27 November 2021 KANNADA Murli Today | Brahma Kumaris

Read and Listen today’s Gyan Murli in Kannada

November 26, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ – ಜ್ಞಾನ ಧನದ ದಾನ ಮಾಡುವುದಕ್ಕಾಗಿ ವಿಚಾರ ಸಾಗರ ಮಂಥನವನ್ನು ಮಾಡಿ, ದಾನದ ಆಸಕ್ತಿಯನ್ನು ಇಟ್ಟುಕೊಳ್ಳುತ್ತೀರೆಂದರೆ ಮಂಥನವು ನಡೆಯುತ್ತಿರುತ್ತದೆ”

ಪ್ರಶ್ನೆ:: -

ಜ್ಞಾನಮಾರ್ಗದಲ್ಲಿ ಸದಾ ತಮ್ಮನ್ನು ಆರೋಗ್ಯವಂತವಾಗಿ ಇಟ್ಟುಕೊಳ್ಳುವ ಸಾಧನವೇನಾಗಿದೆ?

ಉತ್ತರ:-

ಸದಾ ತನ್ನನ್ನು ತಾನು ನಿರೋಗಿಯಾಗಿ ಇಟ್ಟುಕೊಳ್ಳಲು, ತಂದೆಯ ಮೂಲಕ ಏನೆಲ್ಲಾ ಜ್ಞಾನದ ಹುಲ್ಲು (ಮುರುಳಿ) ಸಿಗುತ್ತದೆಯೋ ಅದನ್ನು ಸೇವಿಸಿದ ನಂತರ ಮೆಲುಕು ಹಾಕಬೇಕು ಅರ್ಥಾತ್ ಮಂಥನವನ್ನು ಮಾಡಬೇಕು. ಯಾವ ಮಕ್ಕಳಿಗೆ ಮಂಥನ ಮಾಡುವ ಅರ್ಥಾತ್ ಜೀರ್ಣಿಸಿಕೊಳ್ಳುವ ಹವ್ಯಾಸವಿದೆಯೋ ಅವರು ರೋಗಿಯಾಗಲು ಸಾಧ್ಯವಿಲ್ಲ. ಯಾರಲ್ಲಿ ವಿಕಾರಗಳ ಕಾಯಿಲೆಯಿಲ್ಲವೋ ಅವರೇ ಸದಾ ಆರೋಗ್ಯವಂತರಾಗಿರುತ್ತಾರೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ನೀವು ಪ್ರೀತಿಯ ಸಾಗರನಾಗಿದ್ದೀರಿ……

ಓಂ ಶಾಂತಿ. ಮಕ್ಕಳು ಗೀತೆಯನ್ನು ಕೇಳಿದಿರಿ. ಮನುಷ್ಯರು ಯಾವುದೆಲ್ಲಾ ಗೀತೆ ಇತ್ಯಾದಿಗಳನ್ನು ಬರೆಯುತ್ತಾರೆ, ಶಾಸ್ತ್ರಗಳನ್ನು ತಿಳಿಸುತ್ತಾರೆ ಆದರೆ ಅವರು ಏನನ್ನೂ ತಿಳಿದುಕೊಂಡಿಲ್ಲ. ಏನೆಲ್ಲವನ್ನು ಓದುತ್ತಾ ಬಂದಿದ್ದಾರೆಯೋ ಅದರಿಂದ ಯಾರದೇ ಕಲ್ಯಾಣವಾಗಲಿಲ್ಲ, ಇನ್ನೂ ಅಕಲ್ಯಾಣವಾಗುತ್ತಾ ಬಂದಿದೆ. ಸರ್ವರ ಕಲ್ಯಾಣಕಾರಿಯು ಈಶ್ವರನೊಬ್ಬರೇ ಆಗಿದ್ದಾರೆ, ನೀವು ತಿಳಿದುಕೊಂಡಿದ್ದೀರಿ – ನಮ್ಮ ಕಲ್ಯಾಣ ಮಾಡುವವರು ಈಗ ಬಂದಿದ್ದಾರೆ, ಕಲ್ಯಾಣದ ಮಾರ್ಗವನ್ನು ತಿಳಿಸುತ್ತಿದ್ದಾರೆ. ವಿಶೇಷವಾಗಿ ನೀವು ಭಾರತವಾಸಿಗಳ ಮತ್ತು ಇಡೀ ಪ್ರಪಂಚದ ಕಲ್ಯಾಣ ಮಾಡುವವರು ಒಬ್ಬ ತಂದೆಯೇ ಆಗಿದ್ದಾರೆ, ಸತ್ಯಯುಗದಲ್ಲಿ ಎಲ್ಲರ ಕಲ್ಯಾಣವಾಗಿತ್ತು, ನೀವೆಲ್ಲರೂ ಸುಖಧಾಮದಲ್ಲಿದ್ದಿರಿ ಆಗ ಉಳಿದ ಆತ್ಮರು ಶಾಂತಿಧಾಮದಲ್ಲಿದ್ದರು. ಇದು ಮಕ್ಕಳ ಬುದ್ಧಿಯಲ್ಲಿದೆ ಆದರೆ ಜ್ಞಾನದ ಅಂಶವು ಜಾರಿ ಹೋಗುತ್ತದೆ. ಪೂರ್ಣ ಧಾರಣೆ ಮಾಡುವುದಿಲ್ಲ. ಒಂದುವೇಳೆ ಒಂದು ಮಾತಿನ ಮೇಲೆ ವಿಚಾರ ಮಾಡುತ್ತಾ ಇದ್ದರೆ ಈ ರೀತಿ ಆಗುವುದಿಲ್ಲ. ಪ್ರಾಣಿಗಳಲ್ಲಿಯೂ ಎಷ್ಟೊಂದು ಬುದ್ಧಿಯಿದೆ ಆದರೆ ಈಗಿನ ಬುದ್ಧಿಯಲ್ಲಿ ಅಷ್ಟು ಬುದ್ಧಿಯಿಲ್ಲ. ಪ್ರಾಣಿಗಳು (ಹಸು) ಹುಲ್ಲನ್ನು ತಿನ್ನುತ್ತದೆಯೆಂದರೆ ಮೆಲುಕು ಹಾಕುತ್ತಾ ಇರುತ್ತವೆ. ನಿಮಗೂ ಸಹ ಭೋಜನ ಸಿಗುತ್ತದೆ ಆದರೆ ನೀವು ಇಡೀದಿನ ಅದನ್ನು ಮೆಲುಕು ಹಾಕುವುದಿಲ್ಲ, ಪ್ರಾಣಿಗಳಂತೂ ಇಡೀದಿನ ಮೆಲುಕು ಹಾಕುತ್ತಿರುತ್ತದೆ. ಇಲ್ಲಿ ನಿಮಗೆ ಜ್ಞಾನದ ಹುಲ್ಲು ಸಿಗುತ್ತದೆ – ಯೋಗ ಮತ್ತು ಜ್ಞಾನ. ದಿನವಿಡೀ ಇದರಮೇಲೆ ವಿಚಾರ ಸಾಗರ ಮಂಥನ ನಡೆಯುತ್ತಿರಬೇಕು. ಯಾರಿಗೆ ಸರ್ವೀಸಿನ ಉಮ್ಮಂಗ ಇಲ್ಲವೋ ಅವರು ವಿಚಾರ ಸಾಗರ ಮಂಥನ ಮಾಡಿ ಏನು ಮಾಡುವರು! ಉಮ್ಮಂಗ ಇಲ್ಲದಿದ್ದರೆ ಮಾಡುವುದೂ ಇಲ್ಲ. ಕೆಲಕೆಲವರಿಗೆ ಜ್ಞಾನ ಧನವನ್ನು ದಾನ ಮಾಡುವ ಉಮ್ಮಂಗವಿರುತ್ತದೆ, ಗೋಶಾಲೆಯಲ್ಲಿ ಮನುಷ್ಯರು ಹೋಗಿ ಗೋವುಗಳಿಗೆ ಹುಲ್ಲನ್ನು ಕೊಡುತ್ತಾರೆ, ಅದೂ ಪುಣ್ಯವೆಂದು ತಿಳಿಯುತ್ತಾರೆ. ತಂದೆಯು ನಿಮಗೆ ಜ್ಞಾನದ ಹುಲ್ಲನ್ನು ತಿನ್ನಿಸುತ್ತಾರೆ. ಇದರಮೇಲೆ ವಿಚಾರ ಸಾಗರ ಮಂಥನ ಮಾಡುತ್ತಾ ಇದ್ದರೆ ಖುಷಿಯಲ್ಲಿರುತ್ತೀರಿ ಮತ್ತು ಸರ್ವೀಸಿನ ಉಮ್ಮಂಗವೂ ಇರುವುದು. ಕೆಲವರು ಒಂದು ಬೊಗಸೆಯಷ್ಟು ತುಂಬಿಸಿಕೊಳ್ಳುತ್ತಾರೆ ಅಥವಾ ಒಂದು ಹನಿಯನ್ನು ತೆಗೆದುಕೊಂಡರೂ ಸಹ ಸ್ವರ್ಗದಲ್ಲಿ ಬರುತ್ತಾರೆ. ಸ್ವರ್ಗದ ಬಾಗಿಲು ತೆರೆಯುವುದು. ವಾಸ್ತವದಲ್ಲಿ ಜ್ಞಾನ ಸಾಗರವನ್ನೇ ನುಂಗಿ ಬಿಡಬೇಕು. ಕೆಲವರಂತೂ ಎಲ್ಲವನ್ನೂ ಗ್ರಹಿಸಿ ಬಿಡುತ್ತಾರೆ, ಇನ್ನೂ ಕೆಲವರು ಒಂದು ಹನಿಯಷ್ಟು ತೆಗೆದುಕೊಳ್ಳುತ್ತಾರೆ. ಆದರೂ ಸಹ ಸ್ವರ್ಗದಲ್ಲಿ ಬರುತ್ತಾರೆ ಆದರೆ ಎಷ್ಟೆಷ್ಟು ಧಾರಣೆ ಮಾಡುವರೋ ಅಷ್ಟು ಶ್ರೇಷ್ಠ ಪದವಿಯನ್ನು ಪಡೆಯುತ್ತಾರೆ. ಬಾಕಿ ಸ್ವರ್ಗದಲ್ಲಿ ಒಂದು ಹನಿಯಷ್ಟು ತೆಗೆದುಕೊಂಡಿದ್ದರೂ ಸಹ ಬಂದು ಬಿಡುತ್ತಾರೆ. ಮನುಷ್ಯರು ಶರೀರ ಬಿಡುವಾಗ ಅವರಿಗೆ ಗಂಗಾಜಲವನ್ನು ಹಾಕುತ್ತಾರೆ. ಕೆಲಕೆಲವರ ಮನೆಯಲ್ಲಿ ಗಂಗಾಜಲವನ್ನೇ ಕುಡಿಯುತ್ತಾರೆ, ಎಷ್ಟು ಕುಡಿಯಬಹುದು? ಗಂಗೆಯಂತೂ ಹರಿಯುತ್ತಿರುತ್ತದೆ. ಅದನ್ನು ಯಾರೂ ಪೂರ್ಣ ಗ್ರಹಿಸಿಕೊಳ್ಳಲು ಸಾಧ್ಯವಿಲ್ಲ. ನಿಮಗಾಗಿ ಗಾಯನವಿದೆ – ಇಡೀ ಸಾಗರವನ್ನೇ ನುಂಗಿ ಬಿಟ್ಟರು ಎಂದು. ಯಾರು ಜ್ಞಾನ ಸಾಗರನ ಬಳಿಗೆ ಬರುತ್ತಾರೆಯೋ, ಹೆಚ್ಚು ಸರ್ವೀಸ್ ಮಾಡುವರೋ ಅವರೇ ರುದ್ರ ಮಾಲೆಯಲ್ಲಿ ಪೋಣಿಸಲ್ಪಡುತ್ತಾರೆ. ಯಾರು ಎಷ್ಟೆಷ್ಟು ಗ್ರಹಿಸುವರೋ ಮತ್ತು ಅನ್ಯರ ಕಲ್ಯಾಣ ಮಾಡುವರೋ ಅವರು