25 November 2021 KANNADA Murli Today | Brahma Kumaris

Read and Listen today’s Gyan Murli in Kannada

November 24, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

“ಮಧುರ ಮಕ್ಕಳೇ - ತಮ್ಮ ಅದೃಷ್ಟವನ್ನು ಶ್ರೇಷ್ಠ ಮಾಡಿಕೊಳ್ಳಬೇಕೆಂದರೆ ಆತ್ಮಿಕ ಸೇವೆಯ ಉಮ್ಮಂಗವನ್ನು ಇಟ್ಟುಕೊಳ್ಳಿ, ಎಲ್ಲರಿಗೆ ಜ್ಞಾನ ಧನದ ದಾನ ಮಾಡುತ್ತಾ ಇರಿ”

ಪ್ರಶ್ನೆ:: -

ಆತ್ಮಿಕ ತಂದೆಯು ಇಂತಹ ಯಾವ ಶ್ರೀಮತವನ್ನು ಕೊಡುತ್ತಾರೆ ಯಾವುದನ್ನು ಇಲ್ಲಿಯವರೆಗೆ ಯಾವುದೇ ಮನುಷ್ಯರು ಕೊಡಲಿಲ್ಲ?

ಉತ್ತರ:-

ಹೇ ಆತ್ಮಿಕ ಮಕ್ಕಳೇ, ನೀವು ಆತ್ಮಿಕ ಸೇವೆಯಲ್ಲಿ ದಧೀಚಿ ಋಷಿಯ ತರಹ ಮೂಳೆ-ಮೂಳೆಗಳನ್ನು ಸವೆಸಿರಿ. ತಂದೆಯಿಂದ ಯಾವ ಅವಿನಾಶಿ ಜ್ಞಾನರತ್ನಗಳು ಸಿಕ್ಕಿದೆಯೋ ಅದರ ದಾನ ಮಾಡಿ. ಇದೇ ಸತ್ಯ ಸೇವೆಯಾಗಿದೆ. ಇಂತಹ ಸೇವೆ ಮಾಡುವ ಮತವನ್ನು ಯಾವುದೇ ಮನುಷ್ಯರು ಕೊಡಲು ಸಾಧ್ಯವಿಲ್ಲ. ಆತ್ಮಿಕ ಸೇವೆ ಮಾಡುವವರು ಖುಷಿಯಲ್ಲಿ ನರ್ತಿಸುತ್ತಾ ಇರುತ್ತಾರೆ. ಅವರ ಅದೃಷ್ಟವು ಶ್ರೇಷ್ಠವಾಗುತ್ತಾ ಹೋಗುತ್ತದೆ.

♫ ಕೇಳು ಇಂದಿನ ಮುರ್ಲಿ (audio)➤

ಗೀತೆ:-

ಪ್ರಪಂಚ ಬದಲಾದರೂ ನಾವು ಬದಲಾಗುವುದಿಲ್ಲ…….

ಓಂ ಶಾಂತಿ. ಮಕ್ಕಳು ಗೀತೆಯ ಎರಡು ಸಾಲನ್ನು ಕೇಳಿದಿರಿ, ಅವರಂತೂ ಗೀತೆಯನ್ನೇ ಮಾಡಿ ಬಿಟ್ಟಿದ್ದಾರೆ. ಹೇಗೆ ಯಾರದೇ ನಿಶ್ಚಿತಾರ್ಥವಾಗುತ್ತದೆಯೆಂದರೆ ಇದು ಪಕ್ಕಾ ಆಗಿ ಬಿಡುತ್ತದೆ, ಸ್ತ್ರೀ-ಪುರುಷರು ಒಬ್ಬರಿನ್ನೊಬ್ಬರನ್ನು ಬಿಡುವುದೇ ಇಲ್ಲ. ಪರಸ್ಪರ ಆಗದೇ ಬಿಟ್ಟು ಬಿಡುವವರು ಕೆಲವರೇ ವಿರಳ. ಇಲ್ಲಿ ನೀವು ಮಕ್ಕಳು ಯಾರ ಜೊತೆ ಪ್ರತಿಜ್ಞೆ ಮಾಡುತ್ತೀರಿ? ಈಶ್ವರನ ಜೊತೆ. ಅವರ ಜೊತೆ ನೀವು ಮಕ್ಕಳ ಅರ್ಥಾತ್ ಪ್ರಿಯತಮೆಯರ ನಿಶ್ಚಿತಾರ್ಥವಾಗಿದೆ ಆದರೆ ಯಾರು ವಿಶ್ವದ ಮಾಲೀಕರನ್ನಾಗಿ ಮಾಡುತ್ತಾರೆಯೋ ಅವರನ್ನೂ ಸಹ ಬಿಟ್ಟು ಬಿಡುತ್ತಾರೆ. ಇಲ್ಲಿ ನೀವು ಮಕ್ಕಳು ಕುಳಿತಿದ್ದೀರಿ, ನಿಮಗೆ ತಿಳಿದಿದೆ – ಈಗ ಬೇಹದ್ದಿನ ಬಾಪ್ದಾದಾ ಬಂದರು ಎಂದರೆ ಬಂದು ಬಿಟ್ಟರು. ಈ ಸ್ಥಿತಿಯು ಇಲ್ಲಿರುವಾಗಲೇ ನಿಮಗೆ ಇರುತ್ತದೆ, ಹೊರಗಿನ ಸೇವಾಕೇಂದ್ರಗಳಲ್ಲಿ ಇರುವುದಿಲ್ಲ. ಬಾಪ್ದಾದಾ ಬಂದರು ಎಂದರೆ ಬಂದು ಬಿಟ್ಟರು ಎಂದು ನೀವು ಇಲ್ಲಿ ತಿಳಿದುಕೊಳ್ಳುತ್ತೀರಿ. ಹೊರಗಿನ ಸೇವಾಕೇಂದ್ರಗಳಲ್ಲಿ ತಂದೆಯು ನುಡಿಸಿರುವ ಮುರುಳಿಯು ಬಂದಿತು ಎಂದು ತಿಳಿದುಕೊಳ್ಳುತ್ತಾರೆ. ಇಲ್ಲಿ ಮತ್ತು ಅಲ್ಲಿಗೆ ಬಹಳ ಅಂತರವಿರುತ್ತದೆ ಏಕೆಂದರೆ ಇಲ್ಲಿ ಬೇಹದ್ದಿನ ಬಾಪ್ದಾದಾರವರ ಸನ್ಮುಖದಲ್ಲಿ ನೀವು ಕುಳಿತಿದ್ದೀರಿ, ಅಲ್ಲಿ ನೀವು ಸನ್ಮುಖದಲ್ಲಿ ಇರುವುದಿಲ್ಲ. ಸನ್ಮುಖದಲ್ಲಿ ಹೋಗಿ ಮುರುಳಿ ಕೇಳಬೇಕೆಂದು ಬಯಸುತ್ತೀರಿ. ಇಲ್ಲಿ ಮಕ್ಕಳ ಬುದ್ಧಿಯಲ್ಲಿ ಬಂದಿತು, ತಂದೆಯು ಬಂದರು ಎಂದರೆ ಬಂದು ಬಿಟ್ಟರು. ಹೇಗೆ ಅನ್ಯಸತ್ಸಂಗಗಳಲ್ಲಿ ಇಂತಹ ಸ್ವಾಮೀಜಿಯು ಬರುವರು ಎಂದು ತಿಳಿದುಕೊಳ್ಳುತ್ತಾರೆ ಆದರೆ ಈ ವಿಚಾರವೂ ಸಹ ಎಲ್ಲರಿಗೆ ಏಕರಸವಾಗಿ ಇರುವುದಿಲ್ಲ. ಕೆಲವರಿಗೆ ಸಂಬಂಧಿಗಳು ನೆನಪಿಗೆ ಬರುವರು, ಬುದ್ಧಿಯು ಒಬ್ಬ ಗುರುವಿನ ಜೊತೆಯೂ ನಿಲ್ಲುವುದಿಲ್ಲ. ಸ್ವಾಮಿಯ ನೆನಪಿನಲ್ಲಿ ಕುಳಿತಿರುವವರು ಕೆಲವರೇ ವಿರಳ. ಇಲ್ಲಿಯೂ ಹಾಗೆಯೇ. ಎಲ್ಲರೂ ಶಿವ ತಂದೆಯ ನೆನಪಿನಲ್ಲಿ ಕುಳಿತಿರುವುದಿಲ್ಲ, ಬುದ್ಧಿಯು ಓಡುತ್ತಾ ಇರುತ್ತದೆ. ಮಿತ್ರ ಸಂಬಂಧಿಗಳು ನೆನಪಿಗೆ ಬರುತ್ತಾರೆ, ಇಡೀ ಸಮಯ ಒಬ್ಬ ಶಿವ ತಂದೆಯ ಸನ್ಮುಖದಲ್ಲಿದ್ದರೆ ಅಹೋ ಸೌಭಾಗ್ಯ! ಸ್ಥಿರವಾಗಿ ನೆನಪಿನಲ್ಲಿ ಕೆಲವರೇ ವಿರಳ ಇರುತ್ತಾರೆ. ಇಲ್ಲಿ ಶಿವ ತಂದೆಯ ಸನ್ಮುಖ ಇರುವುದರಲ್ಲಿ ಬಹಳ ಖುಷಿಯಿರಬೇಕು. ಅತೀಂದ್ರಿಯ ಸುಖವನ್ನೂ ಗೋಪಿವಲ್ಲಭನ ಗೋಪ-ಗೋಪಿಕೆಯರಿಂದ ಕೇಳಿರಿ, ಇದು ಇಲ್ಲಿನ ಗಾಯನವಾಗಿದೆ. ಇಲ್ಲಿ ನೀವು ತಂದೆಯ ನೆನಪಿನಲ್ಲಿ ಕುಳಿತಿದ್ದೀರಿ, ನಾವೀಗ ಈಶ್ವರನ ಮಕ್ಕಳಾಗಿದ್ದೇವೆ ನಂತರ ದೇವತೆಗಳ ಮಡಿಲಿಗೆ ಹೋಗುತ್ತೇವೆಂದು ನಿಮಗೆ ತಿಳಿದಿದೆ. ಭಲೆ ಕೆಲವರ ಬುದ್ಧಿಯಲ್ಲಿ ಸರ್ವೀಸಿನ ವಿಚಾರಗಳು ನಡೆಯುತ್ತವೆ – ಈ ಚಿತ್ರದಲ್ಲಿ ಇದನ್ನು ತಿದ್ದುಪಡಿ ಮಾಡಬೇಕು, ಇದನ್ನು ಬರೆಯಬೇಕು ಎಂದು. ಆದರೆ ಒಳ್ಳೆಯ ಮಕ್ಕಳು ಇದನ್ನೇ ತಿಳಿದುಕೊಳ್ಳುತ್ತಾರೆ- ಈಗಂತೂ ತಂದೆಯಿಂದಲೇ ಕೇಳಬೇಕಾಗಿದೆ, ಮತ್ತ್ಯಾವುದೇ ಸಂಕಲ್ಪಗಳು ಬರಲು ಬಿಡುವುದಿಲ್ಲ. ತಂದೆಯು ಜ್ಞಾನರತ್ನಗಳಿಂದ ಜೋಳಿಗೆಯನ್ನು ತುಂಬಿಸಲು ಬಂದಿದ್ದಾರೆ ಅಂದಮೇಲೆ ತಂದೆಯೊಂದಿಗೆ ಬುದ್ಧಿಯೋಗವನ್ನು ಜೋಡಿಸಬೇಕಾಗಿದೆ. ನಂಬರ್ವಾರ್ ಧಾರಣೆ ಮಾಡಿಕೊಳ್ಳುವವರಂತೂ ಇದ್ದೇ ಇರುತ್ತಾರೆ. ಕೆಲವರು ಚೆನ್ನಾಗಿ ಧಾರಣೆ ಮಾಡಿಕೊಳ್ಳುತ್ತಾರೆ, ಕೆಲವರು ಕಡಿಮೆ ಧಾರಣೆ ಮಾಡುತ್ತಾರೆ. ಬುದ್ಧಿಯೋಗ ಮತ್ತೊಂದು ಕಡೆ ಓಡುತ್ತಾ ಇರುತ್ತದೆ, ಧಾರಣೆಯಾಗುವುದಿಲ್ಲ, ಕಚ್ಚಾ ಆಗಿಬಿಡುತ್ತಾರೆ. ಒಂದೆರಡು ಬಾರಿ ಮುರುಳಿಯನ್ನು ಕೇಳಿ ಧಾರಣೆಯಾಗಲಿಲ್ಲವೆಂದರೆ ಅದೇ ಹವ್ಯಾಸವು ಪಕ್ಕಾ ಆಗಿ ಬಿಡುತ್ತದೆ. ಮತ್ತೆ ಎಷ್ಟಾದರೂ ಮುರುಳಿಯನ್ನು ಕೇಳುತ್ತಾ ಇರಲಿ ಧಾರಣೆಯಾಗುವುದೇ ಇಲ್ಲ, ಯಾರಿಗೂ ತಿಳಿಸುವುದಕ್ಕೂ ಸಾಧ್ಯವಿಲ್ಲ. ಯಾರಿಗೆ ಧಾರಣೆಯಾಗಿರುವುದೋ ಅವರಿಗೆ ಸರ್ವೀಸಿನ ಉಮ್ಮಂಗವಿರುವುದು. ಅವರು ಸರ್ವೀಸಿಗಾಗಿ ಓಡುತ್ತಾ ಇರುವರು. ಹೋಗಿ ಧನ ದಾನ ಮಾಡಲೇ? ಎಂದು. ಏಕೆಂದರೆ ಈ ಧನವು ಒಬ್ಬ ತಂದೆಯ ವಿನಃ ಮತ್ತ್ಯಾರ ಬಳಿಯೂ ಇಲ್ಲ. ತಂದೆಗೆ ಇದೂ ಗೊತ್ತಿದೆ – ಎಲ್ಲರಿಗೆ ಧಾರಣೆಯಾಗಲು ಸಾಧ್ಯವಿಲ್ಲ. ಎಲ್ಲರೂ ಏಕರಸವಾಗಿ ಶ್ರೇಷ್ಠ ಪದವಿಯನ್ನು ಪಡೆಯಲು ಸಾಧ್ಯವಿಲ್ಲ ಆದ್ದರಿಂದ ಬುದ್ಧಿಯು ಬೇರೆ ಕಡೆ ಅಲೆಯುತ್ತಾ ಇರುತ್ತದೆ. ಭವಿಷ್ಯ ಅದೃಷ್ಟವು ಅಷ್ಟು ಶ್ರೇಷ್ಠವಾಗುವುದಿಲ್ಲ. ಇನ್ನೂ ಕೆಲವರು ಸ್ಥೂಲ ಸೇವೆಯಲ್ಲಿ ತಮ್ಮ ಮೂಳೆಗಳನ್ನು ಸವೆಸುತ್ತಾರೆ, ಎಲ್ಲರನ್ನೂ ಖುಷಿ ಪಡಿಸುತ್ತಾರೆ, ಹೇಗೆ ಭೋಜನವನ್ನು ತಯಾರಿಸುತ್ತಾರೆ, ಉಣಬಡಿಸುತ್ತಾರೆಂದರೆ ಇದೂ ಸಹ ಸಬ್ಜೆಕ್ಟ್ ಅಲ್ಲವೆ. ಯಾರಿಗೆ ಸೇವೆಯ ಉಮ್ಮಂಗವಿರುವುದೋ ಅವರು ಬಾಯಿಂದ ಅನ್ಯರಿಗೆ ಹೇಳದೇ ಇರುವುದೇ ಇಲ್ಲ. ಎಲ್ಲಿಯೂ ದೇಹಾಭಿಮಾನವು ಇಲ್ಲವೆ? ಹಿರಿಯರಿಗೆ ಗೌರವ ಕೊಡುತ್ತಾರೆಯೇ? ಎಂದು ಮತ್ತೆ ತಂದೆಯೂ ನೋಡುತ್ತಾರೆ. ದೊಡ್ಡ ಮಹಾರಥಿಗಳಿಗೆ ಗೌರವ ಕೊಡಬೇಕಾಗಿದೆ. ಹಾ! ಕೆಲವರು ಚಿಕ್ಕವರೂ ಸಹ ಬಹಳ ಬುದ್ಧಿವಂತರಾಗಿ ಬಿಡುತ್ತಾರೆಂದರೆ ಅವರಿಗೆ ದೊಡ್ಡವರೂ ಸಹ ಗೌರವ ಕೊಡಬೇಕಾಗಿದೆ ಏಕೆಂದರೆ ಅವರ ಬುದ್ಧಿಯು ಚೆನ್ನಾಗಿ ಕೆಲಸ ಮಾಡುತ್ತದೆ. ಸರ್ವೀಸಿನ ಉಮ್ಮಂಗವನ್ನು ನೋಡಿ ತಂದೆಯೂ ಖುಷಿಯಾಗುತ್ತಾರಲ್ಲವೆ – ಇವರು ಒಳ್ಳೆಯ ಸರ್ವೀಸ್ ಮಾಡುತ್ತಾರೆ ಎಂದು. ಇಡೀ ದಿನ ಪ್ರದರ್ಶನಿಯಲ್ಲಿ ತಿಳಿಸುವ ಅಭ್ಯಾಸ ಮಾಡಿಕೊಳ್ಳಬೇಕು- ಪ್ರಜೆಗಳು ಅನೇಕರು ತಯಾರಾಗುವರು. ಲಕ್ಷಾಂತರ ಮಂದಿ ಪ್ರಜೆಗಳು ಬೇಕಾಗಿದೆ, ಮತ್ತ್ಯಾವುದೇ ಉಪಾಯವಿಲ್ಲ. ಸೂರ್ಯವಂಶಿ, ಚಂದ್ರವಂಶಿ, ರಾಜ-ರಾಣಿ, ಪ್ರಜೆ ಎಲ್ಲರೂ ಇಲ್ಲಿಯೇ ತಯಾರಾಗುವರು. ಅಂದಮೇಲೆ ಎಷ್ಟೊಂದು ಸರ್ವೀಸ್ ಮಾಡಬೇಕಾಗಿದೆ! ನಾವೀಗ ಬ್ರಾಹ್ಮಣರಾಗಿದ್ದೇವೆಂದು ಮಕ್ಕಳ ಬುದ್ಧಿಯಲ್ಲಿದೆ. ಗೃಹಸ್ಥದಲ್ಲಿ ಇರುವುದರಿಂದ ಪ್ರತಿಯೊಬ್ಬರ ಸ್ಥಿತಿಯು ಭಿನ್ನ-ಭಿನ್ನವಾಗಿ ಇರುತ್ತದೆಯಲ್ಲವೆ. ಗೃಹಸ್ಥವನ್ನಂತೂ ಬಿಡುವಂತಿಲ್ಲ. ತಂದೆಯು ತಿಳಿಸುತ್ತಾರೆ – ಭಲೆ ಮನೆಯಲ್ಲಿಯೇ ಇರಿ ಆದರೆ ಬುದ್ಧಿಯಲ್ಲಿ ಈ ನಿಶ್ಚಯವಿರಲಿ – ಈ ಹಳೆಯ ಪ್ರಪಂಚವು ಸಮಾಪ್ತಿಯಾಗಿ ಬಿಟ್ಟಿದೆ, ನಮಗೆ ಈಗ ತಂದೆಯೊಂದಿಗೆ ಕೆಲಸವಿದೆ. ಇದನ್ನೂ ತಿಳಿದುಕೊಂಡಿದ್ದೀರಿ, ಕಲ್ಪದ ಮೊದಲು ಯಾರು ಈ ಜ್ಞಾನವನ್ನು ತೆಗೆದುಕೊಂಡಿದ್ದರೋ ಅವರೇ ತೆಗೆದುಕೊಳ್ಳುವರು. ಕ್ಷಣ, ಪ್ರತಿಕ್ಷಣವು ಕಲ್ಪದ ಹಿಂದಿನಂತೆ ಪುನರಾವರ್ತನೆಯಾಗುತ್ತಿದೆ, ಆತ್ಮದಲ್ಲಿ ಜ್ಞಾನವಿದೆಯಲ್ಲವೆ. ತಂದೆಯ ಬಳಿಯೂ ಜ್ಞಾನವಿದೆ, ನೀವು ಮಕ್ಕಳೂ ಸಹ ತಂದೆಯ ಸಮಾನರಾಗಬೇಕಾಗಿದೆ. ಜ್ಞಾನವನ್ನು ಧಾರಣೆ ಮಾಡಿಕೊಳ್ಳಬೇಕಾಗಿದೆ, ಎಲ್ಲಾ ಮಾತುಗಳನ್ನು ಒಂದೇಸಲ ತಿಳಿಸಲಾಗುವುದಿಲ್ಲ. ಲಕ್ಷ್ಯವನ್ನು ಪಕ್ಕಾ ಇಟ್ಟುಕೊಳ್ಳಬೇಕಾಗುತ್ತದೆ. ವಿನಾಶವು ಸನ್ಮುಖದಲ್ಲಿ ನಿಂತಿದೆ, ಇದು ಅದೇ ವಿನಾಶವಾಗಿದೆ, ಸತ್ಯ-ತ್ರೇತಾಯುಗದಲ್ಲಿ ಯಾವುದೇ ಯುದ್ಧವಾಗುವುದಿಲ್ಲ ನಂತರ ಯಾವಾಗ ಬಹಳ ಧರ್ಮಗಳಾಗುವವೋ ಸೇನೆಯು ದೊಡ್ಡದಾಗುವುದು ಆಗ ಯುದ್ಧವು ಆರಂಭವಾಗುತ್ತದೆ. ಮೊಟ್ಟ ಮೊದಲು ಆತ್ಮರು ಸತೋಪ್ರಧಾನತೆಯಿಂದ ಇಳಿಯುತ್ತಾ ನಂತರ ಸತೋ, ರಜೋ, ತಮೋದಲ್ಲಿ ಬರುತ್ತಾರೆ. ಹೇಗೆ ರಾಜಧಾನಿಯು ಸ್ಥಾಪನೆಯಾಗುತ್ತಿದೆ ಎಂಬುದೆಲ್ಲವನ್ನೂ ಬುದ್ಧಿಯಲ್ಲಿ ಇಟ್ಟುಕೊಳ್ಳಬೇಕಾಗಿದೆ. ಇಲ್ಲಿ ಕುಳಿತಿದ್ದರೂ ಇದೇ ಬುದ್ಧಿಯಲ್ಲಿರಲಿ – ಶಿವ ತಂದೆಯು ಬಂದು ನಮಗೆ ಖಜಾನೆಯನ್ನು ಕೊಡುತ್ತಾರೆ, ಅದನ್ನು ಬುದ್ಧಿಯಲ್ಲಿ ಧಾರಣೆ ಮಾಡಿಕೊಳ್ಳಬೇಕಾಗಿದೆ. ಒಳ್ಳೊಳ್ಳೆಯ ಮಕ್ಕಳು ಅಂಶಗಳನ್ನು ಬರೆದುಕೊಳ್ಳುತ್ತಾರೆ. ಇದು ಒಳ್ಳೆಯದಾಗಿದೆ ಏಕೆಂದರೆ ಬುದ್ಧಿಯಲ್ಲಿ ಅನೇಕ ವಿಚಾರಗಳು ಬರುವುದು, ಇಂದು ಈ ವಿಷಯದ ಬಗ್ಗೆ ತಿಳಿಸೋಣ ಎಂದು. ತಂದೆಯು ತಿಳಿಸುತ್ತಾರೆ- ನಾನು ನಿಮಗೆ ಎಷ್ಟೊಂದು ಖಜಾನೆಯನ್ನು ಕೊಟ್ಟಿದ್ದೆನು, ಸತ್ಯ-ತ್ರೇತಾಯುಗದಲ್ಲಿ ನಿಮ್ಮ ಬಳಿ ಅಪಾರ ಹಣವಿತ್ತು ನಂತರ ವಾಮ ಮಾರ್ಗದಲ್ಲಿ ಇಳಿದ ಕಾರಣ ಕಡಿಮೆಯಾಗುತ್ತಾ ಹೋಯಿತು, ಖುಷಿಯೂ ಕಡಿಮೆಯಾಗುತ್ತಾ ಹೋಯಿತು. ಒಂದಲ್ಲ ಒಂದು ವಿಕರ್ಮಗಳಾಗತೊಡಗಿತು, ಇಳಿಯುತ್ತಾ-ಇಳಿಯುತ್ತಾ ಕಲೆಗಳು ಕಡಿಮೆಯಾಗುತ್ತವೆ. ಸತೋಪ್ರಧಾನ, ಸತೋ, ರಜೋ, ತಮೋ ಹಂತಗಳಿರುತ್ತವೆಯಲ್ಲವೆ. ಸತೋದಿಂದ ರಜೋದಲ್ಲಿ ಬರುತ್ತಾರೆ ಅಂದರೆ ಒಮ್ಮೆಲೆ ಬಂದು ಬಿಡುತ್ತಾರೆ ಎಂದಲ್ಲ. ತಮೋಪ್ರಧಾನತೆಯಲ್ಲಿಯೂ ನಿಧಾನ-ನಿಧಾನವಾಗಿ ಇಳಿಯುತ್ತಾರೆ. ಅದರಲ್ಲಿಯೂ ಸತೋ, ರಜೋ, ತಮೋ ಹಂತಗಳು ಬರುತ್ತವೆ. ಕೂಡಲೇ ತಮೋಪ್ರಧಾನ ಆಗಿ ಬಿಡುವುದಿಲ್ಲ. ನಿಧಾನ-ನಿಧಾನವಾಗಿ ಏಣಿಯನ್ನು ಇಳಿಯುತ್ತಾ ಹೋಗುತ್ತಾರೆ, ಕಲೆಗಳು ಕಡಿಮೆಯಾಗುತ್ತವೆ. ಈಗ ಮೇಲೇರಬೇಕಾಗಿದೆ. ತಮೋಪ್ರಧಾನರಿಂದ ಸತೋಪ್ರಧಾನರಾಗಬೇಕಾಗಿದೆ. ಇದಕ್ಕಾಗಿ ಸಮಯವು ಬಹಳ ಕಡಿಮೆಯಿದೆ, ಏರಿದರೆ ವೈಕುಂಠ ರಸ ಎಂದು ಗಾಯನವೂ ಇದೆ. ಕಾಮದ ಪೆಟ್ಟು ಬಿದ್ದರೆ ಒಮ್ಮೆಲೆ ಪುಡಿ ಪುಡಿಯಾಗುತ್ತಾರೆ, ಮೂಳೆಗಳು ಪುಡಿಯಾಗುತ್ತವೆ. ಹೇಗೆ ಕೆಲವು ಮನುಷ್ಯರು ತಮ್ಮ ಜೀವಘಾತ ಮಾಡಿಕೊಳ್ಳುತ್ತಾರೆ, ಆತ್ಮಘಾತವಲ್ಲ ಜೀವಘಾತವಾಗಿದೆ. ಹಾಗೆಯೇ ಇಲ್ಲಿಯೂ ಆತ್ಮದ ಘಾತವಾಗಿ ಬಿಡುತ್ತದೆ ಅಂದರೆ ಮಾಡಿಕೊಂಡಿರುವ ಸಂಪಾದನೆಯೆಲ್ಲವೂ ಸಮಾಪ್ತಿಯಾಗುತ್ತದೆ. ಇಲ್ಲಂತೂ ತಂದೆಯಿಂದ ಆಸ್ತಿಯನ್ನು ತೆಗೆದುಕೊಳ್ಳಬೇಕಾಗಿದೆ, ತಂದೆಯನ್ನು ನೆನಪು ಮಾಡಬೇಕಾಗಿದೆ ಏಕೆಂದರೆ ತಂದೆಯಿಂದ ರಾಜ್ಯಭಾಗ್ಯ ಸಿಗುತ್ತದೆ ಅಂದಮೇಲೆ ತಮ್ಮೊಂದಿಗೆ ಕೇಳಿಕೊಳ್ಳಿ – ನಾನು ತಂದೆಯನ್ನು ನೆನಪು ಮಾಡಿ ಭವಿಷ್ಯಕ್ಕಾಗಿ ಎಷ್ಟು ಸಂಪಾದನೆ ಮಾಡಿಕೊಂಡೆನು? ಎಷ್ಟು ಜನ ಕುರುಡರಿಗೆ ಊರುಗೋಲಾದೆನು? ಮನೆ-ಮನೆಗೂ ಸಂದೇಶ ಕೊಡಬೇಕಾಗಿದೆ – ಈ ಹಳೆಯ ಪ್ರಪಂಚವು ಬದಲಾಗುತ್ತಿದೆ, ತಂದೆಯು ಹೊಸ ಪ್ರಪಂಚಕ್ಕಾಗಿ ರಾಜಯೋಗವನ್ನು ಕಲಿಸುತ್ತಿದ್ದಾರೆ. ಏಣಿಚಿತ್ರದಲ್ಲಿ ತೋರಿಸಿದ್ದಾರೆ, ಈ ಚಿತ್ರಗಳನ್ನು ಮಾಡಿಸುವುದರಲ್ಲಿ ಪರಿಶ್ರಮವಾಗುತ್ತದೆ. ಮನುಷ್ಯರಿಗೆ ತಿಳಿದುಕೊಳ್ಳುವುದರಲ್ಲಿ ಸಹಜವಾಗಲು ಹೇಗೆ ಮಾಡಿಸುವುದು ಎಂದು ಇಡೀ ದಿನ ವಿಚಾರ ನಡೆಯುತ್ತಾ ಇರುತ್ತದೆ. ಇಡೀ ಪ್ರಪಂಚದವರಂತೂ ಬರುವುದಿಲ್ಲ, ದೇವಿ-ದೇವತಾ ಧರ್ಮದವರೇ ಬರುತ್ತಾರೆ. ನಿಮ್ಮ ಸೇವೆಯು ಬಹಳ ನಡೆಯುವುದಿದೆ. ನಿಮಗೆ ತಿಳಿದಿದೆ, ನಮ್ಮ ತರಗತಿಯು ಎಲ್ಲಿಯವರೆಗೆ ನಡೆಯುವುದು ಎಂದು. ಅವರಂತೂ ಕಲ್ಪದ ಆಯಸ್ಸು ಲಕ್ಷಾಂತರ ವರ್ಷಗಳೆಂದು ತಿಳಿದುಕೊಳ್ಳುತ್ತಾರೆ ಆದ್ದರಿಂದ ಶಾಸ್ತ್ರ ಇತ್ಯಾದಿಗಳನ್ನು ತಿಳಿಸುತ್ತಲೇ ಇರುತ್ತಾರೆ. ಯಾವಾಗ ಅಂತ್ಯವಾಗುವುದೋ ಆಗ ಎಲ್ಲರ ಸದ್ಗತಿದಾತನು ಬರುವರು ನಂತರ ನಮ್ಮ ಯಾವ ಶಿಷ್ಯರಿರುವರೋ ಅವರಿಗೂ ಗತಿ ಸಿಗುವುದು ನಂತರ ನಾವು ಹೋಗಿ ಜ್ಯೋತಿಯಲ್ಲಿ ಸಮಾವೇಶವಾಗುತ್ತೇವೆ ಎಂದು ತಿಳಿಯುತ್ತಾರೆ. ಆದರೆ ಈ ರೀತಿಯಿಲ್ಲ, ನೀವು ತಿಳಿದುಕೊಂಡಿದ್ದೀರಿ – ನಾವು ಅಮರ ತಂದೆಯ ಮೂಲಕ ಸತ್ಯ-ಸತ್ಯವಾದ ಅಮರ ಕಥೆಯನ್ನು ಕೇಳುತ್ತಿದ್ದೇವೆ ಅಂದಮೇಲೆ ಅಮರ ತಂದೆಯು ಏನು ಹೇಳುತ್ತಾರೆಯೋ ಅದನ್ನು ಪಾಲಿಸಬೇಕು, ಕೇವಲ ಇಷ್ಟೇ ತಿಳಿಸುತ್ತಾರೆ – ನನ್ನನ್ನು ನೆನಪು ಮಾಡಿರಿ ಮತ್ತು ಪವಿತ್ರರಾಗಿರಿ. ಇಲ್ಲದಿದ್ದರೆ ಬಹಳ ಶಿಕ್ಷೆಗಳನ್ನು ಅನುಭವಿಸಬೇಕಾಗುವುದು, ಪದವಿಯೂ ಕಡಿಮೆ ಸಿಗುವುದು. ಸರ್ವೀಸಿನಲ್ಲಿ ಪರಿಶ್ರಮ ಪಡಬೇಕಾಗಿದೆ. ಹೇಗೆ ಸೇವೆಯಲ್ಲಿ ತಮ್ಮ ಮೂಳೆ-ಮೂಳೆಗಳನ್ನು ಅರ್ಪಿಸಿದರು ಎಂದು ದಧೀಚಿ ಋಷಿಯ ಉದಾಹರಣೆಯಿದೆ, ತಮ್ಮ ಶರೀರದ ವಿಚಾರವನ್ನೂ ಮಾಡದೆ ಸರ್ವೀಸಿನಲ್ಲಿ ಇರಬೇಕಾಗಿದೆ. ಇದಕ್ಕೆ ಮೂಳೆಮೂಳೆಗಳನ್ನು ತೊಡಗಿಸುವುದು ಎಂದು ಹೇಳಲಾಗುತ್ತದೆ ಮತ್ತು ಇನ್ನೊಂದು ಆತ್ಮಿಕ ಅವಿಶ್ರಾಂತ ಸೇವೆಯಾಗಿದೆ, ಆತ್ಮಿಕ ಸೇವಾಧಾರಿಗಳು ಆತ್ಮಿಕ ಜ್ಞಾನವನ್ನೇ ತಿಳಿಸುತ್ತಾ ಇರುತ್ತಾರೆ. ಜ್ಞಾನಧನವನ್ನು ದಾನ ಮಾಡುತ್ತಾ ಖುಷಿಯಲ್ಲಿ ನರ್ತಿಸುತ್ತಾ ಇರುತ್ತಾರೆ. ಪ್ರಪಂಚದಲ್ಲಿ ಮನುಷ್ಯರು ಯಾವ ಸೇವೆ ಮಾಡುವರೋ ಅದು ದೈಹಿಕ ಸೇವೆಯಾಗಿದೆ. ಶಾಸ್ತ್ರಗಳನ್ನು ತಿಳಿಸುತ್ತಾರೆ, ಅದು ಆತ್ಮಿಕ ಸೇವೆಯಲ್ಲ. ಆತ್ಮಿಕ ಸೇವೆಯನ್ನು ಕೇವಲ ತಂದೆಯೇ ಕಲಿಸುತ್ತಾರೆ, ಆತ್ಮಿಕ ತಂದೆಯೇ ಆತ್ಮರಿಗೆ ಓದಿಸುತ್ತಾರೆ, ನೀವೀಗ ಸತ್ಯಯುಗ ಹೊಸ ಪ್ರಪಂಚದಲ್ಲಿ ಹೋಗುವುದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದೀರಿ. ಅಲ್ಲಿ ನಿಮ್ಮಿಂದ ಯಾವುದೇ ವಿಕರ್ಮವಾಗುವುದಿಲ್ಲ, ಅದು ರಾಮ ರಾಜ್ಯವಾಗಿದೆ. ಅಲ್ಲಿ ಕೆಲವರೇ ಇರುತ್ತಾರೆ. ಆ ಕೆಲವರೇ ಈಗ ಇಲ್ಲಿ ಬಂದು ಓದುತ್ತಾರೆ, ಈಗಂತೂ ರಾವಣ ರಾಜ್ಯದಲ್ಲಿ ಎಲ್ಲರೂ ದುಃಖಿಯಾಗಿದ್ದಾರಲ್ಲವೆ. ಈ ಇಡೀ ಜ್ಞಾನವೇ ನಂಬರ್ವಾರ್ ಪುರುಷಾರ್ಥದನುಸಾರ ನಿಮ್ಮ ಬುದ್ಧಿಯಲ್ಲಿದೆ. ಏಣಿಯ ಚಿತ್ರದಲ್ಲಿಯೇ ಎಲ್ಲಾ ಜ್ಞಾನವು ಬಂದು ಬಿಡುತ್ತದೆ. ಈ ಚಿತ್ರಗಳನ್ನು ಮಾಡಿಸುವುದಕ್ಕಾಗಿ ಮೆಷಿನರಿ ಬೇಕಾಗಿದೆ. ಆ ಸರ್ಕಾರದ ಪತ್ರಿಕೆಗಳು ಪ್ರತಿನಿತ್ಯವೂ ಎಷ್ಟೊಂದು ಮುದ್ರಿತವಾಗುತ್ತದೆ, ಎಷ್ಟೊಂದು ಕಾರೋಬಾರ್ ನಡೆಯುತ್ತದೆ, ಇಲ್ಲಂತೂ ಎಲ್ಲವನ್ನೂ ಕೈಯಿಂದ ಮಾಡಬೇಕಾಗುತ್ತದೆ.

ತಂದೆಯು ತಿಳಿಸುತ್ತಾರೆ – ಈ ಅಂತಿಮ ಜನ್ಮ ಪವಿತ್ರರಾಗಿರಿ, ಇದರಿಂದ ಪವಿತ್ರ ಪ್ರಪಂಚದ ಮಾಲೀಕರಾಗುವಿರಿ. ಈ ಜ್ಞಾನವು ಯಾರ ಬಳಿಯೂ ಇಲ್ಲ, ಏಣಿಯ ಚಿತ್ರದಲ್ಲಿ ಅನ್ಯ ಧರ್ಮಗಳ ಸಮಾಚಾರವೆಲ್ಲಿದೆ ಎಂದು ಕೇಳುತ್ತಾರೆ. ಅದೂ ಸಹ ಈ ಗೋಲದ ಚಿತ್ರದಲ್ಲಿ ಮಾಡಿಸಲಾಗಿದೆ. ಅವರಂತೂ ಹೊಸ ಪ್ರಪಂಚದಲ್ಲಿ ಬರುವುದೇ ಇಲ್ಲ, ಅವರಿಗೆ ಶಾಂತಿ ಸಿಗುತ್ತದೆ. ಭಾರತವಾಸಿಗಳೇ ಸ್ವರ್ಗದಲ್ಲಿದ್ದಾರಲ್ಲವೆ. ಭಾರತದಲ್ಲಿಯೇ ತಂದೆಯು ರಾಜಯೋಗವನ್ನು ಕಲಿಸಲು ಬರುತ್ತಾರೆ ಆದ್ದರಿಂದ ಭಾರತದ ಪ್ರಾಚೀನ ರಾಜಯೋಗವನ್ನು ಎಲ್ಲರೂ ಇಚ್ಛಿಸುತ್ತಾರೆ. ಈ ಚಿತ್ರದಿಂದ ತಾವೇ ಅರ್ಥ ಮಾಡಿಕೊಳ್ಳುತ್ತಾರೆ, ಅವಶ್ಯವಾಗಿ ಹೊಸ ಪ್ರಪಂಚದಲ್ಲಿ ಕೇವಲ ಭಾರತವೇ ಇತ್ತು ಎಂದು. ತಮ್ಮ ಧರ್ಮವನ್ನು ತಿಳಿದುಕೊಳ್ಳುತ್ತಾರೆ, ಹೇಗೆ ಕ್ರೈಸ್ಟ್ ಧರ್ಮ ಸ್ಥಾಪನೆ ಮಾಡಲು ಬಂದರು. ಈ ಸಮಯದಲ್ಲಿ ಅವರೂ ಸಹ ಭಿಕಾರಿ ರೂಪದಲ್ಲಿದ್ದಾರೆ, ಎಲ್ಲರೂ ತಮೋಪ್ರಧಾನರಾಗಿದ್ದಾರೆ. ಈ ರಚಯಿತ ಮತ್ತು ರಚನೆಯ ಎಷ್ಟು ದೊಡ್ಡ ಜ್ಞಾನವಿದೆ! ನೀವು ಹೇಳಬಹುದು – ನಮಗೆ ಯಾರದೇ ಹಣದ ಅವಶ್ಯಕತೆಯಿಲ್ಲ, ನಾವು ಹಣವನ್ನೇನು ಮಾಡಬೇಕು! ನೀವು ಇದನ್ನು ಕೇಳಿರಿ ಮತ್ತು ಅನ್ಯರಿಗೆ ತಿಳಿಸುವುದಕ್ಕಾಗಿ ಈ ಚಿತ್ರಗಳನ್ನು ಮುದ್ರಣ ಮಾಡಿಸಿರಿ. ಈ ಚಿತ್ರಗಳಿಂದಲೇ ಕೆಲಸ ತೆಗೆದುಕೊಳ್ಳಬೇಕಾಗಿದೆ. ಹಾಲ್ನ್ನು ಮಾಡಿಸಿ, ಅಲ್ಲಿ ಈ ಜ್ಞಾನವನ್ನು ತಿಳಿಸಬಹುದು. ಬಾಕಿ ನಾವು ಹಣವನ್ನು ಏನು ಮಾಡುವುದು? ನಿಮ್ಮದೇ ಮನೆಯ ಕಲ್ಯಾಣವಾಗುವುದು, ನೀವು ಕೇವಲ ಪ್ರಬಂಧ ಮಾಡಿರಿ. ಅನೇಕರು ಬಂದು ಕೇಳುತ್ತಾರೆ. ರಚಯಿತ ಮತ್ತು ರಚನೆಯ ಜ್ಞಾನವು ಬಹಳ ಚೆನ್ನಾಗಿದೆ. ಇದನ್ನು ಮನುಷ್ಯರೇ ತಿಳಿದುಕೊಳ್ಳಬೇಕಾಗಿದೆ. ವಿದೇಶದವರು ಈ ಜ್ಞಾನವನ್ನು ಕೇಳಿ ಬಹಳ ಇಷ್ಟ ಪಡುತ್ತಾರೆ, ಬಹಳ ಖುಷಿಯಾಗುತ್ತಾರೆ ಮತ್ತು ತಿಳಿದುಕೊಳ್ಳುತ್ತಾರೆ, ನಾವೂ ಸಹ ತಂದೆಯ ಜೊತೆ ಯೋಗವನ್ನು ಇಟ್ಟರೆ ವಿಕರ್ಮಗಳು ವಿನಾಶವಾಗುತ್ತವೆ. ಎಲ್ಲರಿಗೆ ತಂದೆಯ ಪರಿಚಯ ಕೊಡಬೇಕಾಗಿದೆ. ಈ ಜ್ಞಾನವನ್ನು ಪರಮಪಿತನ ವಿನಃ ಮತ್ತ್ಯಾರೂ ಕೊಡಲು ಸಾಧ್ಯವಿಲ್ಲವೆಂದು ಆಗ ಅವರಿಗೆ ಅರ್ಥವಾಗುವುದು. ಖುದಾನು ಬಹಿಶ್ತ್ನ್ನು ಸ್ಥಾಪನೆ ಮಾಡಿದನೆಂದು ಹೇಳುತ್ತಾರೆ ಆದರೆ ಅವರು ಹೇಗೆ ಬರುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ. ನಿಮ್ಮ ಮಾತುಗಳನ್ನು ಕೇಳಿ ಬಹಳ ಖುಷಿಯಾಗುತ್ತಾರೆ, ನಂತರ ಪುರುಷಾರ್ಥ ಮಾಡಿ ಯೋಗವನ್ನು ಕಲಿಯುತ್ತಾರೆ. ತಮೋಪ್ರಧಾನರಿಂದ ಸತೋಪ್ರಧಾನರು ಆಗುವುದಕ್ಕಾಗಿಯೂ ಪುರುಷಾರ್ಥ ಮಾಡುತ್ತಾರೆ. ಸರ್ವೀಸಿಗಾಗಿ ಬಹಳ ವಿಚಾರಗಳನ್ನು ಮಾಡಬೇಕು. ಭಾರತದಲ್ಲಿ ಕಲೆಯನ್ನು ತೋರಿಸಿದಾಗ ಅವರು ವಿದೇಶಕ್ಕೂ ಕಳುಹಿಸುವರು. ಇದನ್ನು ಮನುಷ್ಯರು ತಿಳಿದುಕೊಳ್ಳುತ್ತಾರೆ, ಹೊಸ ಪ್ರಪಂಚವು ಸ್ಥಾಪನೆಯಾಗುವುದರಲ್ಲಿ ತಡವಾಗುತ್ತದೆಯೇ? ಎಲ್ಲಿಯಾದರೂ ಭೂಕಂಪವಾದರೆ 2-3 ವರ್ಷಗಳಲ್ಲಿ ಹೊಸ-ಹೊಸ ಮನೆಗಳು ತಯಾರಾಗಿ ಬಿಡುತ್ತವೆ. ಎಷ್ಟು ಮಂದಿ ಕಾರ್ಮಿಕರಿರುವರೋ ಅಷ್ಟು ಬೇಗನೆ ಮನೆಯಾಗುತ್ತದೆ. ಒಂದು ತಿಂಗಳಿನಲ್ಲಿಯೂ ಮನೆಯನ್ನು ಕಟ್ಟಿಸುತ್ತಾರೆ. ಕಾರ್ಮಿಕರು ಸಾಮಾನು ಇತ್ಯಾದಿಗಳೆಲ್ಲವೂ ತಯಾರಿದ್ದರೆ ಮತ್ತೆ ಮನೆಯು ಕಟ್ಟಿಸುವುದರಲ್ಲಿ ತಡವಾಗುವುದಿಲ್ಲ. ವಿದೇಶದಲ್ಲಿ ಮನೆಗಳು ಹೇಗೆ ತಯಾರಾಗುತ್ತವೆ – ಮಿನಿಟ್ ಮೋಟಾರು. ಅಂದಮೇಲೆ ಸ್ವರ್ಗದಲ್ಲಿ ಇನ್ನೆಷ್ಟು ಬೇಗನೆ ಆಗಬಹುದು! ಚಿನ್ನ, ಬೆಳ್ಳಿ ಬಹಳಷ್ಟು ನಿಮಗೆ ಸಿಗುತ್ತದೆ. ಗಣಿಗಳಿಂದ ಚಿನ್ನ, ಬೆಳ್ಳಿ, ವಜ್ರಗಳನ್ನು ತೆಗೆದುಕೊಂಡು ಬರುತ್ತಾರೆ. ಕಲೆ ಎಲ್ಲವನ್ನೂ ಕಲಿಯುತ್ತಿದ್ದಾರೆ. ವಿಜ್ಞಾನದ ಅಭಿಮಾನವು ಎಷ್ಟಿದೆ! ಇದೇ ವಿಜ್ಞಾನವು ಮತ್ತೆ ಸತ್ಯಯುಗದಲ್ಲಿಯೂ ಕೆಲಸಕ್ಕೆ ಬರುತ್ತದೆ. ಇಲ್ಲಿ ಕಲಿಯುವವರು ಅಲ್ಲಿ ಇನ್ನೊಂದು ಜನ್ಮವನ್ನು ತೆಗೆದುಕೊಂಡು ಕೆಲಸಕ್ಕೆ ಬರುತ್ತಾರೆ. ಆ ಸಮಯದಲ್ಲಿ ಎಲ್ಲವೂ ಹೊಸ ಪ್ರಪಂಚವಾಗಿ ಬಿಡುತ್ತದೆ. ರಾವಣ ರಾಜ್ಯವೇ ಸಮಾಪ್ತಿಯಾಗುತ್ತದೆ. ಪಂಚತತ್ವಗಳೂ ಸಹ ಆದೇಶದ ಅನುಸಾರ ಸೇವೆ ಮಾಡುತ್ತದೆ, ಸ್ವರ್ಗವಾಗಿ ಬಿಡುತ್ತದೆ. ಅಲ್ಲಿ ಯಾವುದೇ ಉಪದ್ರವಗಳಾಗುವುದಿಲ್ಲ, ರಾವಣ ರಾಜ್ಯವೇ ಇರುವುದಿಲ್ಲ. ಎಲ್ಲರೂ ಸತೋಪ್ರಧಾನರಾಗುತ್ತಾರೆ. ಎಲ್ಲದಕ್ಕಿಂತ ಒಳ್ಳೆಯ ಮಾತಾಗಿದೆ – ತಂದೆಯೊಂದಿಗೆ ಬಹಳ ಪ್ರೀತಿಯಿರಬೇಕು. ತಂದೆಯು ಏನನ್ನು ತಿಳಿಸುತ್ತಾರೆಯೋ ಅದನ್ನು ಧಾರಣೆ ಮಾಡಬೇಕು ಮತ್ತು ಅನ್ಯರಿಗೆ ದಾನ ಮಾಡಬೇಕಾಗಿದೆ. ಎಷ್ಟು ದಾನ ಮಾಡುವಿರೋ ಅಷ್ಟು ಒಟ್ಟುಗೂಡುತ್ತಾ ಹೋಗುವುದು, ಸೇವೆಯನ್ನೇ ಮಾಡದಿದ್ದರೆ ಧಾರಣೆ ಹೇಗಾಗುವುದು! ಸರ್ವೀಸಿನಲ್ಲಿ ಬುದ್ಧಿಯನ್ನು ಓಡಿಸಬೇಕು. ಸರ್ವೀಸ್ ಬಹಳಷ್ಟು ಆಗುತ್ತದೆ. ಯಾರಾದರೂ ಮಾಡುತ್ತಾ ಇರಿ, ದಿನ-ಪ್ರತಿದಿನ ಉನ್ನತಿಯನ್ನು ಪಡೆಯಬೇಕಾಗಿದೆ. ತಮ್ಮ ಉನ್ನತಿಯನ್ನೂ ಮಾಡಿಕೊಳ್ಳಬೇಕಾಗಿದೆ. ಒಳ್ಳೆಯದು.

