21 November 2021 KANNADA Murli Today | Brahma Kumaris

Read and Listen today’s Gyan Murli in Kannada

November 20, 2021

Morning Murli. Om Shanti. Madhuban.

Brahma Kumaris

ಇಂದಿನ ಶಿವ್ ಬಾಬಾ, ಸಕರ್ ಮುರ್ಲಿ , ಬಪ್ಡಾಡಾ , ಮಧುಬನ್। Brahma Kumaris (BK) Murli for today in Kannada. Visit Daily Murli in Kannada to read and listen daily murlis.

ಶುಭ ಭಾವನೆ ಮತ್ತು ಶುಭ ಕಾಮನೆಯ ಸೂಕ್ಷ್ಮ ಸೇವೆ

♫ ಕೇಳು ಇಂದಿನ ಮುರ್ಲಿ (audio)➤

ಇಂದು ವಿಶ್ವಕಲ್ಯಾಣಕಾರಿ ಬಾಪ್ದಾದಾ ತನ್ನ ವಿಶ್ವಕಲ್ಯಾಣಕಾರಿ ಜೊತೆಗಾರರನ್ನು ನೋಡುತ್ತಿದ್ದಾರೆ. ಎಲ್ಲಾ ಮಕ್ಕಳು ತಂದೆಯ ವಿಶ್ವಕಲ್ಯಾಣದ ಕಾರ್ಯದಲ್ಲಿ ನಿಮಿತ್ತರಾಗಿರುವ ಜೊತೆಗಾರರಾಗಿದ್ದಾರೆ. ಎಲ್ಲರ ಮನಸ್ಸಿನಲ್ಲಿ ಸದಾ ಇದೊಂದೇ ಸಂಕಲ್ಪವಿದೆ – ವಿಶ್ವದ ವ್ಯಾಕುಲರಾಗಿರುವ ಆತ್ಮರ ಕಲ್ಯಾಣವಾಗಲಿ. ನಡೆಯುತ್ತಾ-ತಿರುಗಾಡುತ್ತಾ ಯಾವುದೇ ಕಾರ್ಯ ಮಾಡುತ್ತಾ ಮನಸ್ಸಿನಲ್ಲಿ ಇದೇ ಶುಭ ಭಾವನೆಯಿದೆ. ಭಕ್ತಿಮಾರ್ಗದಲ್ಲಿಯೂ ಭಾವನೆಯಿರುತ್ತದೆ ಆದರೆ ಭಕ್ತಾತ್ಮರಿಗೆ ವಿಶೇಷ ಅಲ್ಪಕಾಲದ ಕಲ್ಯಾಣದ ಪ್ರತಿ ಭಾವನೆಯಿರುತ್ತದೆ. ತಾವು ಜ್ಞಾನಿ ಆತ್ಮ ಮಕ್ಕಳ ಜ್ಞಾನಯುಕ್ತ ಕಲ್ಯಾಣದ ಭಾವನೆಯು ಆತ್ಮರ ಪ್ರತಿ ಸದಾಕಾಲ ಮತ್ತು ಸರ್ವ ಕಲ್ಯಾಣಕಾರಿಯ ಭಾವನೆಯಿದೆ. ತಮಗೆ ವರ್ತಮಾನ ಮತ್ತು ಭವಿಷ್ಯಕ್ಕೋಸ್ಕರ ಇದೇ ಭಾವನೆಯಿದೆ – ಪ್ರತಿಯೊಂದು ಆತ್ಮನು ಅನೇಕ ಜನ್ಮಗಳಿಗಾಗಿ ಸುಖಿಯಾಗಲಿ, ಪ್ರಾಪ್ತಿಗಳಿಂದ ಸಂಪನ್ನರಾಗಿ ಬಿಡಲಿ ಏಕೆಂದರೆ ಅವಿನಾಶಿ ತಂದೆಯ ಮೂಲಕ ತಾವಾತ್ಮರಿಗೆ ಅವಿನಾಶಿ ಆಸ್ತಿಯು ಸಿಕ್ಕಿದೆ. ತಮ್ಮ ಭಾವನೆಯ ಫಲವು ವಿಶ್ವದ ಆತ್ಮರನ್ನು ಪರಿವರ್ತನೆ ಮಾಡುತ್ತಿದೆ ಮತ್ತು ಮುಂದೆ ಹೋದಂತೆ ಪ್ರಕೃತಿಯ ಸಹಿತ ಪರಿವರ್ತನೆ ಆಗಿಬಿಡುವುದು. ತಾವಾತ್ಮರ ಶ್ರೇಷ್ಠ ಭಾವನೆಯು ಇಷ್ಟೊಂದು ಶ್ರೇಷ್ಠ ಫಲವನ್ನು ಪ್ರಾಪ್ತಿ ಮಾಡಿಸುವಂತದ್ದಾಗಿದೆ ಆದ್ದರಿಂದ ಕಲ್ಯಾಣಕಾರಿ ಆತ್ಮರೆಂದು ನಿಮ್ಮ ಗಾಯನವಾಗುತ್ತದೆ. ತಮ್ಮ ಶುಭಭಾವನೆಯ ಇಷ್ಟು ಮಹತ್ವಿಕೆಯನ್ನು ಅರಿತುಕೊಂಡಿದ್ದೀರಾ? ತಮ್ಮ ಶುಭಭಾವನೆಯನ್ನು ಸಾಧಾರಣ ರೀತಿಯಿಂದ ಕಾರ್ಯದಲ್ಲಿ ತೊಡಗಿಸುತ್ತಾ ನಡೆಯುತ್ತಿದ್ದೀರೋ ಅಥವಾ ಮಹತ್ವಿಕೆಯನ್ನರಿತು ನಡೆಯುತ್ತೀರೋ? ಪ್ರಪಂಚದವರೂ ಸಹ ಶುಭಭಾವನೆಯ ಶಬ್ಧವನ್ನು ಹೇಳುತ್ತಾರೆ ಆದರೆ ನಿಮ್ಮ ಶುಭಭಾವನೆಯು ಕೇವಲ ಶುಭವಲ್ಲ, ಶಕ್ತಿಶಾಲಿಯೇ ಆಗಿದೆ ಏಕೆಂದರೆ ತಾವು ಸಂಗಮಯುಗೀ ಶ್ರೇಷ್ಠ ಆತ್ಮರಾಗಿದ್ದೀರಿ. ಸಂಗಮಯುಗಕ್ಕೆ ಡ್ರಾಮಾನುಸಾರ ಪ್ರತ್ಯಕ್ಷ ಫಲವು ಪ್ರಾಪ್ತಿಯಾಗುವ ವರದಾನವಿದೆ ಆದ್ದರಿಂದ ತಮ್ಮ ಶುಭಭಾವನೆಯ ಪ್ರತ್ಯಕ್ಷಫಲವು ಆತ್ಮರಿಗೆ ಪ್ರಾಪ್ತಿಯಾಗುತ್ತದೆ. ಯಾರೆಲ್ಲಾ ಆತ್ಮರು ತಮ್ಮ ಸಂಬಂಧ-ಸಂಪರ್ಕದಲ್ಲಿ ಬರುವರೋ ಅವರು ಅದೇ ಸಮಯದಲ್ಲಿಯೇ ಶಾಂತಿ ಮತ್ತು ಸ್ನೇಹದ ಫಲದ ಅನುಭೂತಿ ಮಾಡುತ್ತಾರೆ.

ಶುಭಕಾಮನೆಯಿಲ್ಲದೆ ಶುಭಭಾವನೆಯಿರಲು ಸಾಧ್ಯವಿಲ್ಲ. ಪ್ರತಿಯೊಂದು ಆತ್ಮನ ಪ್ರತಿ ಸದಾ ಇದೇ ದಯೆಯ ಕಾಮನೆಯಿರುತ್ತದೆ – ಈ ಆತ್ಮನೂ ಸಹ ಆಸ್ತಿಗೆ ಅಧಿಕಾರಿಯಾಗಿ ಬಿಡಲಿ. ಪ್ರತಿಯೊಂದು ಆತ್ಮನ ಪ್ರತಿ ಇವರು ನಮ್ಮ ಈಶ್ವರೀಯ ಪರಿವಾರದವರೇ ಆಗಿದ್ದಾರೆ ಅಂದಮೇಲೆ ಇವರಿಂದ ವಂಚಿತರಾಗಿ ಏಕೆ ಉಳಿಯಬೇಕೆಂದು ದಯೆ ಬರುತ್ತದೆ, ಶುಭಕಾಮನೆ ಇರುತ್ತದೆಯಲ್ಲವೇ. ಶುಭಕಾಮನೆ ಮತ್ತು ಶುಭಭಾವನೆ ಇದು ಸೇವೆಯ ಫೌಂಡೇಷನ್ ಆಗಿದೆ. ಯಾವುದೇ ಸೇವೆಯನ್ನು ಮಾಡುತ್ತೀರಿ, ಒಂದುವೇಳೆ ತಮ್ಮಲ್ಲಿ ಶುಭಭಾವನೆ-ಶುಭಕಾಮನೆ ಇಲ್ಲವೆಂದರೆ ಆತ್ಮರಿಗೆ ಪ್ರತ್ಯಕ್ಷಫಲದ ಪ್ರಾಪ್ತಿಯಾಗಲು ಸಾಧ್ಯವಿಲ್ಲ. ಒಂದು ಸೇವೆಯಾಗಿದೆ – ನೀತಿಯ ಪ್ರಮಾಣ ರೀತಿಯ ಪ್ರಮಾಣ ಸೇವೆ, ಏನು ಕೇಳಿರುವರೋ ಅದನ್ನು ತಿಳಿಸುವುದಾಗಿದೆ. ಎರಡನೆಯದು – ತಮ್ಮ ಶುಭಭಾವನೆ-ಶುಭಕಾಮನೆಯಿಂದ ಸೇವೆ ಮಾಡುವುದಾಗಿದೆ. ತಮ್ಮ ಶುಭಭಾವನೆಯು ಅವರಿಗೆ ತಂದೆಯಲ್ಲಿಯೂ ಭಾವನೆಯನ್ನು ತರಿಸುತ್ತದೆ ಮತ್ತು ತಂದೆಯ ಮೂಲಕ ಫಲದ ಪ್ರಾಪ್ತಿ ಮಾಡಿಸಲು ನಿಮಿತ್ತನಾಗಿಬಿಡುತ್ತದೆ. “ಶುಭ ಭಾವನೆ”ಯು ಎಲ್ಲಿಯೇ ದೂರ ಕುಳಿತಿರುವ ಯಾವುದೇ ಆತ್ಮನಿಗೂ ಸಹ ಫಲದ ಪ್ರಾಪ್ತಿ ಮಾಡಿಸಲು ನಿಮಿತ್ತನಾಗುತ್ತದೆ. ಹೇಗೆ ವಿಜ್ಞಾನದ ಸಾಧನಗಳು ದೂರದಲ್ಲಿ ಕುಳಿತೇ ಆತ್ಮರೊಂದಿಗೆ ಸಮೀಪ ಸಂಬಂಧ ಮಾಡಿಸಲು ನಿಮಿತ್ತನಾಗುತ್ತದೆ. ತಮ್ಮ ಶಬ್ಧವು ಅವರಿಗೆ ತಲುಪುತ್ತದೆ, ತಮ್ಮ ಸಂದೇಶವು ತಲುಪುತ್ತದೆ, ತಮ್ಮ ದೃಶ್ಯವು ತಲುಪುತ್ತದೆ ಅಂದಮೇಲೆ ವೈಜ್ಞಾನಿಕ ಶಕ್ತಿಯೇ ಅಲ್ಪಕಾಲಕ್ಕಾಗಿ ಸಮೀಪತೆಯ ಫಲ ಕೊಡಬಲ್ಲದು ಅಂದಮೇಲೆ ತಮ್ಮ ಶಾಂತಿಯಶಕ್ತಿ, ಶುಭಭಾವನೆಯು ದೂರ ಕುಳಿತಿದ್ದರೂ ಆತ್ಮರಿಗೆ ಫಲ ಕೊಡುವುದಿಲ್ಲವೇ? ಆದರೆ ಇದಕ್ಕೆ ಆಧಾರವಾಗಿದೆ – ತನ್ನಲ್ಲಿ ಇಷ್ಟು ಶಾಂತಿಯ ಶಕ್ತಿಯು ಜಮಾ ಇರಬೇಕು. ಶಾಂತಿಯ ಶಕ್ತಿಯು ಅಲೌಕಿಕ ಅನುಭವ ಮಾಡಿಸುತ್ತದೆ. ಮುಂದೆ ಹೋದಂತೆ ಈ ಪ್ರತ್ಯಕ್ಷ ಪ್ರಮಾಣವನ್ನು ಅನುಭವ ಮಾಡುತ್ತಾ ಇರುತ್ತೀರಿ.

ಶುಭಭಾವನೆ ಅರ್ಥಾತ್ ಶಕ್ತಿಶಾಲಿ ಸಂಕಲ್ಪ. ಎಲ್ಲಾ ಶಕ್ತಿಗಳಿಗಿಂತ ಸಂಕಲ್ಪದ ಗತಿಯು ತೀವ್ರವಾಗಿದೆ. ಎಷ್ಟಾದರೂ ವಿಜ್ಞಾನವು ತೀವ್ರಗತಿಯ ಸಾಧನಗಳನ್ನು ತಯಾರಿಸಿರಬಹುದು ಆದರೆ ಅವೆಲ್ಲವುಗಳಿಗಿಂತಲೂ ಸಂಕಲ್ಪ ಶಕ್ತಿಯು ತೀವ್ರಗತಿಯದಾಗಿದೆ. ಯಾವುದೇ ಆತ್ಮನ ಪ್ರತಿ ಅಥವಾ ಬೇಹದ್ದಿನ ವಿಶ್ವದ ಆತ್ಮನ ಪ್ರತಿ ಶುಭಭಾವನೆಯನ್ನು ಇಡುತ್ತೀರಿ ಅರ್ಥಾತ್ ಶಕ್ತಿಶಾಲಿ ಶುಭ ಮತ್ತು ಶುದ್ಧ ಸಂಕಲ್ಪ ಮಾಡುತ್ತೀರಿ – ಈ ಆತ್ಮನ ಕಲ್ಯಾಣವಾಗಲಿ ಎಂದು. ಆಗ ತಮ್ಮ ಸಂಕಲ್ಪ ಅಥವಾ ಭಾವನೆಯು ಉತ್ಪನ್ನವಾಗುವುದು ಮತ್ತು ಆ ಆತ್ಮಕ್ಕೆ ನನಗೆ ಯಾರದೋ ವಿಶೇಷ ಸಹಯೋಗದಿಂದ ಶಕ್ತಿ ಹಾಗೂ ಶಾಂತಿಯು ಸಿಗುತ್ತಿದೆ ಎಂಬ ಅನುಭವವಾಗುತ್ತದೆ. ಹೇಗೆ ಈಗಲೂ ಸಹ ಕೆಲವು ಮಕ್ಕಳು ಇದೇ ಅನುಭವ ಮಾಡುತ್ತಾರೆ – ಕೆಲವು ಕಾರ್ಯಗಳಲ್ಲಿ ನನಗೆ ಅಷ್ಟು ಧೈರ್ಯ ಅಥವಾ ನನಗೆ ಅಷ್ಟು ಯೋಗ್ಯತೆಯಿರಲಿಲ್ಲ ಆದರೆ ಬಾಪ್ದಾದಾರವರ ಅಧಿಕ ಸಹಯೋಗದಿಂದ ಈ ಕಾರ್ಯವು ಸಹಜವಾಗಿ ಸಫಲವಾಯಿತು ಅಥವಾ ಈ ವಿಘ್ನವು ಸಮಾಪ್ತಿ ಆಯಿತೆಂದು ಹೇಳುತ್ತಾರೆ ಅದೇರೀತಿ ತಾವು ಮಾ|| ವಿಶ್ವಕಲ್ಯಾಣಕಾರಿ ಆತ್ಮರ ಸೂಕ್ಷ್ಮ ಸೇವೆಯನ್ನು ಪ್ರತ್ಯಕ್ಷ ರೂಪದಲ್ಲಿ ಅನುಭವ ಮಾಡುತ್ತಾರೆ. ಸಮಯವು ಕಡಿಮೆ ಮತ್ತು ಸಾಧನಗಳೂ ಕಡಿಮೆ. ಸಂಪತ್ತೂ ಕಡಿಮೆ ಹಿಡಿಸುತ್ತದೆ. ಇದಕ್ಕಾಗಿ ಮನಸ್ಸು ಮತ್ತು ಬುದ್ಧಿಯು ಸದಾ ಫ್ರೀ ಆಗಿರಬೇಕು. ಚಿಕ್ಕ-ಚಿಕ್ಕ ಮಾತುಗಳಲ್ಲಿ ಮನಸ್ಸು-ಬುದ್ಧಿಯನ್ನು ಬಹಳ ಬ್ಯುಜಿಯಾಗಿಟ್ಟುಕೊಳ್ಳುತ್ತೀರಿ ಆದ್ದರಿಂದ ಸೇವೆಯ ಸೂಕ್ಷ್ಮ ಗತಿಯ ಲೈನ್ ಸ್ಪಷ್ಟವಾಗಿರುವುದಿಲ್ಲ. ಸಾಧಾರಣ ಮಾತುಗಳಲ್ಲಿಯೂ ಸಹ ತಮ್ಮ ಮನಸ್ಸು-ಬುದ್ಧಿಯ ಮಾರ್ಗವನ್ನು ಬಹಳ ಬ್ಯುಜಿಯಾಗಿಟ್ಟುಕೊಳ್ಳುತ್ತೀರಿ ಆದ್ದರಿಂದ ಈ ಸೂಕ್ಷ ಸೇವೆಯು ತೀವ್ರ ಗತಿಯಿಂದ ನಡೆಯುತ್ತಿಲ್ಲ. ಇದಕ್ಕಾಗಿ ವಿಶೇಷ ಗಮನವಾಗಿದೆ – “ಏಕಾಂತ ಮತ್ತು ಏಕಾಗ್ರತೆ”.

ಏಕಾಂತ ಪ್ರಿಯ ಆತ್ಮರು ಎಷ್ಟಾದರೂ ಬ್ಯುಜಿಯಾಗಿರಲಿ ಆದರೆ ಮಧ್ಯ-ಮಧ್ಯದಲ್ಲಿ ಒಂದು ಘಳಿಗೆ, ಎರಡು ಘಳಿಗೆಗಳನ್ನು ತೆಗೆದು ಏಕಾಂತದ ಅನುಭವ ಮಾಡುತ್ತಾರೆ. ಏಕಾಂತ ಪ್ರಿಯ ಆತ್ಮನು ಇಂತಹ ಶಕ್ತಿಶಾಲಿಗಳು ಆಗಿ ಬಿಡುತ್ತಾರೆ. ತಮ್ಮ ಸೂಕ್ಷ್ಮ ಶಕ್ತಿಗಳು ಮನಸ್ಸು-ಬುದ್ಧಿಯಿಂದ ಯಾವ ಸಮಯದಲ್ಲಿ ಬೇಕೋ, ಎಲ್ಲಿ ಬೇಕೋ ಏಕಾಗ್ರ ಮಾಡಲು ಸಾಧ್ಯವಾಗುತ್ತದೆ. ಹೊರಗಿನ ಪರಿಸ್ಥಿತಿಯು ಏರುಪೇರಿನದಾಗಿದ್ದರೂ ಸಹ ಏಕಾಂತ ಪ್ರಿಯ ಆತ್ಮನು ಒಬ್ಬರ ಅಂತ್ಯದಲ್ಲಿ (ಪ್ರೀತಿಯಲ್ಲಿ) ಸೆಕೆಂಡಿನಲ್ಲಿ ಏಕಾಗ್ರವಾಗಿ ಬಿಡುತ್ತಾರೆ. ಹೇಗೆ ಸಾಗರದ ಮೇಲೆ ಅಲೆಗಳ ಶಬ್ಧವು ಬಹಳ ಹೆಚ್ಚಾಗಿರುತ್ತದೆ. ಎಷ್ಟೊಂದು ಏರುಪೇರು ಇರುತ್ತದೆ ಆದರೆ ಸಾಗರದ ಆಳದಲ್ಲಿ ಏರುಪೇರುಗಳು ಇರುವುದಿಲ್ಲ ಅಂದಮೇಲೆ ಯಾವಾಗ ಒಬ್ಬರ ಅಂತ್ಯದಲ್ಲಿ, ಜ್ಞಾನಸಾಗರನ ಪ್ರೀತಿಯಲ್ಲಿ ಮುಳುಗಿ ಹೋಗುತ್ತೀರೊ ಆಗ ಏರುಪೇರು ಸಮಾಪ್ತಿಯಾಗಿ ಏಕಾಗ್ರವಾಗಿ ಬಿಡುತ್ತೀರಿ. ಸೂಕ್ಷ್ಮ ಸೇವೆ ಏನೆಂದು ತಿಳಿಯಿತೆ? “ಶುಭಭಾವನೆ”, “ಶುಭಕಾಮನೆ”- ಈ ಶಬ್ಧವನ್ನು ಎಲ್ಲರೂ ಹೇಳುತ್ತಿರುತ್ತಾರೆ ಆದರೆ ಇದರ ಮಹತ್ವಿಕೆಯನ್ನರಿತು ಪ್ರತ್ಯಕ್ಷ ರೂಪದಲ್ಲಿ ಬರುವುದರಿಂದ ಅನೇಕ ಆತ್ಮರಿಗೆ ಪ್ರತ್ಯಕ್ಷಫಲದ ಅನುಭೂತಿ ಮಾಡಿಸಲು ನಿಮಿತ್ತರಾಗುವಿರಿ. ಒಳ್ಳೆಯದು.

ಟೀಚರ್ಸ್ನ ಕೆಲಸವೇ ಆಗಿದೆ – ಸೇವೆ. ಟೀಚರ್ಸ್ನ ಮಹತ್ವಿಕೆಯೇ ಸೇವೆಯಾಗಿದೆ. ಒಂದುವೇಳೆ ಸೇವೆಯ ಪ್ರತ್ಯಕ್ಷ ಪ್ರಮಾಣವು ಕಾಣುವುದಿಲ್ಲವೆಂದರೆ ಅವರನ್ನು ಯೋಗ್ಯ ಶಿಕ್ಷಕಿಯ ಪಟ್ಟಿಯಲ್ಲಿ ಸೇರಿಸಲಾಗುವುದಿಲ್ಲ. ಟೀಚರ್ಸ್ನ ಮಹಾನತೆಯೇ ಸೇವೆಯಾಯಿತಲ್ಲವೇ ಆದ್ದರಿಂದ ಸೇವೆಯ ಸೂಕ್ಷ್ಮ ರೂಪವನ್ನು ತಿಳಿಸಿದೆವು. ಮುಖದ (ವಾಚಾ) ಸೇವೆಯನ್ನಂತೂ ಮಾಡುತ್ತಲೇ ಇರುತ್ತೀರಿ ಆದರೆ ಮುಖ ಮತ್ತು ಮನಸ್ಸಿನ ಶುಭಭಾವನೆಯ ಸೇವೆಯು ಜೊತೆ ಜೊತೆಯಲ್ಲಿ ಇರಲಿ, ಮಾತು ಮತ್ತು ಭಾವನೆ ಡಬಲ್ ಕೆಲಸ ಮಾಡುತ್ತದೆ. ಈ ಸೂಕ್ಷ್ಮ ಸೇವೆಯ ಅಭ್ಯಾಸವು ಬಹಳ ಕಾಲ ಅರ್ಥಾತ್ ಈಗಿನಿಂದಲೇ ಬೇಕಾಗಿದೆ ಏಕೆಂದರೆ ಮುಂದೆ ಹೋದಂತೆ ಸೇವೆಯ ರೂಪರೇಖೆಯು ಬದಲಾಗಲೇಬೇಕಾಗಿದೆ ನಂತರ ಆ ಸಮಯದಲ್ಲಿ ಸೂಕ್ಷ್ಮ ಸೇವೆಯಲ್ಲಿ ತನ್ನನ್ನು ಬ್ಯುಜಿ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಏಕೆಂದರೆ ಹೊರಗಿನ ಪರಿಸ್ಥಿತಿಗಳು ಬುದ್ಧಿಯನ್ನು ಆಕರ್ಷಣೆ ಮಾಡುತ್ತದೆ ಅಂದಾಗ ಫಲಿತಾಂಶವೇನಾಗುವುದು? ನೆನಪು ಮತ್ತು ಸೇವೆಯ ಸಮತೋಲನೆಯನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ ಆದ್ದರಿಂದ ಈಗಿನಿಂದಲೇ ತಮ್ಮ ಮನಸ್ಸು ಮತ್ತು ಬುದ್ಧಿಯ ಸೇವೆಯ ಮಾರ್ಗವನ್ನು ಪರಿಶೀಲನೆ ಮಾಡಿಕೊಳ್ಳಿ. ಟೀಚರ್ಸ್ಗೆ ಪರಿಶೀಲನೆ ಮಾಡಿಕೊಳ್ಳುವುದು ಬರುತ್ತದೆಯಲ್ಲವೇ. ಶಿಕ್ಷಕಿಯರು ಅನ್ಯರಿಗೆ ಕಲಿಸುತ್ತೀರಿ ಅಂದಮೇಲೆ ಅವಶ್ಯವಾಗಿ ಸ್ವಯಂ ತಿಳಿದುಕೊಂಡಿದ್ದೀರಿ ಆದ್ದರಿಂದಲೇ ಕಲಿಸುತ್ತೀರಲ್ಲವೆ. ಎಲ್ಲರೂ ಯೋಗ್ಯಶಿಕ್ಷಕಿಯರು ಆಗಿದ್ದೀರಲ್ಲವೆ. ಯೋಗ್ಯಶಿಕ್ಷಕನ ವಿಶೇಷತೆ ಏನೆಂದರೆ ನಿರಂತರ ಮನಸ್ಸಾ-ವಾಚಾ ಅಥವಾ ಕರ್ಮಣಾ ಸೇವೆಯಲ್ಲಿ ಸದಾ ಬ್ಯುಜಿಯಾಗಿರುವವರು. ಆಗ ಅನ್ಯ ಮಾತುಗಳಿಂದ ಸ್ವತಹ ಖಾಲಿಯಾಗಿ ಬಿಡುತ್ತೀರಿ. ಒಳ್ಳೆಯದು.

ಕುಮಾರಿಯರೂ ಬಂದಿದ್ದಾರೆ. ಕುಮಾರಿಯರು ಅರ್ಥಾತ್ ಮುಂದೆ ಆಗಲಿರುವ ಟೀಚರ್ಸ್ ಆದ್ದರಿಂದಲೇ ಬ್ರಹ್ಮಾಕುಮಾರಿಯರೆಂದು ಹೇಳುತ್ತಾರೆ. ಒಂದುವೇಳೆ ಮುಂದೆ ಆಗಲಿರುವ ಸೇವಾಧಾರಿಗಳಲ್ಲವೆಂದರೆ ಅಂತಹವರು ಬಿಡುಗಾಸಿನ ಕುಮಾರಿಯರು. ಕುಮಾರಿಯರು ಏನು ಮಾಡುತ್ತಾರೆ? ಬಿಡುಗಾಸಿನ ಹಿಂದೆ ನೌಕರಿಯ ಬುಟ್ಟಿಯನ್ನು ಹೊತ್ತುಕೊಳ್ಳುತ್ತಾರಲ್ಲವೇ. ಬಾಪ್ದಾದಾರವರಿಗೆ ಕುಮಾರಿಯರ ಮೇಲೆ ಬಹಳ ನಗುಬರುತ್ತದೆ – ಬುಟ್ಟಿಯ ಹೊರೆಯನ್ನು ಹೊತ್ತುಕೊಳ್ಳಲು ತಯಾರಾಗಿ ಬಿಡುತ್ತಾರೆ ಆದರೆ ಭಗವಂತನ ಮನೆಯಲ್ಲಿ ಅರ್ಥಾತ್ ಸೇವಾಸ್ಥಾನಗಳಲ್ಲಿ ಇರಲು ಧೈರ್ಯವನ್ನು ಇಡುವುದಿಲ್ಲ. ಇಂತಹ ಬಲಹೀನ ಕುಮಾರಿಯರಂತೂ ಅಲ್ಲತಾನೇ. ಭಲೆ ಓದುತ್ತಿರಬಹುದು ಆದರೂ ಸಹ ನೌಕರಿ ಮಾಡುವುದೇ ಅಥವಾ ವಿಶ್ವ ಸೇವೆ ಮಾಡುವುದೇ ಎಂಬ ಲಕ್ಷ್ಯವನ್ನಂತು ಮೊದಲೇ ಇಟ್ಟುಕೊಳ್ಳಬೇಕಾಗಿದೆ. ನೌಕರಿ ಮಾಡುವುದು ಎಂದರೆ ತನ್ನನ್ನು ಪಾಲನೆ ಮಾಡಿಕೊಳ್ಳುವುದು, ಪಾಲನೆ ಮಾಡಲು ಮರಿ ಮಕ್ಕಳಂತೂ ಇಲ್ಲ. ಆರಾಮದಿಂದ ತನ್ನನ್ನು ಪಾಲನೆ ಮಾಡಿಕೊಳ್ಳಲು, ಆರಾಮದಿಂದ ನಡೆಯುವುದಕ್ಕಾಗಿ ನೌಕರಿ ಮಾಡುತ್ತಾರೆ ಆದರೆ ವಿಶ್ವದ ಆತ್ಮರಿಗೆ ತಂದೆಯ ಪಾಲನೆ ಕೊಡಬೇಕೆಂಬ ಲಕ್ಷ್ಯವನ್ನಿಟ್ಟುಕೊಳ್ಳಿ. ಯಾವಾಗ ಅನೇಕ ಆತ್ಮರಿಗೆ ನಿಮಿತ್ತರಾಗಬಲ್ಲಿರಿ ಅಂದರೆ ಕೇವಲ ತನ್ನನ್ನು ತಾನು ಪಾಲನೆ ಮಾಡಿಕೊಳ್ಳುವುದು ಅದರ ಮುಂದೆ ಏನಾಯಿತು? ಅನೇಕರ ಆಶೀರ್ವಾದಗಳನ್ನು ತೆಗೆದುಕೊಳ್ಳುವುದು ಎಷ್ಟು ದೊಡ್ಡ ಸಂಪಾದನೆಯಾಗಿದೆ. ಆ ಸಂಪಾದನೆಯಲ್ಲಿ 5000, 5 ಲಕ್ಷವಾದರೂ ಆಗಬಹುದು ಆದರೆ ಇಲ್ಲಿ ಅನೇಕ ಆತ್ಮರ ಆಶೀರ್ವಾದಗಳು ಎಷ್ಟು ದೊಡ್ಡ ಸಂಪಾದನೆಯಾಗಿದೆ ಮತ್ತು ಈ ಸಂಪಾದನೆಯು ಅನೇಕ ಜನ್ಮಗಳಿಗಾಗಿ ಜೊತೆ ಬರುವುದು. ಆ 5 ಲಕ್ಷಗಳೆಲ್ಲಿ ಜೊತೆ ಬರುತ್ತದೆ? ಮನೆಯಲ್ಲಿ ಅಥವಾ ಬ್ಯಾಂಕ್ನಲ್ಲಿ ಉಳಿದುಕೊಳ್ಳುತ್ತದೆ ಆದ್ದರಿಂದ ಸದಾ ಶ್ರೇಷ್ಠ ಲಕ್ಷ್ಯವನ್ನು ಇಟ್ಟುಕೊಳ್ಳಿ, ಸಾಧಾರಣವಲ್ಲ. ಸಂಗಮಯುಗದಲ್ಲಿ ಈಗಿನ ಈ ಒಂದು ಜನ್ಮದಲ್ಲಿ ಬೇಹದ್ದಿನ ಸೇವೆಯಲ್ಲಿ ನಿಮಿತ್ತರಾಗುವ ಸುವರ್ಣಾವಕಾಶವು ಸಿಗುತ್ತದೆ. ಸತ್ಯಯುಗದಲ್ಲಿಯೂ ಈ ಅವಕಾಶವು ಸಿಗುವುದಿಲ್ಲ. ನೌಕರಿಗಾಗಿಯೂ ಸಹ ಯಾವುದಾದರೂ ಅವಕಾಶ ಸಿಗಲಿ ಎಂದು ಪತ್ರಿಕೆಗಳನ್ನು ನೋಡುತ್ತಿರುತ್ತಾರಲ್ಲವೆ. ತಂದೆಯು ಸ್ವಯಂ ಸೇವೆಯ ಅವಕಾಶ ನೀಡುತ್ತಿದ್ದಾರೆ ಆದ್ದರಿಂದ ಯೋಗ್ಯ ಬಲಭುಜಗಳಾಗಿ. ಸಾಧಾರಣ ಬ್ರಹ್ಮಾಕುಮಾರಿಯೂ ಆಗಬಾರದು, ಯೋಗ್ಯ ಸೇವಾಧಾರಿಗಳಾಗಲಿಲ್ಲವೆಂದರೆ ಸೇವೆ ಮಾಡುವ ಬದಲು ಸೇವೆ ತೆಗೆದುಕೊಳ್ಳುತ್ತಿರುತ್ತಾರೆ. ಯೋಗ್ಯ ಸೇವಾಧಾರಿಗಳಾಗುವುದು ಯಾವುದೇ ಕಷ್ಟವಿಲ್ಲ. ಯಾವಾಗ ಯೋಗ್ಯ ಸೇವಾಧಾರಿಗಳಾಗುವುದಿಲ್ಲವೋ ಆಗ ಹೇಗಾಗುವುದೋ, ನಡೆಯಲಾಗುತ್ತದೆಯೋ ಇಲ್ಲವೋ ಎಂದು ಹೆದರುತ್ತೀರಿ. ಯೋಗ್ಯತೆಯಿರುವುದಿಲ್ಲ, ಭಯವೆನಿಸುತ್ತದೆ. ಯಾರು ಯೋಗ್ಯರಾಗಿರುವುದಿಲ್ಲವೋ ಅವರು “ನಿಶ್ಚಿಂತ ಚಕ್ರವರ್ತಿ” ಗಳಾಗಿರುತ್ತಾರೆ. ಸ್ಥೂಲ ಯೋಗ್ಯತೆಯಿರಬಹುದು, ಜ್ಞಾನದ ಯೋಗ್ಯತೆಯಿರಬಹುದು, ಮನುಷ್ಯನನ್ನು ಮೌಲ್ಯವಂತನನ್ನಾಗಿ ಮಾಡುತ್ತದೆ. ಯೋಗ್ಯತೆಯಿಲ್ಲವೆಂದರೆ ಬೆಲೆಯಿರುವುದಿಲ್ಲ. ಸೇವೆಯ ಯೋಗ್ಯತೆಯು ಎಲ್ಲದಕ್ಕಿಂತ ದೊಡ್ಡದಾಗಿದೆ, ಇಂತಹ ಯೋಗ್ಯ ಆತ್ಮನನ್ನು ಯಾವುದೇ ಮಾತು ತಡೆಯಲು ಸಾಧ್ಯವಿಲ್ಲ. ಯೋಗ್ಯರಾಗುವುದು ಎಂದರೆ ನನ್ನವರು ಒಬ್ಬ ತಂದೆಯ ವಿನಃ ಬೇರೆಯಾರೂ ಇಲ್ಲ. ಕುಮಾರಿಯರು ಕೇಳಿದಿರಾ? ಒಳ್ಳೆಯದು.