ಪದವಿಯನ್ನೂ ಪಡೆಯುತ್ತಾರೆ. ಎಷ್ಟು ಧಾರಣೆ ಮಾಡುವರೋ ಅಷ್ಟು ಖುಷಿಯೂ ಇರುತ್ತದೆ. ಧನವಂತರಿಗೆ ಖುಷಿ ಇರುತ್ತದೆಯಲ್ಲವೇ. ಯಾರ ಬಳಿಯಾದರೂ ಬಹಳ ಧನವಿರುತ್ತದೆ ಎಂದರೆ ದಾನ ಮಾಡುತ್ತಾರೆ. ಕಾಲೇಜು, ಧರ್ಮಶಾಲೆ, ಮಂದಿರ ಇತ್ಯಾದಿ ಕಟ್ಟಿಸುತ್ತಾರೆಂದರೆ ಅವರಿಗೆ ಅಷ್ಟು ಖುಷಿಯೂ ಇರುವುದು. ಇಲ್ಲಂತೂ ಅವಿನಾಶಿ ಜ್ಞಾನರತ್ನಗಳು ಸಿಗುತ್ತಿವೆ, ಇದು 21 ಜನ್ಮಗಳಿಗಾಗಿ ಅವಿನಾಶಿ ಖಜಾನೆಯಾಗಿದೆ. ಯಾರು ಇದನ್ನು ಚೆನ್ನಾಗಿ ಧಾರಣೆ ಮಾಡಿಕೊಂಡು ದಾನ ಮಾಡುವರೋ ಅವರಿಗೆ ಒಳ್ಳೆಯ ಪದವಿ ಸಿಗುತ್ತದೆ. ಬಾಬಾ, ನಮಗೆ ನೌಕರಿಯನ್ನು ಬಿಟ್ಟು ಈ ಆತ್ಮಿಕ ಸೇವೆಯಲ್ಲಿ ತೊಡಗೋಣವೆಂದು ಮನಸಾಗುತ್ತದೆ, ಪ್ರೋಜೆಕ್ಟರ್ ಪ್ರದರ್ಶನಿಯನ್ನು ತೆಗೆದುಕೊಂಡು ಹೋಗಿ ಎಲ್ಲಾ ಕಡೆ ಸರ್ವೀಸ್ ಮಾಡೋಣ ಎನಿಸುತ್ತದೆ ಎಂದು ಕೆಲ ಕೆಲವು ಮಕ್ಕಳು ಬರೆಯುತ್ತಾರೆ. ಯಾರಿಗಾದರೂ ಒಂದು ಹನಿ ಸಿಕ್ಕಿದರೂ ಸಹ ಕಲ್ಯಾಣವಾಗಿ ಬಿಡುವುದು. ಸರ್ವೀಸಿನ ಬಹಳ ಉಮ್ಮಂಗವಿರುತ್ತದೆ. ಬಾಕಿ ಪ್ರತಿಯೊಬ್ಬರ ಸ್ಥಿತಿಯನ್ನು ತಂದೆಯು ತಿಳಿದುಕೊಂಡಿದ್ದಾರೆ. ಸರ್ವೀಸಿನ ಜೊತೆಗೆ ಗುಣಗಳೂ ಇರಬೇಕು. ಕ್ರೋಧವಿರಬಾರದು, ಯಾವುದೇ ಉಲ್ಟಾ-ಸುಲ್ಟಾ ಸಂಕಲ್ಪಗಳು ಬರಬಾರದು. ವಿಕಾರಗಳ ಯಾವುದೇ ಕಾಯಿಲೆಯಿರಬಾರದು. ಆರೋಗ್ಯವು ಚೆನ್ನಾಗಿರಬೇಕು. ಯಾರಲ್ಲಿ ವಿಕಾರಗಳು ಕಡಿಮೆಯಿದೆಯೋ ಅವರೇ ಆರೋಗ್ಯವಂತರೆಂದು ತಂದೆಯು ಹೇಳುತ್ತಾರೆ. ತಂದೆಯು ಮಹಿಮೆ ಮಾಡುತ್ತಾರಲ್ಲವೇ. ಯಾರು-ಯಾರು ಒಳ್ಳೆಯ ಮಹಾರಥಿಗಳೆಂದು ಗಾಯನವೂ ಆಗುತ್ತದೆ, ಇದನ್ನು ಅವರು ಅಸುರರು ಮತ್ತು ದೇವತೆಗಳ ಯುದ್ಧವೆಂದು ತೋರಿಸಿದ್ದಾರೆ. ದೇವತೆಗಳ ಜಯವಾಯಿತು ಎಂದು ಹೇಳುತ್ತಾರೆ. ಈಗ ನಮ್ಮದು ಪಂಚ ವಿಕಾರರೂಪಿ ಅಸುರರೊಂದಿಗೆ ಯುದ್ಧವಿದೆ, ಮತ್ತ್ಯಾವುದೇ ಪ್ರಕಾರದ ಆಸುರೀ ಮನುಷ್ಯರಿರುವುದಿಲ್ಲ. ಯಾರಲ್ಲಿ ಆಸುರೀ ಸ್ವಭಾವವಿದೆಯೋ ಅವರಿಗೆ ಅಸುರರೆಂದು ಹೇಳಲಾಗುತ್ತದೆ. ನಂಬರ್ವನ್ ಅಸುರೀ ಸ್ವಭಾವವಾಗಿದೆ – ಕಾಮ ವಿಕಾರ. ಆದ್ದರಿಂದ ಸನ್ಯಾಸಿಗಳೂ ಸಹ ಇದನ್ನು ಬಿಟ್ಟು ಹೊರಟು ಹೋಗುತ್ತಾರೆ. ಈ ಆಸುರೀ ಗುಣಗಳನ್ನು ಬಿಡುವುದರಲ್ಲಿ ಪರಿಶ್ರಮವಾಗುತ್ತದೆ. ಗೃಹಸ್ಥದಲ್ಲಿಯೇ ಇರಬೇಕಾಗಿದೆ ಆದರೆ ಆಸುರೀ ಸ್ವಭಾವವನ್ನು ಬಿಡಬೇಕಾಗಿದೆ. ಪವಿತ್ರವಾಗುವುದರಿಂದ ಮುಕ್ತಿ-ಜೀವನ್ಮುಕ್ತಿಯು ಸಿಗುತ್ತದೆ. ಎಷ್ಟೊಂದು ಪ್ರಾಪ್ತಿಯಿದೆ! ಅವರಂತೂ ಮನೆ-ಮಠವನ್ನು ಬಿಟ್ಟು ಹೊರಟು ಹೋಗುತ್ತಾರೆ, ಪ್ರಾಪ್ತಿಯೇನೂ ಇಲ್ಲ. ಈ ಚಿತ್ರಗಳಲ್ಲಿ ತಿಳಿದುಕೊಳ್ಳುವ ಎಷ್ಟು ಒಳ್ಳೊಳ್ಳೆಯ ಮಾತುಗಳಿವೆ. ಅವರಂತೂ ಕೇವಲ ಚಿತ್ರಗಳ ಶೋ ಮಾಡುತ್ತಾರೆ. ಕೇವಲ ಚಿತ್ರಗಳನ್ನು ನೋಡುವುದಕ್ಕಾಗಿ ಎಷ್ಟೊಂದು ಮಂದಿ ಹೋಗುತ್ತಾರೆ ಆದರೆ ಲಾಭವೇನೂ ಇಲ್ಲ. ಇಲ್ಲಿ ಈ ಚಿತ್ರಗಳಲ್ಲಿ ಎಷ್ಟೊಂದು ಜ್ಞಾನವಿದೆ, ಇದರಿಂದ ಬಹಳಷ್ಟು ಲಾಭವಾಗುತ್ತದೆ. ಇಲ್ಲಿ ಈ ಚಿತ್ರಗಳಲ್ಲಿ ಎಷ್ಟೊಂದು ಜ್ಞಾನವಿದೆ, ಇದರಿಂದ ಬಹಳ ಲಾಭವಾಗುತ್ತದೆ. ಇದರಲ್ಲಿ ಕಲೆ ಇತ್ಯಾದಿಗಳು ಯಾವುದೇ ಮಾತಿಲ್ಲ ಅಥವಾ ಅದನ್ನು ಬರೆಯುವವರ ಬುದ್ಧಿವಂತಿಕೆಯ ಮಾತೂ ಇಲ್ಲ. ಅವರಾದರೆ ಚಿತ್ರಗಳ ಮೇಲೆ ಅದನ್ನು ರಚಿಸಿರುವವರ ಹೆಸರು ಬರೆದಿರುತ್ತಾರೆ. ಚಿತ್ರಕಾರರಿಗೂ ಬಳುವಳಿ ಸಿಗುತ್ತದೆ. ಕೆಲವರು ಇಷ್ಟನ್ನು ತಿಳಿದುಕೊಳ್ಳುತ್ತಾರೆ – ಹಾ! ತಂದೆಯನ್ನು ಅವಶ್ಯವಾಗಿ ನೆನಪು ಮಾಡಬೇಕು. ಇಷ್ಟು ಹೇಳಿದರೂ ಸಹ ಪ್ರಜೆಗಳಾಗುವರು. ಪ್ರಜೆಗಳಂತೂ ಅನೇಕರು ತಯಾರಾಗುವರು. ನಾನು ಜ್ಞಾನಸಾಗರನಾಗಿದ್ದೇನೆ, ಯಾರಿಗಾದರೂ ಒಂದು ಹನಿ ಸಿಕ್ಕಿದರೂ ಸ್ವರ್ಗದಲ್ಲಿ ಬಂದು ಬಿಡುತ್ತಾರೆ.

ನೀವು ತಿಳಿದುಕೊಂಡಿದ್ದೀರಿ – ಪ್ರದರ್ಶನಿ, ಮೇಳಗಳಿಂದ ಅನೇಕರ ಕಲ್ಯಾಣವಾಗುತ್ತದೆ. ಈಶ್ವರನು ಕಲ್ಯಾಣಕಾರಿಯಾಗಿದ್ದಾರಲ್ಲವೇ. ನಿಮ್ಮದೂ ಕಲ್ಯಾಣವಾಗುತ್ತಿದೆ ಆದರೆ ಇದರಲ್ಲಿ ತಮ್ಮ ವಿಚಾರ ಸಾಗರ ಮಂಥನ ಮಾಡುತ್ತಾ ಇರಿ. ಸ್ಮೃತಿಯಲ್ಲಿ ತಂದುಕೊಳ್ಳುತ್ತಾ ಇರಿ ಆಗ ಬಹಳ ಲಾಭವಾಗುವುದು. ಉಲ್ಟಾ-ಸುಲ್ಟಾ ಮಾತುಗಳನ್ನು ಒಂದು ಕಿವಿಯಿಂದ ಕೇಳಿ ಇನ್ನೊಂದು ಕಿವಿಯಿಂದ ಬಿಟ್ಟು ಬಿಡಬೇಕು. ತಂದೆಯು ತಿಳಿಸುತ್ತಾರೆ – ನಾನು ನಿಮಗೆ ಬಹಳ ಒಳ್ಳೆಯ ಮಾತುಗಳನ್ನು ತಿಳಿಸುತ್ತೇನೆ. ನಂಬರ್ವನ್ ಮುಖ್ಯ ಮಾತು ಒಂದೇ ಆಗಿದೆ – ಯಾರಿಗೇ ಇರಲಿ ತಂದೆಯ ಪರಿಚಯ ಕೊಡಿ. ಕೇವಲ ಒಬ್ಬ ತಂದೆಯನ್ನು ನೆನಪು ಮಾಡಿರಿ ಅವರೇ ಸರ್ವಸ್ವವಾಗಿದ್ದಾರೆ. ಭಕ್ತಿಮಾರ್ಗದಲ್ಲಿ ಇಂತಹವರು ಅನೇಕರಿರುತ್ತಾರೆ, ಅವರಿಗೆ ತಿಳಿಸಿರಿ, ತಾವಂತೂ ಬಹಳ ಚೆನ್ನಾಗಿ ಮಾಡುತ್ತೀರಿ. ಎಲ್ಲವನ್ನೂ ಪರಮಾತ್ಮ ಮಾಡಿಸುತ್ತಾರೆಂದು ಬೆರಳನ್ನು ಮೇಲೆ ಮಾಡಿ ಹೇಳುತ್ತಾರೆ. ಅವರು ಎಲ್ಲರ ಕಲ್ಯಾಣಕಾರಿ ಮೇಲಿರುತ್ತಾರೆ. ನೀವಾತ್ಮರೂ ಸಹ ಅಲ್ಲಿಯೇ ಇರುತ್ತೀರಿ. ಇದೆಲ್ಲಾ ಜ್ಞಾನದ ಮಾತುಗಳನ್ನು ನೀವು ಈಗ ತಿಳಿದುಕೊಂಡಿದ್ದೀರಿ.

