ್ತು ಹಾರುವುದು- ಯಾವಾಗ ಪ್ರಾಪ್ತಿಯಾಗುವುದೋ ಆಗಲೇ ಆನಂದವು ಉಂಟಾಗುತ್ತದೆಯಲ್ಲವೆ! ಇಲ್ಲದಿದ್ದರೆ ದುಃಖಿಯಾಗುವುದೇ ಇರುತ್ತದೆ. ಆದ್ದರಿಂದ ಈ ವರದಾನವು ಸ್ಮೃತಿಯಲ್ಲಿರಲಿ – ನಾವು ಆನಂದವಾಗಿರುತ್ತಾ, ಹಾಡುತ್ತಾ, ಹಾರುವವರಾಗಿದ್ದೇವೆ, ಸದಾಕಾಲವೂ ತಂದೆಯವರ ಪ್ರಪಂಚದಲ್ಲಿಯೇ ಇರುವವರು ಆಗಿದ್ದೇವೆ. ಎಲ್ಲಾದರೂ ಬುದ್ಧಿ ಹೋಗುತ್ತದೆ ಎನ್ನುವುದಕ್ಕೇ ಇನ್ನೇನೂ ಬೇಕಾಗಿಯೇ ಇಲ್ಲ. ಸ್ವಪ್ನದಲ್ಲಿಯೂ ಅಳಬಾರದು, ಮಾಯೆಯು ದುಃಖಿಯನ್ನಾಗಿ ಮಾಡಿದರೂ ಅಳಬಾರದು. ಕೇವಲ ಕಣ್ಣುಗಳಿಂದಲೇ ಅಳುವುದಿರುವುದಿಲ್ಲ, ಮನಸ್ಸಿನ ಅಳು (ದುಃಖ) ಸಹ ಇರುತ್ತದೆ. ಅಂದರೆ ಮಾಯೆಯು ದುಃಖಿ ಮಾಡುತ್ತದೆ ಮತ್ತು ತಂದೆಯವರು ಆನಂದದಲ್ಲಿ ಇಡುತ್ತಾರೆ. ಬಿಹಾರ್ ಎಂದರೆ ಸದಾ ಖುಷಿಯಾಗಿ ಇರುವವರು ಎಂದು ಮತ್ತು ಬಂಗಾಳ ಎಂದರೆ ಸದಾ ಸಿಹಿಯಾಗಿರುವವರು. ಬಂಗಾಳದಲ್ಲಿನ ಮಿಠಾಯಿ ಬಹಳ ಚೆನ್ನಾಗಿರುತ್ತದೆ ಅಲ್ಲವೆ, ವಿಧ-ವಿಧವಾದ ಮಿಠಾಯಿ ಮಾಡುತ್ತಾರೆ ಅಂದಮೇಲೆ ಎಲ್ಲಿ ಮಧುರತೆ ಅಥವಾ ಸಿಹಿಯಿರುತ್ತದೆಯೋ ಅಲ್ಲಿ ಪವಿತ್ರತೆಯಿದೆ. ಪವಿತ್ರತೆಯಿಲ್ಲದೆ ಮಧುರತೆ ಬರಲು ಸಾಧ್ಯವೇ ಇಲ್ಲ. ಹಾಗಾದರೆ ತಾವು ಸದಾ ಮಧುರವ ಮತ್ತು ಖುಷಿಯಾಗಿ ಇರುವವರು. ಒಳ್ಳೆಯದು! ಟೀಚರ್ಸ್ ಸಹ ಆನಂದಿತರನ್ನು ನೋಡಿ ಸದಾ ಆನಂದವಾಗಿಯೇ ಇರುತ್ತೀರಲ್ಲವೆ. ಒಳ್ಳೆಯದು!

ವರದಾನ:-

ಒಂದುವೇಳೆ ತಂದೆಯ ಸಮೀಪವಿರುವುದು ಇಷ್ಟವಾಗುತ್ತದೆಯೆಂದರೆ, ಎಂದೂ ಯಾವುದೇ ಸಂಗದೋಷದಿಂದ ದೂರವಿರಬೇಕು. ಹಲವು ಪ್ರಕಾರದ ಆಕರ್ಷಣೆಯು ಪರೀಕ್ಷೆಯ ರೂಪದಲ್ಲಿ ಬರುತ್ತದೆ ಆದರೆ ಆಕರ್ಷಿತರಾಗಬಾರದು. ಸಂಗದೋಷವು ಹಲವು ಪ್ರಕಾರದ್ದಿರುತ್ತದೆ, ವ್ಯರ್ಥ ಸಂಕಲ್ಪಗಳು ಅಥವಾ ಮಾಯೆಯ ಆಕರ್ಷಣೆಯ ಸಂಕಲ್ಪಗಳ ಸಂಗ, ಸಂಬಂಧಿಗಳ ಸಂಗ, ವಾಣಿಯ ಸಂಗ, ಅನ್ನದೋಷದ ಸಂಗ, ಕರ್ಮದ ಸಂಗ….. ಇವೆಲ್ಲಾ ಸಂಗದೋಷಗಳಿಂದ ತಮ್ಮನ್ನು ರಕ್ಷಿಸಿಕೊಳ್ಳುವವರೇ ಪಾಸ್-ವಿತ್-ಆನರ್ ಆಗುವರು.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top