ಕುಮಾರರೂ ಬಹಳ ಮಂದಿ ಬಂದಿದ್ದಾರೆ. ಕುಮಾರರು ಬಹಳ ವೇಗವಾಗಿ ಓಡುತ್ತಾರೆ. ಸೇವೆಯಲ್ಲಿಯೂ ಒಳ್ಳೆಯ ಉಮ್ಮಂಗದಿಂದ ಓಡುತ್ತಿರುತ್ತಾರೆ ಆದರೆ ಕುಮಾರರ ವಿಶೇಷತೆ ಮತ್ತು ಮಹಾನತೆಯು ಇದೇ ಆಗಿದೆ – ಆದಿಯಿಂದ ಇಲ್ಲಿಯವರೆಗೂ ನಿರ್ವಿಘ್ನ ಕುಮಾರರಾಗಿದ್ದೀರಾ? ಒಂದುವೇಳೆ ಕುಮಾರರು ನಿರ್ವಿಘ್ನ ಕುಮಾರರಾಗಿದ್ದರೆ ಇಂತಹವರು ಬಹಳ ಮಹಾನ್ ಎಂದು ಗಾಯನವಾಗುತ್ತದೆ ಏಕೆಂದರೆ ಪ್ರಪಂಚದವರೂ ಸಹ ಕುಮಾರಿಯರ ಬದಲು ಕುಮಾರರು ಯೋಗ್ಯರಾಗಿ ಬಿಡುವುದು ಬಹಳ ಕಷ್ಟವೆಂದು ತಿಳಿಯುತ್ತಾರೆ ಆದರೆ ಕುಮಾರರೇ ವಿಶ್ವಕ್ಕೆ ಚಾಲೆಂಜ್ ಮಾಡಬೇಕು – ತಾವಂತೂ ಅಸಂಭವವಂತೂ ಹೇಳುತ್ತೀರಿ, ನಾವಂತೂ ನಿರ್ವಿಘ್ನ ಕುಮಾರರಾಗಿದ್ದೇವೆ ಎಂದು. ಇಂತಹ ವಿಶ್ವಕ್ಕೆ ಮಾದರಿಯನ್ನು ತೋರಿಸುವ ಕುಮಾರರು ಮಹಾನ್ ಕುಮಾರರಾಗಿದ್ದಾರೆ. ಬಾಪ್ದಾದಾ ಇಂತಹ ಕುಮಾರರಿಗೆ ಸದಾ ಹೃದಯಪೂರ್ವಕ ಶುಭಾಷಯಗಳನ್ನೇ ಕೊಡುತ್ತೇನೆ. ತಿಳಿಯಿತೇ – ಈಗೀಗ ಬಹಳ ಒಳ್ಳೆಯ ಮಕ್ಕಳು ಈಗೀಗ ಯಾವುದೇ ವಿಘ್ನಗಳು ಬಂದರೆ ಏರಿಳಿತವಾಗಿ ಬಿಡುವುದಲ್ಲ. ಕುಮಾರರು ಅರ್ಥಾತ್ ಸಮಸ್ಯೆಯೂ ಆಗಬಾರದು ಮತ್ತು ಸಮಸ್ಯೆಯಲ್ಲಿ ಸೋಲಲೂಬಾರದು. ಕುಮಾರರು ಕುಮಾರಿಯರಿಗಿಂತಲೂ ಮುಂದೆ ಹೋಗಬಹುದು ಆದರೆ ನಿರ್ವಿಘ್ನ ಕುಮಾರರಾಗಬೇಕು ಏಕೆಂದರೆ ಕುಮಾರರಿಗೆ ಬಹುತೇಕವಾಗಿ ಇದೇ ವಿಘ್ನವು ಬರುತ್ತದೆ – ಯಾರೂ ಜೊತೆಗಾರರಿಲ್ಲ, ಯಾರಾದರೂ ಜೊತೆ ಬೇಕು, ಸಂಗಾತಿ ಬೇಕು ಎಂದು. ಆದ್ದರಿಂದ ಯಾವುದಾದರೊಂದು ರೀತಿಯಿಂದ ತನ್ನ ಸಂಗ ಮಾಡಿಕೊಳ್ಳುತ್ತಾರೆ. ಕೆಲಕೆಲವರು ಕುಮಾರರು ಸಂಗಾತಿಯನ್ನೂ ಮಾಡಿಕೊಳ್ಳುತ್ತಾರೆ ಮತ್ತು ಇನ್ನೂ ಕೆಲವರು ಕುಳಿತುಕೊಳ್ಳುವುದು, ಮಾತನಾಡುವುದು – ಇಂತಹ ಸಂಗದಲ್ಲಿ ಬರುತ್ತಾರೆ ಮತ್ತು ಸಂಗಾತಿಯನ್ನೂ ಮಾಡಿಕೊಳ್ಳುವ ಸಂಕಲ್ಪ ಬರುತ್ತದೆ ಆದರೆ ಕೆಲವರು ಇಂತಹ ಕುಮಾರರೂ ಇದ್ದಾರೆ ತಂದೆಯ ವಿನಃ ಮತ್ತ್ಯಾವುದೇ ಸಂಗವನ್ನೂ ಮಾಡಿಕೊಳ್ಳುವುದಿಲ್ಲ, ಸಂಗಾತಿಯನ್ನೂ ಮಾಡಿಕೊಳ್ಳುವುದಿಲ್ಲ. ಸದಾ ತಂದೆಯ ಸಂಗದಲ್ಲಿರುವ ಕುಮಾರರು ಸದಾ ಸುಖಿಯಾಗಿರುತ್ತಾರೆ ಅಂದಾಗ ತಾವೆಲ್ಲರೂ ಎಂತಹ ಕುಮಾರರಾಗಿದ್ದೀರಿ? ಸ್ವಲ್ಪ-ಸ್ವಲ್ಪ ಸಂಗವು ಬೇಕೇ? ಇಡೀ ಪರಿವಾರವು ಸಂಗವಾಗಿದೆಯೇ? ಹಾಗಿದ್ದರೆ ಸರಿ. ಆದರೆ ಇಬ್ಬರು ಮೂವರು ಅಥವಾ ಯಾರಾದರೊಬ್ಬರ ಸಂಗ ಬೇಕು ಎಂದು ಹೇಳುವುದು ತಪ್ಪಾಗಿದೆ. ಅಂದಾಗ ತಾವೆಲ್ಲರೂ ಯಾರಾಗಿದ್ದೀರಿ? ನಿರ್ವಿಘ್ನರಾಗಿದ್ದೀರಲ್ಲವೇ. ಹೊಸ ಕುಮಾರರು ಕಮಾಲ್ ಮಾಡಿ ತೋರಿಸುತ್ತೀರಿ. ಕೊನೆಗೂ ವಿಶ್ವವನ್ನು ತನ್ನ ಮುಂದೆ, ತಂದೆಯ ಮುಂದೆ ಬಾಗಿಸಬೇಕಲ್ಲವೆ ಆದ್ದರಿಂದ ಈ ಕುಮಾರರ ಚಮತ್ಕಾರವು ವಿಶ್ವವನ್ನೇ ಬಾಗಿಸುವುದು. ಕುಮಾರರದು ಚಮತ್ಕಾರವಾಗಿದೆ ಎಂದು ವಿಶ್ವವು ತಮ್ಮ ಗುಣಗಾಯನ ಮಾಡುವುದು. ಬಹುತೇಕವಾಗಿ ಕುಮಾರರು ಸೇವೆಯ ಸಂಗದಲ್ಲಿ ಇರುತ್ತಾರೆ ಆದರೆ ಕುಮಾರರಿಗೆ ಸ್ವಲ್ಪ ಸಂಗದ ಸಂಕಲ್ಪ ಬರುತ್ತದೆಯೆಂದರೆ ಪಾಂಡವ ಭವನವನ್ನು ಮಾಡಿಕೊಂಡು ಸಫಲರಾಗಿ ಇರಿ. ಈ ರೀತಿ ಯಾರಾದರೂ ಮಾಡಿ ತೋರಿಸಿ ಆದರೆ ಇಂದು ಪಾಂಡವಭವನವನ್ನು ಮಾಡಿ ನಾಳೆ ಪಾಂಡವರು ಒಬ್ಬರು ಪೂರ್ವಕ್ಕೆ ಹೊರಟು ಹೋಗುವುದು, ಇನ್ನೊಬ್ಬರು ಪಶ್ಚಿಮಕ್ಕೆ ಹೊರಟು ಹೋಗುವರು, ಇಂತಹ ಪಾಂಡವ ಭವನವನ್ನು ಮಾಡಬೇಡಿ.