ಮಧುರಾತಿ ಮಧುರ ಅಗಲಿ ಹೋಗಿ ಮರಳಿ ಸಿಕ್ಕಿರುವ ಮಕ್ಕಳ ಪ್ರತಿ ಮಾತಾಪಿತಾ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ಸುಪ್ರಭಾತ. ಆತ್ಮಿಕ ಮಕ್ಕಳಿಗೆ ಆತ್ಮಿಕ ತಂದೆಯ ನಮಸ್ತೆ.

ಧಾರಣೆಗಾಗಿ ಮುಖ್ಯಸಾರ:-

1. ಪರಸ್ಪರ ಒಬ್ಬರು ಇನ್ನೊಬ್ಬರಿಗೆ ಗೌರವ ಕೊಡಬೇಕಾಗಿದೆ. ಸರ್ವೀಸಿನ ಬಹಳ-ಬಹಳ ಉಮ್ಮಂಗವನ್ನು ಇಟ್ಟುಕೊಳ್ಳಬೇಕು. ಜ್ಞಾನರತ್ನಗಳಿಂದ ತಮ್ಮ ಜೋಳಿಗೆಯನ್ನು ತುಂಬಿಸಿಕೊಂಡು ಅದರ ದಾನ ಮಾಡಬೇಕಾಗಿದೆ.

2. ಒಬ್ಬ ತಂದೆಯಿಂದಲೇ ಕೇಳುವ ಸಂಕಲ್ಪವನ್ನು ಇಡಬೇಕಾಗಿದೆ. ಅನ್ಯ ವಿಚಾರಗಳಲ್ಲಿ ಬುದ್ಧಿಯನ್ನು ಅಲೆದಾಡಿಸಬಾರದು.

ವರದಾನ:-

ಹೇಗೆ ಸ್ಥೂಲ ಕೈ-ಕಾಲುಗಳನ್ನು ಸಹಜವಾಗಿಯೇ ಎಲ್ಲಿ ಬೇಕೋ ಅಲ್ಲಿ ನಡೆಸುತ್ತೀರಿ ಅಥವಾ ಕರ್ಮದಲ್ಲಿ ಉಪಯೋಗಿಸುತ್ತೀರಿ ಹಾಗೆಯೇ ಸಂಕಲ್ಪ ಅಥವಾ ಬುದ್ಧಿಯನ್ನು ಎಲ್ಲಿ ಬೇಕೋ ಅಲ್ಲಿ ಜೋಡಣೆ ಮಾಡಿಸಲು ಸಾಧ್ಯವಾಗಲಿ – ಇದನ್ನೇ ಈಶ್ವರೀಯ ಅಧಿಕಾರವೆಂದು ಹೇಳಲಾಗುವುದು. ಹೇಗೆ ವಾಣಿಯಲ್ಲಿ ಬರುವುದು ಸಹಜವೋ ಹಾಗೆಯೇ ವಾಣಿಯಿಂದ ದೂರ ಹೋಗುವುದೂ ಸಹ ಸಹಜವಾಗಲಿ. ಈ ಅಭ್ಯಾಸದಿಂದಲೇ ಸಾಕ್ಷಾತ್ಕಾರ ಮೂರ್ತಿಯಾಗುವಿರಿ. ಅಂದಮೇಲೆ ಈಗ ಈ ಅಭ್ಯಾಸವನ್ನು ಸಹಜ ಹಾಗೂ ನಿರಂತರದಲ್ಲಿ ಇರುವಂತೆ ಮಾಡಿಕೊಂಡಾಗ ಮಾಸ್ಟರ್ ಸರ್ವಶಕ್ತಿವಂತನೆಂದು ಹೇಳಲಾಗುತ್ತದೆ.

ಸ್ಲೋಗನ್:-

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top