ತಂದೆಯು ತಿಳಿಸುತ್ತಾರೆ – ಮಕ್ಕಳೇ, ಈಗ ನಿಮ್ಮ ಈ ಶರೀರವು ಹಳೆಯದಾಗಿ ಬಿಟ್ಟಿದೆ. ಸತ್ಯ-ತ್ರೇತಾಯುಗದಲ್ಲಿ ಎಷ್ಟು ಒಳ್ಳೆಯ ವಸ್ತ್ರವಿತ್ತು, ಈಗ ಈ ಸವೆದು ಹೋಗಿರುವ ವಸ್ತ್ರವನ್ನು ಎಲ್ಲಿಯವರೆಗೆ ಧರಿಸುತ್ತೀರಿ! ಆದರೆ ಇದನ್ನು ಯಾರೂ ತಿಳಿದುಕೊಳ್ಳುವುದಿಲ್ಲ. ತಂದೆಯು ಬಂದು ತಿಳಿಸಿದಾಗಲೇ ತಿಳಿದುಕೊಳ್ಳುವರು. ಈಗ ನೀವು ಮಕ್ಕಳು ತಿಳಿದುಕೊಂಡಿದ್ದೀರಿ – ಜ್ಞಾನವನ್ನು ಕೊಡುವವರು ಒಬ್ಬರೇ ತಂದೆಯಾಗಿದ್ದಾರೆ, ಅವರು ಸಾಗರನಾಗಿದ್ದಾರೆ. ಯಾರು ಸಾಗರವನ್ನು ಗ್ರಹಿಸುವರೋ ಅವರೇ ವಿಜಯಮಾಲೆಯ ಮಣಿಯಾಗುತ್ತಾರೆ. ಅವರೇ ಸದಾ ಸರ್ವೀಸಿನಲ್ಲಿ ತತ್ಫರರಾಗಿರುತ್ತಾರೆ. ತಂದೆಯು ರುದ್ರ ಮಾಲೆಯನ್ನು ಮಾಡುವುದಕ್ಕಾಗಿಯೇ ಬಂದಿದ್ದಾರೆ. ಈಗ ಮರಳಿ ಹೋಗಬೇಕಾಗಿದೆ. ಎಲ್ಲಿಂದ ಬಂದಿದ್ದೇವೆಯೋ ಅಲ್ಲಿಗೇ ನಂಬರ್ವಾರ್ ಹೋಗುತ್ತೇವೆ. ಹಿಂದೆ-ಮುಂದೆ ಹೋಗಲು ಸಾಧ್ಯವಿಲ್ಲ. ನಾಟಕದಲ್ಲಿ ಪಾತ್ರಧಾರಿಗಳ ಪಾತ್ರವು ಸಮಯದಲ್ಲಿ ಇರುತ್ತದೆಯಲ್ಲವೇ. ಇದರಲ್ಲಿಯೂ ಯಾರು ಪಾತ್ರಧಾರಿಗಳಿದ್ದಾರೆಯೋ ಅವರು ನಂಬರ್ವಾರ್ ತಮ್ಮ-ತಮ್ಮ ಸಮಯದಲ್ಲಿ ಬರತೊಡಗುತ್ತಾರೆ. ಈ ಬೇಹದ್ದಿನ ನಾಟಕವು ಮಾಡಲ್ಪಟ್ಟಿದೆ. ಬ್ರಹ್ಮತತ್ವದಲ್ಲಿ ನಾವಾತ್ಮರು ಬಿಂದು ರೂಪದಲ್ಲಿರುತ್ತೇವೆ. ಅಲ್ಲಿ ಮತ್ತೇನೂ ಇರುವುದಿಲ್ಲ. ಒಂದು ಆತ್ಮ ಬಿಂದುವೆಲ್ಲಿ! ಇಷ್ಟು ದೊಡ್ಡ ಶರೀರವೆಲ್ಲಿ! ಆತ್ಮವು ಎಷ್ಟು ಕಡಿಮೆ ಜಾಗವನ್ನು ತೆಗೆದುಕೊಳ್ಳುತ್ತದೆ, ಬ್ರಹ್ಮಮಹಾತತ್ವವು ಎಷ್ಟು ದೊಡ್ಡದಾಗಿದೆ. ಹೇಗೆ ಆಕಾಶಕ್ಕೆ ಅಂತ್ಯವಿಲ್ಲವೋ ಹಾಗೆಯೇ ಬ್ರಹ್ಮತತ್ವಕ್ಕೂ ಅಂತ್ಯವಿಲ್ಲ. ಅಂತ್ಯವನ್ನು ಮುಟ್ಟಲು ಎಷ್ಟೊಂದು ಪ್ರಯತ್ನ ಪಡುತ್ತಾರೆ ಆದರೆ ತಲುಪಲು ಸಾಧ್ಯವಿಲ್ಲ. ಎಷ್ಟೊಂದು ತಲೆ ಕೆಡಿಸಿಕೊಳ್ಳುತ್ತಾ ಇರುತ್ತಾರೆ ಆದರೆ ಅಂತ್ಯವನ್ನು ಮುಟ್ಟಲು ಅಥವಾ ಅದನ್ನು ಹಿಡಿಯಲು ಅದು ಯಾವುದೇ ವಸ್ತುವಲ್ಲ. ವಿಜ್ಞಾನದ ಅಭಿಮಾನವು ಎಷ್ಟೊಂದಿದೆ, ಏನೂ ಲಾಭವಿಲ್ಲ. ಆಕಾಶವೇ ಆಕಾಶ, ಪಾತಾಳವೇ ಪಾತಾಳ ಎಂಬ ಶಬ್ಧವನ್ನು ಕೇಳಿರುವ ಕಾರಣ ಚಂದ್ರ ಗ್ರಹದಲ್ಲಿಯೂ ಪ್ರಪಂಚವಿರಬಹುದು ಎಂದು ತಿಳಿಯುತ್ತಾರೆ. ಡ್ರಾಮಾದಲ್ಲಿ ಅವರದೂ ಪಾತ್ರವಿದೆ, ಲಾಭವೇನೂ ಇಲ್ಲ. ತಂದೆಯು ಬಂದು ನಮ್ಮನ್ನು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆ. ಎಷ್ಟೊಂದು ಲಾಭವಿದೆ! ಬಾಕಿ ಚಂದ್ರ ಗ್ರಹದಲ್ಲಾದರೂ ಹೋಗಲಿ, ಛೂ ಮಂತ್ರದಿಂದ ಭಸ್ಮವನ್ನಾದರೂ ತೆಗೆಯಲಿ….. ಇದರಿಂದೇನು ಲಾಭ! ಈಗಂತೂ ನಾವು ಬೇಹದ್ದಿನ ತಂದೆಯಿಂದ ಬೇಹದ್ದಿನ ಆಸ್ತಿಯನ್ನು ತೆಗೆದುಕೊಳ್ಳುತ್ತೇವೆ. ಕಲ್ಪ-ಕಲ್ಪವೂ ತೆಗೆದುಕೊಳ್ಳುತ್ತಾ ಬಂದಿದ್ದೇವೆ, ವಿಶ್ವದ ಚರಿತ್ರೆ-ಭೂಗೋಳವು ಪುನರಾವರ್ತನೆಯಾಗುತ್ತದೆ. ಈ ಚಕ್ರವು ಸುತ್ತುತ್ತಾ ಇರುತ್ತದೆ. ಪ್ರಪಂಚದಲ್ಲಿ ಮೊದಲು ಸ್ವರ್ಣೀಮ ಭಾರತವೇ ಇತ್ತು, ಭಾರತವಾಸಿಗಳೇ ವಿಶ್ವದ ಮಾಲೀಕರಾಗಿದ್ದರು. ಅಲ್ಲಿ ದೇವತೆಗಳಿಗೆ ಯಾವುದೇ ಖಂಡದ ಬಗ್ಗೆ ತಿಳಿದಿರುವುದಿಲ್ಲ. ಇವಂತೂ ನಂತರದಲ್ಲಿ ವೃದ್ಧಿಯಾಗಿದೆ. ಹೊಸ-ಹೊಸ ಧರ್ಮ ಸ್ಥಾಪಕರು ಬಂದು ತಮ್ಮ-ತಮ್ಮ ಧರ್ಮ ಸ್ಥಾಪನೆ ಮಾಡುತ್ತಾರೆ ಆದರೆ ಅವರು ಯಾರದೇ ಸದ್ಗತಿ ಮಾಡುವುದಿಲ್ಲ, ಕೇವಲ ಧರ್ಮ ಸ್ಥಾಪನೆ ಮಾಡುತ್ತಾರೆ. ಅವರಿಗೇನು ಗಾಯನವಿರುವುದು! ಮುಕ್ತಿಧಾಮದಿಂದ ಪಾತ್ರವನ್ನು ಅಭಿನಯಿಸಲು ಬರುತ್ತಾರೆ, ಮನುಷ್ಯರಿಂದ ಮೋಕ್ಷದಲ್ಲಿಯೇ ಕುಳಿತಿರಬೇಕು – ಈ ಆವಾಗಮನದ ಚಕ್ರದಲ್ಲಿ ಬರುವುದಾದರೂ ಏಕೆ ಎಂದು ಹೇಳುತ್ತಾರೆ ಆದರೆ ಇದರಲ್ಲಿ ಬರಲೇಬೇಕಾಗಿದೆ. ಪುನರ್ಜನ್ಮವನ್ನು ತೆಗೆದುಕೊಳ್ಳಲೇ ಬೇಕಾಗಿದೆ. ಪುನಃ ಹಿಂತಿರುಗಿ ಹೋಗಬೇಕಾಗಿದೆ, ಇದು ಮಾಡಿ-ಮಾಡಲ್ಪಟ್ಟ ಡ್ರಾಮಾದ ಚಕ್ರವಾಗಿದೆ. ಲಕ್ಷಾಂತರ ವರ್ಷಗಳ ನಾಟಕವು ಯಾವುದೂ ಇರುವುದಿಲ್ಲ. ಇದು ಸ್ವಾಭಾವಿಕ ಅನಾದಿ ನಾಟಕವಾಗಿದೆ, ಇದಕ್ಕೆ ಈಶ್ವರೀಯ ಲೀಲೆಯೆಂದು ಹೇಳಲಾಗುತ್ತದೆ. ರಚಯಿತ ಮತ್ತು ರಚನೆಯ ಯಾವ ಲೀಲೆಯಿದೆಯೋ ಅದನ್ನು ಅರಿತುಕೊಳ್ಳಬೇಕಾಗಿದೆ. ಸೃಷ್ಟಿಚಕ್ರವನ್ನು ಅರಿತುಕೊಳ್ಳುವ ಪುರುಷಾರ್ಥ ಮಾಡುವ ಮನುಷ್ಯರು ಯಾರೂ ಇಲ್ಲ. ಈ ಸೃಷ್ಟಿಚಕ್ರವು ಹೇಗೆ ಸುತ್ತುತ್ತದೆ ಎಂಬ ವಿಚಾರ ಯಾರಿಗೂ ಇರುವುದೇ ಇಲ್ಲ. ಎಲ್ಲದಕ್ಕಿಂತ ಹಳೆಯ ಚಿತ್ರವು ಶಿವಲಿಂಗದ್ದಾಗಿದೆ. ಖುದನು ಬಂದಿದ್ದಾರೆ ಆದ್ದರಿಂದಲೇ ನಂತರ ಅವರದು ನೆನಪಾರ್ಥವನ್ನು ಮಾಡುತ್ತಾರೆ. ಮೊದಲು ಶಿವನ ಪೂಜೆಯು ಆರಂಭವಾದಾಗ ವಜ್ರದ ಲಿಂಗವನ್ನು ಮಾಡಿಸುತ್ತಾರೆ. ಯಾವಾಗ ಭಕ್ತಿಯು ರಜೋ, ತಮೋ ಆಗಿ ಬಿಡುತ್ತದೆಯೋ ಆಗ ಕಲ್ಲಿನ ಲಿಂಗವನ್ನೂ ಮಾಡಿಸುತ್ತಾರೆ.

ಶಿವ ತಂದೆಯು ವಜ್ರದಿಂದ ಕೂಡಿಲ್ಲ ಅವರು ಒಂದು ಬಿಂದುವಾಗಿದ್ದಾರೆ. ಪೂಜೆಗಾಗಿ ಅವರನ್ನು ಎಷ್ಟು ದೊಡ್ಡದಾಗಿ ತೋರಿಸುತ್ತಾರೆ, ನಾವು ವಜ್ರದ ಶಿವಲಿಂಗವನ್ನು ಮಾಡಿಸಬೇಕೆಂದು ತಿಳಿಯುತ್ತಾರೆ. ಸೋಮನಾಥನ ಎಷ್ಟು ದೊಡ್ಡ ಮಂದಿರದಲ್ಲಿ ಕೇವಲ ಒಂದು ಬಿಂದುವನ್ನು ಇಟ್ಟರೆ ಅದು ಅರ್ಥವಾಗುವುದಿಲ್ಲ. ಭಕ್ತಿಮಾರ್ಗದಲ್ಲಿ ಏನೇನು ನಡೆಯುತ್ತದೆ ಎಂಬುದನ್ನು ತಂದೆಯು ತಿಳಿಸುತ್ತಾರೆ. ವಿಜ್ಞಾನಿಗಳು ಅನ್ವೇಷಣೆಗಳನ್ನು ಮಾಡುತ್ತಾ ಇರುತ್ತಾರೆ, ಒಳ್ಳೊಳ್ಳೆಯ ವಸ್ತುಗಳನ್ನು ಕಂಡು ಹಿಡಿಯುತ್ತಾ ಇರುತ್ತಾರೆ, ವಿನಾಶಕ್ಕಾಗಿಯೇ ತಯಾರಿಸುತ್ತಾರೆ. ಮೊದಲು ಈ ವಿದ್ಯುತ್ ಇರಲಿಲ್ಲ, ಮಣ್ಣಿನ ದೀಪಗಳನ್ನು ಇಡುತ್ತಿದ್ದರು.

ತಂದೆಯು ತಿಳಿಸುತ್ತಾರೆ – ಮಧುರಾತಿ ಮಧುರ ಮಕ್ಕಳೇ, ಸ್ವಲ್ಪದರಲ್ಲಿಯೇ ಖುಷಿಯಾಗಿ ಬಿಡಬೇಡಿ, ಚೆನ್ನಾಗಿ ಧಾರಣೆ ಮಾಡಿಕೊಂಡು ಸಾಗರವನ್ನೇ ಗ್ರಹಿಸಿರಿ. ಯಾರು ಚೆನ್ನಾಗಿ ಸರ್ವೀಸ್ ಮಾಡುತ್ತಾರೆಯೋ ಅವರು ಒಳ್ಳೆಯ ಪದವಿ ಪಡೆಯುತ್ತಾರೆ. ಇಡೀ ದಿನ ಖುಷಿಯ ನಶೆಯೇರಿರಬೇಕು. ಇದಂತೂ ಛೀ ಛೀ ಪ್ರಪಂಚವಾಗಿದೆ, ಈಗ ಇಲ್ಲಿಂದ ಹೋಗುತ್ತೀರಿ. ಹಳೆಯ ಪ್ರಪಂಚವು ಸಮಾಪ್ತಿಯಾಗಲೇಬೇಕು ಅದಕ್ಕಾಗಿ ತಯಾರಿಗಳು ನಡೆಯುತ್ತಿವೆ. ಇನ್ನು ಕೆಲವೇ ದಿನಗಳಿದೆ, ಅದರಲ್ಲಿಯೂ ಎಷ್ಟೊಂದು ಸರ್ವೀಸ್ ಮಾಡಬೇಕಾಗಿದೆ. ಇಡೀ ಭಾರತದಲ್ಲಿ ಅಷ್ಟೇ ಅಲ್ಲ, ವಿದೇಶದಲ್ಲಿ ಎಲ್ಲಾ ಕಡೆಯೂ ಸುತ್ತಬೇಕಾಗಿದೆ. ಪತ್ರಿಕೆಗಳ ಮುಖಾಂತರ ವಿದೇಶದ ಮೂಲೆ-ಮೂಲೆಯವರೆಗೂ ಇದು ಅರ್ಥವಾಗಲಿ, ಈ ಏಣಿಯ ಚಿತ್ರದಿಂದ ಕೂಡಲೇ ಅರ್ಥ ಮಾಡಿಕೊಳ್ಳುವರು. ತಂದೆಯು ಬರುವುದೇ ಮಕ್ಕಳನ್ನು ಪುನಃ ಸ್ವರ್ಗವಾಸಿಗಳನ್ನಾಗಿ ಮಾಡಲು. ಅವಶ್ಯವಾಗಿ ಲಕ್ಷ್ಮೀ-ನಾರಾಯಣರು ಭಾರತದಲ್ಲಿಯೇ ರಾಜ್ಯ ಮಾಡಿ ಹೋಗಿದ್ದಾರೆ. ಭಾರತವು ಪ್ರಾಚೀನ ದೇಶವಾಗಿದೆ ಎಂದು ಬಹಳ ಮಹಿಮೆ ಮಾಡುತ್ತಾರೆ. ಭಾರತವು ಹೇಗಿತ್ತು, ಭಾರತದಲ್ಲಿ ಇಂತಹ ಪವಿತ್ರ ದೇವಿಯರಿದ್ದರು ಎಂದು ಬಹಳ ಮಹಿಮೆ ಮಾಡುತ್ತಾರೆ. ನೀವು ತಿಳಿದುಕೊಂಡಿದ್ದೀರಿ – ತಂದೆಯಿಂದ ನಾವು 21 ಜನ್ಮಗಳ ಪ್ರಾಲಬ್ಧವನ್ನು ಪಡೆಯುತ್ತೇವೆ. ತಂದೆಯು ಬಹಳ ಸಹಜವಾಗಿ ಓದಿಸುತ್ತಾರೆ. ಅಲ್ಲಿ ದ್ರೌಪದಿಯ ಕಾಲನ್ನು ಒತ್ತಿದರು ಎಂದು ತೋರಿಸುತ್ತಾರೆ. ಅದೇನೂ ಇಲ್ಲ. ತಂದೆಯು ತಿಳಿಸುತ್ತಾರೆ – ಮಕ್ಕಳೇ, ಭಕ್ತಿ ಮಾರ್ಗದಲ್ಲಿ ಅಲೆದಾಡಿ ಅಲೆದಾಡಿ ಸುಸ್ತಾಗಿದ್ದೀರಿ, ನಾನೀಗ ನಿಮ್ಮ ದಣಿವನ್ನು ದೂರ ಮಾಡುತ್ತೇನೆ. ನೀವು ಮೋಸ ಹೋಗುತ್ತಾ ಪತಿತರಾಗಿ ಬಿಟ್ಟಿದ್ದೀರಿ. ನಾನು ನಿಮ್ಮ ದಣಿವನ್ನು ದೂರ ಮಾಡುತ್ತಿದ್ದೇನೆ, ಮತ್ತೆಂದೂ ನೀವು ದುಃಖವನ್ನು ನೋಡುವುದಿಲ್ಲ. ಸ್ವಲ್ಪವೂ ದುಃಖದ ಹೆಸರಿರುವುದಿಲ್ಲ ಬಾಕಿ ಪುರುಷಾರ್ಥ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ಒಳ್ಳೆಯ ಪದವಿಯನ್ನು ಪಡೆದರೆ ಇವರು ಹಿಂದಿನ ಜನ್ಮದಲ್ಲಿ ಒಳ್ಳೆಯ ಕರ್ಮ ಮಾಡಿದ್ದಾರೆಂದು ಹೇಳುತ್ತಾರಲ್ಲವೇ! ಗಾಯನವಂತೂ ಆಗುತ್ತದೆಯಲ್ಲವೇ. ಆದರೆ ಇವರು ಯಾವಾಗ ಪುರುಷಾರ್ಥ ಮಾಡಿ ಈ ಪದವಿಯನ್ನು ಪಡೆದರು ಎಂಬುದನ್ನು ಯಾರೂ ತಿಳಿದುಕೊಂಡಿಲ್ಲ. ಈಗ ತಂದೆಯು ನಿಮಗೆ ಇಂತಹ ಕರ್ಮವನ್ನು ಕಲಿಸುತ್ತಾರೆ, ಒಳ್ಳೆಯ ಕರ್ಮ ಮಾಡಿ ಶ್ರೇಷ್ಠ ಪದವಿಯನ್ನು ಪಡೆಯಿರಿ ಎಂದು ನಿಮಗೂ ಹೇಳುತ್ತಾರೆ. ಇಲ್ಲಿ ಮನುಷ್ಯರ ಕರ್ಮವು ವಿಕರ್ಮವಾಗುತ್ತದೆ. ಅಲ್ಲಂತೂ ಸ್ವರ್ಗವಿರುತ್ತದೆ, ಆದ್ದರಿಂದ ಕರ್ಮವು ಅಕರ್ಮವಾಗುತ್ತದೆ. ಅಲ್ಲಿ ಈ ಜ್ಞಾನವಿರುವುದಿಲ್ಲ, ತಂದೆಯು ತಿಳಿಸುತ್ತಾರೆ – ನಾನು ಕರ್ಮಗಳ ಗುಹ್ಯಗತಿಯನ್ನು ಅರಿತುಕೊಂಡಿದ್ದೇನೆ, ಈ ಸಮಯದಲ್ಲಿ ಯಾರು ಒಳ್ಳೆಯ ಕರ್ಮ ಮಾಡುವರೋ ಅವರು ಒಳ್ಳೆಯ ಫಲವನ್ನು ಪಡೆಯುತ್ತಾರೆ. ಇದು ಕರ್ಮ ಕ್ಷೇತ್ರವಾಗಿದೆ. ಕೆಲವರು ಬಹಳ ಒಳ್ಳೆಯ ಕರ್ಮ ಮಾಡುತ್ತಾರೆ, ಕೆಲವರಿಗೆ ಸೇವೆಯದೇ ಚಿಂತನೆಯಿರುತ್ತದೆ. ಬಾಬಾ, ನನ್ನಲ್ಲಿ ಯಾವುದೇ ಕೊರತೆಯಿದೆಯೇ ಎಂದು ಕೇಳುತ್ತಾರೆ. ಸೇವೆಯನ್ನಂತೂ ಎಷ್ಟು ಮಾಡಲು ಸಾಧ್ಯವಿದೆಯೋ ಅಷ್ಟೂ ಮಾಡಿರಿ, ಸೇವೆಯು ವೃದ್ಧಿಯಾಗುತ್ತಾ ಇರುವುದು. ಸೇವೆ ಮಾಡುವವರು ತಯಾರಾಗುತ್ತಾ ಹೋಗುತ್ತಾರೆ. ಮನಸ್ಸಿನಲ್ಲಿ ಇದೇ ಧೈರ್ಯವಿದೆ – ಇನ್ನು ಕೆಲವೇ ದಿನಗಳಿದೆ. ಈಗ ಇಂತಹ ಪುರುಷಾರ್ಥ ಮಾಡಬೇಕು, ಇದರಿಂದ ಅಲ್ಲಿಯೂ ಶ್ರೇಷ್ಠ ಪದವಿಯನ್ನು ಪಡೆಯಬೇಕಾಗಿದೆ. ತಂದೆಯು ಈ ಜ್ಞಾನದ ಹುಲ್ಲನ್ನು ತಿನ್ನಿಸುತ್ತಾರೆ. ತಿಳಿಸುತ್ತಾರೆ, ಇದನ್ನು ಮೆಲುಕು ಹಾಕುತ್ತಾ ಇರಿ ಆಗ ಧಾರಣೆಯು ಪಕ್ಕಾ ಆಗಿರುವುದು ಮತ್ತು ಖುಷಿಯ ನಶೆಯೇರುವುದು. ಬಹಳ ಸರ್ವೀಸ್ ಮಾಡಬೇಕಾಗಿದೆ, ಅನೇಕರಿಗೆ ಸಂದೇಶ ಕೊಡಬೇಕಾಗಿದೆ. ನೀವು ಪೈಗಂಬರನ ಮಕ್ಕಳು ಪೈಗಂಬರರಾಗಿದ್ದೀರಿ. ಒಂದು ದಿನ ದೊಡ್ಡ ಪತ್ರಿಕೆಗಳಲ್ಲಿಯೂ ನಿಮ್ಮ ಚಿತ್ರಗಳು ಬರುತ್ತವೆ, ವಿದೇಶದವರೆಗೂ ಪತ್ರಿಕೆಗಳು ಹೋಗುತ್ತವೆಯಲ್ಲವೇ. ಇದು ಪರಮಾತ್ಮನ ಜ್ಞಾನ ಎಂದು ಚಿತ್ರಗಳಿಂದ ತಿಳಿದುಕೊಳ್ಳುತ್ತಾರೆ ಬಾಕಿ ನೆನಪಿನದೇ ಪರಿಶ್ರಮವಿದೆ. ಅದನ್ನು ಭಾರತವಾಸಿಗಳೇ ಪರಿಶ್ರಮ ಪಡುತ್ತಾರೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

2. ಯಾವುದೇ ಆಸುರೀ ಸ್ವಭಾವವಿದೆಯೆಂದರೆ ಅದನ್ನು ಬಿಡಬೇಕಾಗಿದೆ. ತಂದೆಯು ಯಾವ ಜ್ಞಾನದ ಹುಲ್ಲನ್ನು(ಮುರುಳಿ) ತಿನ್ನಿಸುತ್ತಾರೆ, ಅದನ್ನು ಮೆಲುಕು ಹಾಕುತ್ತಿರಬೇಕು.

ವರದಾನ:-

ಪವಿತ್ರವಾಗಿರುವುದಾಗಿದೆ ಹಾಗೂ ಕರ್ತವ್ಯ – ಸದಾ ಗುಣಗಳೆಂಬ ರತ್ನಗಳನ್ನೇ ಆಯ್ಕೆ ಮಾಡುವುದು. ಅವಗುಣವೆಂಬ ಕಲ್ಲುಗಳನ್ನೆಂದಿಗೂ ಸಹ ಬುದ್ಧಿಯಲ್ಲಿ ಸ್ವೀಕರಿಸಬಾರದು. ಆದರೆ ಈ ಕರ್ತವ್ಯವನ್ನು ಪಾಲನೆ ಮಾಡುವುದಕ್ಕಾಗಿ ಸದಾ ಒಂದು ಆಜ್ಞೆಯು ನೆನಪಿರಲಿ – ಕೆಟ್ಟ ವಿಚಾರ ಮಾಡಬಾರದು, ಕೆಟ್ಟ ಮಾತುಗಳನ್ನು ಆಲಿಸಬಾರದು, ಕೆಟ್ಟ ಚಿತ್ರವನ್ನು ನೋಡಬಾರದು, ಕೆಟ್ಟ ಮಾತನ್ನು ಮಾತನಾಡಬಾರದು…… ಯಾರು ಈ ಆಜ್ಞೆಯನ್ನು ಸದಾ ಸ್ಮೃತಿಯಲ್ಲಿ ಇಟ್ಟುಕೊಳ್ಳುತ್ತಾರೆಯೋ ಅವರು ಸದಾ ಸಾಗರನ ದಡದಲ್ಲಿರುತ್ತಾರೆ. ಹಂಸಗಳ ನೆಲೆಯೂ ಸಹ ಸಾಗರವೇ ಆಗಿದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top