ಬಾಪ್ದಾದಾರವರಿಗೆ ಕುಮಾರರ ಮೇಲೆ ವಿಶೇಷ ಹೆಮ್ಮೆಯಿದೆ- ಒಂಟಿಯಾಗಿದ್ದರೂ ಸಹ ಪುರುಷಾರ್ಥದಲ್ಲಿ ನಡೆಯುತ್ತಿದ್ದಾರೆ. ಕುಮಾರರು ಪರಸ್ಪರ ಇಬ್ಬರು, ಮೂವರು ಜೊತೆಗಾರರಾಗಿ ಏಕೆ ನಡೆಯುವುದಿಲ್ಲ! ಸಂಗಾತಿಯು ಕೇವಲ ಸ್ತ್ರೀಯರೇ ಬೇಕಿಲ್ಲ, ಇಬ್ಬರು ಕುಮಾರರೂ ಸಹ ಇರಬಹುದು ಆದರೆ ಒಬ್ಬರು ಇನ್ನೊಬ್ಬರಿಗೆ ನಿರ್ವಿಘ್ನ ಜೊತೆಗಾರರಾಗಿ ಇರಬೇಕು. ಇನ್ನೂ ಆ ಶೌರ್ಯವನ್ನು ಯಾರೂ ತೋರಿಸಿಲ್ಲ. ಸಮಯದಲ್ಲಿ ಒಬ್ಬರು ಇನ್ನೊಬ್ಬರಿಗೆ ಸಹಯೋಗಿಗಳಾದರೆ ಏನು ತಾನೆ ಸಾಧ್ಯವಿಲ್ಲ? ಅನ್ಯ ಮಾತುಗಳು ಬಂದುಬಿಡುತ್ತವೆ ಆದ್ದರಿಂದ ಬಾಪ್ದಾದಾ ಪಾಂಡವ ಭವನವನ್ನು ಮಾಡಲು ನಿರಾಕರಿಸುತ್ತಾರೆ ಆದರೆ ಯಾರಾದರೂ ಸ್ಯಾಂಪಲ್ ಮಾಡಿ ತೋರಿಸಿ. ಪಾಂಡವ ಭವನವನ್ನು ಮಾಡಿ ಮತ್ತೆ ನಿಮಿತ್ತ ದಾದಿ, ದೀದಿಯರ ಸಮಯವನ್ನು ತೆಗೆದುಕೊಳ್ಳುತ್ತಾ ಇರುವುದಲ್ಲ. ಪರಸ್ಪರ ನಿರ್ವಿಘ್ನವಾಗಿರಿ, ಒಬ್ಬರು ಇನ್ನೊಬ್ಬರಿಗಿಂತಲೂ ಯೋಗ್ಯ ಕುಮಾರರಾಗಿರಿ. ಆಗ ನೋಡಿ, ಎಷ್ಟು ಒಳ್ಳೆಯ ಹೆಸರು ಬರುತ್ತದೆ! ಕುಮಾರರು ಕೇಳಿಸಿಕೊಂಡಿರಾ, ಯೋಗ್ಯ ಕುಮಾರರಾಗಿರಿ, ನಿರ್ವಿಘ್ನ ಕುಮಾರರಾಗಿರಿ. ಸೇವಾಕ್ಷೇತ್ರದಲ್ಲಿ ತಾವೂ ಸಮಸ್ಯೆಯಾಗಬೇಡಿ, ಬದಲಾಗಿ ಸಮಸ್ಯೆಯನ್ನು ಪರಿಹರಿಸುವವರಾಗಿ. ನಂತರ ನೋಡಿ, ಕುಮಾರರಿಗೆ ಬಹಳ ಬೆಲೆಯಿರುವುದು ಏಕೆಂದರೆ ಕುಮಾರರಿಲ್ಲದೆ ಸೇವೆ ನಡೆಯುವುದಿಲ್ಲ ಅಂದರೆ ಕುಮಾರರು ಏನು ಮಾಡುತ್ತೀರಿ? ಎಲ್ಲರೂ ಹೇಳಿರಿ – “ನಿರ್ವಿಘ್ನ ಕುಮಾರರಾಗಿ ತೋರಿಸುತ್ತೇವೆ”. (ಕುಮಾರರು ಬಾಪ್ದಾದಾರವರ ಮುಂದೆ ನಿಂತು ಪ್ರತಿಜ್ಞೆ ಮಾಡಿದರು) ಈಗ ಎಲ್ಲರ ಭಾವಚಿತ್ರವನ್ನು ತೆಗೆಯಲಾಗಿದೆ. ನಾವು ಎದ್ದು ನಿಂತಾಗ ಯಾರೂ ನೋಡಲಿಲ್ಲ ಎಂದು ತಿಳಿದುಕೊಳ್ಳಬೇಡಿ, ನಿಮ್ಮ ಭಾವಚಿತ್ರವಿದೆ. ಚೆನ್ನಾಗಿದೆ – “ಸಾಹಸ ಮಕ್ಕಳದು, ಸಹಯೋಗ ತಂದೆಯದು”ಮತ್ತು ಇಡೀ ಪರಿವಾರವೇ ತಮ್ಮ ಜೊತೆಯಿದೆ. ಒಳ್ಳೆಯದು.

ನಾಲ್ಕೂ ಕಡೆಯಲ್ಲಿನ ಸರ್ವ ಮಕ್ಕಳಿಗೆ ಸದಾ ಬಾಪ್ದಾದಾರವರು ತನ್ನ ಸ್ನೇಹದ, ಸಹಯೋಗದ ಛತ್ರಛಾಯೆಯ ಜೊತೆಗೆ ಹೃದಯದಿಂದ ಸೇವೆಗಳ ಶುಭಾಷಯಗಳನ್ನು ಕೊಡುತ್ತಿದ್ದಾರೆ. ದೇಶ-ವಿದೇಶದ ಸೇವೆಯ ಸಮಾಚಾರಗಳು ತಲುಪುತ್ತಿರುತ್ತವೆ. ಪ್ರತಿಯೊಬ್ಬ ಮಗುವು ತನ್ನ ಹೃದಯದ ಸಮಾಚಾರಗಳನ್ನೂ ತಿಳಿಸುತ್ತಿರುತ್ತಾರೆ. ವಿಶೇಷವಾಗಿ ಹೆಚ್ಚು ಪತ್ರಗಳು ವಿದೇಶದಿಂದ ಬರುತ್ತಿರುತ್ತವೆ. ಅಂದಾಗ ಸೇವಾ ಸಮಾಚಾರವನ್ನು ಕೊಡುವಂತಹ ಮಕ್ಕಳಿಗೆ ಶುಭಾಷಯಗಳೂ ಇದೆ ಮತ್ತು ಅದರ ಜೊತೆಗೆ ಸದಾ ಸ್ವ-ಸೇವೆ ಮತ್ತು ವಿಶ್ವ-ಸೇವೆಯಲ್ಲಿ `ಸಫಲತಾ ಭವ’ದ ವರದಾನವನ್ನು ಕೊಡುತ್ತಿದ್ದಾರೆ. ಸ್ವ-ಪುರುಷಾರ್ಥದ ಸಮಾಚಾರವನ್ನು ಕೊಡುವವರಿಗೆ ಬಾಪ್ದಾದಾರವರು ಇದೇ ವರದಾನವನ್ನು ಕೊಡುತ್ತಿದ್ದಾರೆ – ಹೇಗೆ ಸತ್ಯ ಹೃದಯದಿಂದ ತಂದೆಯನ್ನು ಖುಷಿ ಪಡಿಸುತ್ತೀರಿ, ಹಾಗೆಯೇ ಸದಾ ತಮ್ಮನ್ನು ತಾವೂ ಸಹ ತಮ್ಮ ಸಂಸ್ಕಾರಗಳಿಂದ ಸಂಘಟನೆಯಿಂದ ರಹಸ್ಯಯುಕ್ತ ಅರ್ಥಾತ್ ಖುಷಿಯಾಗಿರಿ. ಪರಸ್ಪರರ ಸಂಸ್ಕಾರಗಳ ರಹಸ್ಯವನ್ನೂ ತಿಳಿದುಕೊಳ್ಳಬೇಕು, ಪರಿಸ್ಥಿತಿಗಳನ್ನೂ ತಿಳಿದುಕೊಳ್ಳುವುದೇ ರಹಸ್ಯಯುಕ್ತ ಸ್ಥಿತಿಯಾಗಿದೆ. ಬಾಕಿ ಸತ್ಯ ಹೃದಯದಿಂದ ತಮ್ಮ ಲೆಕ್ಕವನ್ನು ಕೊಡಿ ಹಾಗೂ ಸ್ನೇಹದ ಆತ್ಮಿಕ ವಾರ್ತಾಲಾಪದ ಪತ್ರವನ್ನು ಬರೆಯುವುದು ಅರ್ಥಾತ್ ಹಿಂದಿನ ಲೆಕ್ಕವನ್ನು ಸಮಾಪ್ತಿ ಮಾಡುವುದು ಹಾಗೂ ಸ್ನೇಹದ ವಾರ್ತಾಲಾಪವು ಸದಾ ಸಮೀಪತೆಯ ಅನುಭೂತಿ ಮಾಡಿಸುತ್ತಿರುತ್ತದೆ. ಇದಾಯಿತು ಪತ್ರಗಳ ಪ್ರತ್ಯುತ್ತರ.

ಪತ್ರವನ್ನು ಬರೆಯುವುದರಲ್ಲಿ ವಿದೇಶಿಗಳು ಬಹಳ ಬುದ್ಧಿವಂತರಿದ್ದಾರೆ. ಬಹಳ ಬೇಗನೆ ಬರೆದು ಬಿಡುತ್ತಾರೆ. ಭಾರತವಾಸಿಗಳೂ ಸಹ ಬಹಳ ಉದ್ದವಾದ ಪತ್ರಗಳನ್ನು ಕಳುಹಿಸುವುದು ಪ್ರಾರಂಭಿಸಬಾರದು. ಬಾಪ್ದಾದಾರವರು ಹೇಳಿದ್ದಾರೆ – ಎರಡು ಶಬ್ಧಗಳಲ್ಲಿಯೇ ಬರೆಯಿರಿ. ಓ.ಕೆ (ಸಂಪೂರ್ಣವಾಗಿ ಚೆನ್ನಾಗಿದ್ದೇನೆ). ಸೇವಾ ಸಮಾಚಾರಗಳಿದ್ದರೆ ಬರೆಯಿರಿ, ಇಲ್ಲದಿದ್ದರೆ ಕೇವಲ ಓ.ಕೆ. ಇದರಲ್ಲಿ ಎಲ್ಲವೂ ಬಂದು ಬಿಡುತ್ತದೆ. ಇಂತಹ ಪತ್ರವನ್ನು ಓದುವುದು ಬಹಳ ಸಹಜವಾಗಿದೆ ಮತ್ತು ತಾವು ಬರೆಯುವುದಕ್ಕೂ ಸಹಜವಿದೆ. ಆದರೆ ಒಂದುವೇಳೆ ಓ.ಕೆ. ಇಲ್ಲದಿದ್ದರೆ ಓ.ಕೆ. ಎಂದು ಬರೆಯಬಾರದು. ಓ.ಕೆ. ಆದನಂತರ ಪತ್ರವನ್ನು ಬರೆಯಿರಿ. ಪೋಸ್ಟ್ ಮಾಡಿರುವುದನ್ನು ಓದುವುದಕ್ಕೂ ಸಮಯ ತೆಗೆದುಕೊಳ್ಳುತ್ತದೆ ಅಲ್ಲವೆ! ಯಾವುದೇ ಕಾರ್ಯವನ್ನು ಮಾಡುತ್ತೀರೆಂದರೆ ಸದಾ ಶಾರ್ಟ್ ಆಗಿರಲಿ ಮತ್ತು ಸ್ವೀಟ್ ಆಗಿರಲಿ. ಪತ್ರವನ್ನು ಯಾರೇ ಓದುತ್ತಾರೆಂದರೆ ಓದುವವರಿಗೂ ಖುಷಿಯಾಗಿ ಬಿಡಬೇಕು ಆದ್ದರಿಂದ ರಾಮ ಕಥೆಗಳನ್ನು ಬರೆದು ಕಳುಹಿಸಬಾರದು. ತಿಳಿಯಿತೇ! ಸಮಾಚಾರವನ್ನಂತು ಕೊಡಬೇಕು ಆದರೆ ಸಮಾಚಾರ ಕೊಡುವುದನ್ನೂ ಕಲಿಯಬೇಕಾಗಿದೆ. ಒಳ್ಳೆಯದು!

ಸರ್ವ ಶುಭ ಭಾವನೆ ಮತ್ತು ಶುಭ ಕಾಮನೆಯ ಸೂಕ್ಷ್ಮ ಸೇವೆಯ ಮಹತ್ವಿಕೆಯನ್ನು ಅರಿತುಕೊಳ್ಳುವಂತಹ ಮಹಾನ್ ಆತ್ಮರಿಗೆ ಬಾಪ್ದಾದಾರವರ ನೆನಪು, ಪ್ರೀತಿ ಹಾಗೂ ನಮಸ್ತೆ.

ವರದಾನ:-

ಹೇಗೆ ನಿರಂತರ ಯೋಗಿಯಾಗಿದ್ದೀರಿ ಹಾಗೆಯೇ ನಿರಂತರ ವಿಜಯಿಯಾಗಿರಿ. ಇದರಿಂದ ಸತ್ಯ ಸೇವಾಧಾರಿ ಆಗಿ ಬಿಡುತ್ತೀರಿ ಏಕೆಂದರೆ ವಿಜಯಿ ಆತ್ಮನು ಯಾವಾಗ ಪ್ರತಿಯೊಂದು ಸಂಕಲ್ಪ, ಪ್ರತೀ ಹೆಜ್ಜೆಯಲ್ಲಿ ವಿಜಯದ ಅನುಭವ ಮಾಡುತ್ತಾರೆ, ಆ ಪರಿವರ್ತನೆಯನ್ನು ನೋಡುತ್ತಾ ಸ್ವತಹವಾಗಿ ಅನೇಕ ಆತ್ಮರುಗಳ ಸೇವೆಯಾಗುವುದು. ಅವರ ನಯನಗಳು ಆತ್ಮೀಯತೆಯ ಅನುಭವ ಮಾಡಿಸುತ್ತದೆ, ಚಲನೆಯು ತಂದೆಯ ಚರಿತ್ರೆಯ ಸಾಕ್ಷಾತ್ಕಾರ ಮಾಡಿಸುತ್ತದೆ, ಮಸ್ತಕದಿಂದ ಮಸ್ತಕ ಮಣಿಯ ಸಾಕ್ಷಾತ್ಕಾರವಾಗುತ್ತದೆ. ಈ ರೀತಿ ತಮ್ಮ ಅವ್ಯಕ್ತ ಚಹರೆಯಿಂದ ಸೇವೆ ಮಾಡುವಂತಹ ವಿಶೇಷ ಅತ್ಮನನ್ನೇ ಸತ್ಯ ಸೇವಾಧಾರಿ ಎಂದು ಹೇಳಲಾಗುತ್ತದೆ.

ಸ್ಲೋಗನ್:-

ಸೂಚನೆ: ನವೆಂಬರ್ ಮಾಸದ ಈ ಮೂರನೇ ರವಿವಾರವು ಯುನೈಟೆಡ್ ನೇಷನ್ನ ಮೂಲಕ ರಸ್ತೆ ಅಪಘಾತದಲ್ಲಿ ಪೀಡಿತರಾಗಿರುವವರ ಪ್ರತಿಯಾಗಿ ನೆನಪಾರ್ಥ ದಿನವನ್ನಾಗಿ ಘೋಷಿಸಲಾಗಿದೆ. ಆದ್ದರಿಂದ ಎಲ್ಲಾ ರಾಜಯೋಗಿ ಸಹೋದರ-ಸಹೋದರಿಯರು ಸಂಜೆ 6.30ರಿಂದ 7.30ರವರೆಗೆ ಪರಮಾತ್ಮ ಪಿತನ ಸ್ಮೃತಿಯಲ್ಲಿದ್ದು, ತಮ್ಮ ಮಾಸ್ಟರ್ ದಯಾಹೃದಯಿ ಸ್ವರೂಪದ ಮೂಲಕ ಆ ಆತ್ಮರಿಗೆ ಶಾಂತಿಯ ಸಕಾಶವನ್ನು ಕೊಡಿ, ತಮ್ಮ ಸ್ನೇಹಪೂರ್ವಕ ಶ್ರದ್ಧಾಂಜಲಿಯನ್ನು ಅರ್ಪಣೆ ಮಾಡಿರಿ.

Daily Murli in Kannada

Email me Murli: Receive Daily Murli on your email. Subscribe!

Leave a Comment

Your email address will not be published. Required fields are marked *

Scroll